Tag: Samhara

  • ಸಂಹಾರ ಸಿನಿಮಾ ನೋಡಿ ಧ್ರುವ ಸರ್ಜಾ ಫುಲ್ ಖುಷ್

    ಸಂಹಾರ ಸಿನಿಮಾ ನೋಡಿ ಧ್ರುವ ಸರ್ಜಾ ಫುಲ್ ಖುಷ್

    ಬೆಂಗಳೂರು: ಚಿರಂಜೀವಿ ಸರ್ಜಾ, ಗುರುದೇಶ್ ಪಾಂಡೆ ಕಾಂಬಿನೇಷನ್‍ನ ಸಂಹಾರ ಸಿನಿಮಾವನ್ನು ತ್ರಿವೇಣಿ ಚಿತ್ರಮಂದಿರದಲ್ಲಿ ನಟ ಧ್ರುವ ಸರ್ಜಾ ವೀಕ್ಷಿಸಿದ್ದಾರೆ.

    ಅಭಿಮಾನಿಗಳ ಜೊತೆ ಕೂತು ಸಂಹಾರ ಸಿನಿಮಾ ನೋಡಿದ ಆ್ಯಕ್ಷನ್ ಪ್ರೀನ್ಸ್ ಸಖತ್ ಖುಷಿಪಟ್ಟರು. ತಮ್ಮ ನೆಚ್ಚಿನ ಹೀರೋ ನೋಡಲು ಮುಗಿಬಿದ್ದ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಂಡು ಸಂತೋಷ ಪಟ್ಟರು.

    ಸಂಹಾರ ಸಿನಿಮಾ ನೋಡಿದ ಧ್ರುವ, ತ್ರಿವೇಣಿ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಿದ್ದು ತುಂಬಾ ಖುಷಿಯಾಯಿತು. ಸಂಹಾರ ಚಿತ್ರ ನಿಜವಾಗಿಯೂ ಸಖತ್ ಆಗಿದೆ. ಗುರುದೇಶ್ ಪಾಂಡೆ ಸರ್ ತುಂಬಾ ಚೆನ್ನಾಗಿ ಕೆಲಸ ಮಾಡಿದ್ದಾರೆ. ಚಿಕ್ಕಣ್ಣ ಅವರ ನಟನೆ ನೋಡುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಮ್ಮ ಅಣ್ಣನ ಬಗ್ಗೆ ಏನೂ ಹೇಳುವ ಹಾಗಿಲ್ಲ ಎಂದು ಧ್ರುವ ಸರ್ಜಾ ಹೊಗಳಿದರು.

    ಅಷ್ಟೇ ಅಲ್ಲದೇ ಹರಿಪ್ರಿಯಾರ ಅಮೋಘ ನಟನೆಯನ್ನು ಚಿತ್ರದಲ್ಲಿ ನೋಡಬಹುದಾಗಿದೆ. ಈ ಬಾರಿ ಹರಿಪ್ರಿಯಾ ವಿಭಿನ್ನ ಶೇಡ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ತುಂಬಾನೇ ಎಂಟರ್‍ಟೈನ್‍ಮೆಂಟ್ ಜೊತೆ ಕಾಮಿಡಿಯನ್ನು ಹೊಂದಿದೆ. ಸಂಹಾರ ಇಡೀ ಕುಟುಂಬ ನೋಡುವಂತಹ ಸಿನಿಮಾವಾಗಿದ್ದು, ಮತ್ತೊಮ್ಮೆ ನೋಡಬೇಕು ಎಂಬ ಆಸೆ ಆಗುತ್ತದೆ. ದಯವಿಟ್ಟು ಈ ಸಿನಿಮಾ ನೋಡಿ. ಇದೊಂದು ಫ್ಯಾಮಿಲಿ ಜೊತೆ ನೋಡುವಂತಹ ಸಿನಿಮಾ. ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ವಿಭಿನ್ನ ರೀತಿಯಲ್ಲಿ ಈ ಸಿನಿಮಾ ಮೂಡಿ ಬಂದಿದೆ ಎಂದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ತಿಳಿಸಿದರು.

  • ‘ರಾಜಕುಮಾರ’ ಸಿನಿಮಾ ನೋಡಿದ್ದು ಹೀಗೆ ಅಂದ್ರು ಚಿರಂಜೀವಿ ಸರ್ಜಾ

    ‘ರಾಜಕುಮಾರ’ ಸಿನಿಮಾ ನೋಡಿದ್ದು ಹೀಗೆ ಅಂದ್ರು ಚಿರಂಜೀವಿ ಸರ್ಜಾ

    -ಸಂಹಾರಕ್ಕೆ ಸಿಕ್ತು ಒಳ್ಳೆಯ ರೆಸ್ಪಾನ್ಸ್

    ಬೆಂಗಳೂರು: ವರನಟ ಡಾ. ರಾಜ್‍ಕುಮಾರ್ ಅವರ ಅಭಿನಯ ಬಲು ಇಷ್ಟ, ಅಣ್ಣಾವ್ರು ನಟಿಸಿರುವ ಭಕ್ತ ಪ್ರಹ್ಲಾದ ಅವರ ನೆಚ್ಚಿನ ಚಿತ್ರ. ಪುನೀತ್ ರಾಜ್‍ಕುಮಾರ್ ಅಭಿನಯದ ‘ರಾಜಕುಮಾರ’ ಸಿನಿಮಾ ವೀಕ್ಷಿಸಲು ನರ್ತಕಿ ಟಾಕೀಸ್‍ಗೆ ಮಾರುವೇಶ ಧರಿಸಿ ಸಿನಿಮಾ ವೀಕ್ಷಿಸಿದೆ ಎಂದು ಚಿರಂಜೀವಿ ಸರ್ಜಾ ತಮ್ಮ ಅನುಭವವನ್ನು ಪಬ್ಲಿಕ್ ಟಿವಿ ಜೊತೆಗೆ ಹಂಚಿಕೊಂಡರು.

    ಚಿರಂಜೀವಿ ಸರ್ಜಾ ಮತ್ತು ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ ‘ಸಂಹಾರ’ ಚಿತ್ರ ಇಂದು ಬಿಡುಗಡೆ ಆಗಿದೆ. ವಿಭಿನ್ನ ಕಥಾ ಹಂದರವುಳ್ಳ ಸಂಹಾರ ನೋಡುಗರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಳ್ಳುತ್ತಿದೆ. ಪಕ್ಕಾ ಆ್ಯಕ್ಷನ್ ಸಿನಿಮಾ ಆಗಿರುವ ಸಂಹಾರದಲ್ಲಿ ಚಿರು ಅಂಧನ ಪಾತ್ರದಲ್ಲಿ ನಟಿಸಿದ್ದಾರೆ. ಅಂಧನಾಗಿರುವ ನಾಯಕ ನಟ, ಹೇಗೆ ವೈರಿಗಳನ್ನು ಸಂಹಾರ ಮಾಡ್ತಾನೆ, ಯಾವೆಲ್ಲ ತಂತ್ರಗಾರಿಕೆಗಳನ್ನು ಬಳಸುತ್ತಾನೆ ಎಂಬುದು ಚಿತ್ರ ಒಳಗೊಂಡಿದೆ.

    ತಮ್ಮ ನಟನೆಯ `ಸಂಹಾರ’ ಚಿತ್ರದ ಕುರಿತ ಪಬ್ಲಿಕ್ ಟಿವಿ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚಿತ್ರದ ಚಿತ್ರೀಕರಣದ ಸಮಯದ ಅನುಭವವನ್ನು ಹಂಚಿಕೊಂಡರು. ಈ ವೇಳೆ ಚಿತ್ರರಂಗದಲ್ಲಿ ತಾವು ಬೆಳೆದು ಬಂದ ಬಗೆಯ ಬಗ್ಗೆ ವಿಶೇಷ ಘಟನೆಗಳನ್ನು ನೆನೆಸಿಕೊಂಡರು. ನಟನೆಯನ್ನು ನನ್ನ ಅಜ್ಜ ಮತ್ತು ಚಿಕ್ಕಪ್ಪ ಅರ್ಜುನ್ ಸರ್ಜಾ ಅವರಿಂದ ಕಲಿತ್ತಿದೇನೆ. ಸಿನಿಮಾ ರಂಗದಲ್ಲಿ ನಾನು ಏನೇ ಹೆಸರು ಮಾಡಿದರು ಅದಕ್ಕೆಲ್ಲಾ ನನ್ನ ಚಿಕ್ಕಪ್ಪ ಅರ್ಜುನ್ ಸರ್ಜಾ ಕಾರಣ ಎಂದು ಹೇಳಿದರು.

    ಆರಂಭದ ದಿನಗಳಲ್ಲಿ ಡಾ. ರಾಜ್ ಕುಮಾರ್ ಅವರ ಚಿತ್ರಗಳನ್ನು ನೋಡಲು ತೆರಳುತ್ತಿದ್ದ ಘಟನೆಯನ್ನು ನೆನೆದರು. ಅಲ್ಲದೇ ಪಿಯುಸಿ ಓದುತ್ತಿದಾಗ ಉಪೇಂದ್ರ ಅವರ ಅಭಿಮಾನಿಯಾಗಿದ್ದೆ, ಅವರ ಅಭಿನಯದ ಉಪೇಂದ್ರ ಸಿನಿಮಾ ವೀಕ್ಷಣೆಗೆ ಕಾಲೇಜ್ ಬಂಕ್ ಮಾಡಿ ಹೋಗಿದ್ದೆ ಎಂದು ನಕ್ಕರು.

    ಚಿರು ಅವರ ‘ಸಂಹಾರ’ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಚಿಕ್ಕಣ್ಣ, ಕಾವ್ಯ ಶೆಟ್ಟಿ ಸೇರಿದಂತೆ ದೊಡ್ಡ ತಾರಾಗಣವನ್ನು ಚಿತ್ರತಂಡ ಹೊಂದಿದೆ. ಸಂಹಾರ ಪಕ್ಕಾ ಆಕ್ಷನ್ ಸಿನಿಮಾ ಆಗಿದ್ದು, ರವಿವರ್ಮ ಸಾಹಸ ಸಂಯೋಜನೆ ಇದೆ.

    ಚಿತ್ರರಂಗದಲ್ಲಿ ಆಗಿರುವ ಬದಲಾವಣೆಯ ಬಗ್ಗೆ ಮಾತನಾಡಿದ ಚಿರು, ಆ ಕಾಲದಲ್ಲಿ ಪ್ರತಿ ಕಲಾವಿದರು ತಮ್ಮ ತಮ್ಮ ಪಾತ್ರದ ಬಗ್ಗೆ ಚರ್ಚಿಸುತ್ತಿದ್ದರು, ಒಟ್ಟಿಗೆ ಊಟ ಮಾಡುತ್ತಿದ್ದರು. ಆದರೇ ಈಗಿನ ಕಲಾವಿದರೂ ಬೇರೆ ಕಲಾವಿದರ ಜೊತೆ ಬೆರೆಯುವುದು ಕಮ್ಮಿಯಾಗಿದೆ ಎಂದು ಹೇಳಿದರು.

    ಚಿತ್ರರಂಗದಲ್ಲಿ ರಾಜ್‍ಕುಮಾರ್ ಅವರ ತರಹ ಸಿನಿಮಾ ಮಾಡಲು ಬಯಸುವ ಚಿರು, ಚಿತ್ರದ ಡ್ರೀಮ್ ರೋಲ್ ಅಥವಾ ಡ್ರೀಮ್ ಪ್ರೊಜೆಕ್ಟ್ ಎಲ್ಲವು ಚಿತ್ರ ಕಥೆ ಮತ್ತು ನಿರ್ದೇಶಕರ ಮೇಲೆ ನಿರ್ಧಾರವಾಗುತ್ತದೆ ಎಂದು ಹೇಳಿದರು. ತಮ್ಮ ಬಾಲ್ಯದ ಗೆಳೆಯರ ಜೊತೆ ಕಳೆದ ಸಮಯವನ್ನು ನೆನೆದ ಚಿರು, ಇಂದಿಗೂ ಅವರು ಯಾವುದೇ ಸೆಲೆಬ್ರೆಟಿ ಎನ್ನುವ ಹಮ್ಮಿಲ್ಲದೆ ಸಲುಗೆಯಿಂದ ಎಲ್ಲಾ ಸ್ನೇಹಿತರ ಜೊತೆ ಬೆರೆಯುತ್ತೇನೆಂದು ಹೇಳಿದರು.