Tag: Sam Konstas

  • ಬುಮ್ರಾ ವಿರುದ್ಧ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತ 19ರ ಯುವ ಬ್ಯಾಟರ್‌!

    ಬುಮ್ರಾ ವಿರುದ್ಧ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತ 19ರ ಯುವ ಬ್ಯಾಟರ್‌!

    ಸಿಡ್ನಿ: ಭಾರತ – ಆಸ್ಟ್ರೇಲಿಯಾ ನಡುವಿನ ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೆಸ್ಟ್‌ ಸರಣಿ ಈ ಬಾರಿ ವಿವಾದಗಳಿಂದಲೇ ಹೆಚ್ಚಾಗಿ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಕೊಹ್ಲಿ ವಿರುದ್ಧ ಜಗಳ ಮಾಡಿಕೊಂಡಿದ್ದ 19 ವರ್ಷದ ಆಸೀಸ್‌ ಬ್ಯಾಟರ್‌, ಇಸೀಗ ಬುಮ್ರಾ (Jasprit Bumrah) ವಿರುದ್ಧ ಕಿರೀಕ್‌ ಮಾಡಿಕೊಂಡಿದ್ದಾರೆ. ಕೇವಲ 2ನೇ ಪಂದ್ಯ ಆಡುತ್ತಿರುವ ಸ್ಯಾಮ್ ಕಾನ್‌ಸ್ಟಾಸ್ (Sam Konstas) ಭಾರತದ ಅನುಭವೀ ಆಟಗಾರ ಜಸ್ಪ್ರೀತ್ ಬುಮ್ರಾ ವಿರುದ್ಧ ಅನಗತ್ಯವಾಗಿ ಕಿರಿಕ್‌ ಮಾಡಲು ಮುಂದಾಗಿದ್ದಾರೆ.

    ಆಸೀಸ್‌ ಆಟಗಾರರ (Australia Cricketer) ಕಿರಿಕ್‌ ಇಂದು ನಿನ್ನೆಯದ್ದಲ್ಲ.. ಕಾಂಗರೂ ಪಡೆ ಜಗಳ ಆಡದೇ ಇರುವ ತಂಡ ಜಗತ್ತಿನಲ್ಲಿ ಯಾವುದಾದರೂ ಇದ್ಯಾ? ಅದೇ ಪ್ರವೃತ್ತಿಯನ್ನ ಇದೀಗ ಯುವ ಬ್ಯಾಟರ್ ಸ್ಯಾಮ್‌ ಕಾನ್‌ಸ್ಟಾಸ್‌ ಮುಂದುವರಿಸಿದ್ದಾರೆ. ಈ ಹಿಂದೆ ಸಚಿನ್‌ ತೆಂಡೂಲ್ಕರ್‌ ಹಾಗೂ ವಿರಾಟ್‌ ಕೊಹ್ಲಿ (Virat Kohli) ವಿಚಾರದಲ್ಲೂ ಅನೇಕ ಬಾರಿ ಆಟಗಾರರು ಕಿರಿಕ್‌ ತೆಗೆದಿದ್ದಾರೆ. ಇದೀಗ ಕಾನ್ಸ್‌ಸ್ಟಾಸ್‌ ಬುಮ್ರಾ ಜೊತೆಗೆ ಬೇಕಂತಲೆ ಕಿರಿಕ್‌ ತೆಗೆದಂತೆ ಕಂಡುಬಂದಿದ್ದು, ಟೀಂ ಇಂಡಿಯಾ ಅಭಿಮಾನಿಗಳಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

    ಚಾಂಪಿಯನ್‌ ಬೌಲರ್‌ ಬುಮ್ರಾ ವಿಕೆಟ್ ಕೀಳುವ ಸಾಮರ್ಥ್ಯ ತಿಳಿದ ಯಾವ ಬ್ಯಾಟರ್ ಕೂಡ ಅವರನ್ನು ಕೆಣಕಲು ಹೋಗಲ್ಲ. ಆದ್ರೆ ಇನ್ನೂ 2ನೇ ಪಂದ್ಯವನ್ನಷ್ಟೇ ಆಡುತ್ತಿರುವ ಕಾನ್‌ಸ್ಟಾಸ್‌ ಈ ದುಸ್ಸಾಹಸ ಮಾಡಿದ್ದಾರೆ. ಮೆಲ್ಬೋರ್ನ್‌ ಪಂದ್ಯ ಪ್ರಾರಂಭವಾಗುವ ಮೊದಲೇ ಬುಮ್ರಾ ವಿರುದ್ಧ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡಿದ್ದ ಕಾನ್‌ಸ್ಟಾಸ್‌ ಪ್ರಥಮ ಇನ್ನಿಂಗ್ಸ್ ನಲ್ಲಿ ಹೇಳಿದಂತೆ ಮಾಡಿದ್ದರು. ಬುಮ್ರಾ ಎಸೆತಗಳನ್ನು ಬೌಂಡರಿ, ಸಿಕ್ಸರ್‌ಗಟ್ಟಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು. ಆದ್ರೆ 2ನೇ ಇನ್ನಿಂಗ್ಸ್‌ನಲ್ಲಿ ಸ್ಯಾಮ್‌ ಆಟಕ್ಕೆ ಬುಮ್ರಾ ಬ್ರೇಕ್‌ ಹಾಕಿದರು. ಕಾನ್‌ಸ್ಟಾಸ್ ಅವರನ್ನ ಕ್ಲೀನ್ ಬೌಲ್ಡ್ ಮಾಡಿದ್ದ ಬುಮ್ರಾ, ಅವರದ್ದೇ ರೀತಿಯಲ್ಲಿ ಸಂಭ್ರಮಿಸಿ ತಿರುಗೇಟು ಕೊಟ್ಟಿದ್ದರು.

    ಅಲ್ಲದೇ ಆ ಪಂದ್ಯದಲ್ಲಿ ಕಾನ್‌ಸ್ಟಾಸ್‌ ಮತ್ತು ಕೊಹ್ಲಿ ನಡುವೆ ನಡೆದ ಡಿಕ್ಕಿ ಡ್ರಾಮಾ ಇಡೀ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿತ್ತು. ಅಲ್ಲದೇ ಕೊಹ್ಲಿಗೆ ಐಸಿಸಿ ಪಂದ್ಯ ಶುಲ್ಕದಲ್ಲಿ 20% ದಂಡ ವಿಧಿಸಿತ್ತು. ಇಡೀಗ ಪಂದ್ಯ ನಡೆಯುತ್ತಿರುವ ಸಿಡ್ನಿ ಮೈದಾನ ಕಾನ್‌ಸ್ಟಾಸ್‌ ತವರು ನೆಲ. ಹೀಗಾಗಿ ಇಲ್ಲಿ ಲೋಕಲ್ ಬಾಯ್ ಆಗಿರುವ ಕಾನ್ ಸ್ಟಾಸ್ ಆತ್ಮವಿಶ್ವಾಸ ತುಸು ಹೆಚ್ಚೇ ಇರುವಂತೆ ಭಾಸವಾಗುತ್ತಿದೆ. ಪ್ರಥಮ ದಿನದ ಆಟ ಮುಗಿಯುತ್ತಾ ಬರುತ್ತಿದ್ದಂತೆ ಬುಮ್ರಾ ಜೊತೆಗೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಂತಿದ್ದಾರೆ.

    ಕೊನೇ ಎಸೆತಕ್ಕೂ ಮುನ್ನ ಭಾರೀ ಹೈಡ್ರಾಮಾ
    ದಿನದ ಅಂತ್ಯಕ್ಕೆ ಒಂದೇ ಒಂದು ಎಸೆತ ಬಾಕಿಯಿತ್ತು. ಆಸ್ಚ್ರೇಲಿಯಾದ ಮತ್ತೊಬ್ಬ ಆರಂಭಿಕ ಆಟಗಾರ ಉಸ್ಮಾನ್ ಖವಾಜ ಅವರು ಬುಮ್ರಾ ಬೌಲಿಂಗ್ ಮಾಡಲು ರನ್ ಅಪ್ ತೆಗೆದುಕೊಳ್ಳುತ್ತಿದ್ದಾಗ ಆಟವಾಡಲು ಸಿದ್ಧರಾಗಿರಲಿಲ್ಲ. ಇದಕ್ಕೆ ಬುಮ್ರಾ ಅವರು ಆಕ್ಷೇಪಿಸಿದರು. ಆಗ ಅನಗತ್ಯವಾಗಿ ಮಧ್ಯೆ ಪ್ರವೇಶಿಸಿದ ಕಾನ್ ಸ್ಟಾಪ್ ಬುಮ್ರಾ ಅವರನ್ನು ಬೌಲಿಂಗ್ ಮಾಡದಂತೆ ತಡೆದರು. ಈ ವೇಳೆ ಬುಮ್ರಾ ಅವರು ಕಾನ್ ಸ್ಟಾಸ್ ಗೆ ಏನು ಸಮಸ್ಯೆ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಕೊಂಚ ಮಾತಿನ ಚಕಮಕಿಯೂ ನಡೆಯಿತು. ತಕ್ಷಣವೇ ಅಂಪೈರ್‌ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮುಂದಿನ ಎಸೆತದಲ್ಲೇ ಬುಮ್ರಾ, ಖವಾಜ ವಿಕೆಟ್‌ ಕಿತ್ತು ಸ್ಯಾಮ್‌ ಎದುರು ಸಂಬ್ರಮಿಸಿದರು.

  • ಮತ್ತೆ ಕೈಕೊಟ್ಟ ಟಾಪ್‌ ಬ್ಯಾಟರ್ಸ್‌ – ಮೊದಲ ದಿನವೇ ಭಾರತ 185ಕ್ಕೆ ಆಲೌಟ್‌; ಆಸೀಸ್‌ 9ಕ್ಕೆ 1 ವಿಕೆಟ್‌

    ಮತ್ತೆ ಕೈಕೊಟ್ಟ ಟಾಪ್‌ ಬ್ಯಾಟರ್ಸ್‌ – ಮೊದಲ ದಿನವೇ ಭಾರತ 185ಕ್ಕೆ ಆಲೌಟ್‌; ಆಸೀಸ್‌ 9ಕ್ಕೆ 1 ವಿಕೆಟ್‌

    ಸಿಡ್ನಿ: ಬಾರ್ಡರ್‌ ಗವಾಸ್ಕರ್‌ ಟ್ರೋಫಿ (Border Gavaskar Trophy) ಟೆಸ್ಟ್‌ ಸರಣಿಯ ಅಂತಿಮ ಪಂದ್ಯದ ಮೊದಲ ದಿನವೇ ಭಾರತ 185 ರನ್‌ಗಳಿಗೆ ಆಲೌಟ್‌ ಆಗಿದೆ. ಬಳಿಕ ತನ್ನ‌ ಸರದಿಯ ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಆಸ್ಟ್ರೇಲಿಯಾ (Australia) ದಿನಾಂತ್ಯಕ್ಕೆ 3 ಓವರ್‌ಗಳಲ್ಲಿ 9 ರನ್‌ಗಳಿಗೆ 1 ವಿಕೆಟ್ ಕಳೆದುಕೊಂಡಿದೆ.

    ಸಿಡ್ನಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ-ಆಸೀಸ್‌ (Ind vs Aus) ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯ ಆರಂಭಗೊಂಡಿದೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿಕೊಂಡ ಟೀಂ ಇಂಡಿಯಾ 72.2 ಓವರ್‌ಗಳಲ್ಲಿ 185 ರನ್‌ಗಳಿಗೆ ಆಲೌಟ್‌ ಆಯಿತು. ಇದನ್ನೂ ಓದಿ: ಭಾರತಕ್ಕೆ ಹೀನಾಯ ಸೋಲು – ಆಸ್ಟ್ರೇಲಿಯಾಗೆ 184 ರನ್‌ಗಳ ಭರ್ಜರಿ ಗೆಲುವು

    ಅಗ್ರ ಬ್ಯಾಟರ್‌ಗಳ ವೈಫಲ್ಯ:
    ಅಂತಿಮ ಪಂದ್ಯದಲ್ಲೂ ಟೀಂ ಇಂಡಿಯಾದ (Team India) ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಕೈಕೊಟ್ಟರು. ಯಶಸ್ವಿ ಜೈಸ್ವಾಲ್‌, ಕೆ.ಎಲ್‌ ರಾಹುಲ್‌, ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ ಅಲ್ಪಮೊತ್ತಕ್ಕೆ ವಿಕೆಟ್‌ ಒಪ್ಪಿಸಿ ಪೆವಿಲಿಯನ್‌ ಪರೇಡ್‌ ನಡೆಸಿದರು. ಮಧ್ಯಮ ಕ್ರಮಾಂಕದಲ್ಲಿ ರಿಷಬ್‌ ಪಂತ್‌, ರವೀಂದ್ರ ಜಡೇಜಾ ಅವರಿಂದ 48 ರನ್‌ಗಳ ಸಣ್ಣ ಜೊತೆಯಾಟ ಬಂದರೂ ಭಾರತ 200 ರನ್‌ಗಳ ಗಡಿ ದಾಟುವಲ್ಲಿ ವಿಫಲವಾಯಿತು.

    ಭಾರತದ ಪರ ರಿಷಬ್ ಪಂತ್ 40 ರನ್‌, ರವೀಂದ್ರ ಜಡೇಜಾ 26 ರನ್‌, ಜಸ್ಪ್ರೀತ್ ಬುಮ್ರಾ 22 ರನ್, ಶುಭಮನ್‌ ಗಿಲ್‌ 20 ರನ್‌, ವಿರಾಟ್‌ ಕೊಹ್ಲಿ 17 ರನ್‌, ವಾಷಿಂಗ್ಟನ್‌ ಸುಂದರ್‌ 14 ರನ್‌, ಯಶಸ್ವಿ ಜೈಸ್ವಾಲ್‌ 10 ರನ್‌, ಕೆ.ಎಲ್‌ ರಾಹುಲ್‌ 4 ರನ್‌, ಪ್ರಸಿದ್ಧ್‌ ಕೃಷ್ಣ 3 ರನ್‌, ಸಿರಾಜ್‌ ಅಜೇಯ 3 ರನ್‌ ಗಳಿಸಿದ್ರೆ, ನಿತೀಶ್‌ ರೆಡ್ಡಿ ಶೂನ್ಯ ಸುತ್ತಿದರು. ಇದನ್ನೂ ಓದಿ: ಮನು ಭಾಕರ್‌, ಗುಕೇಶ್‌ ಸೇರಿದಂತೆ ನಾಲ್ವರಿಗೆ ಖೇಲ್‌ ರತ್ನ ಘೋಷಣೆ

    ಆರಂಭಿಸಿದ ಆಸೀಸ್‌ ಪರ ಉಸ್ಮಾನ್‌ ಖವಾಜ 2 ರನ್‌ ಗಳಿಸಿ,‌ ದಿನಾಂತ್ಯದ ಕೊನೇ ಎಸೆತದಲ್ಲಿ ಜಸ್ಪ್ರೀತ್‌ ಬುಮ್ರಾಗೆ ವಿಕೆಟ್‌ ಒಪ್ಪಿಸಿದರು. ಇನ್ನೂ ಸ್ಯಾಮ್‌ ಕಾನ್ಸ್‌ಸ್ಟಾಸ್‌ 7 ರನ್‌ ಗಳಿಸಿದ್ದು, 2ನೇ ದಿನಕ್ಕೆ ಕ್ರೀಸ್‌ ಕಾಯ್ದಿರಿಸಿದ್ದಾರೆ.

    ಆಸ್ಟ್ರೇಲಿಯಾ ಪರ ವೇಗದ ಬೌಲರ್ ಸ್ಕಾಟ್ ಬೋಲೆಂಡ್ 31 ರನ್ ಗಳಿಗೆ 4 ವಿಕೆಟ್ ಕಿತ್ತರೆ, ಮಿಚೆಲ್ ಸ್ಟಾರ್ಕ್ 49 ರನ್ ಗಳಿಗೆ 3 ವಿಕೆಟ್ ಗಳಿಸಿದರು. ನಾಯಕ ಪ್ಯಾಟ್ ಕಮಿನ್ಸ್ 37 ರನ್ ಗಳಿಗೆ 2 ವಿಕೆಟ್ ಕಬಳಿಸಿದರು. ಉಳಿದೊಂದು ವಿಕೆಟ್ ಸ್ಪಿನ್ನರ್ ನಥಾನ್‌ ಲಿಯೋನ್ ಪಾಲಾಯಿತು. ಇದನ್ನೂ ಓದಿ: ಸಿಡ್ನಿ ಪಂದ್ಯದಿಂದ ರೋಹಿತ್‌ ಔಟ್‌? – ಗೌತಮ್‌ ಗಂಭೀರ್‌ ಹೇಳಿದ್ದೇನು?

  • ಬೂಮ್ರಾಗೆ ಒಂದೇ ಓವರ್‌ನಲ್ಲಿ 18 ರನ್‌ ಚಚ್ಚಿದ 19ರ ಯುವಕ – ರೋಹಿತ್‌ ಪಡೆ ತಬ್ಬಿಬ್ಬು

    ಬೂಮ್ರಾಗೆ ಒಂದೇ ಓವರ್‌ನಲ್ಲಿ 18 ರನ್‌ ಚಚ್ಚಿದ 19ರ ಯುವಕ – ರೋಹಿತ್‌ ಪಡೆ ತಬ್ಬಿಬ್ಬು

    ಬೆಂಗಳೂರು: ಟೀಂ ಇಂಡಿಯಾ (Team India) ಸ್ಟಾರ್‌ ವೇಗಿ ಜಸ್ಪ್ರೀತ್‌ ಬುಮ್ರಾ (Jasprit Bumrah) ಅವರಿಗೆ 19 ವರ್ಷದ ಆಸೀಸ್‌ ಬ್ಯಾಟರ್‌ ಶಾಕ್‌ ಟ್ರೀಟ್ಮೆಂಟ್‌ ಕೊಟ್ಟಿದ್ದಾರೆ. ಒಂದೇ ಓವರ್‌ನಲ್ಲಿ 18 ರನ್‌ ಸಿಡಿಸುವ ಮೂಲಕ ರೋಹಿತ್‌ ಪಡೆಯನ್ನ ತಬ್ಬಿಬ್ಬುಗೊಳಿಸಿದ್ದಾರೆ. ಆಸ್ಟ್ರೇಲಿಯಾ ಪರ ಪದಾರ್ಪಣೆ ಪಂದ್ಯವನ್ನಾಡುತ್ತಿರುವ ಸ್ಯಾಮ್ ಕಾನ್​​ಸ್ಟಸ್ (Sam Konstas) ಎಂಬ 19ರ ಹರೆಯದ ಯುವಕ ಅರ್ಧಶತಕ ಹೊಡೆದು ಮಿಂಚಿದ್ದಾರೆ.

    ಕಳೆದ 3 ಪಂದ್ಯಗಳಲ್ಲಿ ಭಾರತೀಯ ಬೌಲರ್‌ಗಳ ಎಸೆತಗಳನ್ನು ಅಂದಾಜಿಸಿ ಆಡಲು ವಿಫಲರಾಗಿದ್ದ ಆರಂಭಿಕ ಆಟಗಾರ ಮೆಕ್ ಸ್ವೀನಿ ಅವರನ್ನ 4ನೇ ಪಂದ್ಯದಿಂದ ಹೊರದಬ್ಬಿ ಸ್ಯಾಮ್ ಕಾನ್​​ಸ್ಟಸ್‌ಗೆ ಅವಕಾಶ ನೀಡಲಾಯಿತು. ಪಿಂಕ್‌ ಬಾಲ್‌ ಅಭ್ಯಾಸ ಪಂದ್ಯದಲ್ಲಿ ʻಪ್ರಧಾನಮಂತ್ರಿಗಳ ಇಲೆವೆನ್ʼ ಪರವಾಗಿ ಭಾರತದ ವಿರುದ್ಧ ಆಡಿದ್ದ ಈತ ಆಗಲೇ ಸದ್ದು ಮಾಡಿದ್ದ. ಇದೀಗ ಪದಾರ್ಪಣೆ ಪಂದ್ಯದಲ್ಲಿ 52 ಎಸೆತಗಳಲ್ಲೇ ಅರ್ಧಶತಕವನ್ನೂ ಪೂರೈಸಿದ್ದಾರೆ.

    ಬುಮ್ರಾಗೆ ಸಿಕ್ಸರ್‌ ರುಚಿ ತೋರಿಸಿದ ಯುವಕ:
    19ರ ಯುವಕ ಬುಮ್ರಾ ಅವರ ಒಂದೇ ಓವರ್‌ನಲ್ಲಿ 18 ರನ್‌ ಸಿಡಿಸುವ ಜೊತೆಗೆ ಭರ್ಜರಿ ಸಿಕ್ಸರ್‌ ಸಿಡಿಸಿ ವಿಶಿಷ್ಟ ದಾಖಲೆಯೊಂದಕ್ಕೂ ಸಂಚಕಾರ ತಂದರು. ಹೌದು. ಬುಮ್ರಾ ಅವರಿಗೆ ಕಳೆದ 3 ವರ್ಷಗಳ ಹಿಂದೆ ಟೆಸ್ಟ್ ಪಂದ್ಯದಲ್ಲಿ ಕ್ಯಾಮರೂನ್ ಗ್ರೀನ್ ಸಿಕ್ಸರ್ ಹೊಡೆದಿದ್ದರು. ಅದಾದ ಬಳಿಕ ವೇಗಿ 4,484 ಎಸೆತಗಳನ್ನು ಎಸೆಸಿದ್ದರೂ ಯಾರೊಬ್ಬರೂ ಸಿಕ್ಸರ್‌ ಸಿಡಿಸುವ ಪ್ರಯತ್ನಕ್ಕೆ ಮುಂದಾಗಿರಲಿಲ್ಲ. ಬಾಕ್ಸಿಂಗ್‌ ಡೇ ಟೆಸ್ಟ್‌ ಕ್ರಿಕೆಟ್‌ನಲ್ಲಿ 19ರ ಯುವಕ ಸಿಕ್ಸರ್‌ ಸಿಡಿಸುವ ಮೂಲಕ ‌ ಬುಮ್ರಾ ಅವರ ದಾಖಲೆಯೊಂದನ್ನ ನುಚ್ಚುನೂರು ಮಾಡಿದ್ದಾರೆ.

    ಇನ್ನೂ ಪದಾರ್ಪಣೆ ಪಂದ್ಯದಲ್ಲಿ 65 ಎಸೆತಗಳನ್ನು ಎದುರಿಸಿದ ಸ್ಯಾಮ್‌ ಕಾನ್‌ಸ್ಟಾಸ್‌ 60 ರನ್‌ ಚಚ್ಚಿದರು. ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯದಲ್ಲಿ ಟಾಸ್‌ಗೆದ್ದು ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಆಸೀಶ್‌ ಮೊದಲ ದಿನವೇ 311 ರನ್‌ ಗಳಿಸಿದೆ.