ನಟಿ ರನ್ಯಾ ರಾವ್ ಬೆನ್ನಲ್ಲೇ ಮತ್ತಿಬ್ಬರು ಸ್ಯಾಂಡಲ್‌ವುಡ್ ನಟಿಯರಿಗೆ ಮಾಸ್ಟರ್ ಸ್ಟ್ರೋಕ್ ಎದುರಾಗಿದೆ. ಸ್ಯಾಂಡಲ್‌ವುಡ್ ಡ್ರಗ್ಸ್ ಕೇಸಲ್ಲಿ ಇಬ್ಬರು ನಟಿಯರಿಗೆ ಸಿಸಿಬಿ ಶಾಕ್ ನೀಡಿದೆ.
ನಟಿ ಸಂಜನಾ ಮತ್ತು ರಾಗಿಣಿ ಎಫ್‌ಐಆರ್ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಿಸಿಬಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ.
ಸಿಸಿಬಿ ಡ್ರಗ್ಸ್ ಕೇಸಲ್ಲಿ ಎಫ್‌ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ನಟಿಯರು ಅರ್ಜಿ ಸಲ್ಲಿಸಿದ್ದರು. ನಟಿ ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಹಾಗೂ ವೀರೇನ್ ಖನ್ನಾನ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದು ಮಾಡಿತ್ತು.
ಗೃಹ ಇಲಾಖೆ ಮತ್ತು ಕಾನೂನು ಇಲಾಖೆಯ ಸಮ್ಮತಿ ಬಳಿಕ ಸುಪ್ರೀಂಗೆ ಸಿಸಿಬಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ. ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋಗಲು ಕಾನೂನು ಇಲಾಖೆ ಅಸ್ತು ಎಂದಿತ್ತು. ಆ ಬಳಿಕ ಗೃಹ ಇಲಾಖೆಯಿಂದ ಅನುಮತಿ ಪಡೆದು ಸುಪ್ರೀಂಗೆ ಮೇಲ್ಮನವಿ ಸಲ್ಲಿಸಿದೆ. ಹೈಕೋರ್ಟ್ ಆದೇಶ ರದ್ದುಗೊಳಿಸುವಂತೆ ಸಿಸಿಬಿ, ಸುಪ್ರೀಂ ಮೊರೆ ಹೋಗಿದೆ.
– ಎರಡು ಒಗಟುಗಳು ಶೀಘ್ರವೇ ಸ್ಫೋಟ – ದಾಖಲೆ ಇಲ್ಲದೇ ನಾನು ಮಾತನಾಡಲ್ಲ – ಜಮೀರ್ ಪಾಸ್‌ಪೋರ್ಟ್ ತೋರಿಸಿದ್ರೆ ಉತ್ತರ ಸಿಕ್ಕುತ್ತೆ
ಬೆಂಗಳೂರು: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾನು ಈ ಹಿಂದೆ ಹೇಳಿದ ಮೂರು ಸ್ಫೋಟಕ ಒಗಟುಗಳು ಎಲ್ಲ ಸತ್ಯವಾಗಿದೆ ಎಂದು ಉದ್ಯಮಿ, ಸಿನಿ ವಿತರಕ ಪ್ರಶಾಂತ್ ಸಂಬರಗಿ ಹೇಳಿದ್ದಾರೆ.
ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಸಿಸಿಬಿ ಪೊಲೀಸರಿಂದ ನೋಟಿಸ್ ಬಂದ ಹಿನ್ನೆಲೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಇಂದು ಬೆಳಗ್ಗೆ 10 ಗಂಟೆಗೆ ನಾನು ಸಿಸಿಬಿ ಕಚೇರಿಗೆ ತೆರಳಿ ನನ್ನಲ್ಲಿರುವ ಪ್ರಮುಖ ಸಾಕ್ಷ್ಯಗಳನ್ನು ನೀಡುತ್ತೇನೆ. ನಾನು ಗಾಳಿಯಲ್ಲಿ ಗುಂಡು ಹಾರಿಸುವ ವ್ಯಕ್ತಿಯಲ್ಲ. ನಾನು ಈ ಹಿಂದೆ ಹೇಳಿದ ಎಲ್ಲ ಒಗಟುಗಳು ಸತ್ಯವಾಗಿದೆ ಎಂದು ತಿಳಿಸಿದರು.
ಕರ್ನಾಟಕದ ಮುಂಬೈಗೆ ಸೊಸೆಯಾಗಿ ಒಬ್ಬರು ತೆರಳಿರುವ ಕುಟುಂಬದ ವ್ಯಕ್ತಿಯ ಬಗ್ಗೆ ಹೇಳಿದ್ದೆ. ಇದು ನಿಜವಾಗಿದ್ದು ಜೀವರಾಜ್ ಆಳ್ವಾ ಮಗ ಆದಿತ್ಯಾ ಆಳ್ವಾ ವಿರುದ್ಧ ಪ್ರಕರಣ ದಾಖಲಾಗಿದೆ. ಇವರ ಮನೆ ಮಗಳು ಮುಂಬೈಯಲ್ಲಿರುವ ನಟ ವಿವೇಕ್ ಒಬೆರಾಯ್ ಮದುವೆಯಾಗಿದ್ದಾರೆ. ಸುಶಾಂತ್ ಸಿಂಗ್ ಪ್ರಕರಣಕ್ಕೂ ಬೆಂಗಳೂರಿಗೂ ಸಂಬಂಧ ಇದೆ ಎಂದು ತಿಳಿಸಿದ್ದು ಅದು ಕೂಡ ನಿಜವಾಗಿದ್ದು ಎನ್‌ಸಿಬಿಯಿಂದ ಬಿಬಿಎಂಪಿ ಕಾಂಗ್ರೆಸ್ ಸದಸ್ಯ ಕೇಶವ್ ಮೂರ್ತಿ ಮಗನಿಗೆ ನೋಟಿಸ್ ಬಂದಿದೆ ಎಂದು ಹೇಳಿದರು. ಇದನ್ನೂ ಓದಿ: ಡ್ರಗ್ ಡೀಲರ್ ಆದಿತ್ಯ ಆಗರ್ವಾಲ್‍ಗೆ ಬರುತ್ತಿತ್ತು 4 ಲಕ್ಷ ಸಂಬಳ
ಡ್ರಗ್ಸ್ ದಂಧೆಯಲ್ಲಿ ಬಾಲಿವುಡ್‌ಗೂ ಸ್ಯಾಂಡಲ್‌ವುಡ್‌ಗೂ ಸಂಬಂಧ ಇದೆ. ಅದರಲ್ಲಿ ಇಮ್ತಿಯಾಸ್ ಖಾತ್ರಿ ಇದ್ದಾನೆ ಅಂತ ಹೇಳಿದ್ದೆ. ಅದು ಕೂಡ ನಿಜವಾಗಿದೆ. ನಾನು ಮಾಡಿದ ಎಲ್ಲಒಗಟುಗಳು ನಿಜವಾಗಿದ್ದು ಇನ್ನು ಎರಡು ಒಗಟುಗಳು ಶೀಘ್ರವೇ ಸ್ಫೋಟಗೊಳ್ಳಲಿದೆ ಎಂದು ಹೇಳಿದರು.
ಈ ವೇಳೆ ಇನ್ನು ಎರಡು ವಿಚಾರ ಯಾವುದು ಎಂದು ಕೇಳಿದ್ದಕ್ಕೆ ಈಗ ನಾನು ಹೇಳುವುದಿಲ್ಲ ಮುಂದೆ ತಿಳಿಸುತ್ತೇನೆ ಎಂದು ಉತ್ತರಿಸಿದರು.
ನಾನು ದಾಖಲೆ ಇಟ್ಟುಕೊಂಡೇ ಮಾತನಾಡುತ್ತೇನೆ. ನಾನು ಸಂಜನಾ ಜೊತೆಯಲ್ಲೇ ಜಮೀರ್ ಶ್ರೀಲಂಕಾಗೆ ಹೋಗಿದ್ದಾರೆ ಎಂದು ಹೇಳಿಲ್ಲ. ಆದರೆ 2019ರ ಜೂನ್ 8, 9, 10ರಂದು ಜಮೀರ್ ಅಹ್ಮದ್ ಎಲ್ಲಿದ್ದರು? ಅವರು ಶ್ರೀಲಂಕಾದಲ್ಲಿ ಇದ್ದರೋ ಇಲ್ಲವೋ ಎನ್ನುವುದನ್ನು ಹೇಳಲಿ. ನನಗೆ ಜಮೀರ್ ಉತ್ತರ ನೀಡುವ ಅಗತ್ಯವಿಲ್ಲ. ಜನತೆ ಪಾಸ್‌ಪೋರ್ಟ್ ತೋರಿಸಿದರೆ ಸಾಕು. ನನ್ನ ಒಂದು ಸಣ್ಣ ಪ್ರಶ್ನೆಗೆ ಉತ್ತರ ನೀಡಲಿ ಎಂದು ಸವಾಲು ಎಸೆದರು.
ನನ್ನನ್ನು ಕಾಜಿಪಿಂಜಿ ಎಂದು ಕರೆಯುತ್ತಾರೆ. ಆದರೆ ನಾನು ಕಾಜಿಪಿಂಜಿ ಅಲ್ಲ. ಕಾನೂನು ಗೊತ್ತಿರುವ ನಾನು ಒಬ್ಬ ಜನ ಪ್ರತಿನಿಧಿಯ ವಿರುದ್ಧ ದಾಖಲೆ ಇಲ್ಲದೇ ಸುಳ್ಳು ಆರೋಪ ಮಾಡುವುದಿಲ್ಲ. ನನ್ನ ವಿರುದ್ಧ ಈಗ ಸುಳ್ಳು ಕೇಸ್ ಹಾಕಿದ್ದಾರೆ. ಈ ರೀತಿ ಕೇಸ್ ಬೀಳುತ್ತದೆ ಎಂಬುದು ನನಗೆ ಮೊದಲೇ ಗೊತ್ತಿತ್ತು. ಇದರ ವಿರುದ್ಧ ಹೋರಾಡುತ್ತೇನೆ ಎಂದು ಹೇಳಿದರು.
ತನ್ನ ಬಗ್ಗೆ ಬಂದಿರುವ ಬಿಜೆಪಿ ಏಜೆಂಟ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ನಾನು ಸಿದ್ದರಾಮಯ್ಯನವರನ್ನು ಭೇಟಿಯಾಗಿದ್ದೆ. ಅವರ ಕನ್ನಡ ಪರ ನಿಲುವು ನನಗೆ ಬಹಳ ಇಷ್ಟವಾಗಿತ್ತು. ಅವರ ಕೆಳಗಡೆ ಕುಳಿತಿದ್ದ ಫೋಟೋ ಫೇಸ್‌ಬುಕ್‌ನಲ್ಲಿ ಹಾಕಿದ್ದೆ. ಕುಮಾರಸ್ವಾಮಿಯವರ ಜೊತೆಯಲ್ಲೂ ನಾನು ಮಾತನಾಡಿದ್ದೇನೆ. ನಾನು ಯಾರ ಏಜೆಂಟ್ ಅಲ್ಲ. ನಾನೊಬ್ಬ ಕನ್ನಡಿಗ. ಕನ್ನಡಕ್ಕಾಗಿ ಹೋರಾಡುವ ವ್ಯಕ್ತಿ ಎಂದು ತಿಳಿಸಿದರು.
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ರಾಗಿಣಿ ಮತ್ತು ಸಂಜನಾ ಅವರಿಗೆ ಇಂದು ಹೇರ್ ಫೋಲಿಕಲ್ ಟೆಸ್ಟ್ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಡ್ರಗ್ಸ್ ತೆಗೆದುಕೊಂಡಿದ್ದಾರಾ ಇಲ್ಲವೋ ಎನ್ನುವುದು ವೈದ್ಯಕೀಯವಾಗಿಯೂ ಸಾಬೀತಾಗಬೇಕು. ಹೀಗಾಗಿ ಇಂದು ಬೆಳಗ್ಗೆ ಇವರಿಬ್ಬರನ್ನು ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ಮಾಡಲಾಗಿದೆ.
ಕೆಲ ಕ್ರೀಡಾಪಟುಗಳು ಶಕ್ತಿ ವೃದ್ಧಿಸಲು ಸ್ಟೀರಾಯ್ಡ್ ಇತ್ಯಾದಿ ಡ್ರಗ್ಸ್‌ಗಳನ್ನು ತೆಗೆದುಕೊಳ್ಳುತ್ತಾರೆ. ಹೀಗಾಗಿ ಕ್ರೀಡಾಕೂಟದ ಆರಂಭಕ್ಕೂ ಮೊದಲು ಅಥವಾ ಒಂದು ವೇಳೆ ಬಹುಮಾನ ಗೆದ್ದರೆ ಕ್ರೀಡಾಪಟುಗಳಿಗೆ ಡೋಪಿಂಗ್ ಟೆಸ್ಟ್ ಮಾಡಿಸಲಾಗುತ್ತದೆ. ಆದರೆ ಎಂಡಿಎಂಎ(ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಮಾತ್ರೆಗಳು, ಎಲ್‍ಎಸ್‌ಡಿ(ಲೈಸರ್ಜಿಕ್ ಆಸಿಡ್ ಡೈಥೈಲಾಮೈಡ್), ಆಂಫೆಟಮೈನ್, ಗಾಂಜಾ, ಕೊಕೇನ್ ಸೇವಿಸಿದ್ದರೆ ಅದನ್ನು ಪತ್ತೆ ಹಚ್ಚಲು ಹೇರ್ ಫೋಲಿಕಲ್ ಪರೀಕ್ಷೆ ಮಾಡುತ್ತಾರೆ. ಇದನ್ನೂ ಓದಿ: ‘ಗಂಡ-ಹೆಂಡತಿ’ ನಟಿ ಮದುವೆ ಸೀಕ್ರೆಟ್- ಮ್ಯಾರೇಜ್ ಆಗಿಲ್ಲ ಅಂತ ಸುಳ್ಳು ಹೇಳಿದ್ರಾ ಸಂಜನಾ?
ಹೇರ್ ಫೋಲಿಕಲ್ ಪರೀಕ್ಷೆ ಯಾಕೆ?
ಕ್ರೀಡಾಕೂಟದ ಸಮಯದಲ್ಲಿ ಕ್ರೀಡಾಪಟುಗಳಿಗೆ ಮೂತ್ರ ಪರೀಕ್ಷೆಯನ್ನು ಮಾಡುತ್ತಾರೆ. ಈ ಮೂತ್ರ ಪರೀಕ್ಷೆಯಲ್ಲಿ ಮೂರು ದಿನದ ಹಿಂದೆ ಡ್ರಗ್ಸ್ ಸೇವಿಸಿದರೆ ಮಾತ್ರ ತಿಳಿಯುತ್ತದೆ. ಆದರೆ ಹೇರ್ ಫೋಲಿಕಲ್ ಪರೀಕ್ಷೆಯಲ್ಲಿ 90 ದಿನದ ಹಿಂದೆ ಡ್ರಗ್ಸ್ ಸೇವಿಸಿದರೂ ತಿಳಿಯುತ್ತದೆ.
ಎಷ್ಟು ಕೂದಲು ತೆಗೆಯುತ್ತಾರೆ?
ಆಸ್ಪತ್ರೆ ಮತ್ತು ಲ್ಯಾಬ್‌ಗಳಲ್ಲಿ ಈ ಪರೀಕ್ಷೆಯನ್ನು ಮಾಡಲಾಗುತ್ತದೆ. ವೈದ್ಯರು ತಲೆಯ ವಿವಿಧ ಕಡೆಗಳಿಂದ 100-120 ಕೂದಲನ್ನು ಕತ್ತರಿಸಿ ಸಂಗ್ರಹಿಸುತ್ತಾರೆ. ಬಳಿಕ ಅದನ್ನು ಲ್ಯಾಬ್‌ಗೆ ಕಳುಹಿಸುತ್ತಾರೆ. ಒಂದು ವೇಳೆ ತಲೆಯಲ್ಲಿ ಕೂದಲು ಇರದಿದ್ದರೆ ದೇಹದಲ್ಲಿರುವ ಕೂದಲುಗಳನ್ನು ಸಂಗ್ರಹಿಸುತ್ತಾರೆ. ಇದನ್ನೂ ಓದಿ: ಸಾಂತ್ವನ ಕೇಂದ್ರದಲ್ಲಿ ಗಲಾಟೆ, ಪೊಲೀಸ್ ವಾಹನದಲ್ಲಿ ಮಾತುಕತೆ – ಇದು ರಾಗಿಣಿ, ಸಂಜನಾ ಫ್ರೆಂಡ್‍ಶಿಪ್
ಪರೀಕ್ಷೆ, ಫಲಿತಾಂಶ ಹೇಗೆ?
ಕೊರೊನಾ ಪಾಸಿಟಿವ್, ನೆಗೆಟಿವ್ ಆಧಾರದಲ್ಲಿ ಹೇಗೆ ನಿರ್ಧಾರ ಮಾಡಲಾಗುತ್ತದೋ ಅದೇ ರೀತಿಯಾಗಿ ಇಲ್ಲೂ ನಿರ್ಧಾರ ಮಾಡಲಾಗುತ್ತದೆ. ಒಟ್ಟು ಎರಡು ರೀತಿಯ ಪರೀಕ್ಷೆ ನಡೆಯುತ್ತದೆ. ಯಾವುದೇ ಡ್ರಗ್ಸ್ ಸೇವಿಸದೇ ಇದ್ದರೆ ಕೂದಲು ತೆಗೆದ 24 ಗಂಟೆಯಲ್ಲಿ ನೆಗೆಟಿವ್ ಬರುತ್ತದೆ. ಈ ಫಲಿತಾಂಶಕ್ಕಾಗಿ ಎಂಜೈಮ್-ಲಿಂಕ್ಡ್ ಇಮ್ಯುನೊಸರ್ಬೆಂಟ್ ಅಸ್ಸೇ (ಇಎಲ್‌ಐಎಸ್‌ಎ) ಪರೀಕ್ಷೆ ಮಾಡಲಾಗುತ್ತದೆ.
ಒಂದು ವೇಳೆ ಡ್ರಗ್ಸ್ ಸೇವಿಸಿದ್ದರೆ 72 ಗಂಟೆಯ ನಂತರ ಪಾಸಿಟಿವ್ ಬರುತ್ತದೆ. ಈ ಫಲಿತಾಂಶಕ್ಕಾಗಿ ಗ್ಯಾಸ್ ಕ್ರೊಮ್ಯಾಟೋಗ್ರಫಿ ಮಾಸ್ ಸ್ಪೆಕ್ಟ್ರೋಮೆಟ್ರಿ (ಜಿಸಿ / ಎಂಎಸ್) ಪರೀಕ್ಷೆ ಮಾಡಲಾಗುತ್ತದೆ. ಸರಿಯಾದ ಕೂದಲು ಸಂಗ್ರಹ ಅಥವಾ ಇಬ್ಬರು ವ್ಯಕ್ತಿಗಳ ಕೂದಲು ಮಿಶ್ರಣವಾದರೆ ನಿಖರ ಫಲಿತಾಂಶ ಬರುವುದಿಲ್ಲ. ಇದು ತಿರಸ್ಕೃತವಾಗಿ ಮತ್ತೊಮ್ಮೆ ಪರೀಕ್ಷೆ ಮಾಡಬೇಕಾಗುತ್ತದೆ.
ನಿಖರ ಹೇಗೆ?
ವ್ಯಕ್ತಿ ಡ್ರಗ್ಸ್ ಸೇವಿಸಿದರೆ ಅದು ರಕ್ತದಲ್ಲಿ ಸೇರುತ್ತದೆ. ಡ್ರಗ್ಸ್‌ನಲ್ಲಿರುವ ರಾಸಾಯನಿಕ ರಕ್ತದ ಮೂಲಕ ಕೂದಲ ಕೋಶಕ್ಕೆ ಹೋಗುತ್ತದೆ. ಈ ಮೂಲಕ ಕೂದಲು ಬೆಳೆದಂತೆ ಅದರಲ್ಲೂ ಡ್ರಗ್ಸ್ ರಾಸಾಯನಿಕ ಇರತ್ತದೆ. ವೈದ್ಯಕೀಯ ಅಧ್ಯಯನಗಳ ಪ್ರಕಾರ ಡ್ರಗ್ಸ್ ಸೇವಿಸಿದ ದಿನದಿಂದ ಗರಿಷ್ಟ 90 ದಿನಗಳ ಕಾಲ ಈ ರಾಸಾಯನಿಕ ಕೂದಲ ಕೋಶದಲ್ಲಿ ಇರುತ್ತದೆ.
ಹೇರ್ ಫೊಲಿಕ್ ವರ್ಸಸ್ ಮೂತ್ರ ಪರೀಕ್ಷೆ:
ಎರಡು ಮೂರು ದಿನಗಳ ಹಿಂದೆ ಡ್ರಗ್ಸ್ ಸೇವಿಸಿದರೆ ಮೂತ್ರ ಪರೀಕ್ಷೆಯ ಮೂಲಕ ಪತ್ತೆ ಹಚ್ಚಬಹುದು. ಆದರೆ 4-5 ದಿನಗಳ ಹಿಂದೆ ಡ್ರಗ್ಸ್ ಸೇವಿಸಿದರೆ ಮೂತ್ರ ಪರೀಕ್ಷೆಯ ಮೂಲಕ ಪತ್ತೆ ಹಚ್ಚಲು ಸಾಧ್ಯವಿಲ್ಲ. ಈ ಕಾರಣಕ್ಕೆ ಹೇರ್ ಫೋಲಿಕಲ್ ಪರೀಕ್ಷೆ ನಡೆಸಲಾಗುತ್ತದೆ.
ವಿಮೆ ಕಂಪನಿಗಳು ನಡೆಸುತ್ತವೆ:
ಗುಣಮುಖನಾದ ವ್ಯಕ್ತಿಯ ಆರೋಗ್ಯದ ಬಗ್ಗೆ ಅನುಮಾನ ಬಂದಲ್ಲಿ ವಿಮೆ ಕಂಪನಿಗಳು ಸಹ ಫೋಲಿಕಲ್ ಹೇರ್ ಪರೀಕ್ಷೆ ನಡೆಸಲು ಮುಂದಾಗುತ್ತವೆ. ಒಂದು ವೇಳೆ ದೇಶ ನಿಷೇಧಿಸಿದ ಡ್ರಗ್ಸ್ ಅಂಶ ವ್ಯಕ್ತಿಯ ದೇಹದಲ್ಲಿ ಕಂಡು ಬಂದಲ್ಲಿ ಕಂಪನಿಗಳು ಈ ಕಾರಣವನ್ನು ಉಲ್ಲೇಖಿಸಿ ವಿಮೆ ನೀಡದೇ ಇರುವ ಸಾಧ್ಯತೆಯಿದೆ.
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಜಾರಿ ನಿರ್ದೆಶನಾಲಯ ಎಂಟ್ರಿ ಕೊಟ್ಟಿದೆ. ಇಂದು ಬೆಳಗ್ಗೆ ಇಡಿ ಅಧಿಕಾರಿಗಳು ಸಿಸಿಬಿ ಕಚೇರಿಗೆ ಆಗಮಿಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಡ್ರಗ್ಸ್ ದಂಧೆ ಪ್ರಕರಣಗಳನ್ನ ಇಡಿ ತನಿಖೆ ನಡೆಸುವುದಿಲ್ಲ. ಇಡಿ ಏನಿದ್ದರೂ ಅಕ್ರಮ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಪ್ರಕರಣದ ತನಿಖೆಯನ್ನು ಮಾತ್ರ ನಡೆಸುತ್ತದೆ. ಆದರೆ ಈ ಡ್ರಗ್ಸ್ ದಂಧೆಯಲ್ಲೂ ಅಕ್ರಮ ಹಣದ ವಾಸನೆ ಬಡಿಯುತ್ತಿದ್ದಂತೆ ಈಗ ಇಡಿ ಸಹ ಎಂಟ್ರಿ ಕೊಟ್ಟಿದೆ.
ಈ ಪ್ರಕರಣದಲ್ಲಿ ಓರ್ವ ಪ್ರಭಾವಿ ಶಾಸಕನ ಹೆಸರು ಕೇಳಿ ಬಂದಿದೆ. ಈ ಶಾಸಕ ಶ್ರೀಲಂಕಾದಲ್ಲಿರುವ ಕ್ಯಾಸಿನೋ ಜೊತೆ ನೇರ ಸಂಪರ್ಕವಿದ್ದು ಅಕ್ರಮವಾಗಿ ಕೋಟ್ಯಂತರ ರೂ. ಹಣವನ್ನು ಹೂಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ತೆರಿಗೆಯನ್ನು ವಂಚಿಸಿ ಈ ವ್ಯವಹಾರವನ್ನು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿ ಬಿದ್ದ ಆರೋಪಿಗಳ ಜೊತೆ ನಟ, ನಟಿಯರನ್ನು ಶ್ರೀಲಂಕಾಕ್ಕೆ ಕಳುಹಿಸಿಕೊಡುತ್ತಿರುವ ವಿಚಾರದಲ್ಲಿ ಈ ಶಾಸಕನೇ ಪ್ರಧಾನ ಪಾತ್ರ ವಹಿಸುತ್ತಿರುವ ಹಿನ್ನೆಲೆಯಲ್ಲಿಈತನ ಆದಾಯ ಮೇಲೆ ಇಡಿ ಕಣ್ಣು ಇಟ್ಟಿದೆ. ಇದನ್ನೂ ಓದಿ: ನಿಜವಾಗಿಯೂ ಆರೋಗ್ಯ ಸಮಸ್ಯೆ ಇದ್ಯಾ? – ನಟಿಯರ ಹೈಡ್ರಾಮಾಕ್ಕೆ ಇಂದೇ ಬೀಳುತ್ತೆ ತೆರೆ
ಈ ಕಾರಣ ಅಲ್ಲದೇ ಡ್ರಗ್ಸ್‌ಗಳನ್ನು ಡಾರ್ಕ್ ವೆಬ್ ಮೂಲಕ ತರಿಸಿ ಕೊಡಲಾಗುತ್ತಿತ್ತು. ಡಾರ್ಕ್‍ವೆಬ್‍ನಲ್ಲಿ ಡ್ರಗ್ ತರಿಸುತ್ತಿದ್ದ ವ್ಯಕ್ತಿಗಳು ನಗದು, ಡೆಬಿಟ್, ಕ್ರೆಡಿಟ್‍ಕಾರ್ಡ್ ಬಳಸದೇ ಬಿಟ್ ಕಾಯಿನ್‍ಗಳ ಮೂಲಕ ಖರೀದಿಸುತ್ತಿದ್ದರು. ಈ ಡ್ರಗ್ಸ್ ವ್ಯವಹಾರದಲ್ಲಿ ಕೋಟ್ಯಂತರ ರೂ. ಹಣ ಅಕ್ರಮವಾಗಿ ಹರಿದು ಹೋಗಿರಬಹುದು ಎಂಬ ಗುಮಾನಿ ಇಡಿಯದ್ದು.
ಅಕ್ರಮ ವ್ಯವಹಾರದ ವಾಸನೆ ಬಡಿಯುತ್ತಿದ್ದಂತೆ ಕಳೆದ ನಾಲ್ಕೈದು ದಿನಗಳಿಂದ ಜಾರಿ ನಿರ್ದೇಶನಾಲಯ ಮಾಹಿತಿ ಕಲೆ ಹಾಕಲು ಮುಂದಾಗತೊಡಗಿತು. ಎಲ್ಲ ಮಾಹಿತಿಗಳನ್ನು ಸಂಗ್ರಹಿಸಿದ ಇಡಿ ಅಧಿಕಾರಿಗಳು ಈಗ ಸಿಸಿಬಿಯಿಂದ ಮತ್ತಷ್ಟು ಮಾಹಿತಿ ಪಡೆಯುತ್ತಿದ್ದಾರೆ. ಮೂಲಗಳ ಪ್ರಕಾರ ಶೀಘ್ರವೇ ಇಡಿ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.
ಬೆಂಗಳೂರು: ಸ್ಯಾಂಡಲ್‌ವುಡ್ ಡ್ರಗ್ ಡೀಲ್ ಪ್ರಕರಣದಲ್ಲಿ ಕೇಂದ್ರ ಅಪರಾಧ ವಿಭಾಗ(ಸಿಸಿಬಿ) ಪೊಲೀಸರಿಂದ ಬಂಧನಕ್ಕೆ ಒಳಗಾದ ನಟಿ ರಾಗಿಣಿಗೆ ಅಲರ್ಜಿ ಸಮಸ್ಯೆ ಕಾಣಿಸಿದೆ.
ನನಗೆ ಅಲರ್ಜಿ ಸಮಸ್ಯೆಯಾಗುತ್ತಿದೆ. ಹೀಗಾಗಿ ಡಾಕ್ಟರ್ ಸೇವೆ ಅಗತ್ಯವಿದೆ ಎಂದು ರಾಗಿಣಿ ಪೊಲೀಸರ ಬಳಿ ಕೇಳಿಕೊಂಡಿದ್ದಾರೆ. ಈ ಹಿಂದೆ ರಾಗಿಣಿಗೆ ಜ್ವರ ಮತ್ತು ಬೆನ್ನು ನೋವು ಕಾಣಿಸಿಕೊಂಡಿತ್ತು.
ನಟಿ ರಾಗಿಣಿ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಇಂದು ಮಧ್ಯಾಹ್ನ ಕೋರ್ಟ್ ಮುಂದೆ ಬರಲಿದೆ. ಅನಾರೋಗ್ಯದ ನೆಪ ಹೇಳಿ 2 ದಿನ ರಾಗಿಣಿಯನ್ನು ವಿಚಾರಣೆ ನಡೆಸಲಾಗಿಲ್ಲ. ಹೀಗಾಗಿ ಸಿಸಿಬಿ ಮತ್ತೆ 5 ದಿನ ಕಸ್ಟಡಿ ಕೇಳುವ ಸಾಧ್ಯತೆಯಿದೆ.