Tag: Sampath Maitreya

  • ‘ಕೆರೆಬೇಟೆ’ಗಾಗಿ ಖಾಕಿ ತೊಟ್ಟ ಸಂಪತ್ ಮೈತ್ರೇಯ

    ಸಿನಿಮಾ ಜಗತ್ತಿನಲ್ಲಿ ಬಹುಬೇಗನೆ ಅವಕಾಶ ಗಿಟ್ಟಿಸಿಕೊಂಡು, ಪ್ರಸಿದ್ಧಿ ಪಡೆಯಬೇಕೆಂಬ ಹಂಬಲ ಹೊತ್ತು ನೂಕುನುಗ್ಗಲಿನಲ್ಲಿ ನಿಂತವರು ಯಥೇಚ್ಚವಾಗಿ ಕಾಣಸಿಗುತ್ತಾರೆ. ಅಂಥಾ ಜಂಗುಳಿಯ ಇಕ್ಕೆಲದಲ್ಲಿ ತಮ್ಮದೇ ಆದ ಗುರಿ, ಗುಣಮಟ್ಟ ಕಾಯ್ದುಕೊಂಡ ಮತ್ತೊಂದು ಸಣ್ಣ ಗುಂಪೂ ಕಾಣ ಸಿಗುತ್ತದೆ. ಅದು ಯಾವ ಪಾತ್ರಕ್ಕಾದರೂ ಸೈ ಎಂಬ ನಟನಾ ಚಾತುರ್ಯವಿರುವವರ ಬಳಗ. ಸದ್ಯದ ಮಟ್ಟಿಗೆ ಆ ಬಳಗದ ಪ್ರತಿಭಾನ್ವಿತ ನಟನಾಗಿ ಹೊರಹೊಮ್ಮಿರುವವರು ಸಂಪತ್ ಮೈತ್ರೇಯ (Sampath Maitreya). ರಂಗಭೂಮಿಯನ್ನೇ ಉಸಿರಾಗಿಸಿಕೊಂಡು, ಸಾಮಾಜಿಕ ಸ್ಥಿತ್ಯಂತರಗಳಿಗೆ ರಂಗದ ಮೂಲಕ ಕಣ್ಣಾಗುತ್ತಾ ಬಂದಿರುವ ಸಂಪತ್ ಮೈತ್ರೇಯ, ಗೌರಿಶಂಕರ್ ನಾಯಕನಾಗಿ ನಟಿಸಿರುವ `ಕೆರೆಬೇಟೆ’ (Kerebete) ಚಿತ್ರದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ನಟಿಸಿದ್ದಾರೆ.

    ಈವತ್ತಿಗೂ ರಂಗಭೂಮಿಯನ್ನೇ ಮೊದಲ ಆದ್ಯತೆಯಾಗಿಸಿಕೊಂಡಿರುವ ಸಂಪತ್ ಮೈತ್ರೇಯ, ಕಿರುತೆರೆ, ಹಿರಿತೆರೆ ಪ್ರೇಕ್ಷಕರೆಲ್ಲರಿಗೂ ಚಿರಪರಿಚಿತರು. ಸಿನಿಮಾ ವಿಚಾರಕ್ಕೆ ಬಂದರೆ, ಅಲ್ಲಿಯೂ ಪ್ರಯೋಗಾತ್ಮಕ ಚಿತ್ರಗಳಿಗೆ, ಪಾತ್ರಗಳಿಗೆ ಮಾತ್ರವೇ ಅವರು ಮೊದಲ ಆದ್ಯತೆ ಕೊಡುತ್ತಾ ಸಾಗಿ ಬಂದಿದ್ದಾರೆ. ಕೆರೆಬೇಟೆಯಲ್ಲಿ ಬಲು ಮಹತ್ವ ಹೊಂದಿರೋ ಸರ್ಕಲ್ ಇನ್ಸ್ ಪೆಕ್ಟರ್ ಪಾತ್ರಕ್ಕೆ ಕಲಾವಿದರ ಅನ್ವೇಷಣೆಯಲ್ಲಿದ್ದಾಗ ಗೌರಿಶಂಕರ್ (Gowrishankar) ಮತ್ತು ನಿರ್ದೇಶಕ ರಾಜಗುರು ಅವರ ಪ್ರಧಾನ ಆಯ್ಕೆಯಾಗಿದ್ದದ್ದು ಸಂಪತ್ ಮೈತ್ರೇಯ. ಇಂಥಾದ್ದೊಂದು ಆಫರ್ ಬಂದಾಗ, ನೆಲದ ಘಮಲಿನ ಕಥೆ, ಆ ಪಾತ್ರದ ಖದರ್ ಕಂಡು ಖುಷಿಯಾಗಿಯೇ ನಟಿಸಲು ಒಪ್ಪಿಕೊಂಡಿದ್ದರಂತೆ.

    ಕೆರೆಬೇಟೆ ಮಲೆನಾಡು ಭಾಗದ ಕಥೆ ಹೊಂದಿರುವ ಚಿತ್ರ. ಈಗ ಕಾಣಿಸಿರುವಂತೆ ಪ್ರೀತಿಯ ಸುತ್ತ ಮಾತ್ರವೇ ಸುತ್ತುತ್ತದೆ ಅಂದುಕೊಳ್ಳುವಂತಿಲ್ಲ. ಮಲೆನಾಡು ಭಾಗದ ಜನಜೀವನ, ಸಂಸ್ಕøತಿ, ಬದುಕಿನ ಕ್ರಮ, ರಾಜಕೀಯ, ಸಿಟ್ಟು, ದ್ವೇಷ ಸೇರಿದಂತೆ ಅಂದಾಜಿಗೆ ನಿಲುಕದ ಅದೆಷ್ಟೋ ಅಂಶಗಳಿಂದ ಈ ಸಿನಿಮಾ ರೂಪುಗೊಂಡಿದೆ. ಅದರಲ್ಲಿ ಅತ್ಯಂತ ಮಹತ್ವದ ತನಿಖಾಧಿಕಾರಿಯ ಪಾತ್ರವನ್ನು ಸಂಪತ್ ನಿರ್ವಹಿಸಿದ್ದಾರೆ. ಒಟ್ಟಾರೆ ಕಥೆ, ಅದಕ್ಕೆ ದೃಷ್ಯ ರೂಪ ನೀಡಿರುವ ರೀತಿ ಮತ್ತು ಚಿತ್ರತಂಡದ ಅತೀವ ಸಿನಿಮಾ ಪ್ರೀತಿಯ ಬಗ್ಗೆ ಸಂಪತ್ ಅವರಲ್ಲೊಂದು ಬೆರಗಿದೆ. ಅವರೇ ಖುದ್ದಾಗಿ ಹೇಳಿಕೊಂಡಿರುವ ಒಂದಷ್ಟು ಮಾಹಿತಿಗಳನ್ನು ಆಧರಿಸಿ ಹೇಳೋದಾದರೆ, ಕೆರೆಬೇಟೆ ಅಪರೂಪದ ಗೆಲುವಿನ ರೂವಾರಿಯಾಗೋ ಲಕ್ಷಣಗಳು ದಟ್ಟವಾಗಿವೆ.

     

    ಜೈಶಂಕರ್ ಜನಮನ ಸಿನಿಮಾಸ್ ಬ್ಯಾನರಿನಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೇವಲ ಕಥೆ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತಿಕೆ ಹೊಂದಿರುವ ಕೆರೆಬೇಟೆಯಲ್ಲಿ ಗಗನ್ ಬದೇರಿಯಾ ಸಂಗೀತ, ಕೀರ್ತನ್ ಪೂಜಾರಿ ಛಾಯಾಗ್ರಹಣ, ಜ್ಞಾನೇಶ್-ಯುವರತ್ನ ಸಂಕಲನ, ಕಂಬಿ ರಾಜು ನೃತ್ಯ ನಿರ್ದೇಶನ ಮತ್ತು ಗೋಪಾಲ್ ದೇಶಪಾಂಡೆ, ಹರಿಣಿ, ಸಂಪತ್ ಕುಮಾರ್, ರಘು ರಾಜಾನಂದ, ರಾಮ್ ದಾಸ್, ರಾಕೇಶ್ ಪೂಜಾರಿ, ಚಿಲ್ಲರ್ ಮಂಜು, ಗೌತಮ್ ರಾಜ್, ವರ್ಧನ್ ತೀರ್ಥಹಳ್ಳಿ, ರಣಧೀರ್ ಗೌಡ, ಶೇಖರ್ ಕೆ, ದೇವಿಪ್ರಕಾಶ್, ಆಶಾ ಸುಜಯ್, ವಿದ್ಯಾ, ಕಿರಣ್ ರಾವ್, ಗೀತಾ ಮೈಸೂರು ಮುಂತಾದವರ ತಾರಾಗಣವಿದೆ. ಅಂದಹಾಗೆ, ಕೆರೆಬೇಟೆ ಚಿತ್ರ ಇದೇ ಮಾರ್ಚ್ 15ರಂದು ರಾಜ್ಯಾದ್ಯಂತ ತೆರೆಗಾಣಲಿದೆ.

  • ‘ಅಕಿರ’ ನಿರ್ದೇಶಕನ ಹೊಸ ಕನಸಿಗೆ ಮೆಲೋಡಿ ಸಾಂಗ್ ಸಾಥ್

    ‘ಅಕಿರ’ ನಿರ್ದೇಶಕನ ಹೊಸ ಕನಸಿಗೆ ಮೆಲೋಡಿ ಸಾಂಗ್ ಸಾಥ್

    ವ್ ಸ್ಟೋರಿ ಕಥೆ ಹೇಳಿ ಗೆದ್ದಿರುವ ನಿರ್ದೇಶಕ ನವೀನ್ ರೆಡ್ಡಿ (Naveen Reddy) ಹೊಸ ಕನಸು ‘ಮೂರನೇ ಕೃಷ್ಣಪ್ಪ’.. ಅಕಿರ ಹಾಗೂ ರಿಲ್ಯಾಕ್ಸ್ ಸತ್ಯ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ಅವರೀಗ ವಿಭಿನ್ನ ಶೀರ್ಷಿಕೆಯೊಂದಿಗೆ ಆನೇಕಲ್ ಭಾಗದ ಕಥೆ ಹೇಳೋದಿಕ್ಕೆ ನಿಮ್ಮ ಮುಂದೆ ಬರ್ತಿದ್ದಾರೆ. ಸದ್ದಿಲ್ಲದೇ ಮೂರನೇ ಕೃಷ್ಣಪ್ಪ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ.

    ಮೂರನೇ ಕೃಷ್ಣಪ್ಪ (Murane Krishnappa) ಬಳಗವೀಗ ಪ್ರಮೋಷನ್ ಪಡಸಾಲೆಗಿಳಿದಿದೆ. ಅದರ ಮೊದಲ ಭಾಗವಾಗಿ ಕಳೆದ ವಾರವಷ್ಟೇ ಟೈಟಲ್ ಟೀಸರ್ ರಿಲೀಸ್ ಮಾಡಿ ಥ್ರಿಲ್ ಹೆಚ್ಚಿಸಿತ್ತು. ಇದೀಗ ಮೂರನೇ ಕೃಷ್ಣಪ್ಪ ಸಿನಿಮಾದ ಮೆಲೋಡಿ ಮಸ್ತಿಯೊಂದು ಅನಾವರಣಗೊಂಡಿದೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಬಗೆಹರಿಯದ ಒಗಟುಗಳು ಎಂಬ ಸಾಹಿತ್ಯದ ಹಾಡು (Song) ಬಿಡುಗಡೆಯಾಗಿದೆ. ಸುಪ್ರಿತ್ ಶರ್ಮಾ ಎಸ್ ಈ ಹಾಡಿಗೆ ಸಾಹಿತ್ಯ ನೀಡುವುದರ ಜೊತೆಗೆ ಸಂಗೀತ ಕೂಡ ಒದಗಿಸಿದ್ದಾರೆ. ನಿಹಾಲ್ ಟೌರೊ ಬಗೆಹರಿಯದ ಒಗಟುಗಳು ಗೀತೆಗೆ ಧ್ವನಿಯಾಗಿದ್ದಾರೆ.

    ರೆಡ್ ಡ್ರಾಗ್ಯನ್ ಫಿಲ್ಮಂಸ್ ಪ್ರೊಡಕ್ಷನ್ ಹೌಸ್ ಎರಡನೇ ಕೊಡುಗೆ ಮೂರನೇ ಕೃಷ್ಣಪ್ಪ. ಈ ಹಿಂದೆ ರಿಲ್ಯಾಕ್ಸ್ ಸತ್ಯ ಚಿತ್ರವನ್ನು ಇದೇ ಪ್ರೊಡಕ್ಷನ್ ನಡಿ ಮೋಹನ್ ರೆಡ್ಡಿ ಜಿ, ರವಿಶಂಕರ್ ನಿರ್ಮಿಸಿದ್ದರು. ಇದೀಗ ಇದೇ ಪ್ರೊಡಕ್ಷನ್ ಹೌಸ್ ನಡಿ ಇವರಿಬ್ಬರು ಮೂರನೇ ಕೃಷ್ಣಪ್ಪ ಸಿನಿಮಾಗೆ ಹಣ ಹಾಕಿದ್ದಾರೆ. ಆನೇಕಲ್ ಭಾಗದ ಭಾಷೆಯ ಸೊಬಗನ್ನು ಹೊತ್ತು ಬಂದಿರುವ ಈ ಚಿತ್ರದಲ್ಲಿ ಸಂಪತ್ ಮೈತ್ರೀಯಾ (Sampath Maitreya), ರಂಗಾಯಣ ರಘು ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಶ್ರೀಪ್ರಿಯಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ತುಕಾಲಿ ಸಂತೋಷ್, ಉಗ್ರಂ ಮಂಜು ತಾರಾಬಳಗದಲ್ಲಿದ್ದಾರೆ.

    ಮೂರನೇ ಕೃಷ್ಣಪ್ಪ ಸಿನಿಮಾ ಆನಂದ್ ರಾಜವಿಕ್ರಮ್ ಸಂಗೀತ, ಶ್ರೀಕಾಂತ್ ಸಂಕಲನ, ಯೋಗಿ ಛಾಯಾಗ್ರಹಣವಿದೆ. ಫ್ರೆಶ್ ಕಥೆಯೊಂದಿಗೆ ಸಿನಿಮಾಪ್ರೇಮಿಗಳ ಎದುರು ಬರ್ತಿರುವ ನವೀನ್ ರೆಡ್ಡಿ ತಮ್ಮ ಹೊಸ ಪ್ರಯೋಗವನ್ನು ಜನವರಿ ಅಥವಾ ಫೆಬ್ರವರಿ ತಿಂಗಳಂದು ಪ್ರೇಕ್ಷಕ ಎದುರು ತರಲು ಯೋಜನೆ ಹಾಕಿಕೊಂಡಿದ್ದಾರೆ.

  • ಹೋಮ್ ಸ್ಟೇ ನಿರ್ದೇಶಕನ ಹೊಸ ಚಿತ್ರದಲ್ಲಿ ಗೀತಾ ಭಾರತಿ ಭಟ್ ನಟನೆ

    ಹೋಮ್ ಸ್ಟೇ ನಿರ್ದೇಶಕನ ಹೊಸ ಚಿತ್ರದಲ್ಲಿ ಗೀತಾ ಭಾರತಿ ಭಟ್ ನಟನೆ

    ಹೋಮ್  ಸ್ಟೇ ಚಿತ್ರದ ಖ್ಯಾತಿಯ ಸಂತೋಷ್ ಕೊಡಂಕೇರಿ (Santhosh Kodankeri)  ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ “ಪ್ರೊಡಕ್ಷನ್ ನಂ 02” ನೂತನ ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಸುಳ್ಯದ ಶ್ರೀ ಚನ್ನಕೇಶವ  ದೇವಸ್ಥಾನದಲ್ಲಿ ಜರುಗಿತು. ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಚಿತ್ರದ ಮೊದಲ ಸನ್ನಿವೇಶಕ್ಕೆ  ಕ್ಲ್ಯಾಪ್ ಮಾಡುವ ಮೂಲಕ ಚಾಲನೆ ನೀಡಿದರು.

    ತೂಗು ಸೇತುವೆಗಳ ಸರದಾರ ಪದ್ಮಶ್ರೀ ಶ್ರೀ ಗಿರೀಶ್ ಭಾರಧ್ವಾಜ್ ರವರು, ಕ್ಯಾಮೆರಾ ಸ್ವಿಚ್ ಆನ್ ಮಾಡಿದರು. ಲಯನ್ಸ್ ಕ್ಲಬ್ ಜಿಲ್ಲಾ ಮಾಜಿ ಗವರ್ನರ್ ಹಾಗೂ ಜೆಡಿಎಸ್ ರಾಜ್ಯ ಸಂಚಾಲಕ ಎಂ.ಬಿ. ಸದಾಶಿವ, ಶ್ರೀಚನ್ನಕೇಶವ ದೇವಳದ ಆಡಳಿತ ಮೊಕೇಸ್ತರ ಡಾ. ಹರಪ್ರಸಾದ್ ತುದಿಯಡ್ಕ, ನ.ಪಂ. ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಹಾಗೂ ಇನ್ನಿತರ ಸ್ಥಳೀಯ ಮುಖಂಡರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಇದನ್ನೂ ಓದಿ:ರಾಕೇಶ್‌ಗಾಗಿ ಬಿಗ್ ಬಾಸ್ ಮನೆನಾ ಎರಡು ಮನೆ ಮಾಡಬೇಕಾ: ಸೋನು ವಿರುದ್ಧ ಗುರೂಜಿ ಗರಂ

    ಗೀತಾ ಭಾರತಿ ಭಟ್ (Geeta Bharati Bhatt), ಪದ್ಮಜಾ ರಾವ್, ಕೃಷ್ಣಮೂರ್ತಿ ಕವತಾರ್, ಸಂಪತ್ ಮೈತ್ರೇಯ, ರಘು ಪಾಂಡೇಶ್ವರ್, ಖುಷಿ ಆಚಾರ್, ಮೀನ ಹಾಗೂ ದರ್ಶಿನಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಪಾವನಾ ಸಂತೋಷ್  ಕಥೆ ಮತ್ತು ಸಂಭಾಷಣೆ ಬರೆದಿದ್ದು, ಸಂತೋಷ್ ಕೊಡಂಕೇರಿ ಚಿತ್ರಕಥೆ ಬರೆದು  ನಿರ್ದೇಶನ ಮಾಡುತ್ತಿದ್ದಾರೆ. ಮುರಳಿಧರ್. ಎಂ ಛಾಯಾಗ್ರಹಣ, ವಿನಯ್ ಶರ್ಮಾ ಸಂಗೀತ ನಿರ್ದೇಶನ,  ರಘು ಎಸ್. ಸಂಕಲನ, ಕಿರಣ್ ಕಾವೇರಪ್ಪ ಗೀತರಚನೆ ಹಾಗೂ  ಪ್ರಸನ್ನ – ಕಲ್ಯಾಣ್ ರೆಡ್ಡಿ ಅವರ ಸಹ ನಿರ್ದೇಶನ ಈ ಚಿತ್ರಕ್ಕಿದೆ. ಈ ಚಲನಚಿತ್ರವು ದಕ್ಷಿಣ ಕನ್ನಡದ ಸೊಗಡು, ಭಾಷೆ, ಸಂಸ್ಕೃತಿ ಹೊಂದಿದ್ದು, ದಕ್ಷಿಣ ಕನ್ನಡದ ಸುಳ್ಯ, ಸಂಪಾಜೆ, ತೋಡಿಕಾನ ಆಸುಪಾಸಿನಲ್ಲಿ 30 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ‌ ಎಂದು ನಿರ್ದೇಶಕರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]