Tag: SalmanKhan

  • ಫೋರ್ಬ್ಸ್ ಟಾಪ್ 100 ಭಾರತೀಯ ಸೆಲೆಬ್ರಿಟಿ – ಸಲ್ಮಾನ್, ಕೊಹ್ಲಿ, ದೀಪಿಕಾ ಮೋಡಿ- ಯಾರ ಆದಾಯ ಎಷ್ಟು ಕೋಟಿ?

    ಫೋರ್ಬ್ಸ್ ಟಾಪ್ 100 ಭಾರತೀಯ ಸೆಲೆಬ್ರಿಟಿ – ಸಲ್ಮಾನ್, ಕೊಹ್ಲಿ, ದೀಪಿಕಾ ಮೋಡಿ- ಯಾರ ಆದಾಯ ಎಷ್ಟು ಕೋಟಿ?

    ನವದೆಹಲಿ: ಟೀಂ ಇಂಡಿಯಾ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಭಾರತದ ಶ್ರೀಮಂತ ಕ್ರೀಡಾಪಟು ಸ್ಥಾನದಲ್ಲಿ ಮುಂದುವರಿದಿದ್ದಾರೆ. ಕಳೆದ ವರ್ಷದಂತೆ ಸಚಿನ್ ತೆಂಡೂಲ್ಕರ್, ಎಂಎಸ್ ಧೋನಿ ಅವರನ್ನು ಹಿಂದಿಕ್ಕಿ ಈ ವರ್ಷವೂ ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ.

    ಫೋರ್ಬ್ಸ್ ಇಂಡಿಯಾ ಬಿಡುಗಡೆ ಮಾಡಿರುವ 2018ರ ಟಾಪ್ ಸೆಲೆಬ್ರಿಟಿ ಪಟ್ಟಿಯಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ನಂ.1 ಸ್ಥಾನ ಪಡೆದಿದ್ದು, 2ನೇ ಸ್ಥಾನದಲ್ಲಿ ಕೊಹ್ಲಿ ಇದ್ದಾರೆ. 2018 ಸಾಲಿನಲ್ಲಿ ಸಲ್ಮಾನ್ ಖಾನ್ 253.25 ಕೋಟಿ ರೂ. ಆದಾಯ ಗಳಿಸಿದ್ದರೆ ಕೊಹ್ಲಿ 228.09 ಕೋಟಿ ರೂ. ಆದಾಯದೊಂದಿಗೆ 3ನೇ ಸ್ಥಾನದಿಂದ ಈ ಬಾರಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. 2017ನೇ ಸಾಲಿನಲ್ಲಿ ಕೊಹ್ಲಿ 100.72 ಕೋಟಿ ರೂ. ಗಳಿಸಿದ್ದು, ಈ ಬಾರಿ ಶೇ. 116.53 ರಷ್ಟು ಆದಾಯ ಹೆಚ್ಚಾಗಿದೆ.

    ಉಳಿದಂತೆ ಪಟ್ಟಿಯಲ್ಲಿ ಎಂಎಸ್ ಧೋನಿ 101.77 ಕೋಟಿ ರೂ. ಆದಾಯದೊಂದಿಗೆ 5ನೇ ಸ್ಥಾನದಲ್ಲಿದ್ದು, 80 ಕೋಟಿ ರೂ. ಆದಾಯದೊಂದಿಗೆ ಸಚಿನ್ ತೆಂಡೂಲ್ಕರ್ 9ನೇ ಸ್ಥಾನದಲ್ಲಿದ್ದಾರೆ. 2018 ರ ಸಾಲಿನಲ್ಲಿ ದೇಶದ ಅತಿ ಶ್ರೀಮಂತ ಕ್ರೀಡಾಪಟುಗಳ ಪೈಕಿ ಹೆಚ್ಚಿನವರು ಕ್ರಿಕೆಟಿಗರಾಗಿದ್ದು, ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

    ಫೋರ್ಬ್ಸ್ 2018 ಕ್ರೀಡಾಪಟುಗಳು:
    ವಿರಾಟ್ ಕೊಹ್ಲಿ- 228.09 ಕೋಟಿ ರೂ.
    ಎಂಎಂಸ್ ಧೋನಿ- 101.77 ಕೋಟಿ ರೂ.
    ಸಚಿನ್ ತೆಂಡೂಲ್ಕರ್- 80 ಕೋಟಿ ರೂ.

    ಪಿವಿ ಸಿಂಧೂ- 36.5 ಕೋಟಿ ರೂ.
    ರೋಹಿತ್ ಶರ್ಮಾ – 31.49 ಕೋಟಿ ರೂ.
    ಹಾರ್ದಿಕ್ ಪಾಂಡ್ಯ- 28.46 ಕೋಟಿ ರೂ

    ಆರ್ ಅಶ್ವಿನ್- 18.9 ಕೋಟಿ ರೂ.
    ಭುವನೇಶ್ವರ್ ಕುಮಾರ್ – 17.3 ಕೋಟಿ ರೂ.
    ಸುರೇಶ್ ರೈನಾ – 17.0 ಕೋಟಿ ರೂ.

    ಟಾಪ್ ಸೆಲೆಬ್ರಿಟಿ:
    ಸಲ್ಮಾನ್ ಖಾನ್ – 253.25 ಕೋಟಿ ರೂ.
    ಅಕ್ಷಯ್ ಕುಮಾರ್ – 185 ಕೋಟಿ ರೂ.
    ದೀಪಿಕಾ ಪಡುಕೋಣೆ – 112.8 ಕೋಟಿ ರೂ.

    ಅಮೀರ್ ಖಾನ್ – 97.50 ಕೋಟಿ ರೂ.
    ಅಮಿತಾಭ್ ಬಚ್ಚನ್ – 96.17 ಕೋಟಿ ರೂ.
    ರಣವೀರ್ ಸಿಂಗ್ – 84.7 ಕೋಟಿ ರೂ.
    ಅಜಯ್ ದೇವಗನ್ – 74.50 ಕೋಟಿ ರೂ.

    ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕಳೆದ ಬಾರಿ 107.50 ಕೋಟಿ ರೂ. ಆದಾಯದೊಂದಿಗೆ ಟಾಪ್ 2ನೇ ಸ್ಥಾನ ಪಡೆದಿದ್ದ ಶಾರುಖ್ ಖಾನ್ ಈ ಬಾರಿ 56 ಕೋಟಿ ರೂ. ಆದಾಯದೊಂದಿಗೆ 13ನೇ ಸ್ಥಾನ ಪಡೆದಿದ್ದು, ಟಾಪ್ 10 ಪಟ್ಟಿಯಿಂದಲೇ ಹೊರ ಬಿದ್ದಿದ್ದಾರೆ. ಕಳೆದ ವರ್ಷ ಶಾರುಖ್ ಖಾನ್ ಅವರ ಯಾವುದೇ ಹೊಸ ಚಿತ್ರ ಬಿಡುಗಡೆ ಆಗದಿರುವುದೇ ಆದಾಯ ಕಡಿಮೆ ಆಗಲು ಕಾರಣವಾಗಿದೆ.

    ವಿಶೇಷ ಎಂಬಂತೆ ನಟಿ ದೀಪಿಕಾ ಪಡುಕೋಣೆ 112.8 ಕೋಟಿ ರೂ. ಆದಾಯ ಗಳಿಸುವ ಮೂಲಕ ಟಾಪ್ 5 ಸ್ಥಾನಲ್ಲಿದ್ದಾರೆ. 45.83 ಕೋಟಿ ರೂ. ಆದಾಯದೊಂದಿಗೆ ಅನುಷ್ಕಾ ಶರ್ಮಾ 16ನೇ ಸ್ಥಾನವನ್ನು ಪಡೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೃಷ್ಣ ಮೃಗ ಬೇಟೆ ಪ್ರಕರಣ-ಸಲ್ಮಾನ್ ಗೆ ಐದು ವರ್ಷ ಜೈಲು

    ಕೃಷ್ಣ ಮೃಗ ಬೇಟೆ ಪ್ರಕರಣ-ಸಲ್ಮಾನ್ ಗೆ ಐದು ವರ್ಷ ಜೈಲು

    ನವದೆಹಲಿ: ಎರಡು ದಶಕಗಳ ಹಿಂದಿನ ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ಹತ್ತು ಸಾವಿರ ದಂಡವನ್ನು ವಿಧಿಸಿ ಜೋಧಪುರ ಸಿಜೆಎಂ ಕೋರ್ಟ್ ಶಿಕ್ಷೆ ತೀರ್ಪು ನೀಡಿದೆ.

    ಸರ್ಕಾರಿ ವಕೀಲರು ಕನಿಷ್ಠ ಆರು ವರ್ಷಗಳ ಶಿಕ್ಷೆ ನೀಡಬೇಕೆಂದು ಅಂತಾ ತಮ್ಮ ವಾದವನ್ನು ಮಂಡಿಸಿದ್ದರು. ಆದ್ರೆ ಸಲ್ಮಾನ್ ಪರ ವಕೀಲರು ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸುವಂತೆ ಮನವಿ ಮಾಡಿಕೊಂಡಿದ್ದರು. ಸದ್ಯ ನ್ಯಾಯಾಲಯದ ಶಿಕ್ಷೆಯನ್ನು ಕೆಲವು ದಿನಗಳವರೆಗೆ ಅಮಾನತಿನಲ್ಲಿಡಿ ಸಲ್ಮಾನ್ ಪರ ವಕೀಲರು ಮನವಿ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಪ್ರಕರಣದ ಇತರೆ ಆರೋಪಿಗಳಾದ ಸೈಫ್ ಅಲಿಖಾನ್, ಟಬು, ನೀಲಂ, ಸೋನಾಲಿ ಅವರನ್ನು ನಿರ್ದೋಷಿಗಳೆಂದು ಕೋರ್ಟ್ ಅದೇಶಿಸಿದೆ.

     

    ಬೇಟೆಯಾಡುವ ವೇಳೆ ಪ್ರವಾಸಿ ಗೈಡ್ ಗಳಾದ ದುಶ್ಯಂತ್ ಸಿಂಗ್ ಮತ್ತು ಸಲ್ಮಾನ್ ಸಹಾಯಕ ದಿನೇಶ್ ಗೌರೆ ಸಹ ಸಲ್ಮಾನ್ ಜೊತೆಯಲ್ಲಿದ್ದರು. ಅಂದು ಸಲ್ಮಾನ್ ಜೊತೆಯಲ್ಲಿದ್ದ ಸಹಾಯಕ ಇಲ್ಲಿಯವರೆಗೆ ಎಲ್ಲಿದ್ದಾನೆ ಎನ್ನುವುದು ಪತ್ತೆಯಾಗಿಲ್ಲ.

    ಕೃಷ್ಣಮೃಗ ಬೇಟೆ ಪ್ರಕರಣ ನಡೆದು ಬಂದ ದಾರಿ:
    * ಸೆಪ್ಟೆಂಬರ್ 26, 1998 – ಕೃಷ್ಣಮೃಗ ಬೇಟೆಯಾಡಿದ್ದ ಸಲ್ಮಾನ್
    * ಅಕ್ಟೋಬರ್ 2, 1998 – ಕೇಸ್ ದಾಖಲಿಸಿದ್ದ ಅರಣ್ಯಾಧಿಕಾರಿಗಳು
    * 7 ಜನ ಆರೋಪಿಗಳು – ಸಲ್ಮಾನ್ ಖಾನ್, ಸೈಫ್ ಅಲಿಖಾನ್, ಸೋನಾಲಿ ಬೇಂದ್ರೆ, ಟಬು, ನೀಲಂ ಕೋಠಾರಿ, ದುಶ್ಯಂತ್ ಸಿಂಗ್, ದಿನೇಶ್ ಗಾವ್ರೆ
    * 4 ಜನ ಪ್ರತ್ಯಕ್ಷದರ್ಶಿಗಳು – ಛೋಗರಾಮ್, ಮೂನಂ ಚಂದ್, ಶಿರಾರಾಮ್, ಮಂಗಿಲಾಲ್
    * ನವೆಂಬರ್ 9,2000 – ಸಿಜೆಎಂ ಕೋರ್ಟ್‍ನಿಂದ ಕೇಸ್
    * ಫೆಬ್ರವರಿ 19, 2016 – ಆರೋಪಿಗಳ ಮೇಲೆ ಚಾರ್ಜ್‍ಶೀಟ್
    * 7 ವರ್ಷಗಳ ಕಾಲ ಸುದೀರ್ಘವಾಗಿ ನಡೆದ ವಿಚಾರಣೆ
    * ಮಾರ್ಚ್ 23, 2013 – ಎಲ್ಲಾ ಆರೋಪಿಗಳ ಮೇಲೆ ಮತ್ತೆ ಹೊಸದಾಗಿ ಚಾರ್ಚ್‍ಶೀಟ್
    * ಮೇ, 23, 2013 – ವಿಚಾರಣೆ ಆರಂಭಿಸಿದ ಸಿಜೆಎಂ ಕೋರ್ಟ್, 28 ಸಾಕ್ಷಿಗಳ ಹೇಳಿಕೆ ದಾಖಲು
    * ಜನವರಿ 13, 2017 – ಪ್ರಕರಣದ ಮಾಹಿತಿ ಪೂರ್ಣ
    * ಜನವರಿ 17,2017 – ಕೋರ್ಟ್ ಮುಂದೆ ಎಲ್ಲಾ ಆರೋಪಿಗಳು ಹಾಜರು
    * ಸೆಪ್ಟೆಂಬರ್ 13, 2017 – ಪ್ರಾಸಿಕ್ಯೂಷನ್‍ನಿಂದ ಅಂತಿಮ ವಾದ
    * ಅಕ್ಟೋಬರ್ 28, 2017 – ಡಿಫೆನ್ಸ್ ಲಾಯರ್ ಅಂತಿಮ ವಾದ
    * ಮಾರ್ಚ್, 24, 2018 – ವಾದ-ಪ್ರತಿವಾದ ಪೂರ್ಣ
    * ಮಾರ್ಚ್ 28, 2018 – ಅಂತಿಮ ತೀರ್ಪು ಕಾಯ್ದಿಟ್ಟ ಸಿಜೆಎಂ ಕೋರ್ಟ್
    * ಏಪ್ರಿಲ್ 5, 2018 – ತೀರ್ಪು ಪ್ರಕಟಿಸಿದ ಕೋರ್ಟ್, ಸಲ್ಮಾನ್ ದೋಷಿ, ಇತರರ ಖುಲಾಸೆ