Tag: Samsung

  • ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌25 ಆಲ್ಟ್ರಾ, ಎಸ್‌24 ಆಲ್ಟ್ರಾ, ಎಸ್‌23 ಆಲ್ಟ್ರಾ ಬೆಲೆ ದಿಢೀರ್‌ ಭಾರೀ ಇಳಿಕೆ

    ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌25 ಆಲ್ಟ್ರಾ, ಎಸ್‌24 ಆಲ್ಟ್ರಾ, ಎಸ್‌23 ಆಲ್ಟ್ರಾ ಬೆಲೆ ದಿಢೀರ್‌ ಭಾರೀ ಇಳಿಕೆ

    ನವದೆಹಲಿ: ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌25 ಆಲ್ಟ್ರಾ, ಎಸ್‌24 ಆಲ್ಟ್ರಾ, ಎಸ್‌23 ಆಲ್ಟ್ರಾ ಸ್ಮಾರ್ಟ್‌ಫೋನಿನ (Smartphone) ಬೆಲೆ ಭಾರೀ ಕಡಿತವಾಗಿದೆ.

    ಗೆಲಾಕ್ಸಿ ಎಸ್‌ 25 ಆಲ್ಟ್ರಾ (Samsung Galaxy S25 Ultra) 1,29,999 ರೂ. ದರದಲ್ಲಿ ಬಿಡುಗಡೆಯಾಗಿತ್ತು. ಆದರೆ ಈಗ ಈ ಫೋನ್‌ ಅಮೆಜಾನ್‌ ಇಂಡಿಯಾದಲ್ಲಿ ಹೆಚ್‌ಡಿಎಫ್‌ಸಿ ಕಾರ್ಡ್‌ ಮೂಲಕ 1,18,999 ರೂ.ಗೆ ಲಭ್ಯವಿದೆ. ಅಷ್ಟೇ ಅಲ್ಲದೇ ಹಳೆಯ ಫೋನ್‌ ನೀಡುವ ಮೂಲಕ ಮತ್ತಷ್ಟು ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನ್‌ 12 ಜಿಬಿ ರ‍್ಯಾಮ್‌, 256 ಜಿಬಿ ಆಂತರಿಕ ಮೆಮೊರಿ, ಸ್ನಾಪ್‌ಡ್ರಾಗನ್‌ 8 ಎಲೈಟ್‌ ಪ್ರೊಸೆಸರ್‌ ಹೊಂದಿದೆ. ಇದನ್ನೂ ಓದಿ: 25 ವರ್ಷದ ಬಳಿಕ ಪಾಕ್‌ ತೊರೆದ ಮೈಕ್ರೋಸಾಫ್ಟ್

     

    ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 24 ಆಲ್ಟ್ರಾ (8GB RAM + 256GB) ಫೋನ್‌ 1,29,999 ರೂ.ಗೆ ಬಿಡುಗಡೆಯಾಗಿತ್ತು. ಈಗ ಈ ಫೋನ್‌ ದರ 38% ಕಡಿಮೆಯಾಗಿದ್ದು 83,999 ರೂ.ಗೆ ಅಮೇಜಾನ್‌ನಲ್ಲಿ ಲಭ್ಯವಿದೆ. ಆಯ್ದ ಕ್ರೆಡಿಟ್‌ ಕಾರ್ಡ್‌ನಲ್ಲಿ 1,500 ರೂ. ಡಿಸ್ಕೌಂಟ್‌ ಇದೆ.

    ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 23 ಆಲ್ಟ್ರಾ (8GB RAM + 256GB ) ಫೋನ್‌ 1,24,999 ರೂ. ದರದಲ್ಲಿ ಬಿಡುಗಡೆಯಾಗಿತ್ತು. ಆದರೆ ಈಗ ಈ ಫೋನ್‌ 84,999 ರೂ.ಗೆ ಲಭ್ಯವಿದೆ.

  • ಸ್ಯಾಮ್‌ಸಂಗ್‌ Galaxy Z Fold 5 ಬೆಲೆ ದಿಢೀರ್‌ 46,009 ರೂ. ಇಳಿಕೆ

    ಸ್ಯಾಮ್‌ಸಂಗ್‌ Galaxy Z Fold 5 ಬೆಲೆ ದಿಢೀರ್‌ 46,009 ರೂ. ಇಳಿಕೆ

    ಸ್ಯಾಮ್‌ಸಂಗ್‌ (Samsung) ಕಂಪನಿಯ ಮಡಚುವ ಫೋನ್‌ ಗೆಲಾಕ್ಸಿ ಝಡ್‌ ಫೋಲ್ಡ್‌ 5 (Galaxy Z Fold 5) ಬೆಲೆ ದಿಢೀರ್‌ 46,009 ರೂ. ಇಳಿಕೆಯಾಗಿದೆ.

    ಬಿಡುಗಡೆಯಾಗುವ ಸಂದರ್ಭದಲ್ಲಿ 256 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 1,54,999 ರೂ. ದರ ನಿಗದಿಯಾಗಿತ್ತು.  ಆದರೆ ಈಗ ಈ ಫೋನ್‌ ಕ್ರೋಮಾ ಶಾಪಿಂಗ್‌ ತಾಣದಲ್ಲಿ 1,08,990 ರೂ. ಬೆಲೆಗೆ ಲಭ್ಯವಿದೆ.

    ಗುಣವೈಶಿಷ್ಟ್ಯಗಳು
    ಬಾಡಿ
    ಅನ್‌ಫೋಲ್ಡ್‌ – 154.9 x 129.9 x 6.1 mm
    ಫೋಲ್ಡ್‌ – 154.9 x 67.1 x 13.4 mm
    ತೂಕ – 253 ಗ್ರಾಂ, ಸ್ಟೈಲಸ್‌ ಬೆಂಬಲಿತ
    ಸಿಮ್‌ – ನ್ಯಾನೋ ಸಿಮ್‌ + ಇ ಸಿಮ್‌ ಇದನ್ನೂ ಓದಿ: ಐಫೋನ್, ಆ್ಯಂಡ್ರಾಯ್ಡ್ ಫೋನಲ್ಲಿ ಭಿನ್ನ ದರ – ಓಲಾ, ಊಬರ್‌ಗೆ ನೋಟಿಸ್

    ಡಿಸ್ಪ್ಲೇ:
    ಟೈಪ್‌ – ಫೋಲ್ಡೇಬಲ್‌ ಡೈನಾಮಿಕ್‌ AMOLED 2X, 120Hz, HDR10+
    ಗಾತ್ರ – 7.6 ಇಂಚು
    ರೆಸ್ಯೂಲೂಷನ್‌ – 1812 x 2176 ಪಿಕ್ಸೆಲ್‌ ( ~373 ಪಿಪಿಐ)

    ಪ್ಲಾಟ್‌ಫಾರಂ:
    ಓಎಸ್‌- ಆಂಡ್ರಾಯ್ಡ್‌ 13
    ಚಿಪ್‌ಸೆಟ್‌ – ಕ್ವಾಲಕಂ SM8550-AC Snapdragon 8 Gen 2 (4 nm), Octa-core (1×3.36 GHz Cortex-X3 & 2×2.8 GHz Cortex-A715 & 2×2.8 GHz Cortex-A710 & 3×2.0 GHz Cortex-A510)
    ಜಿಪಿಯು – Adreno 740

    ಮಮೊರಿ
    ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್‌ ಸ್ಲಾಟ್‌ ಇಲ್ಲ
    ಆಂತರಿಕ : 256GB 12GB RAM, 512GB 12GB RAM, 1TB 12GB RAM

    ಹಿಂದುಗಡೆ ಕ್ಯಾಮೆರಾ
    ಟ್ರಿಪಲ್‌ – 50 MP, f/1.8, 23mm (wide), 1/1.56″, 1.0µm, dual pixel PDAF, OIS 10 MP, f/2.4, 66mm (telephoto), 1/3.94″, 1.0µm, PDAF, OIS, 3x optical zoom,  12 MP, f/2.2, 12mm, 123˚ (ultrawide), 1/3.06″, 1.12µm

    ಮುಂದುಗಡೆ ಕ್ಯಾಮೆರಾ
    ಸಿಂಗಲ್‌ – 4 MP, f/1.8, 26mm (wide), 1/3.0″, 2.0µm

    ಬ್ಯಾಟರಿ – Li-Po 4400 mAh

     

  • ಆಪಲ್ ಹಿಂದಿಕ್ಕಿ ವಿಶ್ವದಲ್ಲೇ ನಂಬರ್ 2 ಪಟ್ಟಕ್ಕೆ ಏರಿದ ಕ್ಸಿಯೋಮಿ

    ಆಪಲ್ ಹಿಂದಿಕ್ಕಿ ವಿಶ್ವದಲ್ಲೇ ನಂಬರ್ 2 ಪಟ್ಟಕ್ಕೆ ಏರಿದ ಕ್ಸಿಯೋಮಿ

    – ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿ ಐಫೋನ್ ಮಾರಾಟ ಕುಸಿತ
    – ಸ್ಯಾಮ್‍ಸಂಗ್ ಮೊದಲ ಸ್ಥಾನದಲ್ಲೇ ಮುಂದುವರಿಕೆ

    ಬೀಜಿಂಗ್:  ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆಯಲ್ಲಿ ಆಪಲ್ ಕಂಪನಿಯನ್ನು ಸೋಲಿಸಿ ನಂಬರ್ 2 ಪಟ್ಟಕ್ಕೆ ಕ್ಸಿಯೋಮಿ ಏರಿದೆ.

    Canalys ಸಂಸ್ಥೆ ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆಯನ್ನು ಅಧ್ಯಯನ ಮಾಡಿ ಈ ವರದಿಯನ್ನು ಪ್ರಕಟಿಸಿದೆ. 2ನೇ ತ್ರೈಮಾಸಿಕದಲ್ಲಿ ವಿಶ್ವದ ಸ್ಮಾರ್ಟ್‍ಫೋನ್ ಮಾರುಕಟ್ಟೆ ಶೇ. 12ರಷ್ಟು ಪ್ರಗತಿ ಸಾಧಿಸಿದೆ.

    ವಿಶ್ವದ ಮಾರುಕಟ್ಟೆಯಲ್ಲಿ ಆಪಲ್ ಶೇ.14ರಷ್ಟು ಪಾಲನ್ನು ಹೊಂದಿದ್ದರೆ, ಕ್ಸಿಯೋಮಿ ಶೇ.17ರಷ್ಟು ಪಾಲನ್ನು ಹೊಂದಿದೆ. ಸ್ಯಾಮ್‍ಸಂಗ್ ಶೇ.19ರಷ್ಟು ಪಾಲನ್ನು ಹೊಂದುವ ಮೂಲಕ ಮೊದಲ ಸ್ಥಾನದಲ್ಲೇ ಮುಂದುವರಿದಿದೆ.

    ವರ್ಷದಿಂದ ವರ್ಷಕ್ಕೆ ಕ್ಸಿಯೋಮಿ ಮಾರುಕಟ್ಟೆ ಪಾಲು ಹೆಚ್ಚಾಗುತ್ತಿದೆ. ಕ್ಸಿಯೋಮಿ ಶೇ.83ರಷ್ಟು ಬೆಳವಣಿಗೆ ಸಾಧಿಸಿದರೆ ಸ್ಯಾಮ್‍ಸಂಗ್ ಶೇ.15, ಆಪಲ್ ಶೇ.1 ರಷ್ಟು ಪ್ರಗತಿ ಸಾಧಿಸಿದೆ. ಚೀನಾದ ಒಪ್ಪೋ ಮತ್ತು ವಿವೋ ಕಂಪನಿಗಳು ಕ್ರಮವಾಗಿ 4 ಮತ್ತು 5ನೇ ಸ್ಥಾನವನ್ನು ಪಡೆದುಕೊಂಡಿದೆ.

    ಕಡಿಮೆ ಬೆಲೆಯ ಮತ್ತು ಮಿಡ್ ರೇಂಜ್ ಫೋನ್ ಮಾರಾಟದಿಂದ ಕ್ಸಿಯೋಮಿ ಈ ಸಾಧನೆ ಮಾಡಿದೆ. ಎರಡನೇ ಸ್ಥಾನಕ್ಕೆ ಏರಿದ್ದರೂ ಆಪಲ್ ಫೋನ್ ಗಳಿಗೆ ಹೋಲಿಸಿದರೆ ಕ್ಸಿಯೋಮಿ ಫೋನ್ ಶೇ.75ರಷ್ಟು ಬೆಲೆ ಕಡಿಮೆಯಿದೆ.

    https://twitter.com/manukumarjain/status/1415897728706519041

    ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮಾರುಕಟ್ಟೆಯನ್ನು ಗುರಿಯಾಗಿಸಿ ಫೋನ್ ತಯಾರಿಸುತ್ತಿದ್ದ ಕ್ಸಿಯೋಮಿ ಈಗ ಯುರೋಪ್ ಮತ್ತು ಅಮೆರಿಕನ್ ಮಾರುಕಟ್ಟೆಯ ಮೇಲೆ ಕಣ್ಣಿಟ್ಟಿದೆ. ಈ ನಿಟ್ಟಿನಲ್ಲಿ ಎಂಐ 11 ಆಲ್ಟ್ರಾ, ಎಂಐ ಮಿಕ್ಸ್ ಫೋಲ್ಡ್ ಫೋನ್ ಬಿಡುಗಡೆ ಮಾಡಿದೆ.

    ವಿಶ್ವದ ಸ್ಮಾರ್ಟ್‍ಫೋನ್ ಕಂಪನಿಗಳಲ್ಲಿ ಒಂದಾಗಿದ್ದ ಹುವಾವೇ ಮೇಲೆ ಅಮೆರಿಕ ನಿಷೇಧ ವಿಧಿಸಿದ್ದು ಕ್ಸಿಯೋಮಿಗೆ ವರದಾನವಾಗಿದೆ. ಸಾಫ್ಟ್ ವೇರ್ ಮತ್ತು ಚಿಪ್ ಪೂರೈಕೆಗೆ ತಡೆಯಾಗಿದ್ದರಿಂದ ಹುವಾವೇ ಸ್ಪರ್ಧೆಯಿಂದ ಹಿಂದೆ ಸರಿದರೆ ಕ್ಸಿಯೋಮಿ ನಿಧನವಾಗಿ ಬೆಳವಣಿಗೆಯಾಗಿ ಈಗ ವಿಶ್ವದ ಎರಡನೇ ದೊಡ್ಡ ಸ್ಮಾರ್ಟ್‍ಫೋನ್ ಕಂಪನಿಯಾಗಿ ಹೊರಹೊಮ್ಮಿದೆ. ಇದನ್ನೂ ಓದಿ: ಚೀನಾಗೆ ಸ್ಯಾಮ್‍ಸಂಗ್ ಶಾಕ್ – ನೋಯ್ಡಾಕ್ಕೆ ಡಿಸ್‍ಪ್ಲೇ ಘಟಕ ಸ್ಥಳಾಂತರ

    ಈ ವರ್ಷದ ಮಾರ್ಚ್ ನಲ್ಲಿ ಕ್ಸಿಯೋಮಿ ಎಲೆಕ್ಟ್ರಿಕ್ ವಾಹನ ಉದ್ಯಮದಲ್ಲಿ ತೊಡಗುವುದಾಗಿ ಘೋಷಣೆ ಮಾಡಿತ್ತು. ಈ ಸಂಬಂಧ ಮುಂದಿನ 10 ವರ್ಷದಲ್ಲಿ 10 ಶತಕೋಟಿ ಡಾಲರ್ ಬಂಡವಾಳ ಹೂಡುವುದಾಗಿ ಹೇಳಿದೆ.

  • ಕ್ಸಿಯೋಮಿಯನ್ನು ಸೋಲಿಸಿದ ಸ್ಯಾಮ್‌ಸಂಗ್‌ ಈಗ ನಂ. 1 ಕಂಪನಿ

    ಕ್ಸಿಯೋಮಿಯನ್ನು ಸೋಲಿಸಿದ ಸ್ಯಾಮ್‌ಸಂಗ್‌ ಈಗ ನಂ. 1 ಕಂಪನಿ

    – 2 ವರ್ಷದ ಬಳಿಕ ಮೊದಲ ಸ್ಥಾನಕ್ಕೆ ಏರಿಕೆ
    – ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಬಗ್ಗೆ ಅಧ್ಯಯನ

    ನವದೆಹಲಿ: ದೇಶದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಕ್ಸಿಯೋಮಿಯನ್ನು ಸ್ಯಾಮ್‌ಸಂಗ್‌ ಸೋಲಿಸಿದೆ. ಈ ಮೂಲಕ ಎರಡು ವರ್ಷದ ಬಳಿಕ ಸ್ಯಾಮ್‌ಸಂಗ್‌ ಮೊದಲ ಸ್ಥಾನಕ್ಕೆ ಏರಿದೆ.

    ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ಬಗ್ಗೆ ಅಧ್ಯಯನ ನಡೆಸುವ ಕೌಂಟರ್‌ಪಾಯಿಂಟ್‌ ಸಂಸ್ಥೆ 2020ರ ಮೂರನೇ ತ್ರೈಮಾಸಿಕದ ವರದಿಯನ್ನು ಬಿಡುಗಡೆ ಮಾಡಿದೆ.

    ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್‌ ಹೊರತುಪಡಿಸಿ ನಂತರದ ನಾಲ್ಕು ಸ್ಥಾನಗಳನ್ನು ಅನುಕ್ರಮವಾಗಿ ಚೀನಾದ ಕ್ಸಿಯೋಮಿ,ವಿವೋ, ರಿಯಲ್‌ ಮೀ, ಒಪ್ಪೋ ಕಂಪನಿಗಳು ಪಡೆದುಕೊಂಡಿದೆ.

     

    2019ರ ಮೂರನೇ ತ್ರೈಮಾಸಿಕದಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಸ್ಯಾಮ್‌ಸಂಗ್‌ ಶೇ.20ರಷ್ಟು ಪಾಲನ್ನು ಹೊಂದಿದ್ದರೆ ಈ ಅವಧಿಯಲ್ಲಿ ಶೇ.24ಕ್ಕೆ ಏರಿಕೆಯಾಗಿದೆ. 2019ರಲ್ಲಿ ಕ್ಸಿಯೋಮಿ ಶೇ.26 ರಷ್ಟು ಪಾಲು ಹೊಂದಿದ್ದರೆ ಈ ಬಾರಿ ಶೇ.23ಕ್ಕೆ ಕುಸಿದಿದೆ.

    ಉಳಿದಂತೆ ವಿವೋ ಶೇ.16, ರಿಯಲ್‌ ಮೀ ಶೇ.15, ಒಪ್ಪೋ ಶೇ.10, ಇತರೇ ಕಂಪನಿಗಳ ಫೋನ್‌ಗಳು ಮಾರುಕಟ್ಟೆಯಲ್ಲಿ ಶೇ.12 ರಷ್ಟು ಪಾಲನ್ನು ಹೊಂದಿವೆ.

    ಸ್ಯಾಮ್‌ಸಂಗ್‌ ಆನ್‌ಲೈನ್‌ನಲ್ಲಿ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡಿದ್ದರಿಂದ ಮಾರಾಟ ಹೆಚ್ಚಳವಾಗಿದೆ. 2018ರ ಮೂರನೇ ತ್ರೈಮಾಸಿಕದಿಂದ ಕ್ಸಿಯೋಮಿ ಪ್ರತಿ ತ್ರೈಮಾಸಿಕದಲ್ಲೂ ಮೊದಲ ಸ್ಥಾನವನ್ನು ಉಳಿಸಿಕೊಂಡಿತ್ತು. ಆದರೆ ಈ ಬಾರಿ ಕೋವಿಡ್‌ 19ನಿಂದಾಗಿ ಬೇಡಿಕೆ ಇದ್ದರೂ ವಿತರಣೆಗೆ ಸಮಸ್ಯೆಯಾದ ಕಾರಣ ಮಾರುಕುಟ್ಟೆಯಲ್ಲಿ ಕುಸಿತ ಕಂಡಿದೆ. ರೆಡ್‌ಮೀ ನೋಟ್‌ 9 ಮತ್ತು ನೋಟ್‌ 9 ಸೀರಿಸ್‌ಗೆ ಬಹಳ ಬೇಡಿಕೆ ಇದೆ. ಹೀಗಾಗಿ ಮುಂದಿನ ದಿನದಲ್ಲಿ ಕ್ಸಿಯೋಮಿ ಮೊದಲ ಸ್ಥಾನಕ್ಕೆ ಬರುವ ಸಾಧ್ಯತೆಯಿದೆ ಎಂದು ಕೌಂಟರ್‌ಪಾಯಿಂಟ್‌ ಹೇಳಿದೆ.

     

    ಪೋಕೋ ಫೋನ್‌ಗಳು ಸೇರಿ ಕ್ಸಿಯೋಮಿ ಮಾರುಕಟ್ಟೆಯನ್ನು ಲೆಕ್ಕ ಹಾಕಲಾಗಿದೆ. ಒಟ್ಟು 10 ಲಕ್ಷ ಪೊಕೋ ಫೋನ್‌ಗಳು ಮಾರಾಟವಾಗಿದೆ.

    ಡಿಸ್ಪೇ ಮತ್ತು ಟಚ್‌ ಪ್ಯಾನೆಲ್‌ಗಳ ಮೇಲೆ ಶೇ.10 ಅಬಕಾರಿ ಸುಂಕ ಹೇರಿದ ಪರಿಣಾಮ ಮುಂದಿನ ತ್ರೈಮಾಸಿಕದಲ್ಲಿ ಫೋನ್‌ಗಳ ಬೆಲೆ ಹೆಚ್ಚಳವಾಗಲಿದೆ ಎಂದು ಕೌಂಟರ್‌ಪಾಯಿಂಟ್‌ ಅಂದಾಜಿಸಿದೆ.

    ಈ ಅವಧಿಯಲ್ಲಿ ಒಟ್ಟು ದೇಶದಲ್ಲಿ 5.3 ಕೋಟಿ ಸ್ಮಾರ್ಟ್‌ಫೋನ್‌ಗಳು ಮಾರಾಟಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಶೇ.9ರಷ್ಟು ಫೋನ್‌ ಮಾರಾಟದಲ್ಲಿ ಏರಿಕೆಯಾಗಿದೆ. 10 ಸಾವಿರ -20 ಸಾವಿರ ರೂ. ಮಧ್ಯೆ  ಬೆಲೆ ಇರುವ ಫೋನ್‌ಗಳು ದೇಶದಲ್ಲಿ ಹೆಚ್ಚು ಮಾರಾಟ ಕಂಡಿದೆ.

  • ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ದಾಖಲೆ – ಯಾವ ಕಂಪನಿ ಎಷ್ಟು ಫೋನ್‌ ಮಾರಾಟ ಮಾಡಿದೆ?

    ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ದಾಖಲೆ – ಯಾವ ಕಂಪನಿ ಎಷ್ಟು ಫೋನ್‌ ಮಾರಾಟ ಮಾಡಿದೆ?

    ನವದೆಹಲಿ: ಸೆಪ್ಟೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ 5 ಕೋಟಿ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಮಾರಾಟಗೊಂಡಿದೆ. ಈ ಮೂಲಕ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಭಾರತದಲ್ಲಿ ದಾಖಲೆ ನಿರ್ಮಾಣವಾಗಿದೆ.

    2019ರ ಈ ಅವಧಿಗೆ ಹೋಲಿಸಿದರೆ ಶೇ.8 ರಷ್ಟು ಬೆಳವಣಿಗೆಯಾಗಿದೆ. ಒಂದು ತ್ರೈಮಾಸಿಕದಲ್ಲಿ ಇಷ್ಟೊಂದು ಬೆಳವಣಿಗೆಯಾಗಿದ್ದು ದಾಖಲೆ ಎಂದು ಮಾರುಕಟ್ಟೆ ವಿಶ್ಲೇಷಣಾ ಕಂಪನಿ ಕ್ಯಾನಲಿಸ್‌ ಹೇಳಿದೆ.

    ಲಾಕ್‌ಡೌನ್‌ ಬಳಿಕ ನಿರ್ಬಂಧಗಳು ತೆರವುಗೊಂಡಿದ್ದು ಆರ್ಥಿಕ ಚಟುವಟಿಕೆಗಳು ಮತ್ತೆ ಆರಂಭವಾಗಿದೆ. 3 ತಿಂಗಳು ಲಾಕ್‌ಡೌನ್‌ ಅವಧಿಯಲ್ಲಿ ಅಂಗಡಿಗಳು ಮುಚ್ಚಿತ್ತು. ಬಳಿಕ ಗ್ರಾಹಕರು ಹೆಚ್ಚಿನ ಸಂಖ್ಯೆಯನ್ನು ಫೋನ್‌ ಖರೀದಿಸಿದ್ದರಿಂದ ಈ ಪ್ರಗತಿಯಾಗಿದೆ ಎಂದು ತಿಳಿಸಿದೆ.

     

    ಗಲ್ವಾನ್‌ ಘರ್ಷಣೆಯ ಬಳಿಕ ಚೀನಾ ಮತ್ತು ಭಾರತ ನಡುವಿನ ಸಂಬಂಧ ಹಳಸಿದ್ದರೂ ರೆ ಇದು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಕಳೆದ ವರ್ಷ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಚೀನಿ ಕಂಪನಿಗಳ ಪಾಲು ಶೇ.74 ರಷ್ಟು ಇದ್ದರೆ ಈ ವರ್ಷ ಶೇ.76ಕ್ಕೆ ಏರಿಕೆಯಾಗಿದೆ. ಈ ಮೂಲಕ ಶೇ.2 ರಷ್ಟು ಬೆಳವಣಿಗೆ ಸಾಧಿಸಿದೆ. ಆದರೆ ಜೂನ್‌ ತಿಂಗಳ ತ್ರೈಮಾಸಿಕಕ್ಕೆ ಹೋಲಿಸಿದರೆ ಶೇ.4ರಷ್ಟು ಕುಸಿತ ಕಂಡಿದೆ. ಜೂನ್‌ ತ್ರೈಮಾಸಿಕದಲ್ಲಿ ಚೀನಿ ಕಂಪನಿಗಳ ಪಾಲು ಶೇ.80 ರಷ್ಟು ಇತ್ತು.

    ಚೀನಾದೊಂದಿಗಿನ ಘರ್ಷಣೆಯ ಬಳಿಕ ಚೀನಾ ಕಂಪನಿಗಳು ಮಾರುಕಟ್ಟೆ ಹೂಡುವ ಖರ್ಚನ್ನು ಕಡಿಮೆ ಮಾಡಿವೆ. ನಾವು ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರ ನೀಡುತ್ತಿದ್ದೇವೆ ಎಂಬುದನ್ನು ಬಿಂಬಿಸಲು ಮುಂದಾಗುತ್ತಿವೆ ಎಂದು ತಿಳಿಸಿದೆ.

    ಯಾವ ಕಂಪನಿಯ ಪಾಲು ಎಷ್ಟಿದೆ?
    ಮೊದಲ ಸ್ಥಾನದಲ್ಲಿ ಕ್ಸಿಯೋಮಿ ಮುಂದುವರಿದ್ದರೆ ಎರಡನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್‌ಸಂಗ್‌ ಕಂಪನಿ ಇದೆ. ಚೀನಾದ ವಿವೋ, ರಿಯಲ್‌ಮೀ, ಒಪ್ಪೋ ಅನುಕ್ರಮವಾಗಿ ಮೂರು, ನಾಲ್ಕು, ಐದನೇ ಸ್ಥಾನ ಪಡೆದಿದೆ.

    ಕ್ಸಿಯೋಮಿ 1.31 ಕೋಟಿ ಸ್ಮಾರ್ಟ್‌ಫೋನ್‌ ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಶೇ.26.1 ರಷ್ಟು ಪಾಲನ್ನು ಹೊಂದಿದೆ. ಸ್ಯಾಮ್‌ಸಂಗ್‌ 1.02 ಕೋಟಿ ಫೋನ್‌ಗಳನ್ನು ಮಾರಾಟ ಮಾಡಿ ಮಾರುಕಟ್ಟೆಯಲ್ಲಿ ಶೇ.20.4 ರಷ್ಟು ಪಾಲನ್ನು ಪಡೆದುಕೊಂಡಿದೆ.

    ಉಳಿದಂತೆ ವಿವೋ 88 ಲಕ್ಷ(ಶೇ.17.6), ರಿಯಲ್‌ಮೀ 87 ಲಕ್ಷ(ಶೇ.17.4), ಒಪ್ಪೋ 61 ಲಕ್ಷ(ಶೇ.12.1) ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡಿವೆ. ಐಫೋನ್‌, ಒನ್‌ ಪ್ಲಸ್‌ ಸೇರಿದಂತೆ ಇತರೇ ಎಲ್ಲ 31 ಲಕ್ಷ(ಶೇ.6.3) ಫೋನ್‌ಗಳು ಮಾರಾಟವಾಗಿದೆ ಎಂದು ಕ್ಯಾನಲಿಸ್‌ ತಿಳಿಸಿದೆ.

  • ಮಾರುಕಟ್ಟೆಗೆ ಬರುತ್ತಿದೆ 512 ಜಿಬಿ ಮೆಮೊರಿಯ ಸ್ಯಾಮ್‍ಸಂಗ್ ಗ್ಯಾಲಕ್ಸಿ ಎಸ್ 10 ಲೈಟ್ ಮೊಬೈಲ್

    ಮಾರುಕಟ್ಟೆಗೆ ಬರುತ್ತಿದೆ 512 ಜಿಬಿ ಮೆಮೊರಿಯ ಸ್ಯಾಮ್‍ಸಂಗ್ ಗ್ಯಾಲಕ್ಸಿ ಎಸ್ 10 ಲೈಟ್ ಮೊಬೈಲ್

    – ಬೆಲೆ ಎಷ್ಟು ಗೊತ್ತಾ, ಏನಿದೆ ವಿಶೇಷತೆ?- ಇಲ್ಲಿದೆ ಮಾಹಿತಿ

    ಬೆಂಗಳೂರು: ಸ್ಯಾಮ್‍ಸಂಗ್ ಪ್ರೀಮಿಯಂ ಸ್ಮಾರ್ಟ್‍ಫೋನ್ ಗ್ಯಾಲಕ್ಸಿ ಎಸ್ 10 ಲೈಟ್‍ನ 512 ಜಿಬಿ ಆಂತರಿಕ ಮೆಮೊರಿಯ ಮೊಬೈಲ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಸಿದ್ಧವಾಗಿದೆ.

    ಈ ಹೊಸ ಮೊಬೈಲ್‍ನ ಬೆಲೆ 44,999 ರೂ. ಆಗಿದ್ದು, ಪ್ರಿಸ್ಮ್ ವೈಟ್, ಪ್ರಿಸ್ಮ್ ಬ್ಲ್ಯಾಕ್ ಮತ್ತು ಪ್ರಿಸ್ಮ್ ಬ್ಲೂ ಕಲರ್‍ನಲ್ಲಿ ಲಭ್ಯವಿದೆ. ಚಿಲ್ಲರೆ ಅಂಗಡಿ, ಸ್ಯಾಮ್‍ಸಂಗ್ ಒಪೇರಾ ಹೌಸ್, ಅಧಿಕೃತ ವೆಬ್‍ಸೈಟ್ ಸೇರಿದಂತೆ ಪ್ರಮುಖ ಆನ್‍ಲೈನ್ ಪೋರ್ಟಲ್‍ಗಳಿಂದ ಮೊಬೈಲ್ ಅನ್ನು ಖರೀದಿಸಬಹುದಾಗಿದೆ.

    ಹಳೆಯ ಫೋನ್‍ಗಳ ವಿನಿಮಯದಲ್ಲಿ 5 ಸಾವಿರ ರೂಪಾಯಿಗಳ ಕ್ಯಾಶ್ ಬ್ಯಾಕ್ ಸಹ ನೀಡಲಾಗುತ್ತಿದೆ. ಹಿಂದಿನ ಗ್ಯಾಲಕ್ಸಿ ಎಸ್ 10 ಲೈಟ್ ಕೇವಲ 8 ಜಿಬಿ ರ‍್ಯಾಮ್ ಮತ್ತು 128 ಜಿಬಿ ಸ್ಟೋರೇಜ್ ಮೆಮೊರಿಯ ಮಾತ್ರ ಲಭ್ಯವಿತ್ತು. ಮಾರ್ಚ್ 1ರಿಂದ ಫೋನ್ ಮಾರಾಟ ಪ್ರಾರಂಭವಾಗಲಿದೆ.

    ವಿಶೇಷತೆ ಏನು?:
    ಈ ಮೊಬೈಲಿಗೆ ಹಿಂದುಗಡೆ ಟ್ರಿಪಲ್ ಕ್ಯಾಮೆರಾ ನೀಡಲಾಗಿದೆ. ಇದು 48 ಮೆಗಾಪಿಕ್ಸೆಲ್ ಸ್ಟಡಿ ಒಐಎಸ್ ಕ್ಯಾಮೆರಾ ಆಗಿದ್ದು, 12 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಹಾಗೂ 5 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿದೆ. ಜೊತೆಗೆ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 10 ಲೈಟ್ ಒಳಗೊಂಡಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ಇದು ಸೂಪರ್-ಸ್ಟಡಿ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ವೈಶಿಷ್ಟ್ಯವನ್ನು ಹೊಂದಿದೆ. ಪ್ರಯಾಣದಲ್ಲಿರುವಾಗ ವಿಡಿಯೋ ಮಾಡಿದರೆ ಮಸುಕಾಗುವುದಿಲ್ಲ.

    ಡಿಸ್ಪ್ಲೇ ಗಾತ್ರ- 6.7 ಇಂಚು (ಪೂರ್ಣ ಎಚ್‍ಡಿ ಪ್ಲಸ್, ಸೂಪರ್ ಅಮೋಲೆಡ್ ಪ್ಲಸ್, ಇನ್ಫಿನಿಟಿ-ಒ)
    ಸಿಮ್- ಡ್ಯುಯಲ್ ನ್ಯಾನೋ ಸಿಮ್
    ಓಎಸ್- ಆಂಡ್ರಾಯ್ಡ್ 10
    ಪ್ರೊಸೆಸರ್ –  ಕ್ವಾಲ್ಕಾಮ್ ಪ್ರೊಸೆಸರ್ ಆಕ್ಟಾ 855 ಕೋರ್
    ರ‍್ಯಾಮ್- 8 ಜಿಬಿ
    ಸ್ಟೋರೆಜ್ ಮೆಮೊರಿ- 128 ಜಿಬಿ/ 512 ಜಿಬಿ

    ಸ್ಟೋರೆಜ್ ವಿಸ್ತರಣಾ ಮೆಮೊರಿ – 1 ಟಿಬಿ (ಮೈಕ್ರೊ ಎಸ್‍ಡಿ ಕಾರ್ಡ್)
    ಹಿಂಬದಿಯ ಕ್ಯಾಮೆರಾ- 48 ಎಂಪಿ +12 ಎಂಪಿ (ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್) +5 ಎಂಪಿ (ಮ್ಯಾಕ್ರೋ ಲೆನ್ಸ್) ಫ್ರಂಟ್ ಕ್ಯಾಮೆರಾ
    ಮುಂಭಾಗದ ಕ್ಯಾಮೆರಾ- 32 ಮೆಗಾಪಿಕ್ಸೆಲ್
    ಚಾರ್ಜರ್- 25 ವ್ಯಾಟ್
    ಬ್ಯಾಟರಿ- 4500 ವ್ಯಾಟ್
    ಲಾಕ್- ಡಿಸ್ಪ್ಲೇ ಮೇಲೆ ಫಿಂಗಪ್ರಿಂಟ್ ಲಾಕ್
    ತೂಕ- 186 ಗ್ರಾಂ

  • ಕ್ಸಿಯೋಮಿಯಿಂದ ಬರಲಿದೆ 108 ಮೆಗಾ ಪಿಕ್ಸೆಲ್ ಫೋನ್

    ಕ್ಸಿಯೋಮಿಯಿಂದ ಬರಲಿದೆ 108 ಮೆಗಾ ಪಿಕ್ಸೆಲ್ ಫೋನ್

    ನವದೆಹಲಿ: ಚೀನಾ ಮೂಲದ ಕ್ಸಿಯೋಮಿ ಕಂಪನಿ 108 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಲು ಮುಂದಾಗಿದೆ.

    ಕೆಲ ದಿನಗಳ ಹಿಂದೆ 64 ಮೆಗಾ ಪಿಕ್ಸೆಲ್ ಕ್ಯಾಮೆರಾ ಹೊಂದಿರುವ ರೆಡ್‍ಮೀ ನೋಟ್ 8 ಪ್ರೋ ಫೋನನ್ನು ಬಿಡುಗಡೆ ಮಾಡಿದ ಬಳಿಕ ಕ್ಸಿಯೋಮಿ ಸ್ಯಾಮ್‍ಸಂಗ್ ಕಂಪನಿ ಅಭಿವೃದ್ಧಿ ಪಡಿಸಿರುವ ಕ್ಯಾಮೆರಾ ಸೆನ್ಸರ್ ಬಳಸಿ ಈ ಫೋನ್ ತಯಾರಿಸಲು ಮುಂದಾಗುತ್ತಿದೆ.

    ಸ್ಯಾಮ್‍ಸಂಗ್ ಕಂಪನಿ ಐಎಸ್‍ಒಸಿಇಎಲ್‍ಎಲ್ ಬ್ರೈಟ್ ಎಚ್‍ಎಂಎಕ್ಸ್ ಸೆನ್ಸರ್ ಅಭಿವೃದ್ಧಿ ಪಡಿಸಿದೆ. 108 ರೆಸಲ್ಯೂಷನ್ ಮೆಗಾ ಪಿಕ್ಸೆಲ್ ಚಿತ್ರವನ್ನು ತೆಗೆಯಬಹುದಾದ ಮೊದಲ ಇಮೇಜ್ ಸೆನ್ಸರ್ ಇದಾಗಿದೆ. 10,80,00,000 ಪಿಕ್ಸೆಲ್(10.80 ಕೋಟಿ ಪಿಕ್ಸೆಲ್) 12032*9024 ರೆಸಲ್ಯೂಷನ್ ಹೊಂದಿರುವ ಫೋಟೋವನ್ನು ಈ ಕ್ಯಾಮೆರಾ ಸೆನ್ಸರ್ ಮೂಲಕ ತೆಗೆಯಬಹುದಾಗಿದೆ.

    ಕ್ಸಿಯೋಮಿ 108 ಮೆಗಾ ಪಿಕ್ಸೆಲ್‍ನಲ್ಲಿ ಒಟ್ಟು 4 ಫೋನ್ ಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. ಅಗಸ್ಟ್ ತಿಂಗಳಿನಲ್ಲೇ ಕ್ಸಿಯೋಮಿ ಮತ್ತು ಸ್ಯಾಮ್‍ಸಂಗ್ ಕಂಪನಿಗಳು ಮಾತುಕತೆ ನಡೆಸಿದ್ದು ಈ ಫೋನ್ ತಯಾರಿಸುವ ಕೆಲಸ ಆರಂಭವಾಗಿದೆ.

  • DSLRನಲ್ಲಿ ಕ್ಲಿಕ್ಕಿಸಿದ ಫೋಟೋ ಸ್ಯಾಮ್‍ಸಂಗ್ ಫೋನ್ ಪ್ರಚಾರದಲ್ಲಿ ಬಳಕೆ!

    DSLRನಲ್ಲಿ ಕ್ಲಿಕ್ಕಿಸಿದ ಫೋಟೋ ಸ್ಯಾಮ್‍ಸಂಗ್ ಫೋನ್ ಪ್ರಚಾರದಲ್ಲಿ ಬಳಕೆ!

    ನವದೆಹಲಿ: ವಿಶ್ವದ ನಂಬರ್ ಒನ್ ಸ್ಮಾರ್ಟ್ ಫೋನ್ ಕಂಪನಿ ಸ್ಯಾಮ್ ಸಂಗ್ ಡಿಎಸ್‍ಎಲ್‍ಆರ್ ಕ್ಯಾಮೆರಾದಲ್ಲಿ ತೆಗೆದ ಫೋಟೋವನ್ನು ತನ್ನ ನೂತನ ಫೋನಿನ ಪ್ರಚಾರಕ್ಕೆ ಬಳಸಿಕೊಂಡಿದೆ ಎನ್ನುವ ಗಂಭೀರ ಆರೋಪವೊಂದು ಕೇಳಿ ಬಂದಿದೆ.

    ಗೆಲಾಕ್ಸಿ ಎ8 ಸ್ಟಾರ್ ಹೆಸರಿನಲ್ಲಿ ಫೋನ್ ಬಿಡುಗಡೆ ಮಾಡಿದ್ದು ಈ ಫೋನಿನ ಕ್ಯಾಮೆರಾದಲ್ಲಿ ಯುವತಿಯೊಬ್ಬಳ ಪೋಟ್ರೇಟ್ ಫೋಟೋವನ್ನು ಸ್ಯಾಮ್‍ಸಂಗ್ ತನ್ನ ಮಲೇಷ್ಯಾದ ವೆಬ್‍ಸೈಟಲ್ಲಿ ಪ್ರಕಟಸಿದೆ. ಸ್ಯಾಮ್ ಸಂಗ್ ಪ್ರಕಟಿಸಿದ ಫೋಟೋ ನಾನು ತೆಗೆದ ಫೋಟೋ ಎಂದು ಮಹಿಳಾ ಫೋಟೋಗ್ರಾಫರ್ ಡನ್ಜಾ ಡುಜುಜಿಕ್ ಹೇಳಿದ್ದಾರೆ.

    ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು  EyeEm ಫೋಟೋ ಕಮ್ಯೂನಿಟಿಗೆ ಫೋಟೋವನ್ನು ಅಪ್ಲೋಡ್ ಮಾಡಿದ್ದೆ. ಈ  EyeEm  ಗೆಟ್ಟಿ ಇಮೇಜಿಗೆ ಮಾರಾಟ ಮಾಡಿದೆ. ಈ ವಿಚಾರ ಗೊತ್ತಾಗಿ ನಾನು ಯಾರು ಈ ಚಿತ್ರವನ್ನು ಖರೀದಿಸಿದ್ದಾರೆ ಎನ್ನುವುದನ್ನು ರಿವರ್ಸ್ ಇಮೇಜ್ ಚೆಕ್ ನಲ್ಲಿ ಪರಿಶೀಲಿಸಿದಾಗ ಸ್ಯಾಮ್‍ಸಂಗ್ ವೆಬ್‍ಸೈಟಿನಲ್ಲಿ ಇರುವುದನ್ನು ತಿಳಿದುಕೊಂಡೆ ಎಂದು ಹೇಳಿದ್ದಾರೆ.

    ಡನ್ಜಾ ಆರೋಪ ಏನು?
    ನನ್ನ ಫೋಟೋವನ್ನು ಕೆಟ್ಟದಾಗಿ ಬಳಕೆ ಮಾಡಲಾಗಿದೆ. ಎರಡು ಫೋಟೋದ ಬ್ಯಾಕ್ ಗ್ರೌಂಡ್ ಬದಲಾವಣೆಯಾಗಿದೆ. ಚೆನ್ನಾಗಿ ಪೋಟ್ರೋಟ್ ಫೋಟೋ ಕ್ಲಿಕ್ಕಿಸಲಾಗಿದೆ ಎನ್ನುವುದನ್ನು ತೋರಿಸಲು ಸ್ಯಾಮ್‍ಸಂಗ್ ಫೋಟೋಶಾಪ್ ಬಳಸಿ ಚಿತ್ರವನ್ನು ಎಡಿಟ್ ಮಾಡಿದೆ ಎಂದು ಆರೋಪಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತದಲ್ಲಿ ಕ್ಸಿಯೋಮಿಯೇ ನಂಬರ್ 1 ಬ್ರಾಂಡ್: ಯಾವ ಕಂಪನಿಯ ಮಾರುಕಟ್ಟೆ ಎಷ್ಟಿದೆ?

    ಭಾರತದಲ್ಲಿ ಕ್ಸಿಯೋಮಿಯೇ ನಂಬರ್ 1 ಬ್ರಾಂಡ್: ಯಾವ ಕಂಪನಿಯ ಮಾರುಕಟ್ಟೆ ಎಷ್ಟಿದೆ?

    ನವದೆಹಲಿ: ಬಜೆಟ್ ಗಾತ್ರದ ಸ್ಮಾರ್ಟ್ ಫೋನುಗಳ ಮೂಲಕ ದೇಶಿಯ ಮಾರುಕಟ್ಟೆಯಲ್ಲಿ ಹೆಸರು ಮಾಡುತ್ತಿರುವ ಕ್ಸಿಯೋಮಿ ಭಾರತದ ಟಾಪ್ 5 ಸ್ಮಾರ್ಟ್ ಫೋನುಗಳಲ್ಲಿ ಮೊದಲನೇ ಸ್ಥಾನದಲ್ಲೇ ಮುಂದುವರಿದಿದೆ.

    ಇಂಟರ್‌ನ್ಯಾಷನಲ್‌ ಡಾಟಾ ಕಾರ್ಪೋರೇಷನ್(ಐಡಿಸಿ) ತನ್ನ ಮೂರನೇ ತ್ರೈಮಾಸಿಕ ವರದಿಯಲ್ಲಿ ಈ ಕುರಿತು ಮಾಹಿತಿ ಬಹಿರಂಗ ಪಡಿಸಿದೆ. ಕ್ಸಿಯೋಮಿ ತನ್ನ 2018ರ ತ್ರೈಮಾಸಿಕ ವರದಿಯಲ್ಲಿ ಶೇ.27ರಷ್ಟು ಶೇರನ್ನು ಹೊಂದುವ ಮೂಲಕ ಭಾರತದ ಟಾಪ್ 5 ಮೊಬೈಲ್ ಕಂಪನಿಗಳಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

    ಯಾವ ಕಂಪನಿಯ ಪಾಲು ಎಷ್ಟು?
    ಕ್ಸಿಯೋಮಿ: 2018ರ ತ್ರೈಮಾಸಿಕ ವರದಿಗಳ ಪ್ರಕಾರ ಕ್ಸಿಯೋಮಿ ಶೇ.27ರಷ್ಟು ಶೇರನ್ನು ಹೊಂದುವುದರ ಮೂಲಕ ಭಾರತದಲ್ಲಿ ಅಧಿಪತ್ಯ ಸಾಧಿಸಿದೆ. ತನ್ನ ಆವೃತ್ತಿಗಳಾದ ರೆಡ್‍ಮಿ 5ಎ ಹಾಗೂ ರೆಡ್‍ಮಿ ನೋಟ್ 5 ಪ್ರೋ ಮುಖಾಂತರ ಈ ಸಾಧನೆಗೇರುವಲ್ಲಿ ಕ್ಸಿಯೋಮಿ ಯಶಸ್ವಿಯಾಗಿದೆ. ಈ ಅವಧಿಯಲ್ಲಿ 50 ಲಕ್ಷ ಫೋನುಗಳನ್ನು ಕ್ಸಿಯೋಮಿ ಮಾರಾಟ ಮಾಡಿದೆ. ಇದರಲ್ಲಿ ಶೇ.48.9ರಷ್ಟನ್ನು ಆನ್‍ಲೈನ್ ಮೂಲಕವೇ ವಹಿವಾಟು ನಡೆಸಿದೆ. ಅಲ್ಲದೇ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿಯೂ ಮಾರಾಟವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗುತ್ತಿದೆ. ಇದನ್ನೂ ಓದಿ: ಕ್ಸಿಯೋಮಿಯ ಮೂರು ಫೋನ್‍ಗಳ ಬೆಲೆ ದಿಢೀರ್ ಭಾರೀ ಇಳಿಕೆ

    ಸ್ಯಾಮಸಂಗ್: 2018ರ ತ್ರೈಮಾಸಿಕ ವರದಿಯಲ್ಲಿ 2ನೇ ಸ್ಥಾನವನ್ನು ಗಳಿಸುವಲ್ಲಿ ಸ್ಯಾಮಸಂಗ್ ಯಶಸ್ವಿಯಾಗಿದೆ. ಕಳೆದ ಮೂರು ತ್ರೈಮಾಸಿಕ ವರದಿಗಳ ಪ್ರಕಾರ ಚೀನಾದ ಕ್ಸಿಯೋಮಿ, ವಿವೊ ಹಾಗೂ ಒಪ್ಪೊದ ಹೊಡೆತದಿಂದಾಗಿ, ಭಾರತದ ಮಾರುಕಟ್ಟೆಯ ಹಿಡಿತವನ್ನು ಸಾಧಿಸಲು ವಿಫಲವಾಗಿತ್ತು. ತನ್ನ ನೂತನ ಗೆಲಾಕ್ಸಿ ಜೆ2, ಜೆ8, ಜೆ4 ಹಾಗೂ ಇತ್ತೀಚೆಗೆ ಬಿಡುಗಡೆಯಾದ ಆಂಡ್ರಾಯ್ಡ್ ಗೋ ಮಾದರಿಯ ಗೆಲಾಕ್ಸಿ ಜೆ 2 ಕೋರ್ ಸ್ಮಾರ್ಟ್ ಫೋನ್‍ಗಳ ಮುಖಾಂತರ 4.8ರಷ್ಟು ವಹಿವಾಟನ್ನು ವೃದ್ಧಿಸಿಕೊಂಡು ಶೇ.22.6ರಷ್ಟು ಮಾರುಕಟ್ಟೆಯನ್ನು ಗಳಿಸಿಕೊಂಡಿದೆ.

    ವಿವೋ: ಮೂರನೇ ಸ್ಥಾನದಲ್ಲಿರುವ ವಿವೋ ಒಟ್ಟಾರೆಯಾಗಿ 2018ರ ತ್ರೈಮಾಸಿಕ ವರದಿಗಳ ಪ್ರಕಾರ ಶೇ.10.6ರಷ್ಟು ಪಾಲನ್ನು ಭಾರತದಲ್ಲಿ ಸಾಧಿಸಿದೆ. 2017ಕ್ಕೆ ಹೋಲಿಸಿದರೆ ವಿವೋ ಶೇ.35.4ರಷ್ಟು ಪ್ರಾಬಲ್ಯ ಹೊಂದಿದೆ. ವಿವೋ ಹೊಸದಾಗಿ ಬಿಡುಗಡೆಮಾಡಿದ ವೈ 81 ಮತ್ತು ವೈ83 ಪ್ರೋ ಮಾದರಿಗಳಿಂದ ಹೆಚ್ಚಿನ ಮಾರುಕಟ್ಟೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ ತನ್ನ ವೈ71 ಹಾಗೂ ವಿ11 ಮತ್ತು ವಿ11 ಪ್ರೋ ಮಾದರಿಗಳು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿತ್ತು. ವಿವೋ ಉತ್ತಮ ಪ್ರಚಾರ ಹಾಗೂ ಐಪಿಲ್ ನಂತಹ ಪಂದ್ಯಾವಳಿಗಳಿಗೆ ಪ್ರಾಯೋಜಕತ್ವವನ್ನು ಪಡೆಯುವ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯಲು ಸಫಲವಾಗಿತ್ತು.

    ಮೈಕ್ರೋಮ್ಯಾಕ್ಸ್: ಟಾಪ್ 5 ಸ್ಥಾನಗಳಲ್ಲೇ ಇರುತ್ತಿದ್ದ ಮೈಕ್ರೋಮ್ಯಾಕ್ಸ್ ಇತ್ತೀಚಿನ ದಿನಗಳಲ್ಲಿ 7ನೇ ಸ್ಥಾನಕ್ಕೆ ಕುಸಿದಿತ್ತು. ನಂತರ ಜಿಯೋ ಸಹಭಾಗಿತ್ವದೊಂದಿಗೆ ಛತ್ತೀಸಗಡ್ ರಾಜ್ಯದಲ್ಲಿ ದುರ್ಬಲ ಮಹಿಳಾ ಮತ್ತು ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಫೋನ್ ಸರಬರಾಜು ಮಾಡುವ ಟೆಂಡರ್ ಪಡೆದುಕೊಂಡು, ಮತ್ತೆ ಟಾಪ್ ನಾಲ್ಕನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. 2018ರ ತ್ರೈಮಾಸಿಕ ವರದಿಗಳ ಪ್ರಕಾರ ಮೈಕ್ರೋಮ್ಯಾಕ್ಸ್ ಶೇ.6.9ರಷ್ಟು ಮಾರುಕಟ್ಟೆಯನ್ನು ಹೊಂದಿದೆ. ಆದರೆ 2017ರ ತ್ರೈಮಾಸಿಕಕ್ಕೆ ಹೋಲಿಸಿದರೆ 2018ರಲ್ಲಿ ಶೇ. 77.3 ಬೆಳವಣಿಗೆ ಸಾಧಿಸಿದೆ.

    ಒಪ್ಪೋ: ಐದನೇ ಸ್ಥಾನ ಪಡೆದುಕೊಂಡಿರುವ ಒಪ್ಪೋ, ತನ್ನ 2018ರ ತ್ರೈಮಾಸಿಕ ವರದಿಯಲ್ಲಿ 6.7ರಷ್ಟು ಗಳಿಸುವ ಮೂಲಕ ಭಾರತದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಸರಿಯಾದ ಪ್ರಚಾರ ಕೈಗೊಳ್ಳದೇ ಇರುವುದು ಹಾಗೂ ಗ್ರಾಹಕರನ್ನು ಸೆಳೆಯುವಲ್ಲಿ ಒಪ್ಪೋ ವಿಫಲವಾಗಿದೆ. ಹೊಸದಾಗಿ ಬಿಡುಗಡೆಯಾದ ಎಫ್9 ಹಾಗೂ ಎಫ್9 ಪ್ರೋ ಸ್ಮಾರ್ಟ್ ಫೋನುಗಳು ಗ್ರಾಹಕರನ್ನು ವಿಫಲವಾಗಿದೆ. ತನ್ನ ಹೈ-ಎಂಡ್ ಮೊಬೈಲ್ ಆದ ಒಪ್ಪೋ-ಎಕ್ಸ್ ಅವತರಣೆಯ ಸಿದ್ಧತೆಯಲ್ಲಿ ತೊಡಗಿದ್ದರಿಂದ ಮಾರುಕಟ್ಟೆಯನ್ನು ಕಳೆದುಕೊಂಡಿದೆ ಎಂದು ಐಡಿಸಿ ತಿಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸ್ಯಾಮ್‍ಸಂಗ್‍ನಿಂದ ಬಿಡುಗಡೆಯಾಗಲಿದೆ ಫೋಲ್ಡ್ ಮಾಡಬಹುದಾದ ಸ್ಮಾರ್ಟ್ ಫೋನ್

    ಸ್ಯಾಮ್‍ಸಂಗ್‍ನಿಂದ ಬಿಡುಗಡೆಯಾಗಲಿದೆ ಫೋಲ್ಡ್ ಮಾಡಬಹುದಾದ ಸ್ಮಾರ್ಟ್ ಫೋನ್

    ನವದೆಹಲಿ: ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ ಸ್ಯಾಮ್‍ಸಂಗ್ ಮಡಚಬಹುದಾದ ಸ್ಮಾರ್ಟ್ ಫೋನ್ ಬಿಡುಗಡೆಗೆ ತಯಾರಿ ನಡೆಸುತ್ತಿದೆ.

    ಸ್ಯಾಮ್‍ಸಂಗ್ 2018ರ ಡೆವೆಲಪರ್ ಕಾನ್ಫರೆನ್ಸ್ ಕ್ಯಾಲಿಫೋರ್ನಿಯಾದ ಸಾನ್ ಫ್ರಾನ್ಸಿಸ್ಕೊದಲ್ಲಿ ಬುಧವಾರ ನಡೆಯಿತು. ಈ ವೇಳೆ ತನ್ನ ನೂತನ ಫ್ಲೆಕ್ಸಿ ಫೋಲ್ಡೆಬಲ್ ಸ್ಕ್ರೀನ್ ಹೊಂದಿರುವ ನೂತನ ಸ್ಮಾರ್ಟ್ ಫೋನ್ ಬಿಡುಗಡೆಯ ಬಗ್ಗೆ ಘೋಷಣೆ ಮಾಡಿದೆ. ಮಾಹಿತಿಗಳ ಪ್ರಕಾರ ಇದರ ಜೊತೆ ಸ್ಯಾಮ್‍ಸಂಗ್ ಇನ್ಫಿನಿಟಿ-ಯು, ಇನ್ಫಿನಿಟಿ-ವಿ ಹಾಗೂ ಇನ್ಫಿನಿಟಿ-ಓ ಮಾದರಿಯ ಗೆಲಾಕ್ಸಿ ಸ್ಮಾರ್ಟ್ ಫೋನ್‍ಗಳ ಬಿಡುಗಡೆಯ ಬಗ್ಗೆಯೂ ಸಹ ಘೋಷಣೆ ಮಾಡಿದೆ.

    ನೂತನ ಫೋಲ್ಡೆಬಲ್ ಸ್ಮಾರ್ಟ್ ಫೋನ್ 7.3 ಇಂಚಿನ ಡಿಸ್ಪ್ಲೇ ಹೊಂದಿರುತ್ತದೆ. ಈ ಫೋನ್‍ಗಳಲ್ಲಿ ಎರಡು ಸ್ಕ್ರೀನ್‍ಗಳನ್ನು ಕಾಣಬಹುದು. ಮೊದಲನೇಯದು 1536 x 2152 ಸ್ಕ್ರೀನ್ ರೆಸಲ್ಯೂಶನ್, 420 ಪಿಪಿಐ ಹೊಂದಿದ್ದರೆ, ಎರಡನೇಯದ್ದು 4.58 ಇಂಚಿನ ಸ್ಕ್ರೀನ್ 840 x 1960 ರೆಸಲ್ಯೂಶನ್, 420 ಪಿಪಿಐ ಸ್ಕ್ರೀನ್ ಹೊಂದಿರಲಿದೆ.

    ಗೂಗಲ್ ಜೊತೆಗೂಡಿ ಈ ಫೋನ್ ತಯಾರಾಗುತ್ತಿದ್ದು, ಫೋನಿನ ಇತರೆ ಯಾವುದೇ ಮಾಹಿತಿಗಳನ್ನು ಸ್ಯಾಮ್‍ಸಂಗ್ ಬಹಿರಂಗ ಪಡಿಸಿಲ್ಲ. ಮಾಹಿತಿಗಳ ಪ್ರಕಾರ 2019ರ ಪ್ರಾರಂಭದಲ್ಲಿ ಫೋಲ್ಡೆಬಲ್ ಫೋನ್ ಗ್ರಾಹಕರ ಕೈ ಸೇರಲಿದೆ ಎನ್ನಲಾಗುತ್ತಿದೆ. ಫೋನಿನ ಅಂದಾಜು ಬೆಲೆ 1,850 ಡಾಲರ್ (1.33 ಲಕ್ಷ ರೂ.) ಆಗಿರಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv