Tag: samajawadi party

  • ಸಮಾಜವಾದಿ ಪಕ್ಷದ ಅಭ್ಯರ್ಥಿ ಕಾಜಲ್ ನಿಶಾದ್ ಆಸ್ಪತ್ರೆಗೆ ದಾಖಲು

    ಸಮಾಜವಾದಿ ಪಕ್ಷದ ಅಭ್ಯರ್ಥಿ ಕಾಜಲ್ ನಿಶಾದ್ ಆಸ್ಪತ್ರೆಗೆ ದಾಖಲು

    ಲಕ್ನೋ: ಗೋರಖ್‌ಪುರ ಲೋಕಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ (Samajwadi Party)  ಅಭ್ಯರ್ಥಿ ಕಾಜಲ್ ನಿಶಾದ್ (Kajal Nishad) ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಲಕ್ನೋದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಸಂಬಂಧ ಪತಿ ಸಂಜಯ್ ನಿಶಾದ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಕಾಜಲ್ ಅವರು ರಕ್ತದೊತ್ತಡ ಮತ್ತು ಹೃದಯದ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಏಪ್ರಿಲ್ 5 ರಂದು ಆಕೆಯ ಆರೋಗ್ಯ ಹಠಾತ್ ಹದಗೆಟ್ಟ ನಂತರ ಕಾಜಲ್ ಅವರನ್ನು ಸ್ಟಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಭಾನುವಾರ ನಿಶಾದ್‌ ಅವರಿಗೆ ಹೃದಯ ಸ್ತಂಭನವಾಗಿದ್ದು, ವೈದ್ಯರು ಅವರನ್ನು ಲಕ್ನೋಗೆ ಕಳುಹಿಸಿದ್ದಾರೆ ಎಂದರು. ಇದನ್ನೂ ಓದಿ: ಆರೋಗ್ಯವಾಗಿದ್ದರೂ ಹೃದಯ ಸ್ತಂಭನ ಯಾಕೆ ಆಗುತ್ತೆ? – ಎಲ್ಲ ಪ್ರಶ್ನೆಗಳಿಗೆ ಡಾ. ಮಂಜುನಾಥ್ ಉತ್ತರ

    41 ವರ್ಷದ ಕಾಜಲ್ ನಿಶಾದ್ ಅವರು ಗೋರಖ್‌ಪುರ ಕ್ಷೇತ್ರದಿಂದ ನಟ ಮತ್ತು ಹಾಲಿ ಬಿಜೆಪಿ ಸಂಸದ ರವಿ ಕಿಶನ್ ಶುಕ್ಲಾ ವಿರುದ್ಧ ಕಣದಲ್ಲಿದ್ದಾರೆ. 2019 ರಲ್ಲಿ ಮೊದಲ ಬಾರಿಗೆ ಈ ಸ್ಥಾನವನ್ನು ಗೆದ್ದ ನಂತರ ಮರುಚುನಾವಣೆಗೆ ಸ್ಪರ್ಧಿಸುತ್ತಿರುವ ರವಿ ಕಿಶನ್, ಈ ಸ್ಥಾನದಲ್ಲಿ ಗೆಲುವು ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಕಾಜಲ್ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ಒಪ್ಪಂದದ ಅಡಿಯಲ್ಲಿ ಇಂಡಿಯಾ ಬ್ಲಾಕ್ ಅಭ್ಯರ್ಥಿಯಾಗಿದ್ದಾರೆ.

    2024 ರ ಏಳು ಹಂತದ ಲೋಕಸಭಾ ಚುನಾವಣೆಯ ಕೊನೆಯ ಹಂತದಲ್ಲಿ ಜೂನ್ 1 ರಂದು ಗೋರಖ್‌ಪುರ ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಹೊರಬೀಳಲಿವೆ.

  • ನಿನಗೆ 3 ದಿನವಷ್ಟೇ ಸಮಯ- ಫೋಟೋ ವಾಟ್ಸಪ್ ಮಾಡಿ ಸಮಾಜವಾದಿ ಪಕ್ಷದ ನಾಯಕನಿಗೆ ಕೊಲೆ ಬೆದರಿಕೆ

    ನಿನಗೆ 3 ದಿನವಷ್ಟೇ ಸಮಯ- ಫೋಟೋ ವಾಟ್ಸಪ್ ಮಾಡಿ ಸಮಾಜವಾದಿ ಪಕ್ಷದ ನಾಯಕನಿಗೆ ಕೊಲೆ ಬೆದರಿಕೆ

    ಮುಂಬೈ: ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಅಬು ಅಸಿಮ್ ಅಜ್ಮಿ (Abu Asim Azmi) ಗೆ ಫೊನ್ ಮೂಲಕ ಕೊಲೆ ಬೆದರಿಕೆಯೊಂದು ಬಂದಿದೆ.

    ಮುಂಬೈನ ಮಂಖುರ್ದ್ ಶಿವಾಜಿ ನಗರ ಕ್ಷೇತ್ರದ ಶಾಸಕನಿಗೆ ವಾಟ್ಸಪ್‍ (Whatsapp) ನಲ್ಲಿ ಬೆದರಿಕೆ ಬಂದಿದೆ. ವಾಟ್ಸಪ್ ಬಂದಿರುವ ಅಬು ಫೋಟೋ ಮೇಲೆ ಬಂದೂಕು ಹಾಗೂ ರಕ್ತದ ಕಲೆಯುಳ್ಳ ಚಾಕುವನ್ನು ತೋರಿಸಲಾಗಿದೆ. ಅಲ್ಲದೆ ಮೂರು ದಿನಗಳವರೆಗೆ ಸಮಯವಿದೆ ಎಂದು ಎಚ್ಚರಿಕೆಯ ಮೆಸೇಜ್ ಕೂಡ ರವಾನಿಲಾಗಿದೆ.

    ಈ ಬಗ್ಗೆ ಅನು ತಮಗೆ ಬಂದಿರುವ ವಾಟ್ಸಪ್ ಮೆಸೇಜ್ ಸ್ಕ್ರೀನ್ ಶಾಟ್ ತೆಗೆದು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ವ್ಯಕ್ತಿಯೊಬ್ಬ ನನ್ನ ಪರ್ಸನಲ್ ನಂಬರಿಗೆ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಮೂರು ದಿನಗಳಲ್ಲಿ ನಿನ್ನ ಕೊಲೆಯಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂಬಂಧ ಈಗಾಗಲೇ ಕೊಲಾಬಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

    ಅಲ್ಲದೆ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮುಂಬೈ ಪೊಲೀಸ್ ಕಮಿಷನರ್ ವಿವೇಕ್ ಫನ್ಸಾಲ್ಕರ್, ಮುಂಬೈ ಪೊಲೀಸರೇ ದಯವಿಟ್ಟು ಈ ಸಂಬಂಧ ಕ್ರಮ ಕೈಗೊಳ್ಳಿ ಎಂದು ಅಬು ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನೂರರ ಗಡಿ ದಾಟಿದ ಟೊಮೆಟೋ ಬೆಲೆ- ಗೃಹಿಣಿಯರ ಆಕ್ರೋಶ

    ಮೊಘಲ್ ಚಕ್ರವರ್ತಿ ಔರಂಗಜೇಬನನ್ನು ಬೆಂಬಲಿಸಿ ನೀಡಿದ ಹೇಳಿಕೆಗಳಿಗಾಗಿ ಈ ವರ್ಷ ಜನವರಿಯಲ್ಲಿಯೂ ನಾಯಕನಿಗೆ ಕೊಲೆ ಬೆದರಿಕೆಗಳು ಬಂದವು. ಅಂದು ಕೂಡ ಅವರ ಆಪ್ತ ಸಹಾಯಕನಿಗೆ ಕರೆ ಮಾಡಲಾಗಿತ್ತು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಹಿಜಬ್ ಮುಟ್ಟಲು ಬಂದರೆ ಅವರ ಕೈ ಕತ್ತರಿಸುವೆ: ಎಸ್‌ಪಿ ನಾಯಕಿ ರುಬೀನಾ

    ಹಿಜಬ್ ಮುಟ್ಟಲು ಬಂದರೆ ಅವರ ಕೈ ಕತ್ತರಿಸುವೆ: ಎಸ್‌ಪಿ ನಾಯಕಿ ರುಬೀನಾ

    ಲಕ್ನೋ: ಯಾರೇ ಆದರೂ ಹಿಜಬ್ ಮುಟ್ಟಲು ಬಂದರೆ ಅವರ ಕೈಯನ್ನು ಕತ್ತರಿಸುವುದಾಗಿ ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕಿ ರುಬೀನಾ ಖಾನಮ್ ಎಚ್ಚರಿಸಿದರು.

    ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಬ್ ಧರಿಸಲು ನಿರಾಕರಿಸಿರುವುದನ್ನು ವಿರೋಧಿಸಿದ ಅವರು, ಹೆಣ್ಣುಮಕ್ಕಳ ಘನತೆಯೊಂದಿಗೆ ಆಟ ಆಡಲು ಬಂದರೆ ಅವರು ಝಾನ್ಸಿ ರಾಣಿ, ರಜಿಯಾ ಸುಲ್ತಾನ್‍ರಂತೆ ಹಿಜಬ್ ಮುಟ್ಟಲು ಬಂದ ಕೈಗಳನ್ನು ಕತ್ತರಿಸಲಾಗುವುದು. ಯಾವುದೇ ಸರ್ಕಾರ ಅಧಿಕಾರದಲ್ಲಿ ಇರಲಿ ಮಹಿಳೆಯರನ್ನು ದುರ್ಬಲರು ಎಂದು ಭಾವಿಸಬಾರದು ಎಂದರು.

    ಭಾರತವು ವೈವಿಧ್ಯತೆಯಿಂದ ಕೂಡಿದ ದೇಶವಾಗಿದೆ. ಇಲ್ಲಿ ಒಬ್ಬ ವ್ಯಕ್ತಿಯು ಹಣೆಯ ಮೇಲೆ ತಿಲಕವನ್ನು ಹೊಂದಿದ್ದಾನೆಯೇ ಅಥವಾ ಟೋಪಿ ಧರಿಸಿದ್ದಾರೆಯೇ ಅಥವಾ ಹಿಜಬ್ ಧರಿಸಿದ್ದಾರೆಯೆ ಎನ್ನುವುದು ಮುಖ್ಯವಲ್ಲ. ಎಲ್ಲಾ ಧರ್ಮದವರ ಸಂಪ್ರದಾಯವನ್ನು ಗೌರವಿಸಬೇಕು ಎಂದ ಅವರು, ಘುಂಘಾಟ್ ಮತ್ತು ಹಿಜಬ್ ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಅವಿಭಾಜ್ಯ ಅಂಗಗಳು. ಈ ವಿಷಯಗಳಲ್ಲಿ ರಾಜಕೀಯ ಮಾಡುವ ಮೂಲಕ ವಿವಾದ ಸೃಷ್ಟಿಸುವುದು ಭಯಾನಕವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಂವಿಧಾನದ ಆಶಯದಲ್ಲಿ ದೇಶ ಮುನ್ನಡೆಸಲಾಗ್ತಿದೆ, ಷರಿಯಾ ಕಾನೂನಿನಿಂದಲ್ಲ: ಹಿಜಬ್‌ ಕುರಿತು ಯೋಗಿ ಪ್ರತಿಕ್ರಿಯೆ

     

    ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ 7ಹಂತದಲ್ಲಿ ನಡೆಯಲಿದ್ದು, ಮಾರ್ಚ್ 7ರಂದು ಮುಕ್ತಾಯಗೊಳ್ಳಲಿದೆ. ಮಾರ್ಚ್ 10ರಂದು ಮತಗಳ ಎಣಿಕೆ ನಡೆಯಲಿದೆ. ಈಗಾಗಲೇ ಸಮಾಜವಾದಿ ಪಕ್ಷ ಹಾಗೂ ಬಿಜೆಪಿ ಪ್ರಬಲ ಪೈಪೋಟಿಯಲ್ಲಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಬ್ ವಿವಾದಕ್ಕೆ ಸಂಬಂಧಿಸಿ ಈಗಾಗಲೇ ಅನೇಕ ರಾಜಕೀಯ ನಾಯಕರು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಇದನ್ನೂ ಓದಿ: ಅರವಿಂದ್ ಕೇಜ್ರಿವಾಲ್, ರಾಘವ್ ಚಡ್ಡಾ ಪಂಜಾಬ್ ಲೂಟಿ ಮಾಡಲು ಬಂದಿದ್ದಾರೆ: ಚರಣ್‍ಜಿತ್ ಸಿಂಗ್ ಚನ್ನಿ

  • ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದ್ರೆ ಯಾರನ್ನೂ ಬಿಡಲ್ಲ: ಆದಿಲ್ ಚೌಧರಿ ವೀಡಿಯೋ ವೈರಲ್

    ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದ್ರೆ ಯಾರನ್ನೂ ಬಿಡಲ್ಲ: ಆದಿಲ್ ಚೌಧರಿ ವೀಡಿಯೋ ವೈರಲ್

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ, ಒಬ್ಬ ವ್ಯಕ್ತಿಯನ್ನೂ ಬಿಡುವುದಿಲ್ಲ ಎಂದು ಸಮಾಜವಾದಿ ಪಕ್ಷದ ಅಭ್ಯರ್ಥಿ ಆದಿಲ್ ಚೌಧರಿ ಹೇಳಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ವೈರಲ್ ಆದ ವೀಡಿಯೋದಲ್ಲಿ ಏನಿದೆ?
    ವೀಡಿಯೋದಲ್ಲಿ ಹೆಸರಿಲ್ಲದ ವ್ಯಕ್ತಿಯನ್ನು ಉಲ್ಲೇಖಿಸಿ ಆದಿಲ್ ಚೌಧರಿ, ಚಿಂತಿಸಬೇಡಿ, ದೇವರ ಇಚ್ಛೆಯಂತೆ ನಾವು ಉತ್ತರ ಪ್ರದೇಶದಲ್ಲಿ ಸಮಾಜವಾದಿ ಸರ್ಕಾರವನ್ನು ರಚಿಸಲಿದ್ದೇವೆ. ಒಂದು ವೇಳೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ಒಬ್ಬ ವ್ಯಕ್ತಿಯನ್ನು ಉಳಿಸಲಾಗುವುದಿಲ್ಲ. ಅವರು ನಮ್ಮ ವಿರುದ್ಧ ಅಪರಾಧ ಎಸಗುತ್ತಿರುವ ರೀತಿಯಲ್ಲಿ, ನಾವು ಸೇಡು ತೀರಿಸಿಕೊಳ್ಳುತ್ತೇವೆ. ಅವರು ಏನನ್ನಾದರೂ ಮಾಡುವ ಮೊದಲು 100 ಬಾರಿ ಯೋಚಿಸಬೇಕು ಹಾಗೆಯೇ ಮಾಡುತ್ತೇವೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಪ್ರೀತಿ ಇದ್ದಲ್ಲಿಗೆ ಹೋಗುತ್ತೇನೆ: ರಮೇಶ್ ಜಾರಕಿಹೊಳಿ

    ವೀಡಿಯೋಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಅಮಿತ್ ಮಾಳವಿಯಾ, ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಎಸ್‍ಪಿ ಅಭ್ಯರ್ಥಿ ಹಿಂದೂಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಎಂದು ಆರೋಪಿಸಿದ್ದಾರೆ. ಆದರೆ ಚೌಧರಿ ವೀಡಿಯೊದಲ್ಲಿ ಯಾವುದೇ ಸಮುದಾಯದ ಬಗ್ಗೆ ಮಾತನಾಡಿರುವುದು ಕಂಡುಬಂದಿಲ್ಲ. ಮೀರತ್ ದಕ್ಷಿಣದ ಎಸ್‍ಪಿ ಅಭ್ಯರ್ಥಿ ಚೌಧರಿಯವರು ನಾವು ಸರ್ಕಾರ ರಚಿಸಿದರೆ ಅವರನ್ನು ಬಿಡುವುದಿಲ್ಲ. ಒಬ್ಬೊಬ್ಬರಾಗಿ ಸೇಡು ತೀರಿಸಿಕೊಳ್ಳುತ್ತೇವೆ ಅಂತ ಹಿಂದೂಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

    ನಾಹಿದ್ ಹಸನ್ ಮತ್ತು ಆದಿಲ್ ಚೌಧರಿ ಅವರಂತಹ ಹಿಂದೂ ವಿರೋಧಿ ಗೂಂಡಾಗಳು. ಚುನಾವಣಾ ಅಭ್ಯರ್ಥಿಗಳನ್ನು ಮಾತ್ರ ನಾಮನಿರ್ದೇಶನ ಮಾಡಿದ್ದಾರೆ. ಅವರು ವೀಡಿಯೊದಲ್ಲಿ ಮಾಡಿದ ಕಾಮೆಂಟ್‍ಗಳನ್ನು ಸ್ಪಷ್ಟಪಡಿಸಲು ಕೇಳಿದಾಗ ಚೌಧರಿಯವರು ನೇರ ಉತ್ತರವನ್ನು ನೀಡಲಿಲ್ಲ. ಬಿಜೆಪಿ ವೀಡಿಯೊವನ್ನು ಎಡಿಟ್ ಮಾಡಿದೆ ಅಂತ ಆರೋಪಿಸಿದ್ದಾರೆ. ಕೇಸರಿ ಪಕ್ಷವು ಅಗತ್ಯವಿರುವ ಯಾವುದೇ ವಿಧಾನಗಳನ್ನು ಬಳಸಲು ಸಮರ್ಥವಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಗಂಡನ ಕಿರುಕುಳ ತಾಳಲಾರದೇ ಗರ್ಭಿಣಿ ಆತ್ಮಹತ್ಯೆ

    ಈ ಕುರಿತು ಮೀರತ್ ಸಿಟಿ ಎಸ್‍ಪಿ ವಿನೀತ್ ಭಟ್ನಾಗರ್ ಅವರು ಎಸ್ಪಿ ಅಭ್ಯರ್ಥಿ ಬೆದರಿಕೆ ಹಾಕುತ್ತಿರುವ ವೀಡಿಯೋದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದಾರೆ. ವಿಡಿಯೋವನ್ನು ವಿಶ್ಲೇಷಣೆಗಾಗಿ ಕಳುಹಿಸಲಾಗಿದೆ. ಅದರಲ್ಲಿ ಚುನಾವಣಾ ಆಯೋಗದ ನೈತಿಕ ನೀತಿ ಸಂಹಿತೆ ಉಲ್ಲಂಘನೆಯಾಗುವಂತಹ ಹೇಳಿಕೆಗಳಿದ್ದರೆ, ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

  • ನಿಮ್ಮ ಮಾತುಗಳಿಗೆ ನಾನು ಅಂಜಲ್ಲ, ಈ ವ್ಯಕ್ತಿಯನ್ನು ಚುನಾವಣೆಯಿಂದ ಬ್ಯಾನ್ ಮಾಡಿ – ಅಜಮ್ ಖಾನ್ ವಿರುದ್ಧ ಜಯಪ್ರದಾ ಕಿಡಿ

    ನಿಮ್ಮ ಮಾತುಗಳಿಗೆ ನಾನು ಅಂಜಲ್ಲ, ಈ ವ್ಯಕ್ತಿಯನ್ನು ಚುನಾವಣೆಯಿಂದ ಬ್ಯಾನ್ ಮಾಡಿ – ಅಜಮ್ ಖಾನ್ ವಿರುದ್ಧ ಜಯಪ್ರದಾ ಕಿಡಿ

    ನವದೆಹಲಿ: ನಾನು ನಿಮ್ಮ ಕೀಳಾದ ಟೀಕೆಗಳಿಗೆ ಅಂಜಲ್ಲ, ರಾಮ್‍ಪುರ ಬಿಟ್ಟು ಹೋಗುವುದೂ ಇಲ್ಲ ಎಂದು ಸಮಾಜವಾದಿ ಪಕ್ಷದ ನಾಯಕ ಅಜಮ್ ಖಾನ್ ಅವರ ಕೀಳು ಹೇಳಿಕೆಗೆ ಬಿಜೆಪಿ ಅಭ್ಯರ್ಥಿ ಜಯಪ್ರದಾ ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಎಲ್ಲಿಗೆ ಹೋಗಬೇಕು? ನಾನು ಸಾಯಬೇಕೇ? ಆಗ ನಿಮಗೆ ಸಮಧಾನವಾಗುತ್ತಾ? ನಿಮ್ಮ ಈ ಕೀಳು ಹೇಳಿಕೆಗಳಿಗೆ, ಟೀಕೆಗೆ ಹೆದರಿ ನಾನು ರಾಮ್‍ಪುರ ಬಿಟ್ಟು ಹೋಗುತ್ತೇನೆ ಅಂದುಕೊಂಡಿದ್ದೀರಾ? ನಾನು ನಿಮ್ಮ ಮಾತುಗಳಿಗೆ ಅಂಜಲ್ಲ, ಇಲ್ಲಿಂದ ಹೋಗುವುದೂ ಇಲ್ಲವೆಂದು ಖಡಕ್ ಆಗಿ ಉತ್ತರ ನೀಡಿದ್ದಾರೆ. ಇದನ್ನೂ ಓದಿ:ಜಯಪ್ರದಾ ಒಳ ಉಡುಪು ಬಗ್ಗೆ ಎಸ್‍ಪಿ ನಾಯಕ ಅಜಮ್ ಖಾನ್ ಕೀಳು ಹೇಳಿಕೆ

    ಹೆಣ್ಣಿನ ಬಗ್ಗೆ ಇಷ್ಟು ಕೀಳಾಗಿ ಮಾತನಾಡುವ ವ್ಯಕ್ತಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಡಿ. ಒಂದುವೇಳೆ ಈ ವ್ಯಕ್ತಿ ಗೆದ್ದರೆ ಪ್ರಜಾಪ್ರಭುತ್ವದ ಗತಿ ಏನಾಗುತ್ತೆ? ಸಾಮಾಜದಲ್ಲಿ ಮಹಿಳೆಯರಿಗೆ ಸ್ಥಾನಮಾನ ಸಿಗುವುದಿಲ್ಲ. ಆದರಿಂದ ಅಜಮ್ ಖಾನ್‍ರನ್ನು ಚುನಾವಣೆಯಿಂದ ಬ್ಯಾನ್ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಅಜಮ್ ಖಾನ್ ಹೇಳಿದ್ದೇನು?
    ಭಾನುವಾರದಂದು ರಾಮ್‍ಪುರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗಿಯಾಗಿದ್ದ ಅಜಮ್ ಖಾನ್ ಅವರು, ಅವರನ್ನು(ಜಯಪ್ರದಾ) ರಾಮ್‍ಪುರಕ್ಕೆ ಕರೆತಂದಿದ್ದು ನಾನು. ಆಗ ನಾನು ಅವರನ್ನು ಯಾರಿಗೂ ಮುಟ್ಟಲು ಬಿಟ್ಟಿರಲಿಲ್ಲ. ಅದಕ್ಕೆ ನೀವೇ ಸಾಕ್ಷಿ. ನಿಮಗೆ ಅವರ ನಿಜವಾದ ಮುಖ ಗೊತ್ತಾಗಲು 17 ವರ್ಷ ಬೇಕಾಯ್ತು. ಆದ್ರೆ ನನಗೆ ಕೇವಲ 17 ದಿನಗಳಲ್ಲಿ ಅವರು ಖಾಕಿ ಬಣ್ಣದ ಒಳ ಉಡುಪು ಹಾಕುತ್ತಾರೆ ಅನ್ನೋದು ಗೊತ್ತಾಯ್ತು ಎಂದು ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಹಾಗೂ ಇನ್ನಿತರ ನಾಯಕರ ಮುಂದೆಯೇ ಬಿಜೆಪಿ ನಾಯಕಿಯ ವಿರುದ್ಧ ಅಸಂಬದ್ಧವಾಗಿ ಮಾತನಾಡಿದ್ದಾರೆ.

    ಅಜಮ್ ಖಾನ್ ಅವರು ಸದ್ಯ ಲೋಕಸಭಾ ಚುನಾವಣೆಗೆ ರಾಮ್‍ಪುರದಿಂದ ಎಸ್‍ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ನಾಯಕಿ ಬಗ್ಗೆ ಅಸಂಬದ್ಧವಾಗಿ ಹೇಳಿಕೆ ನೀಡಿರುವುದಕ್ಕೆ ಅಜಮ್ ಖಾನ್ ವಿರುದ್ಧ ಎಫ್‍ಐಆರ್ ಕೂಡ ದಾಖಲಿಸಲಾಗಿದೆ.

    ಅಜಮ್ ಖಾನ್ ಹಾಗೂ ಜಯಪ್ರದಾ ಅವರು ರಾಮ್‍ಪುರ ಕ್ಷೇತ್ರದಲ್ಲಿ ಬದ್ಧ ರಾಜಕೀಯ ವೈರಿಗಳು. ಅಲ್ಲದೆ ಎಸ್‍ಪಿ ನಾಯಕ ಬಿಜೆಪಿ ನಾಯಕಿ ವಿರುದ್ಧ ಕೊಟ್ಟಿರುವ ವಿವಾದಾತ್ಮಕ ಹೇಳಿಕೆ ಉಭಯ ಪಕ್ಷಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೆ ರಾಜಕೀಯವಾಗಿ ಹಾಗೂ ವೈಯಕ್ತಿಕವಾಗಿ ಅಜಮ್ ಖಾನ್ ಒಂದು ಮಹಿಳಾ ನಾಯಕಿಯನ್ನು ಕೀಳಾಗಿ ಟೀಕಿಸಿದ್ದಕ್ಕೆ ಅವರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.

  • ಜಯಪ್ರದಾ ಒಳ ಉಡುಪು ಬಗ್ಗೆ ಎಸ್‍ಪಿ ನಾಯಕ ಅಜಮ್ ಖಾನ್ ಕೀಳು ಹೇಳಿಕೆ

    ಜಯಪ್ರದಾ ಒಳ ಉಡುಪು ಬಗ್ಗೆ ಎಸ್‍ಪಿ ನಾಯಕ ಅಜಮ್ ಖಾನ್ ಕೀಳು ಹೇಳಿಕೆ

    ಲಕ್ನೋ: ನಟಿ ಹಾಗೂ ರಾಮ್‍ಪುರದ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರು ಖಾಕಿ ಬಣ್ಣದ ಒಳ ಉಡುಪು ಧರಿಸುತ್ತಾರೆ ಎಂದು ಸಮಾಜವಾದಿ ಪಕ್ಷದ(ಎಸ್‍ಪಿ) ನಾಯಕ ಅಜಮ್ ಖಾನ್ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ.

    ಭಾನುವಾರದಂದು ರಾಮ್‍ಪುರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಭಾಗಿಯಾಗಿದ್ದ ಅಜಮ್ ಖಾನ್ ಅವರು, ಅವರನ್ನು(ಜಯಪ್ರದಾ) ರಾಮ್‍ಪುರಕ್ಕೆ ಕರೆತಂದಿದ್ದು ನಾನು. ಆಗ ನಾನು ಅವರನ್ನು ಯಾರಿಗೂ ಮುಟ್ಟಲು ಬಿಟ್ಟಿರಲಿಲ್ಲ. ಅದಕ್ಕೆ ನೀವೇ ಸಾಕ್ಷಿ. ನಿಮಗೆ ಅವರ ನಿಜವಾದ ಮುಖ ಗೊತ್ತಾಗಲು 17 ವರ್ಷ ಬೇಕಾಯ್ತು. ಆದ್ರೆ ನನಗೆ ಕೇವಲ 17 ದಿನಗಳಲ್ಲಿ ಅವರು ಖಾಕಿ ಬಣ್ಣದ ಒಳ ಉಡುಪು ಹಾಕುತ್ತಾರೆ ಅನ್ನೋದು ಗೊತ್ತಾಯ್ತು ಎಂದು ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಹಾಗೂ ಇನ್ನಿತರ ನಾಯಕರ ಮುಂದೆಯೇ ಬಿಜೆಪಿ ನಾಯಕಿಯ ವಿರುದ್ಧ ಅಸಂಬದ್ಧವಾಗಿ ಮಾತನಾಡಿದ್ದಾರೆ.

    ಅಜಮ್ ಖಾನ್ ಅವರು ಸದ್ಯ ಲೋಕಸಭಾ ಚುನಾವಣೆಗೆ ರಾಮ್‍ಪುರದಿಂದ ಎಸ್‍ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿ ನಾಯಕಿ ಬಗ್ಗೆ ಅಸಂಬದ್ಧವಾಗಿ ಹೇಳಿಕೆ ನೀಡಿರುವುದಕ್ಕೆ ಅಜಮ್ ಖಾನ್ ವಿರುದ್ಧ ಎಫ್‍ಐಆರ್ ಕೂಡ ದಾಖಲಿಸಲಾಗಿದೆ.

    ಈ ಬಗ್ಗೆ ಇಂದು ಪ್ರತಿಕ್ರಿಯಿಸಿರುವ ಅಜಮ್ ಖಾನ್ ಅವರು, ನಾನು ಬಿಜೆಪಿ ಅಭ್ಯರ್ಥಿ ವಿರುದ್ಧ ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿಲ್ಲ. ಒಂದು ವೇಳೆ ನಾನು ಮಾತನಾಡಿರುವುದು ತಪ್ಪು ಎಂದು ಸಾಬೀತಾದರೆ, ನಾನು ಚುನಾವಣೆಯಿಂದ ಹಿಂದಕ್ಕೆ ಸರಿಯುತ್ತೇನೆ ಎಂದು ತಿಳಿಸಿದರು.

    ಜನರ ನಿಜ ಮುಖವನ್ನು ತಿಳಿಯಲು ವರ್ಷಗಟ್ಟಲೇ ಸಮಯ ಬೇಕು ಅನ್ನುವ ಅರ್ಥದಲ್ಲಿ ನಾನು ಮಾತನಾಡಿದ್ದು, ಹಿಂದೊಮ್ಮೆ ಒಬ್ಬ ವ್ಯಕ್ತಿ 150 ಬಂದೂಕನ್ನು ತಂದು ನನ್ನನ್ನು ಕಂಡರೆ ಸಾಯಿಸುತ್ತಾನೆ ಅಂತ ಹೇಳಿದ್ದನು. ಆದ್ರೆ ಬಳಿಕ ಆ ವ್ಯಕ್ತಿ ಆರ್ ಎಸ್‍ಎಸ್ ಪ್ಯಾಂಟ್ ಹಾಕಿದ್ದ. ಅದಕ್ಕೆ ಆ ರೀತಿ ಹೇಳಿದ್ದ ಅನ್ನೊದು ಗೊತ್ತಾಯ್ತು ಎಂದು ಒಂದು ಕಥೆಯನ್ನು ಹೇಳಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

    ನಾನು 9 ಬಾರಿ ರಾಮ್‍ಪುರ ಕ್ಷೇತ್ರದಿಂದ ಎಂಎಲ್‍ಎ ಆಗಿದ್ದೇನೆ. ಮಂತ್ರಿ ಕೂಡ ಆಗಿದ್ದೇನೆ. ಏನು ಹೇಳಬೇಕು ಅನ್ನೋದು ನನಗೆ ಗೊತ್ತಿದೆ. ನಾನು ಯಾರ ಹೆಸರನ್ನು ಹೇಳಿಲ್ಲ. ಹೆಸರು ಹೇಳಿ ಯಾರಿಗೂ ಅವಮಾನ ಮಾಡಿಲ್ಲ. ಒಂದು ವೇಳೆ ನನ್ನ ಹೇಳಿಕೆ ತಪ್ಪೆಂದು ಸಾಬೀತಾದರೆ ನಾನು ಚುನಾವಣೆಯಿಂದ ಹಿಂದಕ್ಕೆ ಸರಿಯುತ್ತೇನೆ ಎಂದರು.

    ನನಗೆ ಬೇಸರವಾಗಿದೆ. ಮಾಧ್ಯಮಗಳು ನನ್ನನ್ನು ಇಷ್ಟಪಡಲ್ಲ. ಹಾಗೆಯೇ ನಾನು ಕೂಡ ಮಾಧ್ಯಮಗಳನ್ನು ಇಷ್ಟಪಡಲ್ಲ. ಯಾಕೆಂದರೆ ಮಾಧ್ಯಮಗಳಿಂದ ದೇಶಕ್ಕೆ ಹಾನಿಯಾಗುತ್ತದೆ ಎಂದು ಹೇಳಿ ಪತ್ರಕರ್ತರ ವಿರುದ್ಧವೂ ಕಿಡಿಕಾರಿದರು.

  • ಉತ್ತರಪ್ರದೇಶದಲ್ಲಿ ಇಂದು ಮೊದಲ ಹಂತದ ಮತದಾನ

    ಲಕ್ನೋ: ಉತ್ತರ ಪ್ರದೇಶದಲ್ಲಿ 7 ಹಂತಗಳ ಚುನಾವಣೆ ಇಂದಿನಿಂದ ಶುರುವಾಗ್ತಿದೆ.

    ಮೊದಲ ಹಂತದ ಮತದಾನದಲ್ಲಿ ಇಂದು 73 ವಿಧಾನಸಭಾ ಕ್ಷೇತ್ರಗಳಲ್ಲಿ 2.6ಕೋಟಿಗೂ ಹೆಚ್ಚು ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಶಾಮ್ಲಿ, ಮುಝಾಫರ್‍ನಗರ್, ಭಾಗ್‍ಪತ್, ಮೀರತ್, ಘಜಿಯಾಬಾದ್, ಗೌತಮ್ ಬುದ್ಧ ನಗರ್, ಹಾಪುರ್, ಬುಲಂದ್‍ಶಹರ್, ಆಲಿಘರ್, ಮಥುರಾ, ಹತ್ರಾಸ್, ಆಗ್ರಾ, ಫಿರೋಝಾಬಾದ್, ಇಟಾ ಹಾಗೂ ಕಾಸ್‍ಗಂಜ್ ಜಿಲ್ಲೆಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ.

    ಈ ಬಾರಿ ಬಿಜೆಪಿ, ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೃತ್ರಿ ಹಾಗೂ ಬಿಎಸ್‍ಪಿ ನಡುವೆ ನೇರ ಹಣಾಹಣಿ ಇರಲಿದೆ ಎಂದು ಹೇಳಲಾಗಿದೆ. ಇನ್ನು ಇದೇ ಮೊದಲ ಬಾರಿ ಚುನಾವಣಾ ಪ್ರಚಾರ ಅಖಾಡಕ್ಕೆ ಧುಮಕಲಿರುವ ಪ್ರಿಯಾಂಕಾ ಗಾಂಧಿ, ಫೆಬ್ರವರಿ 13ರಿಂದ ಅಮೇಥಿ ಹಾಗೂ ರಾಯ್ ಬರೇಲಿಯಲ್ಲಿ ಸಹೋದರ ರಾಹುಲ್ ಜೊತೆ ಚುನಾವಣಾ ಪ್ರಚಾರ ನಡೆಸಲಿದ್ದಾರೆ.

    ಮುಂದಿನ 6 ಹಂತದ ಮತದಾನ ಫೆಬ್ರವರಿ 15, 19,23 ಹಾಗೂ 27 ಮತ್ತು ಮಾರ್ಚ್ 4 ಹಾಗೂ 8ರಂದು ನಡೆಯಲಿದೆ