Tag: sam

  • ವಾಸನೆ ಗ್ರಹಿಸುವ ಶಕ್ತಿ ಕಳೆದುಕೊಂಡ ಪೂನಂ ಪಾಂಡೆ : ಇದರ ಹಿಂದಿದೆ ಕಣ್ಣೀರಿನ ಕಥೆ

    ವಾಸನೆ ಗ್ರಹಿಸುವ ಶಕ್ತಿ ಕಳೆದುಕೊಂಡ ಪೂನಂ ಪಾಂಡೆ : ಇದರ ಹಿಂದಿದೆ ಕಣ್ಣೀರಿನ ಕಥೆ

    ವಿವಾದಿತ ತಾರೆ ಪೂನಂ ಪಾಂಡೆ ಅನಾರೋಗ್ಯದ ಕಾರಣದಿಂದಾಗಿ ಕಂಗನಾ ರಣಾವತ್ ನಡೆಸಿಕೊಡುತ್ತಿದ್ದ ‘ಲಾಕ್ ಅಪ್’ ಶೋನಿಂದ ಹೊರಬಂದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಇದೀಗ ಅವರ ಆರೋಗ್ಯ ಸುಧಾರಿಸಿದ್ದು, ಈ ಹೊತ್ತಿನಲ್ಲಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಮತ್ತೊಂದು ಅಚ್ಚರಿಯ ಸಂಗತಿಯನ್ನು ಹೊರ ಹಾಕಿದ್ದಾರೆ.  ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

    ಪೂನಂ ಪಾಂಡೆ ಅವರಿಗೆ ವಾಸನೆ ಗ್ರಹಿಸುವ ಶಕ್ತಿ ಇಲ್ಲವಂತೆ. ಪತಿ ಪದೇ ಪದೇ ತಲೆಗೆ ಹೊಡೆಯುತ್ತಿದ್ದರಿಂದ ಮೆದುಳಿನಲ್ಲಿ ರಕ್ತಸ್ರಾವವಾಗಿ ವಾಸನೆ ಗ್ರಹಿಸುವ ಶಕ್ತಿಯನ್ನೇ ಅವರು ಕಳೆದುಕೊಂಡಿದ್ದಾರಂತೆ. ವಾಸನೆ ಗ್ರಹಿಕೆಗೆ ಅವರು ಬೇರೆಯವರನ್ನು ಅವಲಂಬಿಸಬೇಕಾಗಿದೆಯಂತೆ. ಈ ಸ್ಥಿತಿಯು ಯಾರಿಗೂ ಬರಬಾರದು ಎಂದು ನೋವಿನಿಂದಲೇ ಅವರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

    ಸ್ಯಾಮ್ ಜೊತೆ ಮದುವೆಯಾದಾಗ ಬದುಕು ತುಂಬಾ ಸುಂದರವಾಗಿರುತ್ತದೆ ಎಂದು ಕನಸು ಕಂಡಿದ್ದರಂತೆ. ಆದರೆ ,ಇಷ್ಟೊಂದು ನರಕವಾಗುತ್ತದೆ ಎಂದು ಕನಸಲ್ಲೂ ಎನಿಸಿರಲಿಲ್ಲ. ಸ್ಯಾಮ್ ಮತ್ತು ಕುಟುಂಬ ಸಿಕ್ಕಾಪಟ್ಟೆ ಹಿಂಸೆ ಮಾಡಿತು. ಹಾಗಾಗಿ ನಾನು ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಿಸಬೇಕಾಯಿತು ಎಂದು ಅವರು ಮಾಧ್ಯಮದೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ : ಹಾಲಿವುಡ್‌ಗೆ ಹಾರಲಿದ್ದಾರೆ ಬಾಲಿವುಡ್ ರಾಧೆ ಆಲಿಯಾ ಭಟ್

    ಸದ್ಯ ಪೂನಂ ಪಾಂಡೆ ದೈಹಿಕ ಮತ್ತು ಮಾನಸಿಕವಾಗಿ ಗಟ್ಟಿಗೊಂಡಿದ್ದು, ಬದುಕನ್ನು ಹೇಗೆ ನಡೆಸಿಕೊಂಡು ಹೋಗಬೇಕು ಎನ್ನುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರಂತೆ. ಮೊದಲಿನಂತೆ ನೋವಿನಲ್ಲೂ ನಗುವುದಕ್ಕೆ ಅವರು ಸಿದ್ಧರಿಲ್ಲವಂತೆ. ನೋವು ಮತ್ತು ನಲಿವು ಎರಡನ್ನೂ ಎರಡೂ ರೀತಿಯಲ್ಲೇ ತೋರಿಸಲು ಇಷ್ಟಪಡುತ್ತಾರಂತೆ ಪೂನಂ.

  • ಸಮಂತಾ ಜೊತೆಗಿನ ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಚೈತನ್ಯ

    ಸಮಂತಾ ಜೊತೆಗಿನ ಡಿವೋರ್ಸ್ ಬಗ್ಗೆ ಕೊನೆಗೂ ಮೌನ ಮುರಿದ ನಟ ನಾಗಚೈತನ್ಯ

    ಹೈದರಾಬಾದ್: ಟಾಲಿವುಡ್ ನಟ ನಾಗಚೈತನ್ಯ ಅವರಿಂದ ನಟಿ ಸಮಂತಾ ರುತ್ ಫ್ರಭು ವಿಚ್ಛೇದನ ನೀಡಿದ ಬಳಿಕ ನಟ ಈ ಬಗ್ಗೆ ಎಲ್ಲಿಯೂ ಬಾಯಿಬಿಟ್ಟಿಲ್ಲ. ಇದೀಗ ನಾಗಚೈತನ್ಯ ಅವರು ತಮ್ಮ ವಿಚ್ಛೇದನ ಕುರಿತು ಮೌನ ಮುರಿದಿದ್ದಾರೆ.

    ಹೌದು. ಸಮಂತಾ ಹಾಗೂ ನಾಗಚೈತನ್ಯ ಅವರು ಡಿವೋರ್ಸ್ ಪಡೆದುಕೊಂಡು ಸರಿಸುಮಾರು 3 ತಿಂಗಳುಗಳೇ ಕಳೆದುಹೋಗಿದೆ. ಈ ಹಿಂದೆ ಸಮಂತಾ ಅವರು ವಿಚ್ಛೇದನದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದರು. ಆದರೆ ನಾಗಚೈತನ್ಯ ಮಾತ್ರ ಎಲ್ಲಿಯೂ ಈ ಬಗ್ಗೆ ಹೇಳಿಕೊಂಡಿರಲಿಲ್ಲ. ಆದರೆ ಇದೀಗ ಬರೋಬ್ಬರಿ ಮೂರು ತಿಂಗಳ ಬಳಿಕ ವಿಚ್ಛೇದನದ ಕುರಿತು ಬಾಯಿಬಿಟ್ಟಿದ್ದಾರೆ.

    ವಿಚ್ಛೇದನದ ಬಳಿಕ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಾಗಚೈತನ್ಯ ಸದ್ಯ ಬಂಗರ್ರಾಜು ಸಿನಿಮಾದ ಪ್ರೊಮೋಷನ್ ನಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ ಮಾಧ್ಯಮಗಳ ಜೊತೆ ನಟ ಮಾತನಾಡಿದ್ದಾರೆ. ಇದೇ ಸಂದರ್ಭದಲ್ಲಿ ನಾಗಚೈತನ್ಯ ಜೊತೆ ಮಾಧ್ಯಮ ಮಿತ್ರರು ವಿಚ್ಚೇಧನದ ಕುರಿತು ಪ್ರಶ್ನೆ ಕೇಳಿದ್ದಾರೆ.  ಇದನ್ನೂ ಓದಿ: ಮದುವೆ ಬದಲು ವಿಚ್ಛೇದನವನ್ನು ಸಂಭ್ರಮಿಸಬೇಕು: ರಾಮ್ ಗೋಪಾಲ್ ವರ್ಮಾ

    ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ನಾಗಚೈತನ್ಯ, ನಾವಿಬ್ಬರು ಬೇರ್ಪಟ್ಟಿರುವುದು ಒಂದೊಳ್ಳೆಯ ನಿರ್ಧಾರವಾಗಿದೆ. ವೈಯಕ್ತಿಕ ನಿರ್ಧಾರಕ್ಕಾಗಿ ನಾವಿಬ್ಬರು ಪರಸ್ಪರವಾಗಿ ನಿರ್ಧಾರ ತೆಗೆದುಕೊಂಡಿದ್ದೇವೆ. ಅವಳು ಸಂತೋಷವಾಗಿದ್ದರೆ ನನಗೂ ಅದೇ ಸಂತೋಷ. ವೈಯಕ್ತಿಕವಾಗಿ ಸಂತೋಷವಾಗಿರುವ ವಿಚಾರ ಬಂದಂತಹ ಪರಿಸ್ಥಿತಿಯಲ್ಲಿ ಡಿವೋರ್ಸ್ ಆಗುವುದು ಒಳ್ಳೆಯ ನಿರ್ಧಾರವಾಗಿದೆ ಎಂದು ಹೇಳಿದ್ದಾರೆ.

    ಚಾಯ್ ಹಾಗೂ ಸ್ಯಾಮ್ ಕಳೆದ ವರ್ಷ ಅಕ್ಟೋಬರ್ 2ರಂದು ವಿಚ್ಛೇದನ ಘೋಷಿಸಿದ್ದರು. ಹೆಚ್ಚು ಆಲೋಚನೆಯ ನಂತರ ಚಾಯ್ ಮತ್ತು ನಾನು ನಮ್ಮ ಸ್ವಂತ ದಾರಿಗಳನ್ನು ಅನುಸರಿಸಲಿದ್ದೇವೆ. ಗಂಡ ಮತ್ತು ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕದ ಸ್ನೇಹವನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ನಮ್ಮ ಸಂಬಂಧ ಯಾವಾಗಲೂ ನಮ್ಮ ನಡುವೆ ವಿಶೇಷ ಬಾಂಧವ್ಯವನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ ಎಂದು ಹೇಳಿದ್ದರು. ಇದನ್ನೂ ಓದಿ: ಸಮಂತಾ, ನಾಗ ಚೈತನ್ಯ DIVORCEಗೆ ಅಸಲಿ ಕಾರಣ ಬಯಲು

    ಈ ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು. ನಾವು ಮುಂದುವರಿಯಲು ಬೇಕಾದ ಪ್ರೈವೆಸಿಯನ್ನು ನಮಗೆ ನೀಡಬೇಕೆಂದು ನಾವು ವಿನಂತಿಸುತ್ತೇವೆ. ನಿಮ್ಮ ಬೆಂಬಲಕ್ಕೆ ಧನ್ಯವಾದಗಳು ಎಂದು ಬರೆದುಕೊಂಡು ತಾವಿಬ್ಬರು ವಿಚ್ಛೇದನ ಪಡೆದುಕೊಳ್ಳುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾ ಮೂಲಕವಾಗಿ ತಿಳಿಸಿದ್ದರು.

    ಟಾಲಿವುಡ್‍ನ ಈ ಸ್ಟಾರ್ ದಂಪತಿ ನಾಲ್ಕು ವರ್ಷಗಳ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯವನ್ನು ಹಾಡಿದ್ದಾರೆ. ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ಸುದ್ದಿಗೆ ತೆರೆ ಬಿದ್ದಿದೆ. ಸಂಸಾರದಲ್ಲಿ ಬಿರುಗಾಳಿ ಎದ್ದಿದೆ ಎಂಬ ಅನುಮಾನ ವಿಚ್ಛೇದನಕ್ಕೂ ಮೊದಲು ಹಲವು ದಿನಗಳಿಂದಲೂ ಕೇಳಿಬರುತ್ತಲೇ ಇತ್ತು. ಆದರೆ ಕುಟುಂಬದ ಯಾರೊಬ್ಬರೂ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಕೊನೆಗೂ ನಟ ಹಾಗೂ ನಟಿಯೇ ಸೋಶಿಯಲ್‌ ಮೀಡಿಯಾ ಮೂಲಕವೇ ಬಹಿರಂಗಪಡಿಸಿದ್ದರು.