Tag: Sameer Acharya

  • ಬಿಗ್‌ ಬಾಸ್ ಸಮೀರ್ ಆಚಾರ್ಯ ದಾಂಪತ್ಯದಲ್ಲಿ ಕಲಹ – ಹೊಡೆದಾಡಿಕೊಂಡ ಜೋಡಿಯನ್ನು ಒಂದು ಮಾಡಿದ ಪೊಲೀಸರು!

    ಬಿಗ್‌ ಬಾಸ್ ಸಮೀರ್ ಆಚಾರ್ಯ ದಾಂಪತ್ಯದಲ್ಲಿ ಕಲಹ – ಹೊಡೆದಾಡಿಕೊಂಡ ಜೋಡಿಯನ್ನು ಒಂದು ಮಾಡಿದ ಪೊಲೀಸರು!

    ಒಂದು ಕಡೆ ಬಿಗ್ ಬಾಸ್ ಹನ್ನೊಂದರ ಸೀಸನ್‌ಗೆ ಅದ್ಧೂರಿ ಚಾಲನೆ ಸಿಕ್ಕಿದ್ದರೆ, ಮತ್ತೊಂದು ಕಡೆ ಮಾಜಿ ಬಿಗ್ ಬಾಸ್ ದಾಂಪತ್ಯದಲ್ಲಿ ಕಲಹ ಉಂಟಾಗಿದೆ. ಈ ಜೋಡಿ ಹೊಡೆದಾಡಿಕೊಂಡು ಠಾಣೆ ಮೆಟ್ಟಿಲೇರಿದ ಪ್ರಸಂಗವೂ ನಡೆದಿದೆ.

    ಹೌದು. ಬಿಗ್‌ಬಾಸ್ ಮತ್ತು ಕನ್ನಡದ ಕೋಟ್ಯಾಧಿಪತಿ ಖ್ಯಾತಿಯ ಸಮೀರ್ ಆಚಾರ್ಯ ದಂಪತಿ ಬಾಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಮಗುವಿಗೆ ಬೈದಿದ್ದಕ್ಕೆ ಗಂಡ, ಅತ್ತೆ, ಮಾವ ಸೇರಿ ಥಳಿಸಿದ್ದಾರೆ ಎಂದು ಸಮೀರ್ ಆಚಾರ್ಯ ಪತ್ನಿ ಹುಬ್ಬಳ್ಳಿ ಮಹಿಳಾ ಠಾಣೆ ಮೆಟ್ಟಿಲೇರಿದ್ದಾರೆ. ಹುಬ್ಬಳ್ಳಿ ವಿಶ್ವೇಶ್ವರ ನಗರದಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: BBK 11: ದೊಡ್ಮನೆಗೆ ಕಾಲಿಟ್ಟ ಶಿಶಿರ್, ತ್ರಿವಿಕ್ರಮ್, ಮಾನಸಾ

    ಮಗಳು ಅಳುತ್ತಿದ್ದ ಕಾರಣಕ್ಕೆ ಸಮೀರ್ ಪತ್ನಿ ಶ್ರಾವಣಿ ಗದಸಿದ್ದಾರೆ. ಅಷ್ಟಕ್ಕೇ ಸಮೀರ್ ತಂದೆ ಆಕೆಯನ್ನ ಬೈದಿದ್ದಾರೆ. ಇದೇ ವಿಷಯ ದೊಡ್ಡದಾಗಿ ಬೆಳೆದು, ಪತಿ ಸಮೀರ್ ತಮ್ಮ ತಂದೆ ತಾಯಿ ಜೊತೆ ಸೇರಿಕೊಂಡು ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಶ್ರಾವಣಿ ಆರೋಪಿಸಿದ್ದಾರೆ. ಅಲ್ಲದೇ ಘಟನೆ ವೇಳೆ ಇನ್ಸ್ಟಾಗ್ರಾಂನಲ್ಲಿ ಲೈವ್ ಹೋಗಿದ್ದಕ್ಕೆ ತನ್ನ ಮೊಬೈಲ್ ಒಡೆದುಹಾಕಿ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ. ಇನ್ನೊಂದೆಡೆ ಸಮೀರ್ ಆಚಾರ್ಯ ತಂದೆಯ ತಲೆಗೂ ಗಾಯಗಳಾಗಿವೆ ಎಂದು ತಿಳಿದುಬಂದಿದೆ.

    https://youtu.be/K7H6hKnjhWE?si=wwYlNEXOvGJet6i7

    ತನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಶ್ರಾವಣಿ ಠಾಣೆ ಮೆಟ್ಟಿಲೇರಿದ್ದರು. ಇತ್ತ ಸಮೀರ್ ಆಚಾರ್ಯ ತಂದೆಯೂ ಸೊಸೆ ವಿರುದ್ಧ ದೂರು ನೀಡಲು ಮುಂದಾಗಿದ್ದರು. ಸಮೀರ್ ತಂದೆ ರಾಘವೇಂದ್ರ ಮಣ್ಣೂರ ಅವರಿಗೂ ತಲೆಗೆ ಪೆಟ್ಟಾಗಿತ್ತು. ಬಳಿಕ ಠಾಣೆಯಲ್ಲಿ ಕೌನ್ಸಲಿಂಗ್ ಮಾಡಿದ ಪೊಲೀಸರು ದಂಪತಿ, ಅತ್ತೆ-ಮಾವರನ್ನ ಒಂದು ಮಾಡಿದ ಮನೆಗೆ ಕಳಿಸಿದ್ದಾರೆ. ಕೌನ್ಸೆಲಿಂಗ್ ಬಳಿಕ ಇನ್ಮುಂದೆ ಹೀಗೆ ಆಗುವುದಿಲ್ಲ ಎಂದು ಹೇಳಿ ಯಾವುದೇ ದೂರು ದಾಖಲಿಸದೇ ಬಂದಿದ್ದಾರೆ. ಇದನ್ನೂ ಓದಿ: ಜೊತೆಯಾಗಿ ದೊಡ್ಮನೆಗೆ ಕಾಲಿಟ್ಟ ಅನುಷಾ ರೈ, ಧರ್ಮ ಕೀರ್ತಿರಾಜ್‌

    ಪ್ರೀತಿಸಿ ಮದ್ವೆಯಾಗಿದ್ದ ಜೋಡಿ:
    ಸಮೀರ್ ಹಾಗೂ ಶ್ರಾವಣಿ ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾದವರು. ಬಿಗ್ ಬಾಸ್ ಸ್ಪರ್ಧೆಯ ನಂತರ ಇಬ್ಬರೂ ಬೇರೆ ಟಿವಿ ಶೋದಲ್ಲಿಯೂ ಮಿಂಚಿದ್ದರು. ಯೂಟ್ಯೂಬ್, ಇನಸ್ಟಾಗ್ರಾಂ ನಲ್ಲಿಯೂ ಸಾಕಷ್ಟು ಟ್ರೆಂಡ್ ಸೃಷ್ಟಿಸಿದ್ದರು. ಕನ್ನಡದ ಕೋಟ್ಯಾಧಿಪತಿ ಶೋನಲ್ಲೂ ಸದ್ದು ಮಾಡಿದ್ದರು. ಇದನ್ನೂ ಓದಿ: BBK 11: ‘ಬಿಗ್’ ಮನೆಗೆ ಹಂಸಾ, ಮೋಕ್ಷಿತಾ, ಐಶ್ವರ್ಯಾ, ಚೈತ್ರಾ, ಮಂಜು ಗ್ರ್ಯಾಂಡ್ ಎಂಟ್ರಿ

  • ಹೆಣ್ಣು ಮಗುವಿನ ತಂದೆಯಾದ ಸಮೀರ್ ಆಚಾರ್ಯ: ತುಳಜಾ ಭವಾನಿ ಬಂದ್ಳು ಎಂದ ದಂಪತಿ

    ಹೆಣ್ಣು ಮಗುವಿನ ತಂದೆಯಾದ ಸಮೀರ್ ಆಚಾರ್ಯ: ತುಳಜಾ ಭವಾನಿ ಬಂದ್ಳು ಎಂದ ದಂಪತಿ

    ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ಸಮೀರ್ ಆಚಾರ್ಯ ಹಾಗೂ ಶ್ರಾವಣಿ ದಂಪತಿಗೆ ಹೆಣ್ಣು ಮಗು ಜನನವಾಗಿದೆ. ಮನೆಗೆ ಮಗಳು ಬಂದ ಖುಷಿಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಮನೆಗೆ ತುಳಜಾ ಭವಾನಿ ಬಂದಳು ಎಂದು ಸಂಭ್ರಮಿಸಿದ್ದಾರೆ. ಜೀವನದ ನವ ಅಧ್ಯಾಯದ ಕುರಿತು ಶ್ರಾವಣಿ ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.

    ಕೆಲ ತಿಂಗಳ ಹಿಂದೆಯಷ್ಟೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದ ಈ ದಂಪತಿ ರಾಜಾ ರಾಣಿ ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದರು. ಅಲ್ಲದೇ ಪುನೀತ್ ರಾಜ್ ಕುಮಾರ್ ನಡೆಸಿಕೊಡುತ್ತಿದ್ದ ಕನ್ನಡ ಕೋಟ್ಯಧಿಪತಿಯಲ್ಲೂ ಸಮೀರ್ ಆಚಾರ್ಯ ಭಾಗಿಯಾಗಿದ್ದರು. ರಾಜಾ ರಾಣಿ ರಿಯಾಲಿಟಿ ಶೋ ವೇಳೆ ತಮಗೆ ಮಿಸ್ ಕ್ಯಾರೇಜ್ ಆಗಿರುವ ಕುರಿತು ಶ್ರಾವಣಿ ಮಾತಾಡಿ ಭಾವುಕರಾಗಿದ್ದರು. ಇದನ್ನೂ ಓದಿ: ಉಡುಪಿ ಕೃಷ್ಣನ ದರ್ಶನ ಪಡೆದ ಸಿಂಹಪ್ರಿಯ ಜೋಡಿ

    ಮಗುವಿನ ಕಾಲುಗಳನ್ನು ತೋರಿಸುವಂತಹ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಶ್ರಾವಣಿ, ತಮ್ಮ ಮೊದಲ ಮಗುವಿಗೆ ನಿಮ್ಮೆಲ್ಲ ಆಶೀರ್ವಾದವಿರಲಿ ಎಂದು ಕೇಳಿದ್ದಾರೆ. ಈ ದಂಪತಿಯ ಮಗುವಿಗೆ ಶುಭವಾಗಲಿ ಎಂದು ಹಲವರು ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ರು ʻರಾಜಾ ರಾಣಿʼ ಖ್ಯಾತಿಯ ಸಮೀರ್ ಆಚಾರ್ಯ ದಂಪತಿ

    ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ರು ʻರಾಜಾ ರಾಣಿʼ ಖ್ಯಾತಿಯ ಸಮೀರ್ ಆಚಾರ್ಯ ದಂಪತಿ

    `ಬಿಗ್ ಬಾಸ್’ (Bigg Boss) ಖ್ಯಾತಿಯ ಸಮೀರ್ ಆಚಾರ್ಯ (Sameer Acharya) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸಮೀರ್ ಮತ್ತು ಶ್ರಾವಣಿ ದಂಪತಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.


    ಬಿಗ್ ಬಾಸ್(Bigg Boss) ಮತ್ತು ರಾಜಾ ರಾಣಿ(Raja Rani) ರಿಯಾಲಿಟಿ ಶೋ ಮೂಲಕ ಗಮನ ಸೆಳೆದ ಸ್ಪರ್ಧಿ ಸಮೀರ್ ಆಚಾರ್ಯ ಮತ್ತು ಶ್ರಾವಣಿ ದಂಪತಿ ಮನೆಯಲ್ಲಿ ಸಂತಸ ಮನೆ ಮಾಡಿದೆ. ʻರಾಜ ರಾಣಿʼ ರಿಯಾಲಿಟಿ ಶೋ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಈ ಜೋಡಿ ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ:ಶೂಟಿಂಗ್‌ಗೆ ಬ್ರೇಕ್, ತಾಂಜಾನಿಯಾ ಕಾಡಿನಲ್ಲಿ ಪತ್ನಿ ಜೊತೆ ರಾಮ್‌ಚರಣ್

    ಈ ಗುಡ್ ನ್ಯೂಸ್ ಕುರಿತು ಸಮೀರ್ ಪತ್ನಿ ಶ್ರಾವಣಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ನೆಚ್ಚಿನ ಜೋಡಿಗೆ ಫ್ಯಾನ್ಸ್ ಶುಭ ಹಾರೈಸಿದ್ದಾರೆ.

    ಸಂಪ್ರದಾಯದ ಪ್ರಕಾರ ಶ್ರಾವಣಿಗೆ ಅವರಿಗೆ ಸೀಮಂತ ಮಾಡಲಾಗಿದೆ. ಜೋಕಾಲಿಯಲ್ಲಿ ದಂಪತಿಗಳಿಬ್ಬರು ಕುಳಿತು ಹಿರಿಯರು ಹಾಡುತ್ತಿರುವ ವೀಡಿಯೋ ಶೇರ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಂಕೋಲ ಉತ್ಸವದಲ್ಲಿ ಚಂದನ್ ಶೆಟ್ಟಿ ಹವಾ – ಬೃಹತ್ ವೇದಿಕೆಯಲ್ಲೇ ಬೇಬಿಡಾಲ್‍ಗೆ ವಿಡಿಯೋ ಕಾಲ್

    ಅಂಕೋಲ ಉತ್ಸವದಲ್ಲಿ ಚಂದನ್ ಶೆಟ್ಟಿ ಹವಾ – ಬೃಹತ್ ವೇದಿಕೆಯಲ್ಲೇ ಬೇಬಿಡಾಲ್‍ಗೆ ವಿಡಿಯೋ ಕಾಲ್

    ಕಾರವಾರ: ಪ್ರತಿ ವರ್ಷದಂತೆ ಈ ಬಾರಿಯೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಕೋಲ ಉತ್ಸವ ಅದ್ಧೂರಿಯಾಗಿ ನಡೆದಿದೆ. ಈ ಉತ್ಸವಕ್ಕೆ ಕನ್ನಡದ ಖ್ಯಾತ ರ‍್ಯಾಪ್ ಸ್ಟಾರ್ ಚಂದನ್ ಶೆಟ್ಟಿ ಆಗಮಿಸಿದ್ದು, ಪ್ರೇಕ್ಷಕರಿಗೆ ಸಂಗೀತದ ರಸದೌತಣ ನೀಡಿದ್ದಾರೆ.

    ಗುರುವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಜೈ ಹಿಂದ್ ಮೈದಾನದಲ್ಲಿ ಅಂಕೋಲ ಉತ್ಸವ ಅದ್ಧೂರಿಯಾಗಿ ನಡೆದಿದೆ. ಈ ಕಾರ್ಯಕ್ರಮಕ್ಕೆ ಬಿಗ್‍ಬಾಸ್ ಸೀಸನ್ 5ರ ವಿನ್ನರ್ ಚಂದನ್ ಶೆಟ್ಟಿ ಆಗಮಿಸಿದ್ದು, ಅನೇಕ ಹಾಡುಗಳನ್ನು ಹಾಡಿ, ಡ್ಯಾನ್ಸ್ ಮಾಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದಾರೆ.

    ಇದೇ ಅಂಕೋಲ ಉತ್ಸವಕ್ಕೆ ಬಿಗ್‍ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಮತ್ತು ಅವರ ಪತ್ನಿ ಶ್ರಾವಣಿ ಇಬ್ಬರು ಆಗಮಿಸಿದ್ದು, ಬಿಗ್ ಮನೆಯಲ್ಲಿ ಇದ್ದಾಗ ಚಂದನ್ ಶೆಟ್ಟಿ, ಶ್ರಾವಣಿಗಾಗಿ ಒಂದು ಹಾಡು ಬರೆದಿದ್ದರು. ಆ ಹಾಡನ್ನು ವೇದಿಕೆಯ ಮೇಲೆ ಹಾಡಿದ್ದು, ಅದಕ್ಕೆ ಸಮೀರ್ ಆಚಾರ್ಯ ಮತ್ತು ಶ್ರಾವಣಿ ಇಬ್ಬರು ಡ್ಯಾನ್ಸ್ ಮಾಡಿದ್ದಾರೆ. ಇದೇ ವೇದಿಕೆಯ ಮೇಲೆ ಚಂದನ್ ಶೆಟ್ಟಿ, ನಿವೇದಿತಾ ಗೌಡಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ.

    ಉತ್ಸವದಲ್ಲಿ ಅಭಿಮಾನಿಗಳು ಕಳೆದ ಬಾರಿ ಕುಮುಟಾಗೆ ಬಂದಿದ್ದಾಗ ನೀವು ನಿವೇದಿತಾ ಗೌಡಗೆ ಕಾಲ್ ಮಾಡಿದ್ರಿ ಎಂದು ಪ್ರಶ್ನೆ ಕೇಳಿದ್ದರು. ಅದಕ್ಕೆ ನಾನು ಕಳೆದ ಬಾರಿ ಆಡಿಯೋ ಕಾಲ್ ಮಾಡಿದ್ದೆ, ಈ ಬಾರಿ ವಿಡಿಯೋ ಕಾಲ್ ಮಾಡುತ್ತೇನೆ ಎಂದು ನಿವೇದಿತಾ ಗೌಡಗೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದಾರೆ. ಬಳಿಕ ನಿವೇದಿತಾ ಗೌಡ ಅವರು ಎಲ್ಲರೂ ಕಾರ್ಯಕ್ರಮವನ್ನು ಚೆನ್ನಾಗಿ ಎಂಜಾಯ್ ಮಾಡಿ ಎಂದು ವಿಶ್ ತಿಳಿಸಿದ್ದಾರೆ.

    ಈ ಮಧ್ಯೆ ತಮ್ಮ ಅಭಿಮಾನಿಗಳಿಗೆ ಪ್ರಶ್ನೆ ಕೇಳುವಂತೆ ಮೈಕ್ ನೀಡಿದ್ದರು. ಆಗ ಮೈಕ್ ಸಿಕ್ಕಿದ್ದೇ ತಡ ಚಂದನ್ ಶೆಟ್ಟಿಗೆ ಬಿಗ್ ಬಾಸ್‍ನಲ್ಲಿ ಪ್ರತಿಸ್ಪರ್ಧಿಯಾದ ಶೃತಿ ಜೊತೆ ಇನ್ನೂ ಸಂಪರ್ಕದಲ್ಲಿ ಇದ್ದೀರಾ ಎಂದು ಕೇಳಿದ್ದಾರೆ. ಅದಕ್ಕೆ ಚಂದನ್ ಇತ್ತೀಚೆಗಷ್ಟೆ ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದೇ ರೀತಿ ಅನೇಕ ಪ್ರಶ್ನೆಗಳನ್ನು ಕೇಳಿದ್ದು, ಅವರೆಲ್ಲರಿಗೂ ಸಂತಸದಿಂದ ಉತ್ತರ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟ್ರೋಲ್ ಮಾಡಿದವರಿಗೆ ಎಫ್‍ಬಿ ಲೈವ್ ಮೂಲಕ ಖಡಕ್ ಉತ್ತರಕೊಟ್ಟ ಸಮೀರಾಚಾರ್ಯ

    ಟ್ರೋಲ್ ಮಾಡಿದವರಿಗೆ ಎಫ್‍ಬಿ ಲೈವ್ ಮೂಲಕ ಖಡಕ್ ಉತ್ತರಕೊಟ್ಟ ಸಮೀರಾಚಾರ್ಯ

    ಬೆಂಗಳೂರು: ಇತ್ತೀಚೆಗೆ ‘ಕನ್ನಡದ ಕೋಟ್ಯಧಿಪತಿ’ ಯಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಸಮೀರಾಚಾರ್ಯ ತಮ್ಮ ಪತ್ನಿ ಶ್ರಾವಣಿಯವರಿಗೆ ಹೇಳಿದ ಮಾತಿನ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದರು. ಈಗ ಸ್ವತಃ ಸಮೀರಾಚಾರ್ಯ ಅವರೇ ಈ ಬಗ್ಗೆ ಸ್ಪಷ್ಟಪಡಿಸಿದ್ದಾರೆ.

    ಈ ಬಗ್ಗೆ ಫೇಸ್‍ಬುಕ್ ನಲ್ಲಿ ಒಂದು ವಿಡಿಯೋ ಮಾಡಿ ನಡೆದ ಘಟನೆಗಳ ಬಗ್ಗೆ ವಿವರ ನೀಡಿ ಸ್ಪಷ್ಟನೆ ಕೊಟ್ಟಿದ್ದಾರೆ. “ಬಹಳ ದಿನದಿಂದ ನನ್ನನ್ನು ಎಲ್ಲರೂ ನೆನೆಸಿಕೊಳ್ಳುತ್ತಿದ್ದೀರಿ. ಫೇಸ್ ಬುಕ್ ಪೇಜ್ ನಲ್ಲಿ ಬಹಳ ಜನರು ವಿಸಿಟ್ ಮಾಡುತ್ತಿದ್ದಾರೆ. ಆದ್ದರಿಂದ ಇತ್ತೀಚೆಗೆ ಸಮೀರಾಚಾರ್ಯ ಫುಲ್ ವೈರಲ್ ಆಗಿದ್ದಾರೆ. ಆದರೆ ಇಷ್ಟು ದಿನ ಸಮೀರಾಚಾರ್ಯ ಅವರು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದರು ಯಾಕೆ ವೈರಲ್ ಆಗಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

    ಒಳ್ಳೆಯ ಕೆಲಸ
    ಪಾಠ – ಪ್ರವಚನ ಮಾಡುತ್ತಿದ್ದರೂ ಅದನ್ನು ಯಾರು ಶೇರ್ ಮಾಡಲಿಲ್ಲ. ಪ್ರತಿಯೊಂದು ಹಳ್ಳಿ ಹಳ್ಳಿಗೆ ಹೋಗಿ ನಮ್ಮ ದೇಶದ ಸಂಸ್ಕೃತಿಯನ್ನು ಹೇಳಿದ್ದರು ಅದನ್ನು ಯಾರು ಶೇರ್ ಮಾಡಿಲ್ಲ. ಪ್ರತಿ ಶನಿವಾರ, ಭಾನುವಾರ ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣವನ್ನು ಉಚಿತವಾಗಿ ಕೊಡುತ್ತಿದ್ದರು ಅದನ್ನು ಯಾರು ವೈರಲ್ ಮಾಡಿಲ್ಲ. ಇನ್ನು ಸ್ಕೂಲ್ ತೆಗೆದು ರೈತರ ಮತ್ತು ಸೈನಿಕರ ಮಕ್ಕಳಿಗೆ ಶಿಕ್ಷಣ ಕೊಡಬೇಕು ಅಂತ ಹೊರಟರು. ಅದನ್ನು ಯಾರು ಅಷ್ಟು ವೈರಲ್ ಮಾಡಲಿಲ್ಲ ಎಂದು ಸಮೀರಾಚಾರ್ಯ ಹೇಳಿದ್ದಾರೆ.

    ಇತ್ತೀಚೆಗೆ `ಕನ್ನಡದ ಕೋಟ್ಯಧಿಪತಿ’ ಕಾರ್ಯಕ್ರಮದಲ್ಲಿ ಗಂಡ ಹೆಂಡತಿ ಮಾತನಾಡಿ, ಆ ಕಾರ್ಯಕ್ರಮದ ವಾತಾವರಣಕ್ಕೆ ನಗು ತುಂಬಿ, ಎಲ್ಲರನ್ನು ನಗಿಸಲು ಪ್ರಯತ್ನ ಮಾಡಿದ್ದರು. ಅದೇ ಈಗ ಸಮೀರಾಚಾರ್ಯರಿಗೆ ಮುಳುವಾಯ್ತು ಅನ್ನಿಸುತ್ತದೆ. ಸಮೀರಾಚಾರ್ಯ ತಮ್ಮ ಹೆಂಡತಿನ ಬೈದರು ಎಂದು ಎಷ್ಟೋ ಜನ ಹೇಳುತ್ತಿದ್ದಾರೆ. ಅವರಿಗೆ ನಾನು ಉತ್ತರ ಕೊಡಬೇಕಿದೆ ಎಂದು ಹೇಳಿ ಕೋಟ್ಯಧಿಪತಿ, ಬಿಗ್‍ಬಾಸ್ ಕೆಲವು ದೃಶ್ಯಗಳನ್ನು ತೋರಿಸಿದ್ದಾರೆ.

    ಕೋಟ್ಯಧಿಪತಿ:
    ಕೋಟ್ಯಧಿಪತಿ ಕಾರ್ಯಕ್ರಮದಲ್ಲಿಯೇ ಜಯಶ್ರೀ ಮೇಡಂ ಒಂದು ಪ್ರಶ್ನೆ ಕೇಳಿದ್ದರು. `ಮದುವೆ ಆದ ಮೇಲೆ ಗಂಡಂದಿರು ಹೆಂಡತಿಯ ಮೇಲೆ ಪ್ರೀತಿ ಕಡಿಮೆ ಮಾಡುತ್ತಾರೆ ಯಾಕೆ?, ಅದು ಎಲ್ಲಿಗೆ ಹೋಗುತ್ತದೆ?’ ಎಂದು ಕೇಳಿದ್ದರು. ಅದಕ್ಕೆ ನಾನು `ಪ್ರೀತಿ ಎಲ್ಲಿಯೂ ಹೋಗುವುದಿಲ್ಲ. ನಾನು ಎಲ್ಲಿ ಹೋದರು ನನ್ನ ಪ್ರೀತಿ ನನ್ನ ಜೊತೆಗೆ ಬರುತ್ತದೆ’ ಅಂತ ನನ್ನ ಹೆಂಡತಿಯನ್ನು ತೋರಿಸಿ ಹೇಳಿದ್ದೆ ಎಂದು ಸಮೀರಾಚಾರ್ಯ ಹೇಳಿದ್ದಾರೆ.

    ಬಿಗ್‍ಬಾಸ್
    `ಬಿಗ್ ಬಾಸ್’ ನಲ್ಲಿ ಕಾರ್ಯಕ್ರಮದಲ್ಲಿ ಇರುವಾಗ ಹೆಂಡತಿಯ ಧ್ವನಿ ಕೇಳಿ ಕಣ್ಣೀರು ಹಾಕಿದ್ದೇನೆ. ಬಳಿಕ ಅವರು `ಬಿಗ್ ಬಾಸ್’ ಮನೆಯೊಳಗೆ ಬಂದು ಹಾರ ಹಾಕಿ ಹೋಗಿದ್ದರು. ನಂತರ ಆ ಹಾರದಿಂದ ಬಿದ್ದ ಹೂವನ್ನು ಒಂದೊಂದೆ ಆರಿಸಿ ತೆಗೆದು ಇಟ್ಟುಕೊಂಡಿದ್ದೆ. ಹೀಗಿದ್ದಾಗ ಹೆಂಡತಿಯನ್ನು ಅಷ್ಟು ಜನರ ಮುಂದೆ ಬೈಯುವುದಕ್ಕೆ ಸಾಧ್ಯ ಆಗುತ್ತದೆಯಾ. ಒಂದು ವೇಳೆ ಬೈದರೆ ಮನೆ ಮುಟ್ಟಲಿಕ್ಕೆ ಆಗುತ್ತಾ ನೀವೇ ಹೇಳಿ. ಬೈದರು ಅಂತ ಹೇಗೆ ವಿಚಾರ ಮಾಡುತ್ತೀರಿ ಎಂದು ಹೇಳಿದ್ದಾರೆ.

    ಬಿಗ್ ಬಾಸ್ ನಲ್ಲಿ ನನ್ನ ಹೆಂಡತಿಯ ಪತ್ರ ಬಂದಿದ್ದು, ಅದನ್ನು ಸುಟ್ಟು ಹಾಕಿದ್ದಾರೆ. ಅದು ನನಗೆ ಸಿಕ್ಕಿಲ್ಲ ಎಂದು ನೀರಿಗೆ ಹಾರಿದ್ದೆ. ಅದನ್ನು ಟ್ರೋಲ್ ಮಾಡಿದ್ದರು, ನಾನು ನನ್ನ ಹೆಂಡತಿಯನ್ನು ಪ್ರೀತಿ ಮಾಡಿದ್ರು ಟ್ರೋಲ್ ಮಾಡಿತ್ತೀರಿ, ಏನಾದರೂ ಹೇಳಿದರು ಟ್ರೋಲ್ ಮಾಡುತ್ತೀರಿ. ಹೀಗಿರುವಾಗ ನಾನು ನನ್ನ ಹೆಂಡತಿಯನ್ನು ಪ್ರೀತಿ ಮಾಡುತ್ತೇನೆ ಎಂದು ನಿಮಗೆ ಸಾಬೀತು ಮಾಡಬೇಕಾಗಿಲ್ಲ ಎಂದ್ರು.

    ಸ್ಪಷ್ಟನೆ
    ಈಗ ತುಂಬಾ ಜನರು ಸಮೀರಾಚಾರ್ಯ ಅವರು ಹೆಂಡತಿಗೆ ಹೇಳಿದ ಮಾತು ತಪ್ಪು ಅಂತ ಹೇಳಿದ್ದಾರೆ. ಕನ್ನಡದ ಕೋಟ್ಯಧಿಪತಿಯ ಸಂಪೂರ್ಣ ವಿಡಿಯೋ ನೋಡಿಕೊಂಡು ಬನ್ನಿ. ಅಲ್ಲಿದ್ದವರೆಲ್ಲರೂ ನಗುತ್ತಿದ್ದರು. ಜನರು, ಕ್ಯಾಮೆರಾ ಮ್ಯಾನ್, ಸ್ಪರ್ಧಿಗಳು ಎಲ್ಲರೂ ತಮಾಷೆಯಲ್ಲಿ ಇದ್ದೇವು. ನಾನು ಉತ್ತರಿಸಿದ ಪ್ರತಿ ಉತ್ತರ ನಗುವ ಹಾಗೆ ಇತ್ತು. ನನ್ನ ಹೆಂಡತಿ, ರಮೇಶ್ ಸರ್ ಎಲ್ಲರೂ ನಗುತ್ತಿದ್ದಾರೆ. ನಾನು ಅದನ್ನು ತಮಾಷೆಯಾಗಿ ಹೇಳಿದ್ದೆ. ಆಕೆಗೆ ಅನಮಾನ, ಬೇಸರ ಮಾಡಬೇಕು ಎಂದು ಹೇಳಿಲ್ಲ. ನೀವು ಅದನ್ನು ಇಷ್ಟೊಂದು ಸೀರಿಯಸ್ ಆಗಿ ತೆಗೆದುಕೊಂಡು ಟ್ರೋಲ್ ಮಾಡಿದ್ದೀರಿ. ಅದು ತಮಾಷೆಯಷ್ಟೆ ಎಂದು ಸಮೀರಾಚಾರ್ಯ ಸ್ಪಷ್ಟ ಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಮಾನದಲ್ಲಿ ಸಿಕ್ಕ ನಟನಿಗೆ ಸಮೀರ್ ಆಚಾರ್ಯ ಮನವಿ

    ವಿಮಾನದಲ್ಲಿ ಸಿಕ್ಕ ನಟನಿಗೆ ಸಮೀರ್ ಆಚಾರ್ಯ ಮನವಿ

    ಬೆಂಗಳೂರು: ಬಿಗ್ ಬಾಸ್ ಸೀಸನ್- 5 ಸ್ಪರ್ಧಿ ಸಮೀರ್ ಆಚಾರ್ಯ ಅವರು ಇತ್ತೀಚೆಗೆ ವಿಮಾನದಲ್ಲಿ ಕಿಚ್ಚ ಸುದೀಪ್ ಅವರನ್ನು ಆಕಸ್ಮಿಕವಾಗಿ ಭೇಟಿ ಮಾಡಿ ಮಹದಾಯಿಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

    ಸಮೀರ್ ಆಚಾರ್ಯ ತನ್ನ ಪತ್ನಿ ಜೊತೆ ಹೈದರಾಬಾದ್‍ಗೆ ಪ್ರಯಾಣ ಬೆಳೆಸುತ್ತಿದ್ದರು. ಈ ವೇಳೆ ವಿಮಾನದಲ್ಲಿ ಸಮೀರ್ ಆಚಾರ್ಯ, ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೇ ವಿಮಾನದಲ್ಲಿ ಮೂವರು ಒಟ್ಟಿಗೆ ಕುಳಿತುಕೊಂಡು ಪ್ರಯಾಣದುದ್ದಕ್ಕೂ ಮಾತುಕತೆ ನಡೆಸಿದ್ದಾರೆ.

    ವಿಮಾನದಲ್ಲಿ ಸುದೀಪ್ ಜೊತೆ ಪ್ರಯಾಣ ಬೆಳೆಸುವಾಗ ಸಮೀರ್ ಮಹದಾಯಿ ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಅದಕ್ಕೆ ಸುದೀಪ್ ರೈತರಿಗೆ ಸದಾ ನಮ್ಮ ಬೆಂಬಲ ಇರುತ್ತದೆ ಎಂದು ತಿಳಿಸಿದ್ದಾರೆ.

    ಸಮೀರ್ ಬಿಗ್ ಬಾಸ್ ಮನೆಯಲ್ಲಿದ್ದಾಗ ತಮ್ಮ ಊರಿನಲ್ಲಿ ಸ್ವಂತ ಎರಡು ಶಾಲೆಗಳನ್ನು ಆರಂಭ ಮಾಡಬೇಕು ಎಂದು ಹೇಳುತ್ತಿದ್ದರು. ಅಲ್ಲದೇ ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಅವರು ರೈತರ ಹಾಗೂ ಸೈನಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಉದ್ದೇಶದಿಂದ ಶಾಲೆಯನ್ನು ಆರಂಭಿಸಿದ್ದಾರೆ.

    ಸದ್ಯ ಸಮೀರ್ ಆಚಾರ್ಯ ಟಾಲಿವುಡ್ ಕಿರುತೆರೆ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದಿಂದ ಇಂದು ನನಗೆ ಸಾಕಷ್ಟು ಉಪಯೋಗವಾಗಿದೆ. ನನ್ನ ತಂದೆ, ತಾಯಿ, ಹಾಗೂ ಪತ್ನಿ ಸಹಾಯದಿಂದ ಈ ಕೆಲಸಗಳನ್ನು ಮಾಡಲು ಸಾಧ್ಯವಾಗಿದೆ ಎಂದು ಸಮೀರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

  • ಮೋದಿಯನ್ನು ಭೇಟಿಯಾಗಲು ಮುಂದಾದ ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ!

    ಮೋದಿಯನ್ನು ಭೇಟಿಯಾಗಲು ಮುಂದಾದ ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ!

    ಹುಬ್ಬಳ್ಳಿ: ಬಿಗ್ ಬಾಸ್ ಸ್ಪರ್ಧಿ ಸಮೀರ್ ಆಚಾರ್ಯ ಮಹದಾಯಿ, ಕಳಸಾ ಬಂಡೂರಿ ಯೋಜನೆ ಕುರಿತು ಚರ್ಚೆ ಮಾಡಲು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದಾರೆ.

    ಈ ಬಗ್ಗೆ ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಮೀರ್ ಆಚಾರ್ಯ, ಬಿಗ್ ಬಾಸ್ ಸ್ಪರ್ಧೆಯಲ್ಲಿ ಸಪೋರ್ಟ್ ಮಾಡಿದ ಕರ್ನಾಟಕದ ಪ್ರತಿಯೊಬ್ಬ ನಾಗರಿಕರಿಗೂ ಧನ್ಯವಾದಗಳು. ಮಹದಾಯಿ, ಕಳಸಾ ಬಂಡೂರಿ ವಿಷಯಕ್ಕೆ ಸಂಬಂಧಪಟ್ಟಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಯೋಜನೆ ಬಗ್ಗೆ ಚರ್ಚೆ ಮಾಡೋದಕ್ಕೆ ಸಮಯಾವಕಾಶ ಕೇಳಿದ್ದೇನೆ. ಅವಕಾಶ ಕೊಟ್ಟರೆ ಭೇಟಿ ಮಾಡುವುದಾಗಿ ತಿಳಿಸಿದ್ರು.

    ಫೆಬ್ರವರಿ 4ರಂದು ಬೆಂಗಳೂರು ಬಂದ್ ಗೆ ಕರೆ ನೀಡಿರೋದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ. ನೀರು ಪಡೆಯುವವರೆಗೂ ಈ ಹೋರಾಟಕ್ಕೆ ನಾನು ಸಾಥ್ ನೀಡುತ್ತೇನೆ ಎಂದು ಹೇಳಿದ್ರು.

  • ಆಚಾರ್ಯರ ಕೆನ್ನೆಗೆ ಬಾರಿಸಿದ್ದ ಕಿರಿಕ್ ರಾಣಿಗೆ ಕಿಚ್ಚ ಸುದೀಪ್ ಕ್ಲಾಸ್

    ಆಚಾರ್ಯರ ಕೆನ್ನೆಗೆ ಬಾರಿಸಿದ್ದ ಕಿರಿಕ್ ರಾಣಿಗೆ ಕಿಚ್ಚ ಸುದೀಪ್ ಕ್ಲಾಸ್

    ಬೆಂಗಳೂರು: ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗಳಲ್ಲಿ ಅತಿ ಹೆಚ್ಚಿನ ನೋಡುಗರನ್ನು ಹೊಂದಿದ ಪವರ್ ಫುಲ್ ರಿಯಾಲಿಟಿ ಶೋ. ಆದರೆ ಈ ಬಾರಿ ಬಿಗ್‍ಬಾಸ್ ಮನೆಗೆ ವಿಶೇಷ ಅತಿಥಿಯಾಗಿ ಬಂದಿದ್ದ ನಟಿ ಸಂಯುಕ್ತಾ ಹೆಗಡೆ ಸ್ಪರ್ಧಿಯಾಗಿರುವ ಸಮೀರ್ ಆಚಾರ್ಯರ ಮೇಲೆ ಹಲ್ಲೆ ನಡೆಸಿ ಮನೆಯಿಂದ ಔಟ್ ಆಗಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಶನಿವಾರ ಸುದೀಪ್ ಈ ವಿಷಯದ ಕುರಿತು ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.

    ಎಲ್ಲಾ ವಿಚಾರಗಳಿಗೂ ದೃಷ್ಟಿ ಬೊಟ್ಟು ಇಡುವಂತಹ ಘಟನೆ ನಡೆಯುತ್ತದೆ. ಆ ಘಟನೆ ನಡೆಯಬಾರದಿತ್ತು, ಆದ್ರೆ ನಡೆದು ಹೋಯ್ತು. ಸಂಯುಕ್ತಾ ಅತಿಥಿಯಾಗಿ ಬಂದಿದ್ರೂ ಸಮೀರ್ ಆಚಾರ್ಯರ ಮೇಲೆ ಅನಿವಾರ್ಯ ಕಾರಣಗಳಿಂದಾಗಿ ಅಥವಾ ಅನಿವಾರ್ಯದಿಂದಾಗಲೀ ಕೈ ಮಾಡಿದ್ದು ತಪ್ಪು ಮತ್ತು ನೋವಿನ ಸಂಗತಿ. ಹೊಡೆದಿದ್ದು ಬೇರೆ ಆ ನಂತರ ಬಿಗ್ ಬಾಸ್ ಗೆ ಕೊಟ್ಟಂತಹ ಕಾರಣಗಳು ಮತ್ತು ವಿವರಣೆಗಳು ಯಾವುದು ಒಪ್ಪುವ ಹಾಗಿರಲಿಲ್ಲ. ಹಾಗಾಗಿ ಬೇಜವಾಬ್ದಾರಿ ನಡವಳಿಕೆಯಿಂದಾಗಿ ಮನೆಯಿಂದ ಹೊರ ಹೋದರು. ಆದ್ರೆ ಸಂಯುಕ್ತಾ ಇದು ಸರಿ ಅಲ್ಲ(ನಾಟ್ ರೈಟ್) ಮುಂದಿನದು ನಿಮಗೆ ಬಿಟ್ಟಂತಹ ವಿಚಾರ ಎಂದು ಪರೋಕ್ಷವಾಗಿ ತಿಳಿ ಹೇಳಿದರು.

    ಅಂದು ಮನೆಯಲ್ಲಿ ನಡೆದಿದ್ದೇನು?: ಬುಧವಾರ ಬಿಗ್ ಮನೆಯಲ್ಲಿ ಪುರುಷ ಮತ್ತು ಮಹಿಳಾ ಎಂಬ ಎರಡು ತಂಡಗಳನ್ನು ವಿಂಗಡಿಸಲಾಗಿತ್ತು. ನಂತರ ಎರಡೂ ತಂಡಕ್ಕೂ ಒಂದೊಂದು ದಾರಗಳ ಗೋಪುರವನ್ನು ನೀಡಲಾಗಿತ್ತು. ಸ್ಪರ್ಧಿಗಳು ತಮ್ಮ ಎದುರಾಳಿ ತಂಡದ ಗೋಪುರದ ದಾರಗಳನ್ನು ಕತ್ತರಿ ಮೂಲಕ ಕತ್ತರಿಸಬೇಕು. ಹೀಗೆ ಹೆಚ್ಚಿನ ದಾರಗಳನ್ನು ಕಟ್ ಮಾಡಿದ ತಂಡವನ್ನು ವಿಜಯಶಾಲಿ ತಂಡವಾಗಿ ಘೋಷಿಸಲಾಗುತ್ತದೆ ಎಂದು ಬಿಗ್ ಬಾಸ್ ತಿಳಿಸಿದ್ದರು. ಇದನ್ನೂ ಓದಿ: ಸಂಯುಕ್ತಾ ಥ್ರಿಲ್ಲರ್ ಮಂಜು ತಂಗಿ, ಬ್ರೂಸ್ಲಿ ಬಾಮೈದ ಅಂತ ತಿಳ್ಕೊಂಡು ಕೈ ಮಾಡಿದ್ದು ಸರಿಯಲ್ಲ: ಪ್ರಥಮ್ 

    ಈ ಟಾಸ್ಕ್ ನಡೆಯುವಾಗ ಸಂಯುಕ್ತಾ ಎದುರಾಳಿ ತಂಡದ ಸಹಸ್ಪರ್ಧಿ ಚಂದನ್ ಶೆಟ್ಟಿ ಬಳಿಯಿರುವ ಕತ್ತರಿ ಪಡೆದುಕೊಳ್ಳಲು ಅವರ ಮೇಲೆಯೇ ಎರಗಿದ್ದರು. ಸ್ಥಳದಲ್ಲಿದ್ದ ಸಮೀರ್ ಆಚಾರ್ಯ, ಚಂದನ್ ನೆರವಿಗೆ ಧಾವಿಸಿದ್ದರು. ಇದರಿಂದ ಕೋಪಗೊಂಡ ಸಂಯುಕ್ತಾ ಎಲ್ಲೆಲ್ಲೊ ಮುಟ್ತೀರಾ ಎಂದು ಕಪಾಳಕ್ಕೆ ಬಾರಿಸಿದ್ದರು. ಘಟನೆ ಬಳಿಕ ಬಿಗ್ ಬಾಸ್ ಸಂಯುಕ್ತಾರನ್ನು ಮನೆಯಿಂದ ಕಿಕ್ ಔಟ್ ಮಾಡಲಾಗಿತ್ತು. ಇದನ್ನೂ ಓದಿ: ಕಿರಿಕ್ ಸಂಯುಕ್ತಾಗೆ ಜಗ್ಗೇಶ್ ಕ್ಲಾಸ್

    ಬಿಗ್ ಬಾಸ್ ಮನೆಯಿಂದ ಹೊರಬಂದ ಸಂಯುಕ್ತಾ ಇದೂವರೆಗೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ. ಈ ಹಿಂದೆ ತೆರೆ ಕಂಡಿದ್ದ `ಕಾಲೇಜ್ ಕುಮಾರ್’ ಸಿನಿಮಾ ವಿಚಾರವಾಗಿ ಸಂಯುಕ್ತಾ ಚಿತ್ರತಂಡದೊಂದಿಗೆ ಕಿರಿಕ್ ಮಾಡಿಕೊಂಡಿದ್ದರು. ಈಗ ಬಿಗ್ ಬಾಸ್ ಮನೆಯಲ್ಲಿ ಕಿರಿಕ್ ಮಾಡಿದ ಬಳಿಕ ಜನ ಸಾಮಾಜಿಕ ಜಾಲತಾಣಗಳಲ್ಲಿ ಸಂಯುಕ್ತ ನಡೆಯನ್ನು ಈ ಟೀಕಿಸಿ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

  • ಸಂಯುಕ್ತಾ ಥ್ರಿಲ್ಲರ್ ಮಂಜು ತಂಗಿ, ಬ್ರೂಸ್ಲಿ ಬಾಮೈದ ಅಂತ ತಿಳ್ಕೊಂಡು ಕೈ ಮಾಡಿದ್ದು ಸರಿಯಲ್ಲ- ಪ್ರಥಮ್

    ಸಂಯುಕ್ತಾ ಥ್ರಿಲ್ಲರ್ ಮಂಜು ತಂಗಿ, ಬ್ರೂಸ್ಲಿ ಬಾಮೈದ ಅಂತ ತಿಳ್ಕೊಂಡು ಕೈ ಮಾಡಿದ್ದು ಸರಿಯಲ್ಲ- ಪ್ರಥಮ್

    ಬೆಂಗಳೂರು: ಜನಪ್ರಿಯ ರಿಯಾಲಿಟಿ ಶೋ ಕನ್ನಡದ ‘ಬಿಗ್‍ಬಾಸ್’ನಲ್ಲಿ ಕಿರಿಕ್ ನಟಿ ಸಂಯುಕ್ತ ಹೆಗಡೆ ಭಾರೀ ಹೈಡ್ರಾಮ ಮಾಡಿದ್ದಾರೆ. ರೌಡಿಯಂತೆ ಸಮೀರ್ ಆಚಾರ್ಯ ಅವರ ಕೆನ್ನೆಗೆ ಬಾರಿಸಿ ಕಿಕ್ ಔಟ್ ಆಗಿದ್ದು, ಈ ಕುರಿತು ಬಿಗ್ ಬಾಸ್ ಸೀಸನ್ 4ರ ವಿನ್ನರ್ ಪ್ರಥಮ್ ತಮ್ಮ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

    ಸಂಯುಕ್ತಾ ಬಿಗ್ ಬಾಸ್ ಮನೆಯಲ್ಲಿ ಸಮೀರ್ ಆಚಾರ್ಯರಿಗೆ ಕಪಾಳಕ್ಕೆ ಹೊಡೆದಿರುವ ವಿಚಾರ ನನ್ನ ಗಮನಕ್ಕೆ ಬಂತು. ಬಿಗ್ ಬಾಸ್ ಜೀವನದ ಪಾಠವನ್ನು ಕಲಿಸುತ್ತದೆ. ಹೇಗಂದ್ರೆ ನಾವು ಅಲ್ಲಿದ್ದಾಗ ನಮ್ಮ ತಂಡದ ಮೇಲೆ ಅಭಿಮಾನ ಪ್ರೀತಿ ಹುಟ್ಟಿಕೊಳ್ಳುತ್ತದೆ. ಸಂಯುಕ್ತಾ ಹೆಗಡೆ ತಾವು ಥ್ರಿಲ್ಲರ್ ಮಂಜು ತಂಗಿ ತರನೋ, ಬ್ರೂಸ್ಲಿ ಬಾಮೈದ ಅಂತಾ ತಿಳಿದುಕೊಂಡು ಸಮೀರ್ ಅವರ ಮೇಲೆ ಕೈ ಮಾಡಿದ್ದು ನನಗ್ಯಾಕೋ ಅದು ಸರಿ ಅನ್ನಿಸುತ್ತಿಲ್ಲ ಅಂತಾ ಪ್ರಥಮ್ ತಿಳಿಸಿದ್ದಾರೆ.

    ಬಿಗ್ ಬಾಸ್ ಮನೆಗೆ ಹೋಗುವ ಮುಂಚೆ ಒಂದು ಮಾತನ್ನು ಹೇಳಿ ಕೊಡುತ್ತಾರೆ. ಅದೇನೆಂದರೆ ನೀವು ಮನೆಗೆ ಹೋಗುವ ಮುಂಚೆ ನೀವು ನೀವಾಗಿರಿ. ನಿಮ್ಮತನ ಒಂದೇ ನಿಮ್ಮನ್ನು ಕಡೆವರೆಗೂ ಕರೆದುಕೊಂಡು ಹೋಗುತ್ತದೆ ಎಂದು ಕಲಿಸಿಕೊಡ್ತಾರೆ. ಬಿಗ್ ಬಾಸ್ ಮನೆಯಲ್ಲಿ ಬಿಗ್‍ಬಾಸ್ ಸಂವಿಧಾನ ಇರುತ್ತೆ. ಆ ಸಂವಿಧಾನದಂತೆ ಯಾರ ಮೇಲೆಯೂ ಕೈ ಮಾಡುವ ಹಾಗಿಲ್ಲ. ನಾಮಿನೇಷನ್ ಬಗ್ಗೆ ಮಾತನಾಡುವ ಹಾಗಿಲ್ಲ. ಮನೆಯಲ್ಲಿ ಯಾರಿಗೂ ಪ್ರಚೋದನೆ ಮಾಡಬಾರದು. ಇಂತಹದೆಲ್ಲವನ್ನು ಹೇಳಿ ಕೊಡುತ್ತಾರೆ. ಈ ಶಿಸ್ತುಗಳನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಆಟವನ್ನು ನೀವು ಹೇಗಾದರೂ ಆಡಿದರೆ ಅದಕ್ಕೆ ಬಿಗ್ ಬಾಸ್ ಅಭ್ಯಂತರವಿಲ್ಲ.

    ನೀವು ಸಹ ಸ್ಪರ್ಧಿಗಳೊಂದಿಗೆ ಜಗಳ ಆಡ್ತೀರಾ, ಕೋಪಗೊಂಡು ಊಟ ಬಿಡ್ತೀರಾ, ಅವರಿಗೆ ಹೆದರಿಸ್ತೀರಾ ಅದು ವೈಯಕ್ತಿಕ. ಮನೆಯಲ್ಲಿ ಆಟದ ವೈಖರಿ ಮತ್ತು ನಡವಳಿಕೆ ಮಾತ್ರ ಅಲ್ಲಿ ನಮ್ಮನ್ನು ಉಳಿಸುತ್ತದೆಯೇ ಹೊರತು ಬೇರೆ ಯಾವುದು ಅಲ್ಲ ಎಂದು ಬಿಗ್ ಮನೆಯ ನಿಯಮಗಳ ಬಗ್ಗೆ ಪ್ರಥಮ್ ಸ್ಪಷ್ಟಪಡಿಸಿದರು.

    ಸಮೀರ್ ಆಚಾರ್ಯ ಹೊರಗಡೆ ಅಡುಗೆ ಮಾಡಿಕೊಂಡು ತುಂಬಾ ಶಿಸ್ತಿನಿಂದ ಆ ಮನೆಯಲ್ಲಿದ್ದಾರೆ. ಸಮೀರ್ ಅವ್ರಿಗೆ ಮದುವೆಯಾಗಿದ್ದು, ಅಂತಹ ದೊಡ್ಡ ವ್ಯಕ್ತಿಯ ಮೇಲೆ ಚಿಕ್ಕ ಹುಡುಗಿ ಸಂಯುಕ್ತಾ ತುಂಬಾ ಆತುರ ಮಾಡಿಕೊಂಡರೇನೋ ಅಂತಾ ಅನ್ನಿಸಿತು. ಜನರು ಸಂಯುಕ್ತಾರನ್ನು ಕ್ಷಮಿಸುವ ದೊಡ್ಡ ಮನಸ್ಸು ಮಾಡಬೇಕು ಎಂದು ನಾನು ಕೇಳಿಕೊಳ್ಳುತ್ತೇನೆ ಅಂತಾ ಪ್ರಥಮ್ ಮನವಿ ಮಾಡಿಕೊಂಡರು.

  • ಬಿಗ್‍ ಬಾಸ್ ಮನೆಯಲ್ಲಿ ಸಂಯುಕ್ತ ಹೆಗಡೆ ಕಿರಿಕ್ – ಸಮೀರ್ ಕೆನ್ನೆಗೆ ಹೊಡೆದು ದೊಡ್ಮನೆಯಿಂದ ಕಿಕ್‍ ಔಟ್

    ಬಿಗ್‍ ಬಾಸ್ ಮನೆಯಲ್ಲಿ ಸಂಯುಕ್ತ ಹೆಗಡೆ ಕಿರಿಕ್ – ಸಮೀರ್ ಕೆನ್ನೆಗೆ ಹೊಡೆದು ದೊಡ್ಮನೆಯಿಂದ ಕಿಕ್‍ ಔಟ್

    ಬೆಂಗಳೂರು: ಕಿರಿಕ್ ಹುಡುಗಿ ಸಂಯುಕ್ತ ಹೆಗಡೆ ಗೆಸ್ಟ್ ಆಗಿ ಬಿಗ್ ಮನೆಗೆ ಬಂದಿದ್ದರು. ಬಂದು 15 ದಿನ ಕಳೆದಿರಲಿಲ್ಲ, ಆಗಲೇ ಭಾರೀ ರಂಪಾಟ ಮಾಡಿ ಹೊರಹೋಗಿದ್ದಾರೆ. ಕಾಲೇಜು ಕುಮಾರ ಸಿನಿಮಾ ವಿಚಾರದಲ್ಲೂ ಈ ನಟಿ ಕಿರಿಕ್ ಮಾಡಿ ಸುದ್ದಿಯಾಗಿದ್ದರು.

    ಜನಪ್ರಿಯ ರಿಯಾಲಿಟಿ ಶೋ ಕನ್ನಡದ ‘ಬಿಗ್‍ಬಾಸ್’ನಲ್ಲಿ ಕಿರಿಕ್ ನಟಿ ಸಂಯುಕ್ತ ಹೆಗಡೆ ಭಾರೀ ಹೈಡ್ರಾಮ ಮಾಡಿದ್ದಾರೆ. ಮುಟ್ಟಿದ್ರೆ ತಟ್ಬೀಡ್ತಿನಿ ಅಂದವರು ತೇಟ್ ರೌಡಿಯಂತೆ ಸಮೀರ್ ಆಚಾರ್ಯ ಅವರ ಕೆನ್ನೆಗೆ ಬಾರಿಸಿ ಕಿಕ್‍ ಔಟ್ ಆಗಿದ್ದಾರೆ. ಪ್ರತಿ ದಿನದ ಟಾಸ್ಕ್ ನಂತೆ ಬುಧವಾರ ಸ್ಪರ್ಧಿಗಳಿಗೆ ಟಾಸ್ಕ್ ವೊಂದನ್ನು ನೀಡಲಾಗಿತ್ತು. ಅದರಂತೆ ಮಹಿಳಾ ತಂಡ ಹಾಗೂ ಪುರುಷ ತಂಡದ ಸ್ಪರ್ಧಿಗಳಿಗೆ ದಾರ ಕಟ್ಟಿದ ಗೋಪುರವನ್ನು ನೀಡಲಾಗಿತ್ತು. ಪುರುಷ ಸ್ಪರ್ಧಿಗಳು ಮಹಿಳಾ ಸ್ಪರ್ಧಿಗಳ ಬಳಿ ಇರುವ ಗೋಪುರದ ದಾರವನ್ನು ಕತ್ತರಿಯಿಂದ ಕತ್ತರಿಸಬೇಕಿತ್ತು. ಈ ವೇಳೆ ತನ್ನನ್ನು ಸಮೀರ್ ಆಚಾರ್ಯ ಮುಟ್ಟಿದ್ರು ಅಂತ ಸಂಯುಕ್ತ ಅವರ ಮೇಲೆ ಕೈ ಮಾಡಿದ್ದಾರೆ.

    ಈ ಕಾರಣದಿಂದ ಟಾಸ್ಕ್ ಅರ್ಧಕ್ಕೆ ನಿಂತಿತು. ಇಬ್ಬರನ್ನು ಕನ್ಫೆಶನ್ ರೂಮ್ ಗೆ ಕರೆದ ಬಿಗ್‍ಬಾಸ್ ಸಮೀರ್ ಮತ್ತು ಸಂಯುಕ್ತಾ ಹೇಳಿಕೆಯನ್ನು ಪಡೆದರು. ಕಡೆಗೆ ಸಂಯುಕ್ತಾ ಭಾವಾವೇಷದಿಂದ ಸಮೀರ್ ಮೇಲೆ ಕೈ ಮಾಡಿದ್ದಾರೆಂದು ಹೊರ ಹೋಗುವಂತೆ ಆದೇಶಿದರು. ಮನೆಯಿಂದ ಹೊರ ಹೋಗುವ ಮುನ್ನ ಸಂಯುಕ್ತಾ ಸಮೀರ್ ಬಳಿ ಕ್ಷಮೆ ಕೇಳಿದರು. ಸಮೀರ್ ಕೂಡಾ ಸಂಯುಕ್ತಾರನ್ನು ಉದ್ದೇಶಿಸಿ ಇನ್ನೊಮ್ಮೆ ಯಾರ ಬಳಿಯೂ ಹೀಗೆ ಕೋಪ ಮಾಡಿಕೊಳ್ಳಬೇಡಿ ಎಂದು ಹೇಳಿ ಸಂಯುಕ್ತಾರನ್ನು ಮನೆಯಿಂದ ಬೀಳ್ಕೊಟ್ಟರು.