Tag: sale

  • 8 ಲಕ್ಷಕ್ಕೆ ಮಾರಾಟವಾದ ಸಲ್ಮಾನ್- ಮೇಕೆಯ ವಿಶೇಷತೆಯೇನು?

    8 ಲಕ್ಷಕ್ಕೆ ಮಾರಾಟವಾದ ಸಲ್ಮಾನ್- ಮೇಕೆಯ ವಿಶೇಷತೆಯೇನು?

    ಲಕ್ನೋ: ಇಂದು ದೇಶಾದ್ಯಂತ ಬಕ್ರೀದ್ ಹಬ್ಬವನ್ನು ಆಚರಿಸಲಾಗುತ್ತಿದೆ. ಹೀಗಾಗಿ ಹಬ್ಬದ ವಿಶೇಷವಾಗಿ ಸಲ್ಮಾನ್ ಎಂಬ ಹೆಸರಿನ ಮೇಕೆ ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಬರೋಬ್ಬರಿ 8 ಲಕ್ಷಕ್ಕೆ ಮಾರಾಟವಾಗಿದೆ.

    ಮೇಕೆಯನ್ನು ದಷ್ಟಪುಷ್ಟವಾಗಿ ಸಾಕಿರುವ ಮಾಲೀಕ ಮೊಹಮ್ಮದ್ ನಿಜಾಮುದ್ದೀನ್, ಇದನ್ನು 8 ಲಕ್ಷ ಮಾರಾಟ ಮಾಡುವುದಾಗಿ ಹೇಳಿದ್ದಾರೆ. ತ್ಯಾಗ ಹಾಗೂ ಬಲಿದಾನದ ಅಂಗವಾಗಿ ಅಚರಿಸುವ ಈ ಬಕ್ರೀದ್ ಹಬ್ಬದಲ್ಲಿ ಕುರಿ ಮೇಕೆಗಳು ಅಪಾರ ಪ್ರಮಾಣದಲ್ಲಿ ಮಾರಾಟವಾಗುತ್ತವೆ.

    ಸಲ್ಮಾನ್ ಮೇಕೆಯ ವಿಶೇಷತೆಯ ಬಗ್ಗೆ ಹೇಳಿರುವ ಮಾಲೀಕ ಮೊಹಮ್ಮದ್ ನಿಜಾಮುದ್ದೀನ್, ಇದಕ್ಕೆ ಈ ಪ್ರಮಾಣದ ಬೆಲೆ ಬರಲು ಆದರ ಮೈ ಮೇಲೆ ಇರುವ ಕಪ್ಪು ಚುಕ್ಕಿಗಳು ಕಾರಣವಾಗಿದೆ. ಏಕೆಂದರೆ ಈ ಕಪ್ಪು ಚುಕ್ಕೆಗಳನ್ನು ಕೂಡಿಸಿದರೆ, ಅರೇಬಿಕ್ ಭಾಷೆಯಲ್ಲಿ `ಅಲ್ಲಾಹ್’ ಎಂಬ ಅರ್ಥ ಬರತ್ತದೆ. ಹೀಗಾಗಿ ಸಲ್ಮಾನ್ ಮೇಕೆಯನ್ನು 8 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದೇನೆ ಎಂದಿದ್ದಾರೆ.

    ಇದರ ಜೊತೆಗೆ ಮೇಕೆಯನ್ನು ಸಾಕಲು ದಿನಕ್ಕೆ 700ರಿಂದ 800 ರೂ. ಖರ್ಚು ಮಾಡಿದ್ದೇನೆ. ಇಷ್ಟು ದಿನ ಇದು ನಮ್ಮ ಮನೆಯ ಸದಸ್ಯನಾಗಿತ್ತು, ನಮ್ಮ ಜೊತೆಯಲ್ಲೇ ಮಲಗುತ್ತಿತ್ತು. ನಾವು ತಿನ್ನುವ ಆಹಾರವನ್ನೇ ಅದೂ ತಿನ್ನುತ್ತಿತ್ತು. ಬೇರೆ ಮೇಕೆಗಳ ಹಾಗೇ ನಾವು ಇದಕ್ಕೆ ಹುಲ್ಲು, ಎಲೆ ಮತ್ತು ಸೊಪ್ಪು ಹಾಕಿ ಬೆಳೆಸಿಲ್ಲ ಅದರ ಬದಲು ನಾವು ತಿನ್ನುವ ಚಿಪ್ಸ್, ಹಣ್ಣುಗಳು, ಊಟ ತಿನ್ನಿಸಿ ತುಂಬಾ ಚೆನ್ನಾಗಿ ಬೆಳೆಸಿದ್ದೇವೆ. ಈಗ ಇದರ ತೂಕ ಬರೊಬ್ಬರಿ 95 ಕೆ.ಜಿ ಇದೆ ಎಂದು ಮಾಲೀಕ ನಿಜಾಮುದ್ದೀನ್ ಹೇಳಿದ್ದಾರೆ.

    ಈ ಮೇಕೆಗೆ ಇಷ್ಟೊಂದು ಬೆಲೆ ಬರಲು ಅದಕ್ಕೆ ಇಟ್ಟಿರುವ ಹೆಸರು ಕೂಡ ಕಾರಣ ಎಂದು ಹೇಳಲಾಗುತ್ತಿದೆ. ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಹೆಸರು ಮೇಕೆಗೆ ಇಟ್ಟಿರುವ ಕಾರಣ ಸಲ್ಲು ಅಭಿಮಾನಿಗಳು ಇದಕ್ಕೆ ಜಾಸ್ತಿ ಬೆಲೆ ಕೊಟ್ಟು ಖರೀದಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.

    ಸಾಂಪ್ರದಾಯಿಕವಾಗಿ, ಹಜ್ ತೀರ್ಥ ಯಾತ್ರೆ ಪ್ರಾರಂಭವಾದ ಎರಡು ದಿನಗಳ ನಂತರ ಈದ್ ಅಲ್-ಅಧಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ಪ್ರಾರಂಭದ ದಿನಾಂಕವು ಹೊಸ ಅರ್ಧಚಂದ್ರವನ್ನು ನೋಡುವುದರ ಮೇಲೆ ಅವಲಂಬಿತವಾಗಿರುತ್ತದೆ. ಇದು ಇಸ್ಲಾಂ ಕ್ಯಾಲೆಂಡರ್‍ನಲ್ಲಿ ಪವಿತ್ರ ತಿಂಗಳುಗಳ 10 ನೇ ದಿನದಂದು ಪ್ರಾರಂಭವಾಗುತ್ತದೆ.

  • ತ್ರಿವರ್ಣ ಧ್ವಜ ನೇಯಲು ಪೂರ್ವಜರಿಂದ ಬಂದಿದ್ದ ಸ್ವಂತ ಮನೆ ಮಾರಾಟ

    ತ್ರಿವರ್ಣ ಧ್ವಜ ನೇಯಲು ಪೂರ್ವಜರಿಂದ ಬಂದಿದ್ದ ಸ್ವಂತ ಮನೆ ಮಾರಾಟ

    ಹೈದರಾಬಾದ್: ಆಂಧ್ರ ಪ್ರದೇಶದ ನೇಕಾರರೊಬ್ಬರು ತಮ್ಮ ಮನೆಯನ್ನೇ ಮಾರಾಟ ಮಾಡಿ ತ್ರಿವರ್ಣ ಧ್ವಜವನ್ನು ನೇಯುವ ಮೂಲಕ ಭಾರತ ದೇಶದ ಮೇಲಿನ ಅಭಿಮಾನವನ್ನು ಮೆರೆದಿದ್ದಾರೆ.

    ಆರ್. ಸತ್ಯನಾರಾಯಣ ತ್ರಿವರ್ಣ ಧ್ವಜವನ್ನು ನೇಯಲು ಮನೆ ಮಾರಿದ್ದಾರೆ. ಇವರು ನೇಕಾರ ವೃತ್ತಿಯನ್ನು ಮಾಡುತ್ತಿದ್ದು, ತಾವೂ ಯಾವುದೇ ಹೊಲಿಗೆ ಇಲ್ಲದ ತ್ರಿವರ್ಣ ಧ್ವಜ ನೇಯಬೇಕು ಎಂದು ಕನಸು ಕಂಡಿದ್ದರು. ಇದಕ್ಕಾಗಿ ಅವರಿಗೆ 6.5 ಲಕ್ಷ ರೂಪಾಯಿ ಹಣ ಬೇಕಾಗಿತ್ತು. ಹೀಗಾಗಿ ತಮ್ಮ ಸ್ವಂತ ಮನೆಯನ್ನೇ ಮಾರಾಟ ಮಾಡಿ ತಮ್ಮ ಕನಸು ನನಸಾಗಿಸಿಕೊಳ್ಳುವ ಮೂಲಕ ದೇಶ ಪ್ರೇಮ ಮೆರೆದಿದ್ದಾರೆ.

    8 ಅಡಿ ಎತ್ತರ ಮತ್ತು 12 ಅಡಿ ಅಗಲದ ಈ ತ್ರಿವರ್ಣ ಧ್ವಜವನ್ನು ಯಾವುದೇ ಹೊಲಿಗೆ ಹಾಕದೇ ತಯಾರಿಸಲಾಗಿದೆ. ಸಾಮಾನ್ಯವಾಗಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಬಟ್ಟೆಯನ್ನು ಪ್ರತ್ಯೇಕವಾಗಿ ಸಿದ್ಧಪಡಿಸಿ ನಂತರ ಧ್ವಜವನ್ನು ನೇಯುತ್ತಾರೆ. ಆದರೆ ಇವರು ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಫ್ಲಾಗ್ ಹೊಲಿಯಲು ನಾನು ಯಾವುದೇ ಹೊಲಿಗೆಯನ್ನು ಹಾಕಿಲ್ಲ ಎಂದು ಹೇಳಿಕೊಂಡಿದ್ದಾರೆ. ಜೊತೆಗೆ ತಾವು ನೇಯ್ದಿರುವ ಧ್ವಜವನ್ನು ಕೆಂಪು ಕೋಟೆಯ ಮೇಲೆ ಹಾರಿಸುವ ಕನಸಿದೆ ಎಂದು ಹೇಳಿಕೊಂಡಿದ್ದಾರೆ.

    ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿಶಾಖಪಟ್ಟಣಂಗೆ ಭೇಟಿ ನೀಡಿದ್ದರು. ಈ ವೇಳೆ ಸತ್ಯನಾರಾಯಣ ಅವರು ತಾವು ನೇಯ್ದಿರುವ ತ್ರಿವರ್ಣ ಧ್ವಜವನ್ನು  ಮೋದಿ ಅವರಿಗೆ ಕೊಟ್ಟಿದ್ದಾರೆ. ಆದರೆ ಈ ಸಂದರ್ಭದಲ್ಲಿ ಧ್ವಜದ ವಿಶಿಷ್ಟತೆ ಬಗ್ಗೆ ತಿಳಿಸಲು ಅವಕಾಶ ಸಿಕ್ಕಿರಲಿಲ್ಲ.

    ಈ ಧ್ವಜವನ್ನು ಸಿದ್ಧಪಡಿಸಲು ಸತತ ನಾಲ್ಕು ವರ್ಷ ಶ್ರಮಪಟ್ಟಿದ್ದಾರೆ. ಜೊತೆಗೆ ತಮಗೆ ಪೂರ್ವಜರಿಂದ ಬಳುವಳಿಯಾಗಿ ಬಂದಿದ್ದ ಮನೆಯನ್ನು ಮಾರಾಟ ಮಾಡಿ ಧ್ವಜವನ್ನು ನೇಯ್ದಿದ್ದಾರೆ. ತಾವು ‘ಲಿಟಲ್ ಇಂಡಿಯನ್ಸ್’ ಎಂಬ ಕಿರುಚಿತ್ರವನ್ನು ನೋಡಿ ಯಾವುದೇ ಹೊಲಿಗೆ ಇಲ್ಲದೇ ಧ್ವಜ ತಯಾರಿಸಲು ಮುಂದಾದೆ ಎಂದು ಹೇಳಿದ್ದಾರೆ.

  • ನಟ ದರ್ಶನ್ ಸೆರೆ ಹಿಡಿದ ಛಾಯಾಚಿತ್ರಗಳ ಪ್ರದರ್ಶನ, ಮಾರಾಟ

    ನಟ ದರ್ಶನ್ ಸೆರೆ ಹಿಡಿದ ಛಾಯಾಚಿತ್ರಗಳ ಪ್ರದರ್ಶನ, ಮಾರಾಟ

    ಮೈಸೂರು: ಚಾಲೆಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಅರಣ್ಯದಲ್ಲಿ ಸೆರೆ ಹಿಡಿದಿರುವ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ ಮೈಸೂರಿನ ಸಂದೇಶ್ ದಿ ಪ್ರಿನ್ಸ್ ಹೋಟೆಲ್‍ನಲ್ಲಿ ಮಾರ್ಚ್ 1 ರಿಂದ 3 ರವರೆಗೆ ನಡೆಯಲಿದೆ.

    ‘ಲೈಫ್ ಆನ್ ದಿ ವೈಲ್ಡ್ ಸೈಡ್’ ಹೆಸರಿನಲ್ಲಿ ನಟ ದರ್ಶನ್ ಅರಣ್ಯದಲ್ಲಿ ಸೆರೆ ಹಿಡಿದಿರುವ ಛಾಯಾಚಿತ್ರಗಳ ಪ್ರದರ್ಶನ ಆಯೋಜನೆಗೊಳ್ಳುತ್ತಿದೆ. ದರ್ಶನ್ ಸೆರೆ ಹಿಡಿದ ಛಾಯಚಿತ್ರಗಳ ಮಾರಾಟ ಕೂಡ ಇದ್ದು, ಮಾರಾಟದಿಂದ ಬಂದ ಹಣ ವನ್ಯಜೀವಿ ಸಂರಕ್ಷಣಾ ನಿಧಿಗೆ ಬಳಕೆಯಾಗಲಿದೆ.

    ಒಂದು ಛಾಯಾಚಿತ್ರಕ್ಕೆ ಎರಡರಿಂದ ಎರಡೂವರೆ ಸಾವಿರ ನಿಗದಿ ಮಾಡಲಾಗಿದ್ದು, ಎರಡೂವರೆ ಸಾವಿರ ಕೊಟ್ಟರೆ ದರ್ಶನ್ ಆಟೋಗ್ರಾಫ್ ಇರುವ ಚಿತ್ರ ಲಭ್ಯವಾಗಲಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ ಛಾಯಾಚಿತ್ರ ಪ್ರದರ್ಶನ ಆಯೋಜನೆಗೊಳ್ಳುತ್ತಿದೆ.

    ಈ ಬಗ್ಗೆ ದರ್ಶನ್ ಅವರು ಟ್ವಿಟ್ಟರಿನಲ್ಲಿ ತಾವು ಸಫಾರಿಗೆ ತೆರಳಿದ್ದಾಗ ಪ್ರಾಣಿಗಳ ಫೋಟೋ ಕ್ಲಿಕ್ಕಿಸುತ್ತಿರುವ ವಿಡಿಯೋವನ್ನು ಹಾಕುವುದರ ಮೂಲಕ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • OLX ನಲ್ಲಿ ವಾಹನ ಖರೀದಿಸುವಾಗ ಎಚ್ಚರ..!

    OLX ನಲ್ಲಿ ವಾಹನ ಖರೀದಿಸುವಾಗ ಎಚ್ಚರ..!

    ಬೆಂಗಳೂರು: OLXನಲ್ಲಿ ವಾಹನ ಖರೀದಿಸುವಾಗ ಎಚ್ಚರವಾಗಿರಿ. ಯಾಕೆಂದರೆ ಇಲ್ಲೊಬ್ಬ ಭೂಪ ಸೈನಿಕನಂತೆ ವೇಷ ಹಾಕಿ ಜನರನ್ನು ಮೋಸ ಮಾಡುತ್ತಿದ್ದಾನೆ.

    ಸೈನಿಕ ಅಂತ ಹೇಳಿಕೊಂಡಿರುವ ವಿಕಾಸ್ ಪಟೇಲ್ ಎಂಬಾತ OLXನಲ್ಲಿ ಜನರಿಗೆ ಮೋಸ ಮಾಡಿದ್ದಾನೆ. ಬೆಂಗಳೂರಿನ ಆರ್ ಟಿಓ ಕಚೇರಿಯಲ್ಲಿ ರಿಜಿಸ್ಟರ್ ಆಗಿರುವ ಗಾಡಿಯನ್ನು OLXನಲ್ಲಿ ಸೇಲ್ ಮಾಡಿದ್ದು, ಈಗಾಗಲೇ ಸಾಕಷ್ಟು ವಾಹನಗಳನ್ನು OLXನಲ್ಲಿ ಸೇಲ್‍ಗಿಟ್ಟು ಜನರಿಗೆ ಟೋಪಿ ಹಾಕಿದ್ದಾನೆ.

    ಮೋಸ ಹೇಗೆ ಮಾಡುತ್ತಿದ್ದ;
    ಮೊದಲಿಗೆ ವಾಹನವನ್ನು OLX ನಲ್ಲಿ ಸೇಲ್‍ಗಿಡುತ್ತಾನೆ. ಇದನ್ನು ನೋಡಿದ ಗ್ರಾಹಕರು ಖರೀದಿ ಮಾಡಲು ಮುಂದಾಗುತ್ತಾರೆ. ಬಳಿಕ ನೀವು ಪೇಟಿಯಂ ಮೂಲಕ ಹಣ ಕಳುಹಿಸಿ, ನಾನು ಸೈನಿಕನಾಗಿರುವುದರಿಂದ ತುರ್ತು ಕೆಲಸದಲ್ಲಿದ್ದೇನೆ. ಟ್ರಾನ್ಸ್ ಪೋರ್ಟ್ ಮೂಲಕ ನಿಮಗೆ ವಾಹನ ಕಳಿಸುವೆ ಅಂತ ಹೇಳುತ್ತಾನೆ. ಅಷ್ಟೇ ಅಲ್ಲದೇ ಜನರನ್ನು ನಂಬಿಸಲು ತನ್ನ ನಕಲಿ ಆರ್ಮಿಕಾರ್ಡ್, ಫೋಟೋ, ಪಾನ್ ಕಾರ್ಡ್ ಜೊತೆಗೆ ಸೇನೆಯಲ್ಲಿರುವ ಫೋಟೋವನ್ನು ಕಳಿಸುತ್ತಾನೆ. ಯೋಧ ಯಾವತ್ತು ಮೋಸ ಮಾಡಲಾರ ಅಂತ ಅಂದುಕೊಂಡ ಜನ ಈತನಿಗೆ ಪೇಟಿಯಂ ಮೂಲಕ ಹಣ ಕಳಿಸುತ್ತಾರೆ. ಆದರೆ ಇತ್ತ ತನ್ನ ಖಾತೆಗೆ ಹಣ ಬರುತ್ತಿದ್ದಂತೆ ತನ್ನ ನಂಬರನ್ನು ಬದಲಾಯಿಸುತ್ತಿದ್ದನು.

    ಬೆಂಗಳೂರು ಮೂಲದವ ಅಂತ ಹೇಳಿಕೊಂಡಿರುವ ವಿಕಾಸ್, ದೆಹಲಿ ಮತ್ತು ಮಹಾರಾಷ್ಟ್ರದಲ್ಲಿ ಕೆಲಸ ಮಾಡೋದಾಗಿ ಹೇಳಿ ಜನರಿಗೆ ಮೋಸ ಮಾಡಿದ್ದಾನೆ. ಈತ ಸೇಲ್‍ಗಿಟ್ಟಿರುವ ವಾಹನ ಬೆಂಗಳೂರು ಆರ್ ಟಿಓದಲ್ಲಿ ನೋಂದಾಣಿಯಾಗಿರುವಂತದ್ದು. ಈಗಾಗಲೇ ಗುರುಮೂರ್ತಿ ಹಾಗೂ ಫೈಜಲ್ ಸೇರಿದಂತೆ ಅನೇಕರು ಈತನನ್ನು ನಂಬಿ ಲಕ್ಷಾಂತರ ದುಡ್ಡು ಕಳೆದುಕೊಂಡಿದ್ದಾರೆ. ಸದ್ಯ ನಕಲಿ ಸೈನಿಕನ ವಿರುದ್ಧ ಸಾರಿಗೆ ಇಲಾಖೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಿಲಿಕಾನ್ ಸಿಟಿಗೆ ಬಂತು ವಿಶೇಷ ಫಿಶ್ – ಖರೀದಿಗೆ ಮುಗಿಬಿದ್ದ ಮಾಂಸ ಪ್ರಿಯರು!

    ಸಿಲಿಕಾನ್ ಸಿಟಿಗೆ ಬಂತು ವಿಶೇಷ ಫಿಶ್ – ಖರೀದಿಗೆ ಮುಗಿಬಿದ್ದ ಮಾಂಸ ಪ್ರಿಯರು!

    ಬೆಂಗಳೂರು: ಸಿಲಿಕಾನ್ ಸಿಟಿಗೆ ವಿಶೇಷವಾದ ಮೀನೊಂದು ಬಂದಿದ್ದು, ಇದನ್ನು ಖರೀದಿ ಮಾಡಲು ಮಾಂಸ ಪ್ರಿಯರು ಮುಗಿದ್ದಿದ್ದಾರೆ.

    ನಗರ ಫ್ರೆಜರ್ ಟೌನ್ ನಲ್ಲಿರುವ MOZ Fisheries ಓನಲ್ಲಿ ಬೃಹತ್ ಗಾತ್ರದ ಮೀನು ಮಾರಾಟಕ್ಕಿದೆ. ಇದನ್ನು ಎಲ್ಲೋಫಿನ್ ಟ್ಯೂನಾ ಮೀನ್ ಎಂದು ಕರೆಯುತ್ತಾರೆ. ಈ ಎಲ್ಲೋಫಿನ್ ಟ್ಯೂನಾ ಮೀನಿಗೆ ಜಗತ್ತಿನಲ್ಲೇ ಭಾರೀ ಡಿಮ್ಯಾಂಡ್ ಇದೆ.

    MOZ Fisheries ನ ಮಾಲೀಕ ಮೊಹಮದ್ ವಾಸೀಮ್ ವಿಶೇಷ ಮೀನನ್ನು ಮಾರಾಟ ಮಾಡುತ್ತಿದ್ದಾರೆ. ಈ ಮೀನು ಚೆನ್ನೈನಲ್ಲಿ ದೊರೆತಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇದೆ. ಇದರ ತೂಕ ಬರೊಬ್ಬರಿ 85 ಕೆ.ಜಿ. ಇದ್ದು, ಈ ಮೀನಿಗೆ ಮಾಂಸ ಪ್ರಿಯರು ಮುಗಿಬಿದ್ದಿದ್ದಾರೆ.

    ಮೀನಿನ ವಿಶೇಷತೆ:
    ಈ ಮೀನಿನಲ್ಲಿ ಯಾವುದೇ ಕೊಬ್ಬಿನ ಅಂಶ ಇಲ್ಲ. ಆದ್ದರಿಂದ ಈ ಮೀನು ತಿಂದರೆ ಮನುಷ್ಯನ ಬುದ್ದಿ ಶಕ್ತಿ ಚುರುಕುಗೊಳ್ಳಲಿದೆಯಂತೆ. ಒಂದು ಕೆ.ಜಿ.ಗೆ 500 ರೂಪಾಯಿಯಂತೆ ಮಾರಾಟವಾಗುತ್ತಿದೆ. ಈ ಮೀನನ್ನು ನೆನಪಿನ ಶಕ್ತಿ ಹೆಚ್ಚಿಸಲು ಹಾಗೂ ಕ್ರೀಡಾಪಟುಗಳು ಹೆಚ್ಚು ಉಪಯೋಗಿಸುತ್ತಾರೆ ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊಸ ವರ್ಷಕ್ಕೆ ಭರ್ಜರಿ ಎಣ್ಣೆ ಮಾರಾಟ – ಕೋಟಿ ಕೋಟಿ ಬಾಚಿದ ಅಬಕಾರಿ ಇಲಾಖೆ

    ಹೊಸ ವರ್ಷಕ್ಕೆ ಭರ್ಜರಿ ಎಣ್ಣೆ ಮಾರಾಟ – ಕೋಟಿ ಕೋಟಿ ಬಾಚಿದ ಅಬಕಾರಿ ಇಲಾಖೆ

    ಬೆಂಗಳೂರು: ಹೊಸ ವರ್ಷ ಅಬಕಾರಿ ಇಲಾಖೆಗೆ ಕುಡುಕರು ಗಿಫ್ಟ್ ನೀಡಿದ್ದು, ಅಬಕಾರಿ ಇಲಾಖೆಯ ಆದಾಯ ಈ ವರ್ಷ ಶೇ.12 ರಷ್ಟು ಏರಿಕೆಯಾಗಿದೆ.

    ಹೊಸ ವರ್ಷದ ಸಂಭ್ರಮದಲ್ಲಿ ರಾಜ್ಯದಲ್ಲಿ ಒಟ್ಟು 3.83 ಲಕ್ಷ ಕೇಸ್ (ಬಾಕ್ಸ್) ಮದ್ಯ ಮಾರಾಟವಾಗಿದೆ. ಈ ಮೂಲಕ ಒಟ್ಟು ಬರೋಬ್ಬರಿ 80 ಕೋಟಿ ರೂ. ಆದಾಯ ಸಂಗ್ರಹಗೊಂಡಿದೆ.

    ಸಿಲಿಕಾನ್ ಸಿಟಿಯಲ್ಲಿಯೇ 81 ಸಾವಿರ ಮದ್ಯ ಬಾಕ್ಸ್ ಮಾರಾಟವಾಗಿದ್ದು, ಬೆಂಗಳೂರಿನಲ್ಲಿಯೇ 20 ಕೋಟಿ ರೂ. ಆದಾಯ ಗಳಿಕೆಯಾಗಿದೆ. ಈ ಮೂಲಕ ಹೊಸ ವರ್ಷದಂದು ರಾಜ್ಯ ಸರ್ಕಾರಕ್ಕೆ ಕುಡುಕರು ಗಿಫ್ಟ್ ನೀಡಿದ್ದಾರೆ.

    ಕಳೆದ ವರ್ಷ ರಾಜ್ಯದಲ್ಲಿ 60-65 ಕೋಟಿ ಆದಾಯ ಸಂಗ್ರಹವಾಗಿತ್ತು. ಆದರೆ ಈ ಬಾರಿ ಈ ಮೊತ್ತ 80 ಕೋಟಿ ರೂ.ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 15 ಕೋಟಿ ಆದಾಯ ಕಳೆದ ವರ್ಷ ಆಗಿತ್ತು. ಈ ವರ್ಷ ಇದು 20 ಕೋಟಿಗೆ ಜಂಪ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ‘ಬಳಕೆಯಾದ ಪತಿ’- ಗಂಡನನ್ನೇ ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟ ಪತ್ನಿ

    ‘ಬಳಕೆಯಾದ ಪತಿ’- ಗಂಡನನ್ನೇ ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟ ಪತ್ನಿ

    ಬರ್ಲಿನ್: ಆನ್‍ಲೈನ್ ನಲ್ಲಿ ಸಾಮಾನ್ಯವಾಗಿ ಹಳೆ ವಸ್ತುಗಳನ್ನು ಮಾರಾಟ ಮತ್ತು ಖರೀದಿ ಮಾಡುತ್ತಾರೆ. ಆದರೆ ಜರ್ಮನಿಯ ಮಹಿಳೆಯೊಬ್ಬಳು ಆನ್‍ಲೈನ್ ನಲ್ಲಿ ತನ್ನ ಪತ್ನಿಯನ್ನೇ ಮಾರಾಟಕ್ಕಿದ್ದ ಘಟನೆಯೊಂದು ನಡೆದಿದೆ.

    ಈ ಘಟನೆ ಹ್ಯಾಂಬರ್ಗ್ ನ ಜರ್ಮನಿಯಲ್ಲಿ ನಡೆದಿದ್ದು, 40 ವರ್ಷದ ಡೋರ್ಟೆ ಎಲ್ ಮದುವೆಯಾಗಿ ಏಳು ವರ್ಷ ಸಂಸಾರ ಮಾಡಿದ್ದ ಪತಿಯನ್ನೇ ಮಾರಾಟಕ್ಕಿಟ್ಟಿದ್ದಾಳೆ. ಈಕೆ ವೆಬ್ ಸೈಟ್ ಒಂದರಲ್ಲಿ ಪತಿಯನ್ನು ಮಾರಾಟ ಮಾಡುವ ಬಗ್ಗೆ ಪೋಸ್ಟ್ ಬರೆದು ಹಾಕಿದ್ದಾಳೆ. ಕ್ರಿಸ್‍ಮಸ್ ನ ಮೊದಲ ಎರಡು ದಿನದಿಂದ ನಾವು ಜೊತೆಯಾಗಿಲ್ಲ. ನಾನು ನನ್ನ ಪತಿಯನ್ನೇ ಬಿಟ್ಟು ಕೊಡಲು ಬಯಸುತ್ತೇನೆ. ಬೆಲೆಯ ಬಗ್ಗೆ ಮಾತನಾಡಲು ಸಂಪರ್ಕಿಸಿ ಎಂದು ಇ-ಮೇಲ್ ಮಾಡಿದ್ದಾಳೆ.

    ಪೋಸ್ಟ್ ನಲ್ಲೇನಿದೆ..?
    “ಆಸಕ್ತಿ ಹೊಂದಿರುವ ಮಹಿಳೆಯರಿಗಾಗಿ, ನಾನು ನನ್ನ ಪತಿಯಿಂದ ಬೇಸತ್ತು, ಅವರನ್ನು ಬಿಡಲು ನಿರ್ಧಾರ ಮಾಡಿದ್ದೇನೆ ಎಂದು ಮಹಿಳೆ ತನ್ನ ಪತಿಗೆ 1,439 ರೂ. ಗೆ ಬೆಲೆ ನಿಗದಿ ಮಾಡಿದ್ದಾಳೆ. ಬೆಲೆಯಲ್ಲಿ ಹೆಚ್ಚು- ಕಡಿಮೆ ಮಾಡಿಕೊಳ್ಳಲು ನನಗೆ ಸಂತೋಷವಿದೆ. ಆದರೆ ಇದರಲ್ಲಿ ವಿನಿಮಯ ಇಲ್ಲ. ದಯವಿಟ್ಟು ಇ-ಮೇಲ್ ಮೂಲಕ ವಿಚಾರಣೆ ಮಾಡಿ” ಎಂದು ಬರೆದಿದ್ದಾಳೆ. ಜೊತೆಗೆ ‘ಬಳಕೆಯಾದ ಪತಿ’ ಎಂಬ ತಲೆಬರೆಹ ಕೊಟ್ಟು ಅವರ ಫೋಟೋ ಮತ್ತು ಕ್ರಿಸ್‍ಮಸ್ ಟ್ರೀ ಹಾಕಿದ್ದಾಳೆ.

    ಎಲ್ಲರೂ ಈ ಜಾಹೀರಾತನ್ನು ಸಂತೋಷದಿಂದ ಸ್ವೀಕರಿಸಿದ್ದಾರೆ. ನನಗೆ ಪಾಸಿಟಿವ್ ಆಗಿ ಪ್ರತಿಕ್ರಿಯೆಗಳು ಬರುತ್ತಿವೆ. ಕೆಲವರು ನಗುವ ಎಮೋಜಿಯನ್ನು ಕಳುಹಿಸುತ್ತಿದ್ದಾರೆ. ನಾನು ಇನ್ನೂ ಈ ಬಗ್ಗೆ ಮುಚ್ಚಿಡಲು ಇಷ್ಟಪಡುವುದಿಲ್ಲ. ನಾನು ಇದನ್ನು ಕೇವಲ ಮನೋರಂಜನೆಗಾಗಿ ಮಾಡಿದ್ದೆ ಎಂದು ಮಹಿಳೆ ಹೇಳಿದ್ದಾಳೆ.

    ಅಚ್ಚರಿ ಎಂದರೆ ಆಕೆಯ ಪತಿಗೆ ಸ್ಥಳೀಯ ಪತ್ರಿಕೆಯಲ್ಲಿ ಈ ಬಗ್ಗೆ ಜಾಹೀರಾತನ್ನು ನೋಡುವವರೆಗೂ ತಿಳಿದಿರಲಿಲ್ಲ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಾರಾಟದಲ್ಲಿ ಆಲ್ಟೋವನ್ನೇ ಹಿಂದಿಕ್ಕಿ, ದಾಖಲೆ ಬರೆದ ಡಿಸೈರ್ ಕಾರು

    ಮಾರಾಟದಲ್ಲಿ ಆಲ್ಟೋವನ್ನೇ ಹಿಂದಿಕ್ಕಿ, ದಾಖಲೆ ಬರೆದ ಡಿಸೈರ್ ಕಾರು

    ನವದೆಹಲಿ: ಭಾರತದ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿಯ ಮಧ್ಯಮ ಗಾತ್ರದ ಸೆಡಾನ್ ಡಿಸೈರ್ ಕಾರು ಮಾರಾಟದಲ್ಲಿ ಹ್ಯಾಚ್‍ಬ್ಯಾಕ್ ಮಾದರಿಯ ಆಲ್ಟೋವನ್ನು ಹಿಂದಿಕ್ಕಿದೆ.

    ಮಧ್ಯಮವರ್ಗದ ಜನರ ಮೆಚ್ಚುಗೆಗೆ ಪಾತ್ರವಾಗಿರುವ ಮಾರುತಿ ಸುಜುಕಿ ಉತ್ತಮ ಬೆಲೆಯಲ್ಲಿ ಗುಣಮಟ್ಟದ ಕಾರುಗಳನ್ನು ಬಿಡುಗಡೆ ಮಾಡುತ್ತಲೇ ಇದೆ. ಆದರೆ ಹ್ಯಾಚ್‍ಬ್ಯಾಕ್ ಮಾದರಿಯಾದ ಆಲ್ಟೋ ಕಾರನ್ನು ಹಿಂದಿಕ್ಕಿ ಮಧ್ಯಮ ಸೆಡಾನ್ ಮಾದರಿ ಡಿಸೈರ್ ದಾಖಲೆ ನಿರ್ಮಿಸಿದೆ.

    ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ(ಎಸ್‍ಐಎಎಂ) 2018ರ ಏಪ್ರಿಲ್ ನಿಂದ ನವೆಂಬರ್ ತಿಂಗಳವರೆಗಿನ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ವರದಿಗಳ ಪ್ರಕಾರ ಈ ಅವಧಿಯಲ್ಲಿ ಆಲ್ಟೋ ಕಾರು 1,53,303 ಮಾರಾಟವಾಗಿದ್ದರೆ, ಡಿಸೈರ್ ಕಾರು 1,82,139 ಯೂನಿಟ್‍ಗಳನ್ನು ಮಾರಾಟ ವಾಗಿದೆ.

    ಆಲ್ಟೋ ಕಾರು ಮಾರುತಿ ಸುಜುಕಿ ಕಂಪನಿಯಲ್ಲೇ ಅತಿ ಹೆಚ್ಚು ಮಾರಾಟವಾಗುವ ಕಾರು ಎಂದು ಹೆಸರು ಪಡೆದುಕೊಂಡು ಬಂದಿತ್ತು. ಅಲ್ಲದೇ ಕಳೆದ ವರ್ಷವೂ ಸಹ 1,69,343 ಆಲ್ಟೋ ಕಾರುಗಳನ್ನು ಸಂಸ್ಥೆ ಮಾರಾಟ ಮಾಡಿತ್ತು. ಆದರೆ ಈಗ ಇದೇ ಮಾರುತಿಯ ಡಿಸೈರ್ ಸೆಡಾನ್ ಕಾರು ಆಲ್ಟೋಗೆ ಭಾರೀ ಪೈಪೋಟಿ ನೀಡುತ್ತಿದೆ.

    ನೂತನ ಡಿಸೈರ್ ಕಾರು ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಲ್ಲದೇ ತನ್ನ ಆವೃತ್ತಿಯಲ್ಲಿ ಉತ್ತಮ ಇಂಧನ ಕ್ಷಮತೆ ನೀಡುವ ಕಾರು ಎಂದು ಹೆಸರು ಪಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮೈಸೂರಲ್ಲಿ ಕೆಜಿಎಫ್ ಸಿಡಿ ಮಾರಾಟ- ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಯಶ್ ಅಭಿಮಾನಿಗಳು

    ಮೈಸೂರಲ್ಲಿ ಕೆಜಿಎಫ್ ಸಿಡಿ ಮಾರಾಟ- ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಯಶ್ ಅಭಿಮಾನಿಗಳು

    ಮೈಸೂರು: ನಗರದ ಕೆ.ಆರ್. ವೃತ್ತದ ಬಳಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಿತ್ರದ ಸಿಡಿಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಯಶ್ ಅಭಿಮಾನಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಕೆಜಿಎಫ್ ಚಿತ್ರ ರಾಜ್ಯ ಸೇರಿದಂತೆ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ಆದರೆ ಈ ಚಿತ್ರಕ್ಕೂ ಪೈರಸಿ ಕಾಟ ಉಂಟಾಗಿದ್ದು, ನಗರದ ಕೆ.ಆರ್. ವೃತ್ತದಲ್ಲಿ ವ್ಯಕ್ತಿಯೊಬ್ಬ ಕೆಜಿಎಫ್ ಸಿನಿಮಾದ ಸಿಡಿಗಳನ್ನು ಮಾರಾಟ ಮಾಡುತ್ತಿದ್ದ. ಈ ವಿಚಾರದ ತಿಳಿದ ಯಶ್ ಅಭಿಮಾನಿಗಳು ಸಿಡಿ ಮಾರುತ್ತಿದ್ದ ವ್ಯಕ್ತಿಯನ್ನು ಹಿಡಿದು, ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

    ಕೆಜಿಎಫ್ ಸಿನಿಮಾದ ಸಿಡಿಗಳ ಸಮೇತ ದೇವರಾಜುನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಯಶ್ ಅಭಿಮಾನಿಗಳು ಈ ಬಗ್ಗೆ ಮೈಸೂರಿನಾದ್ಯಂತ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಸಂಗಮ್ ಟಾಕೀಸ್ ರಸ್ತೆ, ಕೆ.ಟಿ.ಸ್ಟ್ರೀಟ್, ಮಂಡಿ ಮೊಹಲ್ಲಾ, ಅಗ್ರಹಾರ ಸೇರಿದಂತೆ ಹಲವು ಕಡೆ ಕೆಜಿಎಫ್ ಸಿನಿಮಾದ ಸಿಡಿಗಳು ಮಾರಾಟವಾಗಿರುವ ಶಂಕೆ ವ್ಯಕ್ತವಾಗುತ್ತಿದೆ.

    ಕೆಜಿಎಫ್ ಸಿನಿಮಾದ ಸಿಡಿಗಳನ್ನು ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ನಿರ್ಮಾಣ ಮಾಡಿರುವ ಹೊಂಬಾಳೆ ಸಿನಿಮಾಸ್ ಅವರು ಎಚ್ಚರಿಕೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಚಿಕ್ಕಮಗಳೂರಿನಲ್ಲಿ 3 ದಿನ ಮದ್ಯ ಮಾರಾಟ ನಿಷೇಧ

    ಚಿಕ್ಕಮಗಳೂರಿನಲ್ಲಿ 3 ದಿನ ಮದ್ಯ ಮಾರಾಟ ನಿಷೇಧ

    ಚಿಕ್ಕಮಗಳೂರು: 3 ದಿನಗಳ ಕಾಲ ಚಿಕ್ಕಮಗಳೂರು ಜಿಲ್ಲಾದ್ಯಂತ ಮದ್ಯ ಮಾರಾಟವನ್ನು ನಿಷೇಧಿಸಲಾಗದೆ.

    ಡಿಸೆಂಬರ್ 19ರಿಂದ 22ರ ವರೆಗೆ ಚಿಕ್ಕಮಗಳೂರಿನಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಶ್ರೀರಂಗಯ್ಯ ಆದೇಶ ಹೊರಡಿಸಿದ್ದಾರೆ. ನಾಳೆಯಿಂದ ಅಂದರೆ ಗುರುವಾರದಿಂದ ಕಾಫಿನಾಡಲ್ಲಿ 3 ದಿನ ದತ್ತ ಜಯಂತಿ ಸಂಭ್ರಮಿಸಲಾಗುತ್ತದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಮದ್ಯ ಮಾರಾಟವನ್ನು ನಿಷೇಧಿಸಿದ್ದಾರೆ.

    ದತ್ತಜಯಂತಿ ಹಿನ್ನೆಲೆಯಲ್ಲಿ ಗಿರಿಶ್ರೇಣಿ ನೋಡಲು ಬರುವ ಪ್ರವಾಸಿಗರಿಗೂ ಜಿಲ್ಲಾಡಳಿತ ಮೂರು ದಿನಗಳ ಕಾಲ ನಿರ್ಬಂಧ ಹೇರಿದೆ. ಹೀಗಾಗಿ ಈ ಮೂರು ದಿನಗಳು ಮುಳ್ಳಯ್ಯನಗಿರಿ, ದತ್ತಪೀಠ ಸೇರಿದಂತೆ ಗಿರಿ ಶ್ರೇಣಿ ಪ್ರವೇಶಕ್ಕೆ ಅನುಮತಿ ಇಲ್ಲ.

    ವಿ.ಎಚ್.ಪಿ, ಬಜರಂಗದಳ ಸಂಘಟನೆಗಳ ಕಾರ್ಯಕರ್ತರಿಂದ ಜಿಲ್ಲೆಯಲ್ಲಿ ದತ್ತ ಜಯಂತಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದತ್ತ ಪೀಠಕ್ಕೆ ಆಗಮಿಸುವ ನಿರೀಕ್ಷೆಯಿದೆ. ದತ್ತ ಜಯಂತಿ ಪ್ರಯುಕ್ತ ದತ್ತ ಪೀಠದಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv