Tag: salary

  • ಸಾರಿಗೆ ನೌಕರರ ಮೂಲ ವೇತನ ಎಷ್ಟು? ಆರಂಭಿಕ ಸಂಬಳ ಎಷ್ಟು ಸಿಗುತ್ತೆ?

    ಸಾರಿಗೆ ನೌಕರರ ಮೂಲ ವೇತನ ಎಷ್ಟು? ಆರಂಭಿಕ ಸಂಬಳ ಎಷ್ಟು ಸಿಗುತ್ತೆ?

    ಬೆಂಗಳೂರು: ಸಾರಿಗೆ ನೌಕರರು 6ನೇ ವೇತನ ಆಯೋಗ ಶಿಫಾರಸ್ಸಿನ ಪ್ರಕಾರ ಸಂಬಳ ಜಾರಿ ಮಾಡುವಂತೆ ಪಟ್ಟು ಹಿಡಿದು ಮುಷ್ಕರ ಮಾಡುತ್ತಿದ್ದಾರೆ. ಈ ನಡುವೆ ನೌಕರರ ಸಂಬಳದ ಬಗ್ಗೆ ತಪ್ಪು ವರದಿಗಳು ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಇಂದು ಯಾರಿಗೆ ಎಷ್ಟು ಆರಂಭಿಕ ವೇತನ ನೀಡಲಾಗುತ್ತದೆ ಎಂಬ ವಿವರವನ್ನು ಬಿಡುಗಡೆ ಮಾಡಿದೆ.

    ಚಾಲಕರು
    ಮೂಲ ವೇತನ – 12,400 ರೂ.
    ಮೂಲ ತುಟ್ಟಿಭತ್ಯೆ – 5,611 ರೂ.
    ಒಟ್ಟು ಮೂಲ ವೇತನ – 18,011 ರೂ.
    ತುಟ್ಟಿ ಭತ್ಯೆ – 2,026 ರೂ.
    ಮನೆ ಬಾಡಿಗೆ ಭತ್ಯೆ – 4,323 ರೂ.
    ಭವಿಷ್ಯ ನಿಧಿ – 2,404 ರೂ.
    ಇತರೆ ಭತ್ಯೆ, ಓಟಿ ಸೇರಿದಂತೆ 5,184 ರೂ.
    ಒಟ್ಟು – 31, 948 ರೂ.

    ನಿರ್ವಾಹಕರು:
    ಮೂಲ ವೇತನ – 11,640 ರೂ.
    ಮೂಲ ತುಟ್ಟಿಭತ್ಯೆ – 5,267 ರೂ.
    ಒಟ್ಟು ಮೂಲ ವೇತನ -16,907 ರೂ.
    ತುಟ್ಟಿ ಭತ್ಯೆ – 1,902 ರೂ.
    ಮನೆ ಬಾಡಿಗೆ ಭತ್ಯೆ – 4,058 ರೂ.
    ಭವಿಷ್ಯ ನಿಧಿ – 2,257 ರೂ.
    ಇತರೆ ಭತ್ಯೆ, ಓಟಿ ಸೇರಿದಂತೆ – 5,184 ರೂ.
    ಒಟ್ಟು – 30,308 ರೂ.

  • ಸಂಬಳದ ಸಮಸ್ಯೆ – ಕಿಡ್ನಿ ಮಾರಾಟಕ್ಕಿಟ್ಟ ಸಾರಿಗೆ ನೌಕರ

    ಸಂಬಳದ ಸಮಸ್ಯೆ – ಕಿಡ್ನಿ ಮಾರಾಟಕ್ಕಿಟ್ಟ ಸಾರಿಗೆ ನೌಕರ

    ಕೊಪ್ಪಳ: ಸಂಬಳದ ಸಮಸ್ಯೆ ಹಿನ್ನಲೆಯಲ್ಲಿ ಕೊಪ್ಪಳದ ಸಾರಿಗೆ ನೌಕರರೊಬ್ಬರು ತನ್ನ ಕಿಡ್ನಿ ಮಾರಾಟಕ್ಕಿಟ್ಟಿದ್ದಾರೆ.

    ಕುಷ್ಟಗಿಯ ನಿವಾಸಿ ಹನುಮಂತ ಕಳಗೇರ್ ತನ್ನ ಕಿಡ್ನಿಯನ್ನು ಮಾರಾಟಕ್ಕಿಟ್ಟಿವರಾಗಿದ್ದಾರೆ. ಕಳೆದ 20 ವರ್ಷಗಳಿಂದ ಸಾರಿಗೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಂಬಳ ಸರಿಯಾಗಿ ಸಿಗುತ್ತಿಲ್ಲ, ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ಕಿಡ್ನಿ ಮಾರಾಟಕ್ಕಿಟ್ಟಿದ್ದಾರೆ.

    ಗಂಗಾವತಿ ಡಿಪೋದಲ್ಲಿ ನಿರ್ವಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಲಾಕ್ ಡೌನ್ ನಿಂದ ಸರಿಯಾಗಿ ಸಂಬಳ ಆಗಿಲ್ಲ. ಜೊತೆಗೆ ಕಳೆದ ಎರಡು ತಿಂಗಳಿಂದ ಅರ್ಧ ಸಂಬಳ ಆಗುತ್ತಿದ್ದು, ಇದರಿಂದಾಗಿ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಮನೆ ಬಾಡಿಗೆ ಕಟ್ಟಲಾಗುತ್ತಿಲ್ಲ. ರೇಷನ್ ತರಲು ಆಗುತ್ತಿಲ್ಲ ಕಾರಣ ನನ್ನ ಕಿಡ್ನಿಯನ್ನು ಮಾರಾಟಕ್ಕಿಟ್ಡಿದ್ದೇನೆ ಎಂದು ಹನುಮಂಹ ಕಳಗೇರ್ ಫೇಸಬುಕ್ ನಲ್ಲಿ ಬರೆದುಕೊಂಡಿದ್ದಾರೆ.

    ಹನುಮಂತ ಅವರಿಗೆ ಪ್ರತಿ ತಿಂಗಳು 16 ಸಾವಿರ ಸಂಬಳ ಬರುತ್ತಿತ್ತು, ಆದರೆ ಕಳೆದ ಎರಡು ತಿಂಗಳಿನಿಂದ 3 ಸಾವಿರ ಸಂಬಳ ಬರುತ್ತಿದ್ದು, ಆದರೆ ತಿಂಗಳಿಗೆ 3500 ಸಾವಿರ ಮನೆ ಬಾಡಿಗೆಯೇ ಇದ್ದು, ಮೂರು ಮಕ್ಕಳು, ತಾಯಿ, ಪತ್ನಿಯನ್ನು ಸಾಕಬೇಕಾಗಿದೆ. ಜೀವನ ನಡೆಸಲು ಕಷ್ಟವಾಗುತ್ತಿದ್ದು, ಈಗಾಗಲೇ ಎಲ್ಲಾ ಕಡೆ ಕೈಸಾಲ ತೆಗೆದು ಕೊಂಡಿರುವ ಹನುಮಂತ ಅವರಿಗೆ ಸಾಲ ಮರಳಿ ನೀಡಲು ಹಣ ಇಲ್ಲದಂತಾಗಿದ್ದು ಈ ನಿರ್ಧಾರಕ್ಕೆ ಬಂದಿದ್ದಾರೆ.

    ಸಾಮಾಜಿಕ ಜಾಲತಾಣದ ಮೂಲಕ ತನ್ನ ನೋವನ್ನು ಹನುಮಂತ ಅವರು ತೋಡಿಕೊಂಡಿದ್ದಾರೆ. ಕಡಿಮೆ ಸಂಬಳದಿಂದಾಗಿ ವಯಸ್ಸಾದ ತಾಯಿಗೆ ಆಸ್ಪತ್ರೆಗೆ ತೋರಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ನೀಡಲು ತೊಂದರೆ ಆಗುತ್ತಿದ್ದು, ಸರರ್ಕಾರ ಈಗಾಲಾದರೂ ಎಚ್ಚೆತ್ತುಕೊಂಡು ಸಾರಿಗೆ ನೌಕರರಿಗೆ ಪೂರ್ತಿ ಸಂಬಳ ನೀಡಬೇಕು ಎಂದು ಮನವಿ ಮಾಡಿದ್ದಾರೆ.

  • ಇನ್ನೆರಡು ದಿನಗಳಲ್ಲಿ ಸಾರಿಗೆ ನೌಕರರ ಸಂಬಳ ಹಾಕ್ತೇವೆ: ಸವದಿ

    ಇನ್ನೆರಡು ದಿನಗಳಲ್ಲಿ ಸಾರಿಗೆ ನೌಕರರ ಸಂಬಳ ಹಾಕ್ತೇವೆ: ಸವದಿ

    ಬೆಂಗಳೂರು: ಶೀಘ್ರವೇ ಸಾರಿಗೆ ನೌಕರರ ಡಿಸೆಂಬರ್, ಜನವರಿಯ 15 ದಿನಗಳ ಸಂಬಳವನ್ನು ಹಾಕುತ್ತೇವೆ ಎಂದು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಭರವಸೆ ನೀಡಿದರು.

    ಬುಧವಾರ ಸಾರಿಗೆ ನೌಕರರು ಪ್ರತಿಭಟನೆ ಮಾಡುವ ಕುರಿತು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಸಾರಿಗೆ ನೌಕರರು ನಾಳೆ ಪ್ರತಿಭಟನೆ ಮಾಡುವ ಖಚಿತ ಮಾಹಿತಿ ಇಲ್ಲ. ನಾನು ಅಧಿಕಾರಿಗಳನ್ನು ಕರೆಸಿ ಮಾತನಾಡಿದ್ದೇನೆ. ಹಿಂದೆ ಪ್ರತಿಭಟನೆ ಮಾಡಿದಾಗ 9 ಬೇಡಿಕೆ ಇಟ್ಟಿದ್ದರು. ಇದರಲ್ಲಿ 4 ಬೇಡಿಕೆ ಇಡೇರಿಸಿದ್ದೇವೆ, 5 ಸಭೆ ನಡೆಸಿದ್ದೇವೆ ಅದು ಅವರಿಗೆ ಗೊತ್ತು. ಡಿಸೆಂಬರ್ ನ ಸಂಬಳವನ್ನು ಇನ್ನೆರಡು ದಿನಗಳಲ್ಲಿ ಹಾಕುತ್ತೇವೆ. ಜನವರಿಯ 15 ದಿನದ ಸಂಬಳವನ್ನು ಶೀಘ್ರ ಹಾಕುತ್ತೇವೆ ಎಂದು ಭರವಸೆ ನೀಡಿದರು.

    ಆದಾಯ, ಇಂಧನ ಮತ್ತು ಸಂಬಳಕ್ಕೆ ಸರಿಯಾಗಿತ್ತಿದೆ. ಹಣಕಾಸು ಇಲಾಖೆ ಒಪ್ಪಿಕೊಂಡಿದೆ ಅದು ಎರಡು ದಿನದಲ್ಲಿ ಸರಿಯಾಗುತ್ತೆ. ಯಾವುದೇ ಅಡ್ಡಿ ಆತಂಕ ಇಲ್ಲದೆ ನಿಮ್ಮ ಸಂಬಳ ಕೊಡುವ ಕೆಲಸ ಮಾಡುತ್ತೇವೆ. ಅಲ್ಲದೆ ಇನ್ನು 15 ದಿನದಲ್ಲಿ ನೌಕರರ ಜೊತೆ ಸಭೆ ನಡೆಸಿ 6ನೇ ವೇತನ ಪರಿಷ್ಕರಣೆ ಬಗ್ಗೆಯೂ ಮಾತನಾಡುತ್ತೇನೆ. ಪ್ರತಿಭಟನೆ ನಡೆಸುವ ಬಗ್ಗೆ ಯಾರೂ ನನ್ನನ್ನು ಭೇಟಿ ಮಾಡಿಲ್ಲ, ಮನವಿ ಕೊಟ್ಟಿಲ್ಲ. ಮಾಧ್ಯಮಗಳಲ್ಲಿ ನೋಡಿಯಷ್ಟೇ ನನಗೆ ಮಾಹಿತಿ ತಿಳಿದಿದೆ ಎಂದು ಸ್ಪಷ್ಟಪಡಿಸಿದರು.

    ಯಾವುದೇ ಸಾಲಪಡೆಯಲು ಆಸ್ತಿ ಅಡ ಇಡಬೇಕು, ಶ್ಯೂರಿಟಿ ಕೊಡಬೇಕು ಅದಕ್ಕೆ ಬಿಎಂಟಿಸಿ ಶಾಂತಿನಗರ ಕಟ್ಟಡ ಅಡಮಾನ ಮಾಡಲಾಗಿದೆ. ಎಲೆಕ್ಟ್ರಿಕ್ ಬಸ್ ಕೊಳ್ಳುತಿಲ್ಲ ಕೇಂದ್ರ ಸರ್ಕಾರದ ಸಬ್ಸಿಡಿ ಹಣದಲ್ಲಿ ಕಡಿಮೆ ದರದಲ್ಲಿ ಬಸ್‍ಗಳನ್ನು ಬಾಡಿಗೆಗೆ ಪಡೆಯಲಾಗುತ್ತಿದೆ.

    ಈ ಕುರಿತು ಮಾಧ್ಯಮ ಪ್ರಕಟಣೆಯನ್ನು ಸಹ ಹೊರಡಿಸಿರುವ ಸಚಿವರು, ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮದ ಸಿಬ್ಬಂದಿಯ ಬೇಡಿಕೆಗಳ ಪೂರೈಕೆಗೆ ಹಿರಿಯ ಅಧಿಕಾರಿಗಳ ಸಭೆ ನಡೆಸಲಾಗಿದೆ. ನಾಳೆ ಕೆಲ ಸಂಘಟನೆಗಳು ಪ್ರತಿಭಟನೆಗೆ ಕರೆ ಕೊಟ್ಟಿದ್ದಾರೆ. ನಾಳೆ ಯಾವುದೇ ಬಸ್ ವ್ಯತ್ಯಯ ಆಗಲ್ಲ. ಡಿಸೆಂಬರ್ ಹಾಗೂ ಜನವರಿ ತಿಂಗಳ ಅರ್ಧ ವೇತನ ನೀಡಿದ್ದೇವೆ. ಶೀಘ್ರದಲ್ಲೇ ಉಳಿದ ಬಾಕಿ ವೇತನ ನೀಡತ್ತೇವೆ. ಈಗಾಗಲೇ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ದಯವಿಟ್ಟು ಸಿಬ್ಬಂದಿ ಸಹಕರಿಸಬೇಕು ಎಂದು ಸಾರಿಗೆ ಸಚಿವರು ಮನವಿ ಮಾಡಿದ್ದಾರೆ.

  • ಈಡೇರದ ಭರವಸೆ – ನಾಳೆ ಮತ್ತೆ ಪ್ರತಿಭಟನೆಗೆ ಮುಂದಾದ ಸಾರಿಗೆ ಸಿಬ್ಬಂದಿ

    ಈಡೇರದ ಭರವಸೆ – ನಾಳೆ ಮತ್ತೆ ಪ್ರತಿಭಟನೆಗೆ ಮುಂದಾದ ಸಾರಿಗೆ ಸಿಬ್ಬಂದಿ

    ಬೆಂಗಳೂರು: ನೀಡಿದ್ದ ಭರವಸೆಯನ್ನು ಈಡೇರಿಸದ ಸರ್ಕಾರದ ವಿರುದ್ಧ ನಾಳೆ ಮತ್ತೆ ಪ್ರತಿಭಟನೆ ನಡೆಸಲು ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಂದಾಗಿದ್ದಾರೆ.

    ಕಳೆದ ಡಿಸೆಂಬರ್​ 11ರಿಂದ 14ರವರೆಗೆ ಹಠಾತ್​​ ಮುಷ್ಕರ ನಡೆಸಿದ ಸಂದರ್ಭದಲ್ಲಿ ಬೇಡಿಕೆ ಈಡೇರಿಸುವ ಭರವಸೆಯ ಸರ್ಕಾರ ನೀಡಿತ್ತು. ಸರ್ಕಾರ ಭರವಸೆಗೆ ಒಪ್ಪಿ ಸಿಬ್ಬಂದಿ ತಮ್ಮ ಮುಷ್ಕರವನ್ನು ಕೈ ಬಿಟ್ಟಿದ್ದರು.

    ನೀಡಿದ್ದ ಭರವಸೆ ಈಡೇರದ ಹಿನ್ನೆಲೆಯಲ್ಲಿ ನಾಳೆ ಬಿಎಂಟಿಸಿ ಕೇಂದ್ರ ಕಚೇರಿ ಮುಂಭಾಗ 4 ವಿಭಾಗದ ಸಿಬ್ಬಂದಿ ಜಂಟಿ ವೇದಿಕೆಯ ಮೂಲಕ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಇದನ್ನೂ ಓದಿ: ಸಾಲಕ್ಕೆ ಶಾಂತಿನಗರ ಟಿಟಿಎಂಸಿ ಅಡಮಾನ – ಪ್ರತಿ ತಿಂಗಳು ಬಿಎಂಟಿಸಿ ಪಾವತಿಸುತ್ತಿದೆ 1.04 ಕೋಟಿ ಬಡ್ಡಿ

    ಯಾಕೆ ಪ್ರತಿಭಟನೆ?
    ಡಿಸೆಂಬರ್ ತಿಂಗಳ ಅರ್ಧ ವೇತನದ ಜೊತೆ ಜನವರಿ ತಿಂಗಳ ಸಂಬಳವನ್ನೂ ಸರ್ಕಾರ ಪಾವತಿಸಿಲ್ಲ. ಸಂಬಳ ಉಳಿಸಿಕೊಂಡಿರುವ ಸರ್ಕಾರ ಮೂರ್ನಾಲ್ಕು ದಿನದಲ್ಲಿ ಹಾಕಲಾಗುವುದು ಎಂದು ಹೇಳಿತ್ತು. ಆದರೆ ಬಾಕಿ ವೇತನವನ್ನು ಇನ್ನೂ ಹಾಕಿಲ್ಲ. ಹೀಗಾಗಿ ಸರ್ಕಾರದ ವಿರುದ್ಧ ಸಾರಿಗೆ ಸಂಸ್ಥೆಗಳ ಸಿಬ್ಬಂದಿ ತಿರುಗಿ ಬಿದ್ದಿದ್ದಾರೆ.

    ರಜೆ ಇಲ್ಲ:
    ಪ್ರತಿಭಟನೆ ನಡೆಸಲು ಸಿಬ್ಬಂದಿ ಮುಂದಾಗಿರುವ ವಿಚಾರ ತಿಳಿದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ವ್ಯತ್ಯಯ ಆಗಬಾರದು ಎಂಬ ಕಾರಣಕ್ಕೆ ಅನಿವಾರ್ಯ ಕಾರಣ ಹೊರತುಪಡಿಸಿ ರಜೆ ಮಂಜೂರು ಮಾಡುವಂತಿಲ್ಲ ಎಂದು ಬಿಎಂಟಿಸಿ ಸುತ್ತೋಲೆ ಹೊರಡಿಸಿದೆ.

  • ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿ ಸರ್ಕಾರ ಘೋಷಿಸುತ್ತಿಲ್ಲ ಯಾಕೆ?

    ಸಾರಿಗೆ ನೌಕರರನ್ನು ಸರ್ಕಾರಿ ನೌಕರನ್ನಾಗಿ ಸರ್ಕಾರ ಘೋಷಿಸುತ್ತಿಲ್ಲ ಯಾಕೆ?

    ಬೆಂಗಳೂರು: ಸರ್ಕಾರಿ ನೌಕರರನ್ನಾಗಿ ಮಾಡಬೇಕು ಎಂಬ ಸಾರಿಗೆ ನೌಕರರ ಇವತ್ತಿನದ್ದಲ್ಲ. ಬಹು ವರ್ಷದ ಹಿಂದಿನ ಬೇಡಿಕೆ. ಆದರೆ ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರು ಎಂದು ಘೋಷಿಸಲು ಸರ್ಕಾರ ಮುಂದಾಗದಿರುವುದಕ್ಕೆ ಹಲವು ಕಾರಣಗಳಿವೆ.

    ಸದ್ಯ ಎಲ್ಲ ವಿಭಾಗ ಸೇರಿ ಸಾರಿಗೆ ನೌಕರರ ಸಂಖ್ಯೆ 1.30 ಲಕ್ಷ ಇದೆ. ಸರ್ಕಾರಿ ನೌಕರರು ಎಂದು ಪರಿಗಣಿಸಿದರೆ ಸರ್ಕಾರಕ್ಕೆ ಆರ್ಥಿಕ ಹೊರೆ ಬೀಳಲಿದೆ. ಸುಮಾರು 6,500 ಕೋಟಿ ರೂ. ಹೆಚ್ಚುವರಿ ಹೊರೆ ಆಗಬಹುದು. ಈಗಾಗಲೇ ರಾಜ್ಯದ ಬಜೆಟ್‍ನಲ್ಲಿ ವೇತನಕ್ಕಾಗಿ ಶೇ.56ರಷ್ಟು ಬಜೆಟ್‌ ಹೋಗುತ್ತಿದೆ.

    ಕೋವಿಡ್ ಕಾರಣ ಸಾರಿಗೆ ಸಂಸ್ಥೆಗಳ 4 ನಿಗಮ ನಷ್ಟದಲ್ಲಿವೆ. ಈ ನಷ್ಟ ಭರಿಸುವುದು ಸದ್ಯದ ಮಟ್ಟಿಗೆ ಅಸಾಧ್ಯದ ಮಾತು. ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ಪರಿಗಣಿಸಿದರೆ ಉಳಿದ ನಿಗಮಗಳಿಂದ ಬೇಡಿಕೆ ಬಂದರೆ ಅದನ್ನು ಪರಿಗಣಿಸುವುದು ಬಹಳ ಕಷ್ಟ ಕೆಲಸ.

    ಭವಿಷ್ಯದ ಪ್ಲಾನ್ ಏನು?
    ರಿಸ್ಕ್ ಇಲ್ಲದೇ ಆದಾಯಕ್ಕೆ ಸರ್ಕಾರದ ಪ್ಲಾನ್ ಮಾಡಿದ್ದು, ಸಾರಿಗೆ ಸಂಸ್ಥೆಯ ಭಾಗಶಃ ಖಾಸಗಿಕರಣ ಮಾಡುವುದು. ಸಾರಿಗೆ ನಷ್ಟ ತಪ್ಪಿಸಲು ಪಿಪಿಪಿ ಮಾಡೆಲ್(ಸರ್ಕಾರಿ ಖಾಸಗಿ ಬಸ್ ಒಟ್ಟಾಗಿ ಕಾರ್ಯನಿರ್ವಹಣೆ) ಜಾರಿಗೆ ತಂದು ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು. ಖಾಸಗಿ ಕಂಪನಿಗಳಿಗೆ ಬಸ್‍ಗಳ ನಿರ್ವಹಣೆ ಹೊಣೆ ನೀಡಿ ಸರ್ಕಾರದಿಂದ ಕೇವಲ ಸಿಬ್ಬಂದಿ ನಿಯೋಜನೆ ಮಾಡುವುದು.

  • ನಾಲ್ಕು ತಿಂಗಳಿಂದ ವೇತನ ನೀಡದ ಕಂಪನಿ- ಕಲ್ಲು ತೂರಿ, ಬೆಂಕಿ ಹಚ್ಚಿ ಕಾರ್ಮಿಕರು ಆಕ್ರೋಶ

    ನಾಲ್ಕು ತಿಂಗಳಿಂದ ವೇತನ ನೀಡದ ಕಂಪನಿ- ಕಲ್ಲು ತೂರಿ, ಬೆಂಕಿ ಹಚ್ಚಿ ಕಾರ್ಮಿಕರು ಆಕ್ರೋಶ

    ಕೋಲಾರ: ಕಳೆದ 4 ತಿಂಗಳಿನಿಂದ ವೇತನ ನೀಡಿಲ್ಲವೆಂದು ಆರೋಪಿಸಿ ಕಾರ್ಮಿಕರು  ಐಫೋನ್‌ ಉತ್ಪಾದನೆ ಮಾಡುವ ವಿಸ್ಟ್ರಾನ್ ಕಂಪನಿಗೆ ಕಲ್ಲು ತೂರಾಟ ಮಾಡಿ, ಬೆಂಕಿ ಹಚ್ಚುವ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

    ಕೋಲಾರ ತಾಲೂಕಿನ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಕಂಪನಿಯಲ್ಲಿ ಈ ಘಟನೆ ನಡೆದಿದೆ. ವೇತನ ನೀಡದ ಆರೋಪದಿಂದಾಗಿ ಈ ಕಂಪನಿಯ ಮೇಲೆ ಕಾರ್ಮಿಕರು ಕಲ್ಲು ತೂರಾಟ ಮಾಡಿ ಕಿಡಿಕಾರಿದ್ದಾರೆ.

    ಕಂಪನಿ ಕಳೆದ ನಾಲ್ಕು ತಿಂಗಳಿನಿಂದ ಕಾರ್ಮಿಕರಿಗೆ ವೇತನ ನೀಡಿಲ್ಲ ಎಂದು ಕಾರ್ಮಿಕರು ಆರೋಪಿಸುತ್ತಿದ್ದಾರೆ. ಅಲ್ಲದೆ ಇದರಿಂದ ಆಕ್ರೋಶಗೊಂಡ ಕಾರ್ಮಿಕರು ಇಂದು ಕಂಪನಿಯ ಗಾಜು ಮತ್ತು ಕಾರುಗಳ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಪರಿಣಾಮ ಕಿಟಕಿ ಗಾಜು, ಪೀಠೋಪಕರಣಗಳು ಸಂಪೂರ್ಣ ಧ್ವಂಸಗೊಂಡಿವೆ. ಅಲ್ಲದೆ ಬೆಂಕಿ ಕೂಡ ಹಚ್ಚಿದ್ದಾರೆ.

    ವೇಮಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪೋಲಿಸರು ಆಗಮಸಿ ಪರಿಸ್ಥಿತಿ ನಿಯಂತ್ರಣ ಮಾಡಲು ಹರಸಾಹಸ ಪಡುತ್ತಿದ್ದಾರೆ. ಸದ್ಯ ಸ್ಥಳದಲ್ಲಿ ಪರಿಸ್ಥಿತಿ ಬಿಗಡಾಯಿಸಿದ್ದು, ಕಾರ್ಮಿಕರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡುತ್ತಿದ್ದಾರೆ.

  • ಕೊರೊನಾ ವಾರ್ಡಿನಲ್ಲಿ ವೈದ್ಯರಾಗಿ ಕೆಲಸ – ಬಂದ ಸಂಬಳದಲ್ಲಿ ಉಚಿತ ಮಾಸ್ಕ್ ವಿತರಣೆ

    ಕೊರೊನಾ ವಾರ್ಡಿನಲ್ಲಿ ವೈದ್ಯರಾಗಿ ಕೆಲಸ – ಬಂದ ಸಂಬಳದಲ್ಲಿ ಉಚಿತ ಮಾಸ್ಕ್ ವಿತರಣೆ

    – 5 ಸಾವಿರ ಮಾಸ್ಕ್ ಹಂಚಿ ಮಾನವೀಯತೆ ಮೆರೆದ ಯುವ ಡಾಕ್ಟರ್

    ಧಾರವಾಡ: ಜಿಲ್ಲೆಯಲ್ಲಿ ಒಬ್ಬರು ಯುವ ವೈದ್ಯರಿದ್ದಾರೆ. ಇವರು ಕೊರೊನಾ ಸಂದರ್ಭದಲ್ಲಿ ಒಂದು ದಿನವೂ ರಜೆಯನ್ನೇ ಪಡೆದಿಲ್ಲ. ಅಷ್ಟೇ ಅಲ್ಲ ಈ ದಿನಗಳಲ್ಲಿ ಕೆಲಸ ಮಾಡಿದ್ದಕ್ಕೆ ಸರ್ಕಾರ ನೀಡಿದ್ದ ಸಂಬಳವನ್ನೆಲ್ಲಾ ನೇರವಾಗಿ ಕೋವಿಡ್ ಕೆಲಸಕ್ಕೇ ನೀಡಿ ಜನರ ಪ್ರಶಂಸೆಗೆ ಪಾತ್ರನಾಗಿದ್ದಾರೆ.

    ಹೌದು ಧಾರವಾಡದ ಕಮಲಾಪೂರ ನಿವಾಸಿಯಾದ 23 ವರ್ಷದ ಡಾ. ಮಯೂರೇಶ್ ಲೋಹಾರ್, ಕಳೆದ ಜುಲೈ ತಿಂಗಳಲ್ಲಿ ಬಿಎಎಂಎಸ್ ಮುಗಿಸಿ ನೇರವಾಗಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕು ಆಸ್ಪತ್ರೆಗೆ ಕೆಲಸಕ್ಕೆ ಹಾಜರಾಗಿದ್ದರು. ಅಷ್ಟೊತ್ತಿಗಾಗಲೇ ದೇಶದಲ್ಲಿ ಕೊರೊನಾ ಹಾವಳಿ ಮಿತಿ ಮೀರಿ ಹೋಗಿತ್ತು. ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಬಹುತೇಕ ಸರ್ಕಾರಿ ಸೇವೆಯಲ್ಲಿರೋ ಜನರು ಕೆಲಸ ಮಾಡಲು ಹಿಂದೇಟು ಹಾಕೋ ಸಮಯದಲ್ಲಿಯೇ, ಇವರು ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ.

    ಕೆಲಸಕ್ಕೆ ಬಂದ ಕೂಡಲೇ ಇವರನ್ನು ಕೋವಿಡ್ ವಾರ್ಡಿಗೆ ಕೆಲಸಕ್ಕೆ ನಿಯೋಜಿಸಲಾಯಿತು. 60 ಹಾಸಿಗೆಗಳ ಆಸ್ಪತ್ರೆಯಲ್ಲಿ ಸತತವಾಗಿ ಮೂರು ತಿಂಗಳ ಕಾಲ ಕೋವಿಡ್ ವಾರ್ಡ್ ನಲ್ಲಿಯೇ ಕೆಲಸ ಮಾಡಿದ ಡಾ. ಮಯೂರೇಶ, ತಮಗೆ ಬಂದ ಸಂಬಂಳದಿಂದ ಇದೀಗ ಎನ್-95 ಮಾಸ್ಕ್‍ಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಈ ಮೂರು ತಿಂಗಳ ಅವಧಿಯಲ್ಲಿ ಡಾ. ಮಯೂರೇಶ್ ಒಂದು ದಿನವೂ ರಜೆ ಪಡೆಯದೇ ಕೆಲಸ ಮಾಡಿದ್ದಾರೆ. ಬಿಡುವಿನ ವೇಳೆಯಲ್ಲಿ ಖಾಸಗಿ ಕೋವಿಡ್ ಆಸ್ಪತ್ರೆಯಲ್ಲಿಯೂ ಕೆಲಸ ಮಾಡಿ, ಅಲ್ಲಿ ಬಂದ ಸಂಬಳ ಹಾಗೂ ಸರ್ಕಾರಿ ಸಂಬಳವನ್ನು ಒಟ್ಟಾರೆ ಸೇರಿಸಿ, ಒಂದೂವರೆ ಲಕ್ಷ ರೂಪಾಯಿಯ ಮಾಸ್ಕ್ ಖರೀದಿಸಿ ಉಚಿತವಾಗಿ ಹಂಚಿದ್ದಾರೆ.

    ಕೋವಿಡ್ ಸಂದರ್ಭದಲ್ಲಿ ತಮ್ಮ ಸಂಬಳದಲ್ಲಿಯೇ ಸಮಾಜಕ್ಕೆ ಸಹಾಯ ಮಾಡುತ್ತಿರೋ ಇವರ ಸೇವೆಗೆ ಗೆಳೆಯರು ಸಾಥ್ ನೀಡಿದ್ದಾರೆ. ಒಟ್ಟು 5,000 ಎನ್ 95 ಹಾಗೂ 5,000 ಥ್ರೀ ಲೇಯರ್ ಮಾಸ್ಕ್‍ಗಳನ್ನು ಇದುವರೆಗೂ ಹಂಚಿರುವ ಈ ವೈದ್ಯ, ಶಾಲೆಗಳು ಆರಂಭವಾಗೋ ಸಾಧ್ಯತೆ ಇರುವುದರಿಂದ ಬಿಇಓ ಕಚೇರಿಗೆ 1,000, ಪೊಲೀಸ್ ಇಲಾಖೆಗೆ 500, ಎರಡು ಅನಾಥಾಶ್ರಮಗಳು ಸೇರಿದಂತೆ ಧಾರವಾಡದ ವಿವಿಧ ಪ್ರದೇಶಗಳಲ್ಲಿ ಮಾಸ್ಕ್ ಗಳನ್ನು ಉಚಿತವಾಗಿ ನೀಡಿದ್ದಾರೆ.

  • ದುರ್ದೈವದಿಂದ KSRTC, BMTC ನೌಕರರ ಸಂಬಳ ನೀಡಲು ಆಗಿಲ್ಲ: ಲಕ್ಷ್ಮಣ ಸವದಿ

    ದುರ್ದೈವದಿಂದ KSRTC, BMTC ನೌಕರರ ಸಂಬಳ ನೀಡಲು ಆಗಿಲ್ಲ: ಲಕ್ಷ್ಮಣ ಸವದಿ

    ಬೆಳಗಾವಿ: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರ ಸಂಬಳ ನೀಡುವಲ್ಲಿ ವಿಳಂಬವಾಗಿದೆ. ಈ ಕುರಿತು ಸಾರಿಗೆ ನೌಕರರು ಅಳಲು ತೋಡಿಕೊಂಡಿದ್ದು ನಾನು ಒಪ್ಪಿಕೊಳ್ಳುತ್ತೇನೆ. ದುರ್ದೈವದಿಂದ ಸಂಬಳ ನೀಡಲು ಆಗಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಹೇಳಿದ್ದಾರೆ.

    ಎಂಟು ತಿಂಗಳಿಂದ ಕೊರೊನಾ ಬಂದಿದ್ದು, ಮೊದಲ ಎರಡು ತಿಂಗಳು ಸರ್ಕಾರದಿಂದ ಸಂಬಳ ನೀಡಿದ್ದೇವೆ. ಬಸ್‍ನಲ್ಲಿ ಸಾರ್ವಜನಿಕರು ಪ್ರಯಾಣಿಸುತ್ತಿಲ್ಲ, ಹೀಗಾಗಿ ಬರುತ್ತಿರುವ ಆದಾಯದಲ್ಲಿ ಬರಿ ಡೀಸೆಲ್‍ಗೆ ಸಾಕಾಗುತ್ತಿದೆ. ಈ ಕಾರಣಕ್ಕೆ ಸರ್ಕಾರಕ್ಕೆ ಸಂಬಳ ನೀಡುವಂತೆ ಪ್ರಸ್ತಾವನೆ ಕಳುಹಿಸಿದ್ದೇವು. ಪ್ರತಿ ತಿಂಗಳು 325 ಕೋಟಿ ರೂ. ಸಂಬಳಕ್ಕೆ ಹಣ ಬೇಕು. ಇನ್ನೂ ಮೂರು ತಿಂಗಳು ಸರ್ಕಾರವೇ ಹಣ ಕೊಡಬೇಕು ಅಂತಾ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದರು.

    ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಸಿಎಂಗೆ ಮನವರಿಕೆ ಮಾಡಿಕೊಟ್ಟು ಸಂಬಳ ನೀಡಲು ಮನವಿ ಮಾಡುತ್ತೇನೆ. ಮೂರು ತಿಂಗಳಿಂದ ಸಂಬಳಕ್ಕಾಗಿ ಎರಡು ಬಾರಿ ಪ್ರಸ್ತಾವನೆ ಕಳುಹಿಸಿದ್ದೇವು. ಎರಡು ಬಾರಿ ಪ್ರಸ್ತಾವನೆ ವಾಪಾಸ್ ಬಂದಿದೆ. ಮತ್ತೆ ಈಗ ಪ್ರಸ್ತಾವನೆ ಕಳುಹಿಸಿದ್ದೇವೆ. ಶೇಕಡಾ 70 ರಷ್ಟಾದ್ರೂ ಸರ್ಕಾರ ಹಣ ಕೊಟ್ಟರೆ ಉಳಿದ ಹಣವನ್ನು ಸಾಲ ಪಡೆದುಕೊಂಡಾದರೂ ಸಂಬಳ ನೀಡುತ್ತೇವೆ. ಸರ್ಕಾರದಲ್ಲಿ ಆದಾಯದ ಕೊರತೆ ಇರುವುದಕ್ಕೆ ಮುಂದಕ್ಕೆ ಹಾಕುತ್ತಿದ್ದಾರೆ. ಮೂರ್ನಾಲ್ಕು ದಿನಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿಯಾದರೂ ಸಂಬಳ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

    ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಈ ತಿಂಗಳ ಸಂಬಳವೇ ಆಗಿಲ್ಲ. ಸಂಸ್ಥೆ ಆರ್ಥಿಕ ನಷ್ಟದಲ್ಲಿದೆ ಎಂದು ಸಾರಿಗೆ ನಿಗಮ ಇನ್ನೂ ವೇತನ ಪಾವತಿ ಮಾಡಿಲ್ಲ. ಪ್ರತಿ ತಿಂಗಳು 4 ರಿಂದ 10ನೇ ದಿನಾಂಕದೊಳಗ ವೇತನ ಆಗುತ್ತಿತ್ತು. ಆದರೆ ಈಗಾಗಲೇ ಅರ್ಧ ತಿಂಗಳು ಕಳೆದಿದ್ದರೂ ಕೆಎಸ್‌ಆರ್‌ಟಿಸಿ ಸಿಬ್ಬಂದಿಗೆ ಇನ್ನೂ ಸಂಬಳವಾಗಿಲ್ಲ. ಸಂಬಳವಿಲ್ಲದೇ ಹಬ್ಬ ಮಾಡೋಕೆ ಕಷ್ಟ ಆಗಿದೆ ಎಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಅಳಲು ತೊಡಿಕೊಂಡಿದ್ದಾರೆ. ಲಾಕ್‍ಡೌನ್‍ನಿಂದ ನಾಲ್ಕು ಸಾರಿಗೆ ನಿಗಮಗಳು ಆರ್ಥಿಕ ನಷ್ಟದಲ್ಲಿತ್ತು. ಕಳೆದ ಸೆಪ್ಟೆಂಬರ್ ತಿಂಗಳ ತನಕ ರಾಜ್ಯ ಸರ್ಕಾರವೇ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳಿಗೆ ಸಂಬಳ ನೀಡಿತ್ತು. ಆದರೆ ಈಗ ಕೆಎಸ್‌ಆರ್‌ಟಿಸಿ ಆಡಳಿತ ಮಂಡಳಿಯೇ ತನ್ನ ಸಿಬ್ಬಂದಿಗೆ ವೇತನ ನೀಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ.

  • ಜ್ಞಾನ ದೀವಿಗೆಗೆ ಗೌರವ ಧನದ  ಜೊತೆ 2 ಟ್ಯಾಬ್ ಕೊಟ್ಟ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

    ಜ್ಞಾನ ದೀವಿಗೆಗೆ ಗೌರವ ಧನದ ಜೊತೆ 2 ಟ್ಯಾಬ್ ಕೊಟ್ಟ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ

    ಉಡುಪಿ: ಪಬ್ಲಿಕ್ ಟಿವಿ ರಾಜ್ಯದಲ್ಲೇ ಒಂದು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟಿದೆ. ಸರ್ಕಾರಿ ಶಾಲೆ ಎಸ್‍ಎಸ್‍ಎಲ್‍ಸಿ ಮಕ್ಕಳಿಗೆ ಉಚಿತ ಟ್ಯಾಬ್ ವಿತರಣೆ ಒಂದು ಹೋರಾಟದ ಯೋಜನೆ. ನನ್ನಂತಹ ಸಾವಿರಾರು ಜನರಿಗೆ ಕಣ್ಣು ತೆರೆಸುವ ಯೋಜನೆಯಿದೆ. ನನ್ನ ಒಂದು ತಿಂಗಳ ಗೌರವಧನ ಮತ್ತು ಎರಡು ಟ್ಯಾಬ್ ನೀಡುವುದಾಗಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ ಹೇಳಿದರು.

    ಇದು ಮಕ್ಕಳ ಭವಿಷ್ಯ ನಿರ್ಣಯವಾಗುವ ವರ್ಷ. ಸರ್ಕಾರದಿಂದ ನನಗೆ ಪ್ರತಿ ತಿಂಗಳು ಗೌರವಧನ ಬರುತ್ತದೆ. ಈ ತಿಂಗಳ ನನ್ನ ಸಂಬಳವನ್ನು ಜ್ಞಾನದೀವಿಗೆ ಕಾರ್ಯಕ್ರಮಕ್ಕೆ ನೀಡುತ್ತೇನೆ. ಇದರ ಜೊತೆಗೆ ಎರಡು ಟ್ಯಾಬ್ ನನ್ನ ವೈಯಕ್ತಿಕ ನೆಲೆಯಲ್ಲಿ ಮೂಲಕ ಸರ್ಕಾರಿ ಶಾಲೆಯ ಮಕ್ಕಳಿಗೆ ಕೊಡುತ್ತೇನೆ.

    ಇಂತಹ ಜನಪರ ಯೋಜನೆ ಮಾಧ್ಯಮದ ಮೂಲಕ ಆರಂಭವಾಗಿ ಸಮಾಜಕ್ಕೆ ಹೋದರೆ ಇದೊಂದು ಕ್ರಾಂತಿ ಆಗುತ್ತದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಸದುಪಯೋಗವಾಗುವ ಎಷ್ಟು ಯೋಜನೆಗಳು ಬಂದರೂ ಅದಕ್ಕೆ ಖಂಡಿತವಾಗಿ ಜನ ಬೆಂಬಲ ಕೊಡಲೇಬೇಕು. ಈ ಜನಪರ ಯೋಜನೆ ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೆ ಇಡೀ ದೇಶದಲ್ಲಿ ಒಂದು ಸಂಚಲನ ಮೂಡಿಸುವ ಯೋಜನೆಯಾಗಲಿ. ಆಯಾಯ ರಾಜ್ಯದ ಮಾಧ್ಯಮಗಳು, ಸಂಸ್ಥೆಗಳು ಸರ್ಕಾರಗಳು ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿ ಎಂದರು.

    ಶಾಲೆ ಆರಂಭ ಆಗುವ ಬಗ್ಗೆ ಸಾಕಷ್ಟು ಗೊಂದಲ ಪೋಷಕರಲ್ಲಿ ಮಕ್ಕಳಲ್ಲಿ ಸರ್ಕಾರದಲ್ಲಿ ಇದೆ. ಇಂತಹ ಸಂದರ್ಭದಲ್ಲಿ ಶಾಲೆಗಳನ್ನು ತೆರೆಯುವುದು ಬಹಳ ಕಷ್ಟ. ವಿದ್ಯಾಭ್ಯಾಸ ವಿಚಾರದಲ್ಲಿ ಮಕ್ಕಳ ಭವಿಷ್ಯ ಬಹಳ ಮುಖ್ಯ. ಶಾಲೆ ಆರಂಭವಾಗದಿದ್ದರೆ ಅವರ ಮುಂದಿನ ಭವಿಷ್ಯಕ್ಕೆ ಸಾಕಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಇಡೀ ವರ್ಷ ಶೂನ್ಯ ವರ್ಷ ಆಗುವ ಸಾಧ್ಯತೆ ಇದೆ.

    ಶ್ರೀಮಂತರ ಮಕ್ಕಳು ಈಗಾಗಲೇ ಅತ್ಯಾಧುನಿಕ ತಂತ್ರಜ್ಞಾನಕ್ಕೆ ತೆರೆದುಕೊಂಡಿದ್ದಾರೆ. ಮಧ್ಯಮ ವರ್ಗದ ಮಕ್ಕಳು ಸಾಲ ಮಾಡಿಯಾದರು ಮಕ್ಕಳಿಗೆ ಲ್ಯಾಪ್ಟಾಪ್ ಟ್ಯಾಬ್ ಮೊಬೈಲ್ ಕೊಡಿಸಿದ್ದಾರೆ. ಆದರೆ ಸರ್ಕಾರಿ ಶಾಲೆಗೆ ಹೋಗುವ ಕಡುಬಡ ಮಕ್ಕಳು ಎಲ್ಲಾ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈಗ ಕೊರೊನಾ ಸಂಕಷ್ಟ ಇದೆ. ಎಲ್ಲರನ್ನೂ ಆರ್ಥಿಕ ಸಂಕಷ್ಟ ಇದೆ. ಈ ನಡುವೆಯೂ ಸಹಾಯ ಮಾಡುವ ದೊಡ್ಡ ಮನಸ್ಸು ಮಾಡಬೇಕು.

    ಎಲ್ಲವನ್ನು ಸರ್ಕಾರನೇ ಕೊಡಬೇಕು ಎಂದು ಒತ್ತಡ ಹಾಕಲು ಸಾಧ್ಯವಿಲ್ಲ. ಸಿರಿವಂತರು ಧನವಂತರು ತಮ್ಮ ಬಳಿ ಹೆಚ್ಚುವರಿ ಹಣ ಇದ್ದವರು ತಮ್ಮ ಕೈಲಾದ ಸಹಾಯವನ್ನು ಬಡಮಕ್ಕಳಿಗೆ ಸಹಾಯ ಮಾಡಿ. ಆರಂಭವಾದ ಯೋಜನೆಯನ್ನು ಸರಕಾರ ಮುಂದೆ ಕೈಗೆತ್ತುಕೊಂಡು ಪ್ರತಿಯೊಬ್ಬರಿಗೂ ಕೂಡ ಜ್ಞಾನ ದೀವಿಗೆ ಟ್ಯಾಬ್ ಯೋಜನೆ ತಲುಪಬೇಕು. ಯೋಜನೆಗೆ ದಾರಿ ಗೊತ್ತಾಗಿದೆ ಆ ದಾರಿಯ ಮೂಲಕ ಮುನ್ನಡೆಯಬೇಕಾಗಿದೆ ಎಂದರು.

  • ಸಿಸ್ಕೋ, ಅಮೆಜಾನ್‌ 49 ಸಾವಿರ, ಗೂಗಲ್‌ನಲ್ಲಿ 46 ಸಾವಿರ – ಐಟಿ ಇಂಟರ್ನಿಗಳ ತಿಂಗಳ ಸಂಬಳ ಎಷ್ಟು?

    ಸಿಸ್ಕೋ, ಅಮೆಜಾನ್‌ 49 ಸಾವಿರ, ಗೂಗಲ್‌ನಲ್ಲಿ 46 ಸಾವಿರ – ಐಟಿ ಇಂಟರ್ನಿಗಳ ತಿಂಗಳ ಸಂಬಳ ಎಷ್ಟು?

    ಬೆಂಗಳೂರು: ದೇಶದಲ್ಲಿರುವ ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಇಂಟರ್ನಿಗಳಾಗಿ ಕೆಲಸ ಮಾಡುತ್ತಿರುವ ಉದ್ಯೋಗಿಗಳು ತಿಂಗಳಿಗೆ ಅಂದಾಜು 40 ಸಾವಿರಕ್ಕೂ ಹೆಚ್ಚು ಸಂಬಳವನ್ನು ಪಡೆಯುತ್ತಿದ್ದಾರೆ.

    ಸಿಸ್ಕೊ ಇಂಡಿಯಾದಲ್ಲಿ ಇಂಟರ್ನ್‌ಗಳ ಮಾಸಿಕ ವೇತನ 49,324 ರೂ.ಇದ್ದರೆ ಅಮೆಜಾನ್‌ನಲ್ಲಿ 49,008 ರೂ. ಇದೆ ಎಂದು ಕಂಪನಿಗಳ ಉದ್ಯೋಗ, ಸಂಬಳದ ಬಗ್ಗೆ ಅಧ್ಯಯನ ನಡೆಸುತ್ತಿರುವ ಗ್ಲಾಸ್‌ಡೂರ್‌ ವೆಬ್‌ಸೈಟ್‌ ತಿಳಿಸಿದೆ.

    ಯಾವ ಕಂಪನಿ ಎಷ್ಟು?
    ಮೈಕ್ರೋಸಾಫ್ಟ್‌ 47,798 ರೂ., ಅಡೋಬ್‌ 47,719 ರೂ., ಗೂಗಲ್‌ 46,963 ರೂ, ಸ್ಯಾಮ್‌ಸಂಗ್‌ ರಿಸರ್ಚ್‌ ಆಂಡ್‌ ಡೆವಲಪ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ ಇಂಡಿಯಾ 42,190 ರೂ. ಸಂಬಳ ನೀಡುತ್ತದೆ.

    ಗೋಲ್ಡ್‌ ಮ್ಯಾನ್‌ ಸ್ಯಾಕ್ಸ್‌ 36,873 ರೂ., ಎನ್ವಿಡಿಯಾ 36,840 ರೂ., ಐಬಿಎಂ 34,973 ರೂ., ಟೆಕ್ಸಾಸ್‌ ಇನ್‌ಸ್ಟ್ರುಮೆಂಟ್ಸ್‌ 34,562 ರೂ., ಒರಾಕಲ್‌ 32,964 ರೂ. ಹಣವನ್ನು ತಿಂಗಳ ಸಂಬಳವಾಗಿ ನೀಡುತ್ತದೆ.

    ವರ್ಷವೊಂದಕ್ಕೆ ಭಾರತದಲ್ಲಿ 600 ಮತ್ತು ಅಮೆರಿಕದಲ್ಲಿ 700 ಇಂಟರ್ನ್‌ಗಳನ್ನು ಕಂಪನಿ ನೇಮಕ ಮಾಡಿಕೊಳ್ಳುತ್ತದೆ ಎಂದು ಸಿಸ್ಕೋ ವಕ್ತಾರರು ತಿಳಿಸಿದ್ದಾರೆ. ಇಂಟರ್ನ್‌ಗಳಾಗಿ ಅರೆ ಕಾಲಿಕ ಅವಧಿಗೆ ಸೇರ್ಪಡೆಗೊಂಡರೂ ಮುಂದೆ ಬಹಳಷ್ಟು ಮಂದಿ ನಂತರ ಕಾಯಂ ಉದ್ಯೋಗಿಗಳಾಗುತ್ತಿದ್ದಾರೆ. ಭಾರತದಲ್ಲಿ ಕಳೆದ ವರ್ಷ ಶೇ.70 ಮಂದಿ ಇಂಟರ್ನ್‌ಗಳು ಕಾಯಂ ಉದ್ಯೋಗಿಗಳಾಗಿದ್ದಾರೆ.

    ಪ್ರಮುಖ ಬಿ-ಸ್ಕೂಲ್‌ಗಳಿಂದ ಬರುವ 100 ಅಭ್ಯರ್ಥಿಗಳಿಗೆ ವಿಪ್ರೋ ಮಾಸಿಕ 85,000 ರೂ.ಗಳ ಸ್ಟೈಫಂಡ್‌ ನೀಡುತ್ತದೆ. ಯಾವ ಶೈಕ್ಷಣಿಕ ಸಂಸ್ಥೆಯಲ್ಲಿ ಓದಿದ್ದಾರೆ? ಅವರ ಶೈಕ್ಷಣಿಕ ಅರ್ಹತೆಗಳನ್ನು ನೋಡಿಕೊಂಡು ಇಂಟರ್ನಿಗಳ ಸಂಬಳ ನಿರ್ಧಾರವಾಗುತ್ತದೆ.