Tag: Sameer MD

  • ಸಮೀರ್‌ ವಿಡಿಯೋದಲ್ಲಿ ಬಳಸಿದ್ದ ಒಂದು ಪದಕ್ಕೆ ಸಂಬಂಧಿಸಿದ್ದಂತೆ ಪೊಲೀಸರು ಜಪ್ತಿ ಮಾಡಿದ್ದಾರೆ: ಮಟ್ಟಣ್ಣನವರ್‌

    ಸಮೀರ್‌ ವಿಡಿಯೋದಲ್ಲಿ ಬಳಸಿದ್ದ ಒಂದು ಪದಕ್ಕೆ ಸಂಬಂಧಿಸಿದ್ದಂತೆ ಪೊಲೀಸರು ಜಪ್ತಿ ಮಾಡಿದ್ದಾರೆ: ಮಟ್ಟಣ್ಣನವರ್‌

    -‌ ಪೊಲೀಸರು ಜಪ್ತಿ ಮಾಡಿದಾಗ ಮನೆಯಲ್ಲೇ ಇದ್ದ ಮಟ್ಟಣ್ಣನವರ್

    ಬೆಂಗಳೂರು: ಸಮೀರ್‌ ಎಂಡಿ (Sameerr MD) ವಿಡಿಯೋದಲ್ಲಿ ಬಳಕೆ ಮಾಡಿದ್ದ ಒಂದು ಪದಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂದು ಮನೆಗೆ ಆಗಮಿಸಿ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ ಎಂದು ಗಿರೀಶ್‌ ಮಟ್ಟಣ್ಣನವರ್‌ (Girish Mattannavar) ತಿಳಿಸಿದ್ದಾರೆ.

     ಬೆಳ್ತಂಗಡಿ ಸರ್ಕಲ್‌ ಇನ್ಸ್‌ಪೆಕ್ಟರ್‌ ನಾಗೇಶ್ ಕದ್ರಿ ಮತ್ತು ತಂಡ ಬೆಂಗಳೂರಿನ ಬನ್ನೇರುಘಟ್ಟದ ಹುಳ್ಳಹಲ್ಲಿಯಲ್ಲಿರುವ ಬಾಡಿಗೆ ಮನೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಪೊಲೀಸರ ಜೊತೆ ವಿಧಿ ವಿಜ್ಞಾನ ಪ್ರಯೋಗಾಲಯದ ಸೋಕೊ ಸಿಬ್ಬಂದಿಯೂ ಇದ್ದು ಸಮೀರ್‌ ವಿಡಿಯೋ ಮಾಡುತ್ತಿದ್ದ ಸ್ಥಳವನ್ನು ಮಹಜರು ಮಾಡಿದರು.

    ಮಹಜರು ಪ್ರಕ್ರಿಯೆ ನಡೆದ ಬಳಿಕ ಇಂದು ಬೆಳಗ್ಗೆಯಿಂದಲೇ ಸಮೀರ್‌ ಮನೆಯಲ್ಲಿದ್ದ ಮಟ್ಟಣ್ಣನವರ್‌ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಇದನ್ನೂ ಓದಿ:  ಸೌಜನ್ಯ ಕೇಸ್‌ಗೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ ಕೇಳಲಿಲ್ಲ: ಉದಯ್‌ ಜೈನ್‌

     

    ಸಮೀರ್‌ ಮನೆಯ ಮೇಲೆ ಯಾವುದೇ ರೀತಿಯ ದಾಳಿ ನಡೆದಿಲ್ಲ. ಧರ್ಮಸ್ಥಳಕ್ಕೆ ಅಪಪ್ರಚಾರ ನಡೆಸಿದ್ದಕ್ಕೆ ದಾಖಲಾದ ಕೇಸ್‌ ಅಲ್ಲ. ಧರ್ಮಸ್ಥಳ ಠಾಣೆಯಲ್ಲಿ ಸಮೀರ್ ಮೇಲೆ ಒಂದು ಕೇಸ್ ದಾಖಲಾಗಿತ್ತು. ಸಮೀರ್‌ ವಿಡಿಯೋದಲ್ಲಿ ಬೆಳ್ತಂಗಡಿ ಪೊಲೀಸರನ್ನು ಧಣಿಗಳ ಚಾಟು ಎಂದು ಹೇಳಿದ್ದರು. ಈ ಪದ ಬಳಕೆ ಮಾಡಿದ್ದಕ್ಕೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಸ್ಥಳ ಮಹಜರು ಮಾಡಿದ್ದಾರೆ ಎಂದು ತಿಳಿಸಿದರು.

    ವಿಧಿವಿಜ್ಞಾನ ಪ್ರಾಯೋಗಾಲಯದವರು ಬಹಳ ಚೆನ್ನಾಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಆನೆ ಮಾವುತನ ಕೊಲೆಯಾದಾಗ, ಸೌಜನ್ಯ ಕೊಲೆಯಾದಾಗ ಈ ರೀತಿಯ ಯಾವುದೇ ಪ್ರಕ್ರಿಯೆ ನಡೆದಿರಲಿಲ್ಲ. ಪೊಲೀಸರು ಪ್ರಕರಣಕ್ಕೆ ಬೇಕಾದ ಎಲ್ಲಾ ಪ್ರಕ್ರಿಯೆಗಳನ್ನು ಸರಿಯಾಗಿ ಮಾಡಿ ಹೋಗಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಫುಲ್‌ ಗ್ರಿಲ್‌ – ಲೈಕ್ಸ್, ವ್ಯೂವ್ಸ್‌ಗಾಗಿ ವಿಡಿಯೋ ಮಾಡಿದೆ ಅಂತ ತಪ್ಪೊಪ್ಪಿಗೆ

    ಇಂದು ಸಮೀರ್‌ ಅವರ ಮೊಬೈಲ್, ಕ್ಯಾಮೆರಾ, ಕಂಪ್ಯೂಟರ್‌ ಜಪ್ತಿ ಮಾಡಿದ್ದಾರೆ. ಸಮೀರ್ ಎಂಡಿ ಮೇಲೆ ಸುಳ್ಳು ಕೇಸ್‌ ದಾಖಲಾಗಿದ್ದು ಅವರು ಸಹಕಾರ ನೀಡಿದ್ದಾರೆ. ಎಐ ವೀಡಿಯೋದಲ್ಲಿ ಬಂದಿರುವುದು ಸತ್ಯದ ಮಾಹಿತಿ, ಯಾವುದೂ ಸುಳ್ಳಿಲ್ಲ. ಸಮೀರ್‌ ನನ್ನ ಸ್ನೇಹಿತನಾಗಿದ್ದು ಪಂಚನಾಮೆಗೆ ಅವಶ್ಯಕತೆ ಇರಬಹುದು ಎಂಬ ಕಾರಣಕ್ಕೆ ನಾನು ಬಂದಿದ್ದೇನೆ. ಸಮೀರ್ ಜೊತೆ ನಾವು ಯಾವಾಗಲೂ ಇರುತ್ತೇವೆ ಎಂದು ಹೇಳಿದರು.

     

  • ಸಮೀರ್‌ ವಿಡಿಯೋ ವೈರಲ್‌ ಹಿಂದೆ ಭಾರಿ ಫಂಡಿಂಗ್ ಇದೆ; 308 ಟ್ರೋಲ್ ಪೇಜಸ್‌, 50-60 ಕಟೆಂಟ್ ಕ್ರಿಯೇಟರ್ಸ್ ಇದ್ದಾರೆ: ಸುಮಂತ್‌

    ಸಮೀರ್‌ ವಿಡಿಯೋ ವೈರಲ್‌ ಹಿಂದೆ ಭಾರಿ ಫಂಡಿಂಗ್ ಇದೆ; 308 ಟ್ರೋಲ್ ಪೇಜಸ್‌, 50-60 ಕಟೆಂಟ್ ಕ್ರಿಯೇಟರ್ಸ್ ಇದ್ದಾರೆ: ಸುಮಂತ್‌

    – ಧರ್ಮಸ್ಥಳದ ವಿರುದ್ಧ ವಿಡಿಯೋ ಮಾಡೋಕೆ ಮಂಡ್ಯದ ಯುಟ್ಯೂಬರ್‌ಗೆ ಆಫರ್‌
    – SIT ವಿಚಾರಣೆಯಲ್ಲಿರುವ ಅಭಿ ಸ್ನೇಹಿತನಿಂದ ಸ್ಫೋಟಕ ಮಾಹಿತಿ

    ಬೆಂಗಳೂರು/ಮಂಡ್ಯ: ಸಮೀರ್‌ (Sameer MD) ವಿಡಿಯೋ ಸುಮ್ನೆ ವೈರಲ್‌ ಆಗಿಲ್ಲ. ಇದರ ಹಿಂದೆ 300-400 ಪೇಜ್, 50-60 ಕಟೆಂಟ್ ಕ್ರಿಯೇಟರ್ಸ್ ಕೆಲಸ ಮಾಡಿದ್ದಾರೆ ಅಂತ ಅಭಿ ನನಗೆ ಹೇಳಿದ್ದ ಎಂದು ಯೂಟ್ಯೂಬರ್‌ ಅಭಿಷೇಕ್‌ (Youyuber Abhishek M) ಸ್ನೇಹಿತ ಸುಮಂತ್‌ ಸ್ಫೋಟಕ ಮಾಹಿತಿ ನೀಡಿದ್ದಾರೆ.

     

     

    ಯೂಟ್ಯೂಬರ್ಸ್‌ಗಳಿಗೆ ಆಫರ್‌ ನೀಡಿದ ಸಂಬಂಧ ʻಪಬ್ಲಿಕ್‌ ಟಿವಿʼ (Public TV) ಜೊತೆಗೆ ಮಾತನಾಡಿದ ಸುಮಂತ್‌, ಸ್ಫೋಟಕ ಮಾಹಿತಿ ನೀಡಿದ್ದಾರೆ. ಧರ್ಮಸ್ಥಳ ವಿರುದ್ಧ ವಿಡಿಯೋ ಮಾಡೋದಕ್ಕೆ ದುಡ್ಡು ಕೊಡ್ತೀವಿ ಅಂತ ಆಫರ್‌ ಬಂದಿತ್ತು. ಎಸ್‌ಐಟಿ ವಿಚಾರಣೆಗೆ ಹಾಜರಾಗಿದ್ದ ಅಭಿಷೇಕ್‌ನಿಂದಲೂ ಆಫರ್‌ ಬಂದಿತ್ತು ಅಂತ ಹೇಳಿದ್ದಾರೆ. ಇದನ್ನೂ ಓದಿ: ಯೂಟ್ಯೂಬರ್‌ ಸಮೀರ್‌ ಮನೆ ಮೇಲೆ ಪೊಲೀಸರ ದಾಳಿ, ಪರಿಶೀಲನೆ

    ಧರ್ಮಸ್ಥಳದ (Dharmasthala) ವಿರುದ್ಧ ವಿಡಿಯೋ ಮಾಡಲು ಅಭಿ ನಂಗೆ 5-6 ತಿಂಗಳ ಹಿಂದೆ ಆಫರ್ ಕೊಟ್ಟಿದ್ದ. ನಾನು ವಿಡಿಯೋ ಮಾಡ್ತಾ ಇದ್ದೀನಿ ದುಡ್ಡು ಬರುತ್ತೆ, ಫೈನಾನ್ಶಿಯಲ್ ಸಪೋರ್ಟ್ ಕೂಡ ಇದೆ. ಜೊತೆಗೆ ಟ್ರಾನ್ಸ್‌ಪೋರ್ಟ್‌, ಉಳಿದುಕೊಳ್ಳುವ ವ್ಯವಸ್ಥೆ ಎಲ್ಲವನ್ನೂ ಮಾಡ್ತಾರೆ ಅಂತಾ ಹೇಳಿದ್ದ. ಆದ್ರೆ ನಾನು ಅದಕ್ಕೆ ಒಪ್ಪಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯೂಟ್ಯೂಬರ್‌ ಅಭಿಷೇಕ್‌ಗೆ SIT ಫುಲ್‌ ಗ್ರಿಲ್‌ – ಲೈಕ್ಸ್, ವ್ಯೂವ್ಸ್‌ಗಾಗಿ ವಿಡಿಯೋ ಮಾಡಿದೆ ಅಂತ ತಪ್ಪೊಪ್ಪಿಗೆ

    ಮುಂದುವರಿದು.. ಸಮೀರ್ ವಿಡಿಯೋ ವೈರಲ್ (Video Viral) ಹಿಂದೆ ಸಾಕಷ್ಟು ಫಂಡಿಂಗ್ ಇದೆ ಅಂತಾನೂ ಅಭಿ ನಂಗೆ ಹೇಳಿದ್ದ. ಅಭಿ ಭೇಟಿ ವೇಳೆ ನಾನು ಸಮೀರ್ ವಿಡಿಯೋ ವೈರಲ್ ಬಗ್ಗೆ ಕೇಳಿದ್ದೆ. ಸಮೀರ್ ವಿಡಿಯೋ ಸುಮ್ ಸುಮ್ನೆ ವೈರಲ್ ಆಗಿಲ್ಲ ಅಂತಾ ಅಭಿ ನಂಗೆ ಹೇಳಿದ್ದ. ಅದರ ಹಿಂದೆ 300-400 ಟ್ರೋಲ್ ಪೇಜ್, 50-60 ಕಟೆಂಟ್ ಕ್ರಿಯೇಟರ್ಸ್ ಇದ್ದಾರೆ. ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಡೈರೆಕ್ಟ್ ದುಡ್ಡಿಗೂ ಸಪೋರ್ಟ್ ಮಾಡ್ತಾರೆ. ಪ್ರೀ ಪ್ಲ್ಯಾನ್ಡ್‌ ಇದು ಅಂತಾ ಅಭಿ ನಂಗೆ ಹೇಳಿದ್ದ ಎಂದು ಸುಮಂತ್‌ ರಹಸ್ಯ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಪ್ರಕರಣಕ್ಕೆ ದೊಡ್ಡ ತಿರುವು – ಸೌಜನ್ಯ ಪ್ರಕರಣದಲ್ಲಿ ಕ್ಲೀನ್‌ ಚಿಟ್‌ ಪಡೆದವರಿಗೆ SIT ಬುಲಾವ್‌ 

  • ಯೂಟ್ಯೂಬರ್‌ ಸಮೀರ್‌ ಮನೆ ಮೇಲೆ ಪೊಲೀಸರ ದಾಳಿ- ವ್ಯಕ್ತಿಯೊಬ್ಬನ ವಿಚಾರಣೆ

    ಯೂಟ್ಯೂಬರ್‌ ಸಮೀರ್‌ ಮನೆ ಮೇಲೆ ಪೊಲೀಸರ ದಾಳಿ- ವ್ಯಕ್ತಿಯೊಬ್ಬನ ವಿಚಾರಣೆ

    ಬೆಂಗಳೂರು: ಧರ್ಮಸ್ಥಳ ಕ್ಷೇತ್ರದ (Dharmasthala Temple) ಬಗ್ಗೆ ತಪ್ಪು ಮಾಹಿತಿ ನೀಡಿ ಸಾರ್ವಜನಿಕರನ್ನು ಪ್ರಚೋದಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಎಂ. ಡಿ. ಸಮೀರ್ (Youtuber Sameer MD) ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ಸಂಬಂಧ ಇಂದು ಬೆಳ್ತಂಗಡಿ ಪೊಲೀಸರು ((Belthangady Police) ಸಮೀರ್ ಮನೆ ಶೋಧ ನಡೆಸಿದ್ದು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.

    ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹುಲ್ಲಹಳ್ಳಿ ಸಮೀಪದ ರಾಯಲ್ ರೆಸಿಡೆನ್ಸಿ ಬಡಾವಣೆಯಲ್ಲಿನ ಸಮೀರ್ ಬಾಡಿಗೆ ಮನೆಯಲ್ಲಿ ಇಡೀ ದಿನ ಸ್ಥಳ ಮಹಜರು ನಡೆಸಿದರು. ಇದನ್ನೂ ಓದಿ: ಯೂಟ್ಯೂಬರ್‌ ಅಭಿಷೇಕ್‌ಗೆ SIT ಫುಲ್‌ ಗ್ರಿಲ್‌ ಲೈಕ್ಸ್, ವ್ಯೂವ್ಸ್‌ಗಾಗಿ ವಿಡಿಯೋ ಮಾಡಿದೆ ಅಂತ ತಪ್ಪೊಪ್ಪಿಗೆ

      

    ಬೆಳ್ತಂಗಡಿ ಸಿವಿಲ್ ನ್ಯಾಯಾಲಯದಿಂದ ಸರ್ಚ್ ವಾರಂಟ್ ತಂದಿದ್ದ ಬೆಳ್ತಂಗಡಿ ಗ್ರಾಮಾಂತರ ಠಾಣೆ ಸರ್ಕಲ್ ‌ಇನ್ಸ್ಪೆಕ್ಟರ್ ನಾಗೇಶ್ ಪಕ್ಕಾ ತಯಾರಿ ಮಾಡಿಕೊಂಡು ಕಾರ್ಯಾಚರಣೆಗೆ ಇಳಿದಿದ್ದರು. ಐವರು ಸಿಬ್ಬಂದಿ ಇಬ್ಬರು ಪಂಚರ ಜೊತೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಪೊಲೀಸರು ಸಮೀರ್ ಮನೆ ಬಡಿದಿದ್ದಾರೆ. ಯಾವುದೇ ರಿಪ್ಲೆ ಇಲ್ಲದಿದ್ದಾಗ ಸಮೀರ್‌ಗೆ ಕರೆ ಮಾಡಿ ಕೋರ್ಟ್ ಸರ್ಚ್ ವಾರಂಟ್ ಇದ್ದು, ಸಹಕಾರಕ್ಕೆ ಸೂಚಿಸಿದ್ದಾರೆ.

    ಕೆಲ ಹೊತ್ತಿನಲ್ಲಿಯೇ ಹಾಜರಾದ ಸಮೀರ್ ಮನೆಯಲ್ಲಿ ಪೊಲೀಸರು ಮತ್ತು ಸೋಕೋ ಟೀಮ್ ಸ್ಪಾಟ್ ಮಹಜರ್ ನಡೆಸಿದ್ದಾರೆ. ಧರ್ಮಸ್ಥಳ AI ಆಡಿಯೋ ಕ್ರಿಯೇಟ್ ಮಾಡಿದ ಸ್ಥಳ, ಬಳಸಿದ ಎಲೆಕ್ಟ್ರಾನಿಕ್ ಸಾಧನಗಳು, ಆ್ಯಪ್ ಗಳು, ಲ್ಯಾಪ್‌ಟಾಪ್, ಕಂಪ್ಯೂಟರ್, ಹಾರ್ಡ್ ಡಿಸ್ಕ್, ಮೊಬೈಲ್ ಸೇರಿದಂತೆ ಇನ್ನೂ ಅನೇಕ ಸಾಕ್ಷ್ಯಗಳನ್ನು ಸೋಕೋ ಪತ್ತೆ ಮಾಡಿದ್ದು, ಪಂಚರ ಸಮ್ಮುಖದಲ್ಲಿ ಸೀಜ್ ಮಾಡಿದ್ದಾರೆ. ಇದನ್ನೂ ಓದಿ: ತಲೆಬುರುಡೆ ರಹಸ್ಯ | ಶೀಘ್ರದಲ್ಲೇ ಎಲ್ಲದಕ್ಕೂ ಕ್ಲ್ಯಾರಿಟಿ ಕೊಡ್ತೀನಿ: ಯೂಟ್ಯೂಬರ್ ಸಮೀರ್ ಫಸ್ಟ್ ರಿಯಾಕ್ಷನ್

    ಧರ್ಮಸ್ಥಳ ಸಂಬಂಧ AI ವಿಡಿಯೋ ಸೃಷ್ಟಿಗೆ ಮಾಹಿತಿ ನೀಡಿ ಸಹಕರಿಸಿ ವ್ಯಕ್ತಿಗಳು, ಅವರು ನೀಡಿದ ವಿಡಿಯೋ, ಆಡಿಯೋ, ಪೋಟೋ ಸೇರಿದಂತೆ ದಾಖಲೆಗಳ ಬಗ್ಗೆ ವಿಚಾರಣೆ ನಡೆಸಿದ್ದಾರೆ.

    ಇದೆಲ್ಲದಕ್ಕೂ ಮುಖ್ಯವಾಗಿ ಎಲೆಕ್ಟ್ರಾನಿಕ್ ಉಪಕರಣಗಳ ಖರೀದಿ, ವಿಡಿಯೋ ಸೃಷ್ಟಿಗೆ ಕೆಲಸ ಮಾಡಿದವರ ಸಂಬಳದ ಮೂಲ ಸೇರಿದಂತೆ ಅಕ್ಕಪಕ್ಕದ ಮನೆಯವರ ಬಳಿಯು ಪೊಲೀಸರು ಯೂಟ್ಯೂಬರ್ ಸಮೀರ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಸಾಲದಕ್ಕೆ ವ್ಯಕ್ತಿಯೊಬ್ಬನನ್ನು ಕರೆತಂದು ವಿಚಾರಣೆ ಕೂಡ ನಡೆಸಿದ್ದಾರೆ.

  • SITಯಿಂದ ತಿಮರೋಡಿ, ಚಿನ್ನಯ್ಯ ವಿಚಾರಣೆ – ಸಮೀರ್ ಆದಾಯ ಮೂಲ ಕೆದಕಿದ ಖಾಕಿ, ಇನ್ನಷ್ಟು ರಹಸ್ಯ ಬಯಲು!

    SITಯಿಂದ ತಿಮರೋಡಿ, ಚಿನ್ನಯ್ಯ ವಿಚಾರಣೆ – ಸಮೀರ್ ಆದಾಯ ಮೂಲ ಕೆದಕಿದ ಖಾಕಿ, ಇನ್ನಷ್ಟು ರಹಸ್ಯ ಬಯಲು!

    – ತನಿಖಾಧಿಕಾರಿಗಳಿಗೆ ತಲೆನೋವಾದ ಸುಜಾತಾ ಭಟ್
    – ಮಟ್ಟಣ್ಣನವರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು

    ಮಂಗಳೂರು: ಧರ್ಮಸ್ಥಳ ಕೇಸ್‌ನ *(Dharmasthala Case) ಬುರುಡೆ ಗ್ಯಾಂಗ್‌ನ ಷಡ್ಯಂತ್ರ ಬಯಲಾದ ಬಳಿಕ ಎಸ್‌ಐಟಿ ತನಿಖೆ ಮುಂದುವರಿಸಿದೆ. ಕಳೆದ 4 ದಿನಗಳಿಂದ ತಲೆಮರೆಸಿಕೊಂಡಿದ್ದ ಬುರುಡೆ ಗ್ಯಾಂಗ್ ಲೀಡರ್ ಮಹೇಶ್ ಶೆಟ್ಟಿ ತಿಮರೋಡಿ ಇವತ್ತು ಪ್ರತ್ಯಕ್ಷರಾಗಿದ್ದಾರೆ.

    ಕಳೆದ ಮಂಗಳವಾರ ಮಹೇಶ್ ತಿಮರೋಡಿ ಮನೆಗೆ ಚಿನ್ನಯ್ಯನನ್ನ ಕರೆದುಕೊಂಡು ಬಂದು ಶೋಧ ನಡೆಸಲಾಗಿತ್ತು. ಉಜಿರೆ ಮನೆಯಲ್ಲಿ ಮುಸುಕುಧಾರಿ ಚಿನ್ನಯ್ಯನಿಗೆ ಆಶ್ರಯ ಕೊಟ್ಟಿದ್ದ ವಿಚಾರದಲ್ಲಿ ಬೆಳ್ತಂಗಡಿ ಪೊಲೀಸರು (Belthangady Police) ಸ್ಥಳ ಮಹಜರಿಗೆ ಬರೋದು ಗೊತ್ತಾಗ್ತಿದ್ದಂತೆ ತಿಮರೋಡಿ ತಮ್ಮ ಮನೆಯಿಂದ ಜಾಗ ಖಾಲಿ ಮಾಡಿದ್ದರು. ಆವತ್ತು ಎಸ್ಕೇಪ್ ಆದವ್ರು ಇವತ್ತು ಸೀದಾ ಬೆಳ್ತಂಗಡಿ ಪೊಲೀಸ್ ಠಾಣೆ ಮುಂದೆ ಪ್ರತ್ಯಕ್ಷರಾಗಿದ್ದಾರೆ. ಬ್ರಹ್ಮಾವರ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಪ್ರಕರಣದಲ್ಲಿ ಮತ್ತೆ ವಿಚಾರಣೆಗೆ ಹಾಜರಾಗಿದ್ದಾರೆ. ಬಳಿಕ ಅಲ್ಲಿಂದ ಎಸ್‌ಐಟಿ (SIT) ಕಚೇರಿಗೂ ತೆರಳಿ ವಿಚಾರಣೆ ಎದುರಿಸಿದ್ದಾರೆ. ಇದನ್ನೂ ಓದಿ: ಹೆಣ್ಣುಮಕ್ಕಳು ಎಂತಹ ಹೋರಾಟಕ್ಕೂ ತಯಾರಿದ್ದಾರೆ, ಆದ್ರೆ ಅಗತ್ಯವಿಲ್ಲ – ಡಿ.ವೀರೇಂದ್ರ ಹೆಗ್ಗಡೆ

    ಅಂದ್ಹಾಗೆ ಈ ಹಿಂದೆ ಚಿನ್ನಯ್ಯ ವಿಚಾರಣೆಗೆ ಬರುತ್ತಿದ್ದ ಕಾರಿನಲ್ಲೇ ತಿಮರೋಡಿ ಬಂದಿದ್ದಾರೆ. ಅಲ್ಲದೇ ಇವತ್ತು ಗಿರೀಶ್ ಮಟ್ಟಣ್ಣನವರ್ ಎಸ್‌ಐಟಿ ಮುಂದೆ ಹಾಜರಾಗಿದ್ದಾರೆ. ತನಿಖೆಗೆ ಪೂರಕವಾದ ದಾಖಲೆ ನೀಡಲು ಅವಕಾಶ ನೀಡಿ ಎಂದು ಮೊನ್ನೆ ಇಮೇಲ್ ಮೂಲಕ ಮನವಿ ಮಾಡಿದ್ದರು. ತನಿಖೆಗೆ ಪೂರಕವಾದ ದಾಖಲೆ, ಲ್ಯಾಪ್‌ಟ್ಯಾಪ್, ಪೆನ್‌ಡ್ರೈವ್‌ ಜೊತೆ ವಿಚಾರಣೆಗೆ ಹಾಜರಾಗಿದ್ದಾರೆ. ಬಳಿಕ ಮಾತನಾಡಿದ ಗಿರೀಶ್ ಮಟ್ಟಣ್ಣನವರ್, ನನ್ನ ಬಳಿ ಇರುವ ದಾಖಲೆಗಳನ್ನ ನೀಡಿದ್ದೇನೆ. ಚಿನ್ನಯ್ಯ 164 ಹೇಳಿಕೆ ಹಿಂದೆ ಸರಿದ ಬಗ್ಗೆ ತನಿಖೆ ಆಗಬೇಕು ಎಂದಿದ್ದಾರೆ. ಈ ನಡುವೆ ಬುರುಡೆ ಪ್ರಕರಣದ ಪಾತ್ರಧಾರಿ ಚಿನ್ನಯ್ಯನನ್ನ ಎಸ್‌ಐಟಿ ಮುಖ್ಯಸ್ಥ ಪ್ರಣವ್ ಮೊಹಾಂತಿ ವಿಚಾರಣೆ ನಡೆಸಿದ್ದಾರೆ.

    ಚಿನ್ನಯ್ಯ, ಆತನ ಅಣ್ಣ ತಾನಾಸಿ ಮಗ ಪುರುಷೋತ್ತಮ್ ಕೂಡ ವಿಚಾರಣೆಗೆ ಹಾಜರಾಗಿದ್ದಾನೆ. ಹಾಗೆಯೇ ಚಿನ್ನಯ್ಯ ಮತ್ತು ಪತ್ನಿ ಮಲ್ಲಿಕಾ ಬ್ಯಾಂಕ್ ಅಕೌಂಟ್ ಜಾಲಾಡಿದ್ದಾರೆ. ಈ ನಡುವೆ ವಿಕ್ಷಗಳು ಬುರುಡೆ ಪ್ರಕರಣವನ್ನ ಎನ್‌ಐಎ ಹೆಗಲಿಗೆ ವಹಿಸುವಂತೆ ಪಟ್ಟು ಹಿಡಿದಿವೆ.  ಇದನ್ನೂ ಓದಿ: ಬೆಳ್ತಂಗಡಿ ಪೊಲೀಸ್ ಠಾಣೆಗೆ ಆಗಮಿಸಿದ ಮಹೇಶ್ ಶೆಟ್ಟಿ ತಿಮರೋಡಿ

    ಅನಾರೋಗ್ಯ ನೆಪ – ವಿಚಾರಣೆಗೆ ಗೈರಾದ ಸಮೀರ್
    AI ಮೂಲಕ ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಿ ಜನರನ್ನ ಯಾಮಾರಿಸಿದ್ದ ಯೂಟ್ಯೂಬರ್ ಸಮೀರ್ ಇವತ್ತು ವಿಚಾರಣೆಗೆ ಹಾಜರಾಗಬೇಕಿತ್ತು. ಅನಾರೋಗ್ಯ ನೆಪ ಹೇಳಿ ಗೈರಾಗಿದ್ದಾನೆ. ಮತ್ತೊಂದು ದಿನ ವಿಚಾರಣೆಗೆ ಹಾಜರಾಗಲು ಆತನ ಪರ ವಕೀಲರು ಅನುಮತಿ ಕೇಳಿದ್ದಾರೆ. ಸಮೀರ್ ಆದಾಯ ಮೂಲ ಕೆದಕುತ್ತಿರುವ ಎಸ್‌ಐಟಿ, ಅಕೌಂಟ್ ಡಿಟೇಲ್ಸ್ ಕೆದಕಿದ್ದಾರೆ. ಒಂದು ಎಐ ವಿಡಿಯೋಗೆ ತಗಲುವ ಖರ್ಚೆಷ್ಟು? ಒಂದು ವಿಡಿಯೋ ಸಿಗೋ ಆದಾಯವೆಷ್ಟು ಅನ್ನೋ ಮಾಹಿತಿ ಕೇಳಿದ್ದಾರೆ. ಪೊಲೀಸರ ಪ್ರಶ್ನೆಗೆ ಸಮೀರ್, ಐನೂರು, 1 ಸಾವಿರ ಖರ್ಚು ಮಾಡಿ ಎಐ ವಿಡಿಯೋ ಮಾಡ್ತಿರೋದಾಗಿ ಹೇಳಿದ್ದಾನೆ. ಈ ಮಧ್ಯೆ, ಸಮೀರ್ ವಿಡಿಯೋ ಬಗ್ಗೆ ಮುಸ್ಲಿಂ ವ್ಯಕ್ತಿ, ನಾವೇ ಈ ವಿಡಿಯೋ ನಂಬಲ್ಲ. ನೀವ್ಯಾಕೆ ನಂಬುತ್ತೀರಿ ಅಂತ ಕಿಡಿ ಕಾರಿದ್ದಾರೆ. ಇದನ್ನೂ ಓದಿ: ತಿಮರೋಡಿ ತೋಟದಲ್ಲಿ ಸಿಕ್ತಾ ಚಿನ್ನಯ್ಯ ತಂದ ಬುರುಡೆ?

    ಮಟ್ಟಣ್ಣನವರ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು
    ಧರ್ಮಸ್ಥಳ ವಿರುದ್ಧ ಷಡ್ಯಂತ್ರ ಹೂಡಿದ ಬುರುಡೆ ಗ್ಯಾಂಗ್‌ನ ಗಿರೀಶ್ ಮಟ್ಟಣ್ಣನವರ್‌ಗೆ ಮತ್ತೊಂದು ಶಾಕ್ ಎದುರಾಗಿದೆ. ಧರ್ಮಸ್ಥಳದಲ್ಲಿ ನಡೆಯುವ ಸಾಮೂಹಿಕ ಮದುವೆಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಆರೋಪ ಹಿನ್ನೆಲೆ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಭೇಟಿಯಾಗಿ ವಿಡಿಯೋ ಸಹಿತ ದೂರು ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಹೆಣ್ಣುಮಕ್ಕಳ ಘನತೆಗೆ ಧಕ್ಕೆ ತಂದಿದ್ದು, ಧರ್ಮಸ್ಥಳ ಭಕ್ತರ ಬಗ್ಗೆ ಹೀನವಾಗಿ ಮಾತಾಡಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಿ ಎಂದು ಒತ್ತಾಯಿಸಲಾಗಿದೆ. ದೂರು ಸ್ವೀಕರಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ, ಹೆಣ್ಣು ಮಗಳ ಚಾರಿತ್ರಿಕ ವಧೆ ಮಾಡಿದ್ರೆ ಪೊಲೀಸ್ ಆಯುಕ್ತರಿಗೆ ಎಫ್ ಐಆರ್ ಮಾಡಲು ಸೂಚಿಸುತ್ತೇನೆ ಎಂದಿದ್ದಾರೆ.

  • ಕೂಲಿಂಗ್ ಗ್ಲಾಸ್ ಧರಿಸಿ ವಿಚಾರಣೆಗೆ ಹಾಜರಾದ ʻಬುರುಡೆʼ ಸಮೀರ್‌ – ವಿಚಾರಣೆ ಶುರು

    ಕೂಲಿಂಗ್ ಗ್ಲಾಸ್ ಧರಿಸಿ ವಿಚಾರಣೆಗೆ ಹಾಜರಾದ ʻಬುರುಡೆʼ ಸಮೀರ್‌ – ವಿಚಾರಣೆ ಶುರು

    ಮಂಗಳೂರು: ಧರ್ಮಸ್ಥಳ ದೇವಸ್ಥಾನದ (Dharmasthala Temple) ವಿರುದ್ಧ ಎಐ ವಿಡಿಯೋ ಮಾಡಿ ಕಲರ್‌ ಕಲರ್‌ ಕಾಗೆ ಹಾರಿಸಿದ್ದ ಯೂಟ್ಯೂಬರ್‌ ಸಮೀರ್‌ (Youtuber Sameer) ಕೊನೆಗೂ ಬೆಳ್ತಂಗಡಿ ಪೊಲೀಸ್‌ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದಾನೆ.

    ಬೆಳಗ್ಗೆ 10:30ರ ವೇಳೆಗೆ ವಿಚಾರಣೆಗೆ ಬರುವುದಾಗಿ ಹೇಳಿದ್ದ ಸಮೀರ್‌ ವಕೀಲರೊಂದಿಗೆ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಹಾಜರಾಗಿದ್ದಾನೆ. ಕೂಲಿಂಗ್‌ ಗ್ಲಾಸ್‌ ಧರಿಸಿದ್ದ ಸಮೀರ್‌ ಮುಗುಳು ನಗೆ ಬೀರುತ್ತಲೇ ವಿಚಾರಣೆಗೆ ಹಾಜರಾಗಿದ್ದಾನೆ. ಇನ್ನೂ ಸಕಲ ತಯಾರಿ ಮಾಡಿಕೊಂಡಿದ್ದ ಎಸ್‌ಐಟಿ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.

    ಧರ್ಮಸ್ಥಳ ದೇಗುಲ ವಿರುದ್ಧ ಅಪಪ್ರಚಾರ ಆರೋಪದಲ್ಲಿ `ದೂತ’ ಯೂಟ್ಯೂಬ್ ವಾಹಿನಿಯ ಸಮೀರ್‌ಗೆ ಕೋರ್ಟ್ ಇತ್ತೀಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಧರ್ಮಸ್ಥಳದಲ್ಲಿ ಅಪಪ್ರಚಾರದ ಆರೋಪ ಎದುರಿಸುತ್ತಿರೋ ಸಮೀರ್, ತಮ್ಮ ವಿಡಿಯೋದಲ್ಲಿ ದಂಗೆ ಏಳುವಂತೆ ಜನರಿಗೆ ಪ್ರಚೋದಿಸಿದ್ದ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ದೊಂಬಿ, ಪ್ರಚೋದನೆ ಸೇರಿದಂತೆ ಹಲವು ಪ್ರಕರಣಗಳ ಅಡಿಯಲ್ಲಿ ಕೇಸ್‌ಗಳು ದಾಖಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ನೀಡಿದ್ದ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

    ಕೋರ್ಟ್ ಜಾಮೀನು ಬಳಿಕ ಧರ್ಮಸ್ಥಳದಲ್ಲಿ ತನಗೆ ಜೀವ ಬೆದರಿಕೆ ಇರುವುದಾಗಿ ಹೇಳಿಕೊಂಡಿದ್ದ. ಈ ಹಿನ್ನೆಲೆ ಬೆಳ್ತಂಗಡಿ ಠಾಣೆಗೆ ಹಾಜರಾಗಲು ಪೊಲೀಸರು ಸೂಚಿಸಿದ್ದರು.

    ದೂತನ ಬಂಡವಾಳ ಬಯಲು
    ಇಲ್ಲ ಸಲ್ಲದ ಸುಳ್ಳು ಕತೆಗಳನ್ನು ಸೃಷ್ಟಿಸಿ ಎಲ್ಲರನ್ನೂ ಮರಳು ಮಾಡಿದ್ದವನೇ ಯೂಟ್ಯೂಬರ್ ಸಮೀರ್ ಎಂ.ಡಿ. ಯಾವುದೋ ಕೋಣೇಲಿ ಕೂತ್ಕೊಂಡು ಎಐ ವಿಡಿಯೋಗಳ ಮೂಲಕ ಜನರಿಗೆ ಮಂಕುಬೂದಿ ಎರಚಿ ಲೈಕ್ಸ್, ವೀವ್ಸ್ ಪಡೆದಿದ್ದ ದೂತನ ಬಂಡವಾಳ ಬಯಲಾಗಿದೆ. ತಾನು ಹೇಳಿದ್ದೇ ಸತ್ಯ ಅಂತ ನಂಬಿಸಿ, ಶಿವತಾಂಡವ ಶುರುವಾಗುತ್ತೆ. ನೋಡಿ ಸತ್ಯ ಹೇಗೆ ಹೊರಬರುತ್ತದೆ? ಎಲ್ಲದಕ್ಕೂ ಸಾಕ್ಷ್ಯ ಇದೆ ಅಂತಾ ಪುಂಖಾನುಪುಂಖವಾಗಿ ಸುಳ್ಳಿನ ಅರಮನೆಯನ್ನೇ ಕಟ್ಟಿದ್ದ. ದೂರುದಾರನಿಗೆ ʻಭೀಮ’ ಎಂದು ಹೆಸರಿಟ್ಟಿದ್ದೇ ಸುಳ್ಳುಕೋರ ಸಮೀರ್. ಅನನ್ಯಾ ಭಟ್ ಅನ್ನುವ ನಕಲಿ ಯುವತಿಯನ್ನು ಸೃಷ್ಟಿಸಿ ಧರ್ಮಸ್ಥಳ ಕ್ಷೇತ್ರಕ್ಕೆ, ಭಕ್ತರ ಭಾವನೆಗೆ ಚ್ಯುತಿ ಬರುವಂತೆ ಮಾಡಿದ್ದೇ ಈತ. ಬೀದಿಗೆ ಬನ್ನಿ ಹೋರಾಟ ಮಾಡಿ ಅಂತಾನೂ ಕರೆ ಕೊಟ್ಟಿದ್ದ. ಈತನ ವಿಡಿಯೋಗೆ ಫಂಡಿಂಗ್ ಬರುತ್ತಿದೆ ಅನ್ನೋ ಆರೋಪವೂ ಇದೆ.

  • ಸಮೀರ್‌ನ ಸುಳ್ಳಿನ ಕಂತೆ ಬಯಲು – ಇಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ʻದೂತʼನ ವಿಚಾರಣೆ

    ಸಮೀರ್‌ನ ಸುಳ್ಳಿನ ಕಂತೆ ಬಯಲು – ಇಂದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ʻದೂತʼನ ವಿಚಾರಣೆ

    ಮಂಗಳೂರು: ಬುರುಡೆ ಚಿನ್ನಯ್ಯನ ಬಂಧನದ ಬೆನ್ನಲ್ಲೇ ದೂತ ಸಮೀರ್‌ನ ಸುಳ್ಳಿನ ಕಂತೆ ಕಳಚಿ ಬಿದ್ದಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ (Dharmasthala Police Station) ದಾಖಲಾಗಿರುವ ಸ್ವಯಂಪ್ರೇರಿತ ಪ್ರಕರಣದಲ್ಲಿ ಇಂದು ವಿಚಾರಣೆಗೆ ಹಾಜರಾಗಲಿದ್ದಾನೆ.

    ಧರ್ಮಸ್ಥಳ ದೇಗುಲ ವಿರುದ್ಧ ಅಪಪ್ರಚಾರ ಆರೋಪದಲ್ಲಿ `ದೂತ’ ಯೂಟ್ಯೂಬ್‌ ವಾಹಿನಿಯ ಸಮೀರ್‌ಗೆ ಕೋರ್ಟ್‌ (Cour) ಇತ್ತೀಚೆಗೆ ನಿರೀಕ್ಷಣಾ ಜಾಮೀನು (Bail) ಮಂಜೂರು ಮಾಡಿತ್ತು. ಧರ್ಮಸ್ಥಳದಲ್ಲಿ ಅಪಪ್ರಚಾರದ ಆರೋಪ ಎದುರಿಸುತ್ತಿರೋ ಸಮೀರ್, ತಮ್ಮ ವಿಡಿಯೋದಲ್ಲಿ ದಂಗೆ ಏಳುವಂತೆ ಜನರಿಗೆ ಪ್ರಚೋದಿಸಿದ್ದ. ಈ ಹಿನ್ನೆಲೆಯಲ್ಲಿ ಧರ್ಮಸ್ಥಳ ಠಾಣೆಯಲ್ಲಿ ದೊಂಬಿ, ಪ್ರಚೋದನೆ ಸೇರಿದಂತೆ ಹಲವರು ಕೇಸ್‌ಗಳು ದಾಖಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ನೀಡಿದ್ದ ಕೋರ್ಟ್‌ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಇದನ್ನೂ ಓದಿ: ವರ್ಷಾಂತ್ಯದಲ್ಲಿ ಭಾರತಕ್ಕೆ ಪುಟಿನ್‌, ಝೆಲೆನ್ಸ್ಕಿ ಭೇಟಿ – ಅಮೆರಿಕ ತೈಲ ವಾರ್‌ ನಡ್ವೆ ಹೆಚ್ಚಾಯ್ತು ಭಾರತದ ಪ್ರಾಬಲ್ಯ

    ಕೋರ್ಟ್‌ ಜಾಮೀನು ಬಳಿಕ ಧರ್ಮಸ್ಥಳದಲ್ಲಿ ತನಗೆ ಜೀವ ಬೆದರಿಕೆ ಇರುವುದಾಗಿ ಹೇಳಿಕೊಂಡಿದ್ದ. ಈ ಹಿನ್ನೆಲೆ ಬೆಳ್ತಂಗಡಿ ಠಾಣೆಗೆ ಹಾಜರಾಗಲು ಪೊಲೀಸರು ಸೂಚಿಸಿದ್ದರು. ಅದರಂತೆ ಸಮೀರ್‌ ಇಂದು ಬೆಳ್ತಂಗಡಿ ಠಾಣೆಗೆ ವಿಚಾರಣೆಗೆ ಬರುವುದಾಗಿ ತಿಳಿಸಿದ್ದಾನೆ. ಆದ್ರೆ ಬೆಳಗ್ಗೆ 10:30ಕ್ಕೆ ವಿಚಾರಣೆಗೆ ಬರೋದಾಗಿ ತಿಳಿಸಿದ್ದ ಸಮೀರ್‌ 11 ಗಂಟೆಯಾದ್ರೂ ಸುಳಿವಿಲ್ಲ. ಒಂದು ವೇಳೆ ಸಮೀರ್‌ ವಿಚಾರಣೆಗೆ ಹಾಜರಾಗದಿದ್ದರೆ ಬಂಧಿಸುವ ಸಾಧ್ಯತೆಗಳೂ ಇವೆ. ಇದನ್ನೂ ಓದಿ: ಅನನ್ಯಾ ಭಟ್ ನಾಪತ್ತೆ ಪ್ರಕರಣ – ಎಸ್‌ಐಟಿ 2ನೇ ನೋಟಿಸ್‌ಗೂ ಉತ್ತರಿಸದ ಸುಜಾತ ಭಟ್

    ದೂತನ ಬಂಡವಾಳ ಬಯಲು
    ಇಲ್ಲ ಸಲ್ಲದ ಸುಳ್ಳು ಕತೆಗಳನ್ನು ಸೃಷ್ಟಿಸಿ ಎಲ್ಲರನ್ನೂ ಮರಳು ಮಾಡಿದ್ದವನೇ ಯೂಟ್ಯೂಬರ್ ಸಮೀರ್ ಎಂ.ಡಿ. ಯಾವುದೋ ಕೋಣೇಲಿ ಕೂತ್ಕೊಂಡು ಎಐ ವಿಡಿಯೋಗಳ ಮೂಲಕ ಜನರಿಗೆ ಮಂಕುಬೂದಿ ಎರಚಿ ಲೈಕ್ಸ್, ವೀವ್ಸ್ ಪಡೆದಿದ್ದ ದೂತನ ಬಂಡವಾಳ ಬಯಲಾಗಿದೆ. ತಾನು ಹೇಳಿದ್ದೇ ಸತ್ಯ ಅಂತ ನಂಬಿಸಿ, ಶಿವತಾಂಡವ ಶುರುವಾಗುತ್ತೆ.. ನೋಡಿ ಸತ್ಯ ಹೇಗೆ ಹೊರಬರುತ್ತದೆ.. ಎಲ್ಲದಕ್ಕೂ ಸಾಕ್ಷ್ಯ ಇದೆ ಅಂತಾ ಪುಂಖಾನುಪುಂಖವಾಗಿ ಸುಳ್ಳಿನ ಅರಮನೆಯನ್ನೇ ಕಟ್ಟಿದ್ದ. ದೂರುದಾರನಿಗೆ ʻಭೀಮʼ ಎಂದು ಹೆಸರಿಟ್ಟಿದ್ದೇ ಸುಳ್ಳುಕೋರ ಸಮೀರ್. ಅನನ್ಯಾ ಭಟ್ ಅನ್ನುವ ನಕಲಿ ಯುವತಿಯನ್ನು ಸೃಷ್ಟಿಸಿ ಧರ್ಮಸ್ಥಳ ಕ್ಷೇತ್ರಕ್ಕೆ, ಭಕ್ತರ ಭಾವನೆಗೆ ಚ್ಯುತಿ ಬರುವಂತೆ ಮಾಡಿದ್ದೇ ಈತ. ಬೀದಿಗೆ ಬನ್ನಿ ಹೋರಾಟ ಮಾಡಿ ಅಂತಾನೂ ಕರೆ ಕೊಟ್ಟಿದ್ದ. ಈತನ ವಿಡಿಯೋಗೆ ಫಂಡಿಂಗ್ ಬರುತ್ತಿದೆ ಅನ್ನೋ ಆರೋಪವೂ ಇದೆ.

    ಎಐ ಕಟ್ಟುಕತೆಗಳ ಅಸಲಿಯತ್ತು ಬಟಾಬಯಲಾಗ್ತಿದ್ದಂತೆ ಬಿಲ ಸೇರಿಕೊಂಡಿದ್ದಾನೆ. ಬಳ್ಳಾರಿ ಹಾಗೂ ಬನ್ನೇರುಘಟ್ಟದ ಹುಲ್ಲಳ್ಳಿ ಮನೆಗೆ ಪೊಲೀಸರು ನಾಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಅಂಟಿಸಿದ್ದಾರೆ. ಇತ್ತ ನಿಂದನೆ ಕೇಸಲ್ಲಿ ಮಹೇಶ್ ಶೆಟ್ಟಿ ತಿಮರೋಡಿಗೆ ಉಡುಪಿ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಮಂಜೂರಾಗಿದೆ. ಇದನ್ನೂ ಓದಿ: ಧರ್ಮಸ್ಥಳಕ್ಕೆ ಹೋಗಲು ಭಯವಿದೆ – ಪೊಲೀಸರ ಮುಂದೆ ಹಲವು ಬೇಡಿಕೆ ಇಟ್ಟ ಸಮೀರ್‌

  • ಸಮೀರ್ ಮುಲ್ಲಾನ ಕುತಂತ್ರಕ್ಕೆ ಕೊನೇ ಮೊಳೆ ಹೊಡೆಯೋಣ – ಚಕ್ರವರ್ತಿ ಸೂಲಿಬೆಲೆ

    ಸಮೀರ್ ಮುಲ್ಲಾನ ಕುತಂತ್ರಕ್ಕೆ ಕೊನೇ ಮೊಳೆ ಹೊಡೆಯೋಣ – ಚಕ್ರವರ್ತಿ ಸೂಲಿಬೆಲೆ

    – ಧರ್ಮಸ್ಥಳ ಪರ ಮಾತಾಡಿದ್ರೇ ಚಕ್ರವರ್ತಿಗೆ ಸೂಟ್ ಕೇಸ್ ಬಂದಿದೆ ಅಂತಾರೆ
    – ಅಣ್ಣಪ್ಪನ ನೆನೆದು ದೀಪ ಹಚ್ಚಿ ಕ್ಷಮೆ‌ ಕೇಳೋಣ ಎಂದ ಚಿಂತಕ

    ಬೆಂಗಳೂರು: ಧರ್ಮಸ್ಥಳ (Dharmasthala) ಉಳಿಸೋಣ ಹೆಸರಿನಲ್ಲಿ ʻಧರ್ಮ ರಕ್ಷಣೆʼ ಕಾರ್ಯಕ್ರಮ ಸಹಕಾರನಗರದ ರಾಘವೇಂದ್ರ ಮಠದಲ್ಲಿ ನಡೆಯಿತು.

    ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti Sulibele) ಇಂದು ವಿಜಯೋತ್ಸವದ ದಿನ, ಸುಳ್ಳುಗಳನ್ನೇ ಸತ್ಯ ಎಂದು ಎಲ್ಲರೂ ಅಂದುಕೊಂಡಿದ್ರು. ನಾನು ಈ ಪ್ರಕರಣದಲ್ಲಿ ವಿಚಾರ ಮಾಡದೇ ಬಂದಿಲ್ಲ. ಯಾವುದು ಸತ್ಯ ಅಂತ ತಿಳಿದೇ ಮೇಲೆಯೇ ಹೋರಾಟ ಮಾಡಿದ್ದು. ಸಮೀರ್ ಮುಲ್ಲಾನ (Sameer MD) ವಿಡಿಯೋಗಳನ್ನ ಗೊತ್ತಿಲ್ಲದೇ ಶೇರ್ ಮಾಡಿರ್ತೀರಾ. ಆದ್ದರಿಂದ ಮನೆಗೆ ಹೋಗಿ ಅಣ್ಣಪ್ಪನ ನೆನೆದು ದೀಪ ಹಚ್ಚಿ ಕ್ಷಮೆ‌ ಕೇಳೋಣ ಅಂದ್ರು. ಇದನ್ನೂ ಓದಿ: ʻಬುರುಡೆ ಚಿನ್ನಯ್ಯʼನ ಬಂಡವಾಳ ಬಯಲು – ಮುಸುಕುಧಾರಿಯ ಮುಖವಾಡ ಕಳಚಿದ್ದು ಹೇಗೆ?

    ಇನ್ನೂ ಸಮೀರ್ ಮುಲ್ಲಾನಿಂದ ಮಾಸ್ ಮೈಂಡ್ ವಾಷ್ ಆಗಿತ್ತು. ಆನೆ ಮಾವುತನ ಜಾಗ ಎಷ್ಟು? ಅಂತ ಆರೋಪ ಮಾಡೋರಿಗೆ ಗೊತ್ತಿಲ್ಲ. ಎರಡು ಸಾವಿರ ಅಡಿ ಜಾಗಕ್ಕೆ ಖಾವಂದರು ಕೊಲೆ ಮಾಡ್ತಾರಾ? ಚಕ್ರವರ್ತಿ ಸೂಲಿಬೆಲೆ ಉಜಿರೆಗೆ ಬಂದ್ರೇ ಚಪ್ಪಲಿಯಲ್ಲಿ ಹೊಡೀತಿನಿ ಎಂದು ಮಹೇಶ್ ಶೆಟ್ಟಿ ತಿಮರೊಡ್ಡಿ ಹೇಳಿದ್ದ. ಆದ್ರೇ ನಾವು ಉಜಿರೆಯ ತಿಮರೊಡ್ಡಿ ಮನೆ ಬಳಿಯೇ ಸಮಾವೇಶ ಮಾಡಿದ್ವಿ. ಧರ್ಮಸ್ಥಳದ ಆಟೋ ಚಾಲಕರು ನಮ್ಮಬೆಂಬಲಕ್ಕೆ ನಿಂತಿದ್ರು. ಇದನ್ನೂ ಓದಿ: ಧರ್ಮ ವಿಜಯ – ಧರ್ಮಸ್ಥಳ ದೇಗುಲದಿಂದ ಶಿವ ರುದ್ರತಾಂಡವದ ಫೋಟೋ ಅಪ್ಲೋಡ್‌

    ಜಡ್ಜ್ ವಿರೇಂದ್ರ ಹೆಗಡೆ ಚೇಲಾ ಅಂತ ಆರೋಪ ಮಾಡಿದ್ರು. ಆದ್ರೆ ಸರ್ಕಾರ ಅಂಥವರ ವಿರುದ್ಧ ಕ್ರಮ ಕೈಗೊಂಡಿಲ್ವಲ್ಲ. ಸೌಜನ್ಯಳಿಗೆ ನ್ಯಾಯ ಕೊಡಿಸೋದು ಇವರಿಗೆ ಬೇಕಿಲ್ಲ. ಜೇಬಲ್ಲಿ ಸಾಕ್ಷಿ ಇಟ್ಟುಕೊಂಡು ಯಾಕೆ ಓಡಾಡ್ತೀರಿ? ಯಾಕೆ ಅಂದ್ರೆ ಸೌಜನ್ಯ ಹೋರಾಟಕ್ಕೆ ನ್ಯಾಯ ಬೇಕಿಲ್ಲ ಇವರಿಗೆ, ಜೈನ ಸಮುದಾಯದವರು ಗೌಡ ಸಮುದಾಯದ ಸೌಜನ್ಯಳ ರೇಪ್ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ರು. ನಿಶ್ಚಲ್ ಜೈನ್ ಅಮೆರಿಕದಿಂದ ರೇಪ್ ಮಾಡೋಕೆ ಧರ್ಮಸ್ಥಳಕ್ಕೆ ಬಂದ್ರು ಅಂದ್ರು. ಆರೋಪ ಸುಳ್ಳು ಅಂತ ಸಾಬೀತಾದ್ರೂ ಓ ಅವ್ರು ದೊಡ್ಡ ಮನುಷ್ಯರು ಅದಕ್ಕೆ ಅಂದ್ರು. ಸಾಕ್ಷ್ಯ ಕೊಟ್ರೂ ಓ ಅವರು ದೊಡ್ಡೋರು ಅಂತಾರೆ. ಇದನ್ನೂ ಓದಿ: ಧರ್ಮಸ್ಥಳ ಷಡ್ಯಂತ್ರ ಕೇಸನ್ನ ರಾಜ್ಯ ಸರ್ಕಾರವೇ NIA ಗೆ ಕೊಡಬೇಕು: ಆರ್‌.ಅಶೋಕ್‌ ಆಗ್ರಹ

    ಇನ್ನೂ ಧರ್ಮಸ್ಥಳ ಪರ ಮಾತಾಡಿದ್ರೇ ಓ ಚಕ್ರವರ್ತಿಗೆ ಸೂಟ್ ಕೇಸ್ ಬಂದಿದೆ ಅಂತಾರೆ. ಸೌಜನ್ಯಳಿಗೆ ನ್ಯಾಯ ಕೊಡಿಸ್ತೀವಿ ಅಂತ ಬೇರೆ ಹೆಣ್ಣು ಮಕ್ಕಳ ಬಗ್ಗೆ ಮಾತಾಡ್ತಾರೆ. ಧರ್ಮಸ್ಥಳ ಪರ‌ ನಿಂತವರ ಮನೆಯ ಹೆಣ್ಣು ಮಕ್ಕಳ ಬಗ್ಗೆ ಮಾತಾಡ್ತಾರೆ. ತಲೆಗಳನ್ನ ತಗೊಂಡು ಹೋಗಿ ಮುಳ್ಳಂದಿ ಗೂಡಲ್ಲಿ ಇಡುತ್ತಂತೆ. ಗಿರೀಶ್ ಮಟ್ಟಣ್ಣ ಹೊಸ ಸಿದ್ಧಾಂತ ತಂದ. SIT ಯವರು ಗುಂಡಿ ತೆಗೆಯೋದು ಬಿಟ್ಟು ಮುಳ್ಳಂದಿ‌ ಗೂಡುಗಳನ್ನ ಅಗೆಯಬೇಕಿತ್ತಂತೆ. ಖಾವಾಂದರನ್ನ ಕಾಮಾಂಧರು ಅಂದ್ರಲ್ಲ ಅದು ಷಡ್ಯಂತ್ರ. ಸುಜಾತ ಭಟ್ ರನ್ನ ವಿರೇಂದ್ರ ಹೆಗಡರ ತಮ್ಮ ರೇಪ್ ಮಾಡಿದ್ರು ಅಂಥ ನಿನ್ನೆ ಹೊಸ ಕಥೆ ಕಟ್ಟಿದ್ರು. ಏನ್ ಹೇಳೋದು ಇಂತವರಿಗೆ. ನಾನು ಅಯೋಗ್ಯ ಅಂತ ಪದ ಬಳಕೆ‌ ಮಾಡಿದ್ದಕ್ಕೆ ನನ್ನನ್ನ ಸುಪ್ರೀಂ ವರೆಗೆ ಎಳೆದ್ರು. ಸುಪ್ರೀಂ ಕೋರ್ಟ್ ಅಯೋಗ್ಯ ಪದ ಜಾತಿ‌ನಿಂದನೆ ಅಲ್ಲ ಅಂತ ಹೇಳಿದೆ. ಇನ್ಮೇಲೆ ನಾನು ಅಯೋಗ್ಯ ಪದ ಬಳಕೆಗೆ ಯಾವುದೇ ಅಡತಡೆಯಿಲ್ಲದೇ ಬಳಸಬಹುದು ಎಂದ್ರು. ಇದನ್ನೂ ಓದಿ: ಒಂದೊಂದೇ ಸತ್ಯಗಳು ಹೊರಗೆ ಬರ್ತಿದೆ: ವೀರೇಂದ್ರ ಹೆಗ್ಗಡೆ

  • ಉಜಿರೆಯಲ್ಲಿ ಇದ್ದಿದ್ದಕ್ಕೆ ಬಚಾವಾದೆ, ಉಡುಪಿಯಲ್ಲಿ ಇದ್ದಿದ್ರೆ ಮಲ್ಪೆ ಬೀಚಲ್ಲಿ ಫುಟ್ಬಾಲ್ ಆಡಿಸ್ತಿದ್ದೆ – ಸಮೀರ್‌ಗೆ ಯಶ್‌ಪಾಲ್ ಸುವರ್ಣ ಎಚ್ಚರಿಕೆ

    ಉಜಿರೆಯಲ್ಲಿ ಇದ್ದಿದ್ದಕ್ಕೆ ಬಚಾವಾದೆ, ಉಡುಪಿಯಲ್ಲಿ ಇದ್ದಿದ್ರೆ ಮಲ್ಪೆ ಬೀಚಲ್ಲಿ ಫುಟ್ಬಾಲ್ ಆಡಿಸ್ತಿದ್ದೆ – ಸಮೀರ್‌ಗೆ ಯಶ್‌ಪಾಲ್ ಸುವರ್ಣ ಎಚ್ಚರಿಕೆ

    ಉಡುಪಿ: ನೀನು ಉಜಿರೆಯಲ್ಲಿ (Mangaluru) ಇದ್ದದ್ದಕ್ಕೆ ಬಚಾವಾದೆ, ಉಡುಪಿಯಲ್ಲಿ ಇದ್ದಿದ್ರೆ ಮಲ್ಪೆ ಬೀಚಿನಲ್ಲಿ ಫುಟ್ಬಾಲ್ ಆಡಿಸುತ್ತಿದ್ದೆ ಎಂದು ಶಾಸಕ ಯಶ್‌ಪಾಲ್ ಸುವರ್ಣ (Yashpal Suvarna) ಯೂಟ್ಯೂಬರ್ ಸಮೀರ್‌ಗೆ (Youtuber Sameer) ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

    `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಯೂಟ್ಯೂಬರ್ ಸಮೀರ್‌ಗೆ ನೇರ ಎಚ್ಚರಿಕೆ ಕೊಡುತ್ತೇನೆ. ನೀನು ಉಜಿರೆಯಲ್ಲಿ ಇದ್ದದ್ದಕ್ಕೆ ಬಚಾವಾದೆ. ಉಡುಪಿಯಲ್ಲಿ ಇರುತ್ತಿದ್ದರೆ ಮಲ್ಪೆ ಬೀಚಿನಲ್ಲಿ ಫುಟ್ಬಾಲ್ ಆಡಿಸುತ್ತಿದ್ದೆ. ನಿನ್ನನ್ನು ನಾವು ಫುಟ್ಬಾಲ್ ಮಾಡಿ ಆಡಿಸುತ್ತಿದ್ದೆವು. ಅಧಿವೇಶನ ಮುಗಿದ ಮೇಲೆ ಬರುತ್ತೇನೆ. ಸಮೀರ್ ಬಗ್ಗೆ ಒಳ್ಳೆಯ ಪ್ಲ್ಯಾನ್‌ ಮಾಡಿ, ಆತನನ್ನು ರಾಜ್ಯದಿಂದ ಓಡಿಸುತ್ತೇವೆ. ಕಾಂಗ್ರೆಸ್ ಹೈಕಮಾಂಡ್‌ನ ಒತ್ತಡದಿಂದ ಆತ ಬಂಧನವಾಗಿಲ್ಲ. ನಮ್ಮ ಸರ್ಕಾರ ಇರಲಿ, ಇರದೇ ಇರಲಿ. ನಮ್ಮದು ಹಿಂದೂ ಸಮಾಜದ ಪರ ವಾದ. ನಮ್ಮದು ಹಿಂದುತ್ವದ ಫ್ಯಾಕ್ಟರಿ, ಹಿಂದು ಸಮಾಜವನ್ನು ಒಡೆಯಲು ಸಾಧ್ಯವಿಲ್ಲ ಎಂದು ಕಿಡಿಕಾರಿದರು.ಇದನ್ನೂ ಓದಿ: ಸುಜಾತಾ ಭಟ್‌ರನ್ನು ಮೊದಲು ಪೊಲೀಸರು ವಶಕ್ಕೆ ಪಡೆದ ವಿಚಾರಣೆ ನಡೆಸಬೇಕು: ವಾಸಂತಿ ಸಹೋದರ ಒತ್ತಾಯ

    ಅಣ್ಣಪ್ಪ ಪಂಜುರ್ಲಿ ದೈವದ ಅನುಗ್ರಹವಾಗಿದೆ. ದೇವರ ಮಧ್ಯಸ್ಥಿಕೆಯಲ್ಲಿ ಎಲ್ಲ ಇತ್ಯರ್ಥ ಆಗುತ್ತದೆ. ಬಿಜೆಪಿ ಹೋರಾಟ ಒಂದು ಭಾಗ ಮಾತ್ರ. ಅಣ್ಣಪ್ಪ ಪಂಜುರ್ಲಿ ಎಲ್ಲರ ಮನೆಯ ದೇವರು. ಮೊಗವೀರ ಸಮುದಾಯದ ಪ್ರಾರ್ಥನೆ ಫಲ ಕೊಟ್ಟಿದೆ. ಕೋಟ್ಯಂತರ ದೈವಭಕ್ತರ ಪ್ರಾರ್ಥನೆ ಫಲಿಸಿದೆ. ಪರಶುರಾಮನ ಸೃಷ್ಟಿಯಲ್ಲಿ ಧರ್ಮಕ್ಕೆ ಗೆಲುವಾಗಿದೆ. ಮಂಜುನಾಥ ಸ್ವಾಮಿ, ಅಣ್ಣಪ್ಪ ಸ್ವಾಮಿ ಕಣ್ಣು ಬಿಟ್ಟಿದ್ದಾರೆ. ಉಡುಪಿ ಕೃಷ್ಣ ಮುಖ್ಯಪ್ರಾಣ ಅನ್ಯಾಯಕ್ಕೆ ಶಿಕ್ಷೆ ಕೊಟ್ಟಿದ್ದಾರೆ ಎಂದು ಹೇಳಿದರು.

    ಹಿಂದೂ ಧರ್ಮದ ಷಡ್ಯಂತ್ರಕ್ಕೆ ಫಲಿತಾಂಶ ಹೊರಬೀಳಬೇಕಿದೆ. ಹಣಕಾಸಿನ ವಿಚಾರದಲ್ಲಿ ಧರ್ಮದ ಅವಹೇಳನಕ್ಕೆ ಶಿಕ್ಷೆ ಪ್ರಾಪ್ತಿಯಾಗಿದೆ. ಹಿಂದೂ ಧರ್ಮವನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡವರು ಶಿಕ್ಷೆ ಅನುಭವಿಸುತ್ತಿದ್ದಾರೆ. ಹಿಂದೆ ಬ್ರಿಟಿಷರ ದಬ್ಬಾಳಿಕೆ ನಡೆಯುತ್ತಿತ್ತು. ಈಗ ಕಮ್ಯುನಿಸ್ಟರ ಮಾನಸಿಕತೆ ದಬ್ಬಾಳಿಕೆ ಮಾಡುತ್ತಿದೆ. ಮತಾಂತರದ ದೊಡ್ಡ ಷಡ್ಯಂತ್ರವಿದು, ಸಂಸದ ಶಶಿಕಾಂತ್ ಸೆಂಥಿಲ್ ವಿರುದ್ಧ ಸಹ ವಿಚಾರಣೆಯಾಗಬೇಕು ಎಂದು ಆಗ್ರಹಿಸಿದರು.ಇದನ್ನೂ ಓದಿ: ಬೆಂಗಳೂರು – ಸಿಗಂದೂರು ನಡುವೆ ಕೆಎಸ್ಆರ್‌ಟಿಸಿ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭ

  • Video | ಅನನ್ಯಾ ಭಟ್‌ ಹೆಸ್ರನ್ನೇ ಬಂಡವಾಳ ಮಾಡ್ಕೊಂಡು ಕಥೆ ಕಟ್ಟಿದ್ನಾ ಸಮೀರ್‌?

    Video | ಅನನ್ಯಾ ಭಟ್‌ ಹೆಸ್ರನ್ನೇ ಬಂಡವಾಳ ಮಾಡ್ಕೊಂಡು ಕಥೆ ಕಟ್ಟಿದ್ನಾ ಸಮೀರ್‌?

    ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ (Dharmasthala Village) ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಅಂತ ದೂರು ಕೊಟ್ಟು ಗೊಂದಲ ಸೃಷ್ಟಿಸಿರುವ ತಾಯಿ ಸುಜಾತ ಭಟ್‌ಗೆ ಎಸ್‌ಐಟಿ ನೋಟಿಸ್‌ ಕೊಟ್ಟಿದ್ದು, ವಿಚಾರಣೆ ಹಾಜರಾಗುವಂತೆ ಸೂಚಿಸಿದೆ. ಈ ನಡುವೆಯೇ ಯೂಟ್ಯೂಬರ್‌ ಎಂ.ಡಿ ಸಮೀರ್‌ (Sameer MD) ವೀವ್ಸ್‌, ಲೈಕ್ಸ್‌ಗಾಗಿಯೇ ಕಟ್ಟು ಕಥೆಗಳನ್ನ ಕಟ್ಟಿದ್ರಾ ಅನ್ನೋ ಪ್ರಶ್ನೆ ಕೂಡ ಮುನ್ನೆಲೆಗೆ ಬಂದಿದೆ. ಇದಕ್ಕೆ ಅಮೀರ್‌ ವಿಡಿಯೋಗಳೇ ಸಾಕ್ಷಿಯಾಗಿದೆ. ಈ ಕುರಿತ ಕಂಪ್ಲೀಟ್‌ ಡಿಟೇಲ್ಸ್‌ ವಿಡಿಯೋನಲ್ಲಿದೆ…

  • ಬಳ್ಳಾರಿಯ ಸಮೀರ್ ನಿವಾಸಕ್ಕೆ ಪೊಲೀಸ್ ನೋಟಿಸ್‌ – ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ

    ಬಳ್ಳಾರಿಯ ಸಮೀರ್ ನಿವಾಸಕ್ಕೆ ಪೊಲೀಸ್ ನೋಟಿಸ್‌ – ನಾಳೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ

    ಬಳ್ಳಾರಿ/ಮಂಗಳೂರು: ಧರ್ಮಸ್ಥಳ ಠಾಣೆಯಲ್ಲಿ (Dharmasthala Police Station) ದಾಖಲಾಗಿರುವ ಸ್ವಯಂಪ್ರೇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಯೂಟ್ಯೂಬರ್‌ ಸಮೀರ್‌ (Sameer MD) ಅವರ ಬಳ್ಳಾರಿ ನಿವಾಸಕ್ಕೆ ಧರ್ಮಸ್ಥಳದ ಪೊಲೀಸರು ನೋಟಿಸ್‌ ನೀಡಿದ್ದಾರೆ.

    ಮನೆಗೆ ಬೀಗ ಜಡಿದಿದ್ದ ಹಿನ್ನೆಲೆ ಬಂಡಿಹಟ್ಟಿ ಏರಿಯಾದಲ್ಲಿರುವ ಅವರ ಮನೆ ಗೋಡೆಗೆ ನೋಟಿಸ್‌ ಅಂಟಿಸಿದ್ದು, ನಾಳೆ (ಆ.24) ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ನಿನ್ನೆ ಸಂಜೆಯೇ ಧರ್ಮಸ್ಥಳ ಠಾಣೆ ಪೊಲೀಸರು ಮನೆಗೆ ನೋಟಿಸ್‌ ಅಂಟಿಸಿ ಹೋಗಿದ್ದಾರೆ. ಇದು ಈ ಪ್ರಕರಣದಲ್ಲಿ ಸಮೀರ್‌ಗೆ ಮೂರನೇ ನೋಟಿಸ್‌ ಆಗಿದೆ. ಇದನ್ನೂ ಓದಿ: ಧರ್ಮಸ್ಥಳಕ್ಕೆ ಹೋಗಲು ಭಯವಿದೆ – ಪೊಲೀಸರ ಮುಂದೆ ಹಲವು ಬೇಡಿಕೆ ಇಟ್ಟ ಸಮೀರ್‌

    ಬೆಳ್ತಂಗಡಿ ಠಾಣೆಗೆ ಹಾಜರಾಗುವಂತೆ ಸೂಚನೆ
    ಇನ್ನೂ ಧರ್ಮಸ್ಥಳಕ್ಕೆ ಹೋಗಲು ತನಗೆ ಜೀವ ಭಯವಿದೆ ಎಂದಿದ್ದ ಸಮೀರ್‌ ಸುರಕ್ಷತೆ ದೃಷ್ಟಿಯಿಂದ ಧರ್ಮಸ್ಥಳ ಠಾಣೆಗೆ ನಾನು ಬರಲಾರೆ ಎಂದಿದ್ದ. ಈ ಹಿನ್ನೆಲೆ ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಹಾಜರಾಗಿ ವಿಚಾರಣೆ ಎದುರಿಸುವಂತೆ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನನಗೆ ಅನನ್ಯಾ ಭಟ್‌ ಅನ್ನೋ ಮಗಳೇ ಇರಲಿಲ್ಲ – ಉಲ್ಟಾ ಹೊಡೆದ ಸುಜಾತ ಭಟ್‌

    ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇತ್ತೀಚೆಗಷ್ಟೇ ಬನ್ನೇರುಘಟ್ಟದಲ್ಲಿರುವ ಮನೆಯಲ್ಲೇ ಸಮೀರ್‌ನನ್ನ ವಶಕ್ಕೆ ಪಡೆಯಲು ತೆರಳಿದ್ದರು. ಬಳಿಕ ನಿರೀಕ್ಷಣಾ ಜಾಮೀನು ಪಡೆದಿದ್ದರು. ಇದನ್ನೂ ಓದಿ: Dharmasthala Case | ವಿಚಾರಣೆಗೆ ಹಾಜರಾಗುವಂತೆ ಸುಜಾತ ಭಟ್‌ಗೆ SIT ನೋಟಿಸ್