Tag: salman khan

  • ಬಿಡುಗಡೆಗೆ ಮುನ್ನವೇ ಬಾಹುಬಲಿ-2 ದಾಖಲೆ ಮುರಿದ ಟ್ಯೂಬ್‍ಲೈಟ್!

    ಬಿಡುಗಡೆಗೆ ಮುನ್ನವೇ ಬಾಹುಬಲಿ-2 ದಾಖಲೆ ಮುರಿದ ಟ್ಯೂಬ್‍ಲೈಟ್!

    ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸ್ಕ್ರೀನ್ ಗಳಲ್ಲಿ ತೆರೆ ಕಾಣುವ ಮೂಲಕ ರಾಜಮೌಳಿ ನಿರ್ದೇಶನದ ಬಾಹುಬಲಿ ಹೊಸ ದಾಖಲೆ ಬರೆದಿತ್ತು. ಆದರೆ ಸಲ್ಮಾನ್ ಅಭಿನಯದ ಟ್ಯೂಬ್‍ಲೈಟ್ ಈ ದಾಖಲೆಯನ್ನು ಬ್ರೇಕ್ ಮಾಡಿದೆ.

    ಏಪ್ರಿಲ್ 28ಕ್ಕೆ ರಿಲೀಸ್ ಆಗಿದ್ದ ಬಾಹುಬಲಿ-2 ಒಟ್ಟು 9 ಸಾವಿರಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿತ್ತು. ಆದರೆ ಟ್ಯೂಬ್‍ಲೈಟ್ 10 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಸಿನಿ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಾಲ ಟ್ವೀಟ್ ಮಾಡಿದ್ದಾರೆ.

    ಅಂತಾರಷ್ಟ್ರೀಯ ಮಾರುಕಟ್ಟೆಯಲ್ಲಿ 50ಕ್ಕೂ ಹೆಚ್ಚು ದೇಶಗಳಲ್ಲಿ ಟ್ಯೂಬ್‍ಲೈಟ್ ಬಿಡುಗಡೆಯಾದರೆ, ಅಮೆರಿಕದಲ್ಲಿ 330ಕ್ಕೂ ಅಧಿಕ ಸ್ಕ್ರೀನ್, ಇಂಗ್ಲೆಂಡಿನಲ್ಲಿ 205ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಲಿದೆ ಎಂದು ರಮೇಶ್ ಬಾಲ ತಿಳಿಸಿದ್ದಾರೆ.

    1962ರ ಭಾರತ ಚೀನಾ ಯುದ್ಧದ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಲಕ್ಷ್ಮಣ್ ಸಿಂಗ್ ಪಾತ್ರವನ್ನು ನಿರ್ವಹಿಸಿದ್ದಾರೆ. ಕಬೀರ್ ಖಾನ್ ನಿರ್ದೇಶನದ ಸಲ್ಮಾನ್ ಖಾನ್ ನಿರ್ಮಾಣದ ಟ್ಯೂಬ್‍ಲೈಟ್ ಜೂನ್ 23ರಂದು ಬಿಡುಗಡೆಯಾಗಲಿದೆ.

     

    https://twitter.com/rameshlaus/status/875539191270064128

  • ಹೊಟ್ಟೆ ಆಪರೇಷನ್‍ಗೆ ಒಳಗಾದ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್!

    ಹೊಟ್ಟೆ ಆಪರೇಷನ್‍ಗೆ ಒಳಗಾದ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್!

    ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಕಾಮಿಡಿ ಸ್ಟಾರ್ ಸುನಿಲ್ ಗ್ರೋವರ್‍ನಿಂದ ಹೊಟ್ಟೆ ಆಪರೇಷನ್ ಮಾಡಿಸಿಕೊಂಡಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಟ್ಯೂಬ್‍ಲೈಟ್ ಸಿನಿಮಾದ ಪ್ರಚಾರದ ವೇಳೆ ಸಲ್ಮಾನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ.

    ಸಲ್ಮಾನ್ ಖಾನ್ ತಮ್ಮ ಸಿನಿಮಾದ ಪ್ರಮೋಶನ್‍ಗಾಗಿ ಖಾಸಗಿ ಚಾನೆಲ್‍ನ ಕಾಮಿಡಿ ಶೋ ಒಂದರಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಕಾಮಿಡಿ ಸ್ಟಾರ್ ಸುನಿಲ್ ಗ್ರೋವರ್ ಡಾಕ್ಟರ್ ವೇಷದಲ್ಲಿ ಬಂದು ಸಲ್ಲುಗೆ ಆಪರೇಷನ್ ಮಾಡುವ ಮೂಲಕ ಎಲ್ಲರನ್ನು ನಗಿಸಿದ್ದಾರೆ.

    ಸೋನಿ ಚಾನೆಲ್ ಸಲ್ಮಾನ್ ಖಾನ್ ಅವರ ಟ್ಯೂಬ್‍ಲೈಟ್ ಸಿನಿಮಾದ ಪ್ರಚಾರಕ್ಕಾಗಿ `ಸೂಪರ್ ನೈಟ್ ವಿಥ್ ಟ್ಯೂಬ್‍ಲೈಟ್’ ಎಂಬ ವಿಶೇಷ ಕಾರ್ಯಕ್ರಮ ಏರ್ಪಡಿಸಿದೆ.

    ಸುನಿಲ್ ಗ್ರೋವರ್ ಇದಕ್ಕೂ ಮೊದಲು ಸೋನಿ ಚಾನೆಲ್ `ದಿ ಕಪಿಲ್ ಶರ್ಮಾ ಶೋ’ದಲ್ಲಿ ಡಾಕ್ಟರ್ ಮಶೂರ್ ಗುಲಾಟಿ ಹಾಗು ರಿಂಕು ಬಾಬಿ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರನ್ನು ನಗಿಸುತ್ತಿದ್ದರು. ಕೆಲವು ದಿನಗಳ ಹಿಂದೆ ಕಪಿಲ್ ಶರ್ಮಾ ಮತ್ತು ಸುನಿಲ್ ಗ್ರೋವರ್ ಇಬ್ಬರ ನಡುವೆ ಜಗಳ ನಡೆದಿದ್ದು, ಸುನಿಲ್ ಕಾರ್ಯಕ್ರಮದಿಂದ ಹೊರ ಉಳಿದಿದ್ದಾರೆ.

    ಟ್ಯೂಬ್‍ಲೈಟ್ ಸಿನಿಮಾ ಇದೇ ತಿಂಗಳು ರಂಜಾನ್ ಹಬ್ಬದಂದು ತೆರೆಕಾಣಲಿದೆ. ಸಲ್ಮಾನ್ ಖಾನ್, ಸೋಹೆಲ್ ಖಾನ್ ಮತ್ತು ಚೀನಾ ನಟಿ ಝು ಝು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    https://www.youtube.com/watch?v=0cwrhTjjZJA

    https://www.youtube.com/watch?v=R21CzoBbmPE

    https://www.youtube.com/watch?v=wZu9tZ6Yph4

    https://www.youtube.com/watch?v=dPDjoC5ukuY

    https://www.youtube.com/watch?v=2ouZRkjBgxM

    https://www.youtube.com/watch?v=HChLxe1Qcsw

  • 30 ಕೋಟಿ ಕೊಟ್ರೆ ಪ್ರಭಾಸ್ ಕಾಲ್‍ಶೀಟ್: ಸಲ್ಮಾನ್, ಅಮೀರ್, ಅಕ್ಷಯ್ ಕುಮಾರ್‍ಗೆ ಎಷ್ಟು?

    30 ಕೋಟಿ ಕೊಟ್ರೆ ಪ್ರಭಾಸ್ ಕಾಲ್‍ಶೀಟ್: ಸಲ್ಮಾನ್, ಅಮೀರ್, ಅಕ್ಷಯ್ ಕುಮಾರ್‍ಗೆ ಎಷ್ಟು?

    ಮುಂಬೈ: ಬಾಹುಬಲಿ ಸಿನಿಮಾದ ಬಳಿಕ ಪ್ರಭಾಸ್ ತಮ್ಮ ಸಂಭಾವನೆಯನ್ನು 30 ಕೋಟಿ ರೂ.ಗೆ ಏರಿಸಿದ್ದಾರೆ.

    2013ರಲ್ಲಿ ಬಿಡುಗಡೆಯಾದ ಮಿರ್ಚಿ ಸಿನಿಮಾಕ್ಕೆ ಪ್ರಭಾಸ್ 5 ಕೋಟಿ ರೂ. ತೆಗೆದುಕೊಂಡಿದ್ದರೆ, ಬಾಹುಬಲಿ ಚಿತ್ರಕ್ಕಾಗಿ 5 ವರ್ಷ ಮುಡುಪಿಟ್ಟ ಹಿನ್ನೆಲೆಯಲ್ಲಿ 25 ಕೋಟಿ ರೂ. ತೆಗೆದುಕೊಂಡಿದ್ದಾರೆ. ಈಗ ತನ್ನ ಮುಂದಿನ ಸಿನಿಮಾಗಳಿಗೆ 30 ಕೋಟಿ ರೂ. ಹಣವನ್ನು ಡಿಮ್ಯಾಂಡ್ ಮಾಡಿದ್ದಾರೆ ಎಂದು ಟಾಲಿವುಡ್ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.

    ಬಾಲಿವುಡ್‍ನಲ್ಲಿ ಸಲ್ಮಾನ್ ಖಾನ್ ಬಾಕ್ಸ್ ಆಫೀಸ್ ಕಿಂಗ್ ಆಗಿದ್ದು ಒಂದು ಸಿನಿಮಾಗೆ 60 ಕೋಟಿ ರೂ. ಪಡೆಯುತ್ತಿದ್ದಾರೆ. ಆದರೆ ಕೆಲ ವರ್ಷಗಳಿಂದ ಅವರ ಸಿನಿಮಾವನ್ನು ಅವರೇ ನಿರ್ಮಾಣ ಮಾಡುತ್ತಿರುವುರಿಂದ ಹೆಚ್ಚಿನ ಲಾಭವನ್ನು ಪಡೆಯುತ್ತಿದ್ದಾರೆ.

    ಅಮೀರ್ ಖಾನ್ 55 ರಿಂದ 65 ಕೋಟಿ ರೂ. ಪಡೆದರೆ, ಶಾರೂಖ್ ಖಾನ್ 40-45 ಕೋಟಿ ರೂ. ಹಣವನ್ನು ಪಡೆಯುತ್ತಿದ್ದಾರೆ.

    ಅಕ್ಷಯ್ ಕುಮಾರ್ ಪ್ರತಿವರ್ಷ 100 ಕೋಟಿ ರೂ. ಗಳಿಸುತ್ತಿದ್ದಾರೆ. ಅವರು ಒಂದೇ ಸಿನಿಮಾದಿಂದ ಇಷ್ಟೊಂದು ಸಂಭಾವನೆ ಪಡೆಯುದಿಲ್ಲ. ಪ್ರತಿ ಸಿನಿಮಾಕ್ಕೆ 35-40 ಕೋಟಿ ರೂ. ಪಡೆಯುತ್ತಿದ್ದು, ಪ್ರತಿ ವರ್ಷ 4-5 ಸಿನಿಮಾಗಳನ್ನು ಅಭಿನಯಿಸುವ ಮೂಲಕ 100 ಕೋಟಿಯ ಕ್ಲಬ್‍ಗೆ ಸೇರ್ಪಡೆಯಾಗುತ್ತಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

    ಇದನ್ನೂ ಓದಿ: ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

    ಇದನ್ನೂ ಓದಿ: ಬಾಹುಬಲಿಗೆ ಪ್ರೀತಿಯ ಸುರಿಮಳೆಗೈದ ಪ್ರತಿಯೊಬ್ಬರಿಗೂ ದೊಡ್ಡ ಅಪ್ಪುಗೆ: ಪ್ರಭಾಸ್

    ಇದನ್ನೂ ಓದಿ: ವೈರಲ್ ಆಗಿದೆ ಶಿವಗಾಮಿ, ಕಟ್ಟಪ್ಪ ನಡುವಿನ ರೊಮ್ಯಾನ್ಸ್ ವಿಡಿಯೋ!

  • ಸಲ್ಮಾನ್ ಖಾನ್ ನಟನೆಯ `ಟ್ಯೂಬ್‍ಲೈಟ್’ ಚಿತ್ರದ ಟೀಸರ್ ಬಿಡುಗಡೆ

    ಸಲ್ಮಾನ್ ಖಾನ್ ನಟನೆಯ `ಟ್ಯೂಬ್‍ಲೈಟ್’ ಚಿತ್ರದ ಟೀಸರ್ ಬಿಡುಗಡೆ

    ಮುಂಬೈ: ಬಾಲಿವುಡ್‍ನ ಬಹುನಿರೀಕ್ಷಿತ ಸಲ್ಮಾನ್ ಖಾನ್ ನಟನೆಯ `ಟ್ಯೂಬ್‍ಲೈಟ್’ ಚಿತ್ರದ ಫಸ್ಟ್ ಟೀಸರ್ ಲಾಂಚ್ ಆಗಿದೆ.

    1962ರಲ್ಲಿ ಭಾರತ-ಚೀನಾ ನಡುವೆ ನಡೆದ ಯುದ್ಧದ ಸಂದರ್ಭದ ಕಥೆ ಇದಾಗಿದ್ದು ನಿರ್ದೇಶಕ ಕಬೀರ್ ಖಾನ್ ಕಲ್ಪನೆಯಲ್ಲಿ ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ಸಲ್ಮಾನ್ ಖಾನ್ ಒಬ್ಬ ಪೆದ್ದನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಬಿಡುಗಡೆಯಾಗಿ ಕೆಲವೇ ಗಂಟೆಯಲ್ಲಿ 30ಲಕ್ಷಕ್ಕೂ ಹೆಚ್ಚಿ ಬಾರಿ ವೀಕ್ಷಣೆಯಾಗಿದೆ.

    ಸಲ್ಮಾನ್ ಖಾನ್ ಕೂಡ ಟೀಸರನ್ನ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದು, ನಿರ್ದೇಶಕ ಕರಣ್ ಜೋಹರ್, ನಟಿಯರಾದ ಅಥಿಯಾ ಶೆಟ್ಟಿ, ದಿಯಾ ಮಿರ್ಜ ಸೇರಿದಂತೆ ಹಲವು ಬಾಲಿವುಡ್ ತಾರೆಯರು ಹಾಗೂ ಸಿನಿರಸಿಕರು ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಜೂನ್ 23ಕ್ಕೆ `ಟ್ಯೂಬ್‍ಲೈಟ್’ ಚಿತ್ರ ವಿಶ್ವಾದ್ಯಂತ ಬೆಳ್ಳಿಪರದೆ ಮೇಲೆ ಬೆಳಗಲಿದೆ.

  • ಮುಗ್ದ ಮುಖದ ಸಲ್ಮಾನ್ ಖಾನ್ `ಟ್ಯೂಬ್‍ಲೈಟ್’ ಚಿತ್ರದ ಹೊಸ ಪೊಸ್ಟರ್ ರಿಲೀಸ್

    ಮುಗ್ದ ಮುಖದ ಸಲ್ಮಾನ್ ಖಾನ್ `ಟ್ಯೂಬ್‍ಲೈಟ್’ ಚಿತ್ರದ ಹೊಸ ಪೊಸ್ಟರ್ ರಿಲೀಸ್

    ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ಮುಂದಿನ ಚಿತ್ರ ಟ್ಯೂಬ್ ಲೈಟ್ ಚಿತ್ರದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದ ಪೋಸ್ಟರ್‍ನಲ್ಲಿ ಹಾಫ್ ಸ್ವೆಟರ್ ಜೊತೆ ನೀಲಿ ಬಣ್ಣದ ಚೆಕ್ಸ್ ಶರ್ಟ್ ಹಾಕಿ, ಕೊರಳಿಗೆ ಎರಡು ಶೂಗಳನ್ನು ಹಾಕಿಕೊಂಡು ನಮಸ್ತೆ ಮಾಡುವುದನ್ನು ನಾವು ಕಾಣಬಹುದು.

    ಸಲ್ಮಾನ್ ಖಾನ್ ತಮ್ಮ ಚಿತ್ರದ ಪೊಸ್ಟರ್‍ನ್ನು ತಮ್ಮ ಟ್ವೀಟ್ ಮಾಡಿದ್ದು, ಫೋಟೋ ಜೊತೆಗೆ `ಶಾಂತಿ, ಪ್ರೀತಿ, ಗೌರವ ಮತ್ತು ಬೆಳಕು ನಿಮ್ಮ ಜೀವನದಲ್ಲಿರಲಿ ಎಂದು ಟ್ಯೂಬ್‍ಲೈಟ್ ಚಿತ್ರತಂಡ ಹಾರೈಸುತ್ತದೆ’ ಎಂದು ಬರೆದಿದ್ದಾರೆ.

    ಈಗಾಗಲೇ ಟ್ಯೂಬ್‍ಲೈಟ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, 5 ಲಕ್ಷಕ್ಕೂ ಹೆಚ್ಚು ವ್ಯೂವ್ ಪಡೆದಿದೆ. ಚಿತ್ರಕ್ಕೆ ಕಬೀರ್ ಖಾನ್ ನಿರ್ದೇಶನವಿದ್ದು, ಸಲ್ಮಾನ್‍ಗೆ ಜೊತೆಯಾಗಿ ಚೈನಿಸ್ ನಟಿ ಜುಜು ಕಾಣಿಸಿಕೊಂಡಿದ್ದಾರೆ. ಏಕ್ ಥಾ ಟೈಗರ್ ಮತ್ತು ಭಜರಂಗಿ ಭಾಯಿಜಾನ್ ಚಿತ್ರಗಳನ್ನು ನೀಡಿದ್ದ ಹಿಟ್ ಜೋಡಿ ಸಲ್ಮಾನ್ ಮತ್ತು ಕಬೀರ್ ಖಾನ್ ಟ್ಯೂಬ್‍ಲೈಟ್ ಚಿತ್ರವನ್ನು ತೆರೆಗೆ ತರಲು ತಯಾರಾಗಿದೆ.

    ಟ್ಯೂಬ್‍ಲೈಟ್ ಸಿನಿಮಾ ಜೂನ್ ತಿಂಗಳಲ್ಲಿ ಈದ್ ಪ್ರಯುಕ್ತ ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಸಲ್ಮಾನ ಸಹೋದರ ಸೋಹೆಲ್ ಖಾನ್ ಮತ್ತು ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಸಹ ವಿಶೇಷ ಅತಿಥಿ ಪಾತ್ರದಲ್ಲಿ ಕಾಣಸಿಗಲಿದ್ದಾರೆ.

     

     

  • ಗೆಳತಿ ಲೂಲಿಯಾ, ಕುಟುಂಬಸ್ಥರ ಜೊತೆ ಸೋದರಳಿಯನ ಹುಟ್ಟುಹಬ್ಬ ಆಚರಿಸಿದ ಸಲ್ಮಾನ್ ಖಾನ್ -ಫೋಟೋಗಳಲ್ಲಿ ನೋಡಿ

    ಗೆಳತಿ ಲೂಲಿಯಾ, ಕುಟುಂಬಸ್ಥರ ಜೊತೆ ಸೋದರಳಿಯನ ಹುಟ್ಟುಹಬ್ಬ ಆಚರಿಸಿದ ಸಲ್ಮಾನ್ ಖಾನ್ -ಫೋಟೋಗಳಲ್ಲಿ ನೋಡಿ

    ಮಾಲ್ಡೀವ್ಸ್: ಬಾಲಿವುಡ್‍ನ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ಗೆಳತಿ ಲೂಲಿಯಾ ವಂಟೂರು ಜೊತೆ ಸೋದರಿ ಅರ್ಪಿತಾ ಮಗನ ಮೊದಲ ಹುಟ್ಟುಹಬ್ಬವನ್ನ ಸಂಭ್ರಮದಿಂದ ಆಚರಿಸಿದ್ದಾರೆ.

    ಸಲ್ಮಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಪುತ್ರ ಆಹಿಲ್‍ನ ಮೊದಲ ಹುಟ್ಟುಹಬ್ಬವನ್ನು ಖಾನ್ ಕುಟುಂಬಸ್ಥರೆಲ್ಲರೂ ಮಾಲ್ಡೀವ್ಸ್ ನಲ್ಲಿ ಸಂಭ್ರಮ ಸಡಗರದಿಂದ ಆಚರಿಸಿದ್ದಾರೆ. ಸಲ್ಮಾನ್ ಖಾನ್ ಸದ್ಯ `ಜಿಂದಾ ಹೈ ಟೈಗರ್’ ಚಿತ್ರದಲ್ಲಿ ನಟಿಸುತ್ತಿದ್ದು, ಕೆಲಸದ ಒತ್ತಡದ ನಡುವೆ ಸೋದರಳಿಯನ ಹುಟ್ಟುಹಬ್ಬದಲ್ಲಿ ಭಾಗಿಯಾಗಿ ಆಹಿಲ್‍ಗೆ ಬರ್ತಡೇ ವಿಶ್ ಮಾಡಿದ್ದಾರೆ. ಇದರ ಫೋಟೋಗಳನ್ನು ಇನ್ಸ್ ಟಾಗ್ರಾಮ್‍ನಲಿ ಹಂಚಿಕೊಳ್ಳಲಾಗಿದ್ದು, ಸಲ್ಮಾನ್ ಕುಟುಂಬಸ್ಥರೊಂದಿಗೆ ಲೂಲಿಯಾ ಕೂಡ ಇದ್ದಿದ್ದು ವಿಶೇಷವಾಗಿತ್ತು. ರೊಮಾನಿಯಾದ ಮಾಡೆಲ್, ಗಾಯಕಿ ಹಾಗೂ ನಟಿಯಾಗಿರುವ ಲೂಲಿಯಾ ಸಲ್ಮಾನ್ ಖಾನ್‍ರನ್ನ ಮದುವೆಯಾಗಲಿದ್ದಾರೆ ಎಂಬ ವದಂತಿ ವರ್ಷದ ಹಿಂದಿನಿಂದಲೂ ಇದೆ.

    ಸಲ್ಮಾನ್ ಖಾನ್ ನಟನೆಯ `ಟ್ಯೂಬ್‍ಲೈಟ್’ ಚಿತ್ರ ಜೂನ್ 25 ರಂದು ಈದ್ ವಿಶೇಷವಾಗಿ ತೆರೆಕಾಣಲಿದೆ. ಇನ್ನೂ `ಏಕ್ ಥಾ ಟೈಗರ್’ ಚಿತ್ರದ ಮುಂದುವರಿದ ಭಾಗವಾದ ಚಿತ್ರ ಡಿಸೆಂಬರ್ ತಿಂಗಳಾಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ. ಸಲ್ಮಾನ್ ಜೊತೆಯಾಗಿ ಕತ್ರಿನಾ ಕೈಫ್ ಜಿಂದಾ ಹೈ ಟೈಗರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    https://www.instagram.com/p/BSQLXllDMXN/

    https://www.instagram.com/p/BSOb1YuDL3j/

    https://www.instagram.com/p/BSQtAu5A6Fe/

     

    https://www.instagram.com/p/BSOYr0QD4eP/?taken-by=arpitakhansharma

    https://www.instagram.com/p/BSWD2mqjCPs/?taken-by=arpitakhansharma

    https://www.instagram.com/p/BSPJ2_djwEc/?taken-by=arpitakhansharma

  • `ಟೈಗರ್ ಜಿಂದಾ ಹೈ’ ಸಿನಿಮಾಗಾಗಿ ತೂಕ ಇಳಿಸಿದ ಸಲ್ಮಾನ್ ಖಾನ್

    `ಟೈಗರ್ ಜಿಂದಾ ಹೈ’ ಸಿನಿಮಾಗಾಗಿ ತೂಕ ಇಳಿಸಿದ ಸಲ್ಮಾನ್ ಖಾನ್

    ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ತಮ್ಮ ಮುಂದಿನ “ಟೈಗರ್ ಜಿಂದಾ ಹೈ” ಸಿನಿಮಾಗಾಗಿ 18 ರಿಂದ 20 ಕೆ.ಜಿ. ತೂಕ ಇಳಿಸಿಕೊಂಡಿದ್ದೇನೆ ಎಂದು ಖಾಸಗಿ ಚಾನೆಲ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

    ಸಲ್ಮಾನ್ ಖಾನ್ ತಾವು ಹಿಂದೆ ನಟಿಸಿದ್ದ ಸುಲ್ತಾನ್ ಚಿತ್ರದಲ್ಲಿ ಎರಡು ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದರು. ಹರಿಯಾಣದ ಕುಸ್ತಿ ಪಟುವಾಗಿ ಅಭಿನಯಿಸಿದ್ದು, ಚಿತ್ರದ ಮೊದಲ ಭಾಗದಲ್ಲಿ ಯುವಕನಾಗಿ ಕಾಣಿಸಿಕೊಳ್ಳುವ ಸಲ್ಮಾನ್, ನಂತರದ ಭಾಗದಲ್ಲಿ ವಯಸ್ಕರ ಹಾಗೆ ನಟಿಸಿದ್ದರು.

    ಸುಲ್ತಾನ್ ಚಿತ್ರಕ್ಕಾಗಿ ಸಲ್ಮಾನ್ ಕುಸ್ತಿಪಟು ಅಂತೆ ಕಾಣಲು ದೇಹದ ತೂಕವನ್ನು ಹೆಚ್ಚಿಸಿಕೊಂಡು, ಫಿಟ್ ಆಗಿ ಕಾಣಿಸಿದ್ದರು. ಏಕ್ ಥಾ ಟೈಗರ್ ಚಿತ್ರದ ಮುಂದುವರೆದ ಭಾಗ `ಟೈಗರ್ ಜಿಂದಾ ಹೈ’ ಸಿನಿಮಾದಲ್ಲಿ ಸಲ್ಮಾನ್ ಆಕ್ಷನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ತೂಕ ಇಳಿಸುವುದು ಅನಿವಾರ್ಯ ಆದ್ರಿಂದ ದೇಹವನ್ನು ಮೊದಲಿನ ಹಾಗೆ ಸ್ಲಿಮ್ ಮತ್ತು ಫಿಟ್ ಮಾಡಿಕೊಂಡಿದ್ದಾರೆ.

    ಸಿನಿಮಾಗಾಗಿ ತೂಕ ಇಳಿಸುವುದು ಮತ್ತು ಹೆಚ್ಚಿಸಿಕೊಳ್ಳುವದು ತುಂಬಾ ಕಷ್ಟವಾದದ್ದು. ಸುಲ್ತಾನ್ ಚಿತ್ರದಲ್ಲಿ 96 ಕೆಜಿಯಿದ್ದ ಸಲ್ಲು ಸದ್ಯ 18-20 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದೆನೆ ಎಂದು ಹೇಳಿದ್ದಾರೆ.

    ಸಲ್ಮಾನ್ ಖಾನ್ ಅಭಿನಯದ `ಟ್ಯೂಬ್ ಲೈಟ್’ ಇದೇ ವರ್ಷ ಜೂನ್ ತಿಂಗಳಲ್ಲಿ ಈದ್ ಹಬ್ಬದಂದು ತೆರೆಕಾಣಲಿದೆ. ಟೈಗರ್ ಜಿಂದಾ ಹೈ ವರ್ಷದ ಕೊನೆಯಲ್ಲಿ ತೆರೆಕಾಣುವ ನಿರೀಕ್ಷೆಯಿದೆ.