Tag: Samrat Prithviraj

  • ಅಕ್ಷಯ್ ಕುಮಾರ್ ಸಿನಿಮಾ ವಿದೇಶದಲ್ಲಿ ಬ್ಯಾನ್, ಸ್ವದೇಶದಲ್ಲಿ ಕಲೆಕ್ಷನ್ ಕಡಿಮೆ

    ಅಕ್ಷಯ್ ಕುಮಾರ್ ಸಿನಿಮಾ ವಿದೇಶದಲ್ಲಿ ಬ್ಯಾನ್, ಸ್ವದೇಶದಲ್ಲಿ ಕಲೆಕ್ಷನ್ ಕಡಿಮೆ

    ಕ್ಷಯ್ ಕುಮಾರ್ ನಟನೆಯ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಭಾರೀ ಕಮಾಯಿ ಮಾಡಲಿದೆ ಎಂದು ನಂಬಲಾಗಿತ್ತು. ಸಿನಿಮಾ ಬಿಡುಗಡೆಗೂ ಮುನ್ನ ಚಿತ್ರ ವೀಕ್ಷಿಸಿದ್ದ ಸೆಲೆಬ್ರಿಟಿಗಳು ಕೂಡ ಚಿತ್ರವನ್ನು ಮೆಚ್ಚಿಕೊಂಡಿದ್ದರು. ಇಂತಹ ಸಿನಿಮಾವನ್ನು ಜನರಿಗೆ ತೋರಿಸಲೇಬೇಕೆಂದು ಉತ್ತರ ಪ್ರದೇಶ ಸರ್ಕಾರ ಕೂಡ ತೆರಿಗೆ ರಿಯಾಯತಿ ಘೋಷಣೆ ಮಾಡಿತ್ತು. ಆದರೂ ಅಂದುಕೊಂಡಷ್ಟು ಸಿನಿಮಾ ದುಡ್ಡು ಮಾಡುತ್ತಿಲ್ಲ.

    ಕುವೈತ್ ಸೇರಿದಂತೆ ಹಲವು ರಾಷ್ಟ್ರಗಳು ಈ ಸಿನಿಮಾವನ್ನು ಬ್ಯಾನ್ ಮಾಡಿದರೆ, ಭಾರತದಲ್ಲೇ ಈ ಸಿನಿಮಾವನ್ನು ನೋಡುಗರು ಸ್ವೀಕರಿಸಿಲ್ಲ. ಹೀಗಾಗಿ ದಿನದಿಂದ ದಿನಕ್ಕೆ ಬಾಕ್ಸ್ ಆಫೀಸ್ ಕಲೆಕ್ಷನ್ ಇಳಿಮುಖವಾಗುತ್ತಿದೆ. ಹೀಗಾಗಿ ಅಕ್ಷಯ್ ಅಂಡ್ ಟೀಮ್ ಸಖತ್ ತಲೆ ಕೆಡಿಸಿಕೊಂಡು ಕೂತಿದೆ. ಹೇಗಾದರೂ, ಈ ಸಿನಿಮಾವನ್ನು ಜನರಿಗೆ ತೋರಿಸಲೇಬೇಕೆಂದು ಪ್ಲ್ಯಾನ್ ಮಾಡುತ್ತಿದೆ. ಇನ್ನೂ ಓದಿ : ಪಠ್ಯ ಪುಸ್ತಕ ಪರಿಷ್ಕರಣೆ ಆಕ್ರೋಶ ಹೊರ ಹಾಕಿದ ನಟ ಚೇತನ್ : ಗಾಂಧಿ, ನೆಹರು ನಮ್ ವಿರೋಧಿಗಳು ಎಂದ ನಟ

    ಕಮಲ್ ಹಾಸನ್ ನಟನೆಯ ವಿಕ್ರಮ್ ಮತ್ತು ಅಕ್ಷಯ್ ನಟನೆಯ ಪೃಥ್ವಿರಾಜ್ ಸಿನಿಮಾ ಒಂದೇ ದಿನ ಬಿಡುಗಡೆ ಆಗಿವೆ. ಬಾಲಿವುಡ್ ಸೇರಿದಂತೆ ಅನೇಕ ರಾಜ್ಯಗಳಲ್ಲಿ ವಿಕ್ರಮ್ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಬಂದಿದೆ. ರಿಲೀಸ್ ಆಗಿ ಮೂರೇ ದಿನಕ್ಕೆ ವಿಕ್ರಮ್ ನೂರು ಕೋಟಿ ಕ್ಲಬ್ ಸೇರಿಕೊಂಡಿದೆ. ಆದರೆ, ಪೃಥ್ವಿರಾಜ್ ಮಾತ್ರ ಅಂದುಕೊಂಡಷ್ಟು ದುಡ್ಡು ಮಾಡಿಲ್ಲ. ಇದಕ್ಕೆ ಕಾರಣ ಏನು ಅನ್ನುವುದರ ಹುಡುಕಾಟದಲ್ಲಿ ನಿರತವಾಗಿದೆ ಪೃಥ್ವಿರಾಜ್ ಟೀಮ್.

  • ರಾಮಚರಣ್ ಒಪ್ಪಿದರೆ ಈಗಲೂ ಡೇಟಿಂಗ್ ಗೆ ರೆಡಿ ಎಂದ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್

    ರಾಮಚರಣ್ ಒಪ್ಪಿದರೆ ಈಗಲೂ ಡೇಟಿಂಗ್ ಗೆ ರೆಡಿ ಎಂದ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್

    ಸಾಮ್ರಾಟ್ ಪೃಥ್ವಿರಾಜ್ ಸಿನಿಮಾ ಮೂಲಕ ಬಾಲಿವುಡ್ ಪ್ರವೇಶ ಮಾಡಿರುವ ಮಾಜಿ ವಿಶ್ವಸುಂದರಿ ಮಾನುಷಿ ಚಿಲ್ಲರ್ ಗಮನ ಸೆಳೆಯುವಂತಹ ಮಾತುಗಳನ್ನು ಆಡಿದ್ದಾರೆ. ಅವರ ಆ ಮಾತು ತೆಲುಗು ಸಿನಿಮಾ ರಂಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸ್ಟಾರ್ ನಟ ರಾಮಚರಣ್ ತೇಜ ಹೆಂಡತಿಯು ತಲೆ ಕೆಡಿಸಿಕೊಂಡು ಕೂರುವಂತಾಗಿದೆ. ಇದನ್ನೂ ಓದಿ : ನಿತ್ಯಾನಂದ ಕುರಿತು ಸಾಕ್ಷ್ಯಚಿತ್ರ : ದೇವಮಾನವನ ನಿಜಬಣ್ಣ ಬಟಾಬಯಲು

    ಅಕ್ಷಯ್ ಕುಮಾರ್ ಮುಖ್ಯಭೂಮಿಕೆಯ ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಮಾನಷಿ ಚಿಲ್ಲರ್, ಇದೀಗ ಆ ಸಿನಿಮಾ ಪ್ರಚಾರದ ಬ್ಯುಸಿಯಲ್ಲಿದ್ದಾರೆ. ಇಂದು ರಿಲೀಸ್ ಆಗಿರುವ ಸಿನಿಮಾದ ಬಗ್ಗೆ ಒಳ್ಳೆಯ ಮಾತು ಕೇಳಿ ಬರುತ್ತಿದೆ. ಈ ಸಂದರ್ಭದಲ್ಲಿ ಮಾನಷಿ ಆಡಿದ ಮಾತು ಕೂಡ ವೈರಲ್ ಆಗಿದೆ. ಇದನ್ನೂ ಓದಿ : ಉಪೇಂದ್ರ ನಿರ್ದೇಶಿಸಿ, ನಟಿಸಲಿರುವ ಸಿನಿಮಾಗೆ ಮುಹೂರ್ತ : ಹಣೆ ಮೇಲೆ ಟೈಟಲ್ ಹಾಕಿಕೊಂಡು ಬಂದ ಚಿತ್ರತಂಡ

