Tag: Saleem

  • ಅಲ್ಪಸಂಖ್ಯಾತ ವ್ಯಕ್ತಿ ಅನ್ನೋ ಕಾರಣಕ್ಕೆ ಸಲೀಂ ಮೇಲೆ ಕ್ರಮ ಕೈಗೊಂಡ್ರು: ಜಗದೀಶ್ ಶೆಟ್ಟರ್

    ಅಲ್ಪಸಂಖ್ಯಾತ ವ್ಯಕ್ತಿ ಅನ್ನೋ ಕಾರಣಕ್ಕೆ ಸಲೀಂ ಮೇಲೆ ಕ್ರಮ ಕೈಗೊಂಡ್ರು: ಜಗದೀಶ್ ಶೆಟ್ಟರ್

    – ಡಿಕೆಶಿ ಒಬ್ಬ ಅಸಹಾಯಕ ಅಧ್ಯಕ್ಷ
    – ಸಿದ್ದರಾಮಯ್ಯ ನಡವಳಿಕೆ ಸರಿಯಿಲ್ಲ

    ಹಾವೇರಿ: ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಮೇಲೆ ಕ್ರಮ ಕೈಗೊಳ್ಳುವ ಧಮ್ ಡಿಕೆ ಶಿವಕುಮಾರ್ ಅವರಿಗಿಲ್ಲ. ಅಲ್ಪಸಂಖ್ಯಾತ ವ್ಯಕ್ತಿ ಅನ್ನೋ ಕಾರಣಕ್ಕೆ ಸಲೀಂ ಮೇಲೆ ಕ್ರಮ ಕೈಗೊಂಡರು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ವರ್ಸಸ್ ಡಿಕೆಶಿ ಫೈಟಿಂಗ್ ಶುರುವಾಗಿದೆ. ಸಲೀಂ ಮತ್ತು ಉಗ್ರಪ್ಪರ ನಡುವಿನ ಸಂಭಾಷಣೆಯೆ ಇದಕ್ಕೆ ಸಾಕ್ಷಿ. ಡಿಕೆಶಿ ರಾಜ್ಯದ ಅಧ್ಯಕ್ಷರು, ಆದರೆ ಅಧ್ಯಕ್ಷರ ತಕ್ಕಡಿ ಮೇಲೇಳ್ತಿಲ್ಲ ಅಂದರು. ಉಗ್ರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯರ ಪಟ್ಟದ ಶಿಷ್ಯ. ಉಗ್ರಪ್ಪ ಮೇಲೆ ಕ್ರಮ ಕೈಗೊಳ್ಳೋ ಧಮ್ ಡಿಕೆಶಿಗಿಲ್ಲ. ಅಲ್ಪಸಂಖ್ಯಾತ ವ್ಯಕ್ತಿ ಅನ್ನೋ ಕಾರಣಕ್ಕೆ ಸಲೀಂ ಮೇಲೆ ಕ್ರಮ ಕೈಗೊಂಡರು. ಸಲೀಂ ಬಹಳ ವರ್ಷಗಳಿಂದ ಕಾಂಗ್ರೆಸ್ ನಲ್ಲಿದ್ದವರು. ಉಗ್ರಪ್ಪ ಮೇಲೆ ಕ್ರಮ ಕೈಗೊಂಡರೆ ಆರ್ಟಿಕಲ್ಸ್ ಸ್ಟಾರ್ಟ್ ಮಾಡ್ತಾರೆ ಅಂತಾ ಅವರ ಮೇಲೆ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದರು.

    ಪಂಜಾಬನಲ್ಲೊಬ್ಬ ಸಿದ್ದು, ರಾಜ್ಯದಲ್ಲೊಬ್ಬ ಸಿದ್ದು ಇದ್ದಾರೆ. ಇಬ್ಬರು ಸಿದ್ದುಗಳ ಜಟಾಪಟಿಯಿಂದ ಕಾಂಗ್ರೆಸ್ ಅವನತಿ ಆಗ್ತಿದೆ. ಪಂಜಾಬ್‍ನಲ್ಲಿ ಕಾಂಗ್ರೆಸ್ ನಗೆಪಾಟಲಿಗೆ ಈಡಾಗಿದೆ. ಇಲ್ಲೂ ಅದೇ ಪರಿಸ್ಥಿತಿ ಇದೆ. ಡಿಕೆಶಿ ಒಬ್ಬ ಅಸಹಾಯಕ ಅಧ್ಯಕ್ಷ. ಎಲ್ಲವೂ ಸಿದ್ದರಾಮಯ್ಯರ ಕೈಯಲ್ಲಿದೆ. ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿದ್ದವರು. ಆದರೆ ಅವರ ನಡವಳಿಕೆ ಸರಿಯಿಲ್ಲ. ಅನೇಕ ಭಾಗ್ಯಗಳನ್ನ ಕೊಟ್ಟಿದ್ದೇವೆ ಅಂದವರು ಅಧಿಕಾರ ಕಳೆದುಕೊಂಡರು. ಚಾಮುಂಡೇಶ್ವರಿಯಲ್ಲೂ ಸೋಲು ಕಂಡರು. ಭಾಗ್ಯಗಳ ಹೆಸರೇಳಿ ದುರುಪಯೋಗ ಮಾಡಿಕೊಂಡರೆ ಹೊರತು, ಭಾಗ್ಯಗಳು ಜನರಿಗೆ ಸಿಗ್ಲಿಲ್ಲ. ಹೀಗಾಗಿ ಸೋಲು ಕಂಡರು ಎಂದು ವಾಗ್ದಾಳಿ ನಡೆಸಿದರು.

    ಎರಡೂ ಚುನಾವಣೆಗಳಲ್ಲಿ ಗೆಲ್ಲೋದಿಲ್ಲ ಅನ್ನೋದು ಕಾಂಗ್ರೆಸ್ ನವರಿಗೆ ಗೊತ್ತಾಗಿದೆ. ಹೀಗಾಗಿ ಡಿಕೆಶಿ ಹಣ ಹಂಚಿಕೆ ಬಗ್ಗೆ ಬೇಜವಾಬ್ದಾರಿ ಹೇಳಿಕೆ. ಸಿಂದಗಿಯಲ್ಲೂ ಸಿದ್ದರಾಮಯ್ಯ ಹಣ ಹಂಚಿಕೆ ಬಗ್ಗೆ ಬೇಜವಾಬ್ದಾರಿ ಹೇಳಿಕೆ ನೀಡಿದರು. ಹಣ, ಹೆಂಡ ಹಂಚೋದು, ಗೂಂಡಾಗಿರಿ ಮಾಡೋದು ಕಾಂಗ್ರೆಸ್ ಸಂಸ್ಕೃತಿ. ನಮಗೆ ಲಕ್ಷಾಂತರ ಸಂಖ್ಯೆಯ ಕಾರ್ಯಕರ್ತರಿದ್ದಾರೆ. ನಮಗೆ ರೊಕ್ಕ ಹಂಚೋ ಸಂಸ್ಕೃತಿ ಇಲ್ಲ. ಸೋತ ಮೇಲೆ ಯಾಕೆ ಸೋಲಾಯ್ತು ಅನ್ನೋದಕ್ಕೆ ರೊಕ್ಕ ಹಂಚ್ತಿದ್ದಾರೆ ಅನ್ನೋದು ಹೇಳ್ತಿದ್ದಾರೆ. ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅಲ್ಪಸಂಖ್ಯಾತರ ಓಲೈಕೆ ಮಾಡ್ತಿದ್ದಾರೆ. ಸಾಕಷ್ಟು ಜನ ಅಲ್ಪಸಂಖ್ಯಾತರು ಬಿಜೆಪಿ ಪರವಾಗಿ ವೋಟು ಹಾಕಲಿದ್ದಾರೆ. ಪ್ರತಿಪಕ್ಷದವರು ಭ್ರಮೆಯಲ್ಲಿದ್ದಾರೆ. ನೀವು ಅಧಿಕಾರಕ್ಕೆ ಬರಬೇಕು ಎಂಬ ಕನಸು ನನಸಾಗೋದಿಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಸಿಟಿ ಬಸ್ ಏರಿದ ಸಿಎಂ ಸ್ಟಾಲಿನ್ – ಪ್ರಯಾಣಿಕರು ಫುಲ್ ಶಾಕ್

    ಸಿದ್ದರಾಮಯ್ಯ ಡಿಕೆಶಿ ಇಬ್ಬರು ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಮುಳುಗುತ್ತಿರೋ ಹಡಗು. ನರೇಂದ್ರ ಮೋದಿ ಯಾವುದೇ ಭ್ರಷ್ಟಾಚಾರ ಇಲ್ಲದೆ ಅಧಿಕಾರ ಮಾಡುತ್ತಿದ್ದಾರೆ. ಮೋದಿ ನಾಯಕತ್ವದಲ್ಲಿ ಎರಡು ಬಾರಿ ಕೊರೋನಾ ನಿಭಾಯಿಸಿದ್ದಾರೆ. ಮುಂದುವರಿದ ದೇಶದಲ್ಲಿ ನಿಯಂತ್ರಣ ಮಾಡುವಲ್ಲಿ ತೊಂದರೆ ಅನುಭವಿಸಿದ್ದಾರೆ. ವಾಕ್ಸಿನ್ ಉತ್ಪಾದನೆ ಹೆಚ್ಚು ಒತ್ತು ನೀಡಿ, 130 ಕೋಟಿ ಜನರಿಗೆ ವಾಕ್ಸಿನ್ ಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ED ನನ್ನ ಮೇಲೆ ದಾಳಿ ಮಾಡುವುದಿಲ್ಲ, ನಾನು BJP ಸಂಸದ: ಸಂಜಯ್ ಪಾಟೀಲ್

    ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಪರ ಮತಯಾಚನೆ ಕುರಿತು ಪ್ರತಿಕ್ರಿಯಿಸಿ, ಹಾನಗಲ್ ಮತ್ತು ಸಿಂದಗಿ ಪ್ರಚಾರ ಮಾಡಿದ್ದೇನೆ. ಒಳ್ಳೆಯ ವಾತಾವರಣ ಇದೆ. ನಮ್ಮ ಅಭ್ಯರ್ಥಿ ಎರಡು ಬಾರಿ ಶಾಸಕರಾಗಿದ್ದಾರೆ. ಹಾನಗಲ್ ಮತಕ್ಷೇತ್ರ ಉದಾಸಿ ಕ್ಷೇತ್ರ. 6 ಭಾರಿ ಶಾಸಕ, ಲೋಕೋಪಯೋಗಿ ಸಚಿವರಾಗಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಸಂಸದ ಶಿವಕುಮಾರ ಉದಾಸಿ ಮೂರು ಬಾರಿ ಆಯ್ಕೆ ಯಾಗಿ ಅಭಿವೃದ್ಧಿ ಮಾಡಿದ್ದಾರೆ. ಇಡೀ ಹಾವೇರಿ ಜಿಲ್ಲೆ ಬಿಜೆಪಿಯ ಗಟ್ಟಿ ನೆಲೆಯಾಗಿದೆ. ನಮ್ಮ ಅಭ್ಯರ್ಥಿ ಶಿವರಾಜ್ ಸಜ್ಜನರ್ ಶಾಸಕ, ವಿಧಾನಪರಿಷತ್ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಜಿಲ್ಲೆಯ ನಾಡಿಮಿತ ಶಿವರಾಜ್ ಸಜ್ಜನರ್ ಗೊತ್ತಿದೆ. ಅತಿಹೆಚ್ಚು ಅಂತರದಲ್ಲಿ ಇಬ್ಬರು ಅಭ್ಯರ್ಥಿಗಳು ಗೆಲುವು ಪಡೆಯುತ್ತಾರೆ ಎಂದರು. ಇದನ್ನೂ ಓದಿ:  ದಂಪತಿಯ ಹನಿ ಟ್ರ್ಯಾಪ್ ಬಲೆಗೆ ಬಿದ್ದ 300 ಮಂದಿ- ಒಂದೇ ವರ್ಷದಲ್ಲಿ 20 ಕೋಟಿ ಸುಲಿಗೆ!

    ಈಗಾಗಲೇ 100 ಕೋಟಿ ಜನರಿಗೆ ವಾಕ್ಸಿನೇಷನ್ ನೀಡಲಾಗುತ್ತದೆ. ಸಿದ್ದರಾಮಯ್ಯ ಟೀಕೆ ಮಾಡುವುದು, 100 ಕೋಟಿ ಜನರಿಗೆ ಲಸಿಕೆ ಹಾಕಿದರೂ, ಟೀಕೆ ಮಾಡಿದರು. ಇದು ರಾಜಕೀಯ ಪಕ್ಷ ಹಾಗೂ ರಾಜಕೀಯ ನಾಯಕರಿಗೆ ಶೋಭೆ ತರವುದಿಲ್ಲ. ಕಾಂಗ್ರೆಸ್ ನಾಯಕ ಶಶಿತರೂರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.

  • ನನ್ನಿಂದ ತಪ್ಪಾಗಿದೆ, ಡಿಕೆಶಿ ಮುಖ ನೋಡಲು ಆಗ್ತಿಲ್ಲ: ಸಲೀಂ ಕಣ್ಣೀರು

    ನನ್ನಿಂದ ತಪ್ಪಾಗಿದೆ, ಡಿಕೆಶಿ ಮುಖ ನೋಡಲು ಆಗ್ತಿಲ್ಲ: ಸಲೀಂ ಕಣ್ಣೀರು

    ಬೆಂಗಳೂರು: ನನ್ನಿಂದ ತಪ್ಪಾಗಿದೆ. ನಂಗೆ ಡಿಕೆಶಿ ಮುಖನೋಡಲು ಆಗುತ್ತಿಲ್ಲ ಎಂದು ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಕಣ್ಣೀರು ಹಾಕಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ನನಗೆ ಜೀವ ಭಯ ಇದೆ. ಹೆಂಡತಿ ಮಕ್ಕಳಿದ್ದಾರೆ ತೊಂದರೆ ಮಾಡಬೇಡಿ. ಡಿಕೆಶಿವಕುಮಾರ್ ದೇವರಂತ ಮನುಷ್ಯ. ಅವರಿಗೆ ನೋವಾಗಿದೆ ಕ್ಷಮೆ ಕೇಳುತ್ತೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಯಾವ ಶಿಕ್ಷೆ ಬೇಕಾದ್ರೂ ಕೊಡಲಿ. ಪ್ರಾಣ ಬೇಕಾದ್ರೂ ತೆಗೆಯಲಿ. ನನ್ನ ಎಲ್ಲಾ ರಾಜಕೀಯ ಜೀವನ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ನನ್ನನ್ನು ನನ್ನ ಪಾಡಿಗೆ ಬದುಕಲು ಬಿಟ್ಟು ಬಿಡಿ. ನನ್ನಿಂದ ತಪ್ಪಾಗಿದೆ. ಎಮೋಷನಲ್ ಆಗಿ ಮಾತನಾಡಿದ್ದೀನಿ ಎಂದು ಸಲೀಂ ಕಣ್ಣೀರು ಸುರಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ಸಲೀಂ 6 ವರ್ಷ ಉಚ್ಚಾಟನೆ- ಉಗ್ರಪ್ಪಗೆ ಶೋಕಾಸ್‌ ನೋಟಿಸ್‌ ಜಾರಿ

    ನನಗೆ ಡಿಕೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರಿಗೆ ಕ್ಷಮೆ ಕೇಳುತ್ತೇನೆ. ಅವರ ಮುಖ ನೋಡಲು ನನಗೆ ಆಗಲ್ಲ. ಇನ್ನು ಕೆಪಿಸಿಸಿ ಕಚೇರಿಗೆ ಬರಲು ಆಗಲ್ಲ. ಹೊರಗಿದ್ದುಕೊಂಡೇ ಕಾಂಗ್ರೆಸ್ ಸೇವೆ ಮಾಡುತ್ತೇನೆ. ನನ್ನಿಂದ ತಪ್ಪಾಗಿದೆ. ಪಕ್ಷದಿಂದ ಉಚ್ಚಾಟನೆ ಮಾಡೋ ಮುನ್ನ ಒಂದು ನೋಟಿಸ್ ಆದ್ರೂ ಕೊಡಬಹುದಿತ್ತು ಎಂದು ಹೇಳಿದರು. ಇದನ್ನೂ ಓದಿ: ಪರ್ಸಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ

    ಸಲೀಂ ಹೇಳಿದ್ದೇನು..?
    ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಡಿಕೆಶಿ ಆಪ್ತ ಸಲೀಂ ಹಾಗೂ ಸಂಸದ ಉಗ್ರಪ್ಪ ನಡುವೆ ಸಂಭಾಷಣೆ ನಡೆದಿದೆ. ಡಿಕೆಶಿ ಅವರು ಕಲೆಕ್ಷನ್ ಗಿರಾಕಿ ಎಂದು ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹೇಳಿರುವುದು ಇದೀಗ ಭಾರೀ ಚರ್ಚೆಯಾಗಿತ್ತು. ಜಲಸಂಪನ್ಮೂಲ ಇಲಾಖೆಯಲ್ಲಿ ಹೇಗೆ ಪರ್ಸಂಟೇಜ್ ಫಿಕ್ಸಾಗುತ್ತೆ ಎಂದು ಮಾತನಾಡಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಪರ್ಸಂಟೇಜ್ ಹೇಗೆ ಹಚ್ಚಾಯ್ತು..?, ಜಲಸಂಪನ್ಮೂಲ ಇಲಾಖೆಯಲ್ಲಿ ಮೊದಲೆಲ್ಲಾ 6 ರಿಂದ 8 ಪರ್ಸೆಂಟ್ ಇತ್ತು. ಡಿಕೆಶಿ ಬಂದ ಮೇಲೆ 12 ಪರ್ಸೆಂಟ್ ಮಾಡಿದರು ಎಂದು ಸಲೀಂ ಅವರು ಉಗ್ರಪ್ಪ ಬಳಿ ಹೇಳಿದ್ದರು.  ಇದನ್ನೂ ಓದಿ: ಡಿಕೆಶಿಯನ್ನು 4 ದಶಕಗಳಿಂದ ಬಲ್ಲೆ, ಒಬ್ಬ ಒಳ್ಳೆಯ ಆಡಳಿತಗಾರ: ಉಗ್ರಪ್ಪ

    ಇದೇ ವೇಳೆ ಜಲ ಸಂಪನ್ಮೂಲ ಇಲಾಖೆಯ ಕಾಂಟ್ರಾಕ್ಟರ್ ಗಳಾಗಿರುವ ಉಪ್ಪಾರ್, ಜೀ.ಶಂಕರ್ ಹನುಮಂತಪ್ಪರ ಬಗ್ಗೆಯು ಪ್ರಸ್ತಾಪ ಮಾಡಿದ್ದಾರೆ. ವಾರದ ಹಿಂದೆ ಈ ಕಾಂಟ್ರಕ್ಟರ್ ಗಳ ಮೇಲೆ ಐಟಿ ದಾಳಿ ನಡೆದಿತ್ತು. ಪ್ರೆಸ್ ಮೀಟ್ ಗೂ ಮುನ್ನ ಈ ವಿಚಾರದ ಬಗ್ಗೆ ಸಲೀಂ ಹಾಗೂ ಉಗ್ರಪ್ಪ ಚರ್ಚೆ ನಡೆಸಿದ್ದರು. ಡಿ.ಕೆ.ಶಿವಕುಮಾರ್ ಜಲ ಸಂಪನ್ಮೂಲ ಸಚಿವರಾಗಿದ್ದಾಗಲೂ ಇದೆ ಕಾಂಟ್ರಾಕ್ಟರ್ ಗಳು ಇದ್ದರು. ಡಿಕೆಶಿ ಆಪ್ತ ಮುಳಗುಂದ ಸಾಕಷ್ಟು ದುಡ್ಡು ಮಾಡಿದ್ದಾರೆ. ಮುಳಗುಂದ 50-100 ಕೋಟಿ ಮಾಡಿದ್ದಾನೆ ಅಂದ್ರೆ ಡಿಕೆ ಹತ್ತಿರ ಎಷ್ಟಿರಬೇಕು ಲೆಕ್ಕ ಹಾಕಿ. ಡಿಕೆ ಬರೀ ಕಲೆಕ್ಷನ್ ಗಿರಾಕಿ ಎಂದಿದ್ದರು. ಇದನ್ನೂ ಓದಿ: ಕೈ ನಾಯಕರಿಂದ್ಲೇ ಡೀಲ್ ರಹಸ್ಯ ಬಯಲು – ಡಿಕೆಶಿಗೆ ಬಿಜೆಪಿ ತಿರುಗೇಟು

  • ಬರೀ ಡಿಕೆಶಿ ಅಲ್ಲ, ಕೆದಕಿದರೆ ಇಡೀ ಕಾಂಗ್ರೆಸ್ಸೇ ಹೊಲಸು: ಸಿ.ಟಿ ರವಿ

    ಬರೀ ಡಿಕೆಶಿ ಅಲ್ಲ, ಕೆದಕಿದರೆ ಇಡೀ ಕಾಂಗ್ರೆಸ್ಸೇ ಹೊಲಸು: ಸಿ.ಟಿ ರವಿ

    ಚಿಕ್ಕಮಗಳೂರು/ಪಣಜಿ: ಬರೀ ಡಿಕೆಶಿ ಮಾತ್ರವಲ್ಲ, ಕೆದಕಿದರೆ ಇಡೀ ಕಾಂಗ್ರೆಸ್ ಪೂರ್ತಿ ಹೊಲಸೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.

    ಸಲೀಂ-ಉಗ್ರಪ್ಪ ಅವರು ಡಿಕೆಶಿ ಬಗ್ಗೆ ನಡೆಸಿದ ಮಾತುಕತೆ ಸಂಬಂಧ ಗೋವಾದಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಸೇ ಹೀಗಿದೆ, ತಿಪ್ಪೆ ಕೆದಕಿದಷ್ಟು ಹೊಲಸೇ ಹೊರಬರಲಿದೆ. ಬರೀ ಡಿಕೆಶಿ ಅಲ್ಲ, ಕೆದಿಕಿದರೆ ಇಡೀ ಕಾಂಗ್ರೆಸ್ ಪೂರ ಹೊಲಸೆ. ಸಲೀಂ-ಉಗ್ರಪ್ಪ ಸದಾ ಬೇರೆ ಪಕ್ಷದ ಬಗ್ಗೆ ಟೀಕೆ ಮಾಡುತ್ತಿದ್ದರು. ಇಂದು ಅವರೇ ಅವರ ಪಕ್ಷದ ಗುಟ್ಟು ರಟ್ಟು ಮಾಡಿದ್ದಾರೆ. ಇದನ್ನೂ ಓದಿ: ಪರ್ಸಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ

    ಕಳ್ಳನ ಹೆಂಡತಿ ಯಾವತ್ತಿದ್ರೂ ಡ್ಯಾಶ್…ಡ್ಯಾಶ್…ಡ್ಯಾಶ್. ಕಾಂಗ್ರೆಸ್ ನಾಯಕರ ಬಗ್ಗೆ ಅವರೇ ಗುಟ್ಟನ್ನ ರಟ್ಟು ಮಾಡಿದ್ದಾರೆ. ಪರಮೇಶ್ವರನ್ನ ಯಾವ ಶಕ್ತಿ ಸೋಲಿಸಿತ್ತೋ ಅದೇ ಶಕ್ತಿಯಿಂದ ನನಗೆ ಅಡ್ಡವಾಗಬಹುದೆಂದು ಗುಟ್ಟು ರಟ್ಟಾಗಿದೆ. ಡಿಕೆಶಿ ನನಗೆ ಅಡ್ಡ ಎಂದು ಅವರ ಬದಿಗೊಳಿಸಬೇಕೆಂಬ ಸಂಚು ಸ್ಪಷ್ಟವಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಡಿಕೆಶಿಯನ್ನು 4 ದಶಕಗಳಿಂದ ಬಲ್ಲೆ, ಒಬ್ಬ ಒಳ್ಳೆಯ ಆಡಳಿತಗಾರ: ಉಗ್ರಪ್ಪ

    ಸಲೀಂ-ಉಗ್ರಪ್ಪ ಅಷ್ಟು ದಡ್ಡರು ಎಂದು ನನಗೆ ಅನ್ನಿಸಲ್ಲ. ಗುಟ್ಟು ರಟ್ಟಾಗಲಿ ಎಂದೇ ರಟ್ಟು ಮಾಡಿದ್ದಾರೆ ಅನಿಸುತ್ತಿದೆ. ಇದರ ಹಿಂದೆ ಖಂಡಿತ ವಿಪಕ್ಷ ನಾಯಕರ ಬುದ್ದಿವಂತ ಮೆದುಳು ಕೆಲಸ ಮಾಡಿದೆ ಎಂದು ಸಿ.ಟಿ ರವಿ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಕೈ ನಾಯಕರಿಂದ್ಲೇ ಡೀಲ್ ರಹಸ್ಯ ಬಯಲು – ಡಿಕೆಶಿಗೆ ಬಿಜೆಪಿ ತಿರುಗೇಟು

  • ಕಾಂಗ್ರೆಸ್ಸಿನಿಂದ ಸಲೀಂ 6 ವರ್ಷ ಉಚ್ಚಾಟನೆ- ಉಗ್ರಪ್ಪಗೆ ಶೋಕಾಸ್‌ ನೋಟಿಸ್‌ ಜಾರಿ

    ಕಾಂಗ್ರೆಸ್ಸಿನಿಂದ ಸಲೀಂ 6 ವರ್ಷ ಉಚ್ಚಾಟನೆ- ಉಗ್ರಪ್ಪಗೆ ಶೋಕಾಸ್‌ ನೋಟಿಸ್‌ ಜಾರಿ

    ಬೆಂಗಳೂರು: ಡಿಕೆ ಶಿವಕುಮಾರ್‌ ವಿರುದ್ಧವೇ ಭ್ರಷ್ಟಾಚಾರದ ಆರೋಪ ಮಾಡಿದ ಮಾಧ್ಯಮ ಸಂಯೋಜಕ ಸಲೀಂ ಅವರನ್ನು 6 ವರ್ಷಗಳ ಕಾಲ ಕಾಂಗ್ರೆಸ್ಸಿನಿಂದ ಪಕ್ಷದಿಂದ ಉಚ್ಚಾಟನೆ ಮಾಡಲಾಗಿದ್ದು ಉಗ್ರಪ್ಪ ಅವರಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಲಾಗಿದೆ.

    ಶಿಸ್ತುಪಾಲನಾ ಸಮಿತಿಯ ಅಧ್ಯಕ್ಷ ರೆಹಮಾನ್‌ ಖಾನ್‌ ಅವರು ಪತ್ರಿಕಾ ಪ್ರಕಟಣೆ ಹೊರಡಿಸಿ ಈ ವಿಚಾರವನ್ನು ತಿಳಿಸಿದ್ದಾರೆ.


    ಸಲೀಂ ಅವರನ್ನು ತುರ್ತು ಶಿಸ್ತುಪಾಲನಾ ಸಮಿತಿ ಸಭೆಯಲ್ಲಿ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ಅವರ ಬೇಜವಾಬ್ದಾರಿ ನಡವಳಿಕೆಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಕಾಂಗ್ರೆಸ್‌ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಮುಂದಿನ 6 ವರ್ಷಗಳವರೆಗೆ ಉಚ್ಚಾಟಿಸಲಾಗಿದೆ. ಇದನ್ನೂ ಓದಿ: ಪರ್ಸಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ

    ಉಗ್ರಪ್ಪಗೆ ನೋಟಿಸ್‌:
    ಡಿಕೆ ಶಿವಕುಮಾರ್‌ ಅವರ ಘನತೆ ಗೌರವವಗಳಿಗೆ ಕುಂದುಂಟುವಾಗುವಂತೆ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಅಪಾರ ಹಾನಿ ಉಂಟಾಗುವ ಅಪಾರ ವಿಚಾರಗಳನ್ನು ಮಾತನಾಡಿದ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ಹಿನ್ನೆಲೆಯಲ್ಲಿ ಈ ನಡವಳಿಕೆಯ ಬಗ್ಗೆ ತಕ್ಷಣ ಸಮಜಾಯಿಷಿಯನ್ನು ಮೂರು ದಿನದ ಒಳಗಡೆ ನೀಡಬೇಕು ಎಂದು ನೋಟಿಸಿನಲ್ಲಿ ಸೂಚಿಸಲಾಗಿದೆ.

  • ಪರ್ಸಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ

    ಪರ್ಸಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ

    ಬೆಂಗಳೂರು: ನನಗೂ, ಕೈ ನಾಯಕರ ಆರೋಪಕ್ಕೂ ಸಂಬಂಧವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸ್ಪಷ್ಟವಾಗಿ ಹೇಳಿದ್ದಾರೆ.

    ನಗರದ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ತಮ್ಮ ವಿರುದ್ಧದ ಪರ್ಸಂಟೇಜ್ ಆರೋಪ ಸಂಬಂಧ ಮಾತನಾಡಿದ ಡಿಕೆಶಿ, ಬೆಳಗ್ಗೆಯಿಂದ ಕೆಲವು ವಿಚಾರಗಳ ಬಗ್ಗೆ ಭಾರೀ ಚರ್ಚೆಯಾಗ್ತಿದೆ. ಮಾಧ್ಯಮಗೋಷ್ಠಿಯ ಸಂದರ್ಭದಲ್ಲಿ ಕೆಲವು ಆಂತರಿಕವಾದ ಸಂಭಾಷಣೆಗಳು ನಡೆದವು ಎಂಬುದನ್ನು ತೋರಿಸಿದ್ದೀರಿ ಎಂದು ಆರಂಭಿಸಿದರು.

    ಪಕ್ಷ ಶಿಸ್ತನ್ನು ಬಹಳ ಗಮನದಲ್ಲಿಟ್ಟುಕೊಂಡು ಶಿಸ್ತು ಪಾಲನಾ ಕಮಿಟಿ ಏನು  ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತದೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಕೈ ನಾಯಕರು ಹೇಳಿರುವ ವಿಚಾರದ ಕುರಿತು ನನಗೂ, ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲದೇ ಇರುವಂತಹ ವಿಚಾರವಾಗಿದೆ. ಈಗಾಗಲೇ ಉಗ್ರಪ್ಪನವರು ಪ್ರೆಸ್ ಮೀಟ್ ಏನು ಹೇಳಬೇಕೋ ಹೇಳಿದ್ದಾರೆ. ಅವರೇ ನಿಮಗೆ ಉತ್ತರ ಕೊಟ್ಟಿದ್ದಾರೆ ಎಂಬುದನ್ನು ಭಾವಿಸಿದ್ದೇನೆ ಎಂದರು. ಇದನ್ನೂ ಓದಿ: ಡಿಕೆಶಿಯನ್ನು 4 ದಶಕಗಳಿಂದ ಬಲ್ಲೆ, ಒಬ್ಬ ಒಳ್ಳೆಯ ಆಡಳಿತಗಾರ: ಉಗ್ರಪ್ಪ

    ಇದೇ ವೇಳೆ ಮಾಧ್ಯಮದ ಮೇಲೆ ಗೂಬೆ ಕೂರಿಸಿದ ಉಗ್ರಪ್ಪ ಅವರ ಬಗ್ಗೆ ಪ್ರಶ್ನೆ ಮಾಡಿದಾಗ, ನಾನು ಮೀಡಿಯಾ ತಪ್ಪು ಅಂತ ಯಾಕೆ ಹೇಳಿ. ನಾವು ಮಾತಾಡಿದ್ದನ್ನು ನೀವು ತೋರಿಸಿದ್ದೀರಿ. ಈ ಹಿಂದೆ ಯಡಿಯೂರಪ್ಪ ಹಾಗೂ ಅನಂತ್ ಕುಮಾರ್ ಮಾತಾಡಿದ್ರು, ತೋರಿಸಿದ್ದೀರಿ. ಇದೀಗ ಇವರು ಮಾತಾಡಿದ್ದಾರೆ ನೀವು ತೋರಿಸಿದ್ದೀರಿ. ಆದರೆ ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಭ್ರಷ್ಟಾಚಾರ ಮುಕ್ತವಾಗಲಿ ಅನ್ನೋ ಕಾಳಜಿ ಇದ್ರೆ ಉಗ್ರಪ್ಪ ದೂರು ನೀಡಲಿ: ಆರಗ ಜ್ಞಾನೇಂದ್ರ

    ರಾಜಕಾರಣದಲ್ಲಿ ಚಪ್ಪಾಳೆ ಹೊಡೆಯುವವರು, ಜೈಕಾರ, ಮೊಟ್ಟೆ ಎಸೆಯುವವರು ಹೀಗೆ ಹಲವು ರೀತಿಯ ಜನ ಇದ್ದಾರೆ. ಯಾವ ಜಗಳನೂ ಇಲ್ಲ. ನಿಮ್ಮ ಆಪ್ತ ಸಲೀಂ ಹೇಳಿರುವುದು ಎಷ್ಟು ಸರಿ. ಇಂಟರ್ನಲ್ ಚರ್ಚೆಯಾಗಿದೆ ಹೊರತು ಬಹಿರಂಗ ಹೇಳಿಕೆ ನೀಡಿಲ್ಲ. ಪರ್ಸೆಂಟೇಜ್ ವಿಚಾರದಲ್ಲಿ ಭಾಗಿಯಾಗಿಲ್ಲ. ಅದರ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ಗೃಹ ಸಚಿವರು ದೂರು ನೀಡಲು ಹೇಳಿದ್ದಾರೆ ಅಂತೆ. ಅವರೇ ಸುಮೊಟೋ ಕೇಸ್ ದಾಖಲಿಸಿಕೊಂಡರೆ ಒಳ್ಳೆಯದು ಎಂದು ತಿಳಿಸಿದರು. ಇದನ್ನೂ ಓದಿ: ಕೈ ನಾಯಕರಿಂದ್ಲೇ ಡೀಲ್ ರಹಸ್ಯ ಬಯಲು – ಡಿಕೆಶಿಗೆ ಬಿಜೆಪಿ ತಿರುಗೇಟು

  • ಡಿಕೆಶಿಯನ್ನು 4 ದಶಕಗಳಿಂದ ಬಲ್ಲೆ, ಒಬ್ಬ ಒಳ್ಳೆಯ ಆಡಳಿತಗಾರ: ಉಗ್ರಪ್ಪ

    ಡಿಕೆಶಿಯನ್ನು 4 ದಶಕಗಳಿಂದ ಬಲ್ಲೆ, ಒಬ್ಬ ಒಳ್ಳೆಯ ಆಡಳಿತಗಾರ: ಉಗ್ರಪ್ಪ

    – ಡೀಲ್ ಆರೋಪದ ಬೆನ್ನಲ್ಲೇ ಡಿಕೆಶಿ ಗುಣಗಾಣ
    – ಪರ್ಸಂಟೇಜ್ ರಾಜಕಾರಣಕ್ಕೆ ಹೋದವರಲ್ಲ

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ನಾನು ಕಳೆದ 4 ದಶಕಗಳಿಂದ ತಿಳಿದಿದ್ದೇನೆ. ಅವರೊಬ್ಬ ಒಳ್ಳೆಯ ಆಡಳಿತಗಾರ ಹಾಗೂ ಜನಪರ ಕಾಳಜಿ ಉಳ್ಳವರು ಎಂದು ಸಂಸದ ಉಗ್ರಪ್ಪ ಹಾಡಿಹೊಗಳಿದ್ದಾರೆ.

    ಡೀಲ್ ಆರೋಪದ ಸುದ್ದಿ ಭಾರೀ ಚರ್ಚೆಯಾಗುತ್ತಿದ್ದಂತೆಯೇ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನೇಕರು ಬಿಂಬಿಸಿದಂತೆ ಕಾಂಗ್ರೆಸ್ಸಿನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಕಾಂಗ್ರೆಸ್ ಒಂದೇ ಅನ್ನೋದನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ಡಿಕೆಶಿಯವರು, ಸಿದ್ದರಾಮಯ್ಯ, ಖರ್ಗೆ, ಪರಮೇಶ್ವರ್ ಇನ್ನಿತರ ಎಲ್ಲಾ ನಾಯಕರು ಒಮ್ಮತದಿಂದ ಕಾಂಗ್ರೆಸ್ಸನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ತರಲು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಕೆಲವು ಮಾಧ್ಯಮಗಳು ಗುಂಪುಗಾರಿಕೆ ಇದೆ ಹೇಳುತ್ತಿರುವುದು ಸರಿಯಲ್ಲ ಎಂದು ಹೇಳುವ ಮೂಲಕ ಸಂಸದರು ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಭ್ರಷ್ಟಾಚಾರ ಮುಕ್ತವಾಗಲಿ ಅನ್ನೋ ಕಾಳಜಿ ಇದ್ರೆ ಉಗ್ರಪ್ಪ ದೂರು ನೀಡಲಿ: ಆರಗ ಜ್ಞಾನೇಂದ್ರ

    ನಿನ್ನೆ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆಯಲಾಗಿತ್ತು. ನಾನು ಹೊರಗಡೆ ಬಂದು ಕುಳಿತ ತಕ್ಷಣ ಸಲೀಂ ಅವರು ನನ್ನ ಕಿವಿಯಲ್ಲಿ ಗುಣುಗುಟ್ಟಿದರು. ಪ್ರೆಸ್ ಮೀಟ್ ಗೂ ಮುನ್ನ ನಮ್ಮ ಪಕ್ಷ ಅಧ್ಯಕ್ಷರ ಬಗ್ಗೆ ಸುಖಾ ಸುಮ್ಮನೆ ಆರೋಪಗಳನ್ನು ಮಾಡುತ್ತಿದ್ದಾರೆ. ಬಿಜೆಪಿಯವರು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂಬುದನ್ನು ತಿಳಿಸಿದರು. ಆದರೆ ಮಾಧ್ಯಮದಲ್ಲಿ ಮಾತ್ರ ಸಲೀಂ ಹೇಳಿರುವುದನ್ನು ತಪ್ಪಾಗಿ ಅರ್ಥೈಸಲಾಗಿದೆ. ಮಾಧ್ಯಮಗಳಿದಲೇ ಅಪಾರ್ಥ ಆಗಿದೆ ಎಂದು ಹೇಳುವ ಮೂಲಕ ಉಗ್ರಪ್ಪ ಮಾತು ಮರೆಮಾಚಿದರು. ಇದನ್ನೂ ಓದಿ: ಕೈ ನಾಯಕರಿಂದ್ಲೇ ಡೀಲ್ ರಹಸ್ಯ ಬಯಲು – ಡಿಕೆಶಿಗೆ ಬಿಜೆಪಿ ತಿರುಗೇಟು

    ಡಿಕೆಶಿಯವರು ಇಂದು ಆಸ್ತಿಯನ್ನು ಗಳಿಸಿದ್ದರೆ ಅದು ರಾಜಕಾರಣದಿಂದಲ್ಲ. ವ್ಯಾಪಾರ ಹಾಗೂ ಇನ್ನಿತರ ವ್ಯವಹಾರಗಳಿಂದ ಆಸ್ತಿ ಮಾಡಿದ್ದಾರೆ. ಅವರ ಜೀವನದಲ್ಲಿ ಎಂದಿಗೂ ಪರ್ಸೆಂಟೇಜ್ ರಾಜಕಾರಣಕ್ಕೆ ಹೋದವರಲ್ಲ. ಒಟ್ಟಿನಲ್ಲಿ ಪಕ್ಷದ ಅಧ್ಯಕ್ಷರೇ ಕೋಟಿಗಟ್ಟಲೇ ಡೀಲ್ ಮಾಡಿದ್ದಾರೆ ಎಂಬುದನ್ನು ಕಾಂಗ್ರೆಸ್ ನಾಯಕರು ಬಯಲು ಮಾಡಿದ್ದಾರೆ ಎಂದು ಹೇಳುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.  ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ಸಿನಲ್ಲಿ ಪರ್ಸಂಟೇಜ್ ಕೋಲಾಹಲ – ಡಿಕೆಶಿ ಕಲೆಕ್ಷನ್ ಗಿರಾಕಿ ಅಂದ್ರು ಸಲೀಂ

    ಡಿಕೆಶಿ ನಮ್ಮ ಪಕ್ಷದ ಅಧ್ಯಕ್ಷರು. ಅವರನ್ನು ನಾಲ್ಕು ದಶಕಗಳಿಂದ ಬಲ್ಲೆ. ಅವರು ಅತ್ಯಂತ ಕ್ರಿಯಾಶೀಲ, ಜನಪರ, ಬದ್ಧತೆ ಇರುವ ರಾಜಕಾರಣಿ. ರೈತ ಕುಟುಂಬದಿಂದ ಹುಟ್ಟಿ, ಇಂದು ರಾಜ್ಯ ಹಿರಿಯ ನಾಯಕರಲ್ಲಿ ಅವರೊಬ್ಬರು ಹಿರಿಯ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ ಎಂದು ಡಿಕೆಶಿ ಗುಣಗಾನ ಮಾಡಿದ ಅವರು, ಒಂದೆಡೆ ರಾಜಕಾರಣದಲ್ಲಿ ಅತ್ಯಂತ ಒಳ್ಳೆಯ ಆಡಳಿತಗಾರ, ರಾಜ್ಯದ ಅಭಿವೃದ್ಧಿ ಹಾಗೂ ಜನಪರ ರಾಜಕಾರಣಿ ಎಂದು ಹೇಳುವ ಮೂಲಕ ಪಾವಗಡದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯದ ಕುರಿತು ಮಾತನಾಡಿದರು. ಇದೇ ವೇಳೆ ಭ್ರಷ್ಟಾಚಾರ ಮುಕ್ತವಾಗಲು ಕಾಂಗ್ರೆಸ್ ಬದ್ಧವಾಗಿದೆ ಎಂದರು. ಇದನ್ನೂ ಓದಿ: ಅಯ್ಯೋ ಇಲ್ಲ ಸರ್, ಡಿಕೆಶಿ ಕಲೆಕ್ಷನ್ ಗಿರಾಕಿ ಅಲ್ಲ: ಸಲೀಂ, ಉಗ್ರಪ್ಪ ಸಮರ್ಥನೆ

  • ಭ್ರಷ್ಟಾಚಾರ ಮುಕ್ತವಾಗಲಿ ಅನ್ನೋ ಕಾಳಜಿ ಇದ್ರೆ ಉಗ್ರಪ್ಪ ದೂರು ನೀಡಲಿ: ಆರಗ ಜ್ಞಾನೇಂದ್ರ

    ಭ್ರಷ್ಟಾಚಾರ ಮುಕ್ತವಾಗಲಿ ಅನ್ನೋ ಕಾಳಜಿ ಇದ್ರೆ ಉಗ್ರಪ್ಪ ದೂರು ನೀಡಲಿ: ಆರಗ ಜ್ಞಾನೇಂದ್ರ

    ಬೆಂಗಳೂರು: ರಾಜ್ಯ ಭ್ರಷ್ಟಾಚಾರ ಮುಕ್ತವಾಗಲಿ ಎಂಬ ಕಾಳಜಿ ಇದ್ದರೆ ಸಂಸದ ಉಗ್ರಪ್ಪ ಅವರು ಈ ಬಗ್ಗೆ ದೂರು ನಿಡಲಿ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

    ಕಾಂಗ್ರೆಸ್ ಪ್ರೆಸ್ ಮೀಟ್ ಅಲ್ಲಿ ಕಾಂಗ್ರೆಸ್ ನಾಯಕರಿಂದ ಡಿಕೆಶಿ ವಿರುದ್ಧ ಅಕ್ರಮ ಹೇಳಿಕೆ ಕುರಿತು ಮಾತನಾಡಿದ ಅವರು, ಈ ಬಗ್ಗೆ ಖಂಡಿತವಾಗ್ಲೂ ಉಗ್ರಪ್ಪ ಅವರು ದೂರು ನೀಡಲಿ. ಸುಮೋಟೊ ಕಷ್ಟ, ಹೀಗಾಗಿ ಅವರೇ ದೂರು ನೀಡಲಿ. ಭ್ರಷ್ಟಾಚಾರ ಮುಕ್ತವಾಗಲಿ ಅನ್ನೊ ಕಾಳಜಿ ಇದ್ದರೆ ದೂರು ನೀಡಲಿ. ಅವರು ದೂರು ನೀಡಿದರೆ ಪೊಲೀಸ್ ಇಲಾಖೆಯಿಂದ ತನಿಖೆ ನಡೆಸಲು ಸೂಚಿಸುತ್ತೇನೆ ಎಂದರು.

    ಬರೀ ಬಾಯಿ ಮಾತಿನಲ್ಲಿ ಕಿವಿಯಲ್ಲಿ ಹೇಳಿದ್ರೆ ಅದು ಬೊಗಳೆ ಆಗುತ್ತೆ. ನಿಜವಾಗಲೂ ಭ್ರಷ್ಟಾಚಾರದ ಬಗ್ಗೆ ಹೋರಾಟ ಮಾಡಬೇಕು ಅನ್ನುವ ಮನಸಿದ್ದರೆ ದೂರು ಕೊಡ್ಲಿ ಎಂದು ಗೃಹ ಸಚಿವರು ತಿಳಿಸಿದರು. ಇದನ್ನೂ ಓದಿ: ಕೈ ನಾಯಕರಿಂದ್ಲೇ ಡೀಲ್ ರಹಸ್ಯ ಬಯಲು – ಡಿಕೆಶಿಗೆ ಬಿಜೆಪಿ ತಿರುಗೇಟು

    ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಮಾಧ್ಯಮ ಸಂಯೋಜಕ ಸಲೀಂ ಡೀಲ್ ಆರೋಪ ಮಾಡಿರುವುದು ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೀಡಾಗಿದೆ. ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಡಿಕೆಶಿ ಆಪ್ತ, ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹಾಗೂ ಸಂಸದ ಉಗ್ರಪ್ಪ ನಡುವೆ ಸಂಭಾಷಣೆ ನಡೆದಿದೆ. ಡಿಕೆಶಿ ಅವರು ಕಲೆಕ್ಷನ್ ಗಿರಾಕಿ ಎಂದು ಹೇಳಿದ್ದರು. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ಸಿನಲ್ಲಿ ಪರ್ಸಂಟೇಜ್ ಕೋಲಾಹಲ – ಡಿಕೆಶಿ ಕಲೆಕ್ಷನ್ ಗಿರಾಕಿ ಅಂದ್ರು ಸಲೀಂ

    ಜಲಸಂಪನ್ಮೂಲ ಇಲಾಖೆಯಲ್ಲಿ ಹೇಗೆ ಪರ್ಸಂಟೇಜ್ ಫಿಕ್ಸಾಗುತ್ತೆ ಎಂದು ಮಾತನಾಡಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಪರ್ಸಂಟೇಜ್ ಹೇಗೆ ಹಚ್ಚಾಯ್ತು..?, ಜಲಸಂಪನ್ಮೂಲ ಇಲಾಖೆಯಲ್ಲಿ ಮೊದಲೆಲ್ಲಾ 6 ರಿಂದ 8 ಪರ್ಸೆಂಟ್ ಇತ್ತು. ಡಿಕೆಶಿ ಬಂದ ಮೇಲೆ 12 ಪರ್ಸೆಂಟ್ ಮಾಡಿದರು ಎಂದು ಸಲೀಂ ಅವರು ಉಗ್ರಪ್ಪ ಬಳಿ ಹೇಳಿದ್ದರು. ಈ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದ ಇಬ್ಬರು ನಾಯಕರು ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಯ್ಯೋ ಇಲ್ಲ ಸರ್, ಡಿಕೆಶಿ ಕಲೆಕ್ಷನ್ ಗಿರಾಕಿ ಅಲ್ಲ: ಸಲೀಂ, ಉಗ್ರಪ್ಪ ಸಮರ್ಥನೆ

  • ಕೈ ನಾಯಕರಿಂದ್ಲೇ ಡೀಲ್ ರಹಸ್ಯ ಬಯಲು – ಡಿಕೆಶಿಗೆ ಬಿಜೆಪಿ ತಿರುಗೇಟು

    ಕೈ ನಾಯಕರಿಂದ್ಲೇ ಡೀಲ್ ರಹಸ್ಯ ಬಯಲು – ಡಿಕೆಶಿಗೆ ಬಿಜೆಪಿ ತಿರುಗೇಟು

    ಬೆಂಗಳೂರು: ಕಾಂಗ್ರೆಸ್ ನಾಯಕರೇ ಕೆಪಿಸಿಸಿ ಅಧ್ಯಕ್ಷರ ಡೀಲ್ ರಹಸ್ಯ ಬಯಲು ಮಾಡಿದ್ದು, ಇದೀಗ ಡಿಕೆಶಿಗೆ ಬಿಜೆಪಿ ತಿರುಗೇಟು ನೀಡಿದೆ.

    ಈ ಸಂಬಂಧ ಭ್ರಷ್ಟಾಧ್ಯಕ್ಷ ಎಂದು ಹ್ಯಾಶ್ ಟ್ಯಾಗ್ ಹಾಕಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಮಾನ್ಯ ಡಿಕೆಶಿ ಅವರೇ ಸೀಸರ್ ನ ಪತ್ನಿ ಅನುಮಾನಕ್ಕೆ ಅತೀತವಾಗಿರಬೇಕೆಂಬ ಮಾತಿದೆ. ಆದರೆ ಕೆಪಿಸಿಸಿ ಪಕ್ಷದ ವೇದಿಕೆಯಲ್ಲೇ ನಿಮ್ಮವರೇ ನಿಮ್ಮ ಬಗ್ಗೆ ಆಡಿರುವ ಅಧಿಕೃತ ಮಾತುಗಳ ಬಗ್ಗೆ ನೀವು ಸ್ಪಷ್ಟನೆ ನೀಡಲೇಬೇಕಲ್ಲವೇ?. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ಸಿನಲ್ಲಿ ಪರ್ಸಂಟೇಜ್ ಕೋಲಾಹಲ – ಡಿಕೆಶಿ ಕಲೆಕ್ಷನ್ ಗಿರಾಕಿ ಅಂದ್ರು ಸಲೀಂ

    ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರ ಮೇಲೆ ನಡೆದ ಐಟಿ, ಇಡಿ ದಾಳಿ ರಾಜಕೀಯ ಪ್ರೇರಿತ ಎನ್ನುವ ಕಾಂಗ್ರೆಸಿಗರೇ, ನಿಮ್ಮ ಭ್ರಷ್ಟಾಧ್ಯಕ್ಷನ ಧನ ಸಂಪಾದನೆಯ ಮಾರ್ಗ ಯಾವುದೆಂದು ಕಾಂಗ್ರೆಸ್ ನಾಯಕ ಉಗ್ರಪ್ಪ ಹಾಗೂ ಸಲೀಂ ಅವರು ಸ್ಪಷ್ಟಪಡಿಸಿದ್ದಾರೆ. ಈಗಲೂ ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನುತ್ತೀರಾ?. ಇದನ್ನೂ ಓದಿ: ಅಯ್ಯೋ ಇಲ್ಲ ಸರ್, ಡಿಕೆಶಿ ಕಲೆಕ್ಷನ್ ಗಿರಾಕಿ ಅಲ್ಲ: ಸಲೀಂ, ಉಗ್ರಪ್ಪ ಸಮರ್ಥನೆ

    ಮುಖ್ಯಮಂತ್ರಿಯಾಗುವ ಡಿ.ಕೆ ಶಿವಕುಮಾರ್ ಅವರ ಕನಸಿಗೆ ಕಾಂಗ್ರೆಸ್ ಪಕ್ಷದ ನಾಯಕರೇ ಎಳ್ಳು ನೀರು ಬಿಟ್ಟಿದ್ದಾರೆ. ನಿಮ್ಮ ಅಧ್ಯಕ್ಷ ಗಿರಿಯ ತಕ್ಕಡಿ ಏಳುತ್ತಲೇ ಇಲ್ಲ ಎಂದು ಸ್ಪಪಕ್ಷೀಯರೇ ಷರಾ ಬರೆದುಬಿಟ್ಟಿದ್ದಾರೆ. ಈ ಮಾತುಗಳು, ಸಿದ್ದರಾಮಯ್ಯ ಅವರ ಬಹುದಿನಗಳ “ಡಿಕೆಶಿ ಪದಚ್ಯುತಿ” ಎಂಬ ಮಾಸ್ಟರ್ ಪ್ಲ್ಯಾನ್‍ನ ಭಾಗವೇ?.

    https://twitter.com/BJP4Karnataka/status/1448171886152585219

    ಡಿಕೆಶಿ ಅವರೇ, ನಿಮ್ಮ ಹುಡುಗರೇ 50 ರಿಂದ 100 ಕೋಟಿ ಇದೆಯಂತೆ, ಹಾಗಾದರೆ ಕೆಪಿಸಿಸಿ ಅಧ್ಯಕ್ಷರಾದ ನಿಮ್ಮ ಬಳಿ ಎಷ್ಟಿರಬಹುದು? ಇದು ಕೆಪಿಸಿಸಿ ಕಚೇರಿಯಿಂದಲೇ ಎದ್ದಿರುವ ಅಧಿಕೃತ ಅನುಮಾನ. ಈ ಪ್ರಶ್ನೆ ರಾಜ್ಯದ ಜನತೆಯನ್ನೂ ಕಾಡುತ್ತಿದೆ. ಇದಕ್ಕೆ ನೀವಲ್ಲದೆ ಇನ್ಯಾರು ಉತ್ತರಿಸುತ್ತಾರೆ ಎಂದು ಬರೆದುಕೊಂಡಿ ಡಿಕೆಶಿಗೆ ಟ್ಯಾಗ್ ಮಾಡಲಾಗಿದೆ. ಒಟ್ಟಿನಲ್ಲಿ ಸಲೀಂ ಹಾಗೂ ಉಗ್ರಪ್ಪ ನಡುವೆ ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದಿರುವ ಸಂಭಾಷಣೆ ರಾಜ್ಯ ರಾಜಕೀಯದಲ್ಲಿ ತಲ್ಲಣ ಉಂಟುಮಾಡಿದೆ.

    ಡಿಕೆಶಿ ವಿರುದ್ಧ ಕಾಂಗ್ರೆಸ್ ನಾಯಕರ ಗುಸುಗುಸು ಮಾತಿಗೆ ನಿಮ್ಮ ಅಭಿಪ್ರಾಯಗಳೇನು..? 

  • ಅಯ್ಯೋ ಇಲ್ಲ ಸರ್, ಡಿಕೆಶಿ ಕಲೆಕ್ಷನ್ ಗಿರಾಕಿ ಅಲ್ಲ: ಸಲೀಂ, ಉಗ್ರಪ್ಪ ಸಮರ್ಥನೆ

    ಅಯ್ಯೋ ಇಲ್ಲ ಸರ್, ಡಿಕೆಶಿ ಕಲೆಕ್ಷನ್ ಗಿರಾಕಿ ಅಲ್ಲ: ಸಲೀಂ, ಉಗ್ರಪ್ಪ ಸಮರ್ಥನೆ

    ಬೆಂಗಳೂರು: ಅಯ್ಯೋ ಇಲ್ಲ ಸರ್.. ಡಿಕೆಶಿ ಕಲೆಕ್ಷನ್ ಗಿರಾಕಿ ಅಲ್ಲ. ಅದು ನಾನು ತಪ್ಪಾಗಿ ಹೇಳಿದ್ದೇನೆ ಎಂದು ಹೇಳುವ ಮೂಲಕ ಕೆಪಿಸಿಸಿ ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹಾಗೂ ಸಂಸದ ಉಗ್ರಪ್ಪ ಸಮರ್ಥನೆ ಮಾಡಿಕೊಂಡಿದ್ದಾರೆ.

    ಡಿಕೆಶಿಯವರು ಒಳ್ಳೆಯ ನಾಯಕ. ವಿಜಯೇಂದ್ರ ಬಂದ ಬಳಿಕ ಕಲೆಕ್ಷನ್ ಜಾಸ್ತಿಯಾಗಿದೆ. ಇದನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ಕಾಂಗ್ರೆಸ್ ನಾಯಕರು ಪಬ್ಲಿಕ್ ಟಿವಿ ಜೊತೆ ಎಕ್ಸ್ ಕ್ಲೂಸೀವ್ ಆಗಿ ಮಾತನಾಡಿದ್ದಾರೆ.

    ನಾವು ಹೇಳಿದ ವಿಚಾರವಷ್ಟೇ ವರದಿ ಮಾಡಬೇಕಿತ್ತು. ನಾವು ಮಾತಾಡಿದ್ದು ಇವತ್ತಿನ ಪರಿಸ್ಥಿತಿ ಅಷ್ಟೇ ಎಂದು ಹೇಳುವ ಮೂಲಕ ಉಗ್ರಪ್ಪ ಅವರು ಮಾಧ್ಯಮಗಳಿಗೆ ನೀತಿ ಪಾಠ ಮಾಡಿದ್ದಾರೆ.

    ಹೇಳಿದ್ದೇನು..?
    ರಾಜ್ಯ ರಾಜಕಾರಣದಲ್ಲಿ ಪರ್ಸಂಟೇಜ್ ಕೋಲಾಹಲ ಎಬ್ಬಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ಧ ಪರ್ಸಂಟೇಜ್ ಆರೋಪವೊಂದು ಕೇಳಿಬಂದಿದ್ದು, ಕಾಂಗ್ರೆಸ್ ನಾಯಕರೇ ಈ ಕಹಾನಿಯನ್ನು ಬಿಚ್ಚಿಟ್ಟಿದ್ದಾರೆ. ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ವೇಳೆ ಡಿಕೆಶಿ ಆಪ್ತ, ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹಾಗೂ ಸಂಸದ ಉಗ್ರಪ್ಪ ನಡುವೆ ಸಂಭಾಷಣೆ ನಡೆದಿದೆ. ಡಿಕೆಶಿ ಅವರು ಕಲೆಕ್ಷನ್ ಗಿರಾಕಿ ಎಂದು ಕೆಪಿಸಿಸಿ ಮಾಧ್ಯಮ ಸಂಯೋಜಕ ಸಲೀಂ ಹೇಳಿರುವುದು ಇದೀಗ ಭಾರೀ ಚರ್ಚೆಯಾಗುತ್ತಿದೆ.

    ಜಲಸಂಪನ್ಮೂಲ ಇಲಾಖೆಯಲ್ಲಿ ಹೇಗೆ ಪರ್ಸಂಟೇಜ್ ಫಿಕ್ಸಾಗುತ್ತೆ ಎಂದು ಮಾತನಾಡಿಕೊಂಡಿದ್ದಾರೆ. ಡಿ.ಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಪರ್ಸಂಟೇಜ್ ಹೇಗೆ ಹಚ್ಚಾಯ್ತು..?, ಜಲಸಂಪನ್ಮೂಲ ಇಲಾಖೆಯಲ್ಲಿ ಮೊದಲೆಲ್ಲಾ 6 ರಿಂದ 8 ಪರ್ಸೆಂಟ್ ಇತ್ತು. ಡಿಕೆಶಿ ಬಂದ ಮೇಲೆ 12 ಪರ್ಸೆಂಟ್ ಮಾಡಿದರು ಎಂದು ಸಲೀಂ ಅವರು ಉಗ್ರಪ್ಪ ಬಳಿ ಹೇಳಿದ್ದಾರೆ. ಇದನ್ನೂ ಓದಿ: ರಾಜ್ಯ ಕಾಂಗ್ರೆಸ್ಸಿನಲ್ಲಿ ಪರ್ಸಂಟೇಜ್ ಕೋಲಾಹಲ – ಡಿಕೆಶಿ ಕಲೆಕ್ಷನ್ ಗಿರಾಕಿ ಅಂದ್ರು ಸಲೀಂ

    ಇದೇ ವೇಳೆ ಜಲ ಸಂಪನ್ಮೂಲ ಇಲಾಖೆಯ ಕಾಂಟ್ರಾಕ್ಟರ್ ಗಳಾಗಿರುವ ಉಪ್ಪಾರ್, ಜೀ.ಶಂಕರ್ ಹನುಮಂತಪ್ಪರ ಬಗ್ಗೆಯು ಪ್ರಸ್ತಾಪ ಮಾಡಿದ್ದಾರೆ. ವಾರದ ಹಿಂದೆ ಈ ಕಾಂಟ್ರಕ್ಟರ್ ಗಳ ಮೇಲೆ ಐಟಿ ದಾಳಿ ನಡೆದಿತ್ತು. ಪ್ರೆಸ್ ಮೀಟ್ ಗೂ ಮುನ್ನ ಈ ವಿಚಾರದ ಬಗ್ಗೆ ಸಲೀಂ ಹಾಗೂ ಉಗ್ರಪ್ಪ ಚರ್ಚೆ ನಡೆಸಿದ್ದರು. ಡಿ.ಕೆ.ಶಿವಕುಮಾರ್ ಜಲ ಸಂಪನ್ಮೂಲ ಸಚಿವರಾಗಿದ್ದಾಗಲೂ ಇದೆ ಕಾಂಟ್ರಾಕ್ಟರ್ ಗಳು ಇದ್ದರು. ಡಿಕೆಶಿ ಆಪ್ತ ಮುಳಗುಂದ ಸಾಕಷ್ಟು ದುಡ್ಡು ಮಾಡಿದ್ದಾರೆ. ಮುಳಗುಂದ 50-100 ಕೋಟಿ ಮಾಡಿದ್ದಾನೆ ಅಂದ್ರೆ ಡಿಕೆ ಹತ್ತಿರ ಎಷ್ಟಿರಬೇಕು ಲೆಕ್ಕ ಹಾಕಿ. ಡಿಕೆ ಬರೀ ಕಲೆಕ್ಷನ್ ಗಿರಾಕಿ ಎಂದಿದ್ದಾರೆ.

  • ಸಮಾಧಿಯಾಗಿದ್ದ ವ್ಯಕ್ತಿಯ ಕೇಸ್ ಇದೀಗ ಮತ್ತೆ ಓಪನ್: ಬೆಂಗ್ಳೂರು ಪೊಲೀಸರ ತನಿಖೆಯ ಮೇಲೆ ಅನುಮಾನ!

    ಸಮಾಧಿಯಾಗಿದ್ದ ವ್ಯಕ್ತಿಯ ಕೇಸ್ ಇದೀಗ ಮತ್ತೆ ಓಪನ್: ಬೆಂಗ್ಳೂರು ಪೊಲೀಸರ ತನಿಖೆಯ ಮೇಲೆ ಅನುಮಾನ!

    ಬೆಂಗಳೂರು: ಸಮಾಧಿಯಾಗಿದ್ದ ವ್ಯಕ್ತಿಯ ಕೇಸ್ ಇದೀಗ ಮತ್ತೆ ಓಪನ್ ಆಗಿದೆ. ವರ್ಷದ ನಂತರ ಪ್ರಕರಣದ ಮರು ವಿಚಾರಣೆ ಆಗುತ್ತಿದ್ದು, ತನಿಖೆ ನಡೆಸಿದ ಪೊಲೀಸರ ಮೇಲೆಯೇ ಅನುಮಾನ ಎದ್ದಿದೆ.

    ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನಲಾದ ಸಲೀಂ ಎಂಬುವರ ಪತ್ನಿ ಅಪ್ಸಾನಾ ನೀಡಿದ ದೂರಿನಲ್ಲಿ ಮೇಲ್ನೋಟಕ್ಕೆ ಸತ್ಯಾಂಶವಿದೆ ಎಂದು ತಿಳಿದು ಪೊಲೀಸ್ ಆಯುಕ್ತರಾದ ಸುನೀಲ್ ಕುಮಾರ್ ಇದೀಗ ಪ್ರಕರಣದ ತನಿಖೆ ನಡೆಸುವಂತೆ ಚಂದ್ರಾಲೇಔಟ್ ಪೊಲೀಸರಿಗೆ ಸೂಚಿಸಿದ್ದಾರೆ.

    ಏನಿದು ಪ್ರಕರಣ?
    ಬೆಂಗಳೂರಿನ ಗಂಗೊಂಡನಹಳ್ಳಿ ನಿವಾಸಿಯಾದ ಸಲೀಂ ಎಂಬವರು 2016 ರ ಅಕ್ಟೋಬರ್ 18 ರಂದು ದೀಪಾಂಜಲಿ ನಗರದಲ್ಲಿ ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ಮೊದಲು ಚಂದ್ರಾಲೇಔಟ್‍ನ ಗುರುಶ್ರೀ ಆಸ್ಪತ್ರೆ ಸೇರಿದ್ದ ಸಲೀಂ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್ ಗೆ ದಾಖಲಿಸಲಾಗಿತ್ತು. ಆದರೆ ಮರು ದಿನವೇ ಸಲೀಂ ಅವರನ್ನ ನಿಮ್ಹಾನ್ಸ್ ನಿಂದ ಡಿಸ್ಚಾರ್ಜ್ ಮಾಡಿಸಿದ್ದ ಸೋದರರಾದ ನದೀಂ ಹಾಗೂ ಖಲೀಮ್, ಅಣ್ಣ ತೀರಿಹೋಗಿದ್ದಾನೆಂದು ಮನೆಯವರಿಗೆ ಹೇಳಿ ಮಣ್ಣು ಮಾಡಿದ್ದರು.

    ಅನುಮಾನ ಮೂಡಿದ್ದು ಹೇಗೆ?
    ಸಲೀಂ ಅಪಘಾತಕ್ಕೆ ಒಳಗಾಗುವ ಮುನ್ನ ಸೋದರರ ನಡುವೆ ಆಸ್ತಿ ಹಂಚಿಕೆ ವಿಚಾರವಾಗಿ ಗಲಾಟೆ ಆಗಿತ್ತು. ಅಷ್ಟೇ ಅಲ್ಲದೇ ಆಸ್ಪತ್ರೆಯಲ್ಲಿ ಸಲೀಂ ಮೃತಪಟ್ಟಿರಲಿಲ್ಲ. ಹಾಗೆಯೇ ಸಲೀಂ ಮೃತಪಡದೆ ಇದ್ದುದರಿಂದ ಮರಣೋತ್ತರ ಪರೀಕ್ಷೆ ಸಹ ನಡೆದಿರಲಿಲ್ಲ. ಹೀಗಾಗಿ ಅನುಮಾನದಿಂದ ಪತಿಯ ಸಾವಿನ ಬಗ್ಗೆ ಪತ್ನಿ ಅಪ್ಸಾನಾ ಚಂದ್ರಾಲೇಔಟ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

    ಮತ್ತೆ ತನಿಖೆ ಯಾಕೆ?
    ದೂರು ದಾಖಲಿಸಿಕೊಳ್ಳಲು ಕಾಲಹರಣ ಮಾಡಿದ್ದ ಪೊಲೀಸರು 2017ರ ಮಾರ್ಚ್ 27 ರಂದು ನಾನ್ ಕಾಗ್ನಿಸೆಬಲ್ ರಿಪೋರ್ಟ್(ಗಂಭೀರವಲ್ಲದ ಕೃತ್ಯ) ಬರೆದುಕೊಟ್ಟು ಕೈತೊಳೆದುಕೊಂಡಿದ್ದರು. ಚಂದ್ರಾಲೇಔಟ್ ಠಾಣೆ ಪೊಲೀಸರು ಅಪ್ಸಾನಾ ದೂರನ್ನು ಮೊದಲಿಗೆ ತಿರಸ್ಕಾರದಿಂದ ನೋಡಿ ಕೊನೆಯಲ್ಲಿ ಎನ್‍ಸಿಆರ್ ದಾಖಲಿಸಿದ್ದಾರಾದರೂ ಅದರ ಬಗ್ಗೆಯೂ ಹಲವು ಅನುಮಾನಗಳು ಎದ್ದಿವೆ. ದಿನಾಂಕ, ಹೆಸರುಗಳೆಲ್ಲವೂ ತಪ್ಪಾಗಿದ್ದು ಬೇರೆ ಯಾರದ್ದೋ ಎನ್‍ಸಿಆರ್ ತಿದ್ದಿ ಇವರಿಗೆ ಕೊಟ್ಟಿದ್ದಾರೆಂಬ ಮಾತೂ ಕೇಳಿಬಂದಿದೆ. ಹಾಗೆಯೇ ಅಪ್ಸಾನಾ ಪತಿ ಸಲೀಂಗೆ ಪಿತ್ರಾರ್ಜಿತವಾಗಿ ಕೋಟ್ಯಾಂತರ ರೂ. ಮೌಲ್ಯದ ಆಸ್ತಿಯಿದ್ದು, ಅದನ್ನ ಕಬಳಿಸಲು ಸೋದರರೇ ಕೊಲೆ ಮಾಡಿದ್ದಾರೆಂಬ ಆರೋಪವೂ ಇದೆ. ಇದಕ್ಕೆ ಸಾಕ್ಷಿ ಎಂಬಂತೆ ಅಪಘಾತದಲ್ಲಿ ಸಲೀಂ ಮೃತಪಟ್ಟರೂ ಸಂಬಂಧಪಟ್ಟ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಿಸಿಲ್ಲ. ಅದರ ಜತೆಗೆ ನಿಮ್ಹಾನ್ಸ್ ನಲ್ಲಿ ಸಾಯುವ ಮುನ್ನವೇ ಸಲೀಂ ಅವರನ್ನ ಡಿಸ್ಚಾರ್ಜ್ ಮಾಡಿಸಿಕೊಂಡು ಬಂದಿರುವುದು ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ. ಹೀಗಾಗಿ ಆಸ್ತಿಗಾಗಿ ಸೋದರರೇ ಕೊಲೆ ಮಾಡಿದ್ರಾ ಎನ್ನುವ ಅನುಮಾನ ದಟ್ಟವಾಗಿದೆ.

    ತನಿಖೆಯ ಉಸ್ತುವಾರಿಯನ್ನ ಕೆಂಗೇರಿ ಗೇಟ್ ಎಸಿಪಿ ಪ್ರಕಾಶ್ ಅವರಿಗೆ ವಹಿಸಲಾಗಿದ್ದು ಚಂದ್ರಾ ಲೇಔಟ್ ಪೊಲೀಸರು ಮತ್ತೆ ತನಿಖೆ ಆರಂಭಿಸಿದ್ದಾರೆ. ಸದ್ಯ ಸಲೀಂ ಸೋದರರು ಹಾಗೂ ಕೃತ್ಯಕ್ಕೆ ಸಹಕರಿಸಿದ ಜಮೀರ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸಂಪೂರ್ಣ ತನಿಖೆಯ ನಂತರವೇ ಸಲೀಂ ಸಾವಿನ ರಹಸ್ಯ ಹೊರಬರಲಿದೆ.