Tag: samarjith lankesh

  • ‘ಗೌರಿ’ ಹೀರೋ ಸಮರ್ಜಿತ್‌ಗೆ ಸಿಕ್ತು ಉದಯೋನ್ಮುಖ ನಟ ಪ್ರಶಸ್ತಿ

    ‘ಗೌರಿ’ ಹೀರೋ ಸಮರ್ಜಿತ್‌ಗೆ ಸಿಕ್ತು ಉದಯೋನ್ಮುಖ ನಟ ಪ್ರಶಸ್ತಿ

    ಭಾರತದ ಸಿನಿಮಾ ರಂಗದಲ್ಲಿ ತನ್ನ ನಟನೆಯ ಮೂಲಕ ಭರವಸೆ ಮೂಡಿಸಿರುವ ಸಮರ್ಜಿತ್ ಲಂಕೇಶ್ (Samarjith Lankesh) ಅವರಿಗೆ ರಾಷ್ಟ್ರಮಟ್ಟದ ಪ್ರತಿಷ್ಠಿತ ಲುಮಿರೆ ಅತ್ಯುತ್ತಮ ಉದಯೋನ್ಮುಖ ನಟ ಪ್ರಶಸ್ತಿ ಲಭಿಸಿದೆ. ಇದನ್ನೂ ಓದಿ:2ನೇ ಮದುವೆಗೆ ಸಜ್ಜಾದ ಚೈತ್ರಾ ವಾಸುದೇವನ್

    ಇತ್ತೀಚೆಗೆ ರಾಘವೇಂದ್ರ ಚಿತ್ರವಾಣಿ ಉದಯೋನ್ಮುಖ ನಟ ಪ್ರಶಸ್ತಿ ಪಡೆದ ಸಮರ್ಜಿತ್ ಲಂಕೇಶ್ ತನ್ನ ಮಡಿಲಿಗೆ ಮತ್ತೊಂದು ಪ್ರಶಸ್ತಿಯನ್ನು ಸೇರಿಸಿಕೊಂಡಿದ್ದಾರೆ.

    ಡಾನ್ಸ್ ಹಾಗೂ ಮಾರ್ಷಿಯಲ್ ಆರ್ಟ್ಸ್ ಪ್ರವೀಣತೆಯನ್ನು ಹೊಂದಿರುವ ಸಮರ್ಜಿತ್ ಲಂಕೇಶ್ ಅವರು ರಾಷ್ಟ್ರಮಟ್ಟದಲ್ಲಿ ಪ್ರೇಕ್ಷಕ ಸಮೂಹವನ್ನು ಹೊಂದಿದ್ದಾರೆ. ಈಗ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡ ಬ್ಯಾನರ್ ನಡಿ ನಟಿಸುತ್ತಿದ್ದಾರೆ. ಪ್ರಮುಖ ಪಾತ್ರದಲ್ಲಿ ನಡೆಸುತ್ತಿರುವ ಸಮರ್ಜಿತ್ ಲಂಕೇಶ್ ಅವರು ದೇಶದ ಪ್ರಸಿದ್ಧ ತಾರೆಯರ ಜೊತೆ ಬೆಳ್ಳಿಪರದೆಯನ್ನು ಹಂಚಿಕೊಳ್ಳುತ್ತಿದ್ದಾರೆ.

    ತನ್ನ ಪ್ರತಿಭೆ ಹಾಗೂ ನಟನೆಯ ಸಮರ್ಪಣಾ ಭಾವದಿಂದ ಸಮರ್ಜಿತ್ ಲಂಕೇಶ್ ಭಾರತದ ಸಿನಿಮಾ ರಂಗದಲ್ಲಿ ತಾರೆಯಾಗಿ ಉದಯಿಸುವ ಭರವಸೆ ಮೂಡಿಸಿದ್ದಾರೆ.

    ತಂದೆ ಇಂದ್ರಜಿತ್ ಲಂಕೇಶ್ ನಿರ್ದೇಶನದ ‘ಗೌರಿ’ (Gowri) ಚಿತ್ರದಲ್ಲಿ ಸಮರ್ಜಿತ್ ಲಂಕೇಶ್ ಅವರು ನಾಯಕ ಪಾತ್ರ ಮಾಡುವ ಮೂಲಕ ಮೆಚ್ಚುಗೆ ಪಡೆದಿದ್ದರು. ಈ ಚಿತ್ರದಲ್ಲಿ ನಾಯಕಿಯಾಗಿ ಸಾನ್ಯಾ ಅಯ್ಯರ್ (Saanya Iyer) ನಟಿಸಿದ್ದರು.

  • ಸಮರ್ಜಿತ್ ಲಂಕೇಶ್ ಜೊತೆ ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಮಸ್ತ್ ಸ್ಟೆಪ್ಸ್

    ಸಮರ್ಜಿತ್ ಲಂಕೇಶ್ ಜೊತೆ ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಮಸ್ತ್ ಸ್ಟೆಪ್ಸ್

    ಸ್ಯಾಂಡಲ್‌ವುಡ್ ಡೈರೆಕ್ಟರ್ ಇಂದ್ರಜಿತ್ ಲಂಕೇಶ್ (Indrajit Lankesh) ಇದೀಗ ಪುತ್ರ ಸಮರ್ಜಿತ್ ಲಂಕೇಶ್‌ರನ್ನು (Samarjith Lankesh) ಚಿತ್ರರಂಗಕ್ಕೆ ಗ್ರ್ಯಾಂಡ್‌ ಆಗಿ ಲಾಂಚ್ ಮಾಡುತ್ತಿದ್ದಾರೆ. ಇದರ ನಡುವೆ ‘ಗೌರಿ’ (Gowri Film) ಸಿನಿಮಾದ ಹಾಡೊಂದಕ್ಕೆ ಆರ್‌ಸಿಬಿ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಜೊತೆ ಯುವ ನಟ ಸಮರ್ಜಿತ್ ಮಸ್ತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.

    ಒಂದೇ ಥರದ ಪ್ರಚಾರಗಳೇ ತುಂಬಿ ಹೋಗಿರುವ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಹೊಸ ಆವಿಷ್ಕಾರ ಮಾಡ್ತಾನೇ ಬಂದಿರುವ ಇಂದ್ರಜಿತ್ ತಮ್ಮ ಕನಸಿನ ‘ಗೌರಿ’ ಚಿತ್ರದ ‘ಲವ್ ಯೂ ಸಮಂತಾ’ ಹಾಡೊಂದನ್ನ ಬಿಡುಗಡೆ ಮಾಡಲು, ಶ್ರೇಯಾಂಕಾ ಪಾಟೀಲ್ ಅವರನ್ನ ಕರೆತಂದಿದ್ದರು. ಮೈಸೂರಿನ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶ್ರೇಯಾಂಕಾ ಅವರಿಂದ ಹಾಡನ್ನ ಬಿಡುಗಡೆಗೊಳಿಸುವ ಮೂಲಕ ಯೂತ್ಸ್‌ಗೆ ಹುಚ್ಚೆಬ್ಬಿಸಿದ್ದಾರೆ. ಇದನ್ನೂ ಓದಿ:ಡೀಪ್‍ ಫೇಕ್‍ ಸುಳಿಯಲ್ಲಿ ಮತ್ತೆ ರಶ್ಮಿಕಾ ಮಂದಣ್ಣ

    ಅಂದಹಾಗೆ, ಇದು ಶ್ರೇಯಾಂಕಾಗೆ ಮೊದಲ ಸಿನಿಮಾ ಸಮಾರಂಭ. ಅದರಲ್ಲಿಯೂ ಕಣ್ಮುಂದೆ ಉತ್ಸಾಹಿ ಯುವಕ ಯುವತಿಯರ ಗುಂಪು ಇದ್ದಾಗ, ಉತ್ಸಾಹ ಇನ್ನೂ ಹೆಚ್ಚಾಗುತ್ತೆ. ಉತ್ಸಾಹದಿಂದ ಶ್ರೇಯಾಂಕಾ ಅವರು ಇಂದ್ರಜಿತ್ ಲಂಕೇಶ್ ಪುತ್ರನ ಸಮರ್ಜಿತ್ ಲಂಕೇಶ್ ಜೊತೆ ಶ್ರೇಯಾಂಕ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ.

    ‘ಗೌರಿ’ (Gowri Film) ಸಿನಿಮಾದಲ್ಲಿ ಸಮರ್ಜಿತ್ ಲಂಕೇಶ್‌ಗೆ ‘ಬಿಗ್ ಬಾಸ್’ ಬೆಡಗಿ ಸಾನ್ಯಾ ಅಯ್ಯರ್ (Saanya Iyer) ನಾಯಕಿಯಾಗಿ ನಟಿಸಿದ್ದಾರೆ. ಈ ಮೂಲಕ ಇಬ್ಬರೂ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

  • ಸಾನ್ಯ ಅಯ್ಯರ್‌ಗೆ ಸಿಕ್ತು ಸಿನಿಮಾ ಚಾನ್ಸ್- ಹೀರೋಯಿನ್ ಆಗ್ತಿದ್ದಾರೆ ಪುಟ್ಟಗೌರಿ

    ಸಾನ್ಯ ಅಯ್ಯರ್‌ಗೆ ಸಿಕ್ತು ಸಿನಿಮಾ ಚಾನ್ಸ್- ಹೀರೋಯಿನ್ ಆಗ್ತಿದ್ದಾರೆ ಪುಟ್ಟಗೌರಿ

    ಬಿಗ್ ಬಾಸ್ ಬೆಡಗಿ ಸಾನ್ಯ ಅಯ್ಯರ್ (Saanya Iyer) ಅವರು ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಕೊನೆಗೂ ಯುವ ನಟನಿಗೆ ಹೀರೋಯಿನ್ (Heroine) ಆಗುವ ಮೂಲಕ ತಮ್ಮ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಇಂದ್ರಜಿತ್ ಲಂಕೇಶ್ (Indrajith Lankesh) ಮಗನ ಹೊಸ ಸಿನಿಮಾದಲ್ಲಿ ಸಾನ್ಯ ಅಯ್ಯರ್ ನಾಯಕಿಯಾಗಲಿದ್ದಾರೆ. ಇಂದ್ರಜಿತ್ ಲಂಕೇಶ್ ತಮ್ಮ ಮಗ ಸಮರ್ಜಿತ್‌ನನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದು, ಇದಕ್ಕಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಸಮರ್ಜಿತ್ ಲಂಕೇಶ್ (Samarjith Lankesh) ಎದುರು ನಾಯಕಿಯಾಗಿ ಪುಟ್ಟಗೌರಿ ಸಾನ್ಯ ಕಾಣಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಅಧಿಕೃತ ಘೋಷಣೆ ಬಾಕಿಯಿದೆ. ಇದನ್ನೂ ಓದಿ:‘ಡಬಲ್ ಇಸ್ಮಾರ್ಟ್’ ಚಿತ್ರೀಕರಣದಲ್ಲಿ ಸಂಜಯ್ ದತ್‌ಗೆ ಪೆಟ್ಟು- ಆಸ್ಪತ್ರೆಗೆ ದಾಖಲು

    ‘ಪುಟ್ಟಗೌರಿ ಮದುವೆ’ (Puttagowri Maduve) ಸೀರಿಯಲ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಬಾಲನಟಿಯಾಗಿ ಎಂಟ್ರಿ ಕೊಟ್ಟಿದ್ದ ಸಾನ್ಯ ಅಯ್ಯರ್ ಅವರು ಬಿಗ್ ಬಾಸ್ ಓಟಿಟಿ ಮತ್ತು ಟಿವಿ ಬಿಗ್ ಬಾಸ್ (Bigg Boss Kannada) ಅವರಿಗೆ ಹೆಚ್ಚಿನ ಜನಪ್ರಿಯತೆ ನೀಡಿತ್ತು. ದೊಡ್ಮನೆಯಿಂದ ಹೊರ ಬಂದ ಮೇಲೆ ಬೋಲ್ಡ್ ಫೋಟೋಶೂಟ್‌ನಲ್ಲಿ ಮಿಂಚಿದ್ದರು. ಫಿಟ್‌ನೆಸ್ ಮತ್ತು ವರ್ಕೌಟ್ ಕಡೆ ಹೆಚ್ಚಿನ ಗಮನ ನೀಡಿದ್ದರು. ಈಗ ಅವರ ಆಸೆಯಂತೆ ಒಂದೊಳ್ಳೆಯ ಕಥೆ ಸಾನ್ಯಗೆ ಅರಸಿ ಬಂದಿದೆ.

    ತಂದೆ ಸಿನಿಮಾ ನಿರ್ದೇಶಕ ಅನ್ನುವ ಕಾರಣಕ್ಕಾಗಿ ಸಮರ್ಜಿತ್ ಚಿತ್ರರಂಗ ಪ್ರವೇಶ ಮಾಡುತ್ತಿಲ್ಲ. ಎಲ್ಲ ರೀತಿಯಲ್ಲೂ ಸಿದ್ಧತೆ ಮಾಡಿಕೊಂಡೇ ಅಖಾಡಕ್ಕೆ ಇಳಿಯುತ್ತಿದ್ದಾರೆ. ಹಾಗಾಗಿ ಎಂಟ್ರಿಯಲ್ಲೇ ಭರವಸೆ ಮೂಡಿಸುತ್ತಾರೆ. ಈಗಾಗಲೇ ರಂಗಭೂಮಿಯಲ್ಲೂ ಕೆಲಸ ಮಾಡಿದ ಅನುಭವವೂ ಅವರ ಜೊತೆಗಿದೆ. ನ್ಯೂಯಾರ್ಕ್ ಅಕಾಡೆಮಿಯಲ್ಲಿ ಸಿನಿಮಾ ಸಂಬಂಧಿಸಿದ ಕೋರ್ಸ್ ಮಾಡಿರುವ ಸಮರ್ಜಿತ್, ಅಲ್ಲಿ ನಟನಾ ತರಬೇತಿಯನ್ನು ಪಡೆದಿದ್ದಾರೆ. ಚೇತನ್ ಡಿಸೋಜಾ ಬಳಿ ಸಾಹಸ ಕಲೆಯನ್ನು ಕಲಿತುಕೊಂಡರೆ, ಮುರಳಿ ಬಳಿ ಡಾನ್ಸ್ ಮತ್ತು ಇಬ್ಬರು ನೀನಾಸಂ ಶಿಕ್ಷಕರು ಸಮರ್ಜಿತ್‌ಗೆ ತರಬೇತಿ ನೀಡಿದ್ದಾರೆ. ಲಂಕೇಶ್ ಅವರ ಮೊಮ್ಮಗ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್‌ ಆಗಿ ಎಂಟ್ರಿ ಕೊಡ್ತಿದ್ದಾರೆ.

    ಸಮರ್ಜಿತ್- ಸಾನ್ಯ ಅಯ್ಯರ್ ಇಬ್ಬರಿಗೂ ಇದು ಚೊಚ್ಚಲ ಸಿನಿಮಾ ಆಗಿರುವ ಕಾರಣ, ಸಿನಿಮಾ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ. ಸಿನಿಮಾ ನಿರ್ದೇಶಕರು, ಬ್ಯಾನರ್ ಈ ಎಲ್ಲದರ ಅಪ್‌ಡೇಟ್ ಸದ್ಯದಲ್ಲೇ ಸಿಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]