    ಮಾನಷಿ ಚಿಲ್ಲರ್ ಆರ್.ಆರ್.ಆರ್ ಸಿನಿಮಾ ನೋಡಿದಾಗ ರಾಮ್ ಚರಣ್ ಬಗ್ಗೆ ವಿಪರೀತ ಲವ್ ಆಯಿತಂತೆ. ಅವರ ದೊಡ್ಡ ಅಭಿಮಾನಿಯಾಗಿ ಅವರು ಬದಲಾದರಂತೆ. ರಾಮ್ ಚರಣ್ ತೇಜ ಅವರಿಗೆ ಮದುವೆ ಆಗದೇ ಇದ್ದರೆ, ನಾನು ಅವರನ್ನು ಡೇಟಿಗೆ ಕರೆಯುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾರೆ. ಅವರಿಗೆ ಮದುವೆಯಾದರೂ ಪರವಾಗಿಲ್ಲ. ಈಗಲೂ ಅವರು ಒಪ್ಪಿದರೆ ನಾನು ರೆಡಿ ಎಂದು ಹೇಳಿದ್ದಾರೆ. ಈ ಮಾತು ರಾಮ್ ಚರಣ್ ಅಭಿಮಾನಿಗಳನ್ನು ಖುಷಿಗೊಳಿಸಿದೆ.

  • ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ತೆರಿಗೆ ವಿನಾಯ್ತಿ ಘೋಷಿಸಿದ ಯೋಗಿ ಆದಿತ್ಯನಾಥ್

    ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ತೆರಿಗೆ ವಿನಾಯ್ತಿ ಘೋಷಿಸಿದ ಯೋಗಿ ಆದಿತ್ಯನಾಥ್

    ನಾಳೆ ವಿಶ್ವದಾದ್ಯಂತ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ರಿಲೀಸ್ ಆಗುತ್ತಿದೆ. ಒಂದು ಕಡೆ ಮುಸ್ಲಿಂ ರಾಷ್ಟ್ರಗಳಲ್ಲಿ ಈ ಸಿನಿಮಾವನ್ನು ಪ್ರದರ್ಶನ ಮಾಡದಂತೆ ನಿಷೇಧ ಹೇರಲಾಗಿದೆ. ಭಾರತದಲ್ಲಿ ಈ ಸಿನಿಮಾಗೆ ಕೆಲ ಕಡೆ ತೆರಿಗೆ ವಿನಾಯತಿ ಘೋಷಿಸಲಾಗುತ್ತಿದೆ. ಇದನ್ನೂ ಓದಿ : ನಾಳೆ ಉಪೇಂದ್ರ ಹೊಸ ಸಿನಿಮಾಗೆ ಮುಹೂರ್ತ : ಅತಿಥಿಗಳಾದ ನಾಲ್ವರು ಸ್ಟಾರ್ ನಟರು

    ನಿನ್ನೆಯಷ್ಟೇ ಗಣ್ಯರಿಗಾಗಿ ಈ ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜನೆ ಮಾಡಿದ್ದರು ನಟ ಅಕ್ಷಯ್ ಕುಮಾರ್. ಈ ಪ್ರದರ್ಶನದಲ್ಲಿ ಕೇಂದ್ರ ಗೃಹ ಮಂತ್ರಿ ಅಮಿತಾ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಸಿನಿಮಾ ವೀಕ್ಷಿಸಿದ ನಂತರ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶದಲ್ಲಿ ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ : ಖ್ಯಾತ ಗಾಯಕ ಕೆಕೆ ಅಂತ್ಯ ಸಂಸ್ಕಾರ ಮುಂಬೈನಲ್ಲಿ : ಅಂತಿಮ ನಮನ ಸಲ್ಲಿಸಿದ ಬಿಟೌನ್

    ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ಎಲ್ಲರೂ ನೋಡಬೇಕಿದೆ. ಹಾಗಾಗಿ ಉತ್ತರ ಪ್ರದೇಶದಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡುವುದಾಗಿ ಹೇಳಿದ್ದಾರೆ ಯೋಗಿ ಆದಿತ್ಯನಾಥ್. ಈ ಹಿಂದೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಾಗಿಯೂ ಇವರು ತೆರಿಗೆ ವಿನಾಯತಿ ಘೋಷಿಸಿದ್ದರು. ಆನಂತರ ಅನೇಕ ರಾಜ್ಯಗಳು ದಿ ಕಾಶ್ಮೀರ್ ಫೈಲ್ಸ್ ಗೆ ತೆರಿಗೆ ವಿನಾಯತಿ ಘೋಷಿಸಿದ್ದವು.

  • ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ನೋಡಿ ಪತ್ನಿಗೆ ‘ಚಲಿಯೇ ಹುಕುಂ’ ಎಂದ ಅಮಿತಾ ಶಾ

    ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ನೋಡಿ ಪತ್ನಿಗೆ ‘ಚಲಿಯೇ ಹುಕುಂ’ ಎಂದ ಅಮಿತಾ ಶಾ

    ಬಾಲಿವುಡ್ ನಿರೀಕ್ಷಿತ ಸಿನಿಮಾ ‘ಸಾಮ್ರಾಟ್ ಪೃಥ್ವಿರಾಜ್’ ಚಿತ್ರದ ಸಿಲಿಬ್ರಿಟಿ ಶೋ ಅನ್ನು ನಟ ಅಕ್ಷಯ್ ಕುಮಾರ್ ನಿನ್ನೆ ಆಯೋಜನೆ ಮಾಡಿದ್ದರು. ಗಣ್ಯರಿಗಾಗಿ ಏರ್ಪಡಿಸಿದ್ದ ವಿಶೇಷ ಪ್ರದರ್ಶನಕ್ಕೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರನ್ನು ಆಹ್ವಾನಿಸಲಾಗಿತ್ತು. ಪತ್ನಿ ಸೋನಲ್ ಶಾ ಸಮೇತ ಸಿನಿಮಾ ನೋಡಲು ಅಮಿತ್ ಶಾ ಆಗಮಿಸಿದ್ದು ವಿಶೇಷವಾಗಿತ್ತು. ಇದನ್ನೂ ಓದಿ : ನಾಳೆ ಉಪೇಂದ್ರ ಹೊಸ ಸಿನಿಮಾಗೆ ಮುಹೂರ್ತ : ಅತಿಥಿಗಳಾದ ನಾಲ್ವರು ಸ್ಟಾರ್ ನಟರು

    ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್ ಮತ್ತು ಮಾನಸಿ ಚಿಲ್ಲರ್ ಕಾಂಬಿನೇಷನ್ ನ ಸಿನಿಮಾ ಸಾಮ್ರಾಟ್ ಪೃಥ್ವಿರಾಜ್. ಇದೊಂದು ಐತಿಹಾಸಿಕ ಸಿನಿಮಾವಾಗಿದ್ದು, ವೀರ ಪೃಥ್ವಿರಾಜ್ ಅವರ ಸಾಹಸಗಾಥೆಯನ್ನು ತೋರಿಸಲಾಗಿದೆ. ಹೀಗಾಗಿ ಸಿನಿಮಾ ಮೆಚ್ಚಿಕೊಂಡರು ಅಮಿತ್ ಶಾ. ಈ ಸಂದರ್ಭದಲ್ಲಿ ತಾವು 13 ವರ್ಷಗಳ ನಂತರ ಕುಟುಂಬ ಸಮೇತ ಸಿನಿಮಾ ನೋಡಿರುವುದಾಗಿ ತಿಳಿಸಿದರು. ಅದಕ್ಕೂ ಮುನ್ನ ಸಿನಿಮಾ ಮುಗಿಯುತ್ತಿದ್ದಂತೆಯೇ ಪತ್ನಿಯತ್ತ ನೋಡಿದ ಅಮಿತ್ ಶಾ ‘ಚಲಿಯೇ ಹುಕುಂ’ ಎಂದು ಹೇಳಿ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು. ಇದನ್ನೂ ಓದಿ : ಖ್ಯಾತ ಗಾಯಕ ಕೆಕೆ ಅಂತ್ಯ ಸಂಸ್ಕಾರ ಮುಂಬೈನಲ್ಲಿ : ಅಂತಿಮ ನಮನ ಸಲ್ಲಿಸಿದ ಬಿಟೌನ್

    ಸಾಮ್ರಾಟ್ ಪೃಥ್ವಿರಾಜ್ ಸಿನಿಮಾದಲ್ಲಿ ಅಕ್ಷಯ್ ಕುಮಾರ್ ಅವರು ನಾಯಕಿ ಮಾನಸಿಗೆ ‘ಚಲಿಯೇ ಹುಕುಂ’ ಎಂದು ಹೇಳುವ ಡೈಲಾಗ್ ಇದೆ. ಆ ಸಂಭಾಷಣೆ ಇಡೀ ಪ್ರೇಕ್ಷಕರನ್ನು ಮೆಚ್ಚಿಸುತ್ತದೆ. ಅಮಿತ್ ಶಾ ಅವರು ಕೂಡ ಮೆಚ್ಚಿಕೊಂಡು ಪತ್ನಿಗೆ ಆ ಡೈಲಾಗ್ ಹೊಡೆದಿದ್ದಾರೆ. ಇದನ್ನೂ ಓದಿ : ಕೆಕೆ ಕೊಂದಿದ್ದು ಕೋಲ್ಕತ್ತಾ, ಸಾವು ಮುಚ್ಚಿಹಾಕಲು ಸರ್ಕಾರಿ ಗೌರವ : ನಂದಿತಾ ಪುರಿ ಆಕ್ರೋಶ

    ಪತಿಯಿಂದ ‘ಚಲಿಯೇ ಹುಕುಂ’ ಎಂದು ಡೈಲಾಗ್ ಕೇಳುತ್ತಿದ್ದಂತೆಯೇ ನಾಚಿನೀರಾದ ಪತ್ನಿಯು, ನಗುತ್ತಲೇ ಪ್ರತಿಕ್ರಿಯಿಸಿದ್ದಾರೆ. ಈ ದೃಶ್ಯ ಅಲ್ಲಿದ್ದವರನ್ನು ರಂಜಿಸಿದ್ದಲ್ಲದೇ, ಪ್ರೇರೇಪಣೆ ಕೂಡ ಮಾಡಿದೆ.

  • ಮಕ್ಕಳೊಂದಿಗೆ ಮಕ್ಕಳಾಗಿರುತ್ತಾರೆ ನರೇಂದ್ರ ಮೋದಿ : ಪ್ರಧಾನಿಯನ್ನು ಶ್ಲಾಘಿಸಿದ ಅಕ್ಷಯ್ ಕುಮಾರ್

    ಮಕ್ಕಳೊಂದಿಗೆ ಮಕ್ಕಳಾಗಿರುತ್ತಾರೆ ನರೇಂದ್ರ ಮೋದಿ : ಪ್ರಧಾನಿಯನ್ನು ಶ್ಲಾಘಿಸಿದ ಅಕ್ಷಯ್ ಕುಮಾರ್

    ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂದರ್ಶನ ಮಾಡಿ ಹೊಗಳಿಕೆ ಮತ್ತು ಟೀಕೆಗೂ ಗುರಿಯಾದವರು ಬಾಲಿವುಡ್ ಖ್ಯಾತ ನಟ ಅಕ್ಷಯ್ ಕುಮಾರ್. ಪ್ರಧಾನಿ ಜೊತೆಗಿನ ಒಂದೊಂದು ಮಾತು ಕೂಡ ಭಾರೀ ಚರ್ಚೆಗೂ ಕಾರಣವಾಗಿದ್ದವು. ಈಗ ಆ ಐತಿಹಾಸಿಕ ಸಂದರ್ಶನವನ್ನು ಮತ್ತೆ ನೆನಪಿಸಿಕೊಂಡಿದ್ದಾರೆ ಅಕ್ಷಯ್ ಕುಮಾರ್. ಪ್ರಧಾನಿಯನ್ನು ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ದಾರೆ.

    ನರೇಂದ್ರ ಮೋದಿ ಅವರನ್ನು ನಾನು ಸಂದರ್ಶಿಸಿದ್ದೇನೆ ಎನ್ನುವುದೇ ನನಗಿರುವ ಹೆಮ್ಮೆ. ಕೇಳಲಾದ ಪ್ರಶ್ನೆಗಳು ಹೇಗಿದ್ದವು ಎನ್ನುವುದಕ್ಕಿಂತ, ಅವರ ಎದುರು ನಾನು ಕುಳಿತಿದ್ದೇನೆ ಎನ್ನುವುದೇ ನನಗೆ ದೊಡ್ಡ ಹೆಮ್ಮೆ ಅನಿಸಿತ್ತು. ಅವರ ಸರಳತೆ, ವ್ಯಕ್ತಿತ್ವನ್ನು ರೂಪಿಸಿಕೊಂಡ ಬಗೆಯು ನನಗೆ ತುಂಬಾ ಹಿಡಿಸಿತು ಎಂದು ಹೇಳಿದ್ದಾರೆ ಅಕ್ಷಯ್ ಕುಮಾರ್. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕನಿಗೆ ಆಕ್ಸ್ ಫರ್ಡ್ ಯೂನಿವರ್ಸಿಟಿಯಲ್ಲಿ ಅವಮಾನ

    ಪ್ರಧಾನಿ ಮೋದಿ ಅವರ ಗುಣಗಳ ಬಗ್ಗೆಯೂ ಮಾತನಾಡಿರುವ ಅವರು, ಮೋದಿ ಅವರಲ್ಲಿ ನಾನು ಕಂಡ ಉತ್ತಮ ಗುಣವೆಂದರೆ, ಯಾರು ಹೇಗಿರುತ್ತಾರೋ ಹಾಗೆಯೇ ತಮ್ಮನ್ನು ತಾವು ರೂಪಿಸಿಕೊಳ್ಳುತ್ತಾರೆ. ಮಕ್ಕಳೊಂದಿಗೆ ಮಕ್ಕಳಾಗಿಯೇ ಅವರು ವರ್ತಿಸುತ್ತಾರೆ. ವಯಸ್ಸಿನ ಮತ್ತು ಅಧಿಕಾರದ ಅನುಗುಣವಾಗಿಯೇ ಅವರು ನಡೆದುಕೊಳ್ಳುತ್ತಾರೆ ಎಂದು ಹೊಗಳಿದ್ದಾರೆ. ಇದನ್ನೂ ಓದಿ : ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

    ಸದ್ಯ ಅಕ್ಷಯ್ ಕುಮಾರ್ ಅವರ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ನಡೆಸಲಾದ ಸಂದರ್ಶನದಲ್ಲಿ ಮೋಡಿ ಅವರನ್ನು ಹೊಗಳುವುದರ ಜೊತೆಗೆ ಇತಿಹಾಸದ ಕೆಲವು ಎಚ್ಚರಿಕೆಗಳನ್ನೂ ಅವರು ನೀಡಿದ್ದಾರೆ. ನಾವು ಮೊಘಲರ ಬಗ್ಗೆ ತಿಳಿಯುವುದು ತಪ್ಪಲ್ಲ, ಆದರೆ, ನಮ್ಮ ಶ್ರೇಷ್ಠ ರಾಜರ ಬಗ್ಗೆಯೂ ತಿಳಿಯಬೇಕಲ್ಲ ಎಂದು ಪೃಥ್ವಿರಾಜ್ ಕಥೆಯ ಬಗ್ಗೆ ಮಾತನಾಡಿದ್ದಾರೆ.

  • ಹೋರಾಟಕ್ಕೆ ಮಣಿದ ಅಕ್ಷಯ್ ಕುಮಾರ್: ಬಾಲಿವುಡ್ ಮಂದಿಯ ನಿದ್ದೆಗೆಡಿಸುತ್ತಿದೆ ಕರಣಿ ಸೇನಾ ಸಂಘಟನೆ

    ಹೋರಾಟಕ್ಕೆ ಮಣಿದ ಅಕ್ಷಯ್ ಕುಮಾರ್: ಬಾಲಿವುಡ್ ಮಂದಿಯ ನಿದ್ದೆಗೆಡಿಸುತ್ತಿದೆ ಕರಣಿ ಸೇನಾ ಸಂಘಟನೆ

    ಬಾಲಿವುಡ್ ಮಂದಿಗೆ ಸಿಂಹಸಪ್ನವಾಗಿದೆ ಕರಣಿ ಸೇನಾ ಸಂಘಟನೆ. ಬಾಲಿವುಡ್ ನಲ್ಲಿ ರಜಪೂತ್ ಜನಾಂಗದ ಕುರಿತಾಗಿ ಮತ್ತು ಅಲ್ಲಿನ ಯೋಧರ ಕುರಿತಾಗಿ ಸಾಕಷ್ಟು ಸಿನಿಮಾಗಳು ಬರುತ್ತಿವೆ. ಈ ಸಿನಿಮಾದಲ್ಲಿ ರಜಪೂತ್ ಜನಾಂಗಕ್ಕೆ ಏನಾದರೂ ಅವಮಾನ ಅನಿಸಿದರೆ, ತಪ್ಪು ಸಂದೇಶ ರವಾನೆ ಆದರೆ, ಯಾವುದೇ ಕಾರಣಕ್ಕೂ ಕರಣಿ ಸೇನೆ ಸುಮ್ಮನೆ ಕೂರುವುದಿಲ್ಲ. ಇದನ್ನೂ ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

    ಈ ಹಿಂದೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿ ಬಂದ ‘ಪದ್ಮಾವತ್’ ಸಿನಿಮಾಗೂ ಈ ಕರಣಿ ಸೇನಾ ಸಂಘಟನೆ ಸಾಕಷ್ಟು ಅಡಚಣೆ ಮಾಡಿತ್ತು. ಕೋರ್ಟ್ ಮೆಟ್ಟಿಲು ಕೂಡ ಏರಲಾಗಿತ್ತು. ಪದ್ಮಾವತಿ ಎಂದಿದ್ದ ಹೆಸರನ್ನು ಬದಲಾಯಿಸುವಂತೆ ಹೋರಾಟ ಮಾಡಿದ್ದರು ಕರಣಿ ಸೇನಾ. ಕೊನೆಗೆ ಅದು ಪದ್ಮಾವತ್ ಎನ್ನುವ ಹೆಸರಿನಲ್ಲಿ ರಿಲೀಸ್ ಆಯಿತು. ಕೆಲವು ಕಡೆ ಸಿನಿಮಾ ಬಿಡುಗಡೆ ಆಗದಂತೆ ನೋಡಿಕೊಳ್ಳಲಾಯಿತು. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

    ಇದೀಗ ಕರಣಿ ಸೇನಾ ಸಂಘಟನೆಯ ಕಣ್ಣು ಅಕ್ಷಯ್ ಕುಮಾರ್ ಮುಖ್ಯ ಭೂಮಿಕೆಯ ‘ಪೃಥ್ವಿರಾಜ್’ ಸಿನಿಮಾದ ಮೇಲೆ ಬಿದ್ದಿದೆ. ಈ ಟೈಟಲ್ ಅನ್ನು ಬದಲಾಯಿಸುವಂತೆ ಹೋರಾಟ ನಡೆಯುತ್ತಿದೆ. ಟೈಟಲ್ ಬದಲಾಯಿಸದೇ ಇದ್ದರೆ, ಸಿನಿಮಾ ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ಹೇಳಲಾಗಿತ್ತು. ಹಾಗಾಗಿ ಸಿನಿಮಾದ ಶೀರ್ಷಿಕೆಯನ್ನು ಬದಲಾಯಿಸಲು ನಿರ್ಧರಿಸಿದ್ದಾರೆ ಯಶ್ ರಾಜ್ ಫಿಲ್ಮ್ಸ್. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

    ಪೃಥ್ವಿರಾಜ್ ಬದಲಾಗಿ ‘ವೀರಯೋಧ ಸಾಮ್ರಾಟ್ ಪೃಥ್ವಿರಾಜ್ ಚೌಹಾಣ್’ ಎಂದು ಪೂರ್ಣ ಹೆಸರಿಟ್ಟು ಈ ಸಿನಿಮಾ ರಿಲೀಸ್ ಮಾಡಬೇಕು ಎನ್ನುವುದು ಕರಣಿ ಸೇನೆಯ ಆಗ್ರಹವಾಗಿತ್ತು. ಆದರೆ, ಇಷ್ಟೊಂದು ಸಿನಿಮಾ ಹೆಸರು ಇಡುವುದು ವ್ಯಾಪಾರ ದೃಷ್ಟಿಯಿಂದ ಸರಿಯಾದ ಕ್ರಮವಲ್ಲ ಎಂದು ಮನವಿ ಮಾಡಿಕೊಂಡು ‘ಸಾಮ್ರಾಟ್ ಪೃಥ್ವಿರಾಜ್’ ಹೆಸರಿನಲ್ಲಿ ಸಿನಿಮಾ ರಿಲೀಸ್ ಮಾಡಲು ಮುಂದಾಗಿದ್ದಾರಂತೆ ಚಿತ್ರತಂಡ.