Tag: Sameera Reddy

  • ವರ್ಕೌಟ್‌ನಲ್ಲಿ ಬ್ಯುಸಿಯಾದ ವರದನಾಯಕನ ರಾಣಿ

    ವರ್ಕೌಟ್‌ನಲ್ಲಿ ಬ್ಯುಸಿಯಾದ ವರದನಾಯಕನ ರಾಣಿ

    ಚಂದನವನದ ಅಭಿನಯ ಚಕ್ರವರ್ತಿ ಸುದೀಪ್ ಜೊತೆ ನಟಿಸಿ ಕನ್ನಡಿಗರಿಗೆ ಪರಿಚಯವಾಗಿರುವ ಸಮೀರಾ ರೆಡ್ಡಿ ವರ್ಕೌಟ್ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ.
    ತಾಯಿಯಾದ ನಂತರ ಅವರು ಸಿನಿರಂಗದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದರು. ಆದರೂ ತಮ್ಮ ಫಿಟ್‍ನೆಸ್‍ ಕಡೆ ಗಮನ ಕೊಡುವುದನ್ನು ಅವರು ಮರೆತಿಲ್ಲ. ಸಮೀರಾ ಫಿಟ್‍ನೆಸ್‍ಗಾಗಿ ವರ್ಕೌಟ್ ಮಾಡುತ್ತಿರುತ್ತಾರೆ.

    Romance Between Sudeep and Sameera Reddy | Kannada Junction - YouTube

    ಇಂದು ತಮ್ಮ ವರ್ಕೌಟ್ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೋ ನೋಡಿದ ಅಭಿಮಾನಿಗಳು ಫಿಟ್ನೆಸ್ಗಾಗಿ ಆಸೆ ಪಡುವ ಎಲ್ಲ ತಾಯಂದಿರಿಗೆ ಈ ವೀಡಿಯೋ ಸ್ಫೂರ್ತಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಅಲ್ಲದೆ ವೀಡಿಯೋದಲ್ಲಿ ಸಮೀರಾ ಜೋಶ್ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ. ಇದನ್ನೂ ಓದಿ: ತೆಲುಗಿಗೆ ಎಂಟ್ರಿ ಕೊಟ್ಟ ಸಲಗನ ಸಂಗಾತಿ ಸಂಜನಾ 

     

    View this post on Instagram

     

    A post shared by Sameera Reddy (@reddysameera)

    ಸಮೀರಾ ರೆಡ್ಡಿ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದು, ಎರಡು ಮಕ್ಕಳ ತಾಯಿಯಾದರೂ ಫಿಟ್‍ನೆಸ್‍ಗೆ ಹೆಚ್ಚು ಒತ್ತು ನೀಡುವುದರಲ್ಲಿ ಎಲ್ಲರಿಗೂ ಸ್ಫೂರ್ತಿ ಆಗಿದ್ದಾರೆ. ಇನ್ಸ್ಟಾದಲ್ಲಿ ಈ ನಟಿ ತಮ್ಮ ವರ್ಕೌಟ್ ವೀಡಿಯೋ ಪೋಸ್ಟ್ ಮಾಡಿದ್ದು, ಈ ವಿಡಿಯೋದಲ್ಲಿ ಸಮೀರಾ ಮಗಳ ಜೊತೆ ಆಟವಾಡಿಕೊಂಡೇ ವರ್ಕೌಟ್ ಹೇಗೆ ಮಾಡಬಹುದು ಎಂದು ಅಭಿಮಾನಿಗಳಿಗೆ ಹೇಳಿಕೊಟ್ಟಿದ್ದಾರೆ. ತಮ್ಮ ಮಗಳು ನೈರಾ ಜೊತೆ ಆಟವಾಡುವುದರ ಜೊತೆಗೆ ಏಕಕಾಲದಲ್ಲಿ ವರ್ಕೌಟ್ ಮಾಡುತ್ತಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ತಾಯಂದಿರಿಗೆ ಈ ರೀತಿಯ ಐಡಿಯಾ ಯೂಸ್ ಆಗುತ್ತೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

    Weighed 105 kgs, even as I held my gorgeous son, didn't feel happy: Sameera Reddy on postpartum depression

    ವೀಡಿಯೋ ಪೊಸ್ಟ್ ಮಾಡಿದ ಅವರು, “ನಿಮ್ಮ ದೊಡ್ಡ ಬಂಡವಾಳ ನೀವೇ. ನಾನು ನನ್ನ ಆರೋಗ್ಯ, ದೇಹ, ಸಂತೋಷ, ಮನಸ್ಸನ್ನು ಹೂಡಿಕೆ ಮಾಡುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನಿಮ್ಮ ಸಂತೋಷಕ್ಕೆ ನೀವೇ ಬಂಡವಾಳ ಅಂದರೆ ಕಾರಣರಾಗಬೇಕು ಎಂದು ಬರೆದು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡದ ಎವರ್‌ಗ್ರೀನ್ ಸಾಂಗ್‍ಗೆ ದನಿಯಾದ ರಾಬರ್ಟ್ ರಾಣಿ!

  • ತೂಕ ಇಳಿಸಿಕೊಂಡ ವರದನಾಯಕ ಬೆಡಗಿ

    ತೂಕ ಇಳಿಸಿಕೊಂಡ ವರದನಾಯಕ ಬೆಡಗಿ

    ಮುಂಬೈ: ಬಹುಭಾಷಾ ನಟಿ, ವರದನಾಯಕ ಬೆಡಗಿ ಸಮೀರಾ ರೆಡ್ಡಿ ತೂಕ ಇಳಿಸಿಕೊಂಡು ಮತ್ತೆ ಫಿಟ್ ಆಗಿದ್ದಾರೆ. ತೂಕ ಇಳಿಕೆ ಮಾಡಿಕೊಂಡಿರುವ ಫೋಟೋಗಳನ್ನು ಸಮೀರಾ ರೆಡ್ಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ವೈರಲ್ ಆಗಿವೆ.

    ಫೋಟೋ ಜೊತೆಗೆ ಕೆಲ ಸಾಲುಗಳನ್ನು ಬರೆದುಕೊಂಡಿರುವ ಸಮೀರಾ ರೆಡ್ಡಿ, ದೀಪಾವಳಿ ವೇಳೆಗೆ ನಾನು ಮತ್ತಷ್ಟು ಫಿಟ್ ಆಗುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ತಮ್ಮ ಡಯಟ್ ಪ್ಲ್ಯಾನ್ ಸಹ ಹಂಚಿಕೊಂಡಿದ್ದಾರೆ.

    ಕೆಲವೊಮ್ಮೆ ಫೋಟೋಗಳು ಮೋಸ ಮಾಡುತ್ತೆ. ಆದ್ರೆ ಇವತ್ತಿನ ಫೋಟೋಗಳು ಸತ್ಯ. ನಾನು ಕಳೆದ ಕೆಲ ದಿನಗಳಿಂದ ವರ್ಕೌಟ್ ಮಾಡ್ತಿದ್ದೀನಿ. ಅದರ ರಿಸಲ್ಟ್ ಸಿಕ್ಕಿದೆ. ಆದ್ರೂ ಹೊಟ್ಟೆ ಭಾಗದಲ್ಲಿ ಬೊಜ್ಜು ಇದೆ. ಕೆಲ ತಿಂಗಳಲ್ಲೇ ಇದು ಕರಗುತ್ತೆ. ನಾನು ಹಳೆಯ ಫೋಟೋ ನೋಡಿದಾಗ ವರ್ಕೌಟ್ ಮಾಡೋಕೆ ಸ್ಪೂರ್ತಿ ಸಿಗುತ್ತೆ. ಹಾಗಾಗಿ ಹೆಚ್ಚು ಹೆಚ್ಚು ವರ್ಕೌಟ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ಇದುವರೆಗೂ ಸೇರಿ ಕೆಲ ಇಂಚು ಕಡಿಮೆ ಆಗಿದೆ. ಶುಗರ್ ಕಂಟ್ರೋಲ್, ವಾರಕ್ಕೆ ನಾಲ್ಕು ಬಾರಿ ಯೋಗ, ಬ್ಯಾಡ್ಮಿಂಟನ್ ಆಟ ನನ್ನ ಪ್ಲಾನ್. ಇದೇ ಲೈಫ್‍ಸ್ಟೈಲ್ ಮುಂದೆಯೂ ಫಾಲೋ ಮಾಡೋ ಉತ್ಸಾಹ ನನ್ನಲಿದೆ. ದೀಪಾವಳಿ ವೇಳೆಗೆ ಮೊದಲಿನಂತಾಗೋದು ನನ್ನ ಗುರಿ. ನಿಮ್ಮ ಅಭಿಪ್ರಾಯ ಏನು? ಅಂತ ಕೇಳಿದ್ದಾರೆ.

     

    View this post on Instagram

     

    A post shared by Sameera Reddy (@reddysameera)

    ಸಮೀರಾ ರೆಡ್ಡಿ 2013ರಲ್ಲಿ ತೆರೆಕಂಡಿದ್ದ ವರದನಾಯಕ ಸಿನಿಮಾದಲ್ಲಿ ನಟಿಸಿದ್ದರು. 2014ರಲ್ಲಿ ಅಕ್ಷಯ್ ವರ್ದ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿ ಬಣ್ಣದ ಲೋಕದಿಂದ ದೂರ ಉಳಿದಿದ್ದಾರೆ. ಸಮೀರಾ ರೆಡ್ಡಿ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿನ ತಾಯಿ.

     

    View this post on Instagram

     

    A post shared by Sameera Reddy (@reddysameera)

  • ಸೆಲ್ಫ್ ಕ್ವಾರಂಟೈನ್ ಟೈಮ್ – ಮುದ್ದು ಮಕ್ಕಳ ಜೊತೆ ಸಮೀರಾ ರೆಡ್ಡಿ ಮಸ್ತಿ

    ಸೆಲ್ಫ್ ಕ್ವಾರಂಟೈನ್ ಟೈಮ್ – ಮುದ್ದು ಮಕ್ಕಳ ಜೊತೆ ಸಮೀರಾ ರೆಡ್ಡಿ ಮಸ್ತಿ

    ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಸದ್ಯ ಲಾಕ್‍ಡೌನ್ ಸಮಯವನ್ನು ತಮ್ಮ ಮುದ್ದು ಮಕ್ಕಳೊಂದಿಗೆ ಕಳೆಯುತ್ತಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಸಮೀರಾ ಹಂಚಿಕೊಂಡ ವಿಡಿಯೋ ಹಾಗೂ ಫೋಟೋಗಳು ಅಭಿಮಾನಿಗಳ ಮನ ಗೆದ್ದಿದೆ.

    ಲಾಕ್‍ಡೌನ್ ಸಮಯವನ್ನು ತಮ್ಮ ಮಕ್ಕಳ ಲಾಲನೆ, ಪಾಲನೆಯಲ್ಲಿ ಸಮೀರಾ ಕಳೆಯುತ್ತಿದ್ದಾರೆ. ಈ ಸೆಲ್ಫ್ ಕ್ವಾರೆಂಟೈನ್ ಸಮಯದಲ್ಲಿ ಮಕ್ಕಳು ಹಾಗೂ ಪತ್ನಿ ಜೊತೆ ಕಳೆದಿರುವ ಕ್ಷಣಗಳ ವಿಡಿಯೋ ಹಾಗೂ ಫೋಟೋಗಳನ್ನು ಪೋಸ್ಟ್ ಮಾಡಿ ಮನೆಯಲ್ಲಿಯೇ ಇರಿ, ಆರೋಗ್ಯವಾಗಿರಿ ಎಂದು ಸಮೀರಾ ಖುಷಿ ಹಂಚಿಕೊಳ್ಳುತ್ತಿದ್ದಾರೆ.

    https://www.instagram.com/p/B-L4lJdnPXG/

    ಮುದ್ದು ಮಕ್ಕಳೊಂದಿಗೆ ತಾವು ಆಟವಾಡುತ್ತಿರುವುದು, ಮಕ್ಕಳ ತುಂಟಾಟ, ಪತಿ ಮಕ್ಕಳ ಜೊತೆಗೆ ಕಳೆಯುತ್ತಿರುವ ಕ್ಷಣಗಳ ವಿಡಿಯೋ, ಫೋಟೋಗಳನ್ನು ಸಮೀರಾ ಒಂದರ ಮೇಲೊಂದು ಹಂಚಿಕೊಳ್ಳುತ್ತಿದ್ದಾರೆ. ಈ ಮುದ್ದಾದ ಕುಟುಂಬ ಫೋಟೋ, ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

    https://www.instagram.com/p/B-EKo5MnXk1/

    ಕೆಲ ತಿಂಗಳ ಹಿಂದೆ ಸಮೀರಾ ತಮ್ಮ ಮಗುವಿನೊಂದಿಗೆ ಮುಳ್ಳಯ್ಯನಗಿರಿ ಬೆಟ್ಟದ ಮೇಲಿರುವ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ವಿಡಿಯೋದಲ್ಲಿ ಮುಳ್ಳಯ್ಯಗಿರಿ ಬೆಟ್ಟಕ್ಕೆ ಭೇಟಿ ನೀಡಿದ್ದು, ಬೆಟ್ಟದ ಕೆಲ ಮೆಟ್ಟಿಲುಗಳನ್ನು ಏರಲು ಪ್ರಯತ್ನ ಮಾಡಿದೆ. ಆದರೆ ಮುಂದೆ 500ಕ್ಕೂ ಹೆಚ್ಚು ಮೆಟ್ಟಿಲು ಇದ್ದು, ಮಗುವಿನೊಂದಿಗೆ ಬೆಟ್ಟ ಏರಲು ಆಗುತ್ತಿಲ್ಲ. ಇಲ್ಲಿಗೆ ನಿಲ್ಲಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು.

    https://www.instagram.com/p/B-bwyUgnFdD/

    6,300 ಅಡಿ ಎತ್ತರವಿರುವ ಮುಳ್ಳಯ್ಯನಗಿರಿ ಬೆಟ್ಟ ಕರ್ನಾಟಕದ ಎತ್ತರ ಬೆಟ್ಟದವಾಗಿದೆ. ತಾಯಿಯಾಗುವ ಮಹಿಳೆಯರಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಸಮೀರಾ ಅವರು ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾಗಿ ಹೇಳಿದ್ದರು. ಅಲ್ಲದೇ ಅವರ ಪೋಸ್ಟ್ ಗಳಿಗೆ ಅಭಿಮಾನಿಗಳು ನೀಡುತ್ತಿರುವ ಪ್ರತಿಕ್ರಿಯೆಗಳು ಸಕಾರಾತ್ಮಕ ಭಾವನೆಯನ್ನು ಮೂಡಿಸುತ್ತಿದ್ದು, ಇದರಿಂದ ರೋಮಾಂಚನಗೊಂಡಿದ್ದೇನೆ ಎಂದಿದ್ದರು.

  • ಗಂಡಸರಿಗೆ ಸ್ತನ್ಯಪಾನದ ಮಹತ್ವ ತಿಳಿಸಿದ ಸಮೀರಾ ರೆಡ್ಡಿ

    ಗಂಡಸರಿಗೆ ಸ್ತನ್ಯಪಾನದ ಮಹತ್ವ ತಿಳಿಸಿದ ಸಮೀರಾ ರೆಡ್ಡಿ

    ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಎರಡನೇ ಬಾರಿಗೆ ತಾಯಿಯಾಗಿದ್ದಾರೆ. ಸದ್ಯ ಈಗ ಅವರು ‘ವರ್ಲ್ಡ್ ಬ್ರೆಸ್ಟ್ ಫೀಡಿಂಗ್ ವಿಕ್’ನಲ್ಲಿ ತಮ್ಮ ಮಗಳ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವೊಂದನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಸಮೀರಾ ‘ವರ್ಲ್ಡ್ ಬ್ರೆಸ್ಟ್ ಫೀಡಿಂಗ್ ವಿಕ್’ ಇರುವ ಹಿನ್ನೆಲೆಯಲ್ಲಿ ಮಗಳ ಜೊತೆಯಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ವಿಡಿಯೋ ಕೂಡ ಹಂಚಿಕೊಂಡಿದ್ದು, ಈ ವಿಡಿಯೋ ಮೂಲಕ ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶವನ್ನು ರವಾನಿಸಿದ್ದಾರೆ.

     

    View this post on Instagram

     

    New dads & loved ones listen up! Its World Breast feeding week and this post is for you to know that you can be the biggest support and encouragement to a new mom! A mother may be depressed, lacking in confidence, worried, or stressed and it affects breastfeeding. These factors do not directly affect her milk production, but can interfere with the way in which she responds to her baby. This can result in the baby taking less milk, and failing to stimulate milk production. So be there for her . ❤️ Understanding the pressure on her physically and emotionally is the best thing you can do. Nothing like feeling loved at such an overwhelming time. ???????? . I would also like to give a shoutout to moms who have struggled with low milk production . This could happen due to a pathological reason including endocrine problems or a host of other factors .A few mothers have a physiological low breast-milk production, for no apparent reason, and production does not increase when the breastfeeding technique and pattern improve. There is no reason to shame them or make them feel any pressure in not being able to BF. we need to support all mothers and show love and respect ????. . #worldbreastfeedingweek2019 . @WABA_global @who @unicefindia

    A post shared by Sameera Reddy (@reddysameera) on

    ಪೋಸ್ಟ್ ನಲ್ಲಿ ಏನಿದೆ?
    “ಮೊದಲ ಬಾರಿಗೆ ತಂದೆಯಾದವರು ನನ್ನ ಮಾತು ಕೇಳಿ. ಇದು ವಿಶ್ವ ಸ್ತನ್ಯಪಾನ ವಾರವಾಗಿದ್ದು, ನೀವು ಮಗುವಿನ ತಾಯಿಯ ಜೊತೆಯಿರುವವರು ಎಂದು ಹೇಳಲು ನಾನು ಇದನ್ನು ಪೋಸ್ಟ್ ಮಾಡಿದ್ದೇನೆ.

    ತಾಯಿ ಕೂಡ ಖಿನ್ನತೆಗೆ ಒಳಗಾಗುತ್ತಾರೆ. ಅವರಿಗೂ ಆತ್ಮವಿಶ್ವಾಸ ಕಡಿಮೆ ಆಗುತ್ತದೆ. ಒತ್ತಡ ಹೆಚ್ಚಾಗುತ್ತದೆ. ಇದು ಸ್ತನ್ಯಪಾನದ ಮೇಲೆ ಪ್ರಭಾವ ಬೀರುತ್ತದೆ. ಈ ಅಂಶಗಳು ತಾಯಿಯೊಳಗಿನ ಹಾಲಿನ ಉತ್ಪತ್ತಿ ಮೇಲೆ ನೇರವಾಗಿ ಪರಿಣಾಮ ಬೀರುವುದಿಲ್ಲ. ಆದರೆ ಮಗುವಿಗೆ ಆಕೆಯ ಪ್ರತಿಕ್ರಿಯೆ ಬದಲಾಯಿಸಬಹುದು. ಇದರ ಪರಿಣಾಮವೇನೆಂದರೆ ಮಗು ಕಡಿಮೆ ಹಾಲು ಕುಡಿಯುತ್ತದೆ ಮತ್ತು ಹಾಲು ಉತ್ಪತ್ತಿಯಾಗೋ ಸಮಸ್ಯೆ ಕಾಡಬಹುದು. ಹಾಗಾಗಿ ನಿಮ್ಮ ಪತ್ನಿಯ ಜೊತೆಯಲ್ಲೇ ಇರಿ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    #worldbreastfeedingweek August 1st to 7th #awareness #breastfeeding #newmom #keepingitreal @waba_global @who @unicefindia #wbw2019

    A post shared by Sameera Reddy (@reddysameera) on

    ಇತ್ತೀಚೆಗೆ ಸಮೀರಾ ಇನ್‍ಸ್ಟಾಗ್ರಾಂನಲ್ಲಿ ಪುತ್ರನ ಜೊತೆ ಪುತ್ರಿ ಹೆಸರುಳ್ಳ ಬೋರ್ಡ್ ಹಿಡಿದಿರುವ ಫೋಟೋ ಹಂಚಿಕೊಂಡಿದ್ದರು. ಮಗಳಿಗೆ `ನಾಯರಾ’ ಹೆಸರನ್ನು ಸಮೀರಾ ರೆಡ್ಡಿ ಕುಟುಂಬಸ್ಥರು ಅಂತಿಮಗೊಳಿಸಿದ್ದಾರೆ. ಜುಲೈ 12ರಂದು ಪುತ್ರಿಯ ಪುಟ್ಟ ಕೈ ಹಿಡಿದ ಫೋಟೋ ಹಾಕಿ ಇಂದು ಬೆಳಗ್ಗೆ ನಮ್ಮ ಮನೆಗೆ ಪುಟ್ಟ ದೇವತೆಯ ಆಗಮನವಾಗಿದೆ ಎಂದು ತಿಳಿಸಿದ್ದರು.

  • ಸಮೀರಾ ಮನೆಯ ಪುಟ್ಟ ಲೇಡಿಯ ಹೆಸ್ರು ರಿವೀಲ್

    ಸಮೀರಾ ಮನೆಯ ಪುಟ್ಟ ಲೇಡಿಯ ಹೆಸ್ರು ರಿವೀಲ್

    ಮುಂಬೈ: ಮದುವೆ ಬಳಿಕ ಬಣ್ಣದ ಬದುಕಿನಿಂದ ದೂರ ಉಳಿದುಕೊಂಡಿರುವ ನಟಿ ಸಮೀರಾ ರೆಡ್ಡಿ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಖಾಸಗಿ ಬದುಕಿನ ಪ್ರತಿಯೊಂದು ಕ್ಷಣಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುವ ಸಮೀರಾ ರೆಡ್ಡಿ ಎರಡನೇ ಮಗುವಿಗೆ ತಾಯಿಯಾಗಿದ್ದಾರೆ. ಈಗ ತಮ್ಮ ಮನೆಗೆ ಬಂದ ಪುಟ್ಟ ಲೇಡಿಯ ಹೆಸರನ್ನು ಇನ್‍ಸ್ಟಾಗ್ರಾಮ್‍ನಲ್ಲಿ ರಿವೀಲ್ ಮಾಡಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ ಪುತ್ರನ ಜೊತೆ ಪುತ್ರಿ ಹೆಸರುಳ್ಳ ಬೋರ್ಡ್ ಹಿಡಿದಿರುವ ಫೋಟೋ ಹಂಚಿಕೊಂಡಿದ್ದಾರೆ. ಮಗಳಿಗೆ ‘ನಾಯರಾ’ ಹೆಸರನ್ನು ಸಮೀರಾ ರೆಡ್ಡಿ ಕುಟುಂಬಸ್ಥರು ಅಂತಿಮಗೊಳಿಸಿದ್ದಾರೆ. ಜುಲೈ 12ರಂದು ಪುತ್ರಿಯ ಪುಟ್ಟ ಕೈ ಹಿಡಿದ ಫೋಟೋ ಹಾಕಿ ಇಂದು ಬೆಳಗ್ಗೆ ನಮ್ಮ ಮನೆಗೆ ಪುಟ್ಟ ದೇವತೆಯ ಆಗಮನವಾಗಿದೆ ಎಂದು ತಿಳಿಸಿದ್ದರು.

    ಗರ್ಭಿಣಿಯಾಗಿದ್ದ ವೇಳೆ ಅಂಡರ್ ವಾಟರ್ ನಲ್ಲಿ ಫೋಟೋಶೂಟ್ ಮಾಡಿಸುವ ನೆಟ್ಟಿಗರನ್ನು ಚಕಿತಗೊಳಿಸಿದ್ದರು. ಇನ್ನು ಬಾಲಿಯಲ್ಲಿ ಕುಟುಂಬದೊಂದಿಗೆ ಸಮಯ ಕಳೆದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿತ್ತು. ಪ್ರೆಗ್ನಸಿ ಸಮಯದಲ್ಲಿ ಬಿಕನಿ ಧರಿಸಿ ತೆಗೆದಿದ್ದ ಫೋಟೋ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿತ್ತು.

    https://www.instagram.com/p/B0kk99XnC6w/

    https://www.instagram.com/p/B0X140Qnqa_/

  • ಮಗಳ ಫೋಟೋವನ್ನು ರಿವೀಲ್ ಮಾಡಿದ ನಟಿ ಸಮೀರಾ

    ಮಗಳ ಫೋಟೋವನ್ನು ರಿವೀಲ್ ಮಾಡಿದ ನಟಿ ಸಮೀರಾ

    ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಶುಕ್ರವಾರ ಬೆಳಗ್ಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಅಂದು ಅವರು ತಮ್ಮ ಮಗಳ ಫೋಟೋವನ್ನು ರಿವೀಲ್ ಮಾಡಿರಲಿಲ್ಲ. ಆದರೆ ಇಂದು ಸಮೀರಾ ತಮ್ಮ ಮಗಳ ಫೋಟೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

    ಸಮೀರಾ ರೆಡ್ಡಿ ತನ್ನ ಮಗಳನ್ನು ತೋಳಿನಲ್ಲಿ ಎತ್ತಿಕೊಂಡಿರುವ ಫೋಟೋವನ್ನು ಕ್ಲಿಕ್ಕಿಸಿ ಅದನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಪೋಸ್ಟ್ ಗೆ ಇದುವರೆಗೂ 39 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು, ಅಭಿಮಾನಿಗಳು ಅವರಿಗೆ ಶುಭಾಶಯ ಕೋರುತ್ತಿದ್ದಾರೆ.

    ಶುಕ್ರವಾರ ಬೆಳಗ್ಗೆ ಸಮೀರಾ ರೆಡ್ಡಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಸಮೀರಾ ತನ್ನ ಇನ್‍ಸ್ಟಾಗ್ರಾಂನಲ್ಲಿ ಮಗುವಿನ ಕೈ ಹಿಡಿದುಕೊಂಡಿರುವ ಫೋಟೋವನ್ನು ಹಾಕಿ ಅದಕ್ಕೆ, “ನಮ್ಮ ಮನೆಗೆ ಬೆಳಗ್ಗೆ ಏಂಜೆಲ್ ಆಗಮಿಸಿದ್ದಾಳೆ. ನನ್ನ ಹೆಣ್ಣು ಮಗು. ನಿಮ್ಮ ಪ್ರೀತಿ ಹಾಗೂ ಆಶೀರ್ವಾದಕ್ಕೆ ಧನ್ಯವಾದಗಳು” ಎಂದು ಬರೆದು ಪೋಸ್ಟ್ ಮಾಡಿದ್ದರು.

     

    View this post on Instagram

     

    Our little angel came this morning ????My Baby girl ! Thank you for all the love and blessings ❤️???????? #blessed

    A post shared by Sameera Reddy (@reddysameera) on

    ಇತ್ತೀಚೆಗಷ್ಟೇ ಅಂದರೆ 9ನೇ ತಿಂಗಳಿನಲ್ಲಿ ಸಮೀರಾ ಬಿಕಿನಿ ಧರಿಸಿ ಅಂಡರ್ ವಾಟರ್ ಫೋಟೋಶೂಟ್ ಮಾಡಿಸಿದ್ದರು. ಅಲ್ಲದೆ ಆ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಕೆಲವರು ಈ ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಸಮೀರಾರನ್ನು ಟ್ರೋಲ್ ಮಾಡಿದ್ದರು.

    ಸಮೀರಾ ರೆಡ್ಡಿ 2014ರಲ್ಲಿ ಉದ್ಯಮಿ ಅಕ್ಷಯ್ ವಾರ್ದೆ ಅವರನ್ನು ಮದುವೆಯಾಗಿದ್ದರು. ಸಮೀರಾ ರೆಡ್ಡಿಗೆ ಈಗಾಗಲೇ ಓರ್ವ ಪುತ್ರನಿದ್ದಾನೆ. ಸಮೀರಾ ರೆಡ್ಡಿ ಬಹುಭಾಷಾ ನಟಿಯಾಗಿದ್ದು, ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ಜೊತೆ ನಟಿಸಿದ್ದಾರೆ. ಅಲ್ಲದೇ ಕನ್ನಡದಲ್ಲೂ ಕಿಚ್ಚ ಸುದೀಪ್ ಅವರ ಜೊತೆ `ವರದನಾಯಕ’ ಚಿತ್ರದಲ್ಲಿ ನಟಿಸಿದ್ದಾರೆ. ಸಮೀರಾ 2014ರಲ್ಲಿ ಮದುವೆ ಆದ ಬಳಿಕ ಚಿತ್ರರಂಗದಿಂದ ದೂರವಿದ್ದಾರೆ.

  • ಎರಡನೇ ಬಾರಿ ತಾಯಿಯಾದ ಸಮೀರಾ – ಮಗುವಿನ ಕೈ ಹಿಡಿದುಕೊಂಡ ಫೋಟೋ ಪೋಸ್ಟ್

    ಎರಡನೇ ಬಾರಿ ತಾಯಿಯಾದ ಸಮೀರಾ – ಮಗುವಿನ ಕೈ ಹಿಡಿದುಕೊಂಡ ಫೋಟೋ ಪೋಸ್ಟ್

    ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಎರಡನೇ ಬಾರಿ ತಾಯಿಯಾಗಿದ್ದು, ಇಂದು ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಇಂದು ಬೆಳಗ್ಗೆ ಮುಂಬೈನ ಬೀಮ್ಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಸಮೀರಾ ಜನ್ಮ ನೀಡಿದ್ದಾರೆ. ಈ ಬಗ್ಗೆ ಸ್ವತಃ ಸಮೀರಾ ತನ್ನ ಇನ್‍ಸ್ಟಾಗ್ರಾಂನಲ್ಲಿ ಫೋಟೋ ಹಾಕುವ ಮೂಲಕ ಅಭಿಮಾನಿಗಳ ಜೊತೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

    ಮಗುವಿನ ಕೈ ಹಿಡಿದುಕೊಂಡಿರುವ ಫೋಟೋವನ್ನು ಹಾಕಿ ಅದಕ್ಕೆ, “ನಮ್ಮ ಮನೆಗೆ ಬೆಳಗ್ಗೆ ಏಂಜೆಲ್ ಆಗಮಿಸಿದ್ದಾಳೆ . ನನ್ನ ಹೆಣ್ಣು ಮಗು. ನಿಮ್ಮ ಪ್ರೀತಿ ಹಾಗೂ ಆಶೀರ್ವಾದಕ್ಕೆ ಧನ್ಯವಾದಗಳು” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    Our little angel came this morning ????My Baby girl ! Thank you for all the love and blessings ❤️???????? #blessed

    A post shared by Sameera Reddy (@reddysameera) on

    ಇತ್ತೀಚೆಗಷ್ಟೇ ಅಂದರೆ 9ನೇ ತಿಂಗಳಿನಲ್ಲಿ ಸಮೀರಾ ಬಿಕಿನಿ ಧರಿಸಿ ಅಂಡರ್ ವಾಟರ್ ಫೋಟೋಶೂಟ್ ಮಾಡಿಸಿದ್ದರು. ಅಲ್ಲದೆ ಆ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಕೆಲವರು ಈ ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಸಮೀರಾರನ್ನು ಟ್ರೋಲ್ ಮಾಡಿದ್ದಾರೆ.

    ಸಮೀರಾ ರೆಡ್ಡಿ 2014ರಲ್ಲಿ ಉದ್ಯಮಿ ಅಕ್ಷಯ್ ವಾರ್ದೆ ಅವರನ್ನು ಮದುವೆಯಾಗಿದ್ದರು. ಸಮೀರಾ ರೆಡ್ಡಿಗೆ ಈಗಾಗಲೇ ಓರ್ವ ಪುತ್ರನಿದ್ದಾನೆ. ಸಮೀರಾ ರೆಡ್ಡಿ ಬಹುಭಾಷಾ ನಟಿಯಾಗಿದ್ದು, ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ಜೊತೆ ನಟಿಸಿದ್ದಾರೆ. ಅಲ್ಲದೇ ಕನ್ನಡದಲ್ಲೂ ಕಿಚ್ಚ ಸುದೀಪ್ ಅವರ ಜೊತೆ `ವರದನಾಯಕ’ ಚಿತ್ರದಲ್ಲಿ ನಟಿಸಿದ್ದಾರೆ. ಸಮೀರಾ 2014ರಲ್ಲಿ ಮದುವೆ ಆದ ಬಳಿಕ ಚಿತ್ರರಂಗದಿಂದ ದೂರವಿದ್ದಾರೆ.

  • ತುಂಬು ಗರ್ಭಿಣಿ ಸಮೀರಾರಿಂದ ಅಂಡರ್‌ವಾಟರ್ ಫೋಟೋಶೂಟ್

    ತುಂಬು ಗರ್ಭಿಣಿ ಸಮೀರಾರಿಂದ ಅಂಡರ್‌ವಾಟರ್ ಫೋಟೋಶೂಟ್

    ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಈಗ ತುಂಬು ಗರ್ಭಿಣಿಯಾಗಿದ್ದು, ಅವರು ಈಗ ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಸಮೀರಾರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಇತ್ತೀಚೆಗೆ ಸಮೀರಾ ಅಂಡರ್‌ವಾಟರ್ ಫೋಟೋಶೂಟ್ ಮಾಡಿಸಿ ಆ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಶೂಟನ್ನು ಪ್ರೇರಣಾ ಬೇಯೋಸ್ ಅವರಿಂದ ಮಾಡಿಸಿದ್ದು, ಸಮೀರಾ ಅಂಡರ್‌ವಾಟರ್ ಫೋಟೋಶೂಟ್‍ನ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

    ಈ ಬಗ್ಗೆ ಮಾತನಾಡಿದ ಸಮೀರಾ, “ನಾನು ಈ ಫೋಟೋಶೂಟ್ ಮಾಡಿಸುವಾಗ ತುಂಬಾ ಆನಂದಿಸಿದ್ದೇನೆ. ನಾನು ನನ್ನ ಜೀವನ ವೃತ್ತಿಯಲ್ಲಿ ಮಾಡಿಸಿದ ರೋಮಾಂಚಕ ಫೋಟೋಶೂಟ್‍ಗಳಲ್ಲಿ ಇದು ಒಂದಾಗಿದೆ. ನಾನು ಕೆಲವೇ ಸಮಯದಲ್ಲಿ ಈ ಫೋಟೋಶೂಟ್ ಮಾಡಿಸಿದ್ದೇನೆ. ಇದು ಒಳ್ಳೆಯ ಅನುಭವ” ಎಂದು ಹೇಳಿದ್ದಾರೆ.

    ಸಮೀರಾ ಫೋಟೋ ನೋಡಿ ಕೆಲವರು, ನೀವು ಈ ಫೋಟೋದಲ್ಲಿ ಸೂಪರ್ ಕೂಲ್ ಆಗಿ ಕಾಣಿಸುತ್ತಿದ್ದೀರಾ ಎಂದು ನಿಮಗೆ ಅನಿಸಿರಬಹುದು. ಆದರೆ ಪ್ರೆಗ್ನೆನ್ಸಿ ಸಮಯದಲ್ಲಿ ಈ ರೀತಿ ಫೋಟೋಶೂಟ್ ಮಾಡಿಸುವ ಅವಶ್ಯಕತೆ ಆದರೂ ಏನಿತ್ತು. ದಯವಿಟ್ಟು ಹುಷಾರಾಗಿರಿ. ಮಕ್ಕಳು ದೇವರು ಕೊಟ್ಟ ಉಡುಗೊರೆ ಎಂದು ಕಾಮೆಂಟ್ ಮಾಡಿದ್ದಾರೆ.

    ಮತ್ತೆ ಕೆಲವು ಅಭಿಮಾನಿಗಳು, ಗರ್ಭಿಣಿಯಾಗಿರುವ ಸಮಯದಲ್ಲಿ ಈ ರೀತಿ ಫೋಟೋಶೂಟ್ ಮಾಡಿಸುವುದು ಸರಿಯಲ್ಲ ಎಂದು ಕಾಮೆಂಟ್ ಮಾಡಿದ್ದರೆ, ಮತ್ತೆ ಕೆಲವರು ನಿಮಗೆ ತಲೆ ಕೆಟ್ಟಿದ್ದೀಯಾ ಎಂದು ಕಮೆಂಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.

     

    View this post on Instagram

     

    I wanted to celebrate the beauty of the the bump in my 9 th month . At a time when we feel the most vulnerable, tired , scared, excited and at our biggest and most beautiful!???? I look forward to sharing it with you guys and I know the positivity will resonate because we all are at different phases of our lives with unique sizes and we need to love and accept ourselves at every level #imperfectlyperfect . @luminousdeep you have been outstanding and you are super talented ! Thnk you ❤️???? #bts ???? @thelensofsk @jwmarriottjuhu . . #positivebodyimage #socialforgood #loveyourself #nofilter #nophotoshop #natural #water #keepingitreal #acceptance #body #woman #underwater #picoftheday #underwaterphotography #maternityshoot #pool #maternityphotography #bump #bumpstyle #pregnantbump #positivevibes #pregnancy #pregnant #pregnancyphotography #preggo #bikini

    A post shared by Sameera Reddy (@reddysameera) on

    ಸಮೀರಾ ಅವರ ಈ ಫೋಟೋಗಳಿಗೆ ಯಾವುದೇ ಫಿಲ್ಟರ್ ಅಥವಾ ಫೋಟೋಶಾಪ್ ಮಾಡಲಿಲ್ಲ. ಈ ಫೋಟೋಗಳು ಸುಂದರವಾಗಿ ಬಂದಿದ್ದು, ಇದರಿಂದ ಸಮೀರಾ ಖುಷಿಯಾಗಿದ್ದಾರೆ. ಆದರೆ ಅವರ ಅಭಿಮಾನಿಗಳು ಈ ಫೋಟೋ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಮೀರಾ ರೆಡ್ಡಿ 2014ರಲ್ಲಿ ಉದ್ಯಮಿ ಅಕ್ಷಯ್ ವಾರ್ದೆ ಅವರನ್ನು ಮದುವೆಯಾಗಿದ್ದರು. ಸಮೀರಾ ರೆಡ್ಡಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಈಗ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸಮೀರಾ ರೆಡ್ಡಿ ಬಹುಭಾಷಾ ನಟಿಯಾಗಿದ್ದು, ತೆಲುಗಿನಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಅವರ ಜೊತೆ ನಟಿಸಿದ್ದಾರೆ. ಅಲ್ಲದೇ ಕನ್ನಡದಲ್ಲೂ ಕಿಚ್ಚ ಸುದೀಪ್ ಅವರ ಜೊತೆ `ವರದನಾಯಕ’ ಚಿತ್ರದಲ್ಲಿ ನಟಿಸಿದ್ದಾರೆ. ಸಮೀರಾ 2014ರಲ್ಲಿ ಮದುವೆ ಆದ ಬಳಿಕ ಚಿತ್ರರಂಗದಿಂದ ದೂರ ಇದ್ದಾರೆ.

  • ಟ್ರೋಲ್ ಮಾಡೋರಿಗೆ ಬೋಲ್ಡ್ ಫೋಟೋ ಮೂಲಕ ಸಮೀರಾ ಖಡಕ್ ಉತ್ತರ

    ಟ್ರೋಲ್ ಮಾಡೋರಿಗೆ ಬೋಲ್ಡ್ ಫೋಟೋ ಮೂಲಕ ಸಮೀರಾ ಖಡಕ್ ಉತ್ತರ

    ಮುಂಬೈ: ಬಹುಭಾಷಾ ನಟಿ ಸಮೀರಾ ರೆಡ್ಡಿ ಈಗ 8 ತಿಂಗಳ ಗರ್ಭಿಣಿಯಾಗಿದ್ದು, ತಮ್ಮ ಬೇಬಿ ಬಂಪ್ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇದನ್ನು ನೋಡಿ ಜನರು ಟ್ರೋಲ್ ಮಾಡುತ್ತಿದ್ದು, ಈಗ ಸಮೀರಾ ಬೋಲ್ಡ್ ಫೋಟೋ ಹಂಚಿಕೊಳ್ಳುವ ಮೂಲಕ ಟ್ರೋಲ್ ಮಾಡೋರಿಗೆ ಖಡಕ್ ಉತ್ತರ ನೀಡಿದ್ದಾರೆ.

    ಸಮೀರಾ ತಮ್ಮ ಪತಿ ಅಕ್ಷಯ್ ವಾರ್ದೆ ಹಾಗೂ ಮಗ ಹಂಸ್ ಜೊತೆ ಗೋವಾದಲ್ಲಿ ರಜೆಯನ್ನು ಕಳೆಯುತ್ತಿದ್ದಾರೆ. ಸಮೀರಾ ತಮ್ಮ ಮಗನ ಜೊತೆ ಸಮುದ್ರದಲ್ಲಿ ಕಾಲ ಕಳೆಯುತ್ತಿರುವ ಫೋಟೋ ವೈರಲ್ ಆಗಿದೆ. ಈ ಫೋಟೋ ನೋಡಿ ಜನರು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

    ಟ್ರೋಲ್‍ಗಳಿಗೆ ಸಮೀರಾ ಬೋಲ್ಡ್ ಫೋಟೋ ಮೂಲಕ ಖಡಕ್ ಆಗಿ ಉತ್ತರಿಸಿದ್ದಾರೆ. ಸಮೀರಾ ಬಿಕಿನಿಯಲ್ಲಿ ಫೋಟೋ ಹಾಕಿ ಅದಕ್ಕೆ, ಯಾರು ಆಳವಿಲ್ಲದ ತುದಿಯಲ್ಲಿ ಈಜುತ್ತಾರೆಯೋ ಅವರು ವ್ಯಕ್ತಿಯ ಆತ್ಮದ ಆಳವನ್ನು ತಿಳಿದಿರುವುದಿಲ್ಲ. ನಾನು ನನ್ನ ಬೇಬಿ ಬಂಪ್ ಎಂಜಾಯ್ ಮಾಡುತ್ತಿರುವುದರಿಂದ ಅನಾನುಕೂಲ ಆದವರಿಗೆ ಇದು ನನ್ನ ಉತ್ತರ ಎಂದು ಬರೆದು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.

    ಈ ಹಿಂದೆ ಸಮೀರಾ ಗರ್ಭಿಣಿ ಆದ ಕಾರಣ ಅವರ ತೂಕ ಹೆಚ್ಚಾಗಿದೆ ಎಂದು ಟ್ರೋಲ್ ಮಾಡುತ್ತಿದ್ದರು. ಆಗ ಸಮೀರಾ ನೀವು ಕೂಡ ನಿಮ್ಮ ತಾಯಿಯ ಗರ್ಭದಿಂದ ಜನಿಸಿದ್ದೀರಾ. ಆಗ ನಿಮ್ಮ ತಾಯಿಯ ದೇಹ ಪರ್ಫೆಕ್ಟ್ ಆಗಿತ್ತಾ? ನೀವು ಜನ್ಮ ಪಡೆದ ನಂತರ ನಿಮ್ಮ ತಾಯಿಯ ಬಳಿ ಈ ರೀತಿ ಪ್ರಶ್ನೆ ಕೇಳಿದ್ದೀರಾ? ಈಗಲೂ ನಿಮ್ಮ ತಾಯಿ ಹಾಟ್ ಆಗಿದ್ದಾರಾ ಎಂದು ಪ್ರಶ್ನಿಸಿದ್ದರು. ಅಲ್ಲದೆ ಇನ್ನೊಬ್ಬರ ದೇಹದ ಬಗ್ಗೆ ಮಾತನಾಡುವುದು ಸರಿಯಲ್ಲ. ಪ್ರಗ್ನೆನ್ಸಿ ಎನ್ನುವುದು ನೈಸರ್ಗಿಕ ಪ್ರಕ್ರಿಯೆ. ಯಾರೂ ಕೂಡ ಕರೀನಾ ಕಪೂರ್ ರಂತೆ ಮಗುವಿಗೆ ಜನ್ಮ ನೀಡಿ ಹಾಟ್ ಆಗಿ ಕಾಣಿಸಲು ಸಾಧ್ಯವಿಲ್ಲ ಎಂದು ಹೇಳಿ ಟ್ರೋಲರ್ಸ್‍ಗೆ ಚಳಿ ಬಿಡಿಸಿದ್ದರು.

    ಸಮೀರಾ ರೆಡ್ಡಿ 2014ರಲ್ಲಿ ಉದ್ಯಮಿ ಅಕ್ಷಯ್ ವಾರ್ದೆ ಅವರನ್ನು ಮದುವೆಯಾಗಿದ್ದರು. ಸಮೀರಾ ರೆಡ್ಡಿಗೆ ಈಗಾಗಲೇ ಒಂದು ಗಂಡು ಮಗು ಇದ್ದು, ಈಗ ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

  • ವರದನಾಯಕಿಯ ಬೇಬಿ ಬಂಪ್ ಫೋಟೋ ವೈರಲ್

    ವರದನಾಯಕಿಯ ಬೇಬಿ ಬಂಪ್ ಫೋಟೋ ವೈರಲ್

    ಬೆಂಗಳೂರು: ವರದನಾಯಕ ಸಿನಿಮಾದ ನಾಯಕಿ ಸಮೀರಾ ರೆಡ್ಡಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಶುಕ್ರವಾರ ತಮ್ಮ ಬೇಬಿ ಬಂಪ್ ಫೋಟೋ ಅಪ್ಲೋಡ್ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಶುಕ್ರವಾರ ಮೂರು ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿರುವ ಸಮೀರಾ, ಮಗು ಕಿಕ್ ಮಾಡುತ್ತಿದೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಕಂದನ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ. ಇದೂವರೆಗೂ ಫೋಟೋಗೆ 13 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿದ್ದು, ಆರೋಗ್ಯವನ್ನು ಕಾಪಾಡಿಕೊಳ್ಳಿ, ಸುಂದರವಾದ ಫೋಟೋ, ಗಂಡು ಮಗು ಆಗಲಿದೆ ಎಂದು ಅಭಿಮಾನಿಗಳು ಕಮೆಂಟ್ ಮೂಲಕ ಮೆಚ್ಚುಗೆ ಸೂಚಿಸಿದ್ದಾರೆ.

    ಈ ಮೊದಲು ಬೇಬಿ ಬಂಪ್ ಫೋಟೋ ಅಪ್ಲೋಡ್ ಮಾಡಿಕೊಂಡಾಗ ಕೆಲವರು ಸಮೀರಾರನ್ನು ಟ್ರೋಲ್ ಮಾಡಿದ್ದರು. ಟ್ರೋಲ್ ಗೆ ಪ್ರತಿಕ್ರಿಯಿಸಿದ್ದ ಸಮೀರಾ ರೆಡ್ಡಿ, ನೀವು ಕೂಡ ನಿಮ್ಮ ತಾಯಿಯ ಗರ್ಭದಿಂದ ಜನಿಸಿದ್ದೀರಾ. ಆಗ ನಿಮ್ಮ ತಾಯಿಯ ದೇಹ ಪರ್ಫೆಕ್ಟ್ ಆಗಿ ಇತ್ತಾ?. ನೀವು ಜನ್ಮ ಪಡೆದ ನಂತರ ನಿಮ್ಮ ತಾಯಿಯ ಬಳಿ ಈ ರೀತಿ ಪ್ರಶ್ನೆ ಕೇಳಿದ್ದೀರಾ? ಈಗಲೂ ನಿಮ್ಮ ತಾಯಿ ಹಾಟ್ ಆಗಿದ್ದಾರಾ ಎಂದು ಪ್ರಶ್ನಿಸಿ ಖಡಕ್ ತಿರುಗೇಟು ನೀಡಿದ್ದರು.

    https://www.instagram.com/p/Bv3a_ljnj7o/