Tag: Samajavadi party

  • ಯುಪಿಯಲ್ಲಿ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಇಲ್ಲ: ಓವೈಸಿ

    ಯುಪಿಯಲ್ಲಿ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಇಲ್ಲ: ಓವೈಸಿ

    ಲಕ್ನೋ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿದ್ದು, ಸ್ಥಳೀಯ ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸಕ್ರಿಯರಾಗುತ್ತಿದ್ದಾರೆ. ಇತ್ತ ಉತ್ತರ ಪ್ರದೇಶ ಚುನಾವಣಾ ಅಖಾಡಕ್ಕೆ ಎಂಟ್ರಿ ಕೊಡಲು ಎಐಎಂಐಎಂ ಸಹ ತಯಾರಿ ನಡೆಸಿದೆ. ಆದ್ರೆ ನಾವು ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲ್ಲ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಸ್ಪಷ್ಟಪಡಿಸಿದ್ದಾರೆ.

    ಉತ್ತರ ಪ್ರದೇಶದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಗೆದ್ದು ಅಧಿಕಾರಕ್ಕೆ ಬಂದ್ರೆ, ಮುಸ್ಲಿಂ ನಾಯಕನನ್ನು ಉಪಮುಖ್ಯಮಂತ್ರಿಯಾಗಿ ಮಾಡುವ ಷರತ್ತನ್ನು ಒಪ್ಪಿದ್ರೆ ಚುನಾವಣೆ ಪೂರ್ವ ಮೈತ್ರಿ ಮಾಡಿಕೊಳ್ಳಲು ಅಸಾದುದ್ದೀನ್ ಓವೈಸಿ ಮುಂದಾಗಿದ್ದಾರೆ ಎಂಬಿತ್ಯಾದಿ ಸುದ್ದಿಗಳು ಉತ್ತರ ಪ್ರದೇಶ ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು. ಈ ಎಲ್ಲ ಊಹಾಪೋಹಗಳಿಗೆ ಓವೈಸಿ ತೆರೆ ಎಳೆದಿದ್ದಾರೆ.

    ಸಮಾಜವಾದಿ ಪಕ್ಷದ ಜೊತೆಗಿನ ಮೈತ್ರಿ ಕುರಿತು ನಾನು ಅಥವಾ ನಮ್ಮ ಪಕ್ಷದ ಯಾವ ಮುಖಂಡರು ಹೇಳಿಲ್ಲ. ಈ ಹಿಂದೆ ಶೇ.20ರಷ್ಟು ಮುಸ್ಲಿಂ ಮತಗಳನ್ನು ಅಖಿಲೇಶ್ ಯಾದವ್ ಪಡೆದುಕೊಂಡಿದ್ದರೂ ನಮ್ಮ ಸಮುದಾಯದವರನ್ನು ಡಿಸಿಎಂ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

    ಉತ್ತರ ಪ್ರದೇಶದ ಸುಮಾರು 110 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕಲು ಒವೈಸಿ ಮುಂದಾಗಿದ್ದಾರೆ. ಹೆಚ್ಚು ಮುಸ್ಲಿಂ ಮತಗಳಿರೋ ಕ್ಷೇತ್ರದಲ್ಲಿ ಎಐಎಂಐಎಂ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಉತ್ತರ ಪ್ರದೇಶದಲ್ಲಿ 110 ಕ್ಷೇತ್ರಗಳಲ್ಲಿ ಶೇ.30-39 ರಷ್ಟು ಮುಸ್ಲಿಂ ಮತದಾರರಿದ್ದಾರೆ. 44 ಕ್ಷೇತ್ರಗಳಲ್ಲಿ ಶೇ.40-49, 11 ಕ್ಷೇತ್ರಗಳು ಶೇ.50-65 ರಷ್ಟು ಮತದಾರರನ್ನು ಹೊಂದಿವೆ. ಇದನ್ನೂ ಓದಿ: ಈ ದ್ವೇಷ ಹಿಂದುತ್ವದ ಕೊಡುಗೆ: ಭಾಗವತ್ ಹೇಳಿಕೆಗೆ ಓವೈಸಿ ಕಿಡಿ

    2017ರ ಚುನಾವಣೆಯಲ್ಲಿ ಬಿಜೆಪಿ 312 ಕ್ಷೇತ್ರಗಳನ್ನು ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿದಿದೆ. ಸಮಾಜವಾದಿ ಪಕ್ಷ 47, ಬಹುಜನ ಸಮಾಜವಾದಿ ಪಕ್ಷ 19 ಮತ್ತು ಕಾಂಗ್ರೆಸ್ ಕೇವಲ ಏಳರಲ್ಲಿ ಗೆದ್ದಿತ್ತು. ಇದನ್ನೂ ಓದಿ: RSS ಬುದ್ಧಿ 0, ಮುಸ್ಲಿಮರ ಮೇಲಿನ ದ್ವೇಷ 100%: ಭಾಗವತ್ ಹೇಳಿಕೆಗೆ ಓವೈಸಿ ಪ್ರತಿಕ್ರಿಯೆ

  • ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಇನ್ನಿಲ್ಲ

    ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಇನ್ನಿಲ್ಲ

    ನವದೆಹಲಿ: ರಾಜ್ಯಸಭಾ ಸದಸ್ಯ, ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್ ಇಂದು ನಿಧನರಾಗಿದ್ದಾರೆ.

    64 ವರ್ಷದ ಅಮರ್ ಸಿಂಗ್ ಅವರು ಹಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಸಿಂಗಾಪುರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇದೀಗ ಚಿಕಿತ್ಶೆ ಫಲಕಾರಿಯಾಗದೆ ಇಂದು ಮಧ್ಯಾಹ್ನದ ಬಳಿಕ ಮೃತಪಟ್ಟಿದ್ದಾರೆ.

    2013 ರಿಂದ ಸಿಂಗ್ ಅವರು ಕಿಡ್ನಿವೈಫಲ್ಯ ಸೇರಿದಂತೆ ಹಲವು ಕಾಯಿಲೆಗಳಿಂದ ಬಳಲುತ್ತಿದ್ದು, ಇತ್ತೀಚೆಗೆ ಅವರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂಬುದಾಗಿ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

    2010ರ ಜವರಿ ತಿಂಗಳಲ್ಲಿ ಸಿಂಗ್ ಅವರು ಸಮಾಜವಾದಿ ಪಕ್ಷದ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ನಂತರ ಕೆಲವು ಘಟನೆಗಳು ನಡೆದ ಬಳಿಕ ಅವರು 2016ರಲ್ಲಿ ಸಮಾಜವಾದಿ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆಗೆ ಆಯ್ಕೆಯಾದರು.

  • ಕೊರೊನಾ ರೋಗವಲ್ಲ, ನಮ್ಮ ತಪ್ಪುಗಳಿಗೆ ಅಲ್ಲಾಹ ನೀಡಿದ ಶಿಕ್ಷೆ: ಸಂಸದ

    ಕೊರೊನಾ ರೋಗವಲ್ಲ, ನಮ್ಮ ತಪ್ಪುಗಳಿಗೆ ಅಲ್ಲಾಹ ನೀಡಿದ ಶಿಕ್ಷೆ: ಸಂಸದ

    -ಸಂಸದರ ಹೇಳಿಕೆಯ ವಿಡಿಯೋ ವೈರಲ್

    ಲಕ್ನೊ: ಕೊರೊನಾ ಒಂದು ರೋಗವಲ್ಲ. ನಮ್ಮ ತಪ್ಪುಗಳಿಗೆ ಅಲ್ಲಾಹು ನಮ್ಮ ತಪ್ಪುಗಳಿಗೆ ನೀಡಿದ ಶಿಕ್ಷೆ ಎಂದು ಸಮಾಜವಾದಿ ಪಕ್ಷದ ಸಂಸದ ಶಫಿಕುರ್ ರಹಮಾನ್ ಬರ್ಕ ಹೇಳಿರುವ ವಿಡಿಯೋ ವೈರಲ್ ಆಗಿದೆ.

    ಅಲ್ಲಾಹು ನೀಡಿರುವ ಈ ಕೊರೊನಾ ಶಿಕ್ಷೆಯಿಂದ ಪಾರಾಗಲು ನಾವು ನಮಾಜ್ ಮಾಡುವ ಮೂಲಕ ಕ್ಷಮೆ ಕೇಳಬೇಕು. ನಮ್ಮನ್ನು ಅಲ್ಲಾಲಹ ಕ್ಷಮಿಸಿದ್ರೆ ನಾವು ಕೊರೊನಾದಿಂದ ಬದುಕುಳಿಯಬಹುದು ಎಂದು ಬರ್ಕ ಹೇಳಿದ್ದರು. ಸಂಸದರ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ.

    ಜುಲೈ 19ರಂದು ಮಾತನಾಡಿರುವ ಸಂಸದರು, ಬಕ್ರಿದ್ ಹಬ್ಬದ ವೇಳೆ ಮಾರುಕಟ್ಟೆಯನ್ನು ತೆರೆಯಬೇಕು. ಮಾರುಕಟ್ಟೆ ಓಪನ್ ಆದ್ರೆ ಜನರು ಕುರ್ಬಾನಿಗಾಗಿ ಜಾನುವಾರುಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಕೊರೊನಾ ವೈರಸ್‍ನ್ನು ಅಂತ್ಯ ಮಾಡುವದಕ್ಕಾಗಿ ಮಸೀದಿಗಳಲ್ಲಿ ಪ್ರಾರ್ಥನೆ ಅವಕಾಶ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ವಿಡಿಯೋ ವೈರಲ್ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಸಂಸದರು ತಮ್ಮ ಹೇಳಿಕೆಯನ್ನು ಪುನರುಚ್ಛಿರಿಸಿದ್ದಾರೆ. ಸದ್ಯ ಸರ್ಕಾರ ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಮಾಡಲು ಸರ್ಕಾರ ಅನುಮತಿ ನೀಡಿಲ್ಲ. ಹಬ್ಬದ ಪ್ರಯುಕ್ತವಾಗಿ ಸಾಮೂಹಿಕ ನಮಾಜ್ ಗೆ ಅನುಮತಿ ನೀಡಬೇಕೆಂದು ಮನವಿ ಮಾಡಿಕೊಂಡಿದ್ದೇನೆ. ಸರ್ಕಾರ ಸಮ್ಮತಿ ಸೂಚಿಸಿದ್ರೆ ಮಸೀದಿಗಳಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇವೆ. ಸರ್ಕಾರ ಒಪ್ಪದಿದ್ರೆ ಮನೆಗಳಲ್ಲಿ ನಮಾಜ್ ಮಾಡುತೇವೆ ಎಂದು ಶಫಿಕುರ್ ರಹಮಾನ್ ಬರ್ಕ ಹೇಳಿದ್ದಾರೆ.

  • ಬಿಹಾರದ ಚುನಾವಣೋತ್ತರ ಸಮೀಕ್ಷೆ ತಪ್ಪಾಗಿತ್ತು, ಉತ್ತರಪ್ರದೇಶದಲ್ಲಿ ನಾವು ಗೆಲ್ತೀವಿ: ರಾಹುಲ್ ಗಾಂಧಿ

    ಬಿಹಾರದ ಚುನಾವಣೋತ್ತರ ಸಮೀಕ್ಷೆ ತಪ್ಪಾಗಿತ್ತು, ಉತ್ತರಪ್ರದೇಶದಲ್ಲಿ ನಾವು ಗೆಲ್ತೀವಿ: ರಾಹುಲ್ ಗಾಂಧಿ

    ನವದೆಹಲಿ: ಪಂಚ ರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಲು ನಿರಾಕರಿಸಿರೋ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಉತ್ತರಪ್ರದೇಶದಲ್ಲಿ ಬಿಜೆಪಿಗೆ ಬಹುಮತ ಸಿಗುತ್ತದೆ ಎಂಬ ಸಮೀಕ್ಷಾ ವರದಿಯನ್ನು ತಳ್ಳಿಹಾಕಿದ್ದು, ಸಮಾಜವಾದಿ ಪಕ್ಷ ಹಾಗೂ ಕಾಂಗ್ರೆಸ್ ಮೈತ್ರಿಕೂಟವೇ ಗೆಲುವು ಸಾಧಿಸುತ್ತದೆ ಎಂದು ಹೇಳಿದ್ದಾರೆ.

    ಉತ್ತರಪ್ರದೇಶದಲ್ಲಿ ನಾವು ಗೆಲ್ಲುತ್ತೇವೆ. ಬಿಹಾರದ ಚುನಾವಣೋತ್ತರ ಸಮೀಕ್ಷೆಗಳು ತಪ್ಪಾಗಿದ್ದವು. ನಾವು ನಾಳೆ ಮಾತನಾಡುತ್ತೇವೆ. ಚುನಾವಣೋತ್ತರ ಸಮೀಕ್ಷೆಯ ಬಗ್ಗೆ ಯವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ ಎಂದು ರಾಹುಲ್ ಗಾಂಧಿ ರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

    ಇದನ್ನೂ ಓದಿ: ಉತ್ತರಪ್ರದೇಶದಲ್ಲಿ ಬಿಎಸ್‍ಪಿ ಜೊತೆ ಮೈತ್ರಿಗೆ ಎಸ್‍ಪಿ ಸಿದ್ಧ: ಅಖಿಲೇಶ್

    ಉತ್ತರಪ್ರದೇಶ, ಪಂಜಾಬ್, ಉತ್ತರಾಖಂಡ್, ಮಣಿಪುರ ಹಾಗೂ ಗೋವಾ ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಶನಿವಾರದಂದು ಹೊರಬೀಳಲಿದೆ.

    ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯ ಅಂಕಿ-ಅಂಶಗಳು ಬಹಿರಂಗವಾಗಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಪಂಜಾಬ್‍ನಲ್ಲಿ ಆಪ್, ಗೋವಾ ಅತಂತ್ರ, ಉತ್ತರಾಖಂಡ್ ಮತ್ತು ಮಣಿಪುರದಲ್ಲಿ ಬಿಜೆಪಿ ಅಧಿಕಾರಕ್ಕೇರಲಿದೆ ಅಂತ ಸಮೀಕ್ಷೆ ನಡೆಸಿರುವ ರಾಷ್ಟ್ರೀಯ ವಾಹಿನಿಗಳು, ಸುದ್ದಿ ಸಂಸ್ಥೆಗಳು ಹೇಳಿವೆ.

    ಇದನ್ನೂ ಓದಿ: ನಾಲ್ಕು  ರಾಜ್ಯಗಳಲ್ಲಿ ಮೋದಿ ಭರ್ಜರಿ ಕಮಾಲ್