Tag: Salu Marada thimmakka

  • ಅಮೂಲ್ಯ ಅವಳಿ ಮಕ್ಕಳಿಗೆ ಆಶೀರ್ವದಿಸಿದ ಸಾಲು ಮರದ ತಿಮ್ಮಕ್ಕ

    ಅಮೂಲ್ಯ ಅವಳಿ ಮಕ್ಕಳಿಗೆ ಆಶೀರ್ವದಿಸಿದ ಸಾಲು ಮರದ ತಿಮ್ಮಕ್ಕ

    ಗೋಲ್ಡನ್ ಕ್ವೀನ್ ಅಮೂಲ್ಯ (Amulya) ಇತ್ತೀಚೆಗಷ್ಟೇ ತಮ್ಮ ಅವಳಿ ಮಕ್ಕಳ ನಾಮಕರಣ ಮಾಡಿದ್ದರು. ಇದೀಗ ನಟಿ ಅಮೂಲ್ಯ ಮನೆಗೆ ಸಾಲು ಮರದ ತಿಮ್ಮಕ್ಕ (Salu Marada Thimmakka) ಭೇಟಿ ನೀಡಿ, ಅಮೂಲ್ಯ ಮಕ್ಕಳಿಗೆ ಶುಭಹಾರೈಸಿದ್ದಾರೆ.

    ನಟಿ ಅಮೂಲ್ಯ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳ ಮೂಲಕ ಗಮನ ಸೆಳೆದಿದ್ದರು. ಫೇಮ್ ಇರೋವಾಗಲೇ ಜಗದೀಶ್ (Jagadeesh) ಜೊತೆ ಹಸೆಮಣೆ ಏರಿದ್ದರು. ನಟನೆಯಿಂದ ದೂರ ಸರಿದು, ಸಂಸಾರ, ಮಕ್ಕಳ ಆರೈಕೆ ಅಂತಾ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಅವಳಿ ಮಕ್ಕಳಿಗೆ ಅದ್ದೂರಿಯಾಗಿ ನಾಮಕರಣ ಮಾಡಿದ್ದರು. ಅಥರ್ವ್ ಮತ್ತು ಆಧವ್ ಎಂದು ಹೆಸರಿಟ್ಟಿದ್ದಾರೆ.

     

    View this post on Instagram

     

    A post shared by Jagdish R Chandra (@jagdishrchandra)

    ಇದೀಗ ನಟಿ ಅಮೂಲ್ಯ ಸ್ವಗೃಹಕ್ಕೆ ವೃಕ್ಷ ಮಾತೆ ಸಾಲು ಮರ ತಿಮ್ಮಕ್ಕ ಭೇಟಿ ನೀಡಿದ್ದಾರೆ. ಅಮೂಲ್ಯ ಮಕ್ಕಳಿಗೆ ಶುಭಹಾರೈಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ ವಿಜೇತೆ ತಿಮ್ಮಕ್ಕನವರು ಹಾರೈಸಿದ ಕ್ಷಣದ ತುಣುಕುಗಳನ್ನ ಅಮೂಲ್ಯ ಪತಿ ಜಗದೀಶ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಇಬ್ಬರು ಫೈನಲಿಸ್ಟ್ ಹೆಸರು ಘೋಷಿಸಿದ ಕಿಚ್ಚ ಸುದೀಪ್

    ಅವರ ಆಗಮನ ಖುಷಿ ಕೊಟ್ಟಿದೆ ಎಂದು ಕೂಡ ಜಗದೀಶ್ ಬರೆದುಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಮಹಿಳೆಯರ ಶಬರಿಮಲೆ ದೇಗುಲ ಪ್ರವೇಶಕ್ಕೆ ಸಾಲುಮರದ ತಿಮ್ಮಕ್ಕ ಖಂಡನೆ

    ಮಹಿಳೆಯರ ಶಬರಿಮಲೆ ದೇಗುಲ ಪ್ರವೇಶಕ್ಕೆ ಸಾಲುಮರದ ತಿಮ್ಮಕ್ಕ ಖಂಡನೆ

    ಹಾಸನ: ಶಬರಿಮಲೆಯಲ್ಲಿ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಮಾಡಿರುವುದು ಸರಿಯಿಲ್ಲ ಅಂತ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಹೇಳಿದ್ದಾರೆ.

    ಸೂತಕವಾಗುವ ಹೆಂಗಸರು ಶಬರಿಮಲೆ ದೇವಸ್ಥಾನಕ್ಕೆ ಹೋಗಬಾರದೆಂದು ಅನೇಕ ವರ್ಷಗಳಿಂದ ಬಂದತಂತಹ ಸಂಪ್ರದಾಯವಾಗಿದೆ. ನನ್ನಷ್ಟು ವಯಸ್ಸಾದ ಮೇಲೆ ಅಲ್ಲಿಗೆ ಹೋಗಿ ದೇವರ ದರ್ಶನ ಪಡೆಯಬಹುದು. ನಾನು ವಯಸ್ಸಾದ ಮೇಲೆ ಹೋಗಿದ್ದೇನೆ. ನನ್ನನ್ನು ದೊಡ್ಡ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದರು. ಈವಾಗ ಇಬ್ಬರು ಮಾನ-ಮರ್ಯಾದೆ ಇಲ್ಲದೇ ದೇವರ ದರ್ಶನ ಪಡೆಯಲು ಹೋಗಿದ್ದಾರೆ. ಆದ್ರೆ ಮುಟ್ಟಾಗುವ ಮಹಿಳೆಯರು ದೇವಸ್ಥಾನಕ್ಕೆ ಹೋಗಬಾರದು ಅಂತ ಅವರು ಒತ್ತಾಯಿಸಿದ್ರು.

    ಶಬರಿಮಲೆ ದೇವಸ್ಥಾನಕ್ಕೆ ಬಿಂದು ಹಾಗೂ ಕನಕದುರ್ಗ ಎಂಬಿಬ್ಬರು ಮಹಿಳೆಯರು ದೇವಾಲಯದೊಳಕ್ಕೆ ಪ್ರವೇಶ ಮಾಡಿದ್ದರು. ಬಿಂದು ಮತ್ತು ಕನಕ ಮಧ್ಯರಾತ್ರಿ ಬೆಟ್ಟವನ್ನು ಹತ್ತಿ ಇಂದು ಬೆಳಗ್ಗೆ 3.45ಕ್ಕೆ ದೇವಾಲಯವನ್ನು ಪ್ರವೇಶಿಸಿದ್ದರು. ಈ ಸಮಯದಲ್ಲಿ ಭಕ್ತರ ಸಂಖ್ಯೆ ಕಡಿಮೆ ಇತ್ತು ಮತ್ತು ಯಾವುದೇ ಮಾಧ್ಯಮಗಳು ಸಹ ಇರಲಿಲ್ಲ.

    ಮಹಿಳೆಯರ ಪ್ರವೇಶವನ್ನು ಖಚಿತಪಡಿಸಿದ ಕೇರಳ ಸಿಎಂ ಪಿಣಾರಯ್ ವಿಜಯನ್, ಇಬ್ಬರು ಮಹಿಳೆಯರು ಪೊಲೀಸ್ ಭದ್ರತೆಯಲ್ಲಿ ಶಬರಿಮಲೆ ಪ್ರವೇಶಿಸಿದ್ದಾರೆ. ಅವರಿಗೆ ರಕ್ಷಣೆ ನೀಡಿದ್ದಕ್ಕೆ ನಮಗೆ ಹೆಮ್ಮೆಯಿದೆ ಎಂದು ಅವರು ತಿಳಿಸಿದ್ದರು. 44 ವರ್ಷ ಬಿಂದು ಕಾಲೇಜು ಉಪನ್ಯಾಸಕಿ ಮತ್ತು ಸಿಪಿಐ(ಎಂ) ಕಾರ್ಯಕರ್ತೆಯಾಗಿದ್ದು, 42 ವರ್ಷದ ಕನಕದುರ್ಗ ನಾಗರಿಕ ಸರಬರಾಜು ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.

    ಅಯ್ಯಪ್ಪ ದೇವಾಲಯ ಪ್ರವೇಶಕ್ಕೆ 10 ವರ್ಷದಿಂದ ಮೇಲ್ಪಟ್ಟು 50 ವರ್ಷದ ಒಳಗಿನ ಮಹಿಳೆಯರಿಗೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಈ ನಿರ್ಬಂಧವನ್ನು ತೆರವುಗೊಳಿಸಿ ಎಲ್ಲ ವಯಸ್ಸಿನ ಮಹಿಳೆಯರು ದೇವಾಲಯವನ್ನು ಪ್ರವೇಶಿಸಬಹುದು ಎನ್ನುವ ಐತಿಹಾಸಿಕಾ ತೀರ್ಪನ್ನು ಪ್ರಕಟಿಸಿತ್ತು. ಆದ್ರೆ ಇದೀಗ ಇಬ್ಬರು ಮಹಿಳೆಯರು ದೇವಾಲಯವನ್ನು ಪ್ರವೇಶಿಸಿದ್ದು, ಮಕರ ಸಂಕ್ರಮಣಕ್ಕೆ 14 ದಿನಗಳು ಇರುವಾಗಲೇ ಇದೀಗ ಮತ್ತೆ ಭಾರೀ ಚರ್ಚೆಗೀಡಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಾಲು ಮರದ ತಿಮ್ಮಕ್ಕ ಜೀವನ ನಿರ್ವಹಣೆಗೆ ಸಿಎಂರಿಂದ 10 ಲಕ್ಷ ರೂ. ಸಹಾಯ

    ಸಾಲು ಮರದ ತಿಮ್ಮಕ್ಕ ಜೀವನ ನಿರ್ವಹಣೆಗೆ ಸಿಎಂರಿಂದ 10 ಲಕ್ಷ ರೂ. ಸಹಾಯ

    -1 ಕೋಟಿ ರೂ.ಗೆ ಡಿಮ್ಯಾಂಡ್ ಮಾಡಿದ ಸಾಕು ಪುತ್ರ

    ಬೆಂಗಳೂರು: ಗಿಡ ಮರಗಳಿಗೆ ನೀರುಣಿಸಿ ಬೆಳಸಿದ ವೃಕ್ಷ ಮಾತೆಗೆ ಜೀವನ ನಿರ್ವಹಣೆಗೆ ಅಭದ್ರತೆ ಕಾಡದಿರಲಿ ಎಂದು ಸಿಎಂ ಸಿದ್ದರಾಮಯ್ಯ 10 ಲಕ್ಷ ರೂ. ಹಣವನ್ನ ತಮ್ಮ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೀಡಲು ಮುಂದಾಗಿದ್ದಾರೆ. ಆದರೆ ಸಾಕು ಮಗ ಮಾತ್ರ ಕೊಟ್ಟರೆ ಒಂದು ಕೋಟಿ. ರೂ. ನೀಡಿ ಎಂದು ಬೇಡಿಕೆ ಇಟ್ಟಿದ್ದಾರೆ.

    ಪಾಂಡವಪುರದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕರಿಗೆ ಜೀವನ ಭದ್ರತೆ ಒದಗಿಸಿಕೊಡುವಂತೆ ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದಿದ್ದರು. ಈ ಸಂಬಂಧ ಸಿಎಂ ಸೂಚನೆ ಮೇರೆಗೆ ಸಿಎಂ ಪರಿಹಾರ ನಿಧಿಯ ಅಧಿಕಾರಿಗಳು 10 ಲಕ್ಷ ರೂ.ಯ ಚೆಕ್ ರೆಡಿ ಮಾಡಿಕೊಂಡು ಸಾಲು ಮರದ ತಿಮ್ಮಕ್ಕರಿಗೆ ಪತ್ರ ಬರೆದಿದ್ದಾರೆ. ಚೆಕ್ ಬಿಡುಗಡೆಗೆ ಅಗತ್ಯ ದಾಖಲೆಗಳನ್ನು ನೀಡಿ ಚೆಕ್ ಪಡೆಯಿರಿ ಎಂದು ಪತ್ರವನ್ನು ಬರೆದಿದ್ದಾರೆ.

    ತಿಮ್ಮಕ್ಕರ ಸಾಕು ಮಗ ಉಮೇಶ್ ಮಾತ್ರ 10 ಲಕ್ಷದಲ್ಲಿ ಜೀವನ ಭದ್ರತೆ ಸಿಗಲ್ಲ. ಕೊಟ್ಟರೆ ಒಂದು ಕೋಟಿ ಹಣ ನೀಡಿ ಎಂದು ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಸಿಎಂ ಕಚೇರಿಯ ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ 2 ತಿಂಗಳಿನಿಂದ ಪತ್ರ ಬರೆದು ಸಿಎಂ ಕಚೇರಿ ಅಧಿಕಾರಿಗಳು ಸುಸ್ತಾಗಿದ್ದಾರೆ. ಆದರೆ ಸಾಲುಮರದ ತಿಮ್ಮಕ್ಕರ ದತ್ತು ಪುತ್ರ ಉಮೇಶ್ ಬೇರೆಯದೆ ಕತೆ ಹೇಳುತ್ತಿದ್ದಾರೆ.

    ಸರ್ಕಾರ ಈ ಹಿಂದೆ ಒಂದು ಕೋಟಿ ಹಣ ನೀಡುತ್ತೇವೆ. ಅಲ್ಲದೆ 10 ಎಕರೆ ಭೂಮಿಯನ್ನು ನೀಡುತ್ತೇವೆ ಎಂದಿತ್ತು. ಆದರೆ ಇದೂವರೆಗೆ ಅದು ಈಡೇರಿಲ್ಲ. ಆದ್ದರಿಂದ 10 ಲಕ್ಷ ಹಣವನ್ನು ಸ್ವೀಕರಿಸಿಲ್ಲ ಎಂದು ಪರೋಕ್ಷವಾಗಿ ಹೇಳುತ್ತಿದ್ದಾರೆ. ಇನ್ನೊಂದೆಡೆ ಎಲ್ಲವು ತಿಮ್ಮಕ್ಕನ ತೀರ್ಮಾನಕ್ಕೆ ಬಿಡುತ್ತೇನೆ ಎನ್ನುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಶಾಸಕ ಪುಟ್ಟಣ್ಣಯ್ಯ ಅವರ ಮನವಿಗೆ ಪುರಸ್ಕರಿಸಿ ತಮ್ಮ ಪರಿಹಾರ ನಿಧಿಯಿಂದ 10 ಲಕ್ಷ ದ ದೊಡ್ಡ ಮಟ್ಟದ ಹಣವನ್ನೆ ನೀಡಲು ಮುಂದಾಗಿದ್ದಾರೆ.

    ತಿಮ್ಮಕ್ಕ ಸಾಕು ಮಗನ ಸ್ಪಷ್ಟನೆ: ಸರ್ಕಾರವೇ ಈ ಹಿಂದೆ ಜೀವನ ನಿರ್ವಹಣೆಗೆ 1 ಕೋಟಿ ರೂ. 10 ಎಕರೆ ಜಮೀನು ನೀಡುವುದಾಗಿ ಘೋಷಿಸಿತ್ತು. ಆದರೆ ಅದನ್ನು ಈಡೇರಿಸಲಿಲ್ಲ. ಇದನ್ನು ಸರ್ಕಾರಕ್ಕೆ ಜ್ಞಾಪಿಸುವ ಶಿಫಾರಸು ಪತ್ರವನ್ನು ಶಾಸಕ ಕೆಎಸ್ ಪುಟ್ಟಣ್ಣಯ್ಯ ಸಿಎಂಗೆ ನೀಡಿದ್ದರು. ಅದರಂತೆ ಸಿಎಂ ತಿಮ್ಮಕ್ಕ ಅವರಿಗೆ ವೈದ್ಯಕೀಯ ಪರಿಹಾರವಾಗಿ 10 ಲಕ್ಷ ರೂ. ನೀಡಲು ತೀರ್ಮಾನಿಸಿರುವುದಾಗಿ ನಮಗೆ ಪತ್ರ ಬಂದಿತ್ತು. ಆದರೆ ಸರ್ಕಾರಿಂದ ವೈದ್ಯಕೀಯ ಪರಿಹಾರ ಪಡೆಯವುದು ಬೇಡ ಎನ್ನುವ ತಿಮ್ಮಕ್ಕ ಅವರ ತೀರ್ಮಾನದಂತೆ ಆ ಪರಿಹಾರವನ್ನು ಪಡೆದಿಲ್ಲ ಹೊರತಾಗಿ ನಾನು ಆಗಲಿ ತಿಮ್ಮಕ್ಕ ಆಗಲಿ ಸರ್ಕಾರ 1 ಕೋಟಿ ಬೇಡಿಕೆ ಇಟ್ಟಿದ್ದೇನೆ ಎನ್ನುವುದು ಶುದ್ಧ ಸುಳ್ಳು ಎಂದು ಉಮೇಶ್ ಸ್ಪಷ್ಟಪಡಿಸಿದ್ದಾರೆ.