Tag: Samajavadi party

  • ಉತ್ತರ ಪ್ರದೇಶದಲ್ಲಿ ಎಸ್‍ಪಿ ನಾಯಕನ ಬರ್ಬರ ಹತ್ಯೆ

    ಉತ್ತರ ಪ್ರದೇಶದಲ್ಲಿ ಎಸ್‍ಪಿ ನಾಯಕನ ಬರ್ಬರ ಹತ್ಯೆ

    ಲಕ್ನೋ: ಉತ್ತರ ಪ್ರದೇಶದ ಪಿಜಿಐ ಪೊಲೀಸ್ ಠಾಣಾ ವ್ಯಾಪ್ತಿಯ ರೇವ್ತಾಪುರ್ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ (ಎಸ್‍ಪಿ) ಮುಖಂಡರೊಬ್ಬರನ್ನು ಬರ್ಬರವಾಗಿ ಥಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗಂಭೀರ ಗಾಯಗೊಂಡಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತ ರೋಹಿತ್ (26) ಮೇಲೆ ಸಚಿನ್ ಮತ್ತು ಆತನ ಸಹಚರರು ಹಲ್ಲೆ ನಡೆಸಿದ್ದಾರೆ. ಕಬ್ಬಿಣದ ಕೋಲುಗಳು, ಹರಿತವಾದ ಆಯುಧಗಳು ಮತ್ತು ಲಾಠಿಗಳಿಂದ ತೀವ್ರವಾಗಿ ಥಳಿಸಿದ್ದಾರೆ. ಈ ವೇಳೆ ಅವರನ್ನು ತಕ್ಷಣ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ಹೆಸರಿನಲ್ಲಿ ಅಶ್ಲೀಲ ವೀಡಿಯೋ ಪೋಸ್ಟ್: ದೂರು ದಾಖಲು

    ಮೃತರ ಕುಟುಂಬಸ್ಥರ ದೂರಿನ ಮೇರೆಗೆ ಪೊಲೀಸರು ಸಚಿನ್ ಮತ್ತು ಐವರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ರೋಹಿತ್ ಎಸ್‌ಪಿ ಯುವ ಘಟಕದ ಮಾಜಿ ಜಿಲ್ಲಾ ಕಾರ್ಯದರ್ಶಿಯಾಗಿದ್ದರು. ಸಚಿನ್, ಶಿವಕುಮಾರ್ ಮತ್ತು ಇತರರು ತನ್ನ ಮಗನ ಮೇಲೆ ಹಲ್ಲೆ ನಡೆಸಿ ಅಮಾನುಷವಾಗಿ ಥಳಿಸಿದ್ದಾರೆ ಎಂದು ಮೃತರ ತಾಯಿ ಊರ್ಮಿಳಾ ದೇವಿ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ ತಂದೆ, ಅಣ್ಣನಿಂದ ಅತ್ಯಾಚಾರ – ಅಜ್ಜ, ಚಿಕ್ಕಪ್ಪನಿಂದ ಕಿರುಕುಳ

    ಸಚಿನ್‍ಗೆ ರೋಹಿತ್ ಜೊತೆ ಹಳೆ ವೈಷಮ್ಯವಿದ್ದು, ಹಲವು ಬಾರಿ ಬೆದರಿಕೆ ಹಾಕಿದ್ದ ಎಂದು ಅವರ ತಾಯಿ ಆರೋಪಿಸಿದ್ದಾರೆ. ರೋಹಿತ್ ಆರು ತಿಂಗಳ ಹಿಂದೆ ಮದುವೆಯಾಗಿದ್ದರು.

    ಆರೋಪಿಗಳನ್ನು ಪತ್ತೆ ಹಚ್ಚಲು ಮತ್ತು ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕಂಟೋನ್ಮೆಂಟ್ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಅರ್ಚನಾ ಸಿಂಗ್ ತಿಳಿಸಿದ್ದಾರೆ.

  • EVM ಪ್ರೋಟೋಕಾಲ್‍ನಲ್ಲಿ ಲೋಪ: ಚುನಾವಣಾಧಿಕಾರಿಯ ವೀಡಿಯೋ ಹಂಚಿಕೊಂಡ ಎಸ್‍ಪಿ

    EVM ಪ್ರೋಟೋಕಾಲ್‍ನಲ್ಲಿ ಲೋಪ: ಚುನಾವಣಾಧಿಕಾರಿಯ ವೀಡಿಯೋ ಹಂಚಿಕೊಂಡ ಎಸ್‍ಪಿ

    ಲಕ್ನೋ: ಉತ್ತರಪ್ರದೇಶದ ವಾರಣಾಸಿಯಲ್ಲಿ ಇವಿಎಂನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂಬ ಅಖಿಲೇಶ್ ಯಾದವ್ ಅವರ ಆರೋಪದ ನಂತರ ಅಧಿಕಾರಿಯೊಬ್ಬರು ಲೋಪ ಮಾಡಿರುವುದಾಗಿ ಒಪ್ಪಿಕೊಂಡಿರುವ ವೀಡಿಯೋವೊಂದನ್ನು ಅವರ ಸಮಾಜವಾದಿ ಪಕ್ಷದ ನಾಯಕರು ಟ್ವೀಟ್ ಮಾಡಿದ್ದಾರೆ.

    ವಾರಣಾಸಿಯ ಕಮಿಷನರ್ ದೀಪಕ್ ಅಗರ್ವಾಲ್ ಮಾತನಾಡಿ, ನೀವು ಇವಿಎಂಗಳ ಚಲನೆಯ ಪ್ರೋಟೋಕಾಲ್ ಬಗ್ಗೆ ಮಾತನಾಡಿದರೆ, ಪ್ರೋಟೋಕಾಲ್‍ನಲ್ಲಿ ಲೋಪವಿದೆ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಮತದಾನದಲ್ಲಿ ಬಳಸುವ ಯಂತ್ರಗಳನ್ನು ತೆಗೆದುಕೊಂಡು ಹೋಗುವುದು ಅಸಾಧ್ಯ ಎಂದು ತಿಳಿಸಿದ್ದಾರೆ.

    ಎಣಿಕೆ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಭದ್ರತಾ ಸಿಬ್ಬಂದಿ ಮತ್ತು ರಾಜಕೀಯ ಪಕ್ಷದ ಪ್ರತಿನಿಧಿಗಳು ಇದ್ದರು. ರಾಜಕೀಯ ಪಕ್ಷದ ಕಾರ್ಯಕರ್ತರು ಕಣ್ಣಿಡಲು ಕೇಂದ್ರಗಳ ಹೊರಗೆ ಕುಳಿತುಕೊಳ್ಳಬಹುದು ಎಂದರು. ಇದನ್ನೂ ಓದಿ: ವಾರಣಾಸಿಯಲ್ಲಿ EVM ಕಳವು: ಅಖಿಲೇಶ್‌ ಯಾದವ್‌ ಗಂಭೀರ ಆರೋಪ

    ಈ ಬಗ್ಗೆ ಸಮಾಜವಾದಿ ಪಕ್ಷವು ಟ್ವಿಟ್ಟರ್‌ನಲ್ಲಿ ಪೋಸ್ಟ್‌ನ್ನು ಹಂಚಿಕೊಂಡಿದ್ದು, ಪ್ರೋಟೋಕಾಲ್ ಅನ್ನು ಅನುಸರಿಸಿಲ್ಲ ಎಂದು ಒಪ್ಪಿಕೊಳ್ಳಲಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಬಾಂಗ್ಲಾ ವಿದ್ಯಾರ್ಥಿಗಳ ರಕ್ಷಣೆ – ಮೋದಿಗೆ ಧನ್ಯವಾದ ತಿಳಿಸಿದ ಹಸೀನಾ

    ವಿವಿಧ ಜಿಲ್ಲೆಗಳ ಇವಿಎಂಗಳಲ್ಲಿ ಉಲ್ಲಂಘನೆಯ ಮಾಹಿತಿ ಇದೆ. ಯಾರ ಆದೇಶದ ಮೇರೆಗೆ ಇದು ನಡೆಯುತ್ತಿದೆ?, ಅಧಿಕಾರಿಗಳು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಚೇರಿಯ ಒತ್ತಡಕ್ಕೆ ಒಳಗಾಗಿದ್ದಾರೆಯೇ? ಇವೆಲ್ಲವನ್ನು ಚುನಾವಣಾ ಆಯೋಗವು ಸ್ಪಷ್ಟಪಡಿಸಬೇಕು ಎಂದು ಸಮಾಜವಾದಿ ಪಕ್ಷ ಒತ್ತಾಯಿಸಿದೆ.

    ನಿನ್ನೆ ಮತ ಎಣಿಕೆ ಕೇಂದ್ರದಿಂದ ಇವಿಎಂ ತೆಗೆದುಕೊಂಡು ಹೋಗಿರುವ ಸಂಬಂಧ ವೀಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಅಖಿಲೇಶ್ ಯಾದವ್, ವಾರಣಾಸಿಯ ಡಿಎಂ ಸ್ಥಳೀಯ ಅಭ್ಯರ್ಥಿಗಳಿಗೆ ಮಾಹಿತಿ ನೀಡದೆಯೇ ಮತಗಟ್ಟೆಗಳಿಂದ ಇವಿಎಂ ಸಾಗಿಸುತ್ತಿದ್ದಾರೆ. ಇದನ್ನು ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದರು.

  • ಉದ್ಯೋಗ ನೀಡಲು ಸಮಾಜವಾದಿ ಪಕ್ಷ ಬದ್ಧ : ಅಖಿಲೇಶ್ ಯಾದವ್

    ಉದ್ಯೋಗ ನೀಡಲು ಸಮಾಜವಾದಿ ಪಕ್ಷ ಬದ್ಧ : ಅಖಿಲೇಶ್ ಯಾದವ್

    ಲಕ್ನೋ: ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಪುನಃ ಉದ್ಯೋಗವನ್ನು ಒದಗಿಸಲು ಬದ್ಧವಾಗಿದೆ ಎಂದು ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್ ಭರವಸೆ ನೀಡಿದರು.

    ಸಿದ್ಧಾರ್ಥನಗರ, ಬಸ್ತಿ ಮತ್ತು ಸಂತ ಕಬೀರ್ ನಗರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಸಮಾಜವಾದ ಪಕ್ಷ ಸರ್ಕಾರ ರಚಿಸಿದರೆ ಪೊಲೀಸ್ ಮತ್ತು ಸೇನೆಯಲ್ಲಿ ನೇಮಕಾತಿ ಹೆಚ್ಚಿಸುವುದರ ಜೊತೆಗೆ 300 ಯೂನಿಟ್ ವಿದ್ಯುತ್‍ನ್ನು ಉಚಿತವಾಗಿ ಪೂರೈಕೆ ಮಾಡಲಾಗುವುದು ಎಂದರು.

    ಯೋಗಿ ಆದಿತ್ಯನಾಥ್ ಅವರ ವಿರುದ್ಧ ಕಿಡಿಕಾರಿದ ಅವರು, ಇತ್ತೀಚೆಗೆ ಬಾಬಾ ಸಿಎಂ ಮುಖ ನೋಡಿದ್ದೀರಾ? ಅವನು ಬೆಚ್ಚಿಬೀಳುತ್ತಿದ್ದಾರೆ. ಹಿಂದೊಮ್ಮೆ ಅವರೇ ಮಧ್ಯಾಹ್ನ 12 ಗಂಟೆಗೆ ಏಳುತ್ತೇನೆ ಎಂದು ಹೇಳಿದ್ದರು. ಅಂದಿನಿಂದ, ನಾವು ಅವರ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿದ್ದೇವೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಉಕ್ರೇನ್‍ನಿಂದ ಬಂದವರಿಗೆ ಕೋವಿಡ್-19 ರೂಲ್ಸ್ ನಿಂದ ವಿನಾಯಿತಿ

    ಬಿಜೆಪಿಯವರು ಸಾರ್ವಜನಿಕರಿಗೆ ಸುಳ್ಳು ಹೇಳುತ್ತಿದ್ದಾರೆ. ಸಣ್ಣ ನಾಯಕರು ಸಣ್ಣ ಸುಳ್ಳನ್ನು ಹೇಳುತ್ತಾರೆ. ದೊಡ್ಡ ನಾಯಕರು ದೊಡ್ಡ ಸುಳ್ಳನ್ನು ಹೇಳುತ್ತಾರೆ. ಹಾಗೇ ಅವರು ವಿಮಾನಗಳು, ವಿಮಾನ ನಿಲ್ದಾಣಗಳು, ಹಡಗು, ಬಂದರು, ರೈಲು ಹಾಗೂ ರೈಲು ನಿಲ್ದಾಣಗಳನ್ನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಿಸಿದ ಶಿಮುಲ್

  • ಸಮಾಜವಾದಿ ಪಕ್ಷದಿಂದ ಸನಾತನ ಧರ್ಮಕ್ಕೆ ಅವಮಾನ: ಯೋಗಿ

    ಸಮಾಜವಾದಿ ಪಕ್ಷದಿಂದ ಸನಾತನ ಧರ್ಮಕ್ಕೆ ಅವಮಾನ: ಯೋಗಿ

    ಲಕ್ನೋ: ಸಮಾಜವಾದಿ ಪಕ್ಷದ ನಾಯಕಿ ಅವರು ಕೇಸರಿ ಬಣ್ಣವನ್ನು ತುಕ್ಕು ಹಿಡಿದಿರುವ ಬಣ್ಣಕ್ಕೆ ಹೋಲಿಸಿರುವ ಹೇಳಿಕೆಯು ಸನಾತನ ಧರ್ಮಕ್ಕೆ ಹಾಗೂ ದಾರ್ಶನಿಕರಿಗೆ ಮಾಡಿದ ಅವಮಾನವಾಗಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಕೆಲವು ಸಮಾಜವಾದಿ ಪಕ್ಷದವರು ಕೇಸರಿ ಬಣ್ಣವನ್ನು ತುಕ್ಕಿಗೆ ಹೋಲಿಸಿದ್ದರು. ಇದರಿಂದ ಸನಾತನ ಧರ್ಮಕ್ಕೆ ಅವಮಾನವಾಗಿದೆ. ಆದರೆ ಈ ಕೇಸರಿ ಬಣ್ಣಕ್ಕೆ ಹಿಂದೂ ಧರ್ಮದಲ್ಲಿ ಅದರದ್ದೇ ಆದ ಮಹತ್ವವಿದೆ. ಇದಕ್ಕೆ ನಾನು ಸನ್ಯಾಸಿಯೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದರು.

    ಉತ್ತರಪ್ರದೇಶದ ಪ್ರತಿಯೊಬ್ಬ ನಿವಾಸಿಯು ನಮ್ಮನ್ನು ಸನ್ಯಾಸಿಯೆಂದು ಕರೆಯುತ್ತಾರೆ. ಕೇಸರಿ ಬಣ್ಣದ ಶಕ್ತಿಯಿಂದಲೇ ಇಷ್ಟೊಂದು ಹೆಸರು ಸಂಪಾದಿಸಿದ್ದೇನೆ. ಸೂರ್ಯೋದಯವಾದಾಗ ಸೂರ್ಯನ ಬಣ್ಣವು ಕೇಸರಿಯಾಗಿರುತ್ತದೆ. ಅಷ್ಟೇ ಅಲ್ಲದೇ ಸ್ವಾಮಿ ವಿವೇಕಾನಂದರೂ ನಾವು ಹಿಂದುಗಳೆಂದು ಹೆಮ್ಮೆಯಿಂದ ಹೇಳಿದ್ದರು. ಅವರು ಧರಿಸುತ್ತಿದ್ದದ್ದು ಕೇಸರಿ ಬಣ್ಣದ್ದೇ ಆಗಿತ್ತು. ಏಕೆಂದರೆ ನಾವು ಸನ್ಯಾಸಿಗಳು ಇದು ನಮ್ಮ ಗುರುತಾಗಿದೆ ಎಂದರು. ಇದನ್ನೂ ಓದಿ: ಮಣಿಪುರದಲ್ಲಿ ಇಂದು ಮೊದಲ ಹಂತದ ಮತದಾನ

    ಸಿರುತುದಲ್ಲಿ ನಡೆದ ಚುನಾವಣೆ ರ‍್ಯಾಲಿಯಲ್ಲಿ ಸಮಾಜವಾದ ಪಕ್ಷದ ನಾಯಕಿ ಡಿಂಪಲ್ ಯಾದವ್ ಮಾತನಾಡಿ, ಬಿಜೆಪಿಯ ಡಬಲ್ ಇಂಜಿನ್ ಸರ್ಕಾರಕ್ಕೆ ತುಕ್ಕು ಹಿಡಿದಿದೆ. ಯೋಗಿ ಆದಿತ್ಯನಾಥ್ ಅವರು ತುಕ್ಕು ಹಿಡಿದಿರುವ ಬಣ್ಣದ ಕಾವಿಯನ್ನು ಧರಿಸುತ್ತರೆ ಎಂದು ಟೀಕಿಸಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ- ಇಂದು ಬಿಡದಿಯಿಂದ ಮತ್ತೆ ಆರಂಭ

  • ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

    ಉತ್ತರ ಪ್ರದೇಶಕ್ಕೆ 3ನೇ ಹಂತ, ಪಂಜಾಬ್ ಮತದಾನ ಇಂದು – ಅಖಿಲೇಶ್ ಯಾದವ್ ಭವಿಷ್ಯ ನಿರ್ಧಾರ

    ನವದೆಹಲಿ: ಉತ್ತರ ಪ್ರದೇಶದ 16 ಜಿಲ್ಲೆಗಳ 59 ಕ್ಷೇತ್ರಗಳಿಗೆ ಇಂದು ಮೂರನೇ ಹಂತದ ಮತದಾನ ನಡೆಯಲಿದ್ದು, ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಕಾಂಗ್ರೆಸ್ ಆಡಳಿತವಿರುವ ಪಂಜಾಬ್‌ನಲ್ಲೂ ಇಂದು ಒಂದೇ ಹಂತದಲ್ಲಿ ಮತದಾನವಾಗಲಿದ್ದು, ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ನಡೆಯಲಿದೆ.

    ಉತ್ತರಪ್ರದೇಶದಲ್ಲಿ 2.15 ಕೋಟಿ ಮತದಾರರು 3ನೇ ಹಂತದಲ್ಲಿ 627 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಮೈನ್‌ಪುರಿಯ ಕರ್ಹಾಲ್ ವಿಧಾನಸಭಾ ಕ್ಷೇತ್ರಕ್ಕೂ ಇಂದೇ ಮತದಾನ ನಡೆಯುತ್ತಿದ್ದು, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಭವಿಷ್ಯವೂ ನಿರ್ಧಾರವಾಗಲಿದೆ.

    ಉತ್ತರಪ್ರದೇಶದ ಹತ್ರಾಸ್, ಫಿರೋಜಾಬಾದ್, ಇಟಾಹ್, ಕಾಸ್ಗಂಜ್, ಮೈನ್‌ಪುರಿ, ಫರೂಕಾಬಾದ್, ಕನೌಜ್, ಇಟಾವಾ, ಔರೈಯಾ, ಕಾನ್ಪುರ್ ದೇಹತ್, ಕಾನ್ಪುರ್ ನಗರ್, ಜಲೌನ್, ಝಾನ್ಸಿ, ಲಲಿತ್‌ಪುರ, ಹಮೀರ್‌ಪುರ್ ಮತ್ತು ಮಹೋಬಾ ಜಿಲ್ಲೆಗಳಲ್ಲಿ ಮತದಾನ ನಡೆಯುತ್ತಿದೆ.

    ಈಗಾಗಲೇ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಸಹೋದರ ಅಭಯ್ ರಾಮ್ ಯಾದವ್ ಇಟಾವಾ ಜಿಲ್ಲೆಯ ಸೈಫೈನಲ್ಲಿ ಈಗಾಗಲೇ ಮತ ಚಲಾಯಿಸಿದರು. ಇದನ್ನೂ ಓದಿ:  ಕೇಜ್ರಿವಾಲ್ ವಿರುದ್ಧ ಎಫ್‌ಐಆರ್ ದಾಖಲು!

    ಪಂಜಾಬ್‌ನಲ್ಲಿ ಇಂದು ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದ್ದು, 93 ಮಹಿಳೆಯರು ಸೇರಿದಂತೆ 1,304 ಅಭ್ಯರ್ಥಿಗಳ ಭವಿಷ್ಯವನ್ನು 2.14 ಕೋಟಿ ಮತದಾರರು ನಿರ್ಧರಿಸಲಿದ್ದಾರೆ. ಬೆಳಗ್ಗೆ 8 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ರವರೆಗೆ ನಡೆಯಲಿದೆ. ಪಂಜಾಬ್‌ನ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು, ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಭಗವಂತ್ ಮಾನ್, ಮಾಜಿ ಸಿಎಂಗಳಾದ ಅಮರಿಂದರ್ ಸಿಂಗ್ ಮತ್ತು ಪ್ರಕಾಶ್ ಸಿಂಗ್ ಬಾದಲ್ ಮತ್ತು ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್ ಅವರ ಭವಿಷ್ಯವೂ ಇಂದೇ ನಿರ್ಧಾರವಾಗಲಿದೆ. ಇದನ್ನೂ ಓದಿ: ದೇಶದ ಮೊದಲ ಪ್ರಧಾನಿ ಶಂಕುಸ್ಥಾಪನೆ ಮಾಡಿದ್ದ ಯೋಜನೆಗಳು ಮೋದಿ ಸರ್ಕಾರದಿಂದ ಪೂರ್ಣ: ಅಮಿತ್ ಶಾ

    bjp - congress

    2017ರ ಚುನಾವಣೆಯಲ್ಲಿ, ಬಿಜೆಪಿಯು ಈ 59 ಸ್ಥಾನಗಳಲ್ಲಿ 49 ಸ್ಥಾನಗಳನ್ನು ಗೆದ್ದಿದ್ದರೆ, ಸಮಾಜವಾದಿ ಪಕ್ಷ 9 ಸ್ಥಾನ ಹಾಗೂ ಕಾಂಗ್ರೆಸ್ 1 ಸ್ಥಾನ ಪಡೆದಿತ್ತು. ಆದರೆ ಬಹುಜನ ಸಮಾಜವಾದಿ ಪಕ್ಷವೂ ಈ ಕ್ಷೇತ್ರಗಳಲ್ಲಿ ಖಾತೆ ತೆರೆಯಲು ಸಾಧ್ಯವಾಗಿರಲಿಲ್ಲ.

  • ಅಪರಾಧಿ ಹಾಗೂ ಬೆಂಬಲಿಗರ ಬಂಧನ: ಅಖಿಲೇಶ್ ಯಾದವ್

    ಅಪರಾಧಿ ಹಾಗೂ ಬೆಂಬಲಿಗರ ಬಂಧನ: ಅಖಿಲೇಶ್ ಯಾದವ್

    ಲಕ್ನೋ: ಲಖಿಂಪುರ ಪ್ರಕರಣದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರನಿಗೆ ಜಾಮೀನು ನೀಡಿರುವುದನ್ನು ಖಂಡಿಸಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್ ಯಾದವ್ ಅವರು, ತಾವು ಅಧಿಕಾರಕ್ಕೆ ಬಂದರೆ ಅಪರಾಧಿಗಳನ್ನು ಹಾಗೂ ಅಪರಾಧಿಗಳ ರಕ್ಷಕರನ್ನು ಜೈಲಿಗೆ ಕಳಿಸುವುದಾಗಿ ಭರವಸೆ ನೀಡಿದರು.

    ಚುನಾವಣಾ ಸಭೆಯಲ್ಲಿ ಮಾತನಾಡಿದ ಅವರು, ರೈತರನ್ನು ತುಳಿದ ಸಚಿವರ ಮಗನಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿದೆ. ಸರ್ಕಾರವು ಪ್ರಕರಣದ ತನಿಖೆಯನ್ನು ಸರಿಯಾದ ರೀತಿಯಲ್ಲಿ ಮುಂದುವರಿಸಿಲ್ಲ. ಆದರೆ ನಮ್ಮ ಸರ್ಕಾರ ಬಂದಾಗ ರೈತರ ಜೀವವನ್ನು ತೆಗೆದುಕೊಂಡ ಆರೋಪಿಗಳಿಗೆ ಮಾತ್ರವಲ್ಲದೇ ಅವರನ್ನು ರಕ್ಷಿಸಿದವರನ್ನು ಬಂಧಿಸಲಾಗುವುದು. ಜೊತೆ ಪ್ರಕರಣದ ಕುರಿತು ಸರಿಯಾಗಿ ತನಿಖೆ ನಡೆಸಲಾಗುವುದು ಎಂದ ಅವರು, ಕಾನೂನನ್ನು ತಮ್ಮ ಕೈಯಲ್ಲಿ ತೆಗೆದುಕೊಳ್ಳಲು ಬಯಸುವವರು ಮುಂಬರುವ ಚುನಾವಣೆಯಲ್ಲಿ ತಮ್ಮ ಪಕ್ಷಕ್ಕೆ ಮತ ಹಾಕುವ ಅಗತ್ಯವಿಲ್ಲ ಎಂದು ನುಡಿದರು.

    ನವ ಉತ್ತರಪ್ರದೇಶಕ್ಕೆ ಸಮಾಜವಾದಿ ಪಕ್ಷಕ್ಕೆ ಮತ ಕೇಳಿದ ಅವರು, ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಖಾಲಿ ಇರುವ ಎಲ್ಲಾ ಸರ್ಕಾರಿ ಹುದ್ದೆಗಳನ್ನು ಮಾಡುವುದರ ಜೊತೆಗೆ ಇನ್ನೂ ಕೆಲವು ಪೊಲೀಸ್ ಹುದ್ದೇಗಳನ್ನು ಸೃಷ್ಟಿಸುವುದಾಗಿ ಭರವಸೆ ನೀಡಿದರು. ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಯಂತೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದಾಗಿ ಈಗಾಗಲೇ ಭರವಸೆ ನೀಡಿರುವ ಅವರು, ಉದ್ಯೋಗ ಪಡೆಯಲು ವಯೋಮಿತಿ ಸಡಿಲಿಸುವ ಭರವಸೆ ನೀಡಿ ನಿರುದ್ಯೋಗಿ ಯುವಕರನ್ನು ಓಲೈಸಲು ಯತ್ನಿಸಿದರು. ಇದನ್ನೂ ಓದಿ: ಪುಟ್ಟ ಕಂದಮ್ಮನೊಂದಿಗೆ ಪತಿಯನ್ನು ಹುಡುಕುತ್ತಾ ಕಾಡಿಗೆ ತೆರಳಿದ ಪತ್ನಿ..!

    ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಸೇರಿದಂತೆ ನಾಲ್ವರು ಲಖಿಂಪುರದ ಖೇರಿಯ ಎಂಟು ಜನರ ಸಾವಿಗೆ ಕಾರಣವಾದ ಆರೋಪಿಯಾಗಿದ್ದಾರೆ. ಆಶಿಶ್ ಮಿಶ್ರಾ ಅವರಿಗೆ ಇತ್ತೀಚೆಗೆ ಜಾಮೀನು ನೀಡಲಾಯಿತು ಮತ್ತು ಕಳೆದ ವರ್ಷ ಅಕ್ಟೋಬರ್‍ನಲ್ಲಿ ಅವರನ್ನು ಬಂಧಿಸಿದ ನಂತರ ಲಖಿಂಪುರ ಖೇರಿ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: ಏರ್ ಇಂಡಿಯಾ ವಿಶ್ವದಲ್ಲೇ ಅತ್ಯುತ್ತಮವಾಗಿಸುವುದು ನಮ್ಮ ಗುರಿ: ಎನ್ ಚಂದ್ರಶೇಖರನ್

  • ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಖಚಿತ: ಅಖಿಲೇಶ್ ಯಾದವ್

    ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದರೆ ಉದ್ಯೋಗ ಖಚಿತ: ಅಖಿಲೇಶ್ ಯಾದವ್

    ಲಕ್ನೋ: ತಾಪಮಾನ ಕಡಿಮೆ ಆಗುವುದರ ಬಗ್ಗೆ ಖಚಿತವಿಲ್ಲ. ಆದರೆ ಸಮಾಜವಾದಿ ಪಕ್ಷ ಅಧಿಕಾರಕ್ಕೆ ಬಂದು ಉದ್ಯೋಗ ನೇಮಕಾತಿಯಾಗುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟಾಂಗ್ ನೀಡಿದರು.

    ಇತ್ತೀಚೆಗೆ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿ ಕೈರಾನಾದ ತಮಂಚವಾಡಿ ಪಕ್ಷದ ಅಭ್ಯರ್ಥಿ ಬೆದರಿಕೆ ಹಾಕಿದ್ದಾರೆ ಎಂದರೆ ಇನ್ನೂ ಬಿಸಿ ತಣ್ಣಗಿಲ್ಲ ಎಂದರ್ಥ. ಇದು ಮಾರ್ಚ್ 10ರ ನಂತರ ತಣ್ಣಗಾಗಲಿದೆ ಎಂದಿದ್ದರು.

    ಇದಕ್ಕೆ ಪ್ರತಿಕ್ರಿಯಿಸಿದ ಅಖಿಲೇಶ್ ಯಾದವ್, ರೈತರ ಮತ್ತು ಬಡವರ ಕಷ್ಟವನ್ನು ಅರ್ಥಮಾಡಿಕೊಳ್ಳದ ಸರ್ಕಾರ ರಚನೆಯಾದರೆ ಉಳಿದ ಪಕ್ಷಗಳಿಗೆ ಅವರ ಸ್ಥಾನವನ್ನು ತೋರಿಸುತ್ತೇವೆ ಎನ್ನುತ್ತಾರೆ. ಆದರೆ ತಾಪಮಾನ ಕಡಿಮೆ ಆಗುತ್ತದೆಯೋ ಇಲ್ಲವೋ ಎನ್ನುವುದರ ಕುರಿತು ಖಚಿತವಿಲ್ಲ, ಆದರೆ ನಮ್ಮ ಸರ್ಕಾರ ರಚನೆಯಾದರೆ, ಉದ್ಯೋಗ ನೇಮಕಾತಿ ನಡೆಯಲಿದೆ ಎಂದು ಭರವಸೆ ನೀಡಿದರು.

    ಕೇಂದ್ರದ ಉಡಾನ್ ಯೋಜನೆಯನ್ನು ಟೀಕಿಸಿದ ಅವರು, ಡೀಸೆಲ್ ಮತ್ತು ಪೆಟ್ರೋಲ್ ತುಂಬಾ ದುಬಾರಿಯಾಗಿದೆ, ಯುವಕರು ವಾಹನ ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಾಸ್ಟೆಲ್ ವಾರ್ಡನ್‍ನಿಂದ ಮತಾಂತರ ಕಿರುಕುಳ – ವಿದ್ಯಾರ್ಥಿನಿ ಆತ್ಮಹತ್ಯೆ

    Akhilesh Yadav

    ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿಸುವ ಚುನಾವಣೆ ಇದಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಐದು ವರ್ಷಗಳು ಕಳೆದಿವೆ. ಆದರೆ ಏನು ಅಭಿವೃದ್ಧಿಯಾಗಿಲ್ಲ. ಹವಾಯಿ ಚಪ್ಪಲಿ ಹಾಕಿಕೊಂಡವರು, ಏರೋಪ್ಲೇನ್‍ನಲ್ಲಿ ಕೂರುತ್ತಾರೆ ಎಂದು ಬಿಜೆಪಿಯವರು ಹೇಳುತ್ತಿದ್ದರು. ಆದರೆ ಯಾವಾಗಿನಿಂದ ಡೀಸೆಲ್, ಪೆಟ್ರೋಲ್ ಬೆಲೆ ದುಬಾರಿಯಾಗುತ್ತಿದೆಯೋ ಅಂದಿನಿಂದ ಬಡವರ ಟ್ರ್ಯಾಕ್ಟರ್, ಯುವಕರ ದ್ವಿಚಕ್ರವಾಹನ ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಮರಕ್ಕೆ ಕಾರು ಡಿಕ್ಕಿ – ಕಂದಮ್ಮ ಸೇರಿ ಒಂದೇ ಕುಟುಂಬದ ಮೂವರು ದುರ್ಮರಣ

  • ಬಿಜೆಪಿಯವರು ಎಂಜಲು ಹಚ್ಚಿ ಮಾಡಿದ ಪ್ರಚಾರದಿಂದ ಕೊರೊನಾ ಹೆಚ್ಚಳ: ಅಖಿಲೇಶ್

    ಬಿಜೆಪಿಯವರು ಎಂಜಲು ಹಚ್ಚಿ ಮಾಡಿದ ಪ್ರಚಾರದಿಂದ ಕೊರೊನಾ ಹೆಚ್ಚಳ: ಅಖಿಲೇಶ್

    ಲಕ್ನೋ: ಬಿಜೆಪಿ ಕಾರ್ಯಕರ್ತರು ಕರಪತ್ರವನ್ನು ಎಂಜಲು ಹಚ್ಚಿ ಹಂಚುತ್ತಿದ್ದಾರೆ. ಇದರಿಂದಾಗಿ ಕೊರೊನಾ ಸೋಂಕನ್ನು ಹರಡುತ್ತಿದ್ದಾರೆ ಎಂದು ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಪ್ರಚಾರ ಮಾಡುವಾಗ ಬಿಜೆಪಿ ಅವರು ಕರಪತ್ರಗಳನ್ನು ಎಂಜಲು ಹಚ್ಚಿ ನೀಡುತ್ತಿದ್ದಾರೆ. ಇದರಿಂದ ಒಬ್ಬರಿಂದ ಒಬ್ಬರಿಗೆ ಸೋಂಕು ಹರಡುತ್ತಿದೆ. ಈ ಬಗ್ಗೆ ಕೂಡಲೇ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಇತ್ತೀಚೆಗೆ ಉತ್ತರ ಪ್ರದೇಶದ ಚುನಾವಣೆ ನಿಮಿತ್ತ ಪ್ರಚಾರ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೌತಮ ನಗರ ಜಿಲ್ಲೆಗೆ ಆಗಮಿಸಿದ್ದರು. ಬಿಜೆಪಿ ಕಾರ್ಯಕರ್ತರೊಂದಿಗೆ ಸೇರಿ ಮನೆ-ಮನೆ ಪ್ರಚಾರ ನಡೆಸಿದ್ದರು. ಅವರು ಕರಪತ್ರಗಳನ್ನು ತೆಗೆಯುವಾಗ ಅದಕ್ಕೆ ಎಂಜಲು ಹಚ್ಚಿದ್ದ ವಿಡಿಯೋವೊಂದನ್ನು ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದರು. ಇದನ್ನೂ ಓದಿ: ಬೈಕ್ ಅಪಘಾತ – ಟಿಎಂಸಿ ನಾಯಕ ಮದನ್ ಮಿತ್ರಾಗೆ ಗಾಯ

    Akhilesh Yadav

    ಇದೇ ಸಂದರ್ಭದಲ್ಲಿ ಅಖಿಲೇಶ್‌ ಯಾದವ್‌ ಮೈತ್ರಿ ಬಗ್ಗೆ ಮಾತನಾಡಿದ ಅವರು, ಎಸ್‍ಪಿ ಮತ್ತು ಆರ್‍ಎಲ್‍ಡಿ ಮೈತ್ರಿಯಿಂದ ರಾಜ್ಯದಲ್ಲಿ ನಕಾರಾತ್ಮಕ ಆಡಳಿತ ಕೊನೆಗೊಂಡು, ಸಕಾರಾತ್ಮಕ ಆಡಳಿತ ಬರುತ್ತದೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಸ್ಯಾಂಡಲ್‍ವುಡ್ ನಟ ಕಂ ನಿರ್ದೇಶಕನ ವಿರುದ್ಧ ಅತ್ಯಾಚಾರ ಪ್ರಕರಣ

  • ಸಿದ್ದರಾಮಯ್ಯನವ್ರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ ಪಕ್ಷಾಂತರವೋ: ಬಿಜೆಪಿ ವ್ಯಂಗ್ಯ

    ಸಿದ್ದರಾಮಯ್ಯನವ್ರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ ಪಕ್ಷಾಂತರವೋ: ಬಿಜೆಪಿ ವ್ಯಂಗ್ಯ

    ಬೆಂಗಳೂರು: ಸಿದ್ದರಾಮಯ್ಯನವರೇ ಈ ಬಾರಿ ನಿಮ್ಮದು ಕ್ಷೇತ್ರಾಂತರವೋ ಪಕ್ಷಾಂತರವೋ ಎಂದು ಬಿಜೆಪಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಕುಟುಕಿದೆ.

    ಟ್ವೀಟ್‍ನಲ್ಲಿ ಏನಿದೆ?: ನಿಮ್ಮ ಆಪ್ತ ವಲಯದಲ್ಲಿರುವ ಕೆಲವರು ಈಗ ಸಮಾಜವಾದಿ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷದ ನಾಯಕರ ಸುತ್ತಮುತ್ತ ಕಾಣಿಸಿಕೊಳ್ಳುತ್ತಿರುವುದು ಈ ಅನುಮಾನಕ್ಕೆ ಪುಷ್ಠಿ ನೀಡುತ್ತಿದೆ. ಸಿದ್ದರಾಮಯ್ಯನವರೇ ನಿಮ್ಮ ಆಪ್ತರು ಆಪ್ ಹಾಗೂ ಸಮಾಜವಾದಿ ಪಕ್ಷದ ನಾಯಕರ ಭೇಟಿ ಮಾಡಿರುವುದು ಆಕಸ್ಮಿಕ ಘಟನೆಯಾಗಿರಲು ಸಾಧ್ಯವಿಲ್ಲ. ಇದೊಂದು ವ್ಯವಸ್ಥಿತ ನಡೆ. ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶದ ಬಳಿಕ ಕರ್ನಾಟಕದಲ್ಲೂ ಇದರ ಪ್ರತಿಫಲನ ಕಾಣಬಹುದೇ ಎಂದು ಪ್ರಶ್ನಿಸಿದೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಕೊರೊನಾ ಬಂದಿದೆ – ಇಬ್ರಾಹಿಂ ಹೇಳಿಕೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ

    ನಮ್ಮ ಸಂಪರ್ಕದಲ್ಲಿ ಆ ಪಕ್ಷದವರು ಇದ್ದಾರೆ. ಈ ಪಕ್ಷದವರು ಇದ್ದಾರೆ ಎಂದು ಸಿದ್ದರಾಮಯ್ಯ ಅವರು ಕಳೆದ ಕೆಲ ದಿನಗಳಿಂದ ನಿರಂತರ ಬುರುಡೆ ಬಿಟ್ಟಾಗಲೇ ಅನುಮಾನವಿತ್ತು. ಈಗ ನೋಡಿದರೆ ತಮ್ಮ ಆಪ್ತರನ್ನೇ ಬೇರೆಯವರ ಸಂಪರ್ಕಕ್ಕೆ ಬಿಟ್ಟಿದ್ದಾರೆ. ಸಿದ್ದರಾಮಯ್ಯನವರೇ, ಮತ್ತೊಮ್ಮೆ ವಲಸೆಗೆ ವೇದಿಕೆ ಸೃಷ್ಟಿಸಿಕೊಳ್ಳುತ್ತಿದ್ದೀರಾ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ:  ಮುಗಿದ ಅಧ್ಯಾಯ – ಕಾಂಗ್ರೆಸ್‍ಗೆ ಸಿಎಂ ಇಬ್ರಾಹಿಂ ಗುಡ್‍ಬೈ

  • ಎಸ್‍ಪಿ ಆಡಳಿತವಿದ್ದಾಗ ಕೋಮುಗಲಭೆ, ಬಿಜೆಪಿಯಿಂದ ಅಭಿವೃದ್ಧಿ: ಅನುರಾಗ್ ಠಾಕೂರ್

    ಎಸ್‍ಪಿ ಆಡಳಿತವಿದ್ದಾಗ ಕೋಮುಗಲಭೆ, ಬಿಜೆಪಿಯಿಂದ ಅಭಿವೃದ್ಧಿ: ಅನುರಾಗ್ ಠಾಕೂರ್

    ಲಕ್ನೋ: ಸಮಾಜವಾದಿ ಪಕ್ಷವು ಉತ್ತರಪ್ರದೇಶವನ್ನು ಆಳುವಾಗ ರಾಜ್ಯವು ಕೋಮುಗಲಭೆಗೆ ಸಾಕ್ಷಿಯಾಗಿತ್ತು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.

    ಆಗ್ರಾದಲ್ಲಿ ನಡೆದ ಎಂಪಿ ಕ್ರೀಡಾ ಸ್ಪರ್ಧೆಯ ಸಮಾರಂಭದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷವು 2017 ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೊದಲು, ಸಮಾಜವಾದಿ ಪಕ್ಷ ಉತ್ತರಪ್ರದೇಶವನ್ನು ಆಳುತ್ತಿತ್ತು. ಆದರೆ ಆ ಸಂದರ್ಭದಲ್ಲಿ ರಾಜ್ಯವು ಕೋಮುಗಲಭೆಗೆ ಸಾಕ್ಷಿಯಾಗಿತ್ತು ಎಂದು ಆರೋಪಿಸಿದರು. ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ ಮುಂದೂಡಿ, ರ‍್ಯಾಲಿ-ಸಮಾರಂಭ ನಿಲ್ಲಿಸಿ: ಚುನಾವಣಾ ಆಯೋಗ, ಕೇಂದ್ರಕ್ಕೆ ಕೋರ್ಟ್‌ ಒತ್ತಾಯ

    ನಮ್ಮ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಕ್ರೀಡಾಕೂಟಗಳನ್ನು ನಡೆಸುತ್ತಿವೆ. ದೇಶದಲ್ಲಿ ಅಥವಾ ದೇಶದ ಹೊರಗೆ ಯಾರು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೋ ಅವರನ್ನ ಯಾವುದೇ ಕಾರಣಕ್ಕೂ ಉಳಿಸುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಉತ್ತರ ಪ್ರದೇಶದಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ ಜಾರಿ

    ಕ್ರೀಡಾ ಕೂಟವನ್ನು ಉದ್ದೇಶಿಸಿ ಪ್ರತಿಕ್ರಿಯೆ ನೀಡಿದ ಅವರು, ಈ ಕ್ರೀಡಾ ಕೂಟವು ಪ್ರತಿ ವರ್ಷ ಎಲ್ಲಾ ಸಂಸದೀಯ ಕ್ಷೇತ್ರಗಳಲ್ಲಿ ನಡೆಸುತ್ತೇವೆ. ಇಂತಹ ಕ್ರೀಡಾ ಸ್ಪರ್ಧೆಗಳು ನಮ್ಮ ದೇಶದ ಆಟಗಾರಿಗೆ ಒಲಂಪಿಕ್ಸ್ ಕ್ರೀಡಾ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಾಯ ಆಗುತ್ತದೆ ಎಂದರು.

    ನಗರದ ಬಹುಬೇಡಿಕೆಯಾಗಿರುವ ಹೊಸ ಅಂತರಾಷ್ಟ್ರೀಯ ಕ್ರೀಡಾಂಗಣ ಆಗ್ರಾದಲ್ಲಿ ನಿರ್ಮಿಸುತ್ತೇವೆ. ಈ ಕ್ರೀಡಾಂಗಣದಲ್ಲಿ ಗ್ರ್ಯಾಂಡ್ ಕ್ರೀಡಾಕೂಟಗಳನ್ನು ಆಯೋಜಿಸುತ್ತೇವೆ. ಈ ಹಿಂದೆ ಕೇಂದ್ರ ಸಚಿವ ಎಸ್‍ಪಿ ಸಿಂಗ್ ಬಾಘೆಲ್, ಲೋಕಸಭೆ ಸಂಸದ ರಾಜ್‍ಕುಮಾರ್ ಚಹಾರ್, ಅವರು ಈ ಕ್ರೀಡಾಂಗಣ ನಿರ್ಮಿಸಲು ಒತ್ತಾಯಿಸಿದ್ದರು. ಆದರೆ ಹಿಂದಿನ ಸರ್ಕಾರವು ಈ ಕ್ರೀಡಾಂಗಣದ ಬೇಡಿಕೆಯನ್ನು ನಿರ್ಲಕ್ಷಿಸಿತ್ತು. ನಮ್ಮ ಸರ್ಕಾರವು ಜನಪರವಾದ ಸರ್ಕಾರವಾಗಿದೆ ಎಂದರು.