Tag: Salman Khan Films

  • ಕಿಚ್ಚನ `ವಿಕ್ರಾಂತ್ ರೋಣ’ ಚಿತ್ರದ ಜವಾಬ್ದಾರಿ ಹೊತ್ತ ಸಲ್ಮಾನ್ ಖಾನ್

    ಕಿಚ್ಚನ `ವಿಕ್ರಾಂತ್ ರೋಣ’ ಚಿತ್ರದ ಜವಾಬ್ದಾರಿ ಹೊತ್ತ ಸಲ್ಮಾನ್ ಖಾನ್

    ಕಿಚ್ಚ ಸುದೀಪ್ ನಟನೆಯ ಬಹುನಿರೀಕ್ಷಿತ ವಿಕ್ರಾಂತ್ ರೋಣ ಚಿತ್ರದ ನಿರೀಕ್ಷೆ ಹೆಚ್ಚಿದೆ. ಇದೇ ಜುಲೈ 28ಕ್ಕೆ ಕಿಚ್ಚನ ಸಿನಿಮಾ ರಿಲೀಸ್ ಆಗುತ್ತಿದೆ. ಚಿತ್ರತಂಡದಿಂದ ಅಭಿಮಾನಿಗಳಿಗೆ ಹೊಸ ಅಪ್‌ಡೇಟ್ ಸಿಕ್ಕಿದೆ. `ವಿಕ್ರಾಂತ್ ರೋಣ’ ಚಿತ್ರದ ಹಿಂದಿಯಲ್ಲಿ ಸಲ್ಮಾನ್ ಖಾನ್ ವಿತರಣೆಯ ಜವಾಬ್ದಾರಿ ಹೊತ್ತಿದ್ದಾರೆ. ಈ ಮೂಲಕ ಕಿಚ್ಚನ ಸಿನಿಮಾಗೆ ಸಲ್ಮಾನ್ ಖಾನ್ ಸಾಥ್ ನೀಡಿದ್ದಾರೆ.

    `ವಿಕ್ರಾಂತ್ ರೋಣ’ ಸುದೀಪ್ ನಟನೆಯ ಸಿನಿಮಾದ ಕುರಿತು ಚಿತ್ರತಂಡ ಕೂಡ ಮೇ 16ರಂದು ಸೂಪರ್ ಅಪ್‌ಡೇಟ್ ಕೊಡುವುದಾಗಿ ಅನೌನ್ಸ್ ಮಾಡಿತ್ತು. ಈಗ ಆ ಗುಡ್ ನ್ಯೂಸ್ ರಿವೀಲ್ ಆಗಿದೆ. ವಿಕ್ರಾಂತ್ ರೋಣಗೆ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಸಾಥ್ ನೀಡಿದ್ದಾರೆ.  ಕಿಚ್ಚನ ಚಿತ್ರದ ಹಿಂದಿಯಲ್ಲಿ ವಿತರಣೆಯ ಜವಾಬ್ದಾರಿಯನ್ನು ಹೊತ್ತಿದ್ದಾರೆ.

     

    View this post on Instagram

     

    A post shared by KicchaSudeepa (@kichchasudeepa)

    ವಿಕ್ರಾಂತ್ ರೋಣ ಹಿಂದಿ ವರ್ಷನ್ ಅನ್ನು ಸಲ್ಮಾನ್ ಖಾನ್ ಪ್ರೆಸೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡ ಕೂಡ ರಿವೀಲ್ ಮಾಡಿದ್ದು, ಸಲ್ಮಾನ್ ಖಾನ್ ಕೂಡ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್ ವಿಕ್ರಾಂತ್ ರೋಣ 3ಡಿ ಅವತರಣಿಕೆಯನ್ನು ಹಿಂದಿಯಲ್ಲಿ ಪ್ರೆಸೆಂಟ್ ಮಾಡುತ್ತಿರುವುದು ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಳದಿ ಬಣ್ಣದ ಸೀರೆ ಉಟ್ಟು ಸೀಮಂತ ಸಂಭ್ರಮದಲ್ಲಿ ಮಿಂಚಿದ ಪ್ರಣಿತಾ ಸುಭಾಷ್

    ಇನ್ನು ಕಿಚ್ಚನ ಸಿನಿಮಾ ರಿಲೀಸ್‌ಗೂ ಮುನ್ನವೇ ಕಮಾಯಿ ಮಾಡಲು ಶುರು ಮಾಡಿದೆ. ಈಗಾಗಲೇ ವಿಕ್ರಾಂತ್ ರೋಣ ಚಿತ್ರದ ಓವರ್‌ಸೀಸ್ ರೈಟ್ಸ್ ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಕಿಚ್ಚನ ಬಹುನಿರೀಕ್ಷಿ ಸಿನಿಮಾ ಇದೇ ಜುಲೈ 28ಕ್ಕೆ ೩ಡಿಯಲ್ಲಿ ವಿಶ್ವದಾದ್ಯಂತ ರಿಲೀಸ್ ಆಗುತ್ತಿದೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸುದೀಪ್ ಜತೆ ನಿರೂಪ್ ಭಂಡಾರಿ, ನೀತಾ ಅಶೋಕ್, ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರದ ಟೀಸರ್ ಮೂಲಕ ಹವಾ ಕ್ರಿಯೇಟ್ ಮಾಡಿರೋ ಕಿಚ್ಚನ ಸಿನಿಮಾ ಫ್ಯಾನ್ಸ್ ಕಾಯ್ತಿದ್ದಾರೆ.

  • ಟ್ರಸ್ಟ್ ಹೆಸರಲ್ಲಿ ಭಾರೀ ಮೋಸ- ಎಚ್ಚರಿಕೆ ನೀಡಿದ ದಬಾಂಗ್ ಸ್ಟಾರ್

    ಟ್ರಸ್ಟ್ ಹೆಸರಲ್ಲಿ ಭಾರೀ ಮೋಸ- ಎಚ್ಚರಿಕೆ ನೀಡಿದ ದಬಾಂಗ್ ಸ್ಟಾರ್

    ನವದೆಹಲಿ: ಸ್ಟಾರ್ ನಟರ ಹೆಸರಲ್ಲಿ ಮೋಸ ನಡೆಯುತ್ತಿರುವ ಪ್ರಕರಣಗಳು ಸಾಮಾನ್ಯ ಎಂಬಂತಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ಸೃಷ್ಟಿಸಿ ಕೆಲ ಜನ ಯಾಮಾರಿಸುತ್ತಿದ್ದರು. ಇದೀಗ ಬಡವರಿಗೆ ಹಾಗೂ ಯುವ ಕಲಾವಿದರಿಗೆ ಮೋಸ ಮಾಡಲು ಮುಂದಾಗಿದ್ದಾರೆ. ಅದೂ ಸಹ ಟ್ರಸ್ಟ್ ಗಳ ಹೆಸರಿನಲ್ಲಿ ಯಾಮಾರಿಸುತ್ತಿದ್ದು, ಭಾಯಿಜಾನ್ ಸಲ್ಮಾನ್ ಖಾನ್ ಅವರ ಸಲ್ಮಾನ್ ಖಾನ್ ಫಿಲಮ್ಸ್ ಹೆಸರಿನಲ್ಲಿ ಯುವ ಕಲಾವಿದರಿಗೆ ಮೋಸ ಮಾಡುತ್ತಿದ್ದಾರೆ.

    ಹೌದು ನಕಲಿ ಖಾತೆಗಳ ಮೂಲಕ ತಪ್ಪು ಮಾಹಿತಿ ನೀಡುತ್ತಿದ್ದ ಕಿಡಿಗೇಡಿಗಳು ಇದೀಗ ಬಡ ಕಲಾವಿದರ ನಟನೆಯ ಬಯಕೆಯನ್ನೇ ಬಂಡವಾಳವನ್ನಾಗಿಸಿಕೊಂಡು ಮೋಸ ಮಾಡುತ್ತಿದ್ದಾರೆ. ಬಡ ಪ್ರತಿಭಾವಂತರಿಗೆ ಚಿತ್ರರಂಗದಲ್ಲಿ ಅವಕಾಶ ಕೊಡುವ ಉದ್ದೇಶದಿಂದ ಸಲ್ಮಾನ್ ಖಾನ್ ಫಿಲಮ್ಸ್ ಎಂಬ ಸಂಸ್ಥೆಯನ್ನು ಭಾಯಿಜಾನ್ ಹುಟ್ಟುಹಾಕಿದ್ದಾರೆ. ಈ ಮೂಲಕ ಹಲವು ಬಡ ಪ್ರತಿಭಾವಂತರಿಗೆ ಸಹಾಯ ಮಾಡುತ್ತಿದ್ದಾರೆ. ಕಿಡಿಗೇಡಿಗಳು ಇದರ ಮೇಲೂ ಕಣ್ಣು ಹಾಕಿದ್ದು, ಸಲ್ಮಾನ್ ಖಾನ್ ಹೆಸರು ಬಳಸಿಕೊಂಡು ಅಮಾಯಕರಿಗೆ ಮೋಸ ಮಾಡುವ ಗ್ಯಾಂಗ್ ಹುಟ್ಟಿಕೊಂಡಿದೆ.

    ಜನ ಕೆಲಸ ಇಲ್ಲದೆ ಖಾಲಿ ಕುಳಿತಿದ್ದಾರೆ. ಲಾಕ್‍ಡೌನ್ ಪರಿಣಾಮವಾಗಿ ಎಲ್ಲರಿಗೂ ಅಭದ್ರತೆ ಕಾಡುತ್ತಿದೆ. ಇದೇ ಸಮಯವನ್ನು ಬಳಸಿಕೊಂಡು ಕಿಡಿಗೇಡಿಗಳು ಮೋಸ ಮಾಡುವ ದಂಧೆಗೆ ಇಳಿದಿದ್ದಾರೆ. ಇದನ್ನು ಸಲ್ಲು ಭಾಯ್ ಗಮನಿಸಿದ್ದು, ಗರಂ ಆಗಿದ್ದಾರೆ. ಖಡಕ್ ವಾರ್ನಿಂಗ್ ಕೂಡ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ವದಂತಿಗಳನ್ನು ನಂಬಬೇಡಿ ಎಂದು ಬರೆದಿದ್ದಾರೆ. ಅಲ್ಲದೆ ಸಲ್ಮಾನ್ ಖಾನ್ ಫಿಲಮ್ಸ್ ಸದ್ಯ ಯಾವುದೇ ಸಿನಿಮಾಗೆ ಕಾಸ್ಟಿಂಗ್ ನಡೆಸುತ್ತಿಲ್ಲ. ನಮ್ಮ ಮುಂದಿನ ಸಿನಿಮಾ ಕುರಿತು ಯಾವುದೇ ಏಜೆಂಟ್‍ಗಳಿಗೆ ಕರೆ ನೀಡಿಲ್ಲ. ಈ ವಿಷಯವಾಗಿ ಯಾರು, ಯಾವುದೇ ರೀತಿಯ ಸಂದೇಶ ಅಥವಾ ಇ-ಮೇಲ್ ಕಳುಹಿಸಿದರೆ ನಂಬಬೇಡಿ ಎಂದು ಟ್ವೀಟ್‍ನಲ್ಲಿ ಶೇರ್ ಮಾಡಿದ ಫೋಟೋದಲ್ಲಿ ವಿವರಿಸಿದ್ದಾರೆ.

    ಸಲ್ಮಾನ್ ಖಾನ್ ಫಿಲಮ್ಸ್ ಹಾಗೂ ನನ್ನ ಹೆಸರಿನಲ್ಲಿ ಯಾರಾದರೂ ಸುಳ್ಳು ಸುದ್ದಿ ಹಬ್ಬಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಲ್ಮಾನ್ ಖಾನ್ ಎಚ್ಚರಿಸಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಫಾರ್ಮ್ ಹೌಸ್‍ನಲ್ಲೇ ಕಾಲ ಕಳೆಯುತ್ತಿರುವ ಸಲ್ಮಾನ್ ಖಾನ್, ಕ್ರಿಯೇಟಿವ್ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಜಾಕ್ವಲಿನ್ ಫರ್ನಾಂಡಿಸ್ ಜೊತೆ ಸೇರಿ ತೆರೆ ಬಿನ್ ವಿಡಿಯೋ ಸಾಂಗ್ ಮೂಲಕ ಬಾಲಿವುಡ್‍ನಲ್ಲಿ ಸದ್ದು ಮಾಡಿದ್ದಾರೆ. ಇಷ್ಟೇ ಅಲ್ಲದೆ ಫಿಟ್ನೆಸ್ ಸೇರಿದಂತೆ ವಿವಿಧ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.