Tag: Salman khurshid

  • ಆರ್ಟಿಕಲ್‌-370 ರದ್ದತಿ ಬಳಿಕ ಕಾಶ್ಮೀರ ಸಮೃದ್ಧಿ ಕಂಡಿದೆ – ಕಾಂಗ್ರೆಸ್‌ ನಾಯಕ ಸಲ್ಮಾನ್ ಖುರ್ಷಿದ್

    ಆರ್ಟಿಕಲ್‌-370 ರದ್ದತಿ ಬಳಿಕ ಕಾಶ್ಮೀರ ಸಮೃದ್ಧಿ ಕಂಡಿದೆ – ಕಾಂಗ್ರೆಸ್‌ ನಾಯಕ ಸಲ್ಮಾನ್ ಖುರ್ಷಿದ್

    – ಇಂಡೋನೇಷ್ಯಾದಲ್ಲಿ ಪಾಕ್‌ ಮುಖವಾಡ ಬಯಲುಮಾಡಿದ ಭಾರತ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ (Article 370) ರದ್ದತಿಯನ್ನು ಕಾಂಗ್ರೆಸ್‌ನ ಹಿರಿಯ ನಾಯಕ ಸಲ್ಮಾನ್‌ ಖುರ್ಷಿದ್‌ (Salman Khurshid) ಸ್ವಾಗತಿಸಿದ್ದಾರೆ.

    ಪಾಕಿಸ್ತಾನ (Pakistan) ಪ್ರಚೋದಿತ ಭಯೋತ್ಪಾದನೆ ಬಗ್ಗೆ ವಾಸ್ತವಾಂಶ ತಿಳಿಸಲು ಭಾರತವು ಜೆಡಿ (U) ಸಂಸದ ಸಂಜಯ್ ಝಾ ನೇತೃತ್ವದ ಸರ್ವಪಕ್ಷ ನಿಯೋಗವನ್ನು ಇಂಡೋನೇಷ್ಯಾಗೆ (Indonesia) ಕಳುಹಿಸಿದೆ. ಇದರ ಭಾಗವಾಗಿರುವ ಖುರ್ಷಿದ್‌ ಮಾತನಾಡುವಾಗ ಆರ್ಟಿಕಲ್‌ 370 ರದ್ದತಿಯನ್ನ ಶ್ಲಾಘಿಸಿದ್ದಾರೆ.

    2019ರ ಆಗಸ್ಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ರದ್ದುಗೊಳಿಸಿದ ನಂತರ ಕಾಶ್ಮೀರ ಸಮೃದ್ಧಿಯನ್ನು ಕಂಡಿದೆ ಅಂತ ಹೇಳಿದ್ದಾರೆ. ಅಲ್ಲದೇ 370ನೇ ವಿಧಿ ರದ್ದತಿಯಿಂದ ಜಮ್ಮು ಮತ್ತು ಕಾಶ್ಮೀರ ಭಾರತದ ಉಳಿದ ಭಾಗಗಳಿಂದ ಪ್ರತ್ಯೇಕವಾದ ಪ್ರದೇಶ ಎಂಬ ಗ್ರಹಿಕೆಯನ್ನೂ ಕೊನೆಗೊಳಿಸಿದೆ ಅಂತ ಮೋದಿ ಸರ್ಕಾರದ ಸಾಧನೆಯನ್ನ ಗುಣಗಾನ ಮಾಡಿದ್ದಾರೆ. ಇದನ್ನೂ ಓದಿ: ಭಾರತದ ಬ್ರಹ್ಮೋಸ್‌ ನಮ್ಮ ಪ್ಲ್ಯಾನ್‌ಗಳನ್ನೆಲ್ಲಾ ತಲೆಕೆಳಗೆ ಮಾಡಿತು – ಸತ್ಯ ಒಪ್ಪಿಕೊಂಡ ಪಾಕ್‌ ಪ್ರಧಾನಿ

    ಕಾಶ್ಮೀರವು ದೀರ್ಘಕಾಲದ ವರೆಗೆ ಒಂದು ಪ್ರಮುಖ ಸಮಸ್ಯೆ ಎದುರಿಸುತ್ತಿತ್ತು. ಸಂವಿಧಾನದ 370ನೇ ವಿಧಿಯಿಂದಾಗಿ ಅದು ದೇಶದ ಉಳಿದ ಭಾಗಗಳಿಂದ ಪ್ರತ್ಯೇಕವಾಗಿದೆ ಎಂಬ ಭಾವನೆ ಸೃಷ್ಟಿಸಿತ್ತು. ಆದ್ರೆ 2019ರಲ್ಲಿ ಈ ವಿಧಿಯನ್ನ ರದ್ದುಪಡಿಸಲಾಯಿತು. ಈ ಮೂಲಕ ಪ್ರತ್ಯೇಕ ಎನ್ನುವ ಗ್ರಹಿಕೆಯನ್ನು ದೂರಮಾಡಲಾಗಿದೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸಿ; ಭಾರತದ ನಿಲುವು ಸ್ಪಷ್ಟಪಡಿಸಿದ ಕ್ಯಾ. ಚೌಟ ಒಳಗೊಂಡ ಸರ್ವಪಕ್ಷಗಳ ನಿಯೋಗ

    370ನೇ ವಿಧಿ ರದ್ದತಿ ಬಳಿಕ ಅಲ್ಲಿ ಚುನಾವಣೆಯೂ ನಡೆಯಿತು. ಈಗ ಜನರಿಂದ ಆಯ್ಕೆಯಾದ ಸರ್ಕಾರ ಇದೆ. ಇದನ್ನು ಸಹಿಸದ ಕಿಡಿಗೇಡಿಗಳು ಸಮೃದ್ಧಿಯನ್ನು ಹಾಳುಮಾಡಲು ಬಯಸುತ್ತಿದ್ದಾರೆ ಅಂತ ಪಾಕ್‌ ವಿರುದ್ಧ ಕಿಡಿ ಕಾರಿದ್ದಾರೆ.  ಇದನ್ನೂ ಓದಿ: ಭಯೋತ್ಪಾದನೆ ತೊಡೆದು ಹಾಕಲು ನಾವು ಸಿದ್ಧ: ಪಾಕ್‌ ವಿರುದ್ಧ ಅಮೆರಿಕದಲ್ಲಿ ಗುಡುಗಿದ ಶಶಿ ತರೂರ್‌

  • ರಾಮಮಂದಿರ ಲೋಕಾರ್ಪಣೆಗೆ ಮೋದಿಗೆ ಮಾತ್ರ ಯಾಕೆ ಆಹ್ವಾನ – ಸಲ್ಮಾನ್ ಖುರ್ಷಿದ್ ಪ್ರಶ್ನೆ

    ರಾಮಮಂದಿರ ಲೋಕಾರ್ಪಣೆಗೆ ಮೋದಿಗೆ ಮಾತ್ರ ಯಾಕೆ ಆಹ್ವಾನ – ಸಲ್ಮಾನ್ ಖುರ್ಷಿದ್ ಪ್ರಶ್ನೆ

    ನವದೆಹಲಿ: ಅಯೋಧ್ಯೆ (Ayodhya) ರಾಮ ಮಂದಿರದಲ್ಲಿ (Sri Ram Mandir) ಬಾಲ ರಾಮನ ʼಪ್ರಾಣ ಪ್ರತಿಷ್ಠಾʼ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಮಾತ್ರ ಆಹ್ವಾನ ನೀಡಿದ್ದಕ್ಕೆ ಕಾಂಗ್ರೆಸ್‌ (Congress) ವಿರೋಧ ವ್ಯಕ್ತಪಡಿಸಿದೆ.

    ಈ ಸಂಬಂಧ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್‌ ನಾಯಕ ಸಲ್ಮಾನ್ ಖುರ್ಷಿದ್ (Salman Khurshid) ಆಹ್ವಾನವು ಕೇವಲ ಒಂದು ಪಕ್ಷಕ್ಕೆ ಹೋಗುತ್ತಿದೆಯೇ? ಯಾರಿಗೆ ತಲುಪುತ್ತದೆ ಮತ್ತು ಯಾರಿಗೆ ತಲುಪುವುದಿಲ್ಲ ಎಂಬುದರ ಕುರಿತು ನಾನು ಪ್ರತಿಕ್ರಿಯಿಸಲಾರೆ. ಆದರೆ ದೇವರು ಈಗ ಒಂದು ಪಕ್ಷಕ್ಕೆ ಮಾತ್ರ ಸೀಮಿತವೇ?. ಈ ಕಾರ್ಯಕ್ರಮವನ್ನು ಕೇವಲ ಒಂದು ಪಕ್ಷದ ಕಾರ್ಯಕ್ರಮವನ್ನಾಗಿ ಮಾಡಲಾಗುತ್ತಿದೆ. ಇದು ಪಕ್ಷದ ಕಾರ್ಯಕ್ರಮವೋ ಅಥವಾ ಒಬ್ಬರಿಗೆ ಮಾತ್ರ ಸಂಬಂಧಿಸಿದ್ದೋ? ಎಲ್ಲರಿಗೂ ಕಾರ್ಯಕ್ರಮದ ಆಹ್ವಾನ ಕಳುಹಿಸಬೇಕಿತ್ತು. ಆದರೆ ಇಲ್ಲಿಯವರೆಗೆ ಯಾವುದೇ ಘೋಷಣೆ, ಪ್ರಕಟಣೆ ಬಂದಿಲ್ಲ ಎಂದು ತಿಳಿಸಿದ್ದಾರೆ.

    ರಾಮಮಂದಿರಕ್ಕೆ ಚಾಲನೆ ನೀಡುವ ದಿನ ದೇಶಾದ್ಯಂತ 5 ಲಕ್ಷ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಆರ್‌ಎಸ್‌ಎಸ್‌ (RSS) ಕಚೇರಿಗಳ ಪದಾಧಿಕಾರಿಗಳು ಈ ಕಾರ್ಯಕ್ರಮಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ಟ್ರಸ್ಟ್‌ ತಿಳಿಸಿದೆ.

    ಅಯೋಧ್ಯೆಯಲ್ಲಿರುವ ರಾಮಮಂದಿರ ಲೋಕಾರ್ಪಣೆಗೆ ಶ್ರೀರಾಮ ಜನ್ಮಭೂಮಿ ಟ್ರಸ್ಟ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಅಧಿಕೃತ ಆಹ್ವಾನ ನೀಡಿತ್ತು.

    ಈ ಬಗ್ಗೆ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿರುವ ನರೇಂದ್ರ ಮೋದಿ, ಇಂದು ನನಗೆ ಅತ್ಯಂತ ಭಾವನಾತ್ಮಕ ದಿನವಾಗಿದೆ. ಇಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಮುಖಂಡರು ನನ್ನ ನಿವಾಸಕ್ಕೆ ನನ್ನನ್ನು ಭೇಟಿಯಾಗಲು ಬಂದಿದ್ದರು. ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ಅಯೋಧ್ಯೆಗೆ ಬರುವಂತೆ ಅವರು ನನ್ನನ್ನು ಆಹ್ವಾನಿಸಿದರು. ನಾನು ತುಂಬಾ ಧನ್ಯನಾಗಿದ್ದೇವೆ. ನನ್ನ ಜೀವನದಲ್ಲಿ ಈ ಐತಿಹಾಸಿಕ ಸಂದರ್ಭಕ್ಕೆ ಸಾಕ್ಷಿಯಾಗುವುದು ನನ್ನ ಅದೃಷ್ಟ ಎಂದು ತಿಳಿಸಿದ್ದಾರೆ.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಸಲ್ಮಾನ್ ಖುರ್ಷಿದ್

    ರಾಹುಲ್ ಗಾಂಧಿಯನ್ನು ಶ್ರೀರಾಮನಿಗೆ ಹೋಲಿಸಿದ ಸಲ್ಮಾನ್ ಖುರ್ಷಿದ್

    ನವದೆಹಲಿ: ಭಾರತ್ ಜೋಡೋ ಯಾತ್ರೆಯನ್ನು (Bharat Jodo Yatra) ರಾಮಾಯಣ ಮಹಾಕಾವ್ಯಕ್ಕೆ ಹಾಗೂ ಕಾಂಗ್ರೆಸ್ (Congress) ಮುಖಂಡ ರಾಹುಲ್ ಗಾಂಧಿಯನ್ನು (Rahul Gandhi) ಶ್ರೀರಾಮನಿಗೆ ಹೋಲಿಸಬಹುದು ಎಂದು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ (Salman Khurshid) ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಉತ್ತರ ಭಾಗದಲ್ಲಿ ಚಳಿಯು ಅಧಿಕವಿದ್ದು, ಅದನ್ನು ತಾಳಲಾರದೇ ನಾವು ಜಾಕೆಟ್ ಅಥವಾ ಸ್ವೇಟರ್‌ಗಳನ್ನು ಬಳಸುತ್ತಿದ್ದೇವೆ. ಆದರೆ ರಾಹುಲ್ ಗಾಂಧಿ ಅವರು ಇಂತಹ ವಾತಾವರಣದಲ್ಲಿ ಕೇವಲ ಟೀಶರ್ಟ್ ಮೂಲಕ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ರಾಹುಲ್ ಗಾಂಧಿ ಅವರು ಅತಿಮಾನುಷ ಶಕ್ತಿಯುಳ್ಳ ವ್ಯಕ್ತಿ ಎಂಬುದು ತಿಳಿಯುತ್ತದೆ ಎಂದು ಹೇಳಿದರು.

    ರಾಮನು ತೆರಳಲು ಸಾಧ್ಯವಾಗದಿರುವ ಪ್ರದೇಶಗಳಿಗೆ ಸಹೋದರ ಭರತ ಪಾದುಕೆಗಳನ್ನು ತೆಗೆದುಕೊಂಡು ಹೋಗಿ ಸಂಚಾರ ಮಾಡಿದಂತೆ ಕಾಂಗ್ರೆಸ್ ಪಕ್ಷ ಕೂಡ ಯಾತ್ರೆ ತೆರಳದಿರುವ ಪ್ರದೇಶಗಳಿಗೆ ಹೋಗಿ ಪ್ರಚಾರ ಮಾಡಲಾಗುವುದು. ಸದ್ಯ ರಾಹುಲ್ ಗಾಂಧಿ ಅವರು ತಪಸ್ಸಿನ ಕಡೆಗೆ ಗಮನಹರಿಸಿರುವ ಸಂತ ಎಂದು ಹೊಗಳಿದರು.

    ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕೊರೊನಾ (Corona) ಮಾರ್ಗಸೂಚಿಯನ್ನು ಅನುಸರಿಸಬೇಕೆಂದು ರಾಹುಲ್ ಗಾಂಧಿಗೆ ಕೇಂದ್ರ ಆರೋಗ್ಯ ಸಚಿವಾಲಯವು ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿ, ಕೋವಿಡ್ ಬಗ್ಗೆ ಕಾಂಗ್ರೆಸ್‍ಗೆ ವಿಶೇಷ ಮಾರ್ಗಸೂಚಿ ಇರಲು ಸಾಧ್ಯವಿಲ್ಲ. ಸಾರ್ವತ್ರಿಕ ಮಾರ್ಗಸೂಚಿಗಳನ್ನು ನೀಡಿದಾಗ ಪಕ್ಷವು ನಿಯಮಗಳನ್ನು ಅನುಸರಿಸುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ ರಸ್ತೆಗೆ CM ಬೊಮ್ಮಾಯಿ ಹೆಸರು

    ಯಾವುದೇ ವೈಜ್ಞಾನಿಕ ಮಾರ್ಗಸೂಚಿಯನ್ನು ಈ ದೇಶಕ್ಕೆ ಅನ್ವಯಿಸಿದರೆ, ಅದು ನಮಗೂ ಅನ್ವಯಿಸುತ್ತದೆ. ಆದರೆ ಕೊರೊನಾ ಕಾಂಗ್ರೆಸ್‍ಗಷ್ಟೇ ಬರುತ್ತದೆ, ಬಿಜೆಪಿಗೆ ಬರುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಯಾರಾದರೂ ಮಾರ್ಗಸೂಚಿಯನ್ನು ಅನುಸರಿಸಿದರೆ, ನಾವು ಅನುಸರಿಸುತ್ತೇವೆ. ಆದರೆ ಇಂದು ಯಾವುದೇ ಮಾರ್ಗಸೂಚಿಯೂ ಅಧಿಕೃತವಾಗಿ ಪ್ರಕಟವಾಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಯಾವುದೇ ಕಠಿಣ ಸಂದರ್ಭ ಎದುರಾದರೂ ಆರೋಗ್ಯ ಇಲಾಖೆ ಸನ್ನದ್ಧ: ಸುಧಾಕರ್

    Live Tv
    [brid partner=56869869 player=32851 video=960834 autoplay=true]

  • ಐಸಿಸ್ ಉಗ್ರ ಸಂಘಟನೆಗೆ ಹಿಂದುತ್ವ ಹೋಲಿಕೆ – ವಿವಾದಕ್ಕೆ ಸಿಲುಕಿದ ಖುರ್ಷಿದ್ ಪುಸ್ತಕ

    ಐಸಿಸ್ ಉಗ್ರ ಸಂಘಟನೆಗೆ ಹಿಂದುತ್ವ ಹೋಲಿಕೆ – ವಿವಾದಕ್ಕೆ ಸಿಲುಕಿದ ಖುರ್ಷಿದ್ ಪುಸ್ತಕ

    ನವದೆಹಲಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅವರು ತಮ್ಮ ಅಯೋಧ್ಯ ಪುಸ್ತಕದ ಮೂಲಕ ವಿವಾದಕ್ಕೆ ಗುರಿಯಾಗಿದ್ದಾರೆ.

    ಖುರ್ಷಿದ್ ಅವರ ‘Sunrise Over Ayodhya: Nationhood in Our Times’ ಪುಸ್ತಕದಲ್ಲಿ ಹಿಂದುತ್ವವನ್ನು ಅಪಮಾನಿಸಿದ್ದಾರೆ. ಹಿಂದುತ್ವವನ್ನು ಇಸ್ಲಾಮಿಕ್ ಉಗ್ರ ಸಂಘಟನೆ ಐಸಿಸ್‍ಗೆ ಹೋಲಿಸಿರುವುದು ಸರಿಯಲ್ಲ ಎಂದು ಖುರ್ಷಿದ್ ವಿರುದ್ಧ ದೆಹಲಿಯ ವಕೀಲರೊಬ್ಬರು ದೂರು ದಾಖಲಿಸಿದ್ದಾರೆ.

    ಮುಂದಿನ ವರ್ಷ ಐದು ರಾಜ್ಯಗಳಿಗೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ “ಕೋಮುವಾದ ರಾಜಕೀಯ” ಮಾಡುತ್ತಿದೆ. ಮುಸಲ್ಮಾನ ಸಮುದಾಯದವರನ್ನು ಓಲೈಸಿ ಮತಗಳಿಸಲು ಈ ರೀತಿ ಮಾಡುತ್ತಿದೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ. ಇದನ್ನೂ ಓದಿ: ಬಿಟ್ ಕಾಯಿನ್ ಎಂದರೇನು? ನಮ್ಮಂತವರಿಗೆ ಸಿದ್ದರಾಮಯ್ಯನವರು ವಿವರಿಸಲಿ: ಪ್ರತಾಪ್ ಸಿಂಹ

    ಹಿಂದೂ ಧರ್ಮವನ್ನು ಅವಹೇಳನ ಮಾಡಿರುವ ಸಲ್ಮಾನ್ ಖುರ್ಷಿದ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ವಜಾಗೊಳಿಸಬೇಕು. ಸೋನಿಯಾ ಗಾಂಧಿ ಅವರು ಹಿಂದೂಗಳನ್ನು ಗೌರವಿಸುವುದಾದರೆ ತಮ್ಮ ಪಕ್ಷದ ನಾಯಕನ ಹೇಳಿಕೆಗೆ ಪ್ರತಿಕ್ರಿಯೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

    ಪುಸ್ತಕದಲ್ಲಿ ಏನಿದೆ?
    ಪುಸ್ತಕದಲ್ಲಿನ ದಿ ಸ್ಯಾಫ್ರಾನ್ ಸ್ಕೆ(ಉತ್ತುಂಗದತ್ತ ಕೇಸರಿ) ಎಂಬ ಅಧ್ಯಾಯದ 113ನೇ ಪುಟದಲ್ಲಿ ಒಂದು ಕಾಲದಲ್ಲಿ ಸನಾತನ ಧರ್ಮ ಮತ್ತು ಸಾಂಪ್ರದಾಯಿಕ ಹಿಂದು ಧರ್ಮವು ಋಷಿ-ಮುನಿಗಳಿಂದ ಪ್ರಸಿದ್ಧವಾಗಿತ್ತು. ಆದರೆ ಈಗ ಸನಾತನ ಧರ್ಮ, ಋಷಿಗಳು ಮತ್ತು ಸಂತರು ತಿಳಿಸಿರುವ ಶಾಸ್ತ್ರೀಯ ಹಿಂದೂ ಧರ್ಮವನ್ನು ಮರೆಮಾಚಲಾಗಿದೆ. ಪ್ರಸ್ತುತ ಹಿಂದುತ್ವವನ್ನು ಬಲವಂತವಾಗಿ ಹೇರಲಾಗುತ್ತಿದೆ. ಐಸಿಸ್, ಬೋಕೋ ಹರಾಂ ಉಗ್ರ ಸಂಘಟನೆ ಮಾದರಿಯಂತೆಯೇ ಹಿಂದುತ್ವವನ್ನು ಬಿತ್ತಲಾಗುತ್ತಿದೆ. ಇದು ಈಗಿನ ರಾಜಕೀಯ ಪ್ರವೃತ್ತಿಯಾಗಿದೆ ಎಂದು ಖುರ್ಷಿದ್ ಅವರು ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಅಸ್ವಸ್ಥ ಯುವಕನನ್ನು ಹೆಗಲ ಮೇಲೆ ಹೊತ್ತು ನಡೆದ ಮಹಿಳಾ ಇನ್ಸ್‌ಪೆಕ್ಟರ್‌!

    ಅಯೋಧ್ಯೆ ರಾಮ ಜನ್ಮಭೂಮಿ ವಿವಾದ ಕುರಿತು ಸುಪ್ರಿಂ ಕೋರ್ಟ್ ಯಾವ ಆಧಾರದಲ್ಲಿ ಯಾಕೆ ಮತ್ತು ಹೇಗೆ ಈ ತೀರ್ಪು ನೀಡಿದೆ ಎಂಬುದನ್ನು ಯಾರೂ ನೋಡಿಲ್ಲ. ಆದರೆ ಹಲವರು ತಮಗೆ ಬೇಕಾದಂತೆ ತೀರ್ಪಿನ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂಥವರಿಗೆ ಸುಪ್ರಿಂ ಕೋರ್ಟಿನ ತೀರ್ಪು ಮನದಟ್ಟು ಮಾಡುವುದು ನನ್ನ ಜವಾಬ್ದಾರಿ ಎಂದು ಖುರ್ಷಿದ್ ಹೇಳಿದ್ದಾರೆ

    ಖುರ್ಷಿದ್ ಅವರ ಪುಸ್ತಕದ ವಿರುದ್ಧ ಬಿಜೆಪಿ ನಾಯಕರು ಹರಿಹಾಯ್ದಿದ್ದಾರೆ. ಮುಸ್ಲಿಂ ಸಮುದಾಯದ ಮತ ಗಳಿಸಲು ಕಾಂಗ್ರೆಸ್ ಈ ರೀತಿಯ ತಂತ್ರ ರೂಪಿಸಿದೆ ಎಂದು ಆರೋಪಿಸಿದ್ದಾರೆ. ಕೂಡಲೇ ಖುರ್ಷಿದ್ ಅವರನ್ನು ಕಾಂಗ್ರೆಸ್ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

  • ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಉತ್ತರ ಪ್ರದೇಶ ಚುನಾವಣೆ: ಸಲ್ಮಾನ್ ಖುರ್ಷಿದ್

    ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಉತ್ತರ ಪ್ರದೇಶ ಚುನಾವಣೆ: ಸಲ್ಮಾನ್ ಖುರ್ಷಿದ್

    ಲಕ್ನೋ: ಕಾಂಗ್ರೆಸ್ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಮತ್ತು ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯು ಪ್ರಿಯಾಂಕಾ ಗಾಂಧಿಯವರ ನೇತೃತ್ವದಲ್ಲಿ ನಡೆಯಲಿದೆ ಎಂದು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

    ಕಾಂಗ್ರೆಸ್ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಇನ್ನೂ ನಿರ್ಧರಿಸಿಲ್ಲ. ಆದರೆ ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಕಾಂಗ್ರೆಸ್ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ನಾವು ದೃಢ ನಂಬಿಕೆಯಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ. ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ತಿಳಿಯಲು ಪಕ್ಷ ಕಾರ್ಯಕರ್ತರು ಪ್ರತಿ ಕ್ಷೇತ್ರಕ್ಕೂ ಭೇಟಿ ನೀಡುತ್ತಾರೆ. ಇದನ್ನೂ ಓದಿ: ಇಂದಿನಿಂದ ಮಳೆಗಾಲದ ಅಧಿವೇಶನ ಆರಂಭ- ಕಾಂಗ್ರೆಸ್, ಬಿಜೆಪಿ ಮಧ್ಯೆ ಗದ್ದುಗೆ ಗುದ್ದಾಟ

    ಈಗಾಗಲೆ ಆಗ್ರಾಗೆ ಭೇಟಿ ನೀಡುತ್ತಿರುವವರು ಜನರ ಸಮಸ್ಯೆಗಳ ಕುರಿತಂತೆ ಧ್ವನಿ ಎತ್ತಲಿದ್ದಾರೆ. ಅಯೋಧ್ಯೆ, ಜಾನ್ಸಿ, ಗೋರಖ್‍ಪುರ ಇತ್ಯಾದಿಗಳಿಗೆ ಭೇಟಿ ನೀಡಿದ್ದೇವೆ ಮತ್ತು ಆಗ್ರಾದ ತೋರಾ ಹಳ್ಳಿಯ ಸ್ಥಳೀಯರೊಂದಿಗೆ ಸಂವಾದ ನಡೆಸಿದ್ದೇವೆ. ಅಲ್ಲಿನ ಜನರು, ವಿಧವೆಯರು ಮತ್ತು ವೃದ್ಧರು ಪಿಂಚಣಿ ಹಣ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತಂತೆ ದೂರು ನೀಡಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಘ್ಘಾನಿಸ್ತಾನದಲ್ಲಿ ವಿದ್ಯಾರ್ಥಿನಿಯರು ಪ್ರತ್ಯೇಕವಾಗಿದ್ದರೆ ಮಾತ್ರ ಶಿಕ್ಷಣ

  • ಕಾಂಗ್ರೆಸ್ ದೊಡ್ಡ ಸಮಸ್ಯೆ ರಾಹುಲ್ ಗಾಂಧಿ ಪಲಾಯನ, ಸೋನಿಯಾ ನಿರ್ಲಕ್ಷ್ಯ- ಸಲ್ಮಾನ್ ಖುರ್ಷಿದ್

    ಕಾಂಗ್ರೆಸ್ ದೊಡ್ಡ ಸಮಸ್ಯೆ ರಾಹುಲ್ ಗಾಂಧಿ ಪಲಾಯನ, ಸೋನಿಯಾ ನಿರ್ಲಕ್ಷ್ಯ- ಸಲ್ಮಾನ್ ಖುರ್ಷಿದ್

    ನವದೆಹಲಿ: ಕಾಂಗ್ರೆಸ್‍ನ ಬಹುದೊಡ್ಡ ಸಮಸ್ಯೆ ಪಕ್ಷದ ನಾಯಕ ರಾಹುಲ್ ಗಾಂಧಿ ಪಲಾಯನ ಮಾಡುತ್ತಿರುವುದು. ಅಲ್ಲದೆ, ಸೋನಿಯಾ ಗಾಂಧಿಯವರು ಪಕ್ಷದ ಅಧ್ಯಕ್ಷರ ಆಯ್ಕೆಯಲ್ಲಿ ಹಾಗೂ ಪಕ್ಷದ ಕಾರ್ಯಚಟುವಟಿಕೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವುದು ಎಂದು ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಶಿದ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ನಾವು ಯಾಕೆ ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೇವೆ ಎಂಬುದನ್ನು ಚರ್ಚಿಸಲು ಸಹ ಯಾರೂ ಒಟ್ಟಿಗೆ ಸೇರಿಲ್ಲ. ನಮ್ಮ ನಾಯಕರು ಪಲಾಯನ ಮಾಡಿರುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಅಲ್ಲದೆ ಈ ವರೆಗೆ ಪಕ್ಷದ ಅಧ್ಯಕ್ಷರನ್ನು ನೇಮಿಸಿಲ್ಲ, ಬಹುಶಃ ಅಕ್ಟೋಬರ್‍ನಲ್ಲಿ ನಡೆಯುತ್ತಿರುವ ಕೆಲವು ರಾಜ್ಯಗಳ ಚುನಾವಣೆ ನಂತರ ಆಯ್ಕೆ ಮಾಡುತ್ತಾರೋ ಗೊತ್ತಿಲ್ಲ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಖುರ್ಶಿದ್  ಅಭಿಪ್ರಾಯ ವ್ಯಕ್ತಪಡಿಸಿದರು.

    ಸೋನಿಯಾಗಾಂಧಿಯವರು ಈ ನಿಟ್ಟಿನಲ್ಲಿ ಹೆಜ್ಜೆ ಹಾಕಿದರೂ ಸಹ ನಂತರ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಸೋತಿರುವ ಕುರಿತು ನಾವು ವಿಸ್ತೃತ ಚರ್ಚೆ ನಡೆಸಬೇಕಿತ್ತು. ಆದರೆ ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನ ಮಾಡಿದರು ಎಂದು ಖುರ್ಶಿದ್ ಅಸಮಾಧಾನ ವ್ಯಕ್ತಪಡಿಸಿದರು.

    ಸಂದರ್ಶನದಲ್ಲಿ ಕಾಂಗ್ರೆಸ್ ಸಮಸ್ಯೆಗಳ ಕುರಿತು ಮಾತನಾಡುವ ಮೂಲಕ ಖುರ್ಶಿದ್ ಅವರು ಅತ್ಯಂತ ಹಳೇಯ ಪಕ್ಷಕ್ಕೆ ಎದುರಾಗಿರುವ ಅಸ್ತಿತ್ವದ ಕುರಿತ ಬಿಕ್ಕಟ್ಟಿನ ಬಗ್ಗೆ ಇರುವ ಆತಂಕವನ್ನು ಇನ್ನೂ ದ್ವಿಗುಣಗೊಳಿಸಿದ್ದಾರೆ.

    ನಮ್ಮ ಪಕ್ಷ ಇಂದು ಯಾವ ಮಟ್ಟದಲ್ಲಿದೆ ಎಂಬುದನ್ನು ನೆನೆದರೆ ತುಂಬಾ ನೋವಾಗುತ್ತದೆ, ಅಷ್ಟೇ ಕಾಳಜಿಯೂ ಇದೆ. ಏನೇ ಆಗಲಿ ನಾವು ಪಕ್ಷವನ್ನು ಬಿಟ್ಟು ಹೋಗುವುದಿಲ್ಲ. ಕೆಲವರು ಪಕ್ಷದಿಂದ ಎಲ್ಲವನ್ನೂ ಪಡೆದು ಇದೀಗ ಬೇರೆ ಪಕ್ಷಗಳಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪಕ್ಷಾಂತರವಾಗುತ್ತಿದ್ದಾರೆ ಎಂದು ಹರಿಹಾಯ್ದರು.

    ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡದಂತೆ ರಾಹುಲ್ ಗಾಂಧಿ ಅವರಿಗೆ ಎಷ್ಟೇ ಕೇಳಿಕೊಂಡರೂ ಅವರು ಕೇಳಲಿಲ್ಲ. ಅವರೇನಾದರೂ ಅಧ್ಯಕ್ಷರಾಗಿ ಮುಂದುವರಿದಿದ್ದರೆ ಚುನಾವಣೆಯ ನಂತರದ ಮರಣೋತ್ತರ ಪರೀಕ್ಷೆಯನ್ನು ಸರಿಯಾಗಿ ನಡೆಸಬಹುದಿತ್ತು. ರಾಹುಲ್ ಗಾಂಧಿ ಈಗ ಪಕ್ಷದ ಅಧ್ಯಕ್ಷರಲ್ಲ. ಆದರೆ ಈಗಲೂ ಅವರು ನಮ್ಮ ಪಕ್ಷದ ಪ್ರಮುಖ ನಾಯಕರು. ಒಂದು ದೊಡ್ಡ ಸೋಲಿನಿಂದ ಪಕ್ಷದ ನಾಯಕನ ಮೇಲಿನ ವಿಶ್ವಾಸ ಕಳೆದುಕೊಳ್ಳಲು ಕಾರಣವಾದ ಪ್ರಕರಣ ಇತಿಹಾಸದಲ್ಲಿ ಇದೇ ಮೊದಲು. ಅವರು ಪಕ್ಷದಲ್ಲಿ ಉಳಿದುಕೊಂಡಿದ್ದರೆ, ಚರ್ಚಿಸಿ ನಮ್ಮ ಸೋಲಿನ ಕಾರಣಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದೆವು. ಮುಂಬರುವ ಚುನಾವಣೆಗಳನ್ನು ಎದುರಿಸಲು ಸನ್ನದ್ಧರಾಗುತ್ತಿದ್ದೆವು. ಇದೀಗ ಸೋನಿಯಾ ಗಾಂಧಿ ಅವರು ಶಾಶ್ವತ ಅಧ್ಯಕ್ಷರಾಗಿ ಪಕ್ಷವನ್ನು ಮುನ್ನಡೆಸಬೇಕು ಎಂದು ಒತ್ತಿ ಹೇಳಿದರು.

    ನಮಗೆ ಬಹಳ ಕಡಿಮೆ ಸಮಯವಿದೆ. ಅಲ್ಲದೆ, ಪಕ್ಷವು ಕೆಲವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ನಮ್ಮ ನಾಯಕ ರಾಹುಲ್ ಗಾಂಧಿ ನಮ್ಮನ್ನು ತೊರೆದಿದ್ದರಿಂದ ನಿರ್ಧಾರ ಕೈಗೊಳ್ಳಲು ವಿಳಂಬವಾಗುತ್ತಿದೆ. ಅಧ್ಯಕ್ಷ ಸ್ಥಾನದಲ್ಲಿ ಅವರು ಇರಬೇಕೆಂಬುದು ನಮ್ಮ ಬಯಕೆಯಾಗಿದೆ ಎಂದು ತಿಳಿಸಿದರು.

    66 ವರ್ಷದ ಖುರ್ಶಿದ್ ಅವರು ಉತ್ತರ ಪ್ರದೇಶದ ಕಾಂಗ್ರೆಸ್ ಹಿರಿಯ ನಾಯಕರಾಗಿದ್ದು, ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಯುಪಿಯ 80 ಸ್ಥಾನಗಳ ಪೈಕಿ ಕಾಂಗ್ರೆಸ್ ಕೇವಲ ಒಂದು ಸ್ಥಾನದಲ್ಲಿ ಮಾತ್ರ ಜಯಗಳಿಸಿತ್ತು. ರಾಹುಲ್ ಗಾಂಧಿ ಸಹ ಅಮೆಥಿ ಕ್ಷೇತ್ರದಲ್ಲಿ ಸೋಲುಂಡಿದ್ದರು. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಪ್ರಚಾರ ನಡೆಸಿತ್ತು. ಆದರೂ ಸಹ ಕೇವಲ 52 ಸ್ಥಾನಗಳಲ್ಲಿ ಮಾತ್ರ ಜಯಗಳಿಸಲು ಸಾಧ್ಯವಾಗಿತ್ತು. ಬಿಜೆಪಿ 303 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿತ್ತು.

  • ಅಭಿನಂದನ್ ಪೈಲಟ್ ಆಗಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ – ಸಲ್ಮಾನ್ ಖುರ್ಷಿದ್

    ಅಭಿನಂದನ್ ಪೈಲಟ್ ಆಗಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ – ಸಲ್ಮಾನ್ ಖುರ್ಷಿದ್

    ನವದೆಹಲಿ: ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದಿಂದ ಭಾರತಕ್ಕೆ ಮರಳಿ ಹೆಮ್ಮೆ ತಂದಿದ್ದಾರೆ. ಈ ನಡುವೆ ಕಾಂಗ್ರೆಸ್ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಅಭಿನಂದನ್ ಅವರು ಪೈಲಟ್ ಆಗಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ ಎಂದು ಹೇಳಿದ್ದಾರೆ.

    “ಶತ್ರುಗಳ ಆಕ್ರಮಣವನ್ನು ತಡೆದ ಭಾರತದ ಅಭಿನಂದನ್ ವರ್ಧಮಾನ್‍ಗೆ ಧನ್ಯವಾದಗಳು. ನಿಮ್ಮನ್ನು ಬರ ಮಾಡಿಕೊಳ್ಳಲು ಹೆಮ್ಮೆಯಾಗುತ್ತದೆ. ಅಭಿನಂದನ್ ಅವರು 2004ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಯುದ್ಧ ವಿಮಾನಗಳನ್ನು ಚಲಾಯಿಸುವ ಫೈಟರ್ ಪೈಲಟ್ ಆಗಿ ಸೇವೆಗೆ ಸೇರಿದ್ದರು” ಎಂದು ಟ್ವೀಟ್ ಮಾಡಿದ್ದಾರೆ.

    ಸರ್ಜಿಕಲ್ ಸ್ಟ್ರೈಕ್ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರತ ಪಾಕಿಸ್ತಾನ ವಿಚಾರವೇ ಹೆಚ್ಚು ಚರ್ಚೆಯಾಗುತ್ತಿದೆ. ಈ ಮಧ್ಯೆ ಖುರ್ಷಿದ್ ಅವರು ಈ ರೀತಿಯಾಗಿ ಟ್ವೀಟ್ ಮಾಡಿ ನೆಟ್ಟಿಗರಿಗೆ ಆಹಾರವಾಗಿದ್ದಾರೆ.

    ಈ ಟ್ವೀಟ್‍ಗೆ ಸದ್ಯ ಜನರು ಸಲ್ಮಾನ್ ಖುರ್ಷಿದ್ ಅವರನ್ನ ಟ್ರೋಲ್ ಮಾಡುತ್ತಿದ್ದಾರೆ. ಅಲ್ಲದೆ ಯುಪಿಎ ಅವಧಿಯಲ್ಲಿ ಆಗಿರುವ ಹಗರಣಗಳ ಕುರಿತು ಪ್ರಶ್ನಿಸಿದ್ದಾರೆ. ಒಂದೆಡೆ ಹಳೆಯ ಕಾಲದ ಮಿಗ್ 21 ವಿಮಾನವನ್ನು ಇಟ್ಟುಕೊಂಡಿದ್ದಕ್ಕೂ ಯುಪಿಎ ಕ್ರೆಡಿಟ್ ತೆಗೆದುಕೊಳ್ಳಬೇಕು ಎಂದು ಹಲವರು ಟ್ವೀಟ್ ಮಾಡಿದರೆ, ಇನ್ನೊದೆಡೆ ಇದು 2019ರ ಅತಿ ಕೆಟ್ಟ ಟ್ವೀಟ್ ಇದು ಎಂದು ಎಂದು ಹೇಳಿದ್ದಾರೆ.

    ಅಭಿನಂದನ್ ಹುಟ್ಟಿದಾಗಲೂ ಯುಪಿಎ ಸರ್ಕಾರವಿತ್ತು ಹಾಗಂತ ಎಲ್ಲ ಕ್ರೆಡಿಟ್ ಇಂದಿರಾ ಗಾಂಧಿಗೆ ಹೋಗುತ್ತಾ ಅಂತ ರೀ-ಟ್ವೀಟ್ ಮಾಡಿ ಟಾಂಗ್ ಕೊಟ್ಟು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv