Tag: Salon

  • ಸಲೂನ್‌ಗೆ ನುಗ್ಗಿ ಲೇಡಿ ರೌಡಿ ಗ್ಯಾಂಗ್‌ನಿಂದ ದಾಂಧಲೆ – ಮೂವರು ಅರೆಸ್ಟ್‌

    ಸಲೂನ್‌ಗೆ ನುಗ್ಗಿ ಲೇಡಿ ರೌಡಿ ಗ್ಯಾಂಗ್‌ನಿಂದ ದಾಂಧಲೆ – ಮೂವರು ಅರೆಸ್ಟ್‌

    – ಕೈಯಲ್ಲಿ ಸಿಗರೇಟ್.. ಕಾಲಿಂದ ಒದ್ದು ಮನಸೋಇಚ್ಚೆ ಹಲ್ಲೆ

    ಬೆಂಗಳೂರು: ನಗರದ ಸ್ಪಾ ವೊಂದರಲ್ಲಿ ಕೆಲಸ ಬಿಟ್ಟು ಸ್ವಂತ ಸಲೂನ್ ಮಾಡಿದ್ದಕ್ಕೆ, ಲೇಡಿ ಗ್ಯಾಂಗ್ (Lady Rowdy Gang) ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ (Amruthahalli Police Station) ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ.

    ಸಂಜು ಅನ್ನೋ 40 ವರ್ಷದ ವ್ಯಕ್ತಿ, ಕೊಡಿಗೆಹಳ್ಳಿ ಸಮೀಪದ ಸಾರಾ ಸ್ಪಾನಲ್ಲಿ ಕೆಲಸ ಮಾಡ್ತಿದ್ದ. ಅಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರಿಂದ ಅಲ್ಲಿ ಕೆಲಸ ಬಿಟ್ಟು ಸ್ವಂತ ಸಲೂನ್ ಮಾಡಿಕೊಂಡಿದ್ದ. ಇದರಿಂದ ಕೋಪಗೊಂಡ ಸಾರಾ ಸ್ಪಾ ಓನರ್ ನಿಶಾ, ಗ್ಯಾಂಗ್‌ ಕಟ್ಟಿಕೊಂಡು ಬಂದು, ಸಂಜು ನಡೆಸ್ತಿದ್ದ ಸಲೂನ್‌ಗೆ ನುಗ್ಗಿ ಧಾಂಧಲೆ ನಡೆಸಿದ್ದಾರೆ. 10-15 ನಿಮಿಷಗಳ ಕಾಲ ಮನಸೋಇಚ್ಛೆ ಥಳಿಸಿ ಸಲೂನ್‌ನಿಂದ ನೀಲಿ ಬಣ್ಣದ ಕಾರಿನಲ್ಲಿ ಎತ್ತಾಕ್ಕೊಂಡು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಸಂಜು ದೂರು ನೀಡಿದ್ದಾರೆ. ಇದನ್ನೂ ಓದಿ: ಬೇಹುಗಾರಿಕೆಗಾಗಿ ಭಾರತೀಯ ಮೊಬೈಲ್‌ ಸಿಮ್‌ ಕಾರ್ಡ್‌ ಪೂರೈಸುತ್ತಿದ್ದ ಪಾಕ್‌ ಸ್ಪೈ ಅರೆಸ್ಟ್‌

    ಸಾರಾ ಸ್ಪಾ ಓನರ್ ನಿಶಾ, ಸ್ನೇಹಿತೆ ಕಾವ್ಯ, ಮೊಹಮ್ಮದ್‌ ಹಾಗೂ ಅಪರಿಚಿತರಿಬ್ಬರ ಮೇಲೆ ದೂರು ದಾಖಲಾಗಿದೆ. ದಾಸರಹಳ್ಳಿ ಮುಖ್ಯರಸ್ತೆ ಮೂಲಕ ಜಕ್ಕೂರು ಕಡೆ ಕರೆದುಕೊಂಡು ಹೋಗಿ, ಡ್ರ್ಯಾಗನ್‌, ಬಿಯರ್ ಬಾಟಲ್ ನಿಂದ ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದಾರೆ. ಸಲೂನ್‌ಗೆ ನುಗ್ಗಿ ಹಲ್ಲೆ ಮಾಡಿರುವ ದೃಶ್ಯಗಳನ್ನ ಸಂಜು ಪತ್ನಿ ಮೊಬೈಲ್ ನಲ್ಲಿ ಸಿಸಿಟಿವಿ ದೃಶ್ಯಗಳನ್ನ ನೋಡಿ ಅಮೃತಹಳ್ಳಿ ಪೊಲೀಸ್ ಠಾಣೆಗೆ ಬಂದು ಮಾಹಿತಿ ನೀಡಿದ್ದಾರೆ. ಕಿಡ್ನ್ಯಾಪ್ ಮಾಡಿದ ಗ್ಯಾಂಗ್ ನಲ್ಲಿದ್ದ ಓರ್ವರನ್ನ ಪೊಲೀಸರು ಗುರ್ತಿಸಿ, ಫೋನ್‌ ಮಾಡಿ ಎಚ್ಚರಿಕೆ ನೀಡಿದ್ದಾರೆ. ಆ ಬಳಿಕ ಠಾಣೆಯ ಮುಂದೆ ಸಂಜುನನ್ನ ಬಿಟ್ಟೋಗಿದ್ದಾರೆ. ಕಣ್ಣು, ಕಿವಿ, ತಲೆ, ಹೊಟ್ಟೆ ಭಾಗಕ್ಕೆ ಗಾಯಗಳಾಗಿದ್ದು, ಯಲಹಂಕ ಸರ್ಕಾರಿ ಆಸ್ಪತ್ರೆಯಲ್ಲಿ ಸಂಜು ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ನೀಡಿದ್ದಾರೆ. ಅವಾಚ್ಯ ಶಬ್ದಗಳಿಂದ ಬೈದು ಪೆಟ್ರೋಲ್ ಸುರಿದು ಸುಟ್ಟಾಕ್ತಿನಿ ಎಂದು ಜೀವ ಬೆದರಿಕೆ ಹಾಕಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ನಾಲ್ಕೇ ದಿನಕ್ಕೆ KRSನಲ್ಲಿ 11 ಅಡಿ ನೀರು ಹೆಚ್ಚಳ – ಹಲವು ವರ್ಷಗಳ ಬಳಿಕ ಮೇ ತಿಂಗಳಲ್ಲೇ 100 ಅಡಿ ಭರ್ತಿ!

    ರೌಡಿ ಗ್ಯಾಂಗ್‌ನ ಅಟ್ಟಹಾಸದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಗ್ಯಾಂಗ್ ಗೆ ಸ್ಥಳೀಯ ರಾಜಕೀಯ ಮುಖಂಡ ಹಾಗೂ ರೌಡಿಶೀಟರ್ ಒಬ್ಬನ ಬೆಂಬಲ ಇದೆಯಂತೆ. ಇದೆ ಧೈರ್ಯದಿಂದ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ. ಸಲೂನ್‌ನ ಸಿಸಿಟಿವಿ ಕೇಬಲ್‌ಗಳನ್ನ ಕಿತ್ತಾಕಿ ಧಾಂಧಲೆ ನಡೆಸಿದ್ದಾರೆ ಎಂದು ದೂರಿದ್ದು, ಪೊಲೀಸರು ಹಲ್ಲೆಕೊರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಜು ದಂಪತಿ ಒತ್ತಾಯಿಸಿದ್ದಾರೆ. ರೌಡಿ ಪಟಾಲಂ ವಿರುದ್ಧ ಅಮೃತಹಳ್ಳಿ ಠಾಣೆಯ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಪರಾರಿಯಾದ ಹಲ್ಲೆಕೋರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಇದನ್ನೂ ಓದಿ: RCB ಟ್ರೋಫಿ ಗೆದ್ದರೆ ಆ ದಿನವನ್ನ ʻಆರ್‌ಸಿಬಿ ಫ್ಯಾನ್ಸ್‌ ಹಬ್ಬʼದ ದಿನವನ್ನಾಗಿ ಘೋಷಿಸಿ – ಸಿಎಂಗೆ ವಿಶೇಷ ಪತ್ರ!

  • ಪ್ರಜ್ವಲ್ ಸಲೂನ್‌ಗೆ ಹೋಗಿ ಕ್ಲೀನ್ ಆಗಿ ಬಂದಿದ್ದಾರೆ, ಇದಕ್ಕೆ ಅಮಿತ್ ಶಾ ಡೈರೆಕ್ಟರ್: ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

    ಪ್ರಜ್ವಲ್ ಸಲೂನ್‌ಗೆ ಹೋಗಿ ಕ್ಲೀನ್ ಆಗಿ ಬಂದಿದ್ದಾರೆ, ಇದಕ್ಕೆ ಅಮಿತ್ ಶಾ ಡೈರೆಕ್ಟರ್: ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

    – ಪ್ರಜ್ವಲ್‌ಗೇ ಖಿನ್ನತೆ ಆಗಿದ್ರೆ ಸಂತ್ರಸ್ತೆಯರ ಪರಿಸ್ಥಿತಿ ಏನು ಎಂದು ಪ್ರಶ್ನೆ

    ಬೆಂಗಳೂರು: ಪ್ರಜ್ವಲ್ ರೇವಣ್ಣ (Prajwal Revanna) ಸಲೂನ್ ಹೋಗಿ, ಕ್ಲೀನ್ ಆಗಿ ಬಂದು ವೀಡಿಯೋ ಮಾಡಿದ್ದಾರೆ. ಅದರಲ್ಲಿ ಖಿನ್ನತೆ ಏನಾದ್ರೂ ಕಾಣ್ತಾ ಇದಿಯಾ? ಇವರಿಗೇ ಖಿನ್ನತೆ ಆಗಿದ್ದರೇ ಸಂತ್ರಸ್ತೆಯರ ಪರಿಸ್ಥಿತಿ ಏನು? ಅಂತ ಸಚಿವ ಪ್ರಿಯಾಂಕ್‌ ಖರ್ಗೆ (Priyank Kharge) ಪ್ರಶ್ನೆ ಮಾಡಿದ್ದಾರೆ.

    ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ಪ್ರಜ್ವಲ್ ವೀಡಿಯೋವೊಂದನ್ನ ರಿಲೀಸ್ ಮಾಡಿರೋದು ಅಚ್ಚರಿ ಆಗುತ್ತಿದೆ. 6-7 ಹಂತಹಳ ಚುನಾವಣೆ (Lok Sabha Elections) ಆದ್ಮೇಲೆ ಹೊರಬಂದಿದ್ದಾರೆ. 30 ದಿನಗಳ ಹಿಂದೆ ನಿಮ್ಮ ಸ್ವಾಭಿಮಾನ ಮರ್ಯಾದೆ ನೆನಪಿರಲಿಲ್ವಾ? ನಿಮ್ಮ ಸ್ವಾಭಿಮಾನ, ಕುಟುಂಬದ ಮರ್ಯಾದೆಗಿಂತಲೂ ದೊಡ್ಡದು ವಿದೇಶದಲ್ಲಿ ಏನಿತ್ತು? ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: `ಇಂಡಿಯಾ’ ಕೂಟ ಅಧಿಕಾರಕ್ಕೆ ಬಂದ್ರೆ ಹಣ ಹಾಕುವ ಘೋಷಣೆ – ‘ಟಕಾ ಟಕ್‌’ ಖಾತೆ ಮಾಡಿಸಲು ಮಹಿಳೆಯರ ಕ್ಯೂ

    ಅಮಿತ್ ಶಾ (Amit Shah) ಅವರೋ ಅಥವಾ ಬಿಜೆಪಿಯವರೋ (BJP) ವಿಡಿಯೋ ಮಾಡಿ ಹೊರಗೆ ಬಾ ಅಂದಿರಬೇಕು. ಇದೆಲ್ಲವೂ ಬಿಜೆಪಿ ನಾಯಕರ ನಿರ್ದೇಶನದ ಮೇರೆಗೆ ನಡೆದಿದೆ ಅಂತ ಆರೋಪಿಸಿದ್ದಾರೆ. ಇದನ್ನೂ ಓದಿ: ಹಿಂದೂ ಯುವಕನ ಮೇಲೆ ಹಲ್ಲೆ ಕೇಸ್‌ – ದೂರು ಸ್ವೀಕರಿಸಲು ನಿರ್ಲಕ್ಷ್ಯ ತೋರಿದ್ದ ಪಿಎಸ್‌ಐ ಅಮಾನತು

    30 ದಿನಗಳು ಬೇಕಾ ಇವರು ಸ್ಪಂದಿಸೋದಕ್ಕೆ? ಪ್ರಜ್ವಲ್ ಅಷ್ಟು ಕ್ಲೀನ್ ಆಗಿದ್ದಿದ್ದರೆ ಮೊದಲ ದಿನವೇ ರಿಯಾಕ್ಟ್ ಮಾಡಬೇಕಿತ್ತು. ಕುಂಭಕರ್ಣ ನಿದ್ರೆಯಿಂದ ಎದ್ದಮೇಲೆ ರಾಹುಲ್ ಗಾಂಧಿ.. ರಾಹುಲ್ ಗಾಂಧಿ ಅಂದ್ರೆ? ಇವರಿಗೆ ಇದೆಲ್ಲ ರಾಹುಲ್ ಗಾಂಧಿ ಹೇಳಿಕೊಟ್ಟರಾ? ಇಡೀ ದೇಶದ ರಾಜಕಾರಣಿಗಳು ಪ್ರಜ್ವಲ್ ಬಗ್ಗೆ ಮಾತಾಡಿದ್ರು. ಅವರೆಲ್ಲರನ್ನೂ ಬಿಟ್ಟು ಕೇವಲ ರಾಹುಲ್ ಗಾಂಧಿ ಬಗ್ಗೆ ಯಾಕೆ ಮಾತಾಡ್ತಿದ್ದೀರಿ? ಇದರ ನಿರ್ದೇಶಕರು ಅಮಿತ್ ಶಾ ಅವರೇ ಇರಬೇಕು ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಮಧ್ಯಂತರ ಜಾಮೀನು ವಿಸ್ತರಣೆ ಕೋರಿ ಕೇಜ್ರಿವಾಲ್‌ ಅರ್ಜಿ; ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ 

  • ತಲೆಕೂದಲು ಕಸಿಯಿಂದ ವ್ಯಕ್ತಿ ಸಾವು – ಅಕ್ರಮ ಸಲೂನ್‌ಗಳ ವಿರುದ್ಧ ತನಿಖೆಗೆ ಕೋರ್ಟ್ ಸೂಚನೆ

    ತಲೆಕೂದಲು ಕಸಿಯಿಂದ ವ್ಯಕ್ತಿ ಸಾವು – ಅಕ್ರಮ ಸಲೂನ್‌ಗಳ ವಿರುದ್ಧ ತನಿಖೆಗೆ ಕೋರ್ಟ್ ಸೂಚನೆ

    ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ತರಬೇತಿಯಿಲ್ಲದೆ ತಲೆಕೂದಲು ಕಸಿ ಮತ್ತು ಸೌಂದರ್ಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ನಡೆಯುತ್ತಿರುವ ಬಗ್ಗೆ ದೆಹಲಿ ಹೈಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಈ ಬೆನ್ನಲ್ಲೇ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಸಲೂನ್‌ಗಳ ವಿರುದ್ಧ ತನಿಖೆಗೆ ಹೈಕೋರ್ಟ್ ಸೂಚನೆ ನೀಡಿದೆ.

    Salon

    ನಗರದೆಲ್ಲೆಡೆ ಸಲೂನ್‌ಗಳು ನಾಯಿಕೊಡೆಗಳಂತೆ ಎಲೆ ಎತ್ತುತ್ತಿದ್ದು, ಸ್ವಘೋಷಿತ ತಂತ್ರಜ್ಞರು ವೈದ್ಯಕೀಯ ನೈತಿಕತೆಯನ್ನು ಬದಿಗೊತ್ತಿ, ತಲೆಕೂದಲು ಕಸಿ ಹಾಗೂ ಸೌಂದರ್ಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ನಡೆಸುತ್ತಿದ್ದಾರೆ ಎಂದು ನ್ಯಾಯಮೂರ್ತಿ ಅನೂಪ್ ಕುಮಾರ್ ಮೆಂಡಿರಟ್ಟ ಪ್ರಕರಣವೊಂದರ ವಿಚಾರಣೆ ವೇಳೆ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಶರದ್ ಪವಾರ್ ವಿರುದ್ಧ ಅವಹೇಳನಕಾರಿ ಪೋಸ್ಟ್ – ಪೊಲೀಸ್ ಕಸ್ಟಡಿಗೆ ಮರಾಠಿ ನಟಿ

    ಕೂದಲು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ವ್ರಣವಾಗಿ (ಗಾಯವಾಗಿ) ಮೃತಪಟ್ಟ 35 ವರ್ಷದ ಅಥರ್ ರಶೀದ್ ಸಾವಿನ ಕುರಿತು ತನಿಖೆ ನಡೆಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲಾಯಿತು.

    haircut salon

    ಇಂತಹ ಸಲೂನ್‌ಗಳು ತಲೆ ಎತ್ತುತ್ತಿರುವ ಬಗ್ಗೆ ಪರಿಶೀಲಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ದೆಹಲಿ ಸರ್ಕಾರ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಸೌಂದರ್ಯದ ಶಸ್ತ್ರಚಿಕಿತ್ಸೆ ಹಾಗೂ ಕೂದಲು ಕಸಿ ಮಾಡಲು ವೈದ್ಯಕೀಯ ಮಾರ್ಗಸೂಚಿಗಳು ಇಲ್ಲದಿದ್ದರೆ, ಅದಕ್ಕೆ ಸೂಕ್ತ ಕ್ರಮ ರೂಪಿಸಬೇಕು ಎಂದೂ ನ್ಯಾಯಾಲಯ ಹೇಳಿದೆ. ಇದನ್ನೂ ಓದಿ: ನಾವು ಕರ್ನಾಟಕದ ಕನ್ನಡಿಗರಲ್ಲ, ಗೋವಾ ಕನ್ನಡಿಗರು: ಸಿದ್ದಣ್ಣ ಮೇಟಿ

    ಕೂದಲು ಕಸಿ ವಿಧಾನ ಅಥವಾ ಸೌಂದರ್ಯ ಕಾಪಾಡುವ ಶಸ್ತ್ರಚಿಕಿತ್ಸೆಗಳು ಅನರ್ಹ ವೃತ್ತಿಪರರಿಂದ (ಚಿಕಿತ್ಸೆ ಬಗ್ಗೆ ತಿಳಿಯದೇ ವೃತ್ತಿ ಮಾಡುವವರು) ಮಾರಕವಾಗಬಹುದು ಎನ್ನುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕಿದೆ. ಇದಕ್ಕೆ ಕಟ್ಟುನಿಟ್ಟಿನ ವೈದ್ಯಕೀಯ ಮೇಲ್ವಿಚಾರಣೆಯೂ ಅಗತ್ಯವಿರುತ್ತದೆ ಎಂದು ನ್ಯಾಯಾಲಯ ಹೇಳಿದೆ.

    COURT (2)

    ಪ್ರಸ್ತುತ ರಶೀದ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಂ ವರ್ಮಾ ಎಂಬ ಆರೋಪಿಯನ್ನು ಬಂಧಿಸಲಾಗಿದೆ. ಈತ ಹರೀಶ್‌ಶರ್ಮಾ ಹಾಗೂ ಇತರರೊಂದಿಗೆ ಯುನೈಟೆಡ್ ಹೇರ್ ಸ್ಟುಡಿಯೋ ನಡೆಸುತ್ತಿದ್ದ. ಶಸ್ತ್ರಚಿಕಿತ್ಸೆಗಾಗಿ ರಶೀದ್‌ನಿಂದ 30 ಸಾವಿರ ರೂ. ಶುಲ್ಕ ಪಡೆದಿದ್ದ. ಆದರೆ ಕೂದಲು ಕಸಿಗೆ ಕ್ಲಿಯರೆನ್ಸ್ ಪ್ರಮಾಣಪತ್ರ ಹೊಂದಿರಲಿಲ್ಲ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಪ್ರಿಯಕರನ ಸಾವಿನಿಂದ ಮನನೊಂದ ಯುವತಿ ವಿಷ ಸೇವಿಸಿ ಆತ್ಮಹತ್ಯೆ 

    ಈ ಹಿನ್ನೆಲೆಯಲ್ಲಿ ಕೇಂದ್ರ, ದೆಹಲಿ ರಾಜ್ಯ ಸರ್ಕಾರ, ದೆಹಲಿ ಪೊಲೀಸ್ ಆಯುಕ್ತರು, ರಾಷ್ಟ್ರೀಯ ವೈದ್ಯಕೀಯ ಆಯೋಗ ಮತ್ತು ದೆಹಲಿ ವೈದ್ಯಕೀಯ ಮಂಡಳಿಗೆ ಸಮಸ್ಯೆ ನಿಭಾಯಿಸಲು ಮತ್ತು ಸ್ಥಿತಿಗತಿ ವರದಿ ಸಲ್ಲಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪೀಠ ಸೂಚಿಸಿದೆ.

  • ಯಶ್ ಹೇರ್ ಸ್ಟೈಲ್‍ಗೆ ಅಭಿಮಾನಿಗಳು ಫಿದಾ

    ಯಶ್ ಹೇರ್ ಸ್ಟೈಲ್‍ಗೆ ಅಭಿಮಾನಿಗಳು ಫಿದಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಯಶ್ ಅವರ ಹೊಸ ಹೇರ್ ಸ್ಟೈಲ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗಿದೆ. ಯಶ್ ಕೇಶ ವಿನ್ಯಾಸ ಮಾಡಿಸುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಮುಂಬೈನ ಖ್ಯಾತ ಹೇರ್ ಸ್ಟೈಲಿಸ್ಟ್ ಆಗಿರುವ ಬಾಲಿವುಡ್ ವಲಯದಲ್ಲಿ ಆಲಿಮ್ ಹಕೀಮ್ ಅವರ ಸಲೂನ್‍ಗೆ ಯಶ್ ಹೋಗಿದ್ದಾರೆ. ಆಲಿಮ್ ಹಕೀಮ್ ಘಟಾನುಘಟಿ ಸೆಲೆಬ್ರಿಟಿಗಳಿಗೆ ಕೇಶ ವಿನ್ಯಾಸ ಮಾಡುತ್ತಾರೆ. ಅಮಿತಾಭ್ ಬಚ್ಚನ್, ಸಂಜತ್ ದತ್, ಹೃತಿಕ್ ರೋಷನ್, ಹಾರ್ದಿಕ್ ಪಾಂಡ್ಯ ಮುಂತಾದ ಸೆಲೆಬ್ರಿಟಿಗಳಿಗೆ ಹೇರ್ ಸ್ಟೈಲ್ ಮಾಡಿದ ಖ್ಯಾತಿ ಅವರಿಗೆ ಸಲ್ಲುತ್ತಿದೆ. ಯಶ್ ಅವರು ಆಲಿಮ್ ಹಕೀಮ್ ಸಲೂನ್‍ಗೆ ಭೇಟಿ ನೀಡಿ ಕೇಶ ವಿನ್ಯಾಸ ಮಾಡಿಸಿಕೊಂಡಿದ್ದಾರೆ. ಈ ವೀಡಿಯೋವನ್ನು ಆಲಿಮ್ ಹಕೀಮ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಸಾವಿರಾರು ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ಮೆಚ್ಚುಗೆ ಸೂಚಿಸುತ್ತಿದ್ದಾರೆ. ದನ್ನೂ ಓದಿ: ಯಶ್ ಜೊತೆ ಸೆಲ್ಫಿಗೆ ಮುಗಿಬಿದ್ದ ಮುಂಬೈ ಅಭಿಮಾನಿಗಳು

     

    View this post on Instagram

     

    A post shared by Aalim Hakim (@aalimhakim)

    ಇತ್ತೀಚೆಗೆ ಯಶ್ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅಭಿಮಾನಿಗಳು ಯಶ್ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದರು. ದೇಶ, ವಿದೇಶಗಳಲ್ಲಿ ಯಶ್ ಅವರಿಗೆ ಅಭಿಮಾನಿಗಳಿದ್ದಾರೆ. ಕೆಜಿಎಫ್ ಸಿನಿಮಾದಲ್ಲಿ ಯಶ್ ಉದ್ದ ಕೂದಲು ಮೂಲಕವಾಗಿ ಮಿಂಚಿದ್ದರು. ಅಭಿಮಾನಿಗಳು ಯಶ್ ಅವರ ಉದ್ದ ಗಡ್ಡ, ಕೂದಲಿನ ಸ್ಟೈಲ್ ಇಷ್ಟವಾಗಿತ್ತು. ಇದೀಗ ಕೆಜಿಎಫ್2 ಸಿನಿಮಾದಲ್ಲೂ ಯಶ್ ಅದೇ ಖಡಕ್ ಲುಕ್‍ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ ಬಿಡುಗಡೆಯಾಗಿ ತೆರೆ ಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ದನ್ನೂ ಓದಿ: ಸಖತ್ ಸ್ಟೈಲಿಶ್ ಆಗಿ ಮುಂಬೈನಲ್ಲಿ ಕಾಣಿಸಿಕೊಂಡ ಯಶ್

  • ಹೇರ್ ಕಟ್ ಎಡವಟ್ಟು-ಮಾಡೆಲ್‍ಗೆ 2ಕೋಟಿ ಪರಿಹಾರ ನೀಡುವಂತೆ ಆದೇಶ

    ಹೇರ್ ಕಟ್ ಎಡವಟ್ಟು-ಮಾಡೆಲ್‍ಗೆ 2ಕೋಟಿ ಪರಿಹಾರ ನೀಡುವಂತೆ ಆದೇಶ

    ನವದೆಹಲಿ: ಹೇರ್ ಕಟ್ ಮಾಡುವಾಗ ಎಡವಟ್ಟು ಮಾಡಿರುವುದಕ್ಕೆ ಮಾಡೆಲ್ ಗೆ 2 ಕೋಟಿ ಪರಿಹಾರ ನೀಡುವಂತೆ ಹೋಟೆಲ್ ಒಂದಕ್ಕೆ NCDRC (National Consumer Disputes Redressal Commission)ಆದೇಶ ನೀಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

    ಖ್ಯಾತ ರೂಪದರ್ಶಿಯಾಗಬೇಕು ಎಂಬ ಆಸೆಯಿಂದ ಹೇರ್ ಕಟ್ ಮಾಡಿಸಿಕೊಳ್ಳಲು ಹೋಗಿದ್ದ ಮಹಿಳೆಗೆ ತಪೊದಾ ಹೇರ್ ಕಟ್ ಮತ್ತು ಚಿಕಿತ್ಸೆ ಮಾಡಿದ್ದಕ್ಕಾಗಿ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ (NCDRC) ದೆಹಲಿ ಮೂಲದ ಸಲೂನ್ ಒಂದಕ್ಕೆ ಆದೇಶ ನೀಡಿದೆ. ಇದನ್ನೂ ಓದಿ:  ಸೆ.27ರ ಭಾರತ್ ಬಂದ್‍ಗೆ ಪಾಪ್ಯುಲರ್ ಫ್ರಂಟ್‍ನಿಂದ ಸಂಪೂರ್ಣ ಬೆಂಬಲ

    ರೂಪದರ್ಶಿ ಆಶ್ನಾ ರಾಯ್ ತಮ್ಮ ನೀಳ ಕೇಶದ ಕಾರಣದಿಂದಾಗಿ ಹಲವಾರು ಕಂಪೆನಿಗಳ ಕೇಶ ಉತ್ಪನ್ನಗಳ ಜಾಹೀರಾತುಗಳಲ್ಲಿ ರೂಪದರ್ಶಿಯಾಗಿ ಕಾಣಿಸಿಕೊಳ್ಳುತ್ತಿದ್ದರು. ಐಷಾರಾಮಿ ಹೋಟೆಲ್‍ನಲ್ಲಿ ಇರುವ ಸಲೂನ್‍ಗೆ ಅವರು ಕೇಶವಿನ್ಯಾಸಕ್ಕಾಗಿ ಭೇಟಿಕೊಟ್ಟಿದ್ದರು. ಈ ವೇಳೆ ಅವರ ಕೂದಲು ಹಾಳಾದ್ದರಿಂದ ಜಾಹೀರಾತುಗಳು ತಪ್ಪಿಹೋಗುವ ಸಂದರ್ಭ ಎದುರಾಗಿದೆ. ಹೀಗಾಗಿ 2018 ರಲ್ಲಿ ಕಂಪೆನಿಯ ವಿರುದ್ಧ  NCDRCಗೆ ಅವರು ದೂರು ನೀಡಿದ್ದರು.

    ಈ ಕುರಿತಾಗಿ ವಿಚಾರಣೆ ನಡೆಸಿದ ಎನ್‍ಸಿಡಿಆರ್  ಅಧ್ಯಕ್ಷ ಆರ್.ಕೆ ಅಗರ್‍ವಾಲ್ ಮತ್ತು ಡಾ.ಎಂ ಕಂಠೀಕರ್ ಅವರಿದ್ದ ಪೀಠ ತಪ್ಪಾದ ಹೇರ್ ಕಟ್ ನಿಂದ ರೂಪದರ್ಶಿಯಾಗಬೇಕು ಎಂಬ ಅವರ ಕನಸು ನಾಶವಾಗಿದೆ. ಇದರಿಂದ ಮಾನಸಿಕವಾಗಿ ಅವರು ನೊಂದಿದ್ದಾರೆ. ಹೀಗಾಗಿ ಪರಿಹಾರ ನೀಡುವಂತೆ ಆದೇಶಿಸಿದೆ.

  • ಸಲೂನ್‍ಗೆ ಬಂದು ಬರ್ಬರವಾಗಿ ಕೊಲೆಯಾದ ಮಾಜಿ ರೌಡಿ ಶೀಟರ್

    ಸಲೂನ್‍ಗೆ ಬಂದು ಬರ್ಬರವಾಗಿ ಕೊಲೆಯಾದ ಮಾಜಿ ರೌಡಿ ಶೀಟರ್

    ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಹಾಡಹಗಲೇ ನೆತ್ತರು ಹರಿದಿದೆ. ಕಟಿಂಗ್ ಶಾಪ್‍ಗೆ ಆಗಮಿಸಿದ್ದ ಮಾಜಿ ರೌಡಿಶೀಟರ್ ಗೆ ಚಾಕು ಇರಿದು ಕೊಲೆ ಮಾಡಿರುವ ಘಟನೆ ನಗರದ ಬಾಬಾಸಾನ್ ಗಲ್ಲಿಯಲ್ಲಿ ನಡೆದಿದೆ.

    ಕಮರಿಪೇಟೆಯ ಹಳೇ ರೌಡಿ ಶೀಟರ್ ರಮೇಶ್ ಭಾಂಡಗೆ ಚಾಕು ಇರಿದು ಕೊಲೆ ಮಾಡಲಾಗಿದೆ. ರಮೇಶ್ ಭಾಂಡಗೆ ಹಲವು ಅಕ್ರಮ ಧಂದೆಯಲ್ಲಿ ಈ ಹಿಂದೆ ಭಾಗಿಯಾಗಿದ್ದ, ಇಂದು ಮಧ್ಯಾಹ್ನ ಕಟಿಂಗ್ ಶಾಪ್ ಗೆ ಬಂದಿದ್ದ ವೇಳೆ ವ್ಯಕ್ತಿಯೊಬ್ಬ ಚಾಕು ಇರಿದು ಹತ್ಯೆಗೈದಿದ್ದಾನೆ.

    ಕೊಲೆ ಮಾಡಿದ ನಂತರ ರೌಡಿಶೀಟರ್ ಹಾಗೂ ಕೊಲೆ ಮಾಡಿದ ವ್ಯಕ್ತಿ ಘಟನಾ ಸ್ಥಳದಲ್ಲಿ ಓಡಾಡಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ರಮೇಶ್ ಬಾಂಡಗೆಗೆ ಹಾಡಹಗಲೇ ಚಾಕು ಇರಿದ ವ್ಯಕ್ತಿ ಪರಾರಿಯಾಗಿದ್ದು, ಘಟನೆಗೆ ಆಸ್ತಿ ವಿವಾದ ಕಾರಣ ಎನ್ನಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಶಹರ ಪೊಲೀಸ್ ಅಧಿಕಾರಿಗಳಿಂದ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಮುಂದುವರೆಸಿದ್ದಾರೆ.

  • ಮಂಗ್ಳೂರಿನಲ್ಲಿ ಸುರಕ್ಷತಾ ಕ್ರಮದೊಂದಿಗೆ ಸಲೂನ್, ಬ್ಯೂಟಿ ಪಾರ್ಲರ್ ಓಪನ್

    ಮಂಗ್ಳೂರಿನಲ್ಲಿ ಸುರಕ್ಷತಾ ಕ್ರಮದೊಂದಿಗೆ ಸಲೂನ್, ಬ್ಯೂಟಿ ಪಾರ್ಲರ್ ಓಪನ್

    ಮಂಗಳೂರು: ಹಲವು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಮಂಗಳೂರಿನಲ್ಲಿ ಇಂದಿನಿಂದ ಸಲೂನ್, ಬ್ಯೂಟಿ ಪಾರ್ಲರ್‍ಗಳು ಕಾರ್ಯ ಆರಂಭಿಸಿವೆ.

    ಆರೋಗ್ಯ ಇಲಾಖೆ ನಿರ್ದೇಶನದಂತೆ ಹಲವು ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಮಂಗಳೂರಿನ ಬಳ್ಳಾಲ್ ಬಾಗ್‍ನ ಜನತಾ ಡಿಲಕ್ಸ್ ಹೋಟೆಲ್ ಬಳಿಯ ಡಿ ನೋವಾ ಯುನಿಸೆಕ್ಸ್ ಹೇರ್ ಸ್ಟುಡಿಯೋದಲ್ಲಿನ ಸಿಬ್ಬಂದಿ ಪಿಪಿಇ ಕಿಟ್ ಮಾದರಿಯ ಗಾರ್ಡ್ ಬಳಸಿ ಕಟ್ಟಿಂಗ್, ಶೇವಿಂಗ್ ಮಾಡುತ್ತಿದ್ದಾರೆ.

    ಗ್ರಾಹಕರು ಶಾಪ್ ಒಳಗೆ ಬರುವಾದ ಇಡೀ ದೇಹಕ್ಕೆ ಸ್ಯಾನಿಟೈಜರ್ ಸ್ಪ್ರೇ ಮಾಡಲಾಗುತ್ತಿದೆ. ಹ್ಯಾಂಡ್ ಸ್ಯಾನಿಟೈಜರ್ ಬಳಕೆ ಕೂಡ ಕಡ್ಡಾಯವಾಗಿದ್ದು, ಒಳಗೆ ಹೆಚ್ಚು ಜನರು ಸೇರದಂತೆ ನೋಡಿಕೊಂಡು ಕಾರ್ಯಾನಿರ್ವಹಿಸಲಾಗುತ್ತಿದೆ. ಗ್ರಾಹಕರು ಕುಳಿತಿದ್ದ ಚೇರ್‌ಗೂ ಸಂಪೂರ್ಣ ಸ್ಯಾನಿಟೈರ್ ಸಿಂಪಡಣೆ ಮಾಡಲಾಗುತ್ತಿದೆ.

  • ಕಲಬುರಗಿಯಲ್ಲೊಂದು ಕ್ಯಾಂಡಲ್ ಹೇರ್ ಕಟ್ಟಿಂಗ್ ಸಲೂನ್

    ಕಲಬುರಗಿಯಲ್ಲೊಂದು ಕ್ಯಾಂಡಲ್ ಹೇರ್ ಕಟ್ಟಿಂಗ್ ಸಲೂನ್

    ಕಲಬುರಗಿ: ಸಾಮಾನ್ಯವಾಗಿ ಹೇರ್ ಅನ್ನು ಕತ್ತರಿಯಿಂದ ಕಟ್ಟಿಂಗ್ ಮಾಡುತ್ತಾರೆ. ಆದರೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಶಹಬಾದ್ ಪಟ್ಟಣದ ರಾಜ್ ಮೆನ್ಸ್ ಪಾರ್ಲರ್ ಆ್ಯಂಡ್ ಬ್ಯುಟಿ ಕೇರ್ ನಲ್ಲಿ ಮೇಣದ ಬತ್ತಿಯಿಂದ ಹೇರ್ ಕಟ್ಟಿಂಗ್ ಮಾಡುತ್ತಾರೆ.

    ಮಾಲೀಕ ದಶರತ್ ಕೊಟನೂರ್ ಮೇಣದ ಬತ್ತಿಯಿಂದ ಕಟ್ಟಿಂಗ್ ಮಾಡುತ್ತಾರೆ. ಇವರು 15 ವರ್ಷಗಳಿಂದ ಹೇರ್ ಕಟ್ಟಿಂಗ್ ಮಾಡುತ್ತಿದ್ದಾರೆ. ಒಂದು ದಿನ ರಾತ್ರಿ ವೇಳೆ ಕಟ್ಟಿಂಗ್ ಮಾಡುವಾಗ ಕರೆಂಟ್ ಹೋಗಿತ್ತು. ಆಗ ಕ್ಯಾಂಡಲ್ ಬೆಳಕಿನಿಂದ ಕಟ್ಟಿಂಗ್ ಮಾಡುತ್ತಿದ್ದರು. ಈ ವೇಳೆ ಕ್ಯಾಂಡಲ್ ಕಿಡಿ ಗ್ರಾಹಕನೋರ್ವನ ಮೇಲೆ ಬಿತ್ತು. ಅಲ್ಲಿಂದ ದಶರತ್ ಕ್ಯಾಂಡಲ್ ಹೇರ್ ಕಟ್ಟಿಂಗ್ ಶುರು ಮಾಡಿದ್ದಾರೆ.

    ಸುತ್ತಮುತ್ತಲಿನ ಸಾರ್ವಜನಿಕರು ಕೂಡ ಈ ಅಂಗಡಿಗೆ ಬಂದು ಕ್ಯಾಂಡಲ್‍ನಿಂದ ಕಟ್ಟಿಂಗ್ ಮಾಡಿಸಿಕೊಂಡು ಹೋಗುತ್ತಾರೆ. ಪ್ರತಿ ನಿತ್ಯ ಮೂರ್ನಾಲ್ಕು ಜನರಿಗೆ ಕ್ಯಾಂಡಲ್ ಕಟ್ಟಿಂಗ್ ಮಾಡುವುದರ ಜೊತೆಗೆ ಸಾಮಾನ್ಯ ಕಟ್ಟಿಂಗ್ ಕೂಡ ಮಾಡುತ್ತಾರೆ. ಕ್ಯಾಂಡಲ್ ಕಟ್ಟಿಂಗ್‌ಗೆ 75 ರಿಂದ 100 ರೂಪಾಯಿವರೆಗೆ ಪಡೆದರೆ, ಸಾಮಾನ್ಯ ಕಟ್ಟಿಂಗ್‌ಗೆ 50 ರಿಂದ 60 ರೂಪಾಯಿ ಪಡೆಯುತ್ತಾರೆ.

    ದಿನ ಬೆಳಗಾದರೆ ಸಾಕು ಅಕ್ಕಪಕ್ಕದ ಗ್ರಾಮಸ್ಥರು ಇವರ ಅಂಗಡಿಗೆ ಬಂದು ಕ್ಯೂನಲ್ಲಿರುತ್ತಾರೆ. ಎಷ್ಟೇ ತಡವಾದರೂ ಸಹ ಸಾರ್ವಜನಿಕರು ಕೂಡ ತಾಳ್ಮೆಯಿಂದ ಕಾಯುತ್ತಾರೆ. ಜೊತೆಗೆ ದಶರತ್ ಕೂಡ ಗ್ರಾಹಕರೊಂದಿಗೆ ಉತ್ತಮವಾದ ಬಾಂಧವ್ಯ ಇಟ್ಟುಕೊಂಡಿದ್ದಾರೆ.