Tag: Salim Ahmed

  • ಸಚಿವ ಸಂಪುಟ ಪುನರ್ ರಚನೆ ಹೈಕಮಾಂಡ್ ತೀರ್ಮಾನವೇ ಅಂತಿಮ: ಸಲೀಂ ಅಹಮದ್

    ಸಚಿವ ಸಂಪುಟ ಪುನರ್ ರಚನೆ ಹೈಕಮಾಂಡ್ ತೀರ್ಮಾನವೇ ಅಂತಿಮ: ಸಲೀಂ ಅಹಮದ್

    ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಅಥವಾ ಸಂಪುಟ ಪುನರ್ ರಚನೆ (Karnataka Cabinet Reshuffle) ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್ (Congress High Command) ತೀರ್ಮಾನ ಮಾಡುತ್ತದೆ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್ (Salim Ahmed) ತಿಳಿಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ, ಸದ್ಯಕ್ಕೆ ಸಂಪುಟ ವಿಸ್ತರಣೆ, ಪುನರ್ ರಚನೆ ಇಲ್ಲ. 3-4 ರಾಜ್ಯಗಳ ಚುನಾವಣೆ ಇದೆ. ಹೀಗಾಗಿ ಸಂಪುಟ ಪುನರ್ ರಚನೆ ಬಗ್ಗೆ ಮಾಹಿತಿ ಇಲ್ಲ. ಸದ್ಯಕ್ಕಂತೂ ಸಂಪುಟ ವಿಸ್ತರಣೆ ಇಲ್ಲ. ಆದರೂ ಈ ವಿಚಾರದಲ್ಲಿ ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅವರು ಹೇಳಿದ್ದಾರೆ.

    ಎಷ್ಟು ದಿನ ನಾನು ಸಚಿವನಾಗಿ ಇರುತ್ತೇನೋ ಎಂಬ ಸಚಿವ ಜಮೀರ್ ಹೇಳಿಕೆ ವಿಚಾರವಾಗಿ, ಜಮೀರ್ ಅಹಮದ್ ಹೇಳಿಕೆ ನನಗೆ ಗೊತ್ತಿಲ್ಲ. ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ ಎಂದಿದ್ದಾರೆ.

    ಇದೇ ವೇಳೆ ಪತ್ರಕರ್ತರು ನೀವು ಸಚಿವ ಸ್ಥಾನದ ಆಕಾಂಕ್ಷಿಯೇ? ಎಂದು ಪ್ರಶ್ನಿಸಿದರು. ಇದಕ್ಕೆ, ಸಂಪುಟ ವಿಸ್ತರಣೆ ಸದ್ಯಕ್ಕೆ ಇಲ್ಲ ಎಂದು ಜಾರಿಕೊಂಡರು.

  • ಬಿಜೆಪಿಯದ್ದು ಹಳಿ ತಪ್ಪಿದ ಡಬ್ಬಾ ಇಂಜಿನ್ ಸರ್ಕಾರ: ಸಲೀಂ ಅಹ್ಮದ್

    ಬಿಜೆಪಿಯದ್ದು ಹಳಿ ತಪ್ಪಿದ ಡಬ್ಬಾ ಇಂಜಿನ್ ಸರ್ಕಾರ: ಸಲೀಂ ಅಹ್ಮದ್

    ಕೋಲಾರ : ಬಿಜೆಪಿ (BJP) ಅವರದ್ದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಇದು ಹಳಿ ತಪ್ಪಿದ ಡಬ್ಬಾ ಇಂಜಿನ್ ಸರ್ಕಾರ ಎಂದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ (Salim Ahmed) ವ್ಯಂಗ್ಯವಾಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರಿಗೆ ಇವತ್ತಿಗೂ ಪಟ್ಟಿ ಬಿಡುಗಡೆ ಮಾಡುವ ಶಕ್ತಿ ಇಲ್ಲ. ಬಿಜೆಪಿ ಅವರದ್ದು ಡಬಲ್ ಇಂಜಿನ್ ಸರ್ಕಾರ ಅಲ್ಲ, ಇದು ಹಳಿ ತಪ್ಪಿದ ಡಬ್ಬಾ ಇಂಜಿನ್ ಸರ್ಕಾರ, ಈ ಸರ್ಕಾರಕ್ಕೆ ಯಾವುದೇ ಬದ್ಧತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

    ಕಾಂಗ್ರೆಸ್‌ನಲ್ಲಿ (Congress) ಎದ್ದಿರುವ ಸಿಎಂ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಯಾರು ಸಹ ಸಿಎಂ ಆಕಾಂಕ್ಷಿ ಆಗುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನಮ್ಮ ಮೊದಲನೇ ಕರ್ತವ್ಯ ನಾವು ಅಧಿಕಾರಕ್ಕೆ ಬರಬೇಕು. ಜನ ವಿರೋಧಿ ಸರ್ಕಾರ ಹೋಗಬೇಕು, ಈ ಸರ್ಕಾರವನ್ನು ತೆಗೆಯಬೇಕು ಎನ್ನುವುದಾಗಿದೆ. ಈಗಾಗಲೇ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆಶಿ (DK Shivakumar) ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ರಾಜ್ಯದಲ್ಲಿ ಮೊದಲು ಭ್ರಷ್ಟ ಹಾಗೂ ಲೂಟಿಕೋರರ ಸರ್ಕಾರವನ್ನು ತೆಗೆಯುವಂತಹ ಕೆಲಸ ಆಗಬೇಕು. ನಂತರ ಶಾಸಕರು ಹಾಗೂ ಹೈಕಮಾಂಡ್ ಈ ಕುರಿತು ಚರ್ಚೆ ನಡೆಸಿ ತೀರ್ಮಾನ ಮಾಡುತ್ತಾರೆ ಎಂದರು. ಇದನ್ನೂ ಓದಿ: ಸರ್ಕಾರವನ್ನು ಟೀಕಿಸಿದ ಮಾತ್ರಕ್ಕೆ ಮಾಧ್ಯಮ ನಿಯಂತ್ರಿಸಲು ಸಾಧ್ಯವಿಲ್ಲ: ಕೇಂದ್ರಕ್ಕೆ ಸುಪ್ರೀಂ ತರಾಟೆ

    ಯಾರು ಸಹ ಸಿಎಂ ಆಕಾಂಕ್ಷಿ ಆಗುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ನಮ್ಮ ಮೊದಲನೇ ಕರ್ತವ್ಯ ನಾವು ಅಧಿಕಾರಕ್ಕೆ ಬರಬೇಕು. ಜನ ವಿರೋಧಿ ಸರ್ಕಾರ ಹೋಗಬೇಕು. ಈ ಸರ್ಕಾರವನ್ನು ತೆಗೆಯಬೇಕು ಎನ್ನುವುದು ಗುರಿ ಎಂದು ಹೇಳಿದರು. ಕಾಂಗ್ರೆಸ್‌ನಲ್ಲಿ ಯಾವ ಗೊಂದಲ ಇಲ್ಲ, ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುತ್ತಿದ್ದೇವೆ. ಈಗಾಗಲೇ ಮೊದಲನೇ ಪಟ್ಟಿ ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕಲ್ಯಾಣಿಯಲ್ಲಿ ಮುಳುಗಿ ಐವರು ಸಾವು

  • ಪ್ರತಾಪ್ ಸಿಂಹ ಸಂಸದನಾಗಿರಲು ನಾಲಾಯಕ್: ಸಲೀಂ ಅಹ್ಮದ್

    ಪ್ರತಾಪ್ ಸಿಂಹ ಸಂಸದನಾಗಿರಲು ನಾಲಾಯಕ್: ಸಲೀಂ ಅಹ್ಮದ್

    ಗದಗ: ಪ್ರತಾಪ್ ಸಿಂಹ (Pratap Simha) ಮಾನಸಿಕ ಸ್ಥಿತಿ ಕಳೆದುಕೊಂಡಿದ್ದಾರೆ. ಅವರು ಎಂಪಿ ಆಗುವುದಕ್ಕೆ ನಾಲಾಯಕ್ ಎಂದು ವಿಧಾನ ಪರಿಷತ್ (Vidhana Parishad) ಸದಸ್ಯ ಸಲೀಂ ಅಹ್ಮದ್ (Salim Ahmed) ವಾಗ್ದಾಳಿ ನಡೆಸಿದ್ದಾರೆ.

    ಜಿಲ್ಲೆಯ ಮುಂಡರಗಿ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಮಾತನಾಡಿದ ಅವರು, ಬಸ್ ಶೆಲ್ಟರ್ ಮೇಲಿನ ಗುಂಬಜ್ (Gumbaz) ತೆರವು ವಿಚಾರವಾಗಿ ಕಿಡಿಕಾರಿದ್ದಾರೆ. ಇಂತಹ ಹೇಳಿಕೆಗಳ ಮೂಲಕ ಸಮಾಜಕ್ಕೆ ಏನು ಸಂದೇಶ ಕೊಡುತ್ತಿದ್ದಾರೆ? ನೀವು ಎಂಪಿ ಆಗಿ ಏನು ಅಭಿವೃದ್ಧಿ ಕಾರ್ಯ ಮಾಡಿದ್ದೀರಾ? ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. 40% ಕಮಿಷನ್ ಸರ್ಕಾರ ಅಂತ ಜಗಜ್ಜಾಹಿರವಾಗಿದೆ. ಭ್ರಷ್ಟಾಚಾರದಲ್ಲಿ ಉದಯವಾಗಿ, ಅದರಲ್ಲಿ ಮುಳುಗಿದೆ. ಅದನ್ನು ಸರಿಪಡಿಸಿಕೊಳ್ಳಲು ಹೇಳುವ ಹಾಗೂ ಆ ಬಗ್ಗೆ ಧ್ವನಿ ಎತ್ತುವ ಧೈರ್ಯ ಈ ಸಂಸದರಿಗೆ ಇದೆಯಾ ಎಂದು ಪ್ರಶ್ನಿಸಿದ್ದಾರೆ.

    ಗುಂಬಜ್ ಇರುವುದನ್ನು ತೆರವು ಮಾಡುವುದಾದರೆ, ಮೈಸೂರು, ಬೆಂಗಳೂರಿನಲ್ಲಿ, ದೆಹಲಿಯಲ್ಲಿ ಗುಂಬಜ್ ರೀತಿಯಲ್ಲಿ ಸರ್ಕಾರಿ ಕಟ್ಟಡಗಳಿವೆ. ಅವುಗಳನ್ನು ಎಲ್ಲಾ ಒಡೆಯುತ್ತಿರಾ? ಆ ಧೈರ್ಯ ನಿಮಗಿದೆಯಾ? ಒಬ್ಬ ಸಂಸದನಾಗಿ ಇಂತಹ ಅವಹೇಳನಕಾರಿ ಕೆಲಸ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ: ಪೆಟ್ರೋಲ್ ಜೊತೆಗೆ ನೀರು ಬೆರಕೆ – ಪಂಪ್ ವಿರುದ್ಧ ವ್ಯಕ್ತಿಯಿಂದ ದೂರು

    ವಿವೇಕ ಶಾಲೆಗಳಿಗೆ ಕೇಸರಿ ಬಣ್ಣದ ಕೆಸರೆರಚಾಟ ಕುರಿತು ಮಾತನಾಡಿದ ಅವರು, ಬಣ್ಣ ಬಿಡಿ, ಸರ್ಕಾರಿ ಶಾಲೆಗಳಲ್ಲಿ ಟೀಚರ್ ಗಳಿಲ್ಲ, ಕೊಠಡಿಗಳಿಲ್ಲ, ಸಮವಸ್ತ್ರ, ಶೂಗಳಿಲ್ಲ, ಮಕ್ಕಳಿಗೆ ಸೈಕಲ್‍ಗಳಿಲ್ಲ, ಮಧ್ಯಾಹ್ನ ಬಿಸಿಯೂಟ ಸರಿಯಾಗಿ ಸಿಗುತ್ತಿಲ್ಲ. ಅದರ ಕಡೆ ಗಮನ ಕೊಡಿ. ಇದೆಲ್ಲಾ ಬಿಟ್ಟು ಬಿಜೆಪಿ ಸರ್ಕಾರ ಬಣ್ಣದ ಹಿಂದೆ ಬಿದ್ದಿದೆ. ಎಲ್ಲವನ್ನೂ ಕೇಸರಿಕರಣ ಮಾಡುವುದಕ್ಕೆ ಹೊರಟಿದ್ದಾರೆ. ಮಕ್ಕಳಿಗೆ ಈ ರೀತಿ ಬಣ್ಣ ಬಿಂಬಿಸುವ ಬದಲು ಒಳ್ಳೆ ಶಿಕ್ಷಣ ನೀಡಿ ಎಂದು ಹರಿಹಾಯ್ದಿದ್ದಾರೆ.

    ಈ ವೇಳೆ ಕಾಂಗ್ರೆಸ್ ಮುಖಂಡ ಶಿವಕುಮಾರಗೌಡ ಪಾಟೀಲ್, ಮಾಜಿ ಶಾಸಕ ಜಿ.ಎಸ್. ಪಾಟೀಲ್, ರಾಮಕೃಷ್ಣ ದೊಡ್ಡಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದನ್ನೂ ಓದಿ: ಹಿಂದೂ ಹುಡುಗಿಯರು ಎಚ್ಚರಿಕೆಯಿಂದ ಡೇಟಿಂಗ್ ಮಾಡಿ – ಪ್ರಮೋದ್ ಮುತಾಲಿಕ್

    Live Tv
    [brid partner=56869869 player=32851 video=960834 autoplay=true]

  • ಕಾಂಗ್ರೆಸ್‌ ಪಾರದರ್ಶಕ ಪಕ್ಷ, ಭ್ರಷ್ಟಾಚಾರದಿಂದ ಹಣ ಸಂಗ್ರಹಿಸಿಲ್ಲ: ಸಲೀಂ ಅಹ್ಮದ್

    ಕಾಂಗ್ರೆಸ್‌ ಪಾರದರ್ಶಕ ಪಕ್ಷ, ಭ್ರಷ್ಟಾಚಾರದಿಂದ ಹಣ ಸಂಗ್ರಹಿಸಿಲ್ಲ: ಸಲೀಂ ಅಹ್ಮದ್

    ಹಾವೇರಿ: ಕಾಂಗ್ರೆಸ್‌ (Congress) ಪಾರದರ್ಶಕ ಪಕ್ಷವಾಗಿದ್ದು, ನಾವು ಭ್ರಷ್ಟಾಚಾರದಿಂದ ಹಣ ಸಂಗ್ರಹಿಸಿಲ್ಲ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ (Salim Ahmed) ತಿಳಿಸಿದರು.

    ಹಾವೇರಿಯಲ್ಲಿ ಮಾತನಾಡಿದ ಅವರು, ನಾವು ಭ್ರಷ್ಟಾಚಾರದಿಂದ ಹಣ ಸಂಗ್ರಹಿಸಿಲ್ಲ, ಪಕ್ಷದ ಕಟ್ಟಡಕ್ಕಾಗಿ ಆಕಾಂಕ್ಷಿಗಳಿಂದ ಹಣ ಸಂಗ್ರಹ ಮಾಡುತ್ತಿದ್ದೇವೆ. ಆಕಾಂಕ್ಷಿಗಳು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸುವಾಗ ಅವರಿಂದ ಒಂದು ಲಕ್ಷ, ಎರಡು ಲಕ್ಷ ರೂ. ಹಣ ಸಂಗ್ರಹ ಮಾಡುತ್ತಿದ್ದೇವೆ‌ ಎಂದ ಅವರು ರಾಜ್ಯದಲ್ಲಿ ಈಗಾಗಲೇ ಒಂದು ಸಾವಿರ ಜನರು ಸರ್ವೇ ಮಾಡುತ್ತಿದ್ದಾರೆ. ಸಾಕಷ್ಟು ಜನರು ಆಕಾಂಕ್ಷಿಗಳಿದ್ದಾರೆ. ಪಕ್ಷದ ಆಂತರಿಕ ಸರ್ವೇ ಮುಗಿದ ಬಳಿಕ 150 ಕ್ಷೇತ್ರಗಳ ಅಭ್ಯರ್ಥಿ ಹೆಸರನ್ನ ಘೋಷಣೆ ಮಾಡುತ್ತೇವೆ ಎಂದರು.

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಆಗಿದೆ ಎನ್ನುವ ಬಿಜೆಪಿಯವರಿಗೆ ನಾಚಿಕೆ ಆಗಬೇಕು. ತನಿಖೆ ಮಾಡಿಸಿ. ನಾವು ತನಿಖೆ ಮಾಡಬಾರದು ಅಂತಾ ಹೇಳಿಲ್ಲ. ಸಿಬಿಐ ತನಿಖೆ ಮಾಡಿಸಿ ನಮಗೇನೂ ಹೆದರಿಕೆ ಇಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕಾ. ಬಿಜೆಪಿ ಸರ್ಕಾರದ ಪರ್ಸಂಟೇಜ್ ಕಮಿಷನ್ ಬಗ್ಗೆ ಇಡೀ ದೇಶದ ಜನರು ಮಾತನಾಡ್ತಿದ್ದಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಬಿಜೆಪಿಯವರು ನನ್ನನ್ನು ಕ್ರಿಮಿನಲ್ ಮಾಡಿದ್ದಾರೆ: ಡಿಕೆಶಿ

    ಗುತ್ತಿಗೆದಾರರ ಸಂಘದವರು ಪರ್ಸಂಟೇಜ್ ಬಗ್ಗೆ ಪತ್ರ ಬರೆದ್ರೂ ಪ್ರಧಾನಿಯವರಿಂದ ಒಂದೇ ಒಂದು ಉತ್ತರವಿಲ್ಲ. ಹಾಗಾದ್ರೆ ಪ್ರಧಾನಿಯವರು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ಕೊಡ್ತಿದ್ದಾರೆ. ಕಾಂಗ್ರೆಸ್ ಪಕ್ಷ ಯಾರಿಗೂ ಹೆದರುವುದಿಲ್ಲ. ನಮ್ಮ ಹೋರಾಟ ಇರೋದು ಬಿಜೆಪಿಯ ಭ್ರಷ್ಟ ಸರ್ಕಾರದ ವಿರುದ್ಧವಾಗಿದೆ. ಅಷ್ಟೇ ಅಲ್ಲದೇ ಜೆಡಿಎಸ್‌ನ ಕೆಲವು ನಾಯಕರು ನಮ್ಮ ವಿರುದ್ಧ ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಹಾಕಿ ಪರೋಕ್ಷವಾಗಿ ಬಿಜೆಪಿಗೆ ಸಪೋರ್ಟ್ ಮಾಡ್ತಿದ್ದಾರೆ. ಯಾವ್ಯಾವ ಬಿಜೆಪಿ(BJP), ಜೆಡಿಎಸ್ (JDS) ಮುಖಂಡರು ಕಾಂಗ್ರೆಸ್‌ಗೆ ಬರ್ತಾರೆ ಅನ್ನೋದನ್ನು ಕೆಲವು ದಿನಗಳ ಕಾಲ‌ ಕಾದು ನೋಡಿ ಎಂದರು‌. ಇದನ್ನೂ ಓದಿ: ಮಂಗಳೂರು ಸೆಂಟ್ರಲ್ ಮಾರ್ಕೆಟ್‌ನ ನೀಲನಕ್ಷೆಯಲ್ಲಿ ಬೀಫ್ ಸ್ಟಾಲ್ – ಬಿಜೆಪಿ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ

    Live Tv
    [brid partner=56869869 player=32851 video=960834 autoplay=true]

  • ದಿ ಕಾಶ್ಮೀರ್ ಫೈಲ್ಸ್ : ಪರಿಷತ್ ನಲ್ಲಿ ಗದ್ದಲ

    ದಿ ಕಾಶ್ಮೀರ್ ಫೈಲ್ಸ್ : ಪರಿಷತ್ ನಲ್ಲಿ ಗದ್ದಲ

    ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ವೀಕ್ಷಣೆಗೆ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರಕಟಣೆ ಹೊರಡಿಸುತ್ತಿದ್ದಂತೆಯೇ ಕಾಂಗ್ರೆಸ್ ಸದಸ್ಯರು ಗದ್ದಲ ಮಾಡಿದ ಪ್ರಸಂಗ ಇಂದು ಪರಿಷತ್ ನಲ್ಲಿ ನಡೆಯಿತು. ಸೋಮವಾರ ವಿಧಾನಸಭೆಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಂದು ಚಿತ್ರ ವೀಕ್ಷಿಸಲು ಸಚಿವರಿಗೆ ಮತ್ತು ಶಾಸಕರಿಗೆ ವ್ಯವಸ್ಥೆ ಮಾಡಿದ್ದೇವೆ. ಎಲ್ಲರೂ ಮಂತ್ರಿ ಮಾಲ್ ಥಿಯೇಟರ್ ಗೆ ಸಿನಿಮಾ ವೀಕ್ಷಿಸಲು ಬರಬೇಕೆಂದು ಆಹ್ವಾನ ನೀಡಿದ್ದರು. ಇದರ ಬೆನ್ನಲ್ಲೇ ಇಂದು ವಿಧಾನ ಪರಿಷತ್ ನಲ್ಲಿ ಬಸವರಾಜ ಹೊರಟ್ಟಿ ಕೂಡ ಪ್ರಕಟಣೆ ಹೊರಡಿಸಿದರು. ಅದಕ್ಕೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಯಿತು. ಸಿನಿಮಾ ವೀಕ್ಷಣೆಯ ವಿಚಾರವನ್ನು ಕೂಡಲೇ ಹಿಂಪಡೆಯಬೇಕೆಂದು ಕಾಂಗ್ರಸ್ ಪಟ್ಟು ಹಿಡಿಯಿತು.

    ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಮಾತನಾಡಿ, “ದಿ ಕಾಶ್ಮೀರ್ ಫೈಲ್ಸ್ ಒಂದೇ ಸಿನಿಮಾ ಏಕೆ, ಫರ್ಜಾನಾ ಮತ್ತು ವಾಟರ್ ಸಿನಿಮಾವನ್ನು ತೋರಿಸಿ’ ಎಂದರು. ಮಾತನ್ನು ಮುಂದುವರೆಸಿದ ಹರಿಪ್ರಸಾದ್ “ಕೆಲವರು ಸದನದಲ್ಲಿ ಅಶ್ಲೀಲ ಚಿತ್ರ ನೋಡಿದ್ದಾರೆ. ನಾವು ಯಾವ ಸಿನಿಮಾ ನೋಡಬೇಕು ಅಂತ ಸದನದಲ್ಲಿ ಹೇಳುವ ಹಾಗಿಲ್ಲ. ಸರಕಾರ ಇರುವುದು ಸಿನಿಮಾ ತೋರಿಸುವುದಕ್ಕೆ ಅಲ್ಲ’ ಎಂದು ನುಡಿದರು. ಇದನ್ನೂ ಓದಿ: ಕಾಶ್ಮೀರದಲ್ಲಿದ್ದ ನನ್ನ ಪೂರ್ವಜರು ನೋವು ತಿಂದೆ ಕಾಶ್ಮೀರ ಬಿಟ್ಟರು : ಅನಂತ್ ನಾಗ್ ಬಿಚ್ಚಿಟ್ಟ ಕಾಶ್ಮೀರಿ ಕ್ರೌರ್ಯ

    ಇನ್ನೋರ್ವ ಸದಸ್ಯರಾದ ಸಲೀಂ ಅಹಮದ್ ಕೂಡ ಮಾತನಾಡಿ ‘ಬಜೆಟ್ ಚರ್ಚೆ ಬಿಟ್ಟು ಸಿನಿಮಾ ಯಾಕೆ ನೋಡಬೇಕು’ ಎಂದು ಪ್ರಶ್ನಿಸಿದರು. ಕೊನೆಗೆ ಸಚಿವ ಸೋಮಶೇಖರ್ ಮಾತನಾಡಿ, ‘ಯಾರಿಗೂ ಕಡ್ಡಾಯ ಇಲ್ಲ, ಇಷ್ಟ ಇದ್ರೆ ನೋಡಿ’ ಎಂದು ಪ್ರತಿಭಟಿಸಿದ ಸದಸ್ಯರಿಗೆ ಉತ್ತರ ನೀಡಿದರು. ಈ ವಿಚಾರವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರ ನಡುವೆ ಸಿನಿಮಾ ವಿಚಾರಕ್ಕೆ ಗದ್ದಲ ಶುರುವಾಯಿತು. ಇದನ್ನೂ ಓದಿ : ದಿ ಕಾಶ್ಮೀರ್ ಫೈಲ್ಸ್ : ಅಂಥದ್ದೇನಿದೆ ಸಿನಿಮಾದಲ್ಲಿ? ದಳ್ಳುರಿಯಲ್ಲಿ ದಹನದ ಕಥನ!

    ಈ ಸಮಯದಲ್ಲಿ ಪರಿಷತ್ ನ ಕೆಲವು ಸದಸ್ಯರು ‘ಬಾಬೂ ಭಜರಂಗಿ’, ‘ಗುಜರಾತ್ ಫೈಲೂ’ ಮತ್ತಿತರ ಸಿನಿಮಾ ತೋರಿಸಿ ಎಂದು ಮತ್ತಷ್ಟು ಗದ್ದಲ ಹೆಚ್ಚಿಸಿದರು.

  • ಮೇಕೆದಾಟು ಹೋರಾಟಕ್ಕೆ ಸರ್ಕಾರ ಸಹಕಾರ ಕೊಡಬೇಕಿತ್ತು: ಸಲೀಂ ಅಹ್ಮದ್

    ಮೇಕೆದಾಟು ಹೋರಾಟಕ್ಕೆ ಸರ್ಕಾರ ಸಹಕಾರ ಕೊಡಬೇಕಿತ್ತು: ಸಲೀಂ ಅಹ್ಮದ್

    ಹಾವೇರಿ: ಮೇಕೆದಾಟು ವಿಚಾರದಲ್ಲಿ ನಡೆದ ಹೋರಾಟಕ್ಕೆ ಸರ್ಕಾರ ಸಹಕಾರ ಕೊಡಬೇಕಿತ್ತು. ಆದರೆ ಕೇಸ್‍ಗಳನ್ನು ಹಾಕುವ ಕೆಲಸ ಮಾಡಿದರು ಎಂದು ಸರ್ಕಾರದ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಕಿಡಿಕಾರಿದರು.

    ಹಾವೇರಿಯಲ್ಲಿ ಮಾತನಾಡಿದ ಅವರು, ಬಿಜೆಪಿಯು ನಮಗೆ ಸಿಗುತ್ತಿರುವ ಬೆಂಬಲ ನೋಡಿ ಅನಿವಾರ್ಯವಾಗಿ ಮೇಕೆದಾಟುವಿಗೆ ಬಜೆಟ್‍ನಲ್ಲಿ ಒಂದು ಸಾವಿರ ಕೋಟಿ ರೂ. ನೀಡಿದ್ದಾರೆ. ಮಹದಾಯಿ ಯೋಜನೆಯನ್ನು ಸರ್ಕಾರ ಕೂಡಲೇ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿದರು.

    ಗೋವಾ, ಕರ್ನಾಟಕ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಹೀಗಾಗಿ ಮಹದಾಯಿ ಯೋಜನೆ ಜಾರಿಗೆ ತರಬೇಕು. ನಮ್ಮದು ನಿರಂತರ ಹೋರಾಟ. ನಾವು ಗೆದ್ದಿದ್ದೇವೆ, ಸೋತಿದ್ದೇವೆ. ಅಖಿಲೇಶ್ ಯಾದವ, ಮಮತಾ ಬ್ಯಾನರ್ಜಿ ಅವರು ಇದು ಬಿಜೆಪಿ ಗೆಲುವಲ್ಲ, ಇವಿಎಂ ಗೆಲುವು ಎಂದು ಹೇಳಿದ್ದಾರೆ. ಈ ಬಗ್ಗೆ ಗಂಭೀರ ಚರ್ಚೆ ಆಗಬೇಕಿದೆ ಎಂದು ಆರೋಪಿಸಿದರು.

    ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಮಾಡುವ ಇಚ್ಛಾಶಕ್ತಿ ಸರ್ಕಾರಕ್ಕಿಲ್ಲ. ಯಾವುದೇ ಕಾರಣ ನೀಡದೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ನಡೆಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಒಂದೇ ಗಿಡದಲ್ಲಿ 1200 ಟೊಮೆಟೋ ಬೆಳೆದ- ಮುಂದೆ ಆಗಿದ್ದೇ ಬೇರೆ ಕಥೆ

    ಸಿಎಂ ಇಬ್ರಾಹಿಂ ಅವರು 2007ನೇ ವರ್ಷದಲ್ಲಿ ಪಕ್ಷ ಸೇರಿದರು. 2013ರಲ್ಲಿ ಸಂಗಮೇಶ್ ಅವರನ್ನು ಬಿಟ್ಟು ಇಬ್ರಾಹಿಂರಿಗೆ ಟಿಕೆಟ್ ಕೊಟ್ಟೆವು. ಆದರೆ ಅವರು ಗೆಲ್ಲಲಿಲ್ಲ, ಆದರೂ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ಮಾಡಿದರು. ಎರಡು ವರ್ಷಗಳಿಂದ ಇಬ್ರಾಹಿಂ ಯಾವುದೇ ಚುನಾವಣೆ, ಪಕ್ಷದ ಕಾರ್ಯಕ್ರಮಗಳಿಗೆ ಬರಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮುಂದಿನ ವಿಶ್ವಯುದ್ಧ ನಡೆದರೆ ಅದು ನೀರಿಗಾಗಿ: ಡಾ. ಜಗದೀಶ್ ಬಾಳ

    ಹರಿಪ್ರಸಾದ ಪಕ್ಷದ ನಿಷ್ಠಾವಂತರು. ಹೈಕಮಾಂಡ್ ಹರಿಪ್ರಸಾದರ ಸೇವೆ ಗುರುತಿಸಿ ಪರಿಷತ್ ಪ್ರತಿಪಕ್ಷದ ನಾಯಕ ಸ್ಥಾನ ನೀಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ನಡುವೆ ಎಲ್ಲೋ ಒಂದು ರೀತಿ ಹೊಂದಾಣಿಕೆ ನಡಿತಿದೆ. ಬಿಜೆಪಿಯ ಬಿ ಟೀಂ ಜೆಡಿಎಸ್ ಅಂತಿದ್ದಾರೆ. ಅಂತಹ ಪಕ್ಷಕ್ಕೆ ಇಬ್ರಾಂಹಿ ಅವರು ಹೋಗಬಾರದು. ಇಬ್ರಾಹಿಂ ಅವರು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂಬ ವಿಶ್ವಾಸವಿದೆ. ರಾಜ್ಯದ ಹಿತದೃಷ್ಟಿಯಿಂದ ಇಬ್ರಾಹಿಂರು ಕಾಂಗ್ರೆಸ್‍ನಲ್ಲಿ ಉಳಿತಾರೆ ಎಂಬ ವಿಶ್ವಾಸವಿದೆ ಎಂದರು.

  • ಹಿರಿಯರನ್ನು ಕಸದ ಬುಟ್ಟಿಗೆ ಹಾಕುವುದು ಬಿಜೆಪಿ ಸಂಸ್ಕೃತಿ- ಸಲೀಂ ಅಹ್ಮದ್

    ಹಿರಿಯರನ್ನು ಕಸದ ಬುಟ್ಟಿಗೆ ಹಾಕುವುದು ಬಿಜೆಪಿ ಸಂಸ್ಕೃತಿ- ಸಲೀಂ ಅಹ್ಮದ್

    –  ಶಾಸಕರನ್ನು ಖರೀದಿಸಿ ಸರ್ಕಾರ ರಚಿಸಿರೋದೇ ಅವರ ಸಾಧನೆ
    – ಬೊಮ್ಮಾಯಿ ಸ್ವತಂತ್ರವಾಗಿ ಅಧಿಕಾರ ನಡೆಸಲು ಸಾಧ್ಯವಾಗ್ತಿಲ್ಲ

    ಚಿತ್ರದುರ್ಗ:ಹಿರಿಯರನ್ನು ಕಸದ ಬುಟ್ಟಿಗೆ ಹಾಕುವುದು ಬಿಜೆಪಿ ಸಂಸ್ಕೃತಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.

    ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ ಕಾರ್ಯಕರ್ತರ ಸಭೆಗೆ ಮುನ್ನ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷ ದಲ್ಲಿರುವ ಹಿರಿಯರನ್ನ ಕಸದ ಬುಟ್ಟಿಗೆ ಹಾಕುವುದು ಬಿಜೆಪಿ ಸಂಸ್ಕ್ರತಿಯಾಗಿದೆ. ಈಗಾಗಲೇ ಬಿಜೆಪಿಯನ್ನು ಕಟ್ಟಿಬೆಳೆಸಿದ ಅಡ್ವಾಣಿ, ಮುರುಳಿ ಮನೋಹರ್ ಜೋಷಿ ಸೇರಿದಂತೆ ಉಮಾ ಭಾರತಿ ಅವರನ್ನ ಮನೆಯಲ್ಲಿ ಕೂರಿಸಿದ ಕೀರ್ತಿ ಬಿಜೆಪಿಗಿದೆ ಎಂದಿದ್ದಾರೆ. ಇದನ್ನೂ ಓದಿ: ಲಸಿಕೆ ಮೇಲೆ ಜನರಿಗೆ ನಂಬಿಕೆ ಬಂದಿದೆ: ಡಾ.ಕೆ.ಸುಧಾಕರ್

    ಅಲ್ಲದೇ ರಾಜ್ಯದಲ್ಲೀಗ ಇರೋದು ಭಾರತೀಯ ಜನತಾ ಪಾರ್ಟಿ ಅಲ್ಲ, ಅದೊಂದು ಭ್ರಷ್ಟ ಜನತಾ ಪಾರ್ಟಿಯಾಗಿದೆ. ದೇಶದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ, ಇಂಧನಗಳಾದ ಗ್ಯಾಸ್, ಪೆಟ್ರೋಲ್, ಡೀಸೆಲ್ ಬೆಲೆಯನ್ನು ಗಗನಕ್ಕೆ ಏರಿಸಿದೆ. ಹೀಗಾಗಿ ಕೇಂದ್ರ ಸಚಿವರು ರಾಜ್ಯದ ಜನರಲ್ಲಿ ಕ್ಷಮೆ ಕೇಳಬೇಕು ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಕೇಳದೇ ಪಾನಿಪುರಿ ತಂದ ಗಂಡ- ಪ್ರಾಣ ಬಿಟ್ಟ ಪತ್ನಿ

    ಈ ಕೋವಿಡ್ ಸಂಕಷ್ಟದ ವೇಳೆ ಜನಶೀರ್ವಾದ ಯಾತ್ರೆ ನಡೆಸಿದ ಸಚಿವರು ರಾಜ್ಯದ ಜನರ ಕಷ್ಟವನ್ನು ಆಲಿಸುತ್ತಿಲ್ಲ. ದರ ಏರಿಕೆಯಿಂದ ಜನರ ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಇಂತಹ ಸಂಕಷ್ಟದ ವೇಳೆ 25 ಜನ ಬಿಜೆಪಿ ಎಂಪಿಗಳು ರಾಜ್ಯದಲ್ಲಿ ಏನು ಮಾಡ್ತಿದ್ದಾರೆ? ಎಂದು ಪ್ರಶ್ನಿಸಿದರು. ಈ ಸಂಸದರು, ರಾಜ್ಯಕ್ಕೆ ಬಂದಾಗ ಮಾತ್ರ ಘರ್ಜನೆ ಮಾಡ್ತಾರೆ. ಆದರೆ ಮೋದಿ ಮುಂದೆ ಇಲಿಗಳಂತೆ ವರ್ತಿಸುತ್ತಾರೆ ಎಂದರು ಆಕ್ರೋಶ ಹೊರಹಾಕಿದ್ಧಾರೆ. ಇದನ್ನೂ ಓದಿ: ವಧು ಬೇಕಾಗಿದ್ದಾಳೆ, ಅಂಗಡಿ ಮುಂದೆ ಬೋರ್ಡ್-ಆಸ್ಟ್ರೇಲಿಯ, ಇಂಗ್ಲೆಂಡ್‍ನಿಂದ ಬಂತು ಆಫರ್

    ಮುಂದಿನ 10 ವರ್ಷ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲ್ಲ ಎಂಬ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಯಾವತ್ತೂ ಪಕ್ಷ ಸಂಘಟನೆ ಮಾಡಿಲ್ಲ. ಅವರ ಹೇಳಿಕೆ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ. ಕಟೀಲ್ ಅವರ ಹೇಳಿಯಲ್ಲಿ ಯಾವುದೇ ನಿಜಾಂಶ ಇಲ್ಲ. ನಮ್ಮ ಶಾಸಕರನ್ನು ಖರೀದಿ ಮಾಡಿ ಬಿಜೆಪಿ ಸರ್ಕಾರ ರಚಿಸಿರೋದೇ ಅವರ ಸಾಧನೆಯಾಗಿದೆ. ಹೀಗಾಗಿ ಈ ಸರ್ಕಾರಕ್ಕೆ ಹೆಚ್ಚಿ ಆಯಸ್ಸು ಇಲ್ಲ ಜೊತೆಗೆ ಹೆಚ್ಚು ದಿನ ಬದುಕೋದಿಲ್ಲ. ಹಾಗೆಯೇ ಆಕಸ್ಮಿಕವಾಗಿ ಸಿಎಂ ಬದಲಾವಣೆ ಆಗಿರಬಹುದು. ಆದರೆ ಸಿಎಂ ಬೊಮ್ಮಾಯಿ ಕೆಲವರ ಹಿಡಿತದಲ್ಲಿದ್ದೂ, ಅವರು ಸ್ವತಂತ್ರವಾಗಿ ಅಧಿಕಾರ ನಡೆಸಲು ಸಾಧ್ಯವಾಗ್ತಿಲ್ಲ ಎಂದು ಆರೋಪಿಸಿದರು.

  • ಕೆಪಿಸಿಸಿ ಕಾರ್ಯಧ್ಯಕ್ಷರ ಮುಂದೆಯೇ ಟಿಕೆಟ್ ಗಾಗಿ ಕೈ, ಕೈ ಮಿಲಾಯಿಸಿದ ಕೈ ಕಾರ್ಯಕರ್ತರು

    ಕೆಪಿಸಿಸಿ ಕಾರ್ಯಧ್ಯಕ್ಷರ ಮುಂದೆಯೇ ಟಿಕೆಟ್ ಗಾಗಿ ಕೈ, ಕೈ ಮಿಲಾಯಿಸಿದ ಕೈ ಕಾರ್ಯಕರ್ತರು

    ಹಾವೇರಿ: ಮಾಜಿ ಸಚಿವ ಹಾಲಿ ಶಾಸಕರಾಗಿದ್ದ ಸಿ.ಎಂ ಉದಾಸಿ ನಿಧನದಿಂದ ತೆರವಾಗಿರುಗಿ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ಸದ್ಯದಲ್ಲಿ ಉಪ ಚುನಾವಣೆ ನಡೆಯಲಿದೆ. ಈ ನಡುವೆ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಫೈಟ್ ತಾರಕ್ಕಕ್ಕೆ ಏರಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷರ ಸಮ್ಮುಖದಲ್ಲಿ ಮನೋಹರ್ ಹಾಗೂ ಶ್ರೀನಿವಾಸ ಮಾನೆ ಬೆಂಬಲಿಗರು ಕೈ, ಕೈ ಮಿಲಾಯಿಸಿದ್ದ ಘಟನೆ ಹಾವೇರಿಯಲ್ಲಿ ನಡೆದಿದೆ.

    ಬಿಜೆಪಿ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ನಡೆಯುವ ಪ್ರತಿಭಟನೆಯ ಮುಂದಾಳತ್ವ ವಹಿಸಲು ಆಗಮಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಸಮ್ಮುಖದಲ್ಲಿ ಹಾನಗಲ್ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ತಮ್ಮ ನಾಯಕರಿಗೆ ಟಿಕೆಟ್ ನೀಡುವಂತೆ ವರಿಷ್ಠ ಸಲೀಂ ಅಹ್ಮದ್ ಅವರಿಗೆ ಮನವರಿಕೆ ಮಾಡಿಕೊಳ್ಳಲು ಮುಂದಾದ ಸಮಯದಲ್ಲಿ ಆರೋಪ-ಪ್ರತ್ಯಾರೋಪ ತಾರಕಕ್ಕೆ ಏರಿ ಹೊಡೆದಾಟ ಆರಂಭವಾಗಿದೆ.

    ಕಾಂಗ್ರೆಸ್ ಆಂತರಿಕ ಸಭೆಯಲ್ಲಿ ಹಾನಗಲ್ ತಾಲೂಕಿನಲ್ಲಿ ನಡೆಯುವ ಉಪಚುನಾವಣೆಯ ಟಿಕೆಟ್ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಉಭಯ ನಾಯಕರಗಳ ಬೆಂಬಲಿಗರು ತಮ್ಮ ತಮ್ಮ ನಾಯಕರ ಬೆಂಬಲಿಸಿ ಮಾತಿನ ಚಕಮಕಿ ನಡೆಯಿತು. ಈ ಸಮಯದಲ್ಲಿ ಮಧ್ಯ ಪ್ರವೇಶ ಮಾಡಿದ ಜಿಲ್ಲಾಮಟ್ಟದ ನಾಯಕರು ಎರಡು ಗುಂಪಿನ ಕಾರ್ಯಕರ್ತರನ್ನು ಹೊರ ಕಳುಹಿಸಿದರು. ಬಳಿಕ ಮಾನೆ ಬೆಂಬಲಿಗರು ಖಾಸಗಿ ಹೋಟೆಲ್ ನಲ್ಲಿ ಉಪಹಾರ ಸೇವಿಸಿ ಸಭೆ ನಡೆಸಿದರು. ಮನೋಹರ ಬೆಂಬಗಲಿಗರು ಪ್ರವಾಸಿ ಮಂದಿರದಲ್ಲಿ ಪ್ರತ್ಯೇಕ ಸಭೆ ನಡೆಸಿದರು. ಇದನ್ನೂ ಓದಿ: ಉಪಚುನಾವಣೆ ಘೋಷಣೆಗೂ ಮುನ್ನವೇ ಕಾಂಗ್ರೆಸ್ ನಲ್ಲಿ ಟಿಕೆಟ್ ಫೈಟ್

    ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರು ಸಮ್ಮುಖದಲ್ಲಿ ಉಭಯ ನಾಯಕರ ತಲಾ ಹತ್ತು- ಹತ್ತು ಜನರು ಅಭಿಪ್ರಾಯ ಸಂಗ್ರಹಿಸಿದರು. ಚುನಾವಣೆ ಆಯೋಗ ಇನ್ನೂ ಚುನಾವಣೆ ಘೋಷಣೆ ಮಾಡಿಲ್ಲ. ಅದಾಗಲೇ ಕಾಂಗ್ರೆಸ್ ನಲ್ಲಿ ಟಿಕೆಟ್ ಫೈಟ್ ತಾರಕ್ಕಕ್ಕೆ ಏರಿದೆ.

  • ಸುಳ್ಳು ಹೇಳೋದರಲ್ಲಿ ಆಸ್ಕರ್ ಅವಾರ್ಡ್ ಕೊಡೋದಾದರೆ ಮೋದಿಗೆ ಕೊಡಬೇಕು: ಸಲೀಂ ಅಹಮ್ಮದ್

    ಸುಳ್ಳು ಹೇಳೋದರಲ್ಲಿ ಆಸ್ಕರ್ ಅವಾರ್ಡ್ ಕೊಡೋದಾದರೆ ಮೋದಿಗೆ ಕೊಡಬೇಕು: ಸಲೀಂ ಅಹಮ್ಮದ್

    ಹಾವೇರಿ: ಪ್ರಪಂಚದಲ್ಲಿ ಸುಳ್ಳು ಹೇಳೋದರಲ್ಲಿ ಆಸ್ಕರ್ ಅವಾರ್ಡ್ ಕೊಡೋದಾದರೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೊಡಬೇಕು. ಕಪ್ಪು ಹಣ ತರ್ತೀವಿ ಅಂದರು ತರಲಿಲ್ಲ. ಪ್ರತಿಯೊಬ್ಬರ ಖಾತೆಗೆ ಹದಿನೈದು ಲಕ್ಷ ಹಾಕ್ತೀನಿ ಅಂದರು ಹಾಕಲಿಲ್ಲ. ಮೋದಿಯವರಿಗೆ ಯುವಕರ ಶಾಪ ತಟ್ಟುತ್ತದೆ ಎಂದು ಪ್ರಧಾನಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ವಾಗ್ದಾಳಿ ನಡೆಸಿದ್ದಾರೆ.

    ಹಾವೇರಿಯಲ್ಲಿ ಮಾತನಾಡಿದ ಸಲೀಂ ಅಹಮ್ಮದ್ ಅವರು, ಯುವಕರು ಕೆಲಸವಿಲ್ಲದೆ ಬೀದಿಯಲ್ಲಿ ಅಲೆಯುವ ಪರಿಸ್ಥಿತಿ ಬಂದಿದೆ. ಚಾಮರಾಜನಗರದಲ್ಲಿ ಆಕ್ಸಿಜನ್ ಕೊಡದೇ ಸರ್ಕಾರವೆ 36 ಜನರನ್ನು ಕೊಲೆ ಮಾಡಿದೆ ಎಂದು ಆರೋಪಿಸಿದರು.

    ಕಾಂಗ್ರೆಸ್ ನಲ್ಲಿ ಸಿಎಂ ಅಭ್ಯರ್ಥಿ ಚರ್ಚೆ ವಿಚಾರಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿದೆ. ನಮ್ಮ ಹೋರಾಟ ಕೋಮುವಾದಿ ಪಕ್ಷದ ವಿರುದ್ಧ. ಕೆಲವರು ಕೆಲವರ ಭಾವನೆ, ವಿಚಾರಗಳನ್ನು ಹೇಳಿರಬಹುದು. ಅದು ಈಗ ಅಪ್ರಸ್ತುತ. ಸಾಮೂಹಿಕ ನಾಯಕತ್ವದಲ್ಲಿ ಕೆಲಸ ಮಾಡುತ್ತೇವೆ. ನಮ್ಮ ನಾಯಕರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ನಾವೆಲ್ಲರೂ ಕಾರ್ಯಕರ್ತರು, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ: ಯಾರಿಂದಲೂ ದೇವೇಗೌಡರ ಕುಟುಂಬವನ್ನು ಒಡೆಯಲು ಸಾಧ್ಯವಿಲ್ಲ: ರೇವಣ್ಣ ಆಕ್ರೋಶ

    ರಾಜ್ಯದಲ್ಲಿ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರೋ ಕೆಲಸವನ್ನು ಮಾಡುತ್ತೇವೆ. ಇನ್ನು ಪಕ್ಷ ಬಿಟ್ಟು ಹೋದವರು ಕಾಂಗ್ರೆಸ್ ಪಕ್ಷದ ಸಿದ್ಧಾಂತ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಾಯಕತ್ವ ಒಪ್ಪಿ ಬರುವವರ ಬಗ್ಗೆ ಚರ್ಚೆ ನಡೆಯುತ್ತದೆ. ಅರ್ಜಿ ಕೊಟ್ಟ ನಂತರ ಅಲ್ಲಂ ವೀರಭದ್ರಪ್ಪ ನೇತೃತ್ವದ ಸಮಿತಿ ನೇತೃತ್ವದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಅಭಿಪ್ರಾಯಪಟ್ಟರು.

  • ಸಂತೋಷ್ ಪ್ರಕರಣ ತನಿಖೆಗೆ ಕೊಡದಿದ್ರೆ ಹೋರಾಟ ಹಮ್ಮಿಕೊಳ್ತೇವೆ: ಸಲೀಂ ಅಹ್ಮದ್

    ಸಂತೋಷ್ ಪ್ರಕರಣ ತನಿಖೆಗೆ ಕೊಡದಿದ್ರೆ ಹೋರಾಟ ಹಮ್ಮಿಕೊಳ್ತೇವೆ: ಸಲೀಂ ಅಹ್ಮದ್

    ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಎನ್. ಆರ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣವನ್ನು ತನಿಖೆಗೆ ಕೊಡದಿದ್ದರೆ ನಾವು ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಎಚ್ಚರಿಕೆ ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ಸುಲಭವಾದ್ದದ್ದಲ್ಲ. ಸಂತೋಷ್ ಆತ್ಮಹತ್ಯೆ ಪ್ರಯತ್ನದ ಹಿಂದೆ ರಾಜಕೀಯ ಒತ್ತಡವಿದೆ. ಈಗಾಗಲೇ ಸಾಕಷ್ಟು ಮಾಹಿತಿಗಳು ಹರಿದುಬರುತ್ತವೆ ಎಂದು ಹೇಳಿದ್ದಾರೆ.

    ಯಾವುದೋ ಸಿಡಿಯಿಂದಾಗಿ ಈ ರೀತಿಯಾಗಿದೆಯಂತೆ. ಇದರ ಬಗ್ಗೆ ವಿಶೇಷ ತಂಡದಿಂದ ತನಿಖೆಯಾಗಬೇಕು. ಸರ್ಕಾರ ಕೂಡಲೇ ತನಿಖೆಗೊಳಪಡಿಸಬೇಕು. ಅದರ ಹಿಂದಿರುವ ಸತ್ಯಾಂಶ ಹೊರಬರಬೇಕು. ತನಿಖೆಗೆ ಕೊಡದೇ ಹೋದರೆ ತಪ್ಪು ಸಾಬೀತಾದಂತೆ ಎಂದು ತಿಳಿಸಿದರು.

    ಒಂದು ವೇಳೆ ತನಿಖೆಗೆ ಕೊಡದಿದ್ದರೆ ನಾವು ಹೋರಾಟ ಹಮ್ಮಿಕೊಳ್ಳುತ್ತೇವೆ. ನಮ್ಮ ನಾಯಕರ ಜೊತೆ ಚರ್ಚೆ ಮಾಡಿ ನಿರ್ಧರಿಸುತ್ತೇವೆ. ಪ್ರಕರಣವನ್ನ ಮುಚ್ಚುವ ಪ್ರಯತ್ನ ಮಾಡಬಾರದು ಎಂದು ಸಲೀಂ ತನಿಖೆಗೆ ಆಗ್ರಹಿಸಿದರು. ಇದನ್ನೂ ಓದಿ: ಅವನ್ಯಾರೋ ಸತ್ರೆ ನನಗೆ ಯಾಕೆ ಪ್ರಶ್ನೆ: ಈಶ್ವರಪ್ಪ

    ಸಂತೋಷ್ ಅವರು ನಿನ್ನೆ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಕುಟುಂಬಸ್ಥರು ನಗರದ ಎಂಎಸ್ ರಾಮಯ್ಯ ಆಸ್ಪತ್ರೆಗೆ ದಾಖಲು ಮಾಡಿದ್ದರು. ಇಂದು ಬೆಳಗ್ಗೆ ಸಂತೋಷ್ ಆರೋಗ್ಯ ಸಂಬಂಧ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ಆಸ್ಪತ್ರೆ ವೈದ್ಯರು, ನಿದ್ದೆ ಮಂಪರಿನಲ್ಲೇ ಇರುವ ಸಂತೋಷ್ ಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ನಿನ್ನೆ ರಾತ್ರಿಗಿಂತ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆಯಾಗಿದೆ. ಡಿಸ್ಚಾರ್ಜ್ ಮಾಡುವ ಬಗ್ಗೆ ಯಾವುದೇ ನಿರ್ಧಾರವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೌಟುಂಬಿಕವಾಗಿ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಂತೋಷ್ ಪತ್ನಿ

    ಸಂತೋಷ್ ಅವರನ್ನು ನಿನ್ನೆ ರಾತ್ರಿ 8.30ರ ಸುಮಾರಿಗೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಮಧ್ಯಾಹ್ನ ನಂತರ ಜನರಲ್ ವಾರ್ಡಿಗೆ ಶಿಫ್ಟ್ ಮಾಡುತ್ತೇವೆ. ಅವರು ನಿನ್ನೆ ಬಂದಾಗ ಸ್ವಲ್ಪ ಮಂಕಾಗಿದ್ದರು. ಬೇರೆ ಯಾವುದೇ ಸಮಸ್ಯೆ ಇಲ್ಲ. ಎಷ್ಟು ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡಿದ್ದರು ಅಂತ ಹೇಳೋಕೆ ಆಗಲ್ಲ ಎಂದು ನುಡಿದರು.

    ಆತ್ಮಹತ್ಯೆಗೆ ಯತ್ನ ಮಾಡಿರುವ ಸಂಬಂಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 309ರ ಅಡಿಯಲ್ಲಿ ಸಂತೋಷ್ ವಿರುದ್ಧ ಎಫ್‍ಐಆರ್ ದಾಖಲಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಸಂತೋಷ್ ಪರ್ಸನಲ್ ವೀಡಿಯೋ ದೆಹಲಿ ತಲುಪಿರುವ ಮಾಹಿತಿ ಇತ್ತು: ಡಿಕೆಶಿ