Tag: sale

  • ಹಸುಗೂಸುಗಳ ಮಾರಾಟ ದಂಧೆ- ಕೊಂಡವರು, ಮಾರಾಟ ಮಾಡಿದವರ ಪತ್ತೆಗೆ ಸಿಸಿಬಿ ಶೋಧ

    ಹಸುಗೂಸುಗಳ ಮಾರಾಟ ದಂಧೆ- ಕೊಂಡವರು, ಮಾರಾಟ ಮಾಡಿದವರ ಪತ್ತೆಗೆ ಸಿಸಿಬಿ ಶೋಧ

    ಬೆಂಗಳೂರು: ಹಸುಗೂಸುಗಳ ಮಾರಾಟ ಜಾಲವನ್ನು ಪತ್ತೆ ಮಾಡಿರುವ ಸಿಸಿಬಿ ಪೊಲೀಸರಿಗೆ (CCB Police) ಹೊಸದೊಂದು ಟಾಸ್ಕ್ ಶುರುವಾಗಿದೆ.. ಸದ್ಯ ಬಂಧಿತರಾಗಿರುವ ಆರೋಪಿಗಳೆಲ್ಲಾ ತಮಿಳುನಾಡು, ಆಂಧ್ರಪ್ರದೇಶದವರು ಅನ್ನೋದು ಗೊತ್ತಾಗಿದೆ.

    ಕರ್ನಾಟದಲ್ಲಿ ಮಹಾಲಕ್ಷ್ಮೀ ಅನ್ನೋ ಮಹಿಳೆ ಇಲ್ಲಿ ಹಸುಗೂಸುಗಳನ್ನು ಖರೀದಿ ಮಾಡಿ ಬೇರೆ ಬೇರೆ ರಾಜ್ಯದವರಿಗೆ ಎಂಟರಿಂದ ಹತ್ತು ಲಕ್ಷದ ವರೆಗೆ ಹಣಕ್ಕೆ ಮಾರಾಟ ಮಾಡಿದ್ದಾಳೆ. ಇದರಲ್ಲಿ ಬಹುತೇಕರು ಅರ್ಥಿಕವಾಗಿ ಕಷ್ಟದಲ್ಲಿರುವ ಮಹಿಳೆಯರನ್ನೇ ಟಾರ್ಗೆಟ್ ಮಾಡಿದ್ದಾರೆ. ಇನ್ನೂ ಕೆಲವರು ಮಕ್ಕಳು ಬೇಡ ಅಂತಾ ಅಬಾರ್ಷನ್‍ಗೆ ಬಂದವರನ್ನು ಮನವೊಲಿಸಿ ಕಂದಮ್ಮಗಳನ್ನು ತೆಗೆದುಕೊಂಡು ಲಕ್ಷ ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಈ ಪ್ರಕರಣದಲ್ಲಿ ಎಂಟು ಜನರ ಬಂಧನವಾಗಿದ್ದು, ಅವರ ಬ್ಯಾಂಕ್ ಡಿಟೇಲ್ಸ್ ಪರಿಶೀಲನೆ ಮಾಡಿದ ವೇಳೆ ಇವರೆಲ್ಲಾ ಕ್ಯಾಶ್ ಅಂಡ್ ಕ್ಯಾರಿ ವ್ಯವಹಾರ ಮಾಡಿರೋದು ಬೆಳಕಿಗೆ ಬಂದಿದೆ. ಆ ಹಿನ್ನೆಲೆಯಲ್ಲಿ ಅವರ ಮೊಬೈಲ್‍ಗಳ ಪರಿಶೀಲನೆ ನಡೆಸಿದ ವೇಳೆ ಒಂದಷ್ಟು ಇಂಟಸ್ಟಿಂಗ್ ವಿಚಾರಗಳು ಗೊತ್ತಾಗಿವೆ.

    ಹಸೂಗೂಸುಗಳ ಮಾರಾಟ ಜಾಲದಲ್ಲಿ ಯುವತಿಯರ ಅಂಡಾಣು ಖರೀದಿ ಕೂಡ ಮಾಡಲಾಗಿದೆ. ಈ ಪ್ರಕ್ರಿಯೆಗೆ ವೈದ್ಯರು ಮತ್ತು ಆಸ್ಪತ್ರೆಗಳ ಅವಶ್ಯತೆ ಇದ್ದು ಆ ವೈದ್ಯರು ಮತ್ತು ಆಸ್ಪತ್ರೆಗಳು ಯಾವುವು ಅನ್ನೋದು ತನಿಖೆ ನಡೆಸಬೇಕಿದೆ. ಜೊತೆಗೆ ಹಸುಗೂಸುಗಳನ್ನು ತೆಗೆದುಕೊಂಡವರಿಗೆ ನಿಜಕ್ಕೂ ಮಕ್ಕಳು ಇಲ್ದೇ ಖರೀದಿ ಮಾಡಿದ್ದಾರಾ..? ಅಥವಾ ಮಾಟ ಮಂತ್ರಕ್ಕಾಗಿ, ಭೀಕ್ಷಾಟನೆಗಾಗಿ ಬಳಸಿದ್ಧರಾ ಅನ್ನೊದು ಅನುಮಾನ ಅಧಿಕಾರಿಗಳಿಗೆ ಮೂಡಿದೆ. ನಗರದ ಸಿಗ್ನಲ್‍ಗಳಲ್ಲಿ ಎಳೆ ಮಕ್ಕಳನ್ನು ಇಟ್ಕೊಂಡು ಭೀಕ್ಷೆ ಬೀಡುವ ಮಹಿಳೆಯರು ಕೂಡ ಇಂತಹ ಕಂದಮ್ಮಗಳನ್ನು ಬಳಸಿರುವ ಶಂಕೆ ಇದೆ. ಹಾಗಾಗಿ ಸಿಸಿಬಿ ಪೊಲೀಸರು ಮಾರಾಟ ಮಾಡಿದವರ್ಯರು, ತೆಗೆದುಕೊಂಡವ್ಯಾರು ಅನ್ನೋದರ ಪತ್ತೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಮಕ್ಕಳ ಮಾರಾಟ ಪ್ರಕರಣ; ಯಾರ್ಯಾರಿಗೆ ಯಾವ್ಯಾವ ಪಾತ್ರ? – ಇಲ್ಲಿದೆ ವಿವರ

    ಸದ್ಯ ಅರವತ್ತು ಹಸುಗೂಸುಗಳನ್ನು ಮಾರಾಟ ಮಾಡಿರುವ ಬಗ್ಗೆ ಸಾಕ್ಷ್ಯಾಗಳು ಸಿಕ್ಕಿದ್ದು, ಅದರಲ್ಲಿ ಹತ್ತು ಮಕ್ಕಳ ಪೋಷಕರನ್ನು ಪತ್ತೆ ಮಾಡಲಾಗಿದೆ.. ಸಿಸಿಬಿ ಅಧಿಕಾರಿಗಳ ತನಿಖೆ ನಂತರವಷ್ಟೇ, ಹಸುಗೂಸುಗಳ ಹಿಂದಿನ ಕರಾಳ ಸತ್ಯ ಹೊರಬೀಳಬೇಕಿದೆ.

  • ಭಾರತದಲ್ಲಿ ಐಫೋನ್ 15 ಸೇಲ್ ಶುರು- ಖರೀದಿಗೆ ಮುಂಜಾನೆ 4 ಗಂಟೆಗೇ ಕ್ಯೂ ನಿಂತ ಗ್ರಾಹಕರು

    ಭಾರತದಲ್ಲಿ ಐಫೋನ್ 15 ಸೇಲ್ ಶುರು- ಖರೀದಿಗೆ ಮುಂಜಾನೆ 4 ಗಂಟೆಗೇ ಕ್ಯೂ ನಿಂತ ಗ್ರಾಹಕರು

    ನವದೆಹಲಿ: ಆಪಲ್ (Apple) ತನ್ನ ಲೇಟೆಸ್ಟ್ ಐಫೋನ್ 15 ಸೀರೀಸ್ (iPhone 15 Series) ಮಾರಾಟವನ್ನು ಭಾರತದಲ್ಲಿ ಶುಕ್ರವಾರ ಅಧಿಕೃತವಾಗಿ ಪ್ರಾರಂಭಿಸಿದೆ. ಉದ್ಘಾಟನಾ ದಿನದಂದೇ ಐಫೋನ್ ಖರೀದಿಗಾಗಿ ಗ್ರಾಹಕರು ಐಫೋನ್ ಸ್ಟೋರ್‌ಗಳಲ್ಲಿ ತಮ್ಮ ತುದಿಗಾಲಿನಲ್ಲಿ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಬೆಳ್ಳಂಬೆಳಗ್ಗೆ ಗ್ರಾಹಕರು ದೆಹಲಿ (Delhi) ಹಾಗೂ ಮುಂಬೈನ (Mumbai) ಸ್ಟೋರ್‌ಗಳಲ್ಲಿ ಕ್ಯೂ ನಿಂತಿದ್ದು, ಅದರ ಫೀಚರ್‌ಗಳನ್ನು ಅನುಭವಿಸಲು ಮೊದಲಿಗರಾಗುವ ಆಶಯವನ್ನು ವ್ಯಕ್ತಪಡಿಸಿದ್ದಾರೆ.

    ಮುಂಬೈನ ಬಿಕೆಸಿ ಮತ್ತು ನವದೆಹಲಿಯ ಸಾಕೇತ್‌ನಲ್ಲಿರುವ ಆಪಲ್ ಸ್ಟೋರ್‌ಗಳಲ್ಲಿ ಮುಂಜಾನೆಯಿಂದಲೇ ಉದ್ದನೆಯ ಸರದಿ ಸಾಲುಗಳು ಕಂಡುಬಂದಿದೆ. ಮಳಿಗೆಗಳು ತೆರೆಯುವ ಮೊದಲೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ನವದೆಹಲಿಯ ಸಾಕೇತ್‌ನ ಸೆಲೆಕ್ಟ್ ಸಿಟಿವಾಕ್ ಮಾಲ್‌ನಲ್ಲಿನ ಆಪಲ್ ಸ್ಟೋರ್‌ನಲ್ಲಿ ಮೊದಲ ಗ್ರಾಹಕ ರಾಹುಲ್, ನಾನು ಐಫೋನ್ 15 ಪ್ರೊ ಮ್ಯಾಕ್ಸ್ ಅನ್ನು ಖರೀದಿಸಿದ್ದು, ನಾನು ಮುಂಜಾನೆ 4 ಗಂಟೆಯಿಂದ ಸರದಿಯಲ್ಲಿದ್ದೆ ಮತ್ತು ನಂತರ ಫೋನ್ ಖರೀದಿಸಿದೆ ಎಂದು ಹೇಳಿದ್ದಾರೆ.

    ಆಪಲ್ ಇಂಡಿಯಾ ಪ್ರಸ್ತುತ ಐಫೋನ್ 15 ಪ್ರೊ ಹಾಗೂ ಪ್ರೊ ಮ್ಯಾಕ್ಸ್ ಮೇಲೆ 6,000 ರೂ. ಹಾಗೂ ಐಫೋನ್ 15 ಮತ್ತು 15 ಪ್ಲಸ್ ನಲ್ಲಿ 5,000 ರೂ. ರಿಯಾಯಿತಿಯನ್ನು ಪಡೆಯಲು ತಮ್ಮ ವೆಬ್‌ಸೈಟ್‌ನಲ್ಲಿ ಅರ್ಹ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಬಳಸಿ ಖರೀದಿಸಲು ಸೂಚಿಸಿದೆ.

    ಈ ಮೂಲಕ ಐಫೋನ್ 15ನ ಬೆಲೆ 79,900 ರೂ.ಯಿಂದ 74,900 ರೂ.ಗೆ ಕಡಿಮೆಯಾಗಿದೆ. 89,900 ರೂ.ಯ ಐಫೋನ್ 15 ಪ್ಲಸ್ 84,900 ರೂ.ಗೆ ಲಭ್ಯವಿದೆ. ಐಫೋನ್ 15 ಪ್ರೊ 1,34,900 ರೂ.ಯಿಂದ 1,28,900 ರೂ.ಗೆ ಕಡಿಮೆಯಾಗಿದೆ. ಐಫೋನ್ 15 ಪ್ರೊ ಮ್ಯಾಕ್ಸ್ 1,59,900 ರೂ. ಯಿಂದ 1,53.900 ರೂ. ಗೆ ರಿಯಾಯಿತಿಯಾಗಿದೆ. ಇದನ್ನೂ ಓದಿ: ಐಫೋನ್‌ನಲ್ಲಿದೆ ಭಾರತದ ನಾವಿಕ್ – ಏನಿದು ಸ್ವದೇಶಿ ಜಿಪಿಎಸ್‌ ವ್ಯವಸ್ಥೆ?

    ಗ್ರಾಹಕರು ಇಎಂಐ ಮಾಸಿಕ ಕಂತು ಯೋಜನೆಗಳಿಂದ ಐಫೋನ್ ಖರೀದಿ ಆಯ್ಕೆ ಮಾಡಬಹುದು. ಆಯ್ದ ಬ್ಯಾಂಕ್‌ಗಳಿಂದ 3 ಅಥವಾ 6 ತಿಂಗಳುಗಳಲ್ಲಿ ಯಾವುದೇ ವೆಚ್ಚವಿಲ್ಲದ ಇಎಂಐ ಯೋಜನೆಗಳ ಆಯ್ಕೆಯನ್ನು ಸಹ ಪಡೆಯಬಹುದು. ಗ್ರಾಹಕರು ತಮ್ಮ ಆಪಲ್ ಸಾಧನವನ್ನು ತಮ್ಮ ಪ್ರಸ್ತುತ ಸ್ಮಾರ್ಟ್ಫೋನ್‌ನೊಂದಿಗೆ ವಿನಿಮಯ ಮಾಡಿಕೊಳ್ಳುವ ಮೂಲಕ ಮತ್ತಷ್ಟು ರಿಯಾಯಿತಿಯನ್ನು ಪಡೆಯುವ ಟ್ರೇಡ್ ಇನ್ ಸ್ಕೀಮ್ ಲಭ್ಯವಿದೆ. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಭಾರತವನ್ನ ಪ್ರಚೋದಿಸುವುದಿಲ್ಲ; ತಣ್ಣಗಾದ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಪಾಪ್ ಕಾರ್ನಾ’ ಮಾರಿ ಸಖತ್ ಟ್ರೋಲ್ ಆದ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್

    ‘ಪಾಪ್ ಕಾರ್ನಾ’ ಮಾರಿ ಸಖತ್ ಟ್ರೋಲ್ ಆದ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್

    ಬಾಲಿವುಡ್ ನಟಿ ದಿವಗಂತ ಶ್ರೀದೇವಿ (Sridevi) ಪುತ್ರಿ ಜಾನ್ವಿ ಕಪೂರ್ ಸಖತ್ ಟ್ರೋಲ್ ಆಗುತ್ತಿದ್ದಾರೆ. ಟ್ರೋಲಿಗರು ಅವರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಜಾನ್ವಿ ಕಪೂರ್ ಇತ್ತೀಚಿಗಷ್ಟೇ ಮಿಲಿ ಚಿತ್ರದ ಪ್ರಚಾರಕ್ಕಾಗಿ ದೆಹಲಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರು ಮಲ್ಟಿಫ್ಲೆಕ್ಸ್‍ ನಲ್ಲಿ ಪಾಪ್ ಕಾರ್ನ್ (Popcorn) ಮಾರಾಟ ಮಾಡಿದ್ದರು. ಸಿನಿಮಾದ ಈ ವಿಭಿನ್ನ ಪ್ರಚಾರಕ್ಕೆ ಅಭಿಮಾನಿಗಳು ಮೆಚ್ಚಿಕೊಂಡಿದ್ದರೆ, ಉಳಿದಂತೆ ಟ್ರೋಲಿಗರು ಕಾಲೆಳೆದಿದ್ದರು.

    ಜಾನ್ವಿ ಕಪೂರ್ (Janhvi Kapoor) ಸದ್ಯ ಮಿಲಿ ಸಿನಿಮಾದ ಪ್ರಚಾರದಲ್ಲಿ ತೊಡಗಿದ್ದಾರೆ. ಈಗಾಗಲೇ ಜಾನ್ವಿ ಕೆಲ ಸಿನಿಮಾಗಳನ್ನು ಮಾಡಿದ್ದರು, ಅವರಿಗೆ ಹೇಳಿಕೊಳ್ಳುವಂತಹ ಗೆಲುವು ಸಿಕ್ಕಿಲ್ಲ. ಮಿಲಿ ಸಿನಿಮಾ ಅವರ ವೃತ್ತಿ ಬದುಕಿಗೆ ಬ್ರೇಕ್ ನೀಡಬಹುದು ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಅವರು ಭರ್ಜರಿ ಪ್ರಚಾರವನ್ನು ಮಾಡುತ್ತಿದ್ದಾರೆ. ಈ ಸಿನಿಮಾ ಇದೇ ನವೆಂಬರ್ 4 ರಂದು ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಇದನ್ನೂ ಓದಿ: ಬೀದಿ ನಾಯಿ ರಾನುಗೆ ʻಐ ಲವ್‌ ಯೂʼ ಹೇಳಿದ ರಮ್ಯಾ: ರಾನು ಜೊತೆಗಿನ ವರ್ಷದ ನೆನಪು

    ಸಿನಿಮಾ ಪ್ರಚಾರಕ್ಕಾಗಿ ಪಾಪ್ ಕಾರ್ನ್ ಮಾರೋದು, ಮತ್ತೊಂದು ಮಾಡೋದು ಸರಿಯಾದದ್ದು ಅಲ್ಲ. ಖ್ಯಾತ ನಟಿ ಮತ್ತು ಖ್ಯಾತ ನಿರ್ಮಾಪಕರ ಪುತ್ರಿಯಾಗಿ ಜಾನ್ವಿ ಪಾಪ್ ಕಾರ್ನ್ ಮಾರುವುದು ಒಂದು ರೀತಿಯಲ್ಲಿ ಗಿಮಿಕ್. ಸಿನಿಮಾ ಚೆನ್ನಾಗಿದ್ದಾರೆ ಟಿಕೆಟ್ ಮಾರಬಹುದು, ಪಾಪ್ ಕಾರ್ನ್ ಅಲ್ಲ ಎಂದು ಕೆಲವರು ಟ್ರೋಲ್ ಮಾಡಿದ್ದಾರೆ. ಈ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲದೇ ಕೆಲವರು ಇನ್ನೂ ಕೆಟ್ಟದ್ದಾಗಿ ಕಾಮೆಂಟ್ ಕೂಡ ಮಾಡಿದ್ದರು.

    ಇದು ಹೆಲನ್ ಸಿನಿಮಾದ ರಿಮೇಕ್ ಚಿತ್ರವಾಗಿದ್ದು, ಇದೀಗ ಹಿಂದಿಯಲ್ಲಿ ರಿಮೇಕ್ ಆಗಿದೆ. ಈ ಸಿನಿಮಾವನ್ನು ಜಾನ್ವಿ ತಂದೆ ಬೋನಿ ಕಪೂರ್ (Boney Kapoor) ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಟ್ರೇಲರ್ ರಿಲೀಸ್ ಮಾಡಿದ್ದು, ಒಳ್ಳೆಯ ಮಾತುಗಳು ಕೂಡ ಕೇಳಿ ಬಂದಿವೆ. ಸನ್ನಿ ಕೌಶಲ್ಯ ಹಾಗೂ ಮನೋಜ್ ಪಾಹ್ವಾ ಸೇರಿದಂತೆ ಹಲವರು ಈ ಸಿನಿಮಾದ ತಾರಾಗಣದಲ್ಲಿ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಣದಾಸೆಗೆ ಮಗು ಮಾರಾಟ ಮಾಡಿದ ತಂದೆ – ಪ್ರಕರಣ ಬಯಲಿಗೆ ತಂದ ದೀಪಾ ಬುದ್ದೆ

    ಹಣದಾಸೆಗೆ ಮಗು ಮಾರಾಟ ಮಾಡಿದ ತಂದೆ – ಪ್ರಕರಣ ಬಯಲಿಗೆ ತಂದ ದೀಪಾ ಬುದ್ದೆ

    ಚಾಮರಾಜನಗರ: ಹಣ ಅಂದ್ರೆ ಹೆಣ ಕೂಡಾ ಬಾಯಿ ಬಿಡುತ್ತಂತೆ. ಆದರೆ ಮನುಷ್ಯತ್ವ ಮರೆಯಾಗಿರುವ ಇತ್ತೀಚಿನ ದಿನಗಳಲ್ಲಿ ಹಣಕ್ಕಾಗಿ ತನ್ನ ಮಕ್ಕಳನ್ನೇ ಮಾರಾಟ (Child Sale) ಮಾಡಿದಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇಂತಹದ್ದೇ ಪ್ರಕರಣ ಗಡಿಜಿಲ್ಲೆ ಚಾಮರಾಜನಗರದಲ್ಲಿ (Chamarajanagar) ಬೆಳಕಿಗೆ ಬಂದಿದೆ.

    ನಗರದ ನಿವಾಸಿ ಬಸವ, ನಾಗವೇಣಿ ಎಂಬಾಕೆಯನ್ನು ಮದುವೆಯಾಗಿದ್ದು, ದಂಪತಿಗೆ 7 ವರ್ಷದ ಒಂದು ಗಂಡು ಮಗುವಿದೆ. 25 ದಿನಗಳ ಹಿಂದೆ ನಾಗವೇಣಿ ಮತ್ತೊಂದು ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ 2ನೇ ಮಗು ಜನಿಸಿದ್ದೇ ತಡ. ಬಸವ ಆ ಹಸೂಗೂಸನ್ನು 50 ಸಾವಿರ ರೂ. ಗೆ ಬೇರೆಯವರಿಗೆ ಮಾರಾಟ ಮಾಡಿದ್ದಾನೆ. ಮಗು ಮಾರಾಟ ಮಾಡುವುದಕ್ಕೆ ನಾಗವೇಣಿ ವಿರೋಧ ಮಾಡಿದ್ದಾಳೆ. ಆಗ ಬಸವ ಮಗು ಮಾರಾಟ ಮಾಡಲು ನೀನು ಒಪ್ಪದಿದ್ದರೆ ಎಲ್ಲರನ್ನೂ ಬಿಟ್ಟು ಎಲ್ಲಾದರೂ ದೂರ ಹೋಗಿಬಿಡುತ್ತೇನೆ ಎಂದು ಹೆದರಿಸಿದ್ದಾನೆ.

    ಗಂಡನ ಬೆದರಿಕೆಗೆ ಭಯಬಿದ್ದ ನಾಗವೇಣಿ ಆ ಮಗುವನ್ನು ಮಾರಾಟ ಮಾಡಲು ಒಪ್ಪಿದ್ದಾಳೆ. ಆದರೆ ಈ ಪ್ರಕರಣವನ್ನು ಲಿಂಗತ್ವ ಅಲ್ಪಸಂಖ್ಯಾತೆ ದೀಪಾ ಬುದ್ದೆ ಬೆಳಕಿಗೆ ತಂದಿದ್ದಾರೆ. ಈ ಬಗ್ಗೆ ತಂದೆ ಬಸವನನ್ನು ಕೇಳಿದರೆ ಮಗು ಕೊಟ್ಟಿರುವುದು ಸತ್ಯ. ನನ್ನ ಮಡದಿ ಹಾಗೂ ನನಗೆ ಅನಾರೋಗ್ಯವಿದ್ದು, ಈ ಹಿನ್ನಲೆ ಕೊಟ್ಟಿದ್ದೇವೆ ಎಂದಿದ್ದಾನೆ. ಇದನ್ನೂ ಓದಿ: ಕಣ್ಣಿನ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಪುಟ್ಟ ಕಂದಮ್ಮನ ನೆರವಿಗೆ ನಿಂತ ಸಚಿವೆ ಜೊಲ್ಲೆ

    ಲಿಂಗತ್ವ ಅಲ್ಪಸಂಖ್ಯಾತ ಸಂಘಟನೆ ಸಮತಾ ಸೊಸೈಟಿಯ ದೀಪಾ ಬುದ್ದೆ ಅವರು ಅಧ್ಯಯನ ಮಾಡಲು ಹೋದಾಗ ಮಗು ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಗುವನ್ನು ಚಾಮರಾಜನಗರದ ಗಾಳೀಪುರ ಮೂಲದ ವ್ಯಕ್ತಿಯೊಬ್ಬನ ಮೂಲಕ 50 ಸಾವಿರ ರೂ.ಗೆ ಮಾರಾಟ ಮಾಡಿ ಖಾಲಿ ಹಾಳೆಗೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಮಗುವಿನ ತಾಯಿ ಲೈಂಗಿಕ ಅಲ್ಪಸಂಖ್ಯಾತೆಗೆ ತಿಳಿಸಿದ್ದಾಳೆ.

    ಕೂಡಲೇ ದೀಪಾ ಬುದ್ದೆ ಈ ವಿಚಾರವನ್ನು ಪೊಲೀಸ್ ಅಧಿಕಾರಿಗಳಿಗೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ವಿಚಾರ ತಿಳಿದ ಪೊಲೀಸರು ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಸವ ತಾನು ಮಗು ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಮನೆ ಕಾಯಲೆಂದು ಎರಡು ನಾಯಿ ಸಾಕಿದ್ರೂ ಹಾಡಹಗಲೇ ಕಳ್ಳತನ

    ಪ್ರಕರಣ ದಾಖಲಿಸಿಕೊಂಡಿರುವ ಮಕ್ಕಳ ರಕ್ಷಣಾ ಇಲಾಖೆಯ ಅಧಿಕಾರಿಗಳು ಸದ್ಯ ನಾಗವೇಣಿ ಹಾಗೂ ಆಕೆಯ ಮೊದಲ ಮಗುವನ್ನು ಬಾಲಮಂದಿರಕ್ಕೆ ಸೇರಿಸಿದ್ದಾರೆ. ಅಲ್ಲದೇ ಮಗುವನ್ನು ಮಾರಾಟ ಮಾಡಿಸಿದ ಹಾಗೂ ಮಗುವನ್ನು ಕೊಂಡವರ ಹುಡುಕಾಟದಲ್ಲಿ ನಿರತರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಾರಾಟಕ್ಕಿದ್ದಾನೆ ವರ – ಮಾರುಕಟ್ಟೆಯಲ್ಲಿ ಹುಡುಗಿಯರಿಗೆ ಸಿಕ್ತಾನೆ ವರ

    ಮಾರಾಟಕ್ಕಿದ್ದಾನೆ ವರ – ಮಾರುಕಟ್ಟೆಯಲ್ಲಿ ಹುಡುಗಿಯರಿಗೆ ಸಿಕ್ತಾನೆ ವರ

    ಪಾಟ್ನಾ: ಮಾರುಕಟ್ಟೆಯಲ್ಲಿ ದಿನಸಿ ಸಾಮಾಗ್ರಿ, ಹಣ್ಣು, ತರಕಾರಿಯನ್ನು ಮಾರಾಟ ಮಾಡುವುದು ಸಾಮಾನ್ಯ. ಆದರೆ ಈಗ ನಾವು ಹೇಳುತ್ತಿರುವ ವಿಶೇಷ ಮಾರುಕಟ್ಟೆಯಲ್ಲಿ ಹುಡುಗಿಯರು ತಮ್ಮ ವರನನ್ನು ಖರೀದಿಸಬಹುದು. ಏನು ವರನನ್ನು ಖರೀದಿಸಲು ಮಾರುಕಟ್ಟೆ ಇದ್ಯಾ ಎಂದು ಎಲ್ಲರೂ ಅಚ್ಚರಿ ಪಡಬಹುದು. ಆದರೆ ಇದು ನಿಜ. ಬಿಹಾರದಲ್ಲಿ ಈ ರೀತಿಯ ಮಾರುಕಟ್ಟೆ ಇದೆ.

    ಬಿಹಾರದ ಮಧುಬನಿ ಜಿಲ್ಲೆಯ ಒಂದು ಮಾರುಕಟ್ಟೆಯು ವಧುಗಳಿಗೆ ವರನನ್ನು ಮಾರಾಟ ಮಾಡಲು ಮೀಸಲಾಗಿದೆ. ಸ್ಥಳೀಯ ಮಾರುಕಟ್ಟೆ ಪ್ರದೇಶದಲ್ಲಿ ಮರಗಳ ಅಡಿಯಲ್ಲಿ 9 ದಿನಗಳ ಅವಧಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತೆ. ಈ ಸಂಪ್ರದಾಯವು ಸುಮಾರು 700 ವರ್ಷಗಳಿಂದಲೂ ಇದ್ದೂ ಈಗಲೂ ಆಚರಣೆಯಲ್ಲಿದೆ. ಇದನ್ನೂ ಓದಿ: ಹರ್ ಘರ್ ತಿರಂಗ: ರಾಷ್ಟ್ರಧ್ವಜವನ್ನ ಉಚಿತವಾಗಿ ಮನೆ ಬಾಗಿಲಿಗೆ ತಲುಪಿಸಲಿದೆ ಭಾರತೀಯ ಅಂಚೆ ಸೇವೆ

     
    ಸ್ಥಳೀಯವಾಗಿ ‘ಸೌರತ್ ಸಭಾ’ ಎಂದು ಕರೆಯಲ್ಪಡುವ ಮೈಥಿಲ್ ಬ್ರಾಹ್ಮಣ ಸಮುದಾಯದ ಜನರು ಜಿಲ್ಲೆಯಾದ್ಯಂತ ತಮ್ಮ ಹೆಣ್ಣುಮಕ್ಕಳೊಂದಿಗೆ ವರನನ್ನು ಆಯ್ಕೆ ಮಾಡಲು ಈ ಮಾರುಕಟ್ಟೆಗೆ ಬರುತ್ತಾರೆ.

    ಸಾಂಪ್ರದಾಯಿಕ ಕಡುಗೆಂಪು ಬಣ್ಣದ ಧೋತಿ ಮತ್ತು ಕುರ್ತಾ ಅಥವಾ ಜೀನ್ಸ್ ಮತ್ತು ಶರ್ಟ್‍ಗಳನ್ನು ಧರಿಸಿ ಮಾರುಕಟ್ಟೆಯಲ್ಲಿ ಸಾವಿರಾರು ವರರು ತಮ್ಮ ಪೋಷಕರೊಂದಿಗೆ ಹಾಜರಿರುತ್ತಾರೆ. ಪ್ರತಿಯೊಬ್ಬರು ಅವರ ಹಿನ್ನೆಲೆ ಮತ್ತು ಶೈಕ್ಷಣಿಕ ಅರ್ಹತೆಗಳ ಆಧಾರದ ಮೇಲೆ ವರನ ಬೆಲೆ ನಿಗದಿಪಡಿಸಲಾಗುತ್ತದೆ.

    ವರನನ್ನು ಆಯ್ಕೆ ಮಾಡುವ ಮೊದಲು, ವಧುವಿನ ಕುಟುಂಬ ವರನ ಅರ್ಹತೆ ಮತ್ತು ಅವರ ಕುಟುಂಬದ ಹಿನ್ನೆಲೆಯನ್ನು ಪರಿಶೀಲಿಸುತ್ತಾರೆ. ಅವರು ಜನನ ಪ್ರಮಾಣಪತ್ರ, ಶಾಲಾ ಪ್ರಮಾಣಪತ್ರ ಇತ್ಯಾದಿ ಪುರಾವೆಗಳನ್ನು ಸಹ ಕೇಳುತ್ತಾರೆ. ವಧು, ವರನನ್ನು ಆಯ್ಕೆ ಮಾಡಿದ ನಂತರ, ಮುಂದಿನ ಪ್ರಕ್ರಿಯೆಗಳಿಗಾಗಿ ಕುಟುಂಬಗಳ ನಡುವೆ ಸಂಭಾಷಣೆಯನ್ನು ಪ್ರಾರಂಭಿಸಲಾಗುತ್ತದೆ. ವರನ ಆಯ್ಕೆಯಾದ ತಕ್ಷಣ ಹುಡುಗಿಯ ಮನೆಯವರು ಮದುವೆಯ ವಿಧಿವಿಧಾನಗಳನ್ನು ಪೂರ್ಣಗೊಳಿಸುತ್ತಾರೆ. ಇದನ್ನೂ ಓದಿ:  ನಿರಂತರ ಜಿಟಿ ಜಿಟಿ ಮಳೆ – ಮನೆ ಗೋಡೆ ಕುಸಿದು ಬಿದ್ದು ಯುವಕ ಸಾವು 

    ಹಿನ್ನೆಲೆ
    ಸ್ಥಳೀಯ ನಂಬಿಕೆಗಳ ಪ್ರಕಾರ, ಈ ಆಚರಣೆಯು ಕರ್ನಾಟ್ ರಾಜವಂಶದ ಅವಧಿಯಲ್ಲಿ ಅಸ್ತಿತ್ವಕ್ಕೆ ಬಂದಿತು. ವಿಭಿನ್ನ ‘ಗೋತ್ರಗಳ’ ಜನರ ನಡುವೆ ವಿವಾಹಗಳನ್ನು ಸುಲಭಗೊಳಿಸಲು ರಾಜಾ ಹರಿ ಸಿಂಗ್ ಇದನ್ನು ಪ್ರಾರಂಭಿಸಿದರು. ಮದುವೆಗಳನ್ನು ವರದಕ್ಷಿಣೆ ರಹಿತವಾಗಿ ಮಾಡುವುದು ಇನ್ನೊಂದು ಉದ್ದೇಶವಾಗಿತ್ತು. ಆದರೆ, ಈ ಪ್ರದೇಶದಲ್ಲಿ ಮಾತ್ರ ಕಳೆದ 700 ವರ್ಷಗಳಿಂದಲೂ ಈ ಪದ್ದತಿಯನ್ನು ಮುಂದುವರಿಸಿಕೊಂಡು ಬರುತ್ತಿರುವುದು ವಿಶೇಷವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಬಡವರಿಗಲ್ಲ, ರೈಸ್ ಮಿಲ್‍ಗಳಿಗೆ ಸೇರುತ್ತಿದೆ ‘ಅನ್ನಭಾಗ್ಯ’ ಅಕ್ಕಿ

    ಬಡವರಿಗಲ್ಲ, ರೈಸ್ ಮಿಲ್‍ಗಳಿಗೆ ಸೇರುತ್ತಿದೆ ‘ಅನ್ನಭಾಗ್ಯ’ ಅಕ್ಕಿ

    ಕೋಲಾರ: ಬಡವರ ಹಸಿವು ನೀಗಿಸಲು ಸರ್ಕಾರ ಕೊಡುತ್ತಿರುವ ಅನ್ನಭಾಗ್ಯ ಯೋಜನೆಯ ಅಕ್ಕಿ ಜಿಲ್ಲೆಯ ಬಂಗಾರಪೇಟೆಯ ಕಾಳಸಂತೆಯಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿದೆ.

    ಮಾರಾಟವಾದ ಅಕ್ಕಿಯು ಅಕ್ರಮವಾಗಿ 15ಕ್ಕೂ ಹೆಚ್ಚು ರೈಸ್ ಮಿಲ್‍ಗಳನ್ನು ಸೇರುತ್ತಿವೆ. ಹಲವು ಬಾರಿ ದಾಳಿ ನಡೆದರೂ ದಂಧೆ ಮಾತ್ರ ನಿಂತಿಲ್ಲ. ಈ ಹಿಂದೆ ಬಂಗಾರಪೇಟೆ ರೈಲ್ವೆ ನಿಲ್ದಾಣದಲ್ಲಿ 2017ರಲ್ಲಿ ಟನ್‍ಗಟ್ಟಲೆ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಸೀಜ್ ಮಾಡಿದ್ದರು. ಇದನ್ನೂ ಓದಿ: ಅಮೆರಿಕಾದ ಶಾಲೆಯಲ್ಲಿ ಶೂಟೌಟ್-18 ವಿದ್ಯಾರ್ಥಿಗಳು ಸೇರಿ 21 ಮಂದಿ ದುರ್ಮರಣ

    ಕಳೆದ ವರ್ಷ ಪಿಆರ್‍ಎಸ್ ಆಗ್ರೋಟೆಕ್ ರೈಸ್ ಮಿಲ್ ಮೇಲೆ ದಾಳಿ ಮಾಡಿ, ಸುಮಾರು 8,497 ಕ್ವಿಂಟಾಲ್‍ನಷ್ಟು ಅಂದರೆ 1 ಕೋಟಿ 7 ಲಕ್ಷ ಮೌಲ್ಯದ ಅಕ್ರಮ ಪಡಿತರ ಅಕ್ಕಿಯನ್ನು ಹರಾಜು ಮಾಡಿದ್ದರು. ಕೋರ್ಟ್ ಆದೇಶದಂತೆ ಕೆಲ ರೈಸ್‍ಮಿಲ್‍ಗಳಿಗೆ ಬೀಗ ಹಾಕಲಾಗಿದೆ. ಆದರೂ ಕೆಲ ಮಿಲ್ ಮಾಲೀಕರು ಭಯಪಡದೇ ಪಡಿತರ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿ ಮಾಡುತ್ತಿದ್ದಾರೆ.  ಇದನ್ನೂ ಓದಿ: ಮಂಗಳೂರು ದರ್ಗಾ ವಿವಾದ – ಇಂದು ತಾಂಬೂಲ ಪ್ರಶ್ನೆ, ಪೊಲೀಸ್‌ ಬಂದೋಬಸ್ತ್‌

    ಬಂಗಾರಪೇಟೆ ತಾಲೂಕಿನಲ್ಲಿ 14 ರೈಸ್ ಮಿಲ್‍ಗಳಿದ್ದು, 3 ಮಿಲ್‍ಗಳು ಸ್ಟಾಪ್ ಆಗಿವೆ. ಉಳಿದಂತೆ ಬಹುತೇಕ ಮಿಲ್‍ಗಳಲ್ಲಿ ಸರ್ಕಾರ ಬಡವರಿಗೆ ಕೊಡುವ ಅಕ್ಕಿಯೇ ಸಿಗುತ್ತಿದೆ. ಬಂಗಾರಪೇಟೆ ತಹಶೀಲ್ದಾರ್ ದಯಾನಂದ್ ಮಾತ್ರ ಎಂದಿನಿಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಕಡಿವಾಣ ಹಾಕ್ತೀವಿ ಎಂದು ಆಶ್ವಾಸನೆ ನೀಡುತ್ತಲೇ ಬಂದಿದ್ದಾರೆ.

  • ಮೇ 16ಕ್ಕೆ ಹುಬ್ಬಳ್ಳಿ- ಧಾರವಾಡದಲ್ಲಿ ವಧಾಲಯ, ಮಾಂಸದ ಅಂಗಡಿ ಬಂದ್

    ಮೇ 16ಕ್ಕೆ ಹುಬ್ಬಳ್ಳಿ- ಧಾರವಾಡದಲ್ಲಿ ವಧಾಲಯ, ಮಾಂಸದ ಅಂಗಡಿ ಬಂದ್

    ಹುಬ್ಬಳ್ಳಿ: ಬುದ್ಧ ಪೂರ್ಣಿಮಾ ಪ್ರಯುಕ್ತ ಮೇ 16 ರಂದು ಅವಳಿನಗರದಲ್ಲಿ ಮಾಂಸ ಮಾರಾಟಕ್ಕೆ ನಿಷೇಧಿಸಲಾಗಿದೆ.

    ಶಾಂತಿ, ಸೌಹಾರ್ದ ಮತ್ತು ಜಗತ್ತಿನ ಎಲ್ಲಾ ಜೀವಿಗಳಿಗೆ ಬದುಕುವ ಹಕ್ಕಿನ ಮಹತ್ವ ತಿಳಿಸುವ ವಿಶೇಷ ಬುದ್ಧ ಪೂರ್ಣಿಮಾ ದಿನಕ್ಕಿದೆ. ಹೀಗಾಗಿ ಅಂದು ಹು-ಧಾ ಪಾಲಿಕೆ ವ್ಯಾಪ್ತಿಯಲ್ಲಿನ ವಧಾಲಯಗಳು ಹಾಗೂ ಎಲ್ಲ ಮಾಂಸದ ಅಂಗಡಿಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.

    ಒಂದು ವೇಳೆ ಮಾಂಸದ ಅಂಗಡಿಗಳನ್ನು ತೆರೆದರೆ ಪಾಲಿಕೆಯಿಂದ ಅವರ ಲೈಸೆನ್ಸ್ ರದ್ದು ಪಡಿಸಿ, ಸರ್ಕಾರದ ನಿಯಮಗಳನ್ವಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆಯ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.

  • ಮದುವೆ ಆಮಂತ್ರಣ ಪತ್ರಿಕೆಗಳನ್ನು ಹಂಚಲು ಹೋಗಿದ್ದ ಯುವತಿಯ ಮೇಲೆ ಗ್ಯಾಂಗ್‍ರೇಪ್

    ಮದುವೆ ಆಮಂತ್ರಣ ಪತ್ರಿಕೆಗಳನ್ನು ಹಂಚಲು ಹೋಗಿದ್ದ ಯುವತಿಯ ಮೇಲೆ ಗ್ಯಾಂಗ್‍ರೇಪ್

    ಭೋಪಾಲ್: ಉತ್ತರ ಪ್ರದೇಶದ ಯುವತಿಯೊಬ್ಬಳು ತನ್ನ ಮದುವೆ ಆಮಂತ್ರಣ ಪತ್ರಿಕೆಗಳನ್ನು ಹಂಚಲು ಹೋಗುತ್ತಿದ್ದಾಗ ಆಕೆಯನ್ನು ಅಪಹರಿಸಿ ಮೂವರು ವ್ಯಕ್ತಿಗಳು ಸಾಮೂಹಿಕ ಅತ್ಯಾಚಾರಗೈದು ಅವಳನ್ನು ಮಾರಾಟ ಮಾಡಿದ ಘಟನೆ ಮಧ್ಯಪ್ರದೇಶದ ಪಕ್ಕದ ದಾತಿಯಾ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

    ಏಪ್ರಿಲ್ 21 ರಂದು ನಡೆಯಲಿರುವ ಆಕೆಯ ಮದುವೆಯ ಕಾರ್ಡ್‍ಗಳನ್ನು ವಿತರಿಸಲು ಹೋದಾಗ ಗ್ರಾಮದ ಮೂವರು ಯುವಕರು ಏಪ್ರಿಲ್ 18 ರಂದು ಅವಳನ್ನು ಅಪಹರಿಸಿ, ಸಾಮೂಹಿಕ ಅತ್ಯಾಚಾರಗೈದಿದ್ದಾರೆ. ಅಲ್ಲದೇ ರಾಜಕೀಯ ಪಕ್ಷದ ನಾಯಕರೊಬ್ಬರ ಬಳಿಗೆ ಕರೆದೊಯ್ದು ಅವರೊಂದಿಗೆ ಇರಿಸಿದಲ್ಲದೇ ಬಳಿಕ ಆಕೆಯನ್ನು ಮತ್ತೊಬ್ಬ ವ್ಯಕ್ತಿಯೊಂದಿಗೆ ಇರಲು ಒತ್ತಾಯಿಸಿದ್ದರು ಎಂದು ಯುವತಿಯು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ. ಇದನ್ನೂ ಓದಿ: ಕುಣಿಗಲ್‍ನಲ್ಲಿ ಭೀಕರ ಅಪಘಾತ- ಬೆಂಗಳೂರಿಗೆ ಹೋಗುತ್ತಿದ್ದ ಇಬ್ಬರು ಸಾವು

    KIDNAP

    ಕೆಲವು ದಿನಗಳ ಕಾಲ ಸಂತ್ರಸ್ತೆಯನ್ನು ಬೇರೆ ಬೇರೆ ಸ್ಥಳಗಳಲ್ಲಿ ಇಟ್ಟುಕೊಂಡಿದ್ದರು. ನಂತರದಲ್ಲಿ ಆಕೆಯನ್ನು ರಾಜಕೀಯ ಪಕ್ಷದ ನಾಯಕನಿಗೆ ಒಪ್ಪಿಸಿದ್ದಾರೆ. ನಾಯಕನೊಂದಿಗೆ 5 ದಿನಗಳ ಕಾಲ ಝಾನ್ಸಿ ಜಿಲ್ಲೆಯಲ್ಲಿ ಇರಿಸಿದ್ದಲ್ಲದೇ, ಬಳಿಕ ಯುವತಿಯನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಇರಲು ಒತ್ತಾಯಿಸಿ ಮಧ್ಯಪ್ರದೇಶದ ಪಕ್ಕದ ದಾತಿಯಾ ಜಿಲ್ಲೆಯ ಹಳ್ಳಿಗೆ ಕಳುಹಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ವೇಳೆ ಯುವತಿಯು ಹೇಗೋ ತನ್ನ ತಂದೆಯನ್ನು ದಾತಿಯಾದಿಂದ ಕರೆಸುವಲ್ಲಿ ಯಶಸ್ವಿಯಾದರು. ನಂತರ ಆಕೆಯನ್ನು ಪೊಲೀಸರ ಸಹಾಯದಿಂದ ಪಠಾರಿ ಗ್ರಾಮದಿಂದ ರಕ್ಷಿಸಲಾಯಿತು. ಇದನ್ನೂ ಓದಿ: ಕಾರಿನ ಗಾಜು ಪುಡಿ ಮಾಡಿದ ಕಿಡಿಗೇಡಿಗಳು- ಸಿಸಿ ಕ್ಯಾಮರಾದಲ್ಲಿ ದುಷ್ಕೃತ್ಯ ಸೆರೆ

    ಸಂತ್ರಸ್ತೆಯನ್ನು ಅಪಹರಿಸಿ, ಅತ್ಯಾಚಾರ ಮಾಡಿ ಮಾರಾಟ ಮಾಡಿದ ಆರೋಪದ ಮೇಲೆ ಕೆಲವರ ವಿರುದ್ಧ ಯುವತಿ ನೀಡಿದ ದೂರಿನ ಮೇರೆಗೆ ಸಂಬಂಧಿತ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ, ಮ್ಯಾಜಿಸ್ಟ್ರೇಟ್ ಮುಂದೆ ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಈ ವಿಷಯವನ್ನು ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತೆಹ್ರಾಲಿ ಸರ್ಕಲ್ ಆಫೀಸರ್ (ಸಿಒ) ಅನುಜ್ ಸಿಂಗ್ ತಿಳಿಸಿದ್ದಾರೆ.

  • ನೈಜೀರಿಯಾ ಪ್ರಜೆ ಅರೆಸ್ಟ್ – 70 ಲಕ್ಷರೂ. ಮೌಲ್ಯದ ಡ್ರಗ್ಸ್ ವಶ

    ನೈಜೀರಿಯಾ ಪ್ರಜೆ ಅರೆಸ್ಟ್ – 70 ಲಕ್ಷರೂ. ಮೌಲ್ಯದ ಡ್ರಗ್ಸ್ ವಶ

    ಬೆಂಗಳೂರು: ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯಿಂದ 70 ಲಕ್ಷ ಬೆಲೆ ಬಾಳುವ ಡ್ರಗ್ಸ್ ಮತ್ತು 800 ಗ್ರಾಂ ತೂಕದ ಎಂಡಿಎಂಎ, ಕ್ರಿಸ್ಟಲ್ ವಶಪಡಿಸಿಕೊಳ್ಳಲಾಗಿದೆ. ಪ್ರತಿ 5 ಸಾವಿರದಿಂದ 8 ಸಾವಿರಕ್ಕೆ ಪರಿಚಯಸ್ಥ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದನು.

    ಆರೋಪಿಯು ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದನು. ಘಟನೆ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

  • ಭಾನುವಾರ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ

    ಭಾನುವಾರ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ

    ಬೆಂಗಳೂರು: ರಾಮನವಮಿ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಏಪ್ರಿಲ್ 10ರಂದು (ಭಾನುವಾರ) ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧಿಸಿ ಬಿಬಿಎಂಪಿ ಆದೇಶ ಹೊರಡಿಸಿದೆ.

    ಮಾಂಸ ಮಾರಾಟ ನಿಷೇಧ ಮಾಡಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆದೇಶ ಹೊರಡಿಸಿದ್ದು, ಹಿಂದೂ ಧಾರ್ಮಿಕ ಹಬ್ಬ ರಾಮನವಮಿ ಏಪ್ರಿಲ್ 10ರಂದು ಬಂದಿದೆ. ಭಾನುವಾರ ರಾಮನವಮಿ ಹಬ್ಬದ ಆಚರಣೆ ಹಿನ್ನೆಲೆ ಈ ಆದೇಶವನ್ನು ಬಿಬಿಎಂಪಿ ಜಾರಿಗೆ ತಂದಿದೆ. ಇದನ್ನೂ ಓದಿ: ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಸ್ಥಾನ, ಯಾವುದೇ ಭಾಷೆಯನ್ನು ಹೇರಲು ಹೊರಟರೆ ಸಹಿಸಲು ಸಾಧ್ಯ ಇಲ್ಲ: ಸಿದ್ದರಾಮಯ್ಯ

    ಶ್ರೀರಾಮನವಮಿಯಂದು ಪ್ರಾಣಿ, ವಧೆ ಮತ್ತು ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿದೆ. ಕಸಾಯಿಖಾನೆಯಲ್ಲೂ ಪಾಣಿವಧೆ, ಮಾರಾಟಕ್ಕೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಈ ನಿಯಮಗಳ ವಿರುದ್ಧ ಬಿಬಿಎಂಪಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಜಂಟಿ ನಿರ್ದೇಶಕ ಪಶುಪಾಲನಾ ವಿಭಾಗದಿಂದ ಆದೇಶ ಹೊರಡಿಸಲಾಗಿದೆ.