Tag: samdalwood

  • ಐರಾ ಹುಟ್ಟುಹಬ್ಬದ ಎಕ್ಸ್‌ಕ್ಲೂಸಿವ್ ವಿಡಿಯೋ ಹಂಚಿಕೊಂಡ ಯಶ್

    ಐರಾ ಹುಟ್ಟುಹಬ್ಬದ ಎಕ್ಸ್‌ಕ್ಲೂಸಿವ್ ವಿಡಿಯೋ ಹಂಚಿಕೊಂಡ ಯಶ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ತಮ್ಮ ಇನ್‍ಸ್ಟಾದಲ್ಲಿ ಮಗಳ ಹುಟ್ಟುಹಬ್ಬದ ಎಕ್ಸ್‌ಕ್ಲೂಸಿವ್ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    ಇತ್ತೀಚೆಗೆ ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಗಳ ಹುಟ್ಟುಹಬ್ಬವನ್ನು ಫನ್ ವರ್ಲ್ಡ್ ನಲ್ಲಿ ಅದ್ಧೂರಿಯಾಗಿ ಆಚರಿಸಿದ್ದರು. ಈ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಇಡೀ ತಾರಾಲೋಕವೇ ಒಂದೆಡೆ ಸೇರಿತ್ತು. ಅಲ್ಲದೆ ಐರಾಳ ಹುಟ್ಟುಹಬ್ಬದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಇದನ್ನೂ ಓದಿ: ಹುಟ್ಟುಹಬ್ಬದ ಸಂಭ್ರಮದಲ್ಲಿ ರಾಕಿಂಗ್ ದಂಪತಿಯ ಪುತ್ರಿ

    ಇದೀಗ ಐರಾ ಹುಟ್ಟುಹಬ್ಬದ ಸಂತಸದ ಕ್ಷಣಗಳಿಂದ ಕೂಡಿರುವ ವಿಡಿಯೋವನ್ನು ಯಶ್ ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಅದಕ್ಕೆ, “ನಿಮ್ಮೆಲ್ಲರ ಮನವಿಗೆ ನಾನು ಹೇಗೆ ಇಲ್ಲ ಎಂದು ಹೇಳಲು ಸಾಧ್ಯ. ನಮ್ಮ ಪುಟ್ಟ ರಾಜಕುಮಾರಿಯ ಹುಟ್ಟುಹಬ್ಬದ ಝಲಕ್ ಇಲ್ಲಿದೆ. ಹಾಗೆಯೇ ಐರಾ ನಿಮ್ಮ ಪ್ರೀತಿ ಹಾಗೂ ಶುಭಾಶಯಕ್ಕೆ ಧನ್ಯವಾದ ತಿಳಿಸುತ್ತಿದ್ದಾಳೆ” ಎಂದು ಬರೆದು ಪೋಸ್ಟ್ ಮಾಡಿದ್ದಾರೆ.  ಇದನ್ನೂ ಓದಿ: ಐರಾಳ ಹುಟ್ಟುಹಬ್ಬದ ಪಾರ್ಟಿಯಲ್ಲಿ ದರ್ಶನ್, ಪುನೀತ್

    ಐರಾ ತನ್ನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾಳೆ. ಐರಾಳ ಮೊದಲ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವರ್ ಸ್ಟಾರ್ ಪುನೀತ್ ಸೇರಿದಂತೆ ಸ್ಯಾಂಡಲ್‍ವುಡ್‍ನ ಹಲವು ಕಲಾವಿದರು ಭಾಗಿಯಾಗಿದ್ದರು. ಐರಾಳ ಹುಟ್ಟುಹಬ್ಬಕ್ಕಾಗಿ ವಿಶೇಷವಾದ ದೊಡ್ಡ ಕೇಕ್ ತಯಾರಿಸಲಾಗಿತ್ತು. ಐರಾ ಈ ಕೇಕ್ ಅನ್ನು ಕಟ್ ಮಾಡಿ ತನ್ನ ಮೊದಲ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಳು.

    ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ನಟಿ ಭಾರತಿ ವಿಷ್ಣುವರ್ಧನ್, ಸಂಸದೆ ಸುಮಲತಾ ಅಂಬರೀಶ್, ನಟರಾದ ದರ್ಶನ್, ಪುನೀತ್ ರಾಜ್‍ಕುಮಾರ್, ಧ್ರುವ ಸರ್ಜಾ, ಅನಿರುದ್ಧ, ಅಭಿಷೇಕ್ ಅಂಬರೀಶ್ ಹಾಗೂ ಉದ್ಯಮಿಯಾದ ಅಶೋಕ್ ಖೇಣಿ ಭಾಗಿಯಾಗಿದ್ದಾರೆ. ಇವರ ಹೊರತಾಗಿ ಐರಾ ಹುಟ್ಟುಹಬ್ಬಕ್ಕೆ ಯಶ್ ಹಾಗೂ ರಾಧಿಕಾ ಕುಟುಂಬಸ್ಥರು ಆಗಮಿಸಿದ್ದರು.

  • ದರ್ಶನ್ ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ಭಾನುವಾರ ಏನೇನಾಯ್ತು?

    ದರ್ಶನ್ ಸುದೀಪ್ ಟ್ವಿಟ್ಟರ್ ಖಾತೆಯಲ್ಲಿ ಭಾನುವಾರ ಏನೇನಾಯ್ತು?

    ಬೆಂಗಳೂರು: ನಾವಿಬ್ಬರೂ ಗೆಳೆಯರಲ್ಲ ಎಂದು ದರ್ಶನ್ ಟ್ವಿಟ್ಟರ್ ಖಾತೆಯಿಂದ ಸುದೀಪ್ ಬಗ್ಗೆ ಟ್ವೀಟ್ ಆಗಿದ್ದು ಭಾನುವಾರ ರಾತ್ರಿ 8.15ಕ್ಕೆ. ಇದಕ್ಕೂ ಮುನ್ನ ಸುದೀಪ್ ಟ್ವಿಟ್ಟರ್ ಖಾತೆಯಲ್ಲೂ ಇಬ್ಬರ ಗೆಳೆತನದ ಬಗ್ಗೆ ಒಂದು ಟ್ವೀಟ್ ಕಾಣಿಸಿತ್ತು.

    ಶಶಿಧರ್ ಪಾಟೀಲ್ ಎಂಬ ಹೆಸರಿನ ವ್ಯಕ್ತಿಯೊಬ್ಬರು ಸುದೀಪ್ ಅವರ ಟ್ವಿಟ್ಟರ್ ಹ್ಯಾಂಡಲ್ ಗೆ, @ಕಿಚ್ಚ ಸುದೀಪ್ ಸರ್, ನಿಮ್ಮನ್ನು ಹಾಗೂ ದರ್ಶನ್ ಅವರನ್ನು ಜೊತೆಯಾಗಿ ನಾವು ನೋಡಬೇಕು. ಒಂದೇ ವೇದಿಕೆಯಲ್ಲಿ ನೀವಿಬ್ಬರು ಜೊತೆಯಾಗಿರುವುದನ್ನು ನೋಡಿ ತುಂಬಾ ಸಮಯವಾಯಿತು ಎಂದು ಬರೆದಿದ್ದರು. ಈ ಟ್ವೀಟ್ ಸಂಜೆ 4.15ಕ್ಕೆ ಟ್ವೀಟ್ ಆಗಿತ್ತು.

    ಈ ಟ್ವೀಟ್ ಬಂದು ಕೇವಲ 9 ನಿಮಿಷದ ಬಳಿಕ ಅಂದ್ರೆ ಸರಿಯಾಗಿ 4.24ಕ್ಕೆ ಕಿಚ್ಚ ಸುದೀಪ್ ಅವರು ಶಶಿಧರ್ ಪಾಟೀಲ್ ಗೆ ಉತ್ತರವನ್ನೂ ಕೊಟ್ಟಿದ್ದರು. ಆದರೆ ಆ ಉತ್ತರದಲ್ಲಿ ಕೇವಲ ಸ್ಮೈಲಿ ಸಿಂಬಲ್ ಮಾತ್ರ ಇತ್ತು.

    ಆದರೆ ರಾತ್ರಿ 8.15ಕ್ಕೆ ಮಾತ್ರ ದರ್ಶನ್ ಅವರ @ದಾಸದರ್ಶನ್ ಖಾತೆಯಿಂದ, ‘ನಾವಿಬ್ಬರೂ ಗೆಳೆಯರಲ್ಲ. ನಾವು ಕನ್ನಡ ಇಂಡಸ್ಟ್ರಿಗಾಗಿ ದುಡಿಯುತ್ತಿರುವ ನಟರು ಅಷ್ಟೇ. ದಯವಿಟ್ಟು ಈ ಬಗ್ಗೆ ಹೆಚ್ಚು ವದಂತಿಗಳು ಬೇಡ. ಇದಿಲ್ಲಿಗೇ ಕೊನೆಯಾಗಲಿ’ ಎಂಬ ಟ್ವೀಟ್ ಬಂದಿತ್ತು.

    ಇದನ್ನೂ ಓದಿ: ಸುದೀಪ್ ಅವರ ಈ ಮಾತಿನಿಂದ ದರ್ಶನ್ ಮನಸ್ಸಿಗೆ ಘಾಸಿ!

    ಇದನ್ನು ನೋಡಿದ ಅಭಿಮಾನಿಗಳಿಗೆ ಈ ಟ್ವೀಟ್ ನಂಬಲು ಸಾಧ್ಯವಾಗಲೇ ಇಲ್ಲ. ಅದಕ್ಕಾಗಿ ಅಭಿಮಾನಿಗಳೆಲ್ಲಾ ಯಾಕೆ ಹೀಗೆ ಎಂದು ದರ್ಶನ್ ಅವರ ಟ್ವಿಟ್ಟರ್ ಖಾತೆಗೇ ಪ್ರಶ್ನೆ ಹಾಕುತ್ತಿದ್ದರು.