Tag: Sanath Kumar

  • ಅವಹೇಳನ ಮಾಡಿದ ತಮಿಳನಿಗೆ ಸೆಡ್ಡು ಹೊಡೆದ ರಾಜ ರಾಂಧವ!

    ಅವಹೇಳನ ಮಾಡಿದ ತಮಿಳನಿಗೆ ಸೆಡ್ಡು ಹೊಡೆದ ರಾಜ ರಾಂಧವ!

    ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಭುವನ್ ನಟಿಸಿರೋ ರಾಂಧವ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಎರಡು ತಲೆಮಾರುಗಳ ರೋಚಕ ಕಥೆ ಹೊಂದಿರೋ ಈ ಚಿತ್ರದಲ್ಲಿ ಭುವನ್ ಮಹಾ ಪರಾಕ್ರಮಿ ರಾಜನಾಗಿಯೂ ಅಬ್ಬರಿಸಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಭಿನ್ನಾತಿಭಿನ್ನವಾದ ಪೋಸ್ಟರ್ ಗಳ ಮೂಲಕವೇ ಪ್ರೇಕ್ಷಕರನ್ನೆಲ್ಲ ಆವರಿಸಿಕೊಂಡಿರೋ ಪ್ರೇಕ್ಷಕರಿಗೊಂದು ಸರ್‍ಪ್ರೈಸ್ ನೀಡಲು ರಾಂಧವ ಚಿತ್ರ ತಂಡ ತಯಾರಾಗಿದೆ.

    ನಿರ್ದೇಶಕ ಸುನೀಲ್ ಆಚಾರ್ಯ ನಾಳೆ ಸಂಜೆ ಆರು ಘಂಟೆಗೆ ರಾಂಧವನ ಅಚ್ಚರಿದಾಯಕ ವೀಡಿಯೋ ಒಂದನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸಲು ತೀರ್ಮಾನಿಸಿದ್ದಾರೆ. ಕರ್ನಾಟಕವನ್ನು ಮತ್ತು ಕನ್ನಡಿಗರನ್ನು ಬರಡು ಭೂಮಿಗೆ ಹೋಲಿಸಿದ್ದ ತಮಿಳನೊಬ್ಬನಿಗೆ ರಾಜ ರಾಂಧವ ಮಾಡಿದ್ದೇನೆಂಬುದರ ವಿವರ ಆ ವೀಡಿಯೋದಲ್ಲಿ ಜಾಹೀರಾಗಲಿದೆಯಂತೆ. ಕನ್ನಡತನವನ್ನು ಅವಹೇಳನ ಮಾಡಿದ ತಮಿಳನಿಗೆ ರಾಜ ರಾಂಧವ ಮಾಡಿದ್ದೇನೆಂಬ ಕುತೂಹಲ ನಾಳೆ ಸಂಜೆ ಆರು ಘಂಟೆಗೆ ತಣಿಯಲಿದೆ.

    ಈ ವೀಡಿಯೋ ಅಷ್ಟಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಈ ಮೂಲಕವೇ ರಾಂಧವನಾಗಿ ಭುವನ್ ಅಬ್ಬರಿಸಿರೋ ರೀತಿ ಮತ್ತು ಇಡೀ ಕಥೆಯ ಸ್ಪೆಷಾಲಿಟಿಯೂ ಪ್ರೇಕ್ಷಕರ ಮುಂದೆ ಅನಾವರಣಗೊಳ್ಳಲಿದೆಯಂತೆ. ಅಷ್ಟಕ್ಕೂ ಈ ಚಿತ್ರದ ಹಿಂದೆ ಅಖಂಡ ಎರಡು ವರ್ಷಗಳ ಕಾಲದ ಅಗಾಧ ಪರಿಶ್ರಮವಿದೆ. ಇದಕ್ಕಾಗಿ ನಿರ್ದೇಶಕ ಸುನೀಲ್ ಆಚಾರ್ಯ ಸೇರಿದಂತೆ ಇಡೀ ಚಿತ್ರ ತಂಡ ನಿರಂತರವಾಗಿ ಶ್ರಮ ವಹಿಸಿದೆ.

    ಇನ್ನು ಭುವನ್ ಅವರಂತೂ ಈ ಚಿತ್ರಕ್ಕಾಗಿ ಎರಡು ವರ್ಷಗಳನ್ನೂ ಪಣವಾಗಿಟ್ಟಿದ್ದಾರೆ. ಇದರಲ್ಲಿನ ಪಾತ್ರ ಪಳಗಿದ ನಟರಿಗೂ ಕಷ್ಟವಾಗುವಂಥಾದ್ದು. ಇಲ್ಲಿ ಅವರಿಗೆ ಒಂದಷ್ಟು ಶೇಡಿನ ಪಾತ್ರಗಳಿವೆ. ಅದನ್ನು ಭುವನ್ ಯಾವ ರೀತಿಯಲ್ಲಿ ನಿರ್ವಹಿಸಿದ್ದಾರೆಂಬುದಕ್ಕೆ ನಾಳೆ ಹೊರ ಬರೋ ವೀಡಿಯೋದಲ್ಲಿ ಸಾಕ್ಷಿಗಳು ಸಿಗಲಿವೆ.

    https://www.youtube.com/watch?v=eRpnWE0j_mQ

  • ಜೂನ್ ಹದಿನೇಳಂದು ಬಿಡುಗಡೆಯಾಗಲಿದೆ ‘ರಾಂಧವ’ ಟೈಟಲ್ ಸಾಂಗ್!

    ಜೂನ್ ಹದಿನೇಳಂದು ಬಿಡುಗಡೆಯಾಗಲಿದೆ ‘ರಾಂಧವ’ ಟೈಟಲ್ ಸಾಂಗ್!

    ಬೆಂಗಳೂರು: ಬಿಗ್ ಬಾಸ್ ಶೋ ಸ್ಪರ್ಧಿಯಾಗಿದ್ದ ಭುವನ್ ಪೊನ್ನಣ್ಣ ನಟಿಸಿರೋ ಬಹು ನಿರೀಕ್ಷಿತ ಚಿತ್ರ ರಾಂಧವ. ಸುನಿಲ್ ಆಚಾರ್ಯ ಚೊಚ್ಚಲ ನಿರ್ದೇಶನದ ಈ ಚಿತ್ರ ಈಗಾಗಲೇ ಟ್ರೈಲರ್ ಗಳ ಮೂಲಕ ಪ್ರೇಕ್ಷಕರನ್ನು ಸೆಳೆದುಕೊಂಡಿದೆ. ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿರುವ ಈ ಚಿತ್ರದ ಟೈಟಲ್ ಸಾಂಗ್ ಬಿಡುಗಡೆಗೀಗ ಮುಹೂರ್ತ ನಿಗದಿಯಾಗಿದೆ. ಇದೇ ಜೂನ್ ಹದಿನೇಳರಂದು ರಾಂಧವನ ವಿಶಿಷ್ಟವಾದ ಟೈಟಲ್ ಸಾಂಗ್ ಎಲ್ಲರನ್ನು ತಲುಪಿಕೊಳ್ಳಲಿದೆ.

    ಈಗ ಬಿಡುಗಡೆಯಾಗಿರೋ ಎರಡೆರಡು ಟ್ರೈಲರ್ ಮೂಲಕವೇ ಈ ಚಿತ್ರ ವಿಶಿಷ್ಟವಾದ ಕಥೆಯನ್ನೊಳಗೊಂಡಿದೆ ಎಂಬ ವಿಚಾರವನ್ನು ಜಾಹೀರು ಮಾಡಿದೆ. ಭುವನ್ ಪೊನ್ನಣ್ಣ ಕಾಣಿಸಿಕೊಂಡಿರೋ ಗೆಟಪ್ಪುಗಳೇ ಕ್ಯೂರಿಯಾಸಿಟಿಗೆ ಕಾರಣವಾಗಿದೆ. ಅದನ್ನು ಮತ್ತಷ್ಟು ಹೆಚ್ಚಿಸುವ ಸಲುವಾಗಿಯೇ ಜೂನ್ ಹದಿನೇಳರ ಸೋಮವಾರ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ಮೂಲಕ ಈ ಹಾಡು ಬಿಡುಗಡೆಯಾಗಲಿದೆ.

    https://www.youtube.com/watch?v=eRpnWE0j_mQ

    ಸುನಿಲ್ ಆಚಾರ್ಯ ಆರಂಭದಲ್ಲಿ ಕಾದಂಬರಿಯೊಂದನ್ನು ಪುಸ್ತಕವಾಗಿಸಿ ಆ ನಂತರದಲ್ಲಿ ಆ ರೋಚಕ ಕಥೆಯನ್ನು ಸಿನಿಮಾ ಆಗಿ ಕಟ್ಟಿ ಕೊಟ್ಟಿದ್ದಾರೆ. ಇದೇನು ಮಾಮೂಲಿ ಶೈಲಿಯ ಚಿತ್ರವಲ್ಲ. ಭುವನ್ ಪೊನ್ನಣ್ಣ ಮೊದಲ ಹೆಜ್ಜೆಯಲ್ಲಿಯೇ ಸವಾಲಿನ ಪಾತ್ರವನ್ನು ಆರಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರಕ್ಕೆ ನಾನಾ ಶೇಡುಗಳಿವೆಯಂತೆ. ಅದಕ್ಕಾಗಿ ಅವರು ವರ್ಷಗಟ್ಟಲೆ ತಯಾರಿಯನ್ನೂ ನಡೆಸಿದ್ದಾರೆ.

    ಇಂಥಾ ಸಕಾರಾತ್ಮಕ ಸಂಗತಿಗಳಿಂದಲೇ ಸುದ್ದಿ ಕೇಂದ್ರದಲ್ಲಿರುವ ರಾಂಧವ ಹಾಡಿನ ಮೂಲಕ ಸದ್ದು ಮಾಡಲು ರೆಡಿಯಾಗಿದ್ದಾನೆ. ಈ ಚಿತ್ರಕ್ಕೆ ಯುವ ಗಾಯಕ ಶಶಾಂಕ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಕನ್ನಡ ಮಾತ್ರವಲ್ಲದೇ ಬಾಲಿವುಡ್ ಮಟ್ಟದಲ್ಲಿಯೂ ಹೆಸರು ಮಾಡಿರೋ ಶಶಾಂಕ್ ಈ ಮೂಲಕ ಸಂಗೀತ ನಿರ್ದೇಶಕರಾಗಿಯೂ ಹೊಮ್ಮಿದ್ದಾರೆ. ಈ ಚಿತ್ರವನ್ನು ಸನತ್ ಕುಮಾರ್ ನಿರ್ಮಾಣ ಮಾಡಿದ್ದಾರೆ.