Tag: Samhita Vinya

  • ತಮಿಳು ಚಿತ್ರರಂಗದಲ್ಲಿ ಮಿಂಚಿದ ಕನ್ನಡತಿ ಸಂಹಿತಾ ವಿನ್ಯಾ

    ತಮಿಳು ಚಿತ್ರರಂಗದಲ್ಲಿ ಮಿಂಚಿದ ಕನ್ನಡತಿ ಸಂಹಿತಾ ವಿನ್ಯಾ

    ನ್ನಡ ಅಲ್ಲದೇ ಪಕ್ಕದ ತಮಿಳು, ತೆಲುಗು ಚಿತ್ರರಂಗದಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ನಟಿ ಎಂದರೆ ಸಂಹಿತಾ ವಿನ್ಯಾ. 75ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಫ್ಯಾಷನ್ ಷೋಗಳಲ್ಲಿ ಭಾಗವಹಿಸಿ, ಸೂಪರ್ ಮಾಡೆಲ್ ಎನಿಸಿಕೊಂಡಿರುವ ಸಂಹಿತಾ ವಿನ್ಯಾ ಇದೀಗ ತಮಿಳಲ್ಲಿ ಜೀವಾ ಸಹೋದರ ಜತಿನ್ ರಮೇಶ್ ಜತೆಗೂ ನಟಿಸುತ್ತಿದ್ದಾರೆ.

    ಇದಲ್ಲದೇ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿರುವ ತಮಿಳಿನ ಹಿಡನ್ ಕ್ಯಾಮೆರಾ ಚಿತ್ರದಲ್ಲಿ ಸಂಹಿತಾ ನಾಯಕಿಯಾಗಿ ನಟಿಸುತ್ತಿದ್ದು, ಆ ಚಿತ್ರದ ಕೆಲಸ ಕೇರಳದಲ್ಲಿ ನಡೆಯುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಸಾಕಷ್ಟು ಚಿತ್ರಗಳಲ್ಲಿ ನಟಿಸುತ್ತ ಬಂದಿರುವ ಸಂಹಿತಾ ಅಭಿನಯದ ‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’ ಚಿತ್ರ ಬಿಡುಗಡೆಯಾದಾಗ ಅಭಿಮಾನಿಗಳು ಕಟೌಟ್ ನಿಲ್ಲಿಸುವ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿದ್ದರು.

    ಸಂಹಿತಾ ವಿನ್ಯಾ ಅಭಿನಯದ ಅಭಿನಯದ ಮಿಕ್ಸಿಂಗ್ ಪ್ರೀತಿ,’ಮೆಜೆಸ್ಟಿಕ್ -2′, ಆಯುಧ, ಜಿಎಸ್‌ಟಿ. ಸ್ವಾಭಿಮಾನಿ, ಯಾಕೋ ಬೇಜಾರು, ವಿದೂಷಕ ಮುಂತಾದ ಚಿತ್ರಗಳು ರಿಲೀಸ್‌ಗೆ ರೆಡಿ ಇವೆ. ಮತ್ತೊಂದು ತಮಿಳು ಚಿತ್ರ ಮಿಕ್ಸಿಂಗ್ ಕಾದಲ್ ಬಿಡುಗಡೆಗೆ ರೆಡಿಯಿದೆ.

    ಅಮೃತಘಳಿಗೆ, ಲಂಗೋಟಿ ಮ್ಯಾನ್ ಅಲ್ಲದೇ ತೆಲುಗಿನ ಯು ಆರ್ ಮೈ ಹೀರೋ ಚಿತ್ರದಲ್ಲೂ ಸಂಹಿತಾ ವಿನ್ಯಾ ನಾಯಕಿಯಾಗಿ ನಟಿಸಿದ್ದಾರೆ. ಹಾಲು ತುಪ್ಪ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂಹಿತಾ ವಿನ್ಯಾ, ಅಮೃತ ಘಳಿಗೆ, ವಿಷ್ಣು ಸರ್ಕಲ್, ನಸಾಬ್, ಮಿಕ್ಸಿಂಗ್ ಪ್ರೀತಿ, ಸ್ವಾಭಿಮಾನಿ ಅಲ್ಲದೇ ತೆಲುಗು, ತಮಿಳು ಸೇರಿದಂತೆ 18ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇದೀಗ ಪಕ್ಕದ ತಮಿಳು, ತೆಲುಗು ಚಿತ್ರರಂಗದಲ್ಲೂ ಸಹ ಸಖತ್ ಮಿಂಚುತ್ತಿದ್ದಾರೆ. ಅಚ್ಚಕನ್ನಡದ ಪ್ರತಿಭೆಯಾದ ಸಂಹಿತಾ ವಿನ್ಯಾ, ಇದೀಗ ಸೌತ್ ಫಿಲಂ ಇಂಡಸ್ಟ್ರಿಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.

  • ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಮೆಜೆಸ್ಟಿಕ್ 2’ ನಾಯಕಿ ಸಂಹಿತಾ ವಿನ್ಯಾ

    ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಮೆಜೆಸ್ಟಿಕ್ 2’ ನಾಯಕಿ ಸಂಹಿತಾ ವಿನ್ಯಾ

    ನ್ನಡ ಚಿತ್ರರಂಗದ ಪ್ರತಿಭಾವಂತ ನಟಿ ಕಮ್‌ ಮಾಡೆಲ್ ಸಂಹಿತಾ ವಿನ್ಯಾ (Samhita Vinya) ‘ಮೆಜೆಸ್ಟಿಕ್‌ 2’ (Majestic 2) ಸಿನಿಮಾ ರಿಲೀಸ್‌ಗೆ ಎದುರು ನೋಡ್ತಿದ್ದಾರೆ. ಸಿನಿಮಾ ಕೆಲಸದ ನಡುವೆ ತನ್ನ ಹುಟ್ಟುಹಬ್ಬವನ್ನು (Birthday) ಆಚರಿಸಿದ್ದಾರೆ. ಈ ಸಂದರ್ಭದಲ್ಲಿ ಕನ್ನಡ ಚಿತ್ರರಂಗದ ಅನೇಕ ಗಣ್ಯರು ನಟಿಗೆ ಶುಭಹಾರೈಸಿದ್ದಾರೆ. ಇದನ್ನೂ ಓದಿ:ದಕ್ಷಿಣ ಭಾರತದಲ್ಲಿ ನನ್ನ ಹೆಸರಲ್ಲೊಂದು ದೇವಸ್ಥಾನ ಆಗಬೇಕು ಎಂದ ಊರ್ವಶಿ – ಟ್ರೋಲ್ ಆದ ನಟಿ

    ʻಹಾಲು ತುಪ್ಪʼ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂಹಿತಾ ನಾಯಕಿ ಪ್ರಧಾನ ‘ಸೀತಮ್ಮ ಬಂದ್ಲು ಸಿರಿಮಲ್ಲಿಗೆ ತೊಟ್ಟು’ ಚಿತ್ರದಲ್ಲಿ ಅತ್ಯುತ್ತಮ ಅಭಿನಯ ನೀಡಿ ಪ್ರೇಕ್ಷಕರ ಹಾಗೂ ವಿಮರ್ಶಕರ ಪ್ರಶಂಸೆ ಗಳಿಸಿದ್ದರು. ಅಮೃತ ಘಳಿಗೆ, ವಿಷ್ಣು ಸರ್ಕಲ್, ನಸಾಬ್, ಮಿಕ್ಸಿಂಗ್ ಪ್ರೀತಿ, ಸ್ವಾಭಿಮಾನಿ ಚಿತ್ರದಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿರುವ ಸಂಹಿತಾ ವಿನ್ಯಾಗೆ ಬಾಲಿವುಡ್‌ನಿಂದಲೂ ಆಫರ್ಸ್ ಬಂದಿದೆ. ಇದನ್ನೂ ಓದಿ:‘ಎಡಗೈಯೇ ಅಪಘಾತಕ್ಕೆ ಕಾರಣ’ ಚಿತ್ರಕ್ಕಾಗಿ ಒಂದಾದ ‘ಬ್ಲಿಂಕ್’ ಮತ್ತು ‘ಶಾಖಾಹಾರಿ’ ನಿರ್ಮಾಪಕರು

    75ಕ್ಕೂ ಹೆಚ್ಚು ರಾಷ್ಟ್ರೀಯ, ಅಂತಾರಾಷ್ಟ್ರೀಯ ಫ್ಯಾಷನ್ ಶೋಗಳಲ್ಲಿ ಸಂಹಿತಾ ವಿನ್ಯಾ ಭಾಗವಹಿಸಿದ್ದಾರೆ. ನಟಿಗೆ ಫ್ಯಾಷನ್ ಡಿಸೈನರ್ ಆಗಿ ಫಾರೆವರ್ ನವೀನ್ ಕುಮಾರ್ ಅವರು ಕಾರ್ಯನಿರ್ವಹಿಸಿದ್ದಾರೆ. ಮಾಡೆಲಿಂಗ್ ಜಗತ್ತಿನಲ್ಲೂ ತನ್ನದೇ ಆದ ಛಾಪನ್ನು ಮೂಡಿಸಿರುವ ಅಚ್ಚ ಕನ್ನಡದ ಪ್ರತಿಭೆ ಸಂಹಿತಾಗೆ ಮತ್ತಷ್ಟು ಅವಕಾಶಗಳು ಸಿಗುವಂತಾಗಲಿ ಎಂಬುದೇ ಅಭಿಮಾನಿಗಳ ಆಶಯ.

  • ‘ಯಾಕೋ ಬೇಜಾರು’ ಅಂತಿದ್ದಾರೆ ಮಾತಿನ ಮಲ್ಲಿ ಸಂಹಿತಾ ವಿನ್ಯಾ

    ‘ಯಾಕೋ ಬೇಜಾರು’ ಅಂತಿದ್ದಾರೆ ಮಾತಿನ ಮಲ್ಲಿ ಸಂಹಿತಾ ವಿನ್ಯಾ

    ಬಲ್ ಮೀನಿಂಗ್ ಡೈಲಾಗ್ ಮೂಲಕ ಸ್ಯಾಂಡಲ್ ವುಡ್ ಗಮನ ಸೆಳೆದಿರುವ ಗಾಲಿ ಲಕ್ಕಿ ಇದೀಗ ಮತ್ತೊಂದು ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಯಾಕೋ ಬೇಜಾರು ಎಂದು ಹೆಸರಿಡಲಾಗಿದ್ದು, ಈ ಸಿನಿಮಾದಲ್ಲಿ ಮಾಡಲಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ಸಂಹಿತಾ ವಿನ್ಯಾ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇದೇ ಜುಲೈ ಒಂದರಂದು ಬಿಡುಗಡೆಯಾಗಲಿದೆ.

    ಗಾಲಿ ಲಕ್ಕಿ ನಿರ್ದೇಶನದ ಈ ಚಿತ್ರದ ನಾಯಕಿಯಾಗಿ ಸಂಹಿತಾ ವಿನ್ಯಾ ಅಭಿನಯಿಸಿದ್ದಾರೆ.  ಈ ಚಿತ್ರದಲ್ಲಿ ಸಂಹಿತಾ, ಆರ್ ಜೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರ ಆರಂಭದಿಂದ ಕೊನೆಯತನಕ ಚುರುಕಾದ ಸಂಭಾಷಣೆ ಮೂಲಕ ಸಂಹಿತಾ ವಿನ್ಯಾ ಎಲ್ಲರ ಗಮನ ಸೆಳೆಯುತ್ತಾರೆ. ಮಾತಿನಮಲ್ಲಿಯಾಗಿ ನೋಡುಗರನ್ನು ರಂಜಿಸಲಿದ್ದಾರೆ. ಲವ್ ಜಾನರ್ ನ ಈ ಚಿತ್ರದ ಟ್ರೇಲರ್ ಜುಲೈ ಒಂದರಂದು ಬಿಡುಗಡೆಯಾಲಿದ್ದು, ಸದ್ಯದಲ್ಲೇ ಚಿತ್ರ ಕೂಡ ತೆರೆಗೆ ಬರಲಿದೆ. ಖ್ಯಾತ ವಸ್ತ್ರ ವಿನ್ಯಾಸಕಾರ ಫಾರೆವರ್ ನವೀನ್ ಕುಮಾರ್ ಸಂಹಿತಾ ವಿನ್ಯಾ ಅವರಿಗೆ ವಸ್ತ್ರವಿನ್ಯಾಸ ಮಾಡಿದ್ದಾರೆ. ಇದನ್ನೂ ಓದಿ:ನಿರೂಪಕಿ ಅನುಶ್ರೀಗೆ ಗಿಫ್ಟ್ ನೀಡಿದ ಶಿವರಾಜ್‌ಕುಮಾರ್

    ವಿ.ನಂದಿ ಸಹ ನಿರ್ದೇಶನ ಹಾಗೂ ಸುಬ್ರಹ್ಮಣ್ಯ ಜೆ ವೈದ್ಯ ಅವರ  ಛಾಯಾಗ್ರಹಣ “ಯಾಕೋ ಬೇಜಾರು” ಚಿತ್ರಕ್ಕಿದೆ. “ಯಾಕೋ ಬೇಜಾರು” ಚಿತ್ರ ಹಾಗೂ  ನನ್ನ ಪಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ ಎನ್ನುತ್ತಾರೆ ಸಂಹಿತಾ ವಿನ್ಯಾ. ಇದು ಸಂಹಿತಾ ಅವರು ನಾಯಕಿಯಾಗಿ ನಟಿಸಿರುವ ಹನ್ನೊಂದನೆಯ ಸಿನಿಮಾ. “ವಿಷ್ಣು ಸರ್ಕಲ್”, ” ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು”  ಸೇರಿದಂತೆ ಕನ್ನಡದಲ್ಲಿ ಇವರು ಅಭಿನಯಿಸಿರುವ ಆರು ಚಿತ್ರಗಳು ಈಗಾಗಲೇ ತೆರೆ ಕಂಡಿದೆ. ತಮಿಳು, ತೆಲುಗಿನಲ್ಲೂ ಇವರ ಚಿತ್ರ ಬಿಡುಗಡೆಯಾಗಿದೆ.ಇತ್ತೀಚೆಗೆ ತೆರೆಗೆ ಬಂದ ಪ್ಯಾನ್ ಇಂಡಿಯಾ ಸಿನಿಮಾ “ಯೂ ಆರ್ ಮೈ ಹೀರೋ” ಚಿತ್ರ ಸಂಹಿತಾ ವಿನ್ಯಾ ಅವರಿಗೆ ಮತ್ತಷ್ಟು ಹೆಸರು ತಂದುಕೊಟ್ಟಿದೆ. ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬರುತ್ತಿದೆ.

    ಮಾಡಲಿಂಗ್ ಕ್ಷೇತ್ರದಲ್ಲೂ ಸಂಹಿತಾ ವಿನ್ಯಾ ಅವರ ಹೆಸರು ಪ್ರಸಿದ್ದಿಯಲ್ಲಿದೆ. ಫಾರೆವರ್ ನವೀನ್  ಕುಮಾರ್ ಅವರ ಅನೇಕ ಫ್ಯಾಷನ್ ಶೋಗಳ ಮೂಲಕ ಸಂಹಿತಾ ವಿನ್ಯಾ ಜನಪ್ರಿಯರಾಗಿದ್ದಾರೆ. ಬಾಲಿವುಡ್ ನ ಹೆಸರಾಂತ ನಟಿಯರು ಭಾಗವಹಿಸಿದ್ದ ಮೆಟ್ ಗಾಲದಲ್ಲೂ ಸಂಹಿತಾ ವಿನ್ಯಾ ಭಾಗವಹಿಸಿದ್ದಾರೆ. ಏಕಕಾಲಕ್ಕೆ ಮಾಡಲಿಂಗ್ ಹಾಗೂ ಸಿನಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಹಿತಾ ವಿನ್ಯಾ ಎರಡು ಕ್ಷೇತ್ರಗಳಲ್ಲೂ ಪ್ರಸಿದ್ದಿ ಪಡೆಯುತ್ತಿದ್ದಾರೆ.

    Live Tv