Tag: Samarth Kadkol

  • ದಿಗಂತ್ ನಟನೆಯ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾಗೆ ಇಂದು ಮುಹೂರ್ತ

    ದಿಗಂತ್ ನಟನೆಯ ‘ಎಡಗೈ ಅಪಘಾತಕ್ಕೆ ಕಾರಣ’ ಸಿನಿಮಾಗೆ ಇಂದು ಮುಹೂರ್ತ

    ಗಾಳಿಪಟ-2 ಭರ್ಜರಿ ಯಶಸ್ಸಿನ ಬಳಿಕ ದೂದ್ ಪೇಡ್ ದಿಗಂತ್ (Digant) ’ಎಡಗೈ ಅಪಘಾತಕ್ಕೆ ಕಾರಣ ಸಿನಿಮಾ’ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ವಿಶ್ವ ಎಡಚರ ದಿನದಂದು ಪೋಸ್ಟರ್ ಹಾಗೂ ಟೈಟಲ್ ರಿವೀಲ್ ಮಾಡಿದ್ದ ಚಿತ್ರತಂಡ ಇವತ್ತು ಬೆಂಗಳೂರಿನ ವರಸಿದ್ದಿ ವಿನಾಯಕ ದೇಗುಲದಲ್ಲಿ ಮುಹೂರ್ತ (Muhurta) ನೆರವೇರಿಸಿದೆ.

    ಸಸ್ಪೆನ್ಸ್ ಥ್ರಿಲ್ಲರ್ ಡ್ರಾರ್ಕ್ ಕಾಮಿಡಿ ಜಾನರ್ ನ ಈ ಚಿತ್ರಕ್ಕೆ ಸಮರ್ಥ್ ಬಿ ಕಡ್ಕೋಲ್ (Samarth Kadkol) ಆಕ್ಷನ್ ಕಟ್ ಹೇಳಿದ್ದು, ಗುರುದತ್ತ ಗಾಣಿಗ (Gurudatta Ganiga)  ಮತ್ತು ಸಮರ್ಥ್ ಜಂಟಿಯಾಗಿ ನಿರ್ಮಾಣ ಮಾಡಲಿದ್ದಾರೆ. ದಿಗಂತ್ ಗೆ ಜೋಡಿಯಾಗಿ ಯುವನಟಿ ಧನು ಹರ್ಷ (Dhanu Harsha) ನಟಿಸಲಿದ್ದಾರೆ. ಇಂದಿನಿಂದ ಬೆಂಗಳೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಅಭಿಮನ್ಯು ಸದಾನಂದ್ ಛಾಯಾಗ್ರಾಹಣ, ರಾಹುಲ್ ವಿ ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಚಿತ್ರಕ್ಕಿದೆ. ಇದನ್ನೂ ಓದಿ:ಏನ್ ಐಡ್ಯಾ ಗುರೂ: ಆರ್ಯವರ್ಧನ್ ಪಾತ್ರಕ್ಕೆ ಹರೀಶ್ ರಾಜ್ ಫಿಕ್ಸ್: ಫೇಸ್ ಟ್ರಾನ್ಸ್ ಪ್ಲಾಂಟ್ ಬಳಸಿ ಅನಿರುದ್ಧಗೆ ಗೇಟ್ ಪಾಸ್

    ಪ್ರಪಂಚದಲ್ಲಿ ಹಲವು ವಿಷಯಗಳನ್ನು ಬಲಗೈ ಬಳಕೆಗೆ ಅನುಕೂಲವಾಗಿ ಮಾಡಲಾಗಿರುತ್ತದೆ. ಆದರೆ ಎಡಗೈ ಬಳಕೆದಾರರ ಸಂಖ್ಯೆ ಬಹಳ ಕಡಿಮೆ ಇದ್ದು, ಇದರಿಂದ ಅವರಿಗೆ ಒಂದಷ್ಟು ತೊಂದರೆಗಳು ಆಗುತ್ತಿವೆ. ಅದರ ಬಗೆಗಿನ ಕಥೆ ಇದಾಗಿದ್ದು, ಶೀರ್ಘದಲ್ಲಿ ಚಿತ್ರತಂಡ ಉಳಿದ ಕಲಾವಿದರ ಬಗ್ಗೆ ಮಾಹಿತಿ ನೀಡಲಿದೆ.

    Live Tv
    [brid partner=56869869 player=32851 video=960834 autoplay=true]

  • ವಿಶ್ವ ಎಡಚರ ದಿನಕ್ಕೆ ನಾಯಕಿಯನ್ನು ಪರಿಚಯಿಸಿದೆ ದಿಗಂತ್ ನಟನೆಯ ಸಿನಿಮಾ ಟೀಮ್

    ವಿಶ್ವ ಎಡಚರ ದಿನಕ್ಕೆ ನಾಯಕಿಯನ್ನು ಪರಿಚಯಿಸಿದೆ ದಿಗಂತ್ ನಟನೆಯ ಸಿನಿಮಾ ಟೀಮ್

    ದೂದ್ ಪೇಡ ದಿಗಂತ ನಟಿಸುತ್ತಿರುವ ಹೊಸ ಸಿನಿಮಾ ಎಡಗೈಯೇ ಅಪಘಾತಕ್ಕೆ ಕಾರಣ. ಇವತ್ತು ವಿಶ್ವ ಎಡಚರ ದಿನದ ಅಂಗವಾಗಿ ಚಿತ್ರತಂಡ ನಾಯಕಿಯನ್ನು ಪರಿಚಯಿಸಿದೆ. ಧನು ಹರ್ಷ ಎಂಬ ಯುವ ಪ್ರತಿಭೆ ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ. ವಿಶ್ವ ಎಡಚರ ದಿನದ ಅಂಗವಾಗಿ ನಾಯಕಿಯ ಇಂಟ್ರೂಡಕ್ಷನ್ ಟೀಸರ್ ನ್ನು ಚಿತ್ರತಂಡ ರಿಲೀಸ್ ಮಾಡಿದೆ.

    ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾದಲ್ಲಿ ಧನು ದಿಗಂತ್ ಗೆ ಜೋಡಿಯಾಗಿ ನಟಿಸುತ್ತಿದ್ದು, ರಾಧಿಕಾ ಎಂಬ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ‘ಎಡಗೈ’ ಆಧಾರಿತ ಪರಿಕಲ್ಪನೆ ಸಿನಿಮಾವಾಗಿರೋದ್ರಿಂದ  ಈ ಪಾತ್ರ ತಮಗೆ ವಿಶೇಷವಾಗಿದ್ದು, ಡಿಫರೆಂಟ್ ಶೇಡ್ ನಲ್ಲಿ ಕಾಣಿಸಿಕೊಳ್ಳುವುದಾಗಿ ಧನು ಹರ್ಷ ಹೇಳಿದ್ದಾರೆ. ಇದನ್ನೂ ಓದಿ:ನಾನು ಮತ್ತು ರೂಪೇಶ್ ಶೆಟ್ಟಿ ಜಸ್ಟ್ ಫ್ರೆಂಡ್ಸ್, ಅಂಥದ್ದೇನೂ ಇಲ್ಲ: ಸಾನ್ಯಾ ಅಯ್ಯರ್

    ಸಮರ್ಥ್ ಬಿ ಕಡ್ಕೋಲ್ ನಿರ್ದೇಶನದಲ್ಲಿ ಎಡಗೈಯೇ ಅಪಘಾತಕ್ಕೆ ಕಾರಣ ಸಿನಿಮಾ ಮೂಡಿಬರ್ತಿದ್ದು, ಆಗಸ್ಟ್ ತಿಂಗಳಾಂತ್ಯಕ್ಕೆ ಸಿನಿಮಾದ ಶೂಟಿಂಗ್ ಶುರುವಾಗಲಿದೆ. ಗುರುದತ್ತ ಗಾಣಿಗ ಮತ್ತು ಸಮರ್ಥ ಕಡ್ಕೋಳ್ ಜಂಟಿಯಾಗಿ ನಿರ್ಮಿಸಿರುವ ಚಿತ್ರಕ್ಕೆ ಅಭಿಮನ್ಯು ಸದಾನಂದ್ ಛಾಯಾಗ್ರಹಣವಿದೆ. ಈ ಹಿಂದೆ ದಿಗಂತ್ ಫಸ್ಟ್ ಲುಕ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಇದೀಗ ನಾಯಕಿ ಇಂಟ್ರೂಡಕ್ಷನ್ ಟೀಸರ್ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

    Live Tv
    [brid partner=56869869 player=32851 video=960834 autoplay=true]