Tag: salary

  • 2023ರ ವೇಳೆಗೆ ಚೀನಾ, ಪಾಕಿಸ್ತಾನಕ್ಕಿಂತ ಉತ್ತಮ ಸಂಬಳ ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ ಭಾರತ

    2023ರ ವೇಳೆಗೆ ಚೀನಾ, ಪಾಕಿಸ್ತಾನಕ್ಕಿಂತ ಉತ್ತಮ ಸಂಬಳ ಹೆಚ್ಚಳಕ್ಕೆ ಸಾಕ್ಷಿಯಾಗಲಿದೆ ಭಾರತ

    ನವದೆಹಲಿ: ಹೆಚ್ಚುತ್ತಿರುವ ಹಣದುಬ್ಬರದ (Salary Trends Survey) ಮಧ್ಯೆ 2023ರ ವೇಳೆಗೆ ಸಂಬಳ ಹೆಚ್ಚಳದ ನಿರೀಕ್ಷೆಯಿರುವ ಅಗ್ರ ಎಂಟು ದೇಶಗಳಲ್ಲಿ ಭಾರತವೂ (India) ಸೇರಿದೆ. ಚೀನಾ, ವಿಯೆಟ್ನಾಂ ಮತ್ತು ಸೌದಿ ಅರೇಬಿಯಾ ಸೇರಿದಂತೆ ಏಷ್ಯಾದ ದೇಶಗಳು ಸಂಬಳ ಹೆಚ್ಚಳಕ್ಕೆ ಸಾಕ್ಷಿಯಾಗುವ ಟಾಪ್ 10 ರಾಷ್ಟ್ರಗಳಲ್ಲಿ ಸೇರಿವೆ ಎಂದು ಬ್ಲೂಮ್‍ಬರ್ಗ್ ವರದಿ ಹೇಳಿದೆ.

    ಇಸಿಎಯ ಸಂಬಳ ಟ್ರೆಂಡ್‍ಗಳ ಸಮೀಕ್ಷೆಯ (ECA’s Salary Trends Survey) ವರದಿಯನ್ನು ಉಲ್ಲೇಖಿಸಿರುವ ಅದು, ಭಾರತದ ನೆರೆಯ ಪಾಕಿಸ್ತಾನ (Pakistan) ಮತ್ತು ಶ್ರೀಲಂಕಾ (Srilanka) ಈ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿವೆ. 68 ದೇಶಗಳು ಮತ್ತು ನಗರಗಳಾದ್ಯಂತ 360ಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳಿಂದ ಸಂಗ್ರಹಿಸಲಾದ ಡೇಟಾದ ಆಧಾರ ಮೇಲೆ, ಬ್ರೆಜಿಲ್ (3.4%) ಮತ್ತು ಸೌದಿ ಅರೇಬಿಯಾ (2.3%) ಟಾಪ್ 5 ಪಟ್ಟಿಯಲ್ಲಿರುವ ಇತರ ದೇಶಗಳಾಗಿವೆ. ಇದನ್ನೂ ಓದಿ: 200ರೂ. ನೋಟಿನ ಮೇಲೆ ಛತ್ರಪತಿ ಶಿವಾಜಿ- ವಿವಾದ ಹುಟ್ಟುಹಾಕಿದ ಬಿಜೆಪಿ ನಾಯಕ

    ಆದಾಗ್ಯೂ, ಯುರೋಪ್ ಹಣದುಬ್ಬರ ಕಾರಣದಿಂದ ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದು, ನೈಜ ಸಂಬಳವು ಸರಾಸರಿ 1.5 ಪ್ರತಿಶತದಷ್ಟು ಕಡಿಮೆಯಾಗಿದೆ. ನಿಜವಾದ ಸಂಬಳವು ನಾಮಮಾತ್ರದ ವೇತನದ ಬೆಳವಣಿಗೆಯಾಗಿದ್ದು, ಹಣದುಬ್ಬರದ ದರವನ್ನು ಕಡಿಮೆ ಮಾಡುತ್ತದೆ. ಬ್ರಿಟನ್‍ನಲ್ಲಿ ಉದ್ಯೋಗಿಗಳು ಈ ವರ್ಷ ತಮ್ಮ ದೊಡ್ಡ ಹೊಡೆತವನ್ನು ಅನುಭವಿಸಿದ್ದಾರೆ. 3.5 ರಷ್ಟು ನಾಮಮಾತ್ರದ ವೇತನ ಹೆಚ್ಚಳದ ಹೊರತಾಗಿಯೂ ಅವರ ಸಂಬಳವು ನಿಜವಾಗಿ ಶೇಕಡಾ 5.6 ರಷ್ಟು ಕಡಿಮೆಯಾಗಿದೆ. ಮುಂದಿನ ವರ್ಷ ಅವರ ನಿಜವಾದ ಸಂಬಳವು ಇನ್ನೂ ನಾಲ್ಕು ಪ್ರತಿಶತದಷ್ಟು ಕಡಿಮೆಯಾಗಲಿದೆ ಎಂದು ಸಮೀಕ್ಷೆ ಹೇಳುತ್ತದೆ ಎಂದು ಬ್ಲೂಮ್‍ಬರ್ಗ್ ವರದಿ ಮಾಡಿದೆ.

    ಯುನೈಟೆಡ್ ಸ್ಟೇಟ್ಸ್‍ನಲ್ಲಿ, ಈ ವರ್ಷ 4.5 ರಷ್ಟು ನೈಜ ಸಂಬಳದ ಕುಸಿತ ಕಂಡು ಬರಲಿದೆ. ಬ್ಲೂಮ್‍ಬರ್ಗ್ ವರದಿ ಪ್ರಕಾರ, ಭಾರತ 4.6, ವಿಯೆಟ್ನಾಂ 4.0, ಚೀನಾ 3.8, ಬ್ರೆಜಿಲ್ 3.4, ಸೌದಿ ಅರೇಬಿಯಾ 2.3, ಮಲೇಷ್ಯಾ 2.2, ಕಾಂಬೋಡಿಯಾ 2.2, ಥೈಲ್ಯಾಂಡ್ 2.2, ಓಮನ್ 2.0, ರಷ್ಯಾ 1.9 ರಷ್ಟು ವೇತನ ಹೆಚ್ಚಬಹುದಾಗಿದೆ. ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಪತ್ನಿಯನ್ನು ಉಳಿಸೋ ಬದ್ಲು ವೀಡಿಯೋ ಮಾಡಿಕೊಂಡ ಪತಿ

    Live Tv
    [brid partner=56869869 player=32851 video=960834 autoplay=true]

  • 6 ತಿಂಗಳಿಂದ ಕಚೇರಿಗೆ ಬರದೇ ಸಂಬಳ ಪಡೀತಿದ್ದ ಮಹಿಳಾ ಅಧಿಕಾರಿ ವಜಾಗೊಳಿಸಿದ ಬ್ರಿಜೇಶ್ ಪತಕ್

    6 ತಿಂಗಳಿಂದ ಕಚೇರಿಗೆ ಬರದೇ ಸಂಬಳ ಪಡೀತಿದ್ದ ಮಹಿಳಾ ಅಧಿಕಾರಿ ವಜಾಗೊಳಿಸಿದ ಬ್ರಿಜೇಶ್ ಪತಕ್

    ಲಕ್ನೋ: ಕಳೆದ 6 ತಿಂಗಳಿನಿಂದ ಕಚೇರಿಗೆ ಬಾರದೇ ಸಂಬಳ ಪಡೆಯುತ್ತಿರುವ ಆರೋಪದ ಮೇಲೆ ಮಹಿಳಾ ಅಧಿಕಾರಿಯನ್ನು ಉತ್ತರಪ್ರದೇಶ (UttarPradesh) ದ ಉಪಮುಖ್ಯಮಂತ್ರಿ ಬ್ರಿಜೇಶ್ ಪತಕ್ (Brijesh Pathak) ವಜಾಗೊಳಿಸಿದ್ದಾರೆ.

    ಅಮ್ರೋಹ ಜಿಲ್ಲೆಯ ಡೆಪ್ಯುಟಿ ಚೀಫ್ ಮೆಡಿಕಲ್ ಆಫೀಸರ್ (CMO) ಇಂದು ಬಾಳ ಶರ್ಮಾ ಅವರನ್ನು ಕೆಲಸದಿಂದ ವಜಾ ಮಾಡಲಾಗಿದೆ. ಇವರು ಕಳೆದ 6 ತಿಂಗಳಿನಿಂದ ಕಚೇರಿಗೆ ಬರುತ್ತಿರಲಿಲ್ಲ. ಆದರೆ ತಮ್ಮ ಹಾಜರಾತಿ ಪುಸ್ತಕದಲ್ಲಿ ನಕಲಿ ಸಹಿ ಮಾಡುತ್ತಿದ್ದರು. ಈ ಮೂಲಕ ಪ್ರತಿ ತಿಂಗಳು ಸಂಬಳ ಪಡೆಯುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: ನಿದ್ದೆಗೆ ಜಾರಿದ್ದ ವೇಳೆ ಮುಖದ ಮೇಲೆ ಮಲ ವಿಸರ್ಜಿಸಿದ ಶ್ವಾನ- ಮಹಿಳೆ ಆಸ್ಪತ್ರೆಗೆ ದಾಖಲು

    ಈ ಪ್ರಕರಣ ಸಂಬಂಧ ಅಂದಿನ ಸಿಎಂಒ ಸಂಜಯ್ ಅಗರ್‍ವಾಲ್ ಅವರು ತನಿಖೆ ನಡೆಸುವಂತೆ ಇಲಾಖೆಗೆ ಆದೇಶ ನೀಡಿದ್ದರು. ಇದೀಗ ಬ್ರಿಜೇಶ್ ಪತಕ್ ಅವರು ಈ ಕುರಿತು ಕ್ರಮ ಕೈಗೊಂಡಿದ್ದು, ವೇತನ ನೀಡುವ ಉಸ್ತುವಾರಿ ಹೊತ್ತಿದ್ದ ಸಂತೋಷ್ ಕುಮಾರ್ ವಿರುದ್ಧವೂ ಕ್ರಮಕ್ಕೆ ಆದೇಶ ಹೊರಡಿಸಲಾಗಿದೆ. ಈ ವಿಚಾರದಲ್ಲಿ ಭಾಗಿಯಾಗಿರುವ ಎಲ್ಲ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಎಫ್‍ಐಆರ್‌ (FIR) ದಾಖಲಿಸುವಂತೆಯೂ ಕೋರಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ‘ಬಿಗ್ ಬಾಸ್’ ಶೋ ನಡೆಸಲು ಸಲ್ಮಾನ್ ಖಾನ್ ಗೆ 1000 ಕೋಟಿ ಸಂಭಾವನೆ: ಸತ್ಯ ಒಪ್ಪಿಕೊಂಡ ನಟ

    ‘ಬಿಗ್ ಬಾಸ್’ ಶೋ ನಡೆಸಲು ಸಲ್ಮಾನ್ ಖಾನ್ ಗೆ 1000 ಕೋಟಿ ಸಂಭಾವನೆ: ಸತ್ಯ ಒಪ್ಪಿಕೊಂಡ ನಟ

    ಹಿಂದಿಯ ಬಿಗ್ ಬಾಸ್ ಶೋ ನಡೆಸುವುದಕ್ಕಾಗಿ ಸಲ್ಮಾನ್ ಖಾನ್ (Salman Khan) ಭಾರೀ ಮೊತ್ತದ ಸಂಭಾವನೆ ಪಡೆಯುತ್ತಾರೆ ಎಂಬ ಸುದ್ದಿ ಬಾಲಿವುಡ್ ಅಂಗಳಲ್ಲಿ ಸಖತ್ ಸದ್ದು ಮಾಡಿತ್ತು. ಅದೊಂದು ದೊಡ್ಡ ಮೊತ್ತದ ಸಂಭಾವನೆ ಆಗಿರುವ ಕಾರಣದಿಂದಾಗಿ, ಉಳಿದ ಭಾಷೆಯಲ್ಲಿ ಬಿಗ್ ಬಾಸ್ ನಡೆಸಿಕೊಡುವ ಸಿಲಿಬ್ರಿಟಿಗಳು ಇನ್ನೆಷ್ಟು ಸಂಭಾವನೆ ಪಡೆಯಲಿದ್ದಾರೆ ಎಂಬ ಕುತೂಹಲ ಮೂಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ ಸಲ್ಮಾನ್.

    ಬಿಗ್ ಬಾಸ್ (Bigg Boss) ಶೋ ನಡೆಸುವುದಕ್ಕಾಗಿ ಸಲ್ಮಾನ್ ಸಾವಿರ ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನುವ ಸುದ್ದಿ ಅವರಿಗೂ ತಲುಪಿದೆ. ಈ ಸುದ್ದಿ ಓದಿ ಸ್ವತಃ ಸಲ್ಮಾನ್ ಬೆಚ್ಚಿ ಬಿದ್ದಿದ್ದಾರೆ. ಐಟಿ ದಾಳಿ ಮಾಡಿಸಲು ಯಾರಾದರೂ ಹುನ್ನಾರ ನಡೆಸಿದ್ದಾರಾ? ಎಂದು ತಮಾಷೆ ಮಾಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಸಲ್ಮಾನ್, ತಾವು ಈವರೆಗೂ ಸಾವಿರ ಕೋಟಿ ದುಡ್ಡನ್ನೇ ನೋಡಿಲ್ಲ. ಇನ್ನು ಸಂಭಾವನೆ ಪಡೆಯುವುದು ದೂರದ ಮಾತು ಅಂದಿದ್ದಾರೆ. ಇದನ್ನೂ ಓದಿ:ಮೇಘನಾ ರಾಜ್ ಸಿನಿಮಾದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಪ್ರಜ್ವಲ್ ದೇವರಾಜ್

    ಈಗ ಹರಿದಾಡುತ್ತಿರುವ ಸಾವಿರ ಕೋಟಿ ಸಂಭಾವನೆಯಲ್ಲಿ (Salary) ಕಾಲು ಭಾಗದ ಹಣ ಬಂದರೆ ಅದೇ ನನಗೆ ಸಾವಿರ ಕೋಟಿ. ಆದರೆ, ಅದು ಸಾಧ್ಯವಿಲ್ಲವೆ? ನನಗೂ ಸಾವಿರ ಕೋಟಿ ಸಂಭಾವನೆ ಪಡೆಯಬೇಕು ಎನ್ನುವ ಆಸೆಯಿದೆ. ಅಂಥದ್ದೊಂದು ಕಾಲ ಯಾವಾಗ ಕೂಡಿ ಬರುತ್ತದೆಯೋ ಕಾದು ನೋಡಬೇಕು ಎಂದು ಅವರು ಮಾತನಾಡಿದ್ದಾರೆ. ಸಾವಿರ ಕೋಟಿ ಸಂಭಾವನೆಯನ್ನು ಪಡೆಯುತ್ತೇನೆ ಎನ್ನುವುದು ಸುಳ್ಳು ಎಂದೂ ಅವರು ತಿಳಿಸಿದ್ದಾರೆ.

    salman

    ಕಳೆದ ಕೆಲವು ಸೀಸನ್ ಗಳಿಂದಲೂ ಈ ಸಾವಿರ ಕೋಟಿ (Thousand Crores) ಲೆಕ್ಕಾಚಾರದ ಸುದ್ದಿ ಹೈಪ್ ಪಡೆಯುತ್ತಲೇ ಇತ್ತು. ಈವರೆಗೂ ಈ ಕುರಿತಾಗಿ ಸಲ್ಮಾನ್ ಪ್ರತಿಕ್ರಿಯಿಸಿರಲಿಲ್ಲ. ಈ ಬಾರಿ ಆ ಕುರಿತು ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಈ ಕುರಿತಾದ ಸತ್ಯವನ್ನೂ ಅವರು ಒಪ್ಪಿಕೊಂಡಿದ್ದಾರೆ. ಅಲ್ಲದೇ, ಸಾವಿರ ಕೋಟಿ ಸಂಭಾವನೆಯನ್ನು ಪಡೆಯುವ ಆಸೆಯನ್ನೂ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾರಿಗೆ ಇಲಾಖೆ ನೌಕರರಿಗೆ ವೇತನ ಪರಿಷ್ಕರಣೆ ಮಾಡಲು ಸರ್ಕಾರ ಸಿದ್ಧ – ಶ್ರೀರಾಮುಲು

    ಸಾರಿಗೆ ಇಲಾಖೆ ನೌಕರರಿಗೆ ವೇತನ ಪರಿಷ್ಕರಣೆ ಮಾಡಲು ಸರ್ಕಾರ ಸಿದ್ಧ – ಶ್ರೀರಾಮುಲು

    ಬೆಂಗಳೂರು: ಕೆಎಸ್‌ಆರ್‌ಟಿಸಿ ಸೇರಿದಂತೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರ (Transport Employees) ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸಾರಿಗೆ ಸಚಿವ ಶ್ರೀರಾಮುಲು (B.Sriramulu) ತಿಳಿಸಿದರು.

    ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಬಿ.ಎಸ್.ಅರುಣ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಾರಿಗೆ ನಿಗಮದ ಸಿಬ್ಬಂದಿಯ ವೇತನ ಪರಿಷ್ಕರಣೆ ಕಳೆದ ನಾಲ್ಕು ವರ್ಷದಿಂದ ಆಗಿಲ್ಲ. ಆದರೆ ವೇತನ ಪರಿಷ್ಕರಣೆಗೆ ಸರ್ಕಾರ ಬದ್ದವಾಗಿದೆ. ಪರಿಷ್ಕರಣೆ ಸಂಬಂಧ ನಾಲ್ಕು ನಿಗಮಗಳ ಎಂಡಿಗಳ ಜೊತೆ ಸಭೆ ನಡೆಸಿ ಸಮಿತಿ ರಚಿಸಿ ಅವರಿಂದ ವರದಿ ಪಡೆದು ಸರ್ಕಾರಕ್ಕೆ ಕಳಿಸಲಾಗಿದೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ: ದಿನೇಶ್ ಗುಂಡೂರಾವ್

    ನಾಲ್ಕು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಆಗಬೇಕು. ಆದರೆ 2016 ರ ನಂತರ ಪರಿಷ್ಕರಣೆ ಆಗಿಲ್ಲ. 2020-21 ರಲ್ಲಿ ಬಹಳ ಜನ ನೌಕರರು ಮುಷ್ಕರಕ್ಕೆ ಹೋದಾಗ ವೇತನ ಪರಿಷ್ಕರಣೆ ಬೇಡಿಕೆ ಇರಿಸಿ ಬೀದಿಗಿಳಿದು ಹೋರಾಡಿದ್ದರು. ಮಾತುಕತೆ ಮೂಲಕ ಅಂದು ಸಮಸ್ಯೆ ಪರಿಹರಿಸಲಾಗಿತ್ತು ಎಂದು ಹೇಳಿದರು.

    ಕಳೆದ ಎರಡು ವರ್ಷದಲ್ಲಿ ನಮಗೆ ಸಾಕಷ್ಟು ತೊಂದರೆಯಾಗಿದೆ. ಕೋವಿಡ್ ನಂತರ ಪ್ರಯಾಣ ದರ ಹೆಚ್ಚಿಸಲಾಗಲಿಲ್ಲ. ಡೀಸೆಲ್ ದರ ಹೆಚ್ಚಾಗಿದೆ. ಪ್ರತಿದಿನ 15 ಕೋಟಿ ಹಣ ಡೀಸೆಲ್‌ಗೆ ವ್ಯಯವಾಗುತ್ತಿದೆ. ಹಾಗಾಗಿ ಕಷ್ಟದ ಸ್ಥಿತಿ ಇದೆ. ಆದರೂ ಸಿಎಂ ಕೂಡ ವೇತನ ಪರಿಷ್ಕರಣೆ ಚಿಂತನೆ ಮಾಡಿದ್ದಾರೆ. ಆದಷ್ಟು ಶೀಘ್ರದಲ್ಲಿ ವೇತನ ಪರಿಷ್ಕರಣೆ ಸಮಸ್ಯೆ ಇತ್ಯರ್ಥ ಮಾಡಲಿದ್ದೇವೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಪಾಕಿಸ್ತಾನ, ಹಿಂದೂಸ್ತಾನ ಒಂದಾಗಬೇಕು: ಕೆ.ಎಸ್‌.ಈಶ್ವರಪ್ಪ

    ನಾಲ್ಕು ನಿಗಮ ಲಾಭಕ್ಕೆ ಬರಲು ಪೂರಕವಾಗಿ ವರದಿ ನೀಡಲು ರಚಿಸಿದ್ದ ಶ್ರೀನಿವಾಸಮೂರ್ತಿ ಸಮಿತಿ ವರದಿ ಈಗಾಗಲೇ ಬಂದಿದೆ. ಎಲ್ಲವನ್ನೂ ನೋಡಿ ಕ್ರಮ ಕೈಗೊಳ್ಳಲಾಗುತ್ತದೆ. ಮುಂದಿನ ದಿನದಲ್ಲಿ ಸಿಎಂ ಜೊತೆ ಚರ್ಚಿಸಿ ವೇತನ ಪರಿಷ್ಕರಣೆ ಕುರಿತು ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

  • ‘ಲೈಗರ್’ ಸಿನಿಮಾ ಸೋಲು: ನಿರ್ಮಾಪಕರಿಗೆ ಸಂಭಾವನೆ ಹಿಂದಿರುಗಿಸಿದ ವಿಜಯ್ ದೇವರಕೊಂಡ

    ‘ಲೈಗರ್’ ಸಿನಿಮಾ ಸೋಲು: ನಿರ್ಮಾಪಕರಿಗೆ ಸಂಭಾವನೆ ಹಿಂದಿರುಗಿಸಿದ ವಿಜಯ್ ದೇವರಕೊಂಡ

    ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಲೈಗರ್ ಸಿನಿಮಾ ಹೀನಾಯವಾಗಿ ಸೋಲು ಅನುಭವಿಸಿದೆ. ಬಾಯ್ಕಟ್ ಸೇರಿದಂತೆ, ಸಿನಿಮಾ ನಟನ ದರ್ಪವೇ ಸಿನಿಮಾ ಸೋಲಿಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಅದರಲ್ಲೂ ಹಿಂದಿ ಸಿನಿಮಾ ರಂಗ ವಿಮರ್ಶಕರು ಕೂಡ ಸಿನಿಮಾ ಚೆನ್ನಾಗಿಲ್ಲವೆಂದು ಕಾಮೆಂಟ್ ಮಾಡಿದ್ದರು. ಹಾಗಾಗಿ ಬಾಕ್ಸ್ ಆಫೀಸಿನಲ್ಲಿ ಸಿನಿಮಾ ಗೆಲ್ಲಲಿಲ್ಲ. ಈ ಸೋಲಿನ ಹೊಣೆಯನ್ನು ಸ್ವತಃ ವಿಜಯ್ ದೇವರಕೊಂಡ ಹೊತ್ತಿದ್ದಾರೆ.

    ಮೂಲಗಳ ಪ್ರಕಾರ, ಲೈಗರ್ ಸಿನಿಮಾದ ಸೋಲಿನ ಹೊಣೆಯನ್ನು ತಾವೇ ಹೊತ್ತುಕೊಂಡಿರುವ ವಿಜಯ್ ದೇವರಕೊಂಡ ತಾವು ಪಡೆದಿದ್ದು ಕೋಟಿ ಕೋಟಿ ಸಂಭಾವನೆಯನ್ನು ವಾಪಸ್ಸು ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾಗೆ ಅವರು 25 ಕೋಟಿ ಸಂಭಾವನೆ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಅಷ್ಟೂ ಹಣವನ್ನು ಚಾರ್ಮಿ ಕೌರ್ ಮತ್ತು ಪುರಿ ಜಗನ್ನಾಥ್ ಅವರಿಗೆ ವಾಪಸ್ಸು ಮಾಡಿದ್ದಾರೆ ಎಂದು ವರದಿ ಆಗಿದೆ. ಇದನ್ನೂ ಓದಿ: ರಿಯಲ್ ಪ್ರೇಮಿಗಳು ‘ಬಿಗ್ ಬಾಸ್’ ಮನೆಯಲ್ಲಿ ಬೇರೆ ಬೇರೆ ಆಗ್ತಾರಾ?: ದೂರಾಗುವ ಕುರಿತು ಮಾತನಾಡಿದ ನಂದಿನಿ

    ಲೈಗರ್ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಈ ಸಿನಿಮಾ ನೂರಾರು ಕೋಟಿ ಗಳಿಸಲಿದೆ ಎಂಬ ಲೆಕ್ಕಾಚಾರ ಕೂಡ ನಡೆದಿತ್ತು. ದಕ್ಷಿಣದ ಹೀರೋ ಬಾಲಿವುಡ್ ನಲ್ಲಿ ಮತ್ತೊಂದು ದಾಖಲೆ ನಿರ್ಮಿಸುತ್ತಾರೆ ಎಂದೇ ಹೇಳಲಾಗಿತ್ತು. ಆದರೆ, ಎಲ್ಲ ಲೆಕ್ಕಾಚಾರ ತಲೆಕೆಳಗಾಗಿವೆ. ಹಾಕಿದ ಬಂಡವಾಳವೂ ಬಾರದೇ ಇರುವಷ್ಟು ಸಿನಿಮಾ ಮುಗ್ಗರಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಏಳು ತಿಂಗಳಿಂದ ಸಂಬಳ ನೀಡಿಲ್ಲ – ಉದ್ಯೋಗಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

    ಏಳು ತಿಂಗಳಿಂದ ಸಂಬಳ ನೀಡಿಲ್ಲ – ಉದ್ಯೋಗಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

    ಭೋಪಾಲ್: ಏಳು ತಿಂಗಳಿನಿಂದ ಸರಿಯಾಗಿ ಸಂಬಳ ನೀಡಿಲ್ಲ ಎಂದು ಖಾಸಗಿ ಕಂಪನಿಯ ಏಳು ಉದ್ಯೋಗಿಗಳು ಇಂದೋರ್‌ನ ಕಾರ್ಖಾನೆಯೊಂದರಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

    ಇದೀಗ ಅವರನ್ನು ಸರ್ಕಾರಿ ಎಂವೈ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಕಳೆದ ಏಳು ತಿಂಗಳಿನಿಂದ ಕಾರ್ಮಿಕರಿಗೆ ನಿಯಮಿತವಾಗಿ ವೇತನ ನೀಡಿಲ್ಲ. ಅಲ್ಲದೇ ಅವರನ್ನು ಬೇರೆ ಶಾಖೆಗೆ ವರ್ಗಾಯಿಸಲಾಗುತ್ತಿದೆ. ಅದಕ್ಕಾಗಿಯೇ ನಮ್ಮ ಸ್ನೇಹಿತರು ವಿಷ ಸೇವಿಸಿದ್ದಾರೆ ಎಂದು ಸಹೋದ್ಯೋಗಿ ಅನಿಲ್ ನಿಗಮ್ ಎಂಬವರು ತಿಳಿಸಿದ್ದಾರೆ. ಇದನ್ನೂ ಓದಿ: ಕಾಮಗಾರಿ ಉದ್ಘಾಟನೆ ವೇಳೆ ಎಡವಟ್ಟು – ಜನರ ನೂಕುನುಗ್ಗಲಿನಿಂದ ಹೈರಾಣಾದ ಶ್ರೀರಾಮುಲು

    ಈ ಬಗ್ಗೆ ಹಿರಿಯ ಪೊಲೀಸ್ ಅಧಿಕಾರಿ ಅಜಯ್ ಸಿಂಗ್ ಕುಶ್ವಾಹ ಮಾತನಾಡಿ, ಕಾರ್ಖಾನೆಯ ಕಾರ್ಮಿಕರಿಗೆ ಕಳೆದ ಏಳು ತಿಂಗಳಿಂದ ಸಂಬಳ ನೀಡಿಲ್ಲ. ಅವರು ಮಾಡ್ಯುಲರ್ ಕಿಚನ್‍ಗಳಿಗೆ ಕಚ್ಚಾ ವಸ್ತುಗಳನ್ನು ಉತ್ಪಾದಿಸುವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರನ್ನು ಬಂಗಾಂಗದ ಇನ್ನೊಂದು ಕಾರ್ಖಾನೆಯಲ್ಲಿ ಕೆಲಸಕ್ಕೆ ಸ್ಥಳಾಂತರಿಸಲಾಯಿತು. ಸದ್ಯ ನಾವು ಈ ಬಗ್ಗೆ ಸಂಪೂರ್ಣ ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗೋ ಮೂತ್ರದಲ್ಲಿ ಸ್ನಾನ ಮಾಡೋದು ನೀವೇ ಅಲ್ವಾ- ಅಮೆರಿಕದಲ್ಲಿ ಭಾರತೀಯರ ಮೇಲೆ ಜನಾಂಗೀಯ ನಿಂದನೆ

    Live Tv
    [brid partner=56869869 player=32851 video=960834 autoplay=true]

  • ‘ಲೈಗರ್’ ಸಿನಿಮಾದಲ್ಲಿ ನಟಿಸಲು 25 ಕೋಟಿ ಸಂಭಾವನೆ ಪಡೆದರೂ, ಸಿನಿಮಾನೇ ಮರೆತಿದ್ದರಾ ಮೈಕ್ ಟೈಸನ್

    ‘ಲೈಗರ್’ ಸಿನಿಮಾದಲ್ಲಿ ನಟಿಸಲು 25 ಕೋಟಿ ಸಂಭಾವನೆ ಪಡೆದರೂ, ಸಿನಿಮಾನೇ ಮರೆತಿದ್ದರಾ ಮೈಕ್ ಟೈಸನ್

    ಬಾಕ್ಸಿಂಗ್ ಲೋಕದ ದಂತಕಥೆಯಾಗಿರುವ ಮೈಕ್ ಟೈಸನ್, ಇದೇ ಮೊದಲ ಬಾರಿಗೆ ಭಾರತೀಯ ಸಿನಿಮಾದಲ್ಲಿ ನಟಿಸಿದ್ದರು. ವಿಜಯ್ ದೇವರಕೊಂಡ ನಾಯಕನಾಗಿ ನಟಿಸಿರುವ ಲೈಗರ್ ಸಿನಿಮಾದಲ್ಲಿ ಅವರು ವಿಶೇಷ ಪಾತ್ರವನ್ನು ನಿರ್ವಹಿಸಿದ್ದರು. ಅದು ಕೆಲವೇ ನಿಮಿಷಗಳಲ್ಲಿ ಬಂದು ಹೋಗುವ ಪಾತ್ರವಾದರೂ, ಅವರು ಈ ಚಿತ್ರದಲ್ಲಿ ನಟಿಸಲು ಬರೋಬ್ಬರಿ 25 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ.

    ಪುರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಬಾಕ್ಸಿಂಗ್ ಕುರಿತಾದ ಕಥೆಯಿದೆ. ಹಾಗಾಗಿ ಕ್ಲೈಮ್ಯಾಕ್ಸ್ ನಲ್ಲಿ ಮೈಕ್ ಟೈಸನ್ ಆಗಮನವಾಗುತ್ತದೆ. ಈ ದೃಶ್ಯದಲ್ಲಿ ನಟಿಸಲು ಅವರು ಭಾರೀ ಮೊತ್ತದ ಹಣ ಬೇಡಿಕೆ ಇಟ್ಟಿದ್ದರು. ಅಷ್ಟೂ ಹಣವನ್ನು ನಿರ್ಮಾಪಕರು ಸಂದಾಯ ಮಾಡಿದ್ದಾರೆ. ಆದರೆ, ಸಿನಿಮಾ ರಿಲೀಸ್ ವೇಳೆಯಲ್ಲಿ ಟೈಸನ್ ತಾವು ಲೈಗರ್ ಸಿನಿಮಾದಲ್ಲಿ ನಟಿಸಿದ್ದೇನೆ ಎನ್ನುವುದನ್ನೇ ಮರೆತು ಹೋಗಿದ್ದರು. ಸಂದರ್ಶನವೊಂದರಲ್ಲಿ ನಾನು ಆ ರೀತಿಯ ಸಿನಿಮಾ ಮಾಡಿದ್ದೇನಾ ಎನ್ನುವಂತೆ ಉತ್ತರ ನೀಡಿದ್ದರು. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

    ಮೈಕ್ ಟೈಸನ್ ತಮ್ಮ ಸಿನಿಮಾದಲ್ಲಿ ನಟಿಸಿದರೆ, ಚಿತ್ರಕ್ಕೆ ಮತ್ತೊಂದು ತೂಕ ಬರಲಿದೆ ಎಂದು ಚಿತ್ರತಂಡ ನಂಬಿತ್ತು. ಬಹುಶಃ ಆ ನಂಬಿಕೆ ಸುಳ್ಳಾಗಿದೆ. ಸಿನಿಮಾವನ್ನು ಪ್ರೇಕ್ಷಕ ಒಪ್ಪದೇ ಇರುವ ಕಾರಣಕ್ಕಾಗಿ ಸಿನಿಮಾದಲ್ಲಿ ಟೈಸನ್ ಇದ್ದರೂ, ಸಿನಿಮಾ ನಿರೀಕ್ಷೆಯ ಮಟ್ಟ ತಲುಪಿಲ್ಲ. ಸಿನಿಮಾ ರಿಲೀಸ್ ಆಗಿ ಎರಡನೇ ದಿನಕ್ಕೆ ಸಿನಿಮಾ ಫ್ಲ್ಯಾಪ್ ಎಂದು ಘೋಷಿಸಿ ಬಿಟ್ಟರು ನೋಡುಗರು. ಹಾಗಾಗಿ ಸಿನಿಮಾದಲ್ಲಿ ಏನೇ ಕಸರತ್ತು ಮಾಡಿದರು ಅದು ವರ್ಕ್ ಆಗಿಲ್ಲ ಎನ್ನುವುದು ನಿಜವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ ಪಡೆದುಕೊಳ್ಳುತ್ತಿದ್ದ ಸಂಭಾವನೆ ಬಹಿರಂಗ

    ಆರ್ಯವರ್ಧನ್ ಪಾತ್ರಕ್ಕೆ ಅನಿರುದ್ಧ ಪಡೆದುಕೊಳ್ಳುತ್ತಿದ್ದ ಸಂಭಾವನೆ ಬಹಿರಂಗ

    ಟ ಅನಿರುದ್ಧ ಅವರು ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ನಟಿಸಲು ಪಡೆಯುತ್ತಿದ್ದ ಸಂಭಾವನೆ ಬಹಿರಂಗವಾಗಿದೆ. ಜೀ ವಾಹಿನಿಯಲ್ಲೇ ಇವರು ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಕಲಾವಿದ ಎನ್ನುವ ಸುದ್ದಿಯೂ ಹೊರ ಬಿದ್ದಿದೆ. ಜೊತೆ ಜೊತೆಯಲಿ ಧಾರಾವಾಹಿ ಶುರುವಾದಾಗ ಒಂದು ಸಂಭಾವನೆ ಪಡೆಯುತ್ತಿದ್ದ ಅನಿರುದ್ಧ, ಕೋವಿಡ್ ವೇಳೆಯಲ್ಲಿ ಆ ಸಂಭಾವನೆಯನ್ನು ಹೆಚ್ಚಿಸಿಕೊಂಡರು ಎನ್ನುತ್ತವೆ ಆಪ್ತ ಮೂಲಗಳು.

    ಜೊತೆ ಜೊತೆಯಲಿ ಧಾರಾವಾಹಿ ಶುರುವಾಗುವಾಗ ನಿರ್ಮಾಪಕರ ಜೊತೆ ಒಪ್ಪಂದ ಮಾಡಿಕೊಂಡಿದ್ದು ದಿನಕ್ಕೆ 25 ಸಾವಿರ ರೂಪಾಯಿ ಸಂಭಾವನೆಯಂತೆ. ಕೋವಿಡ್ ವೇಳೆಯಲ್ಲಿ 38 ಸಾವಿರ ರೂಪಾಯಿ ಪಡೆಯುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ಪ್ರಮಾಣದ ಸಂಭಾವನೆಯನ್ನು ಪಡೆಯುತ್ತಿದ್ದ ಬೆರಳೆಣಿಕೆಯ ಕಲಾವಿದರಲ್ಲಿ ಇವರೂ ಒಬ್ಬರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ಬಾಲಿವುಡ್ ರಾಧೆ ಆಲಿಯಾ ಭಟ್ ಸಂಭಾವನೆ ಕೇಳಿದ್ರೆ ಶಾಕ್ ಆಗುತ್ತೀರಾ!

    ಅನಿರುದ್ಧ ಅವರ ಸಂಭಾವನೆ ವಿಚಾರದಲ್ಲಿ ನಿರ್ಮಾಣ ಸಂಸ್ಥೆಯಾಗಲಿ ಅಥವಾ ಅನಿರುದ್ಧ ಆಗಲಿ ಬಹಿರಂಗವಾಗಿ ಹೇಳಿಕೊಳ್ಳದೇ ಇದ್ದರೂ, ನಂಬಲರ್ಹ ಮೂಲಗಳ ಪ್ರಕಾರ ಸದ್ಯ 38 ಸಾವಿರ ರೂಪಾಯಿ ಸಂಭಾವನೆಯನ್ನು ಅವರು ಪಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಸಂಭಾವನೆಯ ವಿಚಾರದಲ್ಲೂ ನಿರ್ಮಾಪಕರಿಗೆ ಮತ್ತು ಅನಿರುದ್ಧ ಅವರಿಗೆ ಮನಸ್ತಾಪ ಆಗಿತ್ತು ಎನ್ನುವುದನ್ನು ಸ್ವತಃ ನಿರ್ಮಾಪಕರೇ ಒಪ್ಪಿಕೊಂಡಿದ್ದಾರೆ.

    `Live Tv
    [brid partner=56869869 player=32851 video=960834 autoplay=true]

  • ತಿಂಗಳಿಗೆ 2 ರೂ. ಸಂಬಳ, 4.74 ರೂ. ಪಡಿತರ – ಮುಜರಾಯಿ ಇಲಾಖೆ ದೇವಸ್ಥಾನದ ಅರ್ಚಕರ ಅಳಲು

    ತಿಂಗಳಿಗೆ 2 ರೂ. ಸಂಬಳ, 4.74 ರೂ. ಪಡಿತರ – ಮುಜರಾಯಿ ಇಲಾಖೆ ದೇವಸ್ಥಾನದ ಅರ್ಚಕರ ಅಳಲು

    ಚಾಮರಾಜನಗರ: ಸರ್ವೇಜನ ಸುಖಿನೋಭವಂತು ಎಂದು ಹೇಳಿ ದೇವರನ್ನು ಪೂಜಿಸುವವರು ಅರ್ಚಕರು. ಆದ್ರೆ ಅವರ ಜೀವನವೇ ಸುಖದಲ್ಲಿಲ್ಲ. ಯಾಕಂದ್ರೆ ಮುಜರಾಯಿ ಇಲಾಖೆಗೆ ಸೇರಿರುವ ಸಿ ದರ್ಜೆಯ ದೇವಾಲಯಗಳ ಅರ್ಚಕರ ಸಂಬಳ ಕೇಳಿದ್ರೆ ನೀವೆಲ್ಲಾ ನಿಬ್ಬೆರಗಾಗ್ತೀರಾ.

    ಮುಜರಾಯಿ ಇಲಾಖೆಯ ಸುಪರ್ದಿಗೆ ಒಳಪಡುವ ಸಿ ಗ್ರೇಡ್ ದೇವಾಲಯದ ಅರ್ಚಕರ ತಿಂಗಳ ಸಂಬಳ ಕೇವಲ 2.50 ಪೈಸೆ ಮಾತ್ರ. ಇಂದು ಉಪ ಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಚಾಮರಾಜನಗರದ ಹೊರವಲಯದಲ್ಲಿರುವ ಹರಳುಕೋಟೆಯ ಜನಾರ್ಧನ ಸ್ವಾಮಿ ದೇವಸ್ಥಾನಕ್ಕೆ ದಿಢೀರ್ ಭೇಟಿ ನೀಡಿದರು. ಈ ವೇಳೆ ಅರ್ಚಕ ಅನಂತ ಪ್ರಸಾದ್ ತಮ್ಮ ಸಂಕಷ್ಟವನ್ನು ತೋಡಿಕೊಂಡರು. ನಮಗೆ ನಮ್ಮ ತಂದೆ ಕಾಲದಿಂದಲೂ ತಿಂಗಳಿಗೆ ಕೇವಲ 2.50 ಪೈಸೆ ಸಂಬಳ, ಪಡಿತರಕ್ಕೆ 4.74 ಪೈಸೆ ಬರುತ್ತದೆ. ಇದರಿಂದ ಜೀವನ ನಿರ್ವಹಣೆ ಮಾಡಲು ಕಷ್ಟ. ಇನ್ನು ಮುಂದಾದರೂ ನಮ್ಮ ಸಿ ಗ್ರೇಡ್ ದೇವಾಲಯದ ಅರ್ಚಕರ ಸಂಬಳ ಜಾಸ್ತಿ ಮಾಡಿಸುವಂತೆ ಮನವಿ ಮಾಡಿಕೊಂಡರು. ಇದನ್ನೂ ಓದಿ: ನಾನು ಕಾಂಗ್ರೆಸ್ ಕಾರ್ಯಕರ್ತ – ಮೊಟ್ಟೆ ಎಸೆದಿದ್ದಕ್ಕೆ ಸಂಪತ್ ಕೊಟ್ಟ ಸ್ಪಷ್ಟನೆ ಏನು..?

    ದೇವಾಲಯದ ಪಡಿತರಕ್ಕೆಂದು ತಿಂಗಳಿಗೆ 4.74 ಪೈಸೆ ನೀಡಲಾಗುತ್ತದೆ. ಈ ಹಣದಲ್ಲಿ ಒಂದು ದಿನದ ಎಣ್ಣೆ ಬತ್ತಿಗೂ ಸಾಲುವುದಿಲ್ಲ. 5 ವರ್ಷದಿಂದ ಅರ್ಚಕರಿಗೆ ಸಂಬಳ ಬಂದಿಲ್ಲ ಎಂದರು. ಇದನ್ನೆಲ್ಲಾ ಕೇಳಿಸಿಕೊಂಡ ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಒಂದು ಕ್ಷಣ ತಬ್ಬಿಬ್ಬಾದರು. ಅಲ್ಲದೇ ಇಂತಹ ಮುಂದುವರಿದಿರುವ ಕಾಲದಲ್ಲೂ ಇಷ್ಟು ಕಡಿಮೆ ಸಂಬಳ ಅಂದ್ರೆ ಅವರ ಜೀವನ ಹೇಗೆ. ಪರಿಸ್ಥಿತಿ ಹೀಗಿದ್ರೂ ನಾವೆಲ್ಲಾ ಏನು ಮಾಡುತ್ತಿದ್ದೇವೆ ಎಂದು ಬೇಸರಗೊಂಡ ಉಪಲೋಕಾಯುಕ್ತರು 15 ದಿನಗಳ ಒಳಗೆ ಸಮಸ್ಯೆ ಬಗೆಹರಿಸುವಂತೆ ತಹಶೀಲ್ದಾರ್‌ಗೆ ಸೂಚನೆ ನೀಡಿರುವುದಾಗಿ ತಿಳಿಸಿದರು. ಇದನ್ನೂ ಓದಿ: ಯಡಿಯೂರಪ್ಪ.. ಸೇದಿ ಬಿಸಾಕಿದ ಬೀಡಿ: ಸಿಎಂ ಇಬ್ರಾಹಿಂ

    Live Tv
    [brid partner=56869869 player=32851 video=960834 autoplay=true]

  • ಧ್ವಜ ಖರೀದಿಗೆ ವೇತನದಲ್ಲಿ 38 ರೂ. ಖಡಿತಗೊಳಿಸಿದ ರೈಲ್ವೆ ಇಲಾಖೆ- ನೌಕರರಿಂದ ಅಸಮಾಧಾನ

    ಧ್ವಜ ಖರೀದಿಗೆ ವೇತನದಲ್ಲಿ 38 ರೂ. ಖಡಿತಗೊಳಿಸಿದ ರೈಲ್ವೆ ಇಲಾಖೆ- ನೌಕರರಿಂದ ಅಸಮಾಧಾನ

    ನವದೆಹಲಿ: ಹರ್ ಘರ್ ತಿರಂಗಾ ಅಭಿಯಾನದ ಅಡಿಯಲ್ಲಿ ರೈಲ್ವೆ ತನ್ನ ಎಲ್ಲಾ ಉದ್ಯೋಗಿಗಳಿಗೆ ನೀಡಿರುವ ರಾಷ್ಟ್ರ ಧ್ವಜದ ವೆಚ್ಚವನ್ನು ಅವರ ಸಂಬಳದಿಂದ ವಸೂಲಿ ಮಾಡುತ್ತಿದ್ದು, ಇಲಾಖೆಯ ಈ ಕ್ರಮಕ್ಕೆ ರೈಲ್ವೆ ನೌಕರರ ಸಂಘದಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

    75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಆಜಾದಿ ಕಾ ಅಮೃತ ಮಹೋತ್ಸವದ ಅಡಿಯಲ್ಲಿ ಕೇಂದ್ರವು ಹರ್ ಘರ್ ತಿರಂಗಾ ಅಭಿಯಾನವನ್ನು ಪ್ರಾರಂಭಿಸಿದೆ. ಈ ಹಿನ್ನೆಲೆಯಲ್ಲಿ ಖಾಸಗಿ ಏಜೆನ್ಸಿಯಿಂದ ರೈಲ್ವೆ ನೌಕರರಿಗೆ ರಾಷ್ಟ್ರಧ್ವಜವನ್ನು ನೀಡಿದ್ದಾರೆ. ಆದರೆ ಈ ಧ್ವಜದ ಬೆಲೆಯನ್ನು 38 ರೂ.ಗಳಲ್ಲಿ ಇರಿಸಲಾಗಿದೆ. ರೈಲ್ವೆ ನೌಕರರು ಹಣವನ್ನು ಪಾವತಿಸಿ ಈ ರಾಷ್ಟ್ರ ಧ್ವಜವನ್ನು ಖರೀದಿಸಬೇಕಿಲ್ಲ. ಆದರೆ ಅವರ ಸಂಬಳದಿಂದ ಈ ಹಣ ಕಡಿತಗೊಳ್ಳುತ್ತದೆ. ಇದಕ್ಕೆ ಉತ್ತರ ಮಧ್ಯ ರೈಲ್ವೆ ನೌಕರರ ಸಂಘ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದೆ.

    ವಿಭಾಗೀಯ ಸಚಿವ ಚಂದನ್ ಸಿಂಗ್ ಮಾತನಾಡಿ, ಈ ಧ್ವಜವನ್ನು ಸಿಬ್ಬಂದಿಗೆ ನೌಕರರ ಪ್ರಯೋಜನ ನಿಧಿಯಿಂದ ನೀಡಲಾಗುತ್ತಿದೆ. ನಂತರ ಅವರ ಸಂಬಳದಿಂದ ಕಡಿತಗೊಳಿಸಿದ ಹಣವನ್ನು ನೌಕರರ ಲಾಭ ನಿಧಿಗೆ ವರ್ಗಾಯಿಸಲಾಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ತಗ್ಗಿದ ಮಳೆ – ರೆಡ್‌ನಿಂದ ಆರೆಂಜ್ ಅಲರ್ಟ್‌ನತ್ತ ಕರಾವಳಿ

    ಈ ಧ್ವಜಗಳು ಬಿಜೆಪಿ ಕಚೇರಿಯಲ್ಲಿ 20 ರೂ.ಗೆ ಲಭ್ಯವಿದ್ದು, ಪ್ರಧಾನ ಅಂಚೆ ಕಚೇರಿಯಲ್ಲಿ 25 ರೂ.ಗೆ ಖರೀದಿಸಬಹುದು. ಸ್ವಸಹಾಯ ಸಂಘಗಳು ಸಹ 20 ರೂ.ಗೆ ಧ್ವಜವನ್ನು ನೀಡುತ್ತಿವೆ. ಇದನ್ನೂ ಓದಿ: ಕುಟುಂಬ ಕಲಹ – ವಿದ್ಯುತ್ ಹೈಟೆನ್ಷನ್ ಟವರ್ ಏರಿ ವ್ಯಕ್ತಿ ಹೈಡ್ರಾಮಾ

    Live Tv
    [brid partner=56869869 player=32851 video=960834 autoplay=true]