Tag: Salman Agha

  • Ind vs Pak | ಕಿರಿಕ್‌ ತೆಗೆದ ಹ್ಯಾರಿಸ್‌ ರೌಫ್‌ಗೆ ತಕ್ಕ ಉತ್ತರ ಕೊಟ್ಟ ಅಭಿಷೇಕ್ ಶರ್ಮಾ

    Ind vs Pak | ಕಿರಿಕ್‌ ತೆಗೆದ ಹ್ಯಾರಿಸ್‌ ರೌಫ್‌ಗೆ ತಕ್ಕ ಉತ್ತರ ಕೊಟ್ಟ ಅಭಿಷೇಕ್ ಶರ್ಮಾ

    ದುಬೈ: ಭಾರತ ಮತ್ತು ಪಾಕ್‌ (Ind vs Pak) ನಡುವಿನ ಸೂಪರ್‌-4 ಪಂದ್ಯ ರಣಾಂಗಣದಂತೆ ಮಾರ್ಪಟ್ಟಿತ್ತು. ಕೊನೆಯವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರೀ ಹೈಡ್ರಾಮಾಗಳು ನಡೆಯಿತು. ಸ್ಲೆಡ್ಜಿಂಗ್‌, ಮಾತಿನ ಚಕಮಕಿ, ಗನ್‌ ಸೆಲೆಬ್ರೇಷನ್‌, ಕ್ಯಾಚ್‌ ವಿವಾದ ಸೇರಿ ಹಲವು ವಿವಾದಗಳಿಗೆ ಈ ಪಂದ್ಯ ಸಾಕ್ಷಿಯಾಯಿತು.

    ಆರಂಭಿಕನಾಗಿ ಕಣಕ್ಕಿಳಿದ ಅಭಿಷೇಕ್‌ ಶರ್ಮಾ (Abhishek Sharma) ಪಾಕ್‌ನಲ್ಲಿ ಫೇಮಸ್‌ ಎನಿಸಿಕೊಂಡ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ಚೆಂಡಾಡಿದರು. ಇದು ಪಾಕ್‌ ಬೌಲರ್‌ಗಳನ್ನ ಕೆರಳಿಸಿತು. ಅದಕ್ಕಾಗಿ ಅಭಿ ಜೊತೆಗೆ ಸ್ಲೆಡ್ಜಿಂಗ್‌ ನಡೆಸುತ್ತ ಕಿರಿಕ್‌ ತೆಗೆದ ಹ್ಯಾರಿಸ್‌ ರೌಫ್‌ಗೆ ಬ್ಯಾಟ್‌ ಮೂಲಕವೇ ಉತ್ತರ ಕೊಟ್ಟರು.

    ನೇರಾ ನೇರ ನಿಂತ ರೌಫ್‌-ಅಭಿ
    ಚೇಸಿಂಗ್‌ ವೇಳೆ ಶಾಹೀನ್‌ ಶಾ ಅಫ್ರಿದಿ ಎಸೆತಕ್ಕೆ ಮೊದಲ ಎಸೆತದಲ್ಲೇ ಅಭಿಶೇಕ್ ಶರ್ಮಾ ಸಿಕ್ಸರ್ ಸಿಡಿಸಿ ಪಾಕಿಸ್ತಾನ ಬೌಲರ್‌ಗಳನ್ನ ಕೆರಳಿಸಿದರು.ಬ ಳಿಕ ಸ್ಫೋಟಕ ಇನ್ನಿಂಗ್ಸ್ ಮೂಲಕ ಅಭಿಶೇಕ್ ಶರ್ಮಾ (Shaheen Shah Afridi) ಅರ್ಧಶತಕ ಸಿಡಿಸಿದರು. ಇದರ ನಡುವೆ ಶಾಹೀನ್ ಶಾ ಅಫ್ರಿದಿ ಹಾಗೂ ಹ್ಯಾರಿಸ್ ರೌಫ್‌ (Haris Rauf) ಅವರ ಪ್ರತಿ ಎಸತದಲ್ಲೂ ಅಬ್ಬರಿಸಿದ್ದರು. ಇದರಿಂದ ಕೆರಳಿದ ಬೌಲರ್ಸ್ ಶರ್ಮಾ ವಿರುದ್ಧ ಸ್ಲೆಡ್ಜಿಂಗ್ ನಡೆಸಿದರು. ಇದಕ್ಕೂ ಜಗ್ಗದ ಅಭಿ, ಮಾತಿನ ಮೂಲಕ ತಿರುಗೇಟು ನೀಡಿದರು. ನೇರಾ ನೇರ ನಿಂತ ಅಭಿಶೇಕ್ ಶರ್ಮಾ ಅಷ್ಟೇ ಖಾರವಾಗಿ ಉತ್ತರಿಸಿದರು. ತಕ್ಷಣವೇ ಮಧ್ಯಪ್ರವೇಶಿಸಿದ ಅಂಪೈರ್ ಇಬ್ಬರ ಜಗಳ ಬಿಡಿಸಿದರು.

    ಬಾಲ್‌ ತಗೊಂಡ್‌ ಬಾ
    ಇನ್ನೂ ಅಭಿ ಜೊತೆಗೆ ನಿಂತ ಶುಭಮನ್‌ ಗಿಲ್‌ ಕೂಡ ಮಾತಿನ ಮೂಲಕ ತಿರುಗೇಟು ನೀಡಿದರು. ಸ್ಲೆಡ್ಜಿಂಗ್ ಮಾಡುತ್ತಿದ್ದ ಹ್ಯಾರಿಸ್ ರೌಫ್ ಎಸತದಲ್ಲಿ ಬೌಂಡರಿ ಸಿಡಿಸಿ ನೇರವಾಗಿ ರೌಫ್ ಬಳಿ ಬಂದು ಹೋಗಿ ಬಾಲ್ ತಗೊಂಡ್‌ ಬಾ ಅಂತ ವ್ಯಂಗ್ಯ ಮಾಡಿದರು. ಒಟ್ಟಿನಲ್ಲಿ ಟೀಂ ಇಂಡಿಯಾ ಅಬ್ಬರಕ್ಕೆ ಪಾಕ್‌ ಸುಸ್ತಾಗಿತ್ತು.

    ಭಾರತಕ್ಕೆ ಭರ್ಜರಿ ಜಯ
    ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 171‌ ರನ್‌ ಗಳಿಸಿತ್ತು. ಗೆಲುವಿಗೆ 172 ರನ್‌ಗಳ ಗುರಿ ಪಡೆದ ಭಾರತ 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿಸಿ ಜಯ ಸಾಧಿಸಿತು.

    ಅಭಿ, ಗಿಲ್‌ ಶತಕದ ಜೊತೆಯಾಟಕ್ಕೆ ಪತರುಗುಟ್ಟಿದ ಪಾಕ್‌
    ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೊಡಿ ಮೊದಲ ಎಸೆತದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. ಕೇವಲ 8.4 ಓವರ್‌ಗಳಲ್ಲೇ 100 ರನ್‌ ಪೂರೈಸಿದ್ದ ಈ ಜೋಡಿ, ಮೊದಲ ವಿಕೆಟ್‌ಗೆ 9.5 ಓವರ್‌ಗಳಲ್ಲಿ 105 ರನ್‌ಗಳ ಜೊತೆಯಾಟ ನೀಡಿತ್ತು. ಈ ವೇಳೆ ಅಬ್ಬರಿಸುತ್ತಿದ್ದ ಗಿಲ್‌ 47 ರನ್‌ (28 ಎಸೆತ, 8 ಬೌಂಡರಿ) ಚಚ್ಚಿ ಫಹೀಮ್‌ ಅಶ್ರಫ್‌ಗೆ ವಿಕೆಟ್‌ ಒಪ್ಪಿಸಿದರು. ಈ ಬೆನ್ನಲ್ಲೇ ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌ ಹ್ಯಾರಿಸ್‌ ರೌಫ್‌ ಬೌಲಿಂಗ್‌ನಲ್ಲಿ ಕ್ಯಾಚ್‌ ನೀಡಿ ಶೂನ್ಯಕ್ಕೆ ಔಟಾದರು.

    ಇವರಿಬ್ಬರ ವಿಕೆಟ್‌ ಬಳಿಕವೂ ಅಭಿಷೇಕ್‌ ಶರ್ಮಾ ತನ್ನ ಬ್ಯಾಟಿಂಗ್‌ ಆರ್ಭಟ ಮುಂದುವರಿಸಿದರು. ಪಾಕಿಸ್ತಾನದ ಟಾಪ್‌ ಬೌಲರ್‌ಗಳೇ ಪತರುಗುಟ್ಟುವಂತೆ ಮಾಡಿದರು. ಕ್ರೀಸ್‌ನಲ್ಲಿ ಅಬ್ಬರಿಸುತ್ತಿದ್ದ ಅಭಿ 13ನೇ ಓವರ್‌ನಲ್ಲಿ ಅಬ್ರಾರ್‌ ಅಹ್ಮದ್‌ಗೆ ಬ್ಯಾಕ್‌ ಟು ಬ್ಯಾಕ್‌ ಸಿಕ್ಸರ್‌ ಸಿಡಿಸಲು ಯತ್ನಿಸಿ ಔಟಾದರು. ಸ್ಪೋಟಕ ಪ್ರದರ್ಶನ ನೀಡಿದ ಶರ್ಮಾ 39 ಎಸೆತಗಳಲ್ಲಿ 74 ರನ್‌ (5 ಸಿಕ್ಸರ್‌, 6 ಬೌಂಡರಿ) ಚಚ್ಚಿದರು.

    ಬಳಿಕ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿದ ತಿಲಕ್‌ ವರ್ಮಾ ಗೆಲುವಿನ ದಡ ಸೇರಿಸಿದರು. ತಿಲಕ್‌ ಅಯೇಯ 30 ರನ್‌ (19 ಎಸೆತ, 2 ಸಿಕ್ಸರ್‌, 2 ಬೌಂಡರಿ), ಸಂಜು ಸ್ಯಾಮ್ಸನ್‌ 13 ರನ್‌, ಗಳಿಸಿದ್ರೆ, ಹಾರ್ದಿಕ್‌ ಪಾಂಡ್ಯ ಅಜೇಯ 7 ರನ್‌ ಗಳಿಸಿದರು.

  • Asia Cup 2025 | ಔಟ್‌ ಅಲ್ಲ ನಾಟೌಟ್‌ – ಅಂಪೈರ್‌ ತೀರ್ಪಿನ ವಿರುದ್ಧ ಸಿಡಿದ ಫಖರ್‌ ಝಮಾನ್‌

    Asia Cup 2025 | ಔಟ್‌ ಅಲ್ಲ ನಾಟೌಟ್‌ – ಅಂಪೈರ್‌ ತೀರ್ಪಿನ ವಿರುದ್ಧ ಸಿಡಿದ ಫಖರ್‌ ಝಮಾನ್‌

    ದುಬೈ: ಏಷ್ಯಾಕಪ್ ಟೂರ್ನಿಯ ಸೂಪರ್-4 (Asia Cup Super Four) ಹಂತದ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಇಂದು ಹಲವು ವಿವಾದಗಳಿಗೆ ಎಡೆಮಾಡಿಕೊಟ್ಟಿದೆ. ಆದ್ರೆ ಈ ಪಂದ್ಯದ ಮೊದಲ ವಿವಾದಕ್ಕೆ ಕಾರಣ ಟಿವಿ ಅಂಪೈರ್‌ ತೀರ್ಪು.

    ಹೌದು. ಪಾಕ್‌ ಆರಂಭಿಕ ಆಟಗಾರ ಫಖರ್‌ ಝಮಾನ್‌ (Fakhar Zaman) ಅವರ ಔಟ್ ತೀರ್ಪಿನ ಕುರಿತ ವಿವಾದ ಶುರುವಾಗಿದೆ. ನಾಟೌಟ್ ಇದ್ದರೂ ಭಾರತದ ಪರ ತೀರ್ಪು ನೀಡಲಾಗಿದೆ ಅಂತ ಪಾಕಿಸ್ತಾನ ತಂಡ, ಅಂಪೈರ್ ವಿರುದ್ಧ ಆಕ್ರೋಶಗೊಂಡಿದೆ. ಪಾಕ್‌ ಅಭಿಮಾನಿಗಳು ಅದು ನಾಟೌಟ್‌ ಅಂತ ವಾದಿಸಿದ್ದು, ಫಖರ್ ಝಮಾನ್ ಕೂಡ ಅಂಪೈರ್‌ ತೀರ್ಪಿಗೆ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಫಿಫ್ಟಿ ಬಾರಿಸಿ ಫರ್ಹಾನ್‌ ಗನ್‌ ಸೆಲೆಬ್ರೇಷನ್ – ಪೆಹಲ್ಗಾಮ್ ದಾಳಿಯ ಉಗ್ರರಿಗೆ ಹೋಲಿಸಿದ ನೆಟ್ಟಿಗರು

    ಭಾರತ ವಿರುದ್ಧ ಟಾಸ್ ಸೋತು ಮೊದಲು ಕ್ರೀಸ್‌ಗಿಳಿದ ಪಾಕಿಸ್ತಾನ ಆರಂಭದಲ್ಲೇ 2.3 ಓವರ್‌ಗಳಲ್ಲಿ 21 ರನ್‌ ಗಳಿಸಿದ್ದಾಗ ಫಖರ್‌ ವಿಕೆಟ್‌ ಕಳೆದುಕೊಂಡಿತು. 9 ಎಸೆತಗಳಲ್ಲಿ 15 ರನ್‌ ಸಿಡಿಸಿ ಝಮಾನ್‌ ಔಟಾದರು. ಹಾರ್ದಿಕ್ ಪಾಂಡ್ಯ ಎಸತದಲ್ಲಿ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್‌ಗೆ ಕ್ಯಾಚ್ ನೀಡಿದರು. ಆದ್ರೆ ಸಂಜು ಸ್ಯಾಮ್ಸನ್ ಕ್ಯಾಚ್ ಹಿಡಿಯುವಾಗ ಬಾಲ್ ನೆಲಕ್ಕೆ ಬಿದ್ದಿದೆ ಅನ್ನೋದು ಫಖರ್‌ ಝಮಾನ್‌ ಹಾಗೂ ಪಾಕ್‌ ಕ್ರಿಕೆಟಿಗರ ವಾದ. ಸಂಜು ಸ್ಯಾಮ್ಸನ್ ಕ್ಯಾಚ್ ಸರಿಯಾಗಿ ಸ್ವೀಕರಿಸಿರುವುದಾಗಿ ಖಚಿತಪಡಿಸಿದ್ದಾರೆ. ಕ್ಯಾಚ್ ಕುರಿತು ಸ್ಪಷ್ಟತೆ ಪಡೆಯಲು ಫೀಲ್ಡ್ ಅಂಪೈರ್ ಟಿವಿ ಅಂಪೈರ್ ಮೊರೆ ಹೋಗಿದರು. ಮೂರನೇ ಅಂಪೈರ್‌ ಕೂಡ ಹಲವು ಬಾರಿ ಪರಿಶೀಲಿಸಿ ಔಟ್‌ ಎಂದೇ ತೀರ್ಪು ನೀಡಿದರು.

    ಟಿವಿ ಅಂಪೈರ್‌ ಔಟ್‌ ನೀಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ. ಬಾಲ್ ನೆಲಕ್ಕೆ ಬಿದ್ದರೂ ಔಟ್ ತೀರ್ಪು ನೀಡಿದ್ದಾರೆ ಎಂದು ಆಕ್ರೋಶ ಹೊರಹಾಕುತ್ತಲೇ ಫಖರ್‌ ಝಮಾನ್‌ ಪೆವಿಲಿಯನ್‌ನಿಂದ ಹೊರ ನಡೆದರು. ಪೆವಿಲಿಯನ್‌ನಲ್ಲೂ ಕೋಚ್ ಮೈಕ್ ಹಸನ್ ಜೊತೆ ತಮ್ಮ ಅಸಮಾಧಾನ ಹೊರಹಾಕಿದರು. ಇದನ್ನೂ ಓದಿ: Asia Cup 2025 | ಭಾರತದ ಬೆಂಕಿ ಆಟಕ್ಕೆ ಪಾಕ್‌ ಧೂಳಿಪಟ – ಸೂಪರ್‌ ಫೋರ್‌ನಲ್ಲಿ 6 ವಿಕೆಟ್‌ಗಳ ಅಮೋಘ ಜಯ

    ಮತ್ತೆ ಸೋತು ಸುಣ್ಣವಾದ ಪಾಕ್‌
    ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಸ ಸೂಪರ್‌-4 ಹಂತದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 171‌ ರನ್‌ ಗಳಿಸಿತ್ತು. ಗೆಲುವಿಗೆ 172 ರನ್‌ಗಳ ಗುರಿ ಪಡೆದ ಭಾರತ 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿಸಿ ಜಯ ಸಾಧಿಸಿತು.

  • ಫಿಫ್ಟಿ ಬಾರಿಸಿ ಫರ್ಹಾನ್‌ ಗನ್‌ ಸೆಲೆಬ್ರೇಷನ್ – ಪೆಹಲ್ಗಾಮ್ ದಾಳಿಯ ಉಗ್ರರಿಗೆ ಹೋಲಿಸಿದ ನೆಟ್ಟಿಗರು

    ಫಿಫ್ಟಿ ಬಾರಿಸಿ ಫರ್ಹಾನ್‌ ಗನ್‌ ಸೆಲೆಬ್ರೇಷನ್ – ಪೆಹಲ್ಗಾಮ್ ದಾಳಿಯ ಉಗ್ರರಿಗೆ ಹೋಲಿಸಿದ ನೆಟ್ಟಿಗರು

    ದುಬೈ: ಭಾರತ ಮತ್ತು ಪಾಕಿಸ್ತಾನ (Ind vs Pak) ನಡುವಿನ ಏಷ್ಯಾಕಪ್ ಸೂಪರ್ 4 ಪಂದ್ಯ ಸ್ಲೆಡ್ಜಿಂಗ್‌ಗೆ (ಕೆಣಕುವ) ವೇದಿಕೆಯಾಗಿ ಮಾರ್ಪಟ್ಟಿದೆ.

    ಭಾರತ ಬ್ಯಾಟಿಂಗ್ ವೇಳೆ ಅಭಿಷೇಕ್ ಶರ್ಮಾ (Abhishek Sharma) ಹಾಗೂ ಪಾಕಿಸ್ತಾನದ ಹ್ಯಾರಿಸ್ ರೌಫ್ ವಾಗ್ವಾದ ನಡೆಸಿದ್ದಾರೆ. ಇದಕ್ಕೂ ಮೊದಲು ಪಾಕಿಸ್ತಾನ ಬ್ಯಾಟಿಂಗ್ ವೇಳೆ ಶಾಹೀಬ್‌ಜಾದ್ ಫರ್ಹಾನ್ (Sahibzada Farhan) ಫಿಫ್ಟಿ ಬಾರಿಸಿದ ನಂತರ ಮಾಡಿದ ಸಂಭ್ರಮಾಚರಣೆ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

    ಫರ್ಹಾನ್‌ನ ಈ ಸೆಲೆಬ್ರೇಷನ್‌ ಪಹಲ್ಗಾಮ್‌ ಉಗ್ರರು (Pahalgam Terrorist) ನಡೆಸಿದ ದಾಳಿಯ ಸಂತ್ರಸ್ತರು ಸೇರಿ ಸಮಸ್ತ ಭಾರತೀಯರನ್ನು ಅಣಕಿಸಿದ್ರಾ ಅನ್ನೋ ಅನುಮಾನ ಕಾಡತೊಡಗಿದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲೂ ಬಿಸಿಬಿಸಿ ಚರ್ಚೆಯಾಗುತ್ತಿದೆ.

    ವಿವಾದದ ಕಿಡಿ ಹಚ್ಚಿದ ಗನ್‌ ಸೆಲಬ್ರೇಷನ್‌
    ಭಾರತ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಇಳಿದ ಪಾಕಿಸ್ತಾನಕ್ಕೆ ಶಾಹೀಬ್‌ಜಾದ್ ಫರ್ಹಾನ್ ಉತ್ತಮ ಆರಂಭ ನೀಡಿದ್ದರು. ಅಬ್ಬರಿಸಿದ ಶಾಹೀಬ್‌ಜಾದ್ ಫರ್ಹಾನ್ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದ್ದರು. ಹಾಫ್ ಸೆಂಚುರಿ ಸಂಭ್ರಮವನ್ನು ಶಾಹೀಬ್‌ಜಾದ್ ಫರ್ಹಾನ್, ಭಾರತೀಯ ತಂಡದ ಡೌಗ್‌ಕಡೆ ಬ್ಯಾಟ್ ತೋರಿಸಿ ಗನ್ ಫೈರಿಂಗ್ ರೀತಿ ಸಂಭ್ರಮಿಸಿದರು. ಬ್ಯಾಟನ್ನೇ ಏಕೆ-47 ಗನ್ ರೀತಿ ತೋರಿಸಿ, ಫೈರಿಂಗ್ ಮಾಡಿದ ರೀತಿಯಲ್ಲಿ ಸಂಭ್ರಮಿಸಿದರು. ಇದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

    ಸೋಷಿಯಲ್‌ ಮೀಡಿಯಾಗಳಲ್ಲಿ ನೆಟ್ಟಿಗರು ಪಹಲ್ಗಾಮ್‌ ಉಗ್ರರಿಗೆ ಹೋಲಿಸಿದ್ದಾರೆ. ಆರಂಭದಲ್ಲಿ ಸ್ಫೋಟಕ ಪ್ರದರ್ಶನ ನೀಡಿದ ಫರ್ಹಾನ್‌ 45 ಎಸೆತಗಳಲ್ಲಿ 58 ರನ್ ಗಳಿಸಿದರು.

  • Asia Cup 2025 | ಭಾರತದ ಬೆಂಕಿ ಆಟಕ್ಕೆ ಪಾಕ್‌ ಧೂಳಿಪಟ – ಸೂಪರ್‌ ಫೋರ್‌ನಲ್ಲಿ 6 ವಿಕೆಟ್‌ಗಳ ಅಮೋಘ ಜಯ

    Asia Cup 2025 | ಭಾರತದ ಬೆಂಕಿ ಆಟಕ್ಕೆ ಪಾಕ್‌ ಧೂಳಿಪಟ – ಸೂಪರ್‌ ಫೋರ್‌ನಲ್ಲಿ 6 ವಿಕೆಟ್‌ಗಳ ಅಮೋಘ ಜಯ

    ದುಬೈ: ಕೊನೆಯವರೆಗೂ ಜಿದ್ದಾಜಿದ್ದಿಯಿಂದ ಕೂಡಿದ್ದ ಅಖಾಡದಲ್ಲಿ ಭಾರತ ಗೆದ್ದು ಬೀಗಿದೆ. ಅಭಿಷೇಕ್‌ ಶರ್ಮಾ (Abhishek Sharma), ಶುಭಮನ್‌ ಗಿಲ್‌ ಶತಕದ ಜೊತೆಯಾಟ, ಕೊನೆಯಲ್ಲಿ ತಿಲಕ್‌ ವರ್ಮಾ (Tilak Varma) ತಾಳ್ಮೆಯ ಬ್ಯಾಟಿಂಗ್‌ ನೆರವಿನಿಂದ ಟೀಂ ಇಂಡಿಯಾ ಪಾಕ್‌ ವಿರುದ್ಧ 6 ವಿಕೆಟ್‌ಗಳ ಗೆಲುವು ಸಾಧಿಸಿದೆ.

    ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ (Pakistan) 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 171‌ ರನ್‌ ಗಳಿಸಿತ್ತು. ಗೆಲುವಿಗೆ 172 ರನ್‌ಗಳ ಗುರಿ ಪಡೆದ ಭಾರತ (Team India) 18.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 174 ರನ್‌ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ: ಕೆಲ ವಿಷಯಗಳು ಕ್ರೀಡಾ ಮನೋಭಾವಕ್ಕಿಂತಲೂ ದೊಡ್ಡದು – ಕೈಕುಲುಕದ್ದಕ್ಕೆ ಸೂರ್ಯ ಸ್ಪಷ್ಟನೆ

    ಅಭಿ, ಗಿಲ್‌ ಶತಕದ ಜೊತೆಯಾಟಕ್ಕೆ ಪತರುಗುಟ್ಟಿದ ಪಾಕ್‌
    ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೊಡಿ ಮೊದಲ ಎಸೆತದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಮುಂದಾಯಿತು. ಕೇವಲ 8.4 ಓವರ್‌ಗಳಲ್ಲೇ 100 ರನ್‌ ಪೂರೈಸಿದ್ದ ಈ ಜೋಡಿ, ಮೊದಲ ವಿಕೆಟ್‌ಗೆ 9.5 ಓವರ್‌ಗಳಲ್ಲಿ 105 ರನ್‌ಗಳ ಜೊತೆಯಾಟ ನೀಡಿತ್ತು. ಈ ವೇಳೆ ಅಬ್ಬರಿಸುತ್ತಿದ್ದ ಗಿಲ್‌ 47 ರನ್‌ (28 ಎಸೆತ, 8 ಬೌಂಡರಿ) ಚಚ್ಚಿ ಫಹೀಮ್‌ ಅಶ್ರಫ್‌ಗೆ ವಿಕೆಟ್‌ ಒಪ್ಪಿಸಿದರು. ಈ ಬೆನ್ನಲ್ಲೇ ಕ್ಯಾಪ್ಟನ್‌ ಸೂರ್ಯಕುಮಾರ್‌ ಯಾದವ್‌ ಹ್ಯಾರಿಸ್‌ ರೌಫ್‌ ಬೌಲಿಂಗ್‌ನಲ್ಲಿ ಕ್ಯಾಚ್‌ ನೀಡಿ ಶೂನ್ಯಕ್ಕೆ ಔಟಾದರು.

    ಇವರಿಬ್ಬರ ವಿಕೆಟ್‌ ಬಳಿಕವೂ ಅಭಿಷೇಕ್‌ ಶರ್ಮಾ ತನ್ನ ಬ್ಯಾಟಿಂಗ್‌ ಆರ್ಭಟ ಮುಂದುವರಿಸಿದರು. ಪಾಕಿಸ್ತಾನದ ಟಾಪ್‌ ಬೌಲರ್‌ಗಳೇ ಪತರುಗುಟ್ಟುವಂತೆ ಮಾಡಿದರು. ಕ್ರೀಸ್‌ನಲ್ಲಿ ಅಬ್ಬರಿಸುತ್ತಿದ್ದ ಅಭಿ 13ನೇ ಓವರ್‌ನಲ್ಲಿ ಅಬ್ರಾರ್‌ ಅಹ್ಮದ್‌ಗೆ ಬ್ಯಾಕ್‌ ಟು ಬ್ಯಾಕ್‌ ಸಿಕ್ಸರ್‌ ಸಿಡಿಸಲು ಯತ್ನಿಸಿ ಔಟಾದರು. ಸ್ಪೋಟಕ ಪ್ರದರ್ಶನ ನೀಡಿದ ಶರ್ಮಾ 39 ಎಸೆತಗಳಲ್ಲಿ 74 ರನ್‌ (5 ಸಿಕ್ಸರ್‌, 6 ಬೌಂಡರಿ) ಚಚ್ಚಿದರು.

    ಬಳಿಕ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿದ ತಿಲಕ್‌ ವರ್ಮಾ ಗೆಲುವಿನ ದಡ ಸೇರಿಸಿದರು. ತಿಲಕ್‌ ಅಯೇಯ 30 ರನ್‌ (19 ಎಸೆತ, 2 ಸಿಕ್ಸರ್‌, 2 ಬೌಂಡರಿ), ಸಂಜು ಸ್ಯಾಮ್ಸನ್‌ 13 ರನ್‌, ಗಳಿಸಿದ್ರೆ, ಹಾರ್ದಿಕ್‌ ಪಾಂಡ್ಯ ಅಜೇಯ 7 ರನ್‌ ಗಳಿಸಿದರು.

    ಪಾಕಿಸ್ತಾನ ಪರ ಹ್ಯಾರಿಸ್‌ ರೌಫ್‌ 2 ವಿಕೆಟ್‌ ಕಿತ್ತರೆ, ಅಬ್ರಾರ್‌ ಅಹ್ಮದ್‌, ಫಹೀಮ್‌ ಅಶ್ರಫ್‌ ತಲಾ ಒಂದೊಂದು ವಿಕೆಟ್‌ ಕಿತ್ತರು. ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ – ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೇರಿ ಮೂವರಿಗೆ ಇಡಿ ಸಮನ್ಸ್

    ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಪಾಕ್‌ ಸಾಹಿಬ್‌ಜಾದಾ ಫರ್ಹಾನ್ ಅರ್ಧಶತಕದ ನೆರವಿನಿಂದ 171 ರನ್ ಗಳಿಸಿತ್ತು. ಆರಂಭಿಕನಾಗಿ ಕಣಕ್ಕಿಳಿದ ಫರ್ಹಾನ್ 45 ಎಸೆತಗಳಲ್ಲಿ 3 ಸಿಕ್ಸರ್, 5 ಬೌಂಡರಿ ಸಹಿತ 58 ರನ್ ಗಳಿಸಿ ಔಟಾದರು. ಇದರೊಂದಿಗೆ ಸೈಮ್ ಅಯೂಬ್ 21 ರನ್, ಫಖರ್ ಝಮಾನ್ 15 ರನ್, ಹುಸೇನ್ ಟಲಟ್ 10 ರನ್, ಮೊಹಮದ್ ನವಾಜ್ 21 ರನ್, ಸಲ್ಮಾನ್ ಅಘಾ 17 ರನ್ ಗಳಿಸಿದ್ರೆ ಕೊನೆಯಲ್ಲಿ ಫಹೀಮ್ ಅಶ್ರಫ್ ಸ್ಫೋಟಕ 20 ರನ್ ಚಚ್ಚಿದರು.

    ಭಾರತ ಕಳಪೆ ಫೀಲ್ಡಿಂಗ್
    8 ಓವರ್‌ಗಳಲ್ಲಿ ಅಭಿಷೇಕ್ ಶರ್ಮಾ 3, ಕುಲ್ದೀಪ್ ಯಾದವ್ 1, ಮಿಸ್‌ಫೀಲ್ಡ್ನಿಂದಾಗಿ 5 ಕ್ಯಾಚ್ ಕೈಚೆಲ್ಲಲಾಗಿತ್ತು. ಇದು ಸಾಲದು ಅಂತ 19ನೇ ಓವರ್‌ನ 5ನೇ ಎಸೆತದಲ್ಲಿ ಶುಭಮನ್ ಗಿಲ್ ಕೈಗೆ ಬಂದ ಈಸಿ ಕ್ಯಾಚನ್ನ ಕೈಚೆಲ್ಲಿದರು. ಇದು ಪಾಕ್‌ಗೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಯಿತು.

    ಟೀಂ ಇಂಡಿಯಾ ಪರ ಶಿವಂ ದುಬೆ 2 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯ, ಕುಲ್‌ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: ಫರ್ಹಾನ್‌ ಫಿಫ್ಟಿ – ಕೊನೇ 4 ಓವರ್‌ಗಳಲ್ಲಿ 50 ರನ್‌ ಬಿಟ್ಟುಕೊಟ್ಟ ಭಾರತ; ಗೆಲುವಿಗೆ 172 ರನ್‌ಗಳ ಗುರಿ

  • ಫರ್ಹಾನ್‌ ಫಿಫ್ಟಿ – ಕೊನೇ 4 ಓವರ್‌ಗಳಲ್ಲಿ 50 ರನ್‌ ಬಿಟ್ಟುಕೊಟ್ಟ ಭಾರತ; ಗೆಲುವಿಗೆ 172 ರನ್‌ಗಳ ಗುರಿ

    ಫರ್ಹಾನ್‌ ಫಿಫ್ಟಿ – ಕೊನೇ 4 ಓವರ್‌ಗಳಲ್ಲಿ 50 ರನ್‌ ಬಿಟ್ಟುಕೊಟ್ಟ ಭಾರತ; ಗೆಲುವಿಗೆ 172 ರನ್‌ಗಳ ಗುರಿ

    ದುಬೈ: ಒಂದಂತದಲ್ಲಿ 10 ಓವರ್‌ಗಳಿಗೆ 91 ರನ್‌ ಗಳಿಸಿ ಬೃಹತ್‌ ಮೊತ್ತ ಪೇರಿಸುವ ಉತ್ಸಾಹದಲ್ಲಿದ್ದ ಪಾಕಿಸ್ತಾನ ತಂಡಕ್ಕೆ ಶಿವಂ ದುಬೆ ಮಕ್ಕರ್‌ ಮಾಡಿದ್ದರು. ಆದ್ರೆ ಕೊನೆಯ ನಾಲ್ಕು ಓವರ್‌ಗಳಲ್ಲಿ ಭಾರತ ಬಿಟ್ಟುಕೊಟ್ಟ 50 ರನ್‌ಗಳಿಂದ ಪಾಕಿಸ್ತಾನ ಸ್ಪರ್ಧಾತ್ಮಕ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾಯಿತು. ಡೆತ್‌ ಓವರ್‌ನಲ್ಲಿ ಸ್ಫೋಟಕ ಪ್ರದರ್ಶನದಿಂದಾಗಿ ಪಾಕ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿದ್ದು, ಭಾರತದ ಗೆಲುವಿಗೆ 172 ರನ್‌ಗಳ ಗುರಿ ನೀಡಿದೆ.

    ಲೀಗ್‌ ಸುತ್ತಿನಲ್ಲಿ ಹೀನಾಯ ಸೋಲಿನಿಂದ ಕಂಗೆಟ್ಟಿದ್ದ ಪಾಕ್‌ ಇಂದು ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕೆ ಇಳಿಯಿತು. ದುಬೈ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌, ಸಾಹಿಬ್‌ಜಾದಾ ಫರ್ಹಾನ್ ಅರ್ಧಶತಕದ ನೆರವಿನಿಂದ 171 ರನ್‌ ಗಳಿಸಿತು. ಇದನ್ನೂ ಓದಿ: ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣ – ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೇರಿ ಮೂವರಿಗೆ ಇಡಿ ಸಮನ್ಸ್

    ಪಾಕ್‌ ಪರ ಆರಂಭಿಕನಾಗಿ ಕಣಕ್ಕಿಳಿದ ಫರ್ಹಾನ್‌ 45 ಎಸೆತಗಳಲ್ಲಿ 3 ಸಿಕ್ಸರ್‌, 5 ಬೌಂಡರಿ ಸಹಿತ 58 ರನ್‌ ಗಳಿಸಿ ಔಟಾದರು. ಇದರೊಂದಿಗೆ ಸೈಮ್‌ ಅಯೂಬ್‌ 21 ರನ್‌, ಫಖರ್‌ ಝಮಾನ್‌ 15 ರನ್‌, ಹುಸೇನ್‌ ಟಲಟ್‌ 10 ರನ್‌, ಮೊಹಮದ್‌ ನವಾಜ್‌ 21 ರನ್‌, ಸಲ್ಮಾನ್‌ ಅಘಾ 17 ರನ್‌ ಗಳಿಸಿದ್ರೆ ಕೊನೆಯಲ್ಲಿ ಫಹೀಮ್‌ ಅಶ್ರಫ್‌ ಸ್ಫೋಟಕ 20 ರನ್‌ ಚಚ್ಚಿದರು. ಇದನ್ನೂ ಓದಿ: ಪಾಕ್ ಜೊತೆ ಮಾತುಕತೆಗೆ ರಾಹುಲ್ ನಂಬಿಕೆ: ಆಫ್ರಿದಿ ಶ್ಲಾಘನೆ

    ಭಾರತ ಕಳಪೆ ಫೀಲ್ಡಿಂಗ್‌
    8 ಓವರ್‌ಗಳಲ್ಲಿ ಅಭಿಷೇಕ್‌ ಶರ್ಮಾ 3, ಕುಲ್ದೀಪ್‌ ಯಾದವ್‌ 1, ಮಿಸ್‌ಫೀಲ್ಡ್‌ನಿಂದಾಗಿ 5 ಕ್ಯಾಚ್‌ ಕೈಚೆಲ್ಲಲಾಗಿತ್ತು. ಇದು ಸಾಲದು ಅಂತ 19ನೇ ಓವರ್‌ನ 5ನೇ ಎಸೆತದಲ್ಲಿ ಶುಭಮನ್‌ ಗಿಲ್‌ ಕೈಗೆ ಬಂದ ಈಸಿ ಕ್ಯಾಚನ್ನ ಕೈಚೆಲ್ಲಿದರು. ಇದು ಪಾಕ್‌ಗೆ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಯಿತು.

    ಟೀಂ ಇಂಡಿಯಾ ಪರ ಶಿವಂ ದುಬೆ 2 ವಿಕೆಟ್‌ ಕಿತ್ತರೆ, ಹಾರ್ದಿಕ್‌ ಪಾಂಡ್ಯ, ಕುಲ್‌ದೀಪ್‌ ಯಾದವ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಕೈಗೆ ಬಂದ ಕ್ಯಾಚ್‌ ಬಿಟ್ಟ ಕುಲ್ದೀಪ್‌, ಅಭಿ – ಪವರ್‌ ಪ್ಲೇನಲ್ಲೇ 34 ರನ್‌ ಚಚ್ಚಿಸಿಕೊಂಡ ಬುಮ್ರಾ

  • ಭಾರತ ತಂಡವನ್ನೂ ಸೋಲಿಸುವಷ್ಟು ಸಮರ್ಥರಿದ್ದೇವೆ – ಪಂದ್ಯಕ್ಕೂ ಮುನ್ನ ಪಾಕ್‌ ಕ್ಯಾಪ್ಟನ್‌ ವಾರ್ನಿಂಗ್‌

    ಭಾರತ ತಂಡವನ್ನೂ ಸೋಲಿಸುವಷ್ಟು ಸಮರ್ಥರಿದ್ದೇವೆ – ಪಂದ್ಯಕ್ಕೂ ಮುನ್ನ ಪಾಕ್‌ ಕ್ಯಾಪ್ಟನ್‌ ವಾರ್ನಿಂಗ್‌

    – ಏಷ್ಯಾಕಪ್‌ 2025; ಸೂಪರ್‌ ಸಂಡೇ ಇಂಡೋ ಪಾಕ್‌ ಕದನ

    ದುಬೈ: ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ (Ind vs Pak) ನಡುವಿನ ಏಷ್ಯಾಕಪ್‌ ಪಂದ್ಯ ನಾಳೆ (ಸೆ.14) ನಡೆಯಲಿದೆ. ದುಬೈ ಕ್ರೀಡಾಂಗಣದಲ್ಲಿ ರಾತ್ರಿ 8ಕ್ಕೆ ಪಂದ್ಯ ಶುರುವಾಗಲಿದೆ. ಈ ನಡುವೆ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡಿರುವ ಪಾಕ್‌ ತಂಡದ ನಾಯಕ ಸಲ್ಮಾನ್‌ ಅಘಾ (Salman Agha) ಟೀಂ ಇಂಡಿಯಾಕ್ಕೆ ಎಚ್ಚರಿಕೆ ಕೊಟ್ಟಿದ್ದಾರೆ.

    ಶುಕ್ರವಾರ ಒಮನ್‌ (Oman) ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಪಾಕ್‌ 93 ರನ್‌ಗಳ ಭರ್ಜರಿ ಜಯ ಸಾಧಿಸಿತು. ಪಂದ್ಯದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ನಾಯಕ ಸಲ್ಮಾನ್‌ ಅಘಾ, ನಾವು ನಮ್ಮ ಪ್ಲ್ಯಾನಿಂಗ್‌ ಅನ್ನು ಸರಿಯಾದ ರೀತಿಯಲ್ಲಿ ಕಾರ್ಯಗತಗೊಳಿಸಿದ್ರೆ ಭಾರತ (Team India) ಸೇರಿದಂತೆ ಯಾವುದೇ ತಂಡವನ್ನು ಸೋಲಿಸುವಷ್ಟು ಸಮರ್ಥರಿದ್ದೇವೆ ಎಂದು ತಿಳಿಸಿದ್ರು. ಇದನ್ನೂ ಓದಿ: Asia Cup 2025 | ಒಮ್ಮೆ ಏಕದಿನ, ಒಮ್ಮೆ ಟಿ20 – ಸ್ವರೂಪ ಬದಲಾಗೋದು ಏಕೆ?

    ಕಳೆದ 2-3 ತಿಂಗಳಿನಿಂದ ನಾವು ಉತ್ತಮ ಕ್ರಿಕೆಟ್‌ ಆಡ್ತಿದ್ದೇವೆ, ಇದು ಇನ್ನಷ್ಟು ಬೆಳವಣಿಗೆ ಆಗಬೇಕಾಗಿದೆ. ಅದಕ್ಕಾಗಿ ದೀರ್ಘಕಾಲದ ವರೆಗೆ ನಮ್ಮ ಪ್ಲ್ಯಾನಿಂಗ್‌ ಅನ್ನು ಸಕ್ರಿಯಗೊಳಿಸಬೇಕು. ಆಗ ಯಾವುದೇ ತಂಡವನ್ನು ಸೋಲಿಸಲು ನಮ್ಮಿಂದ ಸಾಧ್ಯವಾಗುತ್ತದೆ ಎಂದು ಸಹ ಆಟಗಾರರಿಗೆ ಕಿವಿಮಾತು ಹೇಳಿದ್ರು. ಇದನ್ನೂ ಓದಿ: ಇದು ಮ್ಯಾಚ್‌ ಅಷ್ಟೇ; ಭಾರತ – ಪಾಕ್ ಪಂದ್ಯ ಬೇಡ ಎಂದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ

    ಶುಕ್ರವಾರ ಒಮನ್‌ ವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ ಮೊಹಮ್ಮದ್‌ ಹ್ಯಾರಿಸ್‌ ಅವರ ಅಮೋಘ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 160 ರನ್‌ ಗಳಿಸಿತು. ಈ ಗುರಿ ಬೆನ್ನಟ್ಟಿದ ಒಮನ್‌ ಕೇವಲ 67 ರನ್‌ಗಳಿಗೆ ಆಲೌಟ್‌ ಆಗಿ ಹೀನಾಯ ಸೋಲು ಕಂಡಿತು. ಇದನ್ನೂ ಓದಿ: RCB ಸ್ಟಾರ್‌ ಸಾಲ್ಟ್‌ ಬೆಂಕಿ ಆಟಕ್ಕೆ ಹರಿಣರ ಪಡೆ ಛಿದ್ರ – ಟಿ20ನಲ್ಲಿ ಹೊಸ ದಾಖಲೆ ಬರೆದ ಇಂಗ್ಲೆಂಡ್‌