Tag: Salu Marada Timmakka

  • ಮತ್ತೆ ಸೊಂಟಕ್ಕೆ ಪೆಟ್ಟು- ವೃಕ್ಷ ಮಾತೆ ಆಸ್ಪತ್ರೆಗೆ ದಾಖಲು

    ಮತ್ತೆ ಸೊಂಟಕ್ಕೆ ಪೆಟ್ಟು- ವೃಕ್ಷ ಮಾತೆ ಆಸ್ಪತ್ರೆಗೆ ದಾಖಲು

    ಬೆಂಗಳೂರು: ವೃಕ್ಷಮಾತೆ ಸಾಲುಮರದ ತಿಮ್ಮಕ್ಕ (Saalumarada Thimmakka) ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಭಾನುವಾರ ಸಂಜೆ ಮನೆಯಲ್ಲಿ ಕಾಲು ಜಾರಿ ಬಿದ್ದದ್ದ ತಿಮ್ಮಕರನ್ನು ಕೂಡಲೇ ಜಯನಗರದ ಅಪೋಲೊ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಕಳೆದ ಬಾರಿ ಕಾಲು ಜಾರಿ ಬೆನ್ನು ಸೊಂಟಕ್ಕೆ ನೋವಾಗಿತ್ತು. ಭಾನುವಾರ ಕೂಡ ಮುಖ ತೊಳೆಯಲು ಬಾತ್ ರೂಂಗೆ ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದ ಕಾರಣ ಸೊಂಟಕ್ಕೆ ಏಟು ಬಿದ್ದಿದೆ. ಇದನ್ನೂ ಓದಿ: ಟೊಮೆಟೋ ಬೆಲೆಯಲ್ಲಿ ಕೊಂಚ ಇಳಿಕೆ- ನಿಟ್ಟುಸಿರು ಬಿಟ್ಟ ಗ್ರಾಹಕರು

    ಸದ್ಯ ವೃಕ್ಷಮಾತೆಗೆ ವೈದ್ಯರು ಐಸಿಯುವಿನಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಾಲುಮರದ ತಿಮ್ಮಕ್ಕರ ಆಸೆಯನ್ನು ಈಡೇರಿಸದ ರಾಜ್ಯ ಸರ್ಕಾರ

    ಸಾಲುಮರದ ತಿಮ್ಮಕ್ಕರ ಆಸೆಯನ್ನು ಈಡೇರಿಸದ ರಾಜ್ಯ ಸರ್ಕಾರ

    ಮಂಗಳೂರು: ಸ್ವಂತ ಮನೆ ಹೊಂದುವ ಆಸೆಯನ್ನು ಈಡೇರಿಸದ ರಾಜ್ಯ ಸರ್ಕಾರದ ಬಗ್ಗೆ ಸಾಲುಮರದ ತಿಮ್ಮಕ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಮಂಗಳೂರಿನಲ್ಲಿ ನಡೆದ ವನ ಸಂರಕ್ಷಣಾ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೂರಾರು ಮರಗಳನ್ನು ನೆಟ್ಟು ಬೆಳೆಸಿ ಸರ್ಕಾರಕ್ಕೆ ಬಿಟ್ಟು ಕೊಟ್ಟಿದ್ದೇನೆ. ಆದರೆ ನನ್ನ ಕಷ್ಟ ಮಾತ್ರ ಸರ್ಕಾರದ ಕಣ್ಣಿಗೆ ಬಿದ್ದೇ ಇಲ್ಲ. ಸಿದ್ದರಾಮಯ್ಯರಿಗೆ ಎಷ್ಟೋ ಬಾರಿ ತಿಳಿಸುವ ಪ್ರಯತ್ನ ಮಾಡಿದ್ರೂ ಸ್ಪಂದಿಸಿಲ್ಲ. ಬೆಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿದ್ದು ಕಷ್ಟ ಪಡುತ್ತಿದ್ದೇನೆ ಎಂದು ತಿಳಿಸಿದರು.

    ಬಡವರ ಬಗ್ಗೆ ಸರ್ಕಾರಕ್ಕಿರುವ ಕಾಳಜಿ ಇದುವೇನಾ ಅಂತಾ ಪ್ರಶ್ನೆ ಮಾಡಿದರು. ಕಷ್ಟಕ್ಕೆ ಸ್ಪಂದಿಸುವಂತೆ ಸಿಎಂ ಕುಮಾರಸ್ವಾಮಿಯನ್ನು ತಿಮ್ಮಕ್ಕ ಬೇಡಿಕೊಂಡಿದ್ದಾರೆ. ಬಳಿಕ ಎರಡು ಗಿಡಗಳನ್ನು ನೆಟ್ಟು ಪರಿಸರ ಕಾಳಜಿ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.