Tag: Samsung Galaxy M51

  • 7000 ಎಂಎಎಚ್ ಬ್ಯಾಟರಿಯ ಸ್ಯಾಮ್‍ಸಂಗ್ ಡ್ಯುಯಲ್ ಸಿಮ್ ಫೋನ್ ಬಿಡುಗಡೆ

    7000 ಎಂಎಎಚ್ ಬ್ಯಾಟರಿಯ ಸ್ಯಾಮ್‍ಸಂಗ್ ಡ್ಯುಯಲ್ ಸಿಮ್ ಫೋನ್ ಬಿಡುಗಡೆ

    ನವದೆಹಲಿ: ಸ್ಯಾಮ್‍ಸಂಗ್ ಇತಿಹಾಸದಲ್ಲಿ ಅತಿ ಹೆಚ್ಚು ಬ್ಯಾಟರಿ ಸಾಮರ್ಥ್ಯದ ಫೋನನ್ನು ಬಿಡುಗಡೆ ಮಾಡಿದೆ. ಗ್ಯಾಲಕ್ಸಿ ಎಂ51 ಹೆಸರಿನ ಡ್ಯುಯಲ್ ಸಿಮ್ ಫೋನಿಗೆ 7000 ಎಂಎಎಚ್ ಬ್ಯಾಟರಿಯನ್ನು ನೀಡಿದೆ.

    ಈ ಫೋನ್ ಜರ್ಮನಿಯಲ್ಲಿ ಬಿಡುಗಡೆಯಾಗಿದ್ದು, ಶೀಘ್ರವೇ ಭಾರತದಲ್ಲೂ ಬಿಡುಗಡೆಯಾಗಲಿದೆ. ಹೊಸ ಗ್ಯಾಲಕ್ಸಿ ಹ್ಯಾಂಡ್‍ಸೆಟ್ 25 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸ್ಪೀಡ್ ಸಪೋರ್ಟ್ ಮತ್ತು ಎರಡು ದಿನ ಚಾರ್ಜ್ ಬಾಳಿಕೆ ಬರಲಿದೆ ಎಂದು ಕಂಪನಿ ಹೇಳಿದೆ. ಫೋನಿಗೆ 4 ಕ್ಯಾಮೆರಾ ನೀಡಿದೆ.

    ಬೆಲೆ ಎಷ್ಟು?
    360 ಯೂರೋ (ಅಂದಾಜು 31,400 ರೂ) ಬೆಲೆಯನ್ನು ನಿಗದಿ ಪಡಿಸಲಾಗಿದ್ದು, ಸದ್ಯ ಜರ್ಮನಿಯಲ್ಲಿ ಗ್ಯಾಲಕ್ಸಿ ಎಂ51 ಪ್ರಿ ಆರ್ಡರ್ ನಲ್ಲಿ ಲಭ್ಯವಿದೆ. ಕಪ್ಪು ಮತ್ತು ಬಿಳಿ ಬಣ್ಣಗಳಲ್ಲಿ ಗ್ಯಾಲಕ್ಸಿ ಎಂ51 ಗ್ರಾಹಕರಿಗೆ ಸಿಗಲಿದೆ.

    ಸೆಪ್ಟೆಂಬರ್ ಎರಡನೇ ವಾರ ಭಾರತದಲ್ಲಿ ಗ್ಯಾಲಕ್ಸಿ ಎಂ51 ಲಭ್ಯವಾಗಲಿದ್ದು, ಇಲ್ಲಿ 25 ರಿಂದ 30 ಸಾವಿರ ರೂ. ಗ್ರಾಹಕರ ಕೈಗೆ ಸೇರಲಿದೆ ಎಂದು ವರದಿಯಾಗಿದೆ. ಸ್ಯಾಮ್‍ಸಂಗ್ ಈಗಾಗಲೇ ಭಾರತದಲ್ಲಿ ಗ್ಯಾಲಕ್ಸಿ ಎಂ51ರ ಪ್ರಚಾರ ಆರಂಭಿಸಿದೆ.

    ಗುಣವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್‍ಪ್ಲೇ:
    163.9* 6.3*9.5 ಮಿಮಿ ಗಾತ್ರ. 213 ಗ್ರಾಂ ತೂಕ, ಸೂಪರ್ ಅಮೊಲೆಡ್ 6.7 ಇಂಚಿನ ಸ್ಕ್ರೀನ್(1080*2340 ಪಿಕ್ಸೆಲ್), 385 ಪಿಪಿಐ, ಕಾರ್ನಿಂಗ್ ಗೊರಿಲ್ಲ ಗ್ಲಾಸ್ 3.

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 10 ಓಎಸ್, ಕ್ವಾಲಕಂ ಸ್ನಾಪ್‍ಡ್ರಾಗನ್ 730 ಅಕ್ಟಾಕೋರ್ ಪ್ರೊಸೆಸರ್, ಅಡ್ರಿನೊ 618 ಗ್ರಾಫಿಕ್ಸ್ ಪ್ರೊಸೆಸರ್,6 ಜಿಬಿ ರ‍್ಯಾಮ್, 128 ಜಿಬಿ ಆಂತರಿಕ ಮೆಮೊರಿ.

    ಕ್ಯಾಮೆರಾ ಮತ್ತು ಇತರೆ:
    ಹಿಂದುಗಡೆ 64 ಎಂಪಿ, 12 ಎಂಪಿ ಅಲ್ಟ್ರಾ ವೈಡ್, 5 ಎಂಪಿ ಮೈಕ್ರೋ, 5 ಎಂಪಿ ಡೆಪ್ತ್ ಕ್ಯಾಮೆರಾ, ಮುಂದುಗಡೆ ಸೆಲ್ಫಿಗಾಗಿ 32 ಎಂಪಿ ಕ್ಯಾಮರಾ ಹೊಂದಿದೆ.