Tag: sandalwod

  • ರಾಜನನ್ನು ರಾಜನ ಥರ ನೋಡೋಕೆ ಇಷ್ಟ: ದರ್ಶನ್ ಸ್ಥಿತಿ ಕಂಡು ರಚಿತಾ ರಾಮ್ ಭಾವುಕ

    ರಾಜನನ್ನು ರಾಜನ ಥರ ನೋಡೋಕೆ ಇಷ್ಟ: ದರ್ಶನ್ ಸ್ಥಿತಿ ಕಂಡು ರಚಿತಾ ರಾಮ್ ಭಾವುಕ

    ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ರನ್ನು (Darshan) ರಚಿತಾ ರಾಮ್ (Rachita Ram) ಭೇಟಿಯಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜನನ್ನು ರಾಜನ ಥರ ನೋಡೋಕೆ ಇಷ್ಟ ಎಂದು ನಟಿ ಭಾವುಕರಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆ ಕೇಸ್ – ದರ್ಶನ್ A1 ಆರೋಪಿ?

    ದರ್ಶನ್ ಸರ್ ಆರೋಗ್ಯವಾಗಿದ್ದಾರೆ. ಜೈಲಿನಲ್ಲಿ ಅವರನ್ನು ಹಾಗೇ ನೋಡೋಕೆ ಕಷ್ಟ ಆಗುತ್ತಿದೆ. ಎಲ್ಲರೂ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರಿಗೆ ಹೇಳಿ ಬಿಟ್ಟು ಬಂದೆ ನಾವೆಲ್ಲರೂ ನಿಮ್ಮ ಬರುವಿಕೆಗಾಗಿ ಕಾಯ್ತಿದ್ದೇವೆ. ಪ್ಲೀಸ್ ಬೇಗ ಬನ್ನಿ ಅಂತ. ನನಗೆ ಕಾನೂನು ಮೇಲೆ ನಂಬಿಕೆ ಇದೆ. ದರ್ಶನ್ ಸರ್ ಆದಷ್ಟು ಬೇಗ ಹೊರಗೆ ಬರುತ್ತಾರೆ ಎಂದು ನಂಬಿಕೆ ಇದೆ ಎಂದು ರಚಿತಾ ರಾಮ್ ಮಾತನಾಡಿದ್ದಾರೆ.

    ರಾಜನನ್ನು ರಾಜನ ಥರನೇ ನನಗೆ ನೋಡೋಕೆ ಇಷ್ಟ. ಇವತ್ತು ಅವರನ್ನು ನೋಡಿ ನಿರಾಳವಾಯ್ತು ಎಂದು ನಟಿ ಭಾವುಕರಾಗಿದ್ದಾರೆ. ಅವರು ಅಲ್ಲಿ ಆರೋಗ್ಯವಾಗಿ ಆರಾಮ ಆಗಿ ಇದ್ದಾರೆ. ನಾನು ಅವರ ಬ್ಯಾನರ್‌ನಿಂದ ಪರಿಚಯ ಆದವಳು. ನನಗೆ ಇವತ್ತು ಏನೇ ಹೆಸರು ಇದ್ದರೂ ಅದು ಅವರಿಂದ ಸಿಕ್ಕಿದೆ. ಅವರು ಅವತ್ತು ಒಪ್ಪಿಕೊಂಡಿದಕ್ಕೆ ನಾನು ಬಿಂದ್ಯಾ ರಾಮ್‌ನಿಂದ ರಚಿತಾ ರಾಮ್ ಆಗಿ ಬೆಳೆದಿದ್ದು. ನಾನು ಯಾವಗಲೂ ಅವರ ಕುಟುಂಬಕ್ಕೆ ಆಭಾರಿಯಾಗಿರುತ್ತೇನೆ. ಅವರನ್ನು ನೋಡಿ ನಾನೇ ಕಣ್ಣೀರಿಟ್ಟೆ ಆದರೆ ಅವರೇ ನನಗೆ ಸಮಾಧಾನ ಮಾಡಿದರು. ಅವರು ಆದಷ್ಟು ಬೇಗ ಹೊರಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ರಚಿತಾ ರಾಮ್ ಮಾತನಾಡಿದ್ದಾರೆ.

  • ಅವಧಿ ಮೀರಿ ಪಾರ್ಟಿ ಕೇಸ್ – ನಟ ದರ್ಶನ್ ಸೇರಿ 8 ಮಂದಿಗೆ ರಿಲೀಫ್

    ಅವಧಿ ಮೀರಿ ಪಾರ್ಟಿ ಕೇಸ್ – ನಟ ದರ್ಶನ್ ಸೇರಿ 8 ಮಂದಿಗೆ ರಿಲೀಫ್

    ಬೆಂಗಳೂರು: ಜೆಟ್‌ಲ್ಯಾಗ್‌ ಪಬ್‌ನಲ್ಲಿ (Jetlag Pub) ಅವಧಿ ಮೀರಿ ಪಾರ್ಟಿ ಮಾಡಿದ ಪ್ರಕರಣ ಸಂಬಂಧ ನಟ ದರ್ಶನ್ (Actor Darshan) ಸೇರಿ ಎಲ್ಲರಿಗೂ ಬಿಗ್‌ ರಿಲೀಫ್‌ ಸಿಕ್ಕಿದೆ.

    ಜೆಟ್‌ಲ್ಯಾಗ್‌ ಪಬ್‌ನಲ್ಲಿ ಅವಧಿ ಮೀರಿ ಪಾರ್ಟಿ ಮಾಡಲಾಗಿದೆ ಎಂದು ಆರೋಪಿಸಿ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಈಗ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ (Chargesheet) ಸಲ್ಲಿಕೆ ಮಾಡಿದೆ. ತಡ ರಾತ್ರಿ ಪಾರ್ಟಿ ಮಾಡಿಲ್ಲ. ಆರೋಪಿಗಳು ಊಟದ ಪಾರ್ಟಿ ಮಾಡಿದ್ದರು ಎಂದು ಪೊಲೀಸರು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.  ಇದನ್ನೂ ಓದಿ: ಡಿಕೆ ಬ್ರದರ್ಸ್ ಕೋಟೆಗೆ ಅಮಿತ್ ಶಾ ಎಂಟ್ರಿ – ಚನ್ನಪಟ್ಟಣದಲ್ಲಿ ರೋಡ್ ಶೋ

    ಅವಧಿ ಮೀರಿ ಪಾರ್ಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಟ್‌ಲ್ಯಾಗ್‌ ಪಬ್ ಮಾಲೀಕ, ಮ್ಯಾನೇಜರ್ ಮೇಲೆ ಕೇಸ್ ದಾಖಲಾಗಿತ್ತು. ಈ ಸಂಬಂಧ ನಟ ದರ್ಶನ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್‌ (Rockline Venkatesh) ಸೇರಿ 8 ಮಂದಿಗೆ ನೋಟಿಸ್‌ ಜಾರಿಯಾಗಿತ್ತು. ಇದನ್ನೂ ಓದಿ: ಜ್ಯೂಸ್ ಜಾಕಿಂಗ್ ಎಂದರೇನು? – ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್‌ ಚಾರ್ಜಿಂಗ್‌ ಮಾಡದಂತೆ ಕೇಂದ್ರ ಎಚ್ಚರಿಕೆ ನೀಡಿದ್ದು ಏಕೆ?

    8 ಜನರು ವಿಚಾರಣೆಗೆ ಹಾಜರಾಗಿ ನಾವು ಪಾರ್ಟಿ ಮಾಡಿಲ್ಲ. ಕೇವಲ ಊಟ ಮಾತ್ರ ಮಾಡಿದ್ದೇವೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಆಧಾರಿಸಿ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಲಾಗಿದೆ.

  • ಜೂನ್‌ 9-10ರಂದು ನಡೆಯಲಿದೆ ಅಭಿಷೇಕ್‌- ಅವಿವಾ ಮದುವೆ

    ಜೂನ್‌ 9-10ರಂದು ನಡೆಯಲಿದೆ ಅಭಿಷೇಕ್‌- ಅವಿವಾ ಮದುವೆ

    ಜ್ಯೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್- ಅವಿವಾ ಬಿದ್ದಪ್ಪ (Aviva Bidapa) ಮದುವೆ ದಿನಾಂಕ ಫಿಕ್ಸ್ ಆಗಿದೆ. ಈ ಮೂಲಕ ಸುಮಲತಾ ಅಂಬರೀಶ್ (Sumalatha Ambareesh) ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಹಲವು ವರ್ಷಗಳ ಅಭಿ- ಅವಿವಾ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ.

    ಫ್ಯಾಷನ್ ಈವೆಂಟ್‌ವೊಂದರಲ್ಲಿ ಅಭಿಷೇಕ್-ಅವಿವಾ ಭೇಟಿ, 3-4 ವರ್ಷಗಳ ಡೇಟಿಂಗ್ ನಂತರ ಇತ್ತೀಚಿಗೆ ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿತ್ತು. ಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಮಗಳು ಅವಿವಾ ಜೊತೆ ಇದೀಗ ಹಸೆಮಣೆ ಏರಲು ಅಂಬಿ ಪುತ್ರ ಸಜ್ಜಾಗಿದ್ದಾರೆ. ಇದನ್ನೂ ಓದಿ:ಕೆಂಪು ಗುಲಾಬಿ ಅವತಾರ ತಾಳಿದ ನಟಿ ಕಿಯಾರಾ

    ವಿಧಾನಸಭಾ ಚುನಾವಣೆ ಮುಗಿದ ಬೆನ್ನಲ್ಲೆ ಸ್ಯಾಂಡಲ್‌ವುಡ್ ಸ್ಟಾರ್ ವೆಡ್ಡಿಂಗ್‌ಗೆ ಸಾಕ್ಷಿಯಾಗಲಿದೆ. ನಟ ಅಭಿಷೇಕ್- ಅವಿವಾ ವಿವಾಹ ಇದೇ ಜೂನ್ 9 ಮತ್ತು 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಜೂನ್ 12ರಂದು ಮಂಡ್ಯದಲ್ಲಿ ಆರತಕ್ಷತೆ ಮತ್ತು ಬೀಗರ ಊಟ ಕಾರ್ಯಕ್ರಮ ನಡೆಯಲಿದೆ. ಈ ಸಮಾರಂಭದಲ್ಲಿ ಸುಮಾರು 10 ಸಾವಿರ ಅತಿಥಿಗಳು ಭಾಗಿಯಾಗುವ ಸಾಧ್ಯತೆ ಇದೆ.

    ಏಪ್ರಿಲ್ 5ರಂದು ಅಭಿಷೇಕ್ (Abhishek Ambareesh) ಮತ್ತು ಸುಮಲತಾ ಅಂಬರೀಷ್ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಗೆ ಮದುವೆ ಆಮಂತ್ರಣ ಪತ್ರ ನೀಡಿದ್ದರು. ಈ ವಿಷಯವನ್ನು ಅವರು ಸೋಷಿಯಲ್ ಮೀಡಿಯಾ ಮೂಲಕ ಫೋಟೊ ಸಹಿತ ಹಂಚಿಕೊಂಡಿದ್ದರು. ಈ ಮೂಲಕ ಗಣ್ಯರನ್ನು ಆಹ್ವಾನಿಸಲು ಆರಂಭಿಸಿದ್ದರು.

    ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಮದುವೆಗೆ ಕೇಂದ್ರದ ಪ್ರಮುಖ ರಾಜಕಾರಣಿಗಳ ಜೊತೆಗೆ, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಬೊಮ್ಮಾಯಿ ಇನ್ನೂ ಹಲವು ರಾಜಕಾರಣಿಗಳು ಭಾಗಿಯಾಗಲಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್‌ನಿಂದ ಶತ್ರುಘ್ನ ಸಿನ್ಹಾ ಇನ್ನೂ ಹಲವು ಪ್ರಮುಖ ತಾರೆಯರು ಈ ಮದುವೆಗೆ ಸಾಕ್ಷಿಯಾಗಲಿದ್ದಾರೆ. ಮದುವೆಗೆ ಆಭರಣ, ವಸ್ತ್ರಗಳ ಖರೀದಿ ಜೋರಾಗಿ ನಡೆದಿದ್ದು, ಸ್ವತಃ ವಸ್ತ್ರ ವಿನ್ಯಾಸಕಿ ಆಗಿರುವ ಅವಿವಾ ಬಿದ್ದಪ್ಪ ಅವರೇ ತಮ್ಮ ಹಾಗೂ ಅಭಿಷೇಕ್ ತೊಡಲಿರುವ ಉಡುಗೆಯನ್ನು ಡಿಸೈನ್ ಮಾಡುತ್ತಿರುವುದು ವಿಶೇಷ.

  • ಸಿಂಪಲ್ಲಾಗೊಂದ್ ಲವ್ ಸ್ಟೋರಿಯಲ್ಲಿ ನಟಿಸಿದ್ದ ಆರ್.ಜೆ ರಚನಾ

    ಸಿಂಪಲ್ಲಾಗೊಂದ್ ಲವ್ ಸ್ಟೋರಿಯಲ್ಲಿ ನಟಿಸಿದ್ದ ಆರ್.ಜೆ ರಚನಾ

    ಹೃದಯಾಘಾತದಿಂದ ಇಂದು ನಿಧನರಾಗಿರುವ ಆರ್.ಜೆ. ರಚನಾ ಸಿನಿಮಾದಲ್ಲಿಯೂ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ವೃತ್ತಿ ಬದುಕಿಗೆ ಬಹುದೊಡ್ಡ ಬ್ರೇಕ್ ನೀಡಿದ್ದ ‘ಸಿಂಪಲ್ಲಾಗೊಂದ್ ಲವ್ ಸ್ಟೋರಿ’ ಸಿನಿಮಾದಲ್ಲಿ ಆರ್.ಜೆ ರಚನಾ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿದ್ದರು. ಈ ಸಿನಿಮಾದಲ್ಲಿ ಅವರು ಆರ್.ಜೆ ಆಗಿಯೇ ಕಾಣಿಸಿಕೊಂಡಿದ್ದು ವಿಶೇಷ. ಇದನ್ನೂ ಓದಿ : ಸಾವಿನಲ್ಲೂ ಸಾರ್ಥಕತೆ ಮೆರೆದ ರಚನಾ ಕುಟುಂಬ

     

    ಸಿನಿಮಾದ ನಾಯಕನ ಪಾತ್ರ ತನ್ನ ಹುಡುಗಿಯ ಜತೆ ಟ್ರಾವೆಲ್ ಮಾಡಿದರೆ, ರೇಡಿಯೋ ಸ್ಟೇಶನ್ ನಲ್ಲಿ ಕುಳಿತುಕೊಂಡೇ ಇಡೀ ಕಥೆಯನ್ನು ರಚನಾ ಹೇಳುತ್ತಾ ಹೋಗುವುದು ಸಿನಿಮಾದ ವಿಶೇಷಗಳಲ್ಲಿ ಒಂದು. ಇದನ್ನೂ ಓದಿ : ಕಂಚಿನ ಕಂಠದ ಆರ್.ಜೆ ರಚನಾ ಹೃದಯಾಘಾತದಿಂದ ನಿಧನ

    ರಚನಾ ಅವರ ಧ್ವನಿಯೇ ಈ ಪಾತ್ರಕ್ಕೆ ಆಯ್ಕೆ ಮಾಡಿಸಿತ್ತು ಎನ್ನುತ್ತಾರೆ ನಿರ್ದೇಶಕ ಸುನಿ. ರಚನಾ ಅವರ ಧ್ವನಿಯಲ್ಲಿ ಮೋಡಿ ಮಾಡುವಂತಹ ಶಕ್ತಿಯಿದೆ. ಅಲ್ಲದೇ, ಜನರಿಗೆ ಮನದಟ್ಟು ಮಾಡುವಂತಹ ಕಲೆಯೂ ಇದೆ. ಅದನ್ನು ನಾನು ಗುರುತಿಸಿಯೇ ಆ ಪಾತ್ರವನ್ನು ಅವರಿಗೆ ನೀಡಿದ್ದು ಎಂದಿದ್ದರು ಸಿಂಪಲ್ ಸುನಿ. ಇದನ್ನೂ ಓದಿ : ವೇದಿಕಾಗೆ ಸಿಕ್ತು ಬಂಪರ್ ಆಫರ್

    2013ರಲ್ಲಿ ಈ ಸಿನಿಮಾ ತೆರೆ ಕಂಡಾಗ ಸ್ವತಃ ರಚನಾ ಅವರೇ ಸಂಭ್ರಮದಿಂದ ಹಲವು ವಿಷಯಗಳನ್ನು ಹಂಚಿಕೊಂಡಿದ್ದರು. ತಂಡದ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದರು. ಮತ್ತೆ ಮತ್ತೆ ಸಿನಿಮಾದಲ್ಲಿ ನಟಿಸುವ ಆಸೆಯನ್ನೂ ಅವರು ವ್ಯಕ್ತ ಪಡಿಸಿದ್ದರು.

  • ‘ಮಿಸ್ಟರ್ ಜೈ’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

    ‘ಮಿಸ್ಟರ್ ಜೈ’ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ

    ಬೆಂಗಳೂರು: ಶ್ರೀ ಗಣೇಶ ಮೂವಿ ಮೇಕರ್ಸ್ ಲಾಂಛನದಲ್ಲಿ ಶ್ಯಾಮಲ.ಕೆ ಅವರು ನಿರ್ಮಿಸುತ್ತಿರುವ ಮಿಸ್ಟರ್ ಜೈ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈವರೆಗೂ ಶ್ರೀರಂಗಪಟ್ಟಣ, ಪಾಂಡವಪುರ, ಬೆಂಗಳೂರು ಮುಂತಾದ ಕಡೆ 48 ದಿನಗಳ ಚಿತ್ರೀಕರಣ ನಡೆದಿದೆ.

    ವಿನಯ್ ಪಳಂಗೇಟಿರ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈ ಹಿಂದೆ ವಿಷ್ಣುವರ್ಧನ, ತಿರುಪತಿ ಎಕ್ಸ್ ಪ್ರೆಸ್, ಜಾಗ್ವಾರ್, ಚಾರುಲತ ಸೇರಿದಂತೆ ಹಲವು ಚಿತ್ರಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಪಿ.ಕುಮಾರ್, ತಮಿಳಿನ ಭಾಗ್ಯರಾಜ್, ತೆಲುಗಿನ ಚಂದ್ರ ಮಹೇಶ್, ಕಣ್ಣನ್ ಮುಂತಾದ ನಿರ್ದೇಶಕರ ಬಳಿ ಕೆಲಸ ಮಾಡಿದ ಅನುಭವ ವಿನಯ್ ಅವರಿಗಿದೆ.

    ಥ್ರಿಲ್ಲರ್ ಹಾಗೂ ಕೌಟುಂಬಿಕ ಕಥಾ ಹಂದರ ಹೊಂದಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳು ಹಾಗೂ ಮೂರು ಸಾಹಸ ಸನ್ನಿವೇಶಗಳಿವೆ.

    ಶ್ರೀಸಾಯಿ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀಸಾಯಿ ಅವರ ಸಂಗೀತ ನಿರ್ದೇಶನವಿದೆ. ಎಸ್.ಬಿ.ಉದಯ್ ಸಂಕಲನ, ಶಿವಶಂಕರ್ ನೃತ್ಯ ನಿರ್ದೇಶನ, ವಿನೋದ್ ಸಾಹಸ ನಿರ್ದೇಶನ ಹಾಗೂ ದೇವರಾಜ್ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಅರಸು ಅಂತಾರೆ, ಸಿಂಪಲ್ ಸುನಿ, ಸಂತು (ಅಲೆಮಾರಿ) ಹಾಗೂ ಶಿವರಾಜಕುಮಾರ್ ಬರೆದಿದ್ದಾರೆ.


    ಜಯಸಿಂಹ ನಾಯಕರಾಗಿ ನಟಿಸುತ್ತಿರುವ ಈ ಚಿತ್ರದ ನಾಯಕಿ ರಕ್ಷ ಸೋಮಶೇಖರ್, ಬಾಲರಾಜವಾಡಿ, ಕುರಿ ಪ್ರತಾಪ್, ಡ್ಯಾನಿಯಲ್ ಕುಟ್ಟಪ್ಪ, ಯಮುನ ಶ್ರೀನಿಧಿ, ವಿನೋದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

  • ಅಪ್ಪನಂತೆ ಸಕಲಕಲಾವಲ್ಲಭನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ

    ಅಪ್ಪನಂತೆ ಸಕಲಕಲಾವಲ್ಲಭನಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಪುತ್ರ ವಿನೀಶ್ ಅಪ್ಪನಂತೆ ಚಿಕ್ಕ ವಯಸ್ಸಿನಿಂದಲೇ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾರೆ. ಅಪ್ಪ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದ್ದರೆ, ಮಗ ತನ್ನ ಟ್ಯಾಲೆಂಟ್ ನಿಂದ ಎಲ್ಲರನ್ನು ಇಂಪ್ರೆಸ್ ಮಾಡುತ್ತಿದ್ದಾರೆ.

    ಇತ್ತೀಚೆಗೆ ವಿನೀಶ್ ದರ್ಶನ್ ಕರಾಟೆಯಲ್ಲಿ ಚಿನ್ನದ ಪದಕವನ್ನು ಗೆದ್ದು ಅಪ್ಪ-ಅಮ್ಮ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದರು. ಈ ಮೂಲಕ ವಿನೀಶ್ ಕೇವಲ ಓದುವುದಷ್ಟೇ ಅಲ್ಲದೆ ಇತರೆ ಕೆಲಸಗಳಲ್ಲಿಯೂ ಸಖತ್ ಟ್ಯಾಲೆಂಟ್ ಎನ್ನುವುದು ಮತ್ತೊಮ್ಮೆ ಸಾಬೀತು ಮಾಡಿದ್ದರು.

    ವೀನಿಶ್ ತಾಯಿ ಕೂಡ ಮಗನನ್ನು ಎಲ್ಲಾ ರೀತಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತಿದ್ದಾರೆ. ವಿನೀಶ್ ದರ್ಶನ್ ಹಾಗೂ ವಿಜಯಲಕ್ಷ್ಮೀ ಗಣಪನ ಮಾಡುವುದನ್ನು ಕಲಿತಿದ್ದಾರೆ. ಇತ್ತೀಚಿಗಷ್ಟೇ ಅಮ್ಮನ ಜೊತೆ ಸೇರಿ ಮಣ್ಣಿನಲ್ಲಿ ಗಣೇಶನನ್ನು ಮಾಡುವುದನ್ನು ಕಲಿತುಕೊಂಡಿದ್ದಾರೆ. ತಾವು ಮಾಡಿದ ಗಣಪನ ಫೋಟೋವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ.

    ಶಾಲೆಯಲ್ಲಿ ಏರ್ಪಡಿಸಿದ್ದ ಕರಾಟೆ ಸ್ಪರ್ಧೆಯಲ್ಲಿ ವಿನೀಶ್ ಚಿನ್ನದ ಪದಕವನ್ನ ಗೆದ್ದು ತಂದಿದ್ದರು. ಈ ವಿಚಾರವನ್ನ ತಿಳಿದ ದರ್ಶನ್ ತುಂಬಾ ಸಂತಸ ಪಟ್ಟಿದ್ದರು.  ವಿನೀಶ್ ದರ್ಶನ್ ರಾಜರಾಜೇಶ್ವರಿ ನಗರದ ಹಿಲ್ ವೀವ್ ಸ್ಕೂಲ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

    ಜ್ಯೂನಿಯರ್ ಚಾಲೆಂಜಿಂಗ್ ಸ್ಟಾರ್ ಆಸೆಗಳಿಗೆ ಅಪ್ಪ-ಅಮ್ಮ ಇಬ್ಬರು ಸಾಥ್ ನೀಡುತ್ತಿದ್ದಾರೆ. ವಿನೀಶ್ ಆಸಕ್ತಿ ಇರೋ ವಿಚಾರದಲ್ಲಿ ತೊಡಗಿಕೊಳ್ಳಲು ದರ್ಶನ್ ಹಾಗೂ ವಿಜಯಲಕ್ಷ್ಮೀ ಅವಕಾಶ ಮಾಡಿಕೊಡುತ್ತಾರೆ. ಶಾಲೆಯ ರಜಾ ದಿನಗಳಲ್ಲಿ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳ ಜೊತೆಯಲ್ಲಿ ಕಾಲಕಳೆಯುವುದರ ಜೊತೆಯಲ್ಲಿ ಕ್ಲೇ ಮೇಕಿಂಗ್, ಕೇಕ್ ಮೇಕಿಂಗ್ ಹೀಗೆ ಇನ್ನೂ ಅನೇಕ ಕಾರ್ಯಗಾರದಲ್ಲಿ ವಿನೀಶ್  ಭಾಗಿಯಾಗುತ್ತಾರೆ. ಇದನ್ನು ಓದಿ: ಕರಾಟೆಯಲ್ಲಿ ಚಿನ್ನದ ಪದಕ ಗೆದ್ದ ಚಾಲೆಂಜಿಂಗ್ ಸ್ಟಾರ್ ಪುತ್ರ

  • ಯಾರಿಗೂ ಹೆದ್ರೋ ಅವಶ್ಯಕತೆಯಿಲ್ಲ, ಆದ್ರೆ ಆ ವ್ಯಕ್ತಿಯ ಹೆಸ್ರು ಹೇಳಲ್ಲ: ಬುಲೆಟ್ ಪ್ರಕಾಶ್

    ಯಾರಿಗೂ ಹೆದ್ರೋ ಅವಶ್ಯಕತೆಯಿಲ್ಲ, ಆದ್ರೆ ಆ ವ್ಯಕ್ತಿಯ ಹೆಸ್ರು ಹೇಳಲ್ಲ: ಬುಲೆಟ್ ಪ್ರಕಾಶ್

    ಬೆಂಗಳೂರು: ದೊಡ್ಡ ನಟನ ಸಣ್ಣತನವನ್ನ ಬಯಲು ಮಾಡುತ್ತೇನೆ ಅಂತಾ ಬಾಂಬ್ ಸಿಡಿಸಿದ್ದ ನಟ ಬುಲೆಟ್ ಪ್ರಕಾಶ್ ಇದೀಗ ಆ ವ್ಯಕ್ತಿಯ ಹೆಸರು ಹೇಳಲ್ಲ ಎಂದಿದ್ದಾರೆ.

    ಯಾರಿಗೂ ಹೆದರೋ ಅವಶ್ಯಕತೆಯಿಲ್ಲ. ಆದರೆ ಆ ವ್ಯಕ್ತಿಯ ಹೆಸರು ಹೇಳಲ್ಲ. ಮಂಗಳವಾರ ಸಂಜೆಯಿಂದ ಚಿತ್ರರಂಗದ ಹಿರಿಯರಿಂದ ಬಹಳಷ್ಟು ಫೋನ್‍ಗಳು ಬರ್ತಿವೆ. ಚಿತ್ರರಂಗದ ಹಿರಿಯರ ಮಾತಿಗೆ ಬೆಲೆ ಕೊಟ್ಟು ಆ ವ್ಯಕ್ತಿಯ ಹೆಸರು ಮತ್ತು ಆ ವಿಚಾರವಾಗಿ ಯಾವುದನ್ನೂ ಹೇಳಲಾರೆ ಎಂದು ಬುಲೆಟ್ ಪ್ರಕಾಶ್ ಹೇಳಿದ್ದಾರೆ.

    ನನಗೆ ಅಭಿಮಾನಿ ಬಳಗ ಜಾಸ್ತಿ ಇದೆ. ಹೀಗಾಗಿ ಆವಾಗವಾಗ ನನ್ನ ಬಗ್ಗೆ ಅಪಪ್ರಚಾರ ಮಾಡ್ತಾರೆ. ನನಗೆ ನೋವಾಗಿದೆ ಅದಕ್ಕೆ ಟ್ವೀಟ್ ಮಾಡಿದ್ದೆ. ನಿನ್ನೆ ರಾತ್ರಿಯಿಂದಲೂ ಹಲವು ಫೋನ್ ಕರೆಗಳು ಬರ್ತಿವೆ. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಎಲ್ಲವನ್ನೂ ಬಗೆಹರಿಸಿಕೊಳ್ಳೋಣ ಅಂತಾ ಹಿರಿಯರು ಹೇಳಿದ್ದಾರೆ. ಅದಕ್ಕೆ ವ್ಯಕ್ತಿಯ ಹೆಸರು ಹೇಳಲ್ಲ. ಹಿರಿಯರು ಏನೂ ಹೇಳಬೇಡ ಎಂದಿದ್ದಾರೆ. ಅದಕ್ಕೆ ಏನೂ ಹೇಳೋದಿಲ್ಲ. ನಾವೆಲ್ಲಾ ಒಂದೇ. ನಾವ್ ನಾವೇ ಸರಿ ಮಾಡಿಕೊಳ್ಳುತ್ತೇವೆ ಅಂತ ಬುಲೆಟ್ ಪ್ರಕಾಶ್ ಸ್ಪಷ್ಟನೆ ನೀಡಿದ್ದಾರೆ.

    https://www.youtube.com/watch?v=2UMKw7vfQJ4

    ದೊಡ್ಡ ನಟನ ಸಣ್ಣತನವನ್ನ ಬಯಲು ಮಾಡುತ್ತೇನೆ. ಸ್ಯಾಂಡಲ್‍ವುಡ್‍ನಲ್ಲಿ ಭಿನ್ನಮತ, ಗುಂಪುಗಾರಿಕೆಗೆ ಕಾರಣ ಯಾರು ಅಂತ ಮಾಧ್ಯಮಗಳಿಗೆ ನಾಳೆ ಹೇಳ್ತೀನಿ. ದೀಪ ಆರುವ ಮೊದಲು ಜೋರಾಗಿ ಉರಿಯುತ್ತದೆ ಅಂತಾ ಹಾಸ್ಯ ನಟ ಬುಲೆಟ್ ಪ್ರಕಾಶ್ ಮಂಗಳವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಈ ಸಂಬಂಧ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದ ಅವರು, ಡಾ.ರಾಜ್ ಕಟ್ಟಿದ್ದ ಕನ್ನಡ ಚಿತ್ರರಂಗ ಚೆನ್ನಾಗಿತ್ತು. ಆದರೆ ಆ ವ್ಯಕ್ತಿಯ ಸ್ವಾರ್ಥದಿಂದಾಗಿ ಕನ್ನಡ ಚಿತ್ರರಂಗ ಈಗ ಹಾಳಾಗಿದೆ. ಹೀಗಾಗಿ ಆ ವ್ಯಕ್ತಿಯ ವಿರುದ್ಧ ಸಂಪೂರ್ಣವಾಗಿ ತಿಳಿಸುತ್ತೇನೆ ಅಂದಿದ್ರು. ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸುವುದಾಗಿ ಬುಲೆಟ್ ಪ್ರಕಾಶ್ ಹೇಳಿದ್ರು.