Tag: salt

  • ಊಟದಲ್ಲಿ ಉಪ್ಪು ಹೆಚ್ಚಾಯಿತೆಂದು ಎದೆಗೆ ಶೂಟ್ ಮಾಡ್ಕೊಂಡ ಯುವಕ!

    ಊಟದಲ್ಲಿ ಉಪ್ಪು ಹೆಚ್ಚಾಯಿತೆಂದು ಎದೆಗೆ ಶೂಟ್ ಮಾಡ್ಕೊಂಡ ಯುವಕ!

    ಲಕ್ನೋ: ಆಹಾರದಲ್ಲಿ ಉಪ್ಪಿ (Salt) ನ ಅಂಶ ಹೆಚ್ಚಾಯಿತೆಂದು ಸಿಟ್ಟಿಗೆದ್ದ ಯುವಕನೊಬ್ಬ ತನ್ನನ್ನು ನಾನು ಶೂಟ್ ಮಾಡಿಕೊಂಡ ವಿಲಕ್ಷಣ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

    ಸಾಂಬಾರ್ ನಲ್ಲಿ ಉಪ್ಪು ಹೆಚ್ಚಾಯಿತೆಂದು 22 ವರ್ಷದ ಪುರನ್ ಶಂಕರ್ ದುಬೇ ಶನಿವಾರ ರಾತ್ರಿ ತನ್ನ ಮನೆಯವರೊಂದಿಗೆ ಗಲಾಟೆ ಮಾಡಿದ್ದಾನೆ. ಗಲಾಟೆ ತಾರಕಕ್ಕೇರಿ ಆತ ಗನ್ ನಿಂದ ತನಗೆ ತಾನೇ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾನೆ.

    ಪುರನ್ ಪೈಲ್ಸ್ (Piles) ನಿಂದ ಬಳಲುತ್ತಿದ್ದನು. ಹೀಗಾಗಿ ಆತ ಅತಿಯಾಗಿ ಉಪ್ಪು ಹಾಗೂ ಖಾರವನ್ನು ಸೇವಿಸುತ್ತಿರಲಿಲ್ಲ. ಶನಿವಾರ ರಾತ್ರಿ ಕಂಠಪೂರ್ತಿ ಕುಡಿದು ಬಂದು ಊಟ ಮಾಡಲು ಕುಳಿತಿದ್ದಾನೆ. ಈ ವೇಳೆ ಊಟ (Food) ದಲ್ಲಿ ಉಪ್ಪಿನ ಅಂಶ ಹೆಚ್ಚಿರುವುದು ಗೊತ್ತಾಗಿದೆ. ಕೂಡಲೇ ಊಟ ಚೆಲ್ಲಿ ಮನೆಯವರೊಂದಿಗೆ ಜಗಳವಾಡಿದ್ದಾನೆ. ಇತ್ತ ಮನೆಯವರು ಸುಳ್ಳು ಹೇಳುತ್ತಿದ್ದೀಯಾ ಎಂದು ಪುರನ್ ಜೊತೆ ಜಗಳಕ್ಕಿಳಿದಿದ್ದರಿಂದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸ್ಮಾರ್ಟ್ ಕ್ಲಾಸ್‍ನಲ್ಲಿ ವಿದ್ಯಾರ್ಥಿನಿಯರಿಗೆ ಅಶ್ಲೀಲ ವೀಡಿಯೋ ಶೋ- ಶಿಕ್ಷಕ ಅರೆಸ್ಟ್

    ಇತ್ತ ಸ್ಥಳೀಯ ದೇಗುಲವೊಂದರಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿರುವ ಪುರನ್ ತಂದೆ ಉಮಾಶಂಕರ್ ಪ್ರತಿಕ್ರಿಯಿಸಿ, ಪುರನ್ ತನ್ನ ಕೋಣೆಯೊಳಗೆ ತೆರಳಿ ಶೂಟ್ ಮಾಡಿಕೊಂಡಿದ್ದಾನೆ. ಶೂಟೌಟ್ ಮಾಡಿಕೊಂಡ ಸದ್ದು ಕೇಳಿ ಕೂಡಲೇ ನಾವೆಲ್ಲ ಆತನ ರೂಮಿಗೆ ಓಡಿದೆವು. ಈ ವೇಳೆ ಆತನ ರಕ್ತದ ಮಡುವಿನಲ್ಲಿ ಬಿದ್ದಿದ್ದನು. ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆದರೆ ಆತ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು ಎಂದರು.

    ಪುರನ್ ತನ್ನ ಎದೆಗೆ ಶೂಟೌಟ್ ಮಾಡಿಕೊಂಡಿದ್ದಾನೆ. ಆದರೆ ಪುರನ್ ಗೆ ಈ ಗನ್ ಎಲ್ಲಿ ಸಿಕ್ಕಿತ್ತು ಎಂಬುದನ್ನು ತಿಳಿಸುವಲ್ಲಿ ಉಮಾಶಂಕರ್ ವಿಫಲರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಈ ಬಗ್ಗೆ ಪುರನ್ ಕುಟುಂಬಸ್ಥರು ಯಾರ ಮೇಲೆನೂ ಆರೋಪ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಸದ್ಯ ಪುರನ್ ಗೆ ಪಿಸ್ತೂಲ್ ಹೇಗೆ, ಎಲಿಂದ ಸಿಕ್ಕಿತ್ತು ಎಂಬುದರ ಬಗ್ಗೆ ತನಖೆ ನಡೆಸುತ್ತಿದ್ದೇವೆ ಎಂದು ಎಸ್‍ಹೆಚ್‍ಓ ರಾಜ್ ಕುಮಾರ್ ತಿಳಿಸಿದ್ದಾರೆ.

  • ಪತ್ನಿಯನ್ನು ಕೊಂದು ದೇಹದ ಮೇಲೆ ಉಪ್ಪು ಹಾಕಿ ಯಾರಿಗೂ ಅನುಮಾನ ಬರದಂತೆ ತರಕಾರಿ ಬೆಳೆದ!

    ಪತ್ನಿಯನ್ನು ಕೊಂದು ದೇಹದ ಮೇಲೆ ಉಪ್ಪು ಹಾಕಿ ಯಾರಿಗೂ ಅನುಮಾನ ಬರದಂತೆ ತರಕಾರಿ ಬೆಳೆದ!

    ಲಕ್ನೋ: ವ್ಯಕ್ತಿಯೊಬ್ಬ ಹೊಲವೊಂದರಲ್ಲಿ ಪತ್ನಿಯನ್ನು (Wife) ಕೊಂದು ಆಕೆಯ ಶವವನ್ನು ಹೂತಿಟ್ಟ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ಪ್ರದೇಶದಲ್ಲಿ ನಡೆದಿದೆ.

    ದಿನೇಶ್ ಬಂಧಿತ ಆರೋಪಿ. ದಿನೇಶ್ ತರಕಾರಿ ಬೆಳೆಗಾರನಾಗಿದ್ದ. ದಿನೇಶ್ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿದ್ದ. ಈ ಹಿನ್ನೆಲೆಯಲ್ಲಿ ಕೋಪಗೊಂಡ ದಿನೇಶ್ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಒಂದು ದಿನ ಮನೆಯಲ್ಲಿಟ್ಟು ಹೊಲದಲ್ಲಿ ಹೂತಿದ್ದಾನೆ.

    ಅಷ್ಟೇ ಅಲ್ಲದೇ ಶವ ಬೇಗನೇ ಕೊಳೆಯಲಿ ಎಂದು 30 ಕೆ.ಜಿ ಉಪ್ಪನ್ನು (Salt) ದೇಹದ ಮೇಲೆ ಹಾಕಿದ್ದ. ಅದಾದ ಬಳಿಕ ಕೊಲೆಯನ್ನು ಮುಚ್ಚಿ ಹಾಕಲು, ಶವವನ್ನು ಹೂತು ಹಾಕಿರುವುದು ಯಾರಿಗೂ ಅನುಮಾನ ಬರಬಾರದೆಂದು ಶವವನ್ನು ಹೂತು ಹಾಕಿದ್ದ ಸ್ಥಳದಲ್ಲಿ ತರಕಾರಿಗಳನ್ನು (Vegetable) ಬೆಳೆದಿದ್ದ.

    ಅದಾದ ಕೆಲ ದಿನಗಳ ನಂತರ ದಿನೇಶ್ ತನ್ನ ಪತ್ನಿ ಕಾಣೆ ಆಗಿದ್ದಾಳೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಈ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದಾಗ ದಿನೇಶ್ ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಕೊಲೆ ಮಾಡಿರುವುದಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದೇವರ ದರ್ಶನ ಪಡೆದುಕೊಂಡ ಮರಳುವಾಗ ಕಂಟೇನರ್, ಕ್ರೂಸರ್ ವಾಹನ ಅಪಘಾತ- ಮಹಿಳೆ ಸಾವು

    ಘಟನೆಗೆ ಸಂಬಂಧಿಸಿ ಪೊಲೀಸರು ದಿನೇಶ್‍ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಹಿಟ್ & ರನ್ ಕೇಸ್ – ಕಾರು ಡಿಕ್ಕಿ, ಮೇಲಿಂದ ಹಾರಿದ ಯುವತಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರೀಲ್ಸ್ ಮಾಡಲು ಹೋಗಿ ಯುವತಿ ಕೆರೆ ಪಾಲು – ಉಪ್ಪು ಸುರಿದು ಬದುಕಿಸಲು ಯತ್ನ

    ರೀಲ್ಸ್ ಮಾಡಲು ಹೋಗಿ ಯುವತಿ ಕೆರೆ ಪಾಲು – ಉಪ್ಪು ಸುರಿದು ಬದುಕಿಸಲು ಯತ್ನ

    ಚಿಕ್ಕಬಳ್ಳಾಪುರ: ಕೆರೆಯ ಬಳಿ ರೀಲ್ಸ್(Reels) ಮಾಡಲು ಹೋದ ಯುವತಿ(Young Women) ಕೆರೆಗೆ ಉರುಳಿ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಗಂಗಾನಹಳ್ಳಿ ಗ್ರಾಮದ ಬಳಿ ನಡೆದಿದೆ.

    ಮೂಲತಃ ಶಿಡ್ಲಘಟ್ಟ ತಾಲೂಕಿನ ಗಾಜಿಲುವಾರುಪಲ್ಲಿ ಗ್ರಾಮದ ಎಂಎ ಪದವೀದರೆ ಅಮೃತ(22)  ಮೃತ ಯುವತಿ. ಅಂದಹಾಗೆ ಜಂಬಿಗೆ ಮರದಹಳ್ಳಿಯ ನೆಂಟರ ಮನೆಯ ಗೃಹಪ್ರವೇಶದ ಕಾರ್ಯಕ್ರಮ ನಿಮಿತ್ತ ಆಗಮಿಸಿದ್ದ ಯುವತಿ ಅಮೃತ(Amrutha) ಗಂಗಾನಹಳ್ಳಿ ಕೆರೆ(Lake) ಕೋಡಿ ಹರಿಯುತ್ತಿರುವ ವಿಚಾರ ತಿಳಿದು ಮತ್ತೋರ್ವ ಯುವತಿಯ ಜೊತೆ ಕೆರೆ ಬಳಿ ತೆರಳಿದ್ದಳು. ಈ ವೇಳೆ ಜೊತೆಯಲ್ಲಿದ್ದ ಯುವತಿಗೆ ವೀಡಿಯೋ ಮಾಡಲು ಹೇಳಿ ಮೊಬೈಲ್(Mobile) ನೀಡಿ ಕೆರೆಯ ಅಂಚಿನ ದಿಂಡಿನ ಮೇಲೆ ತೆರಳಿದ್ದಳು. ಆದರೆ ಈ ವೇಳೆ ಆಕಸ್ಮಿಕ ಕಾಲು ಜಾರಿ ಕೆರೆಗೆ ಅಮೃತಾ ಉರುಳಿಬಿದ್ದು ಸಾವನ್ನಪ್ಪಿದ್ದಾಳೆ. ಗುಡಿಬಂಡೆ ಪೊಲೀಸರು (Police) ಘಟನಾ ಸ್ಥಳಕ್ಕೆ ತೆರಳಿ ಮೃತದೇಹವನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ. ಇದನ್ನೂ ಓದಿ: ಕಾಮನ್‍ವೆಲ್ತ್ ಕರಾಟೆ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದ ಬೆಂಗ್ಳೂರಿನ ಜಾಗೃತ್, ಸಂಭ್ರಮ

    ಇನ್ನೂ ಕೆರೆಯ ನೀರಲ್ಲಿ ಅಮೃತ ಉರುಳಿದ ಘಟನೆಯನ್ನು ಅಕ್ಷತಾ ತೋಟದಲ್ಲಿದ್ದ ಗ್ರಾಮಸ್ಥರಿಗೆ ತಿಳಿಸಿದ್ದು ಅರ್ಧ ಗಂಟೆಯಲ್ಲೇ ಕೆರೆಯಿಂದ ಮೃತ ಅಕ್ಷತಾಳನ್ನು ಸ್ಥಳೀಯರೇ ಮೇಲೆ ಎತ್ತಿದ್ದಾರೆ. ಇನ್ನೂ ಇತ್ತೀಚೆಗೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರ ಮೃತದೇಹದ ಮೇಲೆ ಅರ್ಧ ಗಂಟೆಯೊಳಗೆ ಉಪ್ಪು(Salt) ಹಾಕಿ ಮಲಗಿಸಿದರೆ ಬದುಕುತ್ತಾರೆ ಎಂಬ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸುಳ್ಳು ಸಂದೇಶದಂತೆ ಯುವತಿಯನ್ನು ಬದುಕಿಸಬೇಕು ಅಂತ ಆಕೆಯ ಮೇಲೆ ಉಪ್ಪು ಸುರಿದು ಬದುಕಿಸಲು ಗ್ರಾಮಸ್ಥರು ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಹುತಾತ್ಮ ಅರಣ್ಯ ರಕ್ಷಕರ ಕುಟುಂಬಕ್ಕೆ ನೀಡ್ತಿದ್ದ ಪರಿಹಾರದ ಮೊತ್ತ 50 ಲಕ್ಷ ರೂ. ಗೆ ಏರಿಕೆ: ಸಿಎಂ ಘೋಷಣೆ

    Live Tv
    [brid partner=56869869 player=32851 video=960834 autoplay=true]

  • ಕರಿಯಲ್ಲಿ ಖಾರ ಹೆಚ್ಚಾಗಿದ್ದಕ್ಕೆ ಪತ್ನಿಯ ತಲೆ ಬೋಳಿಸಿದ

    ಕರಿಯಲ್ಲಿ ಖಾರ ಹೆಚ್ಚಾಗಿದ್ದಕ್ಕೆ ಪತ್ನಿಯ ತಲೆ ಬೋಳಿಸಿದ

    ಗಾಂಧಿನಗರ: ಕರಿಯಲ್ಲಿ ಉಪ್ಪು, ಖಾರ ಹೆಚ್ಚಾಗಿದೆ ಎಂದು ಗುಜರಾತ್‍ನಲ್ಲಿ ವ್ಯಕ್ತಿಯೊಬ್ಬ ಪತ್ನಿಯ ತಲೆ ಬೋಳಿಸಿದ ವಿಚಿತ್ರ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ಉಪ್ಪು ಹೆಚ್ಚಾಗಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ಗುಜರಾತ್‍ನಲ್ಲಿ ವ್ಯಕ್ತಿಯೊಬ್ಬ ತನ್ನ 28 ವರ್ಷದ ಪತ್ನಿಯ ತಲೆ ಬೋಳಿಸಿ, ಹಲ್ಲೆ ಮಾಡಿದ್ದಾನೆ. ಈ ಹಿನ್ನೆಲೆ ಕೋಪಗೊಂಡ ಪತ್ನಿ, ಪತಿ ವಿರುದ್ಧ ವತ್ವಾ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ. ಇದನ್ನೂ ಓದಿ: ತನ್ನ ಪುಟ್ಟ ಮಗುವಿನೊಂದಿಗೆ ಪತ್ನಿಗಾಗಿ ಅಲೆದಾಡುತ್ತಿರುವ ಪತಿ 

    ನಡೆದಿದ್ದೇನು?
    ಪತ್ನಿ ರಿಜ್ವಾನಾ ಪತಿ ವಿರುದ್ಧ ದೂರು ಕೊಟ್ಟಿದ್ದು, 8 ವರ್ಷಗಳ ಹಿಂದೆ ನಾನು ಮತ್ತು ನನ್ನ ಪತಿ ಇಮ್ರಾನ್ ಮದುವೆಯಾಗಿದ್ದೇವೆ. ಅವನು ಕೂಲಿ ಕೆಲಸ ಮಾಡುತ್ತಿದ್ದಾನೆ. ಮೇ 8 ರಂದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಇಮ್ರಾನ್ ಊಟಕ್ಕೆ ಮನೆಗೆ ಬಂದಿದ್ದ. ನಾನು ಅವನಿಗೆ ಚಪಾತಿ ಮತ್ತು ಕರಿ ಕೊಟ್ಟೆ. ಅವನು ಊಟವನ್ನು ಇಷ್ಟಪಡಲಿಲ್ಲ. ಆಹಾರಕ್ಕೆ ಹೆಚ್ಚು ಉಪ್ಪು, ಖಾರ ಸೇರಿಸಿದ್ದಕ್ಕಾಗಿ ನನ್ನನ್ನು ನಿಂದಿಸಲು ಪ್ರಾರಂಭಿಸಿದನು. ಬೇರೆ ಏನಾದ್ರೂ ಮಾಡ್ತೀನಿ ಅಂತ ಹೇಳಿದರೂ ಆತ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಲೇ ಇದ್ದ.

    ರೇಜರ್ ತೆಗೆದುಕೊಂಡ
    ಈ ಕ್ಷುಲ್ಲಕ ಕಾರಣಕ್ಕೆ ಇಮ್ರಾನ್ ಒಂದು ಕೋಲು ತೆಗೆದುಕೊಂಡು ನನಗೆ ಹೊಡೆಯಲು ಪ್ರಾರಂಭಿಸಿದನು. ಆದರೆ ನಾನು ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿದೆ. ಅವನು ಸುತ್ತಲೂ ನೋಡಿ ರೇಜರ್ ತೆಗೆದುಕೊಂಡ. ಇದು ಏಕೆ ಎಂದು ನಾನು ಅರ್ಥಮಾಡಿಕೊಳ್ಳುವ ಮೊದಲೇ ಅವನು ನನ್ನನ್ನು ಬಲವಂತವಾಗಿ ಹಿಡಿದುಕೊಂಡು ನನ್ನ ಕೂದಲನ್ನು ಬೋಳಿಸಲು ಪ್ರಾರಂಭಿಸಿದನು. ಇದನ್ನೂ ಓದಿ:  ಕ್ಷುಲ್ಲಕ ಕಾರಣಕ್ಕೆ ಜಗಳ ಅರಣ್ಯ ರಕ್ಷಕನ ಕೈ ತುಂಡು

    ಭಯಗೊಂಡಿದ್ದೆ
    ನನ್ನ ಸಂಪೂರ್ಣ ತಲೆ ಬೋಳಿಸಿದ ನಂತರವೇ ಇಮ್ರಾನ್ ನನ್ನನ್ನು ಬಿಟ್ಟ ಎಂದು ನೊಂದುಕೊಂಡು ಹೇಳಿದಳು. ನಾನು ಕಿರುಚಾಡಿದ್ದಾರಿಂದ ನೆರೆಹೊರೆಯವರು ಓಡಿ ಬಂದರು. ಅವರೇ ನನ್ನನ್ನು ಬಿಡಿಸಿ ಪೊಲೀಸರ ಬಳಿಗೆ ಹೋಗುವಂತೆ ಸೂಚಿಸಿದರು. ಆದರೆ ನಾನು ಆ ಸಮಯದಲ್ಲಿ ತುಂಬಾ ಭಯಗೊಂಡಿದ್ದೆ, ಆಘಾತಕ್ಕೊಳಗಾಗಿದ್ದೆ. ಪರಿಣಾಮ ಘಟನೆ ನಡೆದ ಮೂರು ದಿನಗಳ ಬಳಿಕ ದೂರು ಕೊಡುತ್ತಿದ್ದೇನೆ ಎಂದು ದೂರಿನಲ್ಲಿ ವಿವರಿಸಿದ್ದಾಳೆ.

    ಪ್ರಸ್ತುತ ಪೊಲೀಸರು ಇಮ್ರಾನ್ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕುತ್ತಿದ್ದಾರೆ.

  • ಕಿಚಡಿಯಲ್ಲಿ ಉಪ್ಪು ಜಾಸ್ತಿಯಾಗಿದ್ದಕ್ಕೆ ಪತ್ನಿ ಕತ್ತು ಹಿಸುಕಿ ಕೊಂದ

    ಕಿಚಡಿಯಲ್ಲಿ ಉಪ್ಪು ಜಾಸ್ತಿಯಾಗಿದ್ದಕ್ಕೆ ಪತ್ನಿ ಕತ್ತು ಹಿಸುಕಿ ಕೊಂದ

    ಮುಂಬೈ: ಬೆಳಗ್ಗೆ ನೀಡಿದ್ದ ಟಿಫನ್‍ನಲ್ಲಿ ಉಪ್ಪು, ಖಾರ ಅಧಿಕವಾಗಿದೆ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ 40 ವರ್ಷದ ಪತ್ನಿಯ ಕತ್ತು ಹಿಸುಕಿ ಕೊಂದಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.

    ಶುಕ್ರವಾರ ಬೆಳಗ್ಗೆ ಭಾಯಂದರ್ ಪೂರ್ವದ ಫಟಕ್ ರಸ್ತೆ ಪ್ರದೇಶದಲ್ಲಿ ಈ ಘಟನೆ ಜರುಗಿದ್ದು, ಮೃತ ದುರ್ದೈವಿಯನ್ನು ನಿರ್ಮಲಾ ಎಂದು ಗುರುತಿಸಲಾಗಿದೆ. 46 ವರ್ಷದ ಆರೋಪಿ ನಿಲೇಶ್ ಘಾಘ್ ಪತ್ನಿ ಕಿಚಡಿ ಮಾಡಿ ಬೆಳಗಿನ ಉಪಹಾರವಾಗಿ ನೀಡಿದ್ದರು. ಕಿಚಡಿಯಲ್ಲಿ ಹೆಚ್ಚು ಉಪ್ಪು ಇದ್ದಿದ್ದರಿಂದ ಕೋಪಗೊಂಡ ನಿಲೇಶ್ ಘಾಘ್ ಉದ್ದನೆಯ ಬಟ್ಟೆಯಿಂದ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಘಟನೆ ಸಂಬಂಧ ಮಾಹಿತಿ ದೊರೆತ ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಿಳೆಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ಪೊಲೀಸ್ ಕಮಿಷನರೇಟ್‍ನ ಅಧಿಕಾರಿ ಮೀರಾ ಭಯಂದರ್-ವಸಾಯಿ ವಿರಾರ್ ತಿಳಿಸಿದ್ದಾರೆ. ಇದನ್ನೂ ಓದಿ: 4ರ ಬಾಲಕಿ ಮೇಲೆ 9 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ

    Kichadi

    ಘಟನೆಗೆ ಬೇರೆ ಏನಾದರೂ ಕಾರಣವಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸದ್ಯ ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಭಯಂದರ್‌ನ ನವಘರ್ ಪೊಲೀಸ್ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಕ್ಕಾ ಮಸೀದಿ ಮೇಲೆ ಕೇಸರಿ ಧ್ವಜ ಹಾರಿಸಿ ಪೋಸ್ಟ್ – ಹುಬ್ಬಳ್ಳಿಯಲ್ಲಿ ಮುಸ್ಲಿಂ ಪುಂಡರಿಂದ ದಾಂಧಲೆ

    POLICE JEEP

    ಗುರುವಾರ ಕೂಡ ಇದೇ ರೀತಿ ಮಹಿಳೆಯೊಬ್ಬಳು ಚಹಾದ ಜೊತೆಗೆ ಟಿಫನ್ ನೀಡಲಿಲ್ಲ ಎಂಬ ಕಾರಣಕ್ಕೆ ಆಕೆಯ ಮಾವ ಮಹಿಳೆ ಮೇಲೆ ಪಿಸ್ತೂಲ್‍ನಿಂದ ಗುಂಡು ಹಾರಿಸಿ ಹತ್ಯೆಗೈದಿದ್ದನು. ರಾಬೋಡಿ ಪ್ರದೇಶದ ನಿವಾಸಿಯಾಗಿದ್ದ 42 ವರ್ಷದ ಮಹಿಳೆಯ ಹೊಟ್ಟೆಗೆ ಗುಂಡು ತಗುಲಿ ಶುಕ್ರವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು.

  • Breaking- ಉಪೇಂದ್ರ ಹೊಸ ಚಿತ್ರದ ಪೋಸ್ಟರ್ : ನೀವು ಏನ್ ಬೇಕಾದ್ರೂ ಅಂದ್ಕೊಳ್ಳಿ ಎಂದ ಉಪ್ಪಿದಾದ

    Breaking- ಉಪೇಂದ್ರ ಹೊಸ ಚಿತ್ರದ ಪೋಸ್ಟರ್ : ನೀವು ಏನ್ ಬೇಕಾದ್ರೂ ಅಂದ್ಕೊಳ್ಳಿ ಎಂದ ಉಪ್ಪಿದಾದ

    ರಡು ದಿನಗಳ ಹಿಂದೆ 11.03 : 12.46 ಇದನ್ನು ಸೇವ್ ಮಾಡ್ಕೊಳ್ಳಿ ಎಂದು ತಲೆಗೆ ಹುಳು ಬಿಟ್ಟಿದ್ದ ಉಪೇಂದ್ರ ಅಭಿಮಾನಿಗಳಿಗೆ ಹೊಸ ಸುದ್ದಿಯನ್ನೇ ಕೊಟ್ಟಿದ್ದಾರೆ. ಹೊಸ ಸಿನಿಮಾದ ಮತ್ತೊಂದು ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಕುದುರೆ ಮೇಲೆ ಸವಾರಿ ಮಾಡುವ ಹೋರಾಟಗಾರನ ಗೆಟಪ್ ನಲ್ಲಿಉಪ್ಪಿ ಕಾಣಿಸಿಕೊಂಡಿದ್ದಾರೆ. ಸಿನಿಮಾದ ಟೈಟಲ್ ಕೂಡ ವಿಚಿತ್ರವಾಗಿದ್ದು, ‘ಯು’ ಮತ್ತು ‘ಐ’ ಅಂತಲೋ ಅಥವಾ ಧಾರ್ಮಿಕ ಚಿಹ್ನೆಯೊಂದನ್ನು ಹೋಲುವಂತೆ ಕೊಟ್ಟಿದ್ದಾರೆ. ಹಾಗಾಗಿ ಪ್ರೇಕ್ಷಕರೇ ಟೈಟಲ್ ಅನ್ನು ತಮ್ಮಿಷ್ಟ ಬಂದಂತೆ ಹೇಳಿಕೊಳ್ಳಬಹುದಾಗಿದೆ. ಇದನ್ನೂ ಓದಿ : ಯಾಕೆ ಆ ವಿಡಿಯೋ ಹಾಕಿದ್ರು ಮೀರಾ ಜಾಸ್ಮಿನ್? ಅಭಿಮಾನಿ ಅಳಲೇನು ಕೇಳಿ

    ಪೋಸ್ಟರ್ ಹಂಚಿಕೊಳ್ಳುವುದರ ಜತೆಗೆ “ಚಿತ್ರರಂಗದಲ್ಲಿ ಉಪೇಂದ್ರ ಅನ್ನೋ ಕಥೆ ಮಾಡಿ, 33 ವರ್ಷದ ಚಿತ್ರಕಥೆಯಲ್ಲಿ, ಸಂಭಾಷಣೆ ಹೇಳಿಸಿ, ಶಿಳ್ಳೆ ಚಪ್ಪಾಳೆಯಲ್ಲೇ ನಿರ್ದೇಶನ ಮಾಡಿದ ಎಲ್ಲಾ ಅಭಿಮಾನಿಗ ಪ್ರಜಾ ಪ್ರಭುಗಳಿಗೆ ಈ ಚಿತ್ರ ಅರ್ಪಿಸುತ್ತಿದ್ದೇನೆ’ ಎಂದು ಮಾರ್ಮಿಕವಾಗಿ ಅಭಿಮಾನಿಗಳಿಗೆ ಈ ಪೋಸ್ಟರ್ ಅರ್ಪಿಸಿದ್ದಾರೆ ಉಪೇಂದ್ರ. ಇದನ್ನೂ ಓದಿ : ಮಾರ್ಚ್ 14ಕ್ಕೆ ಆರ್.ಆರ್.ಆರ್ ‘ಎತ್ತುವ ಜಂಡಾ’ ಸಾಂಗ್ ರಿಲೀಸ್

    ಪೋಸ್ಟರ್ ನಲ್ಲಿ ಬರೆದುಕೊಂಡಂತೆ ಇದು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ಚಿತ್ರ ಮೂಡಿ ಬರಲಿದೆ. ನಿರ್ದೇಶನದ ಜತೆ ನಟನೆಯನ್ನೂ ಉಪ್ಪಿ ಮಾಡುತ್ತಿದ್ದು, ಲಹರಿ ಫಿಲ್ಮಸ್ ಲಾಂಛನದ ಅಡಿಯಲ್ಲಿ ಸಿನಿಮಾ ಮೂಡಿ ಬರಲಿದೆ. ಇದನ್ನೂ ಓದಿ : ತಮಿಳಿಗೆ ಹೊರಟ ಬಸಣ್ಣಿ ಖ್ಯಾತಿಯ ತಾನ್ಯ ಹೋಪ್ : ಪ್ರಶಾಂತ್ ರಾಜ್ ಚಿತ್ರಕ್ಕೆ ತಾನ್ಯ ನಾಯಕಿ

    ಭಾರೀ ಬಜೆಟ್ ನಲ್ಲೇ ಈ ಸಿನಿಮಾ ಮೂಡಿ ಬರಲಿದ್ದು, ಸಾವಿರಾರು ಕಲಾವಿದರು ಈ ಸಿನಿಮಾಗೆ ಬೇಕಾಗಿದ್ದರಿಂದ ಆಡಿಷನ್ ಕೂಡ ಮಾಡುತ್ತಿದ್ದಾರೆ.

  • ಫೋಟೋ ಮುಂದೆ ಉಪ್ಪಿನ ಪ್ಯಾಕೆಟ್ ಇಟ್ಟು ಗಾಂಧಿ ಜಯಂತಿ ಆಚರಣೆ

    ಫೋಟೋ ಮುಂದೆ ಉಪ್ಪಿನ ಪ್ಯಾಕೆಟ್ ಇಟ್ಟು ಗಾಂಧಿ ಜಯಂತಿ ಆಚರಣೆ

    -ಸಾರ್ವಜನಿಕರಿಗೆ ಉಪ್ಪಿನ ಪ್ಯಾಕೆಟ್ ಹಂಚಿಕೆ

    ಬೆಂಗಳೂರು: ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಮಹಾತ್ಮ ಗಾಂಧೀಜಿ ಫೋಟೋಗೆ ಪುಷ್ಪ ನಮನ ಹಾಗೂ ಉಪ್ಪಿನ ಪ್ಯಾಕೆಟ್‍ಗಳನ್ನು ಇಟ್ಟು ವಿನೂತನವಾಗಿ ಗಾಂಧೀಜಿ ಹುಟ್ಟು ಹಬ್ಬವನ್ನು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಚರಿಸಿದ್ದಾರೆ.

    ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ಗಾಂಧಿ ಜಯಂತಿಯನ್ನು ಆಚರಣೆ ಮಾಡಲಾಯಿತು. ಉಪ್ಪಿನ ಪ್ಯಾಕೆಟ್ ಗಳನ್ನು ಸಾರ್ವಜನಿಕರಿಗೆ ಹಂಚುವ ಮೂಲಕ ಗಾಂಧೀಜಿ ಅವರನ್ನು ವಾಟಾಳ್ ನಾಗರಾಜ್ ನೆನೆದರು. ಇದನ್ನೂ ಓದಿ: ನನ್ನನ್ನು ಸೋಲಿಸಿದ್ದು ಮೋದಿ, ಶಾ, ಆರ್‌ಎಸ್‌ಎಸ್‌: ಖರ್ಗೆ

    ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್ ದೇಶದಲ್ಲಿ ರಾಜಕೀಯ ನಾಯಕರು ಹದಗೆಟ್ಟು ಹೋಗಿದ್ದಾರೆ. ರಾಜಕೀಯ ನಾಯಕರಾದ ಸಿಎಂ, ಮಂತ್ರಿಗಳು, ಹಾಗೂ ಎಂಎಲ್‍ಎ ಹಾಗೂ ಎಂಪಿ ಗಳನ್ನು ಹರಾಜು ಮೂಲಕ ಪಡೆದುಕೊಳ್ಳಬಹುದು. ದೇಶದ ರಾಜಕೀಯ ವಲಯದಲ್ಲಿ ಪ್ರಾಮಾಣಿಕತೆ ಕಡಿಮೆ ಆಗಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ದೇಶದ ಜನರಿಗೆ ಜೀವನ ಮಾಡುವುದು ತುಂಬಾ ಕಷ್ಟವಾಗುತ್ತದೆ ಎಂದು ಟೀಕಿಸಿದರು.

    ಇದೆ ವೇಳೆ ಕೆಲವು ಸಾರ್ವಜನಿಕರು ವಾಟಾಳ್ ನಾಗರಾಜ್ ರೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಮೂಲಕ ಖುಷಿ ಪಟ್ಟರೆ, ಇನ್ನೂ ಕೆಲವರು ಉಪ್ಪಿನ ಪ್ಯಾಕೆಟ್ ಪಡೆದು ವಾಟಾಳ್ ನಾಗರಾಜ್‍ರಿಂದ ಆಶೀರ್ವಾದ ಪಡೆದು ಖುಷಿ ಪಟ್ಟರು. ಇದನ್ನೂ ಓದಿ: ದಾಂಪತ್ಯಕ್ಕೆ ಅಂತ್ಯ ಹಾಡಿದ ಸಮಂತಾ, ನಾಗ ಚೈತನ್ಯ

  • ಉಪ್ಪಿನ ಪಾಕೆಟ್‍ನಲ್ಲಿ ಕಲ್ಲು- ಔತಣಕೂಟದಲ್ಲಿ ಊಟಕ್ಕೆ ಕೂತವರು ಕಂಗಾಲು

    ಉಪ್ಪಿನ ಪಾಕೆಟ್‍ನಲ್ಲಿ ಕಲ್ಲು- ಔತಣಕೂಟದಲ್ಲಿ ಊಟಕ್ಕೆ ಕೂತವರು ಕಂಗಾಲು

    ಚಿಕ್ಕಮಗಳೂರು: ವಿವಾಹದ ಔತಣಕೂಟದಲ್ಲಿ ಭಾಗವಹಿಸಿದವರ ಹಲ್ಲುಗಳು ಜುಮ್ ಎನ್ನುವಂತಾಗಿದ್ದು, ಉಪ್ಪಿನ ಪಾಕೆಟ್‍ನಲ್ಲಿನ ಭಾರೀ ಪ್ರಮಾಣದ ಕಲ್ಲಿನಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ.

    ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ಬಳಿಯ ಹೆಮ್ಮದಿ ಗ್ರಾಮದಲ್ಲಿ ಮದುವೆ ನಡೆದಿತ್ತು. ಸರದಿ ಸಾಲಲ್ಲಿ ಊಟಕ್ಕೆ ಕೂತವರು ಕಲ್ಲು ಅನ್ನದಲ್ಲೋ, ಮಟನ್‍ನಲ್ಲೋ ಎಂದು ಗೊಂದಲಕ್ಕೀಡಾಗಿದ್ದರು. ಹೆಮ್ಮದಿ ಗ್ರಾಮದ ರತನ್ ಅವರು ಸ್ನೇಹಿತರು ಹಾಗೂ ನವದಂಪತಿಗಳಿಗೆ ಔತಣಕೂಟ ಏರ್ಪಡಿಸಿದ್ದರು. ಆದರೆ ಊಟಕ್ಕೆ ಕೂತಾಗ ಊಟದಲ್ಲಿ ಬರೀ ಕಲ್ಲು ಸಿಕ್ಕಿತ್ತು.

    ಊಟಕ್ಕೆ ಕೂತವರು ಕಲ್ಲು ಅನ್ನದ್ದೋ, ಮಟನ್ನದ್ದೋ ಎಂದು ಹುಡುಕಾಟ ನಡೆಸಿದ್ದರು. ಎಲ್ಲ ಕಡೆ ಹುಡುಕಾಡಿದ ಬಳಿಕ ಕೊನೆಯಲ್ಲಿ ಉಪ್ಪಿನ ಪಾಕೆಟ್ ತೆರದು ನೋಡಿದರೆ ಅದರಲ್ಲಿ ಅರ್ಧ ಕಲ್ಲು. ಇನ್ನರ್ಧ ಉಪ್ಪು. ಕಲ್ಲೆಂದರೆ ನೋಡುವವರ ಕಣ್ಣಿಗೆ ಉಪ್ಪೇ ಎಂದು ಗೋಚರಿಸುತ್ತದೆ. ಆದರೆ ಕಲ್ಲುಗಳನ್ನು ಉಪ್ಪಿನ ಪಾಕೆಟ್‍ನಲ್ಲಿ ತುಂಬಲಾಗಿದೆ. ಉಪ್ಪನ್ನು ನೀರಿನ ಪಾತ್ರೆಗೆ ಹಾಕಿ ಕರಗಿಸಿದರೆ ಅರ್ಧ ಮಾತ್ರ ಕರಗಿದ್ದು ಇನ್ನರ್ಧ ಕರಗಿಲ್ಲ.

    ಕಲ್ಲಿನಿಂದಾಗಿ ಸರದಿ ಸಾಲಲ್ಲಿ ಊಟಕ್ಕೆ ಕೂತವರು ಸರಿಯಾಗಿ ಊಟ ಮಾಡದಂತಾಗಿದೆ. ಸ್ನೇಹಿತರು, ನವದಂಪತಿಗಳನ್ನ ಊಟಕ್ಕೆ ಕರೆದು ಹೀಗಾಯ್ತಲ್ಲ ಎಂದು ಅಂಗಡಿ ಮಾಲೀಕನಿಗೆ ಫೋನ್ ಮಾಡಿದರೆ ಆತ ನಾನು ವ್ಯಾಪಾರಸ್ಥ ಎಂದು ಹೇಳಿದ್ದಾರೆ. ಬಳಿಕ ಆತನಿಂದ ನಂಬರ್ ಪಡೆದು ಮೇನ್ ಡೀಲರ್‍ಗೆ ಕರೆ ಮಾಡಿದರೆ ಆತ ಹಾರಿಕೆ ಉತ್ತರ ನೀಡಿದ್ದಾರೆ. ಚಿಕ್ಕಮಗಳೂರಿನ ಸಬ್ ಡೀಲರ್‍ಗೆ ಕರೆ ಮಾಡಿದರೆ ಆತ ಬೇಕಾಬಿಟ್ಟಿ ಉತ್ತರಿಸಿದ್ದಾರೆಂದು ಔತಣಕೂಟ ಏರ್ಪಡಿಸಿದ್ದ ರತನ್ ಮಾಲೀಕನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಜನ ಉಪ್ಪಿನ ಬಗ್ಗೆ ಸಂಶಯ ಪಡುವುದಿಲ್ಲ. ಅದನ್ನೇ ಕೆಲವರು ಬಂಡವಾಳ ಮಾಡಿಕೊಂಡಿದ್ದಾರೆ. ಅಕ್ಕಿ, ರಾಗಿ, ಗೋಧಿಯಲ್ಲಿ ಕಲ್ಲು ಬಂದಿದ್ದಾಯಿತು. ಈಗ ಉಪ್ಪಿನಲ್ಲೂ ಕಲ್ಲು ಬರುವ ಕಾಲ ಬಂದಿದೆ. ಜನ ಮನೆಯಲ್ಲಿ ಉಪ್ಪನ್ನ ಬಳಸುವ ಮುನ್ನ ಎಚ್ಚರದಿಂದ ಇರಬೇಕೆಂದು ಘಟನೆಯಿಂದ ನೊಂದ ರತನ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ದೊಡ್ಡವರು ಕಲ್ಲು ಸಿಕ್ಕರೆ ತೆಗೆದು ಹಾಕುತ್ತಾರೆ. ಆದರೆ ಮಕ್ಕಳು ಅವುಗಳನ್ನ ತಿಂದರೆ ಅನಾರೋಗ್ಯ ಗ್ಯಾರಂಟಿ. ಆದ್ದರಿಂದ ಜನ ಮನೆಯಲ್ಲಿ ಉಪ್ಪನ್ನ ಬಳಸುವ ಮುನ್ನ ಎಚ್ಚರದಿಂದಿರಬೇಕೆಂದು ಮನವಿ ಮಾಡಿದ್ದಾರೆ.

  • ಮಾಂಸದ ಸಾರಿಗೆ ಉಪ್ಪು ಜಾಸ್ತಿಯಾಗಿದೆ ಎಂದು ಪತ್ನಿಯನ್ನೇ ಕೊಂದ ಪಾಪಿ ಪತಿ

    ಮಾಂಸದ ಸಾರಿಗೆ ಉಪ್ಪು ಜಾಸ್ತಿಯಾಗಿದೆ ಎಂದು ಪತ್ನಿಯನ್ನೇ ಕೊಂದ ಪಾಪಿ ಪತಿ

    ಚಿಕ್ಕಬಳ್ಳಾಪುರ: ಗಂಡ ಹೆಂಡತಿ ನಡುವೆ ಜಗಳ ನಡೆದು, ಗಂಡ ಹೆಂಡತಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯ (ಉಪ್ಪಕುಂಟೆ) ಗ್ರಾಮದಲ್ಲಿ ನಡೆದಿದೆ.

    ಪತ್ನಿ ಮಧುರ(24)ಳನ್ನು ಪತಿ ಬಾಲಚಂದ್ರ ಚೇಳೂರು(28) ಕೊಲೆ ಮಾಡಿದ್ದಾನೆ. ಖಾಸಗಿ ಬಸ್ ಚಾಲಕನಾಗಿದ್ದ ಬಾಲಚಂದ್ರ ಮಧುರಾಳನ್ನ ಪ್ರೀತಿಸಿ ಮದುವೆಯಾಗಿದ್ದ ಎನ್ನಲಾಗಿದೆ. ಈ ದಂಪತಿಗೆ 11 ತಿಂಗಳ ಮುದ್ದಾದ ಮಗು ಇದೆ. ಹೆರಿಗೆ ನಂತರ ತವರು ಮನೆಗೆ ಬಂದಿದ್ದ ಮಧುರ, ತವರು ಮನೆಯಲ್ಲಿಯೇ ಇದ್ದಳು. ಹೀಗಾಗಿ ಬಾಲಚಂದ್ರ ಕೂಡ ಆಗಾಗ ಪತ್ನಿಯ ತವರು ಮನಗೆ ಬಂದು ಹೋಗುತ್ತಿದ್ದ.

    ಭಾನುವಾರವಾದ ನಿನ್ನೆ ಮಾಂಸದ ಅಡುಗೆ ಮಾಡಿದ್ದು, ಸಾರಿಗೆ ಉಪ್ಪು ಜಾಸ್ತಿ ಅಂತ ತಡರಾತ್ರಿ ಮಧುರ ಜೊತೆ ಬಾಲಚಂದ್ರ ಜಗಳ ಮಾಡಿದ್ದಾನೆ. ಮೊದಲೇ ಮದ್ಯ ವ್ಯಸನಿ ಹಾಗೂ ಪದೇ ಪದೇ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡೋ ಪ್ರವೃತ್ತಿ ಇದ್ದಿದ್ದರಿಂದ, ದಿನಾ ಇದ್ದಿದ್ದೇ ಅಂತ ಮನೆಯವರು ಸುಮ್ಮನಾಗಿದ್ದಾರೆ.

    ಆದರೆ ಪಾಪಿ ಬಾಲಚಂದ್ರ ಮಾತ್ರ ತನ್ನ ಪತ್ನಿಯನ್ನು ನೇರವಾಗಿ ರೂಮಿನೊಳಗೆ ಕರೆದೊಯ್ದು ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಬಳಿಕ ಆತ್ಮಹತ್ಯೆ ಅಂತ ಬಿಂಬಿಸಲು ಸಹ ಪ್ರಯತ್ನಪಟ್ಟಿದ್ದಾನೆ.

    ಘಟನಾ ಸ್ಥಳಕ್ಕೆ ಚೇಳೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪತಿ ಮಹಾಶಯ ಬಾಲಚಂದ್ರನನ್ನ ಬಂಧಿಸಿ ಮುಂದಿನ ಕಾನೂನುಕ್ರಮ ಕೈಗೊಂಡಿದ್ದಾರೆ. ಚೇಳೂರು ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 323(ಹಲ್ಲೆ), 342(ಮಹಿಳೆಯ ಆತ್ಮಗೌರವಕ್ಕೆ ಚ್ಯುತಿ) 302(ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಿಲಾಗಿದೆ.

  • ಬಿಸಿ ನೀರಿಗೆ ಉಪ್ಪು, ಅರಿಶಿಣ ಹಾಕಿ ಬಾಯಿ ಮುಕ್ಕಳಿಸಿ ಕೊರೊನಾ ಕಡಿಮೆ ಆಗುತ್ತೆ: ಶ್ರೀರಾಮುಲು

    ಬಿಸಿ ನೀರಿಗೆ ಉಪ್ಪು, ಅರಿಶಿಣ ಹಾಕಿ ಬಾಯಿ ಮುಕ್ಕಳಿಸಿ ಕೊರೊನಾ ಕಡಿಮೆ ಆಗುತ್ತೆ: ಶ್ರೀರಾಮುಲು

    -ಚೀನಾದಲ್ಲೂ ಸಾಕಷ್ಟು ಮಂದಿ ಇದನ್ನೇ ಅನುಸರಿಸಿ ಗುಣವಾಗಿದ್ದಾರೆ

    ಬಳ್ಳಾರಿ: ಈ ಹಿಂದೆ ಸೂರ್ಯನ ಕಿರಣ ಎಲ್ಲಿ ಹೆಚ್ಚು ಇರುತ್ತೋ ಅಲ್ಲಿ ಹೆಚ್ಚು ಜನ ಕೊರೊನಾ ಸೋಂಕಿನಿಂದ ಗುಣಮುಖರಾಗ್ತಾರೆ ಎಂದಿದ್ದ ಆರೋಗ್ಯ ಸಚಿವ ಶ್ರೀರಾಮುಲು ಅವರು ಇಂದು ಬಿಸಿ ನೀರಿಗೆ ಉಪ್ಪು, ಅರಿಶಿಣ ಹಾಕಿ ಬಾಯಿ ಮುಕ್ಕಳಿಸಿ ಕೊರೊನಾ ಕಡಿಮೆ ಆಗುತ್ತ ಎಂದು ಟಿಪ್ಸ್ ಕೊಟ್ಟಿದ್ದಾರೆ.

    ಇಂದು ಬಳ್ಳಾರಿಯಲ್ಲಿ ಮಾಧ್ಯಮಗಳ ಜೊತೆ ಮಾಡನಾಡಿದ ಸಚಿವರು, ಕೊರೊನಾ ಸೋಂಕಿನಿಂದ ಗುಣಮುಖರಾಗಲು ಬಿಸಿ ನೀರಿಗೆ ಉಪ್ಪು, ಅರಿಶಿಣ ಹಾಕಿ ಬಾಯಿ ಮುಕ್ಕಳಿಸಿ. ತಣ್ಣೀರಿನ ಬದಲು ಬಿಸಿ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಕೊರೊನಾ ಕಡಿಮೆ ಆಗುತ್ತದೆ. ಚೀನಾದಲ್ಲೂ ಇದೇ ರೀತಿ ಜನರು ಮಾಡಿ ಗುಣಮುಖರಾಗಿದ್ದಾರೆ. ನಾನು ವೈದ್ಯನಲ್ಲ ಆದರೆ ಯಾವುದೋ ಆರ್ಟಿಕಲ್‍ನಲ್ಲಿ ಈ ಬಗ್ಗೆ ಓದಿದ್ದೆ ಎಂದು ಸಲಹೆ ನೀಡಿದ್ದಾರೆ.

    ಈ ಹಿಂದೆ ಹಾವೇರಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀರಾಮುಲು ಅವರು, ಎಲ್ಲೆಲ್ಲಿ ಸೂರ್ಯನ ಕಿರಣ ಹೆಚ್ಚು ಬೀಳುತ್ತಿವೆಯೋ ಅಲ್ಲಿ ಕೊರೊನಾ ಸೋಂಕಿನಿಂದ ಬಳಲುತ್ತಿರುವವರು ಹೆಚ್ಚು ಗುಣಮುಖರಾಗುತ್ತಿದ್ದಾರೆ ಎಂದು ಹೇಳಿದ್ದರು.

    ಸಾಮಾಜಿಕ ಅಂತರ ಕಾಯ್ದುಕೊಳ್ಳದ ಸಚಿವರು:
    ಇಂದು ಬಳ್ಳಾರಿಯ ರೂಪನಗುಡಿ ರಸ್ತೆಯಲ್ಲಿ ಆಹಾರದ ಕಿಟ್ ವಿತರಣೆ ವೇಳೆಯಲ್ಲಿ ಸಾಮಾಜಿಕ ಅಂತರವನ್ನು ಆರೋಗ್ಯ ಸಚಿವರೇ ಮರೆತಿದ್ದರು. ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡಿ ಅವರು ದಾನಿಗಳು ನೀಡಿದ್ದ ಆಹಾರದ ಕಿಟ್ ವಿತರಣೆಗೆ ಬಂದಿದ್ದ ವೇಳೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ ಕಿಟ್ ಹಂಚಿದ್ದಾರೆ. ಇತ್ತ ಸಚಿವರ ಹಿಂಬಾಲಕರಿಂದಲೂ ಸಾಮಾಜಿಕ ಅಂತರ ನಿಯಮ ಉಲ್ಲಂಘನೆ ಮಾಡಲಾಗಿದೆ.