Tag: Sandalwood Actor

  • ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು – ಮತ್ತೆ ಒಂದಾಗೋಕೆ ಬಯಸಿದ ಪತ್ನಿ ಸಪ್ನ

    ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು – ಮತ್ತೆ ಒಂದಾಗೋಕೆ ಬಯಸಿದ ಪತ್ನಿ ಸಪ್ನ

    ಸ್ಯಾಂಡಲ್‌ವುಡ್‌ನ ನಟ ಅಜಯ್ ರಾವ್ ಅವರ ಪತ್ನಿ ಸಪ್ನ ವಿಚ್ಛೇದನ ಬಯಸಿ ಶನಿವಾರ (ಆ.16) ಅರ್ಜಿ ಸಲ್ಲಿಸಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಮತ್ತೆ ಹೊಂದಾಣಿಕೆ ಜೀವನ ನಡೆಸಲು ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ.ಇದನ್ನೂ ಓದಿ: ಡಿಗ್ನಿಫೈಡ್ ರೀತಿಯಲ್ಲಿ ಹ್ಯಾಂಡಲ್ ಮಾಡಿ ಸಾಲ್ವ್ ಮಾಡಿಕೊಳ್ತೀನಿ: ಅಜಯ್‌ ರಾವ್‌

    ಪೋಸ್ಟ್‌ನಲ್ಲಿ ಏನಿದೆ?
    ತಾಯಿಯಾಗಿ ನನ್ನ ಮೊದಲ ಜವಾಬ್ದಾರಿ ನನ್ನ ಮಗಳ ಸುರಕ್ಷತೆ, ಗೌರವ ಮತ್ತು ಅವಳ ಭವಿಷ್ಯಕ್ಕಾಗಿ ನಾನು ಪ್ರತಿದಿನ ಧೈರ್ಯವನ್ನು ಕೂಡಿಸಿ, ನನಗೆ ತೀವ್ರವಾಗಿ ಪರೀಕ್ಷಿಸುವ ಸವಾಲುಗಳನ್ನು ಎದುರಿಸುತ್ತಿದ್ದೇನೆ. ಪ್ರಿಯ ಸ್ನೇಹಿತರೇ ಮತ್ತು ಸಹೋದರರೇ. ಈ ಹಂತದಲ್ಲಿ ನಾನು ಮತ್ತು ನನ್ನ ಮಗಳು ನಮ್ಮ ಬದುಕನ್ನು ಪುನರ್‌ನಿರ್ಮಿಸಿಕೊಳ್ಳಲು ಮತ್ತು ನಮ್ಮ ದಾಂಪತ್ಯ ಜೀವನವನ್ನು ಪುನಃ ನಿರ್ಮಿಸಿಕೊಳ್ಳಲು ನಿಮ್ಮ ಹಾರೈಕೆಗಳು ಮತ್ತು ಪ್ರಾರ್ಥನೆಗಳನ್ನು ನಿಮ್ಮಲಿ ಕೇಳಿಕೊಳ್ಳುತ್ತಿದೇನೆ ಮತ್ತು ನಾನು ಅತ್ಯಂತ ಗೌರವದಿಂದ ತಿಳಿಸಲು ಬಯಸುವುದೇನೆಂದರೆ, ಈ ವಿಷಯವು ನಮ್ಮ ವೈಯಕ್ತಿಕ, ಆಳವಾದ ಭಾವನಾತ್ಮಕ ಮತ್ತು ದಾಂಪತ್ಯ ಜೀವನಕ್ಕೆ ಮಾತ್ರ ಸಂಬಂಧಿಸಿದ್ದು ಹೊರತು ಬೇರೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ ಎಂದು ತಿಳಿಸಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

    2014ರಲ್ಲಿ ಡಿಸೆಂಬರ್ 18ರಲ್ಲಿ ಪ್ರೀತಿಸಿ ಮದ್ವೆಯಾಗಿದ್ದ ಈ ಜೋಡಿ ಇತ್ತೀಚಿಗೆ ಹೊಸ ಮನೆಯ ಗೃಹ ಪ್ರವೇಶ ಮಾಡಿತ್ತು. ಹೊಸಪೇಟೆಯಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿತ್ತು. ಆದರೆ ಶನಿವಾರ ಅಜಯ್ ರಾವ್ ಪತ್ನಿ ಸಪ್ನ ವಿಚ್ಛೇದನ ಬಯಸಿ ಅರ್ಜಿ ಸಲ್ಲಿಸಿದ್ದರು.ಇದನ್ನೂ ಓದಿ: ಸ್ಯಾಂಡಲ್‌ವುಡ್‌ ನಟನ ಬಾಳಲ್ಲಿ ಬಿರುಗಾಳಿ – ನಟ ಅಜಯ್ ರಾವ್ ಪತ್ನಿಯಿಂದ ವಿಚ್ಛೇದನಕ್ಕೆ ಅರ್ಜಿ

  • ನಟ ಚೇತನ್ ಚಂದ್ರ ಮೇಲೆ ಮಾರಣಾಂತಿಕ ಹಲ್ಲೆ – ವೀಡಿಯೋ ವೈರಲ್!

    ನಟ ಚೇತನ್ ಚಂದ್ರ ಮೇಲೆ ಮಾರಣಾಂತಿಕ ಹಲ್ಲೆ – ವೀಡಿಯೋ ವೈರಲ್!

    ಬೆಂಗಳೂರು: ನಟ ಚೇತನ್ ಚಂದ್ರ ಮೇಲೆ ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಕಗ್ಗಲಿಪುರದ ಬಳಿ ನಡೆದಿದೆ.

    ಬೈಕ್‍ನಲ್ಲಿ ಹಿಂಬಾಲಿಸಿಕೊಂಡು ಬಂದ ಕೆಲ ಕಿಡಿಗೇಡಿಗಳು, ಬೈಕ್‍ಗೆ ಟಚ್ ಮಾಡಿದ್ದೀರಿ ಎಂದು ಗಲಾಟೆ ಶುರುಮಾಡಿದ್ದಾರೆ. ಅಲ್ಲದೇ ಈ ವೇಳೆ ಚೈನ್ ಒಂದನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಹಲ್ಲೆಯಿಂದ ಮೂಗಿಗೆ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿದೆ ಎಂದು ತಿಳಿದುಬಂದಿದೆ.

    ಈ ಸಂಬಂಧ ಅವರು ಕಗ್ಗಲಿಪುರ ಪೊಲೀಸ್ ಠಾಣೆಗೆ ದೂರು ದಾಖಲಿಸಲು ತೆರಳಿದ್ದಾರೆ. ದೇವಸ್ಥಾನಕ್ಕೆ ಹೋಗಿ ಬರುವ ವೇಳೆ ಈ ಘಟನೆ ನಡೆದಿದೆ. ಈ ಬಗ್ಗೆ ನಟ ಇನ್ಸ್ಟಾಗ್ರಾಂನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

    ಪಿಯುಸಿ, ಪ್ರೇಮಿಸಂ, ರಾಜಧಾನಿ, ಕುಂಭರಾಶಿ ಚಿತ್ರದಲ್ಲಿ ಚೇತನ್ ಚಂದ್ರ ನಟಿಸಿದ್ದಾರೆ.

  • ಕಾಂತ್ರಿಕಾರಿ ಅಂದ್ರೆ ಗುಂಡು ಹೊಡೆಯುವುದು ಅಲ್ಲ – ಚೇತನ್‍ಗೆ ಹೆಚ್‍ಡಿಕೆ ತಿರುಗೇಟು

    ಕಾಂತ್ರಿಕಾರಿ ಅಂದ್ರೆ ಗುಂಡು ಹೊಡೆಯುವುದು ಅಲ್ಲ – ಚೇತನ್‍ಗೆ ಹೆಚ್‍ಡಿಕೆ ತಿರುಗೇಟು

    ಹುಬ್ಬಳ್ಳಿ: ಕ್ರಾಂತಿಕಾರಿ ಅಂದರೆ ಗುಂಡು ಹೊಡೆಯುವುದು ಅಲ್ಲ ಎಂದು ಹೇಳುವ ಮೂಲಕ ನಟ ಚೇತನ್ ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

    ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಕುಮಾರಸ್ವಾಮಿಗೆ ಕಾಂತ್ರಿಕಾರಿ ದೃಷ್ಟಿಯಿಲ್ಲ ಅನ್ನೋ ಚೇತನ್ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಕ್ರಾಂತಿಕಾರಿ ಅಂದ್ರೆ ನೀರಾವರಿ. ಶಿಕ್ಷಣ, ಆರೋಗ್ಯ ಹಾಗೂ ಸಾಲ ಇಲ್ಲದಂತೆ ರೈತರು ಬದುಕು ನಡೆಸುವ ಬಗ್ಗೆ ಕ್ರಾಂತಿಕಾರಿ ಎಂದು ಹೇಳಿದ್ದೆ. ಅವರು ನಟರಾದರೆ ನಾನು ಸಿನಿಮಾ ನಿರ್ದೇಶನ ಮಾಡಿದ್ದೇನೆ. ಆ ಕುರಿತು ಹೆಚ್ಚು ಚರ್ಚೆ ಬೇಡ ಎಂದು ಹೇಳಿದರು. ಇದನ್ನೂ ಓದಿ: ಕಿಚ್ಚನ ಹೊಸ ಹೇರ್ ಸ್ಟೈಲ್‍ಗೆ ಫ್ಯಾನ್ಸ್ ಫಿದಾ

    ಚೇತನ್ ಹೇಳಿದ್ದೇನು..?
    ಕರ್ನಾಟಕವನ್ನು 5 ವರ್ಷಗಳ ಮುನ್ನಡೆಸುವ ಸ್ವಾತಂತ್ರ್ಯವಿದ್ದಿದ್ದರೆ ಕ್ರಾಂತಿಕಾರಿ ಬದಲಾವಣೆಗಳನ್ನು ತರುತ್ತೇನೆಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಮೊದಲಿಗೆ 2 ಬಾರಿ ಅವರು ಸಿಎಂ ಆಗಿದ್ದಾಗಲೂ ಕೂಡ ನಮ್ಮ ರಾಜ್ಯಕ್ಕೆ ಅಂತಹದೇನೂ ಕ್ರಾಂತಿಕಾರಿ ಮಾಡಲಿಲ್ಲ, ಪ್ರಯತ್ನವನ್ನು ಮಾಡಲಿಲ್ಲ. ಮುಖ್ಯವಾಗಿ ಅವರಿಗೆ ಕ್ರಾಂತಿಕಾರಿ ದೃಷ್ಟಿ ಇಲ್ಲ ಮತ್ತು ಯಥಾಸ್ಥಿತಿ ಚಿಂತನೆ ಪ್ರಕ್ರಿಯೆಯು ಅಧಿಕಾರಕ್ಕೆ ಮುಂಚಿತವಾಗಿರಬೇಕು ಇವುಗಳೆಲ್ಲಾ ನಾನ್ ಸೆನ್ಸ್ ಪದಗಳು ಎಂದು ಚೇತನ್ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ನಮ್ಮ ಪಕ್ಷದಲ್ಲಿ ಕಾರ್ಯಕರ್ತರು ಸರಿಯಿಲ್ಲ: ಹೆಚ್.ಡಿ. ಕುಮಾರಸ್ವಾಮಿ

  • ಸ್ಯಾಂಡಲ್‍ವುಡ್ ನಟನನ್ನು ಭೇಟಿ ಮಾಡಿದ ಬಿಗ್‍ಬಾಸ್ ಶಶಿ

    ಸ್ಯಾಂಡಲ್‍ವುಡ್ ನಟನನ್ನು ಭೇಟಿ ಮಾಡಿದ ಬಿಗ್‍ಬಾಸ್ ಶಶಿ

    ಬೆಂಗಳೂರು: ಬಿಗ್‍ಬಾಸ್ ಸೀಸನ್ -6ರ ವಿನ್ನರ್, ಆಧುನಿಕ ರೈತ ಶಶಿಕುಮಾರ್ ರೋರಿಂಗ್ ಸ್ಟಾರ್ ಶ್ರೀಮುರಳಿ ಅವರನ್ನು ಭೇಟಿ ಮಾಡಿದ್ದಾರೆ.

    ಇತ್ತೀಚೆಗಷ್ಟೇ ಶಶಿ ರೋರಿಂಗ್ ಸ್ಟಾರ್ ಮುರಳಿ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೇ ಅವರನ್ನು ಭೇಟಿ ಮಾಡಿದ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಶಶಿ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಫೋಟೋ ಹಾಕಿ, “ಶ್ರೀಮುರಳಿ ಅವರನ್ನು ಭೇಟಿ ಮಾಡಿ ಖುಷಿಯಾಯಿತು. ನಾವಿಬ್ಬರು ಕೃಷಿ, ಬಿಗ್ ಬಾಸ್ ದಿನಗಳು ಹಾಗೂ ಚಿತ್ರರಂಗದ ಬಗ್ಗೆ ಮಾತನಾಡಿದ್ದೇವೆ” ಎಂದರು.

    ಶಶಿ, ನಟ ಶ್ರೀಮುರಳಿ ಅವರನ್ನು ಭೇಟಿ ಮಾಡಿರುವುದು ಅವರ ಅಭಿಮಾನಿಗಳಿಗೆ ಕುತೂಹಲ ಮೂಡಿದೆ. ಅಲ್ಲದೆ ಶಶಿ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಎಂಬ ಪ್ರಶ್ನೆ ಅವರ ಅಭಿಮಾನಿಗಳಿಗೆ ಕಾಡುತ್ತಿದೆ. ಆದರೆ ಸ್ವತಃ ಶಶಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಸಿನಿಮಾದ ಬಗ್ಗೆ ಏನೂ ಮಾತನಾಡಿಲ್ಲ. ನಾನು ಕೃಷಿ ಬಗ್ಗೆ ಕೆಲವು ವಿಚಾರಗಳನ್ನು ಅವರ ಜೊತೆ ಚರ್ಚಿಸಿದ್ದೇನೆ ಎಂದು ಹೇಳಿದ್ದಾರೆ.

    ಶ್ರೀ ಮುರಳಿ ಈಗ ‘ಭರಾಟೆ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ಬಳಿಕ ಅವರು ‘ಮದಗಜ’ ಚಿತ್ರದಲ್ಲಿ ನಟಿಸಲಿದ್ದಾರೆ. ಇನ್ನೂ ಶಶಿ ಕುಮಾರ್ ಟಿವಿ ಕಾರ್ಯಕ್ರಮದಲ್ಲಿ ಬ್ಯುಸಿ ಆಗಿದ್ದಾರೆ. ಅಲ್ಲದೆ ಸಿನಿಮಾದಲ್ಲಿ ಅವಕಾಶ ಸಿಕ್ಕರೆ ನಟಿಸುವುದಾಗಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • 46ನೇ ವಸಂತಕ್ಕೆ ಕಾಲಿಟ್ಟ ‘ದಿ ವಾಲ್’- ಸ್ಯಾಂಡಲ್‍ವುಡ್ ನಟನಿಂದ ಶುಭಾಶಯ

    46ನೇ ವಸಂತಕ್ಕೆ ಕಾಲಿಟ್ಟ ‘ದಿ ವಾಲ್’- ಸ್ಯಾಂಡಲ್‍ವುಡ್ ನಟನಿಂದ ಶುಭಾಶಯ

    ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರು ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಾಹುಲ್ ಹುಟ್ಟುಹಬ್ಬದಂದು ಕಿಚ್ಚ ಸುದೀಪ್ ಟ್ವಿಟ್ಟರಿನಲ್ಲಿ ಫೋಟೋ ಹಾಕಿ ಶುಭಾಶಯ ಕೋರಿದ್ದಾರೆ.

    ಕಿಚ್ಚ ಸುದೀಪ್ ತಮ್ಮ ಟ್ವಿಟ್ಟರಿನಲ್ಲಿ ರಾಹುಲ್ ಜೊತೆಯಿರುವ ಫೋಟೋ ಹಾಕಿ, “ಶಿಸ್ತು, ತತ್ವ, ಗುರಿ ಹೀಗೆ ಹೇಳುತ್ತಾ ಹೋದರೆ ದೊಡ್ಡ ಲಿಸ್ಟ್ ಆಗುತ್ತದೆ. ರಾಹುಲ್ ಅವರು ಲೆಜೆಂಡ್ ಆಗಿದ್ದು, ಅವರು ಈ ಲಿಸ್ಟ್ ಗೆ ಮಾದರಿ. ನಾನು ಇಷ್ಟಪಡುವ ವ್ಯಕ್ತಿ ಅಂದರೆ ರಾಹುಲ್. ಅವರು ಅತ್ಯುತ್ತಮ ಆಟಗಾರ. ಅವರು ಪದಗಳಲ್ಲಿ ಕಡಿಮೆ ಮಾತನಾಡಿ ಆ್ಯಕ್ಷನ್‍ಗಳಲ್ಲಿ(ತಮ್ಮ ಕೆಲಸಗಳಲ್ಲಿ) ಹೆಚ್ಚು ಮಾತನಾಡುತ್ತಾರೆ. ಈ ಸಾಧಕನಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಟ್ವೀಟ್ ಮಾಡಿದ್ದಾರೆ.

    ರಾಹುಲ್ ಅವರು 1973ರಲ್ಲಿ ಇಂದೋರ್ ನಲ್ಲಿ ಜನಿಸಿದ್ದರು. ಬಳಿಕ ಅವರ ಪೋಷಕರು ಕರ್ನಾಟಕಕ್ಕೆ ಶಿಫ್ಟ್ ಆದರು. ಹೀಗಾಗಿ ರಾಹುಲ್ ಅವರು ಕರ್ನಾಟಕದಲ್ಲಿಯೇ ಬೆಳೆದರು. ಅಲ್ಲದೇ ರಾಹುಲ್ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಎಂಬಿಎ ಮಾಡುತ್ತಿದ್ದಾಗ ಭಾರತ ತಂಡಕ್ಕೆ ಆಯ್ಕೆ ಆಗಿದ್ದರು. ರಾಹುಲ್ ಅವರು ಕ್ರಿಕೆಟ್ ಮಾತ್ರವಲ್ಲದೇ ರಾಜ್ಯಮಟ್ಟದ ಹಾಕಿ ಆಟಗಾರ ಕೂಡ ಆಗಿದ್ದಾರೆ. 1996ರಲ್ಲಿ ನಡೆದ ಸಿಂಗರ್ ಕಪ್‍ನಲ್ಲಿ ರಾಹುಲ್ ಶ್ರೀಲಂಕಾ ವಿರುದ್ಧ ತಮ್ಮ ಮೊದಲ ಪಂದ್ಯವನ್ನು ಆಡಿದ್ದರು.

    ರಾಹುಲ್ ಅವರಿಗೆ ಪದ್ಮಶ್ರೀ ಹಾಗೂ ಪದ್ಮವಿಭೂಶಣ ಪ್ರಶಸ್ತಿ ಕೂಡ ದೊರೆತಿದೆ. 164 ಟೆಸ್ಟ್ ಪಂದ್ಯದಲ್ಲಿ ರಾಹುಲ್ 13,288 ರನ್ ಸಿಡಿಸಿದ್ದಾರೆ. ಅದರಲ್ಲಿ 36 ಶತಕ ಹಾಗೂ 63 ಅರ್ಧ ಶತಕವನ್ನು ಭಾರಿಸಿದ್ದಾರೆ. 344 ಏಕದಿನ ಪಂದ್ಯದಲ್ಲಿ ರಾಹುಲ್ 12 ಶತಕ ಹಾಗೂ 83 ಅರ್ಧ ಶತಕ ಭಾರಿಸಿದ್ದಾರೆ. ರಾಹುಲ್ ಸ್ಲಿಪ್‍ನಲ್ಲಿ 210 ಕ್ಯಾಚ್ ಪಡೆದು ವಿಶ್ವ ದಾಖಲೆಯನ್ನು ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ಯಾಂಡಲ್‍ವುಡ್ ನಟನನ್ನು ನೋಡ್ತಿದ್ದಂತೆ ಆಶೀರ್ವಾದ ಪಡೆಯಲು ಮುಂದಾದ್ರು ದರ್ಶನ್

    ಸ್ಯಾಂಡಲ್‍ವುಡ್ ನಟನನ್ನು ನೋಡ್ತಿದ್ದಂತೆ ಆಶೀರ್ವಾದ ಪಡೆಯಲು ಮುಂದಾದ್ರು ದರ್ಶನ್

    ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಅವರನ್ನು ನೋಡುತ್ತಿದ್ದಂತೆ ಚಾಲೆಜಿಂಗ್ ಸ್ಟಾರ್ ದರ್ಶನ್ ಆಶೀರ್ವಾದ ಪಡೆಯಲು ಮುಂದಾಗಿದ್ದಾರೆ.

    ಇತ್ತೀಚೆಗೆ ಶಶಿಕುಮಾರ್ ಅವರ ಮಗ ಅದಿತ್ಯ ಅಭಿನಯಿಸುತ್ತಿರುವ ‘ಮೊಡವೆ’ ಚಿತ್ರಕ್ಕೆ ಶುಭ ಕೋರಲು ಚಿತ್ರದ ಮುಹೂರ್ತದ ಕಾರ್ಯಕ್ರಮದಲ್ಲಿ ದರ್ಶನ್ ಹಾಗೂ ಶಿವರಾಜ್‍ಕುಮಾರ್ ಭಾಗವಹಿಸಿದ್ದರು. ಯುವ ಪ್ರತಿಭೆಯನ್ನು ಪ್ರೋತ್ಸಾಹಿಸಲು ಒಬ್ಬರು ನಟರು ಒಂದೇ ವೇದಿಕೆ ಹಂಚಿಕೊಂಡರು.

    ಈ ಮುಹೂರ್ತ ಕಾರ್ಯಕ್ರಮಕ್ಕೆ ದರ್ಶನ್ ಮೊದಲು ಆಗಮಿಸಿದ್ದರು. ಬಳಿಕ ಶಿವರಾಜ್‍ಕುಮಾರ್ ಆಗಮಿಸಿದ್ದರು. ಶಿವಣ್ಣ ಬರುವುದನ್ನು ಗಮನಿಸಿದ ದರ್ಶನ್ ಎದ್ದು ನಿಂತು ಅವರಿಗೆ ಗೌರವ ನೀಡಿದ್ದರು. ಅಲ್ಲದೇ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆಯಲು ಮುಂದಾದರು. ಈ ವೇಳೆ ಶಿವಣ್ಣ ಅವರನ್ನು ತಡೆದು ಅಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ದರ್ಶನ್ ಭೇಟಿ ಖುಷಿ ನೀಡಿದೆ- ರಾಘಣ್ಣ ಸೆಲ್ಫಿ ಫೋಟೋ ವೈರಲ್

    ಇದಾದ ಬಳಿಕ ದರ್ಶನ್ ಹಾಗೂ ಶಿವಣ್ಣ ಮುಹೂರ್ತದಲ್ಲಿ ಚಿತ್ರದ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಲು ಮುಂದಾದರು. ಈ ವೇಳೆ ಶಿವಣ್ಣ ಕ್ಲಾಪ್ ಮಾಡಲಿ ಎಂದು ದರ್ಶನ್ ಹಿಂದೆ ಸರಿದರು. ಆದರೆ ಶಿವಣ್ಣ, ದರ್ಶನ್ ಅವರನ್ನು ಎಳೆದು ಪಕ್ಕದಲ್ಲಿ ನಿಲ್ಲಿಸಿಕೊಂಡು ಒಟ್ಟಿಗೆ ಕ್ಲಾಪ್ ಮಾಡಿದರು.

    ಸದ್ಯ ಈ ಚಿತ್ರಕ್ಕೆ ಸ್ಟಾರ್ ನಟರಾದ ಶಿವಣ್ಣ ಹಾಗೂ ದರ್ಶನ್ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. ಅಲ್ಲದೇ ಶಿವಣ್ಣ ಅವರನ್ನು ಭೇಟಿಯಾಗುವ ಮೊದಲು ದರ್ಶನ್, ರಾಘಣ್ಣ ಅವರನ್ನು ಭೇಟಿ ಮಾಡಿ ಅವರ ಜೊತೆ ಮಾತನಾಡಿ ಸೆಲ್ಫಿ ತೆಗೆದುಕೊಂಡರು.

    ಸದ್ಯ ಈ ಸಿನಿಮಾವನ್ನು ಸಿದ್ಧಾರ್ಥ್ ಮಾರದೆಪ್ಪ ನಿರ್ದೇಶನ ಮಾಡುತ್ತಿದ್ದು, ಸಿನಿಮಾದಲ್ಲಿ ಅಪೂರ್ವ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಹಂಪಿ, ಗುಲ್ಬರ್ಗ, ಬೀದರ್, ರಾಯಚೂರು, ಬಾದಮಿ, ಸೇರಿದಂತೆ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸ್ಯಾಂಡಲ್‍ವುಡ್ ನಟ ಕರೆದರೆ ಈಗಲೇ ಕನ್ನಡ ಸಿನಿಮಾ ಮಾಡ್ತೀನಿ ಅಂದ್ರು ನಾಗಾರ್ಜುನ್!

    ಸ್ಯಾಂಡಲ್‍ವುಡ್ ನಟ ಕರೆದರೆ ಈಗಲೇ ಕನ್ನಡ ಸಿನಿಮಾ ಮಾಡ್ತೀನಿ ಅಂದ್ರು ನಾಗಾರ್ಜುನ್!

    ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕರೆದರೆ ಈಗಲೇ ನಾನು ಕನ್ನಡ ಸಿನಿಮಾ ಮಾಡುತ್ತೀನಿ ಎಂದು ತೆಲುಗಿನ ಸೂಪರ್ ಸ್ಟಾರ್ ನಾಗಾರ್ಜುನ್ ಹೇಳಿದ್ದಾರೆ.

    ಗುರುವಾರ ಮಾರತಹಳ್ಳಿಯಲ್ಲಿ ಆರಂಭವಾದ ಮಳಿಗೆಯೊಂದರ ಉದ್ಘಾಟನೆ ಸಮಾರಂಭಕ್ಕೆ ನಾಗಾರ್ಜುನ್ ಹಾಗೂ ಶಿವರಾಜ್‍ಕುಮಾರ್ ಆಗಮಿಸಿದ್ದರು. ಇಬ್ಬರು ಒಟ್ಟಿಗೆ ಸಿನಿಮಾ ಮಾಡೋ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂಬುವುದು ಕಾರ್ಯಕ್ರಮದಲ್ಲಿ ಗೊತ್ತಾಗಿದೆ.

    ಶಿವಣ್ಣ ಕರೆದರೆ ತಕ್ಷಣ ಬಂದು ಬಿಡ್ತೀನಿ. ಒಂದು ಅದ್ಭುತವಾದ ಕಥೆ ಸಿಕ್ಕರೆ ಖಂಡಿತಾ ಅವರ ಜೊತೆ ಸಿನಿಮಾ ಮಾಡುತ್ತೇನೆ. ಅದರಲ್ಲೂ ಶಿವಣ್ಣ ಅವರ ಜೊತೆಯಲ್ಲಿ ಅಂದರೆ ಈಗ ಕರೆದರೂ ನಾನು ನಟಿಸುತ್ತೇನೆ. ಡಾ. ರಾಜ್‍ಕುಮಾರ್ ಅವರ ಆ್ಯಕ್ಟಿಂಗ್ ನೋಡಿದ್ದೇನೆ. ಅಲ್ಲದೇ ನನ್ನ ಅಭಿನಯ ನೋಡಿ ಮೆಚ್ಚಿಕೊಂಡು ಫೋನ್ ಕೂಡ ಮಾಡಿದ್ದರು. ಎಂದು ನಾಗಾರ್ಜುನ್ ತಿಳಿಸಿದ್ದಾರೆ.

    ಇದೇ ವೇಳೆ ಶಿವಣ್ಣ ಕೂಡ ಮಾತನಾಡಿ, ನಾಗರ್ಜುನ್ ಅವರ ಜೊತೆ ಸಿನಿಮಾ ಮಾಡಬೇಕೆಂದರೆ ಒಂದು ಒಳ್ಳೆಯ ಸ್ಕ್ರಿಪ್ಟ್ ಬೇಕು. ಒಳ್ಳೆಯ ಸ್ಕ್ರಿಪ್ಟ್ ಸಿಕ್ಕರೆ ಖಂಡಿತಾ ನಾವಿಬ್ಬರು ಒಟ್ಟಿಗೆ ನಟಿಸುತ್ತೇವೆ. ಅಲ್ಲದೇ ಕನ್ನಡ ಹಾಗೂ ತೆಲುಗು ಎರಡರಲ್ಲೂ ಸಿನಿಮಾ ಮಾಡಬಹುದು ಎಂದು ಹೇಳಿದ್ದಾರೆ.

    ನಾಗಾರ್ಜುನ್ ಇದುವರೆಗೂ ಸುಮಾರು 90ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿದ್ದು, ಆದರೆ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಹಾಗೆಯೇ ಶಿವಣ್ಣ ಕೂಡ 2017ರಲ್ಲಿ ಬಾಲಕೃಷ್ಣ ಅವರು ನಟಿಸಿದ ‘ಗೌತಮಿಪುತ್ರ ಶಾತಕರ್ಣಿ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಮಿಂಚಿದ್ದರು. ಅದು ಬಿಟ್ಟು ತೆಲುಗಿನಲ್ಲಿ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ನಟಿಸಿಲ್ಲ.

    1986ರಲ್ಲಿ ಶಿವಣ್ಣ ‘ಆನಂದ್’ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಅದೇ ವರ್ಷ ನಾಗಾರ್ಜುನ್ ಕೂಡ ‘ವಿಕ್ರಂ’ ಚಿತ್ರದ ಮೂಲಕ ಟಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಸದ್ಯ ಈ ಇಬ್ಬರು ನಟರು 32 ವರ್ಷದಿಂದ ಸ್ಯಾಂಡಲ್‍ವುಡ್ ಹಾಗೂ ಟಾಲಿವುಡ್‍ನಲ್ಲಿ ಖ್ಯಾತಿ ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews