Tag: Samajwadi Party

  • ದೇಶದ ತುರ್ತು ಪರಿಸ್ಥಿತಿಯ ಸಂದರ್ಭ ಯಾದವ್ ಜೀ ಸೈನಿಕರಾಗಿದ್ದರು: ಮೋದಿ ಸಂತಾಪ

    ದೇಶದ ತುರ್ತು ಪರಿಸ್ಥಿತಿಯ ಸಂದರ್ಭ ಯಾದವ್ ಜೀ ಸೈನಿಕರಾಗಿದ್ದರು: ಮೋದಿ ಸಂತಾಪ

    ಲಕ್ನೋ: ಉತ್ತರ ಪ್ರದೇಶದ (Uttar Pradesh)  ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ (Samajwadi Party) ವರಿಷ್ಠ ಮುಲಾಯಂ ಸಿಂಗ್ ಯಾದವ್ (Mulayam Singh Yadav) ದೇಶದಲ್ಲಿ ಉಂಟಾಗಿದ್ದ ತುರ್ತು ಪರಿಸ್ಥಿತಿ (Emergency) ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಪ್ರಮುಖ ಸೈನಿಕರಾಗಿ ಹೋರಾಡಿದವರು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೊಗಳಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಮುಲಾಯಂ ಸಿಂಗ್ ಯಾದವ್ ಜೀ ಉತ್ತರಪ್ರದೇಶ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ತಮ್ಮನ್ನು ತಾವು ಗುರುತಿಸಿಕೊಂಡವರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ಪ್ರಮುಖ ಸೈನಿಕರಾಗಿದ್ದರು. ರಕ್ಷಣಾ ಸಚಿವರಾಗಿ ಅವರು ಬಲಿಷ್ಠ ಭಾರತಕ್ಕಾಗಿ ಶ್ರಮಿಸಿದರು. ಅವರ ಸಂಸದೀಯ ಮಧ್ಯಸ್ಥಿಕೆಗಳು ಮಹತ್ವವನ್ನು ಪಡೆದುಕೊಂಡಿತ್ತು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳನ್ನು ಹೆಚ್ಚಿಸಲು ಒತ್ತು ನೀಡಿದ್ದವು. ಇದನ್ನೂ ಓದಿ: ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್‌ ಯಾದವ್‌ ನಿಧನ

    ಮುಲಾಯಂ ಸಿಂಗ್ ಯಾದವ್ ಜೀ ಅಸಾಧಾರಣ ವ್ಯಕ್ತಿತ್ವ ಹೊಂದಿದ್ದರು. ಜನರ ಸಮಸ್ಯೆಗಳ ಬಗ್ಗೆ ಸಂವೇದನಾಶೀಲರಾಗಿದ್ದ ಅವರು ಜನರಿಗೆ ಯಾವತ್ತು ಸಹಾಯಕ್ಕಾಗಿ ತುಡಿಯುತ್ತಿದ್ದರು. ಹಾಗಾಗಿ ನೆಲದ ನಾಯಕರಾಗಿ ವ್ಯಾಪಕವಾಗಿ ಹೆಸರು ಗಳಿಸಿದ್ದರು. ತುಂಬಾ ಶ್ರದ್ಧೆಯ ಕೆಲಸಗಾರರಾಗಿದ್ದ ಮುಲಾಯಂ ಸಿಂಗ್ ಯಾದವ್ ಜೀ, ಲೋಕನಾಯಕ್ ಜೆಪಿ ಮತ್ತು ಡಾ. ಲೋಹಿಯಾ ಅವರ ಆದರ್ಶಗಳನ್ನು ಜನಪ್ರಿಯಗೊಳಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಇದನ್ನೂ ಓದಿ: ಮುಲಾಯಂ ಸಿಂಗ್‌ ಯಾದವ್ ನಿಧನ – ಸಿಎಂ ಬೊಮ್ಮಾಯಿ ಸಂತಾಪ

    ನಾವು ರಾಜ್ಯಗಳ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದಾಗ ನಾನು ಮುಲಾಯಂ ಸಿಂಗ್ ಯಾದವ್ ಜೀ ಅವರೊಂದಿಗೆ ಅನೇಕ ಸಂವಾದಗಳನ್ನು ನಡೆಸಿದೆ. ಆ ಬಳಿಕ ನಮ್ಮಿಬ್ಬರೊಂದಿಗೆ ನಿಕಟ ಒಡನಾಟವು ಮುಂದುವರಿಯಿತು. ನಾನು ಯಾವಾಗಲೂ ಅವರ ಅಭಿಪ್ರಾಯಗಳನ್ನು ಕೇಳಲು ಎದುರು ನೋಡುತ್ತಿದ್ದೆ. ಅವರ ನಿಧನ ನನಗೆ ನೋವು ತಂದಿದೆ. ಅವರ ಕುಟುಂಬಕ್ಕೆ ಮತ್ತು ಲಕ್ಷಾಂತರ ಬೆಂಬಲಿಗರಿಗೆ ದು:ಖವನ್ನು ಸಹಿಸುವ ಶಕ್ತಿ ದೇವರು ಕರುಣಿಸಲಿ ಸಂತಾಪ. ಓಂ ಶಾಂತಿ ಎಂದು ಬರೆದುಕೊಂಡು ಮೋದಿ ಟ್ವೀಟ್ ಮಾಡಿದ್ದಾರೆ.

    ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 82 ವರ್ಷದ ಮುಲಾಯಂ ಸಿಂಗ್ ಅವರನ್ನು ಅ. 2ರಂದು ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದಲೂ ಅವರಿಗೆ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಕೊನೆಯುಸಿರೆಳೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುಲಾಯಂ ಸಿಂಗ್‌ ಯಾದವ್ ನಿಧನ – ಸಿಎಂ ಬೊಮ್ಮಾಯಿ ಸಂತಾಪ

    ಮುಲಾಯಂ ಸಿಂಗ್‌ ಯಾದವ್ ನಿಧನ – ಸಿಎಂ ಬೊಮ್ಮಾಯಿ ಸಂತಾಪ

    ಬೆಂಗಳೂರು: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್(Mulayam Singh Yadav) ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

    ರಾಮ್ ಮನೋಹರ್ ಲೋಹಿಯಾ, ರಾಜ್ ನಾರಾಯಣ್ ಅವರಂಥ ನಾಯಕರ ಮಾರ್ಗದರ್ಶನದಲ್ಲಿ ಮುನ್ನೆಲೆಗೆ ಬಂದ ಮುಲಾಯಂ ಸಿಂಗ್ ಅವರು ತುರ್ತು ಪರಿಸ್ಥಿತಿ ವಿರೋಧಿಸಿ ಸೆರೆವಾಸ ಅನುಭವಿಸಿದ್ದರು. ಸಮಾಜವಾದಿ ಪಕ್ಷವನ್ನು ಸ್ಥಾಪಿಸಿ, ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ಮುಲಾಯಂ ಸಿಂಗ್ ಅವರು ಕೇಂದ್ರ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅವರ ನಿಧನದಿಂದ ರಾಷ್ಟ್ರವು ಮುತ್ಸದ್ದಿ ರಾಜಕಾರಣಿಯೊಬ್ಬರನ್ನು ಕಳೆದುಕೊಂಡಂತಾಗಿದೆ. ಇದನ್ನೂ ಓದಿ: ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್‌ ಯಾದವ್‌ ನಿಧನ

    ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಭಗವಂತ ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್‌ ಯಾದವ್‌ ನಿಧನ

    ಯುಪಿ ಮಾಜಿ ಸಿಎಂ ಮುಲಾಯಂ ಸಿಂಗ್‌ ಯಾದವ್‌ ನಿಧನ

    ಗುರುಗ್ರಾಮ: ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ವರಿಷ್ಠ ಮುಲಾಯಂ ಸಿಂಗ್‌ (Mulayam Singh Yadav) ಅವರು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.

    ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ 82 ವರ್ಷದ ಮುಲಾಯಂ ಸಿಂಗ್‌ ಅವರನ್ನು ಅ. 2ರಂದು ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದಿನಿಂದಲೂ ಅವರಿಗೆ ತೀವ್ರ ನಿಗಾ ಘಟಕ (ಐಸಿಯು)ದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

    “ಜೀವ ರಕ್ಷಕ ಔಷಧಗಳ ಹೊರತಾಗಿಯೂ ಮುಲಾಯಂ ಸಿಂಗ್‌ ಅವರ ಆರೋಗ್ಯ ಇಂದು ಕ್ಷೀಣಿಸಿದೆ. ಆಸ್ಪತ್ರೆಯ ಐಸಿಯುನಲ್ಲಿ ತಜ್ಞರ ತಂಡದಿಂದ ಚಿಕಿತ್ಸೆ ಮುಂದುವರಿಯುತ್ತಿದೆ” ಎಂದು ಡಾ. ಸಂಜೀವ್‌ ಗುಪ್ತಾ ಭಾನುವಾರ ಹೇಳಿಕೆ ನೀಡಿದ್ದರು.

    ಉತ್ತರ ಪ್ರದೇಶದ ಮಾಜಿ ಸಿಎಂ ಅಖಿಲೇಶ್‌ ಅವರ ತಂದೆ ಮುಲಾಯಂ ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸತತ 3ನೇ ಬಾರಿಗೆ ಸಮಾಜವಾದಿ ಪಕ್ಷ ಅಧ್ಯಕ್ಷರಾಗಿ ಅಖಿಲೇಶ್‌ ಯಾದವ್‌ ಆಯ್ಕೆ

    ಸತತ 3ನೇ ಬಾರಿಗೆ ಸಮಾಜವಾದಿ ಪಕ್ಷ ಅಧ್ಯಕ್ಷರಾಗಿ ಅಖಿಲೇಶ್‌ ಯಾದವ್‌ ಆಯ್ಕೆ

    ಲಕ್ನೋ: ಸಮಾಜವಾದಿ ಪಕ್ಷದ (Samajwadi Party) ಅಧ್ಯಕ್ಷರಾಗಿ ಸತತ 3ನೇ ಬಾರಿಯೂ ಅಖಿಲೇಶ್‌ ಯಾದವ್‌ (Akhilesh Yadav) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

    ಲಕ್ನೋದ ರಮಾಬಾಯಿ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಸಮಾಜವಾದಿ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಚುನಾವಣಾ ಫಲಿತಾಂಶವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಪ್ರಕಟಿಸಿದರು.

    ತಮ್ಮ ತಂದೆ ಮುಲಾಯಂ ಸಿಂಗ್ ಯಾದವ್ ಅವರಿಂದ ಅಧಿಕಾರ ವಹಿಸಿಕೊಂಡ ಅಖಿಲೇಶ್ ಯಾದವ್ ಅವರು 2017 ರ ಜನವರಿಯಲ್ಲಿ ಪಕ್ಷದ ತುರ್ತು ಸಭೆಯಲ್ಲಿ ಮೊದಲ ಬಾರಿಗೆ ಮತ್ತು ಅದೇ ವರ್ಷ ಅಕ್ಟೋಬರ್‌ನಲ್ಲಿ ಆಗ್ರಾದಲ್ಲಿ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಎರಡನೇ ಬಾರಿಗೆ ಸಮಾಜವಾದಿ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದನ್ನೂ ಓದಿ: ಮುರುಘಾಮಠದ ಪೀಠಾಧಿಪತಿ ಬದಲಾವಣೆಗೆ ಹೆಚ್ಚಿದ ಒತ್ತಡ

    Live Tv
    [brid partner=56869869 player=32851 video=960834 autoplay=true]

  • ಅಧಿವೇಶನದಲ್ಲಿ ತಂಬಾಕು ತಿನ್ನೋದ್ರಲ್ಲಿ, ಗೇಮ್ ಆಡೋದ್ರಲ್ಲಿ ಶಾಸಕರು ಬ್ಯುಸಿ – ಬಿಜೆಪಿ ವಿರುದ್ಧ ಎಸ್‍ಪಿ ವ್ಯಂಗ್ಯ

    ಅಧಿವೇಶನದಲ್ಲಿ ತಂಬಾಕು ತಿನ್ನೋದ್ರಲ್ಲಿ, ಗೇಮ್ ಆಡೋದ್ರಲ್ಲಿ ಶಾಸಕರು ಬ್ಯುಸಿ – ಬಿಜೆಪಿ ವಿರುದ್ಧ ಎಸ್‍ಪಿ ವ್ಯಂಗ್ಯ

    ಲಕ್ನೋ: ವಿಧಾನಸಭೆಯಲ್ಲಿ ಅಧಿವೇಶನ (Assembly) ನಡೆಯುತ್ತಿದ್ದಾಗ ಉತ್ತರ ಪ್ರದೇಶದ (UttarPradesh) ಬಿಜೆಪಿ ಶಾಸಕರು ತಂಬಾಕು (Tobacco) ಸೇವನೆ ಮತ್ತು ಗೇಮ್ (Game) ಆಡಿದ್ದಾರೆ.

    ಈ ಇಬ್ಬರು ಶಾಸಕರ ವೀಡಿಯೋವನ್ನು ಸಮಾಜವಾದಿ ಪಕ್ಷ (Samajwadi Party) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಶಾಸಕರ ಅಶಿಸ್ತನ್ನು ಖಂಡಿಸಿದೆ. ಮಹೋಬಾದ (Mahoba) ಬಿಜೆಪಿ ಶಾಸಕ ರಾಕೇಶ್‌ ಗೋಸ್ವಾಮಿ (Rakesh Goswami) ಮೂರು ಎಲೆಗಳಿರುವ ಇಸ್ಪೀಟ್ ಗೇಮ್ ಆಡಿದ್ದರೆ, ಝಾನ್ಸಿ (Jhansi) ಶಾಸಕ ರವಿಕುಮಾರ್ ಶರ್ಮಾ (Ravi Sharmar Sharma) ಅವರ ಟೇಬಲ್ ಕೆಳಗೆ ಮುಚ್ಚಿಟ್ಟುಕೊಂಡು ತಂಬಾಕು ತಿಂದಿದ್ದಾರೆ. ಶಾಸಕರ ವರ್ತನೆಯಿಂದ ಬಿಜೆಪಿ ಪಕ್ಷ ಮುಜುಗರಕ್ಕೆ ಒಳಗಾಗಿದೆ. ಇದನ್ನೂ ಓದಿ: ಆಪ್ ಸರ್ಕಾರದ ವಿರುದ್ಧ ಎಲ್‍ಜಿ ವಾರ್ – ಮನೀಷ್ ಸಿಸೋಡಿಯಾ ವಿರುದ್ಧ ತನಿಖೆಗೆ ಸೂಚನೆ

    ಗುರುವಾರದ ಸದನದಲ್ಲಿ ಮಹಿಳೆಯರ ವಿಶೇಷ ದಿನವಾಗಿ ಆಚರಿಸಲಾಗಿತ್ತು. ಈ ವಿಶೇಷ ದಿನದಂದೇ ಬಿಜೆಪಿ ಶಾಸಕರು ಅಶಿಸ್ತು ತೋರಿಸಿದ್ದಾರೆ. ಇದನ್ನೂ ಓದಿ:  ಬೀದಿನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿ ಅಂದ್ರೆ ಕಾಡುಪ್ರಾಣಿಗಳ ಆಹಾರಕ್ಕಾಗಿ ಕಾಡಿಗೆ ಬಿಟ್ಟ ಪುರಸಭೆ

    Live Tv
    [brid partner=56869869 player=32851 video=960834 autoplay=true]

  • 500ಮೀ. ದೂರದವರೆಗೆ ಕಾರನ್ನು ಎಳೆದೊಯ್ದ ಟ್ರಕ್- ಸಮಾಜವಾದಿ ಮುಖಂಡನಿದ್ದ ಕಾರು ಜಖಂ

    500ಮೀ. ದೂರದವರೆಗೆ ಕಾರನ್ನು ಎಳೆದೊಯ್ದ ಟ್ರಕ್- ಸಮಾಜವಾದಿ ಮುಖಂಡನಿದ್ದ ಕಾರು ಜಖಂ

    ಲಕ್ನೋ: ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ದೇವೇಂದ್ರ ಸಿಂಗ್ ಯಾದವ್ ಅವರ ಕಾರಿಗೆ ಟ್ರಕ್ ಹೊಡೆದು ಸುಮಾರು 500 ಮೀ.ವರೆಗೆ ಎಳೆದೊಯ್ದ ಘಟನೆ ಉತ್ತರಪ್ರದೇಶದ ಮೈನ್‍ಪುರಿ ನಗರದಲ್ಲಿ ನಡೆದಿದೆ.

    ದೇವೇಂದ್ರ ಯಾದವ್ ಅವರು ಮೈನ್‍ಪುರಿಯ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದು, ಪಕ್ಷದ ಕಚೇರಿಯಿಂದ ಮನೆಗೆ ಹಿಂತಿರುಗುತ್ತಿದ್ದರು. ಆ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

    ಈ ಅಪಘಾತದ ವೀಡಿಯೋವು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ದೇವೇಂದ್ರ ಯಾದವ್ ಅವರ ಕಾರನ್ನು ನಿಲ್ಲಿಸುವ ಮೊದಲು ಲಾರಿಯೊಂದು ಬಂದು ಸುಮಾರು 500 ಮೀ. ದೂರದವರೆಗೆ ಎಳೆದೊಯ್ದಿದೆ. ಕಾರು ನಿಂತ ತಕ್ಷಣ ರಸ್ತೆಯಲ್ಲಿದ್ದ ಹಲವರು ಸ್ಥಳಕ್ಕೆ ಧಾವಿಸಿ ಸಮಾಜವಾದಿ ಪಕ್ಷದ ನಾಯಕನನ್ನು ರಕ್ಷಿಸಲು ಯತ್ನಿಸಿದರು. ಇದನ್ನೂ ಓದಿ: ವಿದ್ಯಾರ್ಥಿನಿಗೆ ಚುಡಾಯಿಸಿದ ವಿದ್ಯಾರ್ಥಿ – ಕಲಬುರಗಿ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ಮಾರಾಮಾರಿ

    ಘಟನೆಗೆ ಸಂಬಂಧಿಸಿ ಆರೋಪಿ ಟ್ರಕ್ ಚಾಲಕ ಇಟಾವಾ ಮೂಲದವನಾಗಿದ್ದು, ಆತನನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ದೇವಸ್ಥಾನದಲ್ಲಿ ಕಾಲ್ತುಳಿತ- ಮೂವರು ಸಾವು

    Live Tv
    [brid partner=56869869 player=32851 video=960834 autoplay=true]

  • ಪ್ರವಾದಿ ಅವಹೇಳನ – ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 400ಕ್ಕೂ ಹೆಚ್ಚು ಮಂದಿ ಬಂಧನ

    ಪ್ರವಾದಿ ಅವಹೇಳನ – ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 400ಕ್ಕೂ ಹೆಚ್ಚು ಮಂದಿ ಬಂಧನ

    ಲಕ್ನೋ: ಪ್ರವಾದಿ ಮೊಹಮ್ಮದ್ ಪೈಗಂಬರ್ ವಿರುದ್ಧ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ಮತ್ತು ನವೀನ್ ಕುಮಾರ್ ಜಿಂದಾಲ್ ಅವಹೇಳನಕಾರಿ ಹೇಳಿಕೆ ಖಂಡಿಸಿ, ವಿವಿಧೆಡೆ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಭಾಗಿಯಾದ ಆರೋಪದ ಮೇಲೆ 400ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ.

    ಉತ್ತರ ಪ್ರದೇಶ, ಜಾರ್ಖಂಡ್ ಸೇರಿದಂತೆ ಹಲವೆಡೆ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿತ್ತು. ಪಶ್ಚಿಮ ಬಂಗಾಳದ ನಾದಿಯಾ ಜಿಲ್ಲೆಯ ಬೆಥುಯಾದಹರಿ ರೈಲು ನಿಲ್ದಾಣದಲ್ಲಿ ಪ್ರತಿಭಟನಾಕಾರರ ಗುಂಪು ರೈಲುವೊಂದಕ್ಕೂ ಹಾನಿ ಮಾಡಿತ್ತು. ಇದನ್ನೂ ಓದಿ: ಪ್ರವಾದಿ ವಿರುದ್ಧ ಅವಹೇಳನ – ಮುಸ್ಲಿಂ ಸಂಘಟನೆಗಳ ಪ್ರತಿಭಟನೆಗೆ ವಿಹೆಚ್‌ಪಿ ತೀವ್ರ ಖಂಡನೆ

    ಸದ್ಯ ಉತ್ತರ ಪ್ರದೇಶದ 8 ಜಿಲ್ಲೆಗಳಲ್ಲಿ ಒಟ್ಟು 316 ಮಂದಿ, ಪಶ್ಚಿಮ ಬಂಗಾಳದ ಹೌರಾ, ಮುರ್ಷಿದಾಬಾದ್ ಜಿಲ್ಲೆಯಲ್ಲಿ 100 ಜನರನ್ನು ಬಂಧಿಸಲಾಗಿದೆ. ರಾಂಚಿಯಲ್ಲಿ 25 ಸೇರಿದಂತೆ ಒಟ್ಟಾರೆ ಪ್ರಕರಣದಲ್ಲಿ 42 ಎಫ್‌ಐಆರ್ ದಾಖಲಾಗಿವೆ.

    ಉತ್ತರ ಪ್ರದೇಶದ 9 ಜಿಲ್ಲೆಗಳಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 13 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಎಂಟು ಜಿಲ್ಲೆಗಳಲ್ಲಿ 304 ಜನರನ್ನು ಬಂಧಿಸಲಾಗಿದೆ. ಪ್ರಯಾಗ್‌ರಾಜ್‌ನಲ್ಲಿ 91 ಮಂದಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಪದವೀಧರ ಮಹಿಳೆಯನ್ನು ಕೆಲಸಕ್ಕೆ ಹೋಗುವಂತೆ ಒತ್ತಾಯಿಸುವಂತಿಲ್ಲ – ಹೈಕೋರ್ಟ್ 

    ಅದೇರೀತಿ, ಸಹರಾನ್‌ಪುರದಲ್ಲಿ 71, ಹತರಾಸ್‌ನಲ್ಲಿ 51, ಫಿರೋಜಾಬಾದ್‌ನಲ್ಲಿ 15, ಅಂಬೇಡ್ಕರ್‌ನಗರ ಮತ್ತು ಮೊರಾದಾಬಾದ್‌ನಲ್ಲಿ ತಲಾ 34 ಜನರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಮಾಹಿತಿ ನೀಡಿದ್ದಾರೆ.

  • ದೊಡ್ಡ ಸಮುದಾಯಕ್ಕೆ ನೋವಾಗುತ್ತಿದೆ, ಬುಲ್ಡೋಜರ್‌ನಿಂದ ರಾಮ ರಾಜ್ಯದ ಕಲ್ಪನೆ ಧ್ವಂಸ: ಅಖಿಲೇಶ್ ಯಾದವ್

    ದೊಡ್ಡ ಸಮುದಾಯಕ್ಕೆ ನೋವಾಗುತ್ತಿದೆ, ಬುಲ್ಡೋಜರ್‌ನಿಂದ ರಾಮ ರಾಜ್ಯದ ಕಲ್ಪನೆ ಧ್ವಂಸ: ಅಖಿಲೇಶ್ ಯಾದವ್

    ಲಕ್ನೋ: ಬಿಜೆಪಿಯು ತನ್ನ ಮಾತೃ ಸಂಘಟನೆಯಾದ ಆರ್‌ಎಸ್‌ಎಸ್ ಸೂಚನೆಗಳ ಮೇರೆಗೆ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕಿಡಿಕಾರಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸದಸ್ಯರ ಮಾತಿನಿಂದ ದೊಡ್ಡ ಸಮುದಾಯಕ್ಕೆ ನೋವಾಗಿದ್ದು, ರಾಜ್ಯವನ್ನು ಧ್ವಂಸಗೊಳಿಸುತ್ತಿರುವ ಭಯಾನಕ ಅಶಾಂತಿ ಘಟನೆಗಳ ಹಿಂದೆ ಇದೇ ರಾಜಕೀಯವಿದೆ. ಈ ದುರದೃಷ್ಟಕರ ವಿವಾದವನ್ನು ಪರಿಹರಿಸಲು ಬಿಜೆಪಿ ಸರ್ಕಾರವು ಯಾವುದೇ ಗಟ್ಟಿಯಾದ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ದೂರಿದರು.

    ನಮ್ಮ ಸಂಸ್ಕೃತಿ, ಧರ್ಮ ಮತ್ತು ಸಂವಿಧಾನವು ಯಾವುದೇ ಶಾಸನಬದ್ಧ ನಿಬಂಧನೆಗಳಿಲ್ಲದೆ ಯಾರೊಬ್ಬರ ಮನೆ ಅಥವಾ ಅಂಗಡಿಯನ್ನು ಧ್ವಂಸ ಮಾಡಲು ಅಥವಾ ಅಮಾಯಕರನ್ನು ಬಂಧಿಸಲು ಅವಕಾಶವಿಲ್ಲ. ಆದರೆ ಈ ಶಾಂತಿಯುತ ಪ್ರತಿಭಟನೆ ನಡೆಸುವ ಜನರ ಪ್ರಜಾಸತ್ತಾತ್ಮಕ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದು, ಬಿಜೆಪಿ ಆಡಳಿತದಲ್ಲಿ ಉತ್ತರ ಪ್ರದೇಶ ಇಡೀ ವಿಶ್ವದ ಮುಂದೆ ತಲೆತಗ್ಗಿಸುವಂತಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನೂಪುರ್ ವಿರುದ್ಧ ಪ್ರತಿಭಟಿಸಿದವರು ಕುವೈತ್‍ನಿಂದ ಗಡಿಪಾರು – ನಮ್ಮಲ್ಲಿ ಕಠಿಣ ಕ್ರಮ ಯಾವಾಗ ಎಂದ ನೆಟ್ಟಿಗರು?

    ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದ್ದು, ಇದರಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಸಾಬೀತಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ವೈಫಲ್ಯವನ್ನು ಮರೆಮಾಚಲು ಮುಖ್ಯಮಂತ್ರಿಗಳು ಸುಳ್ಳು ಕಥೆಗಳನ್ನು ಹೆಣೆದು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದರು.

    ಇದೀಗ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ವಿರುದ್ಧ ಮಾತನಾಡಿದ ಹೇಳಿಕೆಗಳ ವಿರುದ್ಧ ಉತ್ತರ ಪ್ರದೇಶದ ಹಲವಾರು ಜಿಲ್ಲೆಗಳಲ್ಲಿ ಪ್ರತಿಭಟನೆಗಳಿಂದ ತತ್ತರಿಸಿದೆ. ಇದನ್ನೂ ಓದಿ: ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ – ಇಂಟರ್‌ನೆಟ್ ಸ್ಥಗಿತ, 70 ಮಂದಿ ಅರೆಸ್ಟ್

    ಜೂನ್ 3 ರಂದು ಕಾನ್ಪುರದಲ್ಲಿ ಅಂತಹ ಮೊದಲ ಪ್ರಮುಖ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಮಾರುಕಟ್ಟೆಗಳನ್ನು ಮುಚ್ಚಲು ಪ್ರಯತ್ನಿಸಿದರು. ಪೆಟ್ರೋಲ್ ಬಾಂಬ್‍ಗಳು ಮತ್ತು ಕಲ್ಲುಗಳನ್ನು ಎಸೆದು ಸಾರ್ವಜನಿಕ ಆಸ್ತಿಯನ್ನು ಹಾಳು ಮಾಡಿದ್ದಾರೆ.

    ಕಳೆದ ಶುಕ್ರವಾರದಿಂದ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಇದೇ ರೀತಿಯ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿವೆ. ಈವರೆಗೆ 13 ಎಫ್‍ಐಆರ್‌ಗಳನ್ನು ದಾಖಲಿಸಿಕೊಂಡು ಹಿಂಸಾಚಾರಕ್ಕೆ ಸಂಬಂಧಿಸಿದಂತೆ 316 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

    ಇದರ ಮಧ್ಯೆ ಅಧಿಕಾರಿಗಳು ಆರೋಪಿಗಳು ಅವರ ಸಂಬಂಧಿಕರು ಅಥವಾ ಸಹಚರರಿಗೆ ಸೇರಿದ ಅನೇಕ ಕಟ್ಟಡಗಳನ್ನು ಧ್ವಂಸ ಮಾಡಲು ಸೂಚಿಸಲಾಗಿತ್ತು. ರಾಜ್ಯವು ಸಹರಾನ್‍ಪುರ, ಪ್ರಯಾಗ್‍ರಾಜ್ ಮತ್ತು ಕಾನ್ಪುರ್ ಜಿಲ್ಲೆಯಲ್ಲಿನ ಆಸ್ತಿಗಳನ್ನು ಧ್ವಂಸ ಮಾಡಲಾಯಿತು.

  • ಕಾಂಗ್ರೆಸ್ ತೊರೆದ ಕಪಿಲ್ ಸಿಬಲ್- ರಾಜ್ಯಸಭೆಗೆ SPಯಿಂದ ನಾಮಪತ್ರ ಸಲ್ಲಿಕೆ

    ಕಾಂಗ್ರೆಸ್ ತೊರೆದ ಕಪಿಲ್ ಸಿಬಲ್- ರಾಜ್ಯಸಭೆಗೆ SPಯಿಂದ ನಾಮಪತ್ರ ಸಲ್ಲಿಕೆ

    ಲಕ್ನೋ: ಕಾಂಗ್ರೆಸ್‌ ಪಕ್ಷಕ್ಕೆ ಮತ್ತೊಂದು ಆಘಾತವಾಗಿದ್ದು, ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿರುವುದಾಗಿ ಇಂದು ಬಹಿರಂಗಪಡಿಸಿದ್ದಾರೆ.

    ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮೇ 16 ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೆ.ಸಂಸತ್ತಿನಲ್ಲಿ ಸ್ವತಂತ್ರ ಧ್ವನಿಯಾಗುವುದು ಮುಖ್ಯ. ಸ್ವತಂತ್ರ ಧ್ವನಿ ಮಾತನಾಡಿದರೆ ಅದು ಯಾವುದೇ ರಾಜಕೀಯ ಪಕ್ಷದಿಂದಲ್ಲ ಎಂದು ಜನರು ನಂಬುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ಮಳಲಿಯಲ್ಲಿರುವುದು ದರ್ಗಾವಲ್ಲ, ಶಿವ ಸಾನಿಧ್ಯ- ತಾಂಬೂಲ ಪ್ರಶ್ನೆ ಸುಳಿವು

    ಕಾಂಗ್ರೆಸ್‍ನ ಅತ್ಯಂತ ಹಿರಿಯ ನಾಯಕರಲ್ಲಿ ಒಬ್ಬರಾದ ಸಿಬಲ್ ಅವರು 23 ಭಿನ್ನಮತೀಯರ ಗುಂಪಿನಲ್ಲಿ ಕಾಣಿಸಿಕೊಂಡಿದ್ದರು. ಅವರು ಪಕ್ಷದ ನಾಯಕತ್ವ ಮತ್ತು ಸಂಘಟನೆಯ ಬಗ್ಗೆ ಕೂಲಂಕಷ ಪರೀಕ್ಷೆಗೆ ಕರೆ ನೀಡಿದ್ದರು. ಅಷ್ಟೇ ಅಲ್ಲದೇ ಅವರು ಇತ್ತೀಚಿನ ವಾರಗಳಲ್ಲಿ ಗಾಂಧಿಯವರ ನಾಯಕತ್ವದ ಬಗ್ಗೆ ತಮ್ಮ ಟೀಕೆಗಳ ಬಗ್ಗೆಯೂ ಧ್ವನಿ ಎತ್ತಿದ್ದರು. ಇದನ್ನೂ ಓದಿ: ರಾಯಚೂರಿನ ಪೊಲೀಸ್ ಠಾಣೆಗೆ ದೇಶದಲ್ಲೇ 5ನೇ ಸ್ಥಾನ

    ಇತ್ತೀಚೆಗಷ್ಟೇ ಹಾರ್ದಿಕ್ ಪಟೇಲ್ ಹಾಗೂ ಸುನಿಲ್ ಜಾಖಡ್ ಕಾಂಗ್ರೆಸ್ ಪಕ್ಷವನ್ನು ತ್ಯಜಿಸಿದ್ದರು.

  • ಎಸ್‍ಪಿ ನಾಯಕ ಅಜಂ ಖಾನ್‍ಗೆ ಮಧ್ಯಂತರ ಜಾಮೀನು – ಜೈಲಿನಿಂದ ರಿಲೀಸ್

    ಎಸ್‍ಪಿ ನಾಯಕ ಅಜಂ ಖಾನ್‍ಗೆ ಮಧ್ಯಂತರ ಜಾಮೀನು – ಜೈಲಿನಿಂದ ರಿಲೀಸ್

    ನವದೆಹಲಿ: ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್‍ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದು, ಇಂದು ಬಿಡುಗಡೆಯಾಗಿದ್ದಾರೆ.

    ಹೌದು, ಸುಮಾರು 27 ತಿಂಗಳ ಸೆರೆವಾಸದ ಬಳಿಕ ಕೊನೆಗೂ ಅಜಂ ಖಾನ್‍ಗೆ ಜೈಲಿನಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ. ಉತ್ತರಪ್ರದೇಶದ ರಾಂಪುರದ ಕೊತ್ವಾಲಿ ಪೊಲೀಸ್ ಠಾಣೆಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಅವರಿಗೆ ಈ ಜಾಮೀನನ್ನು ಸುಪ್ರೀಂ ಕೋರ್ಟ್ ನೀಡಿದೆ.

    ಫೆಬ್ರವರಿ 2020 ರಿಂದ ಜೈಲಿನಲ್ಲಿರುವ ಖಾನ್ ವಿರುದ್ಧ ಇದು 88 ಪ್ರಕರಣಗಳಿದ್ದು, ವಿಚಾರಣಾ ನ್ಯಾಯಾಲಯದಿಂದ 88 ಪ್ರಕರಣಗಳಿಗೂ ಜಾಮೀನು ಪಡೆದುಕೊಂಡಿದ್ದಾರೆ. 89ನೇ ಪ್ರಕರಣದಲ್ಲಿ ಜಾಮೀನಿಗೆ ವಿಚಾರಣೆ ಪ್ರಾರಂಭವಾಗುವ ಮುನ್ನ ಸುಪ್ರೀಂಕೋರ್ಟ್ ಆರ್ಟಿಕಲ್ 142 ಮೂಲಕ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ಲಾಲು ಪ್ರಸಾದ್ ಯಾದವ್‍ಗೆ ಶಾಕ್ ಕೊಟ್ಟ ಸಿಬಿಐ – ಲಾಲು, ಪುತ್ರಿ ನಿವಾಸದ ಮೇಲೆ ದಾಳಿ

    ಇತ್ತೀಚೆಗೆ ರಾಂಪುರ ಪಬ್ಲಿಕ್ ಸ್ಕೂಲ್‍ನ ಭೂ ಕಬಳಿಕೆ ಮತ್ತು ಶಾಲೆಗೆ ಮಾನ್ಯತೆ ಪಡೆಯಲು ಕಟ್ಟಡದ ಪ್ರಮಾಣಪತ್ರಗಳನ್ನು ನಕಲಿ ಮಾಡಲಾಗಿದೆ ಎಂಬ ಆರೋಪವನ್ನು ಅಜಂ ಖಾನ್ ಮೇಲೆ ಹೊರಿಸಲಾಗಿತ್ತು. ಇದನ್ನೂ ಓದಿ: ಮುಂದುವರಿದ ಮಳೆ ಅಬ್ಬರ: ಉಡುಪಿ, ಶಿವಮೊಗ್ಗ, ದಾವಣಗೆರೆ, ಹಾವೇರಿಯಲ್ಲಿ ಶಾಲೆಗಳಿಗೆ ರಜೆ

    ಇದೀಗ ಅಜಂ ಖಾನ್ ಬಿಡುಗಡೆಯಾಗುತ್ತಿರುವ ಹಿನ್ನೆಲೆ ಅವರನ್ನು ಬರಮಾಡಿಕೊಳ್ಳಲು ಪಕ್ಷದ ಬೆಂಬಲಿಗರು ಬೆಳ್ಳಂಬೆಳಗ್ಗೆ ಸೀತಾಪುರ ಜೈಲಿನ ಬಳಿ ಜಮಾಯಿಸಿ ಜೈಕಾರ ಕೂಗಿದರು. ಅವರ ಪುತ್ರರಾದ ಅಬ್ದುಲ್ಲಾ ಮತ್ತು ಅದೀಬ್ ಸಹ ಜೈಲಿನ ಬಳಿ ಆಗಮಿಸಿ ತಂದೆಯನ್ನು ಸ್ವಾಗತಿಸಿದರು.