Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]
Tag: samanvi
-

ಮೃತ ಸಮನ್ವಿ ಮನೆಗೆ ಎಸ್.ಟಿ ಸೋಮಶೇಖರ್ ಭೇಟಿ, ಸಾಂತ್ವನ
ಬೆಂಗಳೂರು: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾದ ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಖ್ಯಾತಿಯ ಸಮನ್ವಿ ಮನೆಗೆ ಇಂದು ಸಚಿವ ಎಸ್.ಟಿ ಸೋಮಶೇಖರ್ ಭೇಟಿ ನೀಡಿದ್ದಾರೆ.

ಗುಬ್ಬಲಾಳದಲ್ಲಿರುವ ಸಮನ್ವಿ ನಿವಾಸಕ್ಕೆ ಭೇಟಿ ನೀಡಿದ ಸಚಿವರು ಕುಟುಂಬದವರಿಗೆ ಧೈರ್ಯ ತುಂಬಿದ್ದಾರೆ. ಸಮನ್ವಿ ತಂದೆ ರೂಪೇಶ್ ಹಾಗೂ ತಾಯಿ ಅಮೃತ ನಾಯ್ಡು ಅವರಿಗೆ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ: ಸಮನ್ವಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಡಿಕೆಶಿ
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಮ್ಮಿಗೆಪುರ ವಾರ್ಡ್ ನಂಬರ್ 198ರ ವಾಜರಹಳ್ಳಿ ಯಲ್ಲಿ ಇತ್ತೀಚೆಗಷ್ಟೇ ಅಪಘಾತದಲ್ಲಿ ನಿಧನ ಹೊಂದಿದ ಪುಟಾಣಿ ಸಮನ್ವಿ ಅವರ ತಂದೆ ರೂಪೇಶ್ ಹಾಗೂ ತಾಯಿ ಅಮೃತ ನಾಯ್ಡು ಅವರ ಮನೆಗೆ ಬೇಟಿ ನೀಡಿ ಸಾಂತ್ವನ ಹೇಳಲಾಯಿತು. pic.twitter.com/OpZgFAKSL6
— S T Somashekar Gowda (@STSomashekarMLA) January 19, 2022
ಸಮನ್ವಿ ಬಾಲ ಕಲಾವಿದೆಯಾಗಿ ಜನರ ಮನಗೆದ್ದಿದ್ದಳು. ರಿಯಾಲಿಟಿ ಶೋ ಮೂಲಕ ಮನೆಮಾತಾಗಿದ್ದ ಸಮನ್ವಿ ಚಿಕ್ಕ ವಯಸ್ಸಿನಲ್ಲೇ ಅಪಾರ ಅಭಿಮಾನಿಗಳನ್ನು ಹೊಂದಿದ್ದಳು. ಆಕೆಯ ಸಾವು ನಿಜಕ್ಕೂ ದುರದೃಷ್ಟಕರ. ಅವರ ಕುಟುಂಬವರ್ಗದವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭೇಟಿ ಬಳಿಕ ಎಸ್‍ಟಿಎಸ್ ತಿಳಿಸಿದ್ದಾರೆ. ಇದನ್ನೂ ಓದಿ: ಕಣ್ಣೀರು ತರಿಸುವಂತಿದೆ ಸಮನ್ವಿ ತಾಯಿ ಅಮೃತಾ ನಾಯ್ಡು ಮನವಿ

ಈ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಕೂಡ ಸಮನ್ವಿ ಮನೆಗೆ ಭೇಟಿ ನೀಡಿ ಆಕೆಯ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಕಳೆದ ಗುರುವಾರ ಅಮೃತಾ ನಾಯ್ಡು ಅವರು ರಾಜಾಜಿನಗರದಲ್ಲಿರುವ ತಮ್ಮ ತವರುನ ಮನೆಗೆ ಸ್ಕೂಟಿಯಲ್ಲಿ ಹೊರಟಿದ್ದರು. ಮೆಟ್ರೋ ಸ್ಟೇಷನ್ ವರೆಗೆ ಗಾಡಿಯಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಸಮನ್ವಿ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ 4 ತಿಂಗಳ ಗರ್ಭಿಣಿ ಅಮೃತಾ ಅವರು ಭಾರೀ ಅವಘಡದಿಂದ ಬಚಾವ್ ಆಗಿದ್ದರು. ಇದನ್ನೂ ಓದಿ: ಮುದ್ದಿನ ಮಗಳು ಸಮನ್ವಿಯ ಲಾಸ್ಟ್ ಕಿಸ್ ಹಂಚಿಕೊಂಡ ನಟಿ ಅಮೃತಾ
-

ಮುದ್ದಿನ ಮಗಳು ಸಮನ್ವಿಯ ಲಾಸ್ಟ್ ಕಿಸ್ ಹಂಚಿಕೊಂಡ ನಟಿ ಅಮೃತಾ
ಬೆಂಗಳೂರು: ಮುದ್ದಿನ ಮಗಳು ಸಮನ್ವಿಯನ್ನು ಕಳೆದುಕೊಂಡು ದುಃಖದಲ್ಲಿರುವ ನಟಿ ಅಮೃತಾ ನಾಯ್ಡು ಅವರು ತಮ್ಮ ಇನ್ ಸ್ಟಾ ಖಾತೆಯಲ್ಲಿ 2 ವೀಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಹೌದು. ಮಗಳ ಜೊತೆಗಿನ ಲಾಸ್ಟ್ ವೀಡಿಯೋವನ್ನು ಅಮೃತಾ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ನನಗೆ ಅವಳ ಲಾಸ್ಟ್ ಕಿಸ್ ಇದಾಗಿದ್ದು, ನನ್ನನ್ನು ನಾನು ಲವ್ ಮಾಡಿಕೊಳ್ಳುತ್ತೀನಿ ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ವೀಡಿಯೋದಲ್ಲಿ ಸಮನ್ವಿ ತನ್ನ ಪಾಡಿಗೆ ತಾನು ಆಟವಾಡಿಕೊಳ್ಳುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಮಗಳ ಸಾವಿನ ಬಗ್ಗೆ ಕಣ್ಣೀರುಡುತ್ತಲೇ ಎಳೆಎಳೆಯಾಗಿ ಬಿಚ್ಚಿಟ್ಟ ಅಮೃತಾ ನಾಯ್ಡು!
View this post on Instagramನಿನ್ನೆಯಷ್ಟೇ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ಅಮೃತಾ, ಅಂದು ನಡೆದ ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟು ಕಣ್ಣೀರಾಕಿದ್ದರು. ಅಲ್ಲದೆ ಮನೆಯಿಂದ ಹೊರಡುವ ಮುಂಚೆ ಮಗಳ ಜೊತೆ ರೀಲ್ಸ್ ಕೂಡ ಮಾಡಿದ್ದೆ ಎಂದು ಹೇಳಿದ್ದರು. ಅದರಂತೆ ಆ ಲಾಸ್ಟ್ ರೀಲ್ಸ್ ಅನ್ನು ಇದೀಗ ಅವರು ತಮ್ಮ ಇನ್ ಸ್ಟಾ ಖಾತೆಯಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಮಗಳ ತುಂಟಾಟಗಳನ್ನು ನೆನಪು ಮಾಡಿಕೊಳ್ಳುತ್ತಾ ಮರುಗುತ್ತಿದ್ದಾರೆ. ಇದನ್ನೂ ಓದಿ: ಕಣ್ಣೀರು ತರಿಸುವಂತಿದೆ ಸಮನ್ವಿ ತಾಯಿ ಅಮೃತಾ ನಾಯ್ಡು ಮನವಿ
View this post on Instagramಕಳೆದ ಗುರುವಾರ ಕೋಣನಕುಂಟೆ ಬಳಿ ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ನಡೆದಿತ್ತು. ಈ ಅವಘಡದಲ್ಲಿ ಖಾಸಗಿ ಚಾನೆಲ್ ನಲ್ಲಿ ಪ್ರಸಾರವಾಗುವ ನನ್ನಮ್ಮ ಸೂಪ್ ಸ್ಟಾರ್ ಖ್ಯಾತಿ ಸಮನ್ವಿ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಗರ್ಭಿಣಿಯಾಗಿರುವ ಅಮೃತಾ ನಾಯ್ಡು ಸಣ್ಣ-ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದರು. ಆ ಬಳಿಕ ಮಗಳನ್ನು ಕಳೆದುಕೊಂಡ ದುಃಖದಲ್ಲಿಯೂ ಅಮೃತಾ ಅವರು ಇನ್ ಸ್ಟಾದಲ್ಲಿ ಫೋಸ್ಟ್ ಮಾಡಿ, ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು. ನನ್ನ ಮಗಳು ಮತ್ತೆ ನನ್ನ ಹೊಟ್ಟೆಯಲ್ಲಿ ಹುಟ್ಟಿ ಬರಲಿ ಎಂದು ಎಲ್ಲರೂ ಪ್ರಾರ್ಥಿಸಿ ಅಂತ ಕೈಮುಗಿದು ಬೇಡಿಕೊಂಡಿದ್ದರು.
-

ಮಗಳ ಸಾವಿನ ಬಗ್ಗೆ ಕಣ್ಣೀರುಡುತ್ತಲೇ ಎಳೆಎಳೆಯಾಗಿ ಬಿಚ್ಚಿಟ್ಟ ಅಮೃತಾ ನಾಯ್ಡು!
– ದೂಷಿಸುವವರಲ್ಲಿ ಕೈಮುಗಿದು ಬೇಡ್ಕೊಂಡ ಸಮನ್ವಿ ತಾಯಿ
– ಮಗಳಿಗಾಗಿ ಪ್ರಾರ್ಥಿಸಿ ಅಂತ ಕೈಮುಗಿದ ನಟಿಬೆಂಗಳೂರು: ಪ್ರತಿಯೊಬ್ಬರೂ ಈ ವಿಚಾರವಾಗಿ ಕಾಳಜಿಯ ಮಾತನ್ನಾಡಿದ್ದಾರೆ. ಆದರೆ ಜನರು ಎಲ್ಲೋ ಕೂತು ಇಲ್ಲಿನ ಪರಿಸ್ಥಿತಿಯ ಬಗ್ಗೆ ಹೀಗಾಗಬೇಕಾಗಿತ್ತು, ಹೀಗೆ ಮಾಡಬಹುದಿತ್ತು ಎನ್ನುವುದು ಸುಲಭ. ತಾಯಿಯಾಗಿ ನನಗೂ ಅನಿಸಿದೆ. ಆ ಸಂದರ್ಭದಲ್ಲಿ ಹೀಗೆ ಮಾಡಬೇಕಾಗಿತ್ತು ಎಂದು ನನಗೂ ಅನಿಸಿದೆ ಎಂದು ಮೃತ ಸಮನ್ವಿ ತಾಯಿ ಅಮೃತಾ ನಾಯ್ಡು ಕಂಬನಿ ಮಿಡಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ಅಪಘಾತ ಸಂಭವಿಸಿದ ಘಟನೆಯನ್ನು ಕಣ್ಣೀರು ಹಾಕುತ್ತಲೇ ಎಳೆಎಳೆಯಾಗಿ ಬಿಚ್ಚಿಟ್ಟರು. ಅಂದು ಟಿಪ್ಪರ್ ಸಮನ್ವಿಗೆ ಡಿಕ್ಕಿ ಹೊಡೆದು ಆಕೆ ಮೂರ್ಛೆ ತಪ್ಪಿ ಬಿದ್ದಾಗಲೂ ಲಾರಿ ಡ್ರೈವರ್ ಮೇಲೆ ನನಗೆ ಎಳ್ಳಷ್ಟೂ ಕೋಪ ಬಂದಿರಲಿಲ್ಲ. ತಕ್ಷಣ ನನಗೆ ಮನಸ್ಸಿಗೆ ಬಂದಿದ್ದು, ಭಗವಂತನೇ ಇಂತಹ ಸಂದರ್ಭ ಕಲ್ಪಿಸಿ ಕೊಟ್ಟನೇನೋ ಎಂದು. ದೇವರು ಹೀಗೆ ಆಗಬೇಕು ಎಂದು ಮೊದಲೇ ನಿರ್ಧಾರ ಮಾಡಿದ್ದ. ಈ ಘಟನೆ ನಡೆದಿದ್ದು ನಿನ್ನಿಂದ, ನನ್ನಿಂದ ಎನ್ನೋದ್ರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಗದ್ಗದಿತರಾದರು. ಇದನ್ನೂ ಓದಿ: ಕಣ್ಣೀರು ತರಿಸುವಂತಿದೆ ಸಮನ್ವಿ ತಾಯಿ ಅಮೃತಾ ನಾಯ್ಡು ಮನವಿ

ನನ್ನ ನೋವನ್ನು ಅರ್ಥ ಮಾಡಿಕೊಂಡವರು ಈ ಕ್ಷಣ ನನ್ನ ಜೊತೆ ಇದ್ದಾರೆ. ನನ್ನನ್ನು ನೋವಿನಿಂದ ಹೊರಗಡೆ ತರಲು ಬಹಳ ಪ್ರಯತ್ನ ಪಡುತ್ತಿದ್ದಾರೆ. ಎಲ್ಲೋ ಕೂತು ಪರಿಸ್ಥಿತಿ ಅರ್ಥ ಮಾಡಿಕೊಳ್ಳದೇ ಯಾರನ್ನೂ ದೂಷಿಸಬೇಡಿ. ನಾನು ಗರ್ಭಿಣಿಯಾಗಿದ್ದರಿಂದ ಗಾಡಿ ತಗೊಂಡು ಹೋಗಬಾರದಿತ್ತು ಅಂತೆಲ್ಲ ಮಾತನಾಡುತ್ತಿದ್ದಾರೆ. ಇಂತಹ ಮಾತುಗಳನ್ನಾಡಿ ನನ್ನ ಮೇಲೆ ಆರೋಪಗಳನ್ನು ಮಾಡಬೇಡಿ ಎಂದು ಕಣ್ಣೀರಾಕುತ್ತಲೇ ಬೇಡಿಕೊಂಡರು.

ಯಾವುದೇ ತಾಯಿ ತನ್ನ ಮಗುವನ್ನು ಬಲಿ ಕೊಡೋದಕ್ಕೆ ಹೋಗಲ್ಲ. ನೋವಲ್ಲಿರೋ ನಮನ್ನ ಈ ರೀತಿ ದೂಷಿಸಿ ಮತ್ತಷ್ಟು ನೋವು ಕೊಡಬೇಡಿ. ಹಲವರು ಇದಕ್ಕೆ ಸಲಹೆ ನೀಡಿದ್ದಾರೆ. ಆದರೆ ಈ ಸಲಹೆಗಳಿಂದ ಸಮನ್ವಿ ಮರಳಿ ಬರಲು ಸಾಧ್ಯವಿಲ್ಲ. ನನ್ನ ಹತ್ತಿರದವರು ಜೊತೆಯಲ್ಲಿದ್ದು ಸಹಾಯ ಮಾಡುತ್ತಾ ಇದ್ದಾರೆ. ಸಾಧ್ಯವಾದರೆ ಅವಳಿಗೆ ಆಶೀರ್ವಾದ ಮಾಡಿ, ಅವಳಿಗಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿಕೊಂಡರು. ಇದನ್ನೂ ಓದಿ: ಸಮನ್ವಿ ಮುಂದೆ ದೊಡ್ಡ ಸ್ಟಾರ್ ಆಗುತ್ತಿದ್ದಳು: ಸೃಜನ್ ಲೋಕೇಶ್ ಭಾವುಕ

ಅಂದು ಏನಾಗಿತ್ತು?
ನನ್ನ ತಾಯಿ ಮನೆ ರಾಜಾಜಿನಗರದಲ್ಲಿದೆ. ಹೀಗಾಗಿ ಅಷ್ಟು ದೂರ ಬೈಕ್‌ನಲ್ಲಿ ಹೋಗುವುದು ನನಗೆ ಕಷ್ಟವಾಗಿದ್ದರಿಂದ ಮೆಟ್ರೋ ಹತ್ತಿ ಹೋಗುವುದಾಗಿ ನಿರ್ಧರಿಸಿದ್ದೆ. ಮನೆಯಿಂದ ಮೆಟ್ರೋ ನಿಲ್ದಾಣಕ್ಕೆ ಕೇವಲ 2 ನಿಮಿಷಗಳ ದಾರಿ. ಸಮನ್ವಿಗೆ ಕಾರ್ ಪ್ರಯಾಣ ಇಷ್ಟ ಆಗಲ್ಲ ಎಂಬ ಕಾರಣಕ್ಕೆ ಮೆಟ್ರೋ ಸ್ಟೇಷನ್ ವರೆಗೆ ಬೈಕ್‌ನಲ್ಲಿ ಹೋಗಲು ನಿರ್ಧರಿಸಿದ್ವಿ ಎಂದರು.
ಆಕೆಯನ್ನ ಎಲ್ಲಿಗೇ ಕರೆದುಕೊಂಡು ಹೋಗುವಾಗಲೂ ಬಹಳ ಜಾಗ್ರತೆಯಿಂದಲೇ ಕರೆದುಕೊಂಡು ಹೋಗುತ್ತಿದ್ದೆವು. ಈ ರೀತಿ ಅನಾಹುತ ಆಗುತ್ತೆ ಎಂಬ ನಿರೀಕ್ಷೆ ಇರಲಿಲ್ಲ. ಸಮನ್ವಿಯನ್ನ ಮೊದಲು ಬೈಕ್‌ನ ಎದುರುಗಡೆಯೇ ಕೂರಿಸಿಕೊಳ್ಳುತ್ತಾ ಇದ್ದೆ. ಆದರೆ ಇತ್ತೀಚೆಗೆ ಆಕೆ ಸ್ವಲ್ಪ ಉದ್ದ ಬೆಳೆದಿದ್ದಾಳೆ. ಅಲ್ಲದೆ ಆಕೆಯ ತಲೆ ನನಗೆ ಅಡ್ಡ ಆಗ್ತಾ ಇದ್ದಿದ್ದರಿಂದ ಜೋಪಾನವಾಗಿನೇ ಹಿಂದುಗಡೆ ಕೂರಿಸಿಕೊಳ್ಳುತ್ತಾ ಇದ್ದೆ ಎಂದು ತಿಳಿಸಿದರು. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು

ಅಂದು ನಾವಿಬ್ರೂ ತುಂಬಾ ಮಾತಾಡ್ತಾ ಇದ್ವಿ. ಮೆಟ್ರೋ ನಿಲ್ದಾಣ ನನಗೆ ಕಣ್ಣಿಗೆ ಕಾಣಿಸ್ತಾನೇ ಇತ್ತು. ಒಂದು ಕ್ಷಣ ನನಗೆ ಸಿಕ್ಕಿದ್ದಿದ್ರೆ ಎಡಕ್ಕೆ ತಿರುಗಿಕೊಳ್ಳುತ್ತಿದ್ದೆ. ಅಷ್ಟರಲ್ಲಿ ಪಕ್ಕದಲ್ಲಿ ದೊಡ್ಡ ಗಾಡಿಯೊಂದು ಬಂತು. ಆ ಕ್ಷಣಕ್ಕೆ ನನಗೆ ಅಷ್ಟು ಮಾತ್ರ ಗೊತ್ತಾಗಿದ್ದು. ಆಕೆ ರೋಡ್‌ಗೆ ಬಿದ್ದಿದ್ದಳು. ನಾನೂ ಕೂಡಾ ಬಿದ್ದಿದ್ದೆ. ಮಗು ಬಿದ್ದಿದೆ, ಆಕೆ ಭಯ ಪಟ್ಟಿರುತ್ತಾಳೆ ಎಂದು ನಾನು ಅಂದುಕೊಂಡಿದ್ದೆ. ಆದರೆ ಆಕೆ ಮೂರ್ಛೆ ತಪ್ಪಿ ಹೋಗಿದ್ದಳು. ಆಸ್ಪತ್ರೆಗೆ ಕರೆದುಕೊಂಡು ಹೋದಾಗಲೇ ಗೊತ್ತಾಗಿದ್ದು ಆಕೆ ಮೃತಪಟ್ಟಿದ್ದಾಳೆ ಎಂದು ಹೇಳುತ್ತಾ ಬೇಸರಗೊಂಡರು.
ಆಕೆಯ ತೊಡೆ ಭಾಗಕ್ಕೆ ಸ್ವಲ್ಪ ಗಾಯ ಆಗಿತ್ತು. ಡಾಕ್ಟರ್ ಕೂಡಾ ಹೇಳಿದ್ದರು ಅದು ಅಷ್ಟೆನೂ ದೊಡ್ಡ ಗಾಯ ಅಲ್ಲ ಎಂದು. ಬಹುಶಃ ಆ ಘಟನೆಯ ಶಾಕ್‌ನಿಂದ ಆಕೆಗೆ ಹೀಗಾಗಿರಬಹುದು ಎಂದು ಅಮೃತಾ ಮಗಳ ಸಾವಿನ ಬಗ್ಗೆ ಮಾತನಾಡಿದರು. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವು

ನಾವು ಮಗುವನ್ನು ಕಳೆದುಕೊಂಡಿದ್ದೇವಾ ಅಥವಾ ಯಾರೋ ಹಿರಿಯರನ್ನ ಕಳೆದುಕೊಂಡಿದ್ದೇವಾ ಎಂಬುದೇ ತಿಳೀತಾ ಇಲ್ಲ. ಆಕೆಗೆ ಏನು ಹೇಳಿದ್ರೂ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾ ಇದ್ದಳು. ಆಕೆಯನ್ನ ತುಂಬಾ ಜೋಪಾನ ಮಾಡಿ ಸಾಕಿದ್ವಿ. ಆಕೆಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು ಅಂತ ಒಳ್ಳೆ ಶಾಲೆಗೂ ಸೇರಿಸಿದ್ವಿ. ಅಪರೂಪದಲ್ಲಿ ಅವಳಿಗೆ ಸುಲಭವಾಗಿ ಸೀಟ್ ಕೂಡಾ ಸಿಕ್ಕಿತ್ತು. ಭಗವಂತ ಆಕೆಯ ಜೀವನದ ಎಲ್ಲಾ ಹಂತವನ್ನೂ ಸುಲಭವಾಗಿ ಪಾರು ಮಾಡಿಸಿದ್ದಾನೆ. ಆದರೆ ಸಾವನ್ನ ಮಾತ್ರ ಪಾರು ಮಾಡಿಸದೇ ಹೋದ ಅಮೃತಾ ಕಂಬನಿ ಮಿಡಿದರು. ಇದನ್ನೂ ಓದಿ: ಸಮನ್ವಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಡಿಕೆಶಿ
ಈ ನೋವು ಒಂದು ಕಡೆಯಾದರೆ ಮನಸ್ಸಿಗೆ ಸಮಾಧಾನವನ್ನು ತಂದುಕೊಟ್ಟಿರುವ ಕೆಲಸವನ್ನು ಮಾಧ್ಯಮದವರು ಮಾಡಿದ್ದಾರೆ. ಸಮನ್ವಿಯನ್ನು ಜನರಿಗೆ ತಲುಪಿಸುವ ಕೆಲಸದೊಂದಿಗೆ ಜನರು ಅವಳಿಗೋಸ್ಕರ ಪ್ರಾರ್ಥಿಸುವಂತೆ ಮಾಡಿದ್ದಾರೆ. ಇಷ್ಟು ಪ್ರೀತಿಯ ಜೊತೆ ಅವಳನ್ನು ಕಳುಹಿಸಿ ಕೊಡುವಂತೆ ಸಹಾಯ ಮಾಡಿರುವ ಮಾಧ್ಯಮಗಳಿಗೆ ಹಾಗೂ ಪಬ್ಲಿಕ್ ಟಿವಿಗೆ ನಾನು ಚಿರಋಣಿಯಾಗಿದ್ದೇನೆ ಎಂದರು.
-

ಸಮನ್ವಿ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಡಿಕೆಶಿ
ಬೆಂಗಳೂರು: ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ನನ್ನಮ್ಮ ಸೂಪರ್ ಸ್ಟಾರ್ ಸ್ಪರ್ಧಿ, ಬಾಲಕಲಾವಿದೆ ಸಮನ್ವಿ ಮನೆಗೆ ಕೆಪಿಸಿಸಿ ಅಧ್ಯಕ್ಷ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.

ಕೆಂಗೇರಿ ರಸ್ತೆಯಲ್ಲಿರುವ ಅಮೃತಾ ರೂಪೇಶ್ ನಿವಾಸಕ್ಕೆ ಡಿ.ಕೆ.ಶಿವಕುಮಾರ್ ಮಂಗಳವಾರ ಭೇಟಿ ನೀಡಿದರು. ಸಮನ್ವಿ ಅಗಲಿಕೆ ದುಃಖದಲ್ಲಿರುವ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ನಂತರ ಬಾಲಕಲಾವಿದೆ ಸಮನ್ವಿ ಭಾವಚಿತ್ರ ಗೌರವ ನಮನ ಸಲ್ಲಿಸಿದರು. ಇದನ್ನೂ ಓದಿ: ಕಣ್ಣೀರು ತರಿಸುವಂತಿದೆ ಸಮನ್ವಿ ತಾಯಿ ಅಮೃತಾ ನಾಯ್ಡು ಮನವಿ
ಅರಳಿ ನಗಬೇಕಿದ್ದ ಹೂವೊಂದು ಮೊಗ್ಗಿನಲ್ಲೇ ದೇವರಿಗೆ ಅರ್ಪಣೆಯಾಗಿದೆ. ಖ್ಯಾತ ಹರಿಕಥಾ ವಿದ್ವಾಂಸ ಶ್ರೀ ಗುರುರಾಜ ನಾಯ್ಡು ಅವರ ಮೊಮ್ಮಗಳು ಸಮನ್ವಿ ಪ್ರತಿಭಾವಂತೆ ಭವಿಷ್ಯದಲ್ಲಿ ಉತ್ತಮ ಕಲಾವಿದೆಯಾಗುವ ಭರವಸೆಹುಟ್ಟಿಸಿದ್ದಳು. ಆಕೆಯ ಅಗಲಿಕೆ ಕಲಾ ರಂಗಕ್ಕೆ ತುಂಬಲಾರದ ನಷ್ಟ. ಇಂದು ಸಮನ್ವಿ ಅವರ ಮನೆಗೆ ಭೇಟಿ ನೀಡಿ ಅವರ ಪೋಷಕರಿಗೆ ಧೈರ್ಯ ಹೇಳಿದೆ. pic.twitter.com/MFJf6vdfFU
— DK Shivakumar (@DKShivakumar) January 18, 2022

6 ವರ್ಷದ ಪುಟ್ಟ ಬಾಲಕಿ ನಾಲ್ಕು ದಿನಗಳ ಹಿಂದೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಳು. ಬೆಂಗಳೂರಿನ ಕೋಣನಕುಂಟೆಯಲ್ಲಿ ತಾಯಿ ಅಮೃತಾ ನಾಯ್ಡು ಮತ್ತು ಮಗಳು ಸಮನ್ವಿ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಆಗ ಟಿಪ್ಪರ್ ಡಿಕ್ಕಿ ಹೊಡದು ಸ್ಕೂಟಿಯಿಂದ ಇಬ್ಬರೂ ಬಿದ್ದರು. ಟಿಪ್ಪರ್ ಲಾರಿಯ ಮಡ್ಗಾರ್ಡ್ ಸಮನ್ವಿಗೆ ಗುದ್ದಿದೆ. ಹೀಗಾಗಿ ಹೊಟ್ಟೆ ಭಾಗದಲ್ಲಿ ರಕ್ತಸ್ರಾವ ಆಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಳು. ಇದನ್ನೂ ಓದಿ: ಸಮನ್ವಿ ಮುಂದೆ ದೊಡ್ಡ ಸ್ಟಾರ್ ಆಗುತ್ತಿದ್ದಳು: ಸೃಜನ್ ಲೋಕೇಶ್ ಭಾವುಕ
-

ಕಣ್ಣೀರು ತರಿಸುವಂತಿದೆ ಸಮನ್ವಿ ತಾಯಿ ಅಮೃತಾ ನಾಯ್ಡು ಮನವಿ
ಬೆಂಗಳೂರು: ಕಳೆದ ಗುರುವಾರ ನಟಿ ಅಮೃತಾ ನಾಯ್ಡು ಅವರು ಅಪಘಾತದಲ್ಲಿ ತಮ್ಮ ಮಗಳನ್ನು ಕಳೆದುಕೊಂಡಿದ್ದಾರೆ. ಇದೀಗ ಈ ದುಃಖದ ನಡುವೆಯೇ ಅಮೃತಾ ಅವರು ಮನವಿ ಮಾಡಿಕೊಂಡಿದ್ದಾರೆ.
ಹೌದು. ಅಮೃತಾ ನಾಯ್ಡು ಅವರ ಮನವಿ ಕೇಳಿದರೆ ಎಂಥವರ ಕರುಳು ಕೂಡ ಚುರುಕ್ ಅನ್ನಿಸುವಂತಿದೆ. ಮಗಳ ಕಳೆದುಕೊಂಡ ಬಳಿಕ ಮೊದಲ ಬಾರಿಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ಹಾಕಿದ್ದಾರೆ. ಇದರಲ್ಲಿ ನನ್ನ ಆಸೆ ಈಡೇರಿಸಿ ಎಂದು ಅಂಗಲಾಚಿಕೊಂಡಿರುವುದು ಕಣ್ಣೀರು ತರಿಸುವಂತಿದೆ.

ಪೋಸ್ಟ್ ನಲ್ಲೇನಿದೆ..?
ದೇವರ ಪ್ರತಿರೂಪವಾಗಿ ಕಾಣುತ್ತಿರುವ ನಿಮ್ಮೆಲ್ಲರಲ್ಲಿ ನನ್ನದೊಂದು ಪ್ರಾರ್ಥನೆ. ನಾನು ಈಗ 4 ತಿಂಗಳ ಗರ್ಭಿಣಿ. ಮತ್ತೆ ನನ್ನ ಮುದ್ದು ಕಂದಮ್ಮ ಸಮನ್ವಿಯ ಬರುವಿಕೆಗಾಗಿ ಈ ತಾಯಿ ಜೀವ ಹಂಬಲಿಸುತ್ತಿದೆ. ದಯಮಾಡಿ ನನಗೊಂದು ಸಹಾಯ ಮಾಡಿ. ಆ ಭಗವಂತನಲ್ಲಿ ಪ್ರಾರ್ಥಿಸಿ, ನಿಮ್ಮೆಲ್ಲರ ಪ್ರಾರ್ಥನೆಯ ಒತ್ತಾಯದಿಂದಾರೂ ನನ್ನ ಕಂದಮ್ಮನನ್ನು ಆ ಭಗವಂತ ಮರಳಿ ಕಳಿಸಿಬಿಡಲಿ. ಅವಳನ್ನು ನನ್ನ ಗರ್ಭದಲ್ಲಿ ಜೋಪಾನ ಮಾಡಿಕೊಳ್ಳುತ್ತೇನೆ. ದಯಮಾಡಿ ಈ ತಾಯಿ ಕರೆಗೆ ಕೈಜೋಡಿಸಿ, ನನ್ನ ಸಮನ್ವಿಯ ಪುನಃ ಬರುವಿಕೆಗಾಗಿ ಸಹಾಯ ಮಾಡಿ, ಪ್ರಾರ್ಥಿಸಿ. ಅವಳೇ ಮತ್ತೆ ನನ್ನ ಮಗಳಾಗಿ ಬರಬೇಕು. ನಿಮ್ಮೆಲ್ಲರ ಪ್ರಾರ್ಥನೆಯಿಂದ ಇದು ಸಾಧ್ಯ. ಅವಳು ಮರಳಿ ಬರಲಿ ಎಂದು ದಯವಿಟ್ಟು ಎಲ್ಲರೂ ಪ್ರಾರ್ಥನೆ ಮಾಡಿ ಅಂತ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಇಂದು ಪುಟಾಣಿ ಸಮನ್ವಿಯ ಅಸ್ಥಿ ವಿಸರ್ಜನೆ
ಗುರುವಾರ ಕೋಣನ ಕುಂಟೆ ಬಳಿ ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ನಡೆಯಿತು. ಈ ಅವಘಡದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ಮೃತಪಟ್ಟಿದ್ದಾಳೆ. ತಾಯಿ ಅಮೃತಾ ನಾಯ್ಡು ಸಣ್ಣ-ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದರು. ಶನಿವಾರ ಬನಶಂಕರಿ ಚಿತಾಗಾರದಲ್ಲಿ ಸಮನ್ವಿ ಅಂತ್ಯಕ್ರಿಯೆ ನಡೆಯಿತು. ಈ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.

ಇಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಪಶ್ಚಿಮ ವಾಹಿನಿಯಲ್ಲಿ ಅಸ್ಥಿವಿಸರ್ಜನೆ ನಡೆಯಿತು. ಕಾವೇರಿ ನದಿಯಲ್ಲಿ ಸಮನ್ವಿ ತಂದೆ ರೂಪೇಶ್ ನಾಯ್ಡು ವಿಧಿವಿಧಾನಗಳನ್ನು ಪೂರೈಸಿದರು. ವೈದಿಕ ಭಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ ನಡೆದ ಕೈಂಕರ್ಯ ನಡೆಯಿತು. ತಿರ ತರ್ಪಣ, ನಾರಾಯಣ ಬಲಿ, ಪಿಂಡ ಪ್ರದಾನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನಡಯಿತು. ಅಂತಿಮ ವಿಧಿ-ವಿಧಾನ ಕಾರ್ಯದಲ್ಲಿ ಸಮನ್ವಿ ತಾತ ನಾರಾಯಣಸ್ವಾಮಿ, ಕಾಳಿ ಮಠದ ರಿಷಿಕುಮಾರ ಸ್ವಾಮೀಜಿ ಭಾಗಿಯಾಗಿದ್ದರು.
-

ಇಂದು ಪುಟಾಣಿ ಸಮನ್ವಿಯ ಅಸ್ಥಿ ವಿಸರ್ಜನೆ
ಮಂಡ್ಯ: ನಾಲ್ಕು ದಿನಗಳ ಹಿಂದೆ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಪುಟಾಣಿ ಸಮನ್ವಿಯ ಅಸ್ಥಿ ವಿಸರ್ಜನೆ ಕಾರ್ಯ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಶ್ಚಿಮ ವಾಹಿನಿಯಲ್ಲಿ ನಡೆಯಿತು.

ಕಾವೇರಿ ನದಿಯಲ್ಲಿ ಸಮನ್ವಿ ತಂದೆ ರೂಪೇಶ್ ನಾಯ್ಡು ವಿಧಿವಿಧಾನಗಳನ್ನು ಪೂರೈಸಿದರು. ವೈದಿಕ ಭಾನುಪ್ರಕಾಶ ಶರ್ಮಾ ನೇತೃತ್ವದಲ್ಲಿ ನಡೆದ ಕೈಂಕರ್ಯ ನಡೆಯಿತು. ಇದನ್ನೂ ಓದಿ: ಪಂಚಭೂತಗಳಲ್ಲಿ ಲೀನವಾದ ಚಿನಕುರಳಿ ಸಮನ್ವಿ- ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ತಿರ ತರ್ಪಣ, ನಾರಾಯಣ ಬಲಿ, ಪಿಂಡ ಪ್ರದಾನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನಡಯಿತು. ಅಂತಿಮ ವಿಧಿ-ವಿಧಾನ ಕಾರ್ಯದಲ್ಲಿ ಸಮನ್ವಿ ತಾತ ನಾರಾಯಣಸ್ವಾಮಿ, ಕಾಳಿ ಮಠದ ರಿಷಿಕುಮಾರ ಸ್ವಾಮೀಜಿ ಭಾಗಿಯಾಗಿದ್ದರು.

ಗುರುವಾರ ಕೋಣನ ಕುಂಟೆ ಬಳಿ ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನಗಳ ನಡುವೆ ಭೀಕರ ಅಪಘಾತ ನಡೆಯಿತು. ಈ ಅವಘಡದಲ್ಲಿ ಸಮನ್ವಿ ಮೃತಪಟ್ಟಿದ್ದಾಳೆ. ತಾಯಿ ಅಮೃತಾ ನಾಯ್ಡು ಸಣ್ಣ-ಪುಟ್ಟ ಗಾಯಗಳಿಂದ ಬಚಾವ್ ಆಗಿದ್ದರು.
-

ಪಂಚಭೂತಗಳಲ್ಲಿ ಲೀನವಾದ ಚಿನಕುರಳಿ ಸಮನ್ವಿ- ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
ಬೆಂಗಳೂರು: ಖಾಸಗಿ ಚಾನೆಲ್ ರಿಯಾಲಿಟಿ ಶೋ ‘ನನ್ನಮ್ಮ ಸೂಪರ್ ಸ್ಟಾರ್’ ಖ್ಯಾತಿಯ ಸಮನ್ವಿ ಅಂತ್ಯಕ್ರಿಯೆ ಇಂದು ಬನಶಂಕರಿ ಚಿತಾಗಾರದಲ್ಲಿ ನೆರವೇರಿದೆ.

ಇಂದು ಬೆಳಗ್ಗೆ ಕಿಮ್ಸ್ ಆಸ್ಪತ್ರೆಯಿಂದ ಸಮನ್ವಿ ಮೃತದೇಹವನ್ನು ಲಿಬರ್ಟಿ ಅಪಾರ್ಟ್ ಮೆಂಟ್ ಗೆ ತರಲಾಗಿತ್ತು. ಆದರೆ ಲಿಬರ್ಟ್ ಅಪಾರ್ಟ್ ಮೆಂಟ್ ನಲ್ಲಿ 20 ಮಂದಿಗೆ ಕೊರೊನಾ ಪಾಸಿಟಿವ್ ಹಿನ್ನೆಲೆಯಲ್ಲಿ ಅಪಾರ್ಟ್ ಮೆಂಟ್ ಒಳಗೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಹೇರಲಾಗಿತ್ತು. ಹೀಗಾಗಿ ಅಪಾರ್ಟ್ ಮೆಂಟ್ ಪ್ರವೇಶ ದ್ವಾರದ ಬಳಿಯೇ ಸಮನ್ವಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇದನ್ನೂ ಓದಿ: ಹೊಟ್ಟೆಗೆ ಗಾಯ, ತೀವ್ರ ರಕ್ತಸ್ರಾವದಿಂದ ಸಮನ್ವಿ ಸಾವು: ಡಿಸಿಪಿ ಕುಲದೀಪ್ ಜೈನ್

ಮಧ್ಯಾಹ್ನ 1 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿ ನಂತರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಸಿನಿಮಾ ಹಾಗೂ ಧಾರವಾಹಿ ಕಲಾವಿದರು ಅಂತಿಮ ದರ್ಶನ ಪಡೆದು ಕಣ್ಣೀರಾಕಿದ್ದಾರೆ. ಇತ್ತ ಸಮನ್ವಿ ಪೋಷಕರು ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ಇದನ್ನೂ ಓದಿ: ನಿನ್ನನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ : ಬಿಕ್ಕಿ ಬಿಕ್ಕಿ ಅತ್ತ ತಂದೆ ರೂಪೇಶ್

ತಂದೆ ರೂಪೇಶ್ ಮಗಳ ಅಂತ್ಯಕ್ರಿಯೆ ನೆರವೇರಿಸಿದರು. ಇನ್ನು ಅಂತಿಮ ವಿಧಿ ವಿಧಾನಗಳನ್ನ ನೆರವೇರಿಸಿದ ಬಳಿಕ ಮಾತನಾಡಿದ ಕಾಳಿಸ್ವಾಮಿ, ಮಗು ಸಮನ್ವಿಗೆ ಬಲಿಜ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ಮಾಡಿದ್ದೇವೆ. ಮಗು ಆಗಿರೋದ್ರಿಂದ ಪೂರ್ಣ ಪ್ರಮಾಣದಲ್ಲಿ ಆ ಥರ ಮಾಡೋಕೆ ಆಗ್ಲಿಲ್ಲ. ಅಪಘಾತದ ನಿಧನ ಆಗಿರೋದ್ರಿಂದ ಕೆಲವು ಶಾಸ್ತ್ರ ಮಾಡಿದೆವು. ಮೂರನೇ ದಿನಕ್ಕೆ ಶ್ರೀರಂಗಪಟ್ಟಣದಲ್ಲಿ ನಾರಾಯಣ ಬಲಿಹೋಮ ಮಾಡುತ್ತೇವೆ. ತಾಯಿ ಗರ್ಭಿಣಿ ಹೀಗಾಗಿ ಶಾಂತಿ ಮಾಡಬೇಕು. ಅಮೃತಾ ತಾಯಿ ಶೋಭಾ ನಾಯ್ಡು ಸಾಕು ಮಗ ನಾನು. ಇಡೀ ಕುಟುಂಬ ಹರಿಕಥೆಯಲ್ಲಿ ದೊಡ್ಡ ಹೆಸರು. ಅಮೃತಾ ನನಗೆ ಸಹೋದರಿ ಸಮಾನ ಎಂದರು. ಇದನ್ನೂ ಓದಿ: ಸಮನ್ವಿ ಮುಂದೆ ದೊಡ್ಡ ಸ್ಟಾರ್ ಆಗುತ್ತಿದ್ದಳು: ಸೃಜನ್ ಲೋಕೇಶ್ ಭಾವುಕ

ನಮ್ಮಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಆಗಿದ್ದ ಪುಟಾಣಿ ಸಮನ್ವಿ ಇನ್ನಿಲ್ಲ. 6 ವರ್ಷದ ಪುಟ್ಟ ಬಾಲಕಿ ನಿನ್ನೆ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾಳೆ. ಬೆಂಗಳೂರಿನ ಕೋಣನಕುಂಟೆಯಲ್ಲಿ ತಾಯಿ, ಕಿರುತರೆ ನಟಿ ಅಮೃತಾ ನಾಯ್ಡು ಮತ್ತು ಮಗಳು ಅಮನ್ವಿ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಆಗ ಟಿಪ್ಪರ್ ಡಿಕ್ಕಿ ಹೊಡದು ಸ್ಕೂಟಿಯಿಂದ ಇಬ್ಬರೂ ಬಿದ್ದರು. ಟಿಪ್ಪರ್ ಲಾರಿಯ ಮಡ್ಗಾರ್ಡ್ ಸಮನ್ವಿಗೆ ಗುದ್ದಿದೆ. ಹೀಗಾಗಿ ಹೊಟ್ಟೆ ಭಾಗದಲ್ಲಿ ರಕ್ತಸ್ರಾವ ಆಗಿ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾಳೆ. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು
-

ಹೊಟ್ಟೆಗೆ ಗಾಯ, ತೀವ್ರ ರಕ್ತಸ್ರಾವದಿಂದ ಸಮನ್ವಿ ಸಾವು: ಡಿಸಿಪಿ ಕುಲದೀಪ್ ಜೈನ್
ಬೆಂಗಳೂರು: ಗುರುವಾರ ನಡೆದ ದುರ್ಘಟನೆಯಲ್ಲಿ ಟಿಪ್ಪರ್‌ನ ಮಡ್‌ಗಾರ್ಡ್ ಬಾಲಕಿ ಸಮನ್ವಿಯ ಹೊಟ್ಟೆಗೆ ತಾಗಿದ್ದರಿಂದ ತೀವ್ರವಾದ ಗಾಯವಾಗಿದೆ. ಇದರಿಂದ ಹೆಚ್ಚಿನ ರಕ್ತಸ್ರಾವವಾಗಿದ್ದು, ಆಸ್ಪತ್ರೆಗೆ ಸಾಗಿಸುವ ವೇಳೆ ಮಗು ಸಾವನ್ನಪ್ಪಿದೆ ಎಂದು ಪಶ್ಚಿಮ ವಿಭಾಗದ ಸಂಚಾರಿ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಹೇಳಿದ್ದಾರೆ.
ಗುರುವಾರ ಸಂಜೆ ಕೋಣನಕುಂಟೆ ಕ್ರಾಸ್ ಬಳಿ ತಾಯಿ-ಮಗಳು ಸ್ಕೂಟಿಯಲ್ಲಿ ಹೋಗುತ್ತಿದ್ದಾಗ ಟಿಪ್ಪರ್ ಸ್ಕೂಟಿಗೆ ಡಿಕ್ಕಿಯಾಗಿದೆ. ಈ ವೇಳೆ ಸ್ಕೂಟಿಯಲ್ಲಿದ್ದ ಮಗು-ತಾಯಿ ಇಬ್ಬರು ಬಿದ್ದಿದ್ದರಿಂದ ಅಫಘಾತವಾಗಿದೆ. ತನಿಖೆಯಲ್ಲಿ ಟಿಪ್ಪರ್ ಚಾಲಕನ ನಿರ್ಲಕ್ಷ್ಯ ಇರುವುದು ತಿಳಿದುಬಂದಿದ್ದು, ಟಿಪ್ಪರ್ ಗಾಡಿ ಮತ್ತು ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದರು. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು

ಮಗು ರಿಯಾಲಿಟಿ ಶೋ ಒಂದರಲ್ಲಿ ಗುರುತಿಸಿಕೊಂಡಿದ್ದು, ಅವರ ತಂದೆ ಕೂಡಾ ಟ್ರಾಫಿಕ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ನಮಗೂ ಈ ಘಟನೆ ನೋವು ತಂದಿದೆ ಎಂದು ಡಿಸಿಪಿ ಕುಲದೀಪ್ ಜೈನ್ ಕಂಬನಿ ಮಿಡಿದಿದ್ದಾರೆ. ಇದನ್ನೂ ಓದಿ: ನಿನ್ನನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ : ಬಿಕ್ಕಿ ಬಿಕ್ಕಿ ಅತ್ತ ತಂದೆ ರೂಪೇಶ್
-

ನಿನ್ನನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ : ಬಿಕ್ಕಿ ಬಿಕ್ಕಿ ಅತ್ತ ತಂದೆ ರೂಪೇಶ್
ಬೆಂಗಳೂರು: ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ರಸ್ತೆ ಅಪಘಾತದಲ್ಲಿ ಗುರುವಾರ ಕೊನೆಯುಸಿರೆಳೆದಿದ್ದು, ಇಂದು ತಂದೆ ರೂಪೇಶ್ ಕಿಮ್ಸ್ ಆಸ್ಪತ್ರೆಯ ಬಳಿ ಗೋಗರೆದಿದ್ದಾರೆ. ಸಮನ್ವಿಯ ಮೃತ ದೇಹವನ್ನು ಬಾಚಿ ತಬ್ಬಿ ಐ ಆಮ್ ವೆರಿ ಸಾರಿ, ನಿನ್ನನ್ನ ಉಳಿಸಿಕೊಳ್ಳೋಕೆ ಆಗಲಿಲ್ಲ ಎಂದು ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಈಚೆ ಮಗಳನ್ನು ಕಳೆದುಕೊಂಡಿರುವ ದುಃಖದಲ್ಲಿ ತಾಯಿ ಅಮೃತಾ ನಾಯ್ಡು ನಿತ್ರಾಣ ಸ್ಥಿತಿಗೆ ಜಾರಿದ್ದಾರೆ. ಬಿಗ್ ಬಾಸ್ ಹಾಗೂ ಕೆಲ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದ ಋಷಿಕುಮಾರ್ ಅಲಿಯಾಸ್ ಕಾಳಿ ಸ್ವಾಮಿ ಸಮನ್ವಿ ಅಂತಿಮ ದರ್ಶನ ಪಡೆಯಲು ಬಂದಿದ್ದು, ಅಮೃತಾಗೆ ಸಾಂತ್ವಾನ ಹೇಳಿದ್ದಾರೆ. ಇದನ್ನೂ ಓದಿ: ಲಾರಿ ಚಾಲಕನ ಅಜಾಗರೂಕತೆಯಿಂದಲೇ ಸಮನ್ವಿ ಸಾವು

ಮಗು ಚೂಟಿಯಾಗಿತ್ತು:
ನಾವು ಮಗುವನ್ನು ಟಿವಿಯಲ್ಲಿ ನೋಡುತ್ತಿದ್ದೆವು. ತುಂಬಾ ಇಷ್ಟ ಪಡುತ್ತಿದ್ದೆವು. ಮಗು ಚೂಟಿಯಾಗಿತ್ತು. ಶೋ ಅಲ್ಲಿ ಕೂಡ ಚೂಟಿ ಆಗಿದ್ಲು. ಆದರೆ ಯಾಕೆ ಹೀಗಾಯ್ತು! ನಾವು ಟಿವಿಯಲ್ಲಿ ನೋಡುತ್ತಿದ್ದ ಮಗು ಇನ್ಮೇಲೆ ಇಲ್ಲ ಅನ್ನೋ ನೋವನ್ನು ತಡೆದುಕೊಳ್ಳೋಕೆ ಆಗುತ್ತಿಲ್ಲ ಎಂದು ಸಮನ್ವಿ ಅಂತಿಮ ದರ್ಶನಕ್ಕೆ ಬಂದಿದ್ದ ಅಭಿಮಾನಿ ಲಕ್ಷ್ಮಮ್ಮ ಹೇಳಿಕೆ ನೀಡಿದರು. ಇದನ್ನೂ ಓದಿ: ರಸ್ತೆ ಅಪಘಾತದಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಖ್ಯಾತಿಯ ಸಮನ್ವಿ ದಾರುಣ ಸಾವುಸಮನ್ವಿ ಅಂತಿಮ ದರ್ಶನಕ್ಕೆ ಲಿಬರ್ಟಿ ಅಪಾರ್ಟ್ಮೆಂಟ್‌ನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಅಪಾರ್ಟ್ಮೆಂಟ್‌ನಲ್ಲಿ 20 ಮಂದಿಗೆ ಕೋವಿಡ್ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅಪಾರ್ಟ್ಮೆಂಟ್‌ನ ಪ್ರವೇಶದ್ವಾರದಲ್ಲಿ ಮಧ್ಯಾಹ್ನ 1 ಗಂಟೆಯ ವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆಯಿದ್ದು, ಸಂಬಂಧಿಕರು ಹಾಗೂ ಸಿನಿಮಾ – ಸೀರಿಯಲ್ ಕಲಾವಿದರು ಅಂತಿಮ ದರ್ಶನ ಪಡೆಯಲಿದ್ದಾರೆ. ಮಧ್ಯಾಹ್ನದ ಬಳಿಕ ಸಮನ್ವಿ ಅಂತ್ಯ ಸಂಸ್ಕಾರ ನಡೆಯಲಿದೆ. ಇದನ್ನೂ ಓದಿ: ನಟಿ ಅಮೃತಾ ನಾಯ್ಡು ಬಾಳಲ್ಲಿ ಪದೇ ಪದೇ ವಿಧಿಯಾಟ
