ಬೆಂಗಳೂರು: ಇಲ್ಲಿನ ಸಂಪೀಗೆಹಳ್ಳಿ (Sampigehalli) ಠಾಣೆ ವ್ಯಾಪ್ತಿಯಲ್ಲಿ ಹ್ಯಾಂಡ್ ಗ್ರೆನೇಡ್ (Hand Grenade) ಪತ್ತೆಯಾಗಿದ್ದು ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸಂಪಿಗೆಹಳ್ಳಿ ಬಳಿಯ ಬೆಳ್ಳಳ್ಳಿಯ ಅಬ್ದುಲ್ ರೆಹಮಾನ್ ಮನೆಯಲ್ಲಿ ಹ್ಯಾಂಡ್ ಗ್ರನೇಡ್ ಪತ್ತೆಯಾಗಿದೆ. ಸ್ಫೋಟಕಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಾಂಬ್ ಮಾದರಿಯ ಸ್ಫೋಟಕವನ್ನು ವಶಕ್ಕೆ ಪಡೆದ ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಿದ್ದಾರೆ. ಇದನ್ನೂ ಓದಿ: ‘ಡ್ರ್ಯಾಗನ್’ ಚಿತ್ರದ ಬಳಿಕ ಹೆಚ್ಚಿದ ಬೇಡಿಕೆ- ‘ಮುಗಿಲ್‌ಪೇಟೆ’ ನಟಿಗೆ ಬಂಪರ್ ಆಫರ್
– ಏಳಿಗೆ ಸಹಿಸಲಾಗದೆ ಕೊಲೆ ಮಾಡಿಸಿರುವುದಾಗಿ ಕುಟುಂಬಸ್ಥರು ಆರೋಪ
ಬೆಂಗಳೂರು: ಕೆಲಸ ಮಾಡುವ ವಿಚಾರಕ್ಕೆ ಇಬ್ಬರು ಕಾರ್ಮಿಕರ ನಡುವೆ ಗಲಾಟೆಯಾಗಿದ್ದು, ಓರ್ವ ಕಾರ್ಮಿಕನನ್ನು ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಬೆಂಗಳೂರಿನ (Bengaluru) ಸಂಪಿಗೆಹಳ್ಳಿಯ (Sampigehalli) ಆಕಾಶವಾಣಿ ಲೇಔಟ್‌ನಲ್ಲಿ ನಡೆದಿದೆ.
ಇಬ್ಬರು ಕಾರ್ಮಿಕರು ಜೆಲ್ಲಿ, ಮರಳು ಟಾಟಾ ಏಸ್ ಗಾಡಿಗಳಿಗೆ ಲೋಡ್ ಮಾಡುವ ಕೆಲಸ ಮಾಡುತ್ತಿದ್ದರು. ಕಳೆದ ಕೆಲವು ವರ್ಷಗಳಿಂದ ರಾಜು ಎನ್ನುವ ವ್ಯಕ್ತಿ ಜೊತೆಗೂಡಿ ಮೃತ ಮೆಹಬೂಬ್ ಜೆಲ್ಲಿ, ಮರಳು ವ್ಯಾಪಾರ ಮಾಡುತ್ತಿದ್ದರು. ಭಾನುವಾರ ರಾತ್ರಿ ರಾಜು, ಮೆಹಬೂಬ್‌ಗೆ ಕರೆ ಮಾಡಿ ಬಾಡಿಗೆಯಿದೆ ಬಾ ಎಂದು ಕರೆದಿದ್ದ. 8:40ಕ್ಕೆ ಸ್ಥಳಕ್ಕೆ ಹೋಗಿದ್ದ ಮೆಹಬೂಬ್ ಖಾನ್ ಅಲ್ಲಿದ್ದ ಖಾನಿಯಾ ಎನ್ನುವ ಮತ್ತೊಬ್ಬ ಕಾರ್ಮಿಕ ಜೊತೆ ಗಲಾಟೆ ಮಾಡಿಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ಸಿಮೆಂಟ್ ಚೀಲ ಕಟ್ ಮಾಡಲು ಬಳಸುತ್ತಿದ್ದ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಖಾನಿಯಾ ಎಸ್ಕೇಪ್ ಆಗಿದ್ದಾನೆ.
ಬಳಿಕ ಅಂಗಡಿ ಪಕ್ಕದ ಪರಿಚಯಸ್ಥರು ಮೆಹಬೂಬ್ ಕುಟುಂಬಸ್ಥರಿಗೆ ಕರೆ ಮಾಡಿ ಯಾರೋ ಹೊಡೆದಿರುವುದಾಗಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ. ಸದ್ಯ ಸಂಪಿಗೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಪೋಲಿಸರು ಮುಂದಾಗಿದ್ದಾರೆ.
ಇನ್ನೂ ಈ ಕುರಿತು ಮೃತ ಮೆಹಬೂಬ್‌ನ ಕುಟುಂಬಸ್ಥರು, ರಾಜು ಅಲಿಯಾಸ್ ಲಂಗಡ ಮತ್ತು ಖಾನಿಯಾ ಇಬ್ಬರು ಸೇರಿ ಹತ್ಯೆ ಮಾಡಿದ್ದಾರೆ. ಮೆಹಬೂಬ್‌ನ ಏಳಿಗೆ ರಾಜುಗೆ ಸಹಿಸಲಾಗದೆ ಕೊಲೆ ಮಾಡಿಸಿದ್ದಾನೆ ಎಂದು ಆರೋಪಿಸಿದ್ದಾರೆ.ಇದನ್ನೂ ಓದಿ: ಮೈಸೂರು | ಫೆ.10ರಿಂದ ಮೂರು ದಿನ ತ್ರಿವೇಣಿ ಸಂಗಮದಲ್ಲಿ ಕುಂಭಮೇಳ