Tag: Samajwadi Party

  • 10 ಮುಸ್ಲಿಂ ಯುವತಿಯರನ್ನು ಕರೆತಂದು ಹಿಂದೂ ಯುವಕರು ಮದುವೆಯಾಗಿ: ಬಿಜೆಪಿ ಮಾಜಿ ಶಾಸಕ ವಿವಾದಾತ್ಮಕ ಹೇಳಿಕೆ

    10 ಮುಸ್ಲಿಂ ಯುವತಿಯರನ್ನು ಕರೆತಂದು ಹಿಂದೂ ಯುವಕರು ಮದುವೆಯಾಗಿ: ಬಿಜೆಪಿ ಮಾಜಿ ಶಾಸಕ ವಿವಾದಾತ್ಮಕ ಹೇಳಿಕೆ

    ಲಕ್ನೋ: ಹಿಂದೂ ಯುವಕರು ಕನಿಷ್ಠ 10 ಮುಸ್ಲಿಂ ಯುವತಿಯರನ್ನು ಕರೆದುಕೊಂಡು ಬಂದು ಮದುವೆಯಾಗಿ ಎಂದು ಬಿಜೆಪಿ ಮಾಜಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಮುಸ್ಲಿಂ ಯುವತಿಯರೊಂದಿಗೆ ಓಡಿಹೋದ ಯಾವುದೇ ಹಿಂದೂ ಯುವಕರಿಗೆ ಉದ್ಯೋಗ ವ್ಯವಸ್ಥೆ ಮಾಡಲಾಗುವುದು. ರಾಜ್ಯದಲ್ಲಿ ಹಿಂದೂಗಳು ಯಾವುದೇ ಭಯವಿಲ್ಲದೆ ಏನು ಬೇಕಾದರೂ ಮಾಡಬಹುದು ಎಂದು ಉತ್ತರ ಪ್ರದೇಶದ ಮಾಜಿ ಶಾಸಕ ನಾಲಿಗೆ ಹರಿಬಿಟ್ಟಿದ್ದಾರೆ. ಇದನ್ನೂ ಓದಿ: ಅತ್ಯಾಚಾರ ಕೇಸ್‌ – ಸ್ವಯಂ ಘೋಷಿತ ದೇವಮಾನವ ಅಸರಾಂಗೆ ಮಧ್ಯಂತರ ಜಾಮೀನು

    ಸಿದ್ಧಾರ್ಥನಗರ ಜಿಲ್ಲೆಯ ದುಮಾರಿಯಾಗಂಜ್‌ನ ಮಾಜಿ ಬಿಜೆಪಿ ಶಾಸಕ ರಾಘವೇಂದ್ರ ಪ್ರತಾಪ್ ಸಿಂಗ್, ಕ್ಷೇತ್ರದ ಧಂಖರ್‌ಪುರ ಗ್ರಾಮಕ್ಕೆ ಹೋಗಿದ್ದರು. ಅಲ್ಲಿ ಇಬ್ಬರು ಹಿಂದೂ ಮಹಿಳೆಯರನ್ನು ಮುಸ್ಲಿಂ ಪುರುಷರೊಂದಿಗೆ ಬಲವಂತವಾಗಿ ಮದುವೆಯಾಗಿಸಿ ಮತಾಂತರಿಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬೆಳವಣಿಗೆ ಬೆನ್ನಲ್ಲೇ ಮಾಜಿ ಶಾಸಕ ಹೇಳಿಕೆ ನೀಡಿದ್ದಾರೆ.

    ಮುಸ್ಲಿಂ ಹುಡುಗಿಯೊಂದಿಗೆ ಓಡಿಹೋದ ಯಾವುದೇ ಹಿಂದೂವಿನ ಮದುವೆಯನ್ನು ನಾನು ಮುಂದೆ ನಿಂತು ಮಾಡಿಸುತ್ತೇನೆ. ಅವರಿಗೆ ಉದ್ಯೋಗ ವ್ಯವಸ್ಥೆಯನ್ನೂ ಮಾಡುತ್ತೇನೆ ಎಂದು ಸಿಂಗ್‌ ತಿಳಿಸಿದ್ದಾರೆ.

    ಈಗ ಅಖಿಲೇಶ್‌ ಯಾದವ್‌ ಅವರ ಆಡಳಿತ ಇಲ್ಲ. ಭಯಪಡುವ ಅಗತ್ಯವಿಲ್ಲ. ನಾವು ನಿಮ್ಮೊಂದಿಗಿದ್ದೇವೆ. ಮುಸ್ಲಿಂ ಹುಡುಗರು ಇಬ್ಬರು ಹಿಂದೂ ಹುಡುಗಿಯರನ್ನು ಮದುವೆಯಾಗಿರುವ ವಿಚಾರ ಅಲ್ಲಿಗೆ ನಿಲ್ಲುವುದಿಲ್ಲ. ಹಿಂದೂ ಯುವಕರು ಕನಿಷ್ಠ 10 ಮುಸ್ಲಿಂ ಹುಡುಗಿಯರನ್ನು ಕರೆತಂದು ಮದುವೆಯಾಗಬೇಕು. ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: 25 ರಿಂದ 35 ಲಕ್ಷಕ್ಕೆ ಸರ್ಕಾರಿ ಹುದ್ದೆ ಮಾರಾಟ: ತನಿಖೆ ನಡೆಸಲು ತ.ನಾಡು ಪೊಲೀಸರಿಗೆ ಇಡಿ ಪತ್ರ

    ದುಮಾರಿಯಾಗಂಜ್ ಪ್ರದೇಶವನ್ನು ಮಿನಿ ಪಾಕಿಸ್ತಾನ ಎಂದು ಕರೆಯಲಾಗುತ್ತಿತ್ತು. ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದಾಗಿನಿಂದ, ಇಲ್ಲಿನ ಜನರ ಭಯಕ್ಕೆ ಕಡಿವಾಣ ಬಿದ್ದಿದೆ. ಇಲ್ಲದಿದ್ದರೆ, ಹಿಂದೂಗಳು ಭಯದಿಂದ ವಾಸಿಸುತ್ತಿದ್ದ ಹಲವಾರು ಹಳ್ಳಿಗಳಿದ್ದವು. ಅವರ ಹೆಣ್ಣುಮಕ್ಕಳು ಮತ್ತು ಸೊಸೆಯಂದಿರು ಸುರಕ್ಷಿತವಾಗಿರಲಿಲ್ಲ. ಧಂಖರ್‌ಪುರ ಗ್ರಾಮದಲ್ಲಿ ಮುಸ್ಲಿಂ ಬಹುಸಂಖ್ಯಾತರಿದ್ದು, ಒಂದು ವಾರದಲ್ಲಿ ಇಬ್ಬರು ಹಿಂದೂಗಳನ್ನು ಆಮಿಷವೊಡ್ಡಿ ಇಸ್ಲಾಂಗೆ ಮತಾಂತರಗೊಳಿಸಲಾಯಿತು ಎಂದು ಆರೋಪಿಸಿದ್ದಾರೆ.

    ಬಿಜೆಪಿ ಮಾಜಿ ಶಾಸಕನ ಹೇಳಿಕೆಗಳನ್ನು ಸಮಾಜವಾದಿ ಪಕ್ಷ ಖಂಡಿಸಿದೆ. ಕೋಮು ಸಾಮರಸ್ಯವನ್ನು ಕದಡಲು ಪದೇ ಪದೇ ಪ್ರಯತ್ನಗಳು ನಡೆಯುತ್ತಿವೆ. ಮುಸ್ಲಿಮರನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದೆ.

  • ಏನ್‌ ಮಾಡ್ತಿದ್ದೀರಿ… ಸೆಲ್ಫಿ ಕ್ಲಿಕ್ಕಿಸಿಕೊಳ್ತಿದ್ದ ವ್ಯಕ್ತಿಯನ್ನ ಗದರಿಸಿ ದೂರ ತಳ್ಳಿದ ಜಯಾ ಬಚ್ಚನ್‌

    ಏನ್‌ ಮಾಡ್ತಿದ್ದೀರಿ… ಸೆಲ್ಫಿ ಕ್ಲಿಕ್ಕಿಸಿಕೊಳ್ತಿದ್ದ ವ್ಯಕ್ತಿಯನ್ನ ಗದರಿಸಿ ದೂರ ತಳ್ಳಿದ ಜಯಾ ಬಚ್ಚನ್‌

    ನವದೆಹಲಿ: ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ (Jaya Bachchan) ತನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯೊಬ್ಬರನ್ನ ಗದರಿಸಿ ದೂರ ತಳ್ಳಿದ ಪ್ರಸಂಗ ದೆಹಲಿಯ ಸಂವಿಧಾನ ಕ್ಲಬ್‌ನ (Constitution Club) ನಡೆದಿದೆ.

    ಹಿರಿಯ ನಟಿಯೂ ಆಗಿರುವ ಸಂಸದೆ ಜಯಾ ಬಚ್ಚನ್‌ ಇಂದು ಮಧ್ಯಾಹ್ನ ಸಂವಿಧಾನ ಕ್ಲಬ್‌ನ ಗೇಟ್‌ ಬಳಿ ನಿಂತು ಗಣ್ಯರೊಂದಿಗೆ ಸಂವಾದ ನಡೆಸುತ್ತಿದ್ದರು. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಅವರಿಗರಿವಿಲ್ಲದಂತೆ ಸೆಲ್ಫಿ ಕ್ಲಿಕ್ಕಿಕೊಳ್ಳುತ್ತಿದ್ದರು. ಇದನ್ನೂ ಓದಿ: ಸೀತೆಯಿಂದ ಬೇರ್ಪಟ್ಟ ನಂತರ ಶ್ರೀರಾಮ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ: ತಮಿಳು ಕವಿ ವಿವಾದಾತ್ಮಕ ಹೇಳಿಕೆ

    ಇದರಿಂದ ಕ್ಷಣದಲ್ಲಿ ತಾಳ್ಮೆ ಕಳೆದುಕೊಂಡ ಜಯಾ ಬಚ್ಚನ್‌, ನೀವು ಏನ್‌ ಮಾಡ್ತಾ ಇದ್ದೀರಿ? ಅಂತ ವ್ಯಕ್ತಿಯನ್ನ ಜೋರಾಗಿ ತಳ್ಳಿದರು. ಇದನ್ನೂ ಓದಿ: ಕೆ.ಎನ್.ರಾಜಣ್ಣರನ್ನ ಸಂಪುಟದಿಂದ ತೆಗೆದದ್ದು ದುರದೃಷ್ಟಕರ, ಹೀಗೆ ಆಗಬಾರದಿತ್ತು: ಬಿ.ಕೆ.ಹರಿಪ್ರಸಾದ್‌

    ಜಯಾ ಬಚ್ಚನ್‌ ವ್ಯಕ್ತಿಯನ್ನ ಹಿಡಿದು ತಳ್ಳಿದ 32 ಸೆಕೆಂಡುಗಳ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಪರ ವಿರೋಧ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅನುಮತಿಯಿಲ್ಲದೇ ಏಕೆ ಸೆಲ್ಫಿ ಕ್ಲಿಕ್ಕಿಸಬೇಕು? ಅಂತ ಕೇಳಿದ್ರೆ, ಇನ್ನೂಬ್ಬರು ಇದು ದುರಹಂಕಾರಿ ನಡವಳಿಕೆ ಎಂದಿದ್ದಾರೆ. ಮತ್ತೊಬ್ಬರು ಜನರಿಗಾಗಿ ಹೋರಾಡುತ್ತೇನೆ ಅನ್ನುವವರು ಮತ್ತೊಬ್ಬ ವ್ಯಕ್ತಿಯನ್ನ ಹೀಗೆ ತಳ್ಳೋದು ಸರಿಯೇ? ಅಂತ ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ತಾಂತ್ರಿಕ ದೋಷ ಶಂಕೆ – ಲ್ಯಾಂಡಿಂಗ್‌ ವೇಳೆ ಕಾರ್ಗೋ ವಿಮಾನದ ಎಂಜಿನ್‌ನಲ್ಲಿ ಬೆಂಕಿ

  • ಸಂಸದೆ ಜೊತೆ ಎಂಗೇಜ್‌ಮೆಂಟ್‌ ಆಗ್ತಿದ್ದಾರೆ ರಿಂಕು ಸಿಂಗ್‌ – ಕ್ರಿಕೆಟಿಗನ ಕೈ ಹಿಡಿಯೋ ಚೆಲುವೆ ಯಾರು?

    ಸಂಸದೆ ಜೊತೆ ಎಂಗೇಜ್‌ಮೆಂಟ್‌ ಆಗ್ತಿದ್ದಾರೆ ರಿಂಕು ಸಿಂಗ್‌ – ಕ್ರಿಕೆಟಿಗನ ಕೈ ಹಿಡಿಯೋ ಚೆಲುವೆ ಯಾರು?

    ಮುಂಬೈ: ಭಾರತೀಯ ಕ್ರಿಕೆಟಿಗ ರಿಂಕು ಸಿಂಗ್‌ (Rinku Singh) ಸಮಾಜವಾದಿ ಪಕ್ಷದ ಸಂಸದೆ ಪ್ರಿಯಾ ಸರೋಜಾ (Priya Saroj) ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲು ಸಜ್ಜಾಗಿದ್ದಾರೆ.

    ಕೋಲ್ಕತ್ತಾ ನೈಟ್ ರೈಡರ್ಸ್ (KKR) ಜೊತೆಗಿನ ರಿಂಕು ಅವರ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025 ಅಭಿಯಾನ ಈಗಾಗಲೇ ಮುಗಿದಿದೆ. ಬ್ಯಾಟ್ಸ್‌ಮನ್ ತಮ್ಮ ವೈಯಕ್ತಿಕ ಜೀವನದ ಕೆಲವು ಪ್ರಮುಖ ಬೆಳವಣಿಗೆಗಳತ್ತ ಗಮನ ಹರಿಸಿದ್ದಾರೆ. ಇದನ್ನೂ ಓದಿ: ಇಂದು ಪಂಜಾಬ್‌-ಮುಂಬೈ ನಡ್ವೆ ಕ್ವಾಲಿಫೈಯರ್‌-2 ಕದನ – ಗೆದ್ದವರೊಂದಿಗೆ ಪ್ರಶಸ್ತಿಗಾಗಿ ಆರ್‌ಸಿಬಿ ಗುದ್ದಾಟ!

     

    View this post on Instagram

     

    A post shared by PRIYA SAROJ (@ipriyasarojmp)

    ಜೂನ್ 8 ರಂದು ಲಕ್ನೋದ ಹೋಟೆಲ್‌ನಲ್ಲಿ ರಿಂಕು ಮತ್ತು ಸಂಸದೆ ಪ್ರಿಯಾ ನಿಶ್ಚಿತಾರ್ಥ ಆಗಲಿದ್ದಾರೆ ಎಂದು ತಿಳಿದುಬಂದಿದೆ. ರಿಂಕು ಮತ್ತು ಪ್ರಿಯಾ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದವು. ಆಗಲೇ ಅವರು ಪರಸ್ಪರ ಮದುವೆಯಾಗಲು ಬಯಸುತ್ತಾರೆ ಎಂಬ ಸುದ್ದಿ ಹರಡಿತ್ತು. ಆದರೆ, ಅಧಿಕೃತ ನಿಶ್ಚಿತಾರ್ಥ ಸಮಾರಂಭವು ಈ ತಿಂಗಳು ನಡೆಯಲಿದೆ ಎಂದು ಈಗ ತಿಳಿದುಬಂದಿದೆ.

    ಕೆಲವು ತಿಂಗಳ ಹಿಂದೆ ಪ್ರಿಯಾಳ ತಂದೆ ತುಫಾನಿ ಸರೋಜ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಸಮಾಜವಾದಿ ಪಕ್ಷದ ಹಾಲಿ ಶಾಸಕರೂ ಆಗಿರುವ ತುಫಾನಿ, ರಿಂಕು ಸಿಂಗ್ ಮತ್ತು ಪ್ರಿಯಾ ಸರೋಜ್ ಇಬ್ಬರೂ ಮದುವೆಯಾಗಲು ನಮ್ಮ ಅನುಮತಿ ಕೋರಿದರು. ನಿಶ್ಚಿತಾರ್ಥ ಇನ್ನೂ ನಡೆದಿಲ್ಲ. ಆರಂಭಿಕ ಮಾತುಕತೆಗಳು ಮಾತ್ರ ನಡೆದಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೋ’ಹಿಟ್‌’ ಆಟಕ್ಕೆ ಗಿಲ್‌ ಪಡೆ ಡಲ್‌; ಮುಂಬೈಗೆ 20 ರನ್‌ಗಳ ಜಯ – ಫೈನಲ್‌ ಸ್ಥಾನಕ್ಕೆ ಪಂಜಾಬ್‌ ವಿರುದ್ಧ ಫೈಟ್‌

    2025ರ ಐಪಿಎಲ್‌ನಲ್ಲಿ ಕೆಕೆಆರ್‌ ತಂಡದ ರಿಂಕು ಸಿಂಗ್‌ ಅಷ್ಟಾಗಿ ಗಮನ ಸೆಳೆಯಲಿಲ್ಲ. 29.42 ರ ಸರಾಸರಿಯಲ್ಲಿ 206 ರನ್ ಗಳಿಸಿದ್ದಾರೆ. 153.73 ರ ಸ್ಟ್ರೈಕ್-ರೇಟ್ ಹೊಂದಿದ್ದಾರೆ.

    ಭಾರತದ ಟಿ20ಐ ತಂಡದ ಪ್ರಮುಖ ಆಟಗಾರನಾಗಿ ರಿಂಕು ಹೊರಹೊಮ್ಮಿದ್ದಾರೆ. 30 ಟಿ20ಐ ಪಂದ್ಯಗಳು ಮತ್ತು 22 ಇನ್ನಿಂಗ್ಸ್‌ಗಳಲ್ಲಿ ರಿಂಕು 507 ರನ್ ಗಳಿಸಿದ್ದಾರೆ. ಇದರಲ್ಲಿ ಮೂರು ಅರ್ಧಶತಕಗಳಿವೆ. ಅವರು ಇನ್ನೂ ತಮ್ಮ ಚೊಚ್ಚಲ ಟಿ20ಐ ಶತಕವನ್ನು ಬಾರಿಸಿಲ್ಲ. 27 ವರ್ಷದ ಅವರು 2023 ರಲ್ಲಿ ಐರ್ಲೆಂಡ್ ವಿರುದ್ಧ ಟಿ20ಐಗೆ ಪಾದಾರ್ಪಣೆ ಮಾಡಿದರು. ರಿಂಕು ಭಾರತ ಪರ ಎರಡು ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಲಿಸ್ಟ್-ಎ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. 52 ಇನ್ನಿಂಗ್ಸ್‌ಗಳಲ್ಲಿ 1,899 ರನ್ ಗಳಿಸಿದ್ದಾರೆ. ಇದನ್ನೂ ಓದಿ: ಐಪಿಎಲ್‌ನಲ್ಲಿ ಎರಡೆರಡು ದಾಖಲೆ ಬರೆದ ಹಿಟ್‌ಮ್ಯಾನ್‌

  • ಉತ್ತರಪ್ರದೇಶದಲ್ಲಿ ಕೂತಿದ್ದ ಕುರ್ಚಿಯಿಂದ ಬಿದ್ದು ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಸಾವು

    ಉತ್ತರಪ್ರದೇಶದಲ್ಲಿ ಕೂತಿದ್ದ ಕುರ್ಚಿಯಿಂದ ಬಿದ್ದು ಎಚ್‌ಡಿಎಫ್‌ಸಿ ಬ್ಯಾಂಕ್ ಉದ್ಯೋಗಿ ಸಾವು

    – ಅಧಿಕ ಕೆಲಸದೊತ್ತಡವೇ ಕಾರಣ ಎಂದು ಅಖಿಲೇಶ್ ಯಾದವ್ ಆರೋಪ

    ಲಕ್ನೋ: ಕೆಲಸ ಮಾಡುವಾಗ ಕೂತಿದ್ದ ಕುರ್ಚಿಯಿಂದ ಬಿದ್ದು ಬ್ಯಾಂಕ್ ಉದ್ಯೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಲಕ್ನೋದ ವಿಭೂತಿಖಂಡದ (VibhutiKhanda) ಹೆಚ್‌ಡಿಎಫ್‌ಸಿ ಬ್ಯಾಂಕ್ (HDFC Bank Branch) ಶಾಖೆಯಲ್ಲಿ ನಡೆದಿದೆ.

    ಇತ್ತಿಚೇಗಷ್ಟೇ ಕೆಲಸದ ಒತ್ತಡದಿಂದಾಗಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದ ಘಟನೆ ದೇಶಾದ್ಯಂತ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ.ಇದನ್ನೂ ಓದಿ: ಕೊಲೆ ಆರೋಪಿ ತಾಲೂಕು ಕಸಾಪ ಅಧ್ಯಕ್ಷ ಸ್ಥಾನದಿಂದ ತೆರವು – ರಾಜ್ಯಾಧ್ಯಕ್ಷ ಆದೇಶ

    ಮೃತ ಮಹಿಳೆಯನ್ನು 45 ವರ್ಷದ ಸದಾಫ್ ಫಾತಿಮಾ ಎಂದು ಗುರುತಿಸಲಾಗಿದ್ದು, ಲಕ್ನೋದ ವಿಭೂತಿಖಂಡದ ಹೆಚ್‌ಡಿಎಫ್‌ಸಿ ಬ್ಯಾಂಕ್ ಶಾಖೆಯಲ್ಲಿ ಹೆಚ್ಚುವರಿ ಉಪಾಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

    ವಿಭೂತಿಖಂಡದ ಸಹಾಯಕ ಪೊಲೀಸ್ ಆಯುಕ್ತ ರಾಧಾರಮಣ ಮಾತನಾಡಿ, ಆಕೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಾವಿಗೆ ಕಾರಣ ಏನು ಎಂಬುದು ಪರೀಕ್ಷೆಯ ಬಳಿಕ ಸ್ಪಷ್ಟವಾಗುತ್ತದೆ ಎಂದಿದ್ದಾರೆ. ಈ ಬೆನ್ನಲ್ಲೇ ಆಕೆಯ ಸಹೋದ್ಯೋಗಿ ಪ್ರತಿಕ್ರಿಯಿಸಿ, ಫಾತಿಮಾ ಕೆಲಸದ ಒತ್ತಡದಲ್ಲಿದ್ದಳು ಎಂದು ತಿಳಿಸಿದ್ದಾರೆ.

    ಪ್ರಕರಣದ ಕುರಿತು ಸಮಾಜವಾದಿ ಪಕ್ಷದ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಎಕ್ಸ್ (X) ಖಾತೆಯಲ್ಲಿ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಇದು ಆತಂಕಕಾರಿ ವಿಷಯವಾಗಿದೆ. ದೇಶದ ಪ್ರಸ್ತುತ ಆರ್ಥಿಕ ಒತ್ತಡವನ್ನು ಪ್ರತಿಬಿಂಬಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ಕಂಪನಿಗಳು ಹಾಗೂ ಸರ್ಕಾರಿ ಇಲಾಖೆಗಳು ಗಂಭೀರವಾಗಿ ಯೋಚಿಸಬೇಕು. ಇದು ದೇಶದ ಮಾನವ ಸಂಪನ್ಮೂಲಕ್ಕೆ ತುಂಬಲಾರದ ನಷ್ಟ ಎಂದು ಬರೆದುಕೊಂಡಿದ್ದಾರೆ.ಇದನ್ನೂ ಓದಿ: ನಿನ್ನೆ ಬಂದಿರೋದು ಪೊಲಿಟಿಕಲ್‌ ಜಡ್ಜ್‌ಮೆಂಟ್‌: ಜಮೀರ್‌ ಅಹ್ಮದ್‌

  • ಹಣಕಾಸು ವಿಚಾರಕ್ಕೆ ವ್ಯಕ್ತಿಗೆ ಜೀವ ಬೆದರಿಕೆ – ಯುಪಿ ಸಂಸದನ ಪುತ್ರನ ವಿರುದ್ಧ ಎಫ್‍ಐಆರ್

    ಹಣಕಾಸು ವಿಚಾರಕ್ಕೆ ವ್ಯಕ್ತಿಗೆ ಜೀವ ಬೆದರಿಕೆ – ಯುಪಿ ಸಂಸದನ ಪುತ್ರನ ವಿರುದ್ಧ ಎಫ್‍ಐಆರ್

    ಲಕ್ನೋ: ಸಮಾಜವಾದಿ ಪಕ್ಷದ (Samajwadi Party) ಫೈಜಾಬಾದ್ ಸಂಸದ ಅವಧೇಶ್ ಪ್ರಸಾದ್ ಅವರ ಪುತ್ರ ಅಜಿತ್ ಪ್ರಸಾದ್ ವಿರುದ್ಧ ಅಪಹರಣ, ಬೆದರಿಕೆ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ರವಿ ತಿವಾರಿ ಎಂಬವರು ಇಲ್ಲಿನ ಕೊತ್ವಾಲಿ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಎಫ್‍ಐಆರ್ ದಾಖಲಿಸಿದ್ದಾರೆ. ದೂರಿನ ಅಡಿ ಬಿಎನ್‍ಎಸ್ ಸೆಕ್ಷನ್ 140 (3) (ಅಪಹರಣ), 115 (2) (ಹಲ್ಲೆ), 351 (3) (ಜೀವ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕೆಲಸ ಬಿಟ್ಟು ಬೈಕ್ ಸಾಲ ಹೇಗೆ ಕಟ್ತೀಯಾ?: ಬುದ್ಧಿವಾದ ಹೇಳಿದ್ದಕ್ಕೆ ನೇಣಿಗೆ ಶರಣಾದ ಯುವಕ

    ಶನಿವಾರ ಮಧ್ಯಾಹ್ನ ಜಮೀನು ಖರೀದಿ ಕಮಿಷನ್ ವಿಚಾರದಲ್ಲಿ ಅಜಿತ್ ಪ್ರಸಾದ್ ಹಾಗೂ ರವಿ ತಿವಾರಿ ನಡುವೆ ಗಲಾಟೆಯಾಗಿದೆ. ನಂತರ ಫೈಜಾಬಾದ್ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಶಾಖೆಯ ಬಳಿ ಅಜಿತ್ ಪ್ರಸಾದ್ ಮತ್ತು ಇತರ ಐದಾರು ಮಂದಿ ತಿವಾರಿಯವರನ್ನು ಅಪಹರಿಸಿ, ಹಲ್ಲೆ, ಬೆದರಿಕೆ ಹಾಕಿದ್ದಾರೆ ಎಂದು ಎಫ್‍ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ತನಿಖೆ ನಡೆಯತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆಸ್ತಿ ವ್ಯವಹಾರದಲ್ಲಿ ತೊಡಗಿರುವ ಅಜಿತ್ ಪ್ರಸಾದ್ ಅವರು ಮಿಲ್ಕಿಪುರ ಕ್ಷೇತ್ರದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಯಿದೆ. ಪ್ರಸಾದ್ ತಂದೆ ಇಲ್ಲಿನ ಶಾಸಕರಾಗಿದ್ದರು. ಅವರು ಸಂಸದರಾಗಿ ಆಯ್ಕೆಯಾದ ನಂತರ ಈ ಸ್ಥಾನ ತೆರವಾಗಿತ್ತು. ಇದನ್ನೂ ಓದಿ: ಬೆಂಗಳೂರಲ್ಲಿ ಮಹಿಳೆ ಭೀಕರ ಹತ್ಯೆ; ಅಶ್ರಫ್‌ ಸೇರಿ ನಾಲ್ವರ ಮೇಲೆ ಕುಟುಂಬಸ್ಥರ ಅನುಮಾನ

  • General Elections2024: ನೆಚ್ಚಿನ ಅಭ್ಯರ್ಥಿಗಳ ಮೇಲೆ ಲಕ್ಷ ಲಕ್ಷ ಬೆಟ್ಟಿಂಗ್‌ ಕಟ್ಟಿದ ವಕೀಲರು!

    General Elections2024: ನೆಚ್ಚಿನ ಅಭ್ಯರ್ಥಿಗಳ ಮೇಲೆ ಲಕ್ಷ ಲಕ್ಷ ಬೆಟ್ಟಿಂಗ್‌ ಕಟ್ಟಿದ ವಕೀಲರು!

    ಲಕ್ನೋ: ಇಷ್ಟು ದಿನ ಐಪಿಎಲ್‌ನಲ್ಲಿ ಮಾತ್ರ ಬೆಟ್ಟಿಂಗ್‌ ನಡೆಯುತ್ತಿತ್ತು. ಬ್ಯಾಟರ್‌, ಬೌಲರ್‌ಗಳು ಕಣಕ್ಕಿಳಿದರೆ, ಇತಿಂಷ್ಟು ರನ್‌ ಹೊಡೆಯುತ್ತಾರೆ, ವಿಕೆಟ್‌ ತೆಗೆಯುತ್ತಾರೆ, ಸಿಕ್ಸರ್‌ ಬೌಂಡರಿ ಸಿಡಿಸುತ್ತಾರೆ ಎಂದು ಬೆಟ್ಟಿಂಗ್‌ ನಡೆಯುತ್ತದೆ. ಆದ್ರೆ ಇಲ್ಲಿ ವಕೀಲರಿಬ್ಬರು (UP Lawyers) ಲೋಕಸಭಾ ಚುನಾವಣೆಯ (Lok Sabha Elections) ಅಖಾಡದಲ್ಲಿರುವ ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಲಕ್ಷ ಲಕ್ಷ ಹಣ ಬೆಟ್ಟಿಂಗ್‌ ಮಾಡಿ ಅಚ್ಚರಿ ಮೂಡಿಸಿದ್ದಾರೆ.

    ಹೌದು. ಮೇ 7ರಂದು 3ನೇ ಲೋಕಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಚುನಾವಣೆಯಲ್ಲಿ ಉತ್ತರ ಪ್ರದೇಶದ ಬದೌನ್ ಕ್ಷೇತ್ರದಿಂದ ಸ್ಪರ್ಧಿಸಿರುವ ಇಬ್ಬರು‌ ನೆಚ್ಚಿನ ಅಭ್ಯರ್ಥಿಗಳ ಮೇಲೆ ವಕೀಲರಿಬ್ಬರು ತಲಾ 2 ಲಕ್ಷ ರೂ. ಬಾಜಿ (Betting) ಕಟ್ಟಿದ್ದಾರೆ. ಉತ್ತರ ಪ್ರದೇಶದ ಬದೌನ್ ಕ್ಷೇತ್ರದಲ್ಲಿ ವಕೀಲ ಸತ್ಯೇಂದ್ರ ಪಾಲ್ ಮತ್ತು ವಕೀಲ ದಿವಾಕರ್ ವರ್ಮಾ ಬೆಟ್ಟಿಂಗ್‌ದಾರರಾಗಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ವೀಡಿಯೋ ವಿಚಾರ ಗೊತ್ತಿದ್ದು ಮೈತ್ರಿ ಟಿಕೆಟ್, ಮೋದಿ ಪ್ರಚಾರ: ಸಿಎಂ ವಾಗ್ದಾಳಿ 

    ಸತ್ಯೇಂದ್ರ ಪಾಲ್ ಸಮಾಜವಾದಿ ಪಕ್ಷದ (Samajwadi Party) ಅಭ್ಯರ್ಥಿ ಆದಿತ್ಯ ಯಾದವ್‌ ಮೇಲೆ, ದಿವಾಕರ್ ವರ್ಮಾ ಅವರು ಬಿಜೆಪಿಯ ದಿಗ್ವಿಜಯ್ ಸಿಂಗ್ ಶಾಕ್ಯಾ ಅವರು ಲೀಡ್‌ನಲ್ಲಿ ಗೆಲ್ಲುತ್ತಾರೆ ಎಂದು ಬೆಟ್ಟಿಂಗ್‌ ಕಟ್ಟಿದ್ದಾರೆ. ಇದರಲ್ಲಿ ಸೋತವರು ಮತ್ತೊಬ್ಬ ವಕೀಲರಿಗೆ 2 ಲಕ್ಷ ರೂ. ನೀಡುವುದಾಗಿ ಬೆಟ್ಟಿಂಗ್‌ ಕಟ್ಟಿದ್ದಾರೆ. ಇದನ್ನೂ ಲೀಗಲ್‌ ಮಾಡಿದ್ದು, ನಾಲ್ವರು ಸಾಕ್ಷಿಗಳ ಸಹಿಯೊಂದಿಗೆ ಅಫಿಡವಿಟ್‌ ಸಹ ಮಾಡಿಸಿದ್ದಾರೆ.

    3ನೇ ಹಂತದ ಚುನಾವಣೆಯಲ್ಲಿ ಉತ್ತರ ಪ್ರದೇಶದ ಸಂಭಾಲ್, ಹತ್ರಾಸ್, ಆಗ್ರಾ, ಫತೇಪುರ್ ಸಿಕ್ರಿ, ಫಿರೋಜಾಬಾದ್, ಮೈನ್‌ಪುರಿ, ಇಟಾಹ್, ಬದೌನ್, ಬರೇಲಿ ಮತ್ತು ಅಯೋನ್ಲಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಆಡಳಿತಾರೂಢ ಬಿಜೆಪಿ ರಾಷ್ಟ್ರೀಯ ಲೋಕದಳದೊಂದಿಗೆ ಮೈತ್ರಿಯಾಗಿ ಕಣಕ್ಕಿಳಿದಿದ್ದರೆ, ಸಮಾಜವಾದಿ ಪಕ್ಷವು ಚುನಾವಣೆಗಾಗಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದೆ. ಬಹುಜನ ಸಮಾಜ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸಿದೆ. ಇದನ್ನೂ ಓದಿ: ಸಂತೋಷ್ ಬಾಲರಾಜ್ ನಟನೆಯ ‘ಸತ್ಯಂ’ ಚಿತ್ರಕ್ಕೆ ಸೆನ್ಸಾರ್ ಮೆಚ್ಚುಗೆ!

  • ಕನೌಜ್‌ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಸ್ಪರ್ಧೆ

    ಕನೌಜ್‌ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಸ್ಪರ್ಧೆ

    ಲಕ್ನೋ: ಸಮಾಜವಾದಿ ಪಕ್ಷದ (Samajwadi Party) ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಕನೌಜ್‌ನಿಂದ ಸ್ಪರ್ಧಿಸಲಿದ್ದಾರೆ.

    ಯಾದವ್‌ ಅವರನ್ನು ಮೂರು ಬಾರಿ ಸಂಸತ್ತಿಗೆ ಕಳುಹಿಸಿದ ಕ್ಷೇತ್ರ ಮತ್ತು ಅವರ ಪತ್ನಿ ಡಿಂಪಲ್ ಯಾದವ್ ಹಾಗೂ ಎಸ್‌ಪಿ ದಿವಂಗತ ಮುಲಾಯಂ ಸಿಂಗ್ ಯಾದವ್‌ಗೆ ಮತ ಹಾಕಿ ಗೆಲ್ಲಿಸಿದ್ದ ಕ್ಷೇತ್ರವಿದು. ಇದನ್ನೂ ಓದಿ: ಸಂಪತ್ತು ಸಮೀಕ್ಷೆಯ ಮೂಲಕ ಅನ್ಯಾಯದ ಪ್ರಮಾಣವನ್ನು ಕಂಡುಹಿಡಿಯಲು ಬಯಸುತ್ತೇನೆ: ರಾಗಾ

    ಯುಪಿ ಮಾಜಿ ಮುಖ್ಯಮಂತ್ರಿ ಯಾದವ್ ಅವರು ನಾಳೆ ಮಧ್ಯಾಹ್ನ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ ಪಕ್ಷವು ತಿಳಿಸಿದೆ. ಅವರು 2019 ರಲ್ಲಿ ಅಜಂಗಢ ಕ್ಷೇತ್ರದಿಂದ ಗೆಲುವು ಸಾಧಿಸಿದ್ದರು. ಆದರೆ ಅವರು 2022 ರಲ್ಲಿ ಕರ್ಹಾಲ್‌ನಿಂದ ಯುಪಿ ವಿಧಾನಸಭೆಗೆ ಆಯ್ಕೆಯಾದ ನಂತರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

    ಕನೌಜ್‌ ಕ್ಷೇತ್ರ ಸಮಾಜವಾದಿ ಪಕ್ಷದ ಭದ್ರಕೋಟೆಯಾಗಿತ್ತು. ಆದರೆ 2019 ರಲ್ಲಿ ಸುಬ್ರತ್ ಪಾಠಕ್ ಅವರು 14,000 ಕ್ಕಿಂತ ಕಡಿಮೆ ಮತಗಳಿಂದ ಗೆಲ್ಲುವ ಮೂಲಕ ಕ್ಷೇತ್ರವನ್ನು ಬಿಜೆಪಿ ವಶಕ್ಕೆ ಪಡೆಯಿತು. 2012 ರಲ್ಲಿ ನಡೆದ ಉಪಚುನಾವಣೆಯಲ್ಲಿ ಅಖಿಲೇಶ್ ಯಾದವ್ ಅವರ ಪತ್ನಿ ಈ ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದರು. 2014 ರ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಮತ್ತೆ ಗೆದ್ದಿದ್ದರು. ಇದನ್ನೂ ಓದಿ: ವ್ಯಕ್ತಿಯ ಸಾವಿನ ನಂತರವೂ ಆಸ್ತಿ ಕಿತ್ತುಕೊಳ್ಳುವ ಮೂಲಕ ಕಾಂಗ್ರೆಸ್‌ ಲೂಟಿಗೆ ಇಳಿದಿದೆ: ನರೇಂದ್ರ ಮೋದಿ

    ಅಖಿಲೇಶ್ ಯಾದವ್ ಅವರು 2000 ರ ಉಪಚುನಾವಣೆಯಲ್ಲಿ ಕನೌಜ್‌ನಲ್ಲಿ ಗೆದ್ದಿದ್ದರು. 2004 ಮತ್ತು 2009 ರ ಸಾರ್ವತ್ರಿಕ ಚುನಾವಣೆಗಳಲ್ಲೂ ಗೆದ್ದು ಭದ್ರಬುನಾದಿ ಹಾಕಿದ್ದರು. ಈ ಚುನಾವಣೆಗಳಲ್ಲಿ ಕ್ರಮವಾಗಿ 3 ಲಕ್ಷ ಮತ್ತು 2.5 ಲಕ್ಷ ಮತಗಳಿಂದ ಗೆಲುವು ಸಾಧಿಸಿದ್ದರು.

  • ರಾಜ್ಯಸಭಾ ಚುನಾವಣೆ; ಬಿಜೆಪಿಗೆ ಅಡ್ಡಮತದಾನ ಮಾಡಿದ್ದ ನಾಲ್ವರು ಎಸ್‌ಪಿ ಶಾಸಕರಿಗೆ ‘ವೈ’ ಕೆಟಗರಿ ಭದ್ರತೆ

    ರಾಜ್ಯಸಭಾ ಚುನಾವಣೆ; ಬಿಜೆಪಿಗೆ ಅಡ್ಡಮತದಾನ ಮಾಡಿದ್ದ ನಾಲ್ವರು ಎಸ್‌ಪಿ ಶಾಸಕರಿಗೆ ‘ವೈ’ ಕೆಟಗರಿ ಭದ್ರತೆ

    ಲಕ್ನೋ: ಫೆ.27 ರಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಡ್ಡ ಮತದಾನ ಮಾಡಿದ ಸಮಾಜವಾದಿ ಪಕ್ಷದ ನಾಲ್ವರು ಶಾಸಕರಿಗೆ ವೈ-ಕೆಟಗರಿ ಭದ್ರತೆ ನೀಡಲಾಗಿದೆ.

    ಅಭಯ್ ಸಿಂಗ್ (ಗೋಸೈಗಂಜ್), ಮನೋಜ್ ಕುಮಾರ್ ಪಾಂಡೆ (ಉಂಚಹರ್), ರಾಕೇಶ್ ಪ್ರತಾಪ್ ಸಿಂಗ್ (ಗೌರಿಗಂಜ್) ಮತ್ತು ವಿನೋದ್ ಚತುರ್ವೇದಿ (ಕಲ್ಪಿ) ಶಾಸಕರು ವೈ-ಕೆಟಗರಿ ಭದ್ರತೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಲೇಹ್‌ನಲ್ಲಿ ಸೈನಿಕರೊಂದಿಗೆ ಹೋಳಿ ಆಚರಿಸಿದ ರಾಜನಾಥ್ ಸಿಂಗ್

    ಈ ನಾಲ್ವರು ಶಾಸಕರು ಹಾಗೂ ಇತರ ಮೂರು ಪಕ್ಷದ ಶಾಸಕರಾದ ಪೂಜಾ ಪಾಲ್, ರಾಕೇಶ್ ಪಾಂಡೆ ಮತ್ತು ಅಶುತೋಷ್ ಮೌರ್ಯ, ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಡ್ಡ ಮತದಾನ ಮಾಡಿದ್ದರು. ಕೇಸರಿ ಪಕ್ಷದ ಅಭ್ಯರ್ಥಿ ಸಂಜಯ್ ಸೇಠ್ ಅವರಿಂದ, ಸಮಾಜವಾದಿ ಪಕ್ಷದ ಅಭ್ಯರ್ಥಿ ಅಲೋಕ್ ರಂಜನ್ ಸೋಲಿಗೆ ಈ ಬೆಳವಣಿಗೆ ಕಾರಣವಾಯಿತು.

    ಮತ್ತೊಬ್ಬ ಶಾಸಕ ಮಹಾರಾಜಿ ಪ್ರಜಾಪತಿ ಗೈರಾಗಿದ್ದರು. ರಾಕೇಶ್ ಪಾಂಡೆ ಅವರು ಸಂಸದ ರಿತೇಶ್ ಪಾಂಡೆ ಅವರ ತಂದೆ. ಅವರು ಇತ್ತೀಚೆಗೆ ಬಿಎಸ್ಪಿಯಿಂದ ಬಿಜೆಪಿಗೆ ಸೇರಿದ್ದರು. ಇದನ್ನೂ ಓದಿ: ನಿವೃತ್ತ ವಾಯುಸೇನೆ ಮುಖ್ಯಸ್ಥ ಭದೌರಿಯಾ ಬಿಜೆಪಿ ಸೇರ್ಪಡೆ

    ವೈ-ಕೆಟಗರಿ ಭದ್ರತೆಯ ಭಾಗವಾಗಿ ಎಂಟು ಸಿಆರ್‌ಪಿಎಫ್ ಸಿಬ್ಬಂದಿ ಈ ಶಾಸಕರ ಕಾವಲು ಕಾಯಲಿದ್ದಾರೆ. ಐವರು ಸಿಬ್ಬಂದಿಯು ಶಾಸಕರ ನಿವಾಸದಲ್ಲಿ ಕಾವಲಾಗಿರುತ್ತಾರೆ. ಉಳಿದವರು ಶಾಸಕರೊಂದಿಗೆ ಪ್ರಯಾಣಿಸುತ್ತಾರೆ.

  • ಉತ್ತರ ಪ್ರದೇಶದ 16 ಲೋಕಸಭಾ ಕ್ಷೇತ್ರಗಳಿಗೆ SP ಅಭ್ಯರ್ಥಿಗಳ ಪಟ್ಟಿ ರಿಲೀಸ್‌ – ಅಖಿಲೇಶ್‌ ಯಾದವ್‌ ಪತ್ನಿಯೂ ಕಣಕ್ಕೆ

    ಉತ್ತರ ಪ್ರದೇಶದ 16 ಲೋಕಸಭಾ ಕ್ಷೇತ್ರಗಳಿಗೆ SP ಅಭ್ಯರ್ಥಿಗಳ ಪಟ್ಟಿ ರಿಲೀಸ್‌ – ಅಖಿಲೇಶ್‌ ಯಾದವ್‌ ಪತ್ನಿಯೂ ಕಣಕ್ಕೆ

    – ಓರ್ವ ಮುಸ್ಲಿಂ, ದಲಿತ ಅಭ್ಯರ್ಥಿಗಳಿಗೆ ಸ್ಥಾನ

    ಲಕ್ನೋ: ಉತ್ತರ ಪ್ರದೇಶದ (UP) 16 ಲೋಕಸಭಾ ಕ್ಷೇತ್ರಗಳಿಗೆ (Lok Sabha Seats) ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಿಸಿದೆ. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಅಧಿಕೃತವಾಗಿ ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ದಾರೆ.

    I.N.D.I.A ಒಕ್ಕೂಟದ ಮಿತ್ರಪಕ್ಷವಾದ ಕಾಂಗ್ರೆಸ್‌ಗೆ 11 ಸ್ಥಾನಗಳನ್ನ ಕಾಯ್ದಿರಿಸಿದೆ ಎಂದು ಹೇಳಿದ ಒಂದು ದಿನದ ನಂತರ 16 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ (Dimple Yadav) ಅವರು ಮೈನ್‌ಪುರಿಯಿಂದ ಸ್ಪರ್ಧಿಸಲಿದ್ದಾರೆ. ಇನ್ನೂ ಶಫೀಕರ್ ರೆಹಮಾನ್ ಬಾರ್ಕ್ ಸಂಭಾಲ್‌ ಕ್ಷೇತ್ರದಿಂದ ಸ್ಪರ್ಧಿಸಿದ್ರೆ, ರವಿದಾಸ್ ಮೆಹ್ರೋತ್ರಾ ಲಕ್ನೋದಿಂದ ಕಣಕ್ಕಿಳಿಯಲಿದ್ದಾರೆ. ಇದನ್ನೂ ಓದಿ: ಕಡಲ್ಗಳ್ಳರಿಂದ ಅಪಹರಣಕ್ಕೆ ಒಳಗಾಗಿದ್ದ 19 ಪಾಕ್ ನಾವಿಕರನ್ನು ರಕ್ಷಿಸಿದ ಭಾರತೀಯ ನೌಕಾಪಡೆ

    ಸಮಾಜವಾದಿ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 11 ಒಬಿಸಿಗಳು, ಓರ್ವ ಮುಸ್ಲಿಂ, ಓರ್ವ ದಲಿತ, ಓರ್ವ ಠಾಕೂರ್, ಓರ್ವ ಟಂಡನ್ ಮತ್ತು ಓರ್ವ ಖತ್ರಿ ಅಭ್ಯರ್ಥಿಗಳಿದ್ದಾರೆ. 11 OBC ಅಭ್ಯರ್ಥಿಗಳಲ್ಲಿ ನಾಲ್ವರು ಕುರ್ಮಿ, ಮೂರು ಯಾದವ್, ಇಬ್ಬರು ಶಾಕ್ಯ, ಒಬ್ಬ ನಿಶಾದ್ ಮತ್ತು ಒಬ್ಬ ಪಾಲ್ ಸೇರಿದ್ದಾರೆ. ಇದನ್ನೂ ಓದಿ: ಚಂಡೀಗಢ ಮೇಯರ್ ಚುನಾವಣೆಯಲ್ಲಿ ಕಮಲೋತ್ಪತ್ತಿ – I.N.D.I.A ಒಕ್ಕೂಟಕ್ಕೆ ಭಾರೀ ಮುಖಭಂಗ

    ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಎನ್‌ಡಿಎ ಸೇರ್ಪಡೆಯಾದ ಇಂಡಿಯಾ ಒಕ್ಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಬೆನ್ನಲ್ಲೇ ಸಮಾಜವಾಧಿ ಪಕ್ಷ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಣೆ ಮಾಡಿದೆ. ಪಶ್ಚಿಮ ಬಂಗಾಳದಲ್ಲೂ ಮಮತಾ ಬ್ಯಾನರ್ಜಿ ಮುಂಬರುವ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಇದನ್ನೂ ಓದಿ: ನಮಗೆ ನಿತೀಶ್‌ ಕುಮಾರ್‌ ಅಗತ್ಯವಿಲ್ಲ: ಮೈತ್ರಿ ಮುರಿದ ಬಳಿಕ ರಾಹುಲ್‌ ಗಾಂಧಿ ಮೊದಲ ಪ್ರತಿಕ್ರಿಯೆ 

  • ಲೋಕಸಭೆ ಚುನಾವಣೆ 2024 – ಶಾಸಕರು, ಮಾಜಿ ಸಚಿವರಿಗೆ ಟಿಕೇಟ್ ನೀಡಲು SP ಪ್ಲ್ಯಾನ್

    ಲೋಕಸಭೆ ಚುನಾವಣೆ 2024 – ಶಾಸಕರು, ಮಾಜಿ ಸಚಿವರಿಗೆ ಟಿಕೇಟ್ ನೀಡಲು SP ಪ್ಲ್ಯಾನ್

    ಲಕ್ನೋ: ಸಚಿವರು, ಪ್ರಮುಖ ಶಾಸಕರನ್ನು ಲೋಕಸಭೆ ಚುನಾವಣೆಗೆ (Lok Sabha Elections) ಕಣಕ್ಕಿಳಿಸುವ ಬಗ್ಗೆ ರಾಜ್ಯದಲ್ಲಿ ಚರ್ಚೆಯಾಗುತ್ತಿದ್ದು ಇಂತಹದೇ ಪ್ರಯತ್ನವನ್ನು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (Samajwadi Party) ಕಾರ್ಯರೂಪಕ್ಕೆ ತರಲು ತಯಾರಿ ಆರಂಭಿಸಿದೆ. ಮುಂಬರುವ ಲೋಕಸಭೆ ಚುನಾವಣೆಗೆ ತನ್ನ ಪ್ರಮುಖ ಶಾಸಕರನ್ನು ಸ್ಪರ್ಧಿಸಲು ಮಾಜಿ ಸಿಎಂ ಅಖಿಲೇಶ್ ಯಾದವ್ (Akhilesh Yadav) ಸೂಚಿಸಿದ್ದಾರೆ.

    ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಶಾಸಕರ ಸಭೆಯಲ್ಲಿ ಅಖಿಲೇಶ್ ಯಾದವ್ ಈ ಸೂಚನೆ ನೀಡಿದ್ದಾರೆ. ಗೆಲ್ಲುವ ಅಭ್ಯರ್ಥಿಗಳಿರುವಷ್ಟು ಸ್ಥಾನಗಳನ್ನು ಕಾಂಗ್ರೆಸ್‌ಗೆ (Congress) ನೀಡಲಾಗುವುದು, ಬಾಕಿ ಕ್ಷೇತ್ರಗಳಲ್ಲಿ ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೇಟ್ ನೀಡಲಾಗುವುದು ಇಲ್ಲಿ ಶಾಸಕರ ಹೆಸರನ್ನು ಪರಿಗಣಿಸಲಾಗುವುದು, ಸ್ಪರ್ಧೆಗೆ ತಯಾರಿ ಇರುವಂತೆ ಅಖಿಲೇಶ್ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ವಿಗ್ರಹ ಕೆತ್ತನೆ ಕಾರ್ಯ ಯಶಸ್ವಿ- ಚಿತ್ರದುರ್ಗದ ಶಿಲ್ಪಿ ಮನೆಯಲ್ಲಿ ಸಂಭ್ರಮಾಚರಣೆ

    ಚುನಾವಣೆ ಅವಧಿಯಲ್ಲಿ ನಿರುದ್ಯೋಗ ಮತ್ತು ಹಣದುಬ್ಬರದಂತಹ ಸಾಮಾನ್ಯ ಜನರ ಸಮಸ್ಯೆಗಳತ್ತ ಗಮನ ಹರಿಸುವಂತೆ ಅಖಿಲೇಶ್ ತಮ್ಮ ನಾಯಕರಿಗೆ ಸಲಹೆ ನೀಡಿದ್ದಾರೆ. ಧರ್ಮಕ್ಕೆ ಸಂಬಂಧಿಸಿದ ಯಾವುದೇ ವಿಚಾರದಲ್ಲಿ ಬಿಜೆಪಿ ಅಸ್ತ್ರಕ್ಕೆ ಸಿಲುಕಿಕೊಳ್ಳಬಾರದು ಎಂದರು. ಮುಚ್ಚಿದ ಲಕೋಟೆಯಲ್ಲಿ ಶಾಸಕರಿಂದ ಅಭ್ಯರ್ಥಿಗಳ ಆಯ್ಕೆ ಸಂಬಂಧಿಸಿದ ಸಲಹೆಗಳನ್ನು ಸಹ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ, ಅದರ ಬಗ್ಗೆ ಕಾಂಗ್ರೆಸ್ ನಾಯಕರು ಉತ್ತರ ಕೊಡಲಿ: ನಿಖಿಲ್

    ಮಾಯಾವತಿ ನನಗಿಂತ ಹಿರಿಯರು ಎಂದು ಅಖಿಲೇಶ್ ಯಾದವ್ ಅವರು, ಮಹಾನ್ ನಾಯಕಿ ಮತ್ತು ನಾವೆಲ್ಲರೂ ಅವರನ್ನು ಗೌರವಿಸಬೇಕು. ಮೂಲಗಳ ಪ್ರಕಾರ, ಸಭೆಯಲ್ಲಿ ಹಲವು ಶಾಸಕರು ಸ್ವಾಮಿ ಪ್ರಸಾದ್ ಮೌರ್ಯ ಅವರ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ದೂರಿದರು. ಮುಂದೆ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ಅಖಿಲೇಶ್ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಮುಂದಿನ 5 ವರ್ಷಗಳಲ್ಲಿ ಗುಜುರಾತ್‌ನಲ್ಲಿ 2 ಲಕ್ಷ ಕೋಟಿ ಹೂಡಿಕೆ, 1 ಲಕ್ಷ ಉದ್ಯೋಗ ಸೃಷ್ಠಿ – ಗೌತಮ್ ಅದಾನಿ ಘೋಷಣೆ