Tag: sale

  • ಆಗಸ್ಟ್ ರಿಪೋರ್ಟ್: ರಾಯಲ್ ಎನ್‍ಫೀಲ್ಡ್ ಬೈಕ್ ಮಾರಾಟದಲ್ಲಿ 2% ಬೆಳವಣಿಗೆ

    ಆಗಸ್ಟ್ ರಿಪೋರ್ಟ್: ರಾಯಲ್ ಎನ್‍ಫೀಲ್ಡ್ ಬೈಕ್ ಮಾರಾಟದಲ್ಲಿ 2% ಬೆಳವಣಿಗೆ

    ನವದೆಹಲಿ: ವಿಶ್ವದ ಹಳೆಯ ಮೋಟಾರ್‌ಸೈಕಲ್ ತಯಾರಿಕಾ ಸಂಸ್ಥೆಯಾದ ರಾಯಲ್ ಎನ್‍ಫೀಲ್ಡ್ ಅಗಸ್ಟ್ ತಿಂಗಳಿನಲ್ಲಿ ಒಟ್ಟು 69,377 ಬೈಕ್‍ಗಳನ್ನು ಮಾರಾಟ ಮಾಡುವ ಮೂಲಕ 2% ರಷ್ಟು ಮಾರಾಟವನ್ನು ಹೆಚ್ಚಿಸಿಕೊಂಡಿದೆ.

    ಶನಿವಾರ ತನ್ನ 2018 ರ ಆಗಸ್ಟ್ ತಿಂಗಳ ವರದಿಯನ್ನು ಬಿಡುಗಡೆ ಮಾಡಿದ ಸಂಸ್ಥೆಯು, ಜುಲೈನಲ್ಲಿ ಒಟ್ಟು 66,872 ಬೈಕ್ ಗಳನ್ನು ಮಾರಾಟ ಮಾಡಿದ್ದರೆ, ಅಗಸ್ಟ್ ನಲ್ಲಿ 69,377 ಬೈಕ್ ಗಳನ್ನು ಮಾರಾಟ ಮಾಡುವ ಮೂಲಕ 2% ಮಾರಾಟವನ್ನು ಹೆಚ್ಚಿಸಿಕೊಂಡಿದೆ. 2017 ರ ಈ ಅವಧಿಯಲ್ಲಿ 67,977 ಬೈಕ್ ಗಳು ಮಾರಾಟವಾಗಿದ್ದವು. ಇದನ್ನೂ ಓದಿ: ಭಾರತೀಯ ಸೇನೆಗೆ ಗೌರವ ಸಲ್ಲಿಸಲು ಕ್ಲಾಸಿಕ್ ಸಿಗ್ನಲ್ಸ್ 350 ಎಬಿಎಸ್ ಬೈಕ್ ಬಿಡುಗಡೆ: ಬೆಲೆ ಎಷ್ಟು?

    ರಾಯಲ್ ಎನ್‍ಫೀಲ್ಡ್ ರಫ್ತಿನಲ್ಲಿಯೂ ಸಹ 23% ರಷ್ಟು ಹೆಚ್ಚಳವಾಗಿದ್ದು, ಒಟ್ಟು 1,363 ಬೈಕ್ ಗಳು ರಫ್ತಾಗಿದ್ದರೆ, 2017 ರಲ್ಲಿ 1,105 ಬೈಕುಗಳನ್ನು ರಫ್ತು ಮಾಡಿತ್ತು.

    ರಾಯಲ್ ಎನ್‍ಫೀಲ್ಡ್ ಕಂಪೆನಿಯು ತನ್ನ ಕ್ಲಾಸಿಕ್ 350 ಹಾಗೂ 500, ಬುಲೆಟ್ 350 ಹಾಗೂ 500 ಹಾಗೂ ಥಂಡರ್‌ಬರ್ಡ್ 350 ಹಾಗೂ 500ಸಿಸಿ ಮಾದರಿಗಳಲ್ಲಿ ಸಾಕಷ್ಟು ಬದಲಾವಣೆಗಳು ಮಾಡಿ, ನೂತನ ಆವೃತ್ತಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಮಾದರಿಗಳು ಗ್ರಾಹಕರನ್ನು ಆಕರ್ಷಿಸಿ, ಅತಿ ಹೆಚ್ಚು ಮಾರಾಟವಾಗುವಂತೆ ಮಾಡಿದ್ದವು.ಇದನ್ನೂ ಓದಿ: ದಾಖಲೆ ನಿರ್ಮಿಸಿದ ರಾಯಲ್ ಎನ್‍ಫೀಲ್ಡ್ ನ ಕ್ಲಾಸಿಕ್ 500 ಪೆಗಾಸಸ್ ಬೈಕ್: ಬೆಲೆ ಎಷ್ಟು? ವೈಶಿಷ್ಟ್ಯವೇನು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತೀಯ ಸೇನೆಗೆ ಗೌರವ ಸಲ್ಲಿಸಲು ಕ್ಲಾಸಿಕ್ ಸಿಗ್ನಲ್ಸ್ 350 ಎಬಿಎಸ್ ಬೈಕ್ ಬಿಡುಗಡೆ: ಬೆಲೆ ಎಷ್ಟು?

    ಭಾರತೀಯ ಸೇನೆಗೆ ಗೌರವ ಸಲ್ಲಿಸಲು ಕ್ಲಾಸಿಕ್ ಸಿಗ್ನಲ್ಸ್ 350 ಎಬಿಎಸ್ ಬೈಕ್ ಬಿಡುಗಡೆ: ಬೆಲೆ ಎಷ್ಟು?

    ನವದೆಹಲಿ: ರಾಯಲ್ ಎನ್‍ಫೀಲ್ಡ್ ಕಂಪೆನಿಯು ಭಾರತೀಯ ಸೇನೆಗೆ ಗೌರವಾರ್ಥಕವಾಗಿ ತನ್ನ ನೂತನ ಕ್ಲಾಸಿಕ್ ಸಿಗ್ನಲ್ 350 ಎಬಿಎಸ್ ಆವೃತ್ತಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಮಾಡಿದೆ.

    ಭಾರತೀಯ ಸೇನೆಯೊಂದಿಗೆ 1952 ರಿಂದ ಸುದೀರ್ಘ 65 ವರ್ಷಗಳ ಪಯಣವನ್ನು ಮುಂದುವರಿಸಿರುವ ರಾಯಲ್ ಎನ್‍ಫೀಲ್ಡ್ ಮೋಟಾರ್‌ಸೈಕಲ್ ತಯಾರಿಕಾ ಸಂಸ್ಥೆಯು, ಸೇನೆಗೆ ಗೌರವ ಸೂಚಿಸುವ ನಿಟ್ಟಿನಲ್ಲಿ ತನ್ನ ನೂನತ ಕ್ಲಾಸಿಕ್ ಸಿಗ್ನಲ್ 350 ಎಬಿಎಸ್ ಆವೃತ್ತಿಯನ್ನು ಬಿಡುಗಡೆಮಾಡಿದೆ.

    ವಿಶೇಷವಾಗಿ ಈ ಬಾರಿಯ ಬೈಕಿನ ಇಂಜಿನ್ ಹಾಗೂ ಚಕ್ರದ ರಿಮ್ ಅನ್ನು ಸಂಪೂರ್ಣವಾಗಿ ಕಪ್ಪು ಬಣ್ಣದಿಂದ ನಿರ್ಮಿಸಿದ್ದು, ಪ್ರತಿ ಬೈಕಿನ ಪೆಟ್ರೋಲ್ ಟ್ಯಾಂಕಿನ ಮೇಲೆ ಸೇನೆಯ ವಿಶಿಷ್ಟವಾದ ಸರಣಿಯ ಸಂಖ್ಯೆಯನ್ನು ಮುದ್ರಿಸಿದೆ.

    ಏನಿದು ಎಬಿಎಸ್?
    ಪ್ರಸ್ತುತ ಬೈಕ್ ಮತ್ತು ಕಾರುಗಳಲ್ಲಿ ವೇಗವನ್ನು ಕೂಡಲೇ ನಿಯಂತ್ರಿಸಲು ಆ್ಯಂಟಿಲಾಕ್ ಬ್ರೇಕಿಂಗ್ ಸಿಸ್ಟಂ(ಎಬಿಎಸ್) ಅಳವಡಿಸಲಾಗಿರುತ್ತದೆ. ವೇಗವಾಗಿ ಹೋಗುತ್ತಿದ್ದಾಗ ಸಡನ್ ಆಗಿ ಬ್ರೇಕ್ ಹಾಕಿದಾಗ ವಾಹನ ಪಲ್ಟಿ ಹೊಡೆಯುವ ಸಾಧ್ಯತೆ ಹೆಚ್ಚಿರುತ್ತದೆ. ಬೈಕಿನಲ್ಲಿ ಡಿಸ್ಕ್ ಬ್ರೇಕ್ ಇದ್ದಾಗ ಸ್ವಲ್ಪ ಅಪಾಯ ಜಾಸ್ತಿ ಇರುತ್ತದೆ. ಈ ಅಪಾಯವನ್ನು ತಪ್ಪಿಸಲು ಬ್ರೇಕ್ ಹಿಡಿದ ಕೂಡಲೇ ವೇಗವನ್ನು ನಿಯಂತ್ರಿಸಲು ಎಬಿಎಸ್ ತಂತ್ರಜ್ಞಾನವನ್ನು ಅಳವಡಿಸಲಾಗಿರುತ್ತದೆ. ಸಾಧಾರಣವಾಗಿ ಸ್ಫೋರ್ಟ್ಸ್ ಬೈಕ್ ಗಳಲ್ಲಿ ಎಬಿಎಸ್ ಹೊಂದಿರುವ ಮತ್ತು ಎಬಿಎಸ್ ಇಲ್ಲದ ಮಾದರಿಗಳು ಮಾರುಕಟ್ಟೆಯಲ್ಲಿರುತ್ತದೆ. ಎಬಿಎಸ್ ಹೊಂದಿರುವ ಬೈಕ್ ಬೆಲೆ ಜಾಸ್ತಿ ನಿಗದಿಯಾಗಿರುತ್ತದೆ.

    ಬೆಲೆ ಎಷ್ಟು? ಯಾವ ಬಣ್ಣಗಳಲ್ಲಿ ಸಿಗುತ್ತೆ?
    ಕ್ಲಾಸಿಕ್ ಸಿಗ್ನಲ್ಸ್ 350 ಎಬಿಎಸ್ ಬೈಕಿನ ಬೆಲೆ ಅಂದಾಜು 1.68 ಲಕ್ಷ ರೂಪಾಯಿಗಳಾಗಿದ್ದು, ಹಳೆಯ ಕ್ಲಾಸಿಕ್ ಮಾದರಿಗಿಂತ 16 ಸಾವಿರ ರೂ. ಹೆಚ್ಚಿರಲಿದೆ. ಗ್ರಾಹಕರು ಈ ಮಾದರಿಯನ್ನು ಬುಕ್ಕಿಂಗ್ ಮಾಡಲು ನೇರವಾಗಿ ಷೋರೂಂಗಳಿಗೆ ತೆರಳಬೇಕಾಗಿದೆ. ಯಾವುದೇ ಆನ್‍ಲೈನ್ ಬುಕ್ಕಿಂಗ್ ಇಲ್ಲ. ನೂತನ ಕ್ಲಾಸಿಕ್ ಸಿಗ್ನಲ್ಸ್ ಕೇವಲ ಎರಡು ಬಣ್ಯಗಳಲ್ಲಿ ಲಭ್ಯವಿದ್ದು, ಒಂದು ಏರ್‌ಬಾರ್ನ್ ಬ್ಲೂ ಹಾಗೂ ಸ್ಟೋರ್ಮ್‍ರೈಡ್ ಸ್ಯಾಂಡ್ ಬಣ್ಣಗಳಲ್ಲಿ ಲಭ್ಯವಿದೆ.

    ಕ್ಲಾಸಿಕ್ ಸಿಗ್ನಲ್ಸ್ 350 ಎಬಿಎಸ್ ಎಂಜಿನ್ ಮತ್ತು ಸಸ್ಪೆನ್ಷನ್:
    346 ಸಿಸಿ ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ನೊಂದಿಗೆ 19.8-ಬಿಎಚ್‍ಪಿ @ 5250 ಆರ್‌ಪಿಎಂ ಜೊತೆಗೆ 28-ಎನ್‍ಎಂ ಟಾರ್ಕ್ ಹಾಗೂ 4000 ಆರ್‌ಪಿಎಂ ಉತ್ಪಾದನಾ ಶಕ್ತಿಯನ್ನು ಹೊಂದಿದೆ. ಫ್ರಂಟ್ ಸಸ್ಪೆನ್ಷನ್ ಟೆಲಿಸ್ಕೋಪಿಕ್ 35 ಎಂಎಂ ಫೋರ್ಕ್ಸ್ 130 ಎಂಎಂ ಸಸ್ಪೆನ್ಷನ್ ಹೊಂದಿದ್ದು, ಹಿಂದುಗಡೆ ಟ್ವಿನ್ ಗ್ಯಾಸ್ 5-ಹಂತದಲ್ಲಿ ಹೊಂದಾಣಿಕೆಯ ಮಾಡುವ 80 ಎಂಎಂ ಸಸ್ಪೆನ್ಷನ್ ಹೊಂದಿದೆ.

    ಬ್ರೇಕ್ ಹಾಗೂ ಟೈರ್ ಗಳು:
    ಮುಂದುಗಡೆ 90/90 ಅಳತೆಯ 19 ಇಂಚಿನ ಟೈರ್ ಹೊಂದಿದ್ದು, 280 ಎಂಎಂ ಡಿಸ್ಕ್ ಬ್ರೇಕ್ ಹೊಂದಿದ್ದು, ಹಿಂದುಗಡೆ 120/80 ಅಳತೆಯ 18 ಇಂಚಿನ ಟೈರ್ ಹೊಂದಿದ್ದು, 240 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ. ಜೊತೆಗೆ ಎಬಿಎಸ್(ಆ್ಯಂಟಿಲಾಕ್ ಬ್ರೇಕಿಂಗ್) ಸಿಸ್ಟಮ್ ಅನ್ನು ಹೊಂದಿದೆ.

    ಸುತ್ತಳತೆ ಹಾಗೂ ತೂಕ:
    ಬೈಕ್ ನ ಉದ್ದ x ಅಗಲ x ಎತ್ತರ: 2160ಎಂಎಂ x 790ಎಂಎಂ x 1090ಎಂಎಂ ಆಗಿದ್ದು, ಗ್ರೌಂಡ್ ಕ್ಲಿಯರೆನ್ಸ್ 135 ಎಂಎಂ ಆಗಿದೆ. ಇಂಧನ ಸಾಮರ್ಥ್ಯ 13.5 ಲೀಟರ್ ಆಗಿದ್ದು, ಒಟ್ಟು ತೂಕ 134 ಕೆಜಿ ಇದೆ.

    ಇತರೆ ಫೀಚರ್ ಗಳು:
    ಹ್ಯಾಂಡಲ್ ಬಾರ್, ಹೆಡ್‍ಲೈಟ್, ಎಕ್ಸಾಸ್ಟ್ ಮಫ್ಲರ್, ಲೆದರ್ ಸ್ಟ್ಯಾಪ್, ಕ್ರಶ್ ಗಾರ್ಡ್, ಸೈಡ್ ಬ್ಯಾಗ್ಸ್ ಹಾಗೂ ದೊಡ್ಡದಾದ ವಿಂಡ್ ಸ್ಕ್ರೀನ್ ಕಾಣಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ತರಕಾರಿ ವ್ಯಾಪಾರ ಮಾಡೋ ಪರಿಸ್ಥಿತಿಗೆ ಬಂದ ರಣವಿಕ್ರಮ ಬೆಡಗಿ- ಫೋಟೋ ವೈರಲ್

    ತರಕಾರಿ ವ್ಯಾಪಾರ ಮಾಡೋ ಪರಿಸ್ಥಿತಿಗೆ ಬಂದ ರಣವಿಕ್ರಮ ಬೆಡಗಿ- ಫೋಟೋ ವೈರಲ್

    ಮುಂಬೈ: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆ ‘ರಣವಿಕ್ರಮ’ ಚಿತ್ರದಲ್ಲಿ ನಟಸಿದ ನಟಿ ಅದಾ ಶರ್ಮಾ ಇಂದು ತರಕಾರಿ ಮಾರಾಟ ಮಾಡುವ ಪರಿಸ್ಥಿತಿಗೆ ಬಂದಿದ್ದಾರೆ!

    ನಟಿ ಅದಾ ಶರ್ಮಾ ತರಕಾರಿ ಮಾರುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದಾ ಶರ್ಮಾ ಅವರ ಈ ಫೋಟೋ ನೋಡಿ ಅಭಿಮಾನಿಗಳು ಕೂಡ ದಂಗಾಗಿದ್ದಾರೆ. ಅದಾ ಶರ್ಮಾ ಅವರನ್ನು ಈ ಫೋಟೋದಲ್ಲಿ ಕಂಡು ಹಿಡಿಯುವುದು ಅಭಿಮಾನಿಗಳಿಗೆ ಸ್ವಲ್ಪ ಕಷ್ಟವಾಗಿದೆ.

    ಫೋಟೋದಲ್ಲಿ ಅದಾ ಶರ್ಮಾ ಹಳೆಯ ಸೀರೆ ಹಾಕಿ ತರಕಾರಿ ಮಾರುತ್ತಿದ್ದಾರೆ. ತರಕಾರಿ ಮಾರುವವರ ರೀತಿಯಲ್ಲೇ ಅದಾ ಕೂಡ ಕಾಣಿಸಿಕೊಂಡಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕೂತುಹಲ ಮೂಡಿದೆ.

    ಶೀಘ್ರದಲ್ಲೇ ಅದಾ ಹಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಲಿವುಡ್ ಚಿತ್ರಕ್ಕಾಗಿ ಅದಾ ಲುಕ್ ಟೆಸ್ಟ್ ಮಾಡುವ ಸಲುವಾಗಿ ತರಕಾರಿ ಮಾರುವ ಮಹಿಳೆಯ ವೇಷದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ ಅದಾ ಮುಗ್ಧ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ.

    ಅದಾ 2008ರಲ್ಲಿ ‘1920’ ಚಿತ್ರದ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ನಂತರ ಕಳೆದ ವರ್ಷ ‘ಕಮಾಂಡೋ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 10 ವರ್ಷದ ಬಾಲಿವುಡ್ ಸಿನಿಮಾ ಬದುಕಿನಲ್ಲಿ ಅದಾ ಕೇವಲ 5 ಚಿತ್ರದಲ್ಲಿ ನಟಿಸಿದ್ದಾರೆ. ಅಲ್ಲದೇ ದಕ್ಷಿಣ ಭಾರತದ ಕನ್ನಡ, ತೆಲುಗು, ತಮಿಳು ಚಿತ್ರದಲ್ಲಿ ನಟಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ತಮ್ಮ ಡ್ಯಾನ್ಸ್ ವಿಡಿಯೋ ಹಾಗೂ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುತ್ತಿರುವ ಅದಾ ಕೆಲ ದಿನಗಳ ಹಿಂದೆ ತಮ್ಮ ಕೂದಲಿಗೆ ಹೊಸ ಲುಕ್ ಕೂಡ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅವಧಿ ಮುಗಿದ ಪದಾರ್ಥ ಮಾರಾಟ- ರಿಲಯನ್ಸ್ ಮಾರ್ಕೆಟ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ

    ಅವಧಿ ಮುಗಿದ ಪದಾರ್ಥ ಮಾರಾಟ- ರಿಲಯನ್ಸ್ ಮಾರ್ಕೆಟ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ

    ದಾವಣಗೆರೆ: ಅವಧಿ ಮುಗಿದ ಬೇಕರಿ ಐಟಂ ಹಾಗೂ ಆಹಾರ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದ ಹಾಗೂ ಸಂಗ್ರಹಿಸಿಟ್ಟ ರಿಲಯನ್ಸ್ ಮಾರ್ಕೆಟ್ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪಾಲಿಕೆಯ ಆರೋಗ್ಯ ಅಧಿಕಾರಿಗಳು, ದಾವಣಗೆರೆ ಜಿಲ್ಲೆಯಲ್ಲಿರುವ ರಿಲಯನ್ಸ್ ಮಾರ್ಕೆಟ್ ಮೇಲೆ ದಾಳಿ ನಡೆಸಿದ್ದು, ನಿಷೇಧಿತ ಪ್ಲಾಸ್ಟಿಕ್ ಕವರ್ ಹಾಗೂ ಎರಡು ಟನ್ ಗಳಷ್ಟು ಬೇಕರಿ ಐಟಂಗಳನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಅವಧಿ ಮುಗಿದ ಕೂಲ್ ಡ್ರಿಂಕ್ಸ್ ಮಾರಾಟ ಮಾಡುತ್ತಿರುವುದನ್ನು ಕಂಡು ಸಾರ್ವಜನಿಕರು ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಅಧಿಕಾರಿಗಳಿಗೆ ದೂರು ಸಹ ನೀಡಿದ್ದರು.

    ದೂರಿನ ಮೆರಿಗೆ ಸೋಮವಾರ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿದ್ದರು. ಇನ್ನು ರಿಲಯನ್ಸ್ ಮಾರ್ಕೆಟ್ ನ ಟ್ರೇಡ್ ಲೈಸನ್ಸ್ ಸಹ ಕಡಿಮೆ ತೆಗೆದುಕೊಂಡಿದ್ದು, ಇದರ ಬಗ್ಗೆ ತನಿಖೆ ನಡೆಸಲಾಗುವುದು ಎಂದರು. ಅಲ್ಲದೇ ಅವಧಿ ಮುಗಿದ ಆಹಾರ ಪದಾರ್ಥಗಳ ಮೇಲಿನ ಲೇಬಲ್ ಕಿತ್ತು ಹಾಕಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪಗಳು ಕೇಳಿ ಬರುತ್ತಿವೆ.

    ಆಹಾರ ಪದಾರ್ಥಗಳನ್ನು ಅವೈಜ್ಞಾನಿಕ ಮಾರಾಟ ಮಾಡುತ್ತಿದ್ದು ರಿಲಯನ್ಸ್ ಮಾರ್ಕೆಟ್ ಮೇಲೆ ದೂರು ದಾಖಲು ಮಾಡಿಕೊಂಡು ಪ್ರಧಾನ ಕಚೇರಿಗೆ ನೋಟಿಸ್ ಕಳುಹಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಆಹಾರ ಅಧಿಕಾರಿಗಳು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪತ್ನಿ ಸುಂದರವಾಗಿದ್ದಾಳೆಂದು ಆಕೆಯನ್ನೇ ಮಾರಲು ಮುಂದಾದ ಪತಿ!

    ಪತ್ನಿ ಸುಂದರವಾಗಿದ್ದಾಳೆಂದು ಆಕೆಯನ್ನೇ ಮಾರಲು ಮುಂದಾದ ಪತಿ!

    ನವದೆಹಲಿ: ಪತ್ನಿಯನ್ನು ಮಾರಾಟ ಮಾಡುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯನ್ನು ಬಂಧಿಸಿದ್ದು ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿದೆ.

    ಸದ್ದಾಮ್(32) ತನ್ನ ಪತ್ನಿಯನ್ನೇ ಮಾರಲು ಮುಂದಾಗಿದ್ದ ಪತಿ. ಸಮೀರಾ, 28 (ಹೆಸರು ಬದಲಾಯಿಸಲಾಗಿದೆ) ಸದ್ದಾಮ್‍ನ ಎರಡನೇ ಪತ್ನಿಯಾಗಿದ್ದಳು. ಸಮೀರಾ ಸುಂದರವಾಗಿದ್ದಳು ಎಂದು ಸದ್ದಾಮ್ ಆಕೆ ಜೊತೆ ಎರಡನೇ ಮದುವೆಯಾಗಿದ್ದನು.

    ಸದ್ದಾಮ್ ತನ್ನ ಪತ್ನಿ ಸಮೀರಾ ಜೊತೆ ಹೊರಗೆ ಹೋಗುವಾಗ ಎಲ್ಲ ಪುರಷರು ಆಕೆಯನ್ನು ಗುರಾಯಿಸುತ್ತಿದ್ದರು. ಇದನ್ನೂ ಕಂಡು ಪತಿ ಅಸೂಯೆ ಪಡುತ್ತಿದ್ದ. ಅಲ್ಲದೇ ಈ ವಿಷಯಕ್ಕಾಗಿ ಸಮೀರಾ ಜೊತೆ ಜಗಳವಾಡುತ್ತಿದ್ದ. ಇಬ್ಬರ ನಡುವೆ ಜಗಳ ತೀವ್ರವಾಗಿ ಇಬ್ಬರೂ ಒಂದೇ ಮನೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ವಾಸಿಸಲು ಶುರು ಮಾಡಿದ್ದರು. ಈ ನಡುವೆ ಸದ್ದಾಮ್ ತನ್ನ ಮೊದಲ ಪತ್ನಿ ಹಾಗೂ ಮೂವರು ಮಕ್ಕಳನ್ನು ಭೇಟಿಯಾಗಲು ವಾರಕ್ಕೆ ಎರಡೂ ಬಾರಿ ಅವರ ಮನೆಗೆ ಹೋಗುತ್ತಿದ್ದನು.

    ಅಗಸ್ಟ್ 1ರಂದು ಕೂಡ ಸದ್ದಾಮ್, ಸಮೀರಾ ಜೊತೆ ಶಾಪಿಂಗ್‍ಗೆ ಹೋಗಿದ್ದಾಗ ಅಲ್ಲಿ ವ್ಯಕ್ತಿಯೊಬ್ಬ ಆಕೆಯನ್ನು ಗುರಾಯಿಸಿದ್ದಕ್ಕೆ ಜಗಳವಾಡಿದ್ದ. ಇದರಿಂದ ಬೇಸತ್ತ ಸದ್ದಾಮ್ ಹೀಗೆ ಇದ್ದರೆ ಸರಿ ಹೋಗುವುದಿಲ್ಲ ಎಂದು ಆಕೆಯನ್ನು ಕೊಲೆ ಮಾಡಲು ಚಾಕು ತಂದಿದ್ದ. ಮರುದಿನ ಬೆಳಗ್ಗೆ ಸದ್ದಾಮ್ ಯೋಚನೆ ಮಾಡಿ ಆಕೆಯನ್ನು ಕೊಲೆ ಮಾಡುವ ಬದಲು ವೇಶ್ಯಾವಾಟಿಕೆ ಅಡ್ಡೆ ಅಥವಾ ಪಿಂಪ್‍ಗೆ ಮಾರಲು ನಿರ್ಧರಿಸಿದ್ದಾನೆ. ನಂತರ ದೆಹಲಿಯಲ್ಲಿರುವ ಎಲ್ಲ ವೇಶ್ಯಾವಾಟಿಕೆ ಅಡ್ಡೆ ಹಾಗೂ ಪಿಂಪ್‍ಗಳ ಬಗ್ಗೆ ವಿಚಾರಿಸಿಕೊಂಡಿದ್ದಾನೆ.

    ನಿನ್ನ ಕುಟುಂಬದವರ ಮನೆಗೆ ಸಪ್ರೈಸ್ ಭೇಟಿ ನೀಡೋಣ ಎಂದು ಸದ್ದಾಮ್ ತನ್ನ ಪತ್ನಿ ಸಮೀರಾ ಬಳಿ ಹೇಳಿದ್ದಾನೆ. ನಂತರ ದೆಹಲಿಯಲ್ಲಿರುವ ವೇಶ್ಯಾವಾಟಿಕೆ ಹಾಗೂ ಪಿಂಪ್ ಅಡ್ಡೆಗಳ ಬಗ್ಗೆ ವಿಚಾರಿಸಲು ಶುರು ಮಾಡಿದ್ದಾಗ ಗೊತ್ತಿಲ್ಲದೇ ಮಫ್ತಿ ಪೊಲೀಸರ ಜೊತೆ ಸಂಪರ್ಕ ಬೆಳೆಸಿದ್ದಾನೆ.

    ಮಾತುಕತೆಯ ವೇಳೆ ಸದ್ದಾಮ್ 1.5 ಲಕ್ಷ ರೂ. ಗೆ ತನ್ನ ಪತ್ನಿಯನ್ನು ಮಾರಾಟ ಮಾಡುತ್ತೇನೆ ಎಂದಿದ್ದಾನೆ. ಕೊನೆಗೆ 1.2 ಲಕ್ಷ ರೂ. ಗೆ ಮಾರಲು ಒಪ್ಪಿಕೊಂಡಿದ್ದಾನೆ. ನಿಗದಿಯಂತೆ ಗುರುವಾರ ರಾತ್ರಿ 8 ಗಂಟೆಗೆ ಪತ್ನಿಯನ್ನು ವೇಶ್ಯಾವಾಟಿಕೆ ಅಡ್ಡೆಯಲು ಬಿಡಲು ಸದ್ದಾಮ್ ನಿರ್ಧರಿಸಿದ್ದ. ವೇಶ್ಯಾವಾಟಿಕೆ ನಡೆಸುವವರು ಬರಲಿಲ್ಲವೆಂದರೆ ಆತ ಸಮೀರಾಳನ್ನು ಕೊಲೆ ಮಾಡಲು ಎಲ್ಲ ತಯಾರಿ ಮಾಡಿಕೊಂಡಿದ್ದ.

    ನಿಗದಿಯಾಗಿದ್ದ ಸ್ಥಳಕ್ಕೆ ಸದ್ದಾಮ್ ನನ್ನು ಬಂಧಿಸಲು ಪೊಲೀಸರು ಬಂದಿದ್ದಾರೆ. ಆದರೆ ಸದ್ದಾಮ್ ಜೊತೆ ಸಮೀರಾ ಇಲ್ಲದಿರುವುದನ್ನು ಗಮನಿಸಿದ ಪೊಲೀಸರು ಆತನ ಬಂಧನಕ್ಕೆ ವಿಳಂಬ ಮಾಡಿದ್ದರು. ಆಗ ಸದ್ದಾಮ್ ಮುಂಚಿತವಾಗಿ ಹಣ ನೀಡಿದರೆ ಮಾತ್ರ ಪತ್ನಿಯನ್ನು ಕರೆತರುವುದಾಗಿ ಬೇಡಿಕೆಯಿಟ್ಟಿದ್ದಾನೆ. ಹೀಗಾಗಿ ಪೊಲೀಸರು ಆತನಿಗೆ 10 ಸಾವಿರ ರೂ. ಮುಂಚಿತವಾಗಿ ನೀಡಿದ್ದಾರೆ.

    ಹಣ ಸಿಕ್ಕಿದ ಕೂಡಲೇ ಸದ್ದಾಮ್ ತನ್ನ ಪತ್ನಿಯನ್ನು ಕರೆತಂದಿದ್ದಾನೆ. ಪತ್ನಿ ಬಂದ ಕೂಡಲೇ ಸದ್ದಾಮ್ ನನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದಾರೆ. ಈ ವೇಳೆ ಸಮೀರಾಗೆ ತನ್ನ ಪತಿ ಮಾಡಿದ ಮೋಸದ ಬಗ್ಗೆ ಅರಿವಿರಲಿಲ್ಲ.

    ಪತಿ ಬಂಧನದ ಬಳಿಕ ಪೊಲೀಸರು ಸಮೀರಾಗೆ ಸಂಪೂರ್ಣ ವಿಷಯ ತಿಳಿಸಿದಾಗ ಆಕೆ ದಂಗಾಗಿ ಹೋಗಿದ್ದಾಳೆ. ಸದ್ಯ ಸಮೀರಾಳನ್ನು ಕೌನ್ಸಿಲರ್ ನೋಡಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • 15 ಲಕ್ಷಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಮಾರಾಟ! – ವಿಡಿಯೋ ನೋಡಿ

    15 ಲಕ್ಷಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ ಮಾರಾಟ! – ವಿಡಿಯೋ ನೋಡಿ

    ತುಮಕೂರು: ತಿಂಗಳಿಗೆ ಲಕ್ಷ ಲಕ್ಷ ಹಣ ವರಮಾನ ಬರೋ ತುಮಕೂರು ಜಿಲ್ಲೆಯ ಗ್ರಾಮ ಪಂಚಾಯತ್ ಅಧ್ಯಕ್ಷ ಸ್ಥಾನ 15 ಲಕ್ಷ ರೂ.ಗೆ ಮಾರಾಟವಾಗಿದೆ ಎನ್ನುವ ಮಾತು ಕೇಳಿ ಬಂದಿದೆ.

    ಗುಬ್ಬಿ ತಾಲೂಕಿನ ಕಲ್ಲೂರು ಗ್ರಾಮಪಂಚಾಯತ್ ನಲ್ಲಿ ಈ ಡೀಲ್ ಹಗರಣ ನಡೆದಿದ್ದು, ಗ್ರಾಮ ಪಂಚಾಯತ್ ಅಧ್ಯಕ್ಷನನ್ನು ಕೆಳಗಿಳಿಸಲು ಸುಮಾರು 15 ಲಕ್ಷ ರೂ. ಹಣ ಡೀಲ್ ಆಗಿರೋ ಆರೋಪ ಕೇಳಿ ಬಂದಿದೆ. ಡೀಲ್ ಕುದುರಿಸುತಿದ್ದ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ.

    ಹಾಲಿ ಅಧ್ಯಕ್ಷ ಜಾವೀದ್ ಪಾಷಾರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಈ ಡೀಲ್ ನಡೆದಿದೆ ಎನ್ನಲಾಗಿದೆ. ಬಾಕಿ ಉಳಿದ 22 ತಿಂಗಳ ಅವಧಿಗೆ ತಲಾ 11 ತಿಂಗಳು ಸದಸ್ಯರಾದ ಗಿರೀಶ್ ಹಾಗೂ ಶಿವಾನಂದ ಅಧ್ಯಕ್ಷರಾಗಲು ಬಯಸಿದ್ದಾರೆ. ಮೊದಲ ಅವಧಿಗೆ ಅಧ್ಯಕ್ಷರಾಗಲು ಬಯಸಿದ್ದ ಗಿರೀಶ್ 15 ಲಕ್ಷ ರೂಪಾಯಿಯನ್ನು ಭದ್ರತೆ ಠೇವಣಿ ರೂಪದಲ್ಲಿ ಇನ್ನೊಬ್ಬ ಸದಸ್ಯ ಶಿವಾನಂದಗೆ ಕೊಟ್ಟಿದ್ದಾರೆ. 11 ತಿಂಗಳು ಅವಧಿ ಮುಗಿದ ಬಳಿಕ ಗಿರೀಶ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಶಿವಾನಂದನಿಗೆ ಬಿಟ್ಟುಕೊಡದೇ ಇದ್ದರೆ ಶಿವಾನಂದ ಪಡೆದ 15 ಲಕ್ಷ ರೂ. ಮರಳಿ ಕೊಡುವಂತಿಲ್ಲ ಎಂಬ ಒಪ್ಪಂದ ಮಾಡಿಕೊಂಡಿದ್ದಾರೆ.

    ಗ್ರಾಮ ದೇವತೆಯ ಮುಂದೆ ಆಣೆ ಪ್ರಮಾಣ ಮಾಡಿ ಈ ವ್ಯವಹಾರ ನಡೆಸಲಾಗಿದೆ. ಅಧ್ಯಕ್ಷ ಹುದ್ದೆಯ ಆಕಾಂಕ್ಷಿ ಗಿರೀಶರಿಂದ ಎರಡನೇ ಅವಧಿಯ ಆಕಾಂಕ್ಷಿ ಶಿವಾನಂದ್ ಕೈ ಚೀಲದಲ್ಲಿ 15 ಲಕ್ಷರೂ ಪಡೆದಿದ್ದಾರೆ. ಅಷ್ಟಕ್ಕೂ ಕಲ್ಲೂರು ಗ್ರಾಮ ಪಂಚಾಯತಿಯಲ್ಲಿ ಸದಸ್ಯರಾದ ಶಿವಾನಂದ ಮತ್ತು ಗಿರೀಶ್ ಪ್ರಭಾವಿಯಾಗಿದ್ದು, ಒಟ್ಟು 14 ಸದಸ್ಯರ ಪೈಕಿ 10 ಸದಸ್ಯರು ಇವರ ಹಿಡಿತದಲ್ಲಿ ಇದ್ದಾರೆ ಎನ್ನಲಾಗಿದೆ. ಹಾಗಾಗಿ ಹಾಲಿ ಸದಸ್ಯ ಜಾವೀದ್ ಪಾಷಾರ ವಿರುದ್ಧ ಅವಿಶ್ವಾಸ ಮಂಡನೆ ಮಾಡಲು ಈ ಡೀಲ್ ನಡೆದಿದೆ ಎನ್ನುವ ಆರೋಪ ಕೇಳಿಬಂದಿದೆ.

    ಈ ಪ್ರಕರಣಕ್ಕೆ ಸಮಜಾಯಿಸಿ ನೀಡಿದ ಆರೋಪ ಹೊತ್ತ ಸದಸ್ಯರು, ಅದು ದೇವರ ಹುಂಡಿ ಒಡೆದ ಹಣ, ಯಾವುದೇ ಡೀಲ್ ಮಾಡಿದ ಹಣ ಅಲ್ಲ ಎಂದು ಹೇಳಿದ್ದಾರೆ.

    https://www.youtube.com/watch?v=rj0-W3dIo3M

  • ಮೊಬೈಲ್ ಪ್ರಿಯರೇ ಗಮನಿಸಿ- ಇಂದು ಕ್ಸಿಯೋಮಿ ವೈ2 2ನೇ ಫ್ಲಾಶ್ ಸೇಲ್!

    ಮೊಬೈಲ್ ಪ್ರಿಯರೇ ಗಮನಿಸಿ- ಇಂದು ಕ್ಸಿಯೋಮಿ ವೈ2 2ನೇ ಫ್ಲಾಶ್ ಸೇಲ್!

    ಬೆಂಗಳೂರು: ಕಡಿಮೆ ಬೆಲೆ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿ ದೇಶೀಯ ಮಾರುಕಟ್ಟೆಯಲ್ಲಿ ಸ್ಯಾಮ್ ಸಂಗ್ ಹಿಂದಿಕ್ಕಿರುವ ಕ್ಸಿಯೋಮಿ ಕಂಪೆನಿಯ ವೈ2 ಫ್ಲಾಶ್ ಸೇಲ್ ಇಂದು ನಡೆಯಲಿದೆ.

    ಜೂನ್ 7 ರಂದು ಬಿಡುಗಡೆಗೊಂಡು ತನ್ನ ಮೊದಲ ಫ್ಲಾಶ್ ಸೇಲ್ ನಲ್ಲೇ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಇಂದು ಪುನಃ 12 ಗಂಟೆಗೆ ಫೋನಿನ ಎರಡನೇ ಫ್ಲಾಶ್ ಸೇಲ್ ಅನ್ನು ಎಂಐ ತಾಣ ಮತ್ತು ಅಮೇಜಾನ್ ಶಾಪಿಂಗ್ ತಾಣದಲ್ಲಿ ನಡೆಸಲಾಗುತ್ತಿದೆ.

    ರೆಡ್‍ಮೀ ವೈ2 ಫೋನ್ ನಲ್ಲಿ ಅತ್ಯುತ್ತಮ ಸೆಲ್ಫಿಗಾಗಿ 16ಎಂಪಿ ಸ್ಮಾರ್ಟ್ ಟೋನ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+5ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ. ಗ್ರೇ, ಗೋಲ್ಡ್ ಹಾಗೂ ರೋಸ್ ಗೋಲ್ಡ್ ಕಲರ್ ಗಳನ್ನು ಒಳಗೊಂಡಿದೆ.

    ಬೆಲೆ ಎಷ್ಟು?
    3ಜಿಬಿ ram/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 9,999 ರೂ. ಹಾಗೂ 4ಜಿಬಿ ram/64ಜಿಬಿ ಆಂತರಿಕ ಮೆಮೊರಿಯ ಫೋನಿಗೆ 12,999 ರೂ. ಬೆಲೆ ನಿಗದಿ ಮಾಡಿದೆ.

    ರೆಡ್‍ಮಿ ವೈ2ನ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 160.73 X 77.26 X 8.1ಮಿ.ಮೀ., 170 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 5.99 ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720*1440 ಪಿಕ್ಸೆಲ್, 18:9 ಅನುಪಾತ 269ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಎಂಎಸ್‍ಎಂ 8953 ಸ್ನ್ಯಾಪ್ ಡ್ರಾಗನ್ 625 ಆಕ್ಟಾ ಕೋರ್ ಪ್ರೊಸೆಸರ್ 2.0 ಗೀಗಾಹರ್ಟ್ಸ್-ಕಾರ್ಟೆಕ್ಸ್-ಎ53ಸಿಪಿಯು, ಅಡ್ರಿನೋ 506 ಗ್ರಾಫಿಕ್ಸ್ ಪ್ರೊಸೆಸರ್, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 3ಜಿಬಿ ram/32 ಜಿಬಿ, 4ಜಿಬಿ ram/64 ಜಿಬಿ ಆಂತರಿಕ ಮೆಮೊರಿ.

    ಕ್ಯಾಮೆರಾ:
    ಮುಂಭಾಗ 16ಎಂಪಿ, ಸಾಪ್ಟ್ ಟೋನ್ ಸೆಲ್ಫಿ ಲೈಟ್ ವಿತ್ ಆಟೋ ಪೇಸ್ ಡಿಟೆಕ್ಷನ್, ಹಿಂಭಾಗ 12ಎಂಪಿ+5ಎಂಪಿ ಆಟೊಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಬ್ಯಾಕ್‍ಗ್ರೌಂಡ್ ಬ್ಲರ್ ಪ್ಯೂಚರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್, ಟಚ್ ಫೋಕಸ್.

    ಇತರೆ ಪ್ಯೂಚರ್ ಗಳು:
    ಫೇಸ್ ಡಿಟೆಕ್ಷನ್ ಅನ್‍ಲಾಕ್, ಫಿಂಗರ್ ಪ್ರಿಂಟ್, 3080 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ, ಹಾಗೂ 5 ವೋಲ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

     

  • ಐ ಫೋನ್ ಖರೀದಿದಾರರಿಗೆ ಸಿಹಿ ಸುದ್ದಿ

    ಐ ಫೋನ್ ಖರೀದಿದಾರರಿಗೆ ಸಿಹಿ ಸುದ್ದಿ

    ನವದೆಹಲಿ: ಆಪಲ್ ಐ ಫೋನ್ ಪ್ರಿಯರಿಗೆ ಫ್ಲಿಪ್ ಕಾರ್ಟ್ ತನ್ನ ಆಪಲ್ ವೀಕ್ ಮಾರಾಟದಲ್ಲಿ ಸಾಕಷ್ಟು ಕೊಡುಗೆಗಳನ್ನು ನೀಡುತ್ತಿದೆ.

    ಒಂದು ವಾರ ನಡೆಯುವ ಆಪಲ್ ವೀಕ್ ಮಾರಾಟ ಮೇ 27 ರಂದು ಕೊನೆಯಾಗಲಿದೆ. ಕೆಲವು ಐಫೋನ್ ಮಾದರಿಗಳು, ಮ್ಯಾಕ್ ಬುಕ್ ಏರ್, ಐಪಾಡ್, ಐಪಾಡ್ ಪ್ರೊ ಮತ್ತು ಆಪಲ್ ವಾಚ್ ಗಳ ಮೇಲೆ ಕ್ಯಾಶ್ ಬ್ಯಾಕ್ ಕೊಡುಗೆಯನ್ನು ಫ್ಲಿಪ್ ಕಾರ್ಟ್ ನೀಡುತ್ತಿದೆ.

    ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ಮೂಲಕ ಹಣ ಪಾವತಿಸಿದಲ್ಲಿ ಶೇ10 ರಷ್ಟು ಕ್ಯಾಶ್ ಬ್ಯಾಕ್ ಕೊಡುಗೆಯನ್ನು ಐಸಿಐಸಿಐ ಬ್ಯಾಂಕ್ ನೀಡುತ್ತಿದೆ.

    ಆಪಲ್ ವೀಕ್ ಮಾರಾಟದ ಕೆಲವು ಪ್ರಾಡಕ್ಟ್ ಗಳ ದರಗಳು

    ಐ ಪೋನ್ 6(32 ಜಿಬಿ) – ನಿಖರ ಬೆಲೆ 29,500 ರೂ. – ಮಾರಾಟ ಬೆಲೆ 23,999 ರೂ.
    ಐ ಪೋನ್ 6 ಎಸ್(32 ಜಿಬಿ) – ನಿಖರ ಬೆಲೆ 40,000 ರೂ. – ಮಾರಾಟ ಬೆಲೆ 33,999 ರೂ.
    ಐ ಪೋನ್ ಎಸ್ ಇ(32 ಜಿಬಿ) – ನಿಖರ ಬೆಲೆ 26,000 ರೂ. – ಮಾರಾಟ ಬೆಲೆ 17,999 ರೂ.
    ಐ ಪೋನ್ 7(32 ಜಿಬಿ) – ನಿಖರ ಬೆಲೆ 49,000 ರೂ. – ಮಾರಾಟ ಬೆಲೆ 46,999 ರೂ.
    ಐ ಪೋನ್ ಎಕ್ಸ್(32 ಜಿಬಿ) – ನಿಖರ ಬೆಲೆ 89,000 ರೂ. – ಮಾರಾಟ ಬೆಲೆ 85,999 ರೂ.
    ಐ ಪೋನ್ 8 & 8 ಪ್ಲಸ್(32 ಜಿಬಿ) – ನಿಖರ ಬೆಲೆ 67,940 ರೂ. – ಮಾರಾಟ ಬೆಲೆ 62,999 ರೂ.
    ಏರ್ ಪಾಡ್ಸ್ ಮತ್ತು ಇಯರ್ ಪಾಡ್ಸ್ – ನಿಖರ ಬೆಲೆ 2,199 ರೂ. – ಮಾರಾಟ ಬೆಲೆ ಕನಿಷ್ಠ 1,899 ರೂ.
    ಆಪಲ್ ಐ ಪಾಡ್ಸ್ – ನಿಖರ ಬೆಲೆ 28,000 ರೂ. – ಮಾರಾಟ ಬೆಲೆ 21,900 ರೂ.
    ಆಪಲ್ ವಾಚ್ ಸೀರೀಸ್ ಕನಿಷ್ಠ 20,900 ರೂ.
    ಆಪಲ್ ಲ್ಯಾಪ್ ಟಾಪ್ – ನಿಖರ ಬೆಲೆ 57,990 ರೂ. – ಮಾರಾಟ ಬೆಲೆ 55,990 ರೂ.

  • ಅಂಗಡಿಯಿಂದ 15 ಮಾದರಿಯ 376 ಲೀಟರ್ ಅಕ್ರಮ ಮದ್ಯ ವಶ!

    ಅಂಗಡಿಯಿಂದ 15 ಮಾದರಿಯ 376 ಲೀಟರ್ ಅಕ್ರಮ ಮದ್ಯ ವಶ!

    ರಾಯಚೂರು: ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಟ್ಟಿ ಗ್ರಾಮದಲ್ಲಿ ದಾಳಿ ನಡೆಸಿದ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಮದ್ಯ ಜಪ್ತಿ ಮಾಡಿದ್ದಾರೆ.

    ಮದ್ಯ ಮಾರಾಟದ ಅಂಗಡಿ ಮೇಲೆ ದಾಳಿ ನಡೆಸಿ 15 ಮಾದರಿಯ ಒಟ್ಟು 376 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದು, ಸುಮಾರು 1 ಲಕ್ಷ 43 ಸಾವಿರ ರೂಪಾಯಿ ಬೆಲೆಬಾಳುವ ಮದ್ಯ ಸಿಕ್ಕಿದೆ. ಪಿಎಸ್ ಐ ಮಹಮದ್ ರಫಿಕ್ ನೇತೃತ್ವದ ತಂಡ ದಾಳಿ ನಡೆಸಿದೆ.

    ಇದೇ ಹಟ್ಟಿ ಗ್ರಾಮದ ಗಾಂಧಿ ಮೈದಾನದ ಬಳಿಯ ಅಂಗಡಿಯೊಂದರಲ್ಲಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಮದ್ಯ ಮಾರಾಟದಲ್ಲಿ ತೊಡಗಿದ್ದ ರವಿ ಕುಮಾರ್ ಎಂಬಾತನ ವಿರುದ್ಧ ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದ್ದು. ಆರೋಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

  • 8ರ ವಯಸ್ಸಿನಲ್ಲೇ ಪೋಷಕರಿಂದ ಮಾರಾಟ- ಈಗ 4 ಮಕ್ಕಳ ತಾಯಿಯಾದ 16ರ ಬಾಲಕಿ

    8ರ ವಯಸ್ಸಿನಲ್ಲೇ ಪೋಷಕರಿಂದ ಮಾರಾಟ- ಈಗ 4 ಮಕ್ಕಳ ತಾಯಿಯಾದ 16ರ ಬಾಲಕಿ

    ಲಕ್ನೋ: ಪೋಷಕರೇ ಎಂಟು ವರ್ಷದ ಬಾಲಕಿಯನ್ನ ಮಾರಾಟ ಮಾಡಿದ್ದು, ಈಗ 16 ವರ್ಷದಲ್ಲಿರುವಾಗಲೇ ಆಕೆ ನಾಲ್ಕು ಮಕ್ಕಳ ತಾಯಿಯಾಗಿರುವ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

    ಸಂಭಾಲ್ ಮೂಲದ ಬಾಲಕಿಯನ್ನು ರಾಜಸ್ಥಾನದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲಾಗಿತ್ತು. ಸದ್ಯಕ್ಕೆ ಸಂತ್ರಸ್ತೆ ಕ್ಷೇಮವಾಗಿದ್ದು, ಆಕೆಯ ತಂದೆ, ಮಲತಾಯಿ ಮತ್ತು ಚಿಕ್ಕಮ್ಮನ ವಿರುದ್ಧ ಎಫ್‍ಐಆರ್ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

    ಘಟನೆ ವಿವರ?: 2010 ರಲ್ಲಿ ನನ್ನ ಅಮ್ಮ ಮೃತಪಟ್ಟರು. ಬಳಿಕ ತಂದೆ ಎರಡನೇ ಮದುವೆ ಮಾಡಿಕೊಂಡರು. ಆದರೆ ಮಲತಾಯಿ ಬಂದ ಮೇಲೆ ನಮಗೆ ಚಿತ್ರಹಿಂಸೆ ನೀಡುತ್ತಿದ್ದರು. ನಾವು ನಾಲ್ವರು ಸಹೋದರಿಯರು ಮತ್ತು ಒಬ್ಬ ಸಹೋದರ ಒಟ್ಟು ಐದು ಮಂದಿ ಮಕ್ಕಳು. ಒಂದು ದಿನ ಚಿಕ್ಕಮ್ಮ ಅವರ ಸಹೋದರಿಯ ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ 50 ವರ್ಷದ ವ್ಯಕ್ತಿಗೆ ನನ್ನನ್ನು 3 ಲಕ್ಷ ರೂ.ಗೆ ಮಾರಾಟ ಮಾಡಿದರು. ನಂತರ ಆತನನ್ನ ಮದುವೆಯಾಗಿ 6 ವರ್ಷಗಳಲ್ಲಿ ನಾನು ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿದ್ದು ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ ಎಂದು ಸಂತ್ರಸ್ತೆ ಹೇಳಿದ್ದು, ಈ ಹೇಳಿಕೆಯನ್ನು ಪೊಲೀಸರು ರೆಕಾರ್ಡ್ ಮಾಡಿಕೊಂಡಿದ್ದಾರೆ.

    2010ರಲ್ಲಿ ಪೋಷಕರು ಸಂತ್ರಸ್ತೆಯನ್ನು ರಾಜಸ್ಥಾನದ ಭರತ್‍ಪುರದ ವ್ಯಕ್ತಿಯೊಬ್ಬನಿಗೆ ಮಾರಾಟ ಮಾಡಿದ್ದರು. ಈಕೆಯ ಜೊತೆ ನಾಲ್ಕು ಹಾಗೂ ಆರು ವರ್ಷದ ಸಹೋದರಿಯರನ್ನು ಕೂಡ ರಾಜಸ್ಥಾನದ ಬೇರೆ ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿತ್ತು ಎಂದು ಎಫ್‍ಐಆರ್  ನಲ್ಲಿ ಆರೋಪಿಸಲಾಗಿದೆ. ಮಾರಾಟವಾದ ಬಳಿಕ ಸಂತ್ರಸ್ತೆಯನ್ನು ಬಂಧನದಲ್ಲಿಟ್ಟು ಹಲವು ಬಾರಿ ಅತ್ಯಾಚಾರ ಎಸಗಿದ್ದು, ಆದ್ದರಿಂದ ಆಕೆ ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಬಳಿಕ ಸಂತ್ರಸ್ತೆ ಬಂಧನದಲ್ಲಿಟ್ಟಿದ್ದ ಮನೆಯಿಂದ ತಪ್ಪಿಸಿಕೊಂಡು ಸಂಭಾಲ್‍ ನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದು, ನಂತರ ಪೊಲೀಸರಿಗೆ ದೂರು ನೀಡಿದ್ದಾಳೆ.

    ಸಂತ್ರಸ್ತೆ ದೂರಿನಲ್ಲಿ ತಂದೆ, ಮಲತಾಯಿ, ಚಿಕ್ಕಮ್ಮ ಮತ್ತು ಆಕೆಯನ್ನ ಖರೀದಿಸಿದ ವ್ಯಕ್ತಿಯ ಹೆಸರನ್ನು ಎಫ್‍ಐಆರ್ ನಲ್ಲಿ ಉಲ್ಲೇಖಿಸಿದ್ದಾಳೆ. ಆದ್ದರಿಂದ ಅವರ ವಿರುದ್ಧ ಐಪಿಸಿ 366, 372 ಮತ್ತು 370 ಎ ಅಡಿಯಲ್ಲಿ ಎಫ್‍ಐಆರ್ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರಿಸಿದ್ದೇವೆ ಎಂದು ನಖಾಸಾ ಪೊಲೀಸ್ ಠಾಣೆಯ ಅಧಿಕಾರಿ ಸರ್ವೇಂದ್ರ ಕುಮಾರ್ ಶರ್ಮಾ ಹೇಳಿದ್ದಾರೆ.

    ದೂರು ನೀಡಿದ ಬಳಿಕ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ವರದಿಯಲ್ಲಿ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ಮತ್ತು ಮಕ್ಕಳಿಗೆ ಜನ್ಮ ನೀಡಿರುವುದು ದೃಢಪಟ್ಟಿದೆ ಎಂದು ಸರ್ಕಲ್ ಅಧಿಕಾರಿ ಸುದೇಶ್ ಕುಮಾರ್ ಹೇಳಿದರು.