ರಾಯಚೂರು: ಬಿಸಿಲ ನಾಡು ರಾಯಚೂರಿನಲ್ಲಿ ಹೋಳಿ ಹಬ್ಬವನ್ನ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಪರಸ್ಪರ ಬಣ್ಣ ಎರಚಿಕೊಂಡು ಜನ ಸಂಭ್ರಮ ಪಡುತ್ತಿದ್ದಾರೆ. ಬಿರುಬೇಸಿಗೆಯಲ್ಲಿ ಹೋಳಿ ಹಬ್ಬ ಜನರಿಗೆ ತಂಪನೆರೆಯುತ್ತಿದೆ. ವಯಸ್ಸಿನ ಭೇದ ಮರೆತು ಹೋಳಿಯಲ್ಲಿ ಜನ ಮಿಂದೇಳುತ್ತಿದ್ದಾರೆ.
ಸಂಗೀತ ವಾದ್ಯ, ನೃತ್ಯ ಮಾಡುವ ಮೂಲಕ ಹೋಳಿ ಆಚರಣೆ ಮಾಡಲಾಗುತ್ತಿದೆ. ಕಾಮಣ್ಣನ ದಹನ ಬಳಿಕ ಬೆಳಗ್ಗಿನಿಂದಲೇ ಹೋಳಿ ಆಚರಣೆ ಜೋರಾಗಿದೆ. ಹೋಳಿ ಹಬ್ಬದಲ್ಲಿ ಕಾಮಣ್ಣನ ದಹನ ಹಾಗೂ ಪರಸ್ಪರ ಬಣ್ಣ ಎರಚಾಡುವುದರಿಂದ ಹಾಗೂ ಹಿಜಬ್ ವಿವಾದ ಹಿನ್ನೆಲೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್
ಹಾಸನ: ಚಾಕುವಿನಿಂದ ಇರಿದು ಯುವಕರೊಬ್ಬರನ್ನು ಬರ್ಬರ ಹತ್ಯೆ ಗೈದ ಘಟನೆ ಜಿಲ್ಲೆಯ ಸಕಲೇಶಪುರ ಪಟ್ಟಣದ ಅಜಾದ್ ರಸ್ತೆಯಲ್ಲಿ ಗುರುವಾರ ನಡೆದಿದೆ.
ಅಪ್ಸರ್ (27) ಕೊಲೆಯಾದ ಯುವಕ. 4 ಜನರ ತಂಡವೊಂದು ಅಕ್ರಮವಾಗಿ ದನದ ಮಾಂಸ ಮಾರಾಟ ಹಾಗೂ ಚರಂಡಿಯಲ್ಲಿ ತ್ಯಾಜ್ಯ ಬಿಸಾಡುತ್ತಿದ್ದ ವಿಚಾರಕ್ಕೆ ಅಪ್ಸರ್ ಅವರು ತಂಡದ ಜೊತೆ ಜಗಳ ಮಾಡಿಕೊಂಡಿದ್ದರು. ಈ ವೇಳೆ ಜಗಳ ವಿಕೋಪಕ್ಕೆ ತಿರುಗಿ ಅಪ್ಸರ್ ನನ್ನು ಕೊಲೆ ಮಾಡುವಲ್ಲಿ ಜಗಳ ಅಂತ್ಯವಾಗಿದೆ. ಯುವಕರು ಹೊಡೆದಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಅಪ್ಪು ಹುಟ್ಟುಹಬ್ಬಕ್ಕೆ ಕನಸಿನ ‘ಗಂಧದಗುಡಿ’ ಫಸ್ಟ್ ಲುಕ್ ರಿಲೀಸ್
ಬೀದರ್: ಎಕ್ಸ್ ಪೈರ್ ಆದ ಡ್ರೈಫ್ರೂಟ್ಸ್ ಮಾರಾಟ ಮಾಡುತ್ತಿದ್ದ ಮಹಾರಾಷ್ಟ್ರ ಮೂಲದ ವ್ಯಾಪರಿಗಳಿಗೆ ಸಾರ್ವಜನಿಕರು ತರಾಟೆ ತೆಗೆದುಕೊಂಡ ಘಟನೆ ನಗರದ ಶಿವನಗರದ ಪಾಪನಾಶ ಗೇಟ್ ಬಳಿ ನಡೆದಿದೆ.
ಡ್ರೈಫ್ರೂಟ್ಸ್ ಕೊಂಡುಕೊಳ್ಳಲು ಬಂದಾಗ ಸಾರ್ವಜನಿಕರು ದಿನಾಂಕ ಪರಿಶೀಲನೆ ಮಾಡಿ ವ್ಯಾಪಾರಿಗಳನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ಸಾರ್ವಜನಿಕರು ತರಾಟೆ ತೆಗೆದುಕೊಳ್ಳುತ್ತಿದ್ದಂತ್ತೆ ಎಕ್ಸ್ ಪೈರ್ ಆಗಿರುವ ಡ್ರೈಫ್ರೂಟ್ಸ್ ತುಂಬಿಕೊಂಡು ಅಂಗಡಿಗಳನ್ನು ಮುಚ್ಚಿಕೊಂಡು ಮಹಾರಾಷ್ಟ್ರ ಮೂಲದ ವ್ಯಾಪಾರಿಗಳು ಪರಾರಿಯಾಗಿದ್ದಾರೆ.
ವಿಜಯಪುರ: ಕೇವಲ ಏಳು ದಿನದ ಟಗರೊಂದು 2 ಲಕ್ಷ ರೂಪಾಯಿಗೆ ವಿಜಯಪುರ ಜಿಲ್ಲೆಯಲ್ಲಿ ಇಂಡಿ ಪಟ್ಟಣದಲ್ಲಿ ಮಾರಾಟವಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಇಂಡಿ ಪಟ್ಟಣದಲ್ಲಿ ಟಗರು ಸಾಕಾಣಿಕೆದಾರ ಬಾನಪ್ಪ ಪೂಜಾರಿ ಸಾಕಿರುವ ಏಳು ದಿನದ ಟಗರಿಗೆ ಇಷ್ಟೊಂದು ರೇಟ್ ಬಂದಿದೆ. ಈ ಟಗರಿಗೆ ಸುಲ್ತಾನ ಎಂದು ಹೆಸರಿಡಲಾಗಿದೆ.
ಈ ಸುಲ್ತಾನನ್ನು ಮಹಾರಾಷ್ಟ್ರದ ಸಿದ್ದನಾಥ ಗ್ರಾಮದ ನಾಮದೇವ ಖೊಖರೆ ಎಂಬುವರು ಎರಡು ಲಕ್ಷ ರೂ.ಗೆ ಖರೀದಿಸಿದ್ದಾರೆ. ಖರೀದಿಸಿದ ನಂತರ ಈ ವಿಶೇಷ ಟಗರನ್ನು ಇಂಡಿ ಪಟ್ಟಣದಲ್ಲಿ ಹೊತ್ತುಕೊಂಡು ಡೋಲು ಬ್ಯಾಂಡ್, ಜಾಂಜ್ ಬಾರಿಸುತ್ತಾ ಮೆರವಣಿಗೆ ಮಾಡುವ ಮೂಲಕ ಪ್ರದರ್ಶನ ಮಾಡಿದ್ದಾರೆ. ಇದನ್ನೂ ಓದಿ: ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ ಎಂದ ಆರೋಗ್ಯ ಅಧಿಕಾರಿ ವಿರುದ್ಧ ಡಿಕೆಶಿ ಗರಂ
ಕಾರವಾರ: ಶಿರಸಿಯಲ್ಲಿ ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿರಸಿ ಪೊಲೀಸರು ಕಳೆದ ಎರಡು ದಿನದ ಹಿಂದೆ ನಗರದ ವಿವಿಧ ಭಾಗದಲ್ಲಿ ದಾಳಿ ನಡೆಸಿ 15 ಮಂದಿಯನ್ನು ವಶಕ್ಕೆ ಪಡೆದು ವೈದ್ಯಕೀಯ ವಿಜ್ಞಾನ ಪರೀಕ್ಷೆಗೆ ಒಳಪಡಿಸಲಾಗಿತ್ತು. 12 ಜನರು ಗಾಂಜಾ ಸೇವನೆ ಮಾಡಿರುವುದು ಇಂದು ವೈದ್ಯಕೀಯ ಪರೀಕ್ಷೆಯಿಂದ ದೃಢವಾಗಿದೆ.
ಗಾಂಜಾ ಸೇವನೆ ಮತ್ತು ಪೆಡ್ಲರ್ ಪ್ರಕರಣ ಸಂಬಂಧ ಶಿರಸಿ ಮಾರುಕಟ್ಟೆ ಪೊಲೀಸರು ದಾಳಿ ಮಾಡಿ 15 ಜನರನ್ನು ವೈದ್ಯಕೀಯ ತಪಾಸಣೆಗೆ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದರು. ಇದೀಗ 12 ಜನರ ಸೇವನೆ ಬಗ್ಗೆ ದೃಢಪಟ್ಟಿರುವುದು ಶಿರಸಿಯಲ್ಲಿ ಗಾಂಜಾ ಸೇವನೆ ಪ್ರಕರಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಮುರುಡೇಶ್ವರಕ್ಕೆ ಐಸಿಸ್ ಕಣ್ಣು- ದೇವಾಲಯಕ್ಕೆ ವಿಶೇಷ ಪೊಲೀಸ್ ಭದ್ರತೆ ವ್ಯವಸ್ಥೆ
ಕಳೆದ ಮೂರು ತಿಂಗಳಿಂದ ಶಿರಸಿ ಶಾಲಾ, ಕಾಲೇಜುಗಳ ಕ್ರೀಡಾಂಗಣ, ಬಸ್ ನಿಲ್ದಾಣಗಳಲ್ಲಿ ಗಾಂಜಾ ಮಾರಾಟ ಮಾಡುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಲವರನ್ನು ಬಂಧಿಸಿದ್ದರು. ಶಾಲಾ ,ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು ಗಾಂಜಾ ಮತ್ತಿನ ದಾಸರಾಗಿದ್ದರು. ಈ ಬಗ್ಗೆ ಶಿರಸಿ ಪೊಲೀಸರು ಗಂಭೀರವಾಗಿ ತೆಗೆದುಕೊಂಡು ಎರಡು ದಿನದ ಹಿಂದೆ ಬೆಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದರು. ಇದರಿಂದಾಗಿ ಇದೀಗ ಶಿರಸಿ ಪಟ್ಟಣದಲ್ಲಿ ಗಾಂಜಾ ಮಾರಾಟ, ಸೇದುವ ಜನರಲ್ಲಿ ಭಯ ಮೂಡಿದೆ. ಶಿರಸಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಗೆ ಜನರು ಶ್ಲಾಘಿಸಿದ್ದಾರೆ.
– ಬಾಡಿಗೆ ತಾಯ್ತನದ ನೆಪದಲ್ಲಿ ಮಕ್ಕಳ ಮಾರಾಟ
– ಬಡ ಪೋಷಕರಿಂದ 60, 80 ಸಾವಿರಕ್ಕೆ ಮಕ್ಕಳನ್ನು ಕೊಳ್ಳುತ್ತಿದ್ದ ಆರೋಪಿಗಳು
ಬೆಂಗಳೂರು: ಮಕ್ಕಳು ಬೇಕು ಎಂದು ಹಪಹಪಿಸುವ ಅಮಾಯಕರನ್ನೇ ಬಂಡವಾಳ ಮಾಡಿಕೊಂಡ ಗ್ಯಾಂಗ್ ಪುಟ್ಟ ಮಕ್ಕಳನ್ನು ಮಾರಾಟ ಮಾಡುತ್ತಿತ್ತು. ಈ ಖದೀಮರನ್ನು ಇದೀಗ ಖಾಕಿ ಪಡೆ ಹೆಡೆಮುರಿ ಕಟ್ಟಿದೆ.
ಮಕ್ಕಳಿಗಾಗಿ ಆಸ್ಪತ್ರೆ ಅಲೆಯುತ್ತಿದ್ದ ಜನರನ್ನೇ ಬಂಡವಾಳ ಮಾಡಿಕೊಂಡ ಆಸಾಮಿಗಳು ಪುಟ್ಟ ಮಕ್ಕಳನ್ನು ಮಾರಾಟ ಮಾಡಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ದೇವಿ ಷಣ್ಮುಗಮ್ಮ, ಮಹೇಶ್, ರಜನಿ, ಜನಾರ್ಧನ್ ಮತ್ತು ಧನಲಕ್ಷ್ಮೀ ಎಂದು ಗುರುತಿಸಲಾಗಿದೆ. ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ದಿಢೀರ್ ಆರ್‌ಎಸ್‌ಎಸ್ ವಿರುದ್ಧ ಎಚ್‌ಡಿಕೆ ಮುಗಿಬಿದ್ದಿದ್ದು ಯಾಕೆ?
ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ನೀಡುತ್ತೇವೆ ಎಂದು ಆರೋಪಿಗಳು ಮಕ್ಕಳಿಲ್ಲದ ಕೆಲ ಜನರನ್ನು ಪತ್ತೆ ಹಚ್ಚುತ್ತಿದ್ದರು. ಬಳಿಕ ಅವರ ಆರ್ಥಿಕ ಪರಿಸ್ಥಿತಿ ಕಂಡು ಇಂತಿಷ್ಟು ಹಣ ಆಗುತ್ತೆ ಎಂದು ಪಿಕ್ಸ್ ಮಾಡುತ್ತಿದ್ದರು. ಪೋಷಕರಿಂದ ಜೈವಿಕ ಅಂಶಗಳನ್ನು ಪಡೆದು ನಂತರ ಏಳೆಂಟು ತಿಂಗಳ ನಂತರ ಅವರಿಗೆ ಒಂದು ಮಗು ಕೊಟ್ಟು ಇದೇ ನಿಮ್ಮ ಮಗು ಎಂದು ಹೇಳುತ್ತಿದ್ದರು.
ಹೀಗೆ ಕಳೆದ ವರ್ಷ ಚಾಮರಾಜಪೇಟೆ ಅಸ್ಪತ್ರೆಯಲ್ಲಿ ನಡೆದ ಮಗು ಕಳ್ಳತನ ಪ್ರಕರಣದ ಲಿಂಕ್ ಮೇಲೆ ತನಿಖೆ ನಡೆಸುತ್ತಿದ್ದ ಪೊಲೀಸರು ಈ ಜಾಲದ ಬಗ್ಗೆ ಮಾಹಿತಿ ಸಂಗ್ರಹಿಸಿ ತನಿಖೆ ಕೈಗೊಂಡಿದ್ದಾರೆ. ಈ ವೇಳೆ ತೀರಾ ಬಡತನಕ್ಕೆ ಸಿಲುಕಿದ ಮನೆಯಲ್ಲಿರುವ ಪುಟ್ಟ ಮಕ್ಕಳನ್ನು ಪತ್ತೆ ಹಚ್ಚುತ್ತಿದ್ದರು. ಮಕ್ಕಳ ಪೋಷಕರಿಗೆ 60 ರಿಂದ 80 ಸಾವಿರ ರೂ. ನೀಡಿ ಮಗು ಕೊಂಡುಕೊಳ್ಳುತ್ತಿದ್ದರು. ಬಳಿಕ ಮಗು ಬೇಕು ಎಂದವರಿಗೆ 6 ಲಕ್ಷ ರೂ.ಗಳವರೆಗೆ ಹಣ ಪಡೆದು ಮಾರಾಟ ಮಾಡುತ್ತಿದ್ದರು.
ಪೊಲೀಸರ ರೋಚಕ ಕಾರ್ಯಾಚರಣೆ
ಹೀಗೆ ಪೊಲೀಸರು ಮಕ್ಕಳ ಮಾರಾಟ ಜಾಲದ ಬಗ್ಗೆ ಕಣ್ಣಿಟ್ಟು ತಾವೇ ಒಂದು ಕಾರ್ಯಾಚರಣೆ ನಡೆಸಿದ್ದರು. ನಮಗೆ ಮಗು ಬೇಕಿದೆ 5 ಲಕ್ಷ ರೂ. ನೀಡುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ವೇಳೆ ದೇವಿ ಷಣ್ಮುಗಮ್ಮ ಎಂಬಾಕೆ ಮುಂಬೈನಿಂದ ಮಗುವೊಂದನ್ನು ರೈಲಿನಲ್ಲಿ ತಂದು ಮಾರಾಟ ಮಾಡಲು ಬಂದಿದ್ದಾಳೆ. ಪೊಲೀಸರು ಮಗು ಕೊಂಡುಕೊಳ್ಳುವ ನೆಪದಲ್ಲಿ ಮಹಿಳೆಯನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ. ದೇವಿ ಷಣ್ಮುಗಮ್ಮ ವಿಚಾರಣೆ ವೇಳೆ ಇದೇ ರೀತಿ ಹನ್ನೊಂದು ಮಕ್ಕಳನ್ನು ಕೊಂಡು, ಮಾರಾಟ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾಳೆ. ಆರೋಪಿ ಮಹಿಳೆ ಕೊಟ್ಟ ಸುಳಿವಿನ ಮೇರೆಗೆ ಮಕ್ಕಳನ್ನು ಪತ್ತೆ ಹಚ್ಚಿದ ಪೊಲೀಸರು, ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯೂಸಿ)ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಟಯರ್ ಸ್ಫೋಟಗೊಂಡು ತಾಯಿ, ಮಗ ಕಾರಿನಲ್ಲೇ ದುರ್ಮರಣ
ಬಂಧಿತ ಆರೋಪಿಗಳಲ್ಲಿ ಇಬ್ಬರು ಕೆಂಗೇರಿಯ ಅಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಅಸ್ಪತ್ರೆಯಲ್ಲಿ ಸುಮಾರು 20 ಕ್ಕೂ ಹೆಚ್ಚು ತಾಯಿ ಕಾರ್ಡ್ ಗಳನ್ನ ಒಂದೇ ಮನೆಗೆ ಕೊಟ್ಟಿದ್ದು, ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ತಾಯಿ ಕಾರ್ಡ್ ದುರ್ಬಳಕೆ ಕಂಡು ಬಂದಿದ್ದು, ಹೆಸರಿಲ್ಲದ ಪೋಷಕರಿಗೆ ಕಾರ್ಡ್ ನೀಡಿರುವುದು ಗೊತ್ತಾಗಿದೆ. ಪ್ರಕರಣದ ಪ್ರಮುಖ ಆರೋಪಿ ಕಳೆದ ವರ್ಷ ಕೊರೊನಾದಿಂದ ಸಾವನ್ನಪ್ಪಿದ್ದು, ಆಕೆಯೇ ಇದರ ಮಾಸ್ಟರ್ ಮೈಂಡ್ ಆಗಿದ್ದಳು. ಸದ್ಯ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಐವರನ್ನ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮಕ್ಕಳ ಮಾರಾಟ ಜಾಲದಲ್ಲಿ ಇನ್ನಷ್ಟು ಮಂದಿ ಇರುವ ಶಂಕೆ ಇದ್ದು, ತನಿಖೆ ತೀವ್ರ ಗೊಳಿಸಿದ್ದಾರೆ.
ವಿಜಯಪುರ: ಆಗಸ್ಟ್ ನಲ್ಲಿ ಮಾರಾಟ ಮಾಡಲಾಗಿದ್ದ ಮಗು ಪತ್ತೆಯಾಗಿದೆ. 2 ತಿಂಗಳ ಕಂದಮ್ಮನನ್ನು ತಾಯಿಯೇ 6 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದಾಳೆ ಎಂಬ ಭಯಾನಕ ಸತ್ಯ ಪ್ರಾಥಮಿಕ ತನಿಖೆ ವೇಳೆ ಹೊರ ಬಿದ್ದಿದೆ.
ಕಳೆದ ಆಗಸ್ಟ್ 26ರಂದು ವಿಜಯಪುರ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನವಜಾತ ಶೀಶುವಿನ ಮಾರಾಟವಾಗಿತ್ತು. ಇದರ ಹಿನ್ನೆಲೆ ಮಗುವಿನ ತಾಯಿಯ ಹೇಳಿಕೆಯ ಮೇಲೆ ಜಿಲ್ಲಾಸ್ಪತ್ರೆಯ ನರ್ಸ್ ಕಸ್ತೂರಿ ಹಾಗೂ ಪತಿ ಮಂಜುನಾಥನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಮಗು ಮಾತ್ರ ಪತ್ತೆ ಆಗಿರಲಿಲ್ಲ. ಸದ್ಯ ಮಗು ಇದೀಗ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದೊರಕಿದೆ. ಇನ್ನು ಮಗುವಿನ ಮಾರಾಟವನ್ನ ನರ್ಸ್ ಕಸ್ತೂರಿ ಹಾಗೂ ಪತಿ ಮಂಜುನಾಥ ಮಾಡಿಲ್ಲ ಅನ್ನೋದು ಮೇಲ್ನೋಟಕ್ಕೆ ಧೃಢಪಟ್ಟಿದೆ. ಇದನ್ನೂ ಓದಿ: ಬೆಂಗಳೂರಿನ ಅಪಾರ್ಟ್‍ಮೆಂಟ್‍ನಲ್ಲಿ ಸ್ಫೋಟಕ್ಕೆ ಕಾರಣ ಫ್ರಿಡ್ಜ್?
ಮಗುವನ್ನ ತಾಯಿ ದೇವರಹಿಪ್ಪರಗಿ ಪಟ್ಟಣದ ಓರ್ವ ಅಟೋ ಚಾಲಕನಿಗೆ 6000 ರೂಪಾಯಿಗೆ ಮಾರಾಟ ಮಾಡಿದ್ದಾಳೆ. ಆಟೋ ಚಾಲಕ ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ಓರ್ವರಿಗೆ ಮಾರಾಟ ಮಾಡಿದ್ದಾನೆ ಎಂದು ಜಿಲ್ಲಾಧಿಕಾರಿ ಸುನಿಲ್ ಕುಮಾರ್ ಪಬ್ಲಿಕ್ ಟಿವಿಗೆ ಸ್ಪಷ್ಟಪಡಿಸಿದ್ದಾರೆ.
ಮಗುವಿಗೆ ಅನಾರೋಗ್ಯವಾದ ಕಾರಣ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು. ಮಗು ಮಾರಾಟಕ್ಕೆ ತೆಗೆದುಕೊಂಡಿದ್ದವರು ಕಿಮ್ಸ್ ನಲ್ಲಿ ಮಗುವನ್ನು ದಾಖಲು ಮಾಡಿದ್ದರು. ಮಕ್ಕಳಿಲ್ಲದ ಕಾರಣ ಗಂಡು ಮಗುವನ್ನು ಖರಿಸಿದ್ದರು ಎನ್ನಲಾಗಿದೆ.
ತನಿಖೆ ಮುಂದುವರೆದಿದ್ದು, ಸಂಪೂರ್ಣ ತನಿಖೆಯ ನಂತರ ಪ್ರಕರಣದ ಹಿಂದಿರುವವರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯಲಿದೆ. ತಾಯಿಯೇ ಮಗುವನ್ನು ಮಾರಾಟ ಮಾಡಿರುವ ವಿಷಯ ತಿಳಿದು ಜಿಲ್ಲೆಯ ಜನ ಬೆಚ್ಚಿ ಬಿದ್ದಿದ್ದಾರೆ. ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಹೊಸ ಜೀವನ ಕೊಡುತ್ತೇನೆ ಎಂದು ಎರಡನೇ ಮದುವೆಯಾದ ಪತಿ, ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದ ಆಘಾತಕಾರಿ ಘಟನೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ಸಮಾಜ ಸೇವಕಿ ತರುಣಮ್ ಬಾನು ಕೂಡ ಬಂಧಿಸಲಾಗಿದ್ದು, ತಲೆ ಮರೆಸಿಕೊಂಡಿರುವ ಮುಬಾರಕ್ ಗಾಗಿ ಹುಡುಕಾಟ ನಡೆಯುತ್ತಿದೆ. ಅಲ್ಲದೆ ಅಕ್ರಮವಾಗಿ ಮಗು ಪಡೆದಿದ್ದ ದಂಪತಿಯನ್ನು ಸಹ ಬಂಧಿಸಲಾಗಿದೆ. ಹದಿನೈದು ವರ್ಷದಿಂದ ಮಕ್ಕಳಿಲ್ಲದಿದ್ದಕ್ಕೆ ಮಗುವನ್ನ ಪಡೆದಿದ್ದಾಗಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮುಂದೊಂದು, ಹಿಂದೊಂದು ನಂಬರ್ – ನಕಲಿ ಪೊಲೀಸ್ ವ್ಯಾನ್ ಕಂಡು ತಬ್ಬಿಬ್ಬಾದ ಜನ
ಆರೋಪಿ ತರುಣಮ್ ಬಾನು ಒಂದೇ ಮಗುವನ್ನು ಇಬ್ಬರಿಗೆ ಮಾರಾಟ ಮಾಡಲು ಮಾತುಕತೆ ನಡೆಸಿದ್ದಳು. ಮಗುವಿನ ತಂದೆ ಮುಬಾರಕ್ ಸಹ 38 ದಿನದ ಹಸುಗೂಸನ್ನ ಮಾರಾಟಕ್ಕೆ ಮುಂದಾಗಿದ್ದ. ಪೊಲೀಸರು ಪ್ರಕರಣ ಬೇಧಿಸಿದ್ದು, ಒಂದು ವಾರದ ಬಳಿಕ ಕಂದಮ್ಮ ತಾಯಿ ಮಡಿಲು ಸೇರಿದೆ.
ಘಟನೆ ನಡೆದದ್ದು ಹೇಗೆ?
ತರುಣಮ್ ಬಾನು ಅವರ ಮನೆಯಲ್ಲಿ ಶಿರೀನ್ ಕೆಲಸ ಮಾಡುತ್ತಿದ್ದರು. ಗರ್ಭವತಿಯಾಗಿದ್ದ ಶಿರೀನ್ ಳ ಕಷ್ಟದ ಪರಿಸ್ಥಿತಿ ತಿಳಿದಿದ್ದ ತರುಣಮ್ ಹಾಗೂ ಮನೆಗೆ ಬರ್ತಿದ್ದ ಶಿರೀನ್ ಎರಡನೇ ಪತಿ ಮುಬಾರಕ್ ಗೆ ಮಗು ಮಾರಾಟದ ಬಗ್ಗೆ ಹೇಳಿದ್ದಳು. ಡೆಲಿವರಿ ಬಳಿಕ ಇತ್ತೀಚೆಗೆ ಒಂದು ತಿಂಗಳ ಅಸುಗೂಸಿಗೆ ಜ್ವರ ಕಾಣಿಸಿಕೊಂಡಿತ್ತು. ಆಗ ಪ್ಲಾನ್ ಮಾಡಿ ಆಸ್ಪತ್ರೆಗೆ ಕರೆದೊಯ್ಯುತ್ತೇನೆ ಎಂದು ಮುಬಾರಕ್ ಮಗುವನ್ನು ತೆಗೆದುಕೊಂಡು ಹೋಗಿ ತರುಣಮ್ ಕೈಗೆ ಕೊಟ್ಟಿದ್ದ. ಜ್ವರ ಬಂದಿದ್ದ ಮಗುವನ್ನು ಸಂಬಂಧಿಕರಿಗೆ 1.30 ಲಕ್ಷ ರೂ.ಗೆ ತರುಣಮ್ ಬಾನು ಮಾರಾಟ ಮಾಡಿದ್ದಳು. ಇದಕ್ಕಾಗಿ ಐವತ್ತು ಸಾವಿರ ಮುಂಗಡ ಹಣ ಪಡೆದಿದ್ದಳು.
ಈ ನಡುವೆ ಮಗುವನ್ನು ಕೇಳುತ್ತಿದ್ದ ತಾಯಿಗೆ ಆಸ್ಪತ್ರೆಯಲ್ಲಿದೆ ಎಂದು ಎರಡನೇ ಗಂಡ ಕಥೆ ಕಟ್ಟಿದ್ದ. ಆದರೆ ತರುಣಮ್ ಮಗು ಮಾರಾಟ ಮಾಡಿ ಹಣ ಪಡೆದು ಮುಬಾರಕ್ ಗೆ ಕೊಡದೆ ಸತಾಯಿಸುತ್ತಿದ್ದಳು. ಅಲ್ಲದೆ ಮತ್ತೊಬ್ಬರಿಗೆ ಅದೇ ಮಗುವಿನ ಪೋಟೋ ತೋರಿಸಿ 4.5 ಲಕ್ಷಕ್ಕೆ ಮಾರಾಟದ ಮಾತುಕತೆ ನಡೆಸಿದ್ದಳು. ಬೇರೆಯವರು ಹೆಚ್ಚಿನ ಹಣ ಕೊಡುತ್ತಾರೆ ಎಂದು ಮೊದಲು ಮಾರಾಟ ಮಾಡಿದ್ದವರ ಜೊತೆ ಗಲಾಟೆ ಮಾಡಿದ್ದಳು.
ಮಗು ಇಲ್ಲದೆ ಗಂಡನ ನಿರ್ಲಕ್ಷ್ಯ ಕಂಡು ಮಹಿಳೆ ಕಂಗಾಲಾಗಿದ್ದಳು. ಏನೋ ಗಲಾಟೆಯಾಗುತ್ತಿದೆ ಎಂದು ಸ್ಥಳಕ್ಕೆ ಬಂದ ವಿಲ್ಸನ್ ಗಾರ್ಡನ್ ಪೊಲೀಸರು, ತರುಣಮ್ ವಿಚಾರಣೆ ಮಾಡಿದ್ದರು. ಆದರೆ ಪೊಲೀಸರು ಸ್ಥಳಕ್ಕೆ ಹೋಗುತ್ತಿದ್ದಂತೆ ಮುಬಾರಕ್ ಎಸ್ಕೇಪ್ ಆಗಿದ್ದ. ಬಳಿಕ ಹಣಕ್ಕಾಗಿ ಮಗು ಮಾರಾಟ ಮಾಡಿದ್ದ ಬಗ್ಗೆ ಆರೋಪಿ ತರುಣಮ್ ಬಾಯ್ಬಿಟ್ಟಿದ್ದಳು. ಮಗು ಪತ್ತೆ ಮಾಡಿದ ವಿಲ್ಸನ್ ಗಾರ್ಡನ್ ಪೊಲೀಸರು, ಕಂದಮ್ಮನನ್ನು ತಾಯಿ ಮಡಿಲು ಸೇರುವಂತೆ ಮಾಡಿದ್ದಾರೆ.
ಮಗುವನ್ನ ರಕ್ಷಣೆ ಮಾಡಿ ಅಕ್ರಮವಾಗಿ ಮಗು ಪಡೆದಿದ್ದ ದಂಪತಿಯನ್ನು ಬಂಧಿಸಿದ್ದಾರೆ. ಜೊತೆಗೆ ತರುಣಮ್ ಬಾನು ಕೂಡ ಅರೆಸ್ಟ್ ಆಗಿದ್ದಾಳೆ. ತಲೆ ಮರೆಸಿಕೊಂಡಿರುವ ಮುಬಾರಕ್ ಗಾಗಿ ಹುಡುಕಾಟ ನಡೆಯುತ್ತಿದೆ. ಹದಿನೈದು ವರ್ಷದಿಂದ ಮಕ್ಕಳಿಲ್ಲದಿದ್ದಕ್ಕೆ ಮಗುವನ್ನ ಪಡೆದಿದ್ದಾಗಿ ಮಾಹಿತಿ ನೀಡಿದ್ದಾರೆ.
ತಲಾ 80 ಕೆಜಿ ತೂಕದ ಎರಡು ಬಂಡೂರು ತಳಿಯ ಟಗರುಗಳನ್ನು ಶಂಭು ಅವರು ಒಂದು ವರ್ಷದಿಂದ ಸಾಕಿದ್ದರು. ಇದೀಗ ಮಂಡ್ಯದ ಹಾಲಹಳ್ಳಿ ಬಡಾವಣೆಯ ಸಾಬೂದ್ದೀನ್ ಎಂಬುವವರು ಬಕ್ರೀದ್ ಹಬ್ಬಕ್ಕೆ 1ಲಕ್ಷದ 25 ಸಾವಿರ ರೂಪಾಯಿಯನ್ನು ನೀಡಿ ಖರೀದಿ ಮಾಡಿದ್ದಾರೆ. ಒಂದು ವರ್ಷದಿಂದ ಶಂಭು ಅವರು ಈ ಟಗರುಗಳನ್ನು ಪ್ರೀತಿಯಿಂದ ಸಾಕಿದ್ದರು. ಶಂಭು ಅವರು ಟಗರುಗಳನ್ನು ಮಾರಾಟ ಮಾಡಿದ್ದಕ್ಕಾಗಿ ಸಾಬೂದ್ದೀನ್ ಅವರು ಕೇಕ್ ಕಟ್ ಮಾಡಿಸಿ ಕೃತಜ್ಞತೆ ಸಲ್ಲಿಸಿದ್ದಾರೆ. ಇದನ್ನೂ ಓದಿ: ನಟಿ ಮಯೂರಿ ಮಗನ ಜೊತೆ ಸಮಯ ಕಳೆದ ಜೆಕೆ
ಮುಂಬೈ: ಮದುವೆ ಹಾಗೂ ಮಗುವಿಗೆ ಜನ್ಮ ನೀಡಿದ ಬಳಿಕ ಸಿನಿಮಾದಿಂದ ದೂರ ಉಳಿದಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇದೀಗ ನಟಿ ತಮ್ಮ ಬಟ್ಟೆಗಳನ್ನು ಹರಾಜಿಗಿಡುವ ಮೂಲಕ ಸುದ್ದಿಯಾಗಿದ್ದಾರೆ.
ಹೌದು, ಸದ್ಯ ಹೆಣ್ಣು ಮಗುವಿನ ಆರೈಕೆಯಲ್ಲಿರುವ ನಟಿ ತಮ್ಮ ಬಾಣಂತನದ ಬಟ್ಟೆಗಳನ್ನು ಆನ್ ಲೈನ್ ಮೂಲಕ ಹರಾಜಿಗಿಟ್ಟಿದ್ದಾರೆ. ಈ ಮೂಲಕ ಬಟ್ಟೆಗಳ ಮರು ಬಳಕೆ ಮಾಡಲು ಪ್ರೋತ್ಸಾಹ ನೀಡಿದ್ದಾರೆ. ಇದನ್ನು ಸರ್ಕುಲರ್ ಫ್ಯಾಷನ್ ಟ್ರೆಂಡ್ ಎಂದು ಕರೆದಿರುವ ನಟಿ, ತಾಯಿಯ ಆರೋಗ್ಯನ್ನು ಬೆಂಬಲಿಸುವ ಉದ್ದೇಶದಿಂದ ಇದನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೆ ಇದಕ್ಕೆ ಸ್ನೇಹ ಫೌಂಡೇಶನ್ ಎಂದು ಹೆಸರು ಕೂಡ ಇಟ್ಟಿದ್ದಾರೆ. ಇದನ್ನೂ ಓದಿ: ಹೂ ಮಾರುವ ಹುಡ್ಗಿ ಮತ್ತು ಪಬ್ಲಿಕ್ ಟಿವಿ ಬಿಗ್ ಬುಲೆಟಿನ್‍ನ ಆ ಬ್ರೇಕ್..!
ಈ ಸಂಬಂಧ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿ, ತಾವು ಬಳಸುವ ವಸ್ತುಗಳನ್ನು ಪುನರ್ ಬಳಕೆ ಮಾಡುವ ಟ್ರೆಂಡ್ ಅನುಸರಿಸಿದರೆ ನಮ್ಮ ಪರಿಸರದ ಮೇಲೆ ಇದು ದೊಡ್ಡ ಪರಿಣಾಮ ಬೀರಬಹುದು. ಗರ್ಭಿಣಿಯಾಗಿರುವ ಸಂದರ್ಭದಲ್ಲಿ ನಮ್ಮ ಜೀವನದಲ್ಲಿ ಈ ಹಂತವು ತುಂಬಾ ಮುಖ್ಯವಾದುದು ಅಂತ ನನಗೆ ಅನಿಸಿತು. ಹೀಗಾಗಿ ನಾವೆಲ್ಲರೂ ಒಟ್ಟು ಸೇರಿ ಈ ಕಾರ್ಯವನ್ನು ಆರಂಭಿಸಿಸೋಣ ಎಂದು ಅನುಷ್ಕಾ ಕರೆ ನೀಡಿದ್ದಾರೆ.
ಇಡೀ ದೇಶದಲ್ಲಿನ ಗರ್ಭಿಣಿಯರ ಪೈಕಿ ಶೇ.1ರಷ್ಟು ಮಹಿಳೆಯರು ಮಾತ್ರ ತಮ್ಮ ಬಟ್ಟೆಗಳನ್ನು ಮರು ಬಳಕೆ ಮಾಡಬಲ್ಲರು. ಬಾಣಂತನದ ಬಟ್ಟೆ ಖರೀದಿ ಮಾಡಿದರೆ ನೀರಿನ ಉಳಿತಾಯ ಮಾಡಬಹುದು. ಈ ಮೂಲಕ ಪರಿಸರದಲ್ಲಿ ನಾವು ದೊಡ್ಡ ಬದಲಾವಣೆ ತರಬಹುದು ಎಂದು ಅನುಷ್ಕಾ ಅಭಿಪ್ರಾಯ ಪಟ್ಟಿದ್ದಾರೆ. ಇದೇ ವರ್ಷ ಜನವರಿ 11ರಂದು ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಮಗಳಿಗೆ ವಿರುಷ್ಕಾ ದಂಪತಿ ವಮಿಕಾ ಎಂದು ಹೆಸರಿಟ್ಟಿದ್ದಾರೆ.