Tag: Sambra Airport

  • ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ!

    ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ!

    ಬೆಳಗಾವಿ: ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣಕ್ಕೆ (Sambra Airport) ದುಷ್ಕರ್ಮಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ (Bomb Threat) ಕಳಿಸಿದ್ದಾರೆ.

    ಶನಿವಾರ ಏರ್‌ಪೋರ್ಟ್‌ಗೆ ದುಷ್ಕರ್ಮಿಗಳು ಇ-ಮೇಲ್ ಮೂಲಕ ಬಾಂಬ್ ಬೆದರಿಕೆಯ ಸಂದೇಶ ಕಳುಹಿಸಿದ್ದು, ಚೆನೈನಿಂದ ಬರುವ ವಿಮಾನದಲ್ಲಿ ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ್ದರು. ಬೆಳಗಾವಿಗೆ ಚೆನೈನಿಂದ ಯಾವುದೇ ವಿಮಾನ ಸಂಪರ್ಕ ಇರುವುದಿಲ್ಲ. ಇದರಿಂದ ಇದು ಹುಸಿ ಬೆದರಿಕೆ ಎಂದು ತೀರ್ಮಾನಕ್ಕೆ ಬರಲಾಗಿದೆ.

    ಈ ಸಂಬಂಧ ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇ-ಮೇಲ್ ಎಲ್ಲಿಂದ ಬಂದಿದೆ? ಯಾರು ಮಾಡಿದ್ದಾರೆ? ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ದೇಶದಲ್ಲಿ ಒಂದು ವಾರದಲ್ಲಿ 46ಕ್ಕೂ ಹೆಚ್ಚು ವಿಮಾನಗಳು ಬೆದರಿಕೆ ಕರೆ ಸ್ವೀಕರಿಸಿರುವ ಬಗ್ಗೆ ವರದಿಯಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ (Ministry Of Civil Aviation) ತಿಳಿಸಿದೆ.

  • ತಾಂತ್ರಿಕ ತೊಂದರೆಯಿಂದ ತರಬೇತಿ ವಿಮಾನ ತುರ್ತು ಭೂಸ್ಪರ್ಶ- ತಪ್ಪಿದ ಭಾರೀ ಅನಾಹುತ

    ತಾಂತ್ರಿಕ ತೊಂದರೆಯಿಂದ ತರಬೇತಿ ವಿಮಾನ ತುರ್ತು ಭೂಸ್ಪರ್ಶ- ತಪ್ಪಿದ ಭಾರೀ ಅನಾಹುತ

    ಬೆಳಗಾವಿ: ತಾಂತ್ರಿಕ ತೊಂದರೆಯಿಂದ ತರಬೇತಿ ವಿಮಾನವೊಂದು (Training Aircraft) ತುರ್ತು ಭೂಸ್ಪರ್ಶ ಆಗಿರುವ ಘಟನೆ ಬೆಳಗಾವಿ (Belgavi) ತಾಲೂಕಿನ ಹೊನ್ನಿಹಾಳ (Honnihala) ಹೊರವಲಯದಲ್ಲಿ ನಡೆದಿದೆ.

    ತಾಲೂಕಿನ ಸಾಂಬ್ರಾ ಏರ್‌ಪೋರ್ಟ್‌ನಿಂದ (Sambra Airport) ಹೊರಟಿದ್ದ ತರಬೇತಿ ವಿಮಾನ ತಾಂತ್ರಿಕ ತೊಂದರೆಯಿಂದಾಗಿ ಹೊಲದಲ್ಲಿ ತುರ್ತು ಭೂಸ್ಪರ್ಶವಾಗಿದೆ. ರೆಡ್‌ಬರ್ಡ್ (Redbird) ಸಂಸ್ಥೆಗೆ ಸೇರಿದ VT- RBF ತರಬೇತಿ ವಿಮಾನ ಇದಾಗಿದ್ದು, ಘಟನೆ ನಡೆದ ವೇಳೆ ವಿಮಾನದಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರೆಂಬ ಮಾಹಿತಿ ಲಭಿಸಿದೆ. ಇದನ್ನೂ ಓದಿ: ಒಬ್ಬಂಟಿಯಾಗಿ ಸಾಗುವವರನ್ನು ಟಾರ್ಗೆಟ್ ಮಾಡುತ್ತಿದ್ದ ಕುಖ್ಯಾತ ಡಕಾಯಿತಿ ಗ್ಯಾಂಗ್ ಅರೆಸ್ಟ್

    ಮಾರಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ರಾಜ್ಯದ ಹಲವೆಡೆ ವರುಣನ ಅವಾಂತರ- ವಿಜಯಪುರ, ಬಳ್ಳಾರಿಯಲ್ಲಿ ಸಿಡಿಲಬ್ಬರಕ್ಕೆ ಇಬ್ಬರು ಬಲಿ

     

  • ಬಿಜೆಪಿಯವರಿಂದಲೇ ಕಾಂಗ್ರೆಸ್ ಸೇರುವ ವಾತಾವರಣ ನಿರ್ಮಾಣ: ಲಕ್ಷ್ಮಣ ಸವದಿ

    ಬಿಜೆಪಿಯವರಿಂದಲೇ ಕಾಂಗ್ರೆಸ್ ಸೇರುವ ವಾತಾವರಣ ನಿರ್ಮಾಣ: ಲಕ್ಷ್ಮಣ ಸವದಿ

    ಬೆಳಗಾವಿ: ಬಿಜೆಪಿ (BJP) ಬಿಟ್ಟು ಕಾಂಗ್ರೆಸ್ (Congress) ಸೇರುವ ವಾತಾವರಣವನ್ನು ಅವರೇ ನಿರ್ಮಾಣ ಮಾಡಿದ್ದಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ವಾಗ್ದಾಳಿ ನಡೆಸಿದ್ದಾರೆ.

    ಬೆಳಗಾವಿಯ (Belagavi) ಸಾಂಬ್ರಾ ವಿಮಾನ (Sambra Airport) ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು. ಬಳಿಕ ಮುಂದಿನ ಅವಧಿಗೆ ಡಿಸಿಎಂ ಮಾಡುವುದಾಗಿ ಹೇಳಿದ್ದರು. ನಾನೇನೂ ಡಿಸಿಎಂ ಸ್ಥಾನ ಕೇಳಿರಲಿಲ್ಲ. ಅಥವಾ ಮಂತ್ರಿ ಮಾಡಿ ಎಂದು ಕೇಳಿರಲಿಲ್ಲ. ಆದರೆ ಡಿಸಿಎಂ ಸ್ಥಾನದಿಂದ ತಗೆಯುವ ವೇಳೆ ನನ್ನನ್ನು ಒಂದು ಮಾತು ಕೇಳಲಿಲ್ಲ. ನಾನೇನೂ ಭ್ರಷ್ಟಾಚಾರ ಅಥವಾ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿದ್ದೇನಾ? ಎಂದು ಅವರು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಇತ್ತೀಚಿನ ರಾಜಕೀಯ ಬೆಳವಣಿಗೆ ನೋಡಿ ಬೇಸರವಾಗಿದೆ: ರಾಜಕೀಯ ನಿವೃತ್ತಿ ಘೋಷಿಸಿದ ವಿ.ಆರ್ ಸುದರ್ಶನ್

    ಉಪಚುನಾವಣೆ ವೇಳೆ ಜವಾಬ್ದಾರಿ ಕೊಟ್ಟಾಗ ಅಭ್ಯರ್ಥಿಗಳ ಗೆಲ್ಲಿಸುವ ಕೆಲಸ ಮಾಡಿದ್ದೆ. ಈ ವೇಳೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಕೊಡಬೇಕು ಎಂದು ಕೇಳಿದ್ದೆ. ಅಲ್ಲದೆ 17 ಜನರಿಗೆ ಮಾತು ಕೊಟ್ಟಿದ್ದು, ಅವರೆಲ್ಲರಿಗೂ ಟಿಕೆಟ್ ಕೊಡಬೇಕು ಎಂದಿದ್ದರು. ಆದರೆ ಶಂಕರ್ ಅವರಿಗೆ ಏಕೆ ಟಿಕೆಟ್ ಕೊಡಲಿಲ್ಲ? ಒಂದು ಮಾನದಂಡ ಮಾಡಿದರೆ ಪ್ರಧಾನಿಯಿಂದ ಹಿಡಿದು ಸಾಮಾನ್ಯ ಕಾರ್ಯಕರ್ತರವರೆಗೂ ಒಂದೇ ಇರಬೇಕು. ಅವರ ಬದುಕನ್ನೇ ಬಿಜೆಪಿಗೆ ಮುಡುಪಿಟ್ಟ ಜಗದೀಶ್ ಶೆಟ್ಟರ್‌ಗೆ (Jagadish Shettar) ಚುನಾವಣೆ ಸ್ಪರ್ಧಿಸಲು ಅವಕಾಶ ನೀಡಿಲ್ಲ. ಬಿಜೆಪಿಯಲ್ಲಿ ತತ್ವ ಸಿದ್ಧಾಂತ ಗಾಳಿಗೆ ತೂರುವ ಕಾರ್ಯ ಆಗಿದೆ ಎಂದು ಗುಡುಗಿದ್ದಾರೆ.

    ಅಭಿಮಾನಿಗಳು ನನ್ನನ್ನು ಕರೆದು ಚರ್ಚೆ ಮಾಡಿ ನೀವು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ ಎಂದರು. ಅಲ್ಲದೆ ಕಾಂಗ್ರೆಸ್ ಜೊತೆ ಚರ್ಚೆ ಮಾಡಿ, ಇಲ್ಲವೆ ಪಕ್ಷೇತರವಾಗಿ ಸ್ಪರ್ಧಿಸಿ ಎಂದು ಆಯ್ಕೆಯನ್ನು ಕೊಟ್ಟಿದ್ದರು. ಅದರಂತೆ ಕಾಂಗ್ರೆಸ್‍ಗೆ ಸೇರಿದ್ದೇನೆ ಎಂದು ಹೇಳಿದ್ದಾರೆ.

    ನನ್ನ ಕ್ಷೇತ್ರದ ಜನ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದಾರೆ. ಕ್ಷೇತ್ರದ ರೈತರು ಸ್ವಾಭಿಮಾನದಿಂದ ಬದುಕಬೇಕು ಎಂಬ ಸಂಕಲ್ಪ ಇದೆ. ರೈತರಿಗೆ ನೀಡಲಾದ ಭರವಸೆಗಳನ್ನು ಈಡೇರಿಸುವ ಕೆಲಸ ಮಾಡುತ್ತೇನೆ. ಒಂದೆರಡು ದಿನಗಳಲ್ಲಿ ನನ್ನ ನಾಮಪತ್ರ ಸಲ್ಲಿಸುತ್ತೇನೆ. ಬಿ ಫಾರಂ ಶನಿವಾರ ಸಂಜೆ ಬರಲಿದೆ ಎಂದು ಹೇಳಿದ್ದಾರೆ.

    ಲಕ್ಷ್ಮಣ್ ಸವದಿ ದುಡುಕಿದ್ದಾರೆ ಎಂಬ ಸಿಎಂ ಬಸವರಾಜ ಬೊಮ್ಮಾಯಿಯವರ (Basavaraj Bommai) ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ದುಡುಕಿಲ್ಲ, ನಿಜವಾಗಿ ಬಿಜೆಪಿ ನಾಯಕರು ದುಡುಕಿದ್ದಾರೆ. ಯಡಿಯೂರಪ್ಪ ಪಕ್ಷ ಬಿಟ್ಟು ಪಕ್ಷಕ್ಕೆ ಬಂದವರು ಅವರು ಬೇರೆಯವರಿಗೆ ಮಾರ್ಗದರ್ಶನ ಮಾಡುವ ಹಕ್ಕಿಲ್ಲ. ಜಗದೀಶ್ ಶೆಟ್ಟರ್ ನಾವು 20-25 ವರ್ಷಗಳಿಂದ ಜೊತೆಗಿದ್ದೇವೆ. ಜಗದೀಶ್ ಶೆಟ್ಟರ್ ಏನು ತಪ್ಪು ಮಾಡಿದ್ದಾರೆ? ಅವರಿಗೆ ಕೇವಲ 67 ವಯಸ್ಸು, ವಯಸ್ಸಿನ ಮಾನದಂಡ ಇದ್ರೆ ಏಕೆ ಟಿಕೆಟ್ ನೀಡುತ್ತಿಲ್ಲ. ಶೆಟ್ಟರ್ ಅಂತವರನ್ನೇ ಬಿಜೆಪಿ ಕಡೆಗಣಿಸಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪಗೆ ಜಾಮೀನು

  • ಏ.17 ಇಲ್ಲವೇ 18 ರಂದು ನಾಮಪತ್ರ ಸಲ್ಲಿಸುತ್ತೇನೆ: ಲಕ್ಷ್ಮಣ ಸವದಿ

    ಏ.17 ಇಲ್ಲವೇ 18 ರಂದು ನಾಮಪತ್ರ ಸಲ್ಲಿಸುತ್ತೇನೆ: ಲಕ್ಷ್ಮಣ ಸವದಿ

    – ಸವದಿ ಕಾಂಗ್ರೆಸ್ ಸೇರ್ಪಡೆ ಫಿಕ್ಸ್

    ಬೆಳಗಾವಿ: ಏ.17 ಇಲ್ಲವೇ 18 ರಂದು ನಾಮಪತ್ರ ಸಲ್ಲಿಕೆ ಮಾಡುತ್ತೇನೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ (Laxman Savadi) ಬೆಳಗಾವಿಯಲ್ಲಿ ಶುಕ್ರವಾರ ಹೇಳಿದ್ದಾರೆ.

    ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ (Sambra Airport) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕ್ಷೇತ್ರದ ಜನರ ಒಪ್ಪಿಗೆ ಪಡೆದಿದ್ದೇನೆ. ವೈಯಕ್ತಿಕವಾಗಿಯೂ ಅನೇಕರು ತಮ್ಮ ನಿರ್ಧಾರವನ್ನು ಹೇಳಿದ್ದಾರೆ. ಕಾಂಗ್ರೆಸ್ (Congress) ಹಾಗೂ ಜೆಡಿಎಸ್‍ನಿಂದ (JDS) ಆಹ್ವಾನ ಇದೆ. ಸಂಜೆಯ ಒಳಗೆ ತೀರ್ಮಾನಕ್ಕೆ ಬರಲಿದ್ದೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮುಂದಿನ ಮುಖ್ಯಮಂತ್ರಿ ಸೋಮಣ್ಣ – ಘೋಷಣೆ ಕೂಗಿದ ಅಭಿಮಾನಿಗಳು

    ಇನ್ನೂ ಬಿಜೆಪಿ (BJP) ಹಂಗಿನಲ್ಲೇ ಇದ್ದೇನೆ, ಅದರಿಂದ ಹೊರಬರಬೇಕು. ವಿಧಾನ ಪರಿಷತ್ ಸ್ಥಾನ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಬೇಕು. ಬೆಂಗಳೂರಿಗೆ ಹೋಗಿ ಸಾಧಕ-ಬಾಧಕ ಚರ್ಚೆ ಮಾಡಿ ಈ ಬಗ್ಗೆ ನಿರ್ಣಯ ಕೈಗೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

    ನನ್ನ ಸಂಪರ್ಕಕ್ಕೆ ಬಿ.ಎಲ್ ಸಂತೋಷ್ ಬಹಳ ಪ್ರಯತ್ನಪಟ್ಟಿದ್ದಾರೆ. ಕೆಲ ಮುಖಂಡರನ್ನು ಸಹ ಕಳುಹಿಸಿದ್ದರು. ಮನೆ ಬಿಟ್ಟು ಹೊರಗೆ ಬಂದ ಮೇಲೆ ಸಂಪರ್ಕ ಮಾಡಿದರೇನು? ಬಿಟ್ಟರೇನು? ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಸಂತೋಷ್ ಅವರು ನನ್ನ ಗುರು, ಅವರಿಗೆ ನನ್ನನ್ನು ಕ್ಷಮಿಸಿ ಎಂದು ಹೇಳುತ್ತೇನೆ. ಅವರಿಂದ ಯಾವುದೇ ಅನ್ಯಾಯ ಆಗಿಲ್ಲ. ಕಷ್ಟ ಕಾಲದಲ್ಲಿ ನೆರವು ಕೊಟ್ಟಿದ್ದಾರೆ. ಅವರ ಆಜ್ಞೆಯನ್ನು ಪಾಲಿಸುವುದು ಕಷ್ಟ, ಬಿಡುವುದು ಕಷ್ಟ ಎಂದಿದ್ದಾರೆ.

    ನೀರಾವರಿಯಿಂದ ವಂಚಿತಗೊಂಡ ಅಥಣಿಯ ಕೆಲ ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎನ್ನುವುದು ನನ್ನ ಆಸೆ. ಇಂದಿನ ಚರ್ಚೆಯಲ್ಲಿ ನೀರಾವರಿ ಬೇಡಿಕೆ ಇಡುತ್ತೇನೆ ಎಂದಿದ್ದಾರೆ.

    ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಖಚಿತ
    ಮಾಜಿ ಸಚಿವ ರಮೇಶ ಜಾರಕಿಹೊಳಿ ಮಣಿಸಲು ಮಾಜಿ ಡಿಸಿಎಂ ಲಕ್ಷ್ಮಣ ಸವದಿಯನ್ನ ಕಾಂಗ್ರೆಸ್‍ಗೆ ಕರೆತರಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (D.K Shivakumar) ಮುಂದಾಗಿದ್ದಾರೆ. ಇಂದು ಲಕ್ಷ್ಮಣ ಸವದಿ ಕಾಂಗ್ರೆಸ್ ಸೇರ್ಪಡೆ ಆಗುವುದು ಖಚಿತವಾಗಿದೆ.

    ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ ಹಟ್ಟಿಹೊಳಿ ಜೊತೆಯಲ್ಲಿ ಡಿ.ಕೆ ಶಿವಕುಮಾರ್ ಹೆಸರಿನಲ್ಲಿ ಬುಕ್ ಆಗಿರುವ ವಿಶೇಷ ವಿಮಾನದಲ್ಲಿ ಸವದಿ ಬೆಂಗಳೂರಿಗೆ ಬಂದಿದ್ದಾರೆ. ಮಧ್ಯಾಹ್ನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಇದನ್ನೂ ಓದಿ: ಸಮಾಜದ ಮುಖಂಡರ ಕಡೆಗಣನೆ – ರಾಷ್ಟ್ರೀಯ ಪಕ್ಷಗಳ ವಿರುದ್ಧ ಭೋವಿ ಶ್ರೀ ಕಿಡಿ

  • ಅಮಿತ್ ಶಾ ಸ್ವಾಗತಿಸಲು ಬಿಜೆಪಿ ನಾಯಕಿಯರ ಜಟಾಪಟಿ

    ಅಮಿತ್ ಶಾ ಸ್ವಾಗತಿಸಲು ಬಿಜೆಪಿ ನಾಯಕಿಯರ ಜಟಾಪಟಿ

    – ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಕಿತ್ತಾಟ

    ಬೆಳಗಾವಿ: ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮಿಸುತ್ತಿರುವ ಹಿನ್ನೆಲೆ ಅವರನ್ನು ಸ್ವಾಗತಿಸಲು ಬಿಜೆಪಿ ಮಹಿಳಾ ನಾಯಕಿಯರಿಬ್ಬರ ನಡುವೆ ಮುಸುಕಿನ ಗುದ್ದಾಟ ನಡೆದಿದೆ.

    ಒಂದೆಡೆ ಅಮಿತ್ ಶಾ ಬೆಳಗಾವಿ ಭೇಟಿಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿರುವ ಅಮಿತ್ ಶಾ ಅವರನ್ನು ಬರಮಾಡಿಕೊಳ್ಳಲು ಬಿಜೆಪಿ ನಾಯಕಿಯರಾದ ಡಾ.ಸೋನಾಲಿ ಸೋರ್ನಾಬತ್, ದೀಪಾ ಕುಡಚಿ ನಾ ಮುಂದು ತಾ ಮುಂದು ಎಂದು ಜಟಾಪಟಿ ನಡೆಸಿದ್ದರು.

    ಸಾಂಬ್ರಾ ಏರ್‍ಪೋರ್ಟ್ ಗೆ ಬಂದ ಅಮಿತ್ ಶಾರನ್ನು ಸ್ವಾಗತ ಕೋರಲು ಡಾ.ಸೋನಾಲಿ ಸೋರ್ನಾಬತ್ ಏರ್‍ಪೋರ್ಟ್ ಒಳಗೆ ಹೋಗಿದ್ದಾರೆ. ಇದಕ್ಕೆ ಮಹಿಳಾ ನಾಯಕಿ ದೀಪಾ ಕುಡಚಿ ಪಾಸ್ ಇಲ್ಲದೇ ಒಳಗೆ ಹೇಗೆ ಬಿಟ್ರಿ, ಸ್ವಾಗತ ಸಮಿತಿ ಲಿಸ್ಟ್‍ನಲ್ಲಿ ಅವರ ಹೆಸರಿಲ್ಲ ಎಂದು ತಗಾದೆ ತೆಗೆದಿದ್ದರು.

    ಈ ಕುರಿತಂತೆ ಬಿಜೆಪಿ ನಾಯಕರ ಬಳಿ ದೀಪಾ ಕುಡಚಿ ಪಾಸ್ ಅಸಮಾಧಾನ ವ್ಯಕ್ತಪಡಿಸಿದರು. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರನ್ನು ಬಿಜೆಪಿಯ ಅಲ್ಲಿನ ಸ್ಥಳೀಯ ನಾಯಕರಾದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ, ಡಿಸಿಎಂ ಲಕ್ಷ್ಮಣ ಸವದಿ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಶಾಸಕರಾದ ಅಭಯ್ ಪಾಟೀಲ್, ಅನಿಲ ಬೆನಕೆ, ಮಹೇಶ್ ಕುಮಟ್ಟಳ್ಳಿ ಹೂಗುಚ್ಛ ನೀಡಿ ಸ್ವಾಗತಿಸಿದರು.

  • ‘ಕರ್ಕೊಂಡ್ ಬಂದು ಅರ್ಧಕ್ಕೆ ಬಿಟ್ಟು ಹೋಗ್ತೀರಾ?’- ಹಠಕ್ಕೆ ಬಿದ್ದು ಸಿಎಂ ಜತೆ ಶೋಭಾ ಪ್ರಯಾಣ

    ‘ಕರ್ಕೊಂಡ್ ಬಂದು ಅರ್ಧಕ್ಕೆ ಬಿಟ್ಟು ಹೋಗ್ತೀರಾ?’- ಹಠಕ್ಕೆ ಬಿದ್ದು ಸಿಎಂ ಜತೆ ಶೋಭಾ ಪ್ರಯಾಣ

    – ಶೋಭಾ ಹಠಕ್ಕೆ ರವಿಕುಮಾರ್‌ರನ್ನು ಬಿಟ್ಟು ಹೋದ ಸಿಎಂ

    ಬೆಳಗಾವಿ: ಸಂಸದೆ ಶೋಭಾ ಕರಂದ್ಲಾಜೆ ಹಠಕ್ಕೆ ಬಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಪ್ರಯಾಣ ಬೆಳೆಸಿದ ಪ್ರಸಂಗ ಇಂದು ಬೆಳಗಾವಿಯಲ್ಲಿ ನಡೆಯಿತು.

    ಬೆಳಗಾವಿಯ ಉದ್ಯಮ್ ಬಾಗ್‍ನಲ್ಲಿರುವ ಶಗುನ್ ಗಾರ್ಡನ್‍ನಲ್ಲಿ ನಡೆದ ಸರ್ಕಾರದ ಮುಖ್ಯ ಸಚೇತಕ, ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಮಗಳ ಮದುವೆಗೆ ಸಿಎಂ ಆಗಮಿಸಿದ್ದರು. ಜೊತೆಗೆ ಸಂಸದೆ ಶೋಭಾ ಕರಂದ್ಲಾಜೆ ಅವರು ಕೂಡ ಮದುವೆ ಆಗಮಿಸಿ ನವ ಜೋಡಿಯನ್ನು ಆಶೀರ್ವದಿಸಿದರು. ಇದನ್ನೂ ಓದಿ: ಕೊರೊನಾ ಭೀತಿ- ಸ್ವತಃ ಆದೇಶ ಹೊರಡಿಸಿ ಅದ್ದೂರಿ ಮದ್ವೆಯಲ್ಲಿ ಸಿಎಂ ಭಾಗಿ

    ಕವಟಗಿಮಠ ಅವರ ಮದುವೆ ಸಮಾರಂಭ ಮುಗಿಸಿ ಸಿಎಂ ವಾಹನದಲ್ಲೇ ಶೋಭಾ ಕರಂದ್ಲಾಜೆ ಅವರು ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಆಗ ಶೋಭಾ ಕರಂದ್ಲಾಜೆ ಅವರು, ವಾಹನದಲ್ಲಿ ಕರೆದುಕೊಂಡು ಬಂದು ಅರ್ಧಕ್ಕೆ ಬಿಟ್ಟು ಹೋಗ್ತೀರಾ ಎಂದು ಸಿಎಂ ಕಾಲೆಳೆದರು. ಈ ವೇಳೆ ಗೃಹ ಸಚಿವ ಬೊಮ್ಮಾಯಿ ಅವರು, ನನ್ನ ಬದಲು ವಿಮಾನದಲ್ಲಿ ನೀವು ಹೋಗಿ ಎಂದು ಶೋಭಾ ಅವರಿಗೆ ಹೇಳಿದರು. ಇದನ್ನೂ ಓದಿ: ಕೊರೊನಾ ಭೀತಿ ನಡುವೆಯೇ ಅದ್ದೂರಿ ಮದ್ವೆಯಲ್ಲಿ ಎಚ್‍ಡಿಡಿ ಭಾಗಿ

    ಶೋಭಾ ಅವರ ಹಠದಿಂದಾಗಿ ಸಿಎಂ ಯಡಿಯೂರಪ್ಪ ಅವರು ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಅವರನ್ನು ಬಿಟ್ಟು ಸಂಸದೆಗೆ ಆಹ್ವಾನ ನೀಡಿದರು. ಈ ಮೂಲಕ ವಿಶೇಷ ವಿಮಾನದಲ್ಲಿ ಸಿಎಂ ಜೊತೆ ಬಸವರಾಜ ಬೊಮ್ಮಾಯಿ ಹಾಗೂ ಶೋಭಾ ಕರಂದ್ಲಾಜೆ ಅವರು ಬೆಳಗಾವಿಯಿಂದ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು. ಇದನ್ನೂ ಓದಿ: ನಾಡೋಜ ಪಾಟೀಲ ಪುಟ್ಟಪ್ಪ ಆರೋಗ್ಯ ವಿಚಾರಿಸಿದ ಸಿಎಂ ಬಿಎಸ್‍ವೈ

    ಸಿಎಂ ಬೆಂಗಳೂರಿನಿಂದ ಬರುವಾಗ ವಿಶೇಷ ವಿಮಾನದಲ್ಲಿ ರವಿಕುಮಾರ್ ಅವರನ್ನು ಕರೆದುಕೊಂಡು ಬಂದಿದ್ದರು. ಅಷ್ಟೇ ಅಲ್ಲದೆ ಹುಬ್ಬಳ್ಳಿಗೆ ಹೋಗುವಾಗಲೂ ಅವರನ್ನು ಕರೆದುಕೊಂಡು ಹೋಗಲು ನಿರ್ಧಸಿದ್ದರು. ಆದರೆ ಸಂಸದೆ ಕರಂದ್ಲಾಜೆ ಅವರ ಹಠದಿಂದಾಗಿ ಅವರನ್ನು ಸಿಎಂ ಕೈಬಿಡಬೇಕಾಯಿತು.