Tag: Salumarada Thimmakka

  • ಸಾಲುಮರದ ತಿಮ್ಮಕ್ಕ ಬಯೋಪಿಕ್ ಗಲಾಟೆ – 25 ಲಕ್ಷ ಹಣ, ಇನ್ನೋವಾ ಕಾರ್ ಬೇಡಿಕೆ?

    ಸಾಲುಮರದ ತಿಮ್ಮಕ್ಕ ಬಯೋಪಿಕ್ ಗಲಾಟೆ – 25 ಲಕ್ಷ ಹಣ, ಇನ್ನೋವಾ ಕಾರ್ ಬೇಡಿಕೆ?

    `ವೃಕ್ಷಮಾತೆ’ (Vruksha maate) ಹೆಸರಿನಲ್ಲಿ ತಮ್ಮದೇ ಜೀವನಾಧಾರಿತ ಕಥೆಗೆ ಅನುಮತಿ ಕೊಟ್ಟಿದ್ದ ಸಾಲುಮರದ ತಿಮ್ಮಕ್ಕ (Salumarada Thimmakka) ಇದೀಗ ಚಿತ್ರೀಕರಣಕ್ಕೆ ತಡೆ ಕೋರಿ ದೂರು ಕೊಟ್ಟಿದ್ದಾರೆ. ಕುದೂರಿನ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದ ತಿಮ್ಮಕ್ಕನ ಸಾಕು ಮಗ ಉಮೇಶ್ ಇದೀಗ ತಿಮ್ಮಕ್ಕನ ಜೊತೆಗೂಡಿ ಕರ್ನಾಟಕ ಫಿಲ್ಮ್ ಚೇಂಬರ್ (Karnataka Film Chamber) ಮೆಟ್ಟಿಲೇರಿದ್ದಾರೆ. ಚಿತ್ರೀಕರಣವನ್ನು ನಿಲ್ಲಿಸುವಂತೆ ಕೋರಿ ಚಿತ್ರತಂಡಕ್ಕೆ ವಾಣಿಜ್ಯ ಮಂಡಳಿ ನಿರ್ದೇಶನ ಕೊಡುವಂತೆ ದೂರುಪತ್ರ ಕೊಟ್ಟಿದ್ದಾರೆ.

    ಪರಿಸರ ಪೋಷಣೆಗೆ ಜೀವನ ಮುಡಿಪಾಗಿಟ್ಟಿರುವ ತಿಮ್ಮಕ್ಕನ ನಿಜಜೀವನ ಆಧಾರಿತ `ವೃಕ್ಷಮಾತೆ’ ಸಿನಿಮಾ ತಂಡಕ್ಕೆ ಆರಂಭದಲ್ಲೇ ಅಡ್ಡಿ ಎದುರಾಗಿದೆ. ಸ್ವತಃ ತಿಮ್ಮಕ್ಕ ಅವರೇ ವಿರೋಧ ವ್ಯಕ್ತಪಡಿಸಿದ್ದು, ಚಿತ್ರೀಕರಣ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: 3 ದಿನದೊಳಗೆ ಉತ್ತರಿಸಿ – ಕಾಂತಾರ ತಂಡಕ್ಕೆ ನೋಟಿಸ್

    ಈಗಾಗಲೇ ವೃಕ್ಷಮಾತೆ ಚಿತ್ರ ಸೆಟ್ಟೇರಿ 2 ದಿನ ಚಿತ್ರೀಕರಣವನ್ನೂ ಮಾಡಿದ್ದಾರೆ ಎನ್ನಲಾಗುತ್ತಿದೆ. ಶ್ರೀ ಲಕ್ಷ್ಮೀವೆಂಕಟೇಶ್ವರ ಪಿಕ್ಚರ್ಸ್‌ ಬ್ಯಾನರ್ ಅಡಿಯಲ್ಲಿ ಸಿನಿಮಾ ತಯಾರಾಗುತ್ತಿದ್ದು, ಒರಟ ಖ್ಯಾತಿಯ ಶ್ರೀ ನಿರ್ದೇಶನ ಮಾಡುತ್ತಿದ್ದರು. ಸಿದ್ದೇಶ್ ಅವರು ಬರೆದಿರುವ ಸಾಲುಮರದ ತಿಮ್ಮಕ್ಕ ಕೃತಿ ಆಧರಿಸಿ ಚಿತ್ರ ತಯಾರಾಗುತ್ತಿತ್ತು. ಇದೀಗ ಸ್ವತಃ ತಿಮ್ಮಕ್ಕ ಅವರೇ ತಮ್ಮ ಜೀವನಾಧಾರಿತ ಕಥೆಯ ಚಿತ್ರ ಮಾಡದಂತೆ ತಡೆದಿದ್ದಾರೆ. ಇದನ್ನೂ ಓದಿ: ಚಾಮುಂಡಿ ತಾಯಿ ಕಾಪಾಡಮ್ಮ – `ದಿ ರಾಜಾ ಸಾಬ್’ ಚಿತ್ರದಲ್ಲಿ ಪ್ರಭಾಸ್‌ ಘರ್ಜನೆ

    ತಿಮ್ಮಕ್ಕನ ಆರೋಪವೇನು?
    ನಿರ್ಮಾಪಕ ದಿಲೀಪ್ ಅವರು ಬಂದು ಸಿನಿಮಾ ಮಾಡ್ತೀವಿ ಅಂದ್ರು ಬೇಡ ಎಂದೇ ಹೇಳಿದ್ವಿ. ಕೃತಿಯಾಧಾರಿತ ಚಿತ್ರ ಅಂತ ಹೇಳ್ತಾರೆ. ಕೃತಿಯೇ ಸರಿ ಇಲ್ಲ. ಅದಲ್ಲದೇ ಚಿತ್ರೀಕರಣಕ್ಕಾಗಿ ಮರಗಳನ್ನೇ ಕಡಿದಿದ್ದಾರೆ. ಈವರೆಗೆ ಎಷ್ಟೇ ಬೇಡಿಕೆ ಬಂದಿದ್ದರೂ ಅನುಮತಿ ಕೊಟ್ಟಿಲ್ಲ. ಈಗಲೂ ಕೊಟ್ಟಿಲ್ಲ ಅನ್ನೋದಾಗಿ ತಿಮ್ಮಕ್ಕ ಅವರ ಸಾಕು ಮಗ ಉಮೇಶ್, ಫಿಲ್ಮ್ ಚೇಂಬರ್‌ನಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಶೂಟಿಂಗ್ ಮುಗಿಸಿದ ಸತೀಶ್ ನೀನಾಸಂ, ಸಪ್ತಮಿ ನಟನೆಯ ʻದಿ ರೈಸ್ ಆಫ್ ಅಶೋಕʼ

    ತಿಮ್ಮಕ್ಕನ ಮೇಲೆ ಆರೋಪವೇನು?
    ತಿಮ್ಮಕ್ಕನ ವಿರುದ್ಧ ಚಿತ್ರತಂಡದಿಂದ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪವೂ ಕೇಳಿಬಂದಿದೆ. ಚಿತ್ರತಂಡದಿಂದ 25 ಲಕ್ಷ ರೂ. ಹಣದ ಬೇಡಿಕೆ ಜೊತೆಗೆ ಇನ್ನೋವಾ ಕಾರ್ ನೀಡುವಂತೆ ಒತ್ತಡ ಹಾಕಿದ್ದಾರೆ ಅನ್ನೋದು ಸಿನಿಮಾ ಟೀಮ್ ಆರೋಪವಾಗಿದೆ. ಈ ಆರೋಪವನ್ನ ತಿಮ್ಮಕ್ಕನ ಸಾಕುಮಗ ಉಮೇಶ್ ತಳ್ಳಿಹಾಕಿದ್ದಾರೆ.

  • ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕಗೆ ಪರಮೇಶ್ವರ್ ಸನ್ಮಾನ

    ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕಗೆ ಪರಮೇಶ್ವರ್ ಸನ್ಮಾನ

    – ತಿಮ್ಮಕ್ಕರ ಸಂಪೂರ್ಣ ಜವಾಬ್ದಾರಿ ನೋಡಿಕೊಳ್ತಿದ್ದಾರೆ ಡಿಸಿಎಂ

    ಬೆಂಗಳೂರು: ರಾಷ್ಟ್ರಪತಿಯಿಂದ ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಸಾಲುಮರದ ತಿಮ್ಮಕ್ಕ ಅವರಿಗೆ ಇಂದು ಸದಾಶಿವನಗರ ಬಿಡಿಎ ಕಚೇರಿಯಲ್ಲಿ ಸನ್ಮಾನ ಕಾರ್ಯಕ್ರಮ ನಡೆಯಿತು. ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ತಿಮ್ಮಕ್ಕ ಅವರನ್ನು ಸನ್ಮಾನಿಸಿದ್ರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ತಿಮ್ಮಕ್ಕ ಅವರನ್ನು ಚಿಕ್ಕಣ್ಣ ಎಂಬವರಿಗೆ ವಿವಾಹ ಮಾಡಿಕೊಡಲಾಗಿತ್ತು. ಆದ್ರೆ ಇವರಿಗೆ ಮಕ್ಕಳು ಆಗಿಲ್ಲ ಎಂದು ಮಾನಸಿಕವಾಗಿ ನೊಂದಿದ್ದ ವೇಳೆ ಗಿಡಗಳನ್ನು ಬೆಳೆಸುವ ಮೂಲಕ ನಿರಾಸೆಯನ್ನು ಸರಿದೂಗಿಸುವ ಕೆಲಸವನ್ನು ಮಾಡಿದ್ದಾರೆ. ಸುಮಾರು 4 ಕಿ.ಮೀ ರಸ್ತೆಯಲ್ಲಿ ಮರಗಳನ್ನು ಬೆಳೆಸಿ, ತಾವೇ ಸ್ವತಃ ತಲೆ ಮೇಲೆ ನೀರು ಹೊತ್ತುಕೊಂಡು ಹೋಗಿ ಆ ಗಿಡಗಳನ್ನು ಬೆಳೆಸಿ ಇಂದು ಅವೆಲ್ಲ ದೊಡ್ಡ ವೃಕ್ಷಗಳಾಗಿ ಇಡೀ ವಿಶ್ವಕ್ಕೆ ಮಾದರಿಯಾಗುವಂತಹ ಮಹಾನ್ ಕಾರ್ಯ ಮಾಡಿದ್ದಾರೆ ಅಂದ್ರು.

    ಇಡೀ ವಿಶ್ವದಲ್ಲಿ ಪರಿಸರಕ್ಕೆ ಪರಿಸರ ನಾಶವಾಗುವ ಸಂದರ್ಭದಲ್ಲಿ ಅವರು ಮಾಡಿರುವ ಈ ಕೆಲಸ ನಮ್ಮೆಲ್ಲರಿಗೂ ಮಾದರಿ. ಇದನ್ನು ಗುರುತಿಸಿರುವ ಭಾರತ ಸರ್ಕಾರ ಹಾಗೂ ರಾಷ್ಟ್ರಪತಿ ಒಬ್ಬ ಸಾಮಾನ್ಯ ಮಹಿಳೆ ವಿಶ್ವಕ್ಕೆ ಮಾದರಿಯಾಗುವಂತಹ ಕೆಲಸ ಮಾಡಿರುವುದರಿಂದ ಶ್ರೇಷ್ಠತೆಯನ್ನು ಕಂಡಿದ್ದಾರೆ. ಬಹುಶಃ ಈ ಪದ್ಮ ಶ್ರೀ ಪ್ರಶಸ್ತಿ ಅವರಿಗಷ್ಟೇ ಸಿಕ್ಕಿದೆ ಎಂದು ನಾನು ಅಂದುಕೊಳ್ಳಲ್ಲ, ಬದಲಾಗಿ ಅವರ ಮೂಲಕ ಪರಿಸರ ಪ್ರಜ್ಞೆ ಮೂಡಿಸುವಂತಹ ಕೆಲಸ ಆಗಿದೆ ಎಂದು ನಾನು ಭಾವಿಸುತ್ತೇನೆ ಎಂದರು.

    ವೈಯಕ್ತಿಕವಾಗಿ ಅವರ ಬಗ್ಗೆ ಅಪಾರ ಗೌರವ ಇದೆ. ಇಂದಿಗೂ ಕೂಡ ಬಡತನದಿಂದ ಹೊರಬಂದಿದ್ದಾರೆ ಎಂದು ನನಗನ್ನಿಸುತ್ತಿಲ್ಲ. ಅನೇಕ ಪ್ರಶಸ್ತಿಗಳನ್ನು ಸರ್ಕಾರ ಹಾಗೂ ಬೇರೆ ಬೇರೆ ಸಂಘ ಸಂಸ್ಥೆಗಳು ನೀಡಿದೆ. ಆದ್ರೆ ಅವೆಲ್ಲವೂ ಕೂಡ ಇಂದು ಅವರು ಮಾಡಿರುವ ಕೆಲಸದ ಬಗ್ಗೆ ಈ ಸಮಾಜಕ್ಕೆ ತಿಳಿ ಹೇಳುವಂತಹ ಪ್ರಯತ್ನ ಮಾಡಿವೆ ಎಂದು ಅನಿಸುತ್ತದೆ. ಕರ್ನಾಟಕ ಮತ್ತು ನಾವೆಲ್ಲರೂ ಕೂಡ ಬಹಳ ಹೆಮ್ಮೆಯಿಂದ ಅವರಿಗೆ ಅಭಿನಂದನೆ ಸಲ್ಲಿಸುವ ಜೊತೆಗೆ ಭಗವಂತ ಹೆಚ್ಚಿನ ಆಯುಷ್ಯ ನೀಡಿ ನಮ್ಮ ಜೊತೆಯಲ್ಲಿ ಇನ್ನೂ ಅನೇಕ ವರ್ಷಗಳು ಮಾದರಿಯಾಗಿ ಅವರು ನಮ್ಮೊಂದಿಗಿರಲಿ ಎಂದು ಆಶಿಸಿದ್ರು.

    ಅಜ್ಜಿಯ ಸಂಪೂರ್ಣ ಜವಾಬ್ದಾರಿ ಪರಮೇಶ್ವರ್:
    ಪರಮೇಶ್ವರ್ ಅವರಿಗೂ ಸಾಲುಮರದ ತಿಮಕ್ಕ ಅವರಿಗೂ ಅವಿನಾಭಾವ ಸಂಬಂಧವಿದೆ. ತಿಮ್ಮಕ್ಕ ಅವರ ನೆರವಿಗೆ ಪರಮೇಶ್ವರ್ ಅವರು ಬರದೇ ಇದ್ದಲ್ಲಿ ಇಷ್ಟೆಲ್ಲಾ ಸಾಧನೆ ಹಾಗೂ ಪ್ರಶಸ್ತಿ ತೆಗೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಸಹಾಯ ಕೇಳದೇ ಇದ್ದರೂ ಅಜ್ಜಿಯವರನ್ನು ಮನೆಗೆ ಕರೆಸಿ ಅವರ ಸಂಕಷ್ಟಕ್ಕೆ ಸ್ಪಂದಿಸಿ ಬಹಳ ವರ್ಷಗಳಿಂದಲೂ ಅಜ್ಜಿಯ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂದು ತಿಮ್ಮಕ್ಕರ ದತ್ತು ಪುತ್ರ ಹೇಳಿದ್ದಾರೆ.

    ಪ್ರಶಸ್ತಿ ಬಂದ ಕೂಡಲೇ ನಾನು ಪರಮೇಶ್ವರ್ ಸರ್ ಅವರ ಮನೆಗೆ ಹೋಗಬೇಕು ಎಂದು ಮಧ್ಯರಾತ್ರಿ 1 ಗಂಟೆಗೆ ದೆಹಲಿಯಲ್ಲಿ ಹೇಳಿದ್ರು. ನಾವು ಹೊಗುವ ಮೊದಲೇ ಪರಮೇಶ್ವರ್ ಅವರು ಎಲ್ಲೇ ಇದ್ದರೂ ಮನೆಗೆ ಬಾರಪ್ಪ ಎಂದು ಫೋನ್ ಮಾಡಿದ್ದರು. ನಮ್ಮ ಕಷ್ಟ ಏನೇ ಇದ್ದರೂ ಪರನಮೇಶ್ವರ್ ಅವರೇ ನಮ್ಮ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದರು. ಒಟ್ಟಿನಲ್ಲಿ ಈ ಸಮಾಜದಲ್ಲಿ ಅಜ್ಜಿ ಇಂದು ಇಷ್ಟು ಆರೋಗ್ಯವಾಗಿದ್ದಾರೆ ಎಂಬುದಕ್ಕೆ ಪರಮೇಶ್ವರ್ ಅವರೇ ಕಾರಣರಾಗಿದ್ದು, ಅವರಿಗೆ ಯಾವತ್ತೂ ನಾವು ಅಭಾರಿಯಾಗಿರುತ್ತೇವೆ ಎಂದು ಹೇಳಿತ್ತಾ ಕೃತಜ್ಞತಾ ಪತ್ರವೊಂದನ್ನು ಡಿಸಿಎಂಗೆ ನೀಡಿದ್ರು.

  • ವೃಕ್ಷಮಾತೆಗೆ `ಛಲವಾದಿ ರತ್ನ’ ಪ್ರಶಸ್ತಿ ಪ್ರಧಾನ

    ವೃಕ್ಷಮಾತೆಗೆ `ಛಲವಾದಿ ರತ್ನ’ ಪ್ರಶಸ್ತಿ ಪ್ರಧಾನ

    ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಬೆಳಲಗೆರೆಯಲ್ಲಿ ವೃಕ್ಷಮಾತೆ ಸಾಲುಮರದ ತಿಮ್ಮಕ್ಕರಿಗೆ ಛಲವಾದಿ ರತ್ನ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಲಾಯಿತು.

    ಇಂದು ಬೆಳಗೆರೆಯಲ್ಲಿ ಕಟ್ಟೆಮನೆ ವಂಶಸ್ಥರು ಏಕಾದಶಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಉಪಮುಖ್ಯಮಂತ್ರಿಗಳಾದ ಜಿ. ಪರಮೇಶ್ವರ್ ರವರು ವೃಕ್ಷಮಾತೆ ಸಾಲುಮರದ ತಿಮ್ಮಕ್ಕರಿಗೆ `ಛಲವಾದಿ ರತ್ನ’ ಎಂಬ ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಸಾಲುಮರದ ತಿಮ್ಮಕ್ಕರ ಸೇವೆಯನ್ನು ಹಾಡಿಹೊಗಳಿದ್ದಾರೆ.

    ಸರ್ಕಾರಿ ಶಾಲೆ ಮಕ್ಕಳಿಗೆ ಬಸ್ ಪಾಸ್ ವಿಚಾರ ಕುರಿತು ಮಾಧ್ಯಮಗಳ ಜೊತೆ ಮಾತನಾಡಿದ ಪರಮೇಶ್ವರ್, ಮುಂದಿನ ದಿನಗಳಲ್ಲಿ ಖಾಸಗಿ ಶಾಲಾ ವಿದ್ಯಾರ್ಥಿಗಳಿಗೂ ಪಾಸ್ ಕೊಡುವ ಚಿಂತನೆ ಮಾಡಿರುವುದಾಗಿ ಹೇಳಿದ್ದಾರೆ. ಅಲ್ಲದೇ ಮೊದಲನೇ ಹಂತದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಪಾಸ್ ವಿತರಿಸುವುದಾಗಿ ತಿಳಿಸಿದರು. ಇದನ್ನೂ ಓದಿ: ದೇಶದಲ್ಲಿರುವ ಜಾತಿ ವರ್ಗೀಕರಣ ನಿರ್ನಾಮ ಆಗ್ಬೇಕು: ಪರಮೇಶ್ವರ್

  • ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಆಸ್ಪತ್ರೆಗೆ ದಾಖಲು

    ಬೆಂಗಳೂರು: ರಾಜ್ಯದ ಖ್ಯಾತ ಪರಿಸರ ಪ್ರೇಮಿ ಸಾಲು ಮರದ ತಿಮ್ಮಕ್ಕ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    105 ವರ್ಷ ವಯಸ್ಸಾಗಿರೋ ಇವರಿಗೆ ಉಸಿರಾಟದ ತೊಂದರೆಯಿತ್ತು. ಹೀಗಾಗಿ ಅವರನ್ನು ಜಯನಗರದ ಅಪ್ಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವು ತಿಂಗಳ ಹಿಂದಷ್ಟೇ ಅನಾರೋಗ್ಯ ಸಮಸ್ಯೆಯಿಂದಾಗಿ ಚಿಕಿತ್ಸೆ ಪಡೆದು ಡಿಸ್ಜಾರ್ಜ್ ಆಗಿದ್ದರು.

    ಇದೀಗ ಮತ್ತೆ ಉಸಿರಾಟದ ತೊಂದರೆ ಹೆಚ್ಚಾಗಿ ಕಂಡುಬಂದಿದ್ದು, ಇದೇ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.