Tag: sambhal

  • 46 ವರ್ಷ ಹಳೆ ಕಾಲದ ಹಿಂದೂ ದೇವಾಲಯ ಪತ್ತೆ; ಸಂಭಲ್ ಮಸೀದಿ ಸುತ್ತ ಮುಂದುವರಿದ ತೆರವು ಕಾರ್ಯ

    46 ವರ್ಷ ಹಳೆ ಕಾಲದ ಹಿಂದೂ ದೇವಾಲಯ ಪತ್ತೆ; ಸಂಭಲ್ ಮಸೀದಿ ಸುತ್ತ ಮುಂದುವರಿದ ತೆರವು ಕಾರ್ಯ

    ಲಕ್ನೋ: ಸಂಭಲ್‌ (Sambhal) ಡಿಎಂ ಆದೇಶದಂತೆ ಶಾಹಿ ಜಾಮಾ ಮಸೀದಿ (Shahi Jama Masjid) ಸುತ್ತಲಿನ ಒತ್ತುವರಿ ಜಾಗಗಳ ತೆರವು ಕಾರ್ಯ ಮುಂದುವರೆದಿದೆ.

    ಉತ್ತರ ಪ್ರದೇಶದ (Uttar Pradesh) ಸಂಭಲ್‌ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಂದ್ರ ಪೆನ್ಸಿಯಾ ಮಸೀದಿ ಭೇಟಿಯ ಬಳಿಕ ಇಲ್ಲಿನ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಆದೇಶಿಸಿದ್ದರು.

    ಸಂಭಲ್‌ನಲ್ಲಿ ಹಿಂಸಾಚಾರ ನಡೆದಿದ್ದ ಮಸೀದಿ ಸುತ್ತಮುತ್ತ ಸರ್ಕಾರ ಒತ್ತುವರಿ ತೆರವು ಕಾರ್ಯ ಆರಂಭಿಸಿದ್ದು, 46 ವರ್ಷಗಳಷ್ಟು ಹಿಂದಿನ ಹಳೆಯ ದೇವಾಲಯದಲ್ಲಿ ಶಿವ ಮತ್ತು ಹನುಮಂತನ ವಿಗ್ರಹಗಳು ಪತ್ತೆಯಾಗಿವೆ. ನಖಾಸಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಂಕಿತ ಅಕ್ರಮ ವಿದ್ಯುತ್ ಸಂಪರ್ಕಗಳನ್ನು ಹೊಂದಿರುವ ಸ್ಥಳಗಳನ್ನು ಕೂಡ ಈ ಕಾರ್ಯಾಚರಣೆಯು ಗುರಿಯಾಗಿಸಿದೆ.ಇದನ್ನೂ ಓದಿ: ಕೃಷಿ ಹೊಂಡದಲ್ಲಿ ಸೋಡಿಯಂ ಬ್ಲಾಸ್ಟ್ – ಡ್ರೋನ್ ಪ್ರತಾಪ್‌ನ ಇಬ್ಬರು ಸ್ನೇಹಿತರು ಅರೆಸ್ಟ್

    ಸಂಭಲ್ ಡಿಎಂ ಮಾತನಾಡಿ, ಒತ್ತುವರಿ ಕಾರ್ಯ ಬಹುದಿನಗಳಿಂದ ನಡೆದಿದೆ. ಇದನ್ನು ಸರಿಪಡಿಸುವ ಉದ್ದೇಶದಿಂದ ನ್ಯಾಯಾಲಯದ ಆದೇಶದಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮಸೀದಿಯ ಪರಿಶೀಲನೆ ನಡೆಸಿತ್ತು. ಇದರಿಂದಾಗಿ ಸಂಭಲ್ ಪ್ರದೇಶದ ಜನರು ಪ್ರತಿಭಟನೆ ನಡೆಸಿದ್ದು, ಹಿಂಸಾತ್ಮಕ ಘರ್ಷಣೆಗಳಾಗಿ ತಿರುಗಿತ್ತು. ಈ ಘಟನೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದರು ಎಂದು ತಿಳಿಸಿದರು.

    ಒತ್ತುವರಿ ತಡೆಯುವ ಉದ್ದೇಶದಿಂದ ಮೂರು ತಿಂಗಳುಗಳ ಕಾಲ ಅಭಿಯಾನ ನಡೆಯಲಿದ್ದು, ಯಾವುದೇ ಉಲ್ಲಂಘನೆಯಾದರೂ ಕೂಡ ಅದನ್ನು ನೆಲಸಮಗೊಳಿಸಲಾಗುವುದು. ಅತಿಕ್ರಮಣ ಹಾಗೂ ಶಂಕಿತ ಅಕ್ರಮ ವಿದ್ಯುತ್ ಸಂಪರ್ಕಗಳ ಬಗ್ಗೆ ಎಫ್‌ಐಆರ್ ದಾಖಲಾಗುತ್ತಿದ್ದು, ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೆ ಒತ್ತುವರಿಗೆ ಸಂಬಂಧಿಸಿದಂತೆ ಒಟ್ಟು 1221 ಎಫ್‌ಐಆರ್ ದಾಖಲಾಗಿವೆ ಎಂದರು.

    ಸಂಭಲ್ ಆಡಳಿತವು ವಿವಿಧ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಮೂಲ ಉದ್ದೇಶವನ್ನು ಹೊಂದಿದೆ. ಈಗಾಗಲೇ ಡಿ.09 ರಂದು ಪೊಲೀಸರು ನಡೆಸಿದ ದಾಳಿಯಲ್ಲಿ ಒಟ್ಟು 13 ಸ್ಥಳಗಳಲ್ಲಿ ಬಂದೂಕು ಹಾಗೂ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

    ಹೆಚ್ಚುವರಿ ಎಸ್‌ಪಿ ಶ್ರೀಶ್‌ಚಂದ್ರ ಮಾತನಾಡಿ, ಕೆಲವರು ಮನೆ ನಿರ್ಮಿಸಿ ದೇವಸ್ಥಾನವನ್ನು ಒತ್ತುವರಿ ಮಾಡಿಕೊಂಡಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ದೇವಸ್ಥಾನವನ್ನು ಸ್ವಚ್ಛಗೊಳಿಸಲಾಗಿದ್ದು, ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ದೇವಾಲಯದಲ್ಲಿ ಶಿವ ಮತ್ತು ಹನುಮಂತನ ವಿಗ್ರಹಗಳಿವೆ. ಈ ಪ್ರದೇಶದಲ್ಲಿ ಹಿಂದೂ ಕುಟುಂಬಗಳು ವಾಸವಿದ್ದವು. ಕಾರಣಾಂತರಗಳಿAದ ಅವರು ಈ ಪ್ರದೇಶವನ್ನು ತೊರೆದರು. ದೇವಾಲಯದ ಸಮೀಪದಲ್ಲಿಯೇ ಪುರಾತನ ಬಾವಿಯ ಬಗ್ಗೆಯೂ ಮಾಹಿತಿ ಇದೆ ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ಚಾಮುಂಡೇಶ್ವರಿ ಹರಕೆ ಸೀರೆ ಕಳ್ಳತನ ಆರೋಪ ಮಾಡಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ಎಫ್‌ಐಆರ್

  • ಸಂಭಲ್‌ ಮಸೀದಿ ಸುತ್ತ ಒತ್ತುವರಿ ತೆರವು ವೇಳೆ ಹಳೇ ಹಿಂದೂ ದೇಗುಲ ಪತ್ತೆ

    ಸಂಭಲ್‌ ಮಸೀದಿ ಸುತ್ತ ಒತ್ತುವರಿ ತೆರವು ವೇಳೆ ಹಳೇ ಹಿಂದೂ ದೇಗುಲ ಪತ್ತೆ

    * 46 ವರ್ಷ ಹಳೆಯ ಶಿವ, ಹನುಮಂತ ವಿಗ್ರಹಗಳು ಪತ್ತೆ; ದೇವಾಲಯ ಓಪನ್‌
    * ಹಿಂದೂ-ಮುಸ್ಲಿಂ ಗಲಾಟೆಯಿಂದ ವಲಸೆ ಹೋಗಿದ್ದ ಹಿಂದೂಗಳು

    ಲಕ್ನೋ: ಸಂಭಲ್‌ನಲ್ಲಿರುವ (Sambhal) ಶಾಹಿ ಜಾಮಾ ಮಸೀದಿಯ ಸುತ್ತ ಒತ್ತುವರಿ ತೆರವು ವೇಳೆ 46 ವರ್ಷಗಳಷ್ಟು ಹಿಂದಿನ ಹಳೇ ದೇಗುಲ ಪತ್ತೆಯಾಗಿದೆ.

    ಸಂಭಲ್‌ನಲ್ಲಿ ಹಿಂಸಾಚಾರ ನಡೆದಿದ್ದ ಮಸೀದಿ ಸುತ್ತಮುತ್ತ ಸರ್ಕಾರ ಒತ್ತುವರಿ ತೆರವು ಕಾರ್ಯ ಆರಂಭಿಸಿದೆ. ದೇವಾಲಯದಲ್ಲಿ ಶಿವ ಮತ್ತು ಹನುಮಂತನ ವಿಗ್ರಹಗಳು ಪತ್ತೆಯಾಗಿವೆ. ನಖಾಸಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಂಕಿತ ಅಕ್ರಮ ವಿದ್ಯುತ್ ಸಂಪರ್ಕಗಳನ್ನು ಹೊಂದಿರುವ ಸ್ಥಳಗಳನ್ನು ಕೂಡ ಈ ಕಾರ್ಯಾಚರಣೆಯು ಗುರಿಯಾಗಿಸಿದೆ. ಇದನ್ನೂ ಓದಿ: ಕಾಂಗ್ರೆಸ್‌ನಿಂದ ಸಂವಿಧಾನ ಶಿಕಾರಿ..75 ಬಾರಿ ಬದಲಾವಣೆ| ನೆಹರು ಟು ರಾಹುಲ್‌ – ಉದಾಹರಣೆಯೊಂದಿಗೆ ತಿವಿದ ಮೋದಿ

    ಸಂಭಲ್ ಸಿಒ ಅನುಜ್ ಕುಮಾರ್ ಚೌಧರಿ ಮಾತನಾಡಿ, ಈ ಪ್ರದೇಶದಲ್ಲಿ ದೇವಸ್ಥಾನವನ್ನು ಅತಿಕ್ರಮಣ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿದೆ. ನಾವು ಸ್ಥಳವನ್ನು ಪರಿಶೀಲಿಸಿದಾಗ ಅಲ್ಲಿ ಒಂದು ದೇವಸ್ಥಾನವನ್ನು ಪತ್ತೆ ಮಾಡಿದ್ದೇವೆಂದು ತಿಳಿಸಿದ್ದಾರೆ.

    ನಗರ ಹಿಂದೂ ಸಭಾದ ಪೋಷಕರಾದ ವಿಷ್ಣು ಶರಣ್ ರಸ್ತೋಗಿ ಅವರು 1978 ರ ನಂತರ ದೇವಾಲಯವನ್ನು ಪುನಃ ತೆರೆಯಲಾಗಿದೆ ಎಂದು ಹೇಳುತ್ತಾರೆ. ಇದನ್ನೂ ಓದಿ: ಪ್ರತಿಭಟನೆ ವೇಳೆ ಅಶ್ರುವಾಯು, ಜಲ ಫಿರಂಗಿ ಬಳಕೆ; 17 ಮಂದಿ ರೈತರಿಗೆ ಗಾಯ

    ಹೆಚ್ಚುವರಿ ಎಸ್‌ಪಿ ಶ್ರೀಶ್‌ಚಂದ್ರ ಮಾತನಾಡಿ, ಕೆಲವರು ಮನೆ ನಿರ್ಮಿಸಿ ದೇವಸ್ಥಾನವನ್ನು ಒತ್ತುವರಿ ಮಾಡಿಕೊಂಡಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ. ದೇವಸ್ಥಾನವನ್ನು ಸ್ವಚ್ಛಗೊಳಿಸಲಾಗಿದ್ದು, ಒತ್ತುವರಿ ಮಾಡಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

    ದೇವಾಲಯದಲ್ಲಿ ಶಿವ ಮತ್ತು ಹನುಮಂತನ ವಿಗ್ರಹಗಳಿವೆ. ಈ ಪ್ರದೇಶದಲ್ಲಿ ಹಿಂದೂ ಕುಟುಂಬಗಳು ವಾಸವಿದ್ದವು. ಕಾರಣಾಂತರಗಳಿಂದ ಅವರು ಈ ಪ್ರದೇಶವನ್ನು ತೊರೆದರು. ದೇವಾಲಯದ ಸಮೀಪದಲ್ಲಿಯೇ ಪುರಾತನ ಬಾವಿಯ ಬಗ್ಗೆಯೂ ಮಾಹಿತಿ ಇದೆ ಎಂದು ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಮಧ್ಯಪ್ರದೇಶ | ಉದ್ಯಮಿ ದಂಪತಿ ಆತ್ಮಹತ್ಯೆ ಕೇಸ್‌ – ಡೆತ್‌ ನೋಟ್‌ನಲ್ಲಿ ಬಿಜೆಪಿ, ಇ.ಡಿ ಕಿರುಕುಳ ಆರೋಪ

  • ವಿದ್ಯುತ್‌ ಕಂಬವನ್ನೂ ಸೇರಿಸಿ ಕಟ್ಟಡ ನಿರ್ಮಾಣ – ಅಧಿಕಾರಿಗಳಿಂದ ಬುಲ್ಡೋಜರ್‌ ಅಸ್ತ್ರ ಪ್ರಯೋಗ

    ವಿದ್ಯುತ್‌ ಕಂಬವನ್ನೂ ಸೇರಿಸಿ ಕಟ್ಟಡ ನಿರ್ಮಾಣ – ಅಧಿಕಾರಿಗಳಿಂದ ಬುಲ್ಡೋಜರ್‌ ಅಸ್ತ್ರ ಪ್ರಯೋಗ

    – ಸಂಭಾಲ್‌ನಲ್ಲಿ ಸರ್ಕಾರಿ ಜಾಗ ಒತ್ತುವರಿ ವಿರುದ್ಧ ಕ್ರಮ

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಸಂಭಾಲ್‌ನಲ್ಲಿ (Sambhal) ವಿದ್ಯುತ್ ಇಲಾಖೆಯ (Electricity Department) ಜಾಗವನ್ನು ಒತ್ತುವರಿ (Encroachments) ಮಾಡಿ ಕಟ್ಟಲಾದ ಕಟ್ಟಡಗಳ ವಿರುದ್ಧ ಪೊಲೀಸರು ಬುಲ್ಡೋಜರ್‌ ಕಾರ್ಯಾಚರಣೆ ನಡೆಸಿದ್ದಾರೆ.

    ಕೆಲವು ನಿವಾಸಿಗಳು ಇಲಾಖೆಯ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಒತ್ತುವರಿ ಎಷ್ಟರ ಮಟ್ಟಿಗೆ ನಡೆದಿದೆ ಎಂದರೆ ವಿದ್ಯುತ್‌ ಕಂಬಗಳನ್ನೂ ಸೇರಿಸಿ ಕೆಲವರು ಮನೆಗಳನ್ನು ನಿರ್ಮಿಸಿಕೊಂಡಿದ್ದಾರೆ. ಅಂತಹ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆಸಲಾಗಿದೆ ಎಂದು ಉಪವಿಭಾಗಾಧಿಕಾರಿ ಸಂತೋಷ್ ತ್ರಿಪಾಠಿ (ಎಸ್‌ಡಿಒ) ಹೇಳಿದ್ದಾರೆ.

    ಕೆಲವರು ಸಂಪರ್ಕ ಮತ್ತು ಸರಿಯಾದ ಮೀಟರ್ ಇಲ್ಲದೆ ವಿದ್ಯುತ್ ಕಳ್ಳತನದಲ್ಲಿ ತೊಡಗಿದ್ದಾರೆ. ಸುಮಾರು 15 ವರ್ಷಗಳ ಹಿಂದೆ ಹಳೆಯ ಮೀಟರ್‌ಗಳನ್ನು ಸ್ಥಗಿತಗೊಳಿಸಲಾಗಿದೆ. ಅಂತಹ ಮೀಟರ್‌ಗಳು ಸಹ ಇಲ್ಲಿದ್ದು, ಅವುಗಳನ್ನು ತೆರವುಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

    ಕಾರ್ಯಾಚರಣೆ ವೇಳೆ ಸುಮಾರು 2-3 ಮನೆಗಳಲ್ಲಿ ವಿದ್ಯುತ್ ಕದಿಯುತ್ತಿರುವುದು ಕಂಡುಬಂದಿದೆ. ತನಿಖೆಯ ನಂತರ ಒಟ್ಟು ಮನೆಗಳ ಸಂಖ್ಯೆ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕಾಂಗ್ರೆಸ್‌, ಸಂಭಾಲ್ ಘಟನೆಯು ಬಿಜೆಪಿಯ ದ್ವೇಷದ ರಾಜಕೀಯದ ದುಷ್ಪರಿಣಾಮವಾಗಿದೆ ಮತ್ತು ಇದು ಶಾಂತಿಯುತ ಸಮಾಜಕ್ಕೆ ಮಾರಕವಾಗಿದೆ ಎಂದು ಕಿಡಿಕಾರಿದೆ.

  • ಸಂಭಲ್ ಬಳಿಕ ಮತ್ತೊಂದು ಮಸೀದಿ ವಿವಾದ – ಭಾರತದಲ್ಲಿ ಮಸೀದಿ ಮಂದಿರ ಕಗ್ಗಂಟು ಎಲ್ಲೆಲ್ಲಿ ಏನು?  

    ಸಂಭಲ್ ಬಳಿಕ ಮತ್ತೊಂದು ಮಸೀದಿ ವಿವಾದ – ಭಾರತದಲ್ಲಿ ಮಸೀದಿ ಮಂದಿರ ಕಗ್ಗಂಟು ಎಲ್ಲೆಲ್ಲಿ ಏನು?  

    ಬಾಬ್ರಿ ಮಸೀದಿಯಿಂದ ಶುರುವಾದ ಮಂದಿರ-ಮಸೀದಿ ವಿವಾದ ಈಗ ಜ್ಞಾನವಾಪಿವರೆಗೆ ಮುಂದುವರಿದು, ಸಂಬಲ್, ಬದೌನ್ ವರೆಗೂ ಬಂದು ತಲುಪಿದೆ. ಹಲವೆಡೆ ಮುಸ್ಲಿಂ ದೊರೆಗಳು ತಮ್ಮ ಆಳ್ವಿಕೆಯಲ್ಲಿ ದೇವಾಲಯಗಳನ್ನು ಧ್ವಂಸ ಮಾಡಿ ಮಸೀದಿ ನಿರ್ಮಾಣಮಾಡಿದ್ದಾರೆ ಎಂಬ ವಾದ ಕೇಳಿ ಬಂದಿದೆ. ಅದಕ್ಕೆ ಕೆಲವು ಕಡೆ ಸಾಕ್ಷಿಗಳು ಸಿಕ್ಕಿವೆ. ಅವು ಯಾವ ಮಸೀದಿ ಹಾಗೂ ಗತ ಕಾಲದಲ್ಲಿ ನಡೆದ ಘಟನೆಗಳಿಂದ ಈಗ್ಯಾಕೆ ಇಷ್ಟೊಂದು ಕೋಲಾಹಲ ಎಂಬ ಬಗ್ಗೆ ಇಲ್ಲಿ ವಿವರಣೆ ನೀಡಲಾಗಿದೆ.

    ಎಲ್ಲೆಲ್ಲಿ ಏನೇನು ವಿವಾದ?

    ಬದೌನ್ ಮಸೀದಿ: ಉತ್ತರ ಪ್ರದೇಶದ ಸಂಭಲ್ ಮಸೀದಿ ವಿವಾದದ ಬೆನ್ನಲ್ಲೇ ಬದೌನ್ ಜಿಲ್ಲೆಯ ಮಸೀದಿಯೊಂದು ವಿವಾದದ ಕೇಂದ್ರವಾಗಿದೆ. ಮೊಘಲ್ ದೊರೆಗಳು ಶಿವ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಿದ್ದಾರೆ ಎಂದು ಹಿಂದೂ ಪರ ಅರ್ಜಿದಾರರು ಕೋರ್ಟ್ ಮೊರೆ ಹೋಗಿದ್ದಾರೆ. ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಅಮಿತ್ ಕುಮಾರ್ ಅವರು ಈ ಕುರಿತು ವಿಚಾರಣೆ ನಡೆಸಿದ್ದಾರೆ. ಈ ಅರ್ಜಿಯ ವಿಚಾರಣೆ ಡಿ.17ಕ್ಕೆ ಮುಂದೂಡಿಕೆಯಾಗಿದೆ. 

    ಸಂಬಲ್‌ನ  ಶಾಹಿ ಜಾಮಾ ಮಸೀದಿ: ಸಂಬಲ್‌ನ  ಶಾಹಿ ಜಾಮಾ ಮಸೀದಿ ಹಿಂದೆ ದೇವಾಲಯವಾಗಿತ್ತು. ಹರಿಹರನ ದೇಗುಲದಲ್ಲಿ ಈಗ ನಮಾಜ್‌ ನಡೆಯುತ್ತಿದೆ. 15ನೇ ಶತಮಾನದವರೆಗೂ ಮಂದಿರವಾಗಿದ್ದ ಜಾಗವು ಮಸೀದಿಯಾಗಿ ಪರಿವರ್ತನೆ ಆಗಿದೆ ಎಂದು ಉತ್ತರ ಪ್ರದೇಶ ಕೋರ್ಟ್‌ಗೆ ಮನವಿ ಸಲ್ಲಿಕೆಯಾಗಿದೆ. ಮಸೀದಿಯಲ್ಲಿ ಫೋಟೊ, ವಿಡಿಯೋ ಒಳಗೊಂಡ ಸರ್ವೇ ನಡೆಸಿ ವರದಿ ಸಲ್ಲಿಸುವಂತೆ ಸಂಭಲ್‌ನ ಸಿವಿಲ್‌ ಕೋರ್ಟ್‌ ಹೇಳಿತ್ತು. ಆದರೆ ಸಮೀಕ್ಷೆಗೆ ತೆರಳಿದ್ದ ವೇಳೆ ಕಲ್ಲು ತೂರಾಟ ನಡೆದು ಘರ್ಷಣೆ ಉಂಟಾಗಿತ್ತು. ಈಗ ಮಧ್ಯ ಪ್ರವೇಶಿಸಿರುವ ಸುಪ್ರೀಂ ಕೋರ್ಟ್‌, ಸಿವಿಲ್‌ ಕೋರ್ಟ್ ವಿಚಾರಣೆಯನ್ನು ಸ್ಥಗಿತಗೊಳಿಸುವಂತೆ ಆದೇಶಿಸಿದೆ. ಈ ಘರ್ಷಣೆಯಲ್ಲಿ ಕನಿಷ್ಠ ನಾಲ್ವರು ಸಾವಿಗೀಡಾಗಿದ್ದರು. 

    ಸಂಭಲ್‌ನಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಲು ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿದೆ. ಹಾಗೇ ಮುಂದಿನ ವಿಚಾರಣೆಯನ್ನು 2025ರ ಜ.6ಕ್ಕೆ ನಿಗದಿ ಪಡಿಸಿದೆ. ಈಗಾಗಲೇ ಆಗಿರುವ ಸರ್ವೇ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಕೋರ್ಟ್‌ ಸೂಚಿಸಿದೆ.

    ಸಂಭಲ್‌ನಲ್ಲಿ ಮೊಘಲ್‌ ಸಾಮ್ರಾಟ ಬಾಬರ್‌ 1526ರಲ್ಲಿ ಮಸೀದಿಯನ್ನು ಕಟ್ಟಿಸಿದ ಎಂದು ಹಿಂದೂ ಪರ ವಕೀಲರು ವಾದಿಸಿದ್ದಾರೆ. ಹರಿಹರ ದೇವಾಲಯವನ್ನು ಕೆಡವಿ ಅದೇ ಜಾಗದಲ್ಲಿ ಮಸೀದಿ ನಿರ್ಮಿಸಿರುವುದಾಗಿ ಆರೋಪಿಸಲಾಗಿದೆ.

    ಜ್ಞಾನವಾಪಿ ಮಸೀದಿ: ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜ್ಞಾನವಾಪಿ ಮಸೀದಿ ಇದೆ. ಇಂದೋರ್‌ನ ರಾಣಿ ಅಹಲ್ಯಾಬಾಯಿ ಹೋಳ್ಕರ್ 1780ರಲ್ಲಿ ನಿರ್ಮಿಸಿದ ಕಾಶಿ ವಿಶ್ವನಾಥ ದೇವಾಲಯದಿಂದ ಇದು ಸ್ವಲ್ಪ ದೂರದಲ್ಲಿದೆ. ಈ ಮಸೀದಿ ವಿಶ್ವೇಶ್ವರ ದೇವಾಲಯದ ಅವಶೇಷಗಳ ಮೇಲೆ ನಿಂತಿದೆ ಎನ್ನಲಾಗಿದೆ. 12ನೇ ಶತಮಾನದಲ್ಲಿ ಮೊಘಲ್ ದೊರೆ ಔರಂಗಜೇಬ್ ಇದನ್ನು ನಾಶ ಮಾಡಿದ ಎನ್ನಲಾಗಿದೆ. ಈ ವಿವಾದ ಸಂಬಂಧ ಸರ್ವೆ ನಡೆದಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. 

    ಭೋಜ ಶಾಲಾ-ಕಮಲ್‌ ಮೌಲಾ: ಮಧ್ಯಪ್ರದೇಶದ ಧಾರ್‌ ಜಿಲ್ಲೆಯಲ್ಲಿ ಈ ಸ್ಥಳವಿದೆ. 1034ರಲ್ಲಿ ಮಧ್ಯಪ್ರದೇಶದ ಧಾರ್‌ನಲ್ಲಿ ವಾಗ್ದೇವಿ ದೇಗುಲ ನಿರ್ಮಾಣ ಮಾಡಲಾಗಿತ್ತು. ಅಲ್ಲಾವುದ್ದೀನ್‌ ಖಿಲ್ಜಿ 13ನೇ ಶತಮಾನದಲ್ಲಿ ಮಸೀದಿ ನಿರ್ಮಿಸಿದ್ದ ಎಂಬುದು ಹಿಂದೂಗಳ ವಾದ. ಇನ್ನೂ ದೇಗುಲ ನಾಶ ಆಗಿರಲಿಲ್ಲ. 1291ರಲ್ಲಿ ಮೌಲಾ ಕಮಾಲುದ್ದೀನ್‌ ಚಿಸ್ತಿ ಎಂದ ಸೂಫಿ ಸಂತ ಅಲ್ಲಿಗೆ ಬಂದಿದ್ದ. ಆತನ ಕಾಲಾನಂತರ ಮಸೀದಿ ಜತೆಗೆ ಸಮಾಧಿ ನಿರ್ಮಿಸಲಾಗಿದೆ ಎಂಬುದು ಮುಸ್ಲಿಮರವಾದವಾಗಿದೆ. 

    ಬಿಜಾ ಮಂಡಲ್‌ ಮಸೀದಿ: ಮಧ್ಯಪ್ರದೇಶದ ವಿದಿಶಾದಲ್ಲಿರುವ ಧಾರ್ಮಿಕ ಸ್ಥಳ ಇದಾಗಿದೆ. ಇಲ್ಲಿರುವುದು ವಿಜಯ ಸೂರ್ಯ ಮಂದಿರವಾಗಿದೆ. 11ನೇ ಶತಮಾನದಲ್ಲಿ ಚಾಲುಕ್ಯ ರಾಜ ಮನೆತನಕ್ಕೆ ಸೇರಿದ ವಾಚಸ್ಪತಿ ಇಲ್ಲಿ ಭವ್ಯವಾದ ಸೂರ್ಯ ಮಂದಿರವನ್ನು ನಿರ್ಮಾಣ ಮಾಡಿದ್ದ  ಇದು ಹಿಂದೂ ಸಮುದಾಯಕ್ಕೆ ಸೇರಿದ ಸ್ಥಳ ಎಂಬುದು ಹಿಂದೂಗಳವಾದ. ಇನ್ನೂ 1951ರ ಗೆಜೆಟ್‌ ಪ್ರಕಾರ ಅದು ಸಮುದಾಯಕ್ಕೆ ಸೇರಿದ್ದು. ಅದು ದೇಗುಲಕ್ಕೆ ಸೇರಿದ ಜಾಗ ಅಲ್ಲ. ಅಲ್ಲಿ ಸರ್ಕಾರದ ವತಿಯಿಂದಲೇ ಮಸೀದಿ ನಿರ್ಮಿಸಲಾಗಿದೆ ಎಂಬುದು ಮುಸ್ಲಿಮರ ವಾದವಾಗಿದೆ. 

    ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ: ಉತ್ತರಪ್ರದೇಶದ ಮಥುರಾದಲ್ಲಿರುವ ಸ್ಥಳ ಇದಾಗಿದೆ. ಕೃಷ್ಣನ ಜನ್ಮಸ್ಥಳವಾಗಿರುವ ಮಥುರಾದಲ್ಲಿ ದೇಗುಲ ನಿರ್ಮಾಣವಾಗಿತ್ತು. ಅದನ್ನು ಕೆಡವಿ ಹಾಕಿ ಒಟ್ಟು 13.37 ಎಕ್ರೆ ಪ್ರದೇಶದಲ್ಲಿ ಕಾಲಾನಂತರದಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದೆ ಎಂಬುದು ಹಿಂದೂಗಳ ವಾದವಾಗಿದೆ. ಮಸೀದಿ ಎನ್ನುವುದು ವಿವಾದಿತ ಸ್ಥಳದಲ್ಲಿ ನಿರ್ಮಾಣವಾಗಿಲ್ಲ. 1968ರ ಒಪ್ಪಂದದ ಪ್ರಕಾರ ಜಮೀನಿನ ಆಂಶಿಕ ಭಾಗವನ್ನು ಮಸೀದಿ ಆಡಳಿತ ಮಂಡಳಿಗೆ ನೀಡಿತ್ತು ಎಂಬುದು ಮಸ್ಲಿಮರ ವಾದವಾಗಿದೆ. 

    ತಾಜ್‌ಮಹಲ್‌: ಆಗ್ರಾದಲ್ಲಿರುವುದು ತಾಜ್‌ ಮಹಲ್‌ ಅಲ್ಲ, ತೇಜೋಆಲಯ ಎಂಬುದು ಕೆಲವರ ವಾದ. ಈ ಸಂಬಂಧ ಅಲಹಾಬಾದ್‌ ಹೈಕೋರ್ಟ್‌ಗೆ ಬಿಜೆಪಿ ನಾಯಕ ರಜನೀಶ್‌ ಸಿಂಗ್‌ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇವರು ತಮ್ಮ ಅರ್ಜಿಯಲ್ಲಿ ತಾಜ್‌ಮಹಲ್‌ ಬಗ್ಗೆ ಭಾರತೀಯ ಪುರಾತತ್ವ ಇಲಾಖೆಯಿಂದ ಸರ್ವೇ ನಡೆಸಬೇಕು. ಮುಚ್ಚಿರುವ 22 ಕೋಣೆಗಳ ಒಳಗೆ ಏನಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಆದರೆ ಇದನ್ನು ತಿರಸ್ಕರಿಸಿರುವ ಕೋರ್ಟ್‌, ಈ ಕುರಿತಂತೆ ಇತಿಹಾಸಕಾರರು ನಿರ್ಧಾರ ಕೈಗೊಳ್ಳಲಿ ಎಂದು ಹೇಳಿದೆ.

    ಕುತುಬ್‌ ಮಿನಾರ್‌: 2003ರಲ್ಲಿ ಭಾರತೀಯ ಪುರಾತತ್ವ ಇಲಾಖೆ, ಕುತುಬ್‌ ಮಿನಾರ್‌ನಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಬೇರೆ ಬೇರೆ ದಿನಗಳಂದು ಪೂಜೆ ಮಾಡಬಹುದು ಎಂದು ಆದೇಶ ನೀಡಿದೆ. ಅಂದರೆ ಹಿಂದೂಗಳ ಪ್ರಕಾರ, ಕುತುಬ್‌ ಮಿನಾರ್‌ ಅಂದರೆ ಸರಸ್ವತಿ ದೇಗುಲವಾಗಿದ್ದು, ಇದನ್ನು ಬೋಜಶಾಲೆ ಎಂದು ಕರೆಯಲಾಗುತ್ತದೆ. ಆದರೆ ಮುಸ್ಲಿಮರು ಇದು ಮಸೀದಿಯೇ ಎಂದು ಹೇಳುತ್ತಿದ್ದಾರೆ ಎಂದು ವಾದಿಸುತ್ತಿವೆ. 2021ರ ನವೆಂಬರ್‌ನಲ್ಲಿ ಈ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸ್ಥಳೀಯ ಕೋರ್ಟ್‌ ತಿರಸ್ಕರಿಸಿತ್ತು.

    ಜಾಮೀಯಾ ಮಸೀದಿ: ಕೇವಲ ಉತ್ತರ ಭಾರತದಲ್ಲಷ್ಟೇ ಅಲ್ಲ, ದಕ್ಷಿಣ ಭಾರತದಲ್ಲಿಯೂ ಕೆಲವು ವಿವಾದಗಳಿವೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಜಾಮೀಯಾ ಮಸೀದಿ ಹಿಂದೆ ಹನುಮಾನ್‌ ದೇಗುಲವಾಗಿತ್ತು. ಹೀಗಾಗಿ ಭಾರತೀಯ ಪುರಾತತ್ವ ಇಲಾಖೆ ಸ್ಥಳದ ಪರಿಶೀಲನೆ ನಡೆಸಬೇಕು ಎಂದು ಹಿಂದೂ ಸಂಘಟನೆಗಳು ಆಗ್ರಹಿಸಿದ್ದವು. ಅಲ್ಲದೇ, ಟಿಪ್ಪು ಸುಲ್ತಾನ್‌ ಕಾಲದಲ್ಲಿ ಇಲ್ಲಿದ್ದ ಹನುಮಾನ್‌ ದೇಗುಲವನ್ನು ಕೆಡವಿ, ಇಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಹೇಳಿಕೊಂಡಿದ್ದವು. 

    ಮಳಲಿ ಮಸೀದಿ ಕಟ್ಟಡ: ಮಂಗಳೂರು ತಾಲೂಕಿನ ಗಂಜೀಮಠ ಗ್ರಾ.ಪಂ. ವ್ಯಾಪ್ತಿಯ ಮಳಲಿ ಪೇಟೆಯ ಮಸೀದಿ ಸ್ಥಳದಲ್ಲಿ ಪ್ರಾಚೀನ ದೇವಸ್ಥಾನದ ಮಾದರಿಯನ್ನು ಹೋಲುವ ರಚನೆ ಕಾಣಿಸಿದೆ. ಮಸೀದಿಯನ್ನು ನವೀಕರಿಸುವ ಉದ್ದೇಶಕ್ಕಾಗಿ ಕೆಲಸ ನಡೆಯುತ್ತಿದ್ದ ವೇಳೆ ದೇಗುಲ ಮಾದರಿಯ ರಚನೆ ಕಾಣಿಸಿತ್ತು. ಅನಂತರ ವಿವಿಧ ಸಂಘಟನೆಗಳು, ಪೊಲೀಸರು ಭೇಟಿ ನೀಡಿದ್ದು, ತತ್‌ಕ್ಷಣದಿಂದಲೇ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿತ್ತು. 

    ಕೆಲವರು ಇದೊಂದು ದೇಗುಲದ ರಚನೆ ಎಂದಿದ್ದಾರೆ. ಇನ್ನು ಕೆಲವರು ಇದೊಂದು ಬಸದಿಯ ರಚನೆಯಂತೆ ಕಾಣುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲಿ ಸದ್ಯ ಯಾವುದೇ ಕಾಮಗಾರಿ ನಡೆಸದಂತೆ  ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಈ ನಡುವೆ ಕೋರ್ಟ್‌ಗೆ ಕೂಡ ದೂರು ನೀಡಲಾಗಿದ್ದು, ಅಲ್ಲಿ ತಡೆ ಯಾಜ್ಞೆ ನೀಡಲಾಗಿತ್ತು. ಇದು ವಿಚಾರಣೆ ಹಂತದಲ್ಲಿದೆ.

    ‘1991ರ ಪೂಜಾ ಸ್ಥಳಗಳ ಕಾಯ್ದೆ

    ‘1991ರ ಪೂಜಾ ಸ್ಥಳಗಳ ಕಾಯ್ದೆ’ ಪ್ರಕಾರ ದೇಶದ ಯಾವುದೇ ಧಾರ್ಮಿಕ ಸ್ಥಳದಲ್ಲಿ ಸದ್ಯ ಚಾಲ್ತಿಯಲ್ಲಿ ಇರುವ ಯಾವುದೇ ಧರ್ಮದ ಆಚರಣೆಯ ‘ಧಾರ್ಮಿಕ ಸ್ವರೂಪ’ವನ್ನು ಬದಲಿಸುವಂತಿಲ್ಲ. ದೇಶದ ಸ್ವಾತಂತ್ರ್ಯ ಬಂದ ದಿನ, ಅಂದರೆ 1947ರ ಆಗಸ್ಟ್‌ 15ರ ನಂತರ ಯಾವ ಧಾರ್ಮಿಕ ಸ್ಥಳದಲ್ಲಿ ಯಾವ ಧರ್ಮದ ಆಚರಣೆ ಇತ್ತೋ, ಅದೇ ಆಚರಣೆ ಮುಂದೆಯೂ ನಿರಂತರವಾಗಿ ಮುಂದುವರೆಯಬೇಕು. ಈ ರೀತಿ ನಿಯಮ ರೂಪಿಸಿ ಕೇಂದ್ರ ಸರ್ಕಾರವು ಜುಲೈ 11, 1991ರಂದು ಕಾಯ್ದೆ ರೂಪಿಸಿ ಜಾರಿಗೆ ತಂದಿತ್ತು.

    ಈ ಕಾಯ್ದೆಯ 4ನೇ ವಿಧಿಯ ಅನ್ವಯ, ಆಗಸ್ಟ್‌ 15, 1947ಕ್ಕೆ ಮುನ್ನ ಯಾವುದೇ ಧಾರ್ಮಿಕ ಸ್ಥಳದ ‘ಧಾರ್ಮಿಕ ಸ್ವರೂಪ’ ಬದಲಾಯಿಸಿ ಎಂದು ದೇಶದ ಯಾವುದೇ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೆ, ಅದು ವಿಚಾರಣೆಯ ಯಾವ ಹಂತದಲ್ಲಿ ಇದ್ದರೂ ರದ್ದುಪಡಿಸಬೇಕು. ಹೊಸ ಅರ್ಜಿಗಳನ್ನಂತೂ ಸ್ವೀಕರಿಸುವಂತೆಯೇ ಇಲ್ಲ.

    ‘1991ರ ಪೂಜಾ ಸ್ಥಳಗಳ ಕಾಯ್ದೆ’ಯ 3ನೇ ವಿಧಿಯ ಪ್ರಕಾರ, ಯಾವುದೇ ಧಾರ್ಮಿಕ ಸ್ಥಳದ ಯಾವುದೇ ಧಾರ್ಮಿಕ ವಿಧಿ ವಿಧಾನವನ್ನೂ ಬದಲಿಸುವಂತಿಲ್ಲ. ಪೂಜಾ ವಿಧಿ ವಿಧಾನವನ್ನು ಮಾರ್ಪಡಿಸುವಂತಿಲ್ಲ. ಅದೇ ಧರ್ಮದ ಬೇರೆ ಪಂಗಡದ ವಿಧಿ ವಿಧಾನವನ್ನೂ ಆಚರಿಸುವಂತಿಲ್ಲ.

    ಆದರೆ, ಯಾವುದೇ ಧಾರ್ಮಿಕ ಸ್ಥಳವು ಪ್ರಾಚೀನವಾಗಿದ್ದರೆ, ಐತಿಹಾಸಿಕ ಸ್ಮಾರಕವಾಗಿದ್ದರೆ, ಪ್ರಾಚ್ಯವಸ್ತು, ಪುರಾತತ್ವ ಇಲಾಖಾ ವ್ಯಾಪ್ತಿಗೆ ಒಳಪಡುವ ಪ್ರದೇಶವಾದರೆ, ಅದು ಈ ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ. 

    1991ರ ಪೂಜಾ ಸ್ಥಳಗಳ ಕಾಯ್ದೆ’ ಜಾರಿಗೆ ತಂದಿದ್ದು ಏಕೆ..?

    1991ರಲ್ಲಿ ಅಂದಿನ ಪ್ರಧಾನಿ ಪಿ. ವಿ. ನರಸಿಂಹ ರಾವ್ ಸಂಪುಟದ ಗೃಹ ಸಚಿವ ಶಂಕರ್‌ ರಾವ್ ಭವರ್‌ರಾವ್ ಚೌಹಾಣ್ ಅವರು ಈ ಕಾಯ್ದೆಯಲ್ಲಿ ಸಂಸತ್‌ನಲ್ಲಿ ಮಂಡಿಸಿ, ಅಂಗೀಕಾರ ಪಡೆದ ಬಳಿಕ ಕಾನೂನು ಜಾರಿಯಾಗಿತ್ತು. ಬಿಜೆಪಿ ನಾಯಕ ಎಲ್. ಕೆ. ಅಡ್ವಾಣಿ ಅವರು ಕೈಗೊಂಡಿದ್ದ ರಾಮಜನ್ಮಭೂಮಿ ರಥಯಾತ್ರೆಗೆ ಆ ದಿನಗಳಲ್ಲಿ ಭಾರೀ ಜನ ಬೆಂಬಲ ವ್ಯಕ್ತವಾಗಿತ್ತು. ಈ ವೇಳೆ, ಕೋಮು ಸೌಹಾರ್ದತೆ ಕಾಪಾಡುವ ಸಲುವಾಗಿ ಕಾಯ್ದೆ ಜಾರಿಗೆ ತಂದಿದ್ದಾಗಿ ಪಿ. ವಿ. ನರಸಿಂಹ ರಾವ್ ಸರ್ಕಾರ ಹೇಳಿಕೊಂಡಿತ್ತು. 

    ಪೂಜಾ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ 2021ರಲ್ಲಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಕಾಯ್ದೆಯ ಸಂಬಂಧ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. 

  • ಹಿಂಸಾಚಾರ ಪೀಡಿತ ಸಂಭಾಲ್‌ನತ್ತ ಹೊರಟ ರಾಹುಲ್‌, ಪ್ರಿಯಾಂಕಾಗೆ ಪೊಲೀಸರು ತಡೆ

    ಹಿಂಸಾಚಾರ ಪೀಡಿತ ಸಂಭಾಲ್‌ನತ್ತ ಹೊರಟ ರಾಹುಲ್‌, ಪ್ರಿಯಾಂಕಾಗೆ ಪೊಲೀಸರು ತಡೆ

    – ಇದು ಹೊಸ ಹಿಂದೂಸ್ತಾನ ಎಂದ ರಾಹುಲ್‌ ಗಾಂಧಿ

    ನವದೆಹಲಿ: ಶಾಹಿ ಜಾಮಾ ಮಸೀದಿ ಸಮೀಕ್ಷೆ ವಿಚಾರವಾಗಿ ಹಿಂಸಾಚಾರಕ್ಕೆ ಸಾಕ್ಷಿಯಾಗಿದ್ದ ಉತ್ತರ ಪ್ರದೇಶದ ಸಂಭಾಲ್‌ಗೆ ಭೇಟಿ ನೀಡಲು ತೆರಳುತ್ತಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi), ನೂತನ ಸಂಸದೆ ಪ್ರಿಯಾಂಕಾ ಗಾಂಧಿ (Priyanka Gandhi) ಅವರನ್ನ ಮಾರ್ಗಮಧ್ಯೆಯೇ ಪೊಲೀಸರು ತಡೆದಿದ್ದಾರೆ.

    ಸ್ಥಳೀಯರಲ್ಲದವರು ಸಂಭಾಲ್‌ಗೆ ಭೇಟಿ ನೀಡುವಂತಿಲ್ಲ ಎಂಬ ನಿರ್ಬಂಧದ ಹಿನ್ನೆಲೆಯಲ್ಲಿ ರಾಹುಲ್, ಪ್ರಿಯಾಂಕಾರನ್ನು ಘಾಜಿಪುರ ಗಡಿಯಲ್ಲೇ ಉತ್ತರ ಪ್ರದೇಶ ಪೊಲೀಸರು ತಡೆಹಿಡಿದಿದ್ದಾರೆ. ಇದಕ್ಕೆ ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ರು. ಲೋಕಸಭೆ ವಿಪಕ್ಷ ನಾಯಕನಾಗಿ ಸಂಭಾಲ್‌ಗೆ ಭೇಟಿ ನೀಡೋದು ನನ್ನ ಹಕ್ಕು, ಪೊಲೀಸರ ಜೊತೆ ನಾನೊಬ್ಬನೇ ತೆರಳಲು ಸಿದ್ಧ ಇದ್ದೇನೆ. ಆದ್ರೂ, ನನಗೆ ಅವಕಾಶ ನಿರಾಕರಿಸಲಾಗ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

    ಇದು ವಿಪಕ್ಷ ನಾಯಕನ ಸಂವಿಧಾನಿಕ ಹಕ್ಕುಗಳಿಗೆ ವಿರುದ್ಧವಾಗಿದೆ. ಬಿಜೆಪಿ (BJP) ಸತ್ಯ ಮತ್ತು ಸೋದರತ್ವವನ್ನು ಹತ್ತಿಕ್ಕಲು ಪೊಲೀಸರನ್ನು ಬಳಸುತ್ತಿದೆ. ಇದು ಹೊಸ ಹಿಂದೂಸ್ತಾನ, ಅಂಬೇಡ್ಕರರ ಸಂವಿಧಾನ ಮುಗಿಸುವ ಪ್ರಯತ್ನ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ರು. ಮುಂಜಾಗ್ರತಾ ಕ್ರಮವಾಗಿ ಘಾಜೀಪುರ ಗಡಿಯಲ್ಲಿ ಭಾರೀ ಭದ್ರತೆ ಕೈಗೊಳ್ಳಲಾಗಿತ್ತು.

    ಟ್ರಾಫಿಕ್‌ ಜಾಮ್‌:
    ಇನ್ನೂ ಡಿಸೆಂಬರ್‌ 10ರ ವರೆಗೆ ಸಂಭಾಲ್‌ಗೆ ಹೊರಗಿನವರ ಪ್ರವೇಶವನ್ನು ನಿಷೇಧಿಸಲಾಗಿದೆ. ಹೀಗಾಗಿ ದೆಹಲಿ-ಸಂಭಾಲ್‌ ಮಾರ್ಗದ‌ ಹಲವು ಸ್ಥಳಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಬ್ಯಾರಿಕೆಡ್‌ಗಳನ್ನು ಅಳವಡಿಸಿ, ವಾಹನ ತಪಾಸಣೆ ನಡೆಸಲಾಗುತ್ತಿತ್ತು, ಇದರಿಂದ ಹಲವು ಸ್ಥಳಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

  • ಡಿ.10ರ ವರೆಗೆ ಸಂಭಾಲ್‌ಗೆ ಹೊರಗಿನವರ ಪ್ರವೇಶ ನಿಷೇಧ; ಎಸ್‌ಪಿ ಮುಖಂಡರಿಗೆ ಗೃಹ ಬಂಧನ

    ಡಿ.10ರ ವರೆಗೆ ಸಂಭಾಲ್‌ಗೆ ಹೊರಗಿನವರ ಪ್ರವೇಶ ನಿಷೇಧ; ಎಸ್‌ಪಿ ಮುಖಂಡರಿಗೆ ಗೃಹ ಬಂಧನ

    ಲಕ್ನೋ: ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಂಭಾಲ್ (Sambhal) ಜಿಲ್ಲಾಡಳಿತ ಡಿಸೆಂಬರ್ 10ರ ವರೆಗೆ ಹೊರಗಿನವರ ಪ್ರವೇಶವನ್ನು ನಿಷೇಧಿಸಿ ಶನಿವಾರ ಆದೇಶ ಪ್ರಕಟಿಸಿದೆ. ‌

    ಡಿ.10ರ ವರೆಗೆ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಹೊರಗಿನವರು, ಯಾವುದೇ ಸಾಮಾಜಿಕ ಸಂಘಟನೆ ಅಥವಾ ಯಾವುದೇ ಸಾರ್ವಜನಿಕ ಪ್ರತಿನಿಧಿಗಳು ಜಿಲ್ಲೆಯ ಗಡಿ ಪ್ರವೇಶಿಸುವಂತಿಲ್ಲ ಎಂದು ಸಂಭಾಲ್ ಜಿಲ್ಲಾಧಿಕಾರಿ ರಾಜೇಂದ್ರ ಪೆನ್ಸಿಯಾ ಪ್ರಕಟಿಸಿದ್ದಾರೆ.

    ಶಾಹಿ ಜಾಮಾ ಮಸೀದಿ (Shahi Jama Masjid) ಸಂಕೀರ್ಣದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಮಾಹಿತಿ ಸಂಗ್ರಹಿಸಲು ಸಮಾಜವಾದಿ ಪಕ್ಷದ 15 ಸದಸ್ಯರ ನಿಯೋಗ ಸಂಭಾಲ್‌ಗೆ ಭೇಟಿ ನೀಡುಕ್ಕೂ ಮುನ್ನ ಈ ಜಿಲ್ಲಾಡಳಿತ ಈ ಕ್ರಮ ತೆಗೆದುಕೊಂಡಿದೆ. ಈ ಕುರಿತು ಉತ್ತರ ಪ್ರದೇಶ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮಾತಾ ಪ್ರಸಾದ್ ಪಾಂಡೆ ಮಾತನಾಡುತ್ತಾ, ಗೃಹ ಕಾರ್ಯದರ್ಶಿ ಸಂಜಯ್ ಪ್ರಸಾದ್ ಅವರು ತಮಗೆ ಕರೆ ಮಾಡಿ ಸಂಭಾಲ್‌ಗೆ ಭೇಟಿ ನೀಡದಂತೆ ವಿನಂತಿಸಿದ್ದಾರೆ. ಡಿಎಂ ಸಂಭಾಲ್ ಕೂಡ ನನಗೆ ಕರೆ ಮಾಡಿ ಹೊರಗಿನವರ ಪ್ರವೇಶ ನಿಷೇಧವನ್ನು ಡಿಸೆಂಬರ್ 10 ರವರೆಗೆ ವಿಸ್ತರಿಸಲಾಗಿದೆ ಎಂದು ಹೇಳಿದ್ದರು. ಹಾಗಾಗಿ ನಾನು ಈಗ ಪಕ್ಷದ ಕಚೇರಿಗೆ ಭೇಟಿ ನೀಡಿ ನಮ್ಮ ಮುಂದಿನ ಕ್ರಮವನ್ನು ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಹೇಳಿದರು.

    ಸಂಭಾಲ್‌ಗೆ ನಾವು ಭೇಟಿ ನೀಡಿದರೆ, ಹಲವಾರು ತಪ್ಪುಗಳು ಬಹಿರಂಗವಾಗುತ್ತವೆ. ಆದ್ದರಿಂದ ಯುಪಿ ಸರ್ಕಾರ ಸಂಭಾಲ್‌ನಲ್ಲಿ ತನ್ನ ತಪ್ಪುಗಳನ್ನು ಮರೆಮಾಚಲು ನಿರ್ಧರಿಸಿದೆ ಎಂದು ತಿಳಿಸಿದರು.

    ಶುಕ್ರವಾರ ರಾತ್ರಿಯಿಂದಲೇ ಪಾಂಡೆ ನಿವಾಸದ ಹೊರಗೆ ಬಿಗಿ ಭದ್ರತೆ ನಿಯೋಜಿಸಲಾಗಿತ್ತು. ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಸೂಚನೆ ಮೇರೆಗೆ ಪಕ್ಷದ ನಿಯೋಗ ಶನಿವಾರ ಸಂಭಾಲ್‌ಗೆ ಹೋಗಲಿದೆ ಎಂದು ಎಸ್‌ಪಿ ರಾಜ್ಯಾಧ್ಯಕ್ಷ ಶ್ಯಾಮ್ ಲಾಲ್ ಪಾಲ್ ತಿಳಿಸಿದ್ದರು. ಎಸ್ಪಿ ನಿಯೋಗವು ಭೇಟಿ ನೀಡಿ, ಅಲ್ಲಿನ ಹಿಂಸಾಚಾರದ ಕುರಿತು ವರದಿ ಮಾಡಿ, ಪಕ್ಷದ ಮುಖ್ಯಸ್ಥರಿಗೆ ಸಲ್ಲಿಸಲಿದೆ ಎಂದು ಹೇಳಿದ್ದರು.

    ಒಂದು ದಿನದ ಹಿಂದೆಯಷ್ಟೇ ಉತ್ತರ ಪ್ರದೇಶದ ಸಂಬಾಲ್‌ನಲ್ಲಿರುವ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್‌ಗೆ ತೆರಳುವಂತೆ ಜಾಮಾ ಮಸೀದಿಯ (Jama Masjid) ಶಾಹಿ ಈದ್ಗಾ ಸಮಿತಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಅಲ್ಲದೇ ಈದ್ಗಾ ಸಮಿತಿಯು ಹೈಕೋರ್ಟ್‌ಗೆ ತೆರಳುವವರೆಗೆ ಮಸೀದಿ ಸರ್ವೆ (Sambhal Mosque Survey) ಪ್ರಕರಣವನ್ನು ಮುಂದುವರಿಸದಂತೆ ವಿಚಾರಣಾ ನ್ಯಾಯಾಲಯಕ್ಕೆ ಶುಕ್ರವಾರ ಹೇಳಿತ್ತು.

  • ಸಂಭಾಲ್‌ ಹಿಂಸಾಚಾರ | ಎಸ್‌ಪಿ ಸಂಸದ ಸೇರಿ 400 ಮಂದಿ ವಿರುದ್ಧ ಎಫ್‌ಐಆರ್

    ಸಂಭಾಲ್‌ ಹಿಂಸಾಚಾರ | ಎಸ್‌ಪಿ ಸಂಸದ ಸೇರಿ 400 ಮಂದಿ ವಿರುದ್ಧ ಎಫ್‌ಐಆರ್

    ಲಕ್ನೋ: ಉತ್ತರ ಪ್ರದೇಶದ (Uttar Pradesh) ಸಂಭಾಲ್‌ನಲ್ಲಿ (Sambhal) ಮೊಘಲರ ಕಾಲದ ಶಾಹಿ ಜಾಮಾ ಮಸೀದಿ(Shahi Jama Masjid) ಸಮೀಕ್ಷೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಸಂಸದ ಸೇರಿ 400 ಜನರ ವಿರುದ್ಧ 7 ಪ್ರಕರಣಗಳನ್ನು ದಾಖಲಿಸಲಾಗಿದೆ.

    ಈ ಸಂಬಂಧ ಕನಿಷ್ಠ 25 ಜನರನ್ನು ಬಂಧಿಸಲಾಗಿದೆ. ಹಿಂಸಾಚಾರದಲ್ಲಿ ನಾಲ್ವರು ಸಾವನ್ನಪ್ಪಿದ್ದರು. ಈ ಸಂಬಂಧ ಸಮಾಜವಾದಿ ಪಕ್ಷದ ಸಂಸದ ಜಿಯಾವುರ್ ರೆಹಮಾನ್ ಬಾರ್ಕ್ ಮತ್ತು ಅವರ ಪಕ್ಷದ ಇಕ್ಬಾಲ್ ಮಹಮೂದ್ ಅವರ ಪುತ್ರ ನವಾಬ್ ಸುಹೇಲ್ ಇಕ್ಬಾಲ್ ಅವರ ವಿರುದ್ಧ ಆರೋಪ ಹೊರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮೊಘಲರ ಕಾಲದ ಶಾಹಿ ಜಾಮಾ ಮಸೀದಿಯಲ್ಲಿ ಭಾನುವಾರ ಬೆಳಗ್ಗೆ ನ್ಯಾಯಾಲಯದ ಆದೇಶದ ಮೇರೆಗೆ ಸಮೀಕ್ಷೆಗೆ ಅಧಿಕಾರಿಗಳ ತಂಡ ತೆರಳಿತ್ತು. ಈ ವೇಳೆ ಸ್ಥಳೀಯರು ಮತ್ತು ಪೊಲೀಸರ ನಡುವೆ ಘಷಣೆ ನಡೆದಿತ್ತು. ಈ ವೇಳೆ ಪ್ರತಿಭಟನಾಕಾರರು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಅಲ್ಲದೇ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿ ಮತ್ತು ಲಾಠಿಚಾರ್ಜ್‌ ಮಾಡಿದ್ದರು.

    ಈ ಬಗ್ಗೆ ಪ್ರತಿಕ್ರಿಯಿಸರುವ ಪೊಲೀಸ್ ವರಿಷ್ಠಾಧಿಕಾರಿ ಕ್ರಿಶನ್ ಕುಮಾರ್, ಸುಮಾರು 20 ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ. ತಲೆಗೆ ಪೆಟ್ಟಾಗಿರುವ ಕಾನ್‌ಸ್ಟೆಬಲ್ ಸ್ಥಿತಿ ಚಿಂತಾಜನಕವಾಗಿದೆ. ಈ ಹಿಂದೆ ಬಾರ್ಕ್ ನೀಡಿದ್ದ ಹೇಳಿಕೆಯಿಂದಾಗಿ ಪರಿಸ್ಥಿತಿ ಹದಗೆಟ್ಟಿದೆ ಎಂದು ಹೇಳಿದ್ದಾರೆ.

    ಪೊಲೀಸರು ಡ್ರೋನ್ ದೃಶ್ಯಗಳನ್ನು ಬಳಸಿಕೊಂಡು ಹಿಂಸಾಚಾರ ನಡೆಸಿದವರನ್ನು ಗುರುತಿಸುತ್ತಿದ್ದಾರೆ. ಆರೋಪಿಗಳ ವಿರುದ್ಧ ಕಠಿಣ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್ಎಸ್ಎ) ಅಡಿಯಲ್ಲಿ ಆರೋಪ ಹೊರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.‌

    ಶಾಹಿ ಜಾಮಾ ಮಸೀದಿ ಮೂಲತಃ ಹರಿ ಹರ್ ಮಂದಿರ ಎಂದು ವಕೀಲ ವಿಷ್ಣು ಶಂಕರ್ ಜೈನ್ ಎಂಬವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಮೊಘಲರ ದೊರೆ ಬಾಬರ್ ಮಸೀದಿ ನಿರ್ಮಿಸಲು ದೇವಾಲಯವನ್ನು ಕೆಡವಿದ್ದ ಎಂದು ಉಲ್ಲೇಖಿಸಲಾಗಿದೆ. ಈ ಅರ್ಜಿಯನ್ನು ಪರಿಗಣಿಸಿದ್ದ ನ್ಯಾಯಾಲಯ ವಿಡಿಯೋ ಹಾಗೂ ಫೋಟೋ ತೆಗೆದು ಸಮೀಕ್ಷೆ ನಡೆಸುವಂತೆ ಆದೇಶಿಸಿತ್ತು.

  • ಉತ್ತರ ಪ್ರದೇಶ | ಅಕ್ರಮ ಸಂಬಂಧದ ಶಂಕೆ – ಕತ್ತು ಸೀಳಿ ಪತ್ನಿಯ ಕೊಲೆಗೈದ ಪತಿ

    ಉತ್ತರ ಪ್ರದೇಶ | ಅಕ್ರಮ ಸಂಬಂಧದ ಶಂಕೆ – ಕತ್ತು ಸೀಳಿ ಪತ್ನಿಯ ಕೊಲೆಗೈದ ಪತಿ

    ಲಕ್ನೋ: ಅಕ್ರಮ ಸಂಬಂಧದ ಶಂಕೆಯಿಂದಾಗಿ ಪತಿ ತನ್ನ ಪತ್ನಿಯ ಕತ್ತು ಸೀಳಿ ಕೊಲೆಗೈದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಸಂಭಾಲ್ (Sambhal) ಪ್ರದೇಶದಲ್ಲಿ ಬಳಿ ನಡೆದಿದೆ.

    ಮೃತ ಮಹಿಳೆಯನ್ನು ರಾಖಿ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಸೋನು ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಕಿತ್ತೂರು ವಿಜಯೋತ್ಸವಕ್ಕೆ 200 ವರ್ಷ – ಸಂಸತ್ ಆವರಣದಲ್ಲಿ ರಾಣಿ ಚೆನ್ನಮ್ಮ ಪ್ರತಿಮೆಗೆ ಪುಷ್ಪಾರ್ಚನೆ

    ತನ್ನ ಪತ್ನಿ ಅಕ್ರಮ ಸಂಬಂಧವನ್ನು ಹೊಂದಿದ್ದಾಳೆ ಎಂದು ಆಕೆಯ ಕತ್ತನ್ನು ಚಾಕುವಿನಿಂದ ಸೀಳಿ ಹತ್ಯೆಗೈದಿದ್ದಾನೆ. ಬಳಿಕ ತನ್ನ ಮೂರು ಮಕ್ಕಳೊಂದಿಗೆ ಪೊಲೀಸ್ ಠಾಣೆಗೆ ತೆರಳಿ ಕೊಲೆ ಮಾಡಿರುವುದಾಗಿ ಹೇಳಿ ಶರಣಾಗಿದ್ದಾನೆ.

    ನಾನು ನನ್ನ ಹೆಂಡತಿಯನ್ನು ಕೊಲೆ ಮಾಡಿದ್ದೇನೆ. ನನ್ನನ್ನು ಅರೆಸ್ಟ್ ಮಾಡಿ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ನಂತರ ಹಿರಿಯ ಪೊಲೀಸ್ ಅಧಿಕಾರಿಗಳು ಆತನ ಮನೆಗೆ ತೆರಳಿ ಆಕೆಯ ಶವವನ್ನು ಹೊರತೆಗೆದಿದ್ದಾರೆ. ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು.

    ಪೊಲೀಸರು ಆತನನ್ನು ವಿಚಾರಣೆಗೆ ಒಳಪಡಿಸಿದಾಗ, ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿರುವ ಕುರಿತು ತಿಳಿಸಿದ್ದು, ನಾನು ಆಕೆಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದೇನೆ. ಆದರೆ ಅವಳು ಅದ್ಯಾವುದಕ್ಕೂ ಕಿವಿಗೊಡದೇ ಇದ್ದಾಗ ನಾನು ಅವಳನ್ನು ಕೊಲೆ ಮಾಡಿದೆ ಎಂದು ತಿಳಿಸಿದ್ದಾನೆ.ಇದನ್ನೂ ಓದಿ: ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ಆಶ್ಚರ್ಯವೇನಿಲ್ಲ – ನಿಖಿಲ್ ಕುಮಾರಸ್ವಾಮಿ

     

  • ರಾಹುಲ್‌ ಗಾಂಧಿಗೆ ಕಸದ ಬುಟ್ಟಿಯ ಬಗ್ಗೆ ಸಾಕಷ್ಟು ಅನುಭವವಿದೆ: ಆಚಾರ್ಯ ಪ್ರಮೋದ್‌ ಕೃಷ್ಣಂ ಮತ್ತೆ ವಾಗ್ದಾಳಿ

    ರಾಹುಲ್‌ ಗಾಂಧಿಗೆ ಕಸದ ಬುಟ್ಟಿಯ ಬಗ್ಗೆ ಸಾಕಷ್ಟು ಅನುಭವವಿದೆ: ಆಚಾರ್ಯ ಪ್ರಮೋದ್‌ ಕೃಷ್ಣಂ ಮತ್ತೆ ವಾಗ್ದಾಳಿ

    ಲಕ್ನೋ: ಕಾಂಗ್ರೆಸ್‌ನ ಮಾಜಿ ನಾಯಕ ಆಚಾರ್ಯ ಪ್ರಮೋದ್‌ ಕೃಷ್ಣಂ (Acharya Pramod Krishnam) ಅವರು ರಾಹುಲ್ ಗಾಂದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಕಳೆದ 13-14 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಕಸದ ಬುಟ್ಟಿಗೆ ಎಸೆದಿರುವ ರಾಹುಲ್ ಗಾಂಧಿ ಅವರಿಗೆ ಸಾಕಷ್ಟು ಅನುಭವವಿದೆ ಎಂದು ಕಿಡಿಕಾರಿದ್ದಾರೆ.

    ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ‘ಅಗ್ನಿವೀರ್ ಯೋಜನೆ’ಯನ್ನು ಕಸದ ಬುಟ್ಟಿಗೆ ಎಸೆಯುವುದಾಗಿ ರಾಹುಲ್ ಗಾಂಧಿ ನಿರಂತರವಾಗಿ ಹೇಳುತ್ತಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಆಚಾರ್ಯ ಪ್ರಮೋದ್ ಕೃಷ್ಣಂ ಅವರು, ರಾಹುಲ್ ಗಾಂಧಿ (Rahul Gandhi) ಅವರಿಗೆ ಕಸದ ತೊಟ್ಟಿಗಳಲ್ಲಿ ಸಾಕಷ್ಟು ಅನುಭವವಿದೆ. ಮನಮೋಹನ್ ಜಿಯವರ ಸುಗ್ರೀವಾಜ್ಞೆಯನ್ನು ಹರಿದು ಕಸದ ಬುಟ್ಟಿಗೆ ಎಸೆದಿದ್ದರು. ಅವರು 13-14 ವರ್ಷಗಳಲ್ಲಿ ಇಡೀ ಕಾಂಗ್ರೆಸ್ ಅನ್ನು ಕಸದ ಬುಟ್ಟಿಗೆ ಎಸೆದರು ಎಂದರು.

    ಸೋನಿಯಾ, ರಾಜೀವ್, ಇಂದಿರಾ ಅವರ ಜೊತೆಗಿದ್ದ ಕಾಂಗ್ರೆಸ್‌ನ ದೊಡ್ಡ ನಾಯಕರನ್ನೂ ಕಸದ ಬುಟ್ಟಿಗೆ ಎಸೆಯಲಾಯಿತು. ರಾಹುಲ್ ಗಾಂಧಿ ಅವರೇ ಧೈರ್ಯ ಇದ್ದರೆ ಈ ದೇಶವನ್ನು ಕಸದ ಬುಟ್ಟಿಗೆ ಎಸೆಯಿರಿ. ಅವರೇ ಕಸದ ಒಡೆಯ. ಅವರು ಯಾರನ್ನೂ ಕಸದ ಬುಟ್ಟಿಗೆ ಎಸೆಯಬಹುದು. ಸನಾತನವನ್ನು ಕಸದ ಬುಟ್ಟಿಗೆ ಎಸೆಯಲು ಬಯಸುತ್ತಾರೆ ಎಂದು ರಾಗಾ ವಿರುದ್ಧ ಆಚಾರ್ಯರು ತೀವ್ರ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಗಾ ಒಬ್ಬ ಮಹಾನ್‌ ವ್ಯಕ್ತಿ, ಗಾಂಧೀಜಿ ಕನಸು ನನಸು ಮಾಡ್ತಿದ್ದಾರೆ: ಆಚಾರ್ಯ ಪ್ರಮೋದ್ ಕೃಷ್ಣಂ ಕಿಡಿ

    ಈ ಹಿಂದೆ ವಾಗ್ದಾಳಿ ನಡೆಸಿದ್ದ ಆಚಾರ್ಯರು, ಕಾಂಗ್ರೆಸ್ ತೊಲಗಬೇಕು ಎಂದು ಮಹಾತ್ಮ ಗಾಂಧೀಜಿ ಕನಸು ಕಂಡಿದ್ದರು, ಬಿಜೆಪಿಯಿಂದ ಆ ಕೆಲಸ ಮಾಡಲು ಸಾಧ್ಯವಿಲ್ಲ, ಆದರೆ ರಾಹುಲ್ ಗಾಂಧಿ ಮಾಡುತ್ತಿದ್ದಾರೆ. ರಾಹುಲ್ ಗಾಂಧಿ ಮಹಾನ್ ವ್ಯಕ್ತಿ, ಅವರು ಏನು ಬೇಕಾದರೂ ಹೇಳಬಲ್ಲರು. ಕಾಂಗ್ರೆಸ್ ಅನ್ನು ನಾಶ ಮಾಡುವ ಕೆಲಸವನ್ನು ಅವರು ಚೆನ್ನಾಗಿ ಮಾಡುತ್ತಿದ್ದಾರೆ. ನನಗಷ್ಟೇ ಅಲ್ಲ, ದೇಶಾದ್ಯಂತ ಇರುವ ಕೋಟ್ಯಂತರ ಕಾಂಗ್ರೆಸ್ ಕಾರ್ಯಕರ್ತರಿಗೆ ಇದರ ಅರಿವಿದೆ ಎಂದಿದ್ದರು.

    ಇದೇ ವೇಳೆ ಲೋಕಸಭಾ ಚುನಾವಣೆಯ ಫಲಿತಾಂಶದ ಕುರಿತು ಹೇಳಿಕೆ ನೀಡಿದ್ದ ಅವರು, ಜೂನ್ 4 ರ ನಂತರ ಕಾಂಗ್ರೆಸ್ ಇಲ್ಲಿಯವರೆಗೆ ಕಡಿಮೆ ಸ್ಥಾನಗಳನ್ನು ಗೆದ್ದ ಪಕ್ಷವಾಗಲಿದೆ ಎಂದು ಭವಿಷ್ಯ ನುಡಿದಿದ್ದರು.