Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k

Join our Whatsapp group by clicking the below link
https://chat.whatsapp.com/E6YVEDajTzH06LOh77r25k

ಬೆಂಗಳೂರು: ಸ್ಯಾಂಡಲ್‍ವುಡ್ ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಹುನೀರಿಕ್ಷೆಯನ್ನು ಹುಟ್ಟು ಹಾಕಿದೆ. ಕೆಜಿಎಫ್ ಸಿನಿಮಾ ತಂಡ ಪೋಸ್ಟ್ ಪ್ರೋಡೆಕ್ಷನ್ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಮಸ್ತ್ ಮಸ್ತ್ ಹುಡುಗಿ ರವೀನಾ ಟಂಡನ್ ಅವರು ತಮ್ಮ ಪಾತ್ರಕ್ಕೆ ಧ್ವನಿ ಕೊಟ್ಟಿದ್ದಾರೆ.
ಕೆಜಿಎಫ್ ನಿರ್ದೆಶಕ ಪ್ರಶಾಂತ್ ನೀಲ್ ಅವರು ಸಿನಿಮಾ ಕುರಿತಾಗಿ ಕೆಲವು ಅಪ್ಡೇಟ್‍ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿ ರವೀನಾ ಟಂಡನ್ ಅವರು ಡಬ್ಬಿಂಗ್‍ನಲ್ಲಿ ಪಾಲ್ಗೊಂಡಿರುವುದನ್ನು ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ.
Gavel of brutality !
Dubbing completed with the coolest prime minister #RamikaSen.
Thank you mam @TandonRaveena.#KGFChapter2 #KGF2onApr14 pic.twitter.com/RGlUWN62J0— Prashanth Neel (@prashanth_neel) February 8, 2022
ಕೆಜಿಎಫ್ 2 ಸಿನಿಮಾದಲ್ಲಿ ರವೀನಾ ಟಂಡನ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ಪಾತ್ರಕ್ಕೆ ಸಾಮಾನ್ಯವಾಗಿ ಶೂಟಿಂಗ್ ವೇಳೆ ತುಟಿ ಚಲನೆಯನ್ನು ಎಲ್ಲರೂ ಮಾಡುತ್ತಾರೆ. ಆದರೆ ಪಾತ್ರಗಳಿಗೆ ಮತ್ತೊಮ್ಮೆ ಸ್ಟೂಡಿಯೋದಲ್ಲಿ ಧ್ವನಿ ಕೊಡುತ್ತಾರೆ. ಅದನ್ನೇ ಡಬ್ಬಿಂಗ್ ಎನ್ನುತ್ತಾರೆ. ಈಗ ಸ್ವತಃ ರವೀನಾ ಟಂಡನ್ ಅವರೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಕೇವಲ ಹಿಂದಿಯಲ್ಲಿ ಮಾತ್ರ ಡಬ್ಬಿಂಗ್ ಮಾಡಿದ್ದಾರಾ? ಅಥವಾ ಕನ್ನಡಕ್ಕೂ ಅವರೇ ಧ್ವನಿ ಕೊಟ್ಟಿದ್ದಾರಾ? ಎನ್ನುವ ಪ್ರಶ್ನೆಗೆ ಪ್ರಶಾಂತ್ ನೀಲ್ ಅವರು ಉತ್ತರ ಕೊಡಬೇಕಾಗಿದೆ. ಇದನ್ನೂ ಓದಿ: ಕೆಜಿಎಫ್ ಟೀಮ್ ಜೊತೆ ಕ್ರಿಕೆಟ್ ಆಡಿದ ಯಶ್: ವೀಡಿಯೋ ವೈರಲ್
ಏಪ್ರಿಲ್ 14 ರಂದು ಸಿನಿಮಾ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಕನ್ನಡ, ಹಿಂದಿ, ತಮಿಳು, ತೆಲುಗು, ಮಲೆಯಾಳಂ ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದ್ದು, ಸಿನಿಮಾ ತಂಡ ಭರ್ಜರಿಸಿದ್ಧತೆ ಮಾಡಿಕೊಳ್ಳುತ್ತಿದೆ. ಕೆಲವು ದಿನಗಳ ಹಿಂದೆ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಕುಂದಾಪುರದ ಸ್ಟುಡಿಯೋಗೆ ಯಶ್ ಹೋಗಿದ್ದರು. ಅಲ್ಲಿ ಸುತ್ತಮುತ್ತಲಿನ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿಕೊಟ್ಟಿದ್ದರು. ಸಿನಿಮಾ ಬಿಡುಗಡೆಗೆ ಚಿತ್ರ ತಂಡ ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದರೆ, ಇತ್ತ ಅಭಿಮಾನಿಗಳು ಪರದೆ ಮೇಲೆ ನೋಡಿ ವಿಶಿಲ್ ಹಾಕಲು ಕಾಯುತ್ತಿದ್ದಾರೆ. ಇದನ್ನೂ ಓದಿ: ಬಿಕಿನಿ ಫೋಟೋಗೆ ಕಾಮೆಂಟ್ ಮಾಡಿದ್ದ ಅರ್ಜುನ್‍ಗೆ ಚೋರ್ ಎಂದ ಮಲೈಕಾ