Tag: Samajwadi Party

  • ರಾಷ್ಟ್ರಪತಿಯಲ್ಲ, ಪಿಎಂ ಆಗೋ ಕನಸಿದೆ: ಎಸ್‌ಪಿಗೆ ಮಾಯಾವತಿ ಟಾಂಗ್‌

    ರಾಷ್ಟ್ರಪತಿಯಲ್ಲ, ಪಿಎಂ ಆಗೋ ಕನಸಿದೆ: ಎಸ್‌ಪಿಗೆ ಮಾಯಾವತಿ ಟಾಂಗ್‌

    ಲಕ್ನೋ: ರಾಷ್ಟ್ರಪತಿಯಲ್ಲ, ದೇಶದ ಪ್ರಧಾನ ಮಂತ್ರಿಯಾಗುವ ಕನಸಿದೆ ಎನ್ನುವ ಮೂಲಕ ಸಮಾಜವಾದಿ ಪಕ್ಷಕ್ಕೆ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಟಾಂಗ್‌ ಕೊಟ್ಟಿದ್ದಾರೆ.

    ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ರಾಷ್ಟ್ರಪತಿಯಾಗಲು ಬಯಸುತ್ತಿದ್ದೇನೆ ಎಂದು ಸಮಾಜವಾದಿ ಪಕ್ಷ (ಎಸ್‌ಪಿ) ವದಂತಿ ಹಬ್ಬಿಸುತ್ತಿದೆ. ಆದರೆ ರಾಷ್ಟ್ರಪತಿಯಲ್ಲ, ಉತ್ತರ ಪ್ರದೇಶದಲ್ಲಿ ಮತ್ತೆ ಸಿಎಂ ಆಗುವ ಇಲ್ಲವೇ ಪ್ರಧಾನಿಯಾಗುವ ಕನಸು ಹೊಂದಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ನಾಚಿಕೆಯಾಗಬೇಕು: ಮುಖ್ಯಮಂತ್ರಿಗಳ ವಾಗ್ದಾಳಿ

    ಸಮಾಜವಾದಿ ಪಕ್ಷವು ನನ್ನನ್ನು ರಾಷ್ಟ್ರಪತಿಯಾಗಿಸುವ ಕನಸು ಬಿಡಬೇಕು. ನನಗೆ ನೆಮ್ಮದಿಯ ಜೀವನ ಬೇಡ ಬದಲಿಗೆ ಹೋರಾಟದ ಬದುಕು ಬೇಕು ಎಂದು ತಿಳಿಸಿದ್ದಾರೆ.

    ನಮ್ಮ ಅಧಿಕಾರಾವಧಿಯಲ್ಲಿ ನಿರ್ಮಿಸಲಾದ ಸ್ಮಾರಕಗಳನ್ನು ಎಸ್‌ಪಿ ಮತ್ತು ಬಿಜೆಪಿ ಎರಡೂ ಸರ್ಕಾರಗಳು ನಿರ್ಲಕ್ಷಿಸಿವೆ. ಈ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆಯಲು ಮಿಶ್ರಾ ನೇತೃತ್ವದ ಬಿಎಸ್‌ಪಿ ನಿಯೋಗ ಯೋಗಿ ಅವರನ್ನು ಭೇಟಿ ಮಾಡಲು ತೆರಳಿತ್ತು ಎಂದು ಬಿಜೆಪಿ ಮತ್ತು ಬಿಎಸ್‌ಪಿ ಮೈತ್ರಿ ಆರೋಪಗಳನ್ನು ಅಲ್ಲಗಳೆದಿದ್ದಾರೆ. ಇದನ್ನೂ ಓದಿ: ಸೂರ್ಯನ ಕೆಂಗಣ್ಣು – ದೆಹಲಿಯಲ್ಲಿ ದಾಖಲೆ ಪ್ರಮಾಣದ ತಾಪಮಾನ ದಾಖಲು

    ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಸಮಾಜವಾದಿ ಪಕ್ಷವೇ ಹೊಣೆ. ಮುಸ್ಲಿಮರು ಮತ್ತು ಇತರರ ಮೇಲೆ ನಡೆಯುತ್ತಿರುವ ಎಲ್ಲಾ ದೌರ್ಜನ್ಯಗಳಿಗೆ ಎಸ್‌ಪಿಯೇ ಹೊಣೆ ಎಂದು ಆರೋಪಿಸಿದ್ದಾರೆ.

    ಈಚೆಗೆ ನಡೆದ ವಿಧಾನಸಭಾ ಚುನಾವಣೆಯ ವೇಳೆ ಬಿಎಸ್‌ಪಿ ತನ್ನ ಮತದಾರರನ್ನು ಬಿಜೆಪಿಗೆ ವರ್ಗಾಯಿಸಿದೆ. ಯುಪಿ ಚುನಾವಣೆಗೆ ಹಿಂದೂ-ಮುಸ್ಲಿಂ ಎಂದು ವಿಭಜಿಸಲು ಬಿಜೆಪಿ ಜೊತೆ ಕೈಜೋಡಿಸಿದೆ ಎಂದು ಎಂದು ಅಖಿಲೇಶ್ ಯಾದವ್ ಆರೋಪಿಸಿದ್ದರು. ಇದನ್ನೂ ಓದಿ: 10,900 ಅಕ್ರಮ ಧ್ವನಿವರ್ಧಕಗಳ ತೆರವು

  • ಮುಸ್ಲಿಮರು ಬಿಜೆಪಿ ವಿರೋಧಿಸುವುದನ್ನು ನಿಲ್ಲಿಸಬೇಕು: ಮುಸ್ಲಿಂ ಧರ್ಮಗುರು ಸಲಹೆ

    ಮುಸ್ಲಿಮರು ಬಿಜೆಪಿ ವಿರೋಧಿಸುವುದನ್ನು ನಿಲ್ಲಿಸಬೇಕು: ಮುಸ್ಲಿಂ ಧರ್ಮಗುರು ಸಲಹೆ

    ಲಕ್ನೋ: ಬಿಜೆಪಿ ವಿರೋಧಿಸುವುದನ್ನು ಮುಸ್ಲಿಮರು ನಿಲ್ಲಿಸಬೇಕು ಅಖಿಲ ಭಾರತ ತಂಝೀಮ್ ಉಲೇಮಾ-ಎ-ಇಸ್ಲಾಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಶಹಾಬುದ್ದೀನ್ ರಿಜ್ವಿ ಅವರು ಕರೆ ನೀಡಿದ್ದಾರೆ.

    ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದವರು ಸಮಾಜವಾದಿ ಪಕ್ಷಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು. ಇತರ ಪರ್ಯಾಯಗಳನ್ನು ಅನ್ವೇಷಿಸಿ ಮತ್ತು ಬಿಜೆಪಿ ವಿರೋಧಿ ಟ್ಯಾಗ್ ಅನ್ನು ಕೈಬಿಡಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪಂಜಾಬ್‍ ಮಾಜಿ ಸಿಎಂ ಚರಂಜಿತ್ ಸಿಂಗ್ ಚನ್ನಿಗೆ ಇಡಿ ಸಂಕಷ್ಟ

    ರಾಜ್ಯದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ಇತ್ತೀಚೆಗಷ್ಟೇ ಮುಗಿದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ನೀಡದೆ ಮುಸ್ಲಿಂ ಸಮುದಾಯದ ಹಿರಿಯ ನಾಯಕರನ್ನು ನಿರ್ಲಕ್ಷಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಉತ್ತರ ಪ್ರದೇಶದಲ್ಲಿ ಮುಂಚೂಣಿಗೆ ಬಂದಿರುವ ಹೊಸ ಸನ್ನಿವೇಶಗಳ ಆಧಾರದ ಮೇಲೆ, ಮುಸ್ಲಿಂ ಸಮುದಾಯವು ಸಮಾಜವಾದಿ ಪಕ್ಷವನ್ನು ಬೆಂಬಲಿಸುವುದನ್ನು ನಿಲ್ಲಿಸಬೇಕು. ಅಖಿಲೇಶ್ ಯಾದವ್, ಮುಸ್ಲಿಮರನ್ನು ನಿರ್ಲಕ್ಷಿಸುತ್ತಿರುವುದರಿಂದ ಪರ್ಯಾಯಗಳ ಬಗ್ಗೆ ಯೋಚಿಸಬೇಕು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈ ಬಾರಿ ಮಾನ್ಸೂನ್‍ನಲ್ಲಿ ಭಾರತದ ಬಹುತೇಕ ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದೆ – IMD

    ಸಮಾಜವಾದಿ ಪಕ್ಷವು ಹಿರಿಯ ಮುಸ್ಲಿಂ ನಾಯಕರಿಗೆ ಪಕ್ಷದ ಟಿಕೆಟ್ ನೀಡಲಿಲ್ಲ. ಮುಲಾಯಂ ಸಿಂಗ್ ಯಾದವ್ ಅವರು ಮುಸ್ಲಿಮರ ಹಿತೈಷಿಯಾಗಿದ್ದರು. ಆದರೆ ಈಗ ಅಖಿಲೇಶ್ ಯಾದವ್ ನೇತೃತ್ವದಲ್ಲಿ ಎಸ್‌ಪಿ ನಮ್ಮ ಹಿತೈಷಿ ಅಲ್ಲ ಎಂದು ರಿಜ್ವಿ ಹೇಳಿದ್ದಾರೆ.

    ಈಗ ಮುಸ್ಲಿಮರು ಮುಸ್ಲಿಮರ ವಿರುದ್ಧವೇ ತಿರುಗಿದ್ದಾರೆ. ಹಿಂದೂಗಳು ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಮಾತನಾಡುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ನಂತರ ಮುಸ್ಲಿಮರ ವಿರುದ್ಧ ಮುಸ್ಲಿಮರು ತಿರುಗಿ ಬಿದ್ದಿರುವುದು ಕಂಡು ಬರುತ್ತಿದೆ. ಒಬ್ಬ ಮುಸ್ಲಿಂ ಬಿಜೆಪಿ ಧ್ವಜ ಇಟ್ಟುಕೊಂಡರೆ, ಮತ್ತೊಬ್ಬ ಮುಸ್ಲಿಂ ವಿರೋಧಿಸುತ್ತಾನೆ. ಇದು ಒಂದೆರಡು ಕೊಲೆಗಳಿಗೂ ಕಾರಣವಾಗಿದೆ. ಮತ್ತೊಂದೆಡೆ ಹಿಂದೂಗಳು ಮುಸ್ಲಿಮರ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರಧಾನಮಂತ್ರಿಗಳ ಮ್ಯೂಸಿಯಂ ಉದ್ಘಾಟನೆ: ವಿಶೇಷತೆ ಏನು? ಟಿಕೆಟ್‌ ದರ ಎಷ್ಟು?

    ಎರಡು ಸಮುದಾಯಗಳ ನಡುವೆ ದ್ವೇಷ ಹೆಚ್ಚುತ್ತಿದೆ. ನಾನು ಈ ದ್ವೇಷವನ್ನು ಕೊನೆಗೊಳಿಸಬೇಕು ಎಂದು ಬಯಸುತ್ತೇನೆ. ಪರಸ್ಪರರ ವಿರುದ್ಧ ಹೋರಾಡುತ್ತಿರುವ ಮುಸ್ಲಿಮರು ಇದನ್ನು ನಿಲ್ಲಿಸಬೇಕು. ಅದಕ್ಕೆ ಪರಿಣಾಮಕಾರಿ ಮಾರ್ಗವೆಂದರೆ ಮುಸ್ಲಿಮರು ಬಿಜೆಪಿಯನ್ನು ವಿರೋಧಿಸುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.

  • ಸಮಾಜವಾದಿ ಟೋಪಿ ಬಗ್ಗೆ ಟೀಕಿಸಿದವರೇ ಟೋಪಿ ಧರಿಸಿದ್ದಾರೆ: ಅಖಿಲೇಶ್ ಯಾದವ್

    ಸಮಾಜವಾದಿ ಟೋಪಿ ಬಗ್ಗೆ ಟೀಕಿಸಿದವರೇ ಟೋಪಿ ಧರಿಸಿದ್ದಾರೆ: ಅಖಿಲೇಶ್ ಯಾದವ್

    ಲಕ್ನೋ: ಸಮಾಜವಾದಿ ಟೋಪಿ ವಿಚಾರವಾಗಿ ಟೀಕಿಸಿದವರೇ ಇಂದು ಟೋಪಿ ಧರಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ.

    ಬುಧವಾರ 42ನೇ ಸಂಸ್ಥಾಪನಾ ದಿನದಂದು ಬಿಜೆಪಿ ನಾಯಕರು ಮತ್ತು ನರೇಂದ್ರ ಮೋದಿ ಅವರು ಕ್ಯಾಪ್ ಧರಿಸಿದ್ದರು. ಇನ್ನೂ ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ಸಮಾಜವಾದಿ ಪಕ್ಷದ ವಿರುದ್ಧ ಕಾಮೆಂಟ್ ಮಾಡುತ್ತಿದ್ದ ಮೋದಿ ಹಾಗೂ ಬಿಜೆಪಿ ಅವರೇ ಇಂದು ಕೆಂಪು ಟೋಪಿ ಹಾಕಿಕೊಂಡು ಕುಳಿತುಕೊಂಡಿದ್ದಾರೆ ಎಂದು ಅಖಿಲೇಶ್ ಯಾದವ್ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ. ಇದನ್ನೂ ಓದಿ: ಗರ್ಲ್‍ಫ್ರೆಂಡ್, ಮಾಜಿ ಪತ್ನಿ ಜೊತೆ ಗೋವಾದಲ್ಲಿ ಪಾರ್ಟಿ ಮಾಡಿದ ಹೃತಿಕ್ ರೋಷನ್

    MODi

    ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆ ವೇಳೆ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷದ ಸದಸ್ಯರು ರೆಡ್ ಕ್ಯಾಪ್ ಧರಿಸಿದ್ದರು. ಈ ವಿಚಾರ ತೀವ್ರ ಟೀಕೆಗೆ ಒಳಗಾಗಿತ್ತು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಇದಕ್ಕೆ ರೆಡ್ ಅಲರ್ಟ್ ಎಂದು ವ್ಯಂಗ್ಯವಾಡಿದ್ದರು. ಇದನ್ನೂ ಓದಿ: ನಾನು ನಿಮ್ಮವಳು, ಕೆಟ್ಟದ್ದಾಗಿ ಮಾತನಾಡಬೇಡಿ ಎಂದ ರಾಶಿ ಖನ್ನಾ

    ಕೆಂಪು ಟೋಪಿ ಧರಿಸಿರುವವರು ವಂಚನೆಯನ್ನು ಮಾಡಲು, ತಮ್ಮ ಬೊಕ್ಕಸವನ್ನು ತುಂಬಲು, ಅಕ್ರಮವಾಗಿ ಸಂಪನ್ಮೂಲವನ್ನು ದೋಚುವ ಮತ್ತು ಮಾಫಿಯಾಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲು ಅಧಿಕಾರವನ್ನು ಬಯಸುತ್ತಾರೆ ಎಂದು ಸಮಾಜವಾದಿ ಪಕ್ಷದ ನರೇಂದ್ರ ಮೋದಿ ಅವರು ಆರೋಪಿಸಿದ್ದರು.

  • ಬುಲ್ಡೋಜರ್ ಜನರನ್ನು ಹತ್ತಿಕ್ಕಲು ಪ್ರಾರಂಭಿಸಿದೆ: ಅಖಿಲೇಶ್ ಯಾದವ್

    ಬುಲ್ಡೋಜರ್ ಜನರನ್ನು ಹತ್ತಿಕ್ಕಲು ಪ್ರಾರಂಭಿಸಿದೆ: ಅಖಿಲೇಶ್ ಯಾದವ್

    ಲಕ್ನೋ: ಬಿಜೆಪಿ ಆಡಳಿತದಲ್ಲಿ ಬುಲ್ಡೋಜರ್ ಜನರನ್ನು ಹತ್ತಿಕ್ಕಲು ಪ್ರಾರಂಭಿಸಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಬುಲ್ಡೋಜರ್‍ಗಳು ಜನರನ್ನು ತುಳಿಯಲು ಪ್ರಾರಂಭಿಸಿವೆ. ಹಣದುಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಜನರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಕಿಡಿಕಾರಿದರು.

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷವು ಜನರೊಂದಿಗೆ ಇಂತಹ ಕ್ರೂರವಾಗಿ ನಡೆಸಿಕೊಳ್ಳುತ್ತಿದೆ. ಇದು ಅಮಾನವೀಯ ಸಂಗತಿಯಾಗಿದೆ ಎಂದು ವಾಗ್ದಾಳಿ ನಡೆಸಿದ ಅವರು, ಅಚ್ಛೆ ದಿನಗಳನ್ನು ಜನರು ಅನುಭವಿಸಿದ ನಂತರ ಜನರು ಹಳೆಯ ದಿನಗಳನ್ನು ಹಂಬಲಿಸಲು ಪ್ರಾರಂಭಿಸಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಚಂಡೀಗಢವು ಜಂಟಿ ರಾಜಧಾನಿಯಾಗಿಯೇ ಉಳಿಯುತ್ತೆ: ಹರಿಯಾಣ ಸಿಎಂ

    ಟೋಲ್ ತೆರಿಗೆ ಕೂಡ ದುಬಾರಿಯಾಗಿದ್ದು, ಹೆದ್ದಾರಿಗಳಲ್ಲಿ ಪ್ರಯಾಣ ದುಬಾರಿಯಾಗಿದೆ ಎಂದ ಅವರು, ಬಿಜೆಪಿಯ ನೀತಿ ಹಾಗೂ ಉದ್ದೇಶದಲ್ಲಿ ಸಾರ್ವಜನಿಕ ಕಾಳಜಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಅದು ತನ್ನ ಬೊಕ್ಕಸವನ್ನು ತುಂಬಲು ಮಾತ್ರ ಆಸಕ್ತಿ ಹೊಂದಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಐಪಿಎಸ್ ಸೇವೆಗೆ ಭಾಸ್ಕರ್ ರಾವ್ ಗುಡ್ ಬೈ

  • ಎಂಟು ಬಾರಿ ಬಿಜೆಪಿ ಶಾಸಕ ಸತೀಶ್ ಮಹಾನಾ ಈಗ ಯುಪಿ ಸ್ಪೀಕರ್

    ಎಂಟು ಬಾರಿ ಬಿಜೆಪಿ ಶಾಸಕ ಸತೀಶ್ ಮಹಾನಾ ಈಗ ಯುಪಿ ಸ್ಪೀಕರ್

    ಲಕ್ನೋ: ಎಂಟು ಬಾರಿ ಬಿಜೆಪಿ ಶಾಸಕರಾಗಿದ್ದ ಸತೀಶ್ ಮಹಾನಾ ಅವರು ಮಂಗಳವಾರ ಉತ್ತರ ಪ್ರದೇಶ ವಿಧಾನಸಭೆಯ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಆಯ್ಕೆಯನ್ನು ಶ್ಲಾಘಿಸಿದರು. ಸದನದ ಕಾರ್ಯಚಟುವಟಿಕೆಗೆ ಸಕಾರಾತ್ಮಕವಾಗಿ ಕೊಡುಗೆ ನೀಡುವುದಾಗಿ ಭರವಸೆ ನೀಡಿದರು.

    ಮಹಾನಾ ಅವರನ್ನು ಸಭಾಧ್ಯಕ್ಷರ ಪೀಠಕ್ಕೆ ಕರೆದೊಯ್ದ ನಂತರ ವಿಧಾನಸಭೆಯಲ್ಲಿ ಮಾತನಾಡಿದ ಆದಿತ್ಯನಾಥ್, ಪ್ರಜಾಪ್ರಭುತ್ವದ ಎರಡು ಚಕ್ರಗಳು (ಆಡಳಿತ ಮತ್ತು ವಿರೋಧ) ಒಂದೇ ದಿಕ್ಕಿನಲ್ಲಿ ಚಲಿಸುತ್ತಿರುವುದು ರಾಜ್ಯಕ್ಕೆ ಉತ್ತಮ ಸಂಕೇತವಾಗಿದೆ ಎಂದು ಹೇಳಿದರು.

    ಚುನಾವಣೆ ಮುಗಿದಿದ್ದು, ಉತ್ತರ ಪ್ರದೇಶದ ಪ್ರಗತಿಗೆ ಶ್ರಮಿಸುವುದು ಅವರ ನಮ್ಮೆಲ್ಲರ ಕರ್ತವ್ಯ ಎಂದು ಅವರು ಸದನದ ಸದಸ್ಯರಿಗೆ ಮನವಿ ಮಾಡಿದರು. ಇದನ್ನೂ ಓದಿ: 5.21 ಲಕ್ಷ ಮನೆ ಉದ್ಘಾಟನೆ, ಬಡವರ ಸಬಲೀಕರಣಕ್ಕಾಗಿ ಬಿಜೆಪಿ ಕೆಲಸ: ಮೋದಿ

    ನಂತರ ಮಾತನಾಡಿದ ಯಾದವ್, ಸಭಾಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡುವ ಮೂಲಕ ಸದನದಲ್ಲಿ ಆರೋಗ್ಯಕರ ಸಂಪ್ರದಾಯದ ಆರಂಭ ಎಂದು ಶ್ಲಾಘಿಸಿದರು. ಸಭಾಪತಿಯಾಗಿ ತಟಸ್ಥತೆಯಿಂದ ವರ್ತಿಸಿ ಪ್ರತಿಪಕ್ಷಗಳ ಹಕ್ಕುಗಳನ್ನು ರಕ್ಷಿಸಬೇಕು ಎಂದು ಮಹಾನಾ ಅವರಿಗೆ ಒತ್ತಾಯಿಸಿದರು. ನೀವು ಮೂಲ ಬಿಜೆಪಿಯಿಂದ ಬಂದವರೂ ಈಗ ನೀವು ಎಡ ವಿರೋಧದ ಕಡೆಗೆ ಹೆಚ್ಚು ಗಮನಹರಿಸಬೇಕು. ಹೌಸ್‍ನ ರೆಫರಿಯಾಗಿರುವ ನೀವು ಬಿಜೆಪಿಯವರ ಆಟದ ಭಾಗವಾಗಬಾರದು. ಪ್ರತಿಪಕ್ಷಗಳ ಹಕ್ಕುಗಳನ್ನು ಕಾಪಾಡುವುದು ಮತ್ತು ಸರ್ಕಾರ ಸರ್ವಾಧಿಕಾರಿಯಾಗುವುದನ್ನು ತಡೆಯುವುದು ನಿಮ್ಮ ಕರ್ತವ್ಯ ಎಂದು ಯಾದವ್ ಹೇಳಿದರು.

    ಹಂಗಾಮಿ ಸ್ಪೀಕರ್ ರಮಾಪತಿ ಶಾಸ್ತ್ರಿ ಅವರು, ಇಂದು ಮಹಾನಾ ಅವರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ರಾಜ್ಯಪಾಲ ಆನಂದಿಬೆನ್ ಪಟೇಲ್ ಅವರು ಮಾರ್ಚ್ 29 ರಂದು ಸ್ಪೀಕರ್ ಆಯ್ಕೆಗೆ ದಿನಾಂಕ ನಿಗದಿಪಡಿಸಿದ್ದರು.

    ಮಹಾನಾ ಅವರ ನಾಮನಿರ್ದೇಶನವನ್ನು ಆದಿತ್ಯನಾಥ್ ಪ್ರಸ್ತಾಪಿಸಿದರು. ಹಿರಿಯ ಸಚಿವ ಸುರೇಶ್ ಖನ್ನಾ ಅವರು ಅನುಮೋದಿಸಿದರು. ಸಮಾಜವಾದಿ ಪಕ್ಷದ (ಎಸ್‍ಪಿ) ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಮಹಾನಾ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಅವರ ಪಕ್ಷದ ಅವಧೇಶ್ ಪ್ರಸಾದ್ ಕೂಡಾ ಇದಕ್ಕೆ ಬೆಂಬಲಿಸಿದ್ದರು.

    ಮಹಾನಾ ಅವರು ಕಾನ್ಪುರ ಜಿಲ್ಲೆಯ ಮಹಾರಾಜಪುರ ಕ್ಷೇತ್ರದಿಂದ ಎಂಟನೇ ಬಾರಿಗೆ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 14, 1960 ರಂದು ಕಾನ್ಪುರದಲ್ಲಿ ಜನಿಸಿದ ಅವರು 1991 ರಲ್ಲಿ ಮೊದಲ ಬಾರಿಗೆ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾದರು. ಬಿಎಸ್‍ಪಿ-ಬಿಜೆಪಿ ಮೈತ್ರಿಕೂಟದ ಮಾಯಾವತಿ ನೇತೃತ್ವದ ಸರ್ಕಾರದಲ್ಲಿ ನಗರಾಭಿವೃದ್ಧಿ ಖಾತೆ ರಾಜ್ಯ ಸಚಿವರಾಗಿದ್ದಲ್ಲದೆ, ಕಲ್ಯಾಣ್ ಸಿಂಗ್, ರಾಮ್ ಪ್ರಕಾಶ್ ಗುಪ್ತಾ ಮತ್ತು ರಾಜನಾಥ್ ಸಿಂಗ್ ನೇತೃತ್ವದ ಸರ್ಕಾರಗಳಲ್ಲಿ ಸಚಿವರೂ ಆಗಿದ್ದಾರೆ. ಇದನ್ನೂ ಓದಿ: ಪರವಾನಿಗೆ ಇಲ್ಲದೆ ಬಂದೂಕುಗಳನ್ನು ಹೊಂದಲು ಕೊಡವರಿಗೆ ಅವಕಾಶ- ರಾಜ್ಯಕ್ಕೆ ಸುಪ್ರೀಂ ನೋಟಿಸ್‌

    ಮಹಾನಾ ಹಿಂದಿನ ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಕೈಗಾರಿಕಾ ಅಭಿವೃದ್ಧಿ ಸಚಿವರಾಗಿದ್ದರು. ಉತ್ತರ ಪ್ರದೇಶ ವಿಧಾನಸಭೆಗೆ ಏಳು ಹಂತದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ 273 ಸ್ಥಾನಗಳನ್ನು ಗಳಿಸಿತ್ತು. ಎಸ್‍ಪಿ ನೇತೃತ್ವದ ಮೈತ್ರಿಕೂಟ 125 ಸ್ಥಾನಗಳನ್ನು ಗಳಿಸಿತ್ತು. ಕಾಂಗ್ರೆಸ್ ಮತ್ತು ಜನಸತ್ತಾದಳ ಲೋಕತಾಂತ್ರಿಕ್ ತಲಾ ಎರಡು ಸ್ಥಾನಗಳನ್ನು ಪಡೆದರೆ ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವು ಒಂದು ಸ್ಥಾನವನ್ನು ಪಡೆದುಕೊಂಡಿದೆ.

  • ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ – 29 ಮಂದಿ ಕಾರ್ಯಕರ್ತರ ವಿರುದ್ಧ ಪ್ರಕರಣ

    ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ – 29 ಮಂದಿ ಕಾರ್ಯಕರ್ತರ ವಿರುದ್ಧ ಪ್ರಕರಣ

    ಲಕ್ನೋ: ಯೋಗಿ ಆದಿತ್ಯನಾಥ್ (Yogi Adityanath) ವಿರುದ್ಧ ಅಸಭ್ಯ ಘೋಷಣೆಗಳನ್ನು ಕೂಗಲಾಗಿದ್ದು, ಈ ಆರೋಪದ ಮೇಲೆ ಸಮಾಜವಾದಿ ಪಕ್ಷದ (Samajwadi Party) ನಾಲ್ವರು ಕಾರ್ಯಕರ್ತರು ಸೇರಿ ಒಟ್ಟು 29 ಮಂದಿ ವಿರುದ್ಧ ಪೊಲೀಸರು (Police) ಪ್ರಕರಣ ದಾಖಲಿಸಿದ್ದಾರೆ.

    ಈ ಸಂಬಂಧ ಸ್ಥಳೀಯ ಬಿಜೆಪಿ (BJP) ಮುಖಂಡ ಶಶಿ ಚೌರಾಸಿಯಾ ಅವರು ದೂರು ದಾಖಲಿಸಿದ್ದಾರೆ. ಎಫ್‍ಐಆರ್‌ನಲ್ಲಿ ನಾಲ್ವರು ಎಸ್‍ಪಿ ಕಾರ್ಯಕರ್ತರ ಹೆಸರನ್ನು ದಾಖಲಿಸಲಾಗಿದ್ದು, ಉಳಿದ 25 ಮಂದಿ ಅಪರಿಚಿತರು ಎಂದು ನಮೂದಿಸಲಾಗಿದೆ ಎಂದು ಸರ್ಕಲ್ ಆಫೀಸರ್ ಶಿವನಾರಾಯಣ ವೈಸ್ ಹೇಳಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಿಂದ ಬಂದಿರೋದು ಮೋದಿ ಮಗ, ನನ್ನ ಮಗನಲ್ಲ: ವಿದ್ಯಾರ್ಥಿ ತಂದೆ ಕಣ್ಣೀರು

    ಬೆಲ್ತಾರ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯಲ್ಲಿ ಎಸ್‍ಪಿ-ಎಸ್‍ಬಿಎಸ್‍ಪಿ ಅಭ್ಯರ್ಥಿ ಹಂಸು ರಾಮ್ ಗೆಲುವು ಪಡೆದ ನಂತರ ಎಸ್‍ಪಿ ಕಾರ್ಯಕರ್ತರು ವಿಜಯೋತ್ಸವ ಮಾಡುತ್ತಿದ್ದರು. ಈ ವೇಳೆ ಕಾರ್ಯಕರ್ತರು ಯೋಗಿ ಆದಿತ್ಯನಾಥ್ ವಿರುದ್ಧ ಅವಾಚ್ಯ ಶಬ್ಧಗಳನ್ನು ಬಳಸಿ ಘೋಷಣೆ ಕೂಗಿದ್ದರು. ಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ನಾಯಕರನ್ನು ಹತ್ಯೆ ಮಾಡುವ ಬೆದರಿಕೆ ಹಾಕಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

  • ಜೈಲಿನಿಂದಲೇ ಅಜಂ ಖಾನ್‌ ವಿಧಾನಸಭೆಗೆ ಎಂಟ್ರಿ

    ಜೈಲಿನಿಂದಲೇ ಅಜಂ ಖಾನ್‌ ವಿಧಾನಸಭೆಗೆ ಎಂಟ್ರಿ

    ಲಕ್ನೋ: ದೇಶದಲ್ಲಿ ಕುತೂಹಲ ಮೂಡಿಸಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು, ಹಲವು ಪ್ರಕರಣಗಳಲ್ಲಿ ಜೈಲುವಾಸ ಅನುಭವಿಸುತ್ತಿರುವ ಸಮಾಜವಾದಿ ಪಕ್ಷದ ಅಜಂ ಖಾನ್‌ ಅವರು ಭಾರಿ ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ.

    ರಾಂಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಅಜಂ ಖಾನ್ 63,642 ಮತಗಳನ್ನು ಪಡೆದಿದ್ದಾರೆ. ಆ ಮೂಲಕ ಬಿಜೆಪಿಯ ಆಕಾಶ್ ಸಕ್ಸೇನಾ ವಿರುದ್ಧ 50,880 ಮತಗಳ ಅಂತರದಿಂದ ಭಾರಿ ಮುನ್ನಡೆ ಸಾಧಿಸಿದ್ದಾರೆ. ಇದನ್ನೂ ಓದಿ: ನಾನು ಆತಂಕವಾದಿಯಲ್ಲ ಎಂದು ಮತದಾರರು ಸಾಬೀತು ಮಾಡಿದ್ದಾರೆ: ಕೇಜ್ರಿವಾಲ್

    ಎಸ್‌ಪಿ ಅಭ್ಯರ್ಥಿ ಅಜಂ ಖಾನ್ ಅವರ ಮೇಲೆ ದಾಖಲಾಗಿರುವ ಹಲವು ದೂರುಗಳ ಹಿನ್ನೆಲೆಯಲ್ಲಿ ಸದ್ಯ ಸೀತಾಪುರ ಜೈಲಿನಲ್ಲಿದ್ದಾರೆ. ಭೂ ಕಬಳಿಕೆಯೂ ಸೇರಿದಂತೆ ಖಾನ್‌ ವಿರುದ್ಧ ಉತ್ತರ ಪ್ರದೇಶದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಹತ್ತಾರು ದೂರುಗಳು ದಾಖಲಾಗಿದ್ದು, ಸರ್ಕಾರವೂ ‘ಭೂ ಮಾಫಿಯಾ’ಗಳ ಪಟ್ಟಿಯಲ್ಲಿ ಆಜಂ ಅವರ ಹೆಸರನ್ನು ಪ್ರಕಟಿಸಿತ್ತು.

    ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಟಿ, ಬಿಜೆಪಿ ನಾಯಕಿ ಜಯಪ್ರದಾ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಬಗ್ಗೆಯೂ ರಾಂಪುರ ಠಾಣೆಯ ಪೊಲೀಸರು ದೂರು ದಾಖಲಿಸಿದ್ದರು. ಇದಲ್ಲದೆ ಆಜಂ ಅವರು ತಮ್ಮ ಕೃಷಿ ಭೂಮಿಯನ್ನು ಕಬಳಿಸಿದ್ದಾರೆ ಎಂದು ಆರೋಪಿಸಿ ಉತ್ತರ ಪ್ರದೇಶದ 25ಕ್ಕೂ ಹೆಚ್ಚು ರೈತರು ಇತ್ತೀಚೆಗೆ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು. ಇದನ್ನೂ ಓದಿ: ಮೌನವಾಗಿರುವ ಬಿಜೆಪಿ ಮತದಾರರು ದೊಡ್ಡ ಸಂದೇಶ ಕೊಟ್ಟಿದ್ದಾರೆ: ತೇಜಸ್ವಿ ಸೂರ್ಯ 

    ಮಗನ ಜನನ ದಿನಾಂಕದ ನಕಲಿ ಪ್ರಮಾಣಪತ್ರ ಪ್ರಕರಣದಲ್ಲಿ ಪತ್ನಿ ಮತ್ತು ಮಗ ಸೇರಿದಂತೆ ಖಾನ್ ಅವರನ್ನು ಫೆ.23 ರಂದು ಬಂಧಿಸಲಾಗಿತ್ತು.

  • UPಯಲ್ಲಿ ಮತ ಎಣಿಕೆಗೂ ಮುನ್ನ ಚುನಾವಣಾ ಆಯೋಗಕ್ಕೆ ಎಸ್‌ಪಿ ಪತ್ರ

    UPಯಲ್ಲಿ ಮತ ಎಣಿಕೆಗೂ ಮುನ್ನ ಚುನಾವಣಾ ಆಯೋಗಕ್ಕೆ ಎಸ್‌ಪಿ ಪತ್ರ

    ಲಕ್ನೋ: ವಾರಣಾಸಿಯಲ್ಲಿ ಇವಿಎಂ ದುರ್ಬಳಕೆಯಾಗುತ್ತಿದೆ ಎಂಬ ಮಾಜಿ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಆರೋಪಕ್ಕೆ ಸಂಬಂಧಿಸಿದಂತೆ, ಚುನಾವಣಾ ಆಯೋಗಕ್ಕೆ ಸಮಾಜವಾದಿ ಪಕ್ಷ ಪತ್ರವೊಂದನ್ನು ಬರೆದಿದೆ.

    ಎಲ್ಲಾ ಕ್ಷೇತ್ರಗಳಿಗೆ ಮತ ಎಣಿಕೆ ಪ್ರಕ್ರಿಯೆಯನ್ನು ವೆಬ್‌ಕಾಸ್ಟಿಂಗ್‌ ಮಾಡಬೇಕು. ಅದಕ್ಕೆ ಸಂಬಂಧಿಸಿದ ಲಿಂಕ್‌ ಅನ್ನು ಚುನಾವಣಾ ಆಯೋಗ, ಮುಖ್ಯ ಚುನಾವಣಾ ಆಯುಕ್ತರು, ಮತಗಟ್ಟೆ ಅಧಿಕಾರಿಗಳು ಮತ್ತು ರಾಜಕೀಯ ಪಕ್ಷಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಎಸ್‌ಪಿ ಒತ್ತಾಯಿಸಿದೆ. ಇದನ್ನೂ ಓದಿ: EVM ಪ್ರೋಟೋಕಾಲ್‍ನಲ್ಲಿ ಲೋಪ: ಚುನಾವಣಾಧಿಕಾರಿಯ ವೀಡಿಯೋ ಹಂಚಿಕೊಂಡ ಎಸ್‍ಪಿ

    ಇದರಿಂದ ರಾಜಕೀಯ ಪಕ್ಷಗಳು ಎಣಿಕೆ ಪ್ರಕ್ರಿಯೆಯನ್ನು ಲೈವ್‌ ವೀಕ್ಷಿಸಬಹುದು. ಪ್ರಕ್ರಿಯೆಯನ್ನು ಪಾರದರ್ಶಕವಾಗಿ ಮತ್ತು ಸ್ವತಂತ್ರವಾಗಿ ನಡೆಸಬಹುದು ಎಂದು ಮನವಿಯಲ್ಲಿ ಉಲ್ಲೇಖಿಸಿದೆ.

    ವಾರಣಾಸಿಯ ಮತಗಟ್ಟೆಯಿಂದ ಇವಿಎಂಗಳನ್ನು ಸಾಗಿಸುತ್ತಿರುವುದಕ್ಕೆ ಸಂಬಂಧಿಸಿದಂತೆ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿತ್ತು. ಸ್ಥಳೀಯ ಅಭ್ಯರ್ಥಿಗಳ ಗಮನಕ್ಕೂ ತಾರದೇ ಇವಿಎಂಗಳನ್ನು ಅಧಿಕಾರಿಗಳು ಸಾಗಾಟ ಮಾಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ: ವಾರಣಾಸಿಯಲ್ಲಿ EVM ಕಳವು: ಅಖಿಲೇಶ್‌ ಯಾದವ್‌ ಗಂಭೀರ ಆರೋಪ

    ಸಮಾಜವಾದಿ ಪಕ್ಷ ಅಯೋಧ್ಯೆಯಲ್ಲಿ ಜಯಗಳಿಸಲಿದೆ. ಹೀಗಾಗಿ ಭಯದಿಂದ ಬಿಜೆಪಿ ಈ ರೀತಿಯ ಕೆಲಸ ಮಾಡಿಸುತ್ತಿದೆ ಎಂದು ಯಾದವ್‌ ಆರೋಪಿಸಿದ್ದರು. ಆದರೆ ಈ ಆರೋಪವನ್ನು ಬಿಜೆಪಿ ತಳ್ಳಿಹಾಕಿದೆ. ಇದನ್ನೂ ಓದಿ: ಬಾಂಗ್ಲಾ ವಿದ್ಯಾರ್ಥಿಗಳ ರಕ್ಷಣೆ – ಮೋದಿಗೆ ಧನ್ಯವಾದ ತಿಳಿಸಿದ ಹಸೀನಾ

  • ಚುನಾವಣೋತ್ತರ ಸಮೀಕ್ಷೆ- ಉತ್ತರ ಪ್ರದೇಶದಲ್ಲಿ ಬಿಜೆಪಿ ಮೇಲುಗೈ

    ಚುನಾವಣೋತ್ತರ ಸಮೀಕ್ಷೆ- ಉತ್ತರ ಪ್ರದೇಶದಲ್ಲಿ ಬಿಜೆಪಿ ಮೇಲುಗೈ

    ನವದೆಹಲಿ: ಉತ್ತರ ಪ್ರದೇಶದಲ್ಲಿ ಕಡೇ ಹಂತದ ಮತದಾನ ಪ್ರಕ್ರಿಯೆ ಇಂದು ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದೆ. ಪಂಚರಾಜ್ಯಗಳಾದ ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್‌, ಗೋವಾ, ಮಣಿಪುರ ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆದಿದೆ. ತೀವ್ರ ಕುತೂಹಲ ಮೂಡಿಸಿರುವ ಉತ್ತರ ಪ್ರದೇಶದಲ್ಲಿ ಚುನಾವಣೆ ಸಮೀಕ್ಷೆ ಪ್ರಕಾರ ಬಿಜೆಪಿ ಗೆಲುವು ಸಾಧಿಸಲಿದೆ.

    ಉತ್ತರ ಪ್ರದೇಶ– ವಿವಿಧ ಸಮೀಕ್ಷೆಗಳ ಫಲಿತಾಂಶ

    ರಿಪಬ್ಲಿಕ್‌ ಟಿ.ವಿ
    ಬಿಜೆಪಿ 240
    ಕಾಂಗ್ರೆಸ್‌ 4
    ಎಸ್‌ಪಿ+ 140
    ಬಿಎಸ್‌ಪಿ 17

    ಪಿ-ಮಾರ್ಕ್‌
    ಬಿಜೆಪಿ-240
    ಎಸ್‌ಪಿ+-140
    ಬಿಎಸ್‌ಪಿ-17
    ಕಾಂಗ್ರೆಸ್-04
    ಇತರೆ-02

    ಪೋಲ್‌ಸ್ಟ್ರೈಟ್‌
    ಬಿಜೆಪಿ-211ರಿಂದ 225
    ಎಸ್‌ಪಿ+-146-160
    ಬಿಎಸ್‌ಪಿ-14-24
    ಕಾಂಗ್ರೆಸ್-4-06 ‌
    ಇತರೆ-00

    ಸಿಎನ್‌ಎನ್‌ ನ್ಯೂಸ್‌ 18
    ಬಿಜೆಪಿ 262–277
    ಕಾಂಗ್ರೆಸ್‌ 3–8
    ಎಸ್‌ಪಿ+ 119–134
    ಬಿಎಸ್‌ಪಿ 7–15

    ಇಟಿಜಿ ರಿಸರ್ಚ್‌
    ಬಿಜೆಪಿ 230–245
    ಕಾಂಗ್ರೆಸ್‌ 2–6
    ಎಸ್‌ಪಿ+ 150–165
    ಬಿಎಸ್‌ಪಿ 5–10

    ನ್ಯೂಸ್‌ ಎಕ್ಸ್‌– ಪೋಲ್‌ಸ್ಟರ್‌
    ಬಿಜೆಪಿ 211–245
    ಕಾಂಗ್ರೆಸ್‌ 4–6
    ಎಸ್‌ಪಿ+ 146–160
    ಬಿಎಸ್‌ಪಿ 14–24

  • ಕೆಂಪು ಟೋಪಿ ವಿರುದ್ಧ ಅಪಪ್ರಚಾರ, ಬೇರೆ ಬಣ್ಣದ ಟೋಪಿ ಧರಿಸಲು ಜನರಿಗೆ ಒತ್ತಾಯ: ಅಖಿಲೇಶ್

    ಕೆಂಪು ಟೋಪಿ ವಿರುದ್ಧ ಅಪಪ್ರಚಾರ, ಬೇರೆ ಬಣ್ಣದ ಟೋಪಿ ಧರಿಸಲು ಜನರಿಗೆ ಒತ್ತಾಯ: ಅಖಿಲೇಶ್

    ಲಕ್ನೋ: ಸಮಾಜವಾದಿ ಪಕ್ಷದ ಕೆಂಪು ಟೋಪಿಯನ್ನು ಅವಮಾನಿಸುವವರು ವಿಭಿನ್ನ ಬಣ್ಣದ ಟೋಪಿಯನ್ನು ಜನರಿಗೆ ಧರಿಸಲು ಒತ್ತಾಯಿಸುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರಣಾಸಿಯ ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಅವರು ಕೇಸರಿ ಟೋಪಿಯನ್ನು ಧರಿಸಿದ್ದನ್ನು ಉಲ್ಲೇಖಿಸಿ ವಾಗ್ದಾಳಿ ನಡೆಸಿದರು.

    ನಮ್ಮ ಪಕ್ಷದ ಟೋಪಿಯನ್ನು ಅವಮಾನಿಸಿದವರು ಈಗ ಉತ್ತರಪ್ರದೇಶದ ಜನರಿಗೆ ಬೇರೆ ಟೋಪಿಯನ್ನು ಧರಿಸಲು ಒತ್ತಾಯಿಸುತ್ತಿದ್ದಾರೆ. ಜೊತೆಗೆ ತಮ್ಮ ಟೋಪಿಯ ಬಣ್ಣವನ್ನು ಬದಲಾಯಿಸಿದ್ದಾರೆ ಎಂದು ವ್ಯಂಗ್ಯವಾಡಿದರು.

    ಕಳೆದ ಡಿಸೆಂಬರ್‌ನಲ್ಲಿ ಪ್ರಧಾನಿ ಮೋದಿ ಮಾತನಾಡಿ, ಸಮಾಜವಾದಿ ಪಕ್ಷದ ಚಿಹ್ನೆ ಕೆಂಪು ಟೋಪಿಯಾಗಿದೆ. ಕೆಂಪು ಅಪಾಯಕಾರಿ. ಇದರಿಂದಾಗಿ ಎಚ್ಚರಿಕೆಯಿಂದ ಇರಿ ಎಂದು ತಿಳಿಸಿದ್ದರು.

    ಅಖಿಲೇಶ್ ಯಾದವ್ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿ ಲಕ್ಕಿ ಯಾದವ್ ಪರವಾಗಿ ಮಲ್ಹಾನಿ ಕ್ಷೇತ್ರದಲ್ಲಿ ಚುನಾವಣಾ ಸಭೆಯಲ್ಲಿ ಮಾತನಾಡಿದರು. ಇದು 2022ರ ವಿಧಾನಸಭೆ ಚುನಾವಣೆಗೆ ಕೊನೆಯ ಹಂತದ ಚುನಾವಣಾ ರ‍್ಯಾಲಿಯಾಗಿದೆ. ಇದನ್ನೂ ಓದಿ: ಆಂಬ್ಯುಲೆನ್ಸ್​ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

    ಶನಿವಾರ ಸಂಜೆ ಉತ್ತರ ಪ್ರದೇಶದಲ್ಲಿ 2 ತಿಂಗಳ ಕಾಲ ನಡೆದ ಪ್ರಚಾರ ಅಂತ್ಯಗೊಂಡಿತು. ಮಾರ್ಚ್ 7ರಂದು ಉತ್ತರಪ್ರದೇಶದಲ್ಲಿ ಕೊನೆಯ ಹಂತದ ಮತದಾನ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ. ಇದನ್ನೂ ಓದಿ: ಬಿಎಸ್ ಯಡಿಯೂರಪ್ಪಗೆ ಗುರುಬಸವಶ್ರೀ ಪ್ರಶಸ್ತಿ ಪ್ರದಾನ