ರಾಜ್ಯ ಸರ್ಕಾರಿ ನೌಕರರಿಗೆ ಜನವರಿ 1 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯನ್ನು ಶೇ. 2.75 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸರ್ಕಾರ 1447 ಕೋಟಿ ರೂ. ವಾರ್ಷಿಕ ವೆಚ್ಚ ಭರಿಸಲಿದೆ. ಸರ್ಕಾರಿ ಆದೇಶ ಹೊರಡಿಸಲಾಗುವುದು.
ಈ ಸಂಬಂಧ ಮಾಹಿತಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯ ಸರ್ಕಾರಿ ನೌಕರರಿಗೆ ಜನವರಿ 1 ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯನ್ನು ಶೇ. 2.75 ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸರ್ಕಾರ 1447 ಕೋಟಿ ರೂ. ವಾರ್ಷಿಕ ವೆಚ್ಚ ಭರಿಸಲಿದೆ. ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
ಚಂಡೀಗಢ: ಪಂಜಾಬ್‌ನ ನೂತನ ಅಡ್ವೋಕೇಟ್ ಜನರಲ್ ಅನ್ಮೋಲ್ ರತ್ತನ್ ಸಿಧು ಸಂದರ್ಶನವೊಂದರಲ್ಲಿ, ನನ್ನ ಕೆಲಸಕ್ಕೆ ಕೇವಲ 1 ರೂ. ಸಂಬಳವನ್ನು ತೆಗೆದುಕೊಳ್ಳುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.
ಸರ್ಕಾರದೊಂದಿಗೆ ಒಟ್ಟಾಗಿ ಕೆಲಸ ಮಾಡುವಾಗ ಸಂಪೂರ್ಣ ಪಾರದರ್ಶಕತೆಯೊಂದಿಗೆ ಕೆಲಸವನ್ನು ನಿರ್ವಹಿಸುವುದರೊಂದಿಗೆ ರಾಜ್ಯದ ವೆಚ್ಚಗಳಿಗೆ ಹೊರೆಯಾಗುವುದಿಲ್ಲ. ಇದಕ್ಕಾಗಿ ಕಾನೂನು ವೇತನವಾಗಿ ಕೇವಲ 1 ರೂ. ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ರೈತ ಕುಟುಂಬದಲ್ಲಿ ಜನಿಸಿದ ಅನ್ಮೋಲ್ ರತ್ತನ್ ಸಿಧು ಹಳ್ಳಿಯ ಸರ್ಕಾರಿ ಶಾಲೆಗಳಲ್ಲಿ ಓದಿದವರು. ಬಳಿಕ ಚಂಡೀಗಢಕ್ಕೆ ಸ್ಥಳಾಂತರಗೊಂಡು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ವ್ಯಾಸಂಗ ಪೂರೈಸಿದರು. ಕಾಲೇಜು ಜೀವನದಲ್ಲಿ ಒಬ್ಬ ಕ್ರಿಯಾಶೀಲ, ಸಾಮಾಜಿಕ, ರಾಜಕೀಯ ವಿದ್ಯಾರ್ಥಿಯಾಗಿ ಉಳಿದಿದ್ದ ಸಿಧು ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರು. ಇದನ್ನೂ ಓದಿ: ಕುಶಾಲನಗರ-ಸಂಪಾಜೆ ಚತುಷ್ಪಥ ರಸ್ತೆ ನಿರ್ಮಾಣ ಇಲ್ಲ: ಪ್ರತಾಪ್ ಸಿಂಹ ಸ್ಪಷ್ಟನೆ
1985ರಲ್ಲಿ ವಕೀಲ ವೃತ್ತಿಯನ್ನು ಪ್ರವೇಶಿಸಿ, 1993ರಲ್ಲಿ ಪಂಜಾಬ್‌ನ ಡೆಪ್ಯುಟಿ ಅಡ್ವೊಕೇಟ್ ಜನರಲ್ ಆಗಿ ಸೇರಿಕೊಂಡರು. 2007ರಲ್ಲಿ ಹಿರಿಯ ವಕೀಲರಾಗಿ ನೇಮಕಗೊಂಡ ಸಿಧು ಬಳಿಕ 2014ರ ವರೆಗೆ ಭಾರತದ ಸಹಾಯಕ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದರು. ಇದನ್ನೂ ಓದಿ: ಪಠ್ಯಪುಸ್ತಕದಲ್ಲಿ ಪುನೀತ್ ಜೀವನ ಕಥನ
ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ನಲ್ಲಿ ಸಿಬಿಐಗೆ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿಯೂ ಇದ್ದ ಸಿಧು, ಎಂಟು ಬಾರಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಭಾರತದ ಯಾವುದೇ ಹೈಕೋರ್ಟ್ನಲ್ಲಿ ಇಲ್ಲಿಯವರೆಗೆ ಇಷ್ಟೊಂದು ಬಾರಿ ಆಯ್ಕೆಯಾದವರೇ ಇಲ್ಲ.
ಇದೀಗ ಪಂಜಾಬ್‌ನ ನೂತನ ಅಡ್ವೋಕೇಟ್ ಜನರಲ್ ಆಗಿ ಅನ್ಮೋಲ್ ರತ್ತನ್ ಸಿಧು ಶನಿವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಬೆಂಗಳೂರು: ರಾಜ್ಯ ಸಾರಿಗೆ ನೌಕರಿಗೆ ವೇತನ ವಿಳಂಬ ಮಾಡುತ್ತಿರುವ ಸರ್ಕಾರದ ನಡೆಯನ್ನು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಕೂಡಲೇ ಸಾರಿಗೆ ನೌಕರರಿಗೆ ವೇತನ ಪಾವತಿ ಮಾಡಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರನ್ನು ಒತ್ತಾಯ ಮಾಡಿದ್ದಾರೆ.
ಹೆಚ್‍ಡಿಕೆ ಹೇಳಿದ್ದೇನು?
ಕೊರೊನಾ ಮಹಾಮಾರಿಯಿಂದ ತತ್ತರಿಸಿರುವ KSRTC ಮತ್ತು BMTC ನೌಕರರ ಮೇಲೆ ಸರ್ಕಾರಕ್ಕೆ ಅನಾದರ ಏಕೆ? ಈ ನೌಕರರಿಗೆ ಆಗಸ್ಟ್ ತಿಂಗಳಲ್ಲಿ ಅರ್ಧ ಸಂಬಳವೇ ಆಗಿದ್ದು, ಸೆಪ್ಟೆಂಬರ್ ತಿಂಗಳ ಪೂರ್ಣ ಸಂಬಳ ಆಗಿಲ್ಲ ಎನ್ನುವ ಮಾಹಿತಿ ನನಗೆ ಬಂದಿದೆ. ಇದನ್ನೂ ಓದಿ: ಪಕ್ಷಿಗಳಿಗೆ ಪುನರ್ಜನ್ಮ ನೀಡುತ್ತಿರುವ ರಾಯಚೂರಿನ ಪಕ್ಷಿಪ್ರೇಮಿ ಸಲ್ಲಾವುದ್ದೀನ್
ಮಕ್ಕಳು ತಪ್ಪು ಮಾಡುವುದು ಸಹಜ. ತಂದೆ ತಾಯಿ ಸ್ಥಾನದಲ್ಲಿರುವ ಸರ್ಕಾರ ಕ್ಷಮಿಸಿ ಔದಾರ್ಯ ತೋರಿಸುವ ದೊಡ್ಡ ಮನಸ್ಸು ಮಾಡಬೇಕು. ಸಾರಿಗೆ ನೌಕರರ ಮೇಲೆ ಹಗೆತನ ಸಾಧಿಸುವುದು ಬೇಡ. ಜೀವದ ಹಂಗು ತೊರೆದು, ಮಹಾಮಾರಿಯನ್ನು ಲೆಕ್ಕಿಸದೆ ಅವರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಾರಿಗೆ ನೌಕರರ ವೇತನ ವಿಳಂಬ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ತಕ್ಷಣವೇ ವೇತನ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ಸಕಾಲಕ್ಕೆ ವೇತನ ಪಾವತಿಸಲು ಮುಖ್ಯಮಂತ್ರಿ @BSBommai ಹಾಗೂ ಸಾರಿಗೆ ಸಚಿವ @sriramulubjp ಕೂಡಲೇ ಕ್ರಮ ವಹಿಸಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ.
ಸಾರಿಗೆ ನೌಕರರ ವೇತನ ವಿಳಂಬ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ತಕ್ಷಣವೇ ವೇತನ ಬಿಡುಗಡೆ ಮಾಡಬೇಕು. ಪ್ರತಿ ತಿಂಗಳು ಸಕಾಲಕ್ಕೆ ವೇತನ ಪಾವತಿಸಲು ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಕೂಡಲೇ ಕ್ರಮ ವಹಿಸಬೇಕು ಎಂದು ನಾನು ಒತ್ತಾಯ ಮಾಡುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಶಾರೂಖ್, ಗೌರಿ ಖಾನ್ ಬೆಂಬಲಕ್ಕೆ ನಿಂತ ಸುಸ್ಸಾನೆ ಖಾನ್, ಮಿಕಾ ಸಿಂಗ್!
ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣ ಪಂಚಾಯತಿಯಲ್ಲಿ ಕಳೆದ 28 ತಿಂಗಳಿನಿಂದ ಕಾರ್ಮಿಕರ ಸಂಬಳ ಆಗಿಲ್ಲ. ಹೀಗಾಗಿ ಪೌರಕಾರ್ಮಿಕರು, ಸಿಬ್ಬಂದಿ, ಪಟ್ಟಣ ಪಂಚಾಯತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಸಿ ಸಂಬಳಕ್ಕಾಗಿ ಒತ್ತಾಯಿಸಿದರು.
ಪಟ್ಟಣ ಪಂಚಾಯತಿಯಲ್ಲಿ 27 ಜನ ಖಾಯಂ ಪೌರಕಾರ್ಮಿಕರು, 22 ಜನ ದಿನಗೂಲಿ ನೌಕರರಿದ್ದಾರೆ. ಇದರಲ್ಲಿ 2019ರ ಏಪ್ರಿಲ್ ನಿಂದ 22 ಜನ ದಿನಗೂಲಿ ನೌಕರರ ವೇತನ ಆಗಿಲ್ಲ. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೂ ಸಹ ವೇತನವಾಗಿಲ್ಲ. ಆದರೂ ಎಲ್ಲಾ ಸಿಬ್ಬಂದಿ ಕೋವಿಡ್‍ನಂತಹ ಕಠಿಣ ಸಮಯದಲ್ಲೂ ಸಂಬಳವಿಲ್ಲದೆ ಕೆಲಸ ಮಾಡಿದ್ದಾರೆ.
ಸಂಬಳ ಇಲ್ಲದೆ ಈಗ ಪರಸ್ಥಿತಿ ಮಿತಿಮೀರಿದ್ದರಿಂದ ಎಂಟು ದಿನದಿಂದ ಕೆಲಸ ಮಾಡುತ್ತಿಲ್ಲ. ಸಂಬಳ ನೀಡುವವರೆಗೆ ಕೆಲಸ ಮಾಡುವುದಿಲ್ಲ ಅಂತ ಪೌರಕಾರ್ಮಿಕರು ಪಟ್ಟುಹಿಡಿದಿದ್ದಾರೆ. ಜಿಲ್ಲಾಧಿಕಾರಿಗಳು ಸಂಬಳ ಬಿಡುಗಡೆ ಮಾಡಿಸಬೇಕು ಅಂತ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಬಾಕಿ ವೇತನ ಪಾವತಿಗೆ ಒತ್ತಾಯ: ಹಟ್ಟಿ ಚಿನ್ನದ ಗಣಿ ಕಾರ್ಮಿಕರಿಂದ ಪ್ರತಿಭಟನೆ
– ವೇತನವಿಲ್ಲದೇ ದುಡಿಯುತ್ತಿರುವ ಗಾಂಧಿ ಮ್ಯೂಸಿಯಮ್ ಸಿಬ್ಬಂದಿ – ಹಾಳು ಕೊಂಪೆಯಾದ ಗಾಂಧಿ ಸ್ವಾತಂತ್ರ್ಯ ಸ್ಮಾರಕ ಭವನ
ಕಾರವಾರ: ಟಾಯ್ಲೆಟ್ ನಲ್ಲಿ ಬಿದ್ದ ಪುಸ್ತಕಗಳು, ಪಾಳು ಬಿದ್ದ ಗಾಂಧಿ ವಸ್ತುಸಂಗ್ರಹಾಲಯದ ಕಟ್ಟಡ, ಮೂಲೆ ಸೇರಿದ ಗಾಂಧಿ ಪ್ರತಿಮೆ. ಒಂದು ವರ್ಷದಿಂದ ಸಂಬಳ ಇಲ್ಲದೇ ದುಡಿಯುವ ಕೆಲಸಗಾರರು. ಇಂತದ್ದೊಂದು ಸ್ಥಿತಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕ್ಷೇತ್ರದಲ್ಲಿದೆ. ಅಲ್ಲಿನ ಸ್ಥಿತಿ ನೋಡಿದರೆ ಎಂತವರೂ ತಲೆತಗ್ಗಿಸುವಂತಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ನಗರದ ಹೃದಯ ಭಾಗದಲ್ಲಿರುವ ಗಾಂಧಿ ಸ್ವತಂತ್ರ್ಯ ಸಂಗ್ರಾಮ ಸ್ಮಾರಕ ಭವನ ಹಾಗೂ ವಸ್ತು ಸಂಗ್ರಹಾಲಯ ಇದೀಗ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ ಹಾಳು ಕೊಂಪೆಯಾಗಿ ಮಾರ್ಪಟ್ಟಿದೆ.
ಹೀಗಿದೆ ಅಲ್ಲಿನ ಸ್ಥಿತಿ
ಎಲ್ಲಿ ನೋಡಿದರಲ್ಲಿ ಕಸದ ರಾಶಿ ,ಮುರಿದು ಬಿದ್ದ ಕಿಟಕಿ, ಮೂಲೆ ಸೇರಿದ ಗಾಂಧಿ ಪ್ರತಿಮೆ, ಟಾಯ್ಲೆಟ್ ನಲ್ಲಿ ಸಂಗ್ರಹಿಸಿಟ್ಟ ಪುಸ್ತಕ. ವಿದ್ಯುತ್ ಇಲ್ಲದ ಬಲ್ಪುಗಳು, ಮುರಿದ ಫ್ಯಾನ್ ಗಳು ಹೀಗೆ ಎದುರು ನೋಡುತ್ತಿದ್ದಂತೆ ಹಳೆಯ ಸಿನಿಮಾದಲ್ಲಿ ಬರುವ ಭೂತ ಬಂಗಲೆಯಂತೆ ಭಾಸವಾಗುತ್ತದೆ.
2017ರಲ್ಲಿ ಕೋಟಿ ಮೊತ್ತದ ಅನುದಾನದಲ್ಲಿ ಜಿಲ್ಲೆಯಲ್ಲೇ ಮೊದಲ ಬಾರಿಗೆ ಅಂಕೋಲದಲ್ಲಿ ನಡೆದ ಸ್ವಾತಂತ್ರ್ಯ ಸಂಗ್ರಾಮದ ನೆನಪಿಗಾಗಿ ಸ್ಮಾರಕ ಭವನ ಹಾಗೂ ಗಾಂಧಿಜೀ ವಸ್ತು ಸಂಗ್ರಾಲಯವನ್ನು ನಿರ್ಮಾಣ ಮಾಡಲಾಗಿತ್ತು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಜಿಲ್ಲೆಯಲ್ಲೇ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸ್ಮಾರಕ ಭವನವನ್ನು ಲೋಕಾರ್ಪಣೆ ಮಾಡಿದ್ದರು.
ಇದನ್ನು ನೋಡಿಕೊಳ್ಳಲು ಕಂದಾಯ ಇಲಾಖೆಯಿಂದ ಇಬ್ಬರು ಹಾಗೂ ಪುರಸಭೆ ಯಿಂದ ಓರ್ವ ನೌಕರನನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಯಿತು. ಕಳೆದ ಒಂದು ವರ್ಷದ ವರೆಗೆ ಚೆನ್ನಾಗಿಯೇ ಇದ್ದ ಈ ಭವನ ಇದೀಗ ಜಿಲ್ಲಾಡಳಿತದ ದಿವ್ಯ ನಿರ್ಲಕ್ಷದಿಂದ ಹಾಳು ಕೊಂಪೆಯಾಗಿದೆ.
ವಸ್ತು ಸಂಹ್ರಹಾಲಯ ಹಾಗೂ ಗ್ರಂಥಾಲಯದಲ್ಲಿ ಇರುವ ವಸ್ತುಗಳನ್ನು ಇರಿಸಲು ವ್ಯವಸ್ತೆ ಇಲ್ಲದೇ ಬೇಕಾಬಿಟ್ಟಿ ಇಡಲಾಗಿದೆ. ಓದುಗರ ಕೈಯಲ್ಲಿ ಇರಬೇಕಾದ ಪುಸ್ತಕಗಳು ಟಾಯ್ಲೆಟ್ ಸೇರಿದೆ. ಇನ್ನು ವಿದ್ಯಾರ್ಥಿಗಳ ಅಧ್ಯಯನಕ್ಕೆ ನಿರ್ಮಿಸಿದ ಕಟ್ಟಡ ಹೊಸದಾಗಿದ್ದರೂ ಯಾರೂ ಒಳಗೆ ಹೋಗದಷ್ಟು ಕೆಟ್ಟದಾಗಿದ್ದು ವಿದ್ಯುತ್ ಸಂಪರ್ಕ ಸಹ ಕಡಿತವಾಗಿದ್ದು ಇಲಿ ಹೆಗ್ಗಣದ ಗೂಡಾಗಿದೆ. ಇದನ್ನೂ ಓದಿ: ಮೈಸೂರು ಕೇಸಲ್ಲಿ ಪೊಲೀಸರ ಪಾಲಿಗೆ ಬೆಳಕಾಗಿದ್ದೇ ಬಸ್ ಟಿಕೆಟ್ ಕೊಟ್ಟ ಸುಳಿವು, ಆ ಮೊಬೈಲ್ ನಂಬರ್!
ಇನ್ನು ಇಲ್ಲಿನ ಗುತ್ತಿಗೆ ಆಧಾರದಲ್ಲಿ ನಿಯೋಜನೆ ಗೊಂಡ ಲೈಬ್ರರಿಯನ್ ಗೆ ಐದು ಸಾವಿರ ಕನಿಷ್ಟ ಕೂಲಿ ಹಾಗೂ ಇಲ್ಲಿನ ಕೆಲಸಗಾರನಿಗೆ 2500 ರೂ.ಗಳ ಕನಿಷ್ಟ ವೇತನ ನಿಗದಿ ಮಾಡಿದ್ದು ಕಾರ್ಮಿಕ ನಿಯಮಗಳ ಪ್ರಕಾರ ಇವರಿಗೆ ಸಿಗಬೇಕಾದ ಯಾವ ಸೌಲಭ್ಯವೂ ಈವರೆಗೂ ದೊರೆತಿಲ್ಲ. ಕಳೆದ ಒಂದು ವರ್ಷದಿಂದ ಇಲ್ಲಿನ ಇಬ್ಬರು ನೌಕರರಿಗೆ ಸಂಬಳ ಸಹ ಸಿಗದೇ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: ಕಾಬೂಲ್ ವಿಮಾನ ನಿಲ್ದಾಣದ ಎಂಟ್ರಿ ಗೇಟ್ ಬಳಿ ಮತ್ತೆ ಫೈರಿಂಗ್
ಕೋಟಿಗಟ್ಟಲೇ ಗಾಂಧೀಜಿ ಹೆಸರಲ್ಲಿ ಸ್ವಾತಂತ್ರ್ಯ ಚಳುವಳಿಗಾರರ ನೆನಪಿಗೆ ನಿರ್ಮಿಸಿದ ಈ ಭವನ ಈಗ ಹಾಳು ಕೊಂಪೆಯಾಗಿದೆ. ಅಧ್ಯಯನಕ್ಕೆ ಬರುವ ವಿದ್ಯಾರ್ಥಿಗಳಿಗೆ ಯಾವ ಪುಸ್ತಕಗಳು ಸಿಗದಂತ ಸ್ಥಿತಿ ಇದೆ. ಪ್ರತಿ ದಿನ ಗ್ರಂಥಾಲಯಕ್ಕೆ ಬರುವವರಿಗೆ ಮೂಲ ಸೌಕರ್ಯ ಸಹ ಇಲ್ಲ. ಇದನ್ನೂ ಓದಿ: ಮೈಸೂರು ರೇಪ್ ಪ್ರಕರಣ ಬೆನ್ನತ್ತಿದ ಆ ಸೂಪರ್ ಕಾಪ್ಸ್ ಇವರೇ ನೋಡಿ!
ಇಲ್ಲಿನ ನೌಕರರು ಕೊರೊನಾ ಸಂದರ್ಭದಲ್ಲಿ ಸಹ ಕರ್ತವ್ಯ ನಿರ್ವಹಿಸಿದ್ದರೂ ಒಂದು ವರ್ಷದಿಂದ ಸಂಬಳ ಸಹ ನೀಡಿಲ್ಲ. ಇನ್ನು ಜನಪ್ರತಿನಿಧಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ನೀಡಿ ಮಾಹಿತಿ ನೀಡಿದರೂ ಪ್ರಯೋಜನವಾಗಿಲ್ಲ. ಪುಸ್ತಕಗಳನ್ನು ಓದಲು ಬರುವ ಜನರು ಪುಸ್ತಕಗಳು ಸಿಗದೇ ಮರಳಿ ಹೋಗುವಂತಾಗಿದೆ. ಹೀಗಿರುವಾಗ ಅಧಿಕಾರಿಗಳು ಮಾತ್ರ ಎಲ್ಲಾ ಸರಿಮಾಡುತ್ತೇವೆ ಎನ್ನುವ ಭರವಸೆಗೆ ಸೀಮಿತವಾಗಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊಂಚ ಇಳಿಕೆಯಾದ ಕೊರೊನಾ – ಇಂದು 1,229 ಹೊಸ ಪ್ರಕರಣ
ಉತ್ತರ ಕನ್ನಡ ಜಿಲ್ಲೆಯಲ್ಲೇ ಅಂಕೋಲ ತಾಲೂಕಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಚಳುವಳಿ ತೀವ್ರಗೊಂಡಿತ್ತು. ಹಲವರು ಬ್ರಿಟೀಷರ ಚಡಿಏಟು ತಿಂದು ಪ್ರಾಣವನ್ನು ಕಳೆದುಕೊಂಡಿದ್ದರು. ಕರ ಅಸಹಕಾರ ಚಳುವಳಿಯಿಂದ ಹಿಡಿದು ಉಪ್ಪಿನ ಸತ್ಯಾಗ್ರಹದವರೆಗೂ ಇಲ್ಲಿನ ಜನರು ಗಾಂಧೀಜಿಯವರ ಆದರ್ಶದೊಂದಿಗೆ ಜೊತೆಯಾಗಿದ್ದರು. ಅವರ ಹೋರಾಟದ ಫಲ ಇಂದು ನಾವು ಅನುಭವಿಸುತಿದ್ದೇವೆ. ಇಂತವರಿಗೆ ಗೌರವ ಸಲ್ಲಿಸುವ ನೆಪದಲ್ಲಿ ಇದೀಗ ಗಾಂಧೀಜಿಯವರ ಹೆಸರಿನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಡೆದುಕೊಳ್ಳುವ ರೀತಿ ಮಾತ್ರ ಎಂತವರಲ್ಲೂ ಹೇಸಿಗೆ ಹುಟ್ಟಿಸುತ್ತದೆ. ಇನ್ನಾದರೂ ಇಲ್ಲಿನ ವ್ಯವಸ್ಥೆಯನ್ನು ಸರಿಪಡಿಸಿ ಜನರಿಗೆ ಇದರ ಸೌಲಭ್ಯ ದೊರಕುವಂತಾಗಲಿ ಎಂಬುದೇ ನಮ್ಮ ಆಶಯವಾಗಿದೆ. ಇದನ್ನೂ ಓದಿ: ಸಚಿವೆಯಾದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಹಾಗಾದ್ರೆ?: ಹೆಚ್.ಎಂ.ರೇವಣ್ಣ
ಮುಂಬೈ: ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಬಾಡಿಗಾರ್ಡ್ ಜಿತೇಂದ್ರ ಶಿಂಧೆಗೆ ವಾರ್ಷಿಕ 1.5 ಕೋಟಿ ವೇತನ ನೀಡುತ್ತಾರೆ. ಇದು ದೇಶದ ಅನೇಕ ಖಾಸಗಿ ಕಂಪನಿಗಳ ಸಿಇಒಗಳ ಸಂಬಳಕ್ಕಿಂತ ಹೆಚ್ಚಾಗಿದೆ ಎಂಬ ಆರೋಪ ಬಳಿಕ ಇದೀಗ ಜಿತೇಂದ್ರ ಶಿಂಧೆರನ್ನು ವರ್ಗಾಯಿಸಲಾಗಿದ್ದು, ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮುಂಬೈ ಪೊಲೀಸ್ ಇಲಾಖೆಗೆ ಕಾನ್ಸ್‌ಸ್ಟೇಬಲ್ ಆಗಿ ಸೇರಿಕೊಂಡ ಜಿತೇಂದ್ರ ಶಿಂಧೆ ಅವರನ್ನು ಅಮಿತಾಬ್ ಬಚ್ಚನ್ ಅಂಗರಕ್ಷಕರಾಗಿ ನೇಮಿಸಲಾಯಿತು. ಕಳೆದ ಹಲವು ವರ್ಷಗಳಿಂದ ಜೀತೆಂದ್ರ ಶಿಂಧೆ ಬಿಗ್‍ಬಿ ಅಂಗ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಜೀತೆಂದ್ರ ಶಿಂಧೆಯವರ ವಾರ್ಷಿಕ ಆದಾಯ 1.5 ಕೋಟಿ ಎಂಬ ಸುದ್ದಿ ಹೊರಬಂದಿದ್ದು, ಜೀತೆಂದ್ರ ಶಿಂಧೆ ಅಮಿತಾಬ್ ಬಚ್ಚನ್ ಅಥವಾ ಬೇರೆಯವರಿಂದ ಹಣ ಸಂಪಾದಿಸುತ್ತಿದ್ದಾರೆಯೇ ಎಂದು ಮುಂಬೈ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ:ಸೋನು ಸೂದ್ ‘ದೇಶ್ ಕೆ ಮೆಂಟರ್ಸ್’ ಕಾರ್ಯಕ್ರಮದ ಬ್ರ್ಯಾಂಡ್ ಅಂಬಾಸಿಡರ್: ಅರವಿಂದ್ ಕೇಜ್ರಿವಾಲ್
ಈ ಬಗ್ಗೆ ಶಿಂಧೆ ತಮ್ಮ ಪತ್ನಿ ಭದ್ರತಾ ಏಜೆನ್ಸಿಗಳನ್ನು ನಡೆಸುತ್ತಿದ್ದಾರೆ. ಈ ಭದ್ರತಾ ಏಜೆನ್ಸಿ ಮೂಲಕ ಹಲವಾರು ಸೆಲಬ್ರೆಟಿಗಳಿಗೆ ಮತ್ತು ಹೆಸರಾಂತ ಗಣ್ಯರಿಗೆ ಭದ್ರತೆಯನ್ನು ಒದಗಿಸಲಾಗುತ್ತಿದೆ. ಅಲ್ಲದೇ ತಮ್ಮ ಪತ್ನಿಯ ಹೆಸರಿನಲ್ಲಿ ಭದ್ರತಾ ವ್ಯವಹಾರಗಳನ್ನು ನಡೆಸುತ್ತಿದ್ದೇನೆ. ಜೊತೆಗೆ ಅಮಿತಾಬ್ ಬಚ್ಚನ್ 1.5 ಕೋಟಿ ರೂಪಾಯಿ ವೇತನ ಪಾವತಿಸುತ್ತಿಲ್ಲ ಎಂದು ಪೊಲೀಸರಿಗೆ ಹೇಳಿದ್ದಾರೆ. ಇದನ್ನೂ ಓದಿ:ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ
ಮುಂಬೈ ಪೊಲೀಸರ ಪ್ರಕಾರ ಒಬ್ಬ ಪೊಲೀಸನ್ನು ಒಂದೇ ಸ್ಥಳದಲ್ಲಿ 5 ವರ್ಷಕ್ಕಿಂತ ಹೆಚ್ಚು ಕಾಲ ನಿಯೋಜಿಸಲಾಗುವುದಿಲ್ಲ. ಜಿತೇಂದ್ರ ಶಿಂಧೆ 2015ರಿಂದ ಅಮಿತಾಬ್ ಬಚ್ಚನ್‍ಗಾಗಿಯೇ ಕೆಲಸ ಮಾಡುತ್ತಿದ್ದಾರೆ. ಬಚ್ಚನ್ ಸೆಕ್ಯೂರಿಟಿಗಾಗಿ ಇಬ್ಬರು ಕಾನ್ಸ್‌ಸ್ಟೇಬಲ್‌ಗಳನ್ನು ಯೋಜಿಸಲಾಗಿದ್ದು, ಅದರಲ್ಲಿ ಜಿತೇಂದ್ರ ಶಿಂಧೆ ಅಮಿತಾಬ್ ಬಚ್ಚನ್‍ರವರ ನೆಚ್ಚಿನ ಬಾಡಿಗಾರ್ಡ್ ಆಗಿದ್ದರು. ಅಮಿತಾಬ್ ಬಚ್ಚನ್ ಹೋದ ಕಡೆಯಲೆಲ್ಲಾ ಜಿತೇಂದ್ರ ಶಿಂಧೆ ಕಾಣಿಸಿಕೊಳ್ಳುತ್ತಿದ್ದರು. ಇದೀಗ ಅವರನ್ನು ದಕ್ಷಿಣ ಮುಂಬೈನ ಪೊಲೀಸ್ ಸ್ಟೇಷನ್‍ಗೆ ವರ್ಗಾಯಿಸಲಾಗಿದೆ.
ಮಡಿಕೇರಿ: ಇಂದಿನ ಕೋವಿಡ್ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಯಾರೋ ನೀಡಿದ ದವಸ, ಧಾನ್ಯಗಳನ್ನು ತಾವೇ ನೀಡಿದಂತೆ ಫೋಟೋಗಳಲ್ಲಿ ಮಿಂಚಿ ಸಾಮಾಜಿಕ ಜಾಲತಾಣದಲ್ಲಿ ಮಿಂಚುವ ಮಂದಿಗಳೇ ಹೆಚ್ಚು ಕಾಣಸಿಗುತ್ತಾರೆ. ಸ್ವಂತ ದುಡಿಮೆಯ ಆದಾಯವನ್ನು ಸಮಾಜ ಸೇವೆಗೆ ಮೀಸಲಿಡುವ ಮಾದರಿ ಜನ ವಿರಳವಾಗಿರುವ ಈ ದಿನಗಳಲ್ಲಿ ಇಲ್ಲೊಬ್ಬ ಯುವಕ ತನ್ನ ಪ್ರಥಮ ಸಂಬಳವನ್ನೇ ಬಡವರ ಹಸಿವು ನೀಗಿಸುವುದಕ್ಕಾಗಿ ಮೀಸಲಿಟ್ಟಿದ್ದಾರೆ.
ಕೋವಿಡ್ ಲಾಕ್‍ಡೌನ್ ನಿಂದಾಗಿ ಎಲ್ಲರಂತೆ ಮಂಗಳಮುಖಿಯರು ಕೂಡ ಒಂದು ಹೊತ್ತಿನ ಊಟಕ್ಕಾಗಿ ಪರದಾಡುತ್ತಿದ್ದಾರೆ. ಕೊಡಗಿನ ಕುಶಾಲನಗರದಲ್ಲಿ ವಾಸವಿರುವ ಮಂಗಳಮುಖಿ ದೀಕ್ಷಾ ಎಂಬವರ ಸಂಕಷ್ಟವನ್ನು ಅರಿತ ಸೋಮವಾರಪೇಟೆಯ ಯುವಕ ಎಸ್.ಎಂ ಧನುಷ್ ತಮ್ಮ ಮೊದಲ ಸಂಬಳದಿಂದ ಅಗತ್ಯ ಆಹಾರ ಸಾಮಾಗ್ರಿಗಳನ್ನು ಖರೀದಿಸಿ ಕೊಟ್ಟಿದ್ದಾರೆ.
ಎಂಜಿನಿಯರಿಂಗ್ ಮಾಡಿರುವ ಇವರು ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದು, ಸಾಮಾಜಿಕ ಕಳಕಳಿಯನ್ನು ಹೊಂದಿದ್ದಾರೆ. ಇನ್ನು ಮುಂದೆಯೂ ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ: ಕೊರೊನಾ ಸಂಕಷ್ಟದ ಸಮಯದಲ್ಲಿ ಜೀವನ ನಡೆಸಲು ಕೆಲಸದಿಂದ ಸಿಗುವ ಸಂಬಳ ಸಾಕಾಗುತ್ತಿಲ್ಲ ಎಂದು ಮನನೊಂದ ಕಾರ್ಮಿಕನೋರ್ವ ಡೆತ್‍ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ವರದಿಯಾಗಿದೆ.
ಶಿವರಾಜ್(28) ಆತ್ಮಹತ್ಯೆಗೆ ಶರಣಾದ ಕಾರ್ಮಿಕ. ಶಿವರಾಜ್ ದಾವಣಗೆರೆಯ ಮೂಲದವನಾಗಿದ್ದು, ಸ್ಯಾಲರಿ ಹೈಕ್ ಆಗಿಲ್ಲದೆ ಕಡಿಮೆ ಸಂಬಳದಲ್ಲಿ ಮನೆ ಸಂಭಾಳಿಸುವುದು ಕಷ್ಟವಾಗಿದೆ. ಇದರ ಜೊತೆ ಕಂಪನಿ ಮ್ಯಾನೇಜ್ಮೆಂಟ್ ಕಿರುಕುಳಕ್ಕೆ ಬೇಸತ್ತು ಡೆತ್‍ನೋಟ್ ಬರೆದು ಬೆಂಗಳೂರು ಉತ್ತರ ತಾಲೂಕಿನ ಅದ್ದಿಗಾನಹಳ್ಳಿಯ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದನ್ನೂ ಓದಿ: ಮಗಳ ಜೊತೆ ಅಕ್ರಮ ಸಂಬಂಧ ಶಂಕೆ – ಯುವಕನ ಕೊಲೆಗೆ ಯತ್ನ
ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ಇಂಡೋ ಮಿಮ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಶಿವರಾಜ್, ತನ್ನ ಸಂಬಳ ಕೇವಲ 18,000 ರೂ.ಗಳಾಗಿದ್ದು ಅದರಲ್ಲಿ ಮನೆ ಸಂಭಾಳಿಸಲು ಸಾಧ್ಯವಾಗುತ್ತಿಲ್ಲ. ಸಂಬಳ ಹೆಚ್ಚಿಸಿ ಎಂಬ ಬೇಡಿಕೆಯನ್ನು ಕಾರ್ಖಾನೆಯವರು ಈಡೇರಿಸುತ್ತಿಲ್ಲ. ಜೊತೆಗೆ ಕಂಪನಿಯ ವೆಂಕಟರಾಮು, ಬಾಲು ಮತ್ತು ರಾಮು ಎಂಬುವರು ಮಾನಸಿಕ ಕಿರುಕುಳ ನೀಡುತ್ತಿರುವ ಬಗ್ಗೆ ಬರೆದಿದ್ದಾನೆ. ಇದರ ಜೊತೆಗೆ ತನ್ನ ಕುಟುಂಬ ಬಗ್ಗೆ ಬರೆದಿರುವ ಆತ ಕಂಪನಿಯಲ್ಲಿ ಸಿಗುವ ಇನ್ಸೂರೆನ್ಸ್ ಹಣವನ್ನು ತನ್ನ ಮನೆಯವರಿಗೆ ನೀಡಿ. ಅಡ ಇಟ್ಟಿರುವ ತನ್ನ ತಾಯಿ ಮತ್ತು ಅಕ್ಕನ ಒಡವೆಯನ್ನು ಯಾರಾದರೂ ಬಿಡಿಸಿಕೊಡಿ ಎಂದು ಕೇಳಿಕೊಂಡಿದ್ದಾನೆ. ಸಾಯುತ್ತಿರುವುದಕ್ಕೆ ಮನೆಯವರಿಗೆಲ್ಲ ಸ್ವಾರಿ ಎಂದು ಪತ್ರದಲ್ಲಿ ಬರೆದಿದ್ದಾನೆ. ಈ ಸಂಬಂಧ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈ: ಕೋವಿಡ್ 19 ನಿಂದ ಮೃತರಾದ ಸಿಬ್ಬಂದಿಯ ಕುಟುಂಬಕ್ಕೆ ಸಹಾಯ ಮಾಡಲು ರಿಲಯನ್ಸ್ ಇಂಡಸ್ಟ್ರೀಸ್ ಮುಂದಾಗಿದೆ. ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಉದ್ಯೋಗಿಗಳಿಗೆ ಪತ್ರ ಬರೆದು ಆತ್ಮಸ್ಪೈರ್ಯ ತುಂಬಿದ್ದಾರೆ.
ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ವ್ಯಕ್ತಿ ಕೋವಿಡ್‍ನಿಂದ ಮೃತಪಟ್ಟರೆ ಅವರ ಕುಟುಂಬಕ್ಕೆ 10 ಲಕ್ಷ ರೂ ನೀಡಲು ರಿಲಯನ್ಸ್ ನಿರ್ಧರಿಸಿದೆ. ಸಾವನ್ನಪ್ಪಿದ ಉದ್ಯೋಗಿಯ ನಾಮಿನಿಗೆ 10 ಲಕ್ಷ ಹಣವನ್ನು ನೇರವಾಗಿ ಪಾವತಿಸಿ ಅವರ ಕುಟುಂಬಕ್ಕೆ ಧೈರ್ಯ ತುಂಬಲಿದೆ ಎಂದು ನೀತಾ ಅಂಬಾನಿ ತಿಳಿಸಿದ್ದಾರೆ.
ಸಾವನ್ನಪ್ಪಿದ ಕುಟುಂಬದ ಮಕ್ಕಳು ದೇಶದಲ್ಲಿ ಎಲ್ಲೇ ಓದಿದರೂ ಅವರು ಡಿಗ್ರಿ ಪದವಿವರೆಗಿನ ಟ್ಯೂಷನ್ ಫೀಸ್, ಹಾಸ್ಟೆಲ್ ವ್ಯವಸ್ಥೆ, ಬುಕ್ ಫೀಸ್‍ಗಳನ್ನು ಸಂಪೂರ್ಣವಾಗಿ ಕಂಪನಿಯೇ ಪಾವತಿಸಲಿದೆ.
ಮಕ್ಕಳು ಪದವಿ ಪಡೆಯುವವರೆಗೂ ಕುಟುಂಬದ ಪೋಷಕರು, ಹೆಂಡತಿ ಅಥವಾ ಗಂಡ ಹಾಗೂ ಮಕ್ಕಳ ಆರೋಗ್ಯ ವಿಮೆಯನ್ನು ಶೇ.100ರವರೆಗೆ ಭರಿಸಲಾಗುವುದು.
ರಿಲಯನ್ಸ್ ಸಂಸ್ಥೆಗೆ ನಮ್ಮ ಸಹೋದ್ಯೋಗಿಗಳ ಕೊಡುಗೆ ಅಪಾರವಾಗಿದೆ. ಈಗಾಗಲೇ ಉದ್ಯೋಗಿಗಳಿಗೆ ಉಚಿತ ಲಸಿಕೆ ಅಭಿಯಾನ ನಡೆಸಲಾಗಿದೆ. ಎಲ್ಲರೂ ಒಟ್ಟಾಗಿ ಕೊರೊನಾ ವಿರುದ್ಧ ಹೋರಾಡೋಣ. ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಿ.
ಬೆಂಗಳೂರು: ಕಳೆದ 6 ತಿಂಗಳಿನಿಂದ ವೇತನ ದೊರಕದೆ ತೀವ್ರ ತೊಂದರೆಗೆ ಸಿಲುಕಿಕೊಂಡಿರುವ ದಿ ಮೈಸೂರು ಪೇಪರ್ ಮಿಲ್ಸ್ ಅರಣ್ಯ ನೌಕರರ ವೇತನ ಬಿಡುಗಡೆಗೆ ಸೂಚನೆ ನೀಡುವಂತೆ ದಿ ಮೈಸೂರು ಪೇಪರ್ ಮಿಲ್ಸ್ ಫಾರೆಸ್ಟ್ ಎಂಪ್ಲಾಯೀಸ್ ಅಸೋಸಿಯೇಷನ್ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿಯನ್ನು ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿಯಿಂದ ತೊಂದರೆಗೆ ಈಡಾಗಿರುವ ಕಾರ್ಮಿಕರುಗಳಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಅವರ ನೆರವಿಗೆ ಸ್ಪಂದಿಸಿರುತ್ತೀರಿ. ಆದರೆ, ಎಂ.ಪಿ.ಎಂ ಅರಣ್ಯ ಇಲಾಖೆಯಲ್ಲಿ ರಾತ್ರಿ-ಹಗಲು ಎನ್ನದೇ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಕಳೆದ 6 ತಿಂಗಳಿನಿಂದ ವೇತನ ನೀಡದಿರುವುದು ಮತ್ತು 2010 ರಿಂದ ನೌಕರರಿಗೆ ಬರಬೇಕಾದ ವೇತನ ಬಾಕಿಯನ್ನು ನೀಡದೇ ಇರುವುದು ಬಹಳ ದುಖಃಕರ ಸಂಗತಿಯಾಗಿದೆ.
ಎಂ.ಪಿ.ಎಂ ಅರಣ್ಯ ನೌಕರರು ವೇತನವಿಲ್ಲದೆ ಸಂಸಾರ ಸಾಗಿಸಲು ಆಗದೇ ಅವರ ಬದುಕು ಬೀದಿಪಾಲಾಗಿರುತ್ತದೆ. ನೌಕರರು ಮನನೊಂದು ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಆದ್ದರಿಂದ ಅರಣ್ಯ ನೌಕರರ 6 ತಿಂಗಳ ವೇತನ ಮತ್ತು 2010 ರಿಂದ ಬರಬೇಕಾದ ಹಳೇ ಬಾಕಿ ವೇತನವನ್ನು ನೀಡಲು ಕೂಡಲೇ ಆರ್ಥಿಕ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಸಂಘದ ಅಧ್ಯಕ್ಷರಾದ ಜಗನ್ನಾಥ ಬಂಗೇರ ಅವರು ವಿನಂತಿಸಿಕೊಂಡಿದ್ದಾರೆ.