Tag: salim merchant

  • ನಾನೊಬ್ಬ ಮುಸ್ಲಿಂ ಆಗಿದ್ದಕ್ಕೆ ನಾಚಿಕೆ ಆಗ್ತಿದೆ: ಉಗ್ರರ ದಾಳಿಗೆ ಸಲೀಂ ಮರ್ಚೆಂಟ್ ಕಿಡಿ

    ನಾನೊಬ್ಬ ಮುಸ್ಲಿಂ ಆಗಿದ್ದಕ್ಕೆ ನಾಚಿಕೆ ಆಗ್ತಿದೆ: ಉಗ್ರರ ದಾಳಿಗೆ ಸಲೀಂ ಮರ್ಚೆಂಟ್ ಕಿಡಿ

    ಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ (Pahalgam Terrorist Attack) ನಡೆದ ದಾಳಿ ಕುರಿತಂತೆ ಬಾಲಿವುಡ್ ಖ್ಯಾತ ಗಾಯಕ ಸಲೀಂ ಮರ್ಚೆಂಟ್ (Salim Merchant) ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಹಿಂದೂ ಎಂಬ ಕಾರಣಕ್ಕೆ ಹತ್ಯೆ ಮಾಡಲಾಗಿದೆ. ನಾನೊಬ್ಬ ಮುಸ್ಲಿಂ ಆಗಿದ್ದಕ್ಕೆ ನಾಚಿಕೆ ಆಗ್ತಿದೆ ಎಂದು ಸಲೀಂ ಮಾತನಾಡಿದ್ದಾರೆ. ಇದನ್ನೂ ಓದಿ: ಮಹಾಭಾರತ ಸಿನಿಮಾ ಮಾಡೋದಾಗಿ ಘೋಷಿಸಿದ ಆಮೀರ್ ಖಾನ್

    ಗಾಯಕ ಸಲೀಂ ಹಂಚಿಕೊಂಡಿರುವ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ, ಹಿಂದೂ ಅನ್ನೋ ಕಾರಣಕ್ಕೆ ಈ ದಾಳಿಯಲ್ಲಿ ಅಮಾಯಕರ ಹತ್ಯೆಯಾಗಿದೆ. ಅಮಾಯಕರನ್ನೇ ಟಾರ್ಗೆಟ್ ಮಾಡಲಾಗಿದೆ. ಹತ್ಯೆ ಮಾಡಿದವರು ಮುಸ್ಲಿಂರೇ? ಖಂಡಿತಾ ಅಲ್ಲ. ಅವರು ಭಯೋತ್ಪಾದಕರು ಎಂದಿದ್ದಾರೆ. ಹತ್ಯೆಯನ್ನು ಇಸ್ಲಾಂ ಎಂದು ಒಪ್ಪುವುದಿಲ್ಲ. ಯಾವುದೇ ಧರ್ಮದಲ್ಲಿ ಹೀಗೆಲ್ಲಾ ಇಲ್ಲ. ನಾನೊಬ್ಬ ಮುಸ್ಲಿಂ ಆಗಿದ್ದಕ್ಕೆ ನಾಚಿಕೆ ಆಗುತ್ತಿದೆ. ಇಂತಹ ದಿನಗಳನ್ನು ನೋಡುವಂತೆ ಆಗಿದೆ. ಇದನ್ನೂ ಓದಿ:ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದ ಬಾಲಿವುಡ್ ಸ್ಟಾರ್ಸ್‌

     

    View this post on Instagram

     

    A post shared by Salim Merchant (@salimmerchant)

    ನನ್ನ ಹಿಂದೂ ಸಹೋದರ ಸಹೋದರಿಯರ ಮೇಲೆ ಅವರು ಕ್ರೂರವಾಗಿ ದಾಳಿ ಮಾಡಿದ್ದಾರೆ. ಅದು ಹಿಂದೂ ಆಗಿರೋದ್ದಕ್ಕೆ, ಇದು ಯಾವಾಗ ಅಂತ್ಯಗೊಳ್ಳುತ್ತೆ ಎಂದು ಅವರು ಪ್ರಶ್ನಿಸಿದ್ದಾರೆ. ಕಳೆದ ಎರಡ್ಮೂರು ವರ್ಷದಿಂದ ಕಾಶ್ಮೀರ ಜನರು ಸಮಸ್ಯೆಗಳಿಂದ ಮುಕ್ತಿ ಪಡೆದು, ಸಹಜ ಜೀವನಕ್ಕೆ ಮರಳುತ್ತಿದ್ದರು. ಈ ದಾಳಿಯಿಂದ ಮತ್ತೆ ಅದೇ ರೀತಿ ಪರಿಸ್ಥಿತಿ ಎದುರಿಸುವಂತಾಗಿದೆ. ನನಗೆ ಯಾವ ರೀತಿಯಲ್ಲಿ ನೋವು ಮತ್ತು ಆಕ್ರೋಶವನ್ನು ವ್ಯಕ್ತಪಡಿಸಬೇಕು ಅಂತ ಅರ್ಥವಾಗುತ್ತಿಲ್ಲ. ನಾನು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ, ತೀರಿಕೊಂಡಿರುವ ಆ ವ್ಯಕ್ತಿಗಳ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಗಾಯಕ ಸಲೀಂ ಮಾತನಾಡಿದ್ದಾರೆ.

    ಏ.22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರ ದಾಳಿಗೆ 26 ಮಂದಿ ಹಿಂದೂಗಳು ಬಲಿಯಾಗಿದ್ದಾರೆ. ಹಲವರು ಗಾಯಗೊಂಡಿದ್ದಾರೆ.

  • ಜೂನ್‌ನಲ್ಲಿ ಸಿಧು ಮೂಸೆವಾಲಾ ಕೊನೆಯ ಹಾಡು ಬಿಡುಗಡೆಯಾಗುವ ನಿರೀಕ್ಷೆಯಿದೆ: ಸಲೀಮ್ ಮರ್ಚೆಂಟ್

    ಜೂನ್‌ನಲ್ಲಿ ಸಿಧು ಮೂಸೆವಾಲಾ ಕೊನೆಯ ಹಾಡು ಬಿಡುಗಡೆಯಾಗುವ ನಿರೀಕ್ಷೆಯಿದೆ: ಸಲೀಮ್ ಮರ್ಚೆಂಟ್

    ಚಂಢೀಗಡ: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಪಂಜಾಬ್‍ನ ಮಾನ್ಸಾ ಜಿಲ್ಲೆಯಲ್ಲಿ ದುಷ್ಕರ್ಮಿಗಳಿಂದ ಭಾನುವಾರ ಗುಂಡಿಟ್ಟು ಹತ್ಯೆಗೈಯ್ಯಲಾಗಿತ್ತು. ಅವರು ಸಾಯುವ ಮುನ್ನ ದೇಸೀ ಹಾಡೊಂದನ್ನು ಹಾಡಿದ್ದರು. ಆ ಹಾಡನ್ನು ಇದೇ ಜೂನ್‍ನಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ ಎಂದು ಬಾಲಿವುಡ್‍ನ ಖ್ಯಾತ ಗಾಯಕ ಸಲೀಮ್ ಮರ್ಚೆಂಟ್ ತಿಳಿಸಿದ್ದಾರೆ.

     

    View this post on Instagram

     

    A post shared by Salim Merchant (@salimmerchant)

    ಸಿಧು ಅವರ ಹುಟ್ಟುಹಬ್ಬದ ಯೋಜನೆಗಳ ಬಗ್ಗೆ ಅವರು ಮಾತನಾಡಿ, ಸಿಧು ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದರು. ಗಾಯಕ ತನ್ನ ಹುಟ್ಟುಹಬ್ಬದಂದು ಕೆಲವು ವಿಶೇಷ ಯೋಜನೆಗಳನ್ನು ಹೊಂದಿದ್ದರು. ಜೂನ್ 11 ರಂದು ಸಿಧು ಅವರ ಜನ್ಮದಿನ ಬರುತ್ತದೆ. ಈ ಬಾರಿ ಅವರು 29 ವರ್ಷಕ್ಕೆ ಕಾಲಿಡುತ್ತಿದ್ದರು. ಸದ್ಯದಲ್ಲೇ ಈ ಹಾಡಿನ ಪೋಸ್ಟರ್ ರಿಲೀಸ್ ಮಾಡುವ ಪ್ಲಾನ್ ಮಾಡಿದ್ದರು. ಆದರೆ ಅದಕ್ಕೂ ಮುನ್ನ ಇಂಥದ್ದೊಂದು ಘಟನೆ ನಡೆದಿದ್ದು, ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಸಿಧು ಮೂಸೇವಾಲಾ ಈ ಬಾರಿ ದೇಸೀ ಪಂಜಾಬಿ ಶೈಲಿಯಲ್ಲಿ ಹುಟ್ಟುಹಬ್ಬವನ್ನು ಆಚರಿಸಲು ಯೋಜಿಸಿದ್ದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ಗೆ ಮುಖ್ಯಮಂತ್ರಿ ಚಂದ್ರು ಗುಡ್ ಬೈ

    ಸಿಧು ತುಂಬಾ ಪ್ರೀತಿಯಿಂದ ಮಾತನಾಡುವ ಗೌರವಾನ್ವಿತ ವ್ಯಕ್ತಿ. ನಾನು ಟಿಪಿಕಲ್ ಪಂಜಾಬಿ ಹಾಡೊಂದನ್ನು ಕಂಪೋಸ್ ಮಾಡಿದ್ದೆ, ಆ ನಂತರ ಸಿಧು ಮಾತ್ರ ಈ ಹಾಡನ್ನು ಚೆನ್ನಾಗಿ ಹಾಡಬಲ್ಲ ಎಂದು ನನಗೆ ಖಾತ್ರಿಯಾಗಿತ್ತು. ಆದರೆ ದೇವರ ಇಚ್ಛೆಯ ಬೇರೆಯಾಗಿತ್ತು ಎಂದರು. ಇದನ್ನೂ ಓದಿ: ಗ್ರಾಮದೇವತೆಗೆ ಉಡಿ ತುಂಬುವಾಗ ದಲಿತರಿಗೆ ಬಹಿಷ್ಕಾರ ಆರೋಪ

    ಸಿಧು ಅವರ ಹಾಡು ಇದೇ ಜೂನ್‍ನಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಾವು ಈ ಹಾಡನ್ನು ಬಿಡುಗಡೆ ಮಾಡಬೇಕಾಗಿತ್ತು. ಆದರೆ ಸಿಧು ಚುನಾವಣೆಯಲ್ಲಿ ಬ್ಯುಸಿಯಾದರು ಮತ್ತು ಅದರ ಬಿಡುಗಡೆಯು ಸ್ಥಗಿತಗೊಂಡಿತು. ನಂತರ ಜೂನ್‍ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದೆವು, ಆದರೆ ಅದಕ್ಕೂ ಮುನ್ನ ಈ ಅವಘಡ ಸಂಭವಿಸಿದೆ ಎಂದರು.