Tag: Sanatana Dharma

  • ಸನಾತನ ಧರ್ಮ ಭಾರತದ ರಾಷ್ಟ್ರೀಯ ಧರ್ಮ: ಯೋಗಿ ಆದಿತ್ಯನಾಥ್

    ಸನಾತನ ಧರ್ಮ ಭಾರತದ ರಾಷ್ಟ್ರೀಯ ಧರ್ಮ: ಯೋಗಿ ಆದಿತ್ಯನಾಥ್

    – ಸನಾತನ ಧರ್ಮ ಟೀಕಿಸುವವರು ಮಹಾ ಕುಂಭಮೇಳ ನೋಡಲಿ

    ಲಕ್ನೋ: ಸನಾತನ ಧರ್ಮ (Sanatana Dharma) ಭಾರತದ ರಾಷ್ಟ್ರೀಯ ಧರ್ಮ. ಅದು ಮಾನವೀಯತೆಯ ಧರ್ಮ. ಇಲ್ಲಿ ಪೂಜಾ ಪ್ರಕ್ರಿಯೆ ವಿಭಿನ್ನವಾಗಿರಬಹುದು ಆದರೆ ಧರ್ಮ ಒಂದೇ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ (Yogi Adityanath) ಹೇಳಿದ್ದಾರೆ.

    ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಅವರು ಮಾತಾಡಿದ್ದಾರೆ. ಈ ವೇಳೆ, ಸನಾತನ ಧರ್ಮದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸನಾತನ ಧರ್ಮ ಭಾರತದ ರಾಷ್ಟ್ರೀಯ ಧರ್ಮವಾಗಿದೆ. ಮಹಾ ಕುಂಭಮೇಳವು ಸನಾತನ ಧರ್ಮದ ಭಾಗವಾಗಿದೆ ಎಂದು ಹೇಳಿದ್ದಾರೆ.

    ಮಹಾ ಕುಂಭಮೇಳ (Maha Kumbhmela), ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಬೃಹತ್ ಧಾರ್ಮಿಕ ಕಾರ್ಯಕ್ರಮವಾಗಿದೆ. ಯಾವುದೇ ಒಂದು ಜಾತಿ ಅಥವಾ ಧರ್ಮಕ್ಕೆ ಮೀಸಲಾಗಿಲ್ಲ. ಇದು ಎಲ್ಲಾ ಧರ್ಮ, ಸಂಸ್ಕೃತಿ ಮತ್ತು ಪಂಥದ ಮಹಾನ್ ಸಮ್ಮಿಲನವಾಗಿದೆ ಎಂದಿದ್ದಾರೆ.

    ಈ ಏಕತೆಯ ಸಂದೇಶವನ್ನು ಮಹಾ ಕುಂಭದಿಂದ ನೀಡಲಾಗಿದೆ. ಇಲ್ಲಿ ಯಾವುದೇ ತಾರತಮ್ಯವಿಲ್ಲ. ಸನಾತನ ಧರ್ಮವನ್ನು ಟೀಕಿಸುತ್ತಿದ್ದ ಜನರು, ಇದನ್ನು ನೋಡಬೇಕು. ಸುಮ್ಮನೇ ಧೃತರಾಷ್ಟ್ರನಾಗಬೇಡಿ ಎಂದಿದ್ದಾರೆ.

    ಪ್ರಯಾಗರಾಜ್‌ನಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸೇರುತ್ತವೆ. ಇದನ್ನು ದೇಶದ ಅತ್ಯಂತ ಪವಿತ್ರ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

  • ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ – ಉದಯನಿಧಿ ಸ್ಟಾಲಿನ್‌ಗೆ ಹೈಕೋರ್ಟ್‌ ರಿಲೀಫ್‌

    ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆ – ಉದಯನಿಧಿ ಸ್ಟಾಲಿನ್‌ಗೆ ಹೈಕೋರ್ಟ್‌ ರಿಲೀಫ್‌

    ಚೆನ್ನೈ: ಸನಾತನ ಧರ್ಮ ಕುರಿತು ಟೀಕೆ ವಿವಾದಕ್ಕೆ ಸಂಬಂಧಿಸಿದಂತೆ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್‌ಗೆ (Udhayanidhi Stalin) ರಿಲೀಫ್‌ ಸಿಕ್ಕಿದೆ. ಉದಯನಿಧಿ ಸ್ಟಾಲಿನ್‌ ಮತ್ತು ಇತರ ಇಬ್ಬರು ಡಿಎಂಕೆ ನಾಯಕರು ಶಾಸಕರನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್‌ ಹೈಕೋರ್ಟ್‌ (Madras High Court) ವಜಾಗೊಳಿಸಿದೆ.

    ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌, ಸ್ಟಾಲಿನ್‌ ಅವರು ಈ ರೀತಿ ಹೇಳಿಕೆಗಳನ್ನು ನೀಡಿರುವುದು ಸರಿಯಲ್ಲ. ಆದರೆ ಇದುವರೆಗೆ ಯಾವುದೇ ನ್ಯಾಯಾಲಯದಿಂದ ಅವರು ಶಿಕ್ಷೆಗೆ ಒಳಗಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗ – ಉದಯನಿಧಿ ಸ್ಟಾಲಿನ್‍ಗೆ ಸುಪ್ರೀಂ ಛೀಮಾರಿ

    ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ (M.K.Stalin) ಅವರ ಪುತ್ರ ಉದಯನಿಧಿ, ಕಳೆದ ಸೆಪ್ಟೆಂಬರ್‌ನಲ್ಲಿ ಸನಾತನ ಧರ್ಮದ (Sanatana Dharma) ಕುರಿತು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಸನಾತನವು ಮಲೇರಿಯಾ ಮತ್ತು ಡೆಂಗ್ಯೂ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಅವರ ಈ ಮಾತುಗಳು ಭಾರಿ ಗದ್ದಲ ಎಬ್ಬಿಸಿತ್ತು.

    ಉದಯನಿಧಿ ಸ್ಟಾಲಿನ್ ಜೊತೆಗೆ ರಾಜ್ಯ ಸಚಿವ ಪಿ.ಕೆ.ಸೇಕರ್ ಬಾಬು ಮತ್ತು ಡಿಎಂಕೆ ಸಂಸದ ಎ.ರಾಜಾ ಅವರನ್ನೂ ವಜಾಗೊಳಿಸುವಂತೆ ಅರ್ಜಿದಾರರು ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಇದನ್ನೂ ಓದಿ: ಸನಾತನ ಧರ್ಮವನ್ನು ಕೊನೆವರೆಗೂ ವಿರೋಧಿಸುತ್ತೇನೆ: ಉದಯನಿಧಿ ಸ್ಟಾಲಿನ್‌

  • ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗ – ಉದಯನಿಧಿ ಸ್ಟಾಲಿನ್‍ಗೆ ಸುಪ್ರೀಂ ಛೀಮಾರಿ

    ಅಭಿವ್ಯಕ್ತಿ ಸ್ವಾತಂತ್ರ್ಯ ದುರುಪಯೋಗ – ಉದಯನಿಧಿ ಸ್ಟಾಲಿನ್‍ಗೆ ಸುಪ್ರೀಂ ಛೀಮಾರಿ

    ನವದೆಹಲಿ: ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ (Udhayanidhi Stalin) ಅವರ `ಸನಾತನ ಧರ್ಮ ನಿರ್ಮೂಲನೆ’ (Sanatana Dharma) ಹೇಳಿಕೆಗೆ ಸುಪ್ರೀಂ ಕೋರ್ಟ್ (Supreme Court) ಛೀಮಾರಿ ಹಾಕಿದೆ.

    ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ದುರುಪಯೋಗಪಡಿಸಿಕೊಂಡ ಬಳಿಕ ಸುಪ್ರೀಂ ಕೋರ್ಟ್‍ಗೆ ಏಕೆ ಅರ್ಜಿ ಸಲ್ಲಿಸಿದ್ದೀರಿ ಎಂದು ಸ್ಟಾಲಿನ್ ಅವರಿಗೆ ಕೋರ್ಟ್ ಪ್ರಶ್ನೆ ಮಾಡಿದೆ. ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ದ್ವಿಸದಸ್ಯ ಪೀಠವು, ಸ್ಟಾಲಿನ್ ಅವರು ಸಚಿವರಾಗಿದ್ದು, ಅವರ ಹೇಳಿಕೆಯ ಪರಿಣಾಮಗಳನ್ನು ತಿಳಿದುಕೊಳ್ಳಬೇಕು ಎಂದು ಒತ್ತಿ ಹೇಳಿದ್ದಾರೆ. ಇದನ್ನೂ ಓದಿ: 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರತಿ ತಿಂಗಳು 1,000 ರೂ. – ಆಪ್‌ ಸರ್ಕಾರದಿಂದ ಬಂಪರ್‌ ಕೊಡುಗೆ

    ಸಂವಿಧಾನದ ಅನುಚ್ಛೇದ 19(1)(ಎ) ಅಡಿಯಲ್ಲಿ ಮತ್ತು ಆರ್ಟಿಕಲ್ 25ರ ಅಡಿಯಲ್ಲಿ ನಿಮ್ಮ ಹಕ್ಕನ್ನು ದುರುಪಯೋಗಪಡಿಸಿಕೊಂಡಿದ್ದೀರಿ. ಈಗ ನೀವು ಆರ್ಟಿಕಲ್ 32ರ ಅಡಿಯಲ್ಲಿ (ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಲು) ನಿಮ್ಮ ಹಕ್ಕನ್ನು ಚಲಾಯಿಸುತ್ತಿದ್ದೀರಾ? ನೀವು ಹೇಳಿದ್ದರ ಪರಿಣಾಮ ಎಷ್ಟರ ಮಟ್ಟಿಗಿದೆ ಎಂದು ಯೋಚಿಸಿದ್ದೀರಾ? ರಾಜ್ಯದ ಮಂತ್ರಿಯಾಗಿದ್ದೀರಿ, ಅದರ ಪರಿಣಾಮಗಳನ್ನು ನೀವೇ ತಿಳಿದುಕೊಳ್ಳಬೇಕು ಎಂದು ನ್ಯಾಯಾಲಯ ಛೀಮಾರಿ ಹಾಕಿದೆ.

    ಉದಯನಿಧಿ ಸ್ಟಾಲಿನ್ ತಮಿಳುನಾಡು ಮುಖ್ಯಮಂತ್ರಿ ಮತ್ತು ಆಡಳಿತಾರೂಢ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಅವರ ಪುತ್ರ. ಅವರು ಸೆ.2023ರಲ್ಲಿ ನಡೆದ ಸಮಾವೇಶವೊಂದರಲ್ಲಿ, ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದ್ದು ಅದನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದ್ದರು. ಅದು ತೀವ್ರ ವಿವಾದಕ್ಕೆ ಕಾರಣವಾಗಿತ್ತು.

    ಸುಪ್ರೀಂ ಕೋರ್ಟ್‍ನಲ್ಲಿ ಸ್ಟಾಲಿನ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ತಮ್ಮ ಕಕ್ಷಿದಾರರ ವಿರುದ್ಧ ಹಲವಾರು ರಾಜ್ಯಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಅವೆಲ್ಲವನ್ನೂ ಒಂದೇ ಕಡೆ ವಿಚಾರಣೆ ನಡೆಸುವಂತೆ ಆದೇಶಿಸಬೇಕೆಂದು ಮನವಿ ಮಾಡಿದ್ದಾರೆ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮಾರ್ಚ್ 15ಕ್ಕೆ ಮುಂದೂಡಿದೆ. ಇದನ್ನೂ ಓದಿ: ಮೋದಿ ಕುಟುಂಬದ ಬಗ್ಗೆ ಹೇಳಿಕೆ ನೀಡಿರುವ ಲಾಲು ವಿರುದ್ಧ ಬಿಜೆಪಿ ವಾಗ್ದಾಳಿ

  • ಸನಾತನ ಧರ್ಮ ಕ್ಷೀಣಿಸಲು ಒಂದು ಸಮುದಾಯದ ಪ್ರಯತ್ನ: ಆರಗ ಜ್ಞಾನೇಂದ್ರ

    ಸನಾತನ ಧರ್ಮ ಕ್ಷೀಣಿಸಲು ಒಂದು ಸಮುದಾಯದ ಪ್ರಯತ್ನ: ಆರಗ ಜ್ಞಾನೇಂದ್ರ

    ಶಿವಮೊಗ್ಗ: ಸನಾತನ ಧರ್ಮವನ್ನು (Sanatana Dharma) ಕ್ಷೀಣ ಮಾಡಿ, ನಮ್ಮ ಧರ್ಮವನ್ನು ಜಾಸ್ತಿ ಮಾಡಿಕೊಳ್ಳಬೇಕು ಎಂದು ಒಂದು ಸಮುದಾಯ ವಿಶೇಷವಾದ ಪ್ರಯತ್ನ ಮಾಡುತ್ತಿದೆ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ (Araga Jnanendra) ಅವರು ಆರೋಪಿಸಿದ್ದಾರೆ.

    ತೀರ್ಥಹಳ್ಳಿಯ (Thirthahalli) ಮಳಲಿ ಮಠದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದ್ದಾರೆ. ಈ ವೇಳೆ, ತಮ್ಮ ಸಂಖ್ಯೆ ಜಾಸ್ತಿ ಮಾಡಿಕೊಂಡು, ತಮ್ಮ ಮತಗಳನ್ನು ಜಾಸ್ತಿ ಮಾಡಿಕೊಳ್ಳಬೇಕು ಎಂದು ಒಂದು ವರ್ಗದವರು ಹೊರಟಿದ್ದಾರೆ ಅಂತವರಿಗೆ ಪಾಠ ಹೇಳಬೇಕಿದೆ. ಒಂದು ವೇಳೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೊಂದು ದಿನ ಬಹಳ ದೊಡ್ಡ ತೊಂದರೆಗೆ ಒಳಗಾಗುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ರೈತ ಬಂಧು ಯೋಜನೆ ಮುಂದೂಡುವಂತೆ ತೆಲಂಗಾಣ ಸರ್ಕಾರಕ್ಕೆ ಚು.ಆಯೋಗ ಸೂಚನೆ

    ಇವತ್ತು ಮಾನವ ಧರ್ಮ ಎಂಬುದು ಇಲ್ಲ, ನಮ್ಮ ಧರ್ಮದಲ್ಲಿ ಇದ್ದರೆ ಮಾತ್ರ ಇರಬೇಕು. ಇಲ್ಲದಿದ್ದರೆ ಇಲ್ಲ ಎನ್ನುವಂತಹ ಧರ್ಮಗಳಿಗೆ ಪಾಠ ಹೇಳಬೇಕಿದೆ ಎಂದು ಅವರು ಹೇಳಿದ್ದಾರೆ.

    ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ನೇ ವಿಧಿಯನ್ನು ಯಾರಿಗೂ ತೆಗೆಯಲು ಆಗಿರಲಿಲ್ಲ. ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ನಂತರ ಅದನ್ನು ಧೈರ್ಯದಿಂದ ಮಾಡಿದ್ದಾರೆ. ನಮ್ಮ ದೇಶದಲ್ಲಿ ಹುಟ್ಟಿ, ಅನ್ನ ತಿಂದು ವಿದೇಶದಿಂದ ಹಣ ಪಡೆದು ಸೇನೆಯ ಮೇಲೆ ಕಲ್ಲು ಹೊಡೆಯುತ್ತಿದ್ದವರು ಇಂದು ಸರಿ ದಾರಿಗೆ ಬರುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿ, ವಿಜಯೇಂದ್ರ ನನ್ನನ್ನು ಸೋಲಿಸಲು ಸಾಧ್ಯವಿಲ್ಲ: ಡಿ.ಕೆ ಸುರೇಶ್

  • ಸನಾತನ ಧರ್ಮವನ್ನು ಕೊನೆವರೆಗೂ ವಿರೋಧಿಸುತ್ತೇನೆ: ಉದಯನಿಧಿ ಸ್ಟಾಲಿನ್‌

    ಸನಾತನ ಧರ್ಮವನ್ನು ಕೊನೆವರೆಗೂ ವಿರೋಧಿಸುತ್ತೇನೆ: ಉದಯನಿಧಿ ಸ್ಟಾಲಿನ್‌

    ಚೆನ್ನೈ: ತಮಿಳುನಾಡು ಸಚಿವ ಮತ್ತು ಡಿಎಂಕೆ (DMK) ನಾಯಕ ಉದಯನಿಧಿ ಸ್ಟಾಲಿನ್ (Udhayanidhi Stalin) ಸೋಮವಾರ ‘ಸನಾತನ ಧರ್ಮ’ ಕುರಿತು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. ಕೊನೆವರೆಗೂ ಸನಾತನ ಧರ್ಮ ವಿರೋಧಿಸುತ್ತೇನೆ ಎಂದು ಉದಯನಿಧಿ ಹೇಳಿಕೆ ನೀಡಿದ್ದಾರೆ.

    ಸನಾತನ ಧರ್ಮವನ್ನು (Sanatana Dharma) ‘ಡೆಂಗ್ಯೂ’ ಮತ್ತು ‘ಮಲೇರಿಯಾ’ಗೆ ಹೋಲಿಸಿದ್ದ ಉದಯನಿಧಿ ಸ್ಟಾಲಿನ್, ತಾನು ಯಾವುದೇ ತಪ್ಪು ಹೇಳಿಕೆ ನೀಡಿಲ್ಲ ಎಂದಿದ್ದರು. ತಮ್ಮ ಹೇಳಿಕೆಗೆ ಸಂಬಂಧಿಸಿದಂತೆ ಕಾನೂನು ಪರಿಣಾಮ ಎದುರಿಸಲು ಸಿದ್ಧ ಎಂದು ಹೇಳಿದ್ದರು. ಇದನ್ನೂ ಓದಿ: ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಚಿಕ್ಕ ಮಗುವನ್ನ ಬೇಟೆಯಾಡ್ತಿದ್ದಾರೆ; ಉದಯನಿಧಿ ಸ್ಟಾಲಿನ್‌ ಬೆಂಬಲಿಸಿದ ಕಮಲ್‌

    ಸನಾತನ ಧರ್ಮದ ಕುರಿತು ಮತ್ತೆ ಮಾತನಾಡಿರುವ ಸಿಎಂ ಸ್ಟಾಲಿನ್‌ ಪುತ್ರ, ನಾನೇನೂ ತಪ್ಪಾಗಿ ಹೇಳಿಲ್ಲ. ನಾನು ಹೇಳಿದ್ದು ಸರಿ, ಅದನ್ನು ಕಾನೂನಾತ್ಮಕವಾಗಿ ಎದುರಿಸುತ್ತೇನೆ. ನನ್ನ ಹೇಳಿಕೆಯನ್ನು ಬದಲಾಯಿಸುವುದಿಲ್ಲ. ನನ್ನ ಸಿದ್ಧಾಂತವನ್ನು ಮಾತನಾಡಿದ್ದೇನೆ. ಅಂಬೇಡ್ಕರ್, ಪೆರಿಯಾರ್ ಹೇಳಿದ್ದಕ್ಕಿಂತ ಹೆಚ್ಚಾಗಿ ಮಾತನಾಡಿಲ್ಲ. ನಾನು ಎಂಎಲ್ಎ ಆಗಬಹುದು, ಮಂತ್ರಿಯಾಗಬಹುದು ಅಥವಾ ಯುವ ಘಟಕದ ಕಾರ್ಯದರ್ಶಿಯಾಗಿ ನಾಳೆ ನಾನು ಇರಬಹುದು. ಆದರೆ ಮನುಷ್ಯನಾಗಿರುವುದು ಹೆಚ್ಚು ಮುಖ್ಯ ಎಂದು ತಿಳಿಸಿದ್ದಾರೆ.

    ನಾವು ಹಲವಾರು ವರ್ಷಗಳಿಂದ ಸನಾತನದ ಬಗ್ಗೆ ಮಾತನಾಡುತ್ತಿದ್ದೇವೆ. ಆದರೆ ನೀಟ್ ಆರು ವರ್ಷಗಳ ಹಿಂದಿನ ಸಮಸ್ಯೆಯಾಗಿದೆ. ಇದು (ಸನಾತನ) ನೂರಾರು ವರ್ಷಗಳ ಸಮಸ್ಯೆಯಾಗಿದೆ. ನಾವು ಇದನ್ನು ಕೊನೆವರೆಗೂ ವಿರೋಧಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಇರುವುದೊಂದೇ ಸನಾತನ ಧರ್ಮ, ಉಳಿದೆಲ್ಲವೂ ಪಂಥಗಳು: ಯೋಗಿ

    ಸೆಪ್ಟೆಂಬರ್‌ನಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್‌, ಸನಾತನ ಧರ್ಮದ ನಿರ್ಮೂಲನೆ ಆಗಬೇಕು. ಅದು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದು ಕರೆ ನೀಡಿದ್ದರು. “ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ. ಅದನ್ನು ನಿರ್ಮೂಲನೆ ಮಾಡಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾ ವೈರಸ್ ಅನ್ನು ವಿರೋಧಿಸಲು ಸಾಧ್ಯವಿಲ್ಲ. ನಾವು ಇದನ್ನು ನಿರ್ಮೂಲನೆ ಮಾಡಬೇಕು. ನಾವು ಸನಾತನವನ್ನು ಹೀಗೆಯೇ ನಿರ್ಮೂಲನೆ ಮಾಡಬೇಕು” ಎಂದು ಹೇಳಿದ್ದರು.

    ಅವರ ಹೇಳಿಕೆಯು ಆಡಳಿತಾರೂಢ ಬಿಜೆಪಿಯಿಂದ ತೀವ್ರ ಟೀಕೆಗೆ ಗುರಿಯಾಗಿತ್ತು. ಪಕ್ಷದ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಸ್ಟಾಲಿನ್ ಅವರ ಹೇಳಿಕೆಯು ಯಹೂದಿಗಳ ಬಗ್ಗೆ ಹಿಟ್ಲರ್ ಹೊಂದಿದ್ದ ನಿಲುವಿಗೆ ಹೋಲುತ್ತದೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಸನಾತನ ಧರ್ಮದ ವಿರುದ್ಧ ಹೇಳಿಕೆ ನಿಲ್ಲಿಸಿ, ಬಿಜೆಪಿ ಭ್ರಷ್ಟಚಾರದ ಬಗ್ಗೆ ಮಾತನಾಡಿ: ಕಾರ್ಯಕರ್ತರಿಗೆ ಸ್ಟಾಲಿನ್ ಸಲಹೆ

  • ಇರುವುದೊಂದೇ ಸನಾತನ ಧರ್ಮ, ಉಳಿದೆಲ್ಲವೂ ಪಂಥಗಳು: ಯೋಗಿ

    ಇರುವುದೊಂದೇ ಸನಾತನ ಧರ್ಮ, ಉಳಿದೆಲ್ಲವೂ ಪಂಥಗಳು: ಯೋಗಿ

    ಲಕ್ನೋ: ಧರ್ಮ ಇರುವುದೊಂದೇ, ಅದುವೇ ಸನಾತನ ಧರ್ಮ. ಉಳಿದೆಲ್ಲವೂ ಪಂಥಗಳು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಹೇಳಿಕೆ ನೀಡಿದ್ದಾರೆ.

    ಗೋರಖ್‌ಪುರದಲ್ಲಿ ನಡೆದ ಶ್ರೀಮದ್ ಭಾಗವತ ಕಥಾ ಜ್ಞಾನ ಯಾಗ ಕಾರ್ಯಕ್ರಮದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಸನಾತನ ಧರ್ಮವೊಂದೇ (Sanatana Dharma) ಧರ್ಮ. ಉಳಿದದ್ದು ಎಲ್ಲಾ ಪಂಥಗಳು ಮತ್ತು ಆರಾಧನಾ ವಿಧಾನಗಳು. ಸನಾತನ ಧರ್ಮ ಮಾನವೀಯತೆಯ ಧರ್ಮವಾಗಿದ್ದು, ಅದರ ಮೇಲೆ ದಾಳಿ ನಡೆಸಿದರೆ ಇಡೀ ವಿಶ್ವದ ಮಾನವೀಯತೆ ತೊಂದರೆಗೆ ಒಳಗಾಗುತ್ತದೆ ಎಂದು ಅವರು ಹೇಳಿದ್ದಾರೆ.

    ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಶ್ರೀಮದ್ ಭಾಗವತ್ ಸಾರವನ್ನು ನಿಜವಾಗಿಯೂ ಗ್ರಹಿಸಲು ಮುಕ್ತ ಮನಸ್ಥಿತಿಯನ್ನು ಹೊಂದಿರಬೇಕು. ಸಂಕುಚಿತ ಮನಸ್ಸಿನ ದೃಷ್ಟಿಕೋನಗಳು ಅದರ ಬೋಧನೆಗಳ ವಿಶಾಲತೆಯನ್ನು ಅರಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಶಿವಮೊಗ್ಗ ಗಲಭೆಗೆ ಟ್ವಿಸ್ಟ್ – ರಾಗಿಗುಡ್ಡದ ಗಲಾಟೆ ಪೂರ್ವನಿಯೋಜಿತ?

    ಕಳೆದ ತಿಂಗಳು ತಮಿಳುನಾಡಿನ ಸಚಿವ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ (Udhayanidhi Stalin) ಸನಾತನ ಧರ್ಮವನ್ನು ನಿರ್ಮೂಲನೆ ಮಾಡಿ ಎಂಬ ಹೇಳಿಕೆಯನ್ನು ನೀಡಿದ್ದರು. ಇದು ಭಾರೀ ವಿವಾದಕ್ಕೆ ಕಾರಣವಾಯಿತು. ದೇಶಾದ್ಯಂತ ಬಾರೀ ಚರ್ಚೆಗೂ ಈ ವಿಚಾರ ಗ್ರಾಸವಾಯಿತು. ಇದರ ಬೆನ್ನಲ್ಲೇ ಯೋಗಿ ಆದಿತ್ಯನಾಥ್ ಅವರು ಸನಾತನ ಧರ್ಮದ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ.

    ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅದನ್ನು ರದ್ದುಗೊಳಿಸಬೇಕು. ನಾವು ಡೆಂಗ್ಯೂ, ಸೊಳ್ಳೆ, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ನಾವು ಅದನ್ನು ನಿರ್ಮೂಲನೆ ಮಾಡಬೇಕು. ಅದೇ ರೀತಿ ನಾವು ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಉದಯನಿಧಿ ಸ್ಟಾಲಿನ್ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದರು. ಇದನ್ನೂ ಓದಿ: Breaking – ಮೆಟ್ರೋ ಹಸಿರು ಮಾರ್ಗದ ಸಂಚಾರದಲ್ಲಿ ಭಾರೀ ವ್ಯತ್ಯಯ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಚಿಕ್ಕ ಮಗುವನ್ನ ಬೇಟೆಯಾಡ್ತಿದ್ದಾರೆ; ಉದಯನಿಧಿ ಸ್ಟಾಲಿನ್‌ ಬೆಂಬಲಿಸಿದ ಕಮಲ್‌

    ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಚಿಕ್ಕ ಮಗುವನ್ನ ಬೇಟೆಯಾಡ್ತಿದ್ದಾರೆ; ಉದಯನಿಧಿ ಸ್ಟಾಲಿನ್‌ ಬೆಂಬಲಿಸಿದ ಕಮಲ್‌

    ಚೆನ್ನೈ: ಇಂದು ಸನಾತನ ಧರ್ಮದ (Sanatana Dharma) ಬಗ್ಗೆ ಮಾತನಾಡಿದ್ದಕ್ಕಾಗಿ ಚಿಕ್ಕ ಮಗುವನ್ನು ಬೇಟೆಯಾಡುತ್ತಿದ್ದಾರೆ, ಬಿಜೆಪಿ ಮತ್ತು ಇನ್ನಿತರ ಸಂಘಟನೆಗಳು ಮಗುವನ್ನು ಟಾರ್ಗೆಟ್‌ ಮಾಡುತ್ತಿವೆ ಎಂದು ಮಕ್ಕಳ್‌ ನೀಧಿಮೈಯಂ ಮುಖ್ಯಸ್ಥ ಹಾಗೂ ನಟ ಕಮಲ್‌ ಹಾಸನ್‌ (Kamal Haasan) ಶುಕ್ರವಾರ ತಿಳಿಸಿದ್ದಾರೆ.

    ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕಾಗಿ ಚಿಕ್ಕ ಮಗುವನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಹೆಸರು ಹೇಳದೆಯೇ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ (Udhayanidhi Stalin) ಅವರನ್ನ ಹೇಳಿಕೆಯನ್ನ ಬೆಂಬಲಿಸಿದ್ದಾರೆ.  ಇದನ್ನೂ ಓದಿ: ತಮಿಳುನಾಡು ಸರ್ಕಾರ, ಉದಯನಿಧಿ ಸ್ಟಾಲಿನ್‍ಗೆ ಸುಪ್ರೀಂ ಕೋರ್ಟ್ ನೋಟಿಸ್

    ಸನಾತನ ಧರ್ಮದ ಬಗ್ಗೆ ಸಚಿವರು ನೀಡಿದ ಹೇಳಿಕೆಯಲ್ಲಿ ಹೊಸದೇನೂ ಇಲ್ಲ. ದ್ರಾವಿಡ ಚಳಚಳಿಯ ನಾಯಕರು, ಉದಯನಿಧಿ ಅವರ ತಾತ ಕರುಣಾನಿಧಿ ಅವರೂ ಈ ಬಗ್ಗೆ ಮಾತನಾಡಿದ್ದಾರೆ. ದಿವಂಗತ ಪೆರಿಯಾರ್ ವಿ ರಾಮಸಾಮಿ (Periyar V Ramasamy) ಅವರೂ ಸಾಮಾಜಿಕ ಅನಿಷ್ಠಗಳನ್ನು ಎಷ್ಟು ಕಟುವಾಗಿ ವಿರೋಧಿಸಿದ್ದರು ಎಂಬುದನ್ನ ನಾವು ಅವರ ಜೀವನ ಸ್ವಭಾವದಿಂದಲೇ ಅರ್ಥಮಾಡಿಕೊಳ್ಳಬಹುದು. ನಮಗೆಲ್ಲಾ ಸನಾತನ ಎಂಬ ಪದದ ಅರ್ಥ ತಿಳಿಸಿದ್ದೇ ಅವರಿಂದ ಎಂದು ಹೇಳಿದ್ದಾರೆ.

    ಮೊದಲು ಪೆರಿಯಾರ್‌ ಅವರು ಕಾಶಿಯಲ್ಲಿ ಪೂಜೆ ಮಾಡುತ್ತಿದ್ದರು, ಆದ್ರೆ ಅದೆಲ್ಲವನ್ನೂ ತ್ಯಜಿಸಿ ಮಕ್ಕಳ ಸೇವೆಯೇ ಮಹಾ ಸೇವೆ ಅಂತಾ ಭಾವಿಸಿ ಬರಬೇಕಾದ್ರೆ ಅವರಿಗೆ ಎಷ್ಟು ಕೋಪ ಇದ್ದಿರಬೇಕು. ಅವರನ್ನ ಯಾವುದೇ ರಾಜಕೀಯ ಪಕ್ಷಗಳು ಸ್ವಂತ ಎಂದು ಹೇಳುವಂತಿಲ್ಲ. ಇಡೀ ತಮಿಳುನಾಡಿಗೆ ಅವರು ನಾಯಕರು ಎಂದು ಶ್ಲಾಘಿಸಿದರು. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್‌ ತಲೆ ತಂದವರಿಗೆ 10 ಕೋಟಿ ಬಹುಮಾನ; ಅಯೋಧ್ಯೆಯ ಹಿಂದೂ ಧರ್ಮದರ್ಶಿ ಘೋಷಣೆ

    ಉದಯನಿಧಿ ಹೇಳಿದ್ದೇನು?
    ಲೇಖಕರ ಸಮಾವೇಶವೊಂದರಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು. ಈ ಪರಿಕಲ್ಪನೆಯು ಅಂತರ್ಗತವಾಗಿ ಹಿಂದುಳಿದಿದೆ. ಇದು ಜಾತಿ ಮತ್ತು ಆಧಾರದ ಮೇಲೆ ಜನರನ್ನು ವಿಭಜಿಸುತ್ತದೆ. ಮೂಲಭೂತವಾಗಿ ಸಮಾನತೆ ಮತ್ತು ಸಾಮಾಜಿಕ ನ್ಯಾಯವನ್ನು ವಿರೋಧಿಸುತ್ತದೆ ಎಂದು ಹೇಳಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಮಿಳುನಾಡು ಸರ್ಕಾರ, ಉದಯನಿಧಿ ಸ್ಟಾಲಿನ್‍ಗೆ ಸುಪ್ರೀಂ ಕೋರ್ಟ್ ನೋಟಿಸ್

    ತಮಿಳುನಾಡು ಸರ್ಕಾರ, ಉದಯನಿಧಿ ಸ್ಟಾಲಿನ್‍ಗೆ ಸುಪ್ರೀಂ ಕೋರ್ಟ್ ನೋಟಿಸ್

    ನವದೆಹಲಿ: ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿ ಭಾರೀ ವಿವಾದಕ್ಕೆ ಕಾರಣವಾಗಿದ್ದ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್‍ಗೆ ಸುಪ್ರೀಂ ಕೋರ್ಟ್ (Supreme Court) ನೋಟಿಸ್ ನೀಡಿದೆ.

    ತಮಿಳುನಾಡು ಸರ್ಕಾರ, ಉದಯನಿಧಿ ಸ್ಟಾಲಿನ್ (Udhayanidhi Stalin), ಸಿಬಿಐ, ಎ ರಾಜಾ ಮತ್ತು ಇತರ ಪಕ್ಷಗಳಿಗೆ ಕೂಡ ನೋಟಿಸ್ ಜಾರಿಗೊಳಿಸಿ ಕೋರ್ಟ್ ಪ್ರತಿಕ್ರಿಯೆ ಕೇಳಿದೆ. ಇದನ್ನೂ ಓದಿ: ಉದಯನಿಧಿ ಸ್ಟಾಲಿನ್ ವಿರುದ್ಧ ಮುಂಬೈನಲ್ಲಿ ಎಫ್‌ಐಆರ್ ದಾಖಲು

    ಸನಾತನ ಧರ್ಮವನ್ನು ನಿರ್ಮೂಲನೆ ಮಾಡಿ ಎಂಬ ಹೇಳಿಕೆಗಾಗಿ ಉದಯನಿಧಿ ಸ್ಟಾಲಿನ್ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿರುವ ಮನವಿಗೆ ನ್ಯಾಯಾಲಯ ಈ ನೋಟಿಸ್ ಜಾರಿ ಮಾಡಿದೆ. ಅರ್ಜಿದಾರರ ಮನವಿಯಲ್ಲಿ ಒಟ್ಟು 14 ಕಕ್ಷಿದಾರರನ್ನು ಸೇರಿಸಲಾಗಿದೆ. ಇವುಗಳಲ್ಲಿ ತಮಿಳುನಾಡು ಸರ್ಕಾರದ ವಿವಿಧ ಇಲಾಖೆಗಳು, ಡಿಜಿಪಿ, ಪೊಲೀಸ್ ಕಮಿಷನರ್, ಸಿಬಿಐ ಮತ್ತು ಇತರರು ಸೇರಿದ್ದಾರೆ.

    ತಮಿಳುನಾಡು (Tamilnadu) ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್ ಸೆಪ್ಟೆಂಬರ್ 2 ರಂದು ಸನಾತನ ನಿರ್ಮೂಲನಾ ಸಮಾವೇಶದಲ್ಲಿ ಮಾತನಾಡಿ, ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಕೆಲವು ವಿಷಯಗಳನ್ನು ವಿರೋಧಿಸಲು ಸಾಧ್ಯವಿಲ್ಲ, ಅದನ್ನು ಮಾತ್ರ ರದ್ದುಗೊಳಿಸಬೇಕು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ನಾವು ಇದನ್ನು ನಿರ್ಮೂಲನೆ ಮಾಡಬೇಕು. ನಾವು ಸನಾತನವನ್ನು ಹೇಗೆ ನಿರ್ಮೂಲನೆ ಮಾಡಬೇಕು ಎಂದು ಅವರು ಹೇಳಿದ್ದರು.

    ಸನಾತನವನ್ನು ವಿರೋಧಿಸುವ ಬದಲು ಅದನ್ನು ನಿರ್ಮೂಲನೆ ಮಾಡಬೇಕು. ಸನಾತನ ಎಂಬ ಹೆಸರು ಸಂಸ್ಕೃತದಿಂದ ಬಂದಿದೆ. ಇದು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ ಎಂದು ಆಡಳಿತಾರೂಢ ಡಿಎಂಕೆ ಸರ್ಕಾರದಲ್ಲಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • INDIA ಒಕ್ಕೂಟವು ಸನಾತನ ಧರ್ಮವನ್ನು ನಾಶ ಮಾಡಲು ಬಯಸಿದೆ: ಮೋದಿ ವಾಗ್ದಾಳಿ

    INDIA ಒಕ್ಕೂಟವು ಸನಾತನ ಧರ್ಮವನ್ನು ನಾಶ ಮಾಡಲು ಬಯಸಿದೆ: ಮೋದಿ ವಾಗ್ದಾಳಿ

    ಭೋಪಾಲ್: ಸ್ವಾಮಿ ವಿವೇಕಾನಂದ ಮತ್ತು ಲೋಕಮಾನ್ಯ ತಿಲಕರಿಗೆ ಸ್ಫೂರ್ತಿ ನೀಡಿದ ಸನಾತನ ಧರ್ಮವನ್ನು ಈ ಇಂಡಿಯಾ ಮೈತ್ರಿಕೂಟದ (INDIA Alliance) ಜನರು ಅಳಿಸಿ ಹಾಕಲು ಬಯಸುತ್ತಿದ್ದಾರೆ. ಈ ಒಕ್ಕೂಟವು ಸನಾತನ ಧರ್ಮವನ್ನು (Sanatan Dharma Row) ನಾಶ ಮಾಡಲು ಬಯಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಿಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

    ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಸಾರ್ವಜನಿಕ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಒಕ್ಕೂಟದ ನಾಯಕರು ಬಹಿರಂಗವಾಗಿ ಸನಾತನ ಧರ್ಮವನ್ನು ಗುರಿಯಾಗಿಸಲು ಆರಂಭಿಸಿದ್ದಾರೆ. ನಾಳೆ ನಮ್ಮ ಮೇಲೆ ದಾಳಿಯನ್ನು ಹೆಚ್ಚಿಸುತ್ತಾರೆ. ದೇಶದಾದ್ಯಂತ ಎಲ್ಲಾ ಸನಾತನಿಗಳು ಮತ್ತು ನಮ್ಮ ದೇಶವನ್ನು ಪ್ರೀತಿಸುವ ಜನರು ಎಚ್ಚೆತ್ತುಕೊಳ್ಳಬೇಕು. ಅಂತಹವರನ್ನು ನಾವು ತಡೆಯಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಸನಾತನ ಧರ್ಮದ ವಿರುದ್ಧ ಹೇಳಿಕೆ ನಿಲ್ಲಿಸಿ, ಬಿಜೆಪಿ ಭ್ರಷ್ಟಚಾರದ ಬಗ್ಗೆ ಮಾತನಾಡಿ: ಕಾರ್ಯಕರ್ತರಿಗೆ ಸ್ಟಾಲಿನ್ ಸಲಹೆ

    INDIA ಒಕ್ಕೂಟಕ್ಕೆ INDI ಎಂದು ಕರೆದ ಪ್ರಧಾನಿ ಮೋದಿ, INDI ಒಕ್ಕೂಟಕ್ಕೆ ನಾಯಕರಿಲ್ಲ. ಭಾರತದ ಸಂಸ್ಕೃತಿಯ ಮೇಲೆ ದಾಳಿ ಮಾಡಲು ಗುಪ್ತ ಕಾರ್ಯಸೂಚಿಯನ್ನು ಮಾಡಿದೆ. ಸನಾತನ ಸಂಸ್ಕೃತಿಯನ್ನು ಕೊನೆಗೊಳಿಸುವ ನಿರ್ಣಯದೊಂದಿಗೆ ಮೈತ್ರಿ ಅನುಷ್ಠಾನಕ್ಕೆ ಬಂದಿದೆ. ದೇಶ ಮತ್ತು ಸಮಾಜವನ್ನು ವಿಭಜನೆ ಮಾಡುವ ಕೆಲಸ ಮಾಡ್ತಿದೆ. ಭಾರತದ ಸಂಸ್ಕೃತಿ ಮೇಲೆ ದಾಳಿ ಮಾಡುವ ಕುತಂತ್ರ ಮಾಡಿದೆ. ಸಾವಿರಾರು ವರ್ಷಗಳ ನಂಬಿಕೆ ಮುಗಿಸುವ ಕೆಲಸ‌ ಮಾಡುತ್ತಿದೆ ಎಂದು ಆರೋಪಿಸಿದರು.

    ಇದಕ್ಕೂ ಮುನ್ನ ಸನಾತನ ಧರ್ಮದ ವಿರುದ್ಧ ನೀಡುವ ಹೇಳಿಕೆಗಳನ್ನು ನೋಡಿಕೊಂಡು ಸುಮ್ಮನಿರದಂತೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಕ್ಯಾಬಿನೆಟ್ ಸಚಿವರಿಗೆ ಸೂಚನೆ ನೀಡಿದ್ದರು. ಪ್ರಧಾನಿ ನರೇಂದ್ರ‌ ಮೋದಿ ಹೇಳಿಕೆ ಬಳಿಕ ಬಿಜೆಪಿ ನಾಯಕರು ಇಂಡಿಯಾ ಒಕ್ಕೂಟವನ್ನು ಟಾರ್ಗೆಟ್ ಮಾಡಲು ಆರಂಭಿಸಿದ್ದರು. ಇದನ್ನೂ ಓದಿ: ಜಿ20 ಸಭೆಗೆ ಅನುಮಾನಾಸ್ಪದ ಬ್ಯಾಗ್‌ನೊಂದಿಗೆ ಆಗಮಿಸಿದ್ದ ಚೀನಾ – ತಪಾಸಣೆಗೆ ನಿರಾಕರಿಸಿ ಹೋಟೆಲ್‌ನಲ್ಲಿ ಹೈಡ್ರಾಮಾ

    ಈ ತಿಂಗಳ ಆರಂಭದಲ್ಲಿ ಡಿಎಂಕೆ ನಾಯಕ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಗ್ಯೂಗೆ ಹೋಲಿಸಿದ್ದರು. ಈ ಹೇಳಿಕೆ‌ ಬೆನ್ನಲ್ಲೇ ಡಿಎಂಕೆ ನಾಯಕ, ಲೋಕಸಭಾ ಸಂಸದ ಮತ್ತು ಕೇಂದ್ರ ಮಾಜಿ ಸಚಿವ ಎ. ರಾಜಾ ಸನಾತನ ಧರ್ಮವನ್ನು ಕುಷ್ಠರೋಗ ಮತ್ತು ಹೆಚ್‌ಐವಿಯಂತಹ ಕಾಯಿಲೆಗಳಿಗೆ ಹೋಲಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸನಾತನ ಧರ್ಮದ ವಿರುದ್ಧ ಹೇಳಿಕೆ ನಿಲ್ಲಿಸಿ, ಬಿಜೆಪಿ ಭ್ರಷ್ಟಚಾರದ ಬಗ್ಗೆ ಮಾತನಾಡಿ: ಕಾರ್ಯಕರ್ತರಿಗೆ ಸ್ಟಾಲಿನ್ ಸಲಹೆ

    ಸನಾತನ ಧರ್ಮದ ವಿರುದ್ಧ ಹೇಳಿಕೆ ನಿಲ್ಲಿಸಿ, ಬಿಜೆಪಿ ಭ್ರಷ್ಟಚಾರದ ಬಗ್ಗೆ ಮಾತನಾಡಿ: ಕಾರ್ಯಕರ್ತರಿಗೆ ಸ್ಟಾಲಿನ್ ಸಲಹೆ

    ನವದೆಹಲಿ: ಸನಾತನ ಧರ್ಮದ (Sanatana Dharma) ವಿರುದ್ಧ ಹೇಳಿಕೆ ನೀಡುವುದನ್ನು ನಿಲ್ಲಿಸಿ. ಬಿಜೆಪಿ (BJP) ನೇತೃತ್ವದ ಕೇಂದ್ರವನ್ನು ಭ್ರಷ್ಟಾಚಾರದ (Corruption) ಮೇಲೆ ಗುರಿಯಾಗಿಸಬೇಕು ಎಂದು ಡಿಎಂಕೆ ಅಧ್ಯಕ್ಷ ಮತ್ತು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ (MK Stalin) ತಮ್ಮ ಪಕ್ಷದ ಕಾರ್ಯಕರ್ತರಿಗೆ ಸಲಹೆ ನೀಡಿದ್ದಾರೆ.

    ಸನಾತನ ಧರ್ಮವನ್ನು ರಕ್ಷಿಸುವ ದೃಷ್ಟಿಯಿಂದ ಪ್ರತಿ ಹೇಳಿಕೆ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ಸೂಚನೆ ನೀಡಿದ್ದು, ಅವರು ರಾಜಕೀಯ ಮೈಲೇಜ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಈ ಹಿನ್ನೆಲೆ ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ನಿಫಾ ವೈರಸ್ ಸೋಂಕಿತರ ಸಂಖ್ಯೆ 5ಕ್ಕೆ ಏರಿಕೆ – ಸಂಪರ್ಕ ಪಟ್ಟಿಯಲ್ಲಿ 706 ಜನ

    ಇದಕ್ಕೆ ಪೂರಕವಾಗಿ ಹೇಳಿಕೆ ನೀಡುವ ಮೂಲಕ ಕೇಂದ್ರ ಸಚಿವರೊಬ್ಬರು ಉದ್ದೇಶಪೂರ್ವಕವಾಗಿ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯ ವೈಫಲ್ಯಗಳನ್ನು ಮರೆಮಾಚುವ ತಂತ್ರಕ್ಕೆ ನಮ್ಮ ಜನರು ಬಲಿಯಾಗಬಾರದು. ಭ್ರಷ್ಟಾಚಾರದ ಬಗ್ಗೆ ಚರ್ಚೆಯನ್ನು ತಡೆಯಲು ಬಿಜೆಪಿ ಬಯಸುತ್ತದೆ ಮತ್ತು ಸನಾತನ ಧರ್ಮದ ಮೇಲೆ ಕೇಂದ್ರೀಕರಿಸುವ ಮೂಲಕ ಗಮನವನ್ನು ಬೇರೆಡೆಗೆ ಸೆಳೆಯುತ್ತಿದೆ. ಬಿಜೆಪಿಯ ಭ್ರಷ್ಟಾಚಾರದ ಬಗ್ಗೆ ಹೆಚ್ಚು ಮಾತನಾಡಬೇಕು ಎಂದರು. ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಗುಂಡಿನ ಚಕಮಕಿ- ಸೇನಾಧಿಕಾರಿಗಳಿಬ್ಬರು ಹುತಾತ್ಮ

    ಕೋಮುವಾದಿ ಮತ್ತು ನಿರಂಕುಶ ಬಿಜೆಪಿ ಆಡಳಿತವನ್ನು ಸೋಲಿಸುವ ಮೂಲಕ ದೇಶ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುವ ನಾವು ಪಾಲಿಸಬೇಕಾದ ಗುರಿಯನ್ನು ಗೆಲ್ಲಲು ಸಮರ್ಪಣಾ ಭಾವದಿಂದ ಕೆಲಸ ಮಾಡೋಣ ಮತ್ತು ನಮ್ಮ ಗಮನ ಬೇರೆಡೆಗೆ ಅವಕಾಶ ನೀಡದಂತೆ ನಾನು ಎಲ್ಲರಿಗೂ ಮನವಿ ಮಾಡುತ್ತೇನೆ. ಬಿಜೆಪಿ ನಾಯಕರು ನಿಜವಾದ ಸಮಸ್ಯೆಗಳನ್ನು ಬಿಟ್ಟು ಜನರ ಗಮನವನ್ನು ಬೇರೆಡೆಗೆ ಸೆಳೆಯುವಲ್ಲಿ ನಿಪುಣರು ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಕುಡಿಯುವ ನೀರಿನ ಹೆಸರಿನಲ್ಲಿ ತಮಿಳುನಾಡು ರೈತರಿಗೆ ಅನ್ಯಾಯ: ತ.ನಾಡು ಸಚಿವ

    ಭಾರತ್ ಮಾಲಾ ಮತ್ತು ದ್ವಾರಕಾ ಎಕ್ಸ್‌ಪ್ರೆಸ್‌ ವೇ ಯೋಜನೆಗಳು ಸೇರಿದಂತೆ ಕೇಂದ್ರದ ಯೋಜನೆಗಳಲ್ಲಿ 7.50 ಲಕ್ಷ ಕೋಟಿ ರೂ.ಗಳ ಅಕ್ರಮ ನಡೆದಿದೆ ಎಂದು ಸಿಎಜಿ ವರದಿಯು ಬಹಿರಂಗಪಡಿಸಿದೆ. ಮಣಿಪುರ ಹಿಂಸಾಚಾರವನ್ನು ಉಲ್ಲೇಖಿಸಿ, ಬಿಜೆಪಿ ಆಡಳಿತಕ್ಕೆ ಬೆಂಕಿ ನಂದಿಸಲು ಬೆನ್ನುಮೂಳೆಯಿಲ್ಲ ಮತ್ತು ಅದು ರಾಷ್ಟ್ರೀಯ ಭಾಷಣದ ಹಾದಿಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಜಿ20 ಸಭೆಗೆ ಅನುಮಾನಾಸ್ಪದ ಬ್ಯಾಗ್‌ನೊಂದಿಗೆ ಆಗಮಿಸಿದ್ದ ಚೀನಾ – ತಪಾಸಣೆಗೆ ನಿರಾಕರಿಸಿ ಹೋಟೆಲ್‌ನಲ್ಲಿ ಹೈಡ್ರಾಮಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